ಗುರು ಸಂಚಾರ ಮಕರ ರಾಶಿಯಲ್ಲಿ - Jupiter Transit in Capricorn in Kannada

ದೇವರುಗಳ ಗುರು ಎಂದು ಹೇಳಲಾಗುವ ಗುರು ಗ್ರಹವು 29 ಮಾರ್ಚ್ 2020 ರಂದು, ಭಾನುವಾರ ರಾತ್ರಿ 7:08 ಗಂಟೆಗೆ ಮಕರ ರಾಶಿಯಲ್ಲಿ ಪ್ರವೇಶಿಸುತ್ತದೆ. ಇಲ್ಲಿ ಮಕರ ರಾಶಿಚಕ್ರದ ಸ್ವಾಮಿ ಶನಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಗುರುವಿನ ರಾಶಿ ಬದಲಾವಣೆಯನ್ನು ಬಹಳಷ್ಟು ಅನುಕೂಲಕರ ಎಂದು ಪರಿಗಣಿಸಲಾಗಿದೆ. ಏಕೆಂದರೆ ಗುರು ದೇವರ ದೃಷ್ಟಿಯನ್ನು ಅಮೃತದಂತೆ ಪರಿಗಣಿಸಲಾಗಿದೆ. ನೈಸರ್ಗಿಕವಾಗಿ ಗುರು ಗ್ರಹವು ಶುಭ ಗ್ರಹ ಮತ್ತು ಎಲ್ಲರಿಗು ಉತ್ತಮ ಫಲಿತಾಂಶವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮಕರ ರಾಶಿಯಲ್ಲಿ ಗುರುವಿನ ಈ ಸಂಚಾರವು ಖಂಡಿತವಾಗಿಯೂ ಎಲ್ಲಾ ಹನ್ನೆರಡು ರಾಶಿಚಕ್ರಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುತ್ತದೆ. ನಡೆಯಿರಿ ನಿಮ್ಮ ರಾಶಿಚಕ್ರದ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ತಿಳಿಯೋಣ.

ಮೇಷ

ಗುರು ದೇವ ಮೇಷ ರಾಶಿಚಕ್ರದಿಂದ ಹತ್ತನೇ ಮನೆಗೆ ಪ್ರವೇಶಿಸುತ್ತಾರೆ. ಇದು ನಿಮ್ಮ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಮಾಲೀಕ. ಮಕರ ರಾಶಿಯಲ್ಲಿ ಗುರುವಿನ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ಏರಿಳಿತದ ಪರಿಸ್ಥಿತಿ ಉಂಟಾಗುತ್ತದೆ. ಕೆಲವು ಜನರು ವರ್ಗಾವಣೆ ಪಡೆಯುವ ಸಾಧ್ಯತೆ ಇದೆ ಮತ್ತು ಗುರುವು ನಿಮ್ಮಿಂದ ಕಠಿಣ ಪರಿಶ್ರಮ ಮಾಡಿಸುತ್ತದೆ. ಗುರುವಿನ ಸಂಚಾರದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಸರಿಯಾಗಿ ಕೆಲಸ ಮಾಡುತ್ತಿದ್ದೀರೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಯೋಚಿಸಲು ನಿಮ್ಮನ್ನು ಒತ್ತಾಯಿಸುತ್ತದೆ. ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ ಆದರೆ ನಿಮ್ಮ ಅತಿಯಾದ ಮನೋಬಲವು ನಿಮ್ಮನ್ನು ತೊಂದರೆಗಳಲ್ಲಿ ತೊಡಗಿಸಬಹುದು. ಆದ್ದರಿಂದ ನಿಮ್ಮ ಸ್ವಂತ ವ್ಯವಹಾರವನ್ನು ಮಾತ್ರ ಗಮನದಲ್ಲಿರಿಸಿಕೊಳ್ಳಿ ಮತ್ತು ಇತರರ ಕೆಲಸದಲ್ಲಿ ಹಸ್ತಕ್ಷೇಪವನ್ನು ನಿಲ್ಲಿಸಿ.

ಗುರು ಗ್ರಹದ ಈ ಸಂಚಾರದಿಂದ ನಿಮ್ಮ ಹಣಕಾಸಿನ ಹೆಚ್ಚಳವಾಗುತದೆ ಮತ್ತು ಸಮಾಜದಲ್ಲಿ ನೀವು ಗೌರಾನ್ವಿತರಾಗುತ್ತೀರಿ. ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಕುಟುಂಬದಲ್ಲಿನ ಹಿರಿಯರ ಆಶೀರ್ವಾದವನ್ನು ನೀವು ಪಡೆಯುತ್ತೀರಿ. ಜೀವನದಲ್ಲಿ ಪ್ರಗತಿ ಪಡೆಯುತ್ತೀರಿ. ಇದರ ಪರಿಣಾಮದಿಂದಾಗಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಸಿಲುಕಿಕೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಮತ್ತು ಸಾಮಾಜಿಕ ಮಟ್ಟದಲ್ಲಿ ಏರಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸುವ ಅಗತ್ಯವಿದೆ ಎಂದು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಗುರುವಾರದಂದು ಕಡ್ಲೆ ಬೇಳೆ, ಹಳದಿ ಮತ್ತು ಹಿಟ್ಟು ಸೇರಿಸಿ, ಉಂಡೆಯನ್ನು ತಯಾರಿಸಿ ಅದನ್ನು ಹಸುವಿಗೆ ತಿನ್ನಿಸಿ.

ವೃಷಭ

ಗುರು ಗ್ರಹದ ಸಾಗಣೆ ವೃಷಭ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಯಲ್ಲಿ ಆಗಲಿದೆ. ಇದು ನಿಮ್ಮ ರಾಶಿಚಕ್ರದ ಎಂಟನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಗುರುವಿನ ಈ ಸಾಗಣೆಯು ವೃಷಭ ರಾಶಿಚಕ್ರದ ಸ್ಥಳೀಯರಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಈ ಸಾಗಣೆಯ ಪರಿಣಾಮದಿಂದಾಗಿ ಸಾಮಾಜಿಕವಾಗಿ ನಿಮ್ಮ ಪ್ರಗತಿಯಾಗುತ್ತದೆ ಮತ್ತು ಸಮಾಜದಲ್ಲಿ ನಿಮ್ಮ ಎತ್ತರವು ಏರುತ್ತದೆ. ಇದ್ದಕ್ಕಿದ್ದಂತೆ ಪೂರ್ವಜರ ಯಾವುದೇ ಆಸ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಯಾರಾದರೂ ಗುರು ಅಥವಾ ಗುರುಗಳಂತಹ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವನ್ನು ನೀವು ಪಡೆಯುತ್ತೀರಿ ಮತ್ತು ಅವರ ಸಲಹೆ ಜೀವನದಲ್ಲಿ ನಿಮ್ಮ ಕೆಲಸಕ್ಕೆ ಬರುತ್ತದೆ.

ಆರ್ಥಿಕವಾಗಿ ಈ ಸಂಚಾರವು ಸಾಮಾನ್ಯವಾಗಿರುತ್ತದೆ. ಈ ಸಾಗುವಿಕೆಯ ಪರಿಣಾಮದಿಂದಾಗಿ ನಿಮ್ಮ ಮನಸ್ಸಿನಲ್ಲಿ ಧಾರ್ಮಿಕ ಆಲೋಚನೆಗಳು ಬರುತ್ತವೆ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ನೀವು ಮುಂದುವರಿದು ಭಾಗವಹಿಸುವಿರಿ. ಈ ಸಮಯದಲ್ಲಿ ನಿಮ್ಮಲ್ಲಿ ಸೋಮಾರಿತನ ಬೆಳೆಯುತ್ತದೆ. ನಿಮ್ಮ ಸೋಮಾರಿತನದ ಕಾರಣದಿಂದಾಗಿ ನೀವು ನಿಮ್ಮ ಅನೇಕ ಪ್ರಮುಖವಾದ ಯೋಜನೆಗಳನ್ನು ಕಳೆದುಕೊಳ್ಳಬಹುದು. ಆದ್ದರಿಂದ ಸ್ವಲ್ಪ ಗಮನ ಹರಿಸಿ. ನಿಮ್ಮ ಮಕ್ಕಳಿಗೆ ಈ ಸಾಗುವಿಕೆ ಅನುಕೂಲಕರವಾಗಿರುತ್ತದೆ ಮತ್ತು ಅವರು ಪ್ರಗತಿ ಪಡೆಯುತ್ತಾರೆ. ನೀವು ಅವಿವಾಹಿತರಾಗಿದ್ದರೆ ಮತ್ತು ಪ್ರೀತಿ ಸಂಬಂಧದಲ್ಲಿದ್ದರೆ, ಈ ಸಂಚಾರವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಮತ್ತು ನಿಮ್ಮ ಪ್ರೀತಿ ಜೀವನಕ್ಕೆ ಅತ್ಯುತ್ತಮ ಸಮಯವಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ದೀರ್ಘಕಾಲದ ಪ್ರವಾಸಕ್ಕೆ ಹೋಗಬಹುದು.

ಪರಿಹಾರ - ಗುರುವಾರದಂದು ಹಳದಿ ಮತ್ತು ಕಡ್ಲೆ ಬೇಳೆಯ ದಾನ ಮಾಡಿ.

ವೃಷಭ ರಾಶಿಯಲ್ಲಿ ಶುಕ್ರನ ಸಾಗಣೆಯ ಪರಿಣಾಮ ಏನು - ಓದಿ.

ಮಿಥುನ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಏಳನೇ ಮತ್ತು ಹತ್ತನೇ ಮನೆಯ ಮಾಲೀಕ. ಏಳನೇ ಮನೆಯ ಮಾಲೀಕನಾಗಿರುವ ಕಾರಣದಿಂದಾಗಿ, ಇದು ಪ್ರತಿವಿಷ ಮತ್ತು ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತದೆ. ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಗುರುವಿನ ಸಂಚಾರವು ಅನುಕೂಲಕರವೆಂದು ಹೇಳಲಾಗುವುದಿಲ್ಲ. ಏಕೆಂದರೆ ಇದರ ಕೆಲವು ಪ್ರತಿಕೂಲ ಫಲಿತಾಂಶಗಳು ಸಹ ಮುಂದೆ ಕಂಡುಬರುತ್ತಿವೆ. ಗುರು ಸಾಗಣೆಯ ಪರಿಣಾಮದಿಂದಾಗಿ ನಿಮ್ಮ ವೆಚ್ಚಗಳಲ್ಲಿ ಇದ್ದಕ್ಕಿದ್ದಂತೆ ಹೆಚ್ಚಳವಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಹಳಷ್ಟು ಮಟ್ಟಿಗೆ ಹದಗೆಡಬಹುದು ಮತ್ತು ನೀವು ಬಹಳ ಒತ್ತಡದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.

ಆದಾಗ್ಯೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಗುರುವಿನ ಸಂಚಾರವು ಬಹಳಷ್ಟು ಅನುಕೂಲಕರವೆಂದು ಸಾಬೀತುಪಡಿಸುತ್ತದೆ. ಆದರೂ ಈ ಸಂಚಾರದ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ದೊಡ್ಡ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಆದ್ದರಿಂದ ಈ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ ಮತ್ತು ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ. ಧ್ಯಾನ, ಮೆಡಿಟೇಷನ್ ಮತ್ತು ಯೋಗ ಮಾಡುವ ಜನರಿಗೆ ಈ ಸಂಚಾರವು ಅದ್ಭುತ ಅನುಭವಗಳನ್ನು ತರಲಿದೆ. ನೀವು ನಿಮ್ಮ ವೆಚ್ಚಗಳಿಂದ ಮುಕ್ತರಾಗಬೇಕು. ಇಲ್ಲದಿದ್ದರೆ ನೀವು ತುಂಬಾ ತೊಂದರೆಕ್ಕೊಳಗಾಗುತ್ತೀರಿ. ಅನಗತ್ಯ ಪ್ರಯಾಣಗಳು ನಿಮ್ಮ ಹಣಕಾಸು ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಆದ್ದರಿಂದ ಇದರಿಂದ ದೂರವಿರುವುದು ನಿಮಗೆ ಉತ್ತಮ. ಈ ಸಂಚಾರದ ಸಮಯದಲ್ಲಿ ನಿಮ್ಮ ಅತ್ತೆಮನೆಯ ಸದಸ್ಯರೊಂದಿಗಿನ ಸಂಬಂಧದ ಮೇಲೂ ಇದರ ಪರಿಣಾಮ ಬೀರಬಹುದು ಮತ್ತು ಅವರು ನಿಮ್ಮ ಒತ್ತಡಕ್ಕೆ ಕಾರಣವಾಗಬಹುದು.

ಪರಿಹಾರ - ಗುರುವಾರದಂದು ಶುದ್ಧ ತುಪ್ಪದ ದಾನ ಮಾಡಿ.

ಕರ್ಕ

ಕರ್ಕ ರಾಶಿಚಕ್ರಕ್ಕೆ ಗುರು ಗ್ರಹವು ಯಾವಾಗಲು ಪ್ರಮುಖವಾಗಿರುತ್ತದೆ. ಏಕೆಂದರೆ ಇದು ನಿಮ್ಮ ಅದೃಷ್ಟದ ಮನೆ ಅಂದರೆ ನಿಮ್ಮ ಒಂಬತ್ತನೇ ಮತ್ತು ಆರನೇ ಮನೆಯ ಮಾಲೀಕ. ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಗುರುವಿನ ಈ ಸಾಗಣೆಯು ಅನೇಕ ವಿಷಯಗಳಲ್ಲಿ ತುಂಬಾ ಅನುಕೂಲಕರ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಗುರುವಿನ ಅನುಗ್ರಹದಿಂದಾಗಿ ನಿಮ್ಮ ಆದಾಯದಲ್ಲಿ ಅದ್ಭುತ ಬೆಳವಣಿಯಾಗುತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ವ್ಯಾಪಾರದ ಸಂಬಂಧದಲ್ಲಿ ನೀವು ಉತ್ತಮ ಸಂಪರ್ಕಗಳನ್ನು ಹಿಂದುವಿರಿ, ಇದು ಮುಂದುವರಿಯುವಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಈ ಸಮಯದಲ್ಲಿ ನೀವು ನಿಮ್ಮ ವ್ಯಾಪಾರಕ್ಕೆ ವೇಗ ನೀಡುವಲ್ಲಿ ಸಹ ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ನಿಮ್ಮ ವ್ಯಾಪಾರ ಪಾಲುದಾರರೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು ಎಂಬುದರ ಬಗ್ಗೆ ನೀವು ವಿಶೇಷ ಗಮನ ಹರಿಸಬೇಕು. ಆದ್ದರಿಂದ ಅರವನ್ನು ನಿರ್ವಹಿಸಲು ಪ್ರಯತ್ನಿಸಿ. ಈ ಸಂಚಾರವು ದಾಂಪತ್ಯ ಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಒಂದೆಡೆ ನಿಮ್ಮ ಸಂಬಂಧದಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾದರೆ, ಮತ್ತೊಂದೆಡೆ ನಿಮ್ಮ ಜೀವನ ಸಂಗಾತಿಯ ವರ್ತನೆಯು ಸ್ವಲ್ಪ ಬದಲಾಗಬಹುದು ಮತ್ತು ಅವರಲ್ಲಿ ಅಹಂಕಾರದ ಭಾವನೆ ಹೆಚ್ಚಾಗಬಹುದು. ಇದು ನಿಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯದ ದೃಷ್ಟಿಯಿಂದ ಗುರುವಿನ ಸಂಚಾರವು ಸ್ವಲ್ಪ ದುರ್ಬಲವಾಗಿರಬಹುದು. ಆದ್ದರಿಂದ ವಿಶೇಷ ಕಾಳಜಿ ವಹಿಸಿ. ಸಣ್ಣ ಪುಟ್ಟ ಪ್ರಯಾಣಗಳು ನಿಮ್ಮ ವ್ಯಾಪಾರಕ್ಕೆ ಬೆಳವಣಿಗೆಯನ್ನು ಒದಗಿಸುತ್ತವೆ. ಅವಿವಾಹಿತರಿಗೆ ಈ ಸಂಚಾರದ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯುತ್ತವೆ ಮತ್ತು ಅವರ ಮದುವೆಯಾಗುವ ಸಾಧ್ಯತೆ ಇದೆ.

ಪರಿಹಾರ - ಪ್ರತಿ ಗುರುವಾರದಂದು ನಿಯಮಿತವಾಗಿ ಬಾಳೆ ಮರವನ್ನು ಪೂಜಿಸಿ.

ಸಿಂಹ

ಗುರು ದೇವರ ಸಾಗಣೆಯು ಸಿಂಹ ರಾಶಿಚಕ್ರದ ಸ್ಥಳೀಯರ ಆರನೇ ಮನೆಯಲ್ಲಿ ಇರುತ್ತದೆ. ಇದು ನಿಮ್ಮ ರಾಶಿಚಕ್ರ ಅಧಿಪತಿಯ ಸ್ನೇಹಿತ ಮತ್ತು ನಿಮ್ಮ ಜಾತಕದಲ್ಲಿ ಐದನೇ ಮತ್ತು ಆರನೇ ಮನೆಯ ಮಾಲೀಕ ಕೂಡ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಆರೋಗ್ಯದ ವಿಷಯದಲ್ಲಿ ನೀವು ದುರ್ಬಲರಾಗುವಂತಹ ಸಮಯವಿದು ಮತ್ತು ಈ ಸಮಯದಲ್ಲಿ ನಿಮ್ಮ ಆರೋಗ್ಯವು ಹದಗೆಡಬಹುದು. ಯಾವುದೇ ದೊಡ್ಡ ರೋಗ ಉದ್ಭವಿಸಬಹುದು ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ಸಮಯದಲ್ಲಿ ವಾಹನವನ್ನು ನೀವು ಬಹಳ ಜಾಗರೂಕರಾಗಿ ಚಲಾಯಿಸಬೇಕು. ಯಾವುದೇ ದೊಡ್ಡ ಜಗಳಗಳಲ್ಲಿ ಕೈಹಾಕಬೇಡಿ, ಇಲ್ಲದಿದ್ದರೆ ನೀವು ಹಾನಿಯನ್ನು ಎದುರಿಸಬೇಕಾಗಬಹುದು. ತುಂಬಾ ಕಠಿಣ ಪರಿಶ್ರಮದ ನಂತರ ಭಾಗಶಃ ಯಶಸ್ಸು ಪಡೆಯುತ್ತೀರಿ ಎಂದು ನೀವು ನಿರೀಕ್ಷಿಸಬಹುದು.

ಈ ಸಮಯದಲ್ಲಿ ನೀವು ಪ್ರಯತ್ನಿಸಿದರೆ, ನಿಮ್ಮ ಮೇಲೆ ಏರಿರುವ ಯಾವುದೇ ರೀತಿಯ ಸಾಲವನ್ನು ಮರುಪಾವತಿಸುವಲ್ಲೂ ಯಶಸ್ಸು ಪಡೆಯುತ್ತೀರಿ ಆದರೆ ನೀವು ಬೇರೆ ಯಾರಿಂದಾದರೂ ಸಾಲವನ್ನು ತೆಗೆದುಕೊಂಡು ಹಿಂದಿನ ಸಾಲವನ್ನು ಮುಗಿಸುವ ಸಾಧ್ಯತೆ ಇದೆ. ನಿಮ್ಮ ಬಳಿ ಹೆಚ್ಚು ಹಣವಿದ್ದರೆ ಅದನ್ನು ಯಾರಿಗೂ ಸಾಲವಾಗಿ ನೀಡಬೇಡಿ ಏಕೆಂದರೆ ಅದನ್ನು ಮರಳಿ ಪಡೆಯುವ ಭರವಸೆ ಇರುವುದಿಲ್ಲ. ಹೊಟ್ಟೆ ಮತ್ತು ಮೂತ್ರಪಿಂಡದ ರೋಗಗಳಿಂದ ಜಾಗರೂಕರಾಗಿರಿ. ಆಹಾರದಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವುದರಿಂದ ಬೊಜ್ಜು ಹೆಚ್ಚಾಗಬಹುದು.

ಪರಿಹಾರ - ಗುರು ಬೀಜ ಮಂತ್ರವನ್ನು ಜಪಿಸಿ “ಓಂ ಗ್ರಾಂ ಗ್ರೀಂ ಗ್ರೌಂ ಸ: ಗುರುವೇ ನಮ:”

ಕನ್ಯಾ

ಗುರುವಿನ ಸಂಚಾರವು ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಇರುತ್ತದೆ. ಕನ್ಯಾ ರಾಶಿಚಕ್ರದಲ್ಲಿ ಜನಿಸಿರುವ ಜನರಿಗೆ ಗುರು ಗ್ರಹವು ನಾಲ್ಕನೇ ಮತ್ತು ಏಳನೇ ಮನೆಯ ಮಾಲೀಕ ಮತ್ತು ಇದು ಏಳನೇ ಮನೆಯ ಸ್ವಾಮಿಯಾಗಿರುವ ಕಾರಣದಿಂದಾಗಿ ಪ್ರತಿವಿಷ ಎಂದು ಸಹ ಕರೆಯಲಾಗುತ್ತದೆ. ಐದನೇ ಮನೆಯಲ್ಲಿ ಗುರುವಿನ ಸಂಚಾರವು ಕೆಲವು ವಿಷಯಗಳಲ್ಲಿ ನಿಮಗೆ ಬಹಳ ಉತ್ತಮ ಮತ್ತು ಕೆಲವು ವಿಷಯಗಳಲ್ಲಿ ಸಮಸ್ಯೆಯ ಫಲಿತಾಂಶಗಳನ್ನು ತರಲಿದೆ. ಗುರುವು ನಿಮ್ಮ ಜಾತಕದಲ್ಲಿ ಅನುಕೂಲಕರ ಸ್ಥಾನದಲ್ಲಿದ್ದರೆ ಈ ಸಂಚಾರದ ಪರಿಣಾಮದಿಂದಾಗಿ ನೀವು ಮಕ್ಕಳನ್ನು ಹೊಂದಬಹುದು ಮತ್ತು ನಿಮ್ಮ ದೀರ್ಘಕಾಲದ ಅಸೆ ಈಡೇರಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ಹೆಚ್ಚಳವಾಗುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಬಲಗೊಳ್ಳುತ್ತದೆ. ನೀವು ವ್ಯಾಪಾರದಲ್ಲಿದ್ದರೆ ಈ ಸಮಯದಲ್ಲಿ ನೀವು ಪ್ರಗತಿ ಪಡೆಯಬಹುದು ಆದರೆ ನಿಮ್ಮ ಕೆಲವು ನಿರ್ಧಾರಗಳು ತಪ್ಪಾದ ದಿಕ್ಕಿನಲ್ಲಿ ನಿಮ್ಮನ್ನು ಕೊಂಡೊಯ್ಯುವ ಸಾಧ್ಯತೆಯೂ ಇದೆ.

ಇಲ್ಲಿ ಗುರುವು ತನ್ನ ಕೆಟ್ಟ ರಾಶಿಚಕ್ರದಲ್ಲಿದೆ. ಆದಾಗ್ಯೂ ರಾಶಿಚಕ್ರದ ಸ್ವಾಮಿ ಶನಿಯು ಸಹ ಜೊತೆಯಲ್ಲಿರುವ ಕಾರಣದಿಂದಾಗಿ ಆರಂಭದಲ್ಲಿ ಕೆಲವು ಅನುಕೂಲಕರ ಫಲಿತಾಂಶಗಳನ್ನು ಪಡೆಯುವಲ್ಲಿ ಸ್ವಲ್ಪ ತಡೆಯಾಗಬಹುದು, ಆದರೂ ನೀವು ಉತ್ತಮ ಫಲಿತಾಂಸಹಗಳನ್ನು ಪಡೆಯುತ್ತೀರಿ. ಇದಲ್ಲದೆ ಈ ಸಂಚಾರದ ಸಮಯದಲ್ಲಿ ಶಿಕ್ಷಣದ ವಿಷಯದಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ ಮತ್ತು ನಿಮ್ಮ ಅಧ್ಯಯನ ಮುಂದುವರಿಯುತ್ತದೆ. ಜ್ಞಾನದ ಬಗ್ಗೆ ನಿಮ್ಮಲ್ಲಿ ಕುತೂಹಲದ ಭಾವನೆ ಬರುತ್ತದೆ, ಇದು ನಿಮ್ಮನ್ನು ಮುಂದುವರಿಸುತ್ತದೆ. ಪ್ರೀತಿ ಸಂಬಂಧದಲ್ಲಿದ್ದರೆ, ಈ ಸಂಚಾರವು ಏರಿಳಿತದ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ನೀವು ಪ್ರೀತಿಸುತ್ತಿರುವ ವ್ಯಕ್ತಿ ನಿಜವಾಗಿ ನಿಮ್ಮ ಜೀವನ ಸಂಗಾತಿ ಅಥವಾ ದೀರ್ಘಕಾಲದ ವರೆಗೆ ನಿಭಾಯಿಸುವ ವ್ಯಕ್ತಿಯಾಗಿರುತ್ತಾರೋ ಇಲ್ಲವೋ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಅಸಮಾಧಾನವನ್ನು ತಪ್ಪಿಸಲು ಯಾರಾದರೂ ಬುದ್ಧಿವಂತ ಮತ್ತು ಅನುಭವಿ ವ್ಯಕ್ತಿಯ ಸಲಹೆಯನ್ನು ನೀವು ಪಡೆದುಕೊಳ್ಳಬೇಕು. ನೀವು ಉದ್ಯೋಗದಲ್ಲಿದ್ದರೆ ಈ ಸಮಯದಲ್ಲಿ ನಿಮ್ಮ ಉದ್ಯೋಗ ಹೋಗುವ ಸಾಧ್ಯತೆಯೂ ಇದೆ.

ಪರಿಹಾರ - ನಿಮ್ಮ ಮನೆಯಲ್ಲಿ ಪ್ರತಿದಿನ ನಿಯಮಿತವಾಗಿ ಕರ್ಪುರದ ದೀಪವನ್ನು ಬೆಳಗಿಸಿ.

ತುಲಾ

ಗುರುವಿನ ಸಾಚಾರವು ನಿಮ್ಮ ನಾಲ್ಕನೇ ಮನೆಯಲ್ಲಿ ಇರುತ್ತದೆ. ತುಲಾ ರಾಶಿಚಕ್ರದಲ್ಲಿ ಜನಿಸಿರುವ ಜನರು, ಗುರುವಿನ ಈ ಸಂಚಾರದ ಪರಿಣಾಮವನ್ನು ವಿಶೇಷವಾಗಿ ಕೌಟುಂಬಿಕ ಜೀವನದಲ್ಲಿ ಕಾಣಬಹುದು. ಗುರು ಗ್ರಹವು ನಿಮ್ಮ ಮೂರನೇ ಮತ್ತು ಆರನೇ ಮನೆಯ ಮಾಲೀಕ. ನಾಲ್ಕನೇ ಮನೆಯಲ್ಲಿ ಗುರುವಿನ ಸಂಚಾರವು ಕುಟುಂಬದಲ್ಲಿ ಒತ್ತಡವನ್ನು ಹೆಚ್ಚಿಸಬಹುದು. ಕುಟುಂಬದ ಸದಸ್ಯರಲ್ಲಿ ಒಬ್ಬರಿಗೊಬ್ಬರನ್ನು ಅರ್ಥಮಾಡಿಕೊಳ್ಳುವ ಶಕ್ತಿ ಕಡಿಮೆಯಾಗಬಹುದು, ಈ ಕಾರಣದಿಂದಾಗಿ ಕುಟುಂಬದ ಏಕತೆ ಅಪಾಯದಲ್ಲಿ ಬೀಳಬಹುದು ಆದರೆ ಈ ಸಾಗಣೆಯು ಕೆಲಸದ ಸ್ಥಳದಲ್ಲಿ ನಿಮ್ಮ ಪರಿಸ್ಥಿತಿಯನ್ನು ಬಲಗೊಳಿಸಬಹುದು ಮತ್ತು ಫಲಿತಾಂಶಗಳು ನಿಮ್ಮ ಪರವಾಗಿ ಬರಲು ಆರಂಭಿಸುತ್ತವೆ.

ಕೆಲಸದ ಸ್ಥಳದಲ್ಲಿ ನಿಮ್ಮನ್ನು ಪ್ರಶಂಸಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬದ ಹಿರಿಯರ ಆರೋಗ್ಯವು ಬಳಲಬಹುದು ಆದರೆ ಈ ಸಮಯದಲ್ಲಿ ನೀವು ಯಾವುದೇ ಆಸ್ತಿಯನ್ನು ಖರೀದಿಸಬಹುದು ಮತ್ತು ನಿಮ್ಮ ಪ್ರಯತ್ನಗಳಿಂದ ನೀವು ಸಂತೋಷವನ್ನು ಪಡೆಯುತ್ತೀರಿ ಎಂಬುದು ಈ ಸಂಚಾರದ ಉತ್ತಮ ಫಲಿತಾಂಶವಾಗುತ್ತದೆ. ನಿಮ್ಮ ತಾಯಿಯ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳಾಗಬಹುದು ಮತ್ತು ಅವರ ಆರೋಗ್ಯವು ಏರಿಳಿತದಲ್ಲಿರಬಹುದು, ಆದ್ದರಿಂದ ಅವರ ಬಗ್ಗೆ ಕಾಳಜಿ ವಹಿಸಿ. ಈ ಸಾಗಣೆಯು ಕುಟುಂಬದ ಬಗ್ಗೆ ನಿಮ್ಮನ್ನು ಚಿಂತೆಗೋಳಾಗಿಸುತ್ತದೆ ಮತ್ತು ನಿಮ್ಮ ದೇಶಿಯ ವೆಚ್ಚಗಳನ್ನು ಸಹ ಹೆಚ್ಚಿಸುತ್ತದೆ. ಈ ಸಮಯದಲ್ಲಿ ನೀವು ವಿಶೇಷವಾಗಿ ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವಿವಾದವನ್ನು ತಪ್ಪಿಸಬೇಕು. ಏಕೆಂದರೆ ಅದರಿಂದ ನಿಮಗೆ ದುಃಖವಾಗುತ್ತದೆ ಮತ್ತು ಆಂತರಿಕವಾಗಿ ನೀವು ನಿಮ್ಮನ್ನು ಮುರಿದ ಹಾಗೆ ಅನುಭವಿಸುವಿರಿ.

ಪರಿಹಾರ - ಪ್ರತಿಯೊಂದು ಗುರುವಾರದಂದು ನೀವು ತುಪ್ಪದ ದಾನ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

ವೃಶ್ಚಿಕ

ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಮೂರನೇ ಮತ್ತು ಐದನೇ ಮನೆಯ ಮಾಲೀಕ. ಇದು ಎರಡನೇ ಮನೆಯ ಮಾಲೀಕನಾಗಿರುವ ಕಾರಣದಿಂದಾಗಿ ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಪ್ರತಿವಿಷವು ಸಹ ಆಗಿದೆ. ಸಂಚಾರದ ಈ ಸ್ಥಿತಿಯಲ್ಲಿ ಗುರು ಗ್ರಹವು ನಿಮ್ಮ ಮೂರನೇ ಮನೆಗೆ ಸಾಗಾಣಿಸುತ್ತದೆ ಮತ್ತು ಈ ಕಾರಣದಿಂದಾಗಿ ನೀವು ಪದೇ ಪದೇ ಪ್ರವಾಸಗಳಿಗೆ ಹೋಗಬೇಕಾಗಬಹುದು. ಈ ಸಮಯದಲ್ಲಿ ನೀವು ಸಾಕಷ್ಟು ಪ್ರಯಾಣಿಸಬಹುದು. ಈ ಪ್ರಯಾಣಗಳು ಮುಖ್ಯವಾಗಿ ಯಾವುದೇ ತೀರ್ಥ ಸ್ಥಳಕ್ಕೆ ಅಥವಾ ಆರ್ಥಿಕ ಲಾಭಕ್ಕಾಗಿ ಇರಬಹುದು. ಆರಂಭದ ಕೆಲವು ಪ್ರವಾಸಗಳು ಅನುಕೊಲವಾಗಿರುವುದಿಕ್ಲ್ಲ . ಈ ಸಮಯದಲ್ಲಿ ನಿಮಗೆ ದೈಹಿಕ ನೋವಾಗಬಹುದು ಮತ್ತು ಆರ್ಥಿಕ ಸವಾಲುಗಳನ್ನು ನೀವು ಎದುರಿಸಬೇಕಾಗಬಹುದು ಆದರೆ ತದನಂತರ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ. ಈ ಸಾಗಣೆಯು ನಿಮ್ಮ ದಾಂಪತ್ಯ ಜೀವನಕ್ಕೆ ಅತ್ಯಂತ ಅನುಕೂಲಕರ ಮತ್ತು ಪ್ರಭಾವಶಾಲಿಯಾಗಿ ಉಳಿಯುತ್ತದೆ.

ನಿಮ್ಮ ಸಂಬಂಧದಲ್ಲಿ ಯಾವುದೇ ಒತ್ತಡ ನಡೆಯುತ್ತಿದ್ದರೆ ಈ ಸಮಯದಲ್ಲಿ ಅದು ದೂರವಾಗಬಹುದು ಮತ್ತು ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ನಿಮ್ಮ ಸಹೋದರ ಸಹೋದರಿಯರಿಗೆ ನೀವು ಆರ್ಥಿಕವಾಗಿ ಸಹಾಯ ಮಾಡುತ್ತೀರಿ ಮತ್ತು ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡುತ್ತೀರಿ. ನಿಮ್ಮ ಮಕ್ಕಳಿಗೂ ಗುರುವಿನ ಸಾಗಣೆ ಬಹಳಷ್ಟು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಅವರು ಉತ್ತಮ ಪ್ರಯೋಜನವನ್ನು ಪಡೆಯುತ್ತಾರೆ. ನೀವು ಒಬ್ಬಂಟಿಯಾಗಿದ್ದರೆ ಮತ್ತು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಈ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರನ್ನು ಮದುವೆಗಾಗಿ ಪ್ರಸ್ತಾಪಿಸಬಹುದು. ಅದರಲ್ಲಿ ಯಶಸ್ವಿಯಾಗುವ ಸಂಪೂರ್ಣ ಸಾಧ್ಯತೆ ಇದೆ.

ಪರಿಹಾರ - ಭಗವಂತ ಶಿವನ ರುದ್ರಾಭಿಷೇಕ ಮಾಡುವುದು ನಿಮಗೆ ಫಲಪ್ರದವಾಗಿರುತದೆ.

ಧನು

ಗುರುವಿನ ಸಾಗಣೆ ನಿಮ್ಮ ರಾಶಿಚಕ್ರಕ್ಕೆ ಬಹಳ ಮುಖ್ಯ ಏಕೆಂದರೆ ಗುರುವು ಧನು ರಾಶಿಚಕ್ರದ ಸ್ವಾಮಿ ಗ್ರಹ. ಇದು ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯ ಸ್ವಾಮಿ ಮತ್ತು ಪ್ರಸ್ತುತ ಸಂಚಾರದ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಪ್ರವೇಶಿಸುತ್ತದೆ. ಎರಡನೇ ಮನೆಯಲ್ಲಿ ಗುರುವಿನ ಸಂಚಾರವು ನಿಮ್ಮ ಕುಟುಂಬ ಬೆಳೆಯುವ ಕಡೆಗೆ ಸೂಚಿಸುತ್ತದೆ, ಈ ಕಾರಣದಿಂದಾಗಿ ಕುಟುಂಬದಲ್ಲಿ ಒಬ್ಬ ಹೊಸ ವ್ಯಕ್ತಿಯ ಆಗಮನವಾಗಬಹುದು. ಅದು ಕುಟುಂಬದಲ್ಲಿ ಯಾರಿದಾದರೂ ಮದುವೆಗೆ ಸಂಬಂಧಿಸಿರಬಹುದು ಅಥವಾ ಹೊಸ ಮಗು ಜನಿಸುವುದಕ್ಕೂ ಸಂಬಂಧಿಸಿರಬಹುದು. ಕುಟುಂಬದಲ್ಲಿ ಸಂತೋಷ ಬರುತ್ತದೆ ಮತ್ತು ನಿಮ್ಮ ಮನೆಯಲ್ಲಿ ಪೂಜೆ ಅಥವಾ ಯಾವುದೇ ಶುಭ ಕಾರ್ಯವು ಸಂಭವಿಸಬಹುದು. ಇದರಿಂದ ಜನರೊಂದಿಗೆ ಭೇಟಿಯಾಗುತ್ತೀರಿ ಮತ್ತು ಸಮಾಜದಲ್ಲಿ ನೀವು ಎತ್ತರದ ಸ್ಥಾನವನ್ನು ಪಡೆಯುತ್ತೀರಿ.

ನಿಮ್ಮ ಕುಟುಂಬದ ಗೌರವ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಧ್ವನಿಯಲ್ಲಿ ಗಂಭೀರತೆ ಬರುತ್ತದೆ, ಇದರಿಂದ ನೀವು ಪ್ರಭಾವಶಾಲಿಯಾಗುತ್ತೀರಿ. ನೀವು ನಿಮ್ಮ ಕುಟುಂಬಕ್ಕೆ ಶಕ್ತಿ ನೀಡುತ್ತಿರಿ. ವ್ಯಾಪಾರ ಮತ್ತು ಆಸ್ತಿಯಿಂದ ಉತ್ತಮ ಹಣಕಾಸಿನ ಲಾಭವನ್ನು ಗಾಳಿಸುತ್ತಿರಿ. ಈ ಸಂಚಾರವು ನಿಮ್ಮ ಕೆಲಸದ ಸ್ಥಳದ ಮೇಲೆ ಕೂಡ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ತಿಳುವಳಿಕೆಯ ಶಕ್ತಿ ಮತ್ತು ನಿಮ್ಮ ಆಂತರಿಕ ಜ್ಞಾನವು ಕೆಲಸದ ಸ್ಥಳದಲ್ಲಿ ನಿಮ್ಮನ್ನು ಬಲಪಡಿಸುತ್ತದೆ. ಈ ಸಮಯದಲ್ಲಿ ನೀವು ಸಿಹಿ ತಿಂಡಿಯನ್ನು ತಿನ್ನಲು ಇಷ್ಟಪಡಬಹುದು, ಇದರಿಂದ ನಿಮ್ಮ ದೇಹದ ತೂಕವು ಹೆಚ್ಚಾಗಬಹುದು.

ಪರಿಹಾರ - ಮನೆಯಲ್ಲಿ ಗುರು ಯಂತ್ರವನ್ನು ಸ್ಥಾಪಿಸಿ ಮತ್ತು ಪ್ರತಿದಿನ ಅದನ್ನು ಪೂಜಿಸಿ.

ಮಕರ

ಮಕರ ರಾಶಿಚಕ್ರಕ್ಕೆ ಗುರು ದೇವ ಮೂರನೇ ಮತ್ತು ಹನ್ನೆರಡನೇ ಮನೆಯ ಮಾಲೀಕ ಮತ್ತು ಈ ಸಂಚಾರದ ಸಮಯದಲ್ಲಿ ಇದು ಮಕರ ರಾಶಿಚಕ್ರದಲ್ಲೇ ಸಾಗಾಣಿಸುತ್ತಿದೆ. ಅಂದರೆ ನಿಮ್ಮ ಮೊದಲನೇ ಮನೆಯಲ್ಲಿ ಗುರುವಿನ ಸಾಗಣೆಯಾಗುತ್ತದೆ. ಈ ಕಾರಣದಿಂದಾಗಿ ನೀವು ಅರ್ಥಗರ್ಭಿತ ಜ್ಞಾನವನ್ನು ಪಡೆಯುತ್ತೀರಿ ಮತ್ತು ನಿಮ್ಮ ಇಂಟ್ಯೂಷನ್ ಬಲದ ಮೇಲೆ ನಿಮ್ಮ ಕೆಲಸಕ್ಕೆ ಬರುವಂತಹ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಗುರುವಿನ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷ ಬರುತ್ತದೆ ಮತ್ತು ನಿಮ್ಮ ದಾಂಪತ್ಯ ಜೀವನವು ಸುಧಾರಿಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ಕೊರತೆ ಇದ್ದರೆ ಅವು ನಿಧಾನವಾಗಿ ಸರಿಯಾಗುತ್ತವೆ. ಪರಸ್ಪರರ ನಿಕಟತೆ ಹೆಚ್ಚಾಗುತ್ತದೆ ಮತ್ತು ಬುದ್ಧಿವಂತಿಕೆ ಬೆಳೆಯುತ್ತದೆ. ವ್ಯಾಪಾರದ ವಿಷಯದಲ್ಲಿ ಈ ಸಾಗಣೆಯು ಸಾಕಷ್ಟು ಅನುಕೂಲಕರವಾಗಿರುತ್ತದೆ. ಇದಲ್ಲದೆ ನಿಮ್ಮ ಮಕ್ಕಳು ಸಹ ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲವು ಜನರು ಮಕ್ಕಳನ್ನು ಪಡೆಯಬಹುದು. ನೀವು ವಿಧ್ಯಾರ್ಥಿಯಾಗಿದ್ದರೆ, ಗುರುವಿನ ಸಾಗಣೆಯು ನಿಮ್ಮ ಶಿಕ್ಷಣದಲ್ಲಿ ಪ್ರಗತಿಯ ಅವಕಾಶಗಳನ್ನು ತರುತ್ತದೆ ಮತ್ತು ನಿಮ್ಮ ಪರಿಶ್ರಮ ನಿಮ್ಮ ಕೆಲಸಕ್ಕೆ ಬರುತ್ತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ನೀವು ಪ್ರವಾಸಗಳ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದುವಿರಿ ಮತ್ತು ಆಧ್ಯಾತ್ಮಿಕವಾಗಿ ನೀವು ಸಾಕಷ್ಟು ಬಲಗೊಳ್ಳುತ್ತಿರಿ. ನಿಮ್ಮ ಸಾಮಾಜಿಕ ಮಟ್ಟವು ಅದ್ಭುತವಾಗಿರುತ್ತದೆ ಮತ್ತು ಜನರು ನಿಮ್ಮನ್ನು ಪ್ರಶಂಸಿಸುತ್ತಾರೆ. ಸಮಾಜದಲ್ಲಿ ನೀವು ಜನಪ್ರಿಯರಾಗುತ್ತೀರಿ ಆದರೆ ನೀವು ಸೋಮಾರಿತನವನ್ನು ತಪ್ಪಿಅಸಬೇಕು. ಏಕೆಂದರೆ ನಿಮ್ಮ ಭರವಸೆಗಳ ಮೇಲೆ ನೀರು ಹಾಕಬಹುದು.

ಪರಿಹಾರ - ನಿಮ್ಮ ಜೇಬಿನಲ್ಲಿ ಯಾವಾಗಲು ಹಳದಿ ಕೆರ್ಚಿಫ್ಅನ್ನು ಇರಿಸಿ. ಮತ್ತು ಪ್ರತಿದಿನ ಹಣೆಯ ಮೇಲೆ ಕೇಸರಿ ತಿಲಕವನ್ನು ಹಚ್ಚಿಸಿ.

ಕುಂಭ

ಗುರು ಗ್ರಹವು ಕುಂಭ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಗೆ ಸಾಗುತ್ತದೆ. ನಿಮ್ಮ ರಾಶಿಚಕ್ರದಿಂದ ಎರಡನೇ ಮತ್ತು ಹನ್ನೊಂದನೇ ಮಾಲೀಕ ಗುರುವು ನಿಮಗೆ ಪ್ರತಿವಿಷನಾಗುತ್ತಾನೆ. ಹನ್ನೆರಡನೇ ಮನೆಯಲ್ಲಿ ಗುರುವಿನ ಈ ಸಾಗಣೆಯು ದೈಹಿಕವಾಗಿ ನಿಮ್ಮನ್ನು ತೊಂದರೆಗೊಳಿಸಬಹುದು ಏಕೆಂದರೆ ಈ ಸಮಯದಲ್ಲಿ ನಿಮ್ಮ ಆರೋಗ್ಯವು ಹದಗೆಡಬಹುದು ಮತ್ತು ನೀವು ರೋಗಕ್ಕೊಳಗಾಗಬಹುದು. ವಿಶೇಷವಾಗಿ ನಿಮ್ಮ ಆಹಾರ ಪಾನೀಯದ ಬಗ್ಗೆ ಗಮನ ಹರಿಸಿ. ಆಗ ಮಾತ್ರ ಪರಿಸ್ಥಿತಿ ಸುಧಾರಿಸಬಹುದು.

ನಿಮ್ಮ ಸಂಗ್ರಹಿಸಲಾಗಿರುವ ಹಣಕಾಸು ಕಡಿಮೆಯಾಗುತ್ತದೆ ಮತ್ತು ಇದ್ದಕ್ಕಿದ್ದಂತೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಲೋಕೋಪಕಾರದಲ್ಲಿ ನೀವು ಅತ್ಯಂತ ಆಸಕ್ತಿ ಹೊಂದುವಿರಿ, ಇದಕ್ಕಾಗಿ ನಿಮ್ಮ ಹಣಕಾಸು ಮುಗಿದುಹೋಗುತ್ತಿದ್ದರು ನೀವು ಹಿಂಜರಿಯುವುದಿಲ್ಲ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ವಿಶೇಷವಾಗಿ ಕಾಳಜಿ ವಹಿಸಬೇಕು. ನೀವು ಉತ್ತಮ ಮತ್ತು ಧಾರ್ಮಿಕ ಚಟುವಟಿಕೆಗಳ ಮೇಲೆ ಹೃದಯವನ್ನು ತೆರೆದು ಖರ್ಚಿಸುವಿರಿ ಆದರೆ ಹೆಚ್ಚಿನ ವೆಚ್ಚಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಬಹುದು ಎಂಬುದನ್ನು ನೆನಪಿನಲ್ಲಿಡಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬದ ವಾತಾವರಣವು ಸಂತೋಷವಾಗಿರುತ್ತದೆ ಮತ್ತು ಕುಟುಂಬದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಜನರಲ್ಲಿ ಪರಸ್ಪರರ ಬಗ್ಗೆ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ. ವಿವಾದ ಮತ್ತು ಕಾನೂನು ಪ್ರಕರಣದ ವಿಷಯಗಳಿಗೆ ಈ ಸಮಯವು ದುರ್ಬಲವಾಗಿರಬಹುದು ಆದರೆ ಕಾನೂನು ಕ್ಷೇತ್ರದಲ್ಲಿರುವ ಜನರಿಗೆ ಈ ಸಂಚಾರವು ಬಹಳಷ್ಟು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.

ಪರಿಹಾರ - ಗುರುವಾರದ ಬೆಳಿಗ್ಗೆ ಅರಳಿ ಮರಕ್ಕೆ ನೀರನ್ನು ಅರ್ಪಿಸಿ. ಈ ಸಮಯದಲ್ಲಿ ಅರಳಿ ಮರವನ್ನು ಮುಟ್ಟಬೇಡಿ.

ಮೀನಾ

ಗುರು ಗ್ರಹವು ಮೀನಾ ರಾಶಿಚಕ್ರದ ಅಧಿಪತಿ, ಆದ್ದರಿಂದ ಇವರ ಈ ಸಂಚಾರವು ನಿಮಗೆ ಬಹಳ ಪ್ರಮುಖವಾಗಿರುತ್ತದೆ. ಇದಲ್ಲದೆ ಇದು ನಿಮ್ಮ ಕರ್ಮದ ಮನೆ ಅಂದರೆ ನಿಮ್ಮ ಹತ್ತನೇ ಮನೆಯ ಮಾಲೀಕ ಕೂಡ ಮತ್ತು ಈ ಸಂಚಾರದ ಸಮಯದಲ್ಲಿ ಗುರು ಗ್ರಹವು ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸಲಿದೆ. ಗುರು ಸಂಚಾರದ ಪರಿಣಾಮದಿಂದಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಆದಾಯವು ಹೆಚ್ಚಾಗುತ್ತದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಸಮಾಜದಲ್ಲಿನ ಗೌರಾನ್ವಿತ ಮತ್ತು ಬುದ್ಧಿವಂತ ಜನರೊಂದಿಗೆ ಸಂಪರ್ಕ ಸಾಧಿಸಲು ನೀವು ಅವಕಾಶ ಪಡೆಯುತ್ತೀರಿ ಮತ್ತು ಅವರೊಂದಿಗೆ ಉಂಟಾಗುವ ಸಂಪರ್ಕದಿಂದ ಭವಿಷ್ಯದಲ್ಲಿ ನಿಮಗೆ ತುಂಬಾ ಲಾಭವಾಗುತ್ತದೆ.

ಒಬ್ಬ ವಿಶೇಷ ವ್ಯಕ್ತಿಯ ಸಲಹೆ ನಿಮ್ಮ ಕೆಲಸಕ್ಕೆ ಬರುತ್ತದೆ. ನಿಮ್ಮ ಸಾಮಾಜಿಕ ವಲಯ ಹೆಚ್ಚಾಗುತ್ತದೆ. ನಿಮ್ಮ ಮಕ್ಕಳಿಗೂ ಈ ಸಂಚಾರದ ಉತ್ತಮ ಲಾಭ ಸಿಗುತ್ತದೆ ಮತ್ತು ದಾಂಪತ್ಯ ಜೀವನಕ್ಕೆ ಈ ಸಂಚಾರವು ಅನುಕೂಲಕರ ಫಲಿತಾಂಶವನ್ನು ಒದಗಿಸುತ್ತದೆ. ಸಂಬಂಧದಲ್ಲಿ ಒತ್ತಡ ಕಡಿಮೆಯಾಗುತ್ತದೆ. ವ್ಯಾಪಾರದ ದೃಷ್ಟಿಕೋನದಿಂದಲು ಈ ಸಂಚಾರವು ಉತ್ತಮವಾಗಿರುತ್ತದೆ ಮತ್ತು ನೀವು ಉದ್ಯೋಗದಲ್ಲಿದ್ದರೆ, ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಅತ್ಯಂತ ಉತ್ತಮವಾಗುತ್ತದೆ, ಖಂಡಿತವಾಗಿಯೂ ಇದರಿಂದ ನಿಮಗೆ ಪ್ರಯೋಜನವಾಗುತ್ತದೆ. ಇಂದಿನ ವರೆಗೂ ನೀವು ಒಬ್ಬಂಟಿಯಾಗಿದ್ದರೆ ಈ ಸಂಚಾರವು ನಿಮ್ಮ ಜೀವನವನ್ನು ಪ್ರೀತಿ ಮದುವೆಯಲ್ಲಿ ಬದಲಾಯಿಸುವ ಸಂಕೇತವನ್ನು ನೀಡುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮದುವೆಯಾಗುವ ಸಾಧ್ಯತೆ ಇದೆ, ಆದ್ದರಿಂದ ಈ ಸಂಚಾರವು ನಿಮಗೆ ಬಹಳ ಅನುಕೂಲಕರವಾಗಿರಲಿದೆ.

ಪರಿಹಾರ - ಉತ್ತಮ ಗುಣಮಟ್ಟದ ನೀಲಮಣಿ ರತ್ನವನ್ನು ಚಿನ್ನದ ಉಂಗುರದಲ್ಲಿ ತಯಾರಿಸಿ ಗುರುವಾರದಂದು ಸೂಚ್ಯಂಕ ಬೆರಳಿನಲ್ಲಿ ಧರಿಸಿ.

Talk to Astrologer Chat with Astrologer