ಕರ್ಕ ರಾಶಿ ಭವಿಷ್ಯ 2021 - Cancer Horoscope 2021 in Kannada

ಕರ್ಕ ರಾಶಿ ಭವಿಷ್ಯ 2021 ರಲ್ಲಿ ನಾವು ಕರ್ಕ ರಾಶಿಚಕ್ರದ ಸ್ಥಳೀಯರ ಜೀವನದ ಎಲ್ಲಾ ಸಣ್ಣ ಮತ್ತು ದೊಡ್ಡ ಭವಿಷ್ಯವಾಣಿಯನ್ನು ತಂದಿದ್ದೇವೆ. ಇದರ ಸಹಾಯದ ಮೂಲಕ ನೀವು ನಿಮ್ಮ ಜೀವನದ ವೃತ್ತಿ, ಆರ್ಥಿಕ, ಕೌಟುಂಬಿಕ, ಪ್ರೀತಿ, ವೈವಾಹಿಕ, ಆರೋಗ್ಯ ಮತ್ತು ಶಿಕ್ಷಣ ಜೀವನದಲ್ಲಿ ನೀವು ಎಂತಹ ಫಲಿತಾಂಶವನ್ನು ಪಡೆಯಲಿದ್ದೀರಿ ಎಂದು ತಿಳಿಯಬಹುದು. ಇದಲ್ಲದೆ ಈ ವರ್ಷ ನೀವು ನಿಮ್ಮ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಲು ನಿಮಗೆ ಉತ್ತಮ ಪರಿಹಾರಗಳನ್ನು ಸಹ ತಿಳಿಸುತ್ತಿದ್ದೇವೆ.

ವೃತ್ತಿಪರ ಕ್ಷೇತ್ರದಲ್ಲಿ ಈ ವರ್ಷ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ವರ್ಷದ ಆರಂಭದಿಂದ ಅಂತ್ಯದವರೆಗೆ ರಾಹು - ಕೇತು ನಿಮ್ಮ ರಾಶಿಯಲ್ಲಿ ನೆಲೆಗೊಂಡು ನಿಮಗೆ ಸವಾಲುಗಳನ್ನು ನೀಡುವ ಕೆಲಸ ಮಾಡುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ ಶನಿ ದೇವರ ಅನುಗ್ರಹ ನಿಮ್ಮ ರಾಶಿಚಕ್ರದ ಸ್ಥಳೀಯರಿಗೆ ತಮ್ಮ ಕೆಲಸದ ಸ್ಥಳದಲ್ಲಿ ಲಭ್ಯತೆ ಮತ್ತು ಪ್ರಗತಿ ನೀಡುವ ಕೆಲಸ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನಿರಂತರವಾಗಿ ಪರಿಶ್ರಮ ಮಾಡುತ್ತಾ ಮತ್ತು ಎಲ್ಲಾ ರೀತಿಯ ಕಾನೂನು ಬಾಹಿರ ಚಟುವಟಿಕೆ ಗಳಿಂದ ನಿಮ್ಮನ್ನು ದೂರವಿರಿಸಿ. ಆರ್ಥಿಕ ಪರಿಸ್ಥಿತಿಯ ಮೇಲೂ ಗ್ರಹಗಳ ವಿಶೇಷ ದೃಷ್ಟಿಯೂ ನಿಮ್ಮ ಆರ್ಥಿಕ ಜೀವನವನ್ನು ಉತ್ತಮಗೊಳಿಸುವಲ್ಲಿ ನಿಮಗೆ ಸಹಾಯ ಮಾಡುತ್ತವೆ. ಆದರೆ ನಿಮ್ಮ ಆರೋಗ್ಯ ಹದಗೆಡುವ ಕಾರಣದಿಂದಾಗಿ ನಿಮ್ಮ ಹಣಕಾಸು ಖರ್ಚಾಗಬಹುದು. ಅಂತಹ ಸಂದರ್ಭದಲ್ಲಿ, ನಿಮ್ಮ ಮುಂಬರುವ ಸಮಯಕ್ಕಾಗಿ ಹಣವನ್ನು ಸಂಗ್ರಹಿಸಲು ಉತ್ತಮ ತಂತ್ರವನ್ನು ರಚಿಸಿ ಪ್ರಯತ್ನಿಸು ತ್ತಿರಿ. ವಾಯಪರಸ್ಥರಿಗು ಕೂಡ ಆರ್ಥಿಕ ಪ್ರಯೋಜನೆ ಸಿಗುತ್ತದೆ. ಇದರಿಂದ ಅವರು ಪ್ರಗತಿ ಪಡೆಯುತ್ತಾರೆ.

ಆಸ್ಟ್ರೋ ಸೆಜ್ ಬೃಹತ್ ಕುಂಡಲಿ ಮೂಲಕ ನಿಮ್ಮ ದೋಷ ಮತ್ತು ಅದರ ಪರಿಹಾರಗಳ ವಿವರವಾದ ಮಾಹಿತಿಯನ್ನು ಪಡೆಯಿರಿ

ಶಿಕ್ಷಣದ ಕ್ಷೇತ್ರದಲ್ಲಿ ಪರಿಶ್ರಮ ಮಾಡುವ ವಿಧ್ಯಾರ್ಥಿಗಳು ಮಾತ್ರ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಫೆಬ್ರವರಿ ರಿಂದ ಏಪ್ರಿಲ್ ತಿಂಗಳ ಅವಧಿಯಲ್ಲಿ ನಿಮಗೆ ಶನಿ ದೇವರ ವಿಶೇಷ ಅನುಗ್ರಹವನ್ನು ಪಡೆಯುವ ಕಾರಣದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಇದರಿಂದ ನೀವು ನಿಮ್ಮ ಪರೀಕ್ಷೆಯಲ್ಲಿ ಇನ್ನಷ್ಟು ಉತ್ತಮವಾಗಿ ಮಾಡುವಲ್ಲಿ ಯಶಸ್ವಿ ಯಾಗುತ್ತಿರಿ. ಆದಾಗ್ಯೂ ಇದರೊಂದಿಗೆ ಕೇತು ನಿಮ್ಮ ಗಮನವನ್ನು ವಿಚಲಿತಾಗೊಳಿಸುತ್ತಾನೆ. ಇದರಿಂದಾಗಿ ನೀವು ನಿಮ್ಮ ವಿಷಯಗಳನ್ನು ಅರ್ಥ ಅರ್ಥಮಾಡಿಕೊಳ್ಳುವಲ್ಲಿ ತೊಂದರೆಕ್ಕೊಳಗಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಅಧ್ಯಯನಗಳ ಮೇಲೆ ಮಾತ್ರ ಕೇಂದ್ರೀಕರಿಸಿ ಮತ್ತು ನಿಮ್ಮ ಗುರಿಯತ್ತ ನಿಮ್ಮ ಏಕಾಗ್ರತೆಯನ್ನು ಇರಿಸಿ.

ನಿಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಅದಕ್ಕಾಗಿ ಸಮಯವೂ ಸ್ವಲ್ಪ ಕಡಿಮೆ ಅನುಕೂಲಕರವಾಗಿ ಕಂಡುಬರುತ್ತಿದೆ. ಏಕೆಂದರೆ ಏಳನೇ ಮನೆಯಲ್ಲಿ ನೆಲೆಗೊಂಡಿರುವ ಶನಿಯು ನಿಮ್ಮ ನಾಲ್ಕನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ ಮತ್ತು ಅಲ್ಲಿ ಮೊದಲಿನಿಂದಲೇ ಮಂಗಳ ಕುಳಿತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಕುಟುಂಬದಿಂದ ದೂರ ಹೋಗಬೇಕಾಗಬಹುದು. ಈ ಸಮಯದಲ್ಲಿ ನಿಮಗೆ ಕುಟುಂಬದ ಸಂತೋಷ ಸಿಗುವುದಿಲ್ಲ ಮತ್ತು ನಿಮ್ಮ ಕುಟುಂಬದ ಅನೇಕ ಸದಸ್ಯರು ನಿಮ್ಮ ನಿರ್ಧಾರಕ್ಕೆ ವಿರುದ್ಧವಾಗಿ ನಿಲ್ಲುವುದನ್ನು ಕಾಣಲಾಗುತ್ತದೆ. ವೈವಾಹಿಕ ಜೀವನದಲ್ಲಿ ಶನಿ ಮತ್ತು ಗುರುವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ. ಪರಿಣಾಮವಾಗಿ ನಿಮ್ಮ ಜೀವನ ಸಂಗಾತಿಯೊಂದಿಗೆ ನಿಮ್ಮ ವಿವಾದವು ಸಂಭವಿಸುವ ಸಂಪೂರ್ಣ ಸಾಧ್ಯತೆ ಇರುತ್ತದೆ. ಆದರೆ ನೀವಿಬ್ಬರೂ ನಿಮ್ಮ ಸಂಬಂಧದ ಬಗ್ಗೆ ಪ್ರಮನಿಕರಾಗಿ ದ್ದು, ಪ್ರತಿಯೊಂದು ಸವಾಲನ್ನು ಪರಿಹರಿಹರಿಸಲು ಪ್ರಯತ್ನಿಸುವಿರಿ. ದಾಂಪತ್ಯ ಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ಆದರೂ ಈ ವರ್ಷ ನೀವು ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಪ್ರೀತಿಯಲ್ಲಿರುವ ಸ್ಥಳೀಯರ ಬಗ್ಗೆ ಮಾತನಾಡಿದರೆ, ಈ ವರ್ಷದ ಆರಂಭವು ನಿಮಗೆ ಉತ್ತಮವಾಗಿರುತ್ತದೆ. ವಿಶೇಷವಾಗಿ ಫೆಬ್ರವರಿ, ಮಾರ್ಚ್ ಮಧ್ಯೆ, ಏಪ್ರಿಲ್ ಮೇ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳು ಅತ್ಯಂತ ಉತ್ತಮವೆಂದು ಸಾಬೀತು ಪಡಿಸುತ್ತವೆ. ಈ ವರ್ಷ ನಿಮ್ಮಿಬ್ಬರಿಗೂ ಪರಸ್ಪರ ಬಗ್ಗೆ ನಿಷ್ಠರಾಗಿರಲು ಕಲಿಸುತ್ತದೆ. ಇದರಿಂದ ನಿಮ್ಮಿಬ್ಬರ ಸಂಬಂಧವೂ ಇನ್ನಷ್ಟು ಬಲಗೊಳ್ಳುತ್ತದೆ. ಆರೋಗ್ಯದ ವಿಷಯದಲ್ಲಿ ಈ ವರ್ಷ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ಶನಿ ಎಲ್ನೆ ಮತ್ತು ಎಂಟನೇ ಮನೆಯ ಮಾಲೀಕ ನಾಗಿದ್ದು ನಿಮ್ಮ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ. ಪರಿಣಾಮವಾಗಿ ನಿಮ್ಮ ಆರೋಗ್ಯದಲ್ಲಿ ದುರ್ಬಲತೆ ಉಂಟಾಗುವ ಸಾಧ್ಯತೆಗಳಿವೆ. ಈ ವರ್ಷದ ಅಂತ್ಯದ ವರೆಗೆ ನಿಮ್ಮ ಆರೋಗ್ಯ ಜೀವನಕ್ಕೆ ಹೆಚ್ಚು ಪ್ರತಿಕೂಲವಾಗಿರಲಿದೆ. ಆದ್ದರಿಂದ ಈ ವರ್ಷ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

Read in English - Cancer Horoscope 2021

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Cancer horoscope 2021

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮ್ಮ ವೃತ್ತಿ ಜೀವನದ ದೃಷ್ಟಿಯಿಂದ ಮಿಶ್ರ ಫಲಿತಾಂಶಗಳನ್ನು ತರಲಿದೆ. ಏಕೆಂದರೆ ವರ್ಷದ ಆರಂಭದಲ್ಲಿ ಮಂಗಳ ಗ್ರಹವು ನಿಮ್ಮ ರಾಶಿಚಕ್ರ ದಿಂದ ಹತ್ತನೇ ಮನೆಯಲ್ಲಿ ಕುಳಿತಿರುತ್ತಾರೆ. ಪರಿಣಾಮವಾಗಿ ಕೆಲಸದ ಸ್ಥಳದಲ್ಲಿ ನೀವು ಪ್ರಗತಿಯನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಪ್ರತಿಯೊಂದು ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಈ ಇಡೀ ವರ್ಷ ಶನಿ ದೇವ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ. ಇದರ ಪರಿಣಾಮವಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ಶಾನುಯ ಈ ಶುಭ ದೃಷ್ಟಿಯು ಉದ್ಯೋಗದಲ್ಲಿರುವ ಸ್ಥಳೀಯರಿಗೆ ಬಡ್ತಿ ನೀಡಲು ಸಹಾಯಕರ ಎಂದು ಸಾಬೀತುಪಡಿಸುತ್ತದೆ. ವಿಶೇಷವಾಗಿ ಈ ವರ್ಷ ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯದ ವರೆಗಿನ ಸಮಯವೂ ನಿಮಗೆ ಸ್ವಲ್ಪ ಸಮಸ್ಯೆಗಳಿಂದ ತುಂಬಿರುತ್ತದೆ. ಆದ್ದರಿಂದ ಕೆಲಸದ ಸ್ಥಳದಲ್ಲಿ ಸಾಧಯವಾದಷ್ಟು ಜಾಗರೂಕರಾಗಿರಿ. ಏಕೆಂದರೆ ನಿಮ್ಮ ಅದೃಷ್ಟದ ಕೊರತೆಯಾಗುವ ಕಾರಣದಿಂದಾಗಿ ನೀವು ತೊಂದರೆಕ್ಕೊಳಗಾಗಬಹುದು. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ವಿರೋಧಾಭಾಸ ಅಥವಾ ವಿವಾದವಾಗುವ ಸಾಧ್ಯತೆ ಇದೆ. ಈ ವಿವಾದವು ಮಹಿಳಾ ಸಹೊಂದ್ಯೋಗಿಯೊಂದಿಗೆ ಸಂಭವಿಸುವ ಸಂಪೂರ್ಣ ಸಾಧ್ಯತೆ ಇದೆ. ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಚಿತ್ರವನ್ನು ಹದಗೆಡಿಸಬಹುದು, ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸುವ ಅಗತ್ಯವಿದೆ.

ಕರ್ಕ ರಾಶಿಚಕ್ರದ ಸ್ಥಳೀಯರ ವೃತ್ತಿ ಜೀವನಕ್ಕೆ ವಿಶೇಷವಾಗಿ ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಉತ್ತಮವಾಗಿರಲಿವೆ. ಏಪ್ರಿಲ್ ತಿಂಗಳಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಪ್ರಯಾಣಿಸಲು ಅವಕಾಶಗಳನ್ನು ಕೂಡ ಪಡೆಯುತ್ತೀರಿ. ವ್ಯಾಪಾರಿ ವರ್ಗದ ಬಗ್ಗೆ ಮಾತನಾಡಿದರೆ, ಶನಿ ಮತ್ತು ಗುರು ದೇವ ನಿಮ್ಮ ರಾಶಿಚಕ್ರದ ಏಳನೇ ನೆಲೆಗೊಂಡಿರುವ ಕಾರಣದಿಂದಾಗಿ ವ್ಯಾಪಾರಸ್ಥರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರವು ಬೆಳೆಯುತ್ತದೆ. ಇದಲ್ಲದೆ ಹೊಸ ಮೂಲಗಳಿಂದ ಹಣವನ್ನು ಗಳಿಸಲು ಅವಕಾಶಗಳನ್ನು ಪಡೆಯುತ್ತೀರಿ. ಇದರೊಂದಿಗೆ ಈ ವರ್ಷ ನೀವು ಸಾಮಾಜಿಕ ಚಟುವಟಿಕೆಗಳಲ್ಲೂ ಮುಂದುವರಿದು ಪಾಲ್ಗೊಳ್ಳುವಿರಿ. ಈ ಕಾರಣದಿಂದ ನಿಮ್ಮ ವ್ಯಾಪಾರವು ಹೆಚ್ಚಾಗುತ್ತದೆ, ಇದರೊಂದಿಗೆ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಕೂಡ ಬೆಳೆಯುತ್ತದೆ. ನೀವು ಯಾವುದೇ ಹೂಡಿಕೆಯ ಬಗ್ಗೆ ಯೋಚಿಸುತ್ತಿದ್ದರೆ, ಅದಕ್ಕೆ ಈ ವರ್ಷ ಉತ್ತಮವೆಂದು ಸಾಬೀತುಪಡಿಸುತ್ತದೆ, ಆದಾಗ್ಯೂ ಈ ಸಮಯದಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳನ್ನು ಮುಂದುವರಿಸಬೇಕಾಗುತ್ತದೆ. ಇದಕ್ಕಾಗಿ ಯಾವುದೇ ರೀತಿಯ ಕಿರುಹಾದಿಯನ್ನು ಅಳವಡಿಸಿಕೊಳ್ಳಬೇಡಿ, ಇಲ್ಲದಿದ್ದರೆ ನೀವು ತೊಂದರೆಕ್ಕೊಳಗಾಗಬಹುದು.

ಕರ್ಕ ರಾಶಿ ಭವಿಷ್ಯ 2021 ಪ್ರಕಾರ ಆರ್ಥಿಕ ಜೀವನ - Financial life according Cancer horoscope 2021

ಕರ್ಕ ರಾಶಿ ಭವಿಷ್ಯ 2021 ಪ್ರಕಾರ, ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷ ಸಾಮಾನ್ಯಕ್ಕಿಂತ ಅತ್ಯಂತ ಉತ್ತಮವಾಗಿರುತ್ತದೆ. ಏಕೆಂದರೆ ಈ ವರ್ಷ ನಿಮಗೆ ಅನೇಕ ಗ್ರಹಗಳ ಶುಭ ದೃಷ್ಟಿಯ ಶುಭ ಪ್ರಭಾವವನ್ನು ಪಡೆಯುತ್ತೀರಿ. ಆದಾಗ್ಯೂ ಈ ವರ್ಷದ ಆರಂಭವು ಸ್ವಲ್ಪ ದುರ್ಬಲವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸುತ್ತ, ಸಾಧ್ಯವಾದಷ್ಟು ನಿಮ್ಮ ಹಣವನ್ನು ಸಂಗ್ರಹಿಸುವ ಕಡೆಗೆ ಹೆಚ್ಚು ಪ್ರಯತ್ನಿಸಬೇಕು. ಇದರ ನಂತರ ಮೇ ತಿಂಗಳ ಸಮಯದಲ್ಲಿ ಪರಿಸ್ಥಿತಿಗಳಲ್ಲಿ ಕೆಲವು ಬದಲಾವಣೆಗಳು ಬರುತ್ತವೆ. ವಿಶೇಷವಾಗಿ ಸರ್ಕಾರಿ ಕ್ಷೇತ್ರದಿಂದ ನಿಮಗೆ ಲಾಭವಾಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕಾರಣದಿಂದಾಗಿ ನೀವು ನಿಮ್ಮ ದೀರ್ಘಕಾಲದ ಸಾಲ ಮತ್ತು ಬಾಕಿ ಬಿಲ್ ಗಳನ್ನು ಮರುಪಾವತಿಸಲು ನಿಮಗೆ ಸಾಧ್ಯವಾಗುತ್ತದೆ.

ವರ್ಷ 2021 ರಲ್ಲಿ ನೀವು ನಿಮ್ಮ ಆರೋಗ್ಯದ ಮೇಲೆ ಹಣವನ್ನು ಖರ್ಚಿಸಬಹುದು. ಈ ಸಮಯದಲ್ಲಿ ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಯಾವುದೇ ಮೂಲದ ಮೂಲಕ ನಿಮಗೆ ಆರ್ಥಿಕ ಲಾಭವಾಗುತ್ತದೆ. ಈ ಕಾರಣದಿಂದಾಗಿ ನೀವು ನಿಮ್ಮ ಹಣವನ್ನು ಹೆಚ್ಚು ಸಂಗ್ರಹುಸುವುದನ್ನು ಪರಿಗಣಿಸಬಹುದು. ಜೀವನ ಸಂಗಾತಿಯ ಮೇಲು ನಿಮ್ಮ ಸಾಕಷ್ಟು ಹಣ ಖರ್ಚಾಗುತ್ತದೆ. ಆದರೆ ಇದರ ಹೊರೆತಾಗಿಯೂ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಒಟ್ಟಾರೆಯಾಗಿ ನೋಡಿದರೆ, ಮಾರ್ಚ್ ತಿಂಗಳು ನಿಮಗೆ ಅತ್ಯಂತ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಹೆಚ್ಚು ಪ್ರಯೋಜನವನ್ನು ಪಡೆಯುತ್ತೀರಿ.

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ ಜೀವನ Education life according Cancer horoscope 2021 ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಶಿಕ್ಷಣದಕ್ಷೇತ್ರದಲ್ಲಿ ಈ ವರ್ಷ ವಿದ್ಯಾರ್ಥಿಗಳು ಮೊದಲಿಗಿಂತ ಹೆಚ್ಚು ಪರಿಶ್ರಮ ಮಾಡಬೇಕಾಗುತ್ತದೆ. ಏಕೆಂದರೆ ಈ ವರ್ಷ ವಿದ್ಯಾರ್ಥಿಗಳಿಗೆ ತುಂಬಾ ಏರಿಳಿತದಿಂದ ತುಂಬಿರಲಿದೆ. ಈ ವರ್ಷದ ಆರಂಬಹವು ಉತ್ತಮವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಪರಿಶ್ರಮಕ್ಕೆ ಟಕಕಂತೆ ಫಲಿತಾಂಶವನ್ನು ಪಡೆಯುತ್ತೀರಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸುವ ಸಾಮರ್ಥ್ಯವನ್ನು ನೀವು ಅನುಭವಿಸುವಿರಿ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ನಿಮ್ಮ ಶಿಕ್ಷಕರು ಕೂಡ ನಿಮ್ಮನ್ನು ಸಹಕರಿಸುವುದನ್ನು ಕಾಣಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡರಿಗುವ ವಿದ್ಯಾರ್ಥಿಗಳಿಗೆ ವರ್ಷದ ಜನವರಿ ಮತ್ತು ಆಗಸ್ಟ್ ತಿಂಗಳು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಪ್ರತಿಯೊಂದು ಪರೀಕ್ಷೆಯಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಸಹವನ್ನು ಪಡೆಯುತ್ತೀರಿ. ಈ ಕಾರಣದಿಂದ ಜನರು ನಿಮ್ಮನ್ನು ಹೊಗಳುವುದರಲ್ಲಿ ಆಯಾಸಗೊಳ್ಳುವುದಿಲ್ಲ.

ಆದಾಗ್ಯೂ ಈ ಇಡೀ ವರ್ಷ ನಿಮ್ಮ ರಾಶಿಚಕ್ರದಿಂದ ಐದನೇ ಮನೆಯಲ್ಲಿ ಕೇತುವಿನ ಇರುವಿಕೆಯು ಅನೇಕ ವಿದ್ಯಾರ್ಥಿಗಳ ಮನಸ್ಸನ್ನು ವಿಚಲಿತಗೊಳಿಸುವ ಕೆಲಸ ಮಾಡುತ್ತದೆ. ಅಂತಹ ಸಂದರ್ಭದಲ್ಲಿ ನೀವು ಹೆಚ್ಚು ಏಕಾಗ್ರತೆಯೊಂದಿಗೆ ಅಧ್ಯಯನದ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ನಿಮಗೆ ಹಾನಿಯಾಗಬಹುದು. ಉನ್ನತ ಶಿಕ್ಷಣವನ್ನು ಪಡೆಯುವ ಬಗ್ಗೆ ಯೋಚಿಸುತ್ತಿರುವ ಜನರಿಗೆ ಏಪ್ರಿಲ್ ತಿಂಗಳ ಮೊದಲನೇ ವಾರ ಮತ್ತು ಸೆಪ್ಟೆಂಬರ್ ರಿಂದ ನವೆಂಬರ್ ವರೆಗಿನ ಸಮಯವೂ ಹೆಚ್ಚು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮಗೆ ಹೆಚ್ಚು ಯಶಸ್ಸು ಸಿಗುತ್ತದೆ. ಹೇಗಾದರೂ ಇದನ್ನು ಹೊರೆತುಪಡಿಸಿ, ನೀವು ಸ್ವಲ್ಪ ವಿಶೇಷ ಗಮನವನ್ನು ಇಟ್ಟುಕೊಂಡು ಹೆಚು ಶ್ರಮಿಸಬೇಕಾಗುತ್ತದೆ. ಆಗ್ ಮಾತ್ರ ಇದರ ಶುಭ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡಲು ಯೋಚಿಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಅವರು ಜನವರಿ ತಿಂಗಳ ಆರಂಭದಲ್ಲಿ ಮತ್ತು ನಂತರ ಮೇ ರಿಂದ ಜೂಲೈ ತಿಂಗಳ ಮಧ್ಯದಲ್ಲಿ ಯಾವುದೇ ವಿದೇಶಿ ವಿಶ್ವವಿದ್ಯಾಲಯ ಅಥವಾ ಸ್ಕೂಲ್ ನಲ್ಲಿ ಪ್ರವೇಶ ಪಡೆಯುವ ಶುಭ ಸುದ್ಧಿಯನ್ನು ಪಡೆಯಬಹುದು.

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according Cancer horoscope 2021

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮ್ಮ ಕುಟುಂಬ ಜೀವನದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷದ ಆರಂಭವು ನಿಮಗೆ ಉತ್ತಮವಾಗಿರುವುದಿಲ್ಲ. ಇದರೊಂದಿಗೆ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿರುವ ಶನಿ ದೇವರ ದೃಷ್ಟಿ ನಿಮ್ಮ ನಾಲ್ಕನೇ ಮನೆಯ ಮೇಲಿರುತ್ತದೆ. ಈ ಕಾರಣದಿಂದಾಗಿ ನೀವು ಕೌಟುಂಬಿಕ ಸಂತೋಷದಲ್ಲಿ ಕೊರತೆಯನ್ನು ಅನುಭವಿಸುತ್ತೀರಿ. ಇದರೊಂದಿಗೆ ಕುಟುಂಬದ ಬೆಂಬಲವನ್ನು ಪಡೆಯುವಲ್ಲಿ ಕೂಡ ನಿಮಗೆ ತೊಂದರೆಯಾಗುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಜೀವನವು ಒತ್ತಡಕ್ಕೊಳಗಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಬಗ್ಗೆ ಅತೃಪ್ತರಾಗಿ ಕಾಣುತ್ತಾರೆ. ಇದಕ್ಕಾಗಿ ನೀವು ನಿಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೀರಿ, ಆದರೆ ನಿರಾಶೆ ಕೈಗೊಳ್ಳುವ ಕಾರಣದಿಂದಾಗಿ ನಿಮ್ಮ ಮನಸ್ಸು ವಿಚಲಿತಗೊಳ್ಳುತ್ತದೆ.

ಮನೆ ಪರಿಸ್ಥಿತಿ ನಿಮ್ಮ ವಿರುದ್ಧವಾಗಿರುತ್ತದೆ, ಇದರಿಂದ ನಿಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಕಾಣಲಾಗುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಕೋಪವನ್ನು ಶಾಂತವಾಗಿರಿಸಿ ಮತ್ತು ವಿವಾದಗಳಿಂದ ನಿಮ್ಮನ್ನು ದೂರವಿರಿಸಿ. ಈ ವರ್ಷ ಕೆಲಸಕ್ಕೆ ಸಂಬಂಧಿಸಿದಂತೆ ನೀವು ನಿಮ್ಮ ಮನೆಯಿಂದ ದೂರ ಹೋಗಬೇಕಾಗಬಹುದು. ಈ ಸಮಯದಲ್ಲಿ ನೀವು ಸ್ವಲ್ಪ ಅನಾನುಕೂಲತೆಯನ್ನು ಅನುಭವಿಸುತ್ತೀರಿ. ವರ್ಷದ ಆರಂಭವು ನಿಮಗೆ ಉತ್ತಮವಾಗಿರುವುದಿಲ್ಲ. ಏಕೆಂದರೆ ಮಂಗಳ ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿರುತ್ತಾರೆ. ಅದರ ಮೇಲೆ ಶನಿ ದೇವರ ಧುಷ್ಟಿಯು ಇರುತ್ತದೆ. ಈ ಸಮಯದಲ್ಲಿ ಕೌಟುಂಬಿಕ ವಾತಾವರಣವು ಸಂತೋಷವಾಗಿರುವುದಿಲ್ಲ. ಯಾವುದೇ ವಿಷಯದ ಬಗ್ಗೆ ಕುಟುಂಬದಲ್ಲಿ ವಿರೋಧಾಭಾಸವನ್ನು ಕಾಣಲಾಗುತ್ತದೆ. ಇದು ದೀರ್ಘಕಾಲದ ವರೆಗೆ ಹಾಗೆ ಇರುತ್ತದೆ. ಆದಾಗ್ಯೂ ಕಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇದರ ಪ್ರಯೋಜನವನ್ನು ಪಡೆದುಕೊಂಡು ನೀವು ಅವರ ವಿಹಯವನ್ನು ಅಥಮಾಡಿಕೊಳ್ಳಿ ಮತ್ತು ನಿಮ್ಮ ಮಾತುಗಳನ್ನು ಅವರಿಗೆ ವಿವರಿಸಲು ಪ್ರಯತ್ನಿಸುತ್ತಲೇ ಇರಿ.

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Marriage life according Cancer horoscope 2021

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಕರ್ಕ ರಾಶಿಚಕ್ರದ ಸ್ಥಳೀಯರು ವೈವಾಹಿಕ ಜೇವನದಲ್ಲಿ ಈ ವರ್ಷ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ಈ ವರ್ಷ ಅನೇಕ ಗ್ರಹಗಳ ಬದಲಾಗುತ್ತಿರುವ ಸ್ಥಿತಿ ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತವೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲವು ಶುಭ ಗ್ರಹಗಳು ನಿಮ್ಮ ದಾಂಪತ್ಯ ಜೀವಾಂದಲ್ಲಿ ಪ್ರೀತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಕ್ರೂರ ಗ್ರಹಗಳ ದೃಷ್ಟಿಯ ಕಾರಣದಿಂದಾಗಿ ನಿಮ್ಮ ಮತ್ತು ಜೀವನ ಸಂಗಾತಿಯ ಸಮಂಧದಲ್ಲಿ ಆಕರ್ಷಣೆಯ ಕೊರತೆ ಉಂಟಾಗುತ್ತದೆ ಮತ್ತು ಇದರ ನೇರವಾದ ಪರಿಣಾಮವು ನಿಮ್ಮ ವೈಯಕ್ತಿಕ ಸಂಬಂಧದ ಮೇಲೆ ಬೀರುವುದನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ, ಏಕೆಂದರೆ ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರೀತಿಯಿಂದ ಮಾತನಾಡುವ ಸಮಯದಲ್ಲಿ ಅವರು ಧರ್ಮದ ಬಗ್ಗೆ ಮಾತನಾಡಿ ನಿಮ್ಮ ಹೃದಯವನ್ನು ಮುರಿಯಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮಗೆ ಮತ್ತು ನಿಮ್ಮ ಜೀವನ ಸಂಗಾತಿಗೆ ಸಮಯವನ್ನು ನೀಡಿ.

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, 14 ಜನವರಿ ರಿಂದ 12 ಫೆಬ್ರವರಿಯ ಮಧ್ಯೆ ನೀವು ನಿಮ್ಮ ವೈವಾಹಿಕ ಜೀವನದ್ಲಲಿ ಅನೇಕ ಬದಲಾವಣೆಗಳನ್ನು ಅನುಭವಿಸುವಿರಿ. ಏಕೆಂದರೆ ಈ ಸಮಯದ್ಲಲಿ ಸೂರ್ಯ ದೇವರ ಸಾಗಣೆಯು ಶನಿ ದೇವರೊಂದಿಗೆ ನಿಮ್ಮ ರಾಶಿಚಕ್ರದಿಂದ ಏಳನೇ ಮನೆಯಲ್ಲಿರುತ್ತದೆ. ಈ ಕಾರಣದಿಂದ ನಿಮ್ಮಿಬ್ಬರ ನಡುವೆ ವಿವಾದದ ಸಧ್ಯತೆ ಇದೆ. ಆದರೆ ಇದರ ಹೊರೆತಾಗಿಯೂ ನಿಮ್ಮಿಬರ ನಿಷ್ಠೆಯು ನಿಮ್ಮ ಸಂಬಂಧದ ಗುರಾಣಿಯಾಗುತ್ತದೆ ಮತ್ತು ಸಂಬಂಧದ ಪ್ರತಿಯೊಂದು ಉದ್ವೇಗ ಮತ್ತು ವಿವಾದಗಳನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ. ಇದರ ನಂತರ ಫೆಬ್ರವರಿ ತಿಂಗಳಲ್ಲಿ ಶುಕ್ರ ದೇವ ಮಕರ ರಾಶಿಯಲ್ಲಿ ಹಾದುಹೋಗುವುದರಿಂದಾಗಿ, ನಿಮ್ಮ ರಾಶಿಚಕ್ರದ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ. ಪರಿಣಾಮವಾಗಿ ನಿಮ್ಮಿಬ್ಬರ ಈ ಸಮಬಂಧದಲ್ಲಿ ಪರಿಚಿತತೆ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ. ಈ ವರ್ಷ ನೀವು ನಿಮ್ಮ ಸಂಗಾತಿಯೊಂದಿಗೆ ಯಾವುದೇ ಪ್ರಯಾಣಕ್ಕೆ ಹೋಗಲು ಯೋಜಿಸಬಹುದು. ಈ ವರ್ಷ 2 ಜೂನ್ ರಿಂದ 20 ಜೂಲೈ ಮಧ್ಯೆ ಮಂಗಳ ಸಾಗಣೆ ನಿಮ್ಮದೇ ರಾಶಿಚಕ್ರದಲ್ಲಿ ಇರುವುದರಿಂದಾಗಿ ನಿಮ್ಮ ದಾಂಪತ್ಯ ಜೀವನವು ಸ್ವಲ್ಪ ತೊಂದರೆಕ್ಕೊಳಗಾಗಬಹುದು. ಮತ್ತೊಂದೆಡೆ ನೀವು ಮತ್ತು ನಿಮ್ಮ ಜೀವನ ಸಂಗಾತಿ ಒಟ್ಟಾಗಿ ವ್ಯಾಪಾರ ನಡೆಸುತ್ತಿದ್ದರೆ, ಈ ಸಂಚಾರವು ನಿಮಿಬಾರಿಗೆ ಉತ್ತಮವಾಗಿರುತ್ತದೆ.

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ನಿಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದರೆ, ಅದರಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಏಕೆಂದರೆ ಈ ವರ್ಷ ಶನಿ ಮತ್ತು ಗುರುವು ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ, ಈ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ನಿಮ್ಮ ಐದನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯ ಕಾರಣದಿಂದಾಗಿ, ಈ ಇಡೀ ವರ್ಷ ಸಣ್ಣ ಪುಟ್ಟ ಸಮಸ್ಯೆಗಳು ನಿಮ್ಮ ಮಕ್ಕಳನ್ನು ಕಾಡುತ್ತಿರುತ್ತವೆ. ಆದರೆ ನೀವು ಅವರನ್ನು ಬೆಂಬಲಿಸುತ್ತೀರಿ, ಇದರಿಂದ ಅವರ ಮನೋಬಲವು ಹೆಚ್ಚಾಗುತ್ತದೆ ಮತ್ತು ಅವರು ಮೊದಲಿಗಿಂತ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love Life according Cancer horoscope 2021

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಪ್ರೀತಿಯಲ್ಲಿ ರುವ ಕರ್ಕ ರಾಶಿ ಚಕ್ರದ ಸ್ಥಳೀಯರ ಜೀವನದಲ್ಲಿ ಈ ವರ್ಷ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಏಕೆಂದರೆ ವರ್ಷದ ಆರಂಭದಿಂದ ಫೆಬ್ರವರಿ ವರೆಗೆ ನೀವು ಅತ್ಯಂತ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಆದಾಗ್ಯೂ ಇದರ ನಂತರದಿಂದ ಮಾರ್ಚ್ ವರೆಗಿನ ಸಮಯದಲ್ಲಿ ಪ್ರೇಮಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಮಾರ್ಚ್ ರಿಂದ ಏಪ್ರಿಲ್ ಮಧ್ಯದ ವರೆಗಿನ ಸಮಯವೂ ನಿಮ್ಮ ಪ್ರೀತಿ ಜೀವನಕ್ಕೆ ಉತ್ತಮವೆಂದು ಸಾಬೀತುಪಡಿಸುತ್ತದೆ. ಈ ಅವಧಿಯಲ್ಲಿ ನೀವು ನಿಮ್ಮನ್ನು ನಿಮ್ಮ ಪ್ರೀತಿ ಪಾತ್ರ ರ ಬಹಳ ನಿಕಟವಾಗಿ ಅನುಭವಿಸುವಿರಿ ಮತ್ತು ನಿಮ್ಮ ಪ್ರೇಮಿಯೊಂದಿಗೆ ನಿಮ್ಮ ಹೃದಯದ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳು ವಲ್ಲಿ ಸಾಮರ್ಥ್ಯ ರಾಗಿರುತ್ತಿರಿ.

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಪ್ರೀತಿಯಲ್ಲಿರುವ ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಮೇ, ಆಗಸ್ಟ್ ಮತ್ತು ನಂತರ ಸೆಪ್ಟೆಂಬರ್ ತಿಂಗಳು ತುಂಬಾ ಉತ್ತಮವಾಗಿರಲಿವೆ. ಆದಾಗ್ಯೂ ಈ ಸಮಯದಲ್ಲಿ ಶನಿ ದೇವ ನಿಮ್ಮ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾ ನಿಮಗೆ ಅನೇಕ ಸವಾಲುಗಳನ್ನು ನೀಡುತ್ತಾರೆ. ಆದರೂ ನೀವು ಮತ್ತು ನಿಮ್ಮ ಸಂಗಾತಿ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ತಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಿಸುತ್ತಿರು ತ್ತಿರಿ. ಅಂತಹ ಪರಿಸ್ಥಿತಿಯಲ್ಲಿ ನೀವು ಸ್ವಲ್ಪ ಜಾಗರೂಕತೆಯಿಂದ ಮತ್ತು ತಮ್ಮ ಪ್ರೀತಿ ಪಾತ್ರ ರ ಮೇಲೆ ನಂಬಿಕೆಯನ್ನು ತೋರಿಸುವ ಅಗತ್ಯವಿದೆ. ಇದಲ್ಲದೆ ಪ್ರೀತಿಯಲ್ಲಿ ರುವ ಸ್ಥಳೀಯರು ಈ ವರ್ಷ ಮಾನಸಿಕ ಒತ್ತಡದಲ್ಲಿ ಹೆಚ್ಚಳವನ್ನು ಅನುಭವಿಸುತ್ತಾರೆ ಮತ್ತು ಅನೇಕ ಪರಿಸ್ಥಿತಿಗಳಲ್ಲಿ ನೀವು ನಿಮ್ಮ ಮೇಲೆ ಹೆಚ್ಚು ಒತ್ತಾಯವನ್ನು ಸಹ ಅನುಭವಿಸುತ್ತೀರಿ. ಅಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿಯೊದಿಗೆ ಸೇರಿ ಕಾಲ ಕಾಲಕ್ಕೆ ಪ್ರತಿಯೊಂದು ವಿವಾದ ಮತ್ತು ತಪ್ಪುಗ್ರಹಿಕೆಗಳನ್ನು ನಿವಾರಿಸಬೇಕು.

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ ಆರೋಗ್ಯ ಜೀವನ - Health life according Cancer horoscope 2021

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಕರ್ಕ ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ಆರೋಗ್ಯ ಜೀವನದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಈ ಪೂರ್ತಿ ವರ್ಷ ಶನಿ ದೇವ ನಿಮ್ಮ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ, ಇದು ನಿಮ್ಮ ರಾಶಿಚಕ್ರದ ಏಳನೇ ಮತ್ತು ಎಂಟನೇ ಮನೆಯ ಮಾಲೀಕ ಮತ್ತು ನಿಮ್ಮ ಆರನೇ ಮತ್ತು ನಾಲ್ಕನೇ ಮನೆಗೆ ದೃಷ್ಟಿ ಹಾಕುತ್ತಾರೆ. ಇದರೊಂದಿಗೆ ಗುರು ದೇವರು ಕೂಡ ನಿಮ್ಮ ಆರನೇ ಮಣೆಯಲ್ಲಿರುತ್ತಾ ರೆ. ಅಂತಹ ಪರಿಸ್ಥಿತಿಯಲ್ಲಿ ಈ ಗ್ರಹಗಳ ಸ್ಥಾನವು ನಿಮಗೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಒದಗಿಸುವ ಕೆಲಸ ಮಾಡುತ್ತವೆ. ಆದ್ದರಿಂದ ಈ ಸಮಯದಲ್ಲಿ ನೀವು ವಿಶೇಷ ಕಾಳಜಿ ವಹಿಸಬೇಕು ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು.

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ವಾಹನ ಚಲಾಯಿಸುವ ಸ್ಥಳೀಯರು ಕೂಡ ವಾಹನವನ್ನು ಚಲಾಯಿಸುವ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಯಾವುದೇ ಅಪಘಾತ ಸಂಭವಿಸಬಹುದು. ಇದರೊಂದಿಗೆ ಆರಂಭದ ತಿಂಗಳಲ್ಲಿ, ಜನವರಿ ರಿಂದ ಏಪ್ರಿಲ್ ತಿಂಗಳ ಮಧ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಶೇಷ ಕಷ್ಟಗಳನ್ನು ನೀವು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಗಮನ ಹರಿಸಿದರೆ ಇವುಗಳಿಂದ ಮುಕ್ತರಾಗಬಹುದು. ಇದರೊಂದಿಗೆ 15 ಸೆಪ್ಟೆಂಬರ್ ರಿಂದ 20 ನವೆಂಬರ್ ಮಧ್ಯೆ ಆರೋಗ್ಯಕ್ಕೆ ಸಂಬಂಧಿಸಿದ ಸ್ಥಿತಿಗಳು ಸುಧಾರಿಸುತ್ತದೆ. ಆದರೆ ದೈಹಿಕ ಅಸ್ವಸ್ಥತೆಗಳು ಉಳಿದಿರುತ್ತವೆ. ಈ ಸಮಯದಲ್ಲಿ ಕೆಲಸ ವ್ಯಾಪಾರ ಮತ್ತು ಕುಟುಂಬದ ಒತ್ತಡವನ್ನು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅನುಮತಿಸಬೇ ಡಿ ಮತ್ತು ಕಾಲ ಕಾಲಕ್ಕೆ ಉತ್ತಮ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಮನೆಯಿಂದ ಹೊರಹೋಗುವ ಸಮಯದಲ್ಲಿ ಸರಿಯಾಗಿ ಆಹಾರವನ್ನು ಸೇವಿಸಿ ದ ನಂತರ ಹೊರಹೋಗಿ ಮತ್ತು ನಿಮ್ಮೊಂದಿಗೆ ಶುದ್ಧವಾದ ನೀರಿನ ಬಾಟಲಿಯನ್ನು ಇರಿಸಿ.

ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according Cancer horoscope 2021

Talk to Astrologer Chat with Astrologer