ಹೋಳಿ ವಿಶೇಷ: ಫಲ್ಗುಣಿ ಹುಣ್ಣಿಮೆ ವ್ರತ ವಿಧಾನ ಮತ್ತು ಅದೃಷ್ಟದ ಬಣ್ಣ ತಿಳಿಯಿರಿ!

Author: Sudha Bangera |Updated Wed, 16 Mar 2022 09:15 AM IST

ಹೋಳಿಯು ಬಹು ನಿರೀಕ್ಷಿತ ಹಬ್ಬಗಳಲ್ಲಿ ಒಂದಾಗಿದೆ, ಇದು ಪರಸ್ಪರ ಬಣ್ಣಗಳನ್ನು ಹಚ್ಚುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿದೆ. ಈ ಹಿಂದೂ ಹಬ್ಬವನ್ನು ಪ್ರಾಚೀನ ಕಾಲದಿಂದಲೂ ವಸಂತವನ್ನು ಸ್ವಾಗತಿಸುವ ಮಾರ್ಗವಾಗಿ ಆಚರಿಸಲಾಗುತ್ತದೆ ಮತ್ತು ಇದು ಜೀವನದಲ್ಲಿ ಹೊಸ ಮತ್ತು ತಾಜಾ ಆರಂಭವನ್ನು ಸೂಚಿಸುತ್ತದೆ. ಇದು ಫಲ್ಗುಣಿ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ವಿಶೇಷ ಹಬ್ಬವಾಗಿದೆ. ಫಲ್ಗುಣಿ ಮಾಸದಲ್ಲಿ ನಡೆಯುವ ಮತ್ತೊಂದು ಪ್ರಮುಖ ಘಟನೆಯೆಂದರೆ ಫಲ್ಗುಣಿ ಹುಣ್ಣಿಮೆ ವ್ರತ. ಪ್ರತಿ ವರ್ಷ, ಫಲ್ಗುಣಿ ಹುಣ್ಣಿಮೆಯ ದಿನದಂದು ಹೋಳಿಯನ್ನು ಆಚರಿಸಲಾಗುತ್ತದೆ, ಇದು ಈ ಹಬ್ಬದ ಮಹತ್ವವನ್ನು ಹೆಚ್ಚಿಸುತ್ತದೆ.


ಆಸ್ಟ್ರೋಸೇಜ್‌ನ ಈ ಬ್ಲಾಗ್‌ನಲ್ಲಿ, ಹೋಳಿ ಹಬ್ಬದ ಮಹತ್ವ ಮತ್ತು ಫಲ್ಗುಣಿ ಹುಣ್ಣಿಮೆ, ಈ ಎರಡೂ ಪ್ರಮುಖ ಹಬ್ಬಗಳನ್ನು ದೇಶಾದ್ಯಂತ ಹೇಗೆ ಆಚರಿಸಲಾಗುತ್ತದೆ ಮತ್ತು ಅವುಗಳ ಮುಹೂರ್ತವನ್ನು ನಾವು ನಿಮಗೆ ತಿಳಿಸುತ್ತೇವೆ. ವಿವಿಧ ರಾಶಿಗಳ ಸಮಸ್ಯೆಗಳ ಪರಿಹಾರಕ್ಕೆ ಸುಲಭ ಮತ್ತು ಪರಿಣಾಮಕಾರಿ ಸಲಹೆಗಳೊಂದಿಗೆ ತಮ್ಮ ಅದೃಷ್ಟದ ಬಣ್ಣವನ್ನು ಸಹ ತಿಳಿದುಕೊಳ್ಳಬಹುದು. ಎಲ್ಲಾ ಪ್ರಮುಖ ಮಾಹಿತಿಯನ್ನು ಪಡೆಯಲು ಕೊನೆಯವರೆಗೂ ಓದಿ!

ವಿಶ್ವದ ಅತ್ಯುತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ, ಮಾತನಾಡಿ ಮತ್ತು ನಿಮ್ಮ ಮುಂಬರುವ ಭವಿಷ್ಯದ ಬಗ್ಗೆ ತಿಳಿಯಿರಿ

ಹೋಳಿ 2022: ಪ್ರಾಮುಖ್ಯತೆ ಮತ್ತು ಜ್ಯೋತಿಷ್ಯ ಮಹತ್ವ

ಬಣ್ಣಗಳ ಹಬ್ಬ ಹೋಳಿಯನ್ನು ರಾಷ್ಟ್ರವ್ಯಾಪಿ ಮತ್ತು ವಿಶ್ವಾದ್ಯಂತ ಬಹಳ ಉತ್ಸಾಹ ಮತ್ತು ವಿನೋದದಿಂದ ಆಚರಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡುತ್ತಾರೆ ಮತ್ತು ಯಾರ ಜೊತೆಯಾದರೂ ಮನಸ್ತಾಪವಿದ್ದರೆ ಆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಇದು ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಜನರು ವಿವಿಧ ಭಕ್ಷ್ಯಗಳನ್ನು ತಯಾರಿಸುತ್ತಾರೆ, ಬಣ್ಣಗಳೊಂದಿಗೆ ಆಟವಾಡುತ್ತಾರೆ ಮತ್ತು ಡೋಲು ಮತ್ತು ಇತರ ಜಾನಪದ ಸಂಗೀತದ ಜೋರಾದ ಬೀಟ್‌ಗಳಿಗೆ ನೃತ್ಯ ಮಾಡುವ ಮೂಲಕ ತಮ್ಮ ದಿನವನ್ನು ಆನಂದಿಸುತ್ತಾರೆ.

ಹೋಳಿಯನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಹೋಲಿಕಾ ದಹನ ಎಂದು ಕರೆಯಲ್ಪಡುವ ಮೊದಲ ದಿನವು ರಾಕ್ಷಸ ರಾಜ ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ವಿರುದ್ಧ ವಿಷ್ಣು ಭಕ್ತ ಪ್ರಹ್ಲಾದನ ವಿಜಯವನ್ನು ಸೂಚಿಸುತ್ತದೆ. ಈ ದಿನ, ಹೋಲಿಕಾದ ಚಿತೆಗೆ ಸೂರ್ಯಾಸ್ತದ ಸಮಯದಲ್ಲಿ ಅಥವಾ ನಂತರ ದೀಪ ಬೆಳಗಿಸಲಾಗುತ್ತದೆ. ಮರುದಿನ, ಇದನ್ನು ದುಲ್ಹೆಂಡಿ ಎಂದೂ ಕರೆಯುತ್ತಾರೆ, ಇದನ್ನು ಬಣ್ಣಗಳು, ನೀರು ಮತ್ತು ಗುಲಾಬಿ ಬಳಸಿ ಉತ್ಸಾಹದಿಂದ ಆಚರಿಸಲಾಗುತ್ತದೆ ಮತ್ತು ಜನರು ವಿಶೇಷ ಭಕ್ಷ್ಯಗಳನ್ನು ಆನಂದಿಸುತ್ತಾರೆ.

ಅದೃಷ್ಟವು ಅನುಕೂಲಕರವಾಗಿದೆಯೇ ಅಥವಾ ಪ್ರತಿಕೂಲವಾಗಿದೆಯೇ? ರಾಜಯೋಗ ವರದಿ ಎಲ್ಲವನ್ನೂ ಬಹಿರಂಗಪಡಿಸುತ್ತದೆ!

ವೈದಿಕ ಜ್ಯೋತಿಷ್ಯದ ಪ್ರಕಾರ, ಹೋಳಿ ದಿನದಂದು ಚಂದ್ರ ಮತ್ತು ಸೂರ್ಯ ಪರಸ್ಪರ ವಿರುದ್ಧ ತುದಿಗಳಲ್ಲಿ ಆಕಾಶದಲ್ಲಿ ಇರುತ್ತಾರೆ. ಈ ಸ್ಥಾನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಅಲ್ಲಿ ಸೂರ್ಯನನ್ನು ಕುಂಭ ಮತ್ತು ಮೀನ ರಾಶಿಯಲ್ಲಿ ಇರಿಸಲಾಗುತ್ತದೆ ಮತ್ತು ಚಂದ್ರನು ಸಿಂಹ ಮತ್ತು ಕನ್ಯಾರಾಶಿಯ ಚಿಹ್ನೆಯಲ್ಲಿರುತ್ತಾನೆ. ಇದರ ಜೊತೆಗೆ, ನಿಮ್ಮ ಮನೆ, ವಾಹನ ಅಥವಾ ಆಸ್ತಿಗೆ ವಾಸ್ತು ಪೂಜೆಯನ್ನು ಮಾಡಲು ಈ ಅವಧಿಯು ತುಂಬಾ ಒಳ್ಳೆಯದು ಎಂದು ವಾಸ್ತು ತಜ್ಞರು ನಂಬುತ್ತಾರೆ ಏಕೆಂದರೆ ಇದು ನಕಾರಾತ್ಮಕ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ, ದುಷ್ಟ ಕಣ್ಣಿನಿಂದ ರಕ್ಷಣೆ ನೀಡುತ್ತದೆ ಮತ್ತು ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ದಹಿಸಿ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ. ಹೋಲಿಕಾ ದಹನ ಪೂಜೆಯಲ್ಲಿ. ಅನೇಕ ಭಕ್ತರು ಈ ದಿನ ಆಂಜನೇಯನ ಪೂಜೆಗಾಗಿ ಗಾಳಿಪಟಗಳನ್ನು ಹಾರಿಸುತ್ತಾರೆ.

ಹೋಳಿ 2022: ಶುಭ ಸಮಯಗಳು

ಹೋಳಿ ಹಬ್ಬ ಎರಡು ದಿನಗಳ ಕಾಲ ನಡೆಯುತ್ತದೆ. ಹೋಳಿ 2022 ರ ಮೊದಲ ದಿನ, ಗುರುವಾರ, ಮಾರ್ಚ್ 17, 2022 ರಂದು ಹೋಲಿಕಾ ದಹನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ.

ಹೋಲಿಕಾ ದಹನ ಸಮಯ ಮತ್ತು ಮುಹೂರ್ತ

ಹೋಲಿಕಾ ದಹನ ಮುಹೂರ್ತ: 21:20:55 ರಿಂದ 22:31:09

ಅವಧಿ: 1 ಗಂಟೆ 10 ನಿಮಿಷ

ಭದ್ರಾ ಪಂಚ: 21:20:55 ರಿಂದ 22:31:09

ಭದ್ರಾ ಮುಖ: 22:31:09 ರಿಂದ 00:28:13

ಹೋಳಿ 2022 ದಿನಾಂಕ: 18 ಮಾರ್ಚ್ 2022

ಗಮನಿಸಿ: ಈ ಸಮಯಗಳು ನವದೆಹಲಿಯಲ್ಲಿ ವಾಸಿಸುವ ಜನರಿಗೆ ಅನ್ವಯಿಸುತ್ತವೆ. ನಿಮ್ಮ ನಗರಕ್ಕೆ ಅನುಗುಣವಾಗಿ ಸಮಯವನ್ನು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ.

ಹೋಳಿ ಹಬ್ಬದ ಎರಡನೇ ದಿನವನ್ನು ಧೂಳಂಡಿ, ಧೂಲೆಂಡಿ ಅಥವಾ ಧೂಳಿ ಎಂದೂ ಕರೆಯುತ್ತಾರೆ, ಇದು ಮಾರ್ಚ್ 18, 2022 ರಂದು ನಡೆಯುತ್ತದೆ.

ಭವಿಷ್ಯದ ಎಲ್ಲಾ ಮೌಲ್ಯಯುತ ಒಳನೋಟಗಳಿಗಾಗಿ ಆಸ್ಟ್ರೋಸೇಜ್ ಬೃಹತ್ ಜಾತಕ

ಫಲ್ಗುಣಿ ಹುಣ್ಣಿಮೆ ವ್ರತ 2022: ಮಹತ್ವ, ಮುಹೂರ್ತ ಮತ್ತು ಆಚರಣಾ ವಿಧಾನ

ಹಿಂದೂ ಕ್ಯಾಲೆಂಡರ್ ಪ್ರಕಾರ, ಫಲ್ಗುಣಿ ಹುಣ್ಣಿಮೆಯನ್ನು ಶುಕ್ಲ ಪಕ್ಷದ ಸಮಯದಲ್ಲಿ ಫಲ್ಗುಣಿ ಮಾಸದಲ್ಲಿ ಆಚರಿಸಲಾಗುತ್ತದೆ. ಇದು ಕೊನೆಯ ಹುಣ್ಣಿಮೆಯಾಗಿದ್ದು, ಬಣ್ಣದ ಹಬ್ಬವಾದ ಹೋಳಿಯನ್ನು ಈ ದಿನವೂ ಆಚರಿಸಲಾಗುತ್ತದೆ. ವಿವಿಧ ಪ್ರದೇಶಗಳಲ್ಲಿ, ಭಕ್ತರು ಈ ದಿನವನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯ ಜನ್ಮದಿನದ ಅಂಗವಾಗಿ ಲಕ್ಷ್ಮಿ ಜಯಂತಿ ಎಂದು ಆಚರಿಸುತ್ತಾರೆ. ಫಲ್ಗುಣಿ ಹುಣ್ಣಿಮೆಯ ದಿನದಂದು ಉಪವಾಸ ಅಥವಾ ವ್ರತವನ್ನು ಆಚರಿಸುವ ಮತ್ತು ವಿಷ್ಣು ಮತ್ತು ಚಂದ್ರನನ್ನು ಪೂಜಿಸುವ ಭಕ್ತರು ಭಗವಂತನ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಅಂತಹ ಭಕ್ತರು ತಮ್ಮ ಈಗಿನ ಮತ್ತು ಹಿಂದಿನ ಪಾಪಗಳಿಂದ ಮುಕ್ತರಾಗುತ್ತಾರೆ.

ಫಲ್ಗುಣಿ ಹುಣ್ಣಿಮೆ ವ್ರತ 2022: ಮುಹೂರ್ತ

ಫಲ್ಗುಣಿ ಹುಣ್ಣಿಮೆ ವ್ರತವನ್ನು ಮಾರ್ಚ್ 17 ಮತ್ತು 18ರಂದು ಆಚರಿಸಲಾಗುತ್ತದೆ. ಜನರು ಅರ್ಘ್ಯವನ್ನು ಅರ್ಪಿಸುವ ಮತ್ತು ಚಂದ್ರನನ್ನು ಪೂಜಿಸುವ ಕೆಲವು ಪ್ರದೇಶಗಳಲ್ಲಿ ಭಕ್ತರು, ಮಾರ್ಚ್ 17 ರಂದು ಉಪವಾಸ ಮಾಡುತ್ತಾರೆ ಮತ್ತು ಪೂಜೆಗಾಗಿ ನಿಖರವಾದ ಮುಹೂರ್ತವನ್ನು ಪಡೆಯಲು ಸೂರ್ಯೋದಯಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ವ್ರತವನ್ನು ಮಾರ್ಚ್ 18 ರಂದು ಆಚರಿಸಲಾಗುತ್ತದೆ.

ಹುಣ್ಣಿಮೆ ತಿಥಿ ಮಾರ್ಚ್ 17, 2022 ರಂದು 13:32:39 ಕ್ಕೆ ಪ್ರಾರಂಭವಾಗುತ್ತದೆ

ಹುಣ್ಣಿಮೆ ತಿಥಿ ಮಾರ್ಚ್ 18, 2022 ರಂದು 12:49:54 ಕ್ಕೆ ಕೊನೆಗೊಳ್ಳುತ್ತದೆ

ಗಮನಿಸಿ: ಈ ಸಮಯಗಳು ನವದೆಹಲಿಯಲ್ಲಿ ವಾಸಿಸುವ ಜನರಿಗೆ ಮಾನ್ಯವಾಗಿರುತ್ತವೆ. ನಿಮ್ಮ ನಗರಕ್ಕೆ ಅನುಗುಣವಾಗಿ ಸಮಯವನ್ನು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ.

ಫಲ್ಗುಣಿ ಹುಣ್ಣಿಮೆ ಪೂಜೆಯ ವಿಧಿ ವಿಧಾನ

ನಮ್ಮ ಗೌರವಾನ್ವಿತ ಜ್ಯೋತಿಷಿಗಳ ಬಳಿ ಮುಂದೆ ಏನಾಗಬಹುದು ಎಂಬುದರ ಕುರಿತು ಸುಳಿವುಗಳು ಲಭ್ಯವಿವೆ

ನಿಮ್ಮ ರಾಶಿ ಪ್ರಕಾರ ಹೋಳಿಯ ಆಚರಣಾ ವಿಧಾನ

ಮೇಷ: ಐದನೇ ಮನೆಯ ವಿಧಿ ವಿಧಾನಗಳು ಚಂದ್ರನಿಂದ ಆಕ್ರಮಿಸಲ್ಪಟ್ಟಿರುವುದರಿಂದ ಮತ್ತು ನಕ್ಷತ್ರದ ಅಧಿಪತಿ ಶುಕ್ರನು (ಸಂತೋಷದ ಗ್ರಹ) ಮಂಗಳನೊಂದಿಗೆ ನೆಲೆಗೊಂಡಿರುವುದರಿಂದ, ಮೇಷ ರಾಶಿಯ ಸ್ಥಳೀಯರು ಅಧಿಕಾರ ವಹಿಸಿಕೊಳ್ಳಲು ಬಯಸುತ್ತಾರೆ ಮತ್ತು "ಹೋಳಿ ಹೈ!" ಎಂದು ಕೂಗುತ್ತಾ ತಮ್ಮ ಮನೆಗಳಿಂದ ಧಾವಿಸಿ, ಎಲ್ಲರ ಮೇಲೆ ಬಣ್ಣಗಳು ಮತ್ತು ನೀರಿನ ಬಲೂನ್‌ಗಳನ್ನು ಎಸೆಯುವುದರಲ್ಲಿ ಅವರು ಮೊದಲನೆಯವರಾಗಿದ್ದರೆ ಆಶ್ಚರ್ಯವೇನಿಲ್ಲ. ಅವರು ತಮ್ಮ ಗುಂಪನ್ನು ರಚಿಸುತ್ತಾರೆ ಮತ್ತು ಈ ದಿನವನ್ನು ಆನಂದಿಸಲು ಅದನ್ನು ಮುನ್ನಡೆಸುತ್ತಾರೆ.

ವೃಷಭ: ಐದನೇ ಮನೆಯ ಅಧಿಪತಿ ಬುಧನು ಗುರುವಿನ ಜೊತೆಗೆ ಹತ್ತನೇ ಮನೆಯಲ್ಲಿದ್ದು ವಿಳಂಬವನ್ನು ಸೂಚಿಸುವ ಶನಿಯು ಆಳುವ ರಾಶಿಯಲ್ಲಿ ಇರುವುದರಿಂದ, ವೃಷಭ ರಾಶಿಯ ಸ್ಥಳೀಯರು ಹೋಳಿ-ದಿನದಂದು ರಜೆಯನ್ನು ತೆಗೆದುಕೊಂಡು ತಮ್ಮ ಆಚರಣೆಗಳನ್ನು ಸ್ವಲ್ಪ ತಡವಾಗಿ ಪ್ರಾರಂಭಿಸಬಹುದು. ಅವರು ಎಲ್ಲರೊಂದಿಗೆ ರೋಮಾಂಚಕ ಬಣ್ಣಗಳನ್ನು ಬಳಸಿ ಹೋಳಿಯನ್ನು ಆಕರ್ಷಕವಾಗಿ ಆಡುತ್ತಾರೆ ಮತ್ತು ಆಚರಣೆಗಳನ್ನು ಸ್ಮರಣಾರ್ಥವಾಗಿ ಮಾಡಲು ಬಹಳಷ್ಟು ಸ್ನೇಹಿತರನ್ನು ಆಹ್ವಾನಿಸುತ್ತಾರೆ!

ಮಿಥುನ: ಐದನೇ ಮನೆಯ ಅಧಿಪತಿ ಶುಕ್ರನು ಆಕ್ರಮಣಕಾರಿ ಮಂಗಳ ಮತ್ತು ಶನಿಯೊಂದಿಗೆ ಎಂಟನೇ ಮನೆಯಲ್ಲಿ ಇರಿಸಲ್ಪಟ್ಟಿರುವುದರಿಂದ, ಮಿಥುನ ರಾಶಿಯವರಿಗೆ ಹೋಳಿಯನ್ನು ಆಚರಿಸಲು ಒಂದಕ್ಕಿಂತ ಹೆಚ್ಚು ಸ್ಥಳಗಳಿವೆ, ಏಕೆಂದರೆ ಅವರಿಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರ ವಿಶಿಷ್ಟವಾದ ಬಣ್ಣದ ಆಯ್ಕೆಗಳು ಹೆಚ್ಚು ಗಮನ ಸೆಳೆಯುತ್ತವೆ. ಅವರು ತಮ್ಮದೇ ಆದ ಆಟದ ಪಟ್ಟಿಯನ್ನು ಹೊಂದಿರುತ್ತಾರೆ ಅದು ಸ್ಪೀಕರ್‌ಗಳ ಮೂಲಕ ಸ್ಫೋಟಿಸುತ್ತದೆ ಮತ್ತು ಪ್ರೇಕ್ಷಕರನ್ನು ರಂಜಿಸುತ್ತದೆ.

ಕರ್ಕ: ಐದನೇ ಮನೆಯ ಅಧಿಪತಿ ಮಂಗಳನು ​​ಶುಕ್ರ ಮತ್ತು ಶನಿಯೊಂದಿಗೆ ಸ್ನೇಹದ ಏಳನೇ ಮನೆಯಲ್ಲಿ ಇರಿಸಲ್ಪಟ್ಟಿರುವುದರಿಂದ, ಕರ್ಕ ರಾಶಿಯವರು ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಎಲ್ಲವನ್ನೂ ಮುಂಚಿತವಾಗಿ ಯೋಜಿಸುತ್ತಾರೆ ಮತ್ತು ಮನೆಗೆ ಎಲ್ಲರನ್ನು ಆಹ್ವಾನಿಸುತ್ತಾರೆ. ಅವರು ನೀರಿನೊಂದಿಗೆ ಹೋಳಿಯನ್ನು ಹೆಚ್ಚಾಗಿ ಆಡಲು ಇಷ್ಟಪಡುತ್ತಾರೆ, ಆದ್ದರಿಂದ ನೀವು ನೀರಿನ ಬಲೂನ್‌ಗಳ ಜೊತೆಗೆ ಎಲ್ಲೆಡೆ ನೀರು ತುಂಬಿದ ಬಕೆಟ್‌ಗಳನ್ನು ಕಾಣಬಹುದು. ಅವರು ಅತ್ಯುತ್ತಮ ಆತಿಥೇಯರಾಗುತ್ತಾರೆ ಮತ್ತು ರುಚಿಕರವಾದ ಆಹಾರದೊಂದಿಗೆ ಸಂತೋಷವನ್ನು ನೀಡುತ್ತಾರೆ.

ಸಿಂಹ: ಐದನೇ ಮನೆಯ ಅಧಿಪತಿ ಗುರುವು ದ್ವಂದ್ವ ಗ್ರಹವಾದ ಬುಧನೊಂದಿಗೆ ಸ್ನೇಹ ಮತ್ತು ಪಾಲುದಾರಿಕೆಯ ಏಳನೇ ಮನೆಯಲ್ಲಿ ನೆಲೆಗೊಂಡಿರುವುದರಿಂದ, ಸಿಂಹ ರಾಶಿಯವರು ದಿನಕ್ಕೆ ಒಂದಕ್ಕಿಂತ ಹೆಚ್ಚು ಆಹ್ವಾನಗಳನ್ನು ಹೊಂದಿದ್ದರೂ ಯಾವುದೇ ಪಾರ್ಟಿಗೆ ಹೋಗುವ ಮೊದಲು ಯೋಚಿಸುತ್ತಾರೆ ಮತ್ತು ಕೊನೆಗೆ ಎಲ್ಲೂ ಹೋಗುವುದಿಲ್ಲ. ಅವರು ತಮ್ಮ ಸ್ವಲ್ಪ ಬಣ್ಣ ಹಚ್ಚಿದ ಮುಖದೊಂದಿಗೆ ಏಕಾಂಗಿಯಾಗಿ ಚಿತ್ರಮಂದಿರದಲ್ಲಿ ಚಲನಚಿತ್ರ ನೋಡಲು ಹೋಗುತ್ತಾರೆ. ಅವರು ಹೋಳಿ ಆಡಲು ನಿರ್ಧರಿಸಿದರೂ ಕೂಡ ಸ್ವಲ್ಪ ಹೊತ್ತಲ್ಲೇ ಅಲ್ಲಿಂದ ಹೊರಡುತ್ತಾರೆ.

ಕನ್ಯಾ: ಐದನೇ ಮನೆಯ ಅಧಿಪತಿ ಶನಿಯು ಐದನೇ ಮನೆಯಲ್ಲಿಯೇ ಇರುವುದರಿಂದ, ಅವರು ಉತ್ತಮ ಯೋಜಕರಾಗಿರುವುದರಿಂದ ಎಲ್ಲಾ ಕಾರ್ಯಕ್ರಮಗಳು ಮತ್ತು ಪಿಆರ್ ಚಟುವಟಿಕೆಗಳ ಉಸ್ತುವಾರಿ ವಹಿಸುವವರಾಗಿದ್ದಾರೆ. ಸಂಪರ್ಕವನ್ನು ಮರುಸ್ಥಾಪಿಸಲು ಅವರು ತಮ್ಮ ದೀರ್ಘಕಾಲದ ಸ್ನೇಹಿತರನ್ನು ಭೇಟಿ ಮಾಡುತ್ತಾರೆ. ಅವರು ಬಣ್ಣಗಳೊಂದಿಗೆ ಆಟವಾಡುವಾಗ ಜಾಗರೂಕರಾಗಿರುತ್ತಾರೆ ಮತ್ತು ಎಲ್ಲರೂ ಕೂಡ ಇರುವಂತೆ ನೋಡಿಕೊಳ್ಳುತ್ತಾರೆ.

ವಿವರವಾದ ಜಾತಕಕ್ಕಾಗಿ ಉಚಿತ ಸಾಫ್ಟ್‌ವೇರ್

ತುಲಾ: ಐದನೇ ಮನೆಯ ಅಧಿಪತಿ ಶನಿಯು ನಾಲ್ಕನೇ ಮನೆಯಲ್ಲಿ ಏಳನೇ ಮನೆಯ ಅಧಿಪತಿ ಮಂಗಳ ಮತ್ತು ಶುಕ್ರನೊಂದಿಗೆ ನೆಲೆಸುತ್ತಾನೆ. ಆದ್ದರಿಂದ ತುಲಾ ರಾಶಿಯವರು ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದರೂ ಸಹ, ಈ ವಿಶೇಷ ದಿನವನ್ನು ಆಚರಿಸಲು ಅವರಿಗೆ ತಮ್ಮ ಆಪ್ತ ಸ್ನೇಹಿತರ ಅಗತ್ಯವಿರುತ್ತದೆ. ಅವರು ಮೋಜು ಮತ್ತು ಪಾರ್ಟಿಯನ್ನು ಪೂರ್ಣವಾಗಿ ಆನಂದಿಸುವುದನ್ನು ಕಾಣಬಹುದು. ಅವರು ಸಾಮಾನ್ಯ ಬಾಲಿವುಡ್ ಸಂಗೀತದ ಬದಲಿಗೆ ಡೋಲು ಕುಣಿತ ಮಾಡಲು ಇಷ್ಟಪಡುತ್ತಾರೆ.

ವೃಶ್ಚಿಕ: ಐದನೇ ಮನೆಯ ಅಧಿಪತಿ ಗುರುವು ಎಂಟನೇ ಮನೆಯ ಅಧಿಪತಿ ಬುಧನೊಂದಿಗೆ ನಾಲ್ಕನೇ ಮನೆಯಲ್ಲಿ ಇರಿಸಲ್ಪಟ್ಟಿರುವುದರಿಂದ, ವೃಶ್ಚಿಕ ರಾಶಿಯ ಸ್ಥಳೀಯರು ಈ ದಿನವನ್ನು ಪ್ರಾರಂಭಿಸಬೇಕಾದರೆ ಅವರ ಸ್ನೇಹಿತರು ಅವರನ್ನು ಒತ್ತಾಯ ಮಾಡಬೇಕಾಗುತ್ತದೆ. ಆದರೆ ಅವರು ಒಮ್ಮೆ ಹೋಳಿಯಾಡಲು ಪ್ರಾರಂಭಿಸಿದರೆ ಮತ್ತೆ ಅವರನ್ನು ನಿಲ್ಲಿಸುವವರೇ ಇರುವುದಿಲ್ಲ. ಅವರು ಸ್ವಲ್ಪ ಮೂಡಿಯಾಗಿರುವುದರಿಂದ ಮತ್ತು ಅವರು ಹೋಳಿಯಾಡಲೂ ಬಹುದು ಅಥವಾ ತಮ್ಮ ಪ್ರೀತಿಪಾತ್ರರ ಜೊತೆ ಕುಳಿತು ದೂರದಿಂದ ಆಚರಣೆಯನ್ನು ವೀಕ್ಷಿಸಲೂಬಹುದು.

ಧನು: ಐದನೇ ಮನೆಯ ಅಧಿಪತಿ ಮಂಗಳವು ಎರಡನೇ ಮನೆಯಲ್ಲಿ ಶನಿಯೊಂದಿಗೆ ಇರುವ ಕಾರಣ ಧನು ರಾಶಿಯ ಸ್ಥಳೀಯರು ಹೋಳಿ ಹುಚ್ಚಿನಲ್ಲಿ ಮುಳುಗಿರುವುದನ್ನು ನೀವು ಕಾಣಬಹುದು, ಇದು ಇಲ್ಲಿ ಧನು ರಾಶಿಯ ಸ್ನೇಹಿತರನ್ನು ಭೇಟಿ ಮಾಡುವ ಒಂದು ಅವಕಾಶವಾಗಿರುತ್ತದೆ. ಈ ದಿನವನ್ನು ಉತ್ಸಾಹಭರಿತವನ್ನಾಗಿಸಲು, ನೃತ್ಯ ಮಾಡಲು ಅಥವಾ ಈಜು ಕೊಳದೊಳಗೆ ಮಜಾ ಮಾಡಲು ಅವರು ಎಲ್ಲರನ್ನೂ ಮನವೊಲಿಸುತ್ತಾರೆ.

ಮಕರ: ಐದನೇ ಮನೆಯ ಅಧಿಪತಿ ಶುಕ್ರನು ಮೊದಲ ಮನೆಯಲ್ಲಿ ಶನಿ ಮತ್ತು ಮಂಗಳನೊಂದಿಗೆ ಇರುವುದರಿಂದ, ಮಕರ ರಾಶಿಯವರು ತಮ್ಮ ಪ್ರೀತಿಪಾತ್ರರ ಸಲುವಾಗಿ ಸ್ವಲ್ಪ ಸಮಯದವರೆಗೆ ಆಡುತ್ತಾರೆ ಮತ್ತು ನಿಲ್ಲಿಸುತ್ತಾರೆ, ಅಲ್ಲದೆ ಅವರಿಗೆ ಬಣ್ಣ ಹಚ್ಚಿಕೊಂಡೇ ಇರಲು ಸಾಧ್ಯವಾಗದೇ ಇರುವುದರಿಂದ ಅವರು ಬೇಗನೇ ಸ್ನಾನ ಮಾಡಿ ಸ್ವಚ್ಛ ಬಟ್ಟೆಯನ್ನು ಧರಿಸುತ್ತಾರೆ. ಹಬ್ಬದ ಋತುವಿನ ಹೊರತಾಗಿಯೂ ಅವರು ತಮ್ಮ ಸಾಮಾನ್ಯ ದಿನಚರಿಗೆ ಮರಳಲು ಹೆಚ್ಚು ಸಂತೋಷಪಡುತ್ತಾರೆ.

ಕುಂಭ: ಐದನೇ ಮನೆಯ ಅಧಿಪತಿ ಬುಧನು ಗುರುವಿನ ಜೊತೆ ಚಂದ್ರನ ರಾಶಿಯಲ್ಲಿ ನೆಲೆಗೊಂಡಿರುವುದರಿಂದ, ಕುಂಭ ರಾಶಿಯ ಸ್ಥಳೀಯರು ತಮ್ಮ ಸ್ನೇಹಿತರೊಂದಿಗೆ ಸಂತೋಷವಾಗಿರುವುದನ್ನು ಕಾಣಬಹುದು ಮತ್ತು ಬಹುಶಃ ಅವರು ಆಹ್ವಾನಿಸಿದ ಪ್ರತಿಯೊಂದು ಪಾರ್ಟಿಗೆ ಹೋಗುತ್ತಾರೆ. ಅವರು ಮೋಜು ಮಾಡಲು ಇಷ್ಟಪಡುತ್ತಾರೆ ಮತ್ತು ಹೋಳಿ ಆಚರಣೆಗಳನ್ನು ಆನಂದಿಸಲು ದೂರದ ಪ್ರಯಾಣ ಮಾಡಲೂ ಹಿಂಜರಿಯುವುದಿಲ್ಲ.

ಮೀನ: ಐದನೇ ಮನೆಯ ಅಧಿಪತಿ ಚಂದ್ರನು ಆರನೇ ಮನೆಯಲ್ಲಿರುವುದರಿಂದ ಮತ್ತು ಗುರು ಮತ್ತು ಚಂದ್ರನಿಂದ ದೃಷ್ಟಿ ಇದರ ಮೇಲಿರುವುದರಿಂದ, ಈಜು ಕೊಳಕ್ಕೆ ಹಾರಿ ಪಾರ್ಟಿ ಶುರು ಮಾಡುವ ಮೊದಲಿಗರು ಅವರಾಗಿರುತ್ತಾರೆ. ಅವರು ಪಾರ್ಟಿಯನ್ನು ಹೋಸ್ಟ್ ಮಾಡಿದರೆ, ಅವರು ಎಲ್ಲರನ್ನೂ ಖುಷಿ ಪಡಿಸುವ ಅತ್ಯಂತ ಆಥಿವೀಯ ಹೋಸ್ಟ್ ಆಗಿರುತ್ತಾರೆ ಮತ್ತು ಅವರ ಅತಿಥಿಗಳಿಗೆ ಎಲ್ಲವೂ ಲಭ್ಯವಾಗುವಂತೆ ನೋಡಿಕೊಳ್ಳುತ್ತಾರೆ.

ಹೋಳಿಯಲ್ಲಿ ಸಮೃದ್ಧಿ ಪಡೆಯಲು ರಾಶಿಪ್ರಕಾರ ಬಣ್ಣಗಳು

ಮೇಷ

ಅದೃಷ್ಟದ ಬಣ್ಣ: ಕೆಂಪು ಮತ್ತು ಹಳದಿ

ವೃಷಭ

ಅದೃಷ್ಟದ ಬಣ್ಣ: ಬಿಳಿ ಚಂದನ, ಬಿಳಿ ಮತ್ತು ನೀಲಿ

ಮಿಥುನ

ಅದೃಷ್ಟದ ಬಣ್ಣ: ಹಸಿರು ಮತ್ತು ನೀಲಿ

ಕರ್ಕ

ಅದೃಷ್ಟದ ಬಣ್ಣ: ಬಿಳಿ ಮತ್ತು ಹಳದಿ ಚಂದನ, ಬಿಳಿ ಮತ್ತು ಹಳದಿ

ಸಿಂಹ

ಅದೃಷ್ಟದ ಬಣ್ಣ: ಕೆಂಪು ಮತ್ತು ಗುಲಾಬಿ

ಕನ್ಯಾ

ಅದೃಷ್ಟದ ಬಣ್ಣ: ಬಿಳಿ ಚಂದನ, ಬಿಳಿ ಮತ್ತು ಹಸಿರು

ತುಲಾ

ಅದೃಷ್ಟದ ಬಣ್ಣ: ಬಿಳಿ ಚಂದನ, ಬಿಳಿ ಮತ್ತು ಹಸಿರು

ವೃಶ್ಚಿಕ

ಅದೃಷ್ಟದ ಬಣ್ಣ: ಕೆಂಪು, ಹಳದಿ, ಹಳದಿ ಚಂದನ

ಧನು

ಅದೃಷ್ಟದ ಬಣ್ಣ: ಹಳದಿ ಚಂದನ, ಹಳದಿ, ಕೆಂಪು

ಮಕರ

ಅದೃಷ್ಟದ ಬಣ್ಣ: ನೀಲಿ ಮತ್ತು ಹಸಿರು

ಕುಂಭ

ಅದೃಷ್ಟದ ಬಣ್ಣ: ನೀಲಿ, ಬಿಳಿ ಚಂದನ, ಬಿಳಿ

ಮೀನ

ಅದೃಷ್ಟದ ಬಣ್ಣ: ಹಳದಿ ಚಂದನ, ಹಳದಿ ಮತ್ತು ಕೆಂಪು

ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ಆಸ್ಟ್ರೋಸೇಜ್ ಜೊತೆಗೆ ಸಂಪರ್ಕದಲ್ಲಿರುವುದಕ್ಕಾಗಿ ಧನ್ಯವಾದಗಳು!

Talk to Astrologer Chat with Astrologer