ಮೇಷ ರಾಶಿ ಭವಿಷ್ಯ 2022 - Aries Horoscope 2022 in Kannada

ವೈದಿಕ ಜ್ಯೋತಿಷ್ಯವನ್ನು ಆಧರಿಸಿದ ಮೇಷ ರಾಶಿ ಭವಿಷ್ಯ 2022 (Mesh Rashifal 2022) ಮೂಲಕ ಮೇಷ ರಾಶಿಚಕ್ರದ ಸ್ಥಳೀಯರು ಜೀವನದ ಪ್ರಮುಖ ಅಂಶಗಳ ಬಗ್ಗೆ ಬಹಳಷ್ಟು ತಿಳಿಯಬಹದು. 2022 ವಾರ್ಷಿಕ ರಾಶಿ ಭವಿಷ್ಯದ ಪ್ರಕಾರ, 13 ರಂದು ಗುರು ಗ್ರಹವು ಮೀನ ರಾಶಿಯ ಹನ್ನೆರಡನೇ ಮನೆಗೆ ಮತ್ತು 17 ಮಾರ್ಚ್ ರಂದು ರಾಹುವು ಮೇಷ ರಾಶಿಚಕ್ರದ ಮೊದಲನೇ ಮನೆಗೆ ಸಾಗುತ್ತದೆ. 29 ರಂದು ಶನಿಯು ಕುಂಭ ರಾಶಿಯ ಹನ್ನೊಂದನೇ ಮನೆಗೆ ಸಾಗುತ್ತದೆ ಮತ್ತು 12 ಜೂಲೈ ರಂದು ವಕ್ರನಾಗಿ ಮಕರ ರಾಶಿಯ ಹತ್ತನೇ ಮನೆಗೆ ಗೋಚರಿಸುತ್ತದೆ


ಮೇಷ ರಾಶಿಚಕ್ರದ ಸ್ಥಳೀಯರು ಜೀವನದ ಅನೇಕ ಅಂಶಗಳಲ್ಲಿ ಯಶಸ್ಸು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಏಕೆಂದರೆ ಇದು ಹೊಸ ಸಾಧ್ಯತೆಗಳು ಮತ್ತು ಅವಕಾಶಗಳ ವರ್ಷ ಮತ್ತು ಜೀವನದಲ್ಲಿ ಹೊಸ ಹಂತದ ಆರಂಭವನ್ನೂ ಸೂಚಿಸುತ್ತದೆ. ಮೇಷ ರಾಶಿ ಭವಿಷ್ಯ 2022 (Mesh Rashifal 2022) ರ ಪ್ರಕಾರ, ವರ್ಷದ ಆರಂಭದಲ್ಲಿ ಈ ರಾಶಿಚರದ ಜನರು ತಮ್ಮ ಭವಿಷ್ಯದ ಬಗ್ಗೆ ಕೆಲವು ಪ್ರಾಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ಈ ಸಮಯದಲ್ಲಿ ಜನರು ಬುದ್ಧಿವಂತರಾಗುತ್ತಾರೆ ಮತ್ತು ವಿಷಯಗಳನ್ನು ಬೇರೆ ದೃಷ್ಟಿಕೋನದಿಂದ ನೋಡಲು ಸಹ ಸಾಧ್ಯವಾಗುತ್ತದೆ. ಮೇಷ ರಾಶಿಚಕ್ರದ ಜನರ ಭಾವನಾತ್ಮಕ ಸ್ವಭಾವದ ಹೊರತಾಗಿಯೂ ಹೆಚ್ಚಿನ ಸಮಯದಲ್ಲಿ ಈ ರಾಶಿಚಕ್ರದ ಜನರು ಸ್ವಯಂ - ಶೋಧನೆಯ ಹಾದಿಯಲ್ಲಿ ನಡೆಯುತ್ತಾರೆ.

Read Mesha Rashi Bhavishya 2023here

ಸೃಜನಶೀಲ ದೃಶ್ಯ, ಧ್ಯಾನ, ಸ್ವಯಂ ಶೋಧನೆ ಮತ್ತು ನಿಮ್ಮ ಸಾಮರ್ಥ್ಯಕ್ಕೆ ವರ್ಷದ ಆರಂಭವು ತುಂಬಾ ಶುಭ ಮತ್ತು ಮಹತ್ವದ್ದಾಗಿದೆ. ವರ್ಷ 2022 ರ ದ್ವಿತೀಯಾರ್ಧದಲ್ಲಿ ಮೇಷ ರಾಶಿಚಕ್ರದ ಜನರು ತಮ್ಮ ದೃಷ್ಟಿಯನ್ನು ನಿಜವಾಗಿಸಲು ಪ್ರಾರಂಭಿಸುತ್ತಾರೆ. ಇದಲಲ್ದೆ ವೃತ್ತಿಪರ ಜೀವನಕ್ಕೆ ಈ ಸಮಯವೂ ಬಹಳ ಪ್ರಯೋಜನಕಾರಿಯಾಗಿದೆ. ಈ ರಾಶಿಚಕ್ರದ ಅನೇಕ ಸ್ಥಳೀಯರು ಅಸಾಧ್ಯವಾದ ವಿಚಾರಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ನೀವು ಧೈರ್ಯಶಾಲಿ ಮತ್ತು ಬಲಶಾಲಿಯಾಗಿದ್ದರೆ ಮಾತ್ರ ಈ ಕೆಲಸವನ್ನು ಪೂರ್ಣಗೊಳಿಸಬಹುದು ಎಂದು ನಿರೀಕ್ಷಿಸಿ. ಮೇಷ ರಾಶಿಚಕ್ರದ ಜನರು ಸಾಕಷ್ಟು ಹಣವನ್ನು ಸಂಗ್ರಹಿಸಲು ವರ್ಷದ ಮೊದಲಾರ್ಧದಲ್ಲಿ ಕಠಿಣ ಪರಿಶ್ರಮ ಮಾಡಲು ಸಲಹೆ ನೀಡಲಾಗಿದೆ. ಏಕೆಂದರೆ ವರ್ಸಾಹದ ಅಂತ್ಯದಲ್ಲಿ ಈ ಸಂಗ್ರಹವಾದ ಹಣಕಾಸು ಅವರಿಗೆ ಸಹಾಯ ಮಾಡುತ್ತದೆ.

ವರ್ಷ 2022 ಶಿಕ್ಷಣ, ವೃತ್ತಿ ಮತ್ತು ವ್ಯವಹಾರದ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ. ನಿಮ್ಮ ಕೆಲಸದಲ್ಲಿ ನೀವು ಹೆಚ್ಚು ಸಮಯ ಕಳೆಯಬೇಕಾಗುತ್ತದೆ, ಇದರ ಪರಿಣಾಮವಾಗಿ ನಿಮ್ಮ ಕುಟುಂಬ ಮತ್ತು ಆಪ್ತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ವರ್ಷ 2022 ರಲ್ಲಿ ನೀವು ಹೊಸ ಸಂಬಂಧಗಳನ್ನು ಹೊಂದುತ್ತೀರಿ, ಅಲ್ಲಿಂದ ನಿಮ್ಮ ಕೆಲಸ ಮತ್ತು ವ್ಯಾಪಾರದಲ್ಲಿ ನೀವು ಬೆಂಬಲವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ.

ಈ ರಾಶಿಚಕ್ರದ ಒಂಟಿಯಾಗಿರುವವರು ವಿಶೇಷ ವ್ಯತಿಯನ್ನು ಭೇಟಿಸಬಹುದು. ಇದರ ಹೊರತಾಗಿ ವಿಷಯಗಳು ನಿಮಗೆ ಉತ್ತಮವಾಗಲಿವೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಕುಟುಂಬದ ಆರೋಗ್ಯವು ಅದ್ಭುತವಾಗಿರಲಿದೆ. ಜೀವನದಲ್ಲಿ ಲೈಂಗಿಕ ಆಕರ್ಷಣೆ ಮತ್ತು ಪ್ರಣಯ ಉಳಿದಿರುತ್ತದೆ. ಆದಾಗ್ಯೂ ನಿಮ್ಮ ಅರೋಗ್ಯ ಮತ್ತು ಫಿಟ್ನೆಸ್ ಮಟ್ಟದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸುವುದಿಲ್ಲ. ಆದಾಗ್ಯೂ, ನೀವು ಹೊಸ ರೀತಿಯ ವ್ಯಾಯಾಮ ಅಥವಾ ಯಾವುದೇ ಹೊಸ ಹವ್ಯಾಸವನ್ನು ನಿಮ್ಮ ಜೀವನದಲ್ಲಿ ಸೇರಿಸುವುದು ಬಹಳ ಮುಖ್ಯ ಮತ್ತು ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಳ್ಳಿ.

ವರ್ಷ 2022 ರಲ್ಲಿ, ಮೇಷ ರಾಶಿಚಕ್ರದ ಸ್ಥಳೀಯರು ವೃತ್ತಿಪರ ಜೀವನದಲ್ಲಿ ಅಪಾರ ಯಶಸ್ಸು ಪಡೆಯುವುದನ್ನು ಮಕರ ರಾಶಿಯಲ್ಲಿ ಸೂರ್ಯ ದೇವ ಖಚಿತಪಡಿಸುತ್ತಾನೆ. ಅವರು ತಮ್ಮ ಜೀವನದಲ್ಲಿ ಉತ್ಪಾದಕತೆ ಮತ್ತು ಸಾರ್ಥಕತೆಯನ್ನು ಅನುಭವಿಸುವ ಏಕೈಕ ಮಾರ್ಗ ಇದು. ಯಶಸ್ಸನ್ನು ಸಾಧಿಸಲು ಅವರು ಏನಾದರು ಮಾಡುತ್ತಾರೆ ಮತ್ತು ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನ ಅವರಿಗೆ ಮುಖ್ಯವಾದದ್ದು. ಇದರ ನಂತರ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಶುಕ್ರ ಗ್ರಹವು ಮಕರ ರಾಶಿಗೆ ಗೋಚರಿಸುತ್ತದೆ. ಪರಿಣಾಮವಾಗಿ ಮೇಷ ರಾಶಿಚಕ್ರದ ಸ್ಥಳೀಯರು ತಮ್ಮ ಸಂಬಂಧದಲ್ಲಿ ಪ್ರೀತಿಯನ್ನು ಅತ್ಯಂತ ಗಂಭೀರ, ಪ್ರಾಯೋಗಿಕ ಮತ್ತು ಎಚ್ಚರಿಕೆಯ ರೀತಿಯಲ್ಲಿ ಮಾಡುತ್ತಾರೆ. ಅವರು ಅಲ್ಪಾವಧಿಯ ಪ್ರೀತಿಯಲ್ಲಿ ಆಸಕ್ತಿ ಹೊಂದಿರುವುದಿಲ್ಲ

ಮಾರ್ಚ್ ತಿಂಗಳ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಕುಂಭ ರಾಶಿಯಲ್ಲಿ ಕುಂಭ ಮತ್ತು ಬುಧವು, ಮೇಷ ರಾಶಿಚಕ್ರದ ಅಡಿಯಲ್ಲಿ ಜನಿಸಿರುವ ವ್ಯಾಪಾರಸ್ಥರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಇದು ಲಾಭ ಮತ್ತು ಹಾನಿಯ ತ್ವರಿತ ವಿಶ್ಲೇಷಣೆ ಮಾಡಲು ಅವರ ಸಹಾಯ ಮಾಡುತ್ತದೆ. ಇದರಿಂದಾಗಿ ನೀವು ನಿಮ್ಮ ಕ್ಷೇತ್ರದಲ್ಲಿ ಯಶಸ್ಸು ಪಡೆಯುತ್ತೀರಿ. ಅದೇ ಸಮಯದಲ್ಲಿ ಮತ್ತೊಂದೆಡೆ, ಶುಕ್ರವು ಅತ್ಯಂತ ಪ್ರಮುಖವಾದ ಹಣಕಾಸಿನ ಯೋಗವನ್ನು ಮಾಡುತ್ತಿದೆ. ಈ ಸಮಯದಲ್ಲಿ ನಿಮ್ಮ ಸಂಗ್ರಹಿಸಿದ ಹಣದ ಹೆಚ್ಚಳಕ್ಕೆ ಇದು ಕಾರಣವಾಗಬಹುದು. ಒಟ್ಟಾರೆಯಾಗಿ, ವೃತ್ತಿಪರವಾಗಿ ಈ ಸಮಯ ಉತ್ತಮವೆಂದು ಸಾಬೀತಾಗುತ್ತದೆ. ಈ ಸಮಯದಲ್ಲಿ ನೀವು ಉದ್ಯೋಗದ ಉತ್ತಮ ಪ್ರಸ್ತಾಪವನ್ನು ಪಡೆಯುವ ಸಾಧ್ಯತೆ ಇದೆ.

ಏಪ್ರಿಲ್ ತಿಂಗಳಲ್ಲಿ ಮೀನ ರಾಶಿಯಲ್ಲಿರುವ ಗುರುವು ಹಣ ಮತ್ತು ಸಮೃದ್ಧಿಯ ಹೆಚ್ಚಳಕ್ಕೆ ಅವಕಾಶಗಳನ್ನು ತರಬಹುದು ಮತ್ತು ಜೀವನದ ಬಗೆಗಿನ ನಿಮ್ಮ ದೃಷ್ಟಿಕೋನದಲ್ಲಿ ಹೊಸತನ ಉಂಟಾಗುತ್ತದೆ. ಮೇ ತಿಂಗಳಲ್ಲಿ, ಮೇಷ ರಾಶಿಯಲ್ಲಿ ಶುಕ್ರವು ನಿಮ್ಮ ಪ್ರೀತಿಯ ಜೀವನಕ್ಕೆ ಅತ್ಯಂತ ಉತ್ತಮವೆಂದು ಸಾಬೀತಾಗುತ್ತದೆ. ಪ್ರೀತಿ ಮತ್ತು ಸ್ನೇಹವನ್ನು ನೀಡುವುದು ಮತ್ತು ಪಡೆಯುವುದು ನಿಮಗೆ ತುಂಬಾ ಸುಲಭ. ನೀವು ಸಾಮಾನ್ಯಕ್ಕಿಂತ ಹೆಚ್ಚು ಆಕರ್ಷಕ ಮತ್ತು ಜನಪ್ರಿಯರಾಗಿರುತ್ತೀರಿ. ಇದರೊಂದಿಗೆ ನೀವು ಸುಂದರವಾಗಿ ಅನುಭವಿಸುತ್ತೀರಿ ಮತ್ತು ಖಂಡಿತವಾಗಿಯೂ ನೀವು ಸುಂದರ ಜನರು ಮತ್ತು ವಸ್ತುಗಳನ್ನು ನಿಮ್ಮ ಕಡೆಗೆ ಆಕರ್ಷಿಸುವಿರಿ

ಜೂನ್ ತಿಂಗಳಲ್ಲಿ ಮಂಗಳ ಮತ್ತು ಗುರುವಿನ ಸಂಯೋಜನೆಯ ಪರಿಣಾಮದಿಂದಾಗಿ ಹೊಸ ಕಾರ್ಯವನ್ನು ಆರಂಭಿಸಲು ಸಮಯ ಉತ್ತಮವಾಗಿರುತ್ತದೆ. ದೈಹಿಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಏನನ್ನಾದರೂ ಹೇಗೆ ಮತ್ತು ಯಾವಾಗ ಆರಂಭಿಸಬೇಕು ಎಂಬುದಕ್ಕಾಗಿ ನಿಮ್ಮ ಪ್ರವೃತ್ತಿ ಹೆಚ್ಚಾಗುತ್ತದೆ. ದೊಡ್ಡ ಯಶಸ್ಸನ್ನು ಸಾಧಿಸಲು ನಿಮ್ಮಲ್ಲಿ ಸಂಪೂರ್ಣ ಆತ್ಮವಿಶ್ವಾಸವನ್ನು ಕಾಣಲಾಗುತ್ತದೆ. ಅಕ್ಟೋಬರ್ 2022 ರಲ್ಲಿ, ಸಂಭವಿಸಲಾಗುವ ಸೂರ್ಯ ಗ್ರಹಣವು ನಿಮ್ಮನ್ನು ಅಸುರಕ್ಷಿತ, ಚಿಂತೆ ಮತ್ತು ಗೊಂದಲಕ್ಕೆ ದೂಡಬಹುದು.

ವರ್ಷದ ಅಂತ್ಯದ ವೇಳೆಗೆ, ಬುಧದ ವಕ್ರತೆಯು, ಸಂವಹನ ಮತ್ತು ತಂತ್ರಜ್ಞಾನದ ಕುಸಿತಗಳು, ಚಿಂತೆಗಳು, ಪ್ರಾಣದಲ್ಲಿ ವಿಳಂಬಗಳು ಮತ್ತು ಕಳೆದುಹೋದ ವಸ್ತುಗಳ ಬಲವಾದ ಭಯವನ್ನು ನೀಡುತ್ತದೆ. ಈ ಸಮಯದಲ್ಲಿ ವಿಷಯಗಳತ್ತ ಕೇಂದ್ರೀಕರಿಸುವುದು, ಹಿಂದಿನದನ್ನು ನೆನಪಿಸಿಲೊಕೊಳ್ಳುವುದು ಅಥವಾ ಅನಿರೀಕ್ಷಿತವಾಗಿ ನಿಮ್ಮ ಹಿಂದಿನ ವ್ಯಕ್ತಿಗಳನ್ನು ಭೇಟಿಸಲು ನೀವು ನಿರೀಕ್ಷಿಸಬಹುದು.

ಮೇಷ ಪ್ರೀತಿ ರಾಶಿ ಭವಿಷ್ಯ 2022 ಮೇಷ ಪ್ರೀತಿ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರಲ್ಲಿ ಮೇಷ ರಾಶಿಚಕ್ರದ ಜನರು ಉತ್ತಮ ಪ್ರೀತಿ ಜೀವನವನ್ನು ಆನಂದಿಸುತ್ತಾರೆ. ಪ್ರೇಮಿ ಜೋಡಿಗಳಲ್ಲಿ ಲೈಂಗಿಕತೆ ಹೆಚ್ಚಾಗಬಹುದು. ಪ್ರೀತಿಪಾತ್ರರೊಂದಿಗೆ ನಿಮ್ಮ ಪ್ರಣಯ ಸಂಬಂಧವು ಬಲವಾಗುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ ಈ ರಾಶಿಚಕ್ರದ ಒಂಟಿಯಾಗಿರುವವರ ಬಗ್ಗೆ ಮಾತನಾಡಿದರೆ, ನಿಮಗೆ ನೆಚ್ಚಿನ ವ್ಯಕ್ತಿಯೊಂದಿಗೆ ಈ ವರ್ಷ ನಿಮ್ಮ ಮದುವೆಯಾಗಬಹುದು. ವೈವಾಹಿಕ ಜನರು ತಮ್ಮ ಜೀವನ ಸಂಗಾತಿಯೊಂದಿಗೆ ಕೆಲವು ಸಂಘರ್ಷಗಳು ಮತ್ತು ವಿವಾದಗಳನ್ನು ಹೊಂದಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಪರಸ್ಪರ ಸದ್ಭಾವನೆ ಮತ್ತು ತಿಳುವಳಿಕೆಯಿಂದ ನೀವು ಯಾವುದೇ ಸಣ್ಣ ಅಥವಾ ದೊಡ್ಡ ಕಷ್ಟವನ್ನು ತೊಡೆದುಹಾಕುವಲ್ಲಿ ಯಶಸ್ವಿಯಾಗುತ್ತೀರಿ. ಮೇಷ ವೃತ್ತಿ ರಾಶಿ ಭವಿಷ್ಯ 2022

ಮೇಷ ವೃತ್ತಿ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಮೇಷ ರಾಶಿಚಕ್ರದ ಸ್ಥಳೀಯರು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೇ ಮಧ್ಯದಿದ ಅಕ್ಟೋಬರ್ ವರೆಗಿನ ಸಮಯವೂ ಅತ್ಯಂತ ಮಂಗಳಕಾರವಾಗಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನವೆಂಬರ್ ಮತ್ತು ಡಿಸೆಂಬರ್ ತಿಂಗಳು ಮೇಷ ರಾಶಿಚಕ್ರದ ಸ್ಥಳೀಯರ ಶಕ್ತಿಯನ್ನು ನಿಧಾನಗೊಳಿಸಬಹುದು. ಈ ಸಮಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿಶ್ವಾಸಾರ್ಹವಲ್ಲದ ಪಾಲುದಾರರಿಂದ ನಿರಾಶೆಗೊಳ್ಳಬಹುದು. ಕೌಟುಂಬಿಕ ಅಥವಾ ಆರ್ಥಿಕ ಸಮಸ್ಯೆಗಳು ಆರಂಭಿಸುವ ನಿರೀಕ್ಷೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳಬೇಡಿ, ಹಣಕಾಸಿನ ಹೂಡಿಕೆ ಮಾಡಬೇಡಿ, ದೊಡ್ಡ ಖರ್ಚು ಮಾಡಬೇಡಿ ಅಥವಾ ಪ್ರಮುಖ ಒಪ್ಪಂದಗಳಿಗೆ ಸಹಿ ಮಾಡಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಮೇಷ ರಾಶಿಚಕ್ರದ ಸ್ಥಳೀಯರು ಸಧ್ಯಕ್ಕೆ ಸ್ವಲ್ಪ ನಿಲ್ಲುವುದು, ವಿಶ್ರಾಂತಿ ಪಡೆಯುವುದು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಉತ್ತಮ.

ಮೇಷ ಶಿಕ್ಷಣ ರಾಶಿ ಭವಿಷ್ಯ 2022

ಮೇಷ ಶಿಕ್ಷಣ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಮೇಷ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ವರ್ಷದ ಆರಂಭದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ, ಏಕೆಂದರೆ ಗ್ರಹಗಳು ಮತ್ತು ನಾಶತ್ರಪುಂಜಗಳ ಚಲೆನೆಯ ಪ್ರಕಾರ, ಮೇಷ ರಾಶಿಚಕ್ರದ ಸ್ಥಳೀಯರ ಶಿಕ್ಷಣ ಜೀವನವು ವರ್ಷದ ಆರಂಭದಿಂದ ಅಂದರೆ ಜನವರಿ ರಿನ್ನ್ದ ಮಾರ್ಚ್ ವರೆಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ಮತ್ತು ನಂತರ ಜೂಲೈ ರಿಂದ ನವೆಂಬರ್ ವರೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಪ್ರಯೋಜನಕಾರಿ ಪರಿಣಾಮಗಳನ್ನು ಪಡೆಯುತ್ತಾರೆ.

ಮೇಷ ಆರ್ಥಿಕ ರಾಶಿ ಭವಿಷ್ಯ 2022

ಮೇಷ ಆರ್ಥಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷವಿಡೀ ಮೇಷ ರಾಶಿಚಕ್ರದ ಜನರ ಜೀವನದಲ್ಲಿ ಆರ್ಥಿಕ ಸ್ಥಿರತೆ ಇರುತ್ತದೆ. ಆದಾಗ್ಯೂ, ಪ್ರಮುಖ ವೆಚ್ಚಗಳಾಗುವ ಸಾಧ್ಯತೆ ಇದೆ. ಆದರೆ ಖರೀದಿಯು ನಿಜವಾಗಿಯೂ ಮೌಲ್ಯಯುತವಾಗಿರುತ್ತದೆ. ಇದರೊಂದಿಗೆ ಏಪ್ರಿಲ್ ತಿಂಗಳಲ್ಲಿ ಅನಿರೀಕ್ಷಿತ ಲಾಭಗಳ ಸಾಧ್ಯತೆ ಇದೆ. ಬುದ್ಧಿವಂತಿಕೆಯೊಂದಿಗೆ ಹೂಡಿಕೆ ಮಾಡಿದರೆ, ಹಣ ಸುಲಭವಾಗಿ ಮತ್ತು ಬುದ್ಧಿವಂತಿಕೆಯಿಂದ ಬರುತ್ತದೆ. ಆದಾಗ್ಯೂ 2022 ರಲ್ಲಿ, ಮೇಷ ರಾಶಿಚಕ್ರದ ಜನರು ಮನರಂಜನೆ, ವಿನೋದಕ್ಕಾಗಿ ಖರ್ಚುಗಳು , ಪ್ರಯಾಣಕ್ಕಾಗಿ ವೆಚ್ಚಗಳು, ಅನಗತ್ಯ ಖರೀದಿಯ ವೆಚ್ಚಗಳು ಮತ್ತು ಉಡುಗೊರೆಯಂತಹ ಅನಗತ್ಯ ವೆಚ್ಚಗಳನ್ನು ಎದುರಿಸಬೇಕಾಗಬಹುದು.

ಮೇಷ ಕುಟುಂಬ ರಾಶಿ ಭವಿಷ್ಯ 2022

ಮೇಷ ಕುಟುಂಬ ರಾಶಿ ಭವಿಷ್ಯ 2022 ರ ಪ್ರಕಾರ, ಮೇಷ ರಾಶಿಚಕ್ರದ ಸ್ಥಳೀಯರಿಗೆ ವರ್ಷದ ಆರಂಭವು ಸಾಕಷ್ಟು ಉತ್ತಮವಾಗಿರಲಿದೆ. ನಾಲ್ಕನೇ ಮನೆಯ ಮೇಲೆ ಗುರು ಮತ್ತು ಶನಿಯ ದೃಷ್ಟಿ ಇದೆ, ಆದ್ದರಿಂದ ಮೇಷ ರಾಶಿಚಕ್ರದ ಸ್ಥಳೀಯರ ಕುಟುಂಬದಲ್ಲಿ ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣವಿರುತ್ತದೆ. ವರ್ಷದ ಅಂತ್ಯದ ವರೆಗೆ ಮನೆಯಲ್ಲಿ ಎಲವೂ ಶುಭ ಕಾರ್ಯಗಳಾಗಬಹುದು, ಇದು ನಿಮಗೆ ಸಂತೋಷವನ್ನು ನೀಡುತ್ತದೆ. ನೀವು ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳತ್ತ ಒಲವು ಹೊಂದುತ್ತೀರಿ ಮತ್ತು ಇದರಿಂದ ನಿಮ್ಮ ಜೀವನದಲ್ಲಿ ಹೆಚ್ಚು ವಿಶ್ರಾಂತಿ ಮತ್ತು ಸಂತೋಷವನ್ನು ಅನುಭವಿಸುತ್ತೀರಿ.

ಮೇಷ ಮಕ್ಕಳ ರಾಶಿ ಭವಿಷ್ಯ 2022

ಮೇಷ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ಮಕ್ಕಳಿಗೆ ಈ ವರ್ಷದ ಆರಂಭವು ಅನುಕೂಲಕರವಾಗಿದೆ. ಐದನೇ ಮನೆಯಲ್ಲಿ ಗುರುವಿನ ಸಂಪೂರ್ಣ ಅಂಶದಿಂದಾಗಿ ಈ ಸಮಯದಲ್ಲಿ ನಿಮ್ಮ ಮಕ್ಕಳು ಪ್ರಗತಿ ಹೊಂದುತ್ತಾರೆ. ನವವಿವಾಹಿತರು ಶುಭ ಸುದ್ದಿಯನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ನಿಮ್ಮ ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯುತ್ತಾರೆ. ನೀವು ಮದುವೆಯಾಗುವ ವಯಸ್ಸಿನ ಎರಡನೇ ಮಗುವನ್ನು ಹೊಂದಿದ್ದರೆ, ಈ ವರ್ಷ ಅವರ ಮದುವೆಯಾಗುವ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ. 13 ಏಪ್ರಿಲ್ ನಂತರ ಸಮಯ ಸ್ವಲ್ಪ ಕಷ್ಟಕರವಾಗಬಹುದು.

ವರ್ಷದ ಅಂತ್ಯದ ವೇಳೆಗೆ ಧನು ರಾಶಿಯಲ್ಲಿ ಸೂರ್ಯನ ಸಂಚಾರವು ಮಕ್ಕಳನ್ನು ಪಡೆಯಲು ತುಂಬಾ ಉತ್ತಮ ಯೋಗವನ್ನು ಸೃಷ್ಟಿಸುತ್ತಿದೆ. ಯಾವುದೇ ಕಾರಣದಿಂದಾಗಿ ನೀವು ಗರ್ಭಧರಿಸಲು ಸಾಧ್ಯವಾಗಿಲ್ಲದಿದ್ದರೆ, ನಿಮ್ಮ ಆ ನೋವು ಮತ್ತು ಸಂಕಟವು ಈಗ ಕೊನೆಗೊಳ್ಳಲಿದೆ.

ಮೇಷ ವಿವಾಹ ರಾಶಿ ಭವಿಷ್ಯ 2022

ಮೇಷ ವಿವಾಹ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ಮೇಷ ರಾಶಿಚಕ್ರದ ಸ್ಥಳೀಯರ ವೈವಾಹಿಕ ಜೀವನಕ್ಕೆ ಅತ್ಯಂತ ಉತ್ತಮ ವರ್ಷವಾಗಿದೆ. ಅದೃಷ್ಟ ಮತ್ತು ಪರೋಪಕಾರದ ಅಧಿಪತಿ ಗುರುವು ವರ್ಷದ ಹೆಚ್ಚಿನ ಭಾಗದಲ್ಲಿ ನಿಮ್ಮ ಮದುವೆಯ ಹನ್ನೊಂದನೇ ಮನೆಯಲ್ಲಿರುತ್ತಾರೆ. ಮದುವೆಗೆ ಅಥವಾ ಉತ್ತಮ ಮತ್ತು ಬಲವಾದ ಪ್ರೀತಿಯ ಸಂಬಂಧಕ್ಕೆ ಈ ಸಮಯವು ಅನುಕೂಲಕರವಾಗಿರಲಿದೆ ಎಂದು ಬ್ರಹ್ಮಾಂಡದ ಸಂಕೇತವಾಗಿದೆ. ಒಂಟಿಯಾಗಿರುವವರು ಜಾಗೃತರಾಗಿರಲು ಸಲಹೆ ನೀಡಲಾಗಿದೆ. ನಿಮ್ಮ ಜೀವನ ಸಂಗಾತಿ ಪ್ರಬಲರಾಗಿದ್ದರೆ ಮತ್ತು ಬಹುಶಃ ನಿಮಗಿಂತ ಶ್ರೀಮಂತರು. ನಿಮನ್ನು ಎಲ್ಲಾ ರೀತಿಯಿಂದ ಒಳ್ಳೆಯವರನ್ನಾಗಿ ಮಾಡಲು ಅವರು ಶಕ್ತಿ ಹೊಂದಿದ್ದಾರೆ. ಇದು ನಿಮ್ಮ ಆದರ್ಶ ಪ್ರೀತಿಯಂತೆ ತೋರುತ್ತದೆ. ನಿಮ್ಮ ಪ್ರೀತಿಯ ಮನೆಯಲ್ಲಿ ಗುರುವಿನ ದೃಷ್ಟಿಯು ನಿಮ್ಮ ಸಾಮಾಜಿಕ ವಲಯವನ್ನು ಸಹ ವಿಸ್ತರಿಸುತ್ತದೆ. ನೀವು ಹೃದಯದಿಂದ ಹೆಚ್ಚು ಸ್ನೇಹಿತರನ್ನು ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ನೀವು ಹೆಚ್ಚು ಪಾರ್ಟಿಗಳಿಗೆ ಹೋಗುವಿರಿ ಮತ್ತು ಬಹುಶಃ ಹೆಚ್ಚಾಗಿ ನಿಮ್ಮ ಸ್ವಂತ ಪಾರ್ಟಿಗಳನ್ನು ಆಯೋಜಿಸುವಿರಿ. ನಿಮ್ಮ ಪ್ರೀತಿ ಮದುವೆಯತ್ತ ಮುಂದುವರಿಯುತ್ತದೆ. ಈ ವರ್ಷವಿಡೀ ವಿವಾಹಿತ ಜನರ ಜೀವನವು ಬಹಳ ಉತ್ತಮವಾಗಿರುತ್ತದೆ ಎಂದು ನಿರೀಷಿಸಲಾಗಿದೆ.

ಮೇಷ ವ್ಯವಹಾರ ರಾಶಿ ಭವಿಷ್ಯ 2022

ಮೇಷ ರಾಶಿ ಭವಿಷ್ಯ 2022 ರ ಪ್ರಕಾರ, ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರಿಗೆ ಈ ವರ್ಷ ತುಂಬಾ ಅದೃಷ್ಟಶಾಲಿಯಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲವನ್ನುಪಡೆಯುತ್ತೀರಿ. ಇದು ವ್ಯವಹಾರವನ್ನು ವಿಸ್ತರಿಸಲು ನಿಮಗೆ ಸಹಾಯ ಮಾಡುತ್ತದೆ. ವ್ಯಾಪಾರದ ಕ್ಷೇತ್ರದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸಬಹುದು ಮತ್ತು ಅವು ಫಲಪ್ರದವೆಂದು ಸಾಬೀತಾಗುತ್ತವೆ. ಸ್ಟಾರ್ಟ್-ಅಪ್ ಮೇಲೀಕರಿಗೂ ಈ ವರ್ಷ ಅನುಕೂಲಕರವಾಗಿರುವ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ.

ನಿಮ್ಮೊಂದಿಗೆ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ವರ್ಷ 2022 ರಲ್ಲಿ ಗಳಿಸುತ್ತಾರೆ. ಹೊಸ ಕ್ಷೇತ್ರಗಲ್ಲಿ ಹೂಡಿಕೆ ಮಾಡುವುದರಿಂದ ಈ ವರ್ಷ ನಿಮಗೆ ಲಾಭವಾಗಬಹುದು ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಹೊಸ ಆಲೋಚನೆಗಳಲ್ಲಿ ನೀವು ಆಸಕ್ತಿ ಹೊಂದಿರಬಹುದು. ಮೇಷ ರಾಶಿಚಕ್ರದ ಕೆಲವು ಜನರು ವಿದೇಶ ಪ್ರಯಾಣದ ಅವಕಾಶವನ್ನು ಸಹ ಪಡೆಯಬಹುದು. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಮೋಸ ಮತ್ತು ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ವರ್ಷದ ಮಧ್ಯದಲ್ಲಿ ವ್ಯಾಪಾರಸ್ಥರು ನಷ್ಟವನ್ನು ಎದುರಿಸಬೇಕಾಗಬಹುದು.

ನೀವು ವಿವಿಧ ವಿದೇಶಿ ಸಂಪರ್ಕ ಮತ್ತು ವೃತ್ತಿಯ ಅವಕಾಶಗಳನ್ನು ಹೊಂದಿರುತ್ತೀರಿ ಮತ್ತು ಈ ಸಮಯದಲ್ಲಿ ನೀವು ಅಧೀಕೃತ ಕೆಲಸಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ಅವಕಾಶವನ್ನು ಪಡೆಯಬಹುದು. ಈ ಪ್ರಯಾಣ ಮತ್ತು ವಿದೇಶಿ ಸಂಪನ್ಮೂಲಗಳಿಂದ ನೀವು ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ.

ವರ್ಷದ ಅಂತ್ಯದ ವೇಳೆಗೆ ವ್ಯಾಪಾರದಲ್ಲಿ ತೊಡಗಿರುವ ಜನರು ಸ್ವಲ್ಪ ಎಚ್ಚರಿಕೆಯಿಂದ ನಡೆಯಬೇಕಾಗುತ್ತದೆ. ನೀವು ಯಾವುದೇ ರೀತಿಯ ನಷ್ಟವನ್ನು ಅನುಭವಿಸಬೇಕಾಗಬಹುದು. ಆದ್ದರಿಂದ ನಿಮ್ಮ ಜಾಗರೂಕತೆಯ ಮೂಲಕ ನೀವು ಅನೇಕ ರೀತಿಯ ಹೊಸ ಡೀಲ್ ಗಳು ಮತ್ತು ಒಪ್ಪಂದಗಳಲ್ಲಿ ಕೆಲಸ ಮಾಡುವುದನ್ನು ಕಾಣಬಹುದು.

ಮೇಷ ಆಸ್ತಿ ಮತ್ತು ವಾಹನ ರಾಶಿ ಭವಿಷ್ಯ 2022

ಮೇಷ ವಾಹನ ರಾಶಿ ಭವಿಷ್ಯ 2022 ರ ಪ್ರಕಾರ, ವೈದಿಕ ಜ್ಯೋತಿಷ್ಯದಲ್ಲಿ ವಾಹನಗಳ ಅಂಶ ಶುಕ್ರ. ಈ ವರ್ಷದ ಆರಂಭಿಕ ಸಮಯದಲ್ಲಿ ಶುಕ್ರ ದೇವ ಮಕರ ರಾಶಿಯಲ್ಲಿರುತ್ತಾರೆ. ಸ್ಥಿರ ಸಂಪತ್ತು ಮತ್ತು ಸಂಪತ್ತಿನ ನಾಲ್ಕನೇ ಮನೆಯ ಮೇಲೆ ನೇರ ದೃಷ್ಟಿ ನೀಡುತ್ತಾರೆ. ಆದ್ದರಿಂದ ವರ್ಷದ ಆರಂಭದಲ್ಲಿ ನಿಮಗಾಗಿ ವಾಹನವನ್ನು ಖರೀದಿಸುವ ಪ್ರಬಲ ಸಾಧ್ಯತೆ ಇದೆ. ವಾಹನದ ದೀರ್ಘಾಯುಷ್ಯಕ್ಕಾಗಿ ಯಾವುದೇ ಶುಭ ದಿನದಂದು ವಾಹನವನ್ನು ಖರೀದಿಸಲು ಸಲಹೆ ನೀಡಲಾಗಿದೆ. ಹತ್ತನೇ ಮನೆಯಲ್ಲಿ ಶನಿ ಇರುವ ಕಾರಣದಿಂದಾಗಿ ಮೇಷ ರಾಶಿಚಕ್ರದ ಜನರು ವಾಹನವನ್ನು ಚಲಾಯಿಸುವಾಗ ಜಾಗರೂಕರಾಗಿರಬೇಕು. ಏಕೆಂದರೆ ಶನಿಯ ಏಳನೇ ದೃಷ್ಟಿ ನಾಲ್ಕನೇ ಮನೆಯ ಮೇಲಿದೆ. ಇದರಿಂದಾಗಿ ನಿಮಗೆ ಅಥವಾ ವಾಹನಕ್ಕೆ ನಷ್ಟವಾಗಬಹುದು.

ಈ ವರ್ಷ, ಮನೆ ಮಾತು ಸಂಪತ್ತಿನ ಅಂಶ ಗುರುವು ಹನ್ನೊಂದನೇ ಮನೆಯಲ್ಲಿರುತ್ತದೆ. ಆದ್ದರಿಂದ ಈ ವರ್ಷ ಮೇಷ ಆಸ್ತಿ ರಾಶಿ ಭವಿಷ್ಯ 2022 ರ ಪ್ರಕಾರ, ನೀವು ಅಸ್ತಿ / ಭೂಮಿಯನ್ನು ಖರೀದಿಸುವ ಉತ್ತಮ ಅವಕಾಶವನ್ನು ಹೊಂದಿರುತ್ತೀರಿ. ಸಿಲುಕಿಕೊಂಡಿರುವ ಸಂಪತ್ತಿಗೆ ಸಂಬಂಧಿಸಿದ ಯಾವುದೇ ಕೆಲಸ ಪೂರ್ಣಗೊಳ್ಳಬಹುದು.

ಮೇಷ ಹಣ ಮತ್ತು ಲಾಭದ ರಾಶಿ ಭವಿಷ್ಯ 2022

ಮೇಷ ರಾಶಿಚಕ್ರದ ಜನರಿಗೆ ಈ ವರ್ಷ ಕೆಲವು ಆರ್ಥಿಕ ಬಿಕ್ಕಟ್ಟುಗಳನ್ನು ತರಲಿದೆ. ನೀವು ಹಣಕಾಸಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹದು. ಆದಾಗ್ಯೂ ಇದರ ನಂತರವು ನೀವು ನಿರಂತರ ಪ್ರಗತಿಯ ದಿಕ್ಕಿನಲ್ಲಿ ಮುಂದುವರಿಯುತ್ತೀರಿ. ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವೂ ನಿಮ್ಮ ಆದಾಯಕ್ಕೆ ಸಾಕಷ್ಟು ಉತ್ತಮವಾಗಿರಲಿದೆ. ಮೇಷ ಹಣ ರಾಶಿ ಭವಿಷ್ಯ 2022 ರ ಪ್ರಕಾರ, ಗುರು ಸಂಚಾರವು ಆರ್ಥಿಕವಾಗಿ ನಿಮ್ಮನ್ನು ಬಲಪಡಿಸುತ್ತದೆ ಮತ್ತು ನೀವು ಎಲ್ಲಾ ರೀತಿಯ ಮಾನಸಿಕ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.

ಮೇಷ ಹಣ ಮತ್ತು ಲಾಭದ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಅಂತ್ಯದ ವೇಳೆಗೆ ನಿಮ್ಮ ಹಣ ಮತ್ತು ಲಾಭದಲ್ಲಿ ನೀವು ಉತ್ತಮ ಪ್ರಗತಿಯನ್ನು ಕಾಣುವಿರಿ. ವರ್ಷದ ಅಂತ್ಯದಲ್ಲಿ ನಿಮ್ಮ ರಾಶಿಯ ಮೊದಲನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯು, ನಿಮಗೆ ಗಳಿಕೆಯ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಈ ಕಾರಣದಿಂದಾಗಿ ನೀವು ಹಣದ ದೊಡ್ಡ ಭಾಗವನ್ನು ಖರ್ಚು ಮಾಡಬೇಕಾಗಬಹುದು. ಆದ್ದರಿಂದ ಹಣವನ್ನು ಉಳಿಸುವುದು ನಿಮಗೆ ತುಂಬಾ ಅವಶ್ಯಕ ಎಂಬುದನ್ನು ಮರೆಯದಿರಲು ನಿಮಗೆ ಸೂಚಿಸಲಾಗಿದೆ.

ಮೇಷ ಅರೋಗ್ಯ ರಾಶಿ ಭವಿಷ್ಯ 2022

ಮೇಷ ಅರೋಗ್ಯ ರಾಶಿ ಭವಿಷ್ಯ 2022, ನಿಮ್ಮ ಆರೋಗ್ಯವನ್ನು ಸಾಮಾನ್ಯಕ್ಕಿಂತ ಉತ್ತಮಗೊಳಿಸಲು ಉತ್ತಮ ಆಹಾರ, ಯೋಗ, ಧ್ಯಾನ ಮತ್ತು ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಲು ನಿಮಗೆ ಸಲಹೆ ನೀಡುತ್ತಿದೆ. ಸರಿಯಾದ ಕಾಳಜಿಯನ್ನು ತೆಗೆದುಕೊಂಡರೆ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿದರೆ ವರ್ಷದ ಅಂತ್ಯದ ವೇಳೆಗೆ, ಮೇಷ ರಾಶಿಚಕ್ರದ ಜನರು ಯಾವುದೇ ದೀರ್ಘಕಾಲದ ರೋಗವಿಲ್ಲದೆ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸುವಲ್ಲಿ ಯಶಸ್ವಿಯಾಗುತ್ತಾರೆ. ನೀವು ಸಂತೋಷ ಮತ್ತು ಮಾನಸಿಕವಾಗಿ ಶಾಂತವಾಗಿರುವ ಸಾಧ್ಯತೆಯೂ ತುಂಬಾ ಬಲವಾಗಿದೆ.

2022 ರಲ್ಲಿ ಮೇಷ ರಾಶಿಚಕ್ರದ ಜನರಿಗೆ ಅದೃಷ್ಟ ಸಂಖ್ಯೆ

ಮೇಷ ರಾಶಿಯ ಅಧಿಪತಿ ಗ್ರಹ ಮಂಗಳ ಮತ್ತು ಮೇಷ ರಾಶಿಚಕ್ರದ ಸ್ಥಳೀಯರ ಅದೃಷ್ಟ ಅಂಕ ಆರು ಮತ್ತು ಒಂಬತ್ತು ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಚಕ್ರದ ಜನರಿಗೆ ಈ ವರ್ಷವು ಅತ್ಯಂತ ಫಲಪ್ರದವಾಗಲಿದ ಎಂದು 2022 ರಾಶಿ ಭವಿಷ್ಯ ಹೇಳುತ್ತಿದೆ ಮತ್ತು ಈ ವರ್ಷ ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನೀವು ಸಮೃದ್ಧರಾಗುವಿರಿ. ಈ ವರ್ಷ ಶನಿ ಮತ್ತು ಗುರುವು ಮಂಗಳಕರ ಮನೆಯಲ್ಲಿ ಇರುವುದರೊಂದಿಗೆ ಗ್ರಹಗಳ ಪರಿಣಾಮವು ಮೇಷ ರಾಶಿಚಕ್ರದ ಜನರ ಮೇಲೆ ಅತ್ಯಂತ ಧನಾತ್ಮಕವಾಗಿ ಬೀರಲಿದೆ. ನಿಮ್ಮ ಅಧಿಪತಿ ಮಂಗಳ ಈ ವರ್ಷವಿಡೀ ಸ್ನೇಹ ವಲಯದಲ್ಲಿರುತ್ತದೆ. ಆದ್ದರಿಂದ ಈ ಸಮಯವೂ ನಿಮಗೆ ಅದ್ಭುತವೆಂದು ಸಾಬೀತಾಗುತ್ತದೆ. ಜೀವನದಲ್ಲಿ ಮುಂದುವರಿಯಲು ನೀವು ಸರಿಯಾದ ಮತ್ತು ಧನಾತ್ಮಕ ಶಕ್ತಿಯನ್ನು ಪಡೆಯುತ್ತೀರಿ. ನಿಮ್ಮ ಬುದ್ಧಿವಂತಿಕೆ ಮತ್ತು ಬದ್ಧತೆಯ ಬಲದ ಮೇಲೆ ನೀವು ಹೊಸ ಸ್ಥಳಗಳಿಗೆ ಹೋಗುವಿರಿ ಮತ್ತು ವರ್ಷವಿಡೀ ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಹಾದಿಯನ್ನು ಹುಡುಕುವಿರಿ.

ಮೇಷ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರ

Talk to Astrologer Chat with Astrologer