ಮಿಥುನ ರಾಶಿ ಭವಿಷ್ಯ 2022 - Gemini Horoscope 2022 in Kannada

ಮಿಥುನ ರಾಶಿ ಭವಿಷ್ಯವು, ಮುಂಬರುವ ವರ್ಷ 2022 ರಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರ ಜೀವನದ ಬಗ್ಗೆ ಹಲವು ಪ್ರಮುಖ ಮತ್ತು ಅವಶ್ಯಕ ಭವಿಷ್ಯವಾಣಿಯನ್ನು ಒದಗಿಸುತ್ತದೆ. ವೈದಿಕ ಜ್ಯೋತಿಷ್ಯವನ್ನು ಆಧರಿಸಿದ ಮಿಥುನ ವಾರ್ಷಿಕ ರಾಶಿ ಭವಿಷ್ಯ 2022 (Gemini Yearly Horoscope 2022) ರ ಮೂಲಕ, ಈ ವರ್ಷ ಮಿಥುನ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನ ಹೇಗಿರುತ್ತದೆ? ತಮ್ಮ ವೃತ್ತಿ ಜೀವನದಲ್ಲಿ ಅವರು ಈ ವರ್ಷ ಯಶಸ್ವಿಯಾಗುತ್ತಾರೆಯೇ? ಮತ್ತು ಈ ರೀತಿಯ ಇತರ ಹಲವು ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಿರಿ. ವರ್ಷ 2022 ರಲ್ಲಿ 13 ಏಪ್ರಿಲ್ ರಂದು ಗುರು ಗ್ರಹವು ಮೀನ ರಾಶಿಯಲ್ಲಿ ಹತ್ತನೇ ಮನೆಗೆ ಮತ್ತು ರಾಹುವು 12 ಏಪ್ರಿಲ್ ರಂದು ಮೇಷ ರಾಶಿಯಲ್ಲಿ ಹನ್ನೊಂದನೇ ಮನೆಗೆ ವಕ್ರನಾಗಿ ಪ್ರವೇಶಿಸುತ್ತಾನೆ. ಏಪ್ರಿಲ್ ತಿಂಗಳಲ್ಲಿ 29 ರಂದು ಶನಿ ದೇವ ಕುಂಭ ರಾಶಿಯ ಒಂಬತ್ತನೇ ಮನೆಗೆ ಪ್ರವೇಶಿಸುತ್ತಾರೆ ಮತ್ತು 12 ಜೂಲೈ ರಂದು ವಕ್ರನಾಗಿ ಮಕರ ರಾಶಿಯಲ್ಲಿ ಎಂಟನೇ ಮನೆಗೆ ಪ್ರವೇಶಿಸುತ್ತಾರೆ.


ವರ್ಷದ ಆರಂಭದಿಂದಲೇ ಶನಿ ದೇವ ನಿಮ್ಮ ಜೀವನದಲ್ಲಿ ವ್ಯವಹಾರಗಳಲ್ಲಿ ರಾಜಿಯನ್ನು ತರುತ್ತಾನೆ. ನೀವು ಸಮಯವನ್ನು ವ್ಯರ್ಥ ಮಾಡದೆ ಕೆಲಸವನ್ನು ಪೂರ್ಣಗೊಳಿಸಲು ಬಯಸಿದರೆ, ಈ ವರ್ಷ ನೀವು ಏನನ್ನು ಸಾಧಿಸಬಹುದು ಮತ್ತು ಯಾವುದು ಸೂಕ್ತ ಎಂಬುದರ ಬಗ್ಗೆ ಗಮನ ಹರಿಸಲು ನಿಮಗೆ ಸಲಹೆ ನೀಡಲಾಗಿದೆ. ಜೀವನದಲ್ಲಿ ನಿಮ್ಮ ಕನಸುಗಳನ್ನು ಈಡೇರಿಸಲು, ಈ ವರ್ಷ ಮಾತನಾಡುವುದಕ್ಕಿಂತ ಹೆಚ್ಚು ಮಾಡುವತ್ತ ಗಮನ ಹರಿಸಿ ಎಂದು ಸೂಚಿಸಲಾಗಿದೆ. ಮೇ ರಿಂದ ಅಕ್ಟೋಬರ್ ತಿಂಗಳುಗಳು ನಿಮ್ಮ ಜೀವನದಲ್ಲಿ ವೇಗವನ್ನು ತರುತ್ತವೆ. ಇದಲ್ಲದೆ ಈ ಸಮಯದಲ್ಲಿ ಅದೃಷ್ಟವು ಸಹ ನಿಮ್ಮ ಪರವಾಗಿರುತ್ತದೆ.

Read Mithuna Rashi Bhavishya 2023 here

ಈ ವರ್ಷ ಮಂಗಳನ ಸ್ಥಾನವು ಜನವರಿ ತಿಂಗಳಲ್ಲಿ ನಿಮ್ಮ ಪ್ರೀತಿಯ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ತರಬಹುದು. ಸಂಬಂಧದಲ್ಲಿ ಕಟ್ಟಲಾಗುತ್ತಿದೆ ಎಂದು ಕೆಲವರಿಗೆ ಅನಿಸಬಹುದು. ಏಪ್ರಿಲ್ ತಿಂಗಳಲ್ಲಿ, ಕುಂಭ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಹೆಚ್ಚು ವಿಭಿನ್ನ ಭಾವನೆಗಳನ್ನು ಪ್ರೇರೇಪಿಸುವ ಮೂಲಕ ವಿಷಯಗಳನ್ನು ಸಂತೋಷಪಡಿಸಬಹುದು. ಕೆಲವು ಏರಿಳಿತಗಳ ನಂತರ, ನಿಮ್ಮ ಪ್ರೀತಿಯ ಜೀವನವು ನಿಮ್ಮ ಹೃದಯದಲ್ಲಿ ಕೆಲವು ಖಾಲಿತನವನ್ನು ಬಿಟ್ಟುಹೋಗುತ್ತದೆ. ಏಕೆಂದರೆ ಶುಕ್ರ ದೇವ ಮಿಥುನ ರಾಶಿಗೆ ಸಾಗುತ್ತಾರೆ. ಆಗಸ್ಟ್ ತಿಂಗಳಲ್ಲಿ ನೀವು ಸಂತೋಷವನ್ನು ಅನುಭವಿಸುತ್ತೀರಿ. ಏಕೆಂದರೆ ಈ ಸಮಯದಲ್ಲಿ ಶುಕ್ರ ದೇವ ಸಿಂಹ ರಾಶಿಯಲ್ಲಿರುತ್ತಾರೆ. ನಿಮ್ಮ ಸಂಬಂಧದಲ್ಲಿ ನೀವು ಪ್ರಾಮಾಣಿಕರಾಗಿದ್ದರೆ ಮತ್ತು ನಿಮ್ಮ ಸಂಬಂಧದಲ್ಲಿ ಸಂಪೂರ್ಣ ಮತ್ತು ಸಮರ್ಪಿತರಾಗಿದ್ದರೆ ವರ್ಷದ ಅಂತ್ಯದ ವೇಳೆಗೆ ನಿಮ್ಮ ಸಂಬಂಧದಲ್ಲಿ ಪ್ರೀತಿ ತನ್ನ ಉತ್ತುಂಗದಲ್ಲಿರುತ್ತದೆ.

ಈ ಶನಿ ನಿಮ್ಮ ಎಂಟನೇ ಮನೆಯಲ್ಲಿರುತ್ತಾರೆ. ಇದರ ಪರಿಣಾಮವಾಗಿ ಈ ವರ್ಷ ನೀವು ಬಹಳಷ್ಟು ಹೊಸ ಜನರನ್ನು ಭೇಟಿಯಾಗುವಿರಿ ಮತ್ತು ಅವರ ಅರ್ಹತೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ವರ್ಗೀಕರಿಸುತ್ತೀರಿ, ಪರಿಣಾಮವಾಗಿ ಅವರಲ್ಲಿ ಕೆಲವರು ನಿಮ್ಮ ಜೀವನದಲ್ಲಿ ದೀರ್ಘಕಾಲ ಇರಲು ಸಾಧ್ಯವಾಗುವುದಿಲ್ಲ. ಹಿಂದಿನ ಆರು ತಿಂಗಳಲ್ಲಿ ಕುಂಭ ರಾಶಿಯಲ್ಲಿ ಗುರುವಿನ ಪರಿಣಾಮದಿಂದಾಗಿ, ನೀವು ಜನರಿಗೆ ಸಹಾಯ ಮಾಡುವ ಬದಲು ಅವರನ್ನು ಬೆಂಬಲಿಸಿ, ಈ ಸಮಯದಲ್ಲಿ ಇತರ ಜನರಿಂದ ನಿಮ್ಮ ಬೇಡಿಕೆ ಸ್ವಲ್ಪ ಹೆಚ್ಚಾಗಬಹುದು. ಶುಕ್ರನು, ನೀವು ಪೂರ್ತಿ ಹೃದಯದಿಂದ ಕಾಳಜಿ ವಹಿಸುವ ಜನರೊಂದಿಗೆ ಅನೇಕ ಸಂಘರ್ಷಗಳನ್ನು ಉಂಟುಮಾಡಬಹುದು. ಎಲ್ಲವೂ ನೈತಿಕ ತತ್ವ ಮತ್ತು ನೈತಿಕತೆಯ ಮೇಲೆ ಸ್ವಲ್ಪ ಜವಾಬ್ದಾರಿಯಿಂದ ಆರಂಭವಾಗಬಹುದು.

ಜನವರಿ ತಿಂಗಳಲ್ಲಿ, ಒಂಬತ್ತನೇ ಮನೆಯಲ್ಲಿ ಗುರುವು, ನಿಮ್ಮ ಅಭಿವೃದ್ಧಿಗೆ ಅನೇಕ ಹೊಸ ಅವಕಾಶಗಳನ್ನು ಒದಗಿಸುತ್ತಾನೆ ಮತ್ತು ನಿಮ್ಮ ಪರಿಧಿಯನ್ನು ವಿಸ್ತರಿಸಲು ಮತ್ತು ಉತ್ತಮ ವಿಷಯಗಳಿಗಾಗಿ ನಿಮ್ಮ ಬಯಕೆಯನ್ನು ತರಬೇತಿಗೊಳಿಸಲು ಆಸೆಯನ್ನು ಅನುಭವಿಸುವಿರಿ. ಮಿಥುನ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನಿಮ್ಮ ಯಶಸ್ಸಿನ ಕೀಲು ಪ್ರೇರಣೆಯಾಗಿದೆ. ಆದರೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸಿಗೆ ನಿಮ್ಮ ಉತ್ಸಾಹವನ್ನು ತಡೆಯಬೇಕಾಗಿಲ್ಲ.

ಏಪ್ರಿಲ್ ತಿಂಗಳಲ್ಲಿ ಹತ್ತನೇ ಮನೆಯಲ್ಲಿ ಗುರುವಿನ ಸಂಚಾರವು ಹಣ ಮತ್ತು ಸಮೃದ್ಧಿಯ ಅವಕಾಶವನ್ನು ತರುತ್ತದೆ. ಹೊಸ ಸಾಹಸಗಳು ನಿಮ್ಮ ಪರಿಧಿಯನ್ನು ವಿಸ್ತರಿಸುತ್ತವೆ ಮತ್ತು ಜೀವನದ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಇನ್ನಷ್ಟು ಸಮಗ್ರವಾಗಿಸುತ್ತದೆ.

ಜೂನ್ ತಿಂಗಳಲ್ಲಿ, ವೃಷಭ ರಾಶಿಯಲ್ಲಿ ಶುಕ್ರ, ನಿಮ್ಮ ಪ್ರೀತಿಯ ಜೀವನಕ್ಕೆ ವರ್ಷದ ಅತ್ಯಂತ ಉತ್ತಮ ಸಮಯದಲ್ಲಿ ಒಂದೆಂದು ಸಾಬೀತಾಗುತ್ತದೆ. ಪ್ರೀತಿ ಮತ್ತು ಸ್ನೇಹವನ್ನು ನೀಡುವುದು ಮತ್ತು ಪಡೆಯುವುದು ಈ ಸಮಯದಲ್ಲಿ ನಿಮಗೆ ಅತ್ಯಂತ ಸುಲಭವಾಗಿರುತ್ತದೆ. ನೀವು ಹೆಚ್ಚು ಆಕರ್ಷಕ ಮತ್ತು ಜನಪ್ರಿಯರಾಗುತ್ತೀರಿ. ದೈಹಿಕ ಚಟುವಟಿಕೆ, ಮನರಂಜನೆ ಮತ್ತು ಪಾರ್ಟಿಗಳ ಮೂಲಕ ಆನಂದಿಸಲು ಇದು ಉತ್ತಮ ಸಮಯವೆಂದು ಸಾಬೀತುಪಡಿಸಬಹುದು. ಸೃಜನಶೀಲ ಕೆಲಸಗಳು, ಮಾರಾಟ ಮತ್ತು ಇತರ ಆರ್ಥಿಕ ವಿಷಯಗಳಿಗೆ ಇದು ಉತ್ತಮ ಸಮಯ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ, ವೃಷಭ ರಾಶಿಯಲ್ಲಿ ಮಂಗಳವು ನಿಮಗೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಈ ಸಮಯದಲ್ಲಿ ಯಾವುದೇ ಹೊಸ ಯೋಜನೆಯನ್ನು ಆರಂಭಿಸಲು ಇದು ಉತ್ತಮ ಸಮಯವೆಂದು ಸಾಬೀತಾಗಬಹುದು. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದ, ಆದರೆ ಇದರೊಂದಿಗೆ ನೀವು ಅತ್ಯಂತ ಸೃಜನಶೀಲ ಮತ್ತು ಉತ್ಪಾದಕರಾಗುವಿರಿ. ದೈಹಿಕ ಚಟುವಟಿಕೆಗಳು ವಿಶೇಷವಾಗಿ ವ್ಯಾಯಾಮ, ಕ್ರೀಡೆ ಮತ್ತು ನೃತ್ಯವು ಈ ಸಮಯದಲ್ಲಿ ಶುಭಕರವೆಂದು ಸಾಬೀತುಪಡಿಸಬಹುದು.

ವರ್ಷದ ಅಂತ್ಯದ ವೇಳೆಗೆ ಎಂಟನೆಯ ಮನೆಯಲ್ಲಿರುವ ಶನಿಯು ಸಾಧನೆಗಳು ಮತ್ತು ಗುರುತಿನ ಬಲವಾದ ಸಧ್ಯತೆಯನ್ನು ಸೃಷ್ಟಿಸುತ್ತಿದೆ. ರಿಯಲ್ ಎಸ್ಟೇಟ್ ಖರೀದಿಸಲು ಮತ್ತು ಮಾರಾಟ ಮಾಡಲು ಅಥವಾ ನಿಮ್ಮ ಮನೆಯಲ್ಲಿ ನವೀಕರಿಸಲು ಇದು ಉತ್ತಮ ಸಮಯವೆಂದು ಸಾಬೀತುಪಡಿಸಬಹುದು. ಪಾಲುದಾರರೊಂದಿಗಿನ ನಿಮ್ಮ ಸಂಬಂಧದಲ್ಲಿ ನಿಕಟತೆ ಉಂಟಾಗುವ ಸಾಧ್ಯತೆ ಇದೆ.

ನಡೆಯಿರಿ ಮಿಥುನ ರಾಶಿ ವಾರ್ಷಿಕ ರಾಶಿ ಭವಿಷ್ಯ 2022 ಅನ್ನು ಈಗ ನಾವು ವಿವವಾಗಿ ಓದಿ ತಿಳಿದುಕೊಳ್ಳೋಣ.

ಮಿಥುನ ಪ್ರೀತಿ ರಾಶಿ ಭವಿಷ್ಯ 2022

ಮಿಥುನ ಪ್ರೀತಿ ರಾಶಿ ಭವಿಷ್ಯ 2022 ರ ಪ್ರಕಾರ, ಮಿಥುನ ರಾಶಿಚಕ್ರದ ಸ್ಥಳೀಯರ ಪ್ರೀತಿಯ ಜೀವನವು ಉತ್ತಮವಾಗಿರಲಿದೆ. ಇದು ಉತ್ಸಾಹದಿಂದ ತುಂಬಿರುತ್ತದೆ. ವರ್ಷದ ಆರಂಭದಲ್ಲಿ ಗುರುವು ಅವರನ್ನು ಭಾವನಾತ್ಮವಾಗಿ ಉತ್ತೇಜಿಸಿಸುತ್ತಾರೆ ಮತ್ತು ಪ್ರೀತಿಯಲ್ಲಿ ತುಂಬಾ ಉತ್ಸಾಹವನ್ನು ಕಂಡುಬರುತ್ತದೆ. ಮತ್ತೊಮ್ಮೆ ತಮ್ಮ ಪ್ರೀತಿಪಾತ್ರರ ನಿಕಟವಾಗಲು ಬಯಸುತ್ತಿರುವವರು, ತಮ್ಮ ಪ್ರೀತಿ ಜೀವನದಲ್ಲಿ ಸುಧಾರಣೆಯನ್ನು ಆನಂದಿಸುತ್ತಾರೆ. ಇನ್ನೂ ಒಂಟಿಯಾಗಿರುವ ಮಿಥುನ ರಾಶಿಚಕ್ರದ ಜನರು ಸಹ ಉತ್ತಮ ಸುದ್ದಿಯನ್ನು ಪಡೆಯುತ್ತಾರೆ. ಏಕೆಂದರೆ ಇನ್ನೂ ಕುಟುಂಬವನ್ನು ಆರಂಭಿಸಿಲ್ಲದ ಜನರು ಸಹ ವರ್ಷ 2022 ರಲ್ಲಿ ನಿಜವಾದ ಪ್ರೀತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಮಿಥುನ ವೃತ್ತಿ ಜೀವನ ರಾಶಿ ಭವಿಷ್ಯ 2022

ಮಿಥುನ ವೃತ್ತಿ ಜೀವನ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಆದ್ದರಿಂದ ಯಶಸ್ಸು ಪಡೆಯಲು ನೀವು ತುಂಬಾ ಕಠಿಣ ಪರಿಶ್ರಮ ಮಾಡಬೇಕಾಗಬಹುದು ಮತ್ತು ಎಂಟನೇ ಮನೆಯಲ್ಲಿ ಶನಿಯ ಪರಿಣಾಮದಿಂದಾಗಿ ನಿಮ್ಮ ಪ್ರತಿಸ್ಪರ್ಧಿಗಳಿಂದಾಗಿ ನೀವು ಕೆಲವು ಅಡೆತಡೆಗಳನ್ನು ಸಹ ಎದುರಿಸಬೇಕಾಗಬಹುದು. ಆದರೆ ಇದು ನಿಮ್ಮ ದೈನಂದಿನ ಕೆಲಸದ ದಿನಚರಿಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಇದರೊಂದಿಗೆ, ನಿಮ್ಮ ನಿರ್ವಹಣೆಯು, ಕೆಲಸದ ಗುಣಮಟ್ಟದಲ್ಲಿ ನಿಮ್ಮಿಂದ ಹೆಚ್ಚಳವನ್ನು ಕೋರಬಹುದು ಮತ್ತು ಹೆಚ್ಚು ಪ್ರಯತ್ನಿಸಲು ವಿನಂತಿಸಬಹುದು. ಮಿಥುನ ರಾಶಿಚಕ್ರದ ಜನರು ತನ್ನ ಸ್ಥಾನವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ ಮತ್ತು ಕೆಲಸದ ಪ್ರಮಾಣದಲ್ಲಿನ ಕಡಿತವು ಬಾಹ್ಯ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಸಾಬೀತುಪಡಿಸಬೇಕು

ಮಿಥುನ ಶಿಕ್ಷಣ ರಾಶಿ ಭವಿಷ್ಯ

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರಮಿಥುನ ರಾಶಿಚಕ್ರದ ಸ್ಥಳೀಯರ ಶಿಕ್ಷಣ ಜೀವನವು ಈ ವರ್ಷ ಅದ್ಭುತವಾಗಿರಲಿದೆ. ಪ್ರಯತ್ನ ಮತ್ತು ಕಠಿಣ ಪರಿಶ್ರಮವು ನಿಮಗೆ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಉನ್ನತ ಶಿಕ್ಷಣವನ್ನು ಬಯಸುತ್ತಿರುವ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳು ಮತ್ತು ಸಂಸ್ಥೆಗಳಲ್ಲಿ ಅವಕಾಶ ಪಡೆಯುವ ಪ್ರಬಲ ಸಾಧ್ಯತೆ ಇದೆ. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಏಪ್ರಿಲ್ ತಿಂಗಳ ಎರಡನೇ ವಾರದ ನಂತರ ಯಶಸ್ಸು ಪಡೆಯಬಹುದು.

ಮಿಥುನ ಆರ್ಥಿಕ ರಾಶಿ ಭವಿಷ್ಯ 2022

ಮಿಥುನ ಆರ್ಥಿಕ ರಾಶಿ ಭವಿಷ್ಯ 2022 ರ ಪ್ರಕಾರ, ಆರ್ಥಿಕ ವಿಷಯದಲ್ಲಿ ಈ ವರ್ಷ ಈ ರಾಶಿಚಕ್ರದ ಜನರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಇದರೊಂದಿಗೆ ನಿಮ್ಮ ವ್ಯವ್ಯಹಾರದ ಮನೆಯ ಅಧಿಪತಿ ಗುರುವು, ವರ್ಷ 2022 ರಲ್ಲಿ ನಿಮ್ಮ ವೃತ್ತಿ ಮನೆಗೆ ಗೋಚರಿಸುತ್ತಾರೆ. ಪರಿಣಾಮವಾಗಿ ಈ ವರ್ಷ ನಿಮ್ಮ ವೃತ್ತಿ ಜೀವನದಿಂದ ನೀವು ಖಂಡಿತವಾಗಿಯೂ ಲಾಭವನ್ನು ಪಡೆಯುತ್ತೀರಿ. ಗುರುವು ನಿಮ್ಮ ಹಣಕಾಸನ್ನು ಹೆಚ್ಚಿಸುವಲ್ಲಿ ನಿಮಗೆ, ಆದರೆ ಎಂಟನೇ ಮನೆಯಲ್ಲಿ ಶನಿ ದೇವರ ಉಪಸ್ಥಿತಿಯಿಂದಾಗಿ ಸ್ವಲ್ಪ ಪ್ರಯತ್ನಿಸಲು ನಿಮಗೆ ಸಲಹೆ ನೀಡಲಾಗಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಸಮಯದಲ್ಲಿ ನಿಮ್ಮ ಉದ್ಯೋಗದಿಂದ ನೀವು ಪಡೆಯದಿರದ ಹಣವನ್ನು ಅನಿರೀಕ್ಷಿತವಾಗಿ ನೀವು ಪಡೆಯಬಹುದು.

ಮಿಥುನ ಕುಟುಂಬ ಜೀವನ ರಾಶಿ ಭವಿಷ್ಯ 2022

ಮಿಥುನ ಕುಟುಂಬ ಜೀವನ ರಾಶಿ ಭವಿಷ್ಯ 2022 ರ ಪ್ರಕಾರ, ಮಿಥುನ ರಾಶಿಚಕ್ರದ ಜನರಿಗೆ ಈ ವರ್ಷ ತುಂಬಾ ವಿಶೇಷವಾಗಿರುತ್ತದೆ. ಏಕೆಂದರೆ ಈ ವರ್ಷ ನಿಮ್ಮ ಸಮಯವನ್ನು ನಿಮ್ಮ ಕುಟುಂಬಕ್ಕೆ ಸಮರ್ಪಿಸುತ್ತೀರಿ, ಇದರಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಇದರೊಂದಿಗೆ, ಈ ವರ್ಷ ನಿಮ್ಮ ಮನೆಯ ಅಗತ್ಯಕ್ಕೆ ತಕ್ಕಂತೆ ಹೊಸ ವಸ್ತುಗಳನ್ನು ಸಹ ನೀವು ಖರೀದಿಸಬಹುದು. ಇದಲ್ಲದೆ, ಈ ವರ್ಷ ನೀವು ನಿಮ್ಮ ಕುಟುಂಬದಲ್ಲಿ ಯಾವುದೇ ಶುಭ ಕಾರ್ಯವನ್ನು ಸಹ ಆಯೋಜಿಸಬಹುದು ಮತ್ತು ಈ ಎಲ್ಲಾ ಕಾರ್ಯಗಳು ನಿಮ್ಮ ಕುಟುಂಬವನ್ನು ಇನ್ನಷ್ಟು ಹತ್ತಿರಕ್ಕೆ ತರಲು ಸಹಾಯಕರ ಎಂದು ಸಾಬೀತಾಗುತ್ತವೆ ಮತ್ತು ಇದರಿಂದಾಗಿ ನಿಮ್ಮ ಮನೆಯಲ್ಲಿ ಧನಾತ್ಮಕ ಪರಿಸರವನ್ನು ಕಾಣಲಾಗುತ್ತದೆ.

ಮಿಥುನ ಮಕ್ಕಳ ರಾಶಿ ಭವಿಷ್ಯ 2022

ಮಿಥುನ ಮಕ್ಕಳ ರಾಶಿ ಭವಿಷ್ಯ 2022 ರ ಪ್ರಕಾರ, ಐದನೇ ಮನೆಯಲ್ಲಿ ಗುರು ಮತ್ತು ಶನಿ ದೇವರ ಸಂಯೋಗದ ಕಾರಣದಿಂದಾಗಿ ವರ್ಷದ ಆರಂಭವು ಮಕ್ಕಳ ದೃಷ್ಟಿಕೋನದಿಂದ ಬಹಳಷ್ಟು ಶುಭವಾಗಿರುತ್ತದೆ. ಹೊಸದಾಗಿ ಮದುವೆಯಾಗಿರುವವರು ಮಂಗಳಕರ ಸುದ್ದಿಯನ್ನು ಪಡೆಯಬಹುದು. ನಿಮ್ಮ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಯಾವುದೇ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು.

ನಿಮ್ಮ ಮಕ್ಕಳು ಮದುವೆಗೆ ಅರ್ಹರಾಗಿದ್ದರೆ, ಈ ವರ್ಷ ಅವರ ಮದುವೆಯಾಗಬಹುದು. ಆದಾಗ್ಯೂ, ಏಪ್ರಿಲ್ ನಂತರದ ಸಮಯವು ಸ್ವಲ್ಪ ಕಷ್ಟವಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ನೀವು ಯಾವುದೇ ಎರಡನೇ ಮಗುವನ್ನು ಹೊಂದಿದ್ದರೆ, ಈ ವರ್ಷ ಅವರಿಗೆ ಮಾಧ್ಯಮವಾಗಿ ಶುಭಕರವಾಗಿರುತ್ತದೆ. ಕೆಲವೊಮ್ಮೆ ನಿಮ್ಮ ಮಕ್ಕಳ ಕೆಲವು ಕೆಲಸಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ನಿಮ್ಮ ಮಕ್ಕಳು ಕಠಿಣ ಪರಿಶ್ರಮ ಮಾಡಿದರೆ, ತಮ್ಮ ಅಧ್ಯಯನದಲ್ಲಿ ಅವರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಸಹ ಅವಕಾಶವನ್ನು ಪಡೆಯಬಹುದು.

ಮಿಥುನ ವಿವಾಹ ರಾಶಿ ಭವಿಷ್ಯ 2022

ಮಿಥುನ ವಿವಾಹ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ವೈವಾಹಿಕ ಜೀವನದ ದೃಷ್ಟಿಕೋನದಿಂದ ಸಮಯ ಸ್ವಲ್ಪ ಪ್ರತಿಕೂಲವಾಗಿ ಕಂಡುಬರುತ್ತಿದೆ. ಏಕೆಂದರೆ ಮಂಗಳ ಮದುವೆಯ ಅಂಶವಾಗಿದೆ. ಆದಾಗ್ಯೂ, ವರ್ಷದ ಮೊದಲ ತ್ರೈಮಾಸಿಕವು ಕಳೆದಂತೆ, ಶುಕ್ರನ ಮೂಲಕ ತರಲಾದ ಧನಾತ್ಮಕ ಅಂಶದಿಂದ ನಿಮ್ಮ ವೈವಾಹಿಕ ಜೀವನದಲ್ಲಿ ವಿಷಯಗಳು ಉತ್ತಮ ಫಲಿತಾಂಶಗಳನ್ನು ನೀಡಲು ಆರಂಭಿಸುತ್ತವೆ.

ಮಿಥುನ ವ್ಯವಹಾರ ರಾಶಿ ಭವಿಷ್ಯ 2022

ಮಿಥುನ ವ್ಯವಹಾರ ರಾಶಿ ಭವಿಷ್ಯ 2022 ರ ಪ್ರಕಾರ, ಲಾಭದ ವಿಷಯಗಳಲ್ಲಿ ಮಿಥುನ ರಾಶಿಚಕ್ರದ ಜನರಿಗೆ ಈ ವರ್ಷವು ಸರಾಸರಿಗಿಂತ ಉತ್ತಮವಾಗಿರುತ್ತದೆ. ವ್ಯಾಪಾರದ ಕ್ಷೇತ್ರಕ್ಕೆ ಸಂಬಂಧಿಸಿದ ಜನಾಂರು ಈ ವರ್ಷ ಯಾವುದೇ ದೊಡ್ಡ ಲಾಭವನ್ನು ನಿರೀಕ್ಷಿಸಬಹುದು. ಮಿಥುನ ರಾಶಿಚಕ್ರದ ಜನರು ಯಾವುದೇ ಹೊಸ ವೃತ್ತಿಪರ ಯೋಜನೆಗಳನ್ನು ಕೈಗೊಳ್ಲಲು ಯೋಜಿಸುತ್ತಿದ್ದರೆ, ಈ ವರ್ಷದ ದ್ವಿತೀಯಾರ್ಧದಲ್ಲಿ ಈ ಯೋಜನೆಗಳಲ್ಲಿ ಕೆಲಸ ಮಾಡಲು ನಿಮಗೆ ಸಲಹೆ ನೀಡಲಾಗಿದೆ. ಹಣಕಾಸಿನ ವಹಿವಾಟಿನ ಬಗ್ಗೆ ಗಮನ ಹರಿಸಿ ಮತ್ತು ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಯಾವುದೇ ಅನುಭವಿ ಮತ್ತು ಜ್ಞಾನವುಳ್ಳ ವ್ಯಕ್ತಿಯ ಮೂಲಕ ಸಮಾಲೋಚನೆಯನ್ನು ಪಡೆದುಕೊಳ್ಳಿ.

ವರ್ಷದ ಉತ್ತರಾರ್ಧದಲ್ಲಿ ನೀವು ಸದ್ಭಾವನೆಯನ್ನು ಗಳಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ವ್ಯಾಪಾರ ಪಾಲುದಾರರ ಹತ್ತಿರ ಉನ್ನತ ಕೌಶಲ್ಯದ ಮೂಲಕ ಅಥವಾ ಅವರ ಆಸಕ್ತಿಗಳಿಗೆ ಸಂಬಂಧಿಸಿದ ಕೋರ್ಸ್ ಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಕೌಶಲ್ಯಗಳನ್ನು ಸುಧಾರಿಸುವ ಹೆಚ್ಚುವರಿ ಆಯ್ಕೆಯನ್ನು ಸಹ ಹೊಂದಿರುತ್ತಾರೆ. ಆದಾಗ್ಯೂ, ನಿಮ್ಮ ಸುತ್ತಲಿನ ವ್ಯಾಪಾರದಲ್ಲಿ ಮೋಸದ ಪಾಲುದಾರಿಕೆ ಕಾರ್ಯಗಳಿಂದ ಜಾಗರೂಕರಾಗಿರಿ, ಏಕೆಂದರೆ ನೀವು ಯಾವುದೇ ರೀತಿಯ ಮೋಸಗಾರರ ಸಂಪರ್ಕಕ್ಕೆ ಒಳಗಾಗಬಹುದು. ಒಟ್ಟಾರೆಯಾಗಿ ಮಾತನಾಡಿದರೆ, ಈ ವರ್ಷ ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯ ಬಲದ ಮೇಲೆ ನೀವು ಉತ್ತಮ ವ್ಯಾಪಾರ ಜೀವನದ ಲಾಭವನ್ನು ಪಡೆದುಕೊಳ್ಳಬಹುದು.

ಮಿಥುನ ಆಸ್ತಿ ಮತ್ತು ವಾಹನ ರಾಶಿ ಭವಿಷ್ಯ 2022

ಮಿಥುನ ಆಸ್ತಿ ಮತ್ತು ವಾಹನ ರಾಶಿ ಭವಿಷ್ಯ 2022 ರ ಪ್ರಕಾರ, ಆರ್ಥಿಕ ದೃಷ್ಟಿಕೋನದಿಂದ ಈ ವರ್ಷವು ಮಾಧ್ಯಮವಾಗಿ ಶುಭಕರವಾಗಿರುತ್ತದೆ. ಈ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. 11 ನೇ ಮನೆಯ ಮೇಲೆ ಶನಿಯ ದೃಷ್ಟಿ ಇರುವುದರಿದಾಗಿ ಈ ವರ್ಷ ನೀವು ಎಲ್ಲಾ ಸೌಕರ್ಯಗಳನ್ನು ಹೊಂದಿರುತ್ತೀರಿ. ಏಪ್ರಿಲ್ ನಂತರ ಎರಡನೇ ಮತ್ತು ನಾಲ್ಕನೇ ಮನೆಯ ಮೇಲೆ ಗುರುವಿನ ಏಳನೇ ದೃಷ್ಟಿಯಿಂದಾಗಿ, ರತ್ನ ಮತ್ತು ಆಭರಣಗಳೊಂದಿಗೆ ಭೂಮಿ, ಕಟ್ಟಡ ಮತ್ತು ವಾಹನವನ್ನು ಪಡೆಯುವ ಪ್ರಬಲ ಸಾಧ್ಯತೆಯೂ ಇದೆ.

ಮಿಥುನ ಲಾಭ ಮತ್ತು ಹಣಕಾಸಿನ ರಾಶಿ ಭವಿಷ್ಯ 2022

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಹಣ ಮತ್ತು ಲಾಭದ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಮಿಥುನ ರಾಶಿಚಕ್ರದ ಸ್ಥಳೀಯರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ನಿರೀಕ್ಷೆಗಿಂತ ಹೆಚ್ಚು ಲಾಭವಾಗುತ್ತದೆ ಮತ್ತು ಏಪ್ರಿಲ್, ಜೂಲೈ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗ್ರಹಗಳ ಸ್ಥಾನದಿಂದಾಗಿ ಖಂಡಿತವಾಗಿಯೂ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಈ ವರ್ಷ ಹಣಕಾಸಿನ ಯಾವುದೇ ಕೊರತೆ ಇರುವುದಿಲ್ಲ. ಇದಲ್ಲದೆ ಈ ವರ್ಷ ನೀವು ಬಡ್ತಿಯ ಮೂಲಕ ಉತ್ತಮ ಸಂಬಳವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಒಟ್ಟಾರೆಯಾಗಿ, ಗುರು ಗ್ರಹವು ನಿಮ್ಮ ಎಲ್ಲಾ ಆರ್ಥಿಕ ನಾಯಕತ್ವದಲ್ಲಿ ನಿಮಗೆ ಸಹಾಯ ಮಾಡುತ್ತಾರೆ ಮತ್ತು ಈ ವರ್ಷದ ಮೊದಲಾರ್ಧದಲ್ಲಿ ನೀವು ಬಯಸಿದ್ದನ್ನು ರಚಿಸಲು, ಸ್ಪರ್ಧೆಯಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಅದರ ನಂತರ, ಇದು ಆಲೋಚನೆಗಳು, ಸಂದೇಶಗಳು, ಮಾತುಕತೆ ಮತ್ತು ಸಣ್ಣ ಪ್ರಯಾಣಗಳನ್ನು ಸಂಕೇತಿಸುವ ಕ್ಷೇತ್ರಕ್ಕೆ ಚಲಿಸುತ್ತದೆ. ನಿಮ್ಮ ಎಲ್ಲಾ ಅಮೂಲ್ಯವಾದ ಆಸ್ತಿಗಳನ್ನು ನೀವು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಮತ್ತು ಹಣಕಾಸಿನ ವಿಷಯದಲ್ಲಿ ಸಂಗಾತಿಯ ಸಹಾಯವನ್ನು ಪಡೆಯಲು ಹಿಂಜರಿಯಬೇಡಿ ಎಂದು ಸಹ ನಿಮಗೆ ಸಲಹೆ ನೀಡಲಾಗಿದೆ. ನೀವು ಕೆಲವು ದೊಡ್ಡ ಅಥವಾ ಪ್ರಮುಖವಾದದ್ದನ್ನು ಖರೀದಿಸಲು ಬಯಸುತ್ತಿದ್ದರೆ, ನಿಮ್ಮ ಬಳಿ ಲಭ್ಯವಿರುವ ಅತ್ಯುತ್ತಮ ಆಫರ್ ಗಳನ್ನು ನೋಡಿ.

ಮಿಥುನ ಅರೋಗ್ಯ ರಾಶಿ ಭವಿಷ್ಯ 2022

ಮಿಥುನ ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಆರಂಭದಲ್ಲಿ, ಎಂಟನೇ ಮನೆಯಲ್ಲಿ ಶನಿಯ ಸ್ಥಾನ ಮತ್ತು ವರ್ಷದ ಆರಂಭದಲ್ಲಿ ಆರನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯಿಂದಾಗಿ, ಆರೋಗ್ಯದ ದೃಷ್ಟಿಯಿಂದ ಮಿಥುನ ರಾಶಿಚಕ್ರದ ಜನರಿಗೆ ಈ ವರ್ಷವು ಸ್ವಲ್ಪ ದುರ್ಬಲವಾಗಿ ಕಂಡುಬರುತ್ತಿದೆ. ಈ ವರ್ಷ ನಿಮ್ಮ ಆಹಾರ ಮತ್ತು ಜೀವನ ಶೈಲಿಯ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಗ್ರಹಗಳ ಚಲನೆಯ ಪ್ರಕಾರ ಈ ಸಮಯದಲ್ಲಿ ರಕ್ತ ಮತ್ತು ಗಾಳಿಗೆ ಸಂಬಂಧಿಸಿದ ರೋಗಗಳು ನಿಮ್ಮನ್ನು ಕಾಡಬಹುದು. ಇದರೊಂದಿಗೆ ನೀವು ಹೆಚ್ಚು ಕೊಬ್ಬಿನ ಆಹಾರದಿಂದಾಗಿ ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಇದಕ್ಕಾಗಿ ನೀವು ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ಆಹಾರ ಪದ್ದತಿಯಲ್ಲಿ ನೀವು ಕಾಲಕಾಲಕ್ಕೆ ಬದಲಾವಣೆಯನ್ನು ಮಾಡುವ ಅಗತ್ಯವಿರುತ್ತದೆ

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ

ಮಿಥುನ ರಾಶಿಚಕ್ರದ ಅಧಿಪತಿ ಬುಧ ಮತ್ತು ಬುಧನಿಂದ ಆಳಲ್ಪಡುವ ಜನರ ಅದೃಷ್ಟ ಸಂಖ್ಯೆ ಆರು ಎಂದು ಪರಿಗಣಿಸಲಾಗಿದೆ. ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನಿಮಗೆ ತುಂಬಾ ಅನುಕೂಲಕರವಾಗಿರಲಿದೆ ಮತ್ತು ಈ ವರ್ಷ ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ನೀವು ಸಮೃದ್ಧವಾಗಿರುತ್ತೀರಿ. ಮಿಥುನ ರಾಶಿಚಕ್ರದ ಮೇಲೆ ಈ ವರ್ಷದ ಗ್ರಹಗಳ ಪ್ರಭಾವವು ಗುರುವಿನ ಅಶುಭ ಮನೆಯೊಂದಿಗೆ ತುಂಬಾ ಧನಾತ್ಮಕವಾಗಿರುತ್ತದೆ ಮತ್ತು ಇದರೊಂದಿಗೆ ಈ ವರ್ಷ ಕೂಡ ಸಂಖ್ಯೆ ಆರು ಆಡಳಿತವಿರುತ್ತದೆ.

ನಿಮ್ಮ ಅಧಿಪತಿ ಬುಧವು ಈ ವರ್ಷವಿಡೀ ಸ್ನೇಹ ವಲಯದಲ್ಲಿರುತ್ತದೆ, ಅದರಿಂದ ನಿಮಗೆ ಇದು ಉತ್ತಮ ಮತ್ತು ಮಂಗಳಕರ ಸಮಯವೆಂದು ಸಾಬೀತಾಗುತ್ತದೆ. ಮುಂದುವರಿಯಲು ಇದು ನಿಮಗೆ ಸರಿಯಾದ ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ನಿಮ್ಮ ಬುದ್ಧಿವಂತಿಕೆ ಮತ್ತು ಬದ್ಧತೆಯ ಮಟ್ಟವು ನಿಮ್ಮನ್ನು ಕೆಲವು ಕಠಿಣ ಪರಿಶ್ರಮ ಮತ್ತು ಆಸಕ್ತಿಯೊಂದಿಗೆ ನಿಮ್ಮ ವೃತ್ತಿ ಜೀವನದಲ್ಲಿ ಹೊಸ ಸ್ಥಳಗಳಿಗೆ ಕರೆದೊಯ್ಯುತ್ತದೆ ಮತ್ತು ಈ ವರ್ಷವಿಡೀ ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಹಾದಿಗಳನ್ನು ನೀವು ಹುಡುಕುತ್ತಲೇ ಇರುವಿರಿ.

ಮಿಥುನ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರ

Talk to Astrologer Chat with Astrologer