ಕುಂಭ ರಾಶಿಯಲ್ಲಿ ಬುಧ ಸಂಚಾರ (11th March 2021)

ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಬುದ್ಧಿ , ಸಂವಹನ, ಹಣ, ತರ್ಕ ಮತ್ತು ವ್ಯಾಪಾರದ ಅಂಶವೆಂದು ಪರಿಗಣಿಸಲಾಗಿದೆ. ಬುಧ ಗ್ರಹವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹವು ಶ್ರೇಷ್ಠ ಸ್ಥಾನದಲ್ಲಿದ್ದರೆ, ಆ ವ್ಯಕ್ತಿಯು ಹೆಚ್ಚು ಆಕರ್ಷಣೆ ಶಕ್ತಿಯನ್ನು ಹೊಂದಿರುತ್ತಾರೆ. ಬುಧ ಗ್ರಹವು ಬುದ್ಧಿವಂತಿಕೆ, ಸ್ವೀಕಾರ ಸಾಮರ್ಥ್ಯ, ಬಲವಾದ ನಿರ್ಧಾರ ತೆಗೆದುಕೊಳ್ಳುವುದು, ಯೋಚನೆ, ಜ್ಞಾನ, ನಡವಳಿಕೆ ಕೌಶಲ್ಯ, ಸೂಚನೆ ಮತ್ತು ಅಗಮ್ಯ ಅಧ್ಯಯನಗಳ ಸಂಕೇತವಾಗಿದೆ. ಒಬ್ಬ ವ್ಯಕ್ತಿಯು ಎಲ್ಲಾ ಪೇಕ್ಷೆಗಳಲ್ಲಿ ಯಶಸ್ಸು ಪಡೆಯಲು ಜನ್ಮ ಜಾತಕದಲ್ಲಿ ಬುಧನ ಸ್ಥಾನವನ್ನು ನೋಡಲಾಗುತ್ತದೆ.

ಬುಧ ಗ್ರಹವು ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯಲು ನಮ್ಮ ಪರಿಣಿತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ಕುಂಭ ರಾಶಿಯಲ್ಲಿ ಬುಧ ಸಂಚಾರ - ಸಮಯ ಮತ್ತು ಪ್ರಾಮುಖ್ಯತೆ

ಬುಧ ಗ್ರಹವು 11 ಮಾರ್ಚ್ 2021 ರಂದು ಮಧ್ಯಾಹ್ನ 12 ಗಂಟೆ 25 ನಿಮಿಷಕ್ಕೆ ಮಕರ ರಾಶಿಯಿಂದ ಹೊರಬಂದು ಕುಂಭ ರಾಶಿಯಲ್ಲಿ ಪ್ರವೇಶಿಸುತ್ತದೆ. ಇದರ ನಂತರ 31 ಮಾರ್ಚ್ 2021 ವರೆಗೆ, ಇದು ಕುಂಭ ರಾಶಿಯಲ್ಲೇ ನೆಲೆಗೊಳ್ಳುತ್ತದೆ. ನಂತರ 1 ಏಪ್ರಿಲ್ ರಂದು ಮಧ್ಯಾಹ್ನ 12 ಗಂಟೆ 33 ನಿಮಿಷಕ್ಕೆ ಮೀನಾ ರಾಶಿಯಲ್ಲಿ ಪ್ರವೇಶಿಸುತ್ತದೆ.

ಬುಧವು ಕುಂಭ ರಾಶಿಯಲ್ಲಿ ಗೋಚರಿಸುವುದರಿಂದ ವ್ಯಕ್ತಿಯ ಆಲೋಚನೆಯು ಹೆಚ್ಚು ಪ್ರಗಾತಿಪರವಾಗುತ್ತದೆ. ಈ ಸಂಕೇತವು ಮಾನಸಿಕ ಚಟುವಟಿಕೆಗಳನ್ನು ಮುಂದುವರಿಸಲು ಹೆಸರಿಸಲಾಗಿದೆ ಮತ್ತು ಈ ಸಮಯದಲ್ಲಿ ನಿಮ್ಮ ಕೆಲಸ ಕೌಶಲ್ಯವನ್ನು ವಿಸ್ತರಿಸುವ ಬಗ್ಗೆ ಹೆಚ್ಚು ಎಣಿಕೆ ಮಾಡಲು ಆರಂಭಿಸುವಿರಿ. ಇದರೊಂದಿಗೆ ಸಾಮಾನ್ಯಕ್ಕೆ ಹೋಲಿಸಿದರೆ ನಿಮ್ಮ ತಲೆ ಹೆಚ್ಚು ವೇಗದೊಂದಿಗೆ ನಡೆಯಲು ಆರಂಭಿಸುತ್ತದೆ ಮತ್ತು ಮೆದುಳು ಉತ್ತಮ ಆಲೋಚನೆಗಳ ಭಂಡಾರವಾಗುತ್ತದೆ.

ಬುಧ ಗ್ರಹವು ಕುಂಭದಿಂದ ಹಾದುಹೋದರೆ, ವ್ಯಕ್ತಿಯು ಭಾವನಾತ್ಮಕವಾಗಿ ಸೇರಿದ್ದ ವಸ್ತುಗಳನ್ನು ಹೆಚ್ಚು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಆರಂಭಿಸುತ್ತಾನೆ.ಈ ಕಾರಣದಿಂದಾಗಿ ಪರಿಸ್ಥಿತಿಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಸಹ ಸಹಾಯವಾಗುತ್ತದೆ. ಕೆಲವು ಸನ್ನಿವೇಶಗಳಲ್ಲಿ ಕುಂಭ ರಾಶಿಯಲ್ಲಿ ಬುಧ ಸಂಚಾರವು ನಿಮ್ಮ ಭಾವನೆಗಳ ಮೇಲೆ ಪ್ರಾಬಲ್ಯ ಸಾಧಿಸುತ್ತದೆ. ಈ ಸಮಯದಲ್ಲಿ ನೀವು ಸ್ವಲ್ಪ ತಾಳ್ಮೆಯನ್ನು ಕಳೆದುಕೊಳ್ಳಬಹುದು. ಆದ್ದರಿಂದ ಈ ಸಮಯದಲ್ಲಿ ಜನರೊಂದಿಗೆ ಮಾತನಾಡುವಾಗ ನಿಮ್ಮ ವಾಣಿಯನ್ನು ನಿಯಂತ್ರಿಸಲು ಪ್ರಯತ್ನಿಸಬೇಕು.

ಕುಂಭ ರಾಶಿಯಲ್ಲಿ ಬುಧ ಸಂಚಾರವು ನಿಮ್ಮ ಜೀವನದಲ್ಲಿ ಏನು ಬದಲಾವಣೆಗಳನ್ನು ತರಲಿದೆ ಎಂದು ತಿಳಿಯೋಣ

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

ಮೇಷ ರಾಶಿ

ಬುಧ ಗ್ರಹವು ಮೇಷ ರಾಶಿಚಕ್ರದ ಸ್ಥಳೀಯರ ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಬುಧನ ಈ ಸಂಚಾರವು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ಅನೇಕ ಸ್ಥಳಗಳ ಮೂಲಕ ನಿಮಗೆ ಆರ್ಥಿಕ ಲಾಭವಾಗುತ್ತದೆ. ಪ್ರೀತಿಯ ಸಂಬಂಧಗಳಿಗೆ ಈ ಸಂಚಾರವು ಅತ್ಯಂತ ಶುಭವಾಗಲಿದೆ. ಈ ರಾಶಿಚಕ್ರದ ಇನ್ನೂ ಒಬ್ಬಂಟಿಯಾಗಿರುವ ಜನರ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿಯ ಆಗಮನವಾಗಬಹುದು. ಮೊದಲಿಂದಲೇ ಪ್ರೀತಿಯ ಸಂಬಧದಲ್ಲಿರುವ ಮತ್ತು ತಮ್ಮ ಸಂಗಾತಿಯೊಂದಿಗೆ ಮದುವೆಯಾಗಲು ಬಯಸುತ್ತಿದ್ದರೆ, ಈ ಸಮಯ ಉತ್ತಮವಾಗಿರುತ್ತದೆ. ಬುಧ ಸಂಚಾರವು ಲೇಖನ ಶಕ್ತಿಯನ್ನು ಸಾಕಷ್ಟು ಉತ್ತಮಗೊಳಿಸುತ್ತದೆ. ಈ ಸಮಯದಲ್ಲಿ ನೀವು ಕೆಲಸಕ್ಕೆ ಸಂಬಂಧಿಸಿದಂತೆ ಅಲ್ಪಾವಧಿಯ ಪ್ರವಾಸಗಳನ್ನು ಮಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಆಹಾರ ಪದ್ಧತಿ ಮತ್ತು ದೈಹಿಕ ವ್ಯಾಯಾಮ ಇತ್ಯಾದಿಗಳು ತಮ್ಮನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತವೆ.

ಪರಿಹಾರ - ಬುಧವಾರ ಶಿವಲಿಂಗವನ್ನು ಜೇನುತುಪ್ಪದ್ದಿಂದ ಅಭಿಷೇಕಿಸಿ.

ಮುಂದಿನ ವಾರದ ಮೇಷ ರಾಶಿ ಭವಿಷ್ಯ

ವೃಷಭ ರಾಶಿ

ಬುಧ ದೇವ ವೃಷಭ ರಾಶಿಚಕ್ರದ ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ ಹತ್ತನೇ ಮನೆಗೆ ಪ್ರವೇಶಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಪರ ಜೀವನದಲ್ಲಿ ಅಭಿವೃದ್ಧಿ ಮತ್ತು ಯಶಸ್ಸು ಪಡೆಯುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಪರಿವರ್ತನೆ ನಿಮಗೆ ಉತ್ತಮ ಲಾಭವನ್ನು ತರುತ್ತದೆ. ಆರ್ಥಿಕವಾಗಿ, ಈ ಸಮಯವು ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ಮತ್ತು ಹೂಡಿಕೆಗಾಗಿ ಹೆಚ್ಚು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಮಾಡಲಾಗುವ ಹೂಡಿಕೆಯು ನಿಮಗೆ ಪ್ರಯೋಜನಕಾರಿಯಾಗುತ್ತದೆ. ಕೌಟುಂಬಿಕ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಬುಧ ಸಂಚಾರವು ವ್ಯಾಪಾರವನ್ನು ವಿಸ್ತರಿಸಲು ಉತ್ತಮವಾಗಿರುತ್ತದೆ. ಮತ್ತೊಂದೆಡೆ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಸಂಬಂಧಗಳು ಸಂತೋಷವಾಗಿರುತ್ತವೆ, ಏಕೆಂದರೆ ನೀವು ಎಲ್ಲರನ್ನು ಸಂತೋಷಪಡಿಸಲು ಸಂಪೂರ್ಣವಾಗಿ ಪ್ರಯತ್ನಿಸುವಿರಿ. ಈ ಸಮಯದಲ್ಲಿ ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಪೋಷಕರ ಮೂಲಕ ಆರ್ಥಿಕ ಸಹಾಯವನ್ನು ಸಹ ಪಡೆಯುವಿರಿ.

ಪರಿಹಾರ - ಬುಧ ಹೋರಾ ಸಮಯದಲ್ಲಿ ಬುಧ ಮಂತ್ರವನ್ನು ಜಪಿಸುವುದು ಉತ್ತಮ.

ಮುಂದಿನ ವಾರದ ವೃಷಭ ರಾಶಿ ಭವಿಷ್ಯ

ಮಿಥುನ ರಾಶಿ

ಬುಧ ಗ್ರಹವು ಮಿಥುನ ರಾಶಿಚಕ್ರದ ಸ್ಥಳೀಯರ ಲಗ್ನ ಮತ್ತು ನಾಲ್ಕನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಸಾಕಷ್ಟು ಧನಾತ್ಮಕವಾಗಿ ಇರುತ್ತೀರಿ. ಈ ಸಮಯದಲ್ಲಿ ಆಧ್ಯಾತ್ಮಿಕತೆಯತ್ತ ನೀವು ಹೆಚ್ಚು ಆಸಕ್ತಿ ಹೊಂದಿರುತ್ತೀರಿ ಮತ್ತು ಇದರ ಸಹಾಯದಿಂದ ನೀವು ಆನಂದ ಮತ್ತು ಸಂತೋಷವನ್ನು ಪಡೆಯುತ್ತೀರಿ. ಪ್ರಾಯೋಗಿಕವಾಗಿ ಈ ಸಮಯವು ಹೆಚ್ಚು ಶುಭವಾಗಿರುತ್ತದೆ ಮತ್ತು ನೀವು ಎಲ್ಲಾ ಅಡೆತಡೆಗಳನ್ನು ನಿಯಂತ್ರಿಸಲು ಸಹ ಸಾಧ್ಯವಾಗುತ್ತದೆ. ಈ ಸಂಚಾರದ ಸಮಾಯ್ದಲ್ಲಿ ನಿಮ್ಮ ಮನೋಬಲವು ಉತ್ತುಂಗದಲ್ಲಿರುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಆಲೋಚನೆ ಮತ್ತು ಸಲಹೆಗಳನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಿ ನೀವು ಇತರರ ಮೇಲೆ ಪರಿಣಾಮ ಬೀರಲು ಸಾಧ್ಯವಾಗುತ್ತದೆ. ವ್ಯಾಪಾರದ ದೃಷ್ಟಿಯಿಂದ ಈ ಸಮಯದಲ್ಲಿ ನಿಮ್ಮ ಕಾರ್ಯ ಶೈಲಿಯನ್ನು ಸುಧಾರಿಸಲು ಮತ್ತು ಹೊಸ ನೀತಿಗಳನ್ನು ವ್ಯಕ್ತಪಡುಸಲು ಅನುಕೂಲಕರವಾಗಿರುತ್ತದೆ. ಆಮದು-ರಫ್ತು ಮತ್ತು ವಿದೇಶ ಯೋಜನೆಗಳಿಗೆ ಜನರು ಈ ಸಮಯದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಬುಧ ಸಂಚಾರವು ನಿಮಗೆ ಹೆಚ್ಚು ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ನೀವು ಮನೆಯಲ್ಲಿ ಎಲ್ಲರೊಂದಿಗೆ ಹೊಸ ಮತ್ತು ಬಲವಾದ ಶಕ್ತಿಯನ್ನು ರಚಿಸುವಿರಿ.

ಪರಿಹಾರ - ಪ್ರತಿದಿನ ಬೆಳಿಗ್ಗೆ ಕರ್ಪುರವನ್ನು ಬೆಳಗಿಸಿ.

ಮಿಂದಿನ ವಾರದ ಮಿಥುನ ರಾಶಿ ಭವಿಷ್ಯ

ಕರ್ಕ ರಾಶಿ

ಬುಧ ಗ್ರಹವು ಕರ್ಕ ರಾಶಿಚಕ್ರದ ಸ್ಥಳೀಯರ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಕುಂಭ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ನೀವು ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಸಾಕಷ್ಟು ವಿರೋಧಿಸಬಹುದು. ಇದರಿಂದಾಗಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಈ ಸಮಯದಲ್ಲಿ ನೀವು ಚಿಂತನಶೀಲವಾಗಿ ಮಾತನಾಡುವ ಅಗತ್ಯವಿದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಂದು ನಿಮಗೆ ಸೂಚಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ಪ್ರವಾಸವನ್ನು ತಪ್ಪಿಸಿ. ಏಕೆಂದರೆ ಪ್ರಯಾಣ ಮಾಡುವುದು ನಿಮಗೆ ಪ್ರಯಜನಕಾರಿಯಾಗುವುದಿಲ್ಲ. ಸಂಶೋಧನೆ ಅಥವಾ ನಿರೀಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಈ ಸಮಯವೂ ಉತ್ತಮವಾಗಿರಲಿದೆ. ವೈಯಕ್ತಿಕವಾಗಿ ನಿಮ್ಮ ಸಂವಹ ಕೌಶಲ್ಯ ಮತ್ತು ರಾಜತಾಂತ್ರಿಕ ವರ್ತನೆಯ ಮೂಲಕ ನಿಮ್ಮ ಕುಟುಂಬದ ಸದಸ್ಯರು, ಸಮುದಾಯ ಮತ್ತು ಸಾಮಾಜಿಕ ವಲಯದ ಹೃದಯವನ್ನು ಗೆಲ್ಲಲು ಸಹಾಯ ಪಡೆಯುವಿರಿ. ಈ ಸಮಯದಲ್ಲಿ ಅತ್ತೆಮನೆ ಕಡೆಯಿಂದ ಯಾವುದೇ ಉಡುಗೊರೆ ಮತ್ತು ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ.

ಪರಿಹಾರ - ಬುಧವಾರ ಹಸಿರು ಬಟ್ಟೆ ಅಥವಾ ಖಾದ್ಯ ಪದಾರ್ಥಗಳ ದಾನ ಮಾಡುವುದು ನಿಮಗೆ ಉತ್ತಮ.

ಮುಂದಿನ ವಾರದ ಕರ್ಕ ರಾಶಿ ಭವಿಷ್ಯ

250+ ಪುಠಗಳ ಬೃಹತ್ ಕುಂಡಲಿಯ ಮೂಲಕ ಗ್ರಹಗಳ ದುಷ್ಪರಿಣಾಮಗಳನ್ನು ತೊಡೆದುಹಾಕಲು ವಿಶೇಷ ಪರಿಹಾರಗಳನ್ನು ಪಡೆಯಿರಿ

ಸಿಂಹ ರಾಶಿ

ಬುಧ ದೇವ ಸಿಂಹ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಹನ್ನೊಂದನೇ ಮನೆಗೆ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಆದಾಯ ಉತ್ತಮವಾಗಿರುತ್ತದೆ ಮತ್ತು ಅನೇಕ ವ್ಯಾಪಾರಿಕ ವ್ಯವಹಾರಗಳನ್ನು ನೀವು ಮಾಡುವಿರಿ. ಈ ಸಮಯದಲ್ಲಿ ಪಾಲುದಾರಿಕೆಯ ವ್ಯಾಪಾರವು ಪ್ರಯೋಜನಕಾರಿಯಾಗಿರುತ್ತದೆ. ಆದರೆ ಯಾವುದೇ ಹೊಸ ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಸರಿಯಾದ ದಿಕ್ಕಿನಲ್ಲಿ ನಿರಂತರ ಪ್ರಯತ್ನಗಳ ಕಾರಣದಿಂದಾಗಿ ನಿಮ್ಮ ವ್ಯಾಪಾರ ಬೆಳೆಯುತ್ತದೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಬುಧ ಸಂಚಾರವು ವೈವಾಹಿಕ ಸ್ಥಳೀಯರಿಗೆ ಸ್ವಲ್ಪ ಸವಾಲುಗಳಿಂದ ತುಂಬಿರುತ್ತದೆ. ನೀವು ನಿಮ್ಮ ಮತ್ತು ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚುವರಿ ಕಾಳಜಿ ವಹಿಸಬೇಕು. ಈ ಸಂಚಾರದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಉತ್ತಮವಾಗಿ ವ್ಯಕ್ತಿಆಪಾದಿಸಬೇಕೆಂದು ನಿಮಗೆ ಸೂಚಿಸಲಾಗಿದೆ ಮತ್ತು ನಿಮ್ಮ ಸಂಬಂಧದಲ್ಲಿ ಅಹಂ ಮತ್ತು ಪ್ರಾಬಲ್ಯ ತೋರಿಸುವುದನ್ನು ತಪ್ಪಿಸಬೇಕು.

ಪರಿಹಾರ - ಪ್ರತಿದಿದ ಬೆಳಿಗ್ಗೆ ಗಜೇಂದ್ರ ಮೋಕ್ಷ ಸ್ತೋತ್ರಂ ಅನ್ನು ಪಠಿಸುವುದು ನಿಮಗೆ ಉತ್ತಮ.

ಮುಂದಿನ ವಾರದ ಸಿಂಹ ರಾಶಿ ಭವಿಷ್ಯ

ಕನ್ಯಾ ರಾಶಿ

ಬುಧ ದೇವ ಕನ್ಯಾ ರಾಶಿಚಕ್ರದ ಸ್ಥಳೀಯರ ಲಗ್ನ ಮತ್ತು ಹತ್ತನೇ ಮನೆಯ ಅಧಿಪದಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಆರನೇ ಮನೆಗೆ ಪ್ರವೇಶಿಸುತ್ತಾರೆ . ಈ ಸಮಯದಲ್ಲಿ ಆರೋಗ್ಯದ ಕಾರಣ ಅಥವಾ ವೃತ್ತಿಪರ ಬದ್ಧತೆಗಳ ಕಾರಣದಿಂದಾಗಿ ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ನಡುವಿನ ಅಂತರವು ಹೆಚ್ಚಾಗಬಹುದು. ಅವರೋಗ್ಯದ ಬಗ್ಗೆ ಮಾತನಾಡಿದರೆ, ನೀವು ಸಮತೋಲಿತ ಆಹಾರ ಸೇವಿಸುವುದು ಮತ್ತು ಚಿಂತೆಗಳನ್ನು ತೊಡೆದುಹಾಕಲು ನಿಯಮಿತವಾಗಿ ಯೋಗ, ಧ್ಯಾನವನ್ನು ಮಾಡಲು ಸೂಚಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು, ಈ ಕಾರಣದಿಂದಾಗಿ ನಿಮ್ಮ ಒತ್ತಡ ಮತ್ತು ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಉದ್ಯೋಗದಲ್ಲಿ ತೊಡಗಿರುವ ಜನರು ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ ಮತ್ತು ನಿಮ್ಮ ಪ್ರಯತ್ನಗಳು ದೀರ್ಘಕಾಲದ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತವೆ. ಈ ಸಂಚಾರದ ಸಮಯದಲ್ಲಿ ನೀವು ಬಡ್ತಿ ಪಡೆಯಬಹುದು.. ಇದಲ್ಲದೆ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಮೂಲಕ ಮೆಚ್ಚುಗೆ ಪಡೆಯುವ ಸಾಧ್ಯತೆಯೂ ಇದೆ. ಆದರೆ ಈ ಸಮಯದಲ್ಲಿ ನಿಮ್ಮ ವಿರೋಧಿಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಆದ್ದರಿಂದ ಯಾರೊಂದಿಗೂ ವಾದ ಮಾಡಬೇಡಿ ಎಂದು ನಿಮಗೆ ಸೂಚಿಸಲಾಗಿದೆ.

ಪರಿಹಾರ - ಶುಭ ಫಲಿತಾಂಶಗಳನ್ನು ಪಡೆಯಲು ಒಂದು ಮುಖಿ ರುದ್ರಾಕ್ಷವನ್ನು ಧರಿಸುವುದು ನಿಮಗೆ ಉತ್ತಮ.

ಮುಂದಿನ ವಾರದ ಕನ್ಯಾ ರಾಶಿ ಭವಿಷ್ಯ

ತುಲಾ ರಾಶಿ

ಬುಧ ದೇವ ತುಲಾ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಐದನೇ ಮನೆಗೆ ಪ್ರವೇಶಿಸಲಿದೆ. ಈ ಸಮಯ ನಿಮಗೆ ಅದ್ಭುತವಾಗಿರುತ್ತದೆ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ನಿಮ್ಮ ಆದಾಯ ವೇಗವಾಗಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಯೋಜನೆಗಳು ಯಾವುದೇ ತೊಂದರೆಯಿಲ್ಲದೆ ಮುಂದುವರಿಯುತ್ತವೆ. ಈ ಸಮಯದಲ್ಲಿ ನೀವು ಪ್ರತಿಯೊಂದು ಸ್ಪರ್ಧೆಯನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ವೈಯಕ್ತಿಕವಾಗಿ ಈ ಸಮಯ ಪ್ರೇಮಿಗಳಿಗೆ ಅನುಕೂಲಕರವಾಗಿರುವ ಸಾಧ್ಯತೆ ಇದೆ. ಮದುವೆಯಾಗಿರುವ ಜನರು ಯಾವುದೇ ಪ್ರಯಾಣಕ್ಕೆ ಹೋಗಬಹುದು. ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಇದಲ್ಲದೆ ಇನ್ನೂ ಒಬ್ಬಂಟಿಯಾಗಿರುವವರು ಮದುವೆಯಾಗಲು ಉತ್ತಮ ಸಮಯವಾಗಿರಲಿದೆ.ಆರ್ಥಿಕವಾಗಿ, ಈ ಸಂಚಾರವು ನಿಮಗೆ ಶುಭವಾಗಿರುತ್ತದೆ ಮತ್ತು ಅದೃಷ್ಟವು ನಿಮ್ಮ ಪರವಾಗಿರುತ್ತದೆ. ಸೃಜನಾತ್ಮಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಸಾಕಷ್ಟು ಉತ್ತಮವಾಗಿರಲಿದೆ. ನಿಮ್ಮ ಮೇಲಧಿಕಾರಿಗಳನ್ನು ಪ್ರಭಾವಿಸಲು ನೀವು ಸಾಮರ್ಥ್ಯವರಾಗುವಿರಿ. ಆರೋಗ್ಯದ ದೃಷ್ಟಿಯಿಂದ, ನಿಮಗೆ ಅನುಕೂಲಕರವಾಗಿರುತ್ತದೆ. ಆದರೂ, ನಿಯಮಿತವಾಗಿ ವ್ಯಾಯಾಮ ಮಾಡಲು ನಿಮಗೆ ಸೂಚಿಸಲಾಗಿದೆ. ಒಟ್ಟಾರೆಯಾಗಿ, ತುಲಾ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಶುಭವೆಂದು ಸಾಬೀತಾಗುತ್ತದೆ.

ಪರಿಹಾರ - ಪ್ರತಿದಿನ ತುಳಸಿ ಸಸ್ಯವನ್ನು ಪೂಜಿಸಿ.

ಮುಂದಿನ ವಾರದ ತುಲಾ ರಾಶಿ ಭವಿಷ್ಯ

ವೃತ್ತಿ ಜೀವನದ ಸರಿಯಾದ ಆಯ್ಕೆಗಾಗಿ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್

ವೃಶ್ಚಿಕ ರಾಶಿ

ಬುಧ ದೇವ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತದೆ. ಈ ಸಮಯದಲ್ಲಿ ಅತ್ಯಂತ ಆಕರ್ಷಕ ಅವಕಾಶಗಳನ್ನು ನೀವು ಪಡೆಯುತ್ತೀರಿ. ಅವು ಲಾಟರಿಯಂತೆ ನಿಮಗೆ ಅನಿಸಬಹುದು. ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಕುಟುಂಬದ ಪರಿಸರವು ತುಂಬಾ ಅನುಕೂಲಕರವಾಗಿರುತ್ತದೆ ಮತ್ತು ಕೌಟುಂಬಿಕ ಸಾಮರಸ್ಯಕ್ಕೆ ಈ ಸಮಯ ಉತ್ತಮವಾಗಿರಬಹುದು. ಆರ್ಥಿಕವಾಗಿ ಈ ಸಮಯವು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ ಮತ್ತು ಭವಿಷ್ಯದಲ್ಲಿ ನೀವು ಅಭಿವೃದ್ಧಿ ಮತ್ತು ಬೆಳವಣಿಗೆಯ ಅವಕಾಶವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಅಧ್ಯಯನದತ್ತ ಕೇಂದ್ರೀಕರಿಸಲು ಮತ್ತು ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ಮಾಡಲು ಸಹಾಯ ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಮಾತನಾಡಿದರೆ ಸಂಚಾರದ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಏಕೆಂದರೆ ಹಠಾತ್ ಏರಿಳಿತಗಳ ಕಾರಣದಿಂದಾಗಿ ಮಾನಸಿಕ ಒತ್ತಡ ಉದ್ಭವಿಸಬಹುದು.

ಪರಿಹಾರ - " ಓಂ ಭ್ರಾಂ ಭ್ರೀಂ ಬ್ರೌಂ ಬುಧಾಯ ನಮಃ" ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿ.

ಮುಂದಿನ ವಾರದ ವೃಶ್ಚಿಕ ರಾಶಿ ಭವಿಷ್ಯ

ಧನು ರಾಶಿ

ಬುಧ ಗ್ರಹವು ಧನು ರಾಶಿಚಕ್ರದ ಸ್ಥಳೀಯರ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಮೂಲಕ ಪಾಲುದಾರಿಕೆಯಲ್ಲಿ ಮಾಡುತ್ತಿರುವ ವ್ಯಾಪಾರದಲ್ಲಿ ಬೆಳೆವಣಿಗೆಯಾಗುತ್ತದೆ ಮತ್ತು ಹಣಕಾಸಿನ ವಹಿವಾಟಿಗೂ ಈ ಸಮಯ ಅತ್ಯಂತ ಉತ್ತಮವಾಗಿದೆ. ನೀವು ನಿಮ್ಮ ಸಹೋದರ ಸಹೋದರಿಯರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ. ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ಪ್ರವಾಸಕ್ಕೆ ಹೋಗಬಹುದು. ಇದು ನಿಮಗೆ ಸಂತೋಷ ಮತ್ತು ಹಣವನ್ನು ನೀಡಬಹುದು. ಆದಾಗ್ಯೂ, ನೀವು ನಿಮ್ಮ ಪ್ರಯಾಣಗಳ ಸಮಯದಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ. ಈ ಸಮಯವು ನಿಮ್ಮ ಸಂವಹನವನ್ನು ಬಳಸಲು ಮತ್ತು ತಮ್ಮ ಸಂಬಂಧಿಕರೊಂದಿಗಿನ ಸಂಬಂಧವನ್ನು ಹೆಚ್ಚಿಸಲು ಉತ್ತಮವಾಗಿದೆ. ಈ ಸಮಯದಲ್ಲಿ ನೀವು ಖ್ಯಾತಿ ಮತ್ತು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಉತ್ತಮ ಆರೋಗ್ಯವನ್ನು ಆನಂದಿಸುವಿರಿ.

ಪರಿಹಾರ - ಬುಧವಾರ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಿ.

ಮುಂದಿನ ವಾರದ ಧನು ರಾಶಿ ಭವಿಷ್ಯ

ಮಕರ ರಾಶಿ

ಬುಧ ದೇವ ಮಕರ ರಾಶಿಚಕ್ರದ ಸ್ಥಳೀಯರ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಗೋಚರಿಸುತ್ತದೆ. ಎರಡನೇ ಮನೆಯು ಕುಟುಂಬ, ಹಣ ಮತ್ತು ವಾಣಿಯನ್ನು ತೋರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಬುದ್ಧಿವಂತಿಕೆಯ ಮೂಲಕ ನೀವು ಎಲ್ಲರನ್ನು ಆಕರ್ಷಿಸುವಿರಿ. ಈ ಸಮಯದಲ್ಲಿ ನಿಮ್ಮ ಅದೃಷ್ಟವು ಹೆಚ್ಚುವರಿ ಲಾಭವನ್ನು ಪಡೆಯಲು ನಿಮಗೆ ಸಹಾಯ ನೀಡುತ್ತದೆ. ನೀವು ಮನೆ ಮತ್ತು ಹೊರಗಡೆ ಉತ್ತಮ ಭಕ್ಷ್ಯಗಳನ್ನು ಆನಂದಿಸುವಿರಿ. ಆದರೆ ಯಾವುದೇ ವಸ್ತುವನ್ನು ಅತಿಯಾಗಿ ಸೇವಿಸುವುದು ನಿಮ್ಮ ಆರೋಗ್ಯವನ್ನು ತೊಂದರೆಗೊಳಿಸಬಹುದು. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಿಮ್ಮ ಆದ್ಯತೆಯಾಗಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಸಂಚಾರದ ಈ ಸಮಯದಲ್ಲಿ ಯಾವುದೇ ಚಿಂತೆ ಅಥವಾ ಒತ್ತಡವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅನುಮತಿಸಬೇಡಿ. ಪರಿಹಾರ - ಭಾನುವಾರ - ಬಡವ ಮತ್ತು ಅಗತ್ಯವಿರುವ ಜನರಿಗೆ ಗೋಧಿ ದಾನ ಮಾಡಿ.

ಮುಂದಿನ ವಾರದ ಮಕರ ರಾಶಿ ಭವಿಷ್ಯ

ನೀವು ಯಶಸ್ಸು ಮತ್ತು ಸಂತೋಷಕರ ಜೀವನವನ್ನು ಬಯಸುವಿರಾ? ಪ್ರತಿಯೊಂದು ಉತ್ತರವನ್ನು ರಾಜ ಯೋಗ ರೀಪೋರ್ಟ್ ಮೂಲಕ ಪಡೆಯಿರಿ

ಕುಂಭ ರಾಶಿ

ಬುಧ ದೇವ ಕುಂಭ ರಾಶಿಚಕ್ರದ ಸ್ಥಳೀಯರ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಲಗ್ನದ ಮನೆ ಅಂದರೆ ನಿಮ್ಮ ಮೊದಲನೇ ಮನೆಗೆ ಪ್ರವೇಶಿಸುತ್ತದೆ. ಬುಧ ಗ್ರಹದ ಈ ಸಂಚಾರವು ನಿಮಗೆ ಶುಭವಾಗಿರುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವು ಮೊದಲಿಗಿಂತ ಹೆಚ್ಚು ಬಲವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ನಿಮಗೆ ಅವಶ್ಯಕ, ಏಕೆಂದರೆ ಈ ಸಮಯದಲ್ಲಿ ನೀವು ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ಕೆಲವು ಉತ್ತಮ ಲಾಭಗಳನ್ನು ಸಹ ಪಡೆಯುವಿರಿ. ಆದಾಗ್ಯೂ, ವೆಚ್ಚಗಳನ್ನು ನಿಯಂತ್ರಿಸುವುದರಿಂದ ಈ ಸಮಯದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯವಾಗುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರ ಸಂಬಂಧವು ಮೊದಲಿಗಿಂತ ಹೆಚ್ಚು ಬಲವಾಗುತ್ತದೆ. ನಿಮ್ಮ ಕಾರ್ಯನಿರತ ಜೀವನ ಮತ್ತು ಹೆಚ್ಚುವರಿ ಕೆಲಸದ ಹೊರೆಯ ಕಾರಣದಿಂದಾಗಿ ನಿಮ್ಮ ಅರೋಗ್ಯವನ್ನು ನಿರ್ಲಕ್ಷಿಸಬೇಡಿ ಮತ್ತು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಅನುಕೂಲಕರ ಎಂದು ಸಾಬೀತುಪಡಿಸುತ್ತದೆ.

ಪರಿಹಾರ - "ಓಂ ನಮೋ ಭಗವತೇ ವಾಸುದೇವಾಯ ನಮಃ" ಅನ್ನು ಜಪಿಸುವುದು ನಿಮಗೆ ಪ್ರಯೋಜನಕಾರಿ.

ಮುಂದಿನ ವಾರದ ಕುಂಭ ರಾಶಿ ಭವಿಷ್ಯ

ಮೇಷ ರಾಶಿ

ಬುಧ ಗ್ರಹವು ಮೀನಾ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸುತ್ತದೆ. ಹನ್ನೆರಡನೇ ಮನೆ ಆಸ್ಪತ್ರೆಯಲ್ಲಿ ಭರ್ತಿಯಾಗುವುದು, ವೆಚ್ಚ ಮತ್ತು ವಿದೇಶ ಲಾಭವನ್ನು ತೋರಿಸುತ್ತದೆ. ಈ ಸಮಯದಲ್ಲಿ ನೀವು ಐಷಾರಾಮಿಯತ್ತ ಹೆಚ್ಚು ಒಲವು ಹೊಂದಿರುತ್ತೀರಿ ಮತ್ತು ಜೀವನದಲ್ಲಿ ನೀವು ಫ್ಯಾನ್ಸಿ ವಸ್ತುಗಳನ್ನು ಸೇರಿಸಲು ಬಯಸುವಿರಿ.ಈ ಸಂಚಾರದ ಸಮಯದಲ್ಲಿ ನೀವು ಪ್ರಯಾಣಗಳನ್ನು ಸಹ ಮಾಡಬಹುದು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸುವಿರಿ. ಇದು ದೀರ್ಘಕಾಲದವರೆಗೆ ನಿಮಗೆ ಪ್ರಯೋಜನಕಾರಿಯಾಗುತ್ತದೆ.ಈ ಸಂಚಾರದ ಸಮಯದಲ್ಲಿ ಜೀವನ ಸಂಗಾತಿಯೊಂದಿಗೆ ಕೆಲವು ತಪ್ಪುಗ್ರಹಿಕೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಶಾಂತಿ ಮತ್ತು ವಿನಯಶೀಲರಾಗಿ ವರ್ತಿಸಿ. ಆಸ್ತಿಗೆ ಸಂಬಂಧಿಸಿದ ವಿಷಯಗಳಿಂದ ದೂರವಿರಿ ಅತ್ತು ತಮ್ಮ ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ಪ್ರಯತ್ನಿಸಿ. ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆಳಗು ನಿಮ್ಮ ಜೀವನದಲ್ಲಿ ಮಾನಸಿಕ ಶಾಂತಿಯನ್ನು ತರಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸಿ ಏಕೆಂದರೆ ನಿಮ್ಮ ಅಥವಾ ನಿಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಅರೋಗ್ಯ ಸಮಸ್ಯೆಗಳಾಗಬಹುದು. ಆಮದು - ರಫ್ತು ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ ವ್ಯಾಪಾರದ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ. ಒಟ್ಟಾರೆಯಾಗಿ ಈ ಸಂಚಾರವು ನಿಮಗೆ ಸರಸರಿಯಾಗಲಿದೆ.

ಪರಿಹಾರ - ವೈವಾಹಿಕ ಮಹಿಳೆಯರಿಗೆ ಹಸಿರು ಬಳೆಗಳನ್ನು ನೀಡುವುದು ನಿಮಗೆ ಉತ್ತಮ.

ಮುಂದಿನ ವಾರದ ಮೀನಾ ರಾಶಿ ಭವಿಷ್ಯ

ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Horoscope & Astrology 2021

Talk to Astrologer Chat with Astrologer