ಸೂರ್ಯ ಸಂಚಾರ ಮಿಥುನ ರಾಶಿಯಲ್ಲಿ - Sun Transit in Gemini in Kannada

ಜ್ಯೋತಿಷ್ಯದಲ್ಲಿ ಸೂರ್ಯ ದೇವರಿಗೆ ಆತ್ಮದ ಸ್ಥಾನಂನವನ್ನು ನೀಡಲಾಗಿದೆ. ಇದನ್ನು ಎಲ್ಲಾ ಗ್ರಹಗಳ ರಾಜ ಎಂದು ಸಹ ಕರೆಯಲಾಗುತ್ತದೆ. ಜಗತ್ತಿನಲ್ಲಿ ಸೂರ್ಯನ ಕಾರಣದಿಂದಾಗಿ ಮಾತ್ರ ಜೀವನವು ಸಾಧ್ಯವಾಗಿದೆ. ಜಾತಕದಲ್ಲಿ ಇದು ಉತ್ತಮ ಸ್ಥಾನದಲ್ಲಿದ್ದರೆ, ಹೆಸರು ಮತ್ತು ಉತ್ತಮ ಸ್ಥಾನಮಾನವನ್ನು ನೀಡುತ್ತದೆ. ಇದರೊಂದಿಗೆ ಇದು ಬಲವಾದ ಮೂಳೆಗಳು, ಮೆಚ್ಚುಗೆ, ಸರ್ಕಾರಿ ಕೆಲಸ ಮತ್ತು ತಂದೆಯ ಅಂಶವಾಗಿದೆ. ಸೂರ್ಯನ ಶಕ್ತಿ ಒಬ್ಬ ವ್ಯಕ್ತಿಗೆ ನಾಯಕತ್ವದ ಗುಣವನ್ನು ನೀಡುತ್ತದೆ.

ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿವಾರಣೆಗಾಗಿ ಜ್ಯೋತಿಷಿಯ ಬಳಿ ಪ್ರಶ್ನೆ ಕೇಳಿ

ಸೂರ್ಯ ದೇವ 14 ಜೂನ್ 2020 ರಂದು, ಭಾನುವಾರ 23.40 ಗಂಟೆಗೆ ವೃಷಭ ರಾಶಿಚಕ್ರಡಿದ್ನ ಮಿಥುನ ರಾಶಿಚಕ್ರದಲ್ಲಿ ಗೋಚರಿಸುತ್ತದೆ ಮತ್ತು 16 ಜೂಲೈ ಬೆಳಿಗ್ಗೆ 10:32 ಗಂಟೆಗೆ ಕರ್ಕ ರಾಶಿಚಕ್ರದಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ವಿವಿಧ ರಾಶಿಗಳ ಮೇಲೆ ಈ ಸಂಚಾರವು ಏನು ಪರಿಣಾಮ ಬೀರುತ್ತದೆ ಎಂದು ನಾವು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. .

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಯನ್ನು ತಿಳಿಯಿರಿ.

ಮೇಷ

ಮೇಷ ರಾಶಿಚಕ್ರದ ಐದನೇ ಮನೆಯ ಮಾಲೀಕ ಸೂರ್ಯ ದೇವ ನಿಮ್ಮ ಮೂರನೇ ಮನೆಗೆ ಸಂಚರಿಸುತ್ತಿದ್ದಾರೆ. ಈ ಮನೆಯನ್ನು ಧೈರ್ಯ ನತ್ತು ಪರಾಕ್ರಮದ ಮನೆ ಎಂದು ಸಹ ಕರೆಯಲಾಗುತ್ತದೆ. ಸೂರ್ಯನ ಸಂಚಾರವು ಸುತ್ತಾಡಲು ಮತ್ತು ವೃತ್ತಿಪರ ಪ್ರವಾಸಗಳಿಗೂ ಶುಬುವೂ ಫಲಪ್ರದವಾಗಿರುತ್ತದೆ. ಮೇಷ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ಧೈರ್ಯ ಮತ್ತು ಪರಾಕ್ರಮದ ಮೂಲಕ ಜೀವನದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಲು ಅರ್ಹರಾಗುತ್ತಾರೆ. ಸೂರ್ಯ ಸಂಚಾರದ ಈ ಸಮಯದಲ್ಲಿ ನಿಮ್ಮ ಆಡಳಿತ ಮತ್ತು ನಾಯಕತ್ವದ ಸಾಮರ್ಥ್ಯಗಳು ಹೆಚ್ಚಾಗುತ್ತವೆ, ಇದು ವುತ್ತಿಪರ ವಿಷಯಗಳಲ್ಲಿ ಪ್ರಗತಿಗಾಗಿ ಮತ್ತು ಹೊಸ ಕೆಲಸವನ್ನು ಆರಂಭಿಸಲು ಸಹ ಶುಭವಾಗಿರುತದೆ. ಈ ಸಮಯದಲ್ಲಿ ಸಹೋದರ - ಸಹೋದರಿಯರೊಂದಿಗೆ ನೀವು ಉತ್ತಮ ಸಾಮರಸ್ಯವನ್ನು ಹೊಂದಿರುತ್ತೀರಿ ಮತ್ತು ಯಾವುದೇ ರೀತಿಯ ತಪ್ಪು ಗ್ರಹಿಕೆ ನಿಮ್ಮ ಹೃದಯದಲ್ಲಿದ್ದರೆ, ಅದು ಸಹ ಈ ಸಮಯದಲ್ಲಿ ದೂರವಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆಯನ್ನು ಪಡೆಯಬಹುದು, ಸೂರ್ಯ ದೇವ ಮಿಥುನ ರಾಶಿಚಕ್ರದಲ್ಲಿ ನೆಲೆಗೊಂದಿಗೆ, ಇದು ಗಾಳಿಯ ಅಂಶದ ರಾಶಿಯಾಗಿದೆ ಆದ್ದರಿಂದ ನೀವು ಸಂವಹನಕ್ಕಾಗಿ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮವನ್ನು ಹೊಂದಿದ್ದರೆ, ನೀವು ಹೆಚ್ಚು ಶುಭ ಫಲಿತಾಂಶಗಳನ್ನು ಪಡೆಯಬಹುದು.

ಪರಿಹಾರ - ಪ್ರತಿದಿನ ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದು ನಿಮಗೆ ಲಾಭದಾಯಕವಾಗಿರುತ್ತದೆ.

ಮುಂದಿನ ವಾರದ ಮೇಷ ರಾಶಿ ಭವಿಷ್ಯ

ವೃಷಭ

ಸೂರ್ಯ ದೇವ ವೃಷಭ ರಾಶಿಚಕದ ಸ್ಥಳೀಯರ ನಾಲ್ಕನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಎರಡನೇ ಮನೆಗೆ ಹಾದುಹೋಗುತ್ತದೆ. ಈ ಮನೆಯನ್ನು ಸಂವಹನ, ಹಣಕಾಸು ಮತ್ತು ಧ್ವನಿಯ ಮನೆಯೆಂದು ಸಹ ಕರೆಯಲಾಗುತ್ತದೆ. ಸೂರ್ಯ ಸಂಚಾರದ ಈ ಸಮಯದಲ್ಲಿ ನೀವು ಯಾರನ್ನೂ ಹೆಚ್ಚು ನಂಬುವುದನ್ನು ತಪ್ಪಿಸಬೇಕು. ಯಾರೊಂದಿಗೂ ಸುಳ್ಳು ಭರವಸೆ ಮಾಡಬೇಡಿ, ಇಲ್ಲದಿದ್ದರೆ ನಿಮಗೆ ಹಾನಿಯಾಗಬಹುದು. ಎರಡನೇ ಮನೆಯನ್ನು ಸಂಪನ್ಮೂಲಗಳ ಮನೆಯೆಂದು ಸಹ ಕರೆಯಲಾಗುತ್ತದೆ ಆದ್ದರಿಂದ ಈ ಸಮಯದಲ್ಲಿ ನೀವು ಹೊಂದಿರುವ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಇದನ್ನು ಮಾಡುವುದು ನಿಮಗೆ ಪ್ರಯೋಜನಕಾರಿ. ಸೂರ್ಯ ದೇವ ಬೆಂಕಿಯ ಅಂಶವನ್ನು ಪ್ರತಿನಿಧಿಸುತ್ತಾನೆ ಮತ್ತು ಆಗಾಗ್ಗೆ ಇದನ್ನು ಪ್ರಕೃತಿಯಲ್ಲಿ ಕ್ರೂರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಧ್ವನಿ ಮತ್ತು ಕುಟುಂಬದ ಎರಡನೇ ಮನೆಯಲ್ಲಿ ನೆಲೆಗೊಳ್ಳುತ್ತಿದೆ ಆದ್ದರಿಂದ ಈ ಸಮಯದಲ್ಲಿ ನಿಮ್ಮ ಸಂಭಾಷಣೆಯಲ್ಲಿ ಕಠೋರತೆ ತರುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಮನೆಯಲ್ಲಿ ಅನಗತ್ಯ ಸಮಸ್ಯೆಗಳಾಗಬಹುದು.

ಪರಿಹಾರ - ಸೂರ್ಯಾಷ್ಟಕಂ ಅನ್ನು ಪಠಿಸುವುದು ತುಂಬಾ ಶುಭವಾಗಿರುತ್ತದೆ.

ಮುಂದಿನ ವಾರದ ವೃಷಭ ರಾಶಿ ಭವಿಷ್ಯ

ಮಿಥುನ

ಮಿಥುನ ರಾಶಿಚಕ್ರದ ಸ್ಥಳೀಯರು ಅನಗತ್ಯವಾಗಿ ಆಕ್ರಮಣಕಾರಿ ಆಗಿರುತ್ತಾರೆ ಏಕೆಂದರೆ ಸೂರ್ಯ ಸಂಚಾರವು ನಿಮ್ಮ ವ್ಯಕ್ತಿತ್ವದ ಮನೆಯಲ್ಲಿರುವ ಕಾರಣದಿಂದಾಗಿ ನಿಮ್ಮಲ್ಲಿ ಅಕ್ರಮತೆ ಮತ್ತು ಕೋಪದ ಹೆಚ್ಚಳವನ್ನು ಕಾಣಬಹುದು. ಈ ರಾಶಿಚಕ್ರದ ಸ್ಥಳೀಯರು ತಮ್ಮ ಗುರಿಗಳನ್ನು ಸಾಧಿಸಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಏಕೆಂದರೆ ಸೂರ್ಯ ನಿಮ್ಮ ಧೈರ್ಯ ಮತ್ತು ಪರಾಕ್ರಮದ ಮನೆಯ ಮಾಲೀಕ. ವೃತ್ತಿಪರ ಜೀವನದಲ್ಲಿ ಯಾವುದೇ ಕೆಲಸವನ್ನು ನೀವು ಯೋಜನೆ ಮತ್ತು ಆಲೋಚಿಸದೆ ಮಾಡಬಾರದು. ಈ ಸಮಯದಲ್ಲಿ ನಿಮ್ಮ ಕೆಲಸವನ್ನು ಮಾಡಲು ನೀವು ಇತರರ ಒಪ್ಪಿಗೆಯನ್ನು ಪಡೆಯಲು ಬಯಸುತ್ತೀರಿ. ಇದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನಿಮಗೆ ತೊಂದರೆಯಾಗುತ್ತದೆ. ನಿಮ್ಮ ವೈಯಕ್ತಿಕ ಸಂಬಂಧಗಳ ಬಗ್ಗೆ ಮಾತನಾಡಿದರೆ, ನಿಮ್ಮ ಅಹಂಕಾರದ ಭಾವನೆಯನ್ನು ದೂರವಿಟ್ಟು ಮುಂದುವರಿಯಬೇಕು. ನಿಮ್ಮ ತ್ವರಿತ ಸ್ವಭಾವದ ಕಾರಣದಿಂದಾಗಿ ಸಂಬಂಧದಲ್ಲಿ ಏರಿಳಿತಗಳು ಉಂಟಾಗಬಹುದು.

ಪರಿಹಾರ - ಪ್ರತಿದಿನ ರಾಮ ರಕ್ಷಾ ಸ್ತ್ರೋತವನ್ನು ಪಠಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಮಿಥುನ ಭವಿಷ್ಯ

ಕರ್ಕ

ಕರ್ಕ ರಾಶಿಚಕ್ರದ ಸ್ಥಳೀಯರು ತಲೆ ನೋವು, ಜ್ವರ, ಕಣ್ಣಿನ ಸಮಸ್ಯೆಗಳಂತಹ ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಸೂರ್ಯ ದೇವ ವೆಚ್ಚ, ಮೋಕ್ಷ ಮತ್ತು ನಷ್ಟದ ತನ್ನ ಹನ್ನೆರಡನೇ ಮನೆಯಲ್ಲಿ ಪ್ರವೇಶಿಸುತ್ತಿದ್ದಾರೆ. ಸರಿಯಾದ ತನಿಖೆಯ ನಂತರ ಯಾವುದೇ ರೀತಿಯ ಹೂಡಿಕೆ ಮಾಡಬೇಕು. ಇಲ್ಲದಿದ್ದರೆ ಈ ಪ್ರಕ್ರಿಯೆಯಲ್ಲಿ ನೀವು ನಷ್ಟವನ್ನು ಎದುರಿಸಬೇಕಾಗುತ್ತದೆ. ಸೂರ್ಯ ನಿಮ್ಮ ಹಣಕಾಸಿನ ಎರಡನೇ ಮನೆಯ ಮಾಲೀಕ ಮತ್ತು ಹನ್ನೆರಡನೇ ಮನೆಯಲ್ಲಿ ಸಂಚರಿಸುತ್ತಿದೆ ಆದ್ದರಿಂದ ಹಣದ ಸರಿಯಾದ ನಿರ್ವಹಣೆಯನ್ನು ಸೂಚಿಸುತ್ತದೆ. ನೀವು ನಿಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಯೋಜಿಸಿ ಬಳಸಬೇಕು. ಏಕೆಂದರೆ ತಪ್ಪುಯ್ ವಸ್ತುಗಳ ಮೇಲೆ ಹಣವನ್ನು ಬಳಸುವುದರಿಂದ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಭಾವನಾತ್ಮಕ ನಿರ್ಧಾರಗಳನ್ನು ತಪ್ಪಿಸಬೇಕು ಮತ್ತು ನಿಮ್ಮ ರಹಸ್ಯ ವಿಷಯಗಳನ್ನು ಹಂಚಿಕೊಳ್ಳುತ್ತಿರುವ ಜನರಿಂದ ಜಾಗರೂಕರಾಗಿರಬೇಕು, ಏಕೆಂದರೆ ನೀವು ಹೆಚ್ಚು ನಂಬುವ ಜನರು ನಿಮಗೆ ದ್ರೋಹ ಮಾಡಬಹುದು. ತಪ್ಪು ಗ್ರಹಿಕೆಗಳ ಕಾರಣದಿಂದಾಗಿ ಪ್ರೀತಿ ಜೀವನ ಮತ್ತು ಸಂಬಂಧಗಳು ಹದಗೆಡಬಹುದು. ಆದ್ದರಿಂದ ನೀವು ನ್ಯಾಯಯುತ ಮತ್ತು ಪಾರದರ್ಶಕವಾಗಿರುವುದು ಅತ್ಯಂತ ಮುಖ್ಯವಾಗಿರುತ್ತದೆ. ಆದಾಗ್ಯೂ ಈ ಸಾಗಣೆ ನಿಮ್ಮ ಹನ್ನೆರಡನೇ ಮನೆಯಲ್ಲಾಗುತ್ತಿದೆ ಆದ್ದರಿಂದ ವಿದೇಶದಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ.

ಪರಿಹಾರ - ಮಹಾಗೌರಿ ದೇವಿಯನ್ನು ಪೂಜಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಕರ್ಕ ರಾಶಿ ಭವಿಷ್ಯ

ಕೋಗ್ನಿಅಸ್ಟ್ರೋ ರಿಪೋರ್ಟ್ ಮೂಲಕ ನಿಮ್ಮ ವೃತ್ತಿಯಲ್ಲಿ ಬರುತ್ತಿರುವ ಸಮಸ್ಯೆಯನ್ನು ನಿವಾರಿಸಿ

ಸಿಂಹ

ಸಿಹ ರಾಶಿಚಕ್ರದ ಸ್ಥಳೀಯರು ಮಹತ್ವಕಾಂಕ್ಷಿಯಾಗಿರುತ್ತಾರೆ ಏಕೆಂದರೆ ಸೂರ್ಯ ದೇವ ಅವರ ಲಾಭ ಮತ್ತು ಯಶಸ್ಸಿನ ಮನೆಗೆ ಸಾಗುತ್ತಿದ್ದಾರೆ. ಈ ಸಂಚಾರವು ನೀವು ದೀರ್ಘಕಾಲದಿಂದ ಕಾಯುತ್ತಿದ್ದ ಯಶಸ್ಸು ನೀಡುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ನಾಯಕತ್ವ, ಆಡಳಿತಾತ್ಮಕ ಮತ್ತು ಸಾಂಸ್ಥಿಕ ಕೌಶಲ್ಯಗಳು ಹೊರಹೊಮ್ಮುತ್ತವೆ. ಈ ಕಾರಣದಿಂದಾಗಿ ನೀವು ಹಿರಿಯ ಅಧಿಕಾರಿಗಳ ಮೆಚ್ಚುಗೆ ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಸರ್ಕಾರಿ ಅಥವಾ ಸರ್ಕಾರಿ ಸಂಸ್ಥೆಗಳಿಂದ ಲಾಭ ಮತ್ತು ಬೆಂಬಲವನ್ನು ಪಡೆಯುಯುತ್ತಿರಿ. ಸೂರ್ಯ ಹನ್ನೊಂದನೇ ಮನೆಯಿಂದ ಐದನೇ ಮನೆಯ ಮೇಲೆ ದೃಷ್ಟಿ ಹಾಕುತ್ತಿದ್ದಾರೆ, ಈ ಕಾರಣದಿಂದಾಗಿ ಇಂದಿನ ವರೆಗೂ ಒಬ್ಬಂಟಿಯಾಗಿರುವ ಮತ್ತು ಪ್ರೀತಿಯನ್ನು ಹುಡುಕುತ್ತಿರುವ ಜನರ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಹೃದಯದ ಬಾಗಿಲು ತಟ್ಟಬಹುದು. ಹನ್ನೊಂದನೇ ಮನೆ ಸಾಮಾಜಿಕ ಮತ್ತು ಸ್ನೇಹಿತರೊಂದಿಗಿನ ಸಂಬಂಧದ ಮನೆಯೂ ಆಗಿದೆ ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಸಾಮಾಜಿಕ ಸಂಪರ್ಕಗಳಿಂದಲೂ ಲಾಭವನ್ನು ಪಡೆಯಬಹುದು. ನೀವು ನಿಮ್ಮ ಸ್ವಭಾವದಲ್ಲಿ ಕಠೋರತೆ ಮತ್ತು ಮೊಂಡುತನವನ್ನು ತರದಿದ್ದರೆ ಈ ಸಂಚಾರವು ನಿಮ್ಮ ಅನೇಕ ಆಸೆಗಳನ್ನು ಪೂರೈಸುತ್ತದೆ ಎಂದು ಸಾಬೀತುಪಡಿಸುತ್ತದೆ. ನಿಮ್ಮ ನಡವಳಿಕೆ ಎಷ್ಟು ಉತ್ತಮವಾಗಿರುತ್ತದೆಯೋ ಅಷ್ಟೇ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ.

ಪರಿಹಾರ - ಉಂಗುರದ ಬೆರಳಿನಲ್ಲಿ ಮಾಣಿಕ್ಯ ರತ್ನವನ್ನು ಹೊಂದಿಸಿದ ಚಿನ್ನದ ಅಥವಾ ತಾಮ್ರದ ಉಂಗುರವನ್ನು ಧರಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಸಿಂಹ ರಾಶಿ ಭವಿಷ್ಯ

ಕನ್ಯಾ

ಈ ಸಂಚಾರವು ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಸೂರ್ಯ ದೇವ ನಿಮ್ಮ ವೃತ್ತಿಯ ಹತ್ತನೇ ಮನೆಯಲ್ಲಿ ನೆಲೆಗೊಳ್ಳುತ್ತಿದ್ದಾರೆ. ಇದರ ಮೂಲಕ ಜೀವನದ ಗುರಿಗಳು, ವೃತ್ತಿ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಹತ್ತನೇ ಮನೆಯಲ್ಲಿ ಸೂರ್ಯ ದಿಗ್ಬಲಿಯಾಗಿರುತ್ತಾರೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನವು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೊಸ ಪಾತ್ರಗಳು ಮತ್ತು ಜವಾಬ್ದಾರಿಗಳೊಂದಿಗೆ ನಿಮ್ಮನ್ನು ಗೌರವಿಸಲಾಗುತ್ತದೆ. ವೃತ್ತಿಪರರು ಮತ್ತು ಉದ್ಯಮಿಗಳು ಇಬ್ಬರು ಈ ಸಾಗಣೆಯಿಂದ ಶುಭ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಏಕೆಂದರೆ ಇದು ನಿಮಗೆ ಅತ್ಯಂತ ವೇಗವಾಗಿ ವೀಕ್ಷಣಾ ಕೌಶಲ್ಯ ಮತ್ತು ನಿಮ್ಮ ವ್ಯವಹಾರದಲ್ಲಿ ಸರಿಯಾದ ಪರಿಷ್ಟಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ. ಯಾವುದೇ ಸಂದರ್ಭದಲ್ಲಿ ಲಾಭ ಮತ್ತು ನಷ್ಟದ ಅವಲೋಕನದ ನಿಮ್ಮ ಸಾಮರ್ಥ್ಯವು ಉತ್ತಮವಾಗುತ್ತದೆ. ಇದು ವಿರೋಧಿಗಳ ಮೇಲೆ ಒಂದು ಅಂಚವನ್ನು ನೀಡುತ್ತದೆ. ನೀವು ಸಂಸ್ಥೆಗಳಲ್ಲಿ ಆಮದು-ರಫ್ತು ಅಥವಾ ಯಾವುದೇ ಕೆಲಸವನ್ನು ಮಾಡುತ್ತಿದ್ದರೆ, ನಿಮ್ಮ ಬಡ್ತಿ ಸಾಧ್ಯ,. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಮೇಲೆ ನಿಮ್ಮ ಅಹಂಕಾರವನ್ನು ಪ್ರಾಬಲ್ಯ ಸಾಧಿಸಲು ಅನುಮತಿಸದಿದ್ದರೆ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡು ಮುಂದುವರಿದರೆ ಮಾತ್ರ ಈ ಸಂಚಾರವು ನಿಮಗೆ ಬಹಳ ಶುಭಾಗಿರುತ್ತದೆ.

ಪರಿಹಾರ - ಸೋಮವಾರದಂದು ಬೆಲ್ಲದ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಕನ್ಯಾ ರಾಶಿ ಭವಿಷ್ಯ

ತುಲಾ

ಧರ್ಮ, ತಂದೆ, ಆಧ್ಯಾತ್ಮಿಕತೆ, ಪ್ರವಾಸ ಮತ್ತು ಅದೃಷ್ಟದ ಒಂಬತ್ತನೇ ಮನೆಯಲ್ಲಿ ಸೂರ್ಯನ ಸಂಚಾರವು ನಿಮ್ಮ ತಂದೆ ಅಥವಾ ತಂದೆಯಂತಹ ಜನರೊಂದಿಗೆ ಕೆಲವು ಸೈದ್ಧಾಂತಿಕ ವ್ಯತ್ಯಾಸಗಳನ್ನು ತೋರಿಸುತ್ತಿದೆ. ಕೆಲವೊಮ್ಮೆ ಕ್ರೂರ ಎಂದು ಹೇಳಲಾಗುವ ಸೂರ್ಯನ ಸಂಚಾರದಿಂದ ಜೀವನದಲ್ಲಿ ಬರುವ ಅವಕಾಶಗಳ ಮತ್ತು ಅದೃಷ್ಟದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನ ಸಾಕಾರಗೊಳಿಸಲು ನೀವು ಹೆಚ್ಚು ಪ್ರಯತ್ನಿಸಬೇಕೆಂದು ಇದು ಸೂಚಿಸುತ್ತದೆ. ಯಾವುದೇ ರೀತಿಯ ಪ್ರಯಾಣ, ವಿಶೇಷವಾಗಿ ಆಧ್ಯಾತ್ಮಿಕ ಉದ್ದೇಶಗಳಿಗಾಗಿ ಮಾಡಿದರೆ, ಈ ಸಮಯದಲ್ಲಿ ಅವುಗಳಲ್ಲಿ ವಿಳಂಬವಾಗಬಹುದು. ಆದ್ದರಿಂದ ಈ ಸಮಯದಲ್ಲಿ ಯಾವುದೇ ರೀತಿಯ ಆಧ್ಯಾತ್ಮಿಕ ಪವಾಸಗಳನ್ನು ತಪ್ಪಿಸಬೇಕು. ಕಾನೂನು ಬಾಹಿರವಾಗಿ ಯಾವುದೇ ಕೆಲಸವನ್ನು ಮಾಡಬೇಡಿ, ಇಲ್ಲದಿದ್ದರೆ ಇದರ ಪರಿಣಾಮವನ್ನು ನೀವು ಎದುರಿಸಬೇಕಾಗಬಹುದು. ಸಹೋದರ ಸಹೋದರಿಯರು ಮತ್ತು ಸ್ನೇಹಿತರೊಂದಿಗೆ ಕೆಲವು ವಿರೋಧಾಭಾಸಗಳು ಅಥವಾ ಸಮಸ್ಯೆಗಳಾಗಬಹುದು, ಅವುಗಳನ್ನು ಸಮಯ ಇರುವಾಗಲೇ ನಿವಾರಿಸಬೇಕು.

ಪರಿಹಾರ - ತುಳಸಿ ಸಸ್ಯಕ್ಕೆ ನೀರು ಅರ್ಪಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ತುಲಾ ರಾಶಿ ಭವಿಷ್ಯ

ವೃಶ್ಚಿಕ

ವೃಶ್ಚಿಕ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ವೃತ್ತಿ ಮತ್ತು ವೃತ್ತಿಪರ ಜೀವನದಲ್ಲಿ ಏರಿಳಿತವನ್ನು ಎದುರಿಸಬೇಕಾಗಬಹುದು. ಏಕೆಂದರೆ ಸೂರ್ಯ ದೇವ ನಿಮ್ಮ ಬದಲಾವಣೆ ಮತ್ತು ಅನಿಶ್ಚಿತತೆಯ ನಿಮ್ಮ ಎಂಟನೇ ಮನೆಗೆ ಸಾಗಾಣಿಸುತ್ತಾರೆ. ಯಾವುದೇ ಹಗರಣದಲ್ಲಿ ಬಲವಂತವಾಗಿ ನಿಮ್ಮ ಹೆಸರನ್ನು ಸೇರಿಸಬಹುದು. ಇದರ ಪರಿಣಾಮವಾಗಿ ಮನಸ್ಸಿನ ಶಾಂತಿ ಭಂಗವಾಗಬಹುದು. ಈ ಸಂಚಾರದ ಸಮಯದಲ್ಲಿ ನೀವು ಚಿಂತೆಗಳನ್ನು ಹೊಂದಿರುತ್ತೀರಿ, ವಿಶೇಷವಾಗಿ ಆದಾಯದ ಬಗ್ಗೆ, ಎಕೆದಂರೆ ಈ ಮನೆಯಲ್ಲಿ ಸೂರ್ಯನು ಸಂಗ್ರಹಿಸಿದ ಹಣಕಾಸು ಮತ್ತು ಕುಟುಂಬದ ಮನೆಯ ಮೇಲೆ ನೇರವಾಗಿ ದೃಷ್ಟಿ ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಕುಟುಂಬದ ವಾತಾವರಣವು ಹದಗೆಡಬಹುದು. ಆದ್ದರಿಂದ ಮನೆಯಲ್ಲಿ ಶಿಸ್ತು ಹೊಂದಿರುವುದು ನಿಮಗೆ ಬಹಳ ಮುಖ್ಯ. ಈ ಸಮಯದಲ್ಲಿ ನೀವು ಕಳೆದುಹೋದ ಹಾಗೆ ಮತ್ತು ನಿರ್ದೇಶನವಿಲ್ಲದಿರುವವರ ಹಾಗೆ ಅನುಭವಿಸುವಿರಿ. ಇದು ನಿಮ್ಮ ಅರೋಗ್ಯ ಮತ್ತು ಆಹಾರ ಪಾನೀಯದ ಮೇಲೆ ಪರಿಣಾಮ ಬೀರುತ್ತದೆ, ಇದರ ಪರಿಣಾಮವಾಗಿ ಹೊಟ್ಟೆ ಮತ್ತು ಕಣ್ಣಿಗೆ https://www.astrosage.com/kannada/rashi-bhavishya/mundina-vaara/vrushchika-rashi-bhavishya.aspಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಸಂಶೋಧನೆಯ ಕೆಲಸದಲ್ಲಿ ತೊಡಗಿರುವ ಜನರಿಗೆ ಈ ಸಂಚಾರವು ಬಹಳ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಯೋಗ ಧ್ಯಾನವನ್ನು ಹೆಚ್ಚಿಸಬಹುದು. ಇದರ ಮೂಲಕ ನೀವು ನಿಮ್ಮೊಂದಿಗೆ ಸೇರಲು ನಿಮಗೆ ಸಹಾಯವಾಗುತ್ತದೆ ಮತ್ತು ನೀವು ನಿಮ್ಮ ಮರೆಮಾಡಿರುವ ಸಾಮರ್ಥ್ಯವನ್ನು ಗುರುತಿಸಲು ನಿಮಗೆ ಸಾಧ್ಯವಾಗುತ್ತದೆ.

ಪರಿಹಾರ - ತೋರುಬೆರಳಿನಲ್ಲಿ ಮಾಣಿಕ್ಯ ರತ್ನದಿಂದ ಹೊಂದಿಸಿದ ಉಂಗುರವನ್ನು ಧರಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ವೃಶ್ಚಿಕ ರಾಶಿ ಭವಿಷ್ಯ

ಧನು

ಏಳನೇ ಮನೆಯಲ್ಲಿನ ಸೂರ್ಯ ದೇವ ಈ ಸಂಚಾರದ ಸಮಯದಲ್ಲಿ ಧನು ರಾಶಿಚಕ್ರದ ಸ್ಥಳೀಯರಿಗೆ ಮಿಶ್ರ ಮತ್ತು ಆಸಕ್ತಿದಾಯಕ ಫಲಿತಾಂಶಗಳನ್ನು ನೀಡುತ್ತದೆ. ಈ ಮನೆಯನ್ನು ಮದುವೆ, ಪಾಲುದಾರಿಕೆ ಮತ್ತು ಸಂಬಂಧಗಳ ಮನೆ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಲಗ್ನದ ಮನೆಯ ಮೇಲೆ ನೇರ ಅಂಶವನ್ನು ಹೊಂದಿರುತ್ತದೆ, ಆದ್ದರಿಂದ ನಿಮ್ಮ ನಾಯಕತ್ವದ ಕೌಶಲ್ಯಗಳು ಹೆಚ್ಚಾಗುತ್ತವೆ. ಇದರಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇದು ನಿಮಗೆ ಸಂತೃಪ್ತಿಯನ್ನುಂಟು ಮಾಡಬಹುದು, ಈ ಕಾರಣದಿಂದಾಗಿ ಯಾವುದೇ ಪಾಲುದಾರಿಕೆಯಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ವಿವಾಹಿತ ಜೀವನ ಮತ್ತು ಸಂಬಂಧಗಳಲ್ಲಿ ಬಿರುಕು ಸಂಭವಿಸಬಹುದು. ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿಮ್ಮ ಅಹಂಕಾರವನ್ನು ಪ್ರಾಬಲ್ಯ ಸಾಧಿಸಲು ಬಿಡಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ನೀವು ಈ ಯಾವುದೇ ರೀತಿಯ ಪ್ರಯಾಣದ ಬಗ್ಗೆ ಯೋಚಿಸುತ್ತಿದ್ದರೆ, ಸೂರ್ಯ ದೇವರು ಮಿಥುನದಲ್ಲಿ ಸಾಗುವವರೆಗೆ ಅದನ್ನು ವಿಳಂಬಗೊಳಿಸಲು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಹಣೆಯ ಮೇಲೆ ಕೇಸರಿ ತಿಲಕವನ್ನು ಇಡುವುದು ನಿಮಗೆ ಶುಭಕರ.

ಮುಂದಿನ ವಾರದ ಧನು ರಾಶಿ ಭವಿಷ್ಯ

ನಿಮ್ಮ ಜಾತಕದಲ್ಲಿ ಯಾವುದೇ ದೋಷವಿದೆಯೇ? ತಿಳಿಯಲು ಈಗಲೇ ಖರೀದಿಸಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ

ಮಕರ

ಸೂರ್ಯ ದೇವ ಮಕರ ರಾಶಿಚಕ್ರದ ಆರನೇ ಮನೆಗೆ ಸಾಗುತ್ತಾರೆ. ಈ ಮನೆಯನ್ನು ಶತ್ರುಗಳ, ಸ್ಪರ್ಧೆಗಳ ಮತ್ತು ರೋಗಗಳ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯಲ್ಲಿ ಸೂರ್ಯನ ಸಂಚಾರವು ನಿಮಗೆ ಸಾಮಾನ್ಯವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಅದ್ಭುತವಾಗಿರುತ್ತದೆ. ನೀವು ದೀರ್ಘಕಾಲದ ವರೆಗೆ ತೊಂದರೆಗೀಡಾದ ಆ ಎಲ್ಲಾ ಕಾಯಿಲೆಗಳು ಮತ್ತು ಸಮಸ್ಯೆಗಳಿಂದ ಸಹ ನೀವು ಮುಕ್ತರಾಗುವಿರಿ. ಈ ಸಮಯದಲ್ಲಿ ಕಾನೂನು ವಿಷಯಗಳಲ್ಲಿ ಕೂಡ ನೀವು ಗೆಲ್ಲುವಿರಿ. ನೀವು ನಿಮ್ಮ ಪ್ರಯತ್ನಗಳಿಂದ ಹೆಚ್ಚು ಸಮರ್ಪಿತರಾಗಿರುತ್ತೀರಿ. ಇದರಿಂದ ಇದ್ದಕ್ಕಿದ್ದಂತೆ ನೀವು ಲಾಭವನ್ನು ಪಡೆಯಬಹುದು. ಯಾವುದೇ ರೀತಿಯ ಲೋನ್ ಅಥವಾ ಸಾಲವನ್ನು ಮರುಪಾವತಿಸಲು ಸಹ ಈ ಸಂಚಾರವು ಅನುಕೂಲಕರವಾಗಿರುತ್ತದೆ. ವೃತ್ತಿಪರ ಜೀವನದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ.

ಪರಿಹಾರ - ನಿಮ್ಮ ತಂದೆ ಅಥವಾ ತಂದೆಯಂತಹ ಜನರ ಆಶೀರ್ವಾದ ಪಡೆಯುವುದು ನಿಯಂಗೆ ಶುಭವಾಗಿರುತ್ತದೆ

ಮುಂದಿನ ವಾರದ ಮಕರ ರಾಶಿ ಭವಿಷ್ಯ

ಕುಂಭ

ಸೂರ್ಯ ದೇವ ಕುಂಭ ರಾಶಿಚಕ್ರದ ಮದುವೆ ಮತ್ತು ಪಾಲುದಾರಿಕೆ ಮನೆಯಾದ ಏಳನೇ ಮನೆಯ ಮಾಲೀಕ, ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಪ್ರೀತಿ, ಶಿಕ್ಷಣ ಮತ್ತು ಬುದ್ಧಿಯ ಐದನೇ ಮನೆಗೆ ಸಂಚರಿಸುತ್ತಿದೆ. ಈ ಸಮಯದಲ್ಲಿ ನಿಮ್ಮ ಕಠೋರ ಮತ್ತು ಹಠಮಾರಿ ನಡವಳಿಕೆಯಿಂದಾಗಿ ಪ್ರೀತಿ ಮತ್ತು ಸಂಬಂಧದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಂಚಾರವು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲಾಭದಾಯಕವಾಗಿರುತ್ತದೆ. ಏಕೆಂದರೆ ಇದು ವಿಷಯವನ್ನು ಮೂಲತಃ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ರಾಶಿಚಕ್ರದ ಸ್ಥಳೀಯರ ಮಕ್ಕಳು ಸ್ವಲ್ಪ ಕಿರಿಕಿರಿ ಮತ್ತು ಕೋಪದಿಂದಿರುತ್ತಾರೆ, ಈ ಕಾರಣದಿಂದಾಗಿ ಪೋಷಕರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ಮನೆಯ ವಾತಾವರವನವು ಸಹ ಹದಗೆಡಬಹುದು. ಆದಾಗ್ಯೂ ಈ ಸಂಚಾರವು ನಿಮಗೆ ಲಾಭವನ್ನು ನೀಡಬಹುದು. ನೀವು ಯಾವುದೇ ರೀತಿಯ ಸಂಶೋಧನೆಯ ಕೆಲಸದಲ್ಲಿ ತೊಡಗಿದ್ದರೆ ಅಥವಾ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಆರಂಭಿಸಬಹುದು.

ಪರಿಹಾರ - ಭಾನುವಾರದಂದು ತಾಮ್ರದ ದಾನ ಮಾಡುವುದು ನಿಮಗೆ ತುಂಬಾ ಪ್ರಯೋಜನವಾಗುತ್ತದೆ

ಮುಂದಿನ ವಾರದ ಕುಂಭ ರಾಶಿ ಭವಿಷ್ಯ

ಮೀನ

ಮೀನಾ ರಾಶಿಚಕ್ರದ ಸ್ಥಳೀಯರು ತಮ್ಮ ಹೃದಯದಲ್ಲಿ ಸ್ವಲ್ಪ ಅನುಭವಿಸಬಹುದು. ಆತ್ಮದ ಅಂಶವಾದ ಗ್ರಹವು ನಿಮ್ಮ (ನಾಲ್ಕನೇ) ದುರ್ಬಲ ಮನೆಯಲ್ಲಿರುವುದು ಇದಕ್ಕೆ ಕಾರಣ. ನಾಲ್ಕನೇ ಮನೆಯನ್ನು ಆರಾಮ, ತಾಯಿ ಮತ್ತು ಐಷಾರಾಮಿಯ ಮನೆಯೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಚಿಂತೆಕ್ಕೊಳಗಾಗಬಹುದು. ಮನೆ ಅಥವಾ ಕಚೇರಿಯಲ್ಲಿ ನವೀಕರಣದ ಕಾರ್ಯದಲ್ಲಿ ನಿಮ್ಮ ಹೆಚ್ಚಿನ ಸಮಯ ಕಳೆಯಬಹುದು. ಸೂರ್ಯನು ನಿರ್ಣಯ ಮತ್ತು ಅಧಿಪತ್ಯವನ್ನು ಸೂಚಿಸುತ್ತದೆ ಮತ್ತು ವರ್ಷದ ಈ ಸಮಯದಲ್ಲಿ ಸೂರ್ಯ ದೇವ ಬಲವಾದ ಸ್ಥಾನದಲ್ಲಿರುವುದಿಲ್ಲ, ಇದರ ಪರಿಣಾಮವಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬವಾಗಬಹುದು. ಇದು ನಷ್ಟಕ್ಕೆ ಕಾರಣವಾಗಬಹುದು. ಇದರಿಂದ ಅನಗತ್ಯ ಒತ್ತಡ ಮತ್ತು ಅನಿಶ್ಚಿತತೆ ಉಂಟಾಗಬಹುದು. ಆದರೆ ಈ ಸಾರಿಗೆ ನೀವು ನಿಮ್ಮ ಆರಾಮ ವಲಯದಿಂದ ಹೊರಬರಲು ಮತ್ತು ನಿಮ್ಮನ್ನು ಹೆಚ್ಚು ಕೆಲಸ ಆಧಾರಿತವಾಗಿಸಲು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಇದಲ್ಲದೆ ವೃತ್ತಿಪರ ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನೀವು ಅದ್ಭುತ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ನೀವು ನಿಮ್ಮ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲುಈ ಸಮಯದಲ್ಲಿ ನೀವು ಯೋಗ, ಧ್ಯಾನ ಇತ್ಯಾದಿಗಳನ್ನು ಆಶ್ರಯಿಸಬೇಕು. ಇದಲ್ಲದೆ, ನೀವು 7-8 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಮಾಡುವ ಮೂಲಕ ಮಾನಸಿಕ ಒತ್ತಡಗಳನ್ನು ತಪ್ಪಿಸಬಹುದು.

ಪರಿಹಾರ - ಸಂಚಾರದ ಈ ಸಮಯದಲ್ಲಿ ಗುರು ಮಂತ್ರವನ್ನು ಜಪಿಸುವುದು ನಿಮಗೆ ಬಹಳ ಶುಭವಾಗಿರುತ್ತದೆ.

ಮುಂದಿನ ವಾರದ ಮೀನಾ ರಾಶಿ ಭವಿಷ್ಯ

ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್

राशिफल और ज्योतिष 2020

Talk to Astrologer Chat with Astrologer