ವಾರ್ಷಿಕ ರಾಶಿ ಭವಿಷ್ಯ 2022 - Yearly Horoscope 2022 in Kannada
ರಾಶಿ ಭವಿಷ್ಯ 2022 ರಲ್ಲಿ ವೈದಿಕ ಜ್ಯೋತಿಷ್ಯವನ್ನು ಆಧರಿಸಿದ ಎಲ್ಲಾ 12 ರಾಶಿಗಳ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಪುಟ್ಟ ಮಾಹಿತಿಗಳನ್ನು ನೀವು ಪಡೆಯುತ್ತೀರಿ. ಇದರಲ್ಲಿ ವರ್ಷ 2022 ರ ವಾರ್ಷಿಕ ಭವಿಷ್ಯವಾಣಿಯನ್ನು ಒದಗಿಸಲಾಗಿದೆ, ಇದರ ಸಹಾಯದಿಂದ ಮುಂಬರುವ ಸಮಯವನ್ನು ನೀವು ಇನ್ನಷ್ಟು ಉತ್ತಮಗೊಳಿಸುವ ಮೂಲಕ ಪ್ರತಿಯೊಂದು ಪ್ರತಿಕೂಲ ಪರಿಸ್ಥಿತಿಗಾಗಿ ನಿಮ್ಮನ್ನು ಮುಂಚಿತವಾಗಿ ಸಿದ್ಧಪಡಿಸಲು ನೀವು ಸಹಾಯ ಪಡೆಯಲಿದ್ದೀರಿ. ಆಸ್ಟ್ರೋಸೇಜ್ ನ ಅನೇಕ ಹಿರಿಯ ಜ್ಯೋತಿಷಿಗಳ ಮೂಲಕ ಗ್ರಹಗಳು - ನಕ್ಷತ್ರಪುಂಜಗಳ ಸರಿಯಾದ ಲೆಕ್ಕಹಾಕಿ, ಈ ಭವಿಷ್ಯ ಫಲಿತಾಂಶವನ್ನು ನಿಮಗಾಗಿ ಸಿದ್ಧಪಡಿಸಲಾಗಿದೆ. ಇದರ ಮೂಲಕ ವ್ಯಾಪಾರ, ಉದ್ಯೋಗ, ಹಣ, ಅರೋಗ್ಯ, ಶಿಕ್ಷಣ ಮತ್ತು ಕೌಟುಂಬಿಕ ಜೀವನದ ದೃಷ್ಟಿಕೋನದಿಂದ ಮುಂಬರುವ ವರ್ಷ ನಿಮಗಾಗಿ ಹೇಗಿರುತ್ತದೆ ಎಂಬುದನ್ನು ನೀವು ತಿಳಿಯಬಹುದು.
ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮಸ್ಯೆಯಿದ್ದರೆ ಈಗಲೇ ನಮ್ಮ ಪರಿಣತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ
ಇದಲ್ಲದೆ ನಮ್ಮ ಈ ವಿಶೇಷ ವಾರ್ಷಿಕ ರಾಶಿ ಭವಿಷ್ಯ 2022 ನಿಂದ ನಿಮ್ಮ ಕುಟುಂಬ ಜೀವನ, ವೈವಾಹಿಕ ಜೀವನ ಮತ್ತು ಪ್ರೀತಿಯ ಜೀವನದ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯುತ್ತೀರಿ. ಇಷ್ಟೇ ಅಲ್ಲದೆ, ನಾವು ನಮ್ಮ ಈ ರಾಶಿ ಭವಿಷ್ಯದಲ್ಲಿ ಪ್ರತಿಯೊಂದು ರಾಶಿಚಕ್ರದ ಸ್ಥಳೀಯರು ತಮ್ಮ ಹೊಸ ವರ್ಷವನ್ನು ಯಶಸ್ವಿಗೊಳಿಸಲು ರಾಶಿಚಕ್ರದ ಪ್ರಕಾರ ಕೆಲವು ಪ್ರಯೋಜನಕಾರಿ ಪರಿಹಾರಗಳನ್ನು ಸಹ ತಿಳಿಸುತ್ತೇವೆ. ಇದನ್ನು ಅಳವಡಿಸಿಕೊಂಡು ನಿವು ಭವಿಷ್ಯದಲ್ಲಿ ಬರಲಾಗುವ ನಿಮ್ಮ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಬಹುದು.
Read Rashi Bhavishya 2023 here
ರಾಶಿ ಭವಿಷ್ಯ 2022 ರ ಪ್ರಕಾರ, ಮುಂಬರುವ ವರ್ಷ 2022 ಎಲ್ಲಾ 12 ರಾಶಿಗಳ ಜೀವನದಲ್ಲಿ ಅತ್ಯಂತ ವಿಶೇಷ ಮತ್ತು ಪ್ರಮುಖವಾದ ಬದಲಾವಣೆಯನ್ನು ತರುತ್ತದೆ, ಇದರ ಪರಿಣಾಮವು ಖಂಡಿತವಾಗಿಯೂ ನಿಮ್ಮ ಜೀವನದ ಬಹುತೇಕ ಕ್ಷೇತ್ರಗಳ ಮೇಲೆ ಬೀರುತ್ತದೆ.
ಮೇಷ ರಾಶಿ ಭವಿಷ್ಯ 2022
ಮೇಷ ರಾಶಿ ಭವಿಷ್ಯ 2022 ರ ಪ್ರಕಾರ, ಮಂಗಳ ಗ್ರಹವು ತಿಂಗಳ ದ್ವಿತೀಯಾರ್ಧ ಅಂದರೆ 16 ರಂದು ಧನು ರಾಶಿಗೆ ಪ್ರವೇಶಿಸುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಮಂಗಳ ಗ್ರಹದ ಪರಿಣಾಮವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತದೆ. ಇದರೊಂದಿಗೆ ಈ ಸಂಚಾರದ ಪರಿಣಾಮವು ಮೇಷ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಇದಲ್ಲದೆ 13 ಏಪ್ರಿಲ್ ರಂದು ಗುರು ಗ್ರಹದ ಸಂಚಾರವು ಸಹ ತನ್ನದೇ ರಾಶಿಯಲ್ಲಿ ಅಂದರೆ ಮೀನ ರಾಶಿಯಲ್ಲಿರುತ್ತದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಪಾರ ಯಶಸ್ಸು ಪಡೆಯುತ್ತಾರೆ. ಕರ್ಮಫಲವನ್ನು ನೀಡುವ ಶನಿ ದೇವ ಇಡೀ ವರ್ಷ ನಿಮ್ಮ ಹತ್ತನೇ ಮನೆಯಲ್ಲಿರುತ್ತಾರೆ. ಕರ್ಮದ ಫಲವನ್ನು ನೀಡುವ ಶನಿ ದೇವ ಈ ವರ್ಷದ ಹೆಚ್ಚಿನ ಭಾಗದಲ್ಲಿ ನಿಮ್ಮ ಹತ್ತನೇ ಮನೆಯಲ್ಲಿ ಇರುತ್ತಾರೆ. ಆದ್ದರಿಂದ ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯಲು ನೀವು ಮೊದಲಿಗಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ.
ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರ ಆರಂಭವು ಈ ರಾಶಿಚಕ್ರದ ಪ್ರೇಮಿಗಳ ಜೀವನದಲ್ಲಿ ಕೆಲವು ಸವಾಲುಗಳನ್ನು ತೋರಿಸುತ್ತಿದೆ. ಹಾಗೆಯೇ, 2022 ವರ್ಷದ ಆರಂಭದಿಂದ ಮಾರ್ಚ್ ವರೆಗೆ ಶನಿ ಮತ್ತು ಬುಧದ ಸಂಯೋಜನೆಯಿಂದಾಗಿ ನಿಮಗೆ ಕೆಲವು ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳಾಗುವ ನಿರೀಕ್ಷೆಯಿದೆ. ಇದಲ್ಲದೆ ಮೇ ಮಧ್ಯದಿಂದ ಆಗಸ್ಟ್ ವರೆಗೆ ಮೀನ ರಾಶಿಯಲ್ಲಿ ಮಂಗಳ ದೇವರ ಸಂಚಾರದಿಂದಾಗಿ, ನೀವು ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಬಳಲುತ್ತಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದತ್ತ ವಿಶೇಷ ಕಾಳಜಿ ವಹಿಸುವ ಮೂಲಕ, ನಿಮ್ಮ ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸಬೇಕು. ಆಗಸ್ಟ್ ತಿಂಗಳಲ್ಲಿ ಮಂಗಳ ದೇವನ ದೃಷ್ಟಿಯು ನಿಮ್ಮ ಕೌಟುಂಬಿಕ ಜೀವನದಲ್ಲಿ ಅನೇಕ ರೀತಿಯ ಏರಿಳಿತಳಗನ್ನು ಸೃಷ್ಟಿಸುತ್ತದೆ. ಮಂಗಳ ದೇವ 10 ಆಗಸ್ಟ್ ವರೆಗೆ ತನ್ನದೇ ರಾಶಿಯಲ್ಲಿರುತ್ತಾರೆ ಮತ್ತು ನಾಲ್ಕನೇ ಮನೆಯ ಮೇಲೆ ಅವರ ದೃಷ್ಟಿಯೂ ಇರುತ್ತದೆ, ಮತ್ತು ಅದರ ನಂತರ ಅವರು ಎರಡನೇ ಮನೆಗೆ ಸಾಗುತ್ತಾರೆ, ಇದರ ವಿಶೇಷ ಪರಿಣಾಮವನ್ನು ನಿಮ್ಮ ಕುಟುಂಬ ಜೀವನದ ಮೇಲೆ ಕಾಣಲಾಗುತ್ತದೆ.
ಮೇಷ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – 2022 ಮೇಷ ರಾಶಿ ಭವಿಷ್ಯ
ವೃಷಭ ರಾಶಿ ಭವಿಷ್ಯ 2022
ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ಜೀವನದ ವಿವಿಧ ಅಂಶಗಳಲ್ಲಿ ಈ ವರ್ಷ ನೀವು ಸಾಮಾನ್ಯ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಆರಂಭದ ತಿಂಗಳ ಮಧ್ಯೆ ಅಂದರೆ 16 ಜನವರಿ ರಂದು ಧನು ರಾಶಿಯಲ್ಲಿ ಮಂಗಳ ದೇವರ ಸಂಚಾರವು, ನಿಮಗೆ ಅದೃಷ್ಟದ ಬೆಂಬಲವನ್ನು ನೀಡಲಿದೆ. ಇದರಿಂದಾಗಿ ನಿಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಈ ವರ್ಷ ವೃತ್ತಿ ಜೀವನದ ಕ್ಷೇತ್ರದಲ್ಲೂ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಪ್ರೊಫೆಷನಲ್ ಜೀವನದಲ್ಲೂ
ನೀವು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದಲ್ಲದೆ ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಶನಿ ದೇವ ನೆಲೆಗೊಂಡಿರುವುದು, ಆದಾಯದ ಅನೇಕ ಮೂಲಗಳನ್ನು ಉಂಟುಮಾಡಲು ನಿಮಗೆ ಸಾಹಯ ಮಾಡುತ್ತದೆ. ವಿಶೇಷವಾಗಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅನೇಕ ಗ್ರಹಗಳ ಬದಲಾವಣೆಯು, ಈ ಸಮಯದಲ್ಲಿ ನೀವು ಹಣ ಮತ್ತು ಸಂಪತ್ತನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ ಎಂದು ತೋರಿಸುತ್ತಿದೆ.
ಹೇಗಾದರೂ, ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ನಡುವೆ ಹಣಕಾಸಿಗೆ ಸಂಬಂಧಿಸಿದ ಯಾವುದೇ ಏರಿಳಿತಗಳಿಂದಾಗಿ ನೀವು ಕೆಲವು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಮೀನ ರಾಶಿಯಲ್ಲಿ ಗುರುವಿನ ಸಂಚಾರವಾಗುತ್ತದೆ, ಇದು ನಿಮ್ಮ ಹನ್ನೊಂದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ನೀವು ನಿಮ್ಮ ಸೌಕರ್ಯಗಳು ಮತ್ತು ಆಸೆಗಳ ಮೇಲೆ ಮುಕ್ತವಾಗಿ ಖರ್ಚು ಮಾಡುತ್ತೀರಿ. ಇದಲ್ಲದೆ ಈ ವರ್ಷ ವೃಷಭ ರಾಶಿಚಕ್ರದ ಸ್ಥಳೀಯರು ತಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತಾರೆ. ವರ್ಷ 2022 ರ ಅಂತ್ಯದ ಮೂರು ತಿಂಗಳುಗಳು ಅಂದರೆ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ನಿಮ ಮಕ್ಕಳಿಗೆ ತುಂಬಾ ಅನುಕೂಲಕರವಾಗಿರಲಿವೆ.
ವೃಷಭ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ವೃಷಭ ರಾಶಿ ಭವಿಷ್ಯ 2022
ಮಿಥುನ ರಾಶಿ ಭವಿಷ್ಯ 2022
ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಮಿಥುನ ರಾಶಿಚಕ್ರದ ಜನರು ತಮ್ಮ ಜೀವನದಲ್ಲಿ ಅನೇಕ ಸವಾಲುಗಳೊಂದಿಗೆ, ಅನೇಕ ಉತ್ತಮ ಅವಕಾಶಗಳನ್ನು ಕೂಡ ಪಡೆಯಲಿದ್ದಾರೆ ಎಂದು ಗ್ರಹಗಳ ಸ್ಥಾನವು ತೋರಿಸುತ್ತಿದೆ. ಈ ವರ್ಷದ ಆರಂಭದಲ್ಲಿ ಜನವರಿ ರಿಂದ ಮಾರ್ಚ್ ವರೆಗೆ ಶನಿ ದೇವ ನಿಮ್ಮ ರಾಶಿಯಲ್ಲಿ ತನ್ನದೇ ಎಂಟನೇ ಮನೆಯಲ್ಲಿರುತ್ತಾರೆ. ಇದರಿಂದಾಗಿ ನೀವು ಕೆಲವು ಆರ್ಥಿಕ ನಷ್ಟದೊಂದಿಗೆ ಅನೇಕ ಅರೋಗ್ಯ ಸಂಬಂಧಿತ ಸಮಸ್ಯೆಗಳು ಮತ್ತು ಕಷ್ಟಗಳನ್ನು ಎದುರಿಸಬೇಕಾಗಬಹುದು. ಮಿಥುನ ರಾಶಿಚಕ್ರದ ಜನರಿಗೆ ಇದು ಪರೀಕ್ಷಾ ಸಮಯವೆಂದು ಸಾಬೀತಾಗುತ್ತದೆ. ಇದಲ್ಲದೆ ಮಧ್ಯ ಫೆಬ್ರವರಿ (17 ಫೆಬ್ರವರಿ) ರಿಂದ ಏಪ್ರಿಲ್ ವರೆಗೆ, ನೀವು ಆಮ್ಲೀಯತೆ, ಕೀಲುನೋವು, ಶೀತ - ಕೆಮ್ಮು ಇತ್ಯಾದಿಗಳಂತಹ ಅರೋಗ್ಯ ಸಮಸ್ಯೆಗಳಿಂದಲೂ ಬಳಲಬಹುದು.
ಆದಾಗ್ಯೂ, ಏಪ್ರಿಲ್ ಮಧ್ಯದ ನಂತರ, ಹನ್ನೊಂದನೇ ಮನೆಯಲ್ಲಿ ರಾಹುವಿನ ಸಂಚಾರದಿಂದಾಗಿ, ಮಿಥುನ ರಾಶಿಚಕ್ರದ ಜನರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಇದರ ನಂತರ ಏಪ್ರಿಲ್ ರಿಂದ ಜೂಲೈ ನಡುವೆ ಮೀನ ರಾಶಿಯಲ್ಲಿ ಗುರು ಗ್ರಹದ ಸಂಚಾರವಾದಾಗ, ಈ ಸಮಯವು ವಿದ್ಯಾರ್ಥಿಗಳಿಗೆ ಅತ್ಯಂತ ಅದೃಷ್ಟಶಾಲಿಯಾಗಿರುತ್ತದೆ. ಏಕೆಂದರೆ ಈ ಸಂಸ್ಮಯದಲ್ಲಿ ಮಿಥುನ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. 27 ಏಪ್ರಿಲ್ ನಂತರ ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಶನಿ ದೇವರ ಸ್ಥಳಾಂತರವು, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಜನರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎಂದು ಸೂಚಿಸುತ್ತಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಉದ್ಯೋಗವನ್ನು ಹುಡುಕುತ್ತಿರುವ ಜನರು ಮೇ ರಿಂದ ಆಗಸ್ಟ್ ತಿಂಗಳ ನಡುವೆ ಉತ್ತಮ ಫಲಿತಾಂಶಗಳನ್ನುಪಡೆಯುತ್ತಾರೆ. ಏಕೆಂದರೆ ಈ ಸಮಯದಲ್ಲಿ ಮಂಗಳ ದೇವ ತನ್ನ ಸಂಚಾರದ ಮೂಲಕ ನಿಮ್ಮ ರಾಶಿಚಕ್ರದ ಹತ್ತನೇ, ಹನ್ನೊಂದನೇ ಮತ್ತು ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾರೆ. ಇದರಿಂದಾಗಿ ನೀವು ಅನೇಕ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ.
ಮೀನ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ಮಿಥುನ ರಾಶಿ ಬಹವಿಷ್ಯಾ 2022
ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ ? ತಿಳಿಯಲು ಈಗಲೇ ಖರೀದಿಸಿ ಬೃಹತ್ ಕುಂಡಲಿ
ಕರ್ಕ ರಾಶಿ ಭವಿಷ್ಯ 2022
ಕರ್ಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಆರಂಭದಲ್ಲಿ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿ ನೆಲೆಗೊಂಡಿರುವ ಶನಿ ದೇವರ ಪರಿಣಾಮವು, ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಜನಿಸುತ್ತದೆ. ಆದರೆ 16 ಜನವರಿ ರಂದು ಧನು ರಾಶಿಯಲ್ಲಿ ಮಂಗಳ ದೇವರ ಸಂಚಾರವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಸಮಸ್ಯೆಗಳನ್ನು ತಕ್ಷಣವೇ ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಆದಾಗ್ಯೂ, ವಿಶ್ರಾಂತಿ ಮತ್ತು ಸಂತೋಷದ ಮನೆಯಲ್ಲಿ ಮಂಗಳನ ಉಪಸ್ಥಿತಿಯು, ನಿಮ್ಮ ಆಯಿಗೆ ಅನೇಕ ಅರೋಗ್ಯ ಸಮಸ್ಯೆಗಳನ್ನು ನೀಡುವ ಕೆಲಸ ಮಾಡುತ್ತದೆ. ಆದ್ದರಿಂದ ಅವರ ಬಗ್ಗೆ ಕಾಳಜಿ ವಹಿಸುವ ಮೂಲಕ, ಅವರ ಆಹಾರ ಪದ್ಧತಿಯ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಇದರ ನಂತರ ಏಪ್ರಿಲ್ ತಿಂಗಳಲ್ಲಿ ಇತರ ಅನೇಕ ಪ್ರಮುಖ ಗ್ರಹಗಳ ಸಂಚಾರ ಮತ್ತು ಬದಲಾವಣೆಯಾಗುತ್ತದೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಇದರೊಂದಿಗೆ, ಈ ವರ್ಷ ಏಪ್ರಿಲ್ ಅಂತ್ಯದಿಂದ ಮಧ್ಯ ಜೂಲೈ ವರೆಗೆ, ಕುಂಭ ರಾಶಿಯಲ್ಲಿ ಶನಿ ಸಂಚಾರದಿಂದಾಗಿ, ನಿಮ್ಮ ಆರ್ಥಿಕ ಜೀವನವು ಮುಖ್ಯವಾಗಿ ಪ್ರಭಾವಿತವಾಗುತ್ತದೆ. ಆದಾಗ್ಯೂ, ಇದರ ನಂತರ ಏಪ್ರಿಲ್ ನಿಂದ ಆಗಸ್ಟ್ ವರೆಗಿನ ಸಮಯವು ನಿಮಗೆ ಪ್ರಯೋಜನಕಾರಿಯಾಗಲಿದೆ. 17 ಏಪ್ರಿಲ್ ರಂದು ಗುರು ಗ್ರಹವು ಮೀನ ರಾಶಿಯಲ್ಲಿ ಒಂಬತ್ತನೇ ಸಾಗುತ್ತದೆ . ಇದರ ಪರಿಣಾಮವಾಗಿ ನಿಮ್ಮ ಜೀವನದಲ್ಲಿ ಧನಾತ್ಮಕತೆ ಉಂಟಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿರುವ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ನಿಮಗೆ ಸಾಧ್ಯವಾಗುತ್ತದೆ. ಇದರ ನಂತರ ಮೇಷ ರಾಶಿಯಲ್ಲಿ ರಾಹುವಿನ ಸಂಚಾರವು, ನಿಮಗೆ ಅನೇಕ ಉದ್ಯೋಗವಕಾಶಗಳನ್ನು ನೀಡುತ್ತದೆ. ನೆರಳಿಗ ಗ್ರಹ ರಾಹುವಿನ ಶುಭ ಸ್ಥಾನವು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಸೆಪ್ಟೆಂಬರ್ ವರೆಗೆ ಅದೃಷ್ಟದ ಬೆಂಬಲವನ್ನು ನೀಡುತ್ತದೆ. ಜೂನ್ - ಜೂಲೈ ತಿಂಗಳ ನಡುವೆ ಮಂಗಳ ಗ್ರಹವು ಮೇಷ ರಾಶಿಯಲ್ಲಿ ಪ್ರವೇಶಿಸುವ ಮೂಲಕ, ನಿಮ್ಮ ರಾಶಿಚಕ್ರದ ಮೇಲೆ ಸಂಪೂರ್ಣ ದೃಷ್ಟಿ ನೀಡುತ್ತದೆ. ಪರಿಣಾಮವಾಗಿ ವೈವಾಹಿಕ ಜನರು ತಮ್ಮ ವಿವಾಹಿತ ಜೀವನದಲ್ಲಿ ಪ್ರತಿಯೊಂದು ರೀತಿಯ ಪ್ರತಿಕೂಲ ಪರಿಸ್ಥಿತಿಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.
ಕರ್ಕ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ಕರ್ಕ ರಾಶಿ ಭವಿಷ್ಯ 2022
ಸಿಂಹ ರಾಶಿ ಭವಿಷ್ಯ 2022
ಸಿಂಹ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಮಿಶ್ರವಾಗಿರುತ್ತದೆ. ವಿಶೇಷವಾಗಿ ಆರಂಭದ ಸಮಯ ಅಂದರೆ ಜನವರಿ ತಿಂಗಳಲ್ಲಿ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಗುರುವು ನೆಲೆಗೊಂಡಿರುವುದು, ನಿಮ್ಮ ಆರ್ಥಿಕ ಜೀವನದಲ್ಲಿ ಸಕಾರಾತ್ಮತೆಯನ್ನು ತರುವ ಕೆಲಸ ಮಾಡುತ್ತದೆ. ಇದರೊಂದಿಗೆ ಜನವರಿ ಅಂತ್ಯದಿಂದ ಮಾರ್ಚ್ ವರೆಗೆ ಮಂಗಳ ದೇವರ ಸಂಹಾರವು ನಿಮ್ಮ ಮಕ್ಕಳ ಆರೋಗ್ಯದಲ್ಲಿ ಸುಧಾರಣೆಯನ್ನು ತರುವ ಕೆಲಸ ಮಾಡುತ್ತದೆ. ಇದರಿಂದಾಗಿ ನೀವು ಅವರೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವುದನ್ನು ಕಾಣಬಹುದು. 26 ಜನವರಿ ರಂದು ಮಂಗಳ ದೇವ ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶಿಸುತ್ತಾರೆ, ಜಾಕದಲ್ಲಿ ಇದು ಅದೃಷ್ಟದ ಮನೆ. ಅಂತಹ ಪರಿಸ್ಥಿತಿಯಲ್ಲಿ ಕೆಲಸದ ಸ್ಥಳದಲ್ಲಿ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ, ಇದರಿಂದಾಗಿ ನೀವು ಅಪಾರ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ.
ಆದಾಗ್ಯೂ, ಈ ವರ್ಷ ಸಿಂಹ ರಾಶಿಚಕ್ರದ ಸ್ಥಳೀಯರು ವಿಶೇಷವಾಗಿ ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ಅನೇಕ ಗ್ರಹಗಳ ಸಂಯೋಜನೆ ಮತ್ತು ಬದಲಾವಣೆಯು ಪ್ರತಿಕೂಲ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತವೆ.
ವರ್ಷ 2022 ರ ಭವಿಷ್ಯವಾಣಿಯನ್ನು ನೋಡಿದರೆ, ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಏಪ್ರಿಲ್ ತಿಂಗಳು ಕೆಲವು ಅಪ್ರಕಟಿತ ಘಟನೆಗಳಿಂದ ತುಂಬಿರುತ್ತದೆ. ಇದರೊಂದಿಗೆ 12 ಏಪ್ರಿಲ್ ರಂದು ಮೇಷ ರಾಶಿಯಲ್ಲಿ ನೆರಳಿನ ಗ್ರಹ ರಾಹುವಿನ ಸಂಚಾರವು ನಿಮ್ಮ ಒಂಬತ್ತನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮಗೆ ಕೆಲವು ಅರೋಗ್ಯ ಸಂಬಂಧಿತ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಉತ್ತಮ ಆಹಾರವನ್ನು ಸೇವಿಸಿ. 16 ಏಪ್ರಿಲ್ ರಿಂದ ಆಗಸ್ಟ್ ವರೆಗೆ, ಗುರು ಗ್ರಹವು ಮೀನ ರಾಶಿಯಲ್ಲಿ ಪ್ರವೇಶಿಸುವ ಮೂಲಕ ನಿಮ್ಮ ಐದನೇ ಮನೆಯ ಮೇಲೆ ದೃಷ್ಟಿ ಹಾಕುತ್ತದೆ. ಪರಿಣಾಮವಾಗಿ, ಜೀವನದಲ್ಲಿ ನಿಮಗೆ ಅದೃಷ್ಟದ ಬೆಂಬಲ ಸಿಗುತ್ತದೆ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳು ಪ್ರತಿಯೊಂದು ಪರೀಕ್ಷೆಯಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಉಂಟಾಗುತ್ತದೆ.
ಇದರ ನಂತರ 22 ಏಪ್ರಿಲ್ ನಂತರ, ಮೇಷ ರಾಶಿಯಲ್ಲಿ ರಾಹುವಿನ ಉಪಸ್ಥಿತಿಯು ಕೆಲಸದ ಸ್ಥಳದಲ್ಲಿ ನಿಮ್ಮ ಬಾಸ್ ಮತ್ತು ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ಸಹಾಯಕರವೆಂದು ಸಾಬೀತಾಗುತ್ತದೆ. ಇದು ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುವುದರೊಂದಿಗೆ, ನೀವು ಬಡ್ತಿ ಮತ್ತು ಸಂಬಳದ ಹೆಚ್ಚಳವನ್ನು ಪಡೆಯುವ ಸಾಧ್ಯತೆಯೂ ಇದೆ. ನೀವು ವಿವಾಹಿತರಾಗಿದ್ದರೆ ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗೆ ನಿಮ್ಮ ಯಾವುದೇ ವಿವಾದವನ್ನು ಹೊಂದಿದ್ದರೆ, ಏಪ್ರಿಲ್ ರಿಂದ ಸೆಪ್ಟೆಂಬರ್ ನಡುವೆ ನಿಮ್ಮ ನಡುವಿನ ಪ್ರತಿಯೊಂದು ವಿವಾದವನ್ನು ನೀವು ತೊಡೆದುಹಾಕುವ ಮೂಲಕ ಜೀವನ ಸಂಗಾತಿಯೊಂದಿಗೆ ಯಾವುದೇ ಪ್ರವಾಸಕ್ಕೆ ಹೋಗಲು ಯೋಜಿಸಬಹುದು. ಇದನ್ನು ಹೊರತುಪಡಿಸಿ, 10 ಆಗಸ್ಟ್ ರಿಂದ ಅಕ್ಟೋಬರ್ ನಡುವೆ ವೃಷಭ ರಾಶಿಯಲ್ಲಿ ಮಂಗಳ ದೇವರ ಸಂಚಾರವು ನಿಮಗೆ ಅದೃಷ್ಟಶಾಲಿ ಎಂದು ಸಾಬೀತಾಗುತ್ತದೆ. ಇದರಿಂದಾಗಿ ನೀವು ಅಪಾರ ಯಶಸ್ಸು ಪಡೆಯುವಲ್ಲಿ ಸಮರ್ಥರಾಗುವಿರಿ.
ಸಿಂಹ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ಸಿಂಹ ರಾಶಿ ಭವಿಷ್ಯ 2022
ಕನ್ಯಾ ರಾಶಿ ಭವಿಷ್ಯ 2022
ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ, ಜನವರಿ ತಿಂಗಳಲ್ಲಿ ಧನು ರಾಶಿಯಲ್ಲಿ ಮಂಗಳ ದೇವರ ಸಂಚಾರವು, ನಿಮಗೆ ಹಣ ಮತ್ತು ಆರ್ಥಿಕ ಸಮೃದ್ಧಿಯನ್ನು ನೀಡುವ ಕೆಲಸ ಮಾಡುತ್ತದೆ ಮತ್ತು ಇದರಿಂದಾಗಿ ನಿಮ್ಮ ಪ್ರತಿಯೊಂದು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ. ಆದಾಗ್ಯೂ, ಆರೋಗ್ಯದ ದೃಷ್ಟಿಯಿಂದ ಕೆಲವು ಸಮಸ್ಯೆಗಳು ಉದ್ಭವಿಸಬಹುದು, ಏಕೆಂದರೆ ಈ ಸಮಯವು ನಿಮಗೆ ಆರೋಗ್ಯದಲ್ಲಿ ಸ್ವಲ್ಪ ಇಳಿಕೆಯನ್ನು ಸಹ ನೀಡಬಹುದು. ಇದರ ನಂತರ ಏಪ್ರಿಲ್, ಜೂನ್ ಮತ್ತು ಸೆಪ್ಟೆಂಬರ್ ತಿಂಗಳುಗಳು ನಿಮಗೆ ಸ್ವಲ್ಪ ಪ್ರತಿಕೂಲವಾಗಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, 26 ಫೆಬ್ರವರಿ ರಿಂದ ಮಂಗಳ ದೇವ ಮಕರ ರಾಶಿಯಲ್ಲಿ ಸಾಗುವುದು ನಿಮ್ಮ ಐದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದರ ಧನಾತ್ಮಕ ಫಲಿತಾಂಶವನ್ನು ಕನ್ಯಾ ರಾಶಿಚಕ್ರದ ವಿದ್ಯಾರ್ಥಿಗಳು ಪಡೆಯಲಿದ್ದಾರೆ.
ಈ ವರ್ಷ ಮಾರ್ಚ್ ತಿಂಗಳ ಆರಂಭದಲ್ಲಿ ನಾಲ್ಕು ಪ್ರಮುಖ ಗ್ರಹಗಳು: ಶನಿ, ಮಂಗಳ, ಬುಧ ಮತ್ತು ಶುಕ್ರನು ಒಟ್ಟಾಗಿರುವ ಮೂಲಕ “ಚತುರ್ಗ್ರಹ” ಯೋಗವನ್ನು ನಿರ್ಮಿಸುವುದು, ಆದಾಯದ ಹೊಸ ಮೂಲಗಳಿಂದ ಉತ್ತಮ ಲಾಭವನ್ನು ಗಳಿಸುವಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಯಶಸ್ಸನ್ನು ನೀಡುತ್ತದೆ. ಇದರ ನಂತರ ಏಪ್ರಿಲ್ ಅಂತ್ಯದಿಂದ ಜೂಲೈ ಮಧ್ಯದ ವರೆಗೆ ಶನಿ ದೇವ ಪುನಃ ಸ್ಥಾನವನ್ನು ಬದಲಾಯಿಸುವ ಮೂಲಕ ನಿಮ್ಮ ಆರನೇ ಮನೆಯನ್ನು ಸಕ್ರಿಯಗೊಳಿಸುತ್ತಾರೆ. ಇದು ನಿಮ್ಮ ಮತ್ತು ಕುಟುಂಬದ ನಡುವೆ ಕೆಲವು ಭಿನ್ನಾಭಿಪ್ರಾಯಗಳನ್ನು ಉಂಟುಮಾಡಲಿದೆ. ಅಂತಹ ಸಂದರ್ಭದಲ್ಲಿ ಮನೆ - ಕುಟುಂಬದ ಸದಸ್ಯರೊಂದಿಗೆ ಮಾತನಾಡುವಾಗ ಸಭ್ಯರಾಗಿರಿ. ವಿದೇಶಕ್ಕೆ ಹೋಗಿ ಶಿಕ್ಷಣವನ್ನು ಗಳಿಸಲು ಕನಸು ಕಾಣುತ್ತಿರುವ ಜನರು ಸೆಪ್ಟೆಂಬರ್ ರಿಂದ ಡಿಸೆಂಬರ್ ಅಂತ್ಯದಲ್ಲಿ ಹೆಚ್ಚು ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದರೊಂದಿಗೆ ಬುಧ ದೇವ ತುಲಾ ರಾಶಿಯಲ್ಲಿ ಪ್ರವೇಶಿಸುವುದು, ನಿಮ್ಮ ಎರಡನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಅಕ್ಟೋಬರ್ ರಿಂದ ಡಿಸೆಂಬರ್ ವರೆಗೆ ನಿಮ್ಮ ಪ್ರೀತಿ ಸಂಬಂಧಗಳಲ್ಲಿ ಸಕಾರಾತ್ಮಕತೆ ಉಂಟಾಗುತ್ತದೆ. ಇದರಿಂದಾಗಿ ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಬಲವಾದ ಸಂಬಂಧವನ್ನು ನೀವು ಬಹಿರಂಗವಾಗಿ ಆನಂದಿಸುತ್ತಿರುವುದನ್ನು ಕಾಣಲಾಗುತ್ತದೆ
ಕನ್ಯಾ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ಕನ್ಯಾ ರಾಶಿ ಭವಿಷ್ಯ 2022
ತುಲಾ ರಾಶಿ ಭವಿಷ್ಯ 2022
ತುಲಾ ರಾಶಿ ಭವಿಷ್ಯ 2022 ರ ಪ್ರಕಾರ, ತುಲಾ ರಾಶಿಚಕ್ರದ ಸ್ಥಳೀಯರು ಹೊಸ ವರ್ಷ 2022 ರ ರಂಭದಲ್ಲಿ ದೈಹಿಕ, ಮಾನಸಿಕ ಮತ್ತು ವೃತ್ತಿ ಜೀವನಕ್ಕೆ ಸಂಬಂಧಿಸಿದ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಆದರೆ ವ್ಯಾಪಾರ ಮತ್ತು ಕುಟುಂಬದ ಬಗ್ಗೆ ಮಾತನಾಡಿದರೆ, ಪರಿಸ್ಥಿತಿಗಳು ಸ್ವಲ್ಪ ಕಷ್ಟಕರವಾಗಿರಲಿವೆ. ಮಧ್ಯ ಜನವರಿಯಲ್ಲಿ, ಧನು ರಾಶಿಯಲ್ಲಿ ಮಂಗಳ ದೇವರ ಸಂಚಾರವು ಸಹ ಆರ್ಥಿಕ ಜೀವನದಲ್ಲಿ ನಿಮಗೆ ಶುಭ ಫಲವನ್ನು ನೀಡಲಿದೆ. ಇದರ ಪರಿಣಾಮವಾಗಿ ನಿಮ್ಮ ಹಣಕಾಸು ಸಂಗ್ರಹಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದರ ನಂತರ ಮಾರ್ಚ್ ತಿಂಗಳ ಆರಂಭದಲ್ಲಿ ನಿಮ್ಮ ರಾಶಿಯಲ್ಲಿ ಶನಿ, ಮಂಗಳ, ಬುಧ ಮತ್ತು ಶುಕ್ರನ ಸಂಯೋಜನೆಯು ಸಹ ನಿಮ್ಮ ಪ್ರತಿಯೊಂದು ರೀತಿಯ ಆರ್ಥಿಕ ಬಿಕಟ್ಟನ್ನು ನಿವಾರಿಸುತ್ತದೆ ಮತ್ತು ನಿಮ್ಮ ಆದಾಯವನ್ನು ಹೆಚ್ಚಿಸುವ ಸಾಧ್ಯತೆಯೂ ಹೆಚ್ಚಾಗುತ್ತದೆ.
ತುಲಾ ರಾಶಿಚಕ್ರದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಏಪ್ರಿಲ್ ತಿಂಗಳಲ್ಲಿ, ಮೀನ ರಾಶಿಯಲ್ಲಿ ಗುರುವಿನ ಸಂಚಾರವು ತುಲಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಶಿಕ್ಷಣದ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತದೆ. ನಂತರ ಮೇ ರಿಂದ ನವೆಂಬರ್ ನಡುವಿನ ಸಮಯದಲ್ಲಿ ನೀವು ಯಾವುದೇ ವಿದೇಶಿ ಭೂಮಿ, ಉದ್ಯೋಗ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಶುಭ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ. 26 ಫೆಬ್ರವರಿ ರಂದು ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಮಂಗಳನ ಸಂಚಾರವು ಕೂಡ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುವ ಸಂಪೂರ್ಣ ಸಾಧ್ಯತೆ ಇದೆ. ಏಪ್ರಿಲ್ ತಿಂಗಳ ಸಮಯದಲ್ಲಿ ರಾಹುವು ಮೇಷ ರಾಶಿಗೆ ಪ್ರವೇಶಿಸುತ್ತದೆ ಮತ್ತು ಅದು ನಿಮ್ಮ ಏಳನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಪ್ರೀತಿಯ ಸಂಬಂಧದಲ್ಲಿರುವ ಜನರೊಂದಿಗೆ ವಿವಾಹಿತ ಜನರ ಜೀವನದಲ್ಲೂ ಅನೇಕ ದೊಡ್ಡ ಬದಲಾವಣೆಗಳನ್ನು ತರಲಿದೆ. ಮತ್ತೊಂದೆಡೆ ಇನ್ನೂ ಒಂಟಿಯಾಗಿರುವ ಜನರು ವರ್ಷ 2022 ರಲ್ಲಿ ಅಕ್ಟೋಬರ್ ರಿಂದ ನವೆಂಬರ್ ನಡುವೆ ಮದುವೆಯಾಗಲು ಅನೇಕ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ.
ತುಲಾ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ತುಲಾ ರಾಶಿ ಭವಿಷ್ಯ 2022
ವೃಶ್ಚಿಕ ರಾಶಿ ಭವಿಷ್ಯ 2022
ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ, ಹೊಸ ವರ್ಷ 2022 ವೃಶ್ಚಿಕ ರಾಶಿಚಕ್ರದ ಜನರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. 2022 ರ ಆರಂಭದಿಂದ ಏಪ್ರಿಲ್ ವರೆಗೆ ನೀವು ಅನೇಕ ಅನಗತ್ಯ ವೆಚ್ಚಗಳನ್ನು ಎದುರಿಸಬೇಕಾಗುತ್ತದೆ. ನಂತರ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಕುಂಭ ರಾಶಿಯಲ್ಲಿ ಶನಿ ದೇವರ ಸಂಚಾರವು ನಿಮ್ಮ ವೃತ್ತಿಪರ, ಆರ್ಥಿಕ ಜೀವನದೊಂದಿಗೆ ಕುಟುಂಬ ಜೀವಾಳದಲ್ಲೂ ಮಿಶ್ರ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತದೆ. ಇದರ ನಂತರ ಏಪ್ರಿಲ್ ತಿಂಗಳಲ್ಲಿ ಮೀನ ರಾಶಿಯಲ್ಲಿ ಗುರು ಗ್ರಹದ ಸಂಚಾರವು ನಿಮ್ಮ ರಾಶಿಚಕ್ರದ ಐದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ, ಇದರ ಪರಿಣಾಮದಿಂದಾಗಿ, ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ನೀವು ಕೆಲವು ಆರ್ಥಿಕ ಬಿಕ್ಕಟ್ಟುಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಇದರೊಂದಿಗೆ ಇದೇ ತಿಂಗಳು 12 ಏಪ್ರಿಲ್ ರಂದು, ರಾಹುವಿನ ಸ್ಥಳ ಬದಲಾವಣೆಯು ನಿಮ್ಮ ಆರೋಗ್ಯವನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಆದಾಗ್ಯೂ, ಇದರ ಹೊರತಾಗಿಯೂ, ಸಾಕಷ್ಟು ಮಟ್ಟಿಗೆ ನೀವು ಮಾನಸಿಕವಾಗಿ ಒತ್ತಡದಲ್ಲಿರುತ್ತೀರಿ. ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಜೀವನದ ವಿವಿಧ ಕ್ಷೇತ್ರಗಳ ಮೇಲೆ ಬೀರುತ್ತದೆ.
ಈ ವರ್ಷ ಮೇ ರಿಂದ ಸೆಪ್ಟೆಂಬರ್ ನಡುವೆ, ಅನೇಕ ಶುಭ ಗ್ರಹಗಳ ಅನುಕೂಲಕರ ಸ್ಥಿತಿಯಿಂದಾಗಿ ನೀವು ಉತ್ತಮ ಹಣಕಾಸು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ನಂತರ ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ಲಾಭ ಮತ್ತು ಪ್ರಯೋಜನದ ಮನೆಯಲ್ಲಿ ಶುಕ್ರನ ಸಂಚಾರವು, ವಿವಿಧ ಮೂಲಗಳಿಂದ ನಿಮಗೆ ಹಣ ಮತ್ತು ಲಾಭವನ್ನು ನೀಡುತ್ತದೆ. ಇದರ ನಂತರ 13 ಆಗಸ್ಟ್ ರಿಂದ ಅಕ್ಟೋಬರ್ ವರೆಗೆ ಶುಕ್ರ ದೇವ ನಿಮ್ಮ ಒಂಬತ್ತನೇ ಮನೆಗೆ ಗೋಚರಿಸುವುದು, ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವತ್ತ ಸೂಚಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಅವರ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ.
ನಿಮ್ಮ ಪ್ರೀತಿಯ ಜೀವನವನ್ನು ನೋಡಿದರೆ, ಏಪ್ರಿಲ್ ತಿಂಗಳ ಕೊನೆಯಲ್ಲಿ ಕುಂಭ ರಾಶಿಯಲ್ಲಿ ಶನಿಯ ಸಂಕ್ರಮಣವು ಮತ್ತು ನಿಮ್ಮ ನಾಲ್ಕನೇ ಮನೆಯಲ್ಲಿ ಅದು ಕುಳಿತುಕೊಂಡಿರುವುದು, ನಿಮ್ಮ ಮತ್ತು ಪ್ರೀತಿಪಾತ್ರರ ನಡುವೆ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ವಾದ ಮತ್ತು ಜಗಳಕ್ಕೆ ಕಾರಣವಾಗುತ್ತದೆ. ಆದಾಗ್ಯೂ, ಈ ಸಮಯದಲ್ಲಿ ನೀವು ವಿಶೇಷವಾಗಿ ನಿಮ್ಮ ಈ ಸುಂದರವಾದ ಸಂಬಂಧದಲ್ಲಿ ನಂಬಿಕೆ ಇಡುವ ಮೂಲಕ ಪ್ರೇಮಿಯೊಂದಿಗಿನ ಪ್ರತಿಯೊಂದು ವಿವಾದವನ್ನು ತಪ್ಪಿಸುವ ಅಗತ್ಯವಿದೆ. ಇದಲ್ಲದೆ ಸೆಪ್ಟೆಂಬರ್ ರಿಂದ ನವೆಂಬರ್ ನಡುವೆ ಕನ್ಯಾ ರಾಶಿಯಲ್ಲಿ ಶುಕ್ರ ಸಂಚಾರವು, ನಿಮ್ಮ ಹನ್ನೊಂದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಶುಕ್ರ ದೇವ ನಿಮ್ಮ ರಾಶಿಯಲ್ಲಿ ದುರ್ಬಲ ಸ್ಥಿತಿಯಲ್ಲಿರುವ ಮೂಲಕ ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಪರಸ್ಪರ ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುತ್ತಾರೆ ಮತ್ತು ಇದರ ಪರಿಣಾಮವಾಗಿ ನೀವಿಬ್ಬರೂ ಒಟ್ಟಾಗಿ ಪ್ರತಿಯೊಂದು ವಿವಾದವನ್ನು ಪರಿಹರಿಸುವಲ್ಲಿ ಮತ್ತು ಉತ್ತಮ ಸಮಯವನ್ನು ಕಳೆಯುವಲ್ಲಿ ಯಶಸ್ವಿಯಾಗುತ್ತೀರಿ.
ವೃಶ್ಚಿಕ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ವೃಶ್ಚಿಕ ರಾಶಿ ಭವಿಷ್ಯ 2022
ನಿಮ್ಮ ಜಾತಕದಲ್ಲಿ ರಾಜ ಯೋಗವಿದೆಯೇ? ನಿಮ್ಮ ರಾಜ ಯೋಗ ರಿಪೋರ್ಟ್ ಅನ್ನು ತಿಳಿಯಿರಿ
ಧನು ರಾಶಿ ಭವಿಷ್ಯ 2022
ಧನು ರಾಶಿ ಭವಿಷ್ಯ 2022 ರ ಪ್ರಕಾರ, ಧನು ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022, ವಿಶೇಷವಾಗಿ ಆರ್ಥಿಕ ವಿಷಯಗಳಲ್ಲಿ ಅನುಕೂಲಕರವಾಗಿರುತ್ತದೆ. ವರ್ಷ 2022 ರ ಆರಂಭ ಅಂದರೆ ಜನವರಿ ತಿಂಗಳಲ್ಲಿ ನಿಮ್ಮದೇ ರಾಶಿಯಲ್ಲಿ ಮಂಗಳನ ಸಂಚಾರವು, ಹಣಕಾಸಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲಿ ನಿಮಗೆ ಬಲವಾದ ಸ್ಥಿತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಶಿಕ್ಷಣದ ದೃಷ್ಟಿಕೋನನದಿಂದಲೂ, ವರ್ಷ 2022 ರ ಆರಂಭವು ಧನ್ನು ರಾಶಿಚಕ್ರದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ಅದರ ನಂತರ ಫೆಬ್ರವರಿ ರಿಂದ ಜೂನ್ ವರೆಗೆ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ನೀವು ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡರಿಗುವ ವಿದ್ಯಾರ್ಥಿಗಳು ಈ ಸಮಯದಲ್ಲಿ ತಮ್ಮ ನಿರೀಕ್ಷೆಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.
ಆದಾಗ್ಯೂ, ಈ ವರ್ಷದ ಆರಂಭದಲ್ಲಿ ಧನು ರಾಶಿಯಲ್ಲಿ ಮಂಗಳನ ಸಾಗಣೆಯು, ಅನೇಕ ಸ್ಥಳೀಯರಿಗೆ ಮಾನಸಿಕ ಚಿಂತೆ ಮತ್ತು ಒತ್ತಡವನ್ನು ಉಂಟುಮಾಡುತ್ತದೆ. ಇದರೊಂದಿಗೆ ಮಂಗಳ ದೇವ ನಿಮ್ಮ ಏಳನೇ ಮನೆಯ ಮೇಲೆ ದೃಷ್ಟಿ ನೀಡುವುದು ಸಹ, ಕುಟುಂಬ ಜೀವನದಲ್ಲಿ ಕೆಲವು ಭಿನ್ನಾಭಿಪ್ರಾಯಗಳನ್ನು ಉಂಟುಮಾಡಬಹುದು. ನಿಮ್ಮ ವೈವಾಹಿಕ ಜೀವನ ಮತ್ತು ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ, ಜನವರಿ ತಿಂಗಳಲ್ಲಿ ಸೂರ್ಯ ದೇವ ಕರ್ಮದ ಫಲವನ್ನು ನೀಡುವ ಶನಿಯೊಂದಿಗೆ ಮಕರ ರಾಶಿಯಲ್ಲಿ ಸಂಯೋಜಿಸುವುದು, ನಿಮ್ಮ ಮತ್ತು ಸಂಗಾತಿಯ ನಡುವೆ ಅನೇಕ ರೀತಿಯ ಸಮಸ್ಯೆಗಳು ಮತ್ತು ತಪ್ಪು ಗ್ರಹಿಕೆಗಳನ್ನು ಜನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ವಿಶೇಷವಾಗಿ ನಿಮ್ಮ ಪದಗಳನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ.
ಏಪ್ರಿಲ್ ರಿಂದ ಜೂನ್ ನಡುವೆ ಗುರು ಗ್ರಹವು ತನ್ನದೇ ರಾಶಿ ಮೀನದಲ್ಲಿ ಗೋಚರಿಸುವುದು, ಪರಿಸ್ಥಿತಿಗಳಲ್ಲಿ ಕೆಲವು ಬದಲಾವಣೆಗಳನ್ನು ತರುತ್ತದೆ. ಇದರ ಪರಿಣಾಮವಾಗಿ ಜೂನ್ ತಿಂಗಳಿಂದ 20 ಜೂಲೈ ವರೆಗೆ, ನಿಮ್ಮ ವೈವಾಹಿಕ ಜೀವನದಲ್ಲಿ ಅನೇಕ ದೊಡ್ಡ ಸುಧಾರಣೆಗಳಾಗುತ್ತವೆ ಮತ್ತು ನೀವು ವರ್ಷ 2022 ರ ಅಂತ್ಯದಲ್ಲಿ ನಿಮ್ಮ ವೈವಾಹಿಕ ಜೀವನವನ್ನು ಬಹಿರಂಗವಾಗಿ ಆನಂದಿಸುವುದನ್ನು ಕಾಣಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಗುರು ಗ್ರಹವು ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಕುಳಿತಿರುತ್ತದೆ. ನಿಮ್ಮ ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ನವೆಂಬರ್ ನಿಂದ ನಿಮ್ಮ ಜೀವನದಲ್ಲಿ ಉದ್ಯೋಗದ ಹೊಸ ಮೂಲಗಳು ಬಹಿರಂಗಗೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯದ ದೃಷ್ಟಿಕೋನದಿಂದಲೂ, ಜೂನ್ ತಿಂಗಳಿನಲ್ಲಿ ನಿಮ್ಮ ಆರನೇ ಮನೆಯಲ್ಲಿ ಶುಕ್ರನ ಸಂಚಾರವು, ಅಕ್ಟೋಬರ್ ವರೆಗೆ ನಿಮಗೆ ಎಲ್ಲಾ ರೀತಿಯ ದೊಡ್ಡ ಮತ್ತು ಗಂಭೀರ ರೋಗಗಳ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ.
ಧನು ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ಧನು ರಾಶಿ ಭವಿಷ್ಯ 2022
ಮಕರ ರಾಶಿ ಭವಿಷ್ಯ 2022
ಮಕರ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ಮಕರ ರಾಶಿಚಕ್ರದ ಸ್ಥಳೀಯರಿಗೆ ಅನೇಕ ಏರಿಳಿತಗಳಿಂದ ತುಂಬಿರುತ್ತದೆ ಎಂದು ಸಾಬೀತಾಗುತ್ತದೆ. ಈ ವರ್ಷದ ಆರಂಭದಲ್ಲಿ ಶನಿ ಗ್ರಹವು ತನ್ನದೇ ರಾಶಿಯಲ್ಲಿ ಗೋಚರಿಸುವುದು, ನಿಮ್ಮ ವೃತ್ತಿ ಜೀವನ, ಆರ್ಥಿಕ ಕಟ್ಟು ಶಿಕ್ಷಣಕ್ಕೆ ವಿಶೇಷವಾಗಿ ಅನುಕೂಲಕರವಾಗಿರುತ್ತದೆ ಎಂದು ಸಾಬೀತಾಗಲಿದೆ. ಆದಾಗ್ಯೂ, ಏಪ್ರಿಲ್ ತಿಂಗಳಲ್ಲಿ ನಿಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ನೀವು ಎದುರಿಸಬೇಕಾಗುತ್ತದೆ.
ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಮಂಗಳನ ಸಂಚಾರವು, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಮಗೆ ನೀಡುತ್ತದೆ. ಇದರಿಂದಾಗಿ ನಿಮ್ಮ ಹಣವನ್ನು ಸಂಗ್ರಹಿಸುವಲ್ಲಿ ನೀವು ವಿಫಲರಾಗುತ್ತೀರಿ. ಆದಾಗ್ಯೂ, ವ್ಯಾಪಾರಸ್ಥರು ಸೆಪ್ಟೆಂಬರ್ ತಿಂಗಳಿನಿಂದ ವರ್ಷದ ಅಂತ್ಯದ ವರೆಗೆ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಏಪ್ರಿಲ್ ತಿಂಗಳಿನಲ್ಲಿ ಕುಂಭ ರಾಶಿಯಲ್ಲಿ ಶನಿಯ ಸಂಚಾರವು, ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿಮಗೆ ನೀಡಬಹುದು. ಆದ್ದರಿಂದ ನಿಮ್ಮ ಆಹಾರದ ಬಗ್ಗೆ ಉತ್ತಮ ಗಮನ ಹರಿಸಿ ಮತ್ತು ಪ್ರತಿದಿನ ನಿಯಮಿತವಾಗಿ ಯೋಗ ಮತ್ತು ವ್ಯಾಯಾಮ ಮಾಡಿ. ಇದಲ್ಲದೆ ಸೆಪ್ಟೆಂಬರ್ ನಿಂದ ನೋವೆಂಬರ್ ನಡುವೆ ಯಾವುದೇ ಜೀರ್ಣಕಾರಿ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಣ್ಣ ಸಮಸ್ಯೆಯನ್ನೂ ನಿರ್ಲಕ್ಷಿಸಬೇಡಿ ಮತ್ತು ಅಗತ್ಯವಿದ್ದಾಗ ಯಾವುದೇ ಉತ್ತಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ ಎಂದು ನಿಮಗೆ ಕಟ್ಟುನಿಟ್ಟಾಗಿ ಸಲಹೆ ನೀಡಲಾಗಿದೆ.
ವಿದ್ಯಾರ್ಥಿಗಳಿಗೆ ಜನವರಿ ತಿಂಗಳ ಸಮಯದಲ್ಲಿ, ಮಂಗಳನ ಸಂಚಾರವು ನಿಮ್ಮಿಂದ ಹೆಚ್ಚು ಪರಿಶ್ರಮ ಮತ್ತು ಪ್ರಯತ್ನಗಳನ್ನು ಮಾಡಿಸುತ್ತದೆ. ಇದಲ್ಲದೆ ಈ ವರ್ಷದ ಆರಂಭದಲ್ಲಿ ನೆರಳಿನ ಗ್ರಹ ಕೇತುವು ಸಹ ವೃಶ್ಚಿಕ ರಾಶಿಯಲ್ಲಿ ನೆಲೆಗೊಂಡಿರುವುದು, ನಿಮ್ಮ ಜೀವನದಲ್ಲಿ ಅನೇಕ ಕೌಟುಂಬಿಕ ಸಮಸ್ಯೆಗಳನ್ನು ಜನಿಸಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮಗೊಳಿಸಲು ಮತ್ತು ಸಣ್ಣ ಪುಟ್ಟ ವಿಷಯಗಳ ಬಗ್ಗೆ ವಾದಕ್ಕೆ ಇಳಿಯದಂತೆ ನಿಮಗೆ ಸಲಹೆ ನೀಡಲಾಗಿದೆ.
ಪ್ರೀತಿಯ ಸಂಬಂಧದೊಂದಿಗೆ ವೈವಾಹಿಕ ಜೀವನದಲ್ಲೂ ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಏಪ್ರಿಲ್ ತಿಂಗಳಲ್ಲಿ ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಗುರುವಿನ ಸಂಚಾರವು ವಿಶೇಷವಾಗಿ ಪ್ರೀತಿಯಲ್ಲಿರುವ ಶಾಲೀಯರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ವಿವಾಹಿತರ ಬಗ್ಗೆ ಮಾತನಾಡಿದರೆ, ಈ ವರ್ಷದ ಆರಂಭದಲ್ಲಿ, ವಿವಾಹಿತರ ಜೀವನದಲ್ಲಿ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಬಹುದು. ಆದರೆ ಆಗಸ್ಟ್ ರಿಂದ ನಂತರ ಸಮಯವು ನಿಮ್ಮ ದಾಂಪತ್ಯ ಜೀವನಕೆ ಹೆಚ್ಚುಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ಸುಂದರವಾದ ಪ್ರವಾಸಕ್ಕೆ ಹೋಗಲು ಯೋಜಿಸಬಹುದು. ವಿವಾಹಿತ ಜನರಿಗೆ ವರ್ಷದ ಅಂತ್ಯವು ಸಹ ಅನುಕೂಲಕರವೆಂದು ಸಾಬೀತಪಡಿಸುತ್ತದೆ.
ಮಕರ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ಓದಿ – ಮಕರ ರಾಶಿ ಭವಿಷ್ಯ 2022
ಕುಂಭ ರಾಶಿ ಭವಿಷ್ಯ 2022
ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ, ಕುಂಭ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಹೆಚ್ಚು ಅನುಕೂಲಕರವಾಗಿರುತ್ತದೆ. ಆರ್ಥಿಕ ದೃಷ್ಟಿಕೋನದಿಂದ, ಈ ವರ್ಷ ನೀವು ಅಪಾರ ಯಶಸ್ಸು ಪಡೆಯುತ್ತೀರಿ. ಏಕೆಂದರೆ ಜನವರಿ ತಿಂಗಳಿನಲ್ಲಿ ಮಂಗಳನ ಸಂಚಾರವು ನಿಮಗೆ ಹೆಚ್ಚು ಆರ್ಥಿಕ ಲಾಭವನ್ನು ನೀಡುವ ಕೆಲಸ ಮಾಡುತ್ತದೆ. ಇದರ ನಂತರ ಮಾರ್ಚ್ ತಿಂಗಳ ಆರಂಭದಲ್ಲಿ, ನಾಲ್ಕು ಪ್ರಮುಖ ಗ್ರಹಗಳು ಅಂದರೆ ಶನಿ, ಮಂಗಳ, ಬುಧ ಶುಕ್ರ ಗ್ರಹವು ಒಟ್ಟಾಗಿ ಸಂಯೋಜಿಸುವುದು, ನಿಮಗೆ ಪ್ರಯತ್ನಗಳಲ್ಲಿ ಮತ್ತು ಉತ್ತಮ ಸಂಪತ್ತಿನ ಲಾಭವನ್ನು ಪಡೆಯುವಲ್ಲಿ ನಿಮಗೆ ಯಶಸ್ಸು ನೀಡುತ್ತದೆ.
ಆದಾಗ್ಯೂ 12 ಏಪ್ರಿಲ್ ರಂದು, ಮೇಷ ರಾಶಿಯಲ್ಲಿ ನೆರಳಿನ ಗ್ರಹ ರಾಹುವಿನ ಸಂಚಾರವು ಮತ್ತು ನಿಮ್ಮ ಮನೆಯ ಮೇಲೆ ಅದರ ದೃಷ್ಠಿಯು, ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಲು ನಿಮ್ಮನ್ನು ಪ್ರೇರೇಪಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಪ್ರತಿ ವಿಷಯವನ್ನು ಉತ್ತಮವಾಗಿ ಗಮನ ಹರಿಸಲು ಮತ್ತು ಯಾವುದೇ ವಿಷಯವನ್ನು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸದಿರಲು ಸಲಹೆ ನೀಡಲಾಗಿದೆ. ಈ ವರ್ಷದುದ್ದಕ್ಕೂ, ನಿಮ್ಮ ಅರೋಗ್ಯ ಸಾಮಾನ್ಯವಾಗಿರುತ್ತದೆ. ಜನವರಿ ತಿಂಗಳಿನಲ್ಲಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು ಮತ್ತು ಫೆಬ್ರವರಿ ತಿಂಗಳಿನಿಂದ ಮೇ ವರೆಗೆ ಅನೇಕ ಗ್ರಹಗಳ ಪ್ರತಿಕೂಲ ಚಾಲನೆ ಮತ್ತು ಅವುಗಳ ಸ್ಥಾನ ಬದಲಾವಣೆಗಳಿಂದಾಗಿ ಕೆಲವು ದೈಹಿಕ ಸಮಸ್ಯೆಗಳನ್ನುನೀವು ಎದುರಿಸಬೇಕಾಗಬಹುದು. ಏಪ್ರಿಲ್ ತಿಂಗಳಿನಲ್ಲಿ ಮೇಷ ರಾಶಿಯಲ್ಲಿ ರಾಹುವಿನ ಸಂಚಾರವು ಮತ್ತು ನಿಮ್ಮ ಮೂರನೇ ಮನೆಯ ಮೇಲೆ ಅದರ ದೃಷ್ಟಿಯು, ನಿಮ್ಮ ಸಹೋದರ - ಸಹೋದರಿಯರಿಗೆ ಕೆಲವು ಅರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನೀಡುತ್ತದೆ.
ನಿಮ್ಮ ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಜನವರಿ ತಿಂಗಳಿನಲ್ಲಿ ಧನು ರಾಶಿಯಲ್ಲಿ ಮಂಗಳ ಗ್ರಹದ ಉಪಸ್ಥಿತಿಯು, ನಿಮಗೆ ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಯಶಸ್ಸು ನೀಡುವ ಸಾಧ್ಯತೆ ಇದೆ. ಆದಾಗ್ಯೂ, ಸೆಪ್ಟೆಂಬರ್ ತಿಂಗಳಿನಿಂದ ನವೆಂಬರ್ ವರೆಗೆ, ಕೆಲಸದ ಸ್ಥಳದಲ್ಲಿ ನಿಮ್ಮ ಬಾಸ್ ಮತ್ತು ಮೇಲಧಿಕಾರಿಗಳೊಂದಿಗೆ ನೀವು ಸಣ್ಣ ಪುಟ್ಟ ವಿವಾದಗಳನ್ನು ಎದುರಿಸಬೇಕಾಗಬಹುದು. ಇದರ ಹೊರತಾಗಿ ಕುಂಭ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ವರ್ಷವು ಉತ್ತಮ ಫಪ್ರದವೆಂದು ಸಾಬೀತುಪಡಿಸುತ್ತದೆ. ಆದರೆ ಇದರ ಹೊರತಾಗಿಯೂ, ಅನುಕೂಲಕರ ಫಲಿತಾಂಶಗಳನ್ನು ಆನಂದಿಸಲು ವರ್ಷದ ಆರಂಭದಲ್ಲಿ ನೀವು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ ವಿವಾಹಿತರ ಬಗ್ಗೆ ಮಾತನಾಡಿದರೆ, ವರ್ಷ 2022 ನಿಮಗೆ ಮಿಶ್ರವಾಗಿರುತ್ತದೆ. ಈ ವರ್ಷದ ಆರಂಭಿಕ ದಿನಗಳಲ್ಲಿ ನಿಮ್ಮ ಜೀವನ ಸಂಗಾತಿ ಮತ್ತು ಅತ್ತೆಮನೆ ಕಡೆಯವರೊಂದಿಗೆ ನಿಮ್ಮ ವಿವಾದ ಅಥವಾ ಜಗಳವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಏಪ್ರಿಲ್ ವರೆಗೆ ಪರಿಸ್ಥಿಗಳಲ್ಲಿ ಸುಧಾರಣೆ ಕಂಡುಬರುತ್ತಿಲ್ಲ. ಇದರೊಂದಿಗೆ ಏಪ್ರಿಲ್ ತಿಂಗಳಿನಲ್ಲಿ ಮೀನ ರಾಶಿಯಲ್ಲಿ ಗುರು ಸಂಚಾರವು ಮತ್ತು ನಿಮ್ಮ ಎರಡನೇ ಮನೆಯನ್ನು ಅದು ಸಕ್ರಿಯಗೊಳಿಸುವುದು, ಇನ್ನೂ ಒಂಟಿಯಾಗಿರುವ ಜನರಿಗೆ ಮದುವೆಯ ಉತ್ತಮ ಪ್ರಸ್ತಾಪವನ್ನು ನೀಡುವ ಕೆಲಸ ಮಾಡುತ್ತದೆ.
ಕುಂಭ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ಕುಂಭ ರಾಶಿ ಭವಿಷ್ಯ 2022
ಪರಿಣತ ಜ್ಯೋತಿಷಿಗಳನ್ನು ಪ್ರಶ್ನೆ ಕೇಳಿ ಮತ್ತು ನಿಮ್ಮ ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ಪಡೆಯಿರಿ
ಮೀನ ರಾಶಿ ಭವಿಷ್ಯ 2022
ಮೀನ ರಾಶಿ ಭವಿಷ್ಯ 2022 ರ ಪ್ರಕಾರ, ಮೀನ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ಪ್ರಮುಖವಾಗಿ ಅನುಕೂಲಕರವಾಗಿರುತ್ತದೆ. ಈ ವರ್ಷ ಆರ್ಥಿಕವಾಗಿ ನೀವು ತುಂಬಾ ಸಮೃದ್ಧರಾಗಿರುತ್ತೀರಿ. ಏಪ್ರಿಲ್ ತಿಂಗಳಲ್ಲಿ ಹನ್ನೊಂದನೇ ಮನೆಯಿಂದ ಹನ್ನೆರಡನೇ ಮನೆಯಲ್ಲಿ ಶನಿ ದೇವರ ಉಪಸ್ಥಿತಿಯು, ನಿಮ್ಮ ಆದಾಯದ ಹೊಸ ಮೂಲಗಳನ್ನು ಸೃಷ್ಟಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಇದಲ್ಲದೆ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳುಗಳ ನಡುವೆ ನಿರಂತರವಾಗಿ ಗ್ರಹಗಳ ಬದಲಾವಣೆಯು, ನಿಮ್ಮ ಜೀವನದಲ್ಲಿ ಅನೇಕ ಆರ್ಥಿಕ ಏರಿಳಿತಗಳನ್ನು ತರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ ವೃತ್ತಿಜೀವನದ ದೃಷ್ಟಿಕೋನದಿಂದ ಮೀನ ರಾಶಿಚಕ್ರದ ಸ್ಥಳೀಯರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಇದಲ್ಲದೆ ಏಪ್ರಿಲ್ ತಿಂಗಳಲ್ಲಿ ಮೀನ ರಾಶಿಯಲ್ಲಿನ ಗುರುವಿನ ಸಂಚಾರವು ಸಹ, ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ನಿಮಗೆ ಸಹಾಯ ಮಾಡುತ್ತದೆ. ಇದರಿಂದಾಗಿ ನೀವು ಬಡ್ತಿ ಪಡೆಯುತ್ತೀರಿ ಮತ್ತು ಸಂಬಳದ ಹೆಚ್ಚಳವನ್ನು ಸಹ ನೀವು ಪಡೆಯಬಹುದು.
ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಜನವರಿ ರಿಂದ ಜೂನ್ ನಡುವೆ ವೃಶ್ಚಿಕ ರಾಶಿಯಲ್ಲಿ ಮಂಗಳನ ಸಂಚಾರವು ಅವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡಬಹುದು, ಇದರ ಪರಿಣಾಮವಾಗಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ, ತಮ್ಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಆದಾಗ್ಯೂ ಕುಟುಂಬ ಜೀವನದ ದೃಷ್ಟಿಕೋನದಿಂದ, ಏಪ್ರಿಲ್ ತಿಂಗಳ ಅಂತ್ಯದ ದಿನಗಳಲ್ಲಿ ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಗೆ ಶನಿ ದೇವರ ಸಂಚಾರದಿಂದಾಗಿ ನಿಮ್ಮ ಕುಟುಂಬದಿಂದ ನೀವು ದೂರ ಹೋಗಬೇಕಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಮೇ ನಿಂದ ಆಗಸ್ಟ್ ನಡುವೆ ನಿಮ್ಮ ತಾಯಿಯ ಆರೋಗ್ಯವು ಸುಧಾರಿಸುವ ಸಂಪೂರ್ಣ ಸಾಧ್ಯತೆ ಇದೆ. ಇದಲ್ಲದೆ ಮೇ ತಿಂಗಳಿಂದ ಸೆಪ್ಟೆಂಬರ್ ವರೆಗೆ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ಶನಿ ಗ್ರಹವು ನಿಮ್ಮ ರೋಗದ ಮನೆಯ ಮೇಲೆ ಸಂಪೂರ್ಣ ದೃಷ್ಟಿಯನ್ನು ನೀಡುತ್ತಿರುತ್ತಾರೆ.
ಈ ವರ್ಷ ಮೇ ತಿಂಗಳಲ್ಲಿ ಮೂರು ಗ್ರಹಗಳು ಅಂದರೆ ಮಂಗಳ, ಶುಕ್ರ ಮತ್ತು ಗುರುವಿನ ಸಂಯೋಗವು ಮತ್ತು ಗುರುವಿನ ಸಂಚಾರವು, ನಿಮ್ಮ ಕುಟುಂಬ ಮತ್ತು ಹಿರಿಯರ ಆಶೀರ್ವಾದವನ್ನು ನಿಮಗೆ ನೀಡಲಿದೆ. ದಾಂಪತ್ಯ ಜೀವನದ ದೃಷ್ಟಿಕೋನದಿಂದಲೂ, ಈ ವರ್ಷ ವಿವಾಹಿತ ಜನರಿಗೆ ಯಾವುದೇ ವರದಾನಕ್ಕಿಂತ ಕಡಿಮೆಯಿಲ್ಲ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ವರ್ಷದ ಆರಂಭದಿಂದ ಮಾರ್ಚ್ ತಿಂಗಳ ವೆರೆಗೆ, ವಿವಾಹಿತರು ಉತ್ತಮ ದಾಂಪತ್ಯ ಜೀವನವನ್ನು ಆನಂದಿಸುವುದನ್ನು ಕಾಣಲಾಗುತ್ತದೆ. 21 ಏಪ್ರಿಲ್ ನಂತರ ನಿಮ್ಮ ವೈವಾಹಿಕ ಜೀವನದಲ್ಲಿ ಹೊಸತನ ಉಂಟಾಗುತ್ತದೆ. ಆದಗ್ಯೂ ಈ ರಾಶಿಚಕ್ರದ ಪ್ರೇಮಿಗಳಿಗೆ ಈ ವರ್ಹಾ ಸಾಮಾನ್ಯವಾಗಿರಲಿದೆ. ಆದರೆ ನಿಮ್ಮ ಐದನೇ ಮತ್ತು ಏಳನೇ ಮನೆಯ ಅಧಿಪತಿ ನಿಮ್ಮ ಲಾಭದ ಮನೆಯಲ್ಲಿರುವುದು ಮತ್ತು ನಿಮ್ಮ ಪ್ರೀತಿ ಮತ್ತು ಸಂಬಂಧಗಳ ಮನೆಯ ಮೇಲೆ ಸಂಪೂರ್ಣ ದೃಷ್ಟಿ ನೀಡುವುದು, ಇದ್ದಕ್ಕಿದ್ದಂತೆ ಒಬ್ಬ ಮೂರನೇ ವ್ಯಕ್ತಿ ನಿಮ್ಮ ಸಂಬಂಧದಲ್ಲಿ ಹಸ್ತಕ್ಷೇಪ ಮಾಡಲು ಕಾರಣವಾಗುತ್ತದೆ.
ಮೀನ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – ಮೀನ ರಾಶಿ ಭವಿಷ್ಯ 2022
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್