ಚಂದ್ರ ರಾಶಿ ಗಣಕ ( ಕ್ಯಾಲ್ಕುಲೇಟರ್ ) : ತಮ್ಮ ಚಂದ್ರ ರಾಶಿಯನ್ನು ತಿಳಿಯಿರಿ
ವೈದಿಕ ಜ್ಯೋತಿಷ್ಯವು, ಜಾತಕಕ್ಕಾಗಿ ಸೂರ್ಯ ರಾಶಿಗಿಂತ ಚಂದ್ರ ರಾಶಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. ವಾಸ್ತವವಾಗಿ, ವೈದಿಕ ಜ್ಯೋತಿಷ್ಯದಲ್ಲಿ ವ್ಯಕ್ತಿಯ ಜಾತಕದಲ್ಲಿ ಲಘ್ನದ ಹೋಲಿಕೆಯಲ್ಲಿ ಚಂದ್ರ ಹೆಚ್ಚು ಶಕ್ತಿಯುತನಾಗಿದ್ದರೆ ಲಘ್ನದ ಬದಲಿಗೆ ಚಂದ್ರ ರಾಶಿಗೆ ಮಾತ್ರ ಜಾತಕದ ಕೇಂದ್ರವೆಂದು ಪರಿಗಣಿಸಬೇಕು ಎಂದು ಹೇಳಲಾಗುತ್ತದೆ. ಸೂರ್ಯನ ರಾಶಿಯ ಮೂಲಕ ತಿಳಿಯಲು ಸಾಧ್ಯವಿಲ್ಲದಂತಹ ವ್ಯಕ್ತಿಯ ರಹಸ್ಯಗಳನ್ನು ಚಂದ್ರ ರಾಶಿಯು ಬಹಿರಂಗಪಡಿಸುತ್ತದೆ. ನಮ್ಮ ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ನಿಮಗೆ ನಿಮ್ಮ ನಿಖರವಾದ ಚಂದ್ರ ರಾಶಿಯನ್ನು ತಿಳಿಯಲು ಸಹಾಯ ಮಾಡುತ್ತದೆ. ನಿಮ್ಮ ಚಂದ್ರ ರಾಶಿಯನ್ನು ತಿಳಿಯಲು ದಯವಿಟ್ಟು ನೀವು ನಿಮ್ಮ ಜನ್ಮಕ್ಕೆ ಸಂಬಂಧಿಸಿದ ವಿವರಗಳನ್ನು ನಮ್ಮ ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ನಲ್ಲಿ ನಮೂದಿಸಿ.
ವೈದಿಕ ಜ್ಯೋತಿಷ್ಯದಲ್ಲಿ ಚಂದ್ರ ಮನಸ್ಸಿನ ಅಂಶ. ಒಬ್ಬ ವ್ಯಕ್ತಿಯ ಮನಸ್ಥಿತಿ ಹೇಗಿದೆ ಎಂಬುದು ಜಾತಕದಲ್ಲಿನ ಚಂದ್ರನ ಸ್ಥಾನವನ್ನು ಅವಲಂಬಿಸಿರುತ್ತದೆ. ಆದ್ದರಿಂದ ವೈದಿಕ ಜ್ಯೋತಿಷ್ಯದಲ್ಲಿ ಮುನ್ಸೂಚನೆಗಾಗಿ ಸೂರ್ಯ ರಾಶಿಯ ಬದಲಿಗೆ ಚಂದ್ರ ರಾಶಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಜ್ಯೋತಿಷ್ಯದಲ್ಲಿ ಜನ್ಮ ನಕ್ಷತ್ರಪುಂಜದ ವಿಶ್ಲೇಷಣೆಯನ್ನು ಸಹ ಚಂದ್ರನ ಮೂಲಕ ಮಾಡಲಾಗುತ್ತದೆ. ಚಂದ್ರ ರಾಶಿಯನ್ನು ಅರ್ಥಮಾಡಿಕೊಳ್ಳುವ ಮೊದಲು, ಜ್ಯೋತಿಷ್ಯದಲ್ಲಿ ಚಂದ್ರ ಗ್ರಹದ ಪ್ರಾಮುಖ್ಯತೆ ಏನು ಎಂದು ತಿಳಿಯುವ ಅಗತ್ಯವಾಗಿದೆ.
ವೈದಿಕ ಜ್ಯೋತಿಷ್ಯದಲ್ಲಿ ಚಂದ್ರ ರಾಶಿ
ಜ್ಯೋತಿಷ್ಯ ವಿಜ್ಞಾನದಲ್ಲಿ ಚಂದ್ರ ಗ್ರಹವನ್ನು ನವಗ್ರಹಗಳಲ್ಲಿನ ಒಂದು ಪ್ರಮುಖವಾದ ಗ್ರಹವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ವ್ಯಕ್ತಿಯ ಭಾವನೆ ಮತ್ತು ಮಾನಸಿಕ ಪರಿಸ್ಥಿತಿಗೆ ಸಂಬಂಧಿಸಿದೆ. ಸೂರ್ಯ ಗ್ರಹ ಆತ್ಮದ ಅಂಶವಾಗಿದೆ ಅದೇ ಪ್ರಕಾರ ಚಂದ್ರ ಗ್ರಹವು ವ್ಯಕ್ತಿಯ ಮನಸ್ಸಿಗೆ ಸಂಬಂಧಿಸಿದೆ. ಭೂಮಿಯ ಮೇಲೆ ಜೀವನವನ್ನು ಕಾಪಾಡಿಕೊಳ್ಳಲು ಈ ಎರಡು ಗ್ರಹಗಳು ಗಮನಾರ್ಹ ಕೊಡುಗೆ ನೀಡುತ್ತವೆ. ಖಗೋಳಶಾಸ್ತ್ರದ ದೃಷ್ಟಿಯಿಂದ ಸೂರ್ಯ ಮತ್ತು ಚಂದ್ರ ಎರಡೂ ಗ್ರಹಗಳಲ್ಲ. ಆದರೆ ಜ್ಯೋತಿಷ್ಯ ವಿಜ್ಞಾನದಲ್ಲಿ ಅವುಗಳನ್ನು ಗ್ರಹಗಳೆಂದು ಪರಿಗಣಿಸಲಾಗಿದೆ. ಆಸ್ಟ್ರೋಸೇಜ್ ನ ಈ ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಕೇವಲ ನಿಮ್ಮ ಚಂದ್ರ ರಾಶಿ ಯಾವುದು ಎಂದು ತಿಳಿಸುವ ಮಾತ್ರವಲ್ಲದೆ ಇದರ ಸಹಾಯದಿಂದ ಚಂದ್ರನು ನಿಮ್ಮ ಮೇಲೆ ಯಾವ ಪರಿಣಾಮ ಬೀರುತ್ತಾನೆ ಎಂದು ತಿಳಿಯಲು ನಿಮಗೆ ಸಾಧ್ಯವಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ಸಂಬಂಧಗಳನ್ನು ಪ್ರಭಾವಿಸುವಲ್ಲಿ ಚಂದ್ರನ ಗಮನಾರ್ಹ ಕೊಡುಗೆ ಇದೆ. ಏಕೆಂದರೆ ಇದು ವ್ಯಕ್ತಿಯ ಮಾನಸಿಕ ಶಕ್ತಿಯೊಂದಿಗೆ ಸಂಬಂಧಿಸಿದೆ. ವ್ಯಕ್ತಿಯು ಯಾವ ಪರಿಸ್ಥಿತಿಗಳಲ್ಲಿ ಹೇಗೆ ನಡವಳಿಸಬೇಕು ಎಂಬುದೆಲ್ಲವು ಚಂದ್ರನ ಮೇಲೆ ಅವಲಂಬಿತವಾಗಿರುತ್ತದೆ. ಚಂದ್ರ ಗ್ರಹವು ಕರ್ಕ ರಾಶಿಚಕ್ರದ ಸ್ವಾಮಿತ್ವವನ್ನು ಹೊಂದಿದೆ ಮತ್ತು ಇದು ವೃಷಭ ರಾಶಿಚಕ್ರದಲ್ಲಿ ಉನ್ನತ ಸ್ಥಾನದಲ್ಲಿರುತ್ತದೆ.
ಚಂದ್ರ ಗ್ರಹದ ಪರಿಣಾಮ
ಚಂದ್ರ ಒಂದು ಶುಭ ಗ್ರಹ. ಗುರು ಗ್ರಹದೊಂದಿಗೆ ಚಂದ್ರನ ಸಂಯೋಜನೆ ಜೀವನದಲ್ಲಿ ಬೌದ್ಧಿಕ ಕೌಶಲ್ಯ ಮತ್ತು ಹಣ- ಸಮೃದ್ಧಿಯನ್ನು ತರುತ್ತದೆ. ಈ ಎರಡೂ ಸ್ನೇಹಿ ಗ್ರಹಗಳು. ಇದು ಗಾತ್ರದಲ್ಲಿ ಚಿಕ್ಕದಾಗಿದೆ ಮತ್ತು ಭೂಮಿಗೆ ಹತ್ತಿರದಲ್ಲಿದೆ. ಚಂದ್ರನನ್ನು ಚಂದ ಮಾಮ ಎಂದು ಸಹ ಕರೆಯಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಸ್ತ್ರೀ ಲಿಂಗ ಗ್ರಹ. ಆದ್ದರಿಂದ ಇದನ್ನು ಆಕಾಶ ಪರಿಷತ್ತಿನ ರಾಣಿ ಎಂದು ಹೇಳಲಾಗುತ್ತದೆ. ಇದು ಸೂರ್ಯನ ಬೆಳಕಿನಿಂದ ಹೊಳೆಯುತ್ತದೆ. ಚಂದ್ರನು ದ್ರವ ಪದಾರ್ಥಗಳ ಒಂದು ಅಂಶವಾಗಿದೆ. ಚಂದ್ರ ನಿಮ್ಮ ಜಾತಕದಲ್ಲಿ ಉನ್ನತ ಅಥವಾ ಬಲಪ್ರದ ಸ್ಥಾನದಲ್ಲಿ ಕುಳಿತಿದ್ದರೆ, ಇದು ನಿಮಗೆ ಮಾನಸಿಕ ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ಅಲ್ಲೇ, ಈ ಗ್ರಹವು ಅವನತ ಅಥವಾ ಯಾವುದೇ ಕ್ರೂರ ಗ್ರಹದಿಂದ ಬಳಲುತ್ತಿದ್ದರೆ, ಇದರ ಕೆಟ್ಟ ಪರಿಣಾಮಗಳಿಂದ ವ್ಯಕ್ತಿಯ ಮಾನಸಿಕ ಶಾಂತಿ ಕಳೆದುಹೋಗುತ್ತದೆ. ಈ ಪರಿಸ್ಥಿತಿಯಲ್ಲಿ ನಿಮ್ಮ ತಾಯಿ ಕೂಡ ಕಷ್ಟಗಳನ್ನು ಎದುರಿಸಬೇಕಾಗಬಹುದು
ಒಬ್ಬ ವ್ಯಕ್ತಿಯ ಜಾತಕವನ್ನು ವಿಶ್ಲೇಷಿಸಲು ಚಂದ್ರನ ಸ್ಥಾನವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ತಾಯಿ ತನ್ನ ಮಗುವನ್ನು ಬೆಳೆಸುವ ರೀತಿಯಲ್ಲಿಯೇ ಚಂದ್ರನು ನಮ್ಮ ಪರಿಸರವನ್ನು ಕಾಪಾಡಿಕೊಳ್ಳುತ್ತಾನೆ. ಆದ್ದರಿಂದ ಚಂದ್ರನನ್ನು ತಾಯಿಯ ಅಂಶವೆಂದು ಸಹ ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಸಹಾಯದಿಂದ ವ್ಯಕ್ತಿಯ ಭಾವನೆಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.
ಚಂದ್ರ ರಾಶಿಯ ಪ್ರಾಮುಖ್ಯತೆ
ಖಂಡಿತವಾಗಿಯೂ ನಿಮ್ಮ ಮನಸ್ಸಿನಲ್ಲಿ ಚಂದ್ರ ರಾಶಿಗೆ ಸಂಬಂಧಿಸಿದಂತೆ ಅನೇಕ ರೀತಿಯ ಪ್ರಶ್ನೆಗಳು ಉದ್ಭವಿಸುತ್ತಿರಬಹುದು. ಉದಾಹರಣೆಗೆ ಈ ಚಂದ್ರ ರಾಶಿ ಎಂದರೇನು? ಇದರಿಂದ ಏನಾಗುತ್ತದೆ? ನೀವು ಯಾವುದೇ ವ್ಯಕ್ತಿಯ ಜನನ ಜಾತಕದಲ್ಲಿ ಚಂದ್ರ ರಾಶಿ ಪದದ ಬಳಕೆಯನ್ನು ಕೇಳಿರಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜನನದ ಸಮಯದಲ್ಲಿ ಚಂದ್ರನು ಯಾವ ರಾಶಿಚಕ್ರದಲ್ಲಿ ಇರುತ್ತಾನೋ, ಅದನ್ನು ಆ ವ್ಯಕ್ತಿಯ ಚಂದ್ರ ರಾಶಿ ಎಂದು ಕರೆಯಲಾಗುತ್ತದೆ. ಚಂದ್ರ ರಾಶಿಯ ಮೂಲಕ ವಕ್ತಿಯ ನಡವಳಿಕೆ, ಅವನ ವ್ಯಕ್ತಿತ್ವ, ಅರೋಗ್ಯ ಮತ್ತು ಇದಲ್ಲದೆ ಜೀವನಕ್ಕೆ ಸಂಬಂಧಿಸಿದ ಇತರ ಪ್ರಮುಖ ಅಂಶಗಳ ಬಗ್ಗೆ ತಿಳಿಯಬಹುದು. ವೈದಿಕ ಜ್ಯೋತಿಷ್ಯದಲ್ಲಿ ಜಾತಕದಿಂದ ಭವಿಷ್ಯವನ್ನು ನೋಡಲು ಚಂದ್ರ ರಾಶಿಯನ್ನು ಮಾತ್ರ ನೋಡಲಾಗುತ್ತದೆ. ಚಂದ್ರ ರಾಶಿಯ ಮೂಲಕ ನಾವು ಭವಿಷ್ಯದಲ್ಲಿ ಎದುರಿಸಬೇಕಾಗುವಂತಹ ಎಲ್ಲಾ ಪರಿಸ್ಥಿತಿಗಳ ಬಗ್ಗೆಯೂ ತಿಳಿಯಬಹುದು. ಇದಲ್ಲದೆ ಚಂದ್ರ ರಾಶಿ ಸಮಾಜದಲ್ಲಿ ನಾವು ನಮ್ಮನ್ನು ಹೇಗೆ ಪ್ರಸ್ತುತಪಡಿಸುತ್ತೇವೆ ಮತ್ತು ನಮ್ಮ ಸಾಮಾಜಿಕ ಜೀವನ ಹೇಗೆ ಇರುತ್ತದೆ ಎಂಬುದರ ಬಗ್ಗೆಯೂ ಹೇಳುತ್ತದೆ.
ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ನ ಉಪಯುಕ್ತತೆ
- ಇದು ವ್ಯಕ್ತಿಯ ಬಾಹ್ಯ ರೂಪ, ಚಿತ್ರಣ ಮತ್ತು ಸ್ವಭಾವನ್ನು ತೋರಿಸುತ್ತದೆ.
- ಚಂದ್ರ ರಾಶಿಯಿಂದ ವ್ಯಕ್ತಿಯ ಅದೃಷ್ಟವನ್ನು ತಿಳಿಯಬಹುದು.
- ಇದರ ಮೂಲಕ ಸ್ಥಳೀಯರ ಅರೋಗ್ಯ ಜೀವನ ಬಹಿರಂಗವಾಗುತ್ತದೆ.
- ಇದರ ಮೂಲಕ ಇತರ ಜನರೊಂದಿಗಿನ ನಿಮ್ಮ ಸ್ಥಿರತೆ ತಿಳಿಯಲಾಗುತ್ತದೆ.
- ಚಂದ್ರ ರಾಶಿಯಿಂದ ಸ್ಥಳೀಯರ ಸಂಬಂಧ ಇತ್ಯಾದಿಯ ವಿಷಯದ ಬಗ್ಗೆ ತಿಳಿಯಲಾಗುತ್ತದೆ.
- ಚಂದ್ರ ರಾಶಿಯ ಮೂಲಕ ವ್ಯಕ್ತಿಯ ಅದೃಷ್ಟ ಮತ್ತು ದುರದೃಷ್ಟದ ಬಗ್ಗೆಯೂ ತಿಳಿಯಬಹುದು
- ವ್ಯಕ್ತಿ ತನ್ನ ಜನ್ಮ ಸ್ಥಾನದಲ್ಲಿರುತ್ತಾನೆ ಅಥವಾ ಜನನ ಸ್ಥಳದಿಂದ ದೂರ ಹೋಗುತ್ತಾನೆ, ಚಂದ್ರ ರಾಶಿ ಈ ವಿಷಯದ ಬಗ್ಗೆಯೂ ಸೂಚಿಸುತ್ತದೆ. ಸ್ಥಳೀಯನು ತನ್ನ ಜನ್ಮ ಸ್ಥಳದಲ್ಲಿ ಯಶಸ್ವಿಯಾಗುತ್ತಾನೆ ಅಥವಾ ವಿದೇಶಕ್ಕೆ ಹೋಗಿ ಯಶಸ್ಸನ್ನು ಪಡೆಯುತ್ತಾನೆ ಎಂಬುದು ಕೂಡ ಚಂದ್ರ ರಾಶಿಯ ಮೂಕ ತಿಳಿಯುತ್ತದೆ.
- ಚಂದ್ರ ರಾಶಿಯು, ವ್ಯಕ್ತಿಯ ಕಿರಿಯ ಸಹೋದರ-ಸಹೋದರಿಯರ ಮೂಲಕ ಪಡೆಯಲಾಗುವ ಲಾಭ-ಹಾನಿ, ಯಶಸ್ಸು- ವೈಫಲ್ಯ ಇತ್ಯಾದಿಗಳನ್ನು ತೋರಿಸುತ್ತದೆ.
- ಭಾರತೀಯ ಜ್ಯೋತಿಷಿಗಳು ಯಾವುದೇ ರಾಶಿಭವಿಷ್ಯವನ್ನು ಅದರ ಚಂದ್ರ ರಾಶಿಯ ಆಧಾರದ ಮೇಲೆ ತಯಾರಿಸುತ್ತಾರೆ, ಇದು ಅವರ ಜಾತಕದ ವಿವಿಧ ಮನೆಗಳಲ್ಲಿ ಗ್ರಹಗಳ ಸಾಗಣೆಯ ಮೇಲೆ ಆಧರಿಸಿದೆ.
ರಾಶಿಚಕ್ರದ ಪ್ರಕಾರ ವ್ಯಕ್ತಿಯ ಸ್ವರೂಪ
ವೈದಿಕ ಜ್ಯೋತಿಷ್ಯದಲ್ಲಿ 360 ಡಿಗ್ರಿ ರಾಶಿಚಕ್ರವನ್ನು ಹೊಂದಿದೆ ಮತ್ತು ಈ ರಾಶಿಚಕ್ರದಲ್ಲಿ 12 ರಾಶಿ ಚಿಹ್ನೆಗಳು ಇವೆ.ಅಂದರೆ ಒಂದು ರಾಶಿ 30 ಡಿಗ್ರಿ. ಈ ರಾಶಿ ಚಿಹ್ನೆಗಳು ತನ್ನದೇ ಆದ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುತ್ತವೆ.
- ಮೇಷ : ಮೇಷ ರಾಶಿಯು ಅತ್ಯಂತ ಸಕ್ರಿಯ ರಾಶಿಚಕ್ರವಾಗಿದೆ. ಈ ರಾಶಿಚಕ್ರದ ಅಧಿಪತಿ ಮಂಗಳ ಗ್ರಹ ಮತ್ತು ಇದು ಬೆಂಕಿಯ ಅಂಶವಾಗಿದೆ. ಮೇಷ ರಾಶಿಚಕ್ರದ ಸ್ಥಳೀಯರು ಯಾವುದೇ ವಿಷಯವನ್ನು ತುಂಬಾ ಬೇಗ ಕಲಿಯುತ್ತಾರೆ. ಇದಲ್ಲದೆ ಅವರು ಗೀಳು ಮತ್ತು ಕೋಪದ ಸ್ವಭಾವವನ್ನು ಹೊಂದಿರುತ್ತಾರೆ.
- ವೃಷಭ: ವೃಷಭ ರಾಶಿಚಕ್ರದ ಅಧಿಪತಿ ಶುಕ್ರ ಮತ್ತು ಇದು ಭೂಮಿ ಅಂಶದ ರಾಶಿ. ಈ ರಾಶಿಚಕ್ರದಲ್ಲಿ ಜನಿಸಿದ ಜನರು ಮಾನಸಿಕವಾಗಿ ಸ್ಥಿರ ಮತ್ತು ನಿಯಂತ್ರರಾಗಿರುತ್ತಾರೆ.
- ಮಿಥುನ: ಮಿಥುನ ಎರಡು ಸ್ವಭಾವದ ರಾಶಿ. ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಈ ರಾಶಿಚಕ್ರದ ಸ್ವಾಮಿ ಎಂದು ಪರಿಗಣಿಸಲಾಗಿದೆ. ಗಾಳಿ ಅಂಶದ ಈ ರಾಶಿಚಕ್ರದಲ್ಲಿ ಜನಿಸಿರುವ ಸ್ಥಳೀಯರು ಹೆಚ್ಚು ಮಾತನಾಡುವವರು.
- ಕರ್ಕ: ಕರ್ಕ ನೀರಿನ ರಾಶಿ. ಜ್ಯೋತಿಷ್ಯದಲ್ಲಿ ಚಂದ್ರ ಗ್ರಹವುಈ ರಾಶಿಚಕ್ರದ ಸ್ವಾಮಿತ್ವವನ್ನು ಪಡೆದಿದೆ. ಚಂದ್ರ ರಾಶಿಯನ್ನು ಹೊಂದಿರುವ ಕರ್ಕ ರಾಶಿಚಕ್ರದ ಸ್ಥಳೀಯರು ಸ್ವಭಾವತಃ ಹೆಚ್ಚು ಸೂಕ್ಷ್ಮವಾಗಿರುತ್ತಾರೆ.
- ಸಿಂಹ : ಸಿಂಹ ರಾಶಿಚಕ್ರದಲ್ಲಿ ಜನಿಸಿದ ಜನರು ಒಳ್ಳೆಯ ನಾಯಕರಾಗಿರುತ್ತಾರೆ.ಅವರು ಒಬ್ಬ ರಾಜನಂತೆ ತಮ್ಮ ಜೀವನವನ್ನು ಕಳೆಯುತ್ತಾರೆ. ಜ್ಯೋತಿಷ್ಯ ವಿಜ್ಞಾನದಲ್ಲಿ ಸೂರ್ಯ ಗ್ರಹವನ್ನು ಸಿಂಹ ರಾಶಿಚಕ್ರದ ಅಧಿಪತಿ ಎಂದು ಪರಿಗಣಿಸಲಾಗಿದೆ. ಇದು ಬೆಂಕಿ ಅಂಶದ ರಾಶಿ.
- ಕನ್ಯಾ : ಕನ್ಯಾ ರಾಶಿಚಕ್ರವನ್ನು ಭೂಮಿಯ ಅಂಶದ ರಾಶಿ ಎಂದು ಪರಿಗಣಿಸಲಾಗಿದೆ. ಬುಧ ಗ್ರಹವು ಈ ರಾಶಿಚಕ್ರದ ಸ್ವಾಮಿ. ಈ ರಾಶಿಚಕ್ರದ ಸ್ಥಳೀಯರು ಬಹಳ ಪ್ರಯೋಗಿಕರಾಗಿರುತ್ತಾರೆ ಮತ್ತು ಸ್ಥಳೀಯರು ಮಾತನಾಡುವ ಬದಲು ಕ್ರಿಯೆಯನ್ನು ನಂಬುತ್ತಾರೆ. ಈ ರಾಶಿಚಕ್ರದ ಸ್ಥಳೀಯರು ಇತರರ ಮುಂದೆ ತಮ್ಮನ್ನು ಪ್ರಬಲ ವ್ಯಕ್ತಿಯಾಗಿ ಪ್ರದರ್ಶಿಸುತ್ತಾರೆ.
- ತುಲಾ : ತುಲಾ ಗಾಳಿಯ ಅಂಶದ ರಾಶಿಚಕ್ರ. ಶುಕ್ರ ಗ್ರಹವು ಈ ರಾಶಿಚಕ್ರದ ಅಧಿಪತಿ. ತುಲಾ ರಾಶಿಚಕ್ರದ ಅರ್ಥವೇನೆಂದರೆ ನಿಯಂತ್ರಣವನ್ನು ಉಳಿಸಿಕೊಳ್ಳುವುದು. ಈ ರಾಶಿಚಕ್ರವು ಜೀವನದಲ್ಲಿನ ಸಮತೋಲನವನ್ನು ತೋರಿಸುತ್ತದೆ.ಈ ರಾಶಿಚಕ್ರದಲ್ಲಿ ಜನಿಸಿರುವ ಸ್ಥಳೀಯರು ಭೌತಿಕ ಸಂಪನ್ಮೂಲಗಳ ಬಗ್ಗೆ ಹೆಚ್ಚು ಒಲವನ್ನು ಹೊಂದಿರುತ್ತಾರೆ.
- ವೃಶ್ಚಿಕ: ವೃಶ್ಚಿಕ ರಾಶಿಚಕ್ರ ನೀರಿನ ಅಂಶದ ರಾಶಿ. ಈ ರಾಶಿಚಕ್ರದ ಸ್ವಾಮಿ ಮಂಗಳ ಗ್ರಹ. ವೃಶ್ಚಿಕ ರಾಶಿಚಕ್ರದಲ್ಲಿ ಜನಿಸಿರುವ ಸ್ಥಳೀಯರು ಚಿಂತನಶೀಲರು. ವೃಶ್ಚಿಕ ರಾಶಿಚಕ್ರದ ಜನರು ತಮ್ಮ ಅನುಭವಗಳಿಂದ ಬಹಳಷ್ಟು ಕಲಿಯುತ್ತಾರೆ.
- ಧನು: ಧನು ರಾಶಿ ಬೆಂಕಿಯ ಅಂಶದ ರಾಶಿ ಮತ್ತು ಗುರು ಗ್ರಹವು ಈ ರಾಶಿಚಕ್ರದ ಅಧಿಪತಿ. ಇದು ಜ್ಞಾನ, ಗುರು ಮತ್ತು ಧರ್ಮದ ಅಂಶವಾಗಿದೆ. ಗುರುವಿನ ಪ್ರಭಾವದಿಂದ ಈ ರಾಶಿಚಕ್ರದಲ್ಲಿ ಜನಿಸಿದ ಸರಿತಾಳೀಯರು ಜ್ಞಾನವುಳ್ಳವರು ಮತ್ತು ಜ್ಞಾನವನ್ನು ಪಡೆಯಲು ಯಾವಾಗಲು ಸಿದ್ಧರಾಗಿರುತ್ತಾರೆ.
- ಮಕರ: ಮಕರ ರಾಶಿಚಕ್ರವನ್ನು ಭೂಮಿಯ ಅಂಶವೆಂದು ಪರಿಗಣಿಸಲಾಗಿದೆ. ಶನಿ ಗ್ರಹವು ಈ ರಾಶಿಚಕ್ರದ ಅಧಿಪತಿ. ವೈದಿಕ ಜ್ಯೋತಿಷ್ಯದ ಪ್ರಕಾರ, ಈ ರಾಶಿಚಕ್ರದಲ್ಲಿ ಜನಿಸಿದ ಸ್ಥಳೀಯರು ಪ್ರಕೃತಿಯಲ್ಲಿ ಸೋಮಾರಿಯಾಗಿರುತ್ತಾರೆ.
- ಕುಂಭ: ಕುಂಭ ರಾಶಿಚಕ್ರವನ್ನು ಗಾಳಿಯ ಅಂಶವೆಂದು ಪರಿಗಣಿಸಲಾಗಿದೆ. ಈ ರಾಶಿಚಕ್ರದ ಸ್ವಾಮಿ ಶನಿ. ಈ ರಾಶಿಚಕ್ರದ ಜನರು ಒಳ್ಳೆಯ ಚಿಂತಕರು, ಸಾಮಾಜಿಕ, ಸ್ವತಂತ್ರ ಮತ್ತು ಬುದ್ಧಿವಂತರು.
- ಮೀನಾ: ಮೀನಾ ರಾಶಿಚಕ್ರ ನೀರನ ಅಂಶದ ರಾಶಿ ಮತ್ತು ಗುರು ಗ್ರಹವು ಈ ರಾಶಿಚಕ್ರದ ಸ್ವಾಮಿ. ಮೀನಾ ರಾಶಿಚಕ್ರದ ಜನರು ಅರ್ಥಗರ್ಭಿತರಾಗಿರುತ್ತಾರೆ. ಈ ರಾಶಿಚಕ್ರದ ಜನರು ಇತರರ ಭಾವನೆಗಳನ್ನು ಮೆಚ್ಚುತ್ತಾರೆ ಮತ್ತು ಸ್ವಭಾವತಃ ಭಾವನಾತ್ಮಕ ಮತ್ತು ಆಧ್ಯಾತ್ಮಿಕರಾಗಿದ್ದಾರೆ.
ಈ ರೀತಿಯಲ್ಲಿ ಮನುಷ್ಯನ ಜೀವನದಲ್ಲಿ ಚಂದ್ರ ರಾಶಿ ಎಷ್ಟು ಪ್ರಮುಖವಾಗಿದೆ ಎಂದು ನೀವು ನೋಡಬಹುದು. ಈ ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ನಿಮ್ಮ ಚಂದ್ರ ರಾಶಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
AstroSage TVSubscribe
- Horoscope 2023
- राशिफल 2023
- Calendar 2023
- Holidays 2023
- Chinese Horoscope 2023
- Education Horoscope 2023
- Purnima 2023
- Amavasya 2023
- Shubh Muhurat 2023
- Marriage Muhurat 2023
- Chinese Calendar 2023
- Bank Holidays 2023
- राशि भविष्य 2023 - Rashi Bhavishya 2023 Marathi
- ராசி பலன் 2023 - Rasi Palan 2023 Tamil
- వార్షిక రాశి ఫలాలు 2023 - Rasi Phalalu 2023 Telugu
- રાશિફળ 2023 - Rashifad 2023
- ജാതകം 2023 - Jathakam 2023 Malayalam
- ৰাশিফল 2023 - Rashifal 2023 Assamese
- ରାଶିଫଳ 2023 - Rashiphala 2023 Odia
- রাশিফল 2023 - Rashifol 2023 Bengali
- ವಾರ್ಷಿಕ ರಾಶಿ ಭವಿಷ್ಯ 2023 - Rashi Bhavishya 2023 Kannada