Rashi Bhavishya 2012 - Kannada Horoscope 2012 - Kannada Astrology 2012
ಮೇಷ | ವೃಷಭ | ಮಿಥುನ | ಕಟಕ |
ಸಿಂಹ | ಕನ್ಯ | ತುಲಾ | ವೃಶ್ಚಿಕ |
ಧನು | ಮಕರ | ಕುಂಭ | ಮೀನ |
ಜನವರಿ--ಹೊಸ ವರ್ಷದಲ್ಲಿ ಯಾವುದೇ ಕೆಲಸ ಮಾಡುವ ಮೊದಲು ಚೆನ್ನಾಗಿ ಆಲೋಚಿಸಿ.ಆರೋಗ್ಯದ ಕಡೆ ಹೆಚ್ಚು ಗಮನಕೊಡವ ಅಗತ್ಯವಿದೆ.ನಿಮ್ಮ ಭೋಜನದ ಕಡೆ ಹೆಚ್ಚು ಗಮನ ಹರಿಸಿ ನಿಯಂತ್ರಣದಲ್ಲಿರಿ.ಸ್ನೇಹಿತರ ಸಹಾಯವಿಲ್ಲದೆ ಯಾವುದೆ ಕೆಲಸದಲ್ಲು ಯಶಸ್ಸು ಸಿಗುವುದು ಸುಲಭವಲ್ಲ, ಆದ್ದರಿಂದ ಸ್ನೇಹಿತರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕ್ಕೊಳ್ಳುವುದು ಅಗತ್ಯ.ದೇವತಾರಾಧನೆ ಮಾಡಿ,ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಹಾಗು ಮುಂದೆ ಬರಲಿರುವ ಕಷ್ಟಗಳು ಸಹ ಪರಿಹಾರವಾಗುತ್ತದೆ.
ಫೆಬ್ರವರಿ--ಈ ತಿಂಗಳು ನೀವು ಬಹಳ ಎಚ್ಚರದಿಂದಿರಬೇಕು.ಶತ್ರುಗಳು ನಿಮಗೆ ತೊಂದರೆ ಕೊಡುವುದರಲ್ಲಿ ಸಫಲರಾಗುವ ಸಾಧ್ಯತೆಗಳಿವೆ.ದಂಪತಿಗಳ ನಡುವೆ ಮನಸ್ಥಾಪಗಳು ಉಂಟಾಗಬಹುದು.ಆರ್ಥಿಕ ತೊಂದರೆಗಳು ಸಹ ಉಂಟಾಗುವ ಸಾಧ್ಯತೆಗಳಿವೆ, ವಿಶೇಷವಾಗಿ ತಿಂಗಳಕೊನೆಯಲ್ಲಿ.ದೇವರ ಕೃಪೆಯಿಂದ ಸುಗುವ ವ್ಯಕ್ತಿಯಿಂದ ನಿಮ್ಮ ಜೀವನಕ್ಕೆ ಒಂದು ಹೊಸ ತಿರುವು ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ.ಸ್ನೇಹಿತರು ಹಾಗು ಸಹೋದರರಿಂದ ನಿಮಗೆ ಸಹಯೋಗ ಸಿಗುತ್ತದೆ.
ಮಾರ್ಚ--ನೀವು ಹೊಸ ಮನೆ ಕಟ್ಟಿಸುವ ಸಾಧ್ಯತೆಗಳಿವೆ.ವ್ಯಾಪಾರದಲ್ಲಿ ಹೆಚ್ಚಿಗೆ ಲಾಭವಿರುವುದಿಲ್ಲ. ರಾಜಕೀಯದಲ್ಲಿ ನಿಮಗೆ ಏಳಿಗೆ ಉಂಟಾಗುತ್ತದೆ.ವಿರೋಧಿಗಳು ನಿಮ್ಮ ಸುತ್ತ ಇರುತ್ತಾರೆ. ಅನಾವಶ್ಯಕವಾಗಿ ಯಾವುದೇ ಕಾನೂನು ವ್ಯವಹಾರಗಳಲ್ಲಿ ಕೈ ಹಾಕಬೇಡಿ.ಕೆಲವು ವಿಶೇಷ ವರ್ಗದ ವ್ಯಪಾರಿಗಳಿಗೆ ಲಾಭ ಉಂಟಾಗುವ ಸಾಧ್ಯತೆಗಳಿವೆ.
ಏಪ್ರಿಲ್-ಅದೃಷ್ಟದ ತಾರೆ ಬಲವಾಗೆದೆ,ಹೊಸ ವಾಹನವನ್ನು ಖರೀದಿಸಬಹುದು.ಪ್ರೀತಿ ಪ್ರೇಮದ ವಿಶಯದಲ್ಲಿ ಈ ತಿಂಗಳು ಬಹಳ ಉತ್ತಮವಾಗಿದೆ.ಬಹಳ ಹಳೆಯ ಸ್ನೇಹಿತರನ್ನು ಅಕಸ್ಮಿಕವಾಗಿ ಭೇಟಿಯಾಗುವ ಸಾಧ್ಯತೆಗಳಿವೆ.ಈ ಭೇಟಿಯು ನಿಮಗೆ ಲಾಭವುಟುಮಾಡುತ್ತದೆ.ಬಹಳ ವರ್ಷಗಳಿಂದ ಖಾಯಿಲೆಯಿಂದ ತೊಂದರೆ ಅನುಭವಿಸುತ್ತಿರುವವರಿಗೆ ಅದರಿಂದ ಬಿಡುಗಡಿ ಸಿಗುವ ಯೋಗವಿದೆ.ಯಾರಿಗು ಸಾಲ ಕೊಡಬೇಡಿ,ವಾಪಸ್ಸು ಪಡೆಯಲು ಬಹಳ ಕಷ್ಟಪಡಬೇಕಾಗುತ್ತದೆ.
ಮೇ-ಈ ತಿಂಗಳು ಸಹ ನಿಮಗೆ ಉತ್ತಮವಾಗಿರುವುದ್ದಿಲ್ಲ. ಮೊದಲೆ ನಿಶ್ಚಯಿಸಿರುವ ಪ್ರಕಾರ ಕೆಲಸಗಳನ್ನು ಮಾಡಿ. ಸಂಸಾರ ತಾಪತ್ರೆಯಗಳು ನಿಮಗೆ ತೊಂದರೆ ಉಂಟುಮಾಡಬಹುದು, ವಿಶೇಷವಾಗಿ ಸ್ತ್ರಿಯರಿಗೆ. ನಿತ್ಯವು ನಿಮ್ಮ ನಿಮ್ಮ ಧರ್ಮದ ಅನುಸಾರವಾಗಿ ಮಂದಿರಗಳಿಗೆ ಹೋಗಿ ಪ್ರಾರ್ಥನೆ ಮಾಡಿ. ತಿಂಗಳಿನ ಕೊನೆ ಆಗುತ್ತಿದಂತೆ ಪರಿಸ್ಥಿತಿ ಸುಧಾರಿಸಲು ಪ್ರಾರಂಭವಾಗುತ್ತದೆ.
ಜೂನ್-ನಿಮ್ಮ ಕಷ್ಟಗಳು ಕೊನೆಗೊಂಡಿದೆ. ಹಿಂದಿನ ಕೆಲಸಗಳಿಂದ ಲಾಭಗಳು ಉಂಟಾಗಲು ಪ್ರಾರಂಭವಾಗುತ್ತದೆ.ನೀವು ಹೊಸ ಕೆಲಸವನ್ನು ಸಹ ಪ್ರಾರಂಭಿಸಬಹುದು. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುತ್ತಾರೆ, ಆದರೆ ಯಾರನ್ನು ಕಣ್ಣುಮುಚ್ಚಿ ನಂಬಬೇಡಿ,ಹಾಗೆ ಮಾಡಿದಲ್ಲಿ ನಿಮಗೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ಮನೆಯ ಕಡಿಯಿಂದ ಸಣ್ಣ ಪುಟ್ಟ ತೊಂದರೆಗಳು ಉಂಟಾಗುವ ಸಾಧ್ಯತೆಗಳಿವೆ,ಆರ್ಥಿಕ ಸ್ಥಿತಿ ಸಧೃಡವಾಗಿರುತ್ತದೆ.
ಜುಲೈ-ಔತಣ ಕೊಡುವ ತೈಯಾರಿ ಮಾಡಿಕೊಳ್ಳಿ, ಬಹಳ ತಿಂಗಳುಗಳಿಂದ ನಿಂತಿದ್ದ ಕೆಲಸ ಪೂರ್ಣಗೊಳ್ಳುತ್ತದೆ. ಕೆಲಸದಲ್ಲಿ ಭಡ್ತಿ ಸಿಗುವ ಯೋಗವಿದೆ.ಹೆಂಡತಿಯ ಮನೆಯವರೊಂದಿಗೆ ಒಳ್ಳೆಯ ಸಂಬದ್ಧವನ್ನು ಇಟ್ಟುಕೊಳ್ಳಿ,ವ್ಯಾಪಾರಿಗಳಿಗೆ ವಿಶೇಷ ಲಾಭ ಉಂಟಾಗುತ್ತದೆ. ಲೊಕವು ನಿಮ್ಮ ಕೆಲಸವನ್ನು ಮೆಚ್ಚಿ ಹೊಗಳುತ್ತದೆ.ನಿಮ್ಮ ಘನತೆ ಗೌರವ ಹೆಚ್ಚುತ್ತದೆ. ಮನೆಯಲ್ಲು ಎಲ್ಲ ಕೆಲಸಗಳು ಚೆನ್ನಾಗೆ ನಡೆಯುತ್ತದೆ.ವಿಧ್ಯರ್ಥಿಗಳಿಗು ಫಲಿತಾಂಶ ಉತ್ತಮವಾಗಿರುತ್ತದೆ.
ಆಗಸ್ಟ್-ಮನೆಗೆ ಹೊಸ ಅಥಿತಿಯ ಬರುವಿಕೆಯ ತೈಯಾರಿ ಭರದಿಂದ ಸಾಗುತ್ತದೆ.ಹೊಸಬರನ್ನು ಸುಲಭವಾಗಿ ನಂಬಬೇಡಿ.ಹಳೆಯ ಸಮಸ್ಯೆಗಳು ಹೊಸ ರೊಪದಲ್ಲಿ ನಿಮ್ಮ ಮುಂದೆ ಬರಬಹುದು.ಸ್ನೇಹಿತರೊಂದಿಗೆ ಸೇರಿ ಯಾವುದಾದರು ಹೊಸ ಕೆಲಸವನ್ನು ಪ್ರಾರಂಭಿಸಬಹುದು.ಉದ್ಯೋಗದಲ್ಲು ಏಳಿಗೆ ಉಂಟಾಗುವ ಸಾಧ್ಯತೆಗಳಿವೆ.
ಸೆಪ್ಟಂಬರ್-ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬತೆ,ನಿಮ್ಮ ಮಾತಿನ ಮೇಲೆ ಹಿಡಿತವಿರಲಿ,ಚೆನ್ನಾಗಿ ಯೋಚಿಸಿ ಮಾತಾಡಿ. ಮಹಿಳೆಯರಿಗೆ ಈ ತಿಂಗಳು ಅತ್ಯಂತ ಶುಭವಾಗಿದೆ. ಶತ್ರುಗಳ ಗುಪ್ತ ಷಡಯಂತ್ರಗಳಿದ ಎಚ್ಚರಿಕೆಯಿಂದಿರಿ.ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಆರೋಗ್ಯದ ಕಡೆ ಗಮನವಹಿಸಿ.ವಿಧ್ಯರ್ಥಿಗಳಿಗೆ ಸ್ಪರ್ದೆಗಳಲಿ ಫಲಿತಾಂಶ ಉತ್ತಮವಾಗಿರುತ್ತದೆ.
ಅಕ್ಟೋಬರ್-ಈ ತಿಂಗಳು ನಿಮಗೆ ಸಿಹಿ ಹಾಗು ಕಹಿಯು ಮಿಶ್ರವಾಗಿದೆ.ತಿಂಗಳ ಪ್ರಾರಂಭವು ಬಹಳ ಚೆನ್ನಾಗಿರುತ್ತದೆ, ಆದರೆ ತಿಂಗಳ ಕೊನೆಯಲ್ಲಿ ಕೆಲವು ಸಮಸ್ಯಗಳು ನಿಮಗೆ ತೊಂದರೆ ಕೊಡುವ ಸಾಧ್ಯತೆಗಳಿವೆ.ದೂರ ಪ್ರಯಾಣವು ಲಾಭವನ್ನು ತಂದುಕೊಡುವುದಾದರು ಬಹಳ ಹಣ ಖರ್ಚು ಮಾಡಬೇಕಾಗುತ್ತದೆ.ಶತ್ರುಗಳು ನಿಮಗೆ ತೊಂದರೆ ಮಾಡುವರಾದರು, ಸಫಲರಾಗುವುದಿಲ್ಲ.
ನವೆಂಬರ್-ನಷ್ಟವು ಇಲ್ಲ ಲಾಭವು ಇಲ್ಲ. ಈ ತಿಂಗಳು ಹೀಗೆಯೆ ಇರುತ್ತದೆ.ಭೌತಿಕ ಅಗತ್ಯತೆಗಳಿಗಾಗಿ ವಸ್ತುಗಳನ್ನು ಖರೀದಿಸುವಿರಿ.ವಿಹಾರ ಹಾಗು ಮನೋರಂಜನೆಗಾಗಿ ಬಹಳ ಖರ್ಚು ಮಾಡುವಿರಿ. ಶತ್ರುಗಳ ಬಗ್ಗೆ ಎಚ್ಚರವಿರಲಿ.
ಡಿಸೆಂಬರ್-ಆಕಸ್ಮಿಕ ಧನ ಲಾಭ,ನಿಮಗೆ ಸಾಲಗಳಿದ್ದ ಪಕ್ಷದಲ್ಲಿ ಅದನ್ನು ತೀರಿಸುವಲ್ಲಿ ಸಫಲರಾಗುವಿರಿ.ನಿಮ್ಮ ಮನಸಿನಲ್ಲಿ ಬಹಳ ದಿನಗಳಿಂದ ಅಂದುಕೊಂಡಿದ್ದ ಕೆಲಸವು ಕಾರ್ಯ ರೂಪಕ್ಕೆ ಬರುವ ಸಾಧ್ಯತೆಗಳಿವೆ.ಇದು ನಿಮ್ಮ ಯಶಸ್ಸಿನ ಒಂದು ದೊಡ್ಡ ಆ ಯಾಮವನ್ನು ಸೃಷ್ಠಿಸುತ್ತದೆ.
ಜನವರಿ--ಈ ತಿಂಗಳಿನಲ್ಲಿ ಏನೊ ವಿಶೇಷ ಸಂಭವಿಸಲಿದೆ.ರಾಜಕೀಯದಲ್ಲಿನ ಆಸಕ್ತಿಯು ಒಂದು ಉನ್ನತ ಪದವಿಯನ್ನಯ ದೊರಕಿಸಿಕೊಡುತ್ತದೆ.ಸ್ಪರ್ಧೆಗಳಲ್ಲಿ ಸಫಲತೆ ಸಿಗುತ್ತದೆ, ಸಾಹಿತ್ಯ ಹಾಗು ಸಂಗೀತದಲ್ಲಿ ಆಸಕ್ತಿಯಿಂದ ಲಾಭ.ಆರೋಗ್ಯದ ಕಡೆ ಗಮನ ಕೊಡಿ.ತಿಂಗಳಿನ ಪೂರ್ವಾರ್ಧದಲ್ಲಿ ಹೆಚ್ಚು ಖರ್ಚು,ಇದರಿಂದ ಹಣದ ಸಮಸ್ಯ ಉಂಟಾಗುತ್ತದೆ.ಬೆಳ್ಳಿಯ ಲೋಟದಲ್ಲಿ ಹರಿಯುವ ನದಿಯ ನೀರನ್ನು ತುಂಬಿ ಇಡುವುದರಿಂದ ಲಾಭವಾಗುತ್ತದೆ.
ಫೆಬ್ರವರಿ--ಈ ತಿಂಗಳಿನ ಗ್ರಹ ಗತಿಯ ಪ್ರಕಾರ ಮಧ್ಯಮ ಫಲಗಳು ಉಂಟಾಗುವ ಸಾಧ್ಯತೆಗಳಿವೆ, ಲಲಿತ ಕಲೆಗಳಲ್ಲಿ ಆಸಕ್ತಿ ಹೆಚ್ಚುತ್ತದೆ, ಅಥಿತಿಗಳ ಆಗಮನದಿಂದ ಸಂತೋಷವಾಗುತ್ತದೆ. ಅಂದುಕೊಂಡ ಕಾರ್ಯಗಳು ಬಹಳ ಕಷ್ಟಪಟ್ಟು ನೆರವೇರುತ್ತದೆ,ಸರ್ಕಾರಿ ಅಧಿಕಾರಿಗಳೊಂದಿಗೆ ಒಡನಾಟವನ್ನು ತ್ಯಜಿಸಿ.ಜೀವನೋಪಾಯಕ್ಕಾಗಿ ಕೆಲಸ ಮಾಡುವವರು ತಮ್ಮ ಸಹಯೋಗಿಗಳೊಂದಿಗಿನ ಸಂಭಂಧವನ್ನು ಉತ್ತಮವಾಗಿಸಬೇಕು,ನೀವು ನಿಮ್ಮ ಸಾರ್ಮಥ್ಯದಿಂದ ಸನ್ನಿವೇಶವನ್ನು ಸಕಾರಾತ್ಮಕವಾಗಿ ಬಗೆಹರಿಸುವಿರಿ.
ಮಾರ್ಚ--ನಿಮ್ಮ ಪರಿವಾರದ ಸಹಯೋಗದಿಂದ ಜೀವನದಲ್ಲಿ ಸಂತೋಷ ಬರುತ್ತದೆ. ಧನದ ಅಪವ್ಯಯ. ಪ್ರವಾಸ ಹೋಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಗಳಿವೆ. ಶಿಕ್ಷಣ ಕ್ಷೇತ್ರದಲ್ಲಿ ವಿಧ್ಯರ್ಥಿಗಳಿಗೆ ಓದುವ ಆಸಕ್ತಿ ಹೆಚ್ಚುತ್ತದೆ. ಪ್ರೇಮ ಸಂಭಂಧಗಳು ಸದೃಡವಾಗುತ್ತದೆ.ವ್ಯಾಪಾರದಲ್ಲಿ ಲಾಭ ಹಾಗು ಉನ್ನತಿಯ ಅವಕಾಶಗಳು ಪ್ರಾಪ್ತವಾಗುತ್ತದೆ.
ಏಪ್ರಿಲ್-ನಿಮ್ಮ ಮನೆಯ ಬಾಗಿಲಿಗೆ ಅದೃಷ್ಟ ದೇವತೆಯು ಬರುತ್ತಾಳೆ ಸ್ವಾಗತಿಸಲು ತೈಯಾರಾಗಿರಿ.ನೌಕರಿಯಲ್ಲಿ ಭಡ್ತಿ ಹಾಗು ವ್ಯಾಪಾರದಲ್ಲಿ ಲಾಭ ಬರುವ ಯೋಗವಿದೆ.ಪ್ರವಾಸಕ್ಕೆ ಹೋಗುವ ಅವಕಾಶಗಳು ಸಿಗುತ್ತದೆ, ಅದರೆ ಇದು ಬಹಳ ಆಯಾಸವನ್ನು ಉಂಟುಮಾಡುತ್ತದೆ .ಶುಭ ಸಮಾಚಾರದಿಂದ ಮನಸಿಗೆ ಸಂತೋಷವುಂಟಾಗುತ್ತದೆ. ವಿಧ್ಯಾರ್ಥಿಗಳಿಗೆ ಏಕಾಗ್ರತೆಯನ್ನು ಗಳಿಸಲು ಬಹಳ ಪರಿಶ್ರಮದ ಅಗತ್ಯವಿದೆ.
ಮೇ-ಈ ತಿಂಗಳು ನಿಮಗೆ ಮೇಲ್ನೋಟಕ್ಕೆ ಸರಿಯಾಗಿರುತ್ತದೆ. ವ್ಯಾಪಾರದಲ್ಲಿ ಹೊಸ ಆದರ್ಶಗಳಿಂದಾಗಿ ಲಾಭವುಂಟಾಗುತ್ತದೆ. ಭಾವುಕರಾಗುವುದು ಒಳ್ಳೆಯದು, ಆದರೆ ಹೆಚ್ಚು ಭಾವುಕರಾಗದಿರಿ. ಸುಖ ಹಾಗು ಧನ ಲಾಭದ ಸಂಕೇತ. ಮಂಡಿ ನೋವು ಅಥವ ಮೂಳೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ನೌಕರಿಯಲ್ಲಿ ವರ್ಗಾವಣೆಯಿಂದಾಗಿ ಪರಿವಾರದಿಂದ ಅಗಲುವ ಸಾಧ್ಯತೆಗಳಿವೆ.
ಜೂನ್-ನಿಮ್ಮ ಸಮಯ ಸರಿಯಿಲ್ಲದಿರುವ ಕಾರಣ ಹೆಚ್ಚು ಎಚ್ಚರ ವಹಿಸವ ಅಗತ್ಯವುದೆ. ಪ್ರಯಾಣ ಮಾಡುವ ಮೊದಲು ನಿಮ್ಮ ಇಷ್ಟ ದೇವರನ್ನು ನೆನೆಯಲು ಮರೆಯದಿರಿ. ವಾಹನವನ್ನು ಓಡಿಸುವಾಗ ಎಚ್ಚರಿಕೆಯಿಂದಿರಿ. ಊಟೋಪಚಾರದ ಕಡೆ ಗಮನವಿರಲಿ. ಶುಭ ಸಮಾಚಾರ ಬರುವ ಸಾಧ್ಯತೆಗಳಿವೆ.
ಜುಲೈ-ಇಚ್ಛಿಸಿದ ಲಾಭದ ಸಂತೋಷವು ನಿಮ್ಮದಾಗುತ್ತದೆ. ಸ್ಪರ್ದೆಗಳಲ್ಲಿನ ಫಲಿತಾಶಗಳು ನಿಮಗೆ ಸಂತಸ ನೀಡುತ್ತದೆ. ಸ್ತ್ರೀಯರು ಆರೋಗ್ಯದ ಕಡೆ ಗಮನ ಹರಿಸಬೇಕಾಗುತ್ತದೆ. ನೌಕರಿಯಲ್ಲಿ ಭಡ್ತಿಯ ಸಾಧ್ಯತೆಗಳಿವೆ. ಆರೋಗ್ಯವು ಹದಗೆಡುವ ಸಾಧ್ಯತೆಗಳಿವೆ. ವಿಧ್ಯಾರ್ಥಿಗಳಿಗೆ ಶುಭ ಸಮಾಚಾರ.
ಆಗಸ್ಟ್-ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ಮೂಡುತ್ತದೆ. ಸಹೋದರ-ಸಹೋದರಿಯರ ಸಹಯೋಗವು ಜೀವನದಲ್ಲಿ ನವೊಲ್ಲಾಸವನ್ನು ತರುತ್ತದೆ. ವ್ಯಾಪಾರದಲ್ಲಿ ಹೊಸ ಯಶಸ್ಸು ಸಿಗುತ್ತದೆ.ನಿಂತು ಹೊಗಿದ್ದ ಕೆಲಸಗಳು ಪೂರ್ಣಗೊಳ್ಳುತ್ತದೆ. ಉದ್ಯೋಗಿಗಳಿಗೆ ಜೀವನದಲ್ಲಿ ಉನ್ನತಿಯ ಹೊಸ ಅವಕಾಶಗಳು ಬರಲಿದೆ.
ಸೆಪ್ಟಂಬರ್-ಹವಾಮಾನದಲ್ಲಿನ ಬದಲಾವಣೆಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ದೂರದ ನೆಂಟರು ನಿಮ್ಮ ಮನೆಗೆ ಬರಬಹುದು. ನಿಮ್ಮ ಸಣ್ಣ ರ್ನಿಲಕ್ಷವು ನಿಮಗೆ ಬಹಳ ನಷ್ಟವುಂಟುಮಾಡುವ ಸಾಧ್ಯತೆಗಳಿವೆ. ಲಾಟರಿಯಿಂದ ಲಾಭ.
ಅಕ್ಟೋಬರ್-ಯಾರೋ ನಿಮ್ಮ ವಿರುದ್ಧ ಶಡಯಂತ್ರ ಹೂಡುತ್ತದ್ದಾರೆ ಎಚ್ಚರದಿಂದಿರಿ. ಸ್ವಲ್ಪ ಎಡವಿದರೂ ಹೆಚ್ಚು ನಷ್ಟವುಟಾಗುವ ಸಾಧ್ಯತೆಗಳಿವೆ. ಮಂಗಳ ಕಾರ್ಯ ನಡೆಯುವ ಯೋಗವಿದೆ. ಸಕಾರಾತ್ಮಕ ವಾತಾವರಣ ಉಂಟಾಗುತ್ತದೆ. ಹೆಚ್ಚು ಶ್ರಮ ಪಡಬೇಕಾಗುತ್ತದೆ, ಶ್ರಮಕ್ಕೆ ತಕ್ಕ ಪ್ರತಿ ಫಲವು ಸಿಗುತ್ತದೆ.
ನವೆಂಬರ್-ಎಲ್ಲಾ ಗ್ರಹಗಳು ನಿಮ್ಮ ಜೊತೆಗಿದೆ.ನೌಕರಿಯಲ್ಲಿ ಏಳು ಬೀಳುಗಳು ಸಂಭವಿಸಬಹುದು.ಯಾವುದೇ ಕೆಲಸವನ್ನು ಗಡಿಬಿಡಿಯಿಂದ ಮಾಡಬೇಡಿ,ಇಲ್ಲದಿದ್ದರೆ ನಿಮಗೆ ನಷ್ಟ ಸಂಭವಿಸುತ್ತದೆ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದಕ್ಕೆ ಇಳಿಯದಿರಿ. ಅರೋಗ್ಯದಲ್ಲಿ ಸುಧಾರಣೆ. ಖರ್ಚಿನ ಮೇಲೆ ಹಿಡಿತವಿರಲಿ.
ಡಿಸೆಂಬರ್-ಈ ತಿಂಗಳಿನಲ್ಲಿ ಯಶಸ್ಸು ಸಿಗುವ ಯೋಗವಿದೆ. ಆರ್ಥಿಕ ಸ್ಥಿತಿ ಸದೃಡವಾಗುತ್ತದೆ. ಹೊಸ ಖರೀದಿಗೆ ಉತ್ತಮ ಸಮಯ. ಹೊಸ ಲಾಭದಾಯಕ ಸಂಭಂದಗಳು ಉಂಟಾಗುತ್ತದೆ. ಧಾರ್ಮಿಕ ಕಾರ್ಯಗಳಿಲ್ಲಿ ಆಸಕ್ತಿ ಹೆಚ್ಚುತ್ತದೆ. ವೈವಾಹಿಕ ಜೀವನದಲ್ಲಿ ಸುಖ ದುಖಃಗಳು ಬರುತ್ತದೆ. ವಿಧ್ಯರ್ಥಿಗಳಿಗೆ ಹೆಚ್ಚಿನ ಪರಿಶ್ರಮದ ಅಗತ್ಯವಿದೆ.
ಜನವರಿ--ಸ್ವಲ್ಪ ಕಷ್ಟದ ಸಮಯ. ನೀವು ನಿಮ್ಮ ಕೆಲಸಗಳ ಬಗ್ಗೆ ನಿರ್ಲಕ್ಷ ತೋರುವಿರಿ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ದೊರಕದ ಕಾರಣ ನೀವು ಹತಾಶರಾಗುವ ಸಾಧ್ಯತೆಗಳಿವೆ. ನಿಮಗೆ ಯಾರಾದರು ನಂಬಿಕೆ ದ್ರೋಹ ಮಾಡಬಹುದು.
ಫೆಬ್ರವರಿ-- ಬೇರೆಯವರ ಕಷ್ಟಗಳ ಬಗ್ಗೆ ವಿನಾಕಾರಣ ತಲೆ ಕಡಿಸಿಕೊಳ್ಳ ಬೇಡಿ. ವ್ಯಾಪಾರದಲ್ಲಿ ಹಣ ಹೂಡಿದರೆ ಲಾಭದಾಯಕ. ಸಂಸಾರದಲ್ಲಿ ಸುಖ. ನಿಮ್ಮ ಆಲೋಚನೆಗಳು ನಿಮಗೆ ಗುಣಕಾರಿಯಾಗದಿದ್ದರೆ, ಯಾರಾದರು ಯೋಗ್ಯ ಹಾಗು ವಿಶ್ವಾಸಾರ್ಹ ವ್ಯಕ್ತಿಯ ಸಲಹೆಯಂತೆ ನಡೆಯುವುದು ಉತ್ತಮ.
ಮಾರ್ಚ- ಒಳ್ಳೆಯ ಕಾಲ ಬರಲಿದೆ. ಶುಭ ಸಂದೇಶವು ಜೀವನದಲ್ಲಿ ಸಂತೋಷ ತರಲಿದೆ. ಈ ಶುಭ ಸಮಯದ ಸಂಪೂರ್ಣ ಲಾಭವನ್ನು ಪಡೆಯಿರಿ. ಕೆಲಸಕ್ಕೆ ಬೇಕಾದ ಹೊಸ ವಸ್ತುಗಳು ಸಿಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಮನಸ್ಸಿಗೆ ನೆಮ್ಮದಿ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಸಿಗುತ್ತದೆ.
ಏಪ್ರಿಲ್- ನಿಮ್ಮ ಜೀವನದಲ್ಲಿ ಕೆಲವು ಆಶ್ಚರ್ಯಕರ ಘಟನೆಗಳು ನಡೆಯುತ್ತವೆ. ಇಂತಹ ಸಮಯದಲ್ಲಿ ಸ್ನೇಹಿತರು ನಿಮ್ಮ ನೆರವಿಗೆ ಬರುತ್ತರೆ. ವಿಧ್ಯಾರ್ಥಿಗಳಿಗೆ ಓದಿನ ಕಡೆಗೆ ಹೆಚ್ಚು ಆಸಕ್ತಿ ಕೊಡುವ ಅಗತ್ಯವಿದೆ. ಕಾನೂನಿನ ವ್ಯವಹಾರಗಳು ತೊಂದರೆ ಉಂಟುಮಾಡುವ ಸಾಧ್ಯತೆಗಳಿವೆ. ರಿಯಲ್ ಎಸ್ಟೇಟ್‌ನಲ್ಲಿ ಹಣ ಹೂಡಬೇಡಿ.
ಮೇ- ನೀವು ಶ್ರಮ ಪಟ್ಟರೆ ಯಶಸ್ಸಿನ ಹೊಸ ದಾರಿ ನಿಮಗಾಗಿ ತೆರೆದುಕೊಳ್ಳುತ್ತದೆ. ಹವಾಮಾನದ ಬದಲಾವಣೆಯಿಂದ ಆರೋಗ್ಯ ಕೆಡುವ ಸಾಧ್ಯತೆ. ತಂದೆ-ತಾಯಿಯೋಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ, ವಿಹಾರಕ್ಕೆ, ಪ್ರವಾಸಕ್ಕೆ ಹೋಗುವ ಮೊದಲು ಮನೆಯ ಸುರಕ್ಷೆಯ ಬಗ್ಗೆ ಹೆಚ್ಚು ಗಮನ ಕೊಡಿ. ಮನೋರಂಜನೆಗಾಗಿ ಹೆಚ್ಚು ಹಣ ಖರ್ಚು ಮಾಡುವುದರಿಂದ ತಿಂಗಳ ಕೊನೆಯಲ್ಲಿ ಹಣದ ಅಭಾವ ಉಂಟಾಗುವ ಸಾಧ್ಯತೆ.
ಜೂನ್- ಪರಿವಾರದೊಂದಿಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಹೊರಗೆ ಸುತ್ತಾಡಲು ಹೋಗುವ ಸಾಧ್ಯತೆಗಳಿವೆ. ಶತ್ರುಗಳು ನಿಮಗೆ ತೊಂದರೆ ಕೊಡಲು ಕಾದಿದ್ದಾರೆ ,ಎಚ್ಚರದಿಂದಿರಿ. ಮನೆಯಲ್ಲಿ ಹೊಸ ಸಂತೋಷ ಬರಲಿದೆ. ಒಟ್ಟಾರೆ ಈ ತಿಂಗಳು ಫಲಪ್ರದವಾಗಿದೆ.
ಜುಲೈ- ನೀವು ಕಾಯುತ್ತಿದ್ದ ಕ್ಷಣ ಮನೆ ಬಾಗಿಲಿಗೆ ಬರಲಿದೆ. ಹಳೆಯ ಮುಕದ್ದಮೆಗಳಿಂದ ಬಿಡುಗಡೆ ಲಭಿಸುತ್ತದೆ. ಸಮಯದ ಸದುಪಯೋಗ ಪಡೆದುಕೊಳ್ಳಿ. ನಿಮ್ಮ ಆಸೆಗಳು ಇಡೇರಲಿವೆ. ವ್ಯಾಪಾರದಲ್ಲಿ ಲಾಭ.
ಆಗಸ್ಟ್- ಜೀವನದಲ್ಲಿ ಹೊಸ ಬದಲಾವಣೆಗಳಾಗುತ್ತದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ-ಮಾನ ಹೆಚ್ಚುತ್ತದೆ. ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತುಷ್ಟರಾಗುತ್ತಾರೆ. ಮಕ್ಕಳ ನಡವಳಿಕೆಯು ಸಹಯೋಗಾತ್ಮಕವಾಗಿರುತ್ತದೆ. ವ್ಯಾಪಾರದಲ್ಲಿ ಉನ್ನತಿ ಪ್ರಾಪ್ತವಾಗುತ್ತದೆ.
ಸೆಪ್ಟಂಬರ್- ಈ ಸಮಯ ಕೇವಲ ಯೋಜನೆಗಳನ್ನು ರೂಪಿಸುವುದಕ್ಕೆ ಮಾತ್ರವಲ್ಲದೆ ಅದನ್ನು ಕಾರ್ಯ ರೂಪಕ್ಕೆ ತರಬೇಕಾಗಿದೆ. ಆಕಸ್ಮಿಕ ದೂರ ಪ್ರಯಾಣದ ಸಾಧ್ಯತೆ. ಜೀವನದಲ್ಲಿ ಹೊಸ ಸಂತೋಷಗಳು ಬರಲಿವೆ. ಅದನ್ನು ಕೈ ಬೀಸಿ ಸ್ವಾಗತಿಸಿ. ಏಕಾಗ್ರತೆಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ.
ಅಕ್ಟೋಬರ್- ಹೊಸತು ಸಂಭವಿಸುತ್ತದೆ. ಸಂಪಾದನೆಯ ಹೊಸ ದಾರಿಗಳು ಕಾಣಲಿವೆ. ಪ್ರಾಪರ್ಟಿಯಲ್ಲಿ ಹಣ ಹೂಡುವ್ಯದರಿಂದ ಲಾಭ. ನಿಮ್ಮ ಸಂತಾನ ನಿಮ್ಮ ಬಳಿ ಕಾಲಾವಕಾಶ ಕೇಳುವ ಸಾಧ್ಯತೆಗಳಿವೆ, ಅವರ ಕಡೆಗು ಸ್ವಲ್ಟ ಗಮನ ಕೊಡಿ.
ನವೆಂಬರ್- ಈ ತಿಂಗಳಿನಲ್ಲಿ ಎಲ್ಲವು ಮಧ್ಯಮವಾಗಿರುತ್ತದೆ. ಆರ್ಥಿಕವಾಗಿ ಅಷ್ಟು ಒಳ್ಳೆಯ ಸಮಯವಲ್ಲ. ನೀವು ಮಾನಸಿಕವಾಗಿ ತೊಂದರೆಗಳನ್ನು ಅನುಭವಿಸುವಿರಿ. ಪರಿವಾರದಿಂದ ಅಶುಭ ಸಮಾಚಾರ ಬರುವ ಸಾಧ್ಯತೆಗಳಿವೆ.
ಡಿಸೆಂಬರ್- ಪ್ರಣಯಕ್ಕೆ ತಕ್ಕ ಸಮಯ. ತಿಂಗಳ ಕೊನೆಯಲ್ಲಿ ಶುಭ ಸಮಾಚಾರ ಬರುವ ಸಾಧ್ಯತೆಗಳಿವೆ. ಹಳೆಯ ಮಿತ್ರರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಸಮಯ ಹಾಳು ಮಾಡಬೇಡಿ. ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ.
ಜನವರಿ-- ನಿಂತು ಹೋಗಿದ್ದ ಕೆಲಸಗಳು ಪೂರ್ಣಗೊಳ್ಳುತ್ತದೆ. ಸಮವಯಸ್ಕರೊಂದಿಗೆ ಪ್ರೇಮಭಾವ ಹೆಚ್ಚುತ್ತದೆ. ಹೊಸ ಉದ್ಯೋಗಾವಕಾಶದ ಯೋಗವಿದೆ. ಆಫೀಸಿನಲ್ಲಿ ನಿಮ್ಮ ವಿರುದ್ಧ ಯಾರೋ ಪಿತೂರಿ ನಡೆಸುತ್ತಿದ್ದಾರೆ, ಎಚ್ಚರಿಕೆಯಿಂದಿರಿ. ಸ್ನೇಹವು ಪ್ರೇಮವಾಗಿ ಪರವರ್ತನೆಯಾಗುವ ಸಂಕೇತಗಳು ಕಂಡು ಬರುತ್ತಿದೆ. ಎಲ್ಲವೂ ಒಳ್ಳೆಯದಾಗುತ್ತದೆ.
ಫೆಬ್ರವರಿ-- ತಿಂಗಳ ಪ್ರಾರಂಭದಲ್ಲಿ ನಿಮಗೆ ಒಳ್ಳೆಯದಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ. ಉಳಿತಾಯವು ಹೆಚ್ಚುತ್ತದೆ. ಪ್ರೇಮಿಗಳಿಗೆ ಒಳ್ಳೆಯ ಸಮಯ.
ಮಾರ್ಚ- ನಿಮಗಾಗಿ ಸ್ವಲ್ಪ ಸಮಯವನ್ನು ಕಾಯ್ದಿರಿಸಿ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಹೊರತು ಪಡಿಸಿದರೆ ಆರೋಗ್ಯವು ಸರಿಯಾಗಿರುತ್ತದೆ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಪ್ರೇಮ ಪ್ರಸಂಗಗಳಲ್ಲಿ ವ್ಯರ್ಥ ವಾದ-ವಿವಾದದಿಂದ ದೂರವಿರಿ.
ಏಪ್ರಿಲ್- ಬೇರೆಯವರನ್ನು ದೂಶಿಸುವ ಸ್ವಭಾವದಿಂದಾಗಿ ವಿರೋಧವನ್ನು ಎದುರಿಸಬೇಕಾಗುತ್ತದೆ. ಯಾವುದೇ ಹೊಸ ಕೆಲಸಗಳನ್ನು ಪ್ರಾರಂಭಿಸಲು ಒಳ್ಳೆಯ ಸಮಯವಲ್ಲ. ಮೇಲಧಿಕಾರಿಗಳು ನಿಮ್ಮ ಮೇಲೆ ಕೋಪಗೋಳ್ಳುವ ಸಾಧ್ಯತೆಗಳಿವೆ. ಯಾವುದೇ ಕ್ಷೇತ್ರದಲ್ಲಿ ಹಣ ಹೂಡುವ ಮೊದಲು ಅದರ ಬಗ್ಗೆ ತಿಳಿದವರಿದ ಸಲಹೆ ಪಡೆದುಕೊಳ್ಳುವು ಉತ್ತಮ.
ಮೇ- ಅಥಿತಿಗಳ ಸ್ವಾಗತಕ್ಕಾಗಿ ತೈಯಾರಾಗಿರಿ. ವಿಧ್ಯಾರ್ಥಿಗಳಿಗೆ ಯಶಸ್ಸು. ಪ್ರಾಪರ್ಟಿಯಲ್ಲಿ ಹಣ ಹೂಡಿ. ಮೇಲಧಿಕಾರಿಗಳೊಂದಿಗೆ ಅನಾವಶ್ಯಕ ವಾದ ಮಾಡಬೇಡಿ. ನಿವೇಶನ ಹೂಡಲು ಹೊಸ ಯೋಜನೆಗಳನ್ನು ಮಾಡುವಿರಿ.
ಜೂನ್- ನೀವು ಬಯಸಿದ್ದು ನಿಮಗೆ ಸಿಗುವುದರಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ. ನಿಮ್ಮ ವರಮಾನದಲ್ಲಿ ವೃದ್ಧಿ ಉಂಟಾಗುವುದರಿಂದ ಆರ್ಥಿಕ ಸ್ಥಿತೆ ಸಧೃಢವಾಗುತ್ತದೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ಸ್ನೇಹಿತರಿಂದ ಸಹಯೋಗ. ಪತ್ನಿಯ ಆರೋಗ್ಯವು ಚಿಂತಾಜನಕವಾಗುವ ಸಾಧ್ಯತೆಗಳಿವೆ. ದೂರ ಪ್ರಯಾಣವು ನಿಮಗೆ ದಣಿವುಂಟುಮಾಡುತ್ತದೆ. ಕಾರ್ಯ ರೂಪಕ್ಕೆ ತರಲು ಸಾಧ್ಯವಿಲ್ಲದ ಯೋಜನೆಗಳನ್ನು ಹಮ್ಮಿಕೊಳ್ಳಬೇಡಿ.
ಜುಲೈ- ಎಲ್ಲವೂ ಸಾಮಾನ್ಯವಾಗಿರುತ್ತದೆ. ಅನಾವಶ್ಯಕವಾಗಿ ಅಲೆದಾಡುವುದನ್ನು ನಿಲ್ಲಿಸಿ. ಓದಿನ ಕಡೆ ಹೆಚ್ಚು ಗಮನ ಕೊಡಿ. ಏಳು ಬೀಳುಗಳ ನಡುವೆ ಈ ತಿಂಗಳ ಉತ್ತರಾರ್ಧಕ್ಕೆ ಎಲ್ಲವು ಸರಿ ಹೋಗುತ್ತದೆ. ನಿಂತಿರುವ ಕೆಲಸಗಳು ಪೂರ್ಣಗೊಳ್ಳುವ ಸಮಯ ಹತ್ತಿರವಿದೆ.
ಆಗಸ್ಟ್- ಹಳೆಯ ಸ್ನೇಹಿತರೊಂದಿಗಿನ ಭೇಟಿಯು ನಿಮ್ಮ ಜೀವನದಲ್ಲಿ ಹೊಸ ಚೇತನವನ್ನು ತುಂಬುತ್ತದೆ. ಹೊರಗಿನ ಆಹಾರವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಪರಿವಾರವು ಸದಾ ನಿಮ್ಮ ಬೆಂಬಲಕ್ಕೆ ಇರುತ್ತದೆ. ವಿಧ್ಯರ್ಥಿಗಳಿಗೆ ಒಳ್ಳೆಯ ಸಮಯ.
ಸೆಪ್ಟಂಬರ್-ಮನೆಯವರಿಗೆ ಕೋಪಬರುವ ಹಾಗೆ ನಡೆದುಕೊಳ್ಳಬೇಡಿ, ಆಗುವ ಕೆಲಸವು ನಿಂತು ಹೋಗುವ ಸಾಧ್ಯತೆಗಳಿವೆ. ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವುದರಿಂದ ನಿಮ್ಮ ಮನಸ್ಸಿಗೆ ಸಂತೋಷ. ಯಾವುದಾದರು ಸ್ಪರ್ದೆಯ ತೈಯಾರಿಯಲ್ಲಿದ್ದರೆ ಯಶಸ್ಸು ನಿಮ್ಮದಾಗುತ್ತದೆ. ಆರೋಗ್ಯದ ಕಡೆ ಗಮನ ಕೊಡಿ. ಮಂಡಿ ನೋವು ಬರುವ ಸಾಧ್ಯತೆಗಳಿವೆ. ವ್ಯಪಾರದಲ್ಲಿ ಲಾಭ ಕಡಿಮೆಯಾಗುತ್ತದೆ.
ಅಕ್ಟೋಬರ್- ನೀವು ಚಿಂತೆಯಲ್ಲಿರುವಿರಿ. ಶತ್ರುಪಕ್ಷ ನಿಮ್ಮ ಮೇಲೆ ಭಾರಿಯಾಗುವ ಸಾಧ್ಯತೆಗಳಿವೆ. ಭೌತಿಕ ವಸ್ತುಗಳಿಗಾಗಿ ವ್ಯರ್ಥ ಖರ್ಚು ಮಾಡುವ ಸಂಬವವಿದೆ. ಯಾವಾಗಲು ಸಿಟ್ಟಿನ ಕೈಗೆ ಬುದ್ಧಿ ಕೊಡುವುದರಿಂದ ನಿಮಗೆ ನಷ್ಟವಾಗುತ್ತದೆ, ಆದ್ದರಿಂದ ಸಿಟ್ಟಿನ ಮೇಲೆ ಹಿಡಿತವಿಡುವುದ ಆವಶ್ಯಕವಾಗಿದೆ. ವೈವಾಹಿಕ ಜೀವನದಲ್ಲಿ ಸಂದೇಹವು ಹಾನಿಕರವಾಗಬಹುದು. ನಿಮ್ಮ ಸಂಗಾತಿಯೊದಿಗೆ ನೇರವಾಗಿ ಮಾತಾಡಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಉತ್ತಮ.
ನವೆಂಬರ್- ತಿಂಗಳ ಪ್ರಾರಂಭದಲ್ಲಿ ಕಷ್ಟಗಳು ಉಂಟಾಗುತ್ತದೆ, ಆದರೆ ೧೫ ನೆ ತಾರೀಖಿನ ನಂತರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗುವ ಸಂಕೇತಗಳಿವೆ, ಆದರೆ ಶಾರೀರಿಕವಾಗಿ ಉದರ ಮತ್ತು ಮಂಡಿ ನೋವು ನಿಮ್ಮನ್ನು ತೊಂದರೆಗೀಡುಮಾಡುತ್ತದೆ. ಬಂಧುಗಳ ಸಹಯೋಗವು ನಿಮಗೆ ಜೀವನದಲ್ಲಿ ಮುಂದೆ ಬರಲು ಪ್ರೇರಣೆ ನೀಡುತ್ತದೆ. ಸಂತಾನವು ಸುಖ ಪ್ರಾಪ್ತಿಯ ಆಗುವುದರ ಸಂಕೇತವಾಗಿದೆ. ಹಳೆಯ ಮಿತ್ರರೊಬ್ಬರಿಂದ ಸಹಾಯ ದೊರಕುವ ಸಾಧ್ಯತೆಗಳಿವೆ. ಶತ್ರು ಶಾಂತನಾಗಿರುತ್ತಾನೆ .
ಡಿಸೆಂಬರ್- ವಾಹನ ಹಾಗು ಸಂಪತ್ತು ಇತ್ಯಾದಿಯ ಖರೀದಿಯು ನಿಮಗೆ ಲಾಭಕರವಾಗಿರುತ್ತದೆ. ಅಪೂರ್ಣ ಹಾಗು ನಿಂತುಹೋಗಿದ್ದಂತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಆರೋಗ್ಯದ ಬಗ್ಗೆ ನಿರ್ಲಕ್ಷ ನಿಮಗೆ ತೊಂದರೆಗಳು ಉಂಟು ಮಾಡುತ್ತದೆ. ಆಧ್ಯಾತ್ಮದ ಬಗೆಗೆ ನಿಮ್ಮ ಅಭಿರುಚಿ ಹೆಚ್ಚುತ್ತದೆ. ಮಿತ್ರರಿಂದ ಸಹಯೋಗ ಪ್ರಾಪ್ತಿ.
ಜನವರಿ--ತಿಂಗಳ ಪೂರ್ವಾರ್ಧದಲ್ಲಿ ಹೊಸ ಕೆಲಸಗಳನ್ನು ಪ್ರಾರಂಭಿಸುವುದನ್ನು ತಪ್ಪಿಸಿ. ವ್ಯಾಪಾರಿಗಳಿಗೆ ಬಹಳ ತೋದರೆಗಳನ್ನು ಎದುರಿಸಬೇಕಾಗುತ್ತದೆ. ದೂರ ಪ್ರಯಾಣವು ಹೆಚ್ಚು ಫಲಕಾರಿಯಾಗುವುದಿಲ್ಲ. ಆರೋಗ್ಯ ಸಮಸ್ಯೆ ಇರುತ್ತದೆ. ನೌಕರಿ ಮಾಡುವವರಿಗೆ ಸಹೊದ್ಯೋಗಿಗಳ ಪಿತೂರಿಯಿಂದಾಗಿ ತೊಂದರೆಗಳಾಗುತ್ತದೆ.
ಫೆಬ್ರವರಿ-- ತಿಂಗಳ ಪ್ರಾರಂಭವು ಸಾಮಾನ್ಯವಾಗಿರುತ್ತದೆ. ಆರ್ಥಿಕ ಸ್ಥಿತಿಯನ್ನು ಅಲ್ಲಗಳೆಯದಿರಿ. ಭೂಮಿ ಇತ್ಯಧಿಗಳಲ್ಲಿ ಹಣ ಹೂಡುವುದರಿದ ದೂರವಿರಿ. ಪತ್ನಿಯ ಸ್ವಾಸ್ಥ್ಯವು ಚಿಂತೆಗೀಡು ಮಾಡುತ್ತದೆ. ಯಾವ ಕೆಲಸದಲ್ಲು ಆಸಕ್ತಿ ಇರುವುದಿಲ್ಲ. ಬೇಡದಿರುವ ವಿಷಯಗಳು ಮಾನಸಿಕ ಚಿಂತೆ ಉಂಟುಮಾಡುತ್ತದೆ. ವ್ಯಾಪಾರದಲ್ಲಿ ಸ್ಥಿತಿ ಮಧ್ಯಮವಾಗಿರುತ್ತದೆ. ನೌಕರಿ ಮಾಡುವವರಿಗೆ ಉನ್ನತ ಅಧಿಕಾರಿಗಳೊಂದಿಗೆ ವಿವಾದ ಉಂಟಾಗುವ ಸಾಧ್ಯತೆಗಳಿವೆ.
ಮಾರ್ಚ- ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ, ಆದರೆ ಹೆಚ್ಚು ಮಹತ್ವಾಕಾಂಕ್ಷಿಯಾಗುವುದು ತಡೆಯಿರಿ. ರಣನೀತಿಯನ್ನು ರೂಪಿಸಿಕೊಂಡು ಮುಂದೆ ಸಾಗಿ. ಆರೋಗ್ಯವು ಉತ್ತಮವಾಗಿರುತ್ತದೆ. ವಾಹನವನ್ನು ಓಡಿಸುವಾಗ ಬಹಳ ಎಚ್ಚರಿಕೆಯಿಂದಿರೆ.
ಪ್ರೀತಿಯು ಹಂಚುವುದರಿಂದ ಹೆಚ್ಚುತ್ತದೆ, ಎಲ್ಲರನ್ನು ಪ್ರೀತಿಸುವುದನ್ನು ಕಲಿಯಿರಿ.
ಏಪ್ರಿಲ್- ಹಳೆಯ ಸ್ನೇಹಿತ ಅಥವಾ ಸಂಬಂಧಿಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಋತುವಿನ ಬದಲಾವಣೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಬಾರದಂತೆ ಎಚ್ಚರ ವಹಿಸಿ. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಬಾಳ ಸಂಗಾತಿಯ ಸಹಯೋಗವು ನಿಮಗೆ ಸಿಗುತ್ತದೆ. ಸ್ಪರ್ದೆಗಳಿಂದ ದೂರ ನಿಲ್ಲದಿರಿ, ಅದರ ಆನಂದವನ್ನು ಅನುಭವಿಸಿ. ಆಗ ಕೆಲಸ ಮಾಡುವುದರಲ್ಲಿ ನಿಮಗೆ ಬಹಳ ಮಜ ಸಿಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.
ಮೇ- ಈ ತಿಂಗಳು ಸಾಮಾನ್ಯವಾಗಿರುತ್ತದೆ. ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಹಾಗು ಮೈ ಕೈ ನೋವಿನಿಂದ ಬಳಲುವಿರಿ. ಯಾವುದಾದರು ಮೊಕದ್ದಮೆಗಳ ಫಲಿತಾಂಶವು ನಿಮ್ಮ ಪಕ್ಷದಲ್ಲಿ ಆಗದಿರಬಹುದು. ಶುಭ ಸಮಾಚಾರಗಳು ಬರುವ ಸಾಧ್ಯತೆಗಳಿವೆ. ಕೆಲಸದ ಬಗ್ಗೆ ಸಕಾರತ್ಮಕ ಮನೊಭಾವವನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಮಾನಸಿಕ ಸ್ಥಿತಿಯನ್ನು ಶಾಂತವಾಗಿಡಿ.
ಜೂನ್-ಯಾವುದಾದರು ಕಾಗದ ಪತ್ರಗಳಿಗೆ ಸಹಿ ಮಾಡುವ ಮೊದಲು ಚೆನ್ನಾಗಿ ಆಲೋಚಿಸಿ. ನಿಮ್ಮ ನಡುವಳಿಕೆಯಿಂದ ಅಕ್ಕ-ಪಕ್ಕ ದವರಿಗೆ ತೊಂದರೆಯುಂಟಾಗುತ್ತದೆ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಬೇರೆಯವರ ಸಮಸ್ಯೆಗಳಲ್ಲಿ ಮಧ್ಯ ಪ್ರವೇಶ ಮಾಡಬೇಡಿ. ಈ ತಿಂಗಳು ಸಂಮಿಶ್ರ ಫಲವನ್ನು ಕೊಡುತ್ತದೆ. ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.
ಜುಲೈ- ಸಮಾಜದಲ್ಲಿ ನಿಮ್ಮ ಯಶಸ್ಸು ಹೆಚ್ಚುತ್ತದೆ ಹಾಗು ವೃತ್ತಿಯಲ್ಲಿ ಪ್ರಗತಿ.ಅದೃಷ್ಟವು ನಿಮ್ಮೊಂದಿಗಿದೆ. ಆರ್ಥಿಕವಾಗಿ ಏಳು-ಬೀಳು ಉಂಟಾಗುವ ಸಾಧ್ಯತೆಗಳಿವೆ. ಕೌಟುಂಬಿಕ ಕಲಹ ಉಂಟಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಯಾವುದೇ ವಾದ ವಿವಾದಗಳನ್ನು ಮಾಡದಿರುವುದು ಉತ್ತಮ.
ಆಗಸ್ಟ್- ನಿಮ್ಮ ರಚನಾತ್ಮಕತೆಯನ್ನು ಪ್ರಶಂಸಿಸಲಾಗುತ್ತದೆ. ಭೋಗವಸ್ತುಗಳ ಖರೀದಿಗೆ ಹೆಚ್ಚು ಹಣ ವ್ಯಯ ಮಾಡುವಿರಿ. ಸ್ನೇಹಿತರ ಸಹಯೋಗದಿಂದ ನಿಮ್ಮ ಜೀವನದಲ್ಲಿ ಹೊಸ ಹುರುಪು ಮೂಡಿಸುತ್ತದೆ. ಶಿಕ್ಷಕರ ಸಹಾಯದಿಂದ ವಿಧ್ಯಾರ್ಥಿಗಳಿಗೆ ಲಾಭ. ನೌಕರಿಯಲ್ಲಿ ಬಡ್ತಿ ಸಿಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಸೆಪ್ಟಂಬರ್- ಶತ್ರುಗಳ ದೃಷ್ಟಿ ನಿಮ್ಮ ಯಶಸ್ಸಿನ ಮೇಲಿದೆ, ನಿಮ್ಮ ಕೋಪವು ಅವರ ಕೆಲಸವನ್ನು ಸುಲಭ ಮಾಡುತ್ತದೆ. ರಹಸ್ಯವಾದ ವಿಷಯಗಳನ್ನು ಬೇರೆಯವರೊಂದಿಗೆ ಚರ್ಚಿಸ ಬೇಡಿ. ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಕಲಹದ ವಾತಾವರಣ ನಿರ್ಮಾಣವಾಗಬಹುದು. ಎಚ್ಚರಿಕೆಯಿಂದಿರಿ.
ಅಕ್ಟೋಬರ್- ಈ ತಿಂಗಳು ನಿಮಗೆ ಎಲ್ಲವು ಸಾಮಾನ್ಯವಾಗಿರುತ್ತದೆ. ಹೊಸ ವ್ಯಕ್ತಿಗಳ ಪರಿಚಯವಾಗುತ್ತದೆ, ಅದು ನಿಮಗೆ ಲಾಭಕಾರಿಯಾಗುತ್ತದೆ. ಕೆಲಸದ ಪ್ರಯುಕ್ತ ಬೇರೆ ಊರುಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ನಿಮಗೆ ಬರಬೇಕಿದ್ದ ಹಣ ಸಿಗುತ್ತದೆ. ನಿಮ್ಮ ಸಂಗಾತಿಯು ಸದಾ ನಿಮ್ಮ ಬೆಂಬಲಕ್ಕೆ ಇರುತ್ತರೆ.
ನವೆಂಬರ್- ಮನಸ್ಸಿಗೆ ಶಾಂತಿ ಸಿಗುತ್ತದೆ. ಸಮಸ್ಯೆಗಳು ತಕ್ಕ ಮಟ್ಟಿಗೆ ಪರಿಹಾರವಾಗುತ್ತದೆ. ಸಂತಾನದಿಂದ ಶುಭ ಸಮಾಚಾರಗಳು ಸಿಗುವ ಸಾಧ್ಯತೆಗಳಿವೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಇದರಿಂದ ನಿಮಗೆ ಸಂತೋಷ ಉಂಟಾಗುತ್ತದೆ. ಕುಟುಂಬದಲ್ಲಿ ನಿಮಗೆ ಗೌರವ ಸಿಗುತ್ತದೆ ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ.
ಡಿಸೆಂಬರ್- ಜೀವನದಲ್ಲಿ ಹೊಸ ಉತ್ಸಾಹ ಮೂಡುತ್ತದೆ. ಹಳೆಯ ವಿಷಯಗಳನ್ನು ಮರೆತು ಮುಂದೆ ಸಾಗಿರಿ. ಈ ಋತುವಿನ ಆನಂದವನ್ನು ಸವಿಯಿರಿ. ವಿಧ್ಯಭ್ಯಾಸಕ್ಕಾಗಿ ಹಣ ಖರ್ಚುಮಾಡುವಿರಿ. ಜೀವನ ಸಂಗಾತಿಯ ಸಹಯೋಗ ನಿಮಗೆ ಸಿಗುತ್ತದೆ.
ಜನವರಿ-- ನಿಮ್ಮ ಜೀವನದಲ್ಲಿ ಬಹಳ ಏಳು-ಬೀಳು ಉಂಟಾಗುತ್ತದೆ. ಬಹಳಷ್ಟು ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಎಲ್ಲೊ ಏನೊ ಸಿಕ್ಕಿಕೊಡಿದೆ ಅದು ನಿಮ್ಮನ್ನು ಮುಂದೆ ತರುತ್ತದೆ. ಸ್ನೇಹಿತರು ಸದಾ ನಿಮ್ಮ ನೆರವಿಗೆ ಬರುತ್ತರೆ. ನಿಮ್ಮ ಸಂಗಾತಿಯ ಮೊಂಡುತನ ನಿಮ್ಮನ್ನು ಮಾನಸಿಕವಾಗಿ ಬಳಲುವಂತೆ ಮಾಡುತ್ತದೆ. ನೌಕರಿ ಮಾಡುವವರಿಗೆ ಮೇಲಧಿಕಾರಿಗಳೊಂದಿಗೆ ಮನಸ್ಥಾಪ ಉಂಟಾಗುವ ಸಾಧ್ಯತೆಗಳಿವೆ. ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಒಟ್ಟಾರೆ ಈ ತಿಂಗಳು ನಿಮಗೆ ಒಳ್ಳೆಯ ಫಲಗಳನ್ನು ಕೊಡುವುದಿಲ್ಲ.
ಫೆಬ್ರವರಿ-- ತಿಂಗಳ ಪ್ರಾರಂಭವು ಉತ್ತಮವಾಗಿರುವುದಿಲ್ಲ. ಸಂತಾಗಳಿಂದಲೂ ತೊಂದರೆಗಳಾಗುವ ಸಾಧ್ಯತೆಗಳಿವೆ. ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ. ಆದರೆ ತಿಂಗಳ ಕೊನೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ. ದೂರದಿಂದ ಬಂದ ಶುಭ ಸಮಾಚಾರವು ಜೀವನದಲ್ಲಿ ಉತ್ಸಾಹವನ್ನು ತುರತ್ತದೆ. ವಿಧ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುತ್ತದೆ.
ಮಾರ್ಚ- ಅದೃಷ್ಟವು ಬದಲಾಗುತ್ತಿದೆ, ಆದರೆ ಪ್ರಬಲ ಇಚ್ಛಾಶಕ್ತಿಯಿಲ್ಲದೆ ನಿಮಗೆ ಜಯ ಸಿಗುವುದಿಲ್ಲ. ನಿಮ್ಮ ಪರಿಶ್ರಮವನ್ನು ಪ್ರಶಂಸಿಸುತ್ತಾರಾದರು, ಜೊತೆಯಲ್ಲೆ ಶತ್ರುಗಳ ಮನದಲ್ಲಿ ನಿಮ್ಮ ಬಗೆಗಿನ ವೈಮಾನಸ್ಯವು ಹೆಚ್ಚುತ್ತದೆ. ಸಮಯದ ಸದುಪಯೋಗವನ್ನು ಪಡೆದುಕೊಡರೆ ನೀವು ನಿಂತು ಹೊಗಿದ್ದ ಕೆಲಸಗಳನ್ನು ಮಾಡಬಹುದು, ಎದರ ಕಡೆ ಗಮನ ಹರಿಸುವುದು ಆವಶ್ಯಕ.
ಏಪ್ರಿಲ್- ವಿದೇಶ ಯಾತ್ರೆ ಯೋಗವಿದೆ. ಸಂಪಾದನೆಯ ಹೊಸ ಮಾಗ್ರಗಳು ತರೆದುಕೊಳ್ಳುತ್ತದೆ. ನಿಮ್ಮ ಶಾಂತ ಚಿತ್ತತೆಯು ಹಲವಾರು ಸಮಸ್ಯೆಗಳಿಂದ ಪಾರುಮಾಡುತ್ತದೆ. ಸಂಗಾತಿಯ ಸಹಯೋಗವು ದೊರೆಯುತ್ತದೆ. ಸಂತಾನದಿಂದ ಶುಭ ಸಮಾಚಾರ ಬರುವ ಸಾಧ್ಯತೆಗಳಿವೆ. ವಿಧ್ಯರ್ಥಿಗಳಿಗೆ ಉತ್ತಮ ಸಮಯ.
ಮೇ- ಪಾರ್ಪಟಿಯಲ್ಲಿ ಹಣ ಹೂಡಲು ಉತ್ತಮ ಸಮಯ. ಯಶಸ್ಸಿನ ಹಾದಿಯು ತೆರೆದುಕೊಳ್ಳುತ್ತಿದೆ. ಹೊಸ ಸಂಭಂಧಗಳಿಂದ ಉಪಯೋಗವಾಗುತ್ತದೆ. ಕಛೇರಿಯಲ್ಲಿ ಸಹ ಉದ್ಯೋಗಿಗಳ ಸಹಕಾರವು ಸಿಗುತ್ತದೆ. ಹೊರಗೆ ಹೋಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಗಳಿವೆ. ಸಂಗಾತಿಯೊಂದಿಗೆ ವೈಯಕ್ತಿಕವಾಗಿ ಕಾಲ ಕಳೆಯುತ್ತೀರಿ.
ಜೂನ್- ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪುಣ್ಯ ಕ್ಷೇತ್ರಗಳಿಗೆ ಹೋಗುವ ಸಾಧ್ಯತೆಗಳಿವೆ. ಯಾವುದೇ ಹೊಸ ವ್ಯವಹಾರವನ್ನು ಮಾಡುವ ಮೊದಲು ಕಾಗದ ಪತ್ರಗಳನ್ನು ಚೆನ್ನಾಗಿ ಪರಿಶೀಲಿಸಿ ನೋಡಿ. ಹೊಸ ಜವಾಬ್ದಾರಿಗಳು ನಿಮ್ಮ ಮೇಲೆ ಮಾನಸಿಕ ಒತ್ತಡ ಹೇರುವ ಸಾದ್ಯತೆಗಳಿವೆ. ತಿಂಗಳ ಕೊನೆಯಲ್ಲಿ ಮನೆಗೆ ಕಲವು ಅಥಿತಿಗಳು ಆಗಮಿಸಬಹುದು.
ಜುಲೈ- ವಿಧ್ಯರ್ಥಿಗಳಿಗೆ ಶುಭ ಸಮಾಚಾರ ಸಿಗಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಬಹುದು. ನೌಕರಿ ಮಾಡುವವರ ವೇತನವು ಹೆಚ್ಚಾಗುತ್ತದೆ, ಆದರೆ ಬೆಲೆ ಏರಿಕೆಯಿಂದಾಗಿ ಲೆಕ್ಕ ಸರಿಹೋಗುತ್ತದೆ. ಮಕ್ಕಳ ಜೊತೆ ಕಾಲಕಳೆಯುವ ಅವಕಾಶ ಸಿಗುತ್ತದೆ. ಸಹೋದರ-ಸಹೋದರಿಯ ಕಡೆಯಿಂದ ಶುಭ ಸಮಾಚಾರ.
ಆಗಸ್ಟ್- ನಿಮಗೆ ಬರಬೇಕಾಗಿದ್ದ ಹಣ ಸಿಗುತ್ತದೆ. ಕಾನೂನಿಗೆ ಸಂಬಂಧಿಸಿದ ಕೆಲಸಗಳು ಪರಿಹಾರವಾಗುತ್ತದೆ. ಸಂತೋಷ ಹೆಚ್ಚುತ್ತದೆ. ಆದರ ಸಂತಾನಗಳಿಂದ ಕೆಲವು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಸಂಗಾತಿಯ ಆರೋಗವು ಚಿಂತಾಜನಕವಾಗಿರುತ್ತದೆ.
ಸೆಪ್ಟಂಬರ್- ರಾಜನೀತಿಕ ಸಂಬಂಧಗಳಿದ ಲಾಭ ಪ್ರಾಪ್ತಿ. ವ್ಯಾಪಾರದ ಹೊಸ ಯೋಜನೆಗಳಿಂದ ನಿಮಗೆ ಲಾಭ. ಶತ್ರುಗಳು ನಿಮಗೆ ತೊಂದರೆ ಉಂಟುಮಾಡಲು ಹೊಂಚ್ಚು ಹಾಕುತ್ತಿದ್ದಾರೆ, ಎಚ್ಚರದಿಂದಿರಿ. ತಂದೆ-ತಾಯಿಯರ ಸಹಯೋಗವು ಸಿಗುತ್ತದೆ. ಸಂತಾನದ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗುತ್ತದೆ. ವಿಧ್ಯರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.
ಅಕ್ಟೋಬರ್- ನಿಮ್ಮ ಜೀವನದಲ್ಲಿ ಹೊಸತು ಸಂಭವಿಸಲಿದೆ. ನಿಮ್ಮ ದಾರಿಯಲ್ಲಿ ಕೆಲವು ತೊಂದರೆಗಳು ಬರುವುದಾದರು ಅವುಗಳನ್ನು ಮೆಟ್ಟಿ ನಿಲ್ಲುವಿರಿ. ಕುಟುಂಬದಲ್ಲಿ ಒಳ್ಳೆಯ ವಾತಾವರಣ. ಯಾತ್ರೆಗಳು ಲಾಭಕಾರಿಯಾಗುತ್ತದೆ.
ನವೆಂಬರ್- ನಿಮ್ಮ ಹತ್ತಿರದ ವ್ಯಕ್ತಿಗಳಿಂದಲೇ ವಿಶ್ವಾಸಘಾತ. ನೌಕರಿಯಲ್ಲಿ ವರ್ಗವಣೆ. ವೈವಾಹಿಕ ಸಂಭಂಧಗಳಲ್ಲಿ ಕಹಿ ಅನುಭವಗಳು, ಸಂಗಾತಿಯೊಂದಿಗೆ ಉದಾರ ಭಾವ ಬೆಳೆಸಿಕೊಳ್ಳುವುದು ಆವಶ್ಯಕವಾಗಿದೆ. ನಿಮ್ಮ ಕ್ರೋಧವು ಆಗುವ ಕೆಲಸಗಳನ್ನು ಕೆಡಿಸಬಹುದು. ಮಧ್ಯಪಾನದಿಂದ ದೂರವಿರುವುದು ಉತ್ತಮ.
ಡಿಸೆಂಬರ್- ದಾಂಪತ್ಯ ಜೀವನಕ್ಕೆ ನಿಮ್ಮ ಸಹಯೋಗ ಹಾಗು ಸಮಯದ ಅಗತ್ಯವಿದೆ. ಸ್ನೇಹಿತರೊಂದಿಗೆ ವ್ಯಾಪಾರವನ್ನು ಪ್ರಾರಂಭಿಸುವುದರಿಂದ ಕಾಲಾಂತರಗಳಲ್ಲಿ ಲಾಭ ಪ್ರಾಪ್ತವಾಗುತ್ತದೆ. ಸಮಯದ ಮೂಲ್ಯವನ್ನು ತಿಳಿಯಿರಿ. ನೀವು ಸ್ವಲ್ಪ ವ್ಯಾವಹಾರಿಕವಾಗಿ ಆಲೋಚಿಸಬೇಕಾಗಿದೆ, ಹೆಚ್ಚು ಭಾವುಕರಾಗುವುದರಿಂದ ನಿಮಗೆ ನಷ್ಟ ಸಂಬವಿಸುತ್ತದೆ. ತಂದೆಯ ಸ್ವಾಸ್ಥ್ಯವು ನಿಮಗೆ ತೊಂದರೆಯುಂಟುಮಾಡುತ್ತದೆ.
ಜನವರಿ--ಜೀವನದಲ್ಲಿ ಮುಂದೆ ಬರಲು ನಿಮಗೆ ನೆರವಿನ ಅಗತ್ಯವಿದೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಚಿದ ನಿಮ್ಮ ವೈಯಕ್ತಿಕ ಸಂಬಂಧಗಳಗೆ ಉಪಯೋಗವಾಗುತ್ತದೆ. ವ್ಯಾಪಾರದಲ್ಲಿ ಹೊಸ ಅವಕಾಶಗಳು ಸಿಗುತ್ತವೆ, ಆದರೆ ಈ ಅವಸರಕ್ಕಾಗಿ ನೀವು ಬಹಳ ಎಚ್ಚರಿಕೆಯಿಂದಿರಬೇಕು. ವಾಹನಗಳನ್ನು ಓಡಿಸುವಾಗ ಜಾಗ್ರತೆ ವಹಿಸಬೇಕು.
ಫೆಬ್ರವರಿ-- ಹೊಸ ಮನೆ ಖರೀದಿಸುವಿರಿ. ಮಾನಸಿಕ ಚಿಂತೆ ದೂರವಾಗುತ್ತದೆ. ಆರ್ಥಿಕ ರೂಪದಲ್ಲು ಉತ್ತಮವಾಗಿದೆ. ಶತ್ರುಗಳನ್ನು ನಿರ್ಲಕ್ಷಿಸಬೇಡಿ. ಮಾತೃ ವರ್ಗದಿಂದ ದುಖಃ ಸಮಾಚಾರ ಬರುವ ಸಾಧ್ಯತೆಗಳಿವೆ.
ಮಾರ್ಚ- ವ್ಯಾಪಾರದ ದೃಷ್ಟಿಯಿಚಿದ ಸಮಯ ಉತ್ತಮವಾಗಿದೆ. ಹೊಸ ವಹಿವಾಟುಗಳು ಲಾಭಕಾರಿಯಾಗುತ್ತದೆ. ಸಾರಿಗೆಗೆ ಸಂಬಂಧಿಸಿದ ವ್ಯಾಪಾರಿಗಳಿಗೆ ವಿಶೇಷವಾಗಿ ಒಳ್ಳೆಯ ಸಮಯವಾಗಿದೆ. ನಿಮಗೆ ಹಣ ಸಿಗುತ್ತದೆ, ಆದರೆ ನಿಮ್ಮಲ್ಲಿ ಉಳಿಯುವುದಿಲ್ಲ. ಯಾವುದೇ ಪ್ರಕಾರದ ವಿವಾದಗಳಿಂದ ದೂರವಿರಿ.
ಏಪ್ರಿಲ್- ಕೆಲವರು ನಿಮ್ಮ ಹೆಸರಿಗೆ ಕಳಂಕ ತರಲು ಯತ್ನಿಸುತ್ತಾರೆ. ನೆರೆಹೊರೆಯವರು ನಿಮ್ಮ ಸಹಾಯಕ್ಕೆ ಬರುತ್ತಾರೆ. ಧನ ಯೋಗವು ಸಾಮಾನ್ಯವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಉಪಯೋಗವಾಗುತ್ತದೆ. ಅವಿವಾಹಿತರ ಜೀವನದಲ್ಲಿ ಪ್ರೇಮದ ಅಲೆಗಳು ಮೂಡುತ್ತದೆ. ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ.
ಮೇ- ಮಿಲ್ಲು ಅಥವಾ ಕಾರ್ಖನೆಗಳ ಮಾಲೀಕರಿಗೆ ಮುಷ್ಕರ ಅಥವಾ ಬೇರೆ ಯಾವುದಾದರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನೌಕರಿ ಮಾಡುವವರಿಗೆ ಈ ತಿಂಗಳು ಸಾಮಾನ್ಯವಾಗಿದೆ. ವೇತನ ಹಾಗು ಖರ್ಚಿನ ನಡುವೆ ಸಮತೋಲನ ಮಾಡುವುದು ಕಷ್ಟವಾಗುತ್ತದೆ. ಜೀವನದಲ್ಲಿ ಹೊಸ ಕೆಲಸಗಳನ್ನು ಮಾಡುವ ಪ್ರೇರಣೆ ಸಿಗುತ್ತದೆ.
ಜೂನ್- ಯಾವುದೇ ಕೆಲಸಕ್ಕೆ ಕೈ ಹಾಕುವ ಮೊದಲು ಚೆನ್ನಾಗಿ ಯೋಚಿಸಿ. ಹೊಸ ಕೆಲಸವನ್ನು ಪ್ರಾರಂಬಿಸುವ ಮೊದಲು ಪ್ರತಿಯೊಂದು ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅತ್ಯಗತ್ಯ. ಕೊರ್ಟು ಛೇರಿಗಳಿಂದ ದೂರವಿರುವುದು ಒಳ್ಳೆಯದು. ಯಾರಿಗು ಸಾಲ ಕೊಡಬೇಡಿ, ಒಂದು ಪಕ್ಷ ಕೊಟ್ಟರೆ ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಜುಲೈ- ಹವಾಮಾನವು ನಿಮ್ಮ ಆರೋಗ್ಯಕ್ಕೆ ವಿಪರೀತವಾಗಿರುತ್ತದೆ. ಉದರಕ್ಕೆ ಸಂಬಂದಿಸಿದ ತೊಂದರೆಗಳನ್ನು ತಡೆಗಟ್ಟಲು ಹೊರಗಿನ ಆಹಾರವನ್ನು ಸೇವಿಸಬೇಡಿ. ನೆರೆಯವರೊಂದಿಗೆ ಜಗಳ ಉಂಟಾಗುವು ಸಾಧ್ಯತೆಗಳಿವೆ. ಯಾರೊ ನಿಮ್ಮ ಮೇಲೆ ಕಣ್ಣಿಟ್ಟಿದ್ದಾರೆ, ಆದ್ದರಿಂದ ನಿಮ್ಮ ಕೆಲಸವನ್ನು ನಿಷ್ಟೆಯಿಂದ ಮಾಡಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಆಗಸ್ಟ್- ಕ್ರೋಧವು ನಿಮಗೆ ಕೆಡುಕನ್ನು ಮಾಡುತ್ತದೆ. ಆದ್ದರಿಂದ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಯಾವುದಾದರು ಮಾತಿನಿಂದ ನಿಮ್ಮ ಬಾಳ ಸಂಗಾತಿಯು ಕೋಪಗೊಳ್ಳ ಬಹುದು. ಅಪಘಾತ ಸಂಭವಿಸುವ ಸಾಧ್ಯತೆಗಳಿವೆ, ಆದ್ದರಿಂದ ಹೆಚ್ಚು ಎಚ್ಚರ ವಹಿಸಿ.
ಸೆಪ್ಟಂಬರ್- ಯಾವುದಾದರು ಕೌಟುಂಬಿಕ ಕಾರ್ಯಕ್ರಮಗಳಿಗೆ ಹೋಗಬೇಕಾಗುತ್ತದೆ. ಯಾರೋ ನಿಮ್ಮ ಬಗ್ಗೆ ಬಹಳ ಆಸೆಗಳನ್ನು ಇಟ್ಟುಕೊಂಡಿದ್ದಾರೆ ಅವರಿಗೆ ನಿರಾಸೆ ಮಾಡಬೇಡಿ. ಸಂತಾನದ ನಡವಳಿಕೆಯು ನಿಮಗೆ ಸಂತಸ ಕೊಡುತ್ತದೆ. ಜೀವನದಲ್ಲಿ ಆಸೆ ಹಾಗು ಉತ್ಸಾಹ ಇರುತ್ತದೆ. ೨೦ನೇ ತಾರೀಖಿನ ನಂತರ ಸ್ವಲ್ಪ ಆರ್ಥಿಕ ತೊಂದರೆಗಳು ಉಂಟಾಗಬಹುದು. ಶತ್ರುಗಳು ನಿಮಗೆ ತೊಂದರೆ ಕೊಡಲು ಯತ್ನಿಸುತ್ತಾರೆ.
ಅಕ್ಟೋಬರ್- ನಿಂತು ಹೋಗಿದ್ದ ಕೆಲಸಗಳು ಪ್ರಾರಂಭವಾಗುತ್ತದೆ. ಯಾರಿಗು ಸುಳ್ಳು ಪ್ರಮಾಣಗಳನ್ನು ಮಾಡಬೇಡಿ. ನಿಮ್ಮ ಇಚ್ಛಾನುಸಾರ ಫಲ ಪ್ರಾಪ್ತಿಯಾಗುತ್ತದೆ. ಮಳೆ ಚೆನ್ನಾಗಿ ಆಗುವುದರಿಂದ ರೈತರಿಗೆ ಲಾಭ ಉಂಟಾಗುತ್ತದೆ. ವಿರೋಧಿಗಳು ಶಾಂತವಾಗಿರುತ್ತಾರೆ. ಜೀವನ ಸಂಗಾತಿಯು ಸಂತೋಷವಾಗಿರುತ್ತಾರೆ ಹಾಗು ಸಂತಾನವು ಸಂತುಷ್ಟವಾಗಿರುತ್ತದೆ. ಒಟ್ಟಾರೆ ಈ ತಿಂಗಳು ನಿಮಗೆ ಉತ್ತಮವಾಗಿದೆ.
ನವೆಂಬರ್- ವ್ಯಾಪಾರಿಗಳಿಗೆ ಈ ತಿಂಗಳು ಬಹಳ ಲಾಭದಾಯಕವಾಗಿದೆ. ಸೌಭಾಗ್ಯವು ನಿಮ್ಮೊಂದಿಗಿದೆ, ಆದರೆ ಅದರೊಂದಿಗೆ ನಿಮ್ಮ ಬೇಜವಾಬ್ದಾರಿಯಿಂದಾಗಿ ದೊಡ್ಡ ಪ್ರಮಾಣದ ತೊಂದರೆ ಉಂಟಾಗುತ್ತದೆ. ಸಂಬಂಧಿಕರ ಸಹಾಯದಿಂದ ಹೊಸ ವರಮಾನ ಮಾರ್ಗಗಳು ತೆರೆದುಕೊಳ್ಳುತ್ತದೆ. ಮಹಿಳೆಯರಿಗೆ ಹಾಗು ವೃದ್ದರಿಗೆ ಮಂಡಿ ನೋವು ಉಂಟಾಗುತ್ತದೆ.
ಡಿಸೆಂಬರ್- ಸಂಘರ್ಷದಿಂದ ಮಾತ್ರ ಯಶಸ್ಸು ಸಿಗುತ್ತದೆ. ಒಮ್ಮೆಲೆಗೆ ಯಾವುದೇ ತೀರ್ಮಾನಕ್ಕೆ ಬರಬೇಡಿ. ನಿಮ್ಮ ಆತುರದ ನಿರ್ಧಾರದಿಂದ ವಿರೋಧಿಗಳಿಗೆ ಉಪಯೋಗವಾಗುತ್ತದೆ. ಶಾಂತ ಚಿತ್ತರಾಗಿ ಒಳ್ಳೆಯ ಕರ್ಮಗಳನ್ನು ಮಾಡಿತ್ತಿರಿ. ಮಾಂಸಾಹಾರ ಹಾಗು ಮಧ್ಯಪಾನವನ್ನು ಸೇವಿಸದಿರುವುದು ಒಳ್ಳೆಯದು. ತಿಂಗಳ ಕೊನೆಯ ವಾರದಲ್ಲಿ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ವರ್ಷವು ಸಕಾರಾತ್ಮಕವಾಗಿ ಅಂತ್ಯಗೊಳ್ಳುತ್ತದೆ.
ಜನವರಿ-- ಹೊಸ ವರ್ಷದ ಪ್ರಾರಂಭವು ಬಹಳ ಅದ್ದುರಿಯಿಂದಾಗುತ್ತದೆ. ನಂತರದ ೧೫ ದಿನಗಳು ಬಹಳ ಸುಖಮಯವಾಗಿರುತ್ತದೆ. ನಿಮ್ಮ ಮನದ ಮಾತನ್ನು ಕೇಳಿ ಹಾಗು ಪೂರ್ಣ ನಿಷ್ಟೆಯಿಂದ ಕೆಲಸ ಮಾಡಿ ನಿಮಗೆ ಖಂಡಿತ ಯಶಸ್ಸು ಸಿಗುತ್ತದೆ. ಬಾಳ ಸಂಗಾತಿಯ ನಡವಳಿಕೆಯು ನಿಮಗೆ ಹೊಸ ಕೆಲಸವನ್ನು ಮಾಡಲು ಪ್ರೇರಣೆಯನ್ನು ಕೊಡುತ್ತದೆ. ಯಾವುದಾದರು ದೇವಸ್ಥಾನದಲ್ಲಿ ದಾನ ಮಾಡುವುದರಿಂದ ಲಾಭ ಉಂಟಾಗುತ್ತದೆ.
ಫೆಬ್ರವರಿ-- ಮನಸ್ಸಿನಲ್ಲಿ ಪ್ರೀತಿಯು ಹೆಚ್ಚುತ್ತದೆ. ಯಾವುದಾದರು ವಾದ-ವಿವಾಗದಗಳಿಂದಾಗಿ ಆಗುವ ಕೆಲಸವು ನಿಂತು ಹೋಗುವ ಸಾಧ್ಯತೆಗಳಿವೆ. ಯಾರ ಮನಸ್ಸಿಗೂ ನೋವುಂಟುಮಾಡ ಬೇಡಿ. ಯಾವುದಾದರು ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಪೂರ್ವಾಪರಗಳ ಬಗ್ಗೆ ವಿಚಾರ ಮಾಡಿ. ಮನೆಗೆ ನೆಂಟರು ಬರುವ ಸಂಕೇತವಿದೆ. ತಂದೆ-ತಾಯಿಯ ಆರ್ಶಿವಾದದಿಂದ ಜೀವನದಲ್ಲಿ ಸುಖ-ಶಾಂತಿ ಇರುತ್ತದೆ.
ಮಾರ್ಚ- ನಿಮ್ಮ ಕೆಲಸಕ್ಕೆ ಮಾನ್ಯತೆ ಸಿಗುತ್ತದೆ, ಆದರೆ ಅದಕ್ಕಾಗಿ ನೀವು ಧೈರ್ಯ ತಾಳಬೇಕಾಗಿದೆ. ಆರೋಗ್ಯವು ಸಾಮಾನ್ಯವಾಗಿರುತ್ತದೆ. ಮೇಲಧಿಕಾರಿಗಳೊಂದಿಗಿನ ಸಂಭಂಧದಲ್ಲಿ ಸುಧಾರಣೆ ಉಂಟಾಗುತ್ತದೆ. ಶತ್ರುಗಳು ಶಾಂತವಾಗಿರುತ್ತಾರೆ. ಸಂತಾನದ ಕಡೆಯಿಂದ ಶುಭ ಸಮಾಚಾರ ಸಿಗುತ್ತದೆ. ವಿಧ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ.
ಏಪ್ರಿಲ್- ಯಶಸ್ಸನ್ನು ಕಾಪಾಡಿಕೊಳ್ಳಲ್ಲು ಆಲಸ್ಯವನ್ನು ಬಿಡುವುದು ಅತ್ಯಗತ್ಯ. ವೈವಾಹಿಕ ಜೀವನದಲ್ಲಿ ನೀರಸತೆ ಮನೆ ಮಾಡಿದೆ, ನಿಮ್ಮ ಸಂಗಾತಿಯ ಅಸಮಾಧಾನವನ್ನು ಅಲಕ್ಷಿಸದಿರಿ. ಶತ್ರುಗಳು ನಿಮ್ಮ ಬೇಜವಾಬ್ದಾರಿ ನಡವಳಿಕೆಯ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ.
ಮೇ-ಜೀವನದಲ್ಲಿ ಸಂಘರ್ಷದ ಸಮಯವು ಪ್ರಾರಂಭವಾಗಲಿದೆ. ನಿಮ್ಮ ಆತ್ಮವಿಶ್ವಾಸವು ನಿಮ್ಮನ್ನು ಈ ಕಷ್ಟದ ಪರಿಸ್ಥಿತಿಯಿಂದ ಹೊರಬರಲು ನೆರವಾಗುತ್ತದೆ. ರ್ಪಾಪರ್ಟಿಯಲ್ಲಿ ಹಣ ಹೂಡಲು ಅನುಕೂಲವಾದ ಸಮಯವಲ್ಲ. ಆರೋಗ್ಯದ ಕಡೆ ಗಮನಹರಿಸಿ, ಹೊರಗಿನ ತಿಂಡಿಯನ್ನು ತಿನ್ನ ಬೇಡಿ. ಸಂಗಾತಿ ಹಾಗು ಸಂತಾನದ ನಡವಳಿಕೆಯಿಂದ ತೊಂದರೆ ಅನುಭವಿಸುವಿರಿ.
ಜೂನ್- ಎಷ್ಟೇ ಪ್ರಯತ್ನ ಪಟ್ಟರೂ ಕೆಲಸ ಕೈಗೂಡುವುದಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಬಾಳಸಂಗಾತಿಯೊಂದಿಗೆ ನಿಮ್ಮ ನಡವಳಿಕೆ ಸರಿಯಿರುವುದಿಲ್ಲ. ತಂದೆ-ತಾಯಿಯರ ಸಂತೋಷದ ಕಡೆ ಹೆಚ್ಚು ಗಮನ ಕೊಡಿ. ಸಂತಾನಗಳ ಕಡೆಯಿಂದಲೂ ಒಳ್ಳೆಯ ಸಮಾಚಾರ ಬರುವುದಿಲ್ಲ. ಶತ್ರುಗಳು ಪ್ರಬಲರಾಗಿರುತ್ತಾರೆ.
ಜುಲೈ- ಮನಸ್ಸಿಗ್ಗೆ ಅಶಾಂತಿ. ವಿಧ್ಯರ್ಥಿಗಳಿಗೂ ಸಮಯ ಸರಿಯಿಲ್ಲ. ಮನಸ್ಸಿಗೆ ಬೇಕಾದಹಾಗೆ ಬಂಧಗಳು ಸಿಗದಿರುವ ಕಾರಣದಿಂದ ಹತಾಶರಾಗುವಿರಿ. ತಂದೆ ಹಾಗು ಸಹೋದರನೊಂದಿಗೆ ವಿವಾದ ಉಂಟಾಗುವ ಸಾಧ್ಯತೆಗಳಿವೆ. ವಾಹನವನ್ನು ಓಡಿಸುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಮಧ್ಯಪಾನ ಮಾಡುವಾಗಲು ಸಂಯಮದಿಂದಿರಿ.
ಆಗಸ್ಟ್- ಸಮಯವು ಬದಲಾಗುತ್ತಿದೆ. ೧೫ನೇ ತಾರೀಖಿನ ನಂತರ ಪರಿಸ್ಥಿತಿ ಸುಧಾರುಸುತ್ತದೆ. ಆರೋಗ್ಯವು ಚೆನ್ನಾಗಿರುತ್ತದೆ. ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಸಂತುಷ್ಟರಾಗುತ್ತಾರೆ. ಸಹೋದ್ಯೋಗಿಗಳ ಸಹಕಾರ ನಿಮಗೆ ಸಿಗುತ್ತದೆ. ಕಲಾಕ್ಷೆತ್ರದಲ್ಲಿ ತೊಡಗಿರುವವರಿಗೆ ಒಳ್ಳೆಯ ಸಮಯ. ಹೊಸ ಮನೆ ಅಥವಾ ವಾಹನ ಖರೀದಿಸುವ ಸಾಧ್ಯತೆಗಳಿವೆ. ಕರ ಪಾವತಿ ಇತ್ಯದಿ ಕಾನೂನಿಗೆ ಸಂಬಂದಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ಉದ್ಯಮಿಗಳಿಗೆ ಈಗ ಒಳ್ಳೆಯ ಸಮಯ.
ಸೆಪ್ಟಂಬರ್- ಈ ತಿಂಗಳು ನಿಮಗೆ ಲಾಭ ಕೊಡುವಂತದ್ದಾಗಿದೆ. ಹೊಸ ಯೋಜನೆಗಳನ್ನು ರೂಪಿಸುವಿರಿ. ಸಂಕಷ್ಟದಲ್ಲಿ ಸ್ನೇಹಿತರು ನಿಮ್ಮ ನೆರವಿಗೆ ಬರುತ್ತಾರೆ. ಹೆಂಡತಿಯ ಮನೆಯ ಕಡೆಯಿಂದಲು ಸಹಕಾರ ಸಿಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕಂಪ್ಯೂಟರಿಗೆ ಸಂಬಂದಿಸಿದ ಕ್ಷೇತ್ರದಲ್ಲಿ ಇರುವವರಿಗೆ ಬಹಳ ಉತ್ತಮ ಸಮಯವಾಗಿರುತ್ತದೆ. ಶತ್ರುಗಳು ಪ್ರತಿ ಹಂತದಲ್ಲು ಪರಾಜಯವನ್ನು ಅನುಭವಿಸುತ್ತಾರೆ.
ಅಕ್ಟೋಬರ್- ಈ ತಿಂಗಳು ಸಾಮಾನ್ಯವಾಗಿರುತ್ತದೆ. ಆರೋಗ್ಯವು ಸರಿಯಾಗಿರುತ್ತದೆ. ಸಂಗಾತಿಯ ಸಹಯೋಗವು ಸಿಗುತ್ತದೆ. ನಿಮ್ಮ ಮಾತಿಗೆ ಗೌರವ ಕೊಡುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಆರೋಗ್ಯವನ್ನು ಚೆನ್ನಾಗಿಡಲು ಬೆಳಗಿನ ಜಾವ ವಿಹಾರ ಮಾಡಿ.
ನವೆಂಬರ್- ನಿಂತು ಹೋಗಿದ್ದ ಕೆಲಸಗಳು ಮತ್ತೆ ಪ್ರಾರಂಭವಾಗುತ್ತದೆ. ಬಹಳ ದಿನಗಳಿಂದ ಹೊರಗೆ ವಿಹಾರ ಮಾಡುವ ಕಾರ್ಯಕ್ರಮ ಹಾಕಿಕೊಂಡಿರುತ್ತೀರಿ, ಅದು ಪೂರ್ಣಗೊಳ್ಳುತ್ತದೆ. ಯಾರೋ ನಿಮ್ಮ ಮೇಲೆ ಸುಳ್ಳು ಆರೋಪವನ್ನು ಹೊರಿಸುವ ಪಿತ್ತೋರಿಯಲ್ಲಿದ್ದಾರೆ, ಎಚ್ಚರ ವಹಿಸಿ. ಆಧಿಕಾರಿಗಳೊಂದಿಗಿನ ಸಂಭಂಧ ಉತ್ತಮವಾಗಿರುತ್ತದೆ, ಇದು ನಿಮಗೆ ಧೀರ್ಗಕಾಲದವರೆಗು ಉಪಯೋಗವಾಗುತ್ತದೆ.
ಡಿಸೆಂಬರ್- ಎಲ್ಲಾ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ೧೫ನೇ ತಾರೀಖಿನ ನಂತರ ಯಾವುದಾದರು ಹೊಸ ಕೆಲಸವನ್ನು ಪ್ರಾರಂಭಿಸಬಹುದು.
ಜನವರಿ-- ಹೊಸ ವರ್ಷದ ಮೊದಲ ತಿಂಗಳು ಸಂತೋಷವನ್ನು ತರಲಿದೆ, ಕೈ ಬೀಸಿ ಸ್ವಾಗತಿಸಿ. ನೌಕರಿ ಮಾಡುವವರಿಗೆ ಶುಭ ಸಮಾಚಾರ ಸಿಗುತ್ತದೆ. ವ್ಯಾಪಾರಿಗಳಿಗೆ ಲಾಭ. ಜೀವನದಲ್ಲಿ ಹೊಸ ಹುರುಪು ಮೂಡುತ್ತದೆ. ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ವೈವಾಹಿಕ ಜೀವನವು ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯು ನಿಮಗೆ ಸಹಕಾರ ನೀಡುತ್ತಾರೆ. ನಿಮ್ಮ ಮನಸ್ಸಿನ ಚಂಚಲತೆಯನ್ನು ಹಿಡಿತದಲ್ಲಿಡುವುದು ಅತ್ಯಾವಶ್ಯಕ, ಇಲ್ಲದಿದ್ದರೆ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಫೆಬ್ರವರಿ-- ಕೆಲಸದಲ್ಲಿ ನಿರಾಸಕ್ತಿ. ಮನಸ್ಸಿಗೆ ಶಾಂತಿಯಿರುವುದಿಲ್ಲ. ಈ ತಿಂಗಳು ಮಾನಸಿಕವಾಗಿ ಬಳಲುವಿರಿ. ವಿಧ್ಯಾರ್ಥಿಗಳು ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ತಂದೆ-ತಾಯಿಯೋದಿಗೆ ವಿವಾದ ಉಂಟಾಗಬಹುದು. ಶತ್ರುಗಳು ವರಿಷ್ಟಾಧಿಕಾರಿಗಳನ್ನು ನಿಮ್ಮ ವಿರುದ್ಧ ನಿಲ್ಲುವಂತೆ ಮಾಡಬಹುದು. ಕಛೇರಿಯ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ನಿಮ್ಮ ಸಂಗಾತಿಯ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಬಹುದು.
ಮಾರ್ಚ- ತಿಂಗಳ ಮೊದಲಾರ್ಧವು ಸ್ವಲ್ಪ ನಿರಾಸೆ ಉಂಟುಮಾಡುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಯಾವ ಕೆಲಸವು ಕೈಗೂಡುವುದಿಲ್ಲ. ಯಾವುದಾದರು ಮೊಕದ್ದಮೆಗಳಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆಗಳಿವೆ, ಆದ್ದರಿಂದ ನಿಮ್ಮ ಕೋಪವನ್ನು ಹಿಡಿತದಲ್ಲಿಡಿ. ಯಾವುದೇ ರೀತಿಯ ವಿವಾದಗಳಿಂದ ದೂರ ಉಳಿಯುವುದು ಉತ್ತಮ. ೧೫ನೇ ತಾರೀಖಿನ ನಂತರ ಪರಿಸ್ಥಿತಿ ಸುಧಾರಿಸುತ್ತದೆ. ಹೊಸ ವರಮಾನ ಮಾರ್ಗಗಳು ತೆರೆದುಕೊಳ್ಳುತ್ತದೆ.
ಏಪ್ರಿಲ್- ವಿಧ್ಯಾರ್ಥಿಗಳಿಗೆ ಒಳ್ಳೆಯ ಸಮಯ. ಬಯಸಿದ ಫಲಿತಾಂಶ ಸಿಗುತ್ತದೆ. ಶತ್ರುಗಳು ಎಷ್ಟೇ ಪ್ರಯತ್ನಿಸಿದರು ನಿಮಗೆ ಕೇಡು ಮಾಡಲು ಸಾಧ್ಯವಾಗದು. ನೌಕರಿಯಲ್ಲೂ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ನಿಮಗೆ ನಿಮ್ಮ ಪ್ರತಿಭೆಯನ್ನು ತೋರಿಸುವ ಅವಕಾಶಗಳು ಸಿಗುತ್ತವೆ, ಹಾಗು ನೀವು ಅದಕ್ಕಾಗಿ ಖಂಡಿತವಾಗಿ ತೈಯಾರಾಗಿದ್ದೀರಿ. ಸ್ನೇಹಿತರು ನಿಮ್ಮ ಸಹಾಯಕ್ಕೆ ಮುಂದೆ ಬರುತ್ತಾರೆ.
ಮೇ- ಈ ತಿಂಗಳು ಸಾಮಾನ್ಯವಾಗಿದೆ. ಎಲ್ಲವೂ ಸರಿಯಾಗಿರುತ್ತದೆ. ಜೀವನಸಂಗಾತಿಯೊಂದಿಗೆ ಸುತ್ತಾಡಲು ಹೋಗುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಸಚಿತಾನದ ಕಡೆಯಿಂದ ಸ್ವಲ್ಪ ಚಿಂತೆ ಉಂಟಾಗಬಹುದು. ವ್ಯರ್ಥವಾದ ವಿವಾದಗಳಿಂದ ದೂರವಿರಿ.
ಜೂನ್- ನಿಮ್ಮ ಜೀವನದಲ್ಲಿ ಸಂಘರ್ಷ ಪ್ರಾರಂಭವಾಗಲಿದೆ. ಕಲೆ ಹಾಗು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವವರಿಗೆ ಇದು ಒಳ್ಳೆಯ ಸಮಯ. ಸ್ವಾಸ್ಥವು ಉತ್ತಮವಾಗಿರುತ್ತದೆ. ಜೀವನ ಸಂಗಾತಿ ಹಾಗು ಸ್ನೇಹಿತರ ಸಹಯೋಗವು ಸಿಗುತ್ತದೆ. ಕುಟುಂಬದಲ್ಲಿ ಸುಖ ಶಾಂತಿ ನೆಲಸಲಿದೆ.
ಜುಲೈ- ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ಹಣ ಹೂಡಲು ಉತ್ತಮ ಸಮಯ. ವ್ಯಾಪಾರಿಗಳಿಗೆ ಒಳ್ಳೆಯ ಸಮಯ. ವಿಧ್ಯಾರ್ಥಿಗಳಿಗೂ ಸಮಯ ಉತ್ತಮವಾಗಿದೆ. ಬಾರದೇ ಉಳಿದಿದ್ದ ಹಣ ಮರಳಿ ಬರಲಿದೆ.
ಆಗಸ್ಟ್- ಆಲಸ್ಯವು ದಾರಿದ್ರ್ಯದ ಮತ್ತೊಂದು ಹೆಸರು, ಇದನ್ನು ನೆನಪಿಡಿ. ನಿಮ್ಮ ಸೋಮಾರಿತನದಿಂದ ನಿಮ್ಮ ಯಶಸ್ಸಿಗೆ ದಕ್ಕೆ ಉಂಟಾಗುತ್ತದೆ. ನಿಮ್ಮ ಈ ನಡವಳಿಕೆಯಿಂದಾಗಿ ಅಧಿಕಾರಿಗಳೂ ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆಗಳಿವೆ. ವಾಹನವನ್ನು ಓಡಿಸುವಾಗ ಎಚ್ಚರಿಕೆಯಿಂದಿರಿ. ವಯಸ್ಸಾದವರನ್ನು ಅಪಮಾನಿಸಬೇಡಿ.
ಸೆಪ್ಟಂಬರ್- ನೀವು ಬಹಳ ದಿನಗಳಿಂದ ನಿಮ್ಮ ಸಂತಾನದ ಬಗ್ಗೆ ಚಿಂತಿತರಾಗಿದ್ದೀರಿ, ಈ ತಿಂಗಳಿನಲ್ಲಿ ಆ ಸಮಸ್ಯೆಯು ಬಗೆಹರಿಯಲಿದೆ. ಭವಿಷ್ಯದಲ್ಲಿ ನಡಯುವ ಮಂಗಳ ಕಾರ್ಯದ ಯೋಗವುಂಟಾಗುತ್ತದೆ. ಕಾನೂನಿನ ಅಡಚಣೆಗಳು ನಿವಾರಣೆಯಾಗುತ್ತದೆ. ರಾಜಕೀಯ ಸಂಬಂದಗಳಿಂದ ಲಾಭ ಉಂಟಾಗಬಹುದು. ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಸಿಗುತ್ತದೆ.
ಅಕ್ಟೋಬರ್- ಎಲ್ಲವು ಸರಿಯಾಗಿರುತ್ತದೆ. ಸಣ್ಣ-ಪುಟ್ಟ ತೊಂದರೆಗಳು ಬಿಟ್ಟರೆ, ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಹೊಸ ವಾಹನ ಅಥವಾ ಮನೆಯನ್ನು ಖರೀದಿಸಬಹುದು.
ನವೆಂಬರ್- ಶತ್ರುಗಳು ನಿಮಗೆ ತೊಂದರೆ ಉಂಟುಮಾಡುತ್ತಾರೆ ಎಚ್ಚರದಿಂದಿರಿ. ನೀವು ನಿಮ್ಮ ಹಳೆಯ ಅನುಭವಗಳಿಂದ ಪಾಠ ಕಲಿಯುವಿರಿ, ಹಾಗು ಜೀವನದಲ್ಲಿ ಮುಂದೆ ಬರುವಿರಿ. ನಿಮಗೆ ನಿಮ್ಮ ಮೇಲಿರುವ ನಂಬಿಕೆಯೇ ಗಲುವಿನ ಮೆಟ್ಟಿಲು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ತಂದೆ ತಾಯಿ ಅಥವಾ ದೊಡ್ಡವರ ಆರ್ಶಿವಾದವನ್ನು ಪಡೆದೇ ಹೊಸ ಕೆಲಸವನ್ನು ಪ್ರಾರಂಭಿಸಿ.
ಡಿಸೆಂಬರ್- ಯಶಸ್ಸು ನಿಮಗಾಗಿ ಕಾಯುತ್ತಿದೆ, ಸರಿಯಾದ ಅವಕಾಶವನ್ನು ತಿಳಿದಕೊಳ್ಳಬೇಕಾಗಿದೆ. ಮುಕದ್ದಮೆಗಳಲ್ಲಿ ಸ್ವಲ್ಪ ಸಮಾದಾನಸಿಗುತ್ತದೆ. ಪ್ರೇಮ ಸಂಬಂಧಗಳು ಪ್ರಬಲವಾಗುತ್ತದೆ. ಯಾರಿಗಾದರೂ ಮಾತು ಕೊಟ್ಟಿದ್ದರೆ ಅದನ್ನು ತಪ್ಪದೇ ನೆರವೇರಿಸಿ.
ಜನವರಿ-- ವರ್ಷದ ಪ್ರಾರಂಭವು ಚೆನ್ನಾಗಿರುತ್ತದೆ. ಹಳೆಯ ಸಾಲದಿಂದ ಮುಕ್ತಿ ಸಿಗುತ್ತದೆ. ಆದರೆ ಹಳೆಯ ಮೊಕದ್ದಮೆಗಳು ನಿಮಗೆ ತೊಂದರೆ ಉಂಟುಮಾಡಬಹುದು. ನಿಮ್ಮ ಮನಸ್ಸು ಚಂಚಲವಾಗುತ್ತಿದೆ ಅದನ್ನು ನಿಯಂತ್ರಿಸಿ. ಸಂತಾನಗಳಿಂದ ಶುಭ ಸಮಾಚಾರ. ಹೆಂಡತಿಯ ವನೆಯಕಡೆಯಿಂದ ಯಾವುದಾದರು ಶುಭ ಸಮಾಚಾರ ಬರಬಹುದು. ನೌಕರಿಯಲ್ಲಿ ಬದಲಾವಣೆಯ ಸಾಧ್ಯತೆಗಳಿವೆ.
ಫೆಬ್ರವರಿ-- ಶಾರೀರಿಕ ತೊಂದರೆಗಳು ಉಂಟಾಗಬಹುದು. ಸ್ತ್ರೀಯರು ಹಾಗು ವೃದ್ಧರು ತಮ್ಮ ಆರೋಗ್ಯದ ಕಡೆ ವಿಶೇಷ ಗಮನ ಕೊಡಬೇಕು. ನಿಮ್ಮ ಬಾಳಸಂಗಾತಿಯ ಸಂಪೂರ್ಣ ಸಹಕಾರ ಸಿಗುತ್ತದೆ. ತಿಂಗಳ ಕೊನೆಯಲ್ಲಿ ಪರಿಸ್ಥಿತಿ ಸಾಮಾನ್ಯವಾಗುತ್ತದೆ. ವ್ಯಾಪಾರಿಗಳಿಗೆ ಲಾಭ ಸಿಗುವ ಸಾಧ್ಯತೆಗಳಿವೆ.
ಮಾರ್ಚ- ಈ ತಿಂಗಳು ಸಾಮಾನ್ಯವಾಗಿರುತ್ತದೆ. ಸತ್‌ಪುರುಷರ ಸಂಗದಿಂದ ಲಾಭವಾಗುತ್ತದೆ. ಬಾರದೆ ನಿಂತು ಹೋಗಿದ್ದ ಹಣ ಸಿಗಬಹುದು. ವಿಧ್ಯಾರ್ಥಿಗಳಿಗೆ ಉಪಯುಕ್ತವಾದ ಸಮಯ. ಶತ್ರುಗಳು ನಿಮಗೆ ಕೆಡುಕನ್ನು ಮಾಡುವ ಪ್ರಯತ್ನದಲ್ಲಿದಾರೆ, ಎಚ್ಚರದಿಂದಿರಿ. ಕೆಲಸಕ್ಕೆ ಬಾರದ ಮಾತುಗಳಲ್ಲಿ ಸುಮ್ಮನೆ ಸಮಯವನ್ನು ಹಾಳುಮಾಡಬೇಡಿ.
ಏಪ್ರಿಲ್- ಸಮಯ ಅನುಕೂಲಕರವಾಗಿಲ್ಲ. ಆಗುವ ಕೆಲಸಗಳು ಸಹ ನಿಂತುಹೋಗುವ ಸಾಧ್ಯತೆಗಳಿವೆ. ನಿಮಗೆ ಎಲ್ಲವೂ ನಿಮ್ಮ ವಿರುದ್ಧವಾಗಿ ನಡೆಯುತ್ತಿದೆ ಎಂಬ ಭಾವನೆ ಬರುತ್ತದೆ. ಸ್ನೇಹಿತರ ನಡವಳಿಕೆಯು ಸಹ ನಿಮಗೆ ಸಮಸ್ಯೆ ಉಂಟುಮಾಡುತ್ತದೆ. ತಾವು ಅಪೇಕ್ಷಿಸಿದ ಫಲ ಸಿಗದೇ ವಿಧ್ಯಾರ್ಥಿಗಳು ನಿರಾಶರಾಗುತ್ತಾರೆ.
ಮೇ-ತಿಂಗಳ ಪ್ರಾರಂಭವು ಚೆನ್ನಾಗಿರುವುದಿಲ್ಲ. ಒತ್ತಡ ಹೆಚ್ಚಾಗುತ್ತದೆ. ಸಹೋದ್ಯೋಗಿಗಳೊಂದಿಗೆ ಮನಸ್ಥಾಪ ಆಗುವ ಸಾಧ್ಯತೆ. ಆದರೆ ನಂತರದ ದಿನಗಳಲ್ಲಿ ಲಾಭ ಉಂಟಾಗುತ್ತದೆ. ಆಡಂಬರದ ವಸ್ತುಗಳನ್ನು ಖರೀದಿಸುವುದರಿಂದ ವೈಭವ ಹೆಚ್ಚುತ್ತದೆ. ಶತ್ರುಗಳು ಎಷ್ಟೇ ಪ್ರಯತ್ನಿಸಿದರು ಏನೂ ಮಾಡಲಾಗುವುದಿಲ್ಲ.
ಜೂನ್- ಧನ ಲಾಭದ ಯೋಗವಿದೆ. ಹೆಂಡತಿಯ ಮನೆಯವರ ಸಹಯೋಗವು ಸಿಗುತ್ತದೆ. ಸ್ನೇಹಿತರೊಂದಿಗೆ ಹೊರಗೆ ಸುತ್ತಾಡಲು ಹೋಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೀರಿ. ನೀವು ಕಷ್ಟಪಟ್ಟು ಕೆಲಸಮಾಡಿದುದರ ಪ್ರತಿಫಲವನ್ನು ಅನುಭವಿಸುವ ಸಮಯವು ಈಗ ಬಂದಿದೆ. ಆದರೆ, ಅವಸರ ಪಡಬೇಡಿ ಇಲ್ಲದಿದ್ದರೆ ಪಶ್ಚಾತಾಪ ಪಡಬೇಕಾಗುತ್ತದೆ.
ಜುಲೈ- ಈ ತಿಂಗಳಿನಲ್ಲಿ ವರಿಷ್ಟ ಅಧಿಕಾರಿಗಳು ಹಾಗು ಸಹೋದ್ಯೋಗಿಗಳ ಅಸಹಕಾರದಿಂದಾಗಿ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ನಿಮ್ಮ ಧೈರ‍್ಯ, ನಿಮ್ಮ ಚಾಣಾಕ್ಷತೆಯನ್ನು ಕಾಪಾಡಿಕೊಂಡು ಇದ್ದರೆ, ಹಾಗು ನಿಮ್ಮ ಕ್ರೋಧವನ್ನು ನಿಯಂತ್ರಣದಲ್ಲಿ ಇಟ್ಟರೆ ಈ ಕಷ್ಟದ ಪರಿಸ್ಥಿಯು ಹೆಚ್ಚು ತೊಂದರೆಗಳನ್ನು ಮಾಡದೇ ಕಳೆದುಬಿಡುತ್ತದೆ.
ಆಗಸ್ಟ್- ಈ ತಿಂಗಳು ನಿಮ್ಮ ಜೀವನದಲ್ಲಿ ಒಂದು ಪಾಠವಿದ್ದಂತೆ. ಕಷ್ಟದ ಪರಿಸ್ಥಿತಿ ಇರುತ್ತದೆ ಹಾಗು ನಿಮಗೆ ನಿಮ್ಮ ಜೊತೆ ಯಾರು ಸಾಹಾಯಕ್ಕೆ ಇರುತ್ತಾರೆ ಎಂಬುದರ ಅರಿವು ಆಗುತ್ತದೆ. ಮಾನಸಿಕ ಒತ್ತಡ ಇರುತ್ತದೆ, ಆದರೆ ದೇವರ ಭಜನೆ ಮಾಡುವುದರಿಂದ ಶಾಂತಿ ಸಿಗುತ್ತದೆ. ತಿಂಗಳ ಕೊನೆಯ ವಾರದಲ್ಲಿ ಸುಧಾರಣೆಯ ಸಂಕೇತವಿದೆ. ಧೈರ್ಯಗೆಡದಿರಿ .
ಸೆಪ್ಟಂಬರ್- ಸಮಯ ಬದಲಾಗುತ್ತಿದೆ, ಆದರೆ ಯಶಸ್ಸನ್ನು ಗಳಿಸಬೇಕಾದರೆ ಬಹಳಷ್ಟು ಪರಿಶ್ರಮ ಪಡಬೇಕೆಂಬುದನ್ನು ಮರೆಯಬೇಡಿ. ಸ್ನೇಹಿತರು ನಿಮ್ಮ ಜೀವನದಲ್ಲಿ ಬಿಸಿಲಿನಲ್ಲಿ ನೆರಳಿನಂತೆ ಇರುತ್ತಾರೆ. ಹೊಸ ವಾಹನವು ನಿಮ್ಮ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.
ಅಕ್ಟೋಬರ್- ಈ ತಿಂಗಳು ನಿಮಗೆ ಬಹಳ ಉತ್ತಮವಾಗಿದೆ. ಜೀವನದಲ್ಲಿ ಹೊಸತು ಮಾಡುವಿರಿ. ಸೃಜನಶೀಲತೆ ಹೆಚ್ಚುತ್ತದೆ ಹಾಗು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ದೂರದ ನೆಂಟರಿಂದ ಶುಭ ಸಮಾಚಾರಗಳು ಬರುವ ಸಾಧ್ಯತೆಗಳಿವೆ. ವಿರೋಧಿಗಳು ನಿಮಗೆ ತೊಂದರೆ ಕೊಡುವುದಲ್ಲಿ ವಿಫಲರಾಗುವರು.
ನವೆಂಬರ್- ನೀವು ನಿಮ್ಮ ಕೋಪವನ್ನು ನಿಯಂತ್ರಿಸಿದರೆ ಎಲ್ಲವೂ ನಿಮ್ಮ ನಿಯಂತ್ರಣದಲ್ಲಿರುತ್ತದೆ. ನಿಮ್ಮ ಶತ್ರುಗಳು ನಿಮ್ಮ ಕೋಪದ ಲಾಭವನ್ನು ಪಡೆಯುವ ಯತ್ನವನ್ನು ಮಾಡುತ್ತಾರೆ. ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸುವಲ್ಲಿ ನಿರತರಾಗಿ, ಯಶಸ್ಸು ಖಂಡಿತ ಸಿಗುತ್ತದೆ.
ಡಿಸೆಂಬರ್- ಈ ತಿಂಗಳ ಗ್ರಹವು ನಿಮ್ಮೊಂದಿಗಿದೆ. ನಿಂತುಹೋದ ಕೆಲಸಗಳು ಆಗುತ್ತದೆ. ಮನೆಯಲ್ಲಿ ವಿವಾಹ ನಡೆಯುವ ಸಾಧ್ಯತೆಗಳಿವೆ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಕಲಿಯಿರಿ. ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಉತ್ತಮ ಸಮಯ.
ಜನವರಿ-- ವರ್ಷದ ಪ್ರಾರಂಭವು ನಿಮಗೆ ಸ್ವಲ್ಪ ನಿರಾಸೆಯುಂಟುಮಾಡುತ್ತದೆ. ಶತ್ರುಗಳು ನಿಮ್ಮ ವಿರುದ್ಧ ತಂತ್ರ ಹೂಡುತ್ತಿದ್ದಾರೆ, ಎಚ್ಚರದಿಂದಿರಿ. ಮೇಲಧಿಕಾರಿಗಳೊಂದಿಗೆ ಮಾತಿನ ಚಕಮಕಿ ಉಂಟಾಗಬಹುದು. ಸಂತಾನದ ಕಡೆಯಿಚಿದಲೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ತಂದೆ- ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಪಡುವಿರಿ.
ಫೆಬ್ರವರಿ-- ಆರ್ಥಿಕವಾಗಿ ಏರು ಪೇರು ಇರುತ್ತದೆ. ಬೇರೆಯವರ ಮೊಂಡುತನವು ನಿಮ್ಮಲ್ಲಿ ಖಿನ್ನತೆ ಉಂಟುಮಾಡುತ್ತದೆ. ನಿಮ್ಮ ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿಡಿ, ಅದು ಕಳೆದುಹೋಗುವ ಅಥವಾ ಕಳ್ಳತನವಾಗುವ ಸಾಧ್ಯತೆಗಳಿವೆ. ಅದೃಷ್ಟವು ನಿಮ್ಮೊಂದಿಗಿಲ್ಲ, ಆದ್ದರಿಂದ ನೀವು ಹೆಚ್ಚು ಶ್ರಮ ಪಡಬೇಕಾಗುತ್ತದೆ.
ಮಾರ್ಚ- ೧೫ನೇ ತಾರೀಖಿಗೆ ಮೊದಲು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ತಿಂಗಳ ಎರಡನೆ ಹಂತದಲ್ಲಿ ಪರಿಸ್ಥಿತಿ ಪದಲಾಗುತ್ತದೆ. ದೂರದಿಂದ ಯಾವುದಾದರು ಶುಭ ಸಮಾಚಾರ ಬರುವ ಸಾಧ್ಯತೆಗಳಿವೆ. ಬಾರದಿದ್ದ ಹಣ ಬರುತ್ತದೆ. ಕಾನೂನಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರಿ. ವಿಧ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ.
ಏಪ್ರಿಲ್- ನಿಮ್ಮ ಹತ್ತಿರದವರು ನಿಮಗೆ ಮೋಸ ಮಾಡಲು ಯತ್ನಿಸುತ್ತಿದ್ದಾರೆ. ಈ ತಿಂಗಳು ನಿಮಗೆ ಸಂಪಾದನೆ ಮಾಡುವ ಹೊಸ ಮಾರ್ಗಗಳು ತೆರೆದುಕೊಳ್ಳಲಿದೆ. ನೌಕರಿಯಲ್ಲಿ ಯಶಸ್ಸು ಸಿಗುವ ಯೋಗವಿದೆ. ಆದರೆ ಕೆಲವರಿಗೆ ಇದು ಅವರ ಇಚ್ಛೆಯಂತೆ ಆಗುವುದಿಲ್ಲ. ಬಾಳಸಂಗಾತಿಂಯು ಒಂದು ದೃಡವಾದ ಕಂಭದಂತೆ ನಿಮ್ಮ ಜೊತೆಯಿರುತ್ತಾರೆ.
ಮೇ- ಸಮಯವು ಅನುಕೂಲವಾಗಿದೆ, ಇದರ ಲಾಭವನ್ನು ಪಡೆಯಿರಿ. ಯಶಸ್ಸನ್ನು ಗಳಿಸಲು ಹೊಸ ದೃಷ್ಟಿಕೋನದ ಅಗತ್ಯವಿದೆ. ಸಂತಾನದ ಕಡೆಯಿಂದ ಕಷ್ಟಗಳು ಉಂಟಾಗುವ ಸಾಧ್ಯತೆಗಳಿವೆ. ಸಂಗಾತಿಯೊಂದಿಗಿನ ಕಲಹದಿಂದಾಗಿ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ. ಅಧಿಕಾರಿಗಳೊಂದಿಗಿನ ಉತ್ತಮ ಸಂಬಂಧದಿಂದ ಉಪಯೋಗವಾಗುತ್ತದೆ. ನೌಕರಿ ಮಾಡುವವರಿಗೆ ಸಮಯವು ಸಾಮಾನ್ಯವಾಗಿರುತ್ತದೆ. ಆರೋಗ್ಯದ ಕಡೆ ಗಮನಕೊಡಿ.
ಜೂನ್- ದೇವಯೋಗದಿಂದ ಆಗುವ ಕೆಲಸಗಳು ಹಾಳಾಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಇರವವರಿಗೆ ಸಮಯ ಬಹಳ ಅನುಕೂಲವಾಗಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹೊಸ ಉದ್ಯೋಗಾವಕಾಶಗಳಿವೆ. ವಿಧ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ.
ಜುಲೈ- ಈ ತಿಂಗಳು ಸಾಮಾನ್ಯವಾಗಿದೆ. ಯಾವುದೇ ಕಾಗದ ಪತ್ರಗಳಿಗೆ ಸಹಿ ಮಾಡುವ ಮೊದಲು ಅದನ್ನು ಚೆನ್ನಾಗಿ ಓದಿ. ಆಲಸ್ಯದಿಂದ ದೂರವಿರಿ. ತಂದೆ-ತಾಯಿಯ ಆರ್ಶಿವಾದವನ್ನು ಪಡೆಯಿರಿ. ಸ್ನೇಹಿತರ ಸಹಾಯದಿಂದ ಹಲವು ಕೆಲಸಗಳು ನಡೆಯುತ್ತದೆ.
ಆಗಸ್ಟ್- ಯಾರಿಗೂ ಸಾಲ ಕೊಡಬೇಡಿ ಹಾಗು ಯಾರಿಂದಲೂ ಸಾಲ ಪಡೆಯಲು ಬೇಡಿ. ನೀವು ಮಾನಸಿಕವಾಗಿ ಬಹಳ ಸದೃಡವಾಗುವಿರಿ. ಹಣವನ್ನು ಗಳಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಹೊರಗಿನ ಊಟವನ್ನು ಮಾಡಬೇಡಿ. ಸೂರ್ಯನ ಉಪಾಸನೆ ಮಾಡುವುದರಿಂದ ಲಾಭ.
ಸೆಪ್ಟಂಬರ್- ಈ ತಿಂಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸಲಿದೆ. ಚೆನ್ನಾಗಿ ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಹೊಸ ವ್ಯಾಪಾರವನ್ನು ಪ್ರಾರಂಭಿಸುವಾಗ ಸ್ನೇಹಿತರ ಸಹಾಯವನ್ನು ಪಡೆಯುವುದು ಲಾಭದಾಯಕವಾಗುತ್ತದೆ. ಸ್ತ್ರೀಯರಿಗೆ ಒಳ್ಳೆಯ ಸಮಯ. ಸಂತಾನ ಸುಖ ಪ್ರಾಪ್ತಿಯ ಯೋಗವಿದೆ.
ಅಕ್ಟೋಬರ್- ಭೌತಿಕ ಸುಖದಲ್ಲಿ ವೃದ್ಧಿ. ವರಮಾನದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತದೆ. ನೌಕರಿ ಅಥವಾ ವ್ಯಾಪಾರದ ನಿಮಿತ್ತ ನಗರದಿಂದ ಹೊರ ಹೋಗುವ ಸಾಧ್ಯತೆಗಳಿವೆ. ಹಳೆಯ ಕಷ್ಟಗಳು ವಿದಾಯ ಹೇಳಲಿವೆ. ಹೊಸ ಸಂಪರ್ಕಗಳಿಂದ ಲಾಭ.
ನವಂಬರ್- ಸಾರಿಗೆ ನಿಯಮಗಳನ್ನು ಪಾಲಿಸಿ. ವೇಗವಾಗಿ ವಾಹನವನ್ನು ಓಡಿಸುವುದು ಸಾಹಸದ ಕೆಲಸವಲ್ಲ ಇದನ್ನು ನೆನಪಿಡಿ. ಬಂಡವಾಳ ಹೂಡಲು ಉತ್ತಮ ಸಮಯ. ಚಿನ್ನದ ಖರೀದಿಯಿಂದ ಭವಿಷ್ಯದಲ್ಲಿ ಲಾಭವುಂಟಾಗುತ್ತದೆ. ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಮಯವಾಗಿದೆ.ಡಿಸೆಂಬರ್- ಸಣ್ಣ-ಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಸಮಯವು ನಿಮ್ಮೊಂದಿಗಿದೆ. ಸಾಮಾಜಿಕವಾಗಿ ನಿಮ್ಮ ಪ್ರತಿಷ್ಟಿ ಹೆಚ್ಚಲಿದೆ. ೧೫ನೇ ತಾರೀಖಿನ ನಂತರ ಮನೆಯವರೊಂದಿಗೆ ವಿವಾದ ಉಂಟಾಗುವ ಸಾಧ್ಯತೆಗಳಿವೆ. ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಬೇರೆಯವರು ಹೇಳುವ ಮಾತನ್ನು ಚೆನ್ನಾಗಿ ಆಲಿಸಿದ .
ಜನವರಿ-- ಈ ವರ್ಷದ ಪ್ರಾರಂಭದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಂಡವಾಳ ಹೂಡಿದಲ್ಲಿ ಉದ್ದೇಶಿಸಿದ ಲಾಭ ಸಿಗದಿರುವ ಕಾರಣದಿಂದ ಮಾನಸಿಕ ಚಿಂತೆ ಹೆಚ್ಚುತ್ತದೆ. ನಿಮ್ಮ ಬಾಳಸಂಗಾತಿಯು ನಿಮ್ಮೊಂದಿಗೆ ಕಟುವಾಗಿ ವರ್ತಿಸುತ್ತಾರೆ. ನಿಮ್ಮ ಕೋಪವು ಪರಿಸ್ಥಿತಿ ಹದಕೆಡಲು ಕಾರಣವಾಗುತ್ತದೆ. ಹೊರಗಿನ ಊಟವನ್ನು ಮಾಡಬೇಡಿ.
ಫೆಬ್ರವರಿ-- ಪ್ರೇಮ ಪ್ರಸಂಗಗಳು ಮದುವೆವರೆಗು ತಲುಪುವ ಸಂಕೇತಗಳಿವೆ. ತಂದೆ-ತಾಯಿ ಮಾತಿಗೆ ಬೆಲೆ ಕೊಡಿ ಇಲ್ಲದಿದ್ದರೆ ಅವರು ಕೋಪಗೊಳ್ಳ ಬಹುದು, ಆದರೆ ನಿಧಾನವಾಗಿ ಬಿಡಿಸಿ ಹೇಳಿದರೆ ಅವರ ಕೋಪವು ದೂರಾಗುತ್ತದೆ. ಆರೋಗ್ಯವು ಚೆನ್ನಾಗಿರಿತ್ತದೆ. ಯಾವುದೇ ಹೊಸ ಕೆಲಸವನ್ನು ಮಾಡುವ ಮೊದಲು ಅದರ ಬಗ್ಗೆ ಚೆನ್ನಾಗಿ ವಿಚಾರಿಸಿಕೊಳ್ಳಿ. ಪ್ರೇಮವು ಗಾಳಿಯಲ್ಲಿದೆ ಅದರ ಲಾಭವನ್ನು ಪಡೆದುಕೊಳ್ಳಿ.
ಮಾರ್ಚ- ಮೇಲಧಿಕಾರಿಗಳೊಂದಿಗೆ ವಿವಾದದ ಸಾಧ್ಯತೆಗಳಿವೆ, ನಿಮ್ಮ ಮೊಂಡುತನ ಪರಿಸ್ಥಿತಿ ಹದಗೆದುವಂತೆ ಮಾಡುತ್ತದೆ. ಕೆಲಸದಲ್ಲೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕವಾಗಿಯೂ ತೊಂದರೆಗಳನ್ನು ಅನುಭವಿಸುವಿರಿ. ನಿಮ್ಮ ಬಾಳ ಸಂಗಾತಿಯ ನಡವಳಿಕೆಯು ನಿಮ್ಮ ಸಮಸ್ಯೆಗೆ ಕಾರಣವಾಗಬಹುದು.
ಏಪ್ರಿಲ್- ಈ ತಿಂಗಳು ನಿಮಗೆ ಸಂಮಿಶ್ರ ಫಲವನ್ನು ಕೊಡುತ್ತದೆ. ಕೋಪದಿಂದಾಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಸಿಟ್ಟಿನ ಸ್ವಭಾವವನ್ನು ಬೇರೆಯವರಯ ನಿಮ್ಮ ವಿರುದ್ಧ ಆಯುಧದಂತೆ ಬಳಸುತ್ತಾರೆ. ಯಾವುದೇ ವಸ್ತುವನ್ನು ಪಡೆಯಲು ನಿಮಗಿರುವ ಆತುರದ ಸ್ವಭಾವದಿಂದಾಗಿ ನಿಮಗೆ ನಷ್ಟ ಸಂಬವಿಸಬಹುದು.
ಮೇ- ನಿಮ್ಮ ಕರಿಯರ್‌ನ ದೃಷ್ಟಿಯಿಂದ ಇದು ಬಹಳ ಉತ್ತಮವಾದ ಸಮಯವಾಗಬಹುದು. ಯಶಸ್ಸಿನ ಶಿಖರವನ್ನು ಏರುವಿರಿ. ಹೊಸ ಜವಾಬ್ದಾರಿಗಳು ವಹಿಸಿಕೊಳ್ಳುವ ಸಾಧ್ಯತೆಗಳಿವೆ. ನೌಕರಿಯಲ್ಲಿ ಭಡ್ತಿ. ವರಮಾನ ಹೆಚ್ಚಾಗುತ್ತದೆ. ಧನ ಪ್ರಾಪ್ತಿಯ ಯೋಗವಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿರುವಿರಿ.
ಜೂನ್-ಹಣವನ್ನು ಎಚ್ಚರಿಕೆಯಿಂದ ಖರ್ಚುಮಾಡಿ. ನಿಮ್ಮ ನಿರ್ಲಕ್ಷದಿಂದ ಭಾರಿ ನಷ್ಟ ಸಂಭವಿಸುತ್ತದೆ. ಹೊರಗೆ ಸುತ್ತಾಡಲು ಹೂಗುವ ಕಾರ್ಯಕ್ರಮ ಹಾಕಿಕೊಳ್ಳುವಿರಿ. ಈ ವಿರಾಮವು ನಿಮಗೆ ಅತ್ಯಗತ್ಯವಾಗಿದೆ, ಇದರಿಂದ ನಿಮ್ಮ ಮೈ ಮನದಲ್ಲಿ ನವ ಉತ್ಸಾಹ ತುಂಬುತ್ತದೆ ಇದು ನಿಮ್ಮ ಭವಿಷ್ಯದ ಕೆಲಸಗಳಿಗೆ ಸಹಕಾರಿಯಾಗುತ್ತದೆ.
ಜುಲೈ- ಆರೋಗ್ಯವು ನಿಮ್ಮ ಕೆಲಸಗಳಿಗೆ ಅಡಚಣೆಮಾಡುತ್ತದೆ. ಅದೃಷ್ಟವು ನಿಮ್ಮೊಂದಿಗಿದೆ. ನಿಂತು ಹೋಗಿದ್ದ ಕೆಲಸಗಳು ಪೂರ್ಣಗೊಳ್ಳುತ್ತದೆ. ಕುಟುಂಬದದಿಂದ ಶುಭ ಸಮಾಚಾರಗಳು ಬರುತ್ತದೆ. ಕಲೆ, ಸಂಸೃತಿ ಹಾಗು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಹಣ ಹೂಡಲು ಉತ್ತಮ ಸಮಯವಾಗಿದೆ.
ಆಗಸ್ಟ್- ಕೆಲಸಗಳಲಿ ಪ್ರಗತಿ. ಆದರೆ ತಿಂಗಳ ದ್ವಿತಿಯಾರ್ಧದಲ್ಲಿ ಕೆಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಬಾಳ ಸಂಗಾತಿಯೊಂದಿಗೆ ಮನಸ್ಥಾಪವಾಗುವ ಸಾಧ್ಯತೆಗಳಿವೆ. ಆದರೆ ನಿಮ್ಮ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಮಕ್ಕಳ ಕಡೆಯಿಂದ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.
ಸೆಪ್ಟಂಬರ್- ನಿಮ್ಮ ಜೀವನದಲ್ಲಿ ಬದಲಾವಣೆಗಳು ಸ್ಪಷ್ಟವಾಗಿ ಕಂಡುಬರುತ್ತದೆ. ನಿಮ್ಮ ಜೀವನಶೈಲಿಯಲ್ಲಿ ಸಕಾರತ್ಮಕತೆಯು ಎಲ್ಲರನ್ನು ಚಕಿತಗೊಳಿಸುತ್ತದೆ. ನೌಕರಿಯಲ್ಲಿ ಹೊಸ ಜವಾಬ್ದಾರಿಗಳು ಸಿಗುತ್ತದೆ. ಆದರೆ ನಿಮ್ಮ ಈ ಏಳಿಗೆಯಿಂದ ಯಾರಿಗೋ ಅಸೂಯೆ ಉಂಟಾಗಬಹುದು ಹಾಗು ಅವರು ನಿಮ್ಮೊಂದಿಗೆ ಜಗಳವಾಡುವ ಸಾಧ್ಯತೆಗಳಿವೆ. ಯಶಸ್ಸನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ.
ಅಕ್ಟೋಬರ್- ನಿಮ್ಮ ಶತ್ರುಗಳು ನಿಮ್ಮ ಕೆಲಸವನ್ನು ಹಾಳುಮಾಡುವ ಪ್ರಯತ್ನ ಮಾಡುತ್ತಾರೆ. ವ್ಯಾಪಾರಿಗಳಿಗೆ ನಷ್ಟ ಸಂಭವಿಸುವ ಸಾಧ್ಯತೆಗಳಿವೆ. ಇವೆಲ್ಲದರ ನಡುವೆ ನಿಮಗೆ ವರಿಷ್ಟ ವ್ಯಕ್ತಿಗಳು ಹಾಗು ಮನೆಯಲ್ಲಿ ದೊಡ್ಡವರ ಸಂಪೂರ್ಣ ಸಹಯೋಗ ಪ್ರಾಪ್ತವಾಗುತ್ತದೆ. ವಿನಾಕಾರಣ ಖರ್ಚು ಹೆಚ್ಚಾಗ ಬಹುದು.
ನವೆಂಬರ್- ನಿಮ್ಮ ಜೀವನದಲ್ಲಿ ಅನಾಯಾಸವಾಗಿ ಬದಲಾವಣೆಗಳು ಉಂಟಾಗುತ್ತದೆ. ತಿಂಗಳ ಮಧ್ಯದವರೆಗು ನಿಮ್ಮ ಅದೃಷ್ಟವು ಸಂಪೂರ್ಣವಾಗಿ ನಿಮ್ಮೊಂದಿಗಿರುತ್ತದೆ. ಈ ಸಮಯದಲ್ಲಿ ಅದೃಷ್ಟ ಲಕ್ಷ್ಮಿಯು ನಿಮ್ಮ ಮನೆ ಬಾಗಿಲಿಗೆ ಬರುತ್ತಾಳೆ ಆದರೆ ಇದರ ಲಾಭವನ್ನು ಪಡೆಯುವುದು ನಿಮ್ಮ ಮೇಲೆ ಅವಲಂಬಿತವಾಗಿದೆ. ಜೀವನ ಸಂಗಾತಿಯ ನಡವಳಿಕೆಯು ನಿಮಗೆ ಸಂತೋಷವನ್ನು ನೀಡುತ್ತದೆ.
ಡಿಸೆಂಬರ್- ವರಮಾನದ ಮಾರ್ಗಗಳು ಹೆಚ್ಚುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ. ಈ ಮಧ್ಯೆ ನೀವು ಉನ್ನತಿಗೆ ಜಿಗಿಯುವ ಸಾಧ್ಯತೆಗಳಿವೆ, ನೀವು ಅದಕ್ಕಾಗಿ ಸಂಪೂರ್ಣವಾಗಿ ತೈಯಾರಾಗಿರುವಿರಿ. ಸಕಾರಾತ್ಮಕತೆಯು ನಿಮ್ಮೊಂದಿಗಿರುತ್ತದೆ. ಸ್ನೇಹಿತರ ಸಹಕಾರ ಸಿಗುತ್ತದೆ.