Kannada Horoscope 2019: ರಾಶಿ ಭವಿಷ್ಯ 2019
Welcome to AstroSage’s Kannada Horoscope 2019 predictions. These forecast are based on the ancient principles of astrology. This Rashi Bhavishya for 2019 will tell you how different aspects of your life are going to be in this year and what you can do to improve the things. The astrology predictions given here are prepared by expert astrologers keeping all important planetary details in mind. Let’s have a look at 2019 horoscope in Kannada now:
ನಕ್ಷತ್ರಗಳು 2019 ರಲ್ಲಿ ನಿಮಗಾಗಿ ಏನು ಕಾದಿರಿಸಿವೆ ಎಂದು ನಿಮಗೆ ಗೊತ್ತೆ? ವರ್ಷ 2019 ರ ರಾಶಿ ಭವಿಷ್ಯ ಓದುವ ಮೂಲಕ ನಿಮ್ಮ ಭವಿಷ್ಯದ ಬಗ್ಗೆ ಇನ್ನಷ್ಟು ತಿಳಿಯಿರಿ! ವೈದಿಕ ಜೋತಿಷ್ಯ ಶಾಸ್ತ್ರವನ್ನಾಧರಿಸಿ ಭವಿಷ್ಯ ನೀಡಲಾಗಿದೆ. ಈ ಭವಿಷ್ಯ ವಾಣಿಯ ಮೂಲಕ ನಿಮ್ಮ ಜೀವನದ ಹಲವಾರು ಆಯಾಮಗಳಾದ ಉದ್ಯೋಗ, ವ್ಯಾಪಾರ, ಸಂಪತ್ತು, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ತಿಳಿದುಕೊಳ್ಳಿ.
ಸೂಚನೆ: ಇಲ್ಲಿ ನೀಡಲಾಗಿರುವ ಭವಿಷ್ಯವಾಣಿ ಚಂದ್ರ ಚಿಹ್ನೆಯನ್ನಾಧರಿಸಿದೆ. ನಿಮಗೆ ನಿಮ್ಮ ಚಂದ್ರ ಚಿಹ್ನೆ ಗೊತ್ತಿರದಿದ್ದರೆ, ದಯವಿಟ್ಟು ಇಲ್ಲಿ ಭೇಟಿ ನೀಡಿ: Moon Sign Calculator .
ಮೇಷ ರಾಶಿ ಭವಿಷ್ಯ (Mesha Rashi Bhavishya 2019)
2019 ರ ರಾಶಿ ಭವಿಷ್ಯದ ಪ್ರಕಾರ ಮೇಷ ರಾಶಿಯವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ವರ್ಷ ನೀವು ಮಿಶ್ರ ಪ್ರತಿಫಲ ಪಡೆಯುವಿರಿ.
ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರಿಂದ ವರ್ಷದ ಪ್ರಾರಂಭದಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗುವ
ಸಾಧ್ಯತೆ ಇದೆ. ಈ ವರ್ಷ, ಕೆಲವು ಸಣ್ಣ ಪುಟ್ಟ ಸಮಸ್ಯೆಗಳನ್ನು ಬಿಟ್ಟರೆ ನಿಮ್ಮ ಆರೋಗ್ಯ ಒಳ್ಳೆಯ ಸ್ಥಿತಿಯಲ್ಲಿರುತ್ತದೆ. ನಿಮ್ಮ
ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುವಿರಿ. ನಿಮ್ಮ ಅದ್ಭುತ ಪ್ರಯತ್ನಗಳಿಂದಾಗಿ ನೀವು ಯಶಸ್ಸು
ಕಾಣುವಿರಿ ಮತ್ತು ಉದ್ಯೋಗದಲ್ಲಿ ಬಡತಿ ಸಿಗುವ ಸಾಧ್ಯತೆ ಕೂಡ ಇದೆ.
ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸುವಲ್ಲಿ ನಿಮ್ಮ ಅದೃಷ್ಟ ನಿಮಗೆ ಸಹಾಯ ಮಾಡಲಿದೆ. ವರ್ಷದ ಪ್ರಾರಂಭದಿಂದಲೇ ನೀವು ನಿಮ್ಮ ಯೋಜನೆಗಳಲ್ಲಿ ತಲ್ಲೀನರಾಗಿ ಕೆಲಸ ಮಾಡುತ್ತೀರಿ. ಅದರ ಫಲ ಭವಿಷ್ಯದಲ್ಲಿ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಅಸ್ಥಿರತೆ ಅನುಭವಿಸುವಿರಿ. ವರ್ಷದ ಪ್ರಾರಂಭದಲ್ಲಿ, ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಆದರೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗುತ್ತವೆ. ಒಮ್ಮೆಲೇ ನಿಮ್ಮ ಅನವಶ್ಯಕ ಖರ್ಚುಗಳು ಹೆಚ್ಚಾಗುತ್ತವೆ. ನೀವು ಈ ನಿಮ್ಮ ಖರ್ಚುಗಳನ್ನು ನಿಯಂತ್ರಿಸದಿದ್ದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು.
ಮೇಷ ರಾಶಿ ಭವಿಷ್ಯ 2019 ರ ಪ್ರಕಾರ ವರ್ಷದ ಮಧ್ಯಾವಧಿಯಲ್ಲಿ (ಜೂನ್-ಜುಲೈ) ನಿಮ್ಮ ವ್ಯಾಪಾರ ಪ್ರಗತಿ ಹೊಂದುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವುದು. ನಿಮ್ಮ ಪ್ರೇಮ ಜೀವನದಲ್ಲಿ ಅಷ್ಟೊಂದು ಬದಲಾವಣೆ ಉಂಟಾಗುವುದಿಲ್ಲ. ನಿಮ್ಮ ಸಂಬಂಧವನ್ನು ಅತ್ಯುತ್ತಮ ಸ್ಥಿತಿಯಲ್ಲಿಡಲು, ನಿಮ್ಮ ಪ್ರೀತಿಯಲ್ಲಿ ನೀವು ಪಾರದರ್ಶಕತೆ ಕಾಪಾಡುವುದು ಒಳ್ಳೆಯದು.
ವೃಷಭ ರಾಶಿ ಭವಿಷ್ಯ (Vrushabh Rashi Bhavishya 2019)
ವೃಷಭ ರಾಶಿ ಭವಿಷ್ಯ 2019 ರ ಪ್ರಕಾರ ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ನೀವು ಈ ವರ್ಷ ನಿಮ್ಮ ಆರೋಗ್ಯದ
ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನಿಮ್ಮ ಊಟದ ಪದ್ಧತಿಯ ಬಗ್ಗೆ ಹೆಚ್ಚು ಗಮನ ನೀಡಿ. ಆರೋಗ್ಯಕರ ಆಹಾರವನ್ನೇ ಸೇವಿಸಿ. 2019
ರ ಭವಿಷ್ಯ ಹೇಳುವಂತೆ ನೀವು ಈ ವರ್ಷ ದೀರ್ಘಕಾಲದ ರೋಗದಿಂದ ಬಳಲಬಹುದು. ಈ ವರ್ಷದ ಪ್ರಾರಂಭದಲ್ಲಿ, ನೀವು ವೃತ್ತಿ ಜೀವನಕ್ಕೆ
ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಬಹುದು. ವೃತ್ತಿ ಜೀವನದಲ್ಲಿ ಏರುಪೇರುಗಳಾಗುತ್ತವೆ ಮತ್ತು ನೀವು ಒಳ್ಳೆಯ ಫಲಿತಾಂಶ
ಪಡೆಯುವುದಕ್ಕಾಗಿ ಸಾಕಷ್ಟು ದುಡಿಯಬೇಕಾಗುತ್ತದೆ.
ನಿಮ್ಮ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಗಂಭೀರವಾಗಿ ಕೆಲಸ ಮಾಡುವಿರಿ ಮತ್ತು ಏನಾದರೂ ವಿಶೇಷವಾದುದನ್ನು ಸಾಧಿಸುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ ಆದರೆ ನಿಮ್ಮ ಖರ್ಚುಗಳು ಜಾಸ್ತಿಯಾಗುವ ಸಾಧ್ಯತೆಯಿರುತ್ತದೆ. ನೀವು ಅನಗತ್ಯ ವೆಚ್ಚಗಳನ್ನು ನಿಯಂತ್ರಿಸದಿದ್ದರೆ, ನಿಮ್ಮ ಸದ್ಯದ ಆರ್ಥಿಕ ಪರಿಸ್ಥಿತಿ ಕ್ಷೀಣಿಸಬಹುದು.
ಈ ವರ್ಷ ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ರಾಶಿ ಭವಿಷ್ಯ 2019 ರ ಪ್ರಕಾರ ಹೊಸ ಜಾಗಗಳಿಂದ ಆದಾಯ ದೊರೆಯುತ್ತದೆ. ಏಪ್ರಿಲ್ ಮತ್ತು ಮೇ ಮಧ್ಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಪ್ರಬಲಗೊಳ್ಳುತ್ತದೆ ಮತ್ತು ಜೂನ್ ಉದ್ದಕ್ಕೂ ಅದೇ ರೀತಿಯ ಉತ್ತಮ ಸ್ಥಿತಿ ಮುಂದುವರಿಯುತ್ತದೆ.
ಮಿಥುನ ರಾಶಿ ಭವಿಷ್ಯ (Mithuna Rashi Bhavishya 2019)
ಮಿಥುನ ರಾಶಿ ಭವಿಷ್ಯ 2019 ರ ಪ್ರಕಾರ ನಿಮ್ಮ ಆರೋಗ್ಯದಲ್ಲಿ ಸುಧಾರಣೆಗಳಾಗುತ್ತವೆ. ಆದಾಗ್ಯೂ, ನೀವು ಸಣ್ಣ ಪುಟ್ಟ ಆರೋಗ್ಯ
ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವರ್ಷದ ಪ್ರಾರಂಭದಲ್ಲಿ ಅಂದರೆ ಜನವರಿಯಲ್ಲಿ ನಿಮ್ಮ ಆರೋಗ್ಯದತ್ತ ಗಮನ ನೀಡಿ. ಈ ಹೊತ್ತಿಗೆ
ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಈ ವರ್ಷ ನಿಮ್ಮ ವೃತ್ತಿ ಜೀವನ ಸರಾಗವಾಗಿ ಸಾಗುವುದು. ಆದಾಗ್ಯೂ
ನೀವು ಶ್ರಮ ವಹಿಸಿದರೆ, ಈ ವರ್ಷ ನಿಮ್ಮ ವೃತ್ತಿ ಜೀವನಕ್ಕೆ ಉತ್ತಮವಾಗಿದೆ. ನೀವು ನಿಮ್ಮ ಕೆಲಸದತ್ತ ಗಮನ ನೀಡಬೇಕು.
ನಿಮ್ಮ ವೃತ್ತಿ ಜೀವನದಲ್ಲಿ ಮುಂದುವರಿಯುವುದಕ್ಕಾಗಿ ನೀವು ಹೊಸ ಹೊಸ ವಿಚಾರಗಳನ್ನು ಮುಂದಿಡಬೇಕು. ಒಬ್ಬ ಹಿರಿಯ ಅಧಿಕಾರಿಗಳ ಸಲಹೆ ಕೂಡ ನಿಮಗೆ ಸಹಕಾರಿಯಾಗುವುದು. ರಾಶಿ ಭವಿಷ್ಯ 2019 ರ ಪ್ರಕಾರ ಈ ವರ್ಷ, ನೀವು ಅತ್ಯುತ್ತಮ ಆರ್ಥಿಕ ಜೀವನ ಹೊಂದುವಿರಿ. ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ನೀಡುವ ಹೊಸ ವಿಚಾರಗಳು ನಿಮ್ಮ ಆರ್ಥಿಕ ಲಾಭಗಳನ್ನು ಹೆಚ್ಚಿಸುತ್ತದೆ. ನಿಮಗೆ ಸಾಕಷ್ಟು ಹಣ ದೊರೆಯುತ್ತದೆ. ಆದಾಗ್ಯೂ, ನಿಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸುವುದಕ್ಕಾಗಿ ನೀವು ಬೇರೆಡೆ ಪ್ರಯಾಣ ಬೆಳೆಸಬೇಕಾಗಬಹುದು.
ಕರ್ಕಾಟಕ ರಾಶಿ ಭವಿಷ್ಯ (Karka Rashi Bhavishya 2019)
ಕರ್ಕ ರಾಶಿ ಭವಿಷ್ಯ 2019 ರ ಪ್ರಕಾರ, 2019 ರಲ್ಲಿ ಕರ್ಕ ರಾಶಿಯವರು ಆರ್ಥಿಕವಾಗಿ ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣುತ್ತಾರೆ.
ಆದಾಗ್ಯೂ, ನೀವು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ವಹಿಸಬೇಕು. ಏಕೆಂದರೆ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುವ ಸಾಧ್ಯತೆಯಿದೆ.
ಉದ್ಯೋಗದಲ್ಲಿರುವವರು ಬಡತಿ ಹೊಂದುವ ಸಾಧ್ಯತೆಗಳಿವೆ. ಫೆಬ್ರವರಿಯಿಂದ ಮಾರ್ಚ್ ಮತ್ತು ನವಂಬರ್ ನಿಂದ ಡಿಸೆಂಬರ್ ವರೆಗೆ,
ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮಗೆ ಒಳ್ಳೆಯ ಸುದ್ದಿ ದೊರೆಯುತ್ತದೆ.
ಅದೇ ವೇಳೆ, ಮಾರ್ಚ್ ಮುಗಿದ ನಂತರ, ನೀವು ಸದ್ಯದ ವ್ಯಾಪಾರವನ್ನು ವಿಸ್ತರಿಸಬಹುದು ಅಥವಾ ಹೊಸ ವ್ಯವಹಾರಕ್ಕೆ ಕೈ ಹಾಕಬಹುದು. ಈ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿ ಪ್ರಬಲವಾಗಿರುತ್ತದೆ. ಏಕೆಂದರೆ ಇಡೀ ವರ್ಷ ನಿಮಗೆ ಹೊಸ ಹೊಸ ಆದಾಯದ ಅವಕಾಶಗಳು ದೊರೆಯುತ್ತವೆ. ರಾಶಿ ಭವಿಷ್ಯ 2019 ರ ಪ್ರಕಾರ ಮಾರ್ಚ್, ಏಪ್ರಿಲ್ ಮತ್ತು ಮೇ ಹಣಕ್ಕೆ ಸಂಬಂಧಿಸಿದಂತೆ ಬಹಳ ಲಾಭಕಾರಿಯಾಗಲಿವೆ.
ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಆದಾಯ ಸುಧಾರಿಸುವುದು ಮತ್ತು ಈ ಮೂಲಕ ನಿಮ್ಮ ಆರ್ಥಿಕ ಹಾಗೂ ಸಾಮಾಜಿಕ ಸ್ಥಾನಮಾನ ಕೂಡ ಹೆಚ್ಚುವುದು. ಈ ವರ್ಷ ನಿಮ್ಮ ಕೈಗೆ ಹಣ ಸೇರುವುದರ ಜೊತೆಗೆ ಹಣ ಕಳೆದು ಹೋಗುವ ಸಾಧ್ಯತೆ ಕೂಡ ಇದೆ. ಆದ್ದರಿಂದ, ಫೆಬ್ರವರಿಯಿಂದ ಮಾರ್ಚ್ ಪ್ರಾರಂಭದವರೆಗೆ ಬಹಳ ಕಾಳಜಿಪೂರ್ವಕವಾಗಿ ಮತ್ತು ಜಾಣ್ಮೆಯಿಂದ ಹಣ ಖರ್ಚು ಮಾಡಿ ಮತ್ತು ಬಂಡವಾಳ ಹೂಡಿಕೆ ಮಾಡಿ.
ಸಿಂಹ ರಾಶಿ ಭವಿಷ್ಯ (Simha Rashi Bhavishya 2019)
ಸಿಂಹ ರಾಶಿ ಭವಿಷ್ಯ 2019 ರ ಪ್ರಕಾರ, ನಿಮ್ಮ ಆರೋಗ್ಯ ಈ ವರ್ಷ ಚೆನ್ನಾಗಿರುತ್ತದೆ. ಈ ವರ್ಷದ ಪ್ರಾರಂಭಿಕ ತಿಂಗಳುಗಳಲ್ಲಿ
ನಿಮಗೆ ನೆಗಡಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು ಹಾಗೂ ನಿಮಗೆ ದಣಿವಾಗಬಹುದು ಮತ್ತು ದೈಹಿಕ ಶಕ್ತಿ ಕುಸಿಯಬಹುದು. ಆದಾಗ್ಯೂ,
ಫೆಬ್ರವರಿ ಮಧ್ಯದಲ್ಲಿ ನಿಮ್ಮ ದೈಹಿಕ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಔದ್ಯೋಗಿಕ ಜೀವನದಲ್ಲಿ ಯಶಸ್ಸು ಸಾಧಿಸಲು ನೀವು ಶ್ರಮ
ವಹಿಸುತ್ತೀರಿ. ನಿಮ್ಮ ಔದ್ಯೋಗಿಕ ಜೀವನದಲ್ಲಿ ಸಾಕಷ್ಟು ಉತ್ತಮ ಫಲಿತಾಂಶಗಳು ದೊರೆಯುತ್ತವೆ, ಆದರೆ ಅವು ನಿಮಗೆ ಸಂತೃಪ್ತಿ
ನೀಡುವುದಿಲ್ಲ.
ಕೆಲಸದಲ್ಲಿ ನೀವು ತೋರುವ ಶ್ರದ್ಧೆಯಿಂದಾಗಿ ನಿಮ್ಮ ಸಾಮರ್ಥ್ಯಕ್ಕೆ ಬೆಲೆ ಬರುತ್ತದೆ. ನಿಮಗೆ ಹೊಸ ಕಚೇರಿಯಲ್ಲಿ ಕೆಲಸ ಮಾಡುವ ಅವಕಾಶ ಕೂಡ ದೊರೆಯುತ್ತದೆ. 2019 ರ ಪ್ರಾರಂಭದಲ್ಲಿ, ನೀವು ಔದ್ಯೋಗಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣುವಿರಿ. ಈ ವರ್ಷ ನಿಮ್ಮ ಆರ್ಥಿಕ ಜೀವನದಲ್ಲಿ ಚಿಕ್ಕ ಪುಟ್ಟ ಸವಾಲುಗಳು ಎದುರಾಗಬಹುದು. ಆದರೆ ನೀವು ಅವುಗಳನ್ನೆಲ್ಲ ಸಮರ್ಪಕವಾಗಿ ಎದುರಿಸಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಜನವರಿ ಒಂದನ್ನು ಬಿಟ್ಟರೆ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಆರ್ಥಿಕವಾಗಿ ಹಾನಿಯನ್ನುಂಟು ಮಾಡುತ್ತವೆ.
ರಾಶಿ ಭವಿಷ್ಯ 2019 ರ ಪ್ರಕಾರ ಈ ವರ್ಷ ನಿಮ್ಮ ಪ್ರೇಮ ಜೀವನ ಸವಾಲಿನದ್ದಾಗಿರುತ್ತದೆ. ಆದ್ದರಿಂದ ನೀವು ಆ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ನೀವು ನಿಮ್ಮ ಪ್ರೇಮ ಸಂಗಾತಿಯೊಂದಿಗೆ ಜಗಳವಾಡಬಹುದು ಅಥವಾ ಯಾವುದೋ ತಪ್ಪು ಕಲ್ಪನೆಯಿಂದಾಗಿ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು.
ಕನ್ಯಾ ರಾಶಿ ಭವಿಷ್ಯ (Kanya Rashi Bhavishya 2019)
ಕನ್ಯಾ ರಾಶಿ ಭವಿಷ್ಯ 2019 ರ ಪ್ರಕಾರ, ಈ ವರ್ಷ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಅಲ್ಲದೇ ನಿಮ್ಮ ಆರೋಗ್ಯಕ್ಕೆ
ಸಂಬಂಧಿಸಿದಂತೆ ನೀವು ಮಿಶ್ರ ಫಲಿತಾಂಶಗಳನ್ನು ಸ್ವೀಕರಿಸುವಿರಿ. ಉದಾಹರಣೆಗಾಗಿ, ನಿಮ್ಮ ಆರೋಗ್ಯದಲ್ಲಿ ಸುಧಾರಣೆಯ ಜೊತೆಗೆ
ಕೆಲವು ಸಮಸ್ಯೆಗಳು ಕೂಡ ಎದುರಾಗುತ್ತವೆ. ನಿಮ್ಮ ಉದ್ಯೋಗದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ. ಈ ಕ್ಷೇತ್ರದಲ್ಲಿ ಹಲವಾರು
ಅವಕಾಶಗಳು ದೊರೆಯುತ್ತವೆ ಮತ್ತು ನಿಮಗೆ ನಿರಾಶೆಯಾಗಬಹುದು. ಆದರೆ ಹಲವಾರು ಅವಕಾಸಗಳು ಕೂಡ ದೊರೆಯುವುದರಿಂ ನೀವು ಯಶಸ್ಸು ಕಾಣುತ್ತೀರಿ.
ಕನ್ಯಾ ರಾಶಿಯವರು ನಿಮ್ಮ ಸಮರ್ಥ ಸಂವಹನ ಕೌಶಲ್ಯಗಳ ಮೂಲಕ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುತ್ತೀರಿ. ನಿಮ್ಮ ಆರ್ಥಿಕ ಜೀವನ ಮುಂಚೆಗಿಂತ ಚೆನ್ನಾಗಿರುತ್ತದೆ ಮತ್ತು ಈ ಸುಧಾರಣೆ ವರ್ಷದ ಪ್ರಾರಂಭದಲ್ಲೇ ಆಗುತ್ತದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ನೀವು ವಿವಿಧೆಡೆಗಳಿಂದ ಹಣ ಪಡೆಯುವಿರಿ. ಆದರೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗುತ್ತವೆ. ಆದಾಗ್ಯೂ ಪರಿಸ್ಥಿತಿ ನಿಮ್ಮ ನಿಯಂತ್ರಣದಲ್ಲಿರುತ್ತದೆ. 2019 ರಲ್ಲಿ ನಿಮ್ಮ ಪ್ರೇಮ ಜೀವನದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ. ಈ ವೇಳೆ ನೀವು ಏರಿಳಿತಗಳನ್ನು ಅನುಭವಿಸಬೇಕಾಗುತ್ತದೆ. ರಾಶಿ ಭವಿಷ್ಯ 2019 ರ ಪ್ರಕಾರ ಪ್ರೇಮದ ವಿಷಯದಲ್ಲಿ ಈ ವರ್ಷ ಅಷ್ಟೊಂದು ಸೂಕ್ತವಾಗಿಲ್ಲ. ಈ ವೇಳೆ ನಿಮ್ಮ ಪ್ರೇಮ ಜೀವನದಲ್ಲಿ ಸಾಕಷ್ಟು ಸವಾಲುಗಳು ಎದುರಾಗಬಹುದು. ಉದ್ಯೋಗ/ವ್ಯಾಪಾರದಿಂದಾಗಿ ನೀವು ದೂರದ ಪ್ರದೇಶಗಳಿಗೆ ಪ್ರಯಾಣಿಸಬೇಕಾಗಬಹುದು.
ತುಲಾ ರಾಶಿ ಭವಿಷ್ಯ (Tula Rashi Bhavishya 2019)
ತುಲಾ ರಾಶಿ ಭವಿಷ್ಯ 2019 ರ ಪ್ರಕಾರ, ಈ ವರ್ಷ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಈ ವರ್ಷ ನಿಮಗೆ ಆರೋಗ್ಯ ಭಾಗ್ಯ ದೊರೆಯುವುದಲ್ಲದೇ,
ದೀರ್ಘ ಕಾಲದವರೆಗೆ ನಿಮ್ಮನ್ನು ಕಾಡುತ್ತಿದ್ದ ರೋಗಗಳು ಕೂಡ ವಾಸಿಯಾಗುತ್ತವೆ. ನಿಮ್ಮ ವೃತ್ತಿ ಜೀವನದಲ್ಲಿ ಕೂಡ ನಿಮಗೆ ಉತ್ತಮ
ಫಲಿತಾಂಶಗಳು ದೊರೆಯುತ್ತವೆ ಮತ್ತು ಮಾರ್ಚ್ ನಂತರ ನಿಮ್ಮ ಹೊಸ ವಿಚಾರಗಳು ನಿಮಗೆ ಯಶಸ್ಸು ತಂದುಕೊಡುತ್ತವೆ. ಈ ವೇಳೆ ಉದ್ಯೋಗದಲ್ಲಿ
ನಿಮಗೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ. ನೀವು ನಿಮ್ಮ ಸಹುದ್ಯೋಗಿಗಳಿಂದ ಬೆಂಬಲ ಪಡೆದರೂ ನಿಮಗೆ ಬೇಕಾದಷ್ಟು ದೊರೆಯುವುದಿಲ್ಲ.
ಆದ್ದರಿಂದ ಅವರ ಮೇಲೆ ತುಂಬಾ ಅವಲಂಬಿತರಾಗಬೇಡಿ. ಆರ್ಥಿಕ ಕ್ಷೇತ್ರದಲ್ಲಿ ನಿಮಗೆ ನಿರೀಕ್ಷೆಗೆ ತಕ್ಕ ಫಲಿತಾಂಶಗಳು ದೊರೆಯುತ್ತವೆ.
ಆರ್ಥಿಕ ಕ್ಷೇತ್ರದಲ್ಲಿ ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳು ದೊರೆಯುತ್ತವೆ. ರಾಶಿ ಭವಿಷ್ಯ 2019 ರ ಪ್ರಕಾರ, ಈ ವರ್ಷ ಒಬ್ಬ ವ್ಯಕ್ತಿಯೊಂದಿಗೆ ನಿಮ್ಮ ಹೊಸ ಸಂಬಂಧ ಬೆಳೆಯಬಹುದು. ನಿಮ್ಮ ಪ್ರೇಮ ಸಂಗಾತಿಯೊಂದಿಗೆ ನಿಮ್ಮ ಹೊಂದಾಣಿಕೆ ಚೆನ್ನಾಗಿರುತ್ತದೆ. ನೀವು ಅವರೊಂದಿಗೆ ಪ್ರವಾಸ ಕೂಡ ಮಾಡಬಹುದು. ಮನರಂಜನೆಗಾಗಿ ಕೂಡ ನೀವಿಬ್ಬರೂ ಯಾವುದೋ ಒಂದು ಜಾಗಕ್ಕೆ ಪ್ರಯಾಣ ಬೆಳೆಸುತ್ತೀರಿ.
ಆದಾಗ್ಯೂ, ನೀವು ಕೆಲವೆಡೆ ನಿರಾಶೆ ಎದುರಿಸಬೇಕಾಗಬಹುದು. ನಿಮ್ಮ ಮನೆಯಲ್ಲಿನ ಶಾಂತಿಯುತವಾದ ಮತ್ತು ಸಂತೋಷಭರಿತ ವಾತಾವರಣ ನಿಮಗೆ ತೃಪ್ತಿ ನೀಡುವುದು. ಈ ವರ್ಷದ ಮಧ್ಯ ಭಾಗದಲ್ಲಿ ನಿಮಗೆ ಒಂದು ಒಳ್ಳೆಯ ಸುದ್ದಿ ದೊರೆಯುತ್ತದೆ. ಈ ವೇಳೆ ನಿಮ್ಮ ಮನೆಯಲ್ಲಿ ಒಂದು ಮಂಗಳ ಕಾರ್ಯ ನಡೆಯಬಹುದು.
ವೃಶ್ಚಿಕ ರಾಶಿ ಭವಿಷ್ಯ(Vrushchika Rashi Bhavishya 2019)
ವೃಶ್ಚಿಕ ರಾಶಿ ಭವಿಷ್ಯ 2019 ರ ಪ್ರಕಾರ ನೀವು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಲೇಸು. ನಿಮ್ಮ ಆರೋಗ್ಯದಲ್ಲಿ
ವ್ಯತ್ಯಾಸವಾಗಬಹುದಾದ್ದರಿಂದ, ಆ ಬಗ್ಗೆ ನಿರ್ಲಕ್ಷ್ಯ ಬೇಡ. ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ
ನಿಮ್ಮ ಆರೋಗ್ಯ ಸ್ವಲ್ಪ ಸೂಕ್ಷ್ಮವಾಗಬಹುದು. ಅದೇ ನಿಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮ ಫಲಿತಾಂಶಗಳು ದೊರೆಯುವ ಸಾಧ್ಯತೆಯಿದೆ.
ರಾಶಿ ಭವಿಷ್ಯ 2019 ಹೇಳುವಂತೆ, ವೃತ್ತಿ ಜೀವನದಲ್ಲಿ ಸಾಕಷ್ಟು ಒಳ್ಳೆಯ ಅವಕಾಶಗಳು ದೊರೆಯುತ್ತವೆ. ನಿಮಗೆ ಒಂದು ಒಳ್ಳೆಯ ಸಂಸ್ಥೆಯಿಂದ ಉದ್ಯೋಗಾವಕಾಶ ಬರಬಹುದು ಮತ್ತು ಕೆಲಸದ ಮೇಲೆ ವಿದೇಶ ಪ್ರಯಾಣ ಕೂಡ ಮಾಡುವ ಸಾಧ್ಯತೆಯಿರುತ್ತದೆ. ನಿಮ್ಮ ಆರ್ಥಿಕ ಜೀವನದಲ್ಲಿ ಏರುಪೇರುಗಳಾಗುತ್ತವೆ. ನಿಮ್ಮ ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗುವುದರಿಂದ, ಅವುಗಳ ನಡುವೆ ಸಮತೋಲನ ಕಾಪಾಡಲು ಪ್ರಯತ್ನಿಸಿ. ಇನ್ನೊಂದೆಡೆ, ನಿಮ್ಮ ಪ್ರೇಮ ಜೀವನ ಚೆನ್ನಾಗಿರುತ್ತದೆ. ಈ ವರ್ಷ ನಿಮಗಿಷ್ಟವಾದವರು ನಿಮಗೆ ದೊರೆಯುತ್ತಾರೆ ಮತ್ತು ನಿಮ್ಮ ಸಂಬಂಧ ತುಂಬಾ ಪ್ರಬಲಗೊಳ್ಳುವುದು.
ಧನು ರಾಶಿ ಭವಿಷ್ಯ (Dhanu Rashi Bhavishya 2019)
ಧನು ರಾಶಿ ಭವಿಷ್ಯ 2019 ರ ಪ್ರಕಾರ ನೀವು ಈ ವರ್ಷದ ಪ್ರಾರಂಭದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬಹುದು. ನಿಮಗೆ
ಪ್ರಯಾಣದ ವೇಳೆ ದಣಿವಾಗಬಹುದು. ವಾಹನವನ್ನು ಎಚ್ಚರಿಕೆಯಿಂದ ಓಡಿಸಿ. ವೃತ್ತಿ ಜೀವನದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ.
ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳಾಗಬಹುದು. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಈ ವೇಳೆ ನಿಮ್ಮ ಉದ್ಯೋಗದಲ್ಲಿ
ಬಡತಿ ದೊರೆಯಬಹುದು ಅಥವಾ ನಿಮ್ಮ ಪ್ರಸ್ತುತ ಸಂಬಳ ಹೆಚ್ಚಾಗಬಹುದು. ಇನ್ನೊಂದೆಡೆ, ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ನಿಮಗೆ
ವಿವಿಧೆಡೆಯಿಂದ ಆರ್ಥಿಕ ಸಹಾಯ ದೊರೆಯುವುದು. ನಿಮ್ಮ ಪಿತ್ರಾರ್ಜಿತ ಆಸ್ತಿ ಹೆಚ್ಚಾಗುವುದು.
ರಾಶಿ ಭವಿಷ್ಯ 2019 ರ ಪ್ರಕಾರ ನಿಮ್ಮ ಕುಟುಂಬ ಸದಸ್ಯರು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಗೊಳಿಸುವುದರಲ್ಲಿ ಸಹಾಯ ಮಾಡುತ್ತಾರೆ. ನೀವು ಯಾವುದಾದರೂ ವ್ಯವಹಾರಕ್ಕೆ ಕೈ ಹಾಕಿದ್ದರೆ ಅಥವಾ ಸಂಸ್ಥೆ ಸ್ಥಾಪಿಸಿದ್ದರೆ, ಆರ್ಥಿಕ ಲಾಭ ಗಳಿಸುತ್ತೀರಿ. ಈ ವರ್ಷ ನೀವು ನಿಮ್ಮ ಪ್ರೇಮ ಜೀವನದ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸುತ್ತೀರಿ. ನಿಮ್ಮ ಪ್ರೇಯಸಿ/ಪ್ರೇಮಿಯೊಂದಿಗೆ ಏನಾದರೂ ಮನಸ್ತಾಪವಿದ್ದರೆ ಅದನ್ನು ಹೆಚ್ಚಾಗಲು ಬಿಡಬೇಡಿ. ಅದಕ್ಕೆ ಬದಲಾಗಿ ಅವರೊಂದಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಿ. ಕುಟುಂಬ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ನಿಮ್ಮ ತಂದೆ-ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.
ಮಕರ ರಾಶಿ ಭವಿಷ್ಯ(Makara Rashi Bhavishya 2019)
ಮಕರ ರಾಶಿ ಭವಿಷ್ಯ 2019 ರ ಪ್ರಕಾರ ಈ ವರ್ಷ ಚೆನ್ನಾಗಿರುತ್ತದೆ. ಆದರೆ ನಿಮ್ಮ ಆರೋಗ್ಯ ಸಮಸ್ಯೆಗಳು ನಿಮಗೆ ಅಡಚಣೆಯುಂಟು ಮಾಡುತ್ತವೆ.
ವರ್ಷದ ಪ್ರಾರಂಭಿಕ ಮೂರು ತಿಂಗಳುಗಳಾದ ಜನವರಿ, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ
ವೇಳೆ, ನಿಮಗೆ ಶಕ್ತಿ ಇರುತ್ತದೆ ಆದರೆ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಆರ್ಥಿಕ ಜೀವನದಲ್ಲಿ ಏರುಪೇರುಗಳಾಗುತ್ತವೆ. ಈ ವರ್ಷ ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಆದರೆ ನಿಮ್ಮ ಸಂಬಳದಲ್ಲಿ
ಹೆಚ್ಚಳವಾಗುವ ಸಾಧ್ಯತೆ ಕಡಿಮೆ. ಆದಾಗ್ಯೂ ಅಂತಾರಾಷ್ಟ್ರೀಯ ಸಂಬಂಧಗಳಿಂದಾಗಿ ನೀವು ಆರ್ಥಿಕ ಲಾಭ ಗಳಿಸುವ ಸಾಧ್ಯತೆಯಿರುತ್ತದೆ.
ನೀವು ಉದ್ಯೋಗದಲ್ಲಿದ್ದರೆ, ಆಡಳಿತ ವರ್ಗದವರು ನಿಮಗೆ ಬಡತಿ ನೀಡಬಹುದು ಅಥವಾ ನಿಮ್ಮ ಕೆಲಸವನ್ನು ಪ್ರಶಂಸಿಬಹುದು. ಅಕ್ಟೋಬರ್
ನಲ್ಲಿ ಕೂಡ ನಿಮಗೆ ಸಾಕಷ್ಟು ಒಳ್ಳೆಯ ಸುದ್ದಿಗಳು ದೊರೆಯುತ್ತವೆ. ನೀವು ನಿಮ್ಮ ವ್ಯವಹಾರದಲ್ಲಿ ಬೆಳೆಯುತ್ತೀರಿ. ನಿಮ್ಮ ಪ್ರೇಮ
ಜೀವನ ಕೂಡ ಚೆನ್ನಾಗಿರುತ್ತದೆ. ರಾಶಿ ಭವಿಷ್ಯ 2019 ರ ಪ್ರಕಾರ ನಿಮ್ಮ ಪ್ರೇಮ ಜೀವನ ರೋಮಾಂಚಕಾರಿಯಾಗಿರುತ್ತದೆ. ನೀವು ಪ್ರೀತಿಸಿದವರನ್ನೇ
ಮದುವೆಯಾಗಬೇಕೆಂದುಕೊಂಡಿದ್ದರೆ, ಈ ವರ್ಷ ನಿಮ್ಮ ಕನಸು ನನಸಾಗುತ್ತದೆ.
ಕುಂಭ ರಾಶಿ ಭವಿಷ್ಯ (Kumbha Rashi Bhavishya 2019)
ಕುಂಭ ರಾಶಿ ಭವಿಷ್ಯದ 2019 ರ ಪ್ರಕಾರ, ನಿಮ್ಮ ಆರೋಗ್ಯ ಇಡೀ ವರ್ಷ ಚೆನ್ನಾಗಿರುತ್ತದೆ. ನಿಮ್ಮ ದೈಹಿಕ ಶಕ್ತಿ ಹೆಚ್ಚಾಗುತ್ತದೆ.
ನಿಮ್ಮಲ್ಲಿ ಸಾಕಷ್ಟು ಉತ್ಸಾಹ ಮತ್ತು ಹುಮ್ಮಸ್ಸು ತುಂಬಿಕೊಳ್ಳುತ್ತದೆ. ಈ ವರ್ಷ, ನಿಮ್ಮ ಔದ್ಯೋಗಿಕ ಜೀವನದಲ್ಲಿ ಉನ್ನತಿ
ಸಾಧಿಸುತ್ತೀರಿ. ನಿಮ್ಮ ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ ಮತ್ತು ನಿಮ್ಮ ನಿರ್ಧಾರಗಳಿಂದಾಗಿ ನಿಮಗೆ ಅತ್ಯುತ್ತಮ ಫಲಿತಾಂಶಗಳು
ದೊರೆಯುತ್ತವೆ. ನಿಮ್ಮ ಅದ್ಭುತ ನಿರ್ಧಾರಗಳ ಮೂಲಕ ನೀವು ಒಳ್ಳೆಯ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತೀರಿ. ನಿಮ್ಮ ಆರ್ಥಿಕ
ಸ್ಥಿತಿ ಶ್ರೇಷ್ಠವಾಗಿರುತ್ತದೆ.
ಈ ವರ್ಷ ನಿಮಗೆ ಆರ್ಥಿಕ ಲಾಭಗಳು ದೊರೆಯುವ ಎಲ್ಲ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಬೇಕಾದಷ್ಟು ಹಣ ದೊರೆಯತ್ತದೆ. ಅಲ್ಲದೇ ಇಡೀ ವರ್ಷ ಸಾಕಷ್ಟು ಹಣ ಗಳಿಸುತ್ತೀರಿ. ಮಾರ್ಚ್ ನಂತರ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಣ ಗಳಿಸುವ ಹಲವಾರು ಅವಕಾಶಗಳು ದೊರೆಯುತ್ತವೆ. ಈ ವರ್ಷ ನಿಮ್ಮ ಪ್ರೇಮ ಜೀವನ ಮೊದಲಿಗಿಂತ ಚೆನ್ನಾಗಿರುತ್ತದೆ.
ರಾಶಿ ಭವಿಷ್ಯ 2019 ರ ಪ್ರಕಾರ ವರ್ಷದ ಪ್ರಾರಂಭಿಕ ದಿನಗಳಲ್ಲಿ ಅಭಿವೃದ್ಧಿ ಕಡಿಮೆಯಾಗುತ್ತದೆ. ಮಾರ್ಚ್ ವರೆಗೆ ನಿಮ್ಮ ಪ್ರೇಮ ಜೀವನದಲ್ಲಿ ಬಹಳಷ್ಟು ಕಷ್ಟ ಸುಖಗಳು ಬಂದು ಹೋಗುತ್ತವೆ. ಆದಾಗ್ಯೂ ನೀವು ಪ್ರೀತಿಸಿದವರಲ್ಲಿ ಸಂಪೂರ್ಣ ನಂಬಿಕೆ ಇಟ್ಟು ಮುಂದುವರಿಯಿರಿ. ಅವರ ನಂಬಿಕೆಗೆ ಧಕ್ಕೆ ತರಬೇಡಿ.
ಮೀನ ರಾಶಿ ಭವಿಷ್ಯ (Meena Rashi Bhavishya 2019)
ಮೀನ ರಾಶಿ ಭವಿಷ್ಯ 2019 ರ ಪ್ರಕಾರ, ಈ ವರ್ಷ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೂ ನಿಮ್ಮ ಆರೋಗ್ಯವನ್ನು ಚೆನ್ನಾಗಿ
ನೋಡಿಕೊಳ್ಳಿ. ಆರೋಗ್ಯವಂತರಾಗಿ ಉಳಿಯಲು ಯೋಗ, ವ್ಯಾಯಾಮ, ಜಿಮ್, ರನ್ನಿಂಗ್ ಇತ್ಯಾದಿ ಮಾಡಿ. ನಿಮ್ಮ ದೈನಂದಿನ ಜೀವನ ಆರೋಗ್ಯಕರ
ಚಟುವಟಿಕೆಗಳಿಂದ ಕೂಡಿರಲಿ.
ಬೆಳಗ್ಗೆ ಬೇಗ ಎದ್ದೇಳಿ ಮತ್ತು ರಾತ್ರಿ ಬೇಗ ಮಲಗಿಕೊಳ್ಳಿ. ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಿದ್ದಷ್ಟು ನಿದ್ದೆ ಮಾಡಿ. ನೀವು ನಿಮ್ಮ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಧ್ಯಾನ ಕೂಡ ಮಾಡಬಹುದು. ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಿಂದ ಇದ್ದರೆ, ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಗಳಿಸಬಹುದು. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮಗೆ ಹೊಸ ಗುರುತು ದೊರೆಯುವುದು.
ಎಲ್ಲರೂ ನಿಮ್ಮನ್ನು ಒಬ್ಬ ಶ್ರಮಿಕ, ನಿಷ್ಠಾವಂತ ಮತ್ತು ಸಮರ್ಪಿತ ಉದ್ಯೋಗಿಯಾಗಿ ಕಾಣುತ್ತಾರೆ. ರಾಶಿ ಭವಿಷ್ಯ 2019 ರ ಪ್ರಕಾರ ನೀವು ಆರ್ಥಿಕ ಬಿಕ್ಕಟ್ಟು ಎದುರಿಸಬಹುದಾದ್ದರಿಂದ, ವರ್ಷವಿಡೀ ನಿಮ್ಮ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾವುದೇ ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಚೆನ್ನಾಗಿ ಯೋಚಿಸಿ. ಇಲ್ಲದಿದ್ದರೆ ನೀವು ಹಾನಿ ಎದುರಿಸಬೇಕಾಗಬಹುದು. ಈ ವರ್ಷ ನಿಮ್ಮ ಪ್ರೇಮ ಜೀವನದಲ್ಲಿ ಗೊಂದಲ ಉಂಟಾಗುತ್ತದೆ. ನಿಮ್ಮ ಪ್ರೇಮ ಸಂಬಂಧದ ಬಗ್ಗೆ ನಿಮಗೆ ನಿರ್ದಿಷ್ಟವಾದ ಸಂದೇಹವಿರಬಹುದು. ಯಾವುದೋ ನಿರ್ದಿಷ್ಟ ವಿಷಯದ ಬಗ್ಗೆ ನಿಮ್ಮ ಪ್ರೇಮಿಯೊಂದಿಗೆ ವಾಗ್ವಾದ ನಡೆಯಬಹುದು.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
AstroSage TVSubscribe
- Mars Transit In Taurus (10 August): Impact & Remedies
- Numerology Reveals Lucky-Unlucky Numbers & Their Significance!
- Sun Transit in Leo Soon: 4 Signs Will Benefit-3 Must Beware!
- Vaidhavya Yoga Forms In Women’s Horoscope Under These Circumstances, Must Be Careful!
- Weekly Horoscope 08-14 August, 2022: Lucky-Unlucky Signs Of The Week!
- If This Is Your Birth Date, Be Ready To Become A Millionaire!
- Numerology Weekly Horoscope 07 August-13 August, 2022
- Venus Transit In Cancer (7 August): Which Signs Will Be Lucky In Love?
- Raksha Bandhan 2022 in Auspicious Yogas: Correct Date, Legend, & Zodiac-Wise Rakhi!
- Were You Born After Sunset? Astrology Reveals Your Personality!
- वृषभ में मंगल का गोचर इन राशियों के लिए बेहद शुभ- इन जातकों के बनेंगे विवाह के योग!
- Ank Shastra: अंकों से भी होती है व्यक्तितव की पहचान, जानें क्या कहता है आपका अंक!
- सूर्य करेंगे अपनी ही सिंह राशि में गोचर, इन जातकों को मिलेगी अपने हर रोग से मुक्ति !
- महिलाओं की कुंडली में इन परिस्थितियों में बनता है वैधव्य योग, समय रहते हो जाएं सावधान!
- साप्ताहिक राशिफल 08 अगस्त से 14 अगस्त, 2022: किन राशियों को मिलेगा भाग्य का साथ?
- अंक ज्योतिष साप्ताहिक राशिफल: 07 अगस्त से 13 अगस्त, 2022
- शुक्र का कर्क राशि में गोचर: कौन सी राशियाँ होंगी प्रेम संबंधों में भाग्यशाली?
- रक्षाबंधन पर बन रहे हैं 3 शुभ योग, जानें महत्व और लाभ।
- जानें कैसा होता है सूर्यास्त के बाद जन्म लेने वाले लोगों का व्यक्तित्व!
- एक महीने में शुक्र के बैक-टू-बैक गोचर से बदल जाएगा इन राशियों का भाग्य-देश पर भी पड़ेगा प्रभाव!
- Horoscope 2022
- राशिफल 2022
- Calendar 2022
- Holidays 2022
- Chinese Horoscope 2022
- अंक ज्योतिष 2022
- Grahan 2022
- Love Horoscope 2022
- Finance Horoscope 2022
- Education Horoscope 2022
- Ascendant Horoscope 2022
- Stock Market 2022 Predictions
- Best Wallpaper 2022 Download
- Numerology 2022
- Nakshatra Horoscope 2022
- Tamil Horoscope 2022
- Kannada Horoscope 2022
- Gujarati Horoscope 2022
- Punjabi Rashifal 2022