ಕನ್ಯಾ ರಾಶಿಯಲ್ಲಿ ಬುಧ ಸಂಚಾರ (2 ಸೆಪ್ಟೆಂಬರ್ 2020)

ವರ್ಷ 2020 ರಲ್ಲಿ ಬುಧ ಗ್ರಹವು 2 ಸೆಪ್ಟೆಂಬರ್, 12 ಗಂಟೆ 3 ನಿಮಿಷಕ್ಕೆ ಸಿಂಹ ರಾಶಿಯಿಂದ ಕನ್ಯಾ ರಾಶಿಯಲ್ಲಿ ಪ್ರವೇಶಿಸುತ್ತದೆ ಮತ್ತು 22 ಸೆಪ್ಟೆಂಬರ್ ರಂದು 16 ಗಂಟೆ 55 ನಿಮಿಷದ ವರೆಗೆ ತುಲಾ ರಾಶಿಗೆ ಸಂಚರಿಸುತ್ತದೆ. ಕನ್ಯಾ ರಾಶಿಯಲ್ಲಿ ಬುಧನ ಸಂಚಾರದಿಂದಾಗಿ ಎಲ್ಲಾ ಹನ್ನೆರಡು ರಾಶಿಗಳು ವಿಭಿನ್ನ ಫಲಿತಾಂಶಗಳನ್ನು ಪಡೆಯುತ್ತವೆ. ನಡೆಯಿರಿ, ನಿಮ್ಮ ರಾಶಿಚಕ್ರದ ಮೇಲೆ ಈ ಸಂಚಾರದ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜ್ಯೋತಿಷಿಯಿಂದ ಪ್ರಶ್ನೆ ಕೇಳಿ

ಬುದ್ಧಿಯ ದೇವರಾದ ಬುಧ ಸಂಚಾರವು 2 ಸೆಪ್ಟೆಂಬರ್ 2020 ರಂದು ತನ್ನದೇ ರಾಶಿ ಕನ್ಯಾದಲ್ಲಿ ಸಂಭವಿಸುತ್ತದೆ. ಜ್ಯೋತಿಷ್ಯದಲ್ಲಿ ಬುಧ ಗ್ರಹವು ರಾಜಕುಮಾರನ ಸ್ಥಾನಮಾನವನ್ನು ಹೊಂದಿದೆ. ಇದು ನಿಮ್ಮ ಮಾತು, ವ್ಯವಹಾರ, ಶಿಕ್ಷಣ ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಒಂದೆಡೆ ಬುಧದ ಬಲವಾದ ಸ್ಥಾನವು , ವ್ಯಕ್ತಿಗೆ ತಾರ್ಕಿಕ ಸಾಮರ್ಥ್ಯ ಮತ್ತು ಮಧುರ ಧ್ವನಿಯನ್ನು ಒದಗಿಸುತ್ತದೆ. ಅದೇ ಮತ್ತೊಂದೆಡೆ, ದುರ್ಬಲ ಬುಧವು ನಿಮ್ಮ ತಾರ್ಕಿಕ ಸಾಮರ್ಥ್ಯವನ್ನು ಹದಗೆಡಿಸಬಹುದು ಮತ್ತು ಚರ್ಮಕ್ಕೆ ಸಂಬಂಧಿಸಿದ ರೋಗಗಳನ್ನು ನೀಡಬಹುದು. ಬುಧನ ಈ ಸ್ಥಿತಿಯನ್ನು ಸುಧಾರಿಸಲು ನೀವು ಈ ಗ್ರಹಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಮಾಡಬೇಕು.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

  1. ಮೇಷ ರಾಶಿ

ಬುಧ ಗ್ರಹವು ಮೇಷ ರಾಶಿಯ ಸ್ಥಳೀಯರ ಆರನೇ ಮನೆಗೆ ಸಾಗುತ್ತದೆ. ಈ ಮನೆಯ ನಿಮ್ಮ ಶತ್ರುಗಳು, ಸಾಲ, ವಿವಾದ ಇತ್ಯಾದಿಯ ಬಗ್ಗೆ ಪರಿಗಣಿಸಲಾಗುತ್ತದೆ. ಉದ್ಯೋಗದಲ್ಲಿರುವ ಜನರಿಗೆ ಈ ಸಂಚಾರವು ಉತ್ತಮವಾಗಿರುತ್ತದೆ.

ಈ ಸಮಯದಲ್ಲಿ, ಉದ್ಯೋಗದಲ್ಲಿ ನೀವು ಬಡ್ತಿ ಪಡೆಯಬಹುದು, ಮತ್ತೊಂದೆಡೆ ಉದ್ಯೋಗವನ್ನು ಪಡೆಯಲು ಬಯಸುತ್ತಿರುವವರಿಗೆ ಸಹ ಈ ಸಂಚಾರವು ಉತ್ತಮವಾಗಿರುತ್ತದೆ. ಯಾವುದೇ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡಲು ನೀವು ಅವಕಾಶವನ್ನು ಪಡೆಯಬಹುದು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸೃಜನಶೀಲತೆಯನ್ನು ಎಷ್ಟು ಹೆಚ್ಚಿಸುವಿರೋ ನಿಮ್ಮ ಕೆಲಸದಲ್ಲಿ ಅಷ್ಟೇ ಹೊಳಪು ಬರುತ್ತದೆ. ಈ ರಾಶಿಚಕ್ರದ ಸ್ಥಳೀಯರು ಸಂಚಾರದ ಈ ಸಮಯದಲ್ಲಿ ಅಪಾಯವನ್ನು ತೆಗೆದುಕೊಳ್ಳುವಲ್ಲಿ ಕೂಡ ಮುಂದುವರಿಯುತ್ತಾರೆ.

ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಯಾವುದೇ ರೀತಿಯ ಸಾಲ ಅಥವಾ ಇತ್ಯಾದಿಯನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ವ್ಯಾಪಾರಸ್ಥರು ವ್ಯಾಪಾರವನ್ನು ವಿಸ್ತರಿಸುವುದಕ್ಕಿಂತ ಪ್ರಸ್ತುತ ಸ್ಥಿತಿಯನ್ನು ಬಲಪಡಿಸಲು ಪ್ರಯತ್ನಿಸಬೇಕು. ಈ ರಾಶಿಚಕ್ರದ ಜನರು ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು.

ಪರಿಹಾರ - ಬುಧವಾರದಂದು ಅಗತ್ಯವಿರುವವರಿಗೆ ಆಹಾರದ ದಾನ ಮಾಡಿ.

  1. ವೃಷಭ ರಾಶಿ

ಬುಧ ಗ್ರಹವು ವೃಷಭ ರಾಶಿಚಕ್ರದ ಸ್ಥಳೀಯರ ಶಿಕ್ಷಣ, ಬುದ್ಧಿ ಮತ್ತು ಪ್ರೀತಿಯ ಐದನೇ ಮನೆಗೆ ಸಾಗುತ್ತದೆ. ಈ ರಾಶಿಯಲ್ಲಿ ಬುಧ ಸಂಚಾರದಿಂದಾಗಿ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ವಿಶೇಷ ಲಾಭ ಸಿಗುತ್ತದೆ. ನೀವು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದರೆ, ನೀವು ಸಧನೆಯನ್ನು ಪಡೆಯಬಹುದು. ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಮಯವೂ ಅತ್ಯುತ್ತಮವಾಗಿರುತ್ತದೆ ಎಂದು ಸಾಬೀತುಪಡಿಸುತ್ತದೆ.

ಪ್ರೀತಿಯಲ್ಲಿರುವ ಈ ರಾಶಿಚಕ್ರದ ಜನರಿಗೂ ಈ ಸಮಯ ಉತ್ತಮವಾಗಿರುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರಣಯದ ಕ್ಷಣಗಳನ್ನು ಕಳೆಯಲು ಸಾಧ್ಯವಾಗುತ್ತದೆ. ಆದಾಗ್ಯೂ ನಿಮ್ಮ ಸಂಗಾತಿಯ ವರ್ತನೆ ಅಥವಾ ಮಾತುಗಳ ಬಗ್ಗೆ ನೀವು ಮಾತನಾಡಬಾರದು. ವೃಷಭ ರಾಶಿಚಕ್ರದ ಜನರು ಎಲ್ಲವನ್ನು ಪರಿಪೂರ್ಣತೆಯಿಂದ ಮಾಡಲು ಬಯಸುತ್ತಾರೆ. ಈ ಸಮಯದಲ್ಲಿ ಕೂಡ ನೀವು ಅದೇ ರೀತಿಯದ್ದನ್ನು ಮಾಡುತ್ತೀರಿ. ಈ ಕಾರಣದಿಂದಾಗಿ ನಿಮ್ಮ ಕೆಲವು ಕೆಲಸಗಳು ಸಿಲುಕಿಕೊಳ್ಳಬಹುದು.

ಕೆಲಸವನ್ನು ನೀವು ಉತ್ತಮ ರೀತಿಯಿಂದ ಮಾಡಬೇಕು. ಈ ಸಂಚಾರದ ಸಮಯದಲ್ಲಿ ಅರ್ಥಮಾಡಿಕೊಳ್ಳುವ ನಿಮ್ಮ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ಹೊಸ ವಿಷಯಗಳನ್ನು ಕಲಿತು ನೀವು ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮಗೊಳಿಸಬಹುದು. ವೃಷಭ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ಭವಿಷ್ಯದ ಬಗ್ಗೆ ಯಾವುದೇ ಯೋಜನೆಯನ್ನು ಮಾಡಬಹುದು.

ಪರಿಹಾರ - ನಿಮ್ಮ ಸಹೋದರಿ ಅಥವಾ ಅತ್ತೆಗೆ ಅವರಿಗೆ ಇಷ್ಟವಾದ ಯಾವುದೇ ಉಡುಗೊರೆಯನ್ನು ನೀಡಿ, ಶುಭ ಫಲಿತಾಂಶಗಳನ್ನು ಪಡೆಯುವಿರಿ.

  1. ಮಿಥುನ ರಾಶಿ

ಬುಧ ದೇವ ಮಿಥುನ ರಾಶಿಚಕ್ರದ ನಾಲ್ಕನೇ ಮನೆಗೆ ಸಾಗುತ್ತಾರೆ. ಈ ಮನೆಯ ಮೂಲಕ ನಿಮ್ಮ ತಾಯಿ, ಸಂತೋಷ-ಸಂಪನ್ಮೂಲಗಳು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಬುಧ ಸಂಚಾರವು ನಿಮಗೆ ಉತ್ತಮವಾಗಿರುತ್ತದೆ. ಈ ಸಂಚಾರದ ಸಮಯದ್ಲಲಿ ನೀವು ನಿಮ್ಮ ಮನಸ್ಸಿನ ಶಾಂತಿಗಾಗಿ ಹಾಡುವುದು, ನುಡಿಸುವುದು, ಲೇಖನಗಳಂತಹ ಇತ್ಯಾದಿಗಳನ್ನು ಆಶ್ರಯಿಸಬಹುದು.

ನಿಮ್ಮ ಕುಟುಂಬ ಜೀವನದ ಮೇಲೆ ದೃಷ್ಟಿ ಹಾಕಿದರೆ, ತಾಯಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ, ಅವರು ಯಾವುದೇ ರೋಗದಿಂದ ದೀರ್ಘಕಾಲದಿಂದ ಬಳಲುತ್ತಿದ್ದರೆ, ಈ ಸಮಯದಲ್ಲಿ ಅದು ಸುಧಾರಿಸಬಹುದು. ಈ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ನೀವು ನಿಮ್ಮ ಸಂಪತ್ತನ್ನು ಮಾರಾಟಮಾಡಲು ಬಯಸುತ್ತಿದ್ದರೆ, ಅದಕ್ಕೂ ಈ ಸಮಯ ಉತ್ತಮವಾಗಿರುತ್ತದೆ.

ಸಾಮಾಜಿಕ ಮಟ್ಟದಲ್ಲಿ ಈ ಸಮಯದಲ್ಲಿ ನೀವು ಉತ್ತಮ ಜನರನ್ನು ಭೇಟಿ ಮಾಡಬಹುದು, ಈ ಕಾರಣದಿಂದಾಗಿ ನೀವು ಬಹಳಷ್ಟು ಒಳ್ಳೆಯದನ್ನು ಕಲಿಯುತ್ತೀರಿ. ವಿವಾಹಿತರಾದ ಈ ರಾಶಿಚಕ್ರದ ಸ್ಥಳೀಯರ ಸಂಗಾತಿ ಈ ಸಂಚಾರ ಸಮಯದಲ್ಲಿ ಯಾವುದೇ ರೀತಿಯ ಲಾಭವನ್ನು ಪಡೆಯಬಹುದು. ಬುಧ ಬುದ್ಧಿಯ ಅಂಶ ಆದ್ದರಿಂದ ಬುಧ ದೇವರ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಸಹ ಲಾಭವಾಗುತ್ತದೆ. ಈ ರಾಶಿಚಕ್ರದ ವಿಧ್ಯಾರ್ಥಿಗಳ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಕಠಿಣ ವಿಷಯಗಳನ್ನು ಸಹ ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಪರಿಹಾರ - ಬುಧವಾರದಂದು ನಪುಂಸಕರ ಆಶೀರ್ವಾದವನ್ನು ಪಡೆಯುವುದು ನಿಮಗೆ ಪ್ರಯೋಜನಕಾರಿ.

ಕೋಗ್ನಿ ಆಸ್ಟ್ರೋ ರಿಪೋರ್ಟ್ ಮೂಲಕ ನಿಮ್ಮ ವೃತ್ತಿಜೀವನದಲ್ಲಿ ಬರುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ.

  1. ಕರ್ಕ ರಾಶಿ

ಬುಧ ಗ್ರಹವು ಕರ್ಕ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಗೆ ಸಂಚರಿಸುತ್ತದೆ. ಈ ಮನೆಯ ಮೂಲಕ ನಿಮ್ಮ ಪರಾಕ್ರಮ, ಧೈರ್ಯ, ಕಿರಿಯ ಸಹೋದರ ಸಹೋದರಿಯರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಕರ್ಕ ರಾಶಿಯಲ್ಲಿ ಬುಧ ಸಂಚಾರವು ನಿಮ್ಮ ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತದೆ. ನೀವು ನಿಮ್ಮ ಧ್ವನಿಯ ಆಧಾರದ ಮೇಲೆ ಸಮಾಜದಲ್ಲಿ ನೀವು ವಿಭಿನ್ನ ಸ್ಥಾನವನ್ನು ರಚ್ಚಿಸಬಹುದು. ಈ ಸಮಯದಲ್ಲಿ ನೀವು ಹೊಸ ಜನರನ್ನು ಭೇಟಿಮಾಡಬಹುದು ಮತ್ತು ಅವರಿಂದ ಹೊಸ ವಿಷಯಗಳನ್ನು ಕಲಿಯಬಹುದು.

ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಅಥವಾ ಇಂಟರ್ನೆಟ್ ಮೂಲಕ ಯಾವುದೇ ಸಂತೋಷದ ಸುದ್ಧಿಯನ್ನು ಪಡೆಯಬಹುದು. ಈ ಸಮಯದಲ್ಲಿ ಪ್ರಯಾಣಗಳಿಂದಲೂ ನಿಮಗೆ ಲಾಭವಾಗಬಹುದು, ವಿಶೇಸಹವಾಗಿ ಸಣ್ಣ ದೂರದ ಪ್ರಯಾಣಗಳು ನಿಮಗೆ ಸಾಕಷ್ಟು ಲಾಭವನ್ನು ನೀಡುತ್ತವೆ. ಈ ಸಮಯದಲ್ಲಿ ನೀವು ಜನರ ಮಾತುಗಳನ್ನು ಕೇಳುತ್ತೀರಿ. ಈ ಕಾರಣದಿಂದಾಗಿ ನಿಮ್ಮ ಮನೋಬಲವು ಹೆಚ್ಚಾಗುತ್ತದೆ.

ಈ ರಾಶಿಚಕ್ರದ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧ ಹೊಂದಿರುವವರು ಅಥವಾ ಲೇಖನದ ಕೆಲಸ ಮಾಡುವವರು ಈ ಸಂಚಾರದ ಸಮಯದಲ್ಲಿ ಪ್ರಗತಿಯನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿದೆ. ಅರೋಗ್ಯ ಜೇವನದ ಬಗ್ಗೆ ಮಾತನಾಡಿದರೆ, ಈ ರಾಶಿಚಕ್ರದ ಕೆಲವು ಸ್ಥಳೀಯರಿಗೆ ಅಲೆರ್ಜಿ ಸಮಸ್ಯೆ ಉಂಟಾಗಬಹುದು. ಈ ಅವಧಿಯಲ್ಲಿ ನೀವು ಧೂಳಿನ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು. ತೊಂದರೆ ಹೆಚ್ಚಾದರೆ, ತಕ್ಷಣ ವೈದ್ಟಕೀಯ ಚಿಕಿತ್ಸೆಯನ್ನು ಪಡೆಯಿರಿ.

ಪರಿಹಾರ - ಬುಧವಾರದಂದು ವಿಷ್ಣು ದೇವರನ್ನು ಪೂಜಿಸಿ, ಜೀವನದಲ್ಲಿ ಬರುತ್ತಿದ್ದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

  1. ಸಿಂಹ ರಾಶಿ

ಬುಧ ದೇವ ಸಿಂಹ ರಾಶಿಚಕ್ರದ ಮೂರನೇ ಮನೆಗೆ ಗೋಚರಿಸುತ್ತಾರೆ. ಇದು ನಿಮ್ಮ ಧ್ವನಿ, ಹಣ,, ಕುಟುಂಬ ಇತ್ಯಾದಿಗಳ ಮನೆಯಾಗಿದೆ. ಬುಧ ಸಂಚಾರದ ಸಮಯದಲ್ಲಿ ನೀವು ಕುಟುಂಬದ ನಡುವೆ ಹೆಚ್ಚು ಸಮಯವನ್ನಿ ಕಳೆಯುತ್ತೀರಿ ಮತ್ತು ನಿಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸುತ್ತೀರಿ. ಈ ಸಮಯದಲ್ಲಿ ಮನೆಯ ಸದಸ್ಯರ ಸಮಸ್ಯೆಗಳನ್ನು ಪರಿಹರಿಸಲು ಅವರೊಂದಿಗೆ ನೀವು ಸ್ಪಷ್ಟವಾಗಿ ಮಾತನಾಡಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ ಕೆಲವು ಜಾತಕರ ಮನೆಯಲ್ಲಿ ಹೊಸ ಅತಿಥಿ ಬರಬಹುದು.

ಆದಾಗ್ಯೂ ಆರ್ಥಿಕ ಭಾಗದ ಬಗ್ಗೆ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಉಳಿತಾಯ ಮಾಡಲು ಉತ್ತಮ ಬಜೆಟ್ ಅನ್ನು ಯೋಜಿಸಬೇಕು ಮತ್ತು ಅದಕ್ಕೆ ತಕ್ಕಂತೆ ಖರ್ಚು ಮಾಡಬೇಕು. ವೃತ್ತಿಪರರು ಮತ್ತು ವ್ಯಾಪಾರಸ್ಥರು ಬುಧ ಸಂಚಾರದ ಈ ಸಮಯದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯಬಹುದು. ಈ ಸಮಯದಲ್ಲಿ ಸ್ವಲ್ಪ ಪ್ರಯತ್ನದಿಂದಲೂ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಸಿಂಹ ರಾಶಿಚ್ಕ್ರಾದ ವಿದ್ಯಾರ್ಥಿಗಳು ತಮಮ್ ಗುರಿಗಳನ್ನು ಸಾಧಿಸಲು ಈ ಸಮಯದಲ್ಲಿ ದುರ್ಧ ನಿಶ್ಚಯದಿಂದ ಇರುತ್ತಾರೆ ಮತ್ತು ಕಠಿಣ ಪರಿಶ್ರಮ ಮಾಡುತ್ತಾರೆ. ಈ ರಾಶಿಚಕ್ರದ ಸ್ಥಳೀಯರು ತಮ್ಮ ದಾಂಪತ್ಯ ಜೀವನವನ್ನು ಸುಧಾರಿಸಲು ಈ ಸಮಯದಲ್ಲಿ ಪ್ರಯತ್ನಿಸುತ್ತಾರೆ ಮತ್ತು ತಮ್ಮ ಜೀವನ ಸಂಗತಿಯನ್ನು ಸಂತೋಷಪಡಿಸಲು ಸಂಪೂರ್ಣವಾಗಿ ಪ್ರಯತ್ನಿಸುತ್ತಾರೆ.

ಪರಿಹಾರ - ನಪುಂಸಕರಿಗೆ ಹಸಿರು ಬಣ್ಣದ ವಸ್ತುಗಳ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

  1. ಕನ್ಯಾ ರಾಶಿ

ಕನ್ಯಾ ರಾಶಿಚಕ್ರದ ಅಧಿಪತಿ ಬುಧ ಮತ್ತು ಸಂಚಾರದ ಈ ಸಮಯದಲ್ಲಿ ಬುಧ ಗ್ರಹವು ನಿಮ್ಮ ಮೊದಲನೇ ಮನೆಯಲ್ಲಿರುತ್ತದೆ. ಈ ಮನೆ ಅರೋಗ್ಯ, ವ್ಯಕ್ತಿತ್ವ, ಬುದ್ಧಿ, ವರ್ತನೆ ಇತ್ಯಾದಿಯ ಮನೆಯಾಗಿದೆ. ಬುಧ ಗ್ರಹದ ಈ ಸಂಚಾರವು ಈ ರಾಶಿಚಕ್ರದ ಉದ್ಯಮಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನಿಮ್ಮ ವ್ಯವಹಾರ ಪ್ರಜ್ಞೆಯು ಹೆಚ್ಚಾಗುತ್ತದೆ, ನಷ್ಟ-ಹಾನಿಯನ್ನು ನೀವು ತಕ್ಷಣವೇ ಹಿಡಿದುಕೊಳ್ಳುತ್ತೀರಿ. ಈ ಕಾರಣದಿಂದಾಗಿ ಅನೇಕ ಕಷ್ಟಕರ ಸಂದರ್ಭಗಳನ್ನು ನೀವು ತಪ್ಪಿಸಬಹುದು.

ಕನ್ಯಾ ರಾಶಿಚಕ್ರದ ಜನರಲ್ಲಿ ಈ ಸಮಯದಲ್ಲಿ ಸಕಾರಾತ್ಮಕತೆಯನ್ನು ಕಾಣಬಹುದು. ಇದರಿಂದಾಗಿ ನಿಮ್ಮ ಸುತ್ತಲಿನ ಪರಿಸರವು ಸಹ ಸಂತೋಷವಾಗಿರುತ್ತದೆ. ಕುಟುಂಬದ ಸದಸ್ಯರು ನಿಮ್ಮ ವರ್ತನೆಯಿಂದ ಸಂತೋಷವಾಗಿರುತ್ತಾರೆ. ಅದೇ ಸಮಯದಲ್ಲಿ ಸಾಮಾಜಿಕ ಜೀವನದಲ್ಲಿ ಕೂಡ ಜನರು ನಿಮ್ಮಿಂದ ಆಕರ್ಷಿತರಾಗಬಹುದು. ಕನ್ಯಾ ರಾಶಿಯಲ್ಲಿ ಬುಧವು ದಿಗ್ಬಲಿಯಾಗಿರುತ್ತದೆ ಆದ್ದರಿಂದ ಈ ಸಮಯದಲ್ಲಿ ನೀವು ಸೃಜನಶೀಲ ಕಾರ್ಯಗಳಲ್ಲಿ ಆಸಕ್ತಿ ಹೊಂದಿರಬಹುದು.

ಅರೋಗ್ಯ ಜೀವನದ ಬಗ್ಗೆಯೂ ಈ ಸಮಯದಲ್ಲಿ ಕನ್ಯಾ ರಾಶಿಚಕ್ರದ ಜನರು ಚಿಂತೆ ಮಾಡುವ ಅಗತ್ಯವಿಲ್ಲ, ಏಕೆಂದರೆ ನಿಮ್ಮ ರೋಗನಿರೋಧಕ ಸಾಮರ್ಥ್ಯವು ಈ ಸಮಯದಲ್ಲಿ ಅದ್ಭುತವಾಗಿರುತ್ತದೆ. ಆದಾಗ್ಯೂ ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಕೆಲಸವನ್ನು ಮಾಡಬೇಕು.

ಬುಧ ಸಂಚಾರದ ಈ ಸಮಯದಲ್ಲಿ ನೀವು ಬರುವ ಪರಿಸ್ಥಿತಿಗಳನ್ನು ತುಂಬಾ ಲೆಕ್ಕಾಚಾರ ಮಾಡಬಹುದು, ಈ ಕಾರಣದಿಂದಾಗಿ ಕೆಲವು ಕೆಲಸಗಳು ಸಿಲುಕಿಕೊಳ್ಳಬಹುದು ಆದ್ದರಿಂದ ಅದನ್ನು ಮಾಡುವುದನ್ನು ತಪ್ಪಿಸಿ.

ಪರಿಹಾರ - ಬುಧವಾರದಂದು ಶ್ರೀ ದುರ್ಗಾ ಸಪ್ತಶತಿಯನ್ನು ಪಠಿಸುವುದು ನಿಮಗೆ ಪ್ರಯೋಜನಕಾರಿ.


ಆಸ್ಟ್ರೋಸೇಜ್ ಬೃಹತ್ ಕುಂಡಲಿಯ ಮೂಲಕ ನಿಮ್ಮ ಜಾತಕದಲ್ಲಿನ ದೋಷ ಮತ್ತು ಯೋಗಗಳ ಬಗ್ಗೆ ತಿಳಿಯಿರಿ.
  1. ತುಲಾ ರಾಶಿ

ಬುಧ ಸಂಚಾರವು ತುಲಾ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಯಲ್ಲಿ ಸಂಭವಿಸಲಿದೆ. ಈ ಸಂಚಾರದ ಸಮಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿ ನಡೆಯಬೇಕು, ಏಕೆಂದರೆ ಹನ್ನೆರಡನೇ ಮನೆ ಹಾನಿ, ವೆಚ್ಚ ಇತ್ಯಾದಿಗಳ ಅಂಶವಾಗಿದೆ. ಈ ಸಮಯದಲ್ಲಿ ತುಲಾ ರಾಶಿಚಕ್ರದ ಜನರು ತೊಡಕುಗಳಿಂದ ಸುತ್ತುವರಿಯಬಹುದು. ಈ ಕಾರಣದಿಂದಾಗಿ ಇದು ನಿಮ್ಮ ನಿರ್ಧಾರ ಸಾಮರ್ಥ್ಯವನ್ನು ಪ್ರಭಾವಿಸಬಹುದು. ಬುಧ ಸಂಚಾರದ ಈ ಸಮಯದಲ್ಲಿ ನೀವು ಯೋಗ ಧ್ಯಾನವನ್ನು ಮಾಡಬೇಕು ಏಕೆಂದರೆ ಇದರ ಮೂಲಕ ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಅನಗತ್ಯ ವಿಷಯಗಳನ್ನು ತೆಗೆದುಹಾಕಬಹುದು.

ಧಾರ್ಮಿಕ ಚಟುವಟಿಕೆಗಳಲ್ಲಿ ಭಾವಹಿಸುವುದು ಈ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರುತ್ತದೆ. ನಿಮ್ಮ ಆರ್ಥಿಕ ಭಾಗದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ, ಈ ಕಾರಣದಿಂದಾಗಿ ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗಬಹುದು. ವೆಚ್ಚಗಳನ್ನು ನಿಯಂತ್ರಿಸಲು ಉತ್ತಮ ಬಡ್ಜೆಟ್ ಅನ್ನು ತಯಾರಿಸಿ.

ಆರೋಗ್ಯದ ಬಗ್ಗೆಯೂ ಸಹ ಈ ರಾಶಿಚಕ್ರದ ಸ್ಥಳೀಯರು ಈ ಸಂಚಾರದ ಸಮಯದಲ್ಲಿ ಸ್ವಲ್ಪ ಎಚ್ಚರದಿಂದಿರಬೇಕು. ಯಾವುದೇ ಹಳೆಯ ರೋಗವು ಮತ್ತೆ ನಿಮ್ಮನ್ನು ಕಾಡಬಹುದು. ಉತ್ತಮ ಆಹಾರ ಪಾನೀಯ ಮತ್ತು ಸರಿಯಾದ ದಿನಚರಿಯ ಮೂಲಕ ನೀವು ಅನೇಕ ಅರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಈ ಸಮಯದಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಯಲ್ಲಿ ಕೊರತೆಯನ್ನು ಕಾಣಲಾಗುತ್ತದೆ. ಅಧ್ಯಯನದ ಮೇಲೆ ಕೇಂದ್ರೀಕರಿಸಲು ನಿಮ್ಮೊಳಗೆ ನಕಾರಾತ್ಮಕ ಆಲೋಚನೆಗಳನ್ನು ತರುವ ಜನರಿಂದ ಈ ಸಮಯದಲ್ಲಿ ನೀವು ದೂರವಿರಬೇಕು.

ಪರಿಹಾರ - ಹಸುವಿನ ಸೇವೆ ಮಾಡಿ ಮತ್ತು ಹಸಿರು ಮೇವು ತಿನ್ನಿಸಿ, ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ.

  1. ವೃಶ್ಚಿಕ ರಾಶಿ

ಬುಧ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಹನ್ನೊಂದನೇ ಮನೆಗೆ ಸಾಗುತ್ತದೆ. ಈ ಮನೆಯನ್ನು ಲಾಭದ ಮನೆಯೆಂದು ಸಹ ಕರೆಯಲಾಗುತ್ತದೆ ಮತ್ತು ಇದರ ಮೂಲಕ ಹಿರಿಯ ಸಹೋದ್ರಾ ಸಹೋದರಿಯರು, ಆಸೆಗಳು, ಸ್ನೇಹಿತರು ಇದ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ಜೀವನ ವಿವಿಧ ಕ್ಷೇತ್ರಗಳನ್ನು ನಿಮಗೆ ಲಾಭವಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಕೆಲಸದ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಪಡೆಯಬಹುದು. ಆದಾಗ್ಯೂ ಈ ಸಮಯದಲ್ಲಿ ಹೆಚ್ಚು ಕೆಲಸವನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದನ್ನು ನೀವು ತಪ್ಪಿಸಬೇಕು, ಇಲ್ಲದಿದ್ದರೆ ತೊಂದರೆಕ್ಕೊಳಗಾಗಬಹುದು ಮತ್ತು ಈ ಕಾರಣದಿಂದಾಗಿ ನಿಮ್ಮ ಕೆಲಸವೂ ಸಹ ಹದಗೆಡಬಹುದು. ಈ ರಾಶಿಚಕ್ರದ ವ್ಯಾಪಾರಸ್ಥರು ತಮ್ಮ ಕಠಿಣ ಪರಿಶ್ರಮದ ಆಧಾರ ಮೇಲೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವೃಶ್ಚಿರದ ರಾಶಿಚಕ್ರದ ಸ್ಥಳೀಯರ ಕುಟುಂಬ ಜೇವನದ ಬಗ್ಗೆ ಮಾತನಾಡಿದರೆ, ವಾತಾವರಣವು ಉತ್ತಮವಾಗಿರುತ್ತದೆ, ಹಿರಿಯ ಸಹೋದರ ಸಹೋದರಿಯ ಬೆಂಬಲವನ್ನು ಪಡೆಯುತ್ತೀರಿ ಮತ್ತು ಅವರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಇದು ಸ್ನೇಹಿತರ ಮನೆಯಾಗಿದೆ ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ಈ ಕಾರಣದಿಂದಾಗಿ ನೀವು ಹಿಂದಿನ ಸಮಯದ ಸುವರ್ಣ ನೆನಪುಗಳಲ್ಲಿ ಮುಳುಗಿಹೋಗಬಹುದು. ಭವಿಷ್ಯಕ್ಕಾಗಿ ಈ ಸಮಯದಲ್ಲಿ ನೀವು ಯಾವುದೇ ಹೂಡಿಕೆಯನ್ನು ಮಾಡಿದರೆ, ಮುಂಬರುವ ಸಮಯದಲ್ಲಿ ಆದರೆ ಉತ್ತಮ ಲಾಭವನ್ನು ನೀವು ಪಡೆಯಬಹುದು. ಧೀರ್ಘಕಾಲದ ಲಾಭಗಳಿಗೆ ಬುಧ ಸಂಚಾರವು ಉತ್ತಮವಾಗಿರುತ್ತದೆ.

ಪರಿಹಾರ - ಬುಧವಾರದಂದು “ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ’’ ಮಂತ್ರವನ್ನು ಜಪಿಸುವುದು ನಿಮಗೆ ಶುಭವೆಂದು ಸಾಬೀತುಪಡಿಸುತ್ತದೆ.

  1. ಧನು ರಾಶಿ

ಧನು ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಗೆ ಬುಧ ಗ್ರಹವು ಸಂಚರಿಸಲಿದೆ. ಈ ಮನೆಯಲ್ಲಿ ಬುಧ ಸಂಚಾರದಿಂದಾಗಿ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಈ ಮನೆಯು ನಿಮ್ಮ ಕುಟುಂಬದ ಬಗ್ಗೆ ತಿಳಿಸುತ್ತದೆ, ಈ ರಾಶಿಚಕ್ರದ ಜನರಿಗೆ ಬುಧ ಸಾಂಚಾರದ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಶುಭ ಫಲಿತಾಂಶಗಳು ಸಿಗುತ್ತವೆ. ಕೆಲಸ ಮಾಡುವ ನಿಮ್ಮ ರೀತಿ ಹಿರಿಯ ಅಧಿಕಾರಿಗಳಿಗೆ ಇಷ್ಟವಾಗುತ್ತದೆ ಮತ್ತು ಎಲ್ಲರ ಮುಂದೆ ಅವರು ನಿಮ್ಮನ್ನು ಪ್ರಶಂಸಿಸಬಹುದು. ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನಮಾನ ಮತ್ತು ಗೌರವ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಬಡ್ತಿ ಪಡೆಯಬಹುದು. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ನಿಮ್ಮ ತಂದೆಯ ಬೆಂಬಲವನ್ನು ಪಡೆಯುತ್ತೀರಿ, ಅವರೊಂದಿಗೆ ಯಾವುದೇ ರೀತಿಯ ವೋರೋಧಾಭಾಸ ನಡೆಯುತ್ತಿದ್ದರೆ ಈ ಸಮಯದಲ್ಲಿ ಅದು ದೂರವಾಗಬಹುದು, ಈ ಕಾರಣದಿಂದಾಗಿನ ಕುಟುಂಬದ ಪರಿಸರವು ಉತ್ತಮವಾಗಿರುತ್ತದೆ. ಈ ರಾಶಿಚಕ್ರದ ಉದ್ಯಮಿಗಳು ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಅವರ ಪರಿಶ್ರಮದ ಆಧಾರದ ಮೇಲೆ ಯಾವುದೇ ಗೌರವವನ್ನು ಪಡೆಯಬಹುದು. ಹತ್ತನೇ ಮನೆಯಲ್ಲಿ ಬುಧ ಸಂಚಾರದ ಸಮಯದಲ್ಲಿ ನೀವು ನಿಮ್ಮ ವರ್ತನೆಯಲ್ಲಿ ಅಗತ್ಯವಾದ ಬದಲಾವಣೆಯನ್ನು ತರಲು ಸಹ ಪ್ರಯತ್ನಿಸಬಹುದು. ಏಕೆಂದರೆ ಈ ಮನೆಯ ಮೂಲಕ ನಿಮ್ಮ ಚಿತ್ರವನ್ನು ಸಹ ಪರಿಗಣಿಸಲಾಗುತ್ತದೆ.

ಪರಿಹಾರ - ಚಿಕ್ಕ ಹುಡುಗಿಯರ ಪೂಜೆ ಮಾಡುವುದು ಮತ್ತು ಅವರಿಗೆ ಉಡುಗೊರೆ ನೀಡುವುದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

  1. ಮಕರ ರಾಶಿ

ಬುಧ ದೇವ ಮಕರ ರಾಶಿಚಕ್ರದ ಶತಾಳೀಯರ ಒಂಬತ್ತನೇ ಮನೆಗೆ ಸಾಗುತ್ತಾರೆ. ಈ ಮನೆಯ ಮೂಲಕ ಧರ್ಮ, ಉನ್ನತ ಶಿಕ್ಷಣ, ಪ್ರಯಾಣ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ನಿಮ್ಮ ಓ ಒಂಬತ್ತನೇ ಮನೆಯಲ್ಲಿ ಬುಧ ಸಂಚಾರದಿಂದಾಗಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಈ ರಾಶಿಚಕ್ರದ ವೃತ್ತಿಪರ ಜನರು ಸಹ ತಮ್ಮ ಕಾರ್ಯ ಕೌಶಲ್ಯದಿಂದ ಕೆಲಸದ ಸ್ಥಳದಲ್ಲಿ ಜನರ ಮೇಲೆ ಪರಿಣಾಮವನ್ನು ಬೀರುತ್ತಾರೆ. ಕೆಲಸದ ಸ್ಥಳದಲ್ಲಿ ಸಹೋದಿಯೋಗಿಗಳ ಬಗ್ಗೆ ನಿಮ್ಮ ವರ್ತನೆ ಉತ್ತಮವಾಗಿಲ್ಲದಿದ್ದರೆ, ಈ ಸಮಯದಲ್ಲಿ ನೀವು ಅದನ್ನು ಸುಧಾರಿಸಬಹುದು.

ಮಕರ ರಾಶಿಚರ್ಕ ಸ್ಥಳೀಯರು ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ನಿರತರಾಗಿರಬಹುದು. ಇದರೊಂದಿಗೆ ಧಾರ್ಮಿಕ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಸಹ ನಿಮ್ಮ ಆಸಕ್ತಿಯನ್ನು ಪ್ರಚೋದಿಸಬಹುದು. ಈ ಸಂಚಾರದ ಸಮಯದಲ್ಲಿ ನೀವು ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಬಹುದು. ಈ ರಾಶಿಚಕ್ರದ ವ್ಯಾಪಾರಸ್ಥರ ಬಗ್ಗೆ ಮಾತನಾಡಿದರೆ, ನೀವು ವ್ಯಾಪಾರ ಸಂಬಂಧಿತ ಯಾವುದೇ ಪ್ರಯಾಣವನ್ನು ಮಾಡಿದರೆ, ಅದರಿಂದಲೂ ನಿಮಗೆ ಲಾಭವಾಗಬಹುದು. ಕುಟುಂಬ ಜೀವನದಲ್ಲಿ ನೀವು ಮನೆಯ ಹಿರಿಯ ಸದಸ್ಯರೊಂದಿಗೆ ಮಾತನಾಡುವಿರಿ ಮತ್ತು ಅವರ ಅನುಭವಗಳಿಂದ ಕಲಿಯುವಿರಿ. ಒಟ್ಟಾರೆಯಾಗಿ, ಬುಧ ಸಂಚಾರವು ಮಕರ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರಲಿದೆ.

ಪರಿಹಾರ - ಬುಧವಾರದಂದು ಸಂಪೂರ್ಣ ಹೆಸರು ಬೇಳೆ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

ಆಸ್ಟ್ರೋಸೇಜ್ ಬೃಹತ್ ಕುಂಡಲಿಯ ಮೂಲಕ ನಿಮ್ಮ ಜಾತಕದಲ್ಲಿನ ದೋಷ ಮತ್ತು ಯೋಗಗಳ ಬಗ್ಗೆ ತಿಳಿಯಿರಿ.

  1. ಕುಂಭ ರಾಶಿ

ಕುಂಭ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಗೆ ಬುಧ ಗ್ರಹವು ಸಂಚರಿಸಲಿದೆ. ಈ ಮನೆ ಜೀವನದಲ್ಲಿ ಬರಲಾಗುವ ಅಡೆತಡೆಗಳು, ಅಪಘಾತ, ಸಂಶೋಧನೆ, ಗೂಢ ಜ್ಞಾನ ಇತ್ಯಾದಿಗಳ ಅಂಶವಾಗಿದೆ. ಸಂಶೋದನೆಯಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹದ ಸಂಚಾರವು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಅನೇಕ ಮೂಲಗಳಿಂದ ಪಡೆಯಬಹುದು. ಅದೇ ಸಮಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಈ ಸಮಯದಲ್ಲಿ ಏನನ್ನಾದರೂ ಹೊಸದನ್ನು ಕಲಿಯಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ. ನಿಮ್ಮ ಆರ್ಥಿಕ ಭಾಗದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ನಿಮ್ಮ ಪೂರ್ವಜರ ಆಸ್ತಿಯ ಮೂಲಕ ಲಾಭವನ್ನು ಪಡೆಯಬಹುದು. ಇದರೊಂದಿಗೆ, ಇದ್ದಕ್ಕಿದ್ದಂತೆ ನೀವು ನಿಮ್ಮ ಸ್ನೇಹಿತರ ಅಥವಾ ಸಂಬಂಧಿಕರ ಮೂಲಕ ಉಡುಗೊರೆಯನ್ನು ಪಡೆಯಬಹುದು.

ಕುಟುಂಬ ಜೀವನವು ಸಾಮಾನ್ಯವಾಗಿರುತ್ತದೆ. ಆದರೆ ಮಕ್ಕಳ ಆರೋಗ್ಯದ ಬಗ್ಗೆ ಕೆಲವು ಸಮಸ್ಯೆಗಳನ್ನು ಹೊಂದಬಹುದು. ಈ ಸಮಯದಲ್ಲಿ ನೀವು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ. ಈ ರಾಶಿಚಕ್ರದ ಕೆಲವು ಜನರು ಬುಧ ಸಂಚಾರದ ಈ ಸಮಯದಲ್ಲಿ ಜ್ಯೋತಿಷಿ ಮತ್ತು ಆಧ್ಯಾತ್ಮಿಕತೆಯಂತಹ ಗೂಢ ವಿಷಯಗಳನ್ನು ಕಲಿಯಲು ಆಸಕ್ತಿ ವಹಿಸಬಹುದು. ವಿವಾಹಿತ ಜನರು ಅತ್ತೆ ಮನೆ ಕಡೆಯಿಂದ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ನೀವು ಎದುರಿಸಬೇಕಾಗಬಹುದು.

ಪರಿಹಾರ - ಬುಧವಾರದಂದು ಹಸಿರು ಏಲಕ್ಕಿಯ ದಾನವು ನಿಮಗೆ ಯಶಸ್ಸು ನೀಡುತ್ತದೆ.

  1. ಮೀನಾ ರಾಶಿ

ಬುಧ ಗ್ರಹವು ಮೀನಾ ರಾಶಿಚಕ್ರದ ಸ್ಥಳೀಯರ ಏಳನೇ ಮನೆಗೆ ಸಾಗುತ್ತದೆ. ಏಳನೇ ಮನೆಯ ಮೂಲಕ ನಿಮ್ಮ ಪಾಲುದಾರಿಕೆ, ವ್ಯಾಪಾರ ಜೀವನ ಸಂಗಾತಿ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಗ್ರಹದ ಸಂಚಾರವು ನಿಮಗೆ ಶುಭವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಪರಿಶ್ರಮದ ಸರಿಯಾದ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ನೀವು ಪಾಲುದಾರಿಕೆಯಲ್ಲಿ ಯಾವುದೇ ವ್ಯಾಪಾರವನ್ನು ನಡೆಸುತ್ತಿದ್ದರೆ, ಈ ಸಮಯದಲ್ಲಿ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ಸಮಯದಲ್ಲಿ ಪಾಲುದಾರರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ವೃತ್ತಿಪರ ಜನರಿಗೂ ಸಹ ಕೆಲಸದ ಸ್ಥಳದಲ್ಲಿ ಅನುಕೂಲಕರ ಪರಿಸ್ಥಿತಿಗಳು ಸಿಗುತ್ತವೆ.

ಬುಧ ಸಂಚಾರದ ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಹೊಳಪು ಬರುತ್ತದೆ. ಜೀವನ ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ, ಇದಲ್ಲದೆ ನಿಮ್ಮ ಜೀವನ ಸಂಗಾತಿ ತಮ್ಮ ಕೆಲಸದ ಸ್ಥಳದಲ್ಲಿ ಲಾಭವನ್ನು ಪಡೆಯುತ್ತಾರೆ. ವಿದೇಶಕ್ಕೆ ಹೋಗಲು ಬಯಸುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಯಶಸ್ಸು ಪಡೆಯಬಹುದು.

ಪರಿಹಾರ - ಮನೆ ಅಥವಾ ಕಚೇರಿಯಲ್ಲಿ ಬುಧ ಯಂತ್ರವನ್ನು ಸ್ಥಾಪಿಸುವುದರಿಂದ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.


ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer