ವೃಷಭ ರಾಶಿ ಭವಿಷ್ಯ 2020 - Vrishabha Rashi bhavishya 2020
ಈ ವರ್ಷ ನೀವು ಈ ದಿಕ್ಕಿನಲ್ಲಿ ಪ್ರಯತ್ನಿಸಿದರೆ, ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ಜೀವನವು ಸ್ಥಗಿತಗೊಳ್ಳುತ್ತದೆ.ವೃಷಭ ರಾಶಿ ಭವಿಷ್ಯ 2020 (Vrishabh Rashi 2020) ರ ಪ್ರಕಾರ ವೃಷಭ ರಾಶಿ ಜನರು ಈ ವರ್ಷದ ಸವಾಲುಗಳ ನಡುವೆ ಉತ್ತಮ ವರ್ಷದ ಅನುಭವವನ್ನು ಪಡೆಯುತ್ತಾರೆ. ಈ ವರ್ಷ ನೀವು ಹಿಂದಿನ ಸಮಯದಲ್ಲಿ ಮಾಡಿರುವ ಪ್ರಯತ್ನಗಳ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನೀವು ಪರಿಶ್ರಮವನ್ನು ಮುಂದುವರಿಸಿದರೆ, ಇದು ಖಂಡಿತವಾಗಿಯೂ ಉತ್ತಮ ವರ್ಷವೆಂದು ಸಾಬೀತುಪಡಿಸಬಹುದು. ನೀವು ಜೇವನದಲ್ಲಿ ಸ್ಥಿರತೆಯನ್ನು ಇಷ್ಟಪಡುತ್ತೀರಿ ಮತ್ತು ಈ ವರ್ಷ ನೀವು ಈ ದಿಕ್ಕಿನಲ್ಲಿ ಪ್ರಯತ್ನಿಸಿದರೆ, ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ಜೀವನವು ಸ್ಥಗಿತಗೊಳ್ಳುತ್ತದೆ.
ವೃಷಭ 2020 ರಲ್ಲಿನ ಮುನ್ಸೂಚನೆಯೆಂದರೆ, ಈ ವರ್ಷ ನೀವು ನಿಮ್ಮ ಮಾರ್ಗಕ್ಕೆ ಬರುವ ವಿವಿಧ ಆಯ್ಕೆಗಳನ್ನು ಆರಿಸಬೇಕಾಗುತ್ತದೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ನಗದು ಮಾಡಿಕೊಳ್ಳಬೇಕು, ಆಗ ಮಾತ್ರ ನೀವು ಉತ್ತಮ ವರ್ಷವನ್ನು ಆನಂದಿಸಲು ಸಾಧ್ಯವಾಗುತ್ತದೆ.
ಪ್ರೀತಿ ರಾಶಿಭವಿಷ್ಯ 2020 ರ ಪ್ರಕಾರ ವೃಷಭ ರಾಶಿಚಕ್ರದ ಜನರಿಗೆ ಈ ವರ್ಷ ನಿಮ್ಮ ಅಹಂ ಮತ್ತು ನಿಮ್ಮ ಪ್ರಚೋದನೆಗಳನ್ನು ನಿಯಂತ್ರಣದಲ್ಲಿಡಬೇಕು. ಏಕಂದರೆ ಇದು ನಿಮ್ಮ ಪ್ರೀತಿಯಲ್ಲಿ ತೊಂದರೆಗೆ ಕಾರಣವಾಗಬಹುದು. ನೀವು ಇವುಗಳನ್ನು ನಿಯಂತ್ರಿಸಲು ಸಾಧ್ಯವಾದರೆ ಈ ವರ್ಷ ನಿಮ್ಮದಾಗಿರುತ್ತದೆ. ವೃಷಭ ರಾಶಿಚಕ್ರದ ಜನರು ಪ್ರೀತಿಯ ವಿಷಯಗಳಲ್ಲಿ ತುಂಬಾ ರೋಮ್ಯಾಂಟಿಕ್ ಆಗಿರುತ್ತ್ತಾರೆ. ಯಾರನ್ನಾದರೂ ಪ್ರೀತಿಸಿದರೆ ತುಂಬಾ ಆಳವಾಗಿ ಪ್ರೀತಿಸುತ್ತಾರೆ. ನೀವು ಪ್ರೀತಿಯನ್ನು ಪಡೆಯಲು ಬಯಸಿದರೆ, ಅದಕ್ಕಾಗಿ ನಿಮ್ಮ ಕೆಲವು ನ್ಯೂನತೆಗಳನ್ನು ನೀವು ನಿಗ್ರಹಿಸಬೇಕು ಎಂದು ತಿಳಿಯಿರಿ. ಆದ್ದರಿಂದ ನಿಮ್ಮ ಅಹಂಕಾರವನ್ನು ಪಕ್ಕದಲ್ಲಿ ಇರಿಸಿ ಮತ್ತು ನಿಮ್ಮ ಸಂಗಾತಿಯನ್ನು ಪ್ರೀತಿಸಿ.
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ, ವೃಷಭ ರಾಶಿಚಕ್ರದ ಜನರು ಯಾವುದೇ ರೀತಿಯ ಆರ್ಥಿಕ ಹೂಡಿಕೆಗಾಗಿ ತುಂಬಾ ಆಲೋಚಿಸಿ ಅರ್ಥಮಾಡಿಕೊಂಡು ಮುಂದುವರಿಯಬೇಕು. ಈ ಕ್ಷೇತ್ರದ ತಜ್ಞರು ಅಥವಾ ತಜ್ಞರಿಂದ ಸಲಹೆಗಳು ಮತ್ತು ಸಲಹೆಗಳನ್ನು ತೆಗೆದುಕೊಂಡ ನಂತರವೇ ನೀವು ಯಾವುದೇ ಕೆಲಸವನ್ನು ಮಾಡಿದರೆ, ನಂತರ ಯಶಸ್ಸನ್ನು ಸಾಧಿಸಲಾಗುತ್ತದೆ
ನಿಮ್ಮ ಸಾಮಾಜಿಕ ಜೇವನಕ್ಕಾಗಿಯೂ ಸಹ ವರ್ಷ ಉತ್ತಮವಾಗಲಿದೆ ಎಂದು ಸಾಬೀತುಪಡಿಸುತ್ತದೆ. ಇದಲ್ಲದೆ ನೀವು ನಿಮ್ಮ ವೈಯಕ್ತಿಕ ಸಂಬಂಧಗಳನ್ನು ಹೆಚ್ಚು ಅನುಕೂಲಕರವಾಗಿ ಮಾಡಲು ಸಾಧ್ಯವಾಗುತ್ತದೆ. ಪ್ರೀತಿ ಸಂಬಂಧಗಳು ಸ್ನೇಹ, ಪ್ರೀತಿ ಮತ್ತು ಬಾಂಧವ್ಯದಿಂದ ನಡೆಯುತ್ತವೆ ಎಂಬುದರ ಬಗ್ಗೆ ನೀವು ಗಮನ ಹರಿಸಬೇಕು. ಆದ್ದರಿಂದ, ಯಾವುದೇ ಸಂಬಂಧದಲ್ಲಿ ಮೊಂಡುತನದ ಮನೋಭಾವವನ್ನು ಅಳವಡಿಸಿಕೊಳ್ಳಬೇಡಿ ಮತ್ತು ಗಾಳಿಯ ದಿಕ್ಕನ್ನು ನೋಡುವ ಮೂಲಕ ಮಾತ್ರ ಯಾವುದೇ ಕೆಲಸವನ್ನು ಮಾಡಬೇಡಿ. ನಿಮ್ಮ ಸುತ್ತ ಉತ್ತಮ ವಾತಾವರಣವನ್ನು ಸೃಷ್ಟಿಸಲು ನಿಮ್ಮ ಎಲ್ಲ ಗಮನವನ್ನು ಕೇಂದ್ರೀಕರಿಸಿ. ಇದರೊಂದಿಗೆ ನಿಮ್ಮ ಸ್ವತಃ ಸ್ವಾತಂತ್ರ್ಯಕ್ಕೂ ಪ್ರಾಮುಖ್ಯತೆಯನ್ನು ನೀಡಿ. ಇದರಿಂದ ಮಾತ್ರ ನೀವು ಉತ್ತಮ ಜೇವನವನ್ನು ಆನಂದಿಸಲಾಗುತ್ತದೆ.
ನಿಮ್ಮ ಸುತ್ತಲೂ ನಿಮಗೆ ಹಾನಿಯನ್ನು ನೀಡುವ ಜನರು ಇದ್ದಾರೆ ಎಂಬುದರ ಬಗ್ಗೆಯೂ ಗಮನ ಹರಿಸಿ ಮತ್ತು ಅವರಿಂದ ಜಾಗರೂಕರಾಗಿರಿ. ಯಾವುದೇ ಹೊಸ ಕೆಲಸವನ್ನು ಆರಂಭಿಸುವ ಮೊದಲು ಅದರ ಬಗ್ಗೆ ಅಂಶಗಳ ಬಗ್ಗೆ ಪರಿಗಣಿಸಿ. ನೀವು ಯಾವುದೇ ಒಪ್ಪಂದಕ್ಕೆ ಸಹಿ ಹಾಕಲು ಹೋದರೆ ಅದರ ಪ್ರತಿಯೊಂದು ವಿಷಯದ ಬಗ್ಗೆ ಓದಿ ಮತ್ತ್ತು ಯಾರಿಗೂ ಗ್ಯಾರಂಟಿ ತೆಗೆದುಕೊಳ್ಳಬೇಡಿ. ನೀವು ನಿಮ್ಮ ಕೋಪವನ್ನು ಸಹ ನಿಯಂತ್ರಿಸಬೇಕು. ಏಕೆಂದರೆ ಈ ಮಧ್ಯೆ ನೀವು ಯಾವುದೇ ಕಾರಣದಿಂದ ಯಾರೊಂದಿಗಾದರೂ ವಿವಾದ ಮಾಡುವ ಸಾಧ್ಯತೆ ಇದೆ. ಇಂತಹ ಕೆಲಸಗಳಲ್ಲಿ ನಿರತರಾಗಿದ್ದರೆ ಅದರ ಕಾರಣದಿಂದಾಗಿ ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಈ ವರ್ಷ ನೀವು ಕೆಲವು ಕಠಿಣ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು, ಬಹುಶಃ ಅವು ನಿಮಗೆ ನೋವುಂಟು ಮಾಡಬಹುದು. ಆದರೆ ನೀವು ನಿಮ್ಮ ಸ್ಥೈರ್ಯದೊಂದಿಗೆ ಪ್ರತಿಯೊಂದು ದುಃಖಕರವಾದ ಸಮಯದಿಂದ ಹೊರಗೋಳಬಹುದು ಮತ್ತು ನಿಮ್ಮನ್ನು ಸಾಮರ್ಥ್ಯರನ್ನಾಗಿ ಮಾಡಬಹುದು ಎಂಬುವ ಸಾಮರ್ಥ್ಯ ನಿಮ್ಮಲ್ಲಿ ಇದೆ. ನೀವು ಅಂತಹ ಒಂದು ನಿರ್ಧಾರವನ್ನು ತೆಗೆದುಕೊಳ್ಳ ಬೇಕಾದರೆ ಭಯಪಡಬೇಡಿ ಏಕೆಂದರೆ ಇದು ನಿಮ್ಮ ಭವಿಷ್ಯಕ್ಕೆ ತುಂಬಾ ಉತ್ತಮವೆಂದು ಸಾಬೀತುಪಡಿಸುತ್ತದೆ.
ಒಟ್ಟಾರೆಯಾಗಿ ವರ್ಷ 2020 ವೃಷಭ ರಾಶಿಚಕ್ರದ ಜನರಿಗೆ ಮಿಶ್ರ ಫಲಿತಾಂಶವನ್ನು ನೀಡುತ್ತದೆ ಮತ್ತು ನೀವು ನಿಮ್ಮ ಸ್ಥೈರ್ಯ ಮತ್ತು ಪರಿಶ್ರಮದ ಬಲದ ಮೇಲೆ ಅನೇಕ ಗುರಿಗಳನ್ನು ಪಡೆಯುವಿರಿ. ನಿಮ್ಮ ಕೆಲವು ದೌರ್ಬಲ್ಯಗಳನ್ನು ದೂರ ಮಾಡಿದರೆ ನೀವು ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮುತ್ತೀರಿ. ನೀವು ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣ ಧೈರ್ಯದೊಂದಿಗೆ ಬಳಸಬೇಕು. ಈ ವರ್ಷ ಸಾಧನೆಯಾಗಳನ್ನು ಪಡೆಯಲು ತಯಾರಾಗಿರಬೆಕು.
ಈ ರಾಶಿಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ನಿಮಗೆ ತಿಳಿದಿಲ್ಲದಿದ್ದರೆ, ಇಲ್ಲಿ ಕ್ಲಿಕ್ ಮಾಡಿ. ಚಂದ್ರ ರಾಶಿಚಕ್ರ ಕ್ಯಾಲ್ಕುಲೇಟರ್
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ, ವೃಷಭ ರಾಶಿಚಕ್ರದ ಜನರಿಗೆ ಸಾಕಷ್ಟು ಮಟ್ಟಿಗೆ ಉತ್ತಮವಾಗಲಿದೆ. ಏಕೆಂದರೆ ಕರ್ಮದ ಮನೆಯ ಅಧಿಪತಿ ಶನಿ ಜನವರಿ ತಿಂಗಳಲ್ಲಿ ಎಂಟನೇ ಮನೆಯಿಂದ ಹೊರಬಂದು ಒಂಬತ್ತನೇ ಮನೆಯಲ್ಲಿ ಪ್ರವೇಶಿಸುತ್ತಾನೆ. ಇದು ನಿಮ್ಮ ವೃತ್ತಿಯಲ್ಲಿ ಪ್ರಗತಿಯ ಮಾರ್ಗವನ್ನು ತೆರೆಯುತ್ತದೆ. ಮತ್ತೊಂದು ಸ್ಥಳಕ್ಕೆ ನಿಮ್ಮ ಸ್ಥಾನ ವರ್ಗಾಯಿಸಬಹುದು. ಆದರೆ ನೀವು ತೊಂದರೆಗೊಳಗಾಗುವ ಅಗತ್ಯವಿಲ್ಲ, ಏಕೆಂದರೆ ಈ ವರ್ಗಾವಣೆಯು ನಿಮ್ಮ ಒಳಿತಿಗಾಗಿ ಇರುತ್ತದೆ. ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ಆದರೆ ಇಂದಿನವರೆಗೆ ಯಾವುದೇ ಉದ್ಯೋಗಕ್ಕೆ ನೇಮಕಗೊಂಡಿಲ್ಲದ ಜನರು ಇನ್ನು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.
ಮಾರ್ಚ್ ನಿಂದ ಜೂನ್ ವರೆಗಿನ ಸಮಯವೂ ಕೆಲವು ತೊಂದರೆಗಳಿಂದ ತುಂಬಿರಬಹುದು ಮತ್ತು ಈ ಸಮಯದಲ್ಲಿ ನಿಮ್ಮ ಮನಸ್ಸು ನಿಮ್ಮ ಕೆಲಸದಿಂದ ಬೇಸರಗೊಳ್ಳುವ ಸಾಧ್ಯತೆ ಇದೆ. ಆದರೆ ನೀವು ಧೈರ್ಯದಿಂದ್ದರೆ ಮತ್ತು ಧೈರ್ಯದಿಂದ ನಿಮ್ಮ ಪರಿಶ್ರಮವನ್ನು ಮಾಡುತ್ತಿದ್ದರೆ ಜೂನ್ ನಂತರ ನೀವು ತುಂಬಾ ಉತ್ತಮ ಸಕಾರಾತ್ಮಕ ಬದಲಾವಣೆಗಳನ್ನು ನಿಮ್ಮ ವೃತ್ತಿಯಲ್ಲಿ ಕಾಣಬಹುದು. ಆದಾಗ್ಯೂ ಶನಿ ಒಂದು ಮಂದ ಗ್ರಹ ಆದ್ದರಿಂದ ಮುಖ್ಯವಾಗಿ ಸೆಪ್ಟೆಂಬರ್ ವರೆಗಿನ ಸಮಯವು ಖಂಡಿತವಾಗಿಯೂ ನೀವು ಕಷ್ಟಪಟ್ಟು ಕೆಲಸ ಮಾಡುವಂತೆ ಮಾಡುತ್ತದೆ. ಆದರೆ ಅದರ ನಂತರ ನೀವು ಪ್ರಗತಿಯ ಮಾರ್ಗದಲ್ಲಿ ಮುಂದುವರಿಯುತ್ತಿರಿ. ಮತ್ತು ಈ ಪ್ರಗತಿ ಧೀರ್ಘಕಾಲದ ವರೆಗೆ ನಿಮ್ಮೊಂದಿಗೆ ಇರುತ್ತದೆ. ಅದರಿಂದ ಸಂತೋಷವಾಗಿರುತ್ತೀರಿ. ನಿಮ್ಮ 100 ಪ್ರತಿಶತ ಪ್ರಯತ್ನಗಳನ್ನು ಸಹ ಮುಂದುವರಿಸುತ್ತೀರಿ. ಹಿಂದಿನ ವರ್ಷದಿಂದ ಮುಂದಿವರಿಸಿದಿರುವಂತಹ ಕೆಲಸಗಳನ್ನು ಸಹ ನೀವು ಈ ವರ್ಷವು ಮುಂದುವರಿಸಲು ಸಾಧ್ಯವಾಗುತ್ತದೆ. ನೀವು ಅನೇಕ ರೀತಿಯಿಂದ ಸ್ಪೂರ್ತಿಯನ್ನು ಪಡೆಯುವಿರಿ ಇದರ ಕಾರಣದಿಂದ ಕಾರ್ಪೊರೇಟ್ ಜಗತ್ತಿನಲ್ಲಿ ಹೆಚ್ಚಿನ ಮೆಟ್ಟಲುಗಳನ್ನು ಏರಲು ಸಾಧ್ಯವಾಗುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ತಮ್ಮ ಕೆಲಸದ ಸ್ಥಳದಲ್ಲಿ ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇದು ಅನುಕೂಲಕರ ಸಮಯವಾಗಿರುತ್ತದೆ.ವರ್ಷದ ಮಧ್ಯಭಾಗವು ಇಲ್ಲಿಯವರೆಗೆ ಮಾಡಿದ ಕೆಲಸಕ್ಕೆ ಸಾಕಷ್ಟು ಆದಾಯವನ್ನು ನೀಡುತ್ತದೆ.
ಜನವರಿ, ಮೈ ಮತ್ತು ಜೂನ್ ಈ ತಿಂಗಳುಗಳ ಸಮಯದಲ್ಲಿ ನೀವು ವಿದೇಶಿ ಸಂಪರ್ಕಗಳಿಂದ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಈ ಸಮಯದಲ್ಲಿ ನಿಮಗಾಗಿ ಸಾಧ್ಯತೆಗಳು ಉಧ್ಭವಿಸುತ್ತವೆ ಮತ್ತು ನಿಮ್ಮ ಕಾರ್ಯಕ್ಷಮತೆಯಿಂದ ನಿಮ್ಮ ಉನ್ನತ ಅಧಿಕಾರಿಗಳನ್ನು ಮೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ಪರಿಣಾಮವಾಗಿ, ನೀವು ಬಡ್ತಿಯನ್ನು ಪಡೆಯಬಹುದು.ಆದ್ದರಿಂದ ಈ ಸಮಯವನ್ನು ನೀವು ಪೂರ್ಣವಾಗಿ ಬಳಸಬೇಕು ಮತ್ತು ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳುವಂತಹ , ನಿಮಗೆ ಸಿಗುತ್ತಿರುವ ಬಡ್ತಿ ನಿಲ್ಲಲು ಮತ್ತು ಅದು ಮುಂದೂಡುವಂತಹ ಯಾವುದೇ ಕೆಲಸವನ್ನು ಮಾಡಬಾರದು.
ಫೆಬ್ರವರಿ ಮತ್ತು ಮಾರ್ಚ್ ನಡುವೆ, ನೀವು ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಯಾವುದೇ ವಿವಾದಕ್ಕೆ ಸಿಲುಕದ ಒಂದು ವಿಷಯವನ್ನು ನೀವು ನೋಡಿಕೊಳ್ಳಬೇಕು ಮತ್ತು ಯಾವುದೇ ಪಿತೂರಿಯ ಭಾಗವಾಗಬೇಡಿ ಇಲ್ಲದಿದ್ದರೆ ನೀವು ದೊಡ್ಡ ಬೆಲೆ ಪಾವತಿಸಬೇಕಾಗಬಹುದು. ನಿಮ್ಮ ರಾಜತಾಂತ್ರಿಕ ಕೌಶಲ್ಯಗಳು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಅತ್ಯಂತ ಕಷ್ಟಕರ ಜನರೊಂದಿಗೆ ವ್ಯವಹರಿಸಲು ಸಹಾಯ ಮಾಡುತ್ತದೆ. ಅದೃಷ್ಟವು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸುತ್ತದೆ. ನೀವು ನಿಮ್ಮ ಧೈರ್ಯದ ಬಲದ ಮೇಲೆ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಪರಿಶ್ರಮಿಸುವುದನ್ನು ಮುಂದುವರಿಸಿ. , ಇದರಿಂದಾಗಿ ವರ್ಷದ ಅಂತ್ಯದ ವೇಳೆಗೆ ನಿಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು. ಇದರ ಪರಿಣಾಮದಿಂದಾಗಿ ನೀವು ವರ್ಷದ ಕೊನೆಯವರೆಗೆ ಸಂತೋಷದ ಸುದ್ಧಿಗಳನ್ನು ಪಡೆಯಬಹುದು. ಈ ವರ್ಷದ ಕೊನೆಯಲ್ಲಿ ಕಾನೂನು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ ನೀವು ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳುವಿರಿ, ಆದರೂ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಈ ಸಮಯದಲ್ಲಿ, ನಿಮ್ಮ ಮೇಲೆ ಆರೋಪ ಹೊರಿಸಬಹುದು ಅಥವಾ ಮಾನಹಾನಿ ಮಾಡುವ ಸಾಧ್ಯತೆಯಿದೆ.
ನೀವು ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕು. ಏಕೆಂದರೆ ಅವರ ಸಂಪೂರ್ಣ ಗಮನ ನಿಮ್ಮ ಮೇಲೆ ಇರಬಹುದು. ಈ ಸಂದರ್ಭದಲ್ಲಿ, ನಿಮ್ಮ ಸಣ್ಣದೊಂದು ತಪ್ಪು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಈ ವರ್ಷ ನೀವು ಕಠಿಣ ಪರಿಶ್ರಮದಿಂದ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುವಿರಿ ಎಂಬುದರ ಬಗ್ಗೆ ಗಮನ ಹರಿಸಿ. ಕೆಲವು ಗುಪ್ತ ಶತ್ರುಗಳು ನಿಮ್ಮ ಕಚೇರಿಯಲ್ಲಿ ಸಮಸ್ಯೆಗಳನ್ನು ಮಾತು ಅಡೆತಡೆಗಳನ್ನು ಉಂಟುಮಾಡಬಹುದು. ಆದ್ದರಿಂದ ನೀವು ನಿರ್ದಿಷ್ಟವಾಗಿ ಯಾರನ್ನೂ ಹೆಚ್ಚು ಅವಲಂಬಿಸಬಾರದು ಮತ್ತು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು. ಸೆಪ್ಟೆಂಬರ್ ನಂತರದ ಸಮಯ ಬಹಳಷ್ಟು ಉತ್ತಮವಾಗಲಿದೆ. ವೃಷಭ ರಾಶಿ 2020 (Vrishabh Rashi 2020) ರ ಪ್ರಕಾರ ವೃಷಭ ರಾಶಿಯ ಜನರು ತಮ್ಮದೇ ಆದ ಪರಿಶ್ರಮದಿಂದ ತಮ್ಮ ಗುರುತು ಮಾಡಲು ಸಾಧ್ಯವಾಗುತ್ತದೆ. ಪರಿಣಾಮವಾಗಿ, 2020 ವರ್ಷವು ಹಿಂದಿನ ವರ್ಷಕ್ಕಿಂತ ನಿಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಪ್ರಗತಿಯನ್ನು ತರುತ್ತದೆ. ವರ್ಷದ ಅಂತ್ಯದ ವೇಳೆಗೆ, ನಿಮ್ಮ ವೃತ್ತಿಜೀವನದ ಬಗ್ಗೆ ನಿಮಗೆ ವಿಶ್ವಾಸವಿರುತ್ತದೆ ಮತ್ತು ನಿಮ್ಮ ಸಂತೋಷಕ್ಕೆ ಕಾರಣವೆಂದರೆ, ಇದುವರೆಗೆ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಿದ ನಿಜವಾದ ವ್ಯಕ್ತಿ ಎಂದು ನೀವು ಭಾವಿಸಲು ಸಾಧ್ಯವಾಗುತ್ತದೆ.
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಆರ್ಥಿಕ ಜೇವನ
ವೃಷಭ ರಾಶಿ ಭವಿಷ್ಯ 2020 ರ ಆರ್ಥಿಕ ಭಾಗವನ್ನು ನೋಡಿದರೆ, ಇವರು ಆರ್ಥಿಕ ಜೇವನದಲ್ಲಿ ಕೆಲವು ಸವಾಲುಗಳನ್ನು ಹೊಂದಿರಬಹುದು. ವರ್ಷದ ಆರಂಭದಲ್ಲಿ ಹಠಾತ್ ಲಾಭದ ಯೋಗವಿದೆ ಆದರೆ ಮತ್ತೊಂದೆಡೆ ಹಣದ ನಷ್ಟವು ಸಂಭವಿಸಬಹುದು, ಆದ್ದರಿಂದ ಹಣದ ಹೂಡಿಕೆಯನ್ನು ಚೆನ್ನಾಗಿ ಪರಿಗಣಿಸಿ ಅರ್ಥಮಾಡಿಕೊಂಡು ಮಾಡಿ. ಈ ವರ್ಷ ನಿಮಗೆ ಅಗತ್ಯವಿದ್ದರೆ ನಿಮ್ಮ ಅತ್ತೆಮನೆಯ ಬದಿಯಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು. ಆದರೆ ಅದು ಬಹಳ ಮುಖ್ಯ ಎಂದು ನೀವು ಭಾವಿಸಿದಾಗ ಮಾತ್ರ ಅವರಿಂದ ಸಹಾಯ ಪಡೆಯಿರಿ.
ಆರ್ಥಿಕ ದೃಷ್ಟಿಕೋನದಿಂದ ವರ್ಷದ ಆರಂಭವು ಮತ್ತು ಸೆಪ್ಟೆಂಬರ್ ರಿಂದ ಡಿಸೆಂಬರ್ ವರೆಗಿನ ಸಮಯ ಸಾಕಷ್ಟು ಮಟ್ಟಿಗೆ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಆರ್ಥಿಕವಾಗಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಅದೇ ಸಮಯದಲ್ಲಿ, ಆದಾಯವು ಕಡಿಮೆ ಇರುತ್ತದೆಯಾದರೂ, ಮತ್ತೊಂದೆಡೆ, ವೆಚ್ಚಗಳು ಅನಿರೀಕ್ಷಿತವಾಗಿ ಹೆಚ್ಚಾಗಬಹುದು, ಆದ್ದರಿಂದ ಹಣದ ಖರ್ಚು ಮತ್ತು ಹೂಡಿಕೆ ಎರಡನ್ನು ತುಂಬಾ ಆಲೋಚಿಸಿ ಅರ್ಥಮಾಡಿಕೊಂಡು ಮಾಡಿ. ಮನೆಯಲ್ಲಿ ಯಾವುದೇ ಶುಭ ಕಾರ್ಯ ಸಂಭವಿಸಬಹುದು. ಆದರೆ ಅದಕ್ಕಾಗಿ ನಿಮ್ಮ ಹಣಕಾಸನ್ನು ಬುದ್ಧಿವಂತಿಕೆಯಿಂದ ಬಳಸಿ, ನಿಮ್ಮ ಮನೆಯಲ್ಲಿ ಸುಧಾರಣೆ ಮತ್ತು ಜೇವನಶೈಲಿಯ ಬೆಳವಣಿಗೆ ಇತ್ಯಾದಿಯ ಮೇಲೆ ಖರ್ಚಾಗಬಹುದು. ವರ್ಷದ ಕೊನೆಯಲ್ಲಿ ಉತ್ತಮ ಆರ್ಥಿಕ ಹರಿವಿನ ಸಾಧ್ಯತೆಯಿದೆ. ನಿಮ್ಮ ಉತ್ತಮ ಹಣಕಾಸು ನಿರ್ವಹಣೆಗಾಗಿ ಸುರಕ್ಷಿತ ಖರ್ಚಿಗೆ ಆದ್ಯತೆ ನೀಡಲು ಕಲಿಯಿರಿ.
ಈ ವರ್ಷ 2020 ರಲ್ಲಿ ಏಪ್ರಿಲ್, ಜೂನ್ ಮತ್ತು ಸೆಪ್ಟೆಂಬರ್ ಮೊದಲರ್ಧದ ಬಹಳಷ್ಟು ಮಟ್ಟಿಗೆ ಉತ್ತಮವಾಗಿರುತ್ತದೆ.ಏಕೆಂದರೆ ಈ ಸಮಯದಲ್ಲಿ ನೀವು ಅನೇಕ ರೀತಿಯಿಂದ ಆರ್ಥಿಕ ಲಾಭದ ಪರಿಸ್ಥಿತಿ ಉಧ್ಭವಿಸುತ್ತದೆ ಮತ್ತು ನೀವು ಜಾಗರೂಕತೆಯಿಂದ ನಡೆದರೆ ಈ ಸಮಯದಲ್ಲಿ ನೀವು ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ. ಈ ಪೂರ್ತಿ ವರ್ಷದ ಸಮಯದಲ್ಲಿ ನೀವು ನಿಮ್ಮ ಆರ್ಥಿಕ ಗುರಿಗಳಿಗೆ ಹೋಲಿಸಿದರೆ ಮೊದಲಿಗಿಂತ ಹೆಚ್ಚು ಉತ್ಸುಕರಾಗಿರುವುದನ್ನು ಕಾಣುವಿರಿ . ವರ್ಷದ ಮಧ್ಯದಲ್ಲಿ ಅನಗತ್ಯ ಖರ್ಚುಗಳು ಬರುತ್ತವೆ, ಇವು ವರ್ಷದ ನಿಮ್ಮ ಬಜೆಟ್ ಅನ್ನು ಕಡಿಮೆ ಮಾಡುತ್ತವೆ. ಆದಾಗ್ಯೂ ಗಂಭೀರ ಪರಿಗಣನೆ ಮತ್ತು ನಿರ್ಧರಿಸಿದ ಪ್ರಯತ್ನಗಳಿಂದ ನೀವು ಸ್ವಲ್ಪ ತಿಂಗಳಿನ ಸಮಯದಲ್ಲಿಯೇ ಮತ್ತೆ ಟ್ರ್ಯಾಕ್ ಗೆ ಬರುತ್ತಿರಿ. ಇದಲ್ಲದೆ ಫೆಬ್ರವರಿ ಮತ್ತು ಮೇ ತಿಂಗಳು ವಿಶೇಷವಾಗಿ ಆರ್ಥಿಕ ಲಾಭವನ್ನು ನೀಡುವುದಾಗಿ ಸಾಬೀತುಪಡಿಸುತ್ತದೆ.
ನೀವು ಯಾವುದಾದರು ವ್ಯವಸಾಯ ಮಾಡುತ್ತಿದ್ದರೆ, ವರ್ಷದ ಆರಂಭದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡದೇ ಇರುವ ಬಗ್ಗೆ ಗಮನ ಹರಿಸಿ ಮತ್ತು ಯಾವುದಾದರು ವ್ಯಾಪಾರವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ಅದಕ್ಕಾಗಿಯೂ ವರ್ಷದ ಆರಂಭದಲ್ಲಿ ತ್ಯಜಿಸಿ. ಏಕೆಂದರೆ ಆ ಸಮಯದಲ್ಲಿ ನೀವು ಯಾವುದೇ ಅಂತಹ ಕೆಲಸವನ್ನು ಮಾಡಿದರೆ, ಆರ್ಥಿಕ ಲಾಭದ ಸ್ಥಾನದಲ್ಲಿ ನಷ್ಟವನ್ನು ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಸ್ತಿ, ಮನೆ, ವಾಹನ ಮತ್ತು ಆಭರಣಗಳನ್ನು ಪಡೆಯುವ ಪ್ರಬಲ ಸಂಕೇತ ಕಂಡುಬರುತ್ತಿದೆ. ನೀವು ಮನೆಯಲ್ಲಿ ಮಾಡುವೆ ಅಥವಾ ಯಾವುದೇ ಶುಭ ಕಾರ್ಯದಲ್ಲಿ ಖರ್ಚು ಮಾಡಬಹುದು. ಸೆಪ್ಟೆಂಬರ್ ನಲ್ಲಿ ಹಠಾತ್ ಲಾಭದ ಸೂಚನೆಗಳಿವೆ. ಪರಿಣಾಮವಾಗಿ ನೀವು ನಿಮ್ಮ ಹಳೆಯ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಯಾವುದೇ ವ್ಯಪಾರ ಅಥವಾ ಶೇರ್ ಮಾರ್ಕೆಟ್ನಲ್ಲಿ ತೊಡಗಿರುವವರು ಇಷ್ಟಪಟ್ಟ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಮಾರ್ಚ್ ನಂತರ ರಾಹುವಿನ ಸಾಗಣೆ ಆಗುವುದರಿಂದ ನಿಮ್ಮ ಆಲೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಶಕ್ತಿಯಲ್ಲಿ ಪ್ರಬಲ ಬದಲಾವಣೆಗಳು ಬರುತ್ತವೆ ಮತ್ತು ನೀವು ಅನೇಕ ಪರಿಹಾರಗಳ ಮೂಲಕ ನಿಮ್ಮ ಆದಾಯದಲ್ಲಿ ಹೆಚ್ಚಳ ಮಾಡುವ ಕಡೆಗೆ ಗಮನ ಹರಿಸುತ್ತೀರಿ.
ಧರ್ಮ, ಅಧ್ಯಾತ್ಮ , ರಹಸ್ಯ ವಿಷ್ಯಗಳು ಮತ್ತು ಸಂತೋಷದ ಸುಳಿವುಗಳಲ್ಲಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತೀರಿ. ಗುರುವಿನ ಪ್ರಭಾವದಿಂದಾಗಿ ಹಣವು ಚೆನ್ನಾಗಿ ಬರುತ್ತದೆ. ಆದರೆ ಹೊರೆತಾಗಿಯೂ ಖರ್ಚುಗಳನ್ನೂ ನಿಯಂತ್ರಿಸುವುದು ನಿಮಗೆ ಅಗತ್ಯವಾಗಿದೆ ಏಕೆಂದರೆ ಎಷ್ಟು ಆದಾಯ ಬಂದರೂ, ಖರ್ಚುಗಳನ್ನು ನಿಯಂತ್ರಿಸದಿದ್ದರೆ ನೀವು ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು.
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಶಿಕ್ಷಣ
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ವೃಷಭ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ವರ್ಷ ಉಡುಗೊರೆಗಳನ್ನು ತೆಗೆದುಕೊಂಡು ಬರುತ್ತದೆ. ಆದಾಗ್ಯೂ ಈ ನಡುವೆ ನಿಮ್ಮ ಶಿಕ್ಷಣದ ಬಗ್ಗೆ ನಿಮ್ಮ ಮನಸ್ಸನ್ನು ಅಸಮಾಧಾನಗೊಳಿಸುವಂತಹ ಅನೇಕ ಅವಕಾಶಗಳು ಬರುತ್ತವೆ ಮತ್ತು ನಿಮ್ಮ ಏಕಾಗ್ರತೆಯಲ್ಲಿ ಕೊರತೆಯನ್ನು ಎದುರಿಸಬೇಕಾಗಬಹುದು. ಆದರೆ ಇದೆಲ್ಲರ ಹೊರೆತಾಗಿಯೂ ಸಹ ಈ ವರ್ಷ ಶಿಕ್ಷಣದ ದಿಕ್ಕಿನಲ್ಲಿ ಒಂದು ಉತ್ತಮ ವರ್ಷವೆಂದು ಸಾಬೀತುಪಡಿಸುತ್ತದೆ.
ಮಾರ್ಚ್ ಇಂದ ಕೊನೆಯ ವರೆಗಿನ ಸಮಯ ಮತ್ತು ಅದರ ನಂತರ ನವೆಂಬರ್ ಇಂದ ಡಿಸೆಂಬರ್ ವರೆಗಿನ ಸಮಯ ಬಹಳಷ್ಟು ಉತ್ತಮವಾಗಲಿದೆ. ಈ ಸಮಯದಲ್ಲಿ ಶಿಕ್ಷಣ ದಾರಿಯಲ್ಲಿ ಬರುವ ಬಿಕ್ಕಟ್ಟುಗಳು ದೂರವಾಗುವುದಲ್ಲದೆ ನೀವು ವಿದೇಶ ವಿಶ್ವದಿದ್ಯಾಲಯದಲ್ಲೂ ಶಿಕ್ಷಣವನ್ನು ಪಡೆಯಲಾಗುತ್ತದೆ. ಇದಲ್ಲದೆ ಅನೇಕ ಜನರ ಉನ್ನತ ಶಿಕ್ಷಣದ ಆಸೆಗಳು ಈಡೇರುತ್ತವೆ. ಆದರೆ ಗುರುವು ಮಕರ ರಾಶಿಚಕ್ರದಲ್ಲಿ ಇರುತ್ತಾನೆ ಆದ್ದರಿಂದ ಅವರು ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ ಮತ್ತು ಈ ಸವಾಲುಗಳಿಂದ ಹೋರಾಡಿ ಮಾತ್ರ ಅವರು ಯಶಸ್ಸನ್ನು ಪಡೆಯಲಾಗುತ್ತದೆ. ವರ್ಷದ ಆರಂಭದಲ್ಲಿ, ಆಗಸ್ಟ್ ತಿಂಗಳು ವಿಶೇಷವಾಗಿ ಗಮನ ಹರಿಸಬೇಕಾಗುತ್ತದೆ ಏಕೆಂದರೆ ಈ ಸಮಯದಲ್ಲಿ ನೀವು ನಿರ್ಧಿಷ್ಟವಾಗಿ ಶಿಕ್ಷಣದ ಕ್ಷೇತ್ರದಲ್ಲಿ ವಿವಿಧ ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಸ್ಪರ್ಧಾತಕ ಪರೀಕ್ಷೆಗಾಗಿ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಫೆಬ್ರವರಿ ತಿಂಗಳಲ್ಲಿ ವಿಶೇಷ ಯಶಸ್ಸು ಸಿಗಬಹುದು. ಇದಲ್ಲದೆ ನವೆಂಬರ್ ತಿಂಗಳು ಸಹ ಅವರಿಗಾಗಿ ಸಾಕಷ್ಟು ಮಟ್ಟಿಗೆ ಉತ್ತಮವಾಗಲಿದೆ ಎಂದು ಸಾಬೀತುಪಡಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಯಶಸ್ವಿಯಾಗಲು ಬಯಸುತ್ತಿದ್ದರೆ ಈ ಪೂರ್ತಿ ಸಮಯ ಕಠಿಣ ಪರಿಶ್ರಮ ಮಾಡಬೇಕು. ಉನ್ನತ ಶಿಕ್ಷಣವನ್ನು ಪಡೆಯುವ ಹಾದಿಯಲ್ಲಿ ಅನೇಕ ಅಡೆತಡೆಗಳು ಉಧ್ಭವಿಸುತ್ತವೆ ಆದರೆ ನಿಮ್ಮ ಪರಿಶ್ರಮ ಬಣ್ಣಗಳನ್ನು ತರುತ್ತದೆ.
ಏಪ್ರಿಲ್ ಮಧ್ಯೆಯಿಂದ ಮೇ ನಡುವೆ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಆದ್ದರಿಂದ ನೀವು ಈ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದ್ದರೆ ನೀವು ನಿಮ್ಮ ಪ್ರಯತ್ನಗಳನ್ನು ಮುಂದುವರಿಸಿ, ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ಈ ವರ್ಷನೀವು ನಿಮ್ಮ ಅಧ್ಯಾಪಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು, ಏಕೆಂದರೆ ಅವರು ನಿಮ್ಮೊಂದಿಗೆ ಕೋಪಗೊಳ್ಳುವಂತಹ ಪರಿಸ್ಥಿತಿಗಳ ಸಾಧ್ಯ್ಯತೆ ಇದೆ ಮತ್ತು ಅವುಗಳ ಪ್ರಭಾವವು ನಿಮ್ಮ ಶಿಕ್ಷಣದ ಕ್ಷೇತ್ರದಲ್ಲಿ ನಿಮ್ಮನ್ನು ತೊಂದರೆಗಳಲ್ಲಿ ತೊಡಗಿಸಬಹುದು.
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಎಂಜೀನೀರಿಂಗ್, ವೈದ್ಯಕೀಯ ಮತ್ತು ಕಾನೂನು ಅಧ್ಯಯ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷ ವಿಶೇಷವಾಗಿ ಯಶಸ್ಸು ಸಿಗಬಹುದು. ಮಾಹಿತಿ ತಂತ್ರಜ್ಞಾನ, ನಿರ್ವಹಣೆ ಮತ್ತು ಜೈವಿಕ ತಂತ್ರಜ್ಞಾನದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡಿ ಮಾತ್ರ ಯಶಸ್ಸನ್ನು ಪಡೆಯಬಹುದು.
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೇವನ
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಕೌಟುಂಬಿಕ ಜೇವನ ಹೆಚ್ಚು ಅನುಕೂಲವಾಗಿ ಉಳಿಯುವ ಸಾಧ್ಯತೆ ಇಲ್ಲ. ಎರಡನೇ ಮನೆಯಲ್ಲಿ ಇರುವ ರಾಹು ನಿಮ್ಮ ಕೌಟುಂಬಿಕ ಜೀವನಕ್ಕೆ ಹೆಚ್ಚು ಅನುಕೂಲಕರ ಎಂದು ಹೇಳಲಾಗುವುದಿಲ್ಲ. ಇದರ ಉಪಸ್ಥಿತಿಯಿಂದ ಕುಟುಂಬದ ಸದಸ್ಯರಲ್ಲಿ ಮಾನಸಿಕ ಒತ್ತಡ ಮತ್ತು ಅಸಹಿಷ್ಣು ಮನೋಭಾವವನ್ನು ಹೊಂದಿರುವುದರಿಂದ ಕುಟುಂಬದಲ್ಲಿ ಅಸಮಾಧಾನ ಉಂಟಾಗಬಹುದು. ಕುಟುಂಬದ ಕೆಲವು ಸದಸ್ಯರ ವರ್ತನೆಯು ಸರಿಯಾಗಿರುವುದಿಲ್ಲ.
ನೀವು ಹಣದ ಹಿಂದೆ ಹೆಚ್ಚು ಓಡಿದರೆ ಕುಟುಂಬದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತದೆ ಮತ್ತು ನೀವು ಕೌಟುಂಬಿಕ ತೊಂದರೆಗಳನ್ನು ಎದುರಿಸಿದರೆ ಹಣಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗಬಹುದು. ಆದರೆ ನೀವು ನಿಮ್ಮ ವ್ಯಾಪಾರ ಅಥವಾ ಯಾವುದೇ ಇತರ ಕೆಲಸಗಳಿಂದಾಗಿ ಕುಟುಂಬದಿಂದ ದೂರವಿದ್ದರೆ ಬಹಳಷ್ಟು ಮಟ್ಟಿಗೆ ನೀವು ಈ ತೊಂದರೆಗಳಿಂದ ಮುಕ್ತರಾಗಬಹುದು. ನಿಮ್ಮ ಮಾತಿನ ಶಕ್ತಿಯಿಂದ ಜನರನ್ನು ನಿಮ್ಮದಾಗಿಸುವಿರಿ ಮತ್ತು ಅವರ ಮನಸ್ಸಿನ ಕೊಳೆಯನ್ನು ತೆರೆವುಗೊಳಿಸಿ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಬಹುದು.
ಸೆಪ್ಟೆಂಬರ್ ಮಧ್ಯದ ನಂತರ ರಾಹು ವೃಷಭ ರಾಶಿಚಕ್ರದಲ್ಲಿ ಪ್ರವೇಶಿಸಿದಾಗ, ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ ಮತ್ತು ಪರಸ್ಪರ ಪ್ರೀತಿ ಮತ್ತು ಸಹೋದರತ್ವದ ಭಾವನೆ ರೂಪುಗೊಳ್ಳುತ್ತದೆ. ನಿಮ್ಮ ಕುಟುಂಬದ ಸಾಮಾಜಿಕ ಪರಿಸ್ಥಿತಿ ಬಲವಾಗಿರುತ್ತದೆ ಮತ್ತು ಪ್ರತಿಷ್ಠೆ ಸಿಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಜನರೊಂದಿಗೆ ಸೇರಿ ಸಮಾಜದ ಒಳ್ಳೆಯದಕ್ಕಾಗಿ ಯಾವುದೇ ಕೆಲಸವನ್ನು ಮಾಡಬಹುದು. ಇದರಿಂದ ನಿಮ್ಮ ಗೌರವದಲ್ಲಿ ಅತ್ಯಂತ ಹೆಚ್ಚಳವಾಗುತ್ತದೆ.
ಅಕ್ಟೋಬರ್ ನಡುವೆಯಿಂದ ನವೆಂಬರ್ ಸಮಯ ನಿಮ್ಮ ತಾಯಿಯ ಆರೋಗ್ಯಕ್ಕೆ ವಿರುದ್ಧವಾಗಿ ಉಳಿಯಬಹುದು. ಈ ಸಮಯದಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಸಾಧ್ಯವಾದರೆ ವೈದ್ಯಕೀಯ ಸಲಹೆಯನ್ನು ಸಹ ಪಡೆಯಿರಿ. ನೀವು ಕಾಲ ಕಾಲಕ್ಕೆ ಸಹೋದರ-ಸಹೋದರಿಯರ ಬೆಂಬಲವನ್ನು ಪಡೆಯುತ್ತಿರುತ್ತೀರಿ. ಮೇ ಮಧ್ಯದಿಂದ ಸೆಪ್ಟೆಂಬರ್ ಕೊನೆಯ ವರೆಗೆ ತಂದೆಯ ಆರೋಗ್ಯವು ಸ್ವಲ್ಪ ದುರ್ಬಲವಾಗಿರಬಹುದು. ಆದಾಗ್ಯೂ ಈ ಸಮಯದಲ್ಲಿ ಯಾವುದೇ ದೊಡ್ಡ ಸಮಸ್ಯೆ ಕಂಡುಬರುತ್ತಿಲ್ಲ.
ನಿಮ್ಮ ಕುಟುಂಬ ಸದಸ್ಯರ ಆರೋಗ್ಯವನ್ನು ವಿಶೇಷವಾಗಿ ಮೇ, ಜೂನ್ ಮತ್ತು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ನೀವು ನೋಡಿಕೊಳ್ಳಬೇಕು. ಕೌಟುಂಬಿಕ ವಿವಾದ ನಡೆಯುತ್ತಿದ್ದರೆ, ಅದು ನವೆಂಬರ್-ಡಿಸೆಂಬರ್‌ನಲ್ಲಿ ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ಆದಾಗ್ಯೂ, ಯಾವುದೇ ವಿವಾದಗಳು ಉಲ್ಬಣಗೊಳ್ಳದಂತೆ ನೀವು ಪ್ರಯತ್ನಿಸಬೇಕು. ಕಾಲಕಾಲಕ್ಕೆ, ಪೋಷಕರು ತಮ್ಮ ಆಶೀರ್ವಾದದಿಂದ ನಿಮ್ಮನ್ನು ಪೂರೈಸುತ್ತಾರೆ ಮತ್ತು ಕುಟುಂಬ ಜೀವನವು ಸುಗಮವಾಗಿ ಮುಂದುವರಿಯುತ್ತದೆ.
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ವೃಷಭ ರಾಶಿಚಕ್ರದ ಜನರ ದಾಂಪತ್ಯ ಜೇವನಕ್ಕೆ ಈ ವರ್ಷದ ಆರಂಭವು ತುಂಬಾ ಒಳ್ಳೆಯದಲ್ಲ. ಅವರು ತಮ್ಮ ಜೀವನ ಸಂಗಾತಿಯ ಕೋಪ ಮತ್ತು ಅಹೆಮ್ನ ಸಂಘರ್ಷದಿಂದ ಬದುಕುಳಿಯಬೇಕಾಗಿದೆ ಇಲ್ಲದಿದ್ದರೆ ನಿಮ್ಮ ದಾಂಪತ್ಯ ಜೇವನವು ತೊಂದರೆಗಳಿಂದ ತುಂಬಿರಬಹುದು. ನೀವು ತುಂಬಾ ಧೈರ್ಯದಿಂದ ಕೆಲಸ ಮಾಡಬೇಕು ಮತ್ತು ಪ್ರತಿಯೊಂದು ಹೆಜ್ಜೆಯನ್ನು ಬುದ್ಧಿವಂತಿಕೆಯಿಂದ ಮುಂದುವರಿಸಬೇಕು, ಆಗ ಮಾತ್ರ ನೀವು ನಿಮ್ಮ ದಾಂಪತ್ಯ ಜೇವನವನ್ನು ಆನಂದಿಸಲು ಸಾಧ್ಯವಾಗುತ್ತದೆ.
ಮಾರ್ಚ್ ತಿಂಗಳಲ್ಲಿ ನೀವು ಹೆಚ್ಚು ಗಮನ ಹರಿಸಬೇಕು ಏಕೆಂದರೆ ಈ ಸಮಯದಲ್ಲಿ ನಿಮ್ಮ ಅತ್ತೆಮನೆ ಸದಸ್ಯರೊಂದಿಗೆ ನಿಮ್ಮ ಜಗಳ ಸಂಭವಿಸಬಹುದು ಅಥವಾ ನಿಮ್ಮ ಜೆವೀಣಾ ಸಂಗಾತಿಯ ಮೂಲಕ ತನ್ನ ತವರುಮನೆಯ ಪರವಾಗಿರುವ ಕಾರಣದಿಂದ ನಿಮ್ಮಿಬ್ಬರ ನಡುವೆ ಬಿರುಕು ಉಂಟಾಗಬಹುದು. ಇದರ ನಂತರ ಡಿಸೆಂಬರ್ ತಿಂಗಳಲ್ಲಿ ನಿಮ್ಮ ಜೇವನ ಸಂಗಾತಿಯ ಆರೋಗ್ಯವು ಹದಗೆಡುವ ಸಮಸ್ಯೆಗಳು ಹೆಚ್ಚಾಗಬಹುದು
ಫೆಬ್ರವರಿ, ಏಪ್ರಿಲ್, ಮೇ ಮತ್ತು ಡಿಸೆಂಬರ್ ತಿಂಗಳುಗಳು ನಿಮ್ಮ ವೈವಾಹಿಕ ಜೇವನಕ್ಕಾಗಿ ಉತ್ತಮವಾಗಿರುತ್ತವೆ. ಈ ಸ್ಮಾಸಮಯದಲ್ಲಿ ತ್ತು ನಿಮ್ಮ ಜೇವನ ಸಂಗಾತಿಯ ನಡುವೆ ಆಕರ್ಷಣೆ, ಪ್ರೀತಿ, ಪ್ರಣಯ ಮತ್ತು ಸಮರ್ಪಣೆಯ ಮನೋಭಾವ ಬೆಳೆಯುತ್ತದೆ. ಪರಸ್ಪರ ಬಗ್ಗೆ ತಿಳುವಳಿಕೆ ಬೆಳೆಯುತ್ತದೆ ಮತ್ತು ಇದರಿಂದ ನಿಮ್ಮ ವೈವಾಹಿಕ ಜೀವನವು ಸಿಹಿಯಾಗಿರುತ್ತದೆ
ನಾವು ಮಕ್ಕಳ ಬಗ್ಗೆ ಮಾತನಾಡಿದರೆ, ವರ್ಷದ ಆರಂಭವು ಅವರಿಗೆ ತುಂಬಾ ಶುಭವಾಗುವುದಿಲ್ಲ. ಎಂಟನೇ ಮನೆಯಲ್ಲಿ ಗುರು ಇರುವಿಕೆಯು ನಿಮ್ಮ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ಶಿಕ್ಷಣಕ್ಕೆ ತೊಂದರೆಗಳು ಮತ್ತು ಅಡೆತಡೆಗಳನ್ನು ಉಂಟುಮಾಡುತ್ತದೆ. ಆದರೆ ಏಪ್ರಿಲ್ ನಿಂದ ಜುಲೈ ಆರಂಭದ ಅವಧಿ ಮಕ್ಕಳಿಗೆ ತುಂಬಾ ಶುಭ. ಈ ಸಮಯದಲ್ಲಿ, ಹೊಸದಾಗಿ ಮದುವೆಯಾದ ಕೆಲವು ಜನರು ಸಂತಾನೋತ್ಪತ್ತಿ ಉಡುಗೊರೆಯನ್ನು ಪಡೆಯುತ್ತಾರೆ ಎಂದು ಅಂತಹ ಚಿಹ್ನೆಗಳು ಕಂಡುಬರುತ್ತವೆ. ನೀವು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಸೆಪ್ಟೆಂಬರ್ ನಂತರ, ನಿಮ್ಮ ಇತರ ಮಕ್ಕಳ ಆರೋಗ್ಯವು ಹದಗೆಡಬಹುದು, ಆದ್ದರಿಂದ ಅವರ ಮೇಲೆ ವಿಶೇಷ ಗಮನ ಹರಿಸಬೇಕಾಗುತ್ತದೆ.
ಪ್ಟೆಂಬರ್ ನಂತರ ನಿಮ್ಮ ಮಗು ಉನ್ನತ ಶಿಕ್ಷಣಕ್ಕಾಗಿ ಹೆಸರಾಂತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬಹುದು, ಈ ಕಾರಣದಿಂದಾಗಿ ನೀವು ತೃಪ್ತಿಯನ್ನು ಅನುಭವಿಸುವಿರಿ. ಒಟ್ಟಾರೆಯಾಗಿ, ಈ ವರ್ಷ ನಿಮ್ಮ ಮಕ್ಕಳಿಗೆ ಉತ್ತಮವಾಗಿರುತ್ತದೆ, ಆದರೆ ಅವರ ನಡವಳಿಕೆ ಮತ್ತು ಅವರ ಆರೋಗ್ಯದ ಬಗ್ಗೆ ನೀವು ವಿಶೇಷ ಗಮನ ಹರಿಸಬೇಕು.
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಪ್ರೀತಿ ಜೇವನ
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಪ್ರೀತಿಯ ಜೇವನಕ್ಕೆ ಸಾಕಷ್ಟು ಮಟ್ಟಿಗೆ ಅನುಕೂಲವಾಗಿ ಸಾಬೀತುಪಡಿಸುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ನಿಮ್ಮ ಸಂಗಾತಿಗೆ ನೀವು ಶ್ರದ್ಧೆ ಮತ್ತು ನಿಷ್ಠರಾಗಿರುತ್ತೀರಿ ಮತ್ತು ಅವರು ಹೇಳಿದ ವಿಷಯಗಳನ್ನು ಮತ್ತು ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೀರಿ.
ಸಂಬಂಧದ ಮಧ್ಯದಲ್ಲಿ ಅಹಂಕಾರ ಬರದಿರುವ ಹಾಗೆ ಗಮನ ಹರಿಸಬೇಕು ಏಕೆಂದರೆ ಅದು ಮುಖ್ಯವಾದ ಸ್ಥಳದಲ್ಲಿ ಪ್ರೀತಿ ಅಸ್ತಿತ್ವದಲ್ಲಿಲ್ಲ. ನೀವು ಇದನ್ನು ಮಾಡಲು ಸಮರ್ಥರಾದರೆ, ನಿಮ್ಮ ಪ್ರೀತಿಯಲ್ಲಿ ಪಾರದರ್ಶಕತೆ ಇರುತ್ತದೆ, ಅದು ನಿಮ್ಮ ಪ್ರಿಯತಮೆಗೆ ತುಂಬಾ ಇಷ್ಟವಾಗುತ್ತದೆ. 2020 ರ ಮಧ್ಯದಲ್ಲಿ, ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ಮುಂದುವರಿಯುತ್ತೀರಿ ಮತ್ತು ನಿಮ್ಮ ಜೀವನವು ಶಾಂತಿ, ಸಾಮರಸ್ಯ, ಪ್ರಣಯ ಇತ್ಯಾದಿಗಳನ್ನು ಒಳಗೊಂಡಿರುತ್ತದೆ ಮತ್ತು ಈ ಸಮಯದಲ್ಲಿ ನೀವು ಲೈಂಗಿಕತೆಯ ಭಾವನೆಯನ್ನು ಅನುಭವಿಸುವಿರಿ. ಈ ಸಮಯದಲ್ಲಿ ನೀವು ಪರಸ್ಪರರ ಬಗ್ಗೆ ತೀವ್ರ ಆಕರ್ಷಣೆಯನ್ನು ಅನುಭವಿಸುವಿರಿ. ಆದರೆ ನೆನಪಿನಲ್ಲಿಡಿ, ಯೋಗ್ಯವಾದ ನಡವಳಿಕೆಯನ್ನು ನಡೆಸುವುದು ಸಂಪೂರ್ಣವಾಗಿ ಸಮಂಜಸವಾಗಿದೆ.
ವರ್ಷದ ಈ ಸಮಯದಲ್ಲಿ, ನಿಮ್ಮ ಪ್ರೀತಿಪಾತ್ರರ, ವಿಶೇಷವಾಗಿ ಜೀವನದಲ್ಲಿ ನಿಮ್ಮ ಸಂಗಾತಿಯ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮನ್ನು ನೋಡಿಕೊಳ್ಳಿ.. ನಿಮ್ಮ ಪ್ರೀತಿಯ ಕಡೆಗೆ ನಿಮ್ಮನ್ನು ಸೆಳೆಯಲಾಗುವುದು ಮತ್ತು ನಿಮಗೆ ಅದ್ಭುತವಾದ ಶಾಂತಿ ಸಿಗುತ್ತದೆ. ಈ ವರ್ಷದ ಕೊನೆಯಲ್ಲಿ ನೀವು ನಿಮ್ಮ ಪ್ರೀತಿ ಜೇವನ ಮತ್ತು ಭವಿಷ್ಯದ ಬಗ್ಗೆ ಒಂದು ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅಗತ್ಯವಿದೆ. ನೀವು ಒಬ್ಬಂಟಿಯಾಗಿದ್ದರೆ ಯಾರಾದರೂ ನಿಮ್ಮ ಜೀವನದಲ್ಲಿ ನಾಕ್ ಮಾಡುತ್ತಾರೆ ಮತ್ತು ನೀವು ಹೊಸ ಸಂಬಂಧವನ್ನು ಪಡೆಯುತ್ತೀರಿ. ನೀವು ನಿಮ್ಮ ಸಂಬಂಧಕ್ಕೆ ಒಂದು ಹೊಸ ಸೃಜನಶೀಲತೆಯನ್ನು ನೀಡುತ್ತಿರಿ ಮತ್ತು ಅದನ್ನು ಬಲಪಡಿಸುತ್ತಿರಿ. ನೀವು ಮೊದಲಿನಿಂದಲೇ ಸಂಬಂಧದಲ್ಲಿ ಇದ್ದರೆ ನೀವು ನಿಮ್ಮ ಸಂಬಂಧದಲ್ಲಿ, ನಿಮ್ಮ ಸಂಬಂಧದಲ್ಲಿ ಸ್ಥಿರತೆಗೆ ಪ್ರಾಮುಖ್ಯತೆ ನೀಡುವ ಮೂಲಕ, ನಿಮ್ಮ ಸಂಗಾತಿಯ ಎಲ್ಲ ಕುಂದುಕೊರತೆಗಳನ್ನು ನಿವಾರಿಸುವ ಮೂಲಕ ನಿಮ್ಮ ಪ್ರೀತಿಯ ಜೀವನವನ್ನು ಸಿಹಿಗೊಳಿಸಲು ನಿಮಗೆ ಸಾಧ್ಯವಾಗುತ್ತದೆ.
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷದಲ್ಲಿ ಫೆಬ್ರವರಿ ತಿಂಗಳು ನಿಮಗೆ ಅತ್ಯುತ್ತಮವಾಗಲಿದೆ ಮತ್ತು ಈ ಸಮಯದಲ್ಲಿ ಪ್ರಣಯದ ಜೇವನವನ್ನು ಆನಂದಿಸುವಿರಿ. ನಿಮ್ಮ ಪ್ರೀತಿಪಾತ್ರರ ಬಗ್ಗೆ ನಿಮ್ಮ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ನೀವು ಪರಸ್ಪರ ಉಡುಗೊರೆಗಳನ್ನು ಸಹ ವಿನಿಮಯ ಮಾಡಿಕೊಳ್ಳುತ್ತೀರಿ. ಜೊತೆಯಲ್ಲಿ ಎಲ್ಲಾದರೂ ಸುತ್ತಾಡಲು ಹೋಗಲು ಸಹ ಯೋಜಿಸಬಹುದು. ಇದಲ್ಲದೆ ಜೂನ್, ಜೂಲೈ ಮತ್ತು ಸೆಪ್ಟೆಂಬರ್ ತಿಂಗಳು ಪ್ರೀತಿಯ ಜೇವನಕ್ಕಾಗಿ ಉತ್ತಮವಾಗಿ ಉಳಿಯುತ್ತವೆ.
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಅರೋಗ್ಯ
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮಆರೋಗ್ಯವು ಏರಿಳಿತಗಳಿಂದ ತುಂಬಿರುವ ಸಾಧ್ಯತೆ ಇದೆ. ಆದರೆ ಇದರ ಹೊರೆತಾಗಿಯೂ ಹೆಚ್ಚಿನ ಸಮಯ ನೀವು ಉತ್ತಮ ಆರೋಗ್ಯವನ್ನು ಆನಂದಿಸುವಿರಿ. ನೀವು ದೈಹಿಕ ಮತ್ತು ಮಾನಸಿಕ ಎರಡೂ ಕಡೆಯಿಂದ ಬಲಶಾಲಿಯಾಗಿರುತ್ತೀರಿ ಮತ್ತು ಶಕ್ತಿಯೊಂದಿಗೆ ಒಂದು ಉತ್ತಮ ಮತ್ತು ಆರೋಗ್ಯಕರ ಜೇವನವನ್ನು ಆನಂದಿಸುವಿರಿ. ನೀವು ಆಗಾಗ್ಗೆ ನರಗಳ ದೂರುಗಳನ್ನು ಪಡೆಯಬಹುದು, ಆದ್ದರಿಂದ ನಿಯತಕಾಲಿಕವಾಗಿ ವೈದ್ಯಕೀಯ ಸಲಹೆಯನ್ನು ಪಡೆಯಲು ಮರೆಯದಿರಿ ಇದರಿಂದ ನಿಮ್ಮ ಉತ್ತಮ ಆರೋಗ್ಯವನ್ನು ನೀವು ಆನಂದಿಸಬಹುದು.
ಕೆಲಸ ಮತ್ತು ವಿಶ್ರಾಂತಿ ನಡುವೆ ಸಮತೋಲನವನ್ನು ಸ್ಥಾಪಿಸಿ. ಈ ವರ್ಷದ ಆರಂಭವು ನಿಮ್ಮ ಆರೋಗ್ಯಕ್ಕೆ ಹೆಚ್ಚು ಶುಭವಾಗಿಲ್ಲ. ಎಂಟನೇ ಮನೆಯಲ್ಲಿರುವ ಗುರುವಿನ ಕಾರಣದಿಂದಾಗಿ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವಂತಹ ದೊಡ್ಡ ಕಾಯಿಲೆ ಸಂಭವಿಸಬಹುದು. ನೀವು ದೀರ್ಘಕಾಲದಿಂದ ಯಾವುದಾದರು ಕಾಯಿಲೆಯಿಂದ ಬಳಲುತ್ತಿದ್ದರೆ , ಈ ಸಮಯದಲ್ಲಿ ತುಂಬಾ ಜಾಗರೂಕರಾಗಿರಬೇಕು. ಮಾರ್ಚ್ ಇಂದ ಜೂನ್ ಮಧ್ಯೆ ಮಾರ್ಚ್ ನಿಂದ ಜೂನ್ ನಡುವೆ ಗುರು ಗುರುವನ್ನು ಬದಲಾಯಿಸಿದಾಗ, ಆ ಸಮಯವು ನಿಮ್ಮ ರೋಗಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಆ ಸಮಯದಲ್ಲಿ ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ಮಾನಸಿಕವಾಗಿ ನೀವು ಸಮತೋಲನದಲ್ಲಿರುತ್ತೀರಿ. ಈ ಸಮಯದಲ್ಲಿ ನಿಮ್ಮ ಆಹಾರ ಪದ್ಧತಿ ಮತ್ತು ದೈನಂದಿನ ಜೀವನಶೈಲಿ ಸಹ ಸುಧಾರಿಸುತ್ತದೆ.
ನೀವು ನಿಮ್ಮ ಮಾನಸಿಕ ಆಲೋಚನೆಗಳನ್ನು ನಿಯಂತ್ರಿಸಬೇಕು. ಏಕೆಂದರೆ ನಿಮ್ಮ ಮನಸ್ಥಿತಿ ಸ್ವಲ್ಪ ಕೆಟ್ಟದಾಗಿರಬಹುದು. ಕೆಳಸದ ನಡುವೆ ಸಮಯವನ್ನು ತೆಗೆದುಕೊಂಡು ಖಂಡಿತವಾಗಿಯೂ ನೀವು ವಿಶ್ರಾಂತಿ ಮಾಡಬೇಕು. ಏಕೆಂದರೆ ಈ ಆಯಾಸವು ದೈಹಿಕವಾಗಿ ನಿಮಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಸಮಯ ಇರುವಾಗಲೇ ಇದರಿಂದ ತಪ್ಪಿಸುವುದು ನಿಮಗೆ ಅಗತ್ಯವಾಗಿದೆ. ನೀವು ನರಗಳು ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದುವ ಸಾಧ್ಯತೆಯಿದೆ. ನಿಮ್ಮ ಆಹಾರ ಮತ್ತು ದಿನಚರಿಯ ಬಗ್ಗೆ ನೀವು ವಿಶೇಷ ಗಮನ ಹರಿಸಬೇಕು ಮತ್ತು ನಿಮ್ಮ ದೈಹಿಕ ಚಟುವಟಿಕೆಯನ್ನು ಬದಲಿಸುವ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು.
ನಿಮ್ಮ ಶಕ್ತಿಯನ್ನು ನೀವು ಬಹಳ ಎಚ್ಚರಿಕೆಯಿಂದ ಬಳಸಬೇಕು. ಏಕೆಂದರೆ ನೀವು ಅದನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಳಸಿದರೆ ಅದು ನಿಮಗೆ ಹಾನಿ ಮಾಡುತ್ತದೆ, ಆದರೆ ನಿಮಗೆ ಯಾವುದೇ ದೈಹಿಕ ತೊಂದರೆಗಳು ಉಂಟಾಗದಂತೆ ಮತ್ತು ಜೀವ ಶಕ್ತಿಯ ನಷ್ಟವಾಗದಂತೆ ಅದನ್ನು ಬುದ್ಧಿವಂತಿಕೆಯಿಂದ ಬಳಸಿ. ವರ್ಷದ ನಡುವೆ ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ನೀವು ತುಂಬಾ ಆಯಾಸಗೊಳ್ಳುತ್ತಿರಿ ಮತ್ತು ನೀವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಮಾನಸಿಕವಾಗಿ ಸಿದ್ಧರಾಗಿರಬೇಕು ಇದರಿಂದ ನೀವು ಈ ಸಮಯವನ್ನು ಚೆನ್ನಾಗಿ ಕಳೆಯಬಹುದು. ಈ ವರ್ಷವು ನಿಮಗಾಗಿ ಸಂಪೂರ್ಣವಾಗಿ ಇದೆ ಎಂದು ನಾವು ಉಹಿಸೋಣ, ನೀವು ಪ್ರತಿ ಕ್ಷೇತ್ರದಲ್ಲೂ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಬೇಕಾಗಿರುವುದರಿಂದ ಇದರ ಪರಿಣಾಮವಾಗಿ ನೀವು ಪಡೆಯುವ ಪ್ರತಿಯೊಂದು ಆನಂದವನ್ನು ನೀವು ಆನಂದಿಸಬಹುದು ಮತ್ತು ಅದು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ.
ವೃಷಭ ರಾಶಿ ಭವಿಷ್ಯ 2020 ರಲ್ಲಿ ಮಾಡಬೇಕಾದ ವಿಶೇಷ ಜ್ಯೋತಿಷ್ಯ ಪರಿಹಾರಗಳು
- ಈ ವರ್ಷ ಶುಕ್ರವಾರದ ದಿನ 11 ವರ್ಷಕ್ಕಿಂತ ಚಿಕ್ಕ ಹುಡುಗಿಯರಿಗೆ ಬಿಳಿ ಬಣ್ಣದ ತಿಂಡಿ, ಅಕ್ಕಿಯ ಪಾಯಸ, ಸಕ್ಕರೆ ಕಲ್ಲು ಅಥವಾ ಬತಾಷೆಯನ್ನು ತಿನ್ನಿಸಿ ಮತ್ತು ಅವರ ಕಾಲನ್ನು ಮುಟ್ಟಿ ಆರ್ಶಿರ್ವಾದ ತೆಗೆದುಕೊಳ್ಳಿ ಮತ್ತು ನಿಯಮಿತವಾಗಿ ಹಸುವಿಗೆ ಇಟ್ಟನ್ನು ತಿನ್ನಿಸಿ.
- ಇದಲ್ಲದೆ ನೀವು ಅನಂತ ಮೂಲ ಸಹ ಧರಿಸಬಹುದು, ಇದು ಬುಧದ ದೋಷಗಳನ್ನು ತೆಗೆದುಹಾಕಲು, ಹುಣ್ಣು, ಅಜೀರ್ಣ ಮತ್ತು ರಕ್ತ ಸಂಬಂಧಿತ ಅಸ್ವಸ್ಥತೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025