ಬುಧ ಸಂಚಾರ ಕರ್ಕ ರಾಶಿಯಲ್ಲಿ - Mercury Transit in Cancer in Kannada

ಎಲ್ಲಾ ಒಂಬತ್ತು ಗ್ರಹಗಳಲ್ಲಿ ಬುಧ ದೇವರಿಗೆ ಯುವರಾಜನ ಸ್ಥಾನವನ್ನು ಪಡೆದಿದ್ದಾರೆ. ಈ ಗ್ರಹವನ್ನು ಬುದ್ಹಿ, ಚರ್ಮ, ವ್ಯಾಪಾರ ಇತ್ಯಾದಿಯ ಅಂಶವೆಂದು ನಂಬಲಾಗಿದೆ. ಜಾತಕದಲ್ಲಿ ಇದು ಉತ್ತಮ ಸ್ಥಾನದಲ್ಲಿದ್ದರೆ ನಿಮ್ಮ ತಾರ್ಕಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಮತ್ತು ಗಣಿತದಂತಹ ವಿಷಯಗಳಲ್ಲಿ ನೀವು ಉತ್ತಮ ಪ್ರದರ್ಶನ ಮಾಡುತ್ತೀರಿ. ಈ ಬುಧನ ಸಂಚಾರವು 2 ಆಗಸ್ಟ್ ರಂದು 03:23 ಗಂಟೆಗೆ ಕರ್ಕ ರಾಶಿಯಲ್ಲಿರುತ್ತದೆ ಮತ್ತು 17 ಆಗಸ್ಟ್ 08:18 ವರೆಗೆ ಅದೇ ರಾಶಿಯಲ್ಲಿರುತ್ತದೆ.

ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜ್ಯೋತಿಷಿಯಿಂದ ಪ್ರಶ್ನೆ ಕೇಳಿ

ಬುಧ ಸಂಚಾರದಿಂದ ಎಲ್ಲ ರಾಶಿಚಕ್ರಗಳ ಮೇಲೆ ವಿವಿಧ ರೀತಿಯ ಪರಿಣಾಮ ಬೀರುತ್ತದೆ ಮತ್ತು ಇದು ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದು ವಿವರವಾಗಿ ತಿಳಿಯೋಣ

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

  1. ಮೇಷ ರಾಶಿ ಭವಿಷ್ಯ

ಬುಧ ಸಂಚಾರವು ಮೇಷ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಯಲ್ಲಿರುತ್ತದೆ. ಬುಧ ಗ್ರಹವನ್ನು ಧ್ವನಿ ಮತ್ತು ಬುದ್ಧಿಯ ಅಂಶವೆಂದು ಪರಿಗಣಿಸಲಾಗಿದೆ, ನಾಲ್ಕನೇ ಮನೆಯನ್ನು ತಾಯಿ, ಸಂತೋಷ ಇತ್ಯಾದಿಯ ಮೆನೆಯೆಂದು ಪರಿಗಣಿಸಲಾಗುತ್ತದೆ. ನಾಲ್ಕನೇ ಮನೆಯಲ್ಲಿ ಚಂದ್ರನ ಸಂಚಾರದಿಂದಾಗಿ ಉದ್ಯೋಗದಲ್ಲಿ ನೀವು ಯಶಸ್ಸು ಪಡೆಯಬಹುದು. ಹೊಸ ಉದ್ಯೋಗವನ್ನು ಹುಡುಕುತ್ತಿರುವವರು ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಆದಾಗ್ಯೂ ಯಾವುದೇ ಕಾರಣದಿಂದಾಗಿ ಈ ಸಂಚಾರದ ಸಮಯದಲ್ಲಿ ನಿಮ್ಮ ಮನಸ್ಸು ತೊಂದರೆಕ್ಕೊಳಗಾಗಬಹುದು. ನಿಮ್ಮ ಮನಸ್ಸಿನ ಶಾಂತಿಯನ್ನು ಪಡೆಯಲು ನೀವು ನಿಮ್ಮ ಯಾರಾದರು ಆಪ್ತರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ತಾಯಿಯ ಆರೋಗ್ಯದೊಂದಿಗೆ ನಿಮ್ಮ ಆರೋಗ್ಯದ ಬಗ್ಗೆಯೂ ಈ ಸಮಯದಲ್ಲಿ ಕಾಳಜಿ ವಹಿಸಬೇಕು. ಈ ಸಂಚಾರದ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರು ಸಹ ಪ್ರಯೋಜನವನ್ನು ಪಡೆಯುತ್ತಾರೆ. ಅವರು ಶಿಕ್ಷಣ ಅಥವಾ ವೃತ್ತಿಪರ ಕ್ಷೇತ್ರದಲ್ಲಿ ಸಾಧನವನ್ನು ಪಡೆಯಬಹುದು.

ಅನಗತ್ಯ ವೆಚ್ಚಗಳು ಈ ರಾಶಿಚಕ್ರದ ಸ್ಥಳೀಯರನ್ನು ಕಾಡಬಹುದು. ಆದ್ದರಿಂದ ಉತ್ತಮ ಯೋಜನೆಯನ್ನು ರಚಿಸಿ ಮುಂದುವರಿಯಬೇಕು. ಹಣಕಾಸಿನ ಉಳಿತಾಯಕ್ಕಾಗಿ ಸಲಹೆಯನ್ನು ಪಡೆದುಕೊಳ್ಳಬಹುದು. ಹಣಕಾಸಿನ ಉಳಿತಾಯದ ಬಗ್ಗೆ ತಾಯಿಯ ಸಲೆಹೆಯನ್ನು ಪಡೆಯಬಹುದು. ಮನೆಯ ಅಲಂಕಾರದ ಮೇಲೆ ಹಣಕಾಸು ಖರ್ಚಾಗಬಹುದು. ಆದರೆ ಈ ವೆಚ್ಚಗಳನ್ನು ವಿಷಾದಿಸುವುದಿಲ್ಲ.

ಈ ರಾಶಿಚಕ್ರದ ಜನರು ಬುಧ ಸಂಚಾರದ ಸಮಯದಲ್ಲಿ ಸೃಜನಶೀಲ ಕೆಲಸದಲ್ಲಿ ಯಶಸ್ಸು ಪಡೆಯಬಹುದು. ಪ್ರಕೃತಿಯೊಂದಿಗೆ ಸೇರಲು ಪ್ರಯತ್ನಿಸಿ ಇದರಿಂದ ನಿಮ್ಮ ಆಲೋಚನೆಗಳಲ್ಲಿ ಹೊಳಪು ಬರುತ್ತದೆ.

ಪರಿಹಾರ - ಬುಧವಾರದ ದಿನದಂದು ಅಗತ್ಯವಿರುವವರಿಗೆ ಆಹಾರದ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

  1. ವೃಷಭ ರಾಶಿ ಭವಿಷ್ಯ

ವೃಷಭ ರಾಶಿಚಕ್ರದ ಮೂರನೇ ಮನೆಯಲ್ಲಿ ಬುಧ ಗ್ರಹದ ಸಂಚಾರವಾಗುತ್ತದೆ. ಈ ಮನೆಯಿಂದ ನಿಮ್ಮ ಧೈರ್ಯ, ಪರಾಕ್ರಮ, ಲೇಖನ ಇತ್ಯಾದಿಗಳ ಬಗ್ಗೆ ಲೆಕ್ಕಹಾಕಲಾಗುತ್ತದೆ. ಈ ಮನೆಯಲ್ಲಿ ಬುಧ ಗ್ರಹದ ಸಂಚಾರವು ನಿಮಗೆ ಶುಭವೆಂದು ಸಾಬೀತುಪಡಿಸುತ್ತದೆ. ನೀವು ಆದಾಯದ ಹೊಸ ಮೂಲಗಳನ್ನು ಪಡೆಯುತ್ತೀರಿ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಯಾರಿಂದಾದರೂ ಸಾಲ ತೆಗೆದುಕೊಂಡಿದ್ದರೆ ಈ ಸಮಯದಲ್ಲಿ ಅದನ್ನು ಮರುಪಾವತಿಸಲು ಸಾಧ್ಯವಾಗುತ್ತದೆ.

ನೀವು ಗಾಯನ, ನಟನೆ ಅಥವಾ ನೃತ್ಯದಂತಹ ಕಲಾತ್ಮಕ ಕೆಲಸದಲ್ಲಿ ತೊಡಗಿದ್ದರೆ, ಈ ಕೆಲಸವನ್ನು ನೀವು ನಿಮ್ಮ ವೃತ್ತಿಪರದಲ್ಲಿ ಬದಲಾಯಿಸಬಹುದು. ನಿಮ್ಮ ಕಲಾತ್ಮಕ ಕೆಲಸಕ್ಕೆ ಪ್ರಶಂಸೆಯನ್ನು ಸಹ ಪಡೆಯುತ್ತೀರಿ. ಈ ಸಮಯದಲ್ಲಿ ಕುಟುಂಬದ ಜನರೊಂದಿಗೆ ನಿಮ್ಮ ಸಮತೋಲನ ಉತ್ತಮವಾಗಿರುತ್ತದೆ ಮತ್ತು ಕುಟುಂಬದ ಜನರು ಎಲ್ಲಾ ಕ್ಷೇತ್ರದಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಈ ಸಮಯದಲ್ಲಿ ಸೃಜನಶೀಲತೆಯ ಕಾರ್ಯಗಳಲ್ಲಿ ತೊಡಗಿರುತ್ತಾರೆ ಮತ್ತು ಇದರಿಂದ ನೀವು ನಿಮ್ಮ ಸಹಪಾಠಿಗಳ ಮೇಲೆ ಪರಿಣಾಮ ಬೀರುತ್ತಾರೆ.

ಬುಧ ಗ್ರಹವು ಸಂವಹನದ ಅಂಶವಾಗಿದೆ ಆದ್ದರಿಂದ ಇಂಟರ್ನೆಟ್, ಸಾಮಾಜಿಕ ಮಾಧ್ಯಮದ ಮೂಲಕ ನಿಮಗೆ ಲಾಭವಾಗುತ್ತದೆ. ಸಾಮಾಜಿಕ ಮಟ್ಟದಲ್ಲಿ ಕೂಡ ಈ ಸಮಯದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಹೊಸ ಜನರನ್ನು ಭೇಟಿಸುವುದು ಮತ್ತು ಅವರೊಂದಿಗೆ ಗಂಭೀರ ವಿಷಯಗಳ ಬಗೆ ಚರ್ಚಿಸುವುದನ್ನು ನೀವು ಇಷ್ಟಪಡುತ್ತೀರಿ.

ಪರಿಹಾರ - ಬುಧವಾರದ ದಿನದಂದು ಬ್ರಾಹ್ಮಣರಿಗೆ ಹಣ್ಣುಗಳ ದಾನ ಮಾಡಿದರೆ ಸಕಾರಾತ್ಮಕತೆ ಬರುತ್ತದೆ.


ಆಸ್ಟ್ರೋಸೇಜ್ ಬೃಹತ್ ಕುಂಡಲಿಯ ಮೂಲಕ ನಿಮ್ಮ ಜಾತಕದಲ್ಲಿನ ದೋಷ ಮತ್ತು ಯೋಗಗಳ ಬಗ್ಗೆ ತಿಳಿಯಿರಿ.
  1. ಮಿಥುನ ರಾಶಿ ಭವಿಷ್ಯ

ಬುದ್ಧಿಯ ಅಂಶವಾದ ಬುಧ ಗ್ರಹದ ಸಂಚಾರವು ಮಿಥುನ ರಾಶಿಚಕ್ರದಿಂದ ಮೂರನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯನ್ನು ಧ್ವನಿ, ಕುಟುಂಬ, ಕಲ್ಪನಾ ಶಕ್ತಿ ಇತ್ಯಾದಿಗಳ ಮನೆಯೆಂದು ಪರಿಗಣಿಸಲಾಗಿದೆ. ಬುಧನ ಸಂಚಾರದ ಈ ಸಮಯದಲ್ಲಿ ಉದ್ಯೋಗದೊಂದಿಗೆ ಆದಾಯದ ಉತ್ತಮ ಮೂಲಗಳನ್ನು ಸಹ ಪಡೆಯಬಹುದು. ಈ ಸಮಯದಲ್ಲಿ ಹಣಕಾಸು ಸಂಗ್ರಹಿಸುವ ಬಗ್ಗೆ ನೀವು ಆಲೋಚಿಸಬಹುದು ಮತ್ತು ಇದರಲ್ಲಿ ನೀವು ಯಶಸ್ವಿಯಾಗುತ್ತೀರಿ.

ಕುಟುಂಬದ ದೃಷ್ಟಿಯಿಂದಲೂ ಈ ಸಂಚಾರವು ಉತ್ತಮವಾಗಿದೆ ಮತ್ತು ನೀವು ಕುಟುಂಬದ ಸದಸ್ಯರೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ನಿಮ್ಮ ಕುಟುಂಬದಲ್ಲಿ ಸದಸ್ಯರ ಸಂಖ್ಯೆಯೇ ಹೆಚ್ಚಾಗಬಹುದು. ಈ ಸಮಯದಲ್ಲಿ ಕುಟುಂಬದ ಸದಸ್ಯರೊಬ್ಬರ ಮದುವೆ ಅಥವಾ ಯಾವುದೇ ಹೊಸ ಅತಿಥಿ ಬರುವ ಸಂಪೂರ್ಣ ಸಾಧ್ಯತೆ ಇದೆ.

ನಿಮ್ಮ ಧ್ವನಿಯಲ್ಲಿ ಮಾಧುರ್ಯ ಉಂಟಾಗುತ್ತದೆ. ಇದರಿಂದ ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ, ನಿಮ್ಮ ನಿರ್ಧಾರ ತೆಗೆದುಕೊಳಲಾಗುವ ಸಾಮರ್ಥ್ಯವು ಉತ್ತಮವಾಗಿರುತ್ತದೆ. ಇದರಿಂದ ಕಠಿಣ ಪರಿಷ್ಟಿತಿಯಿಂದಲೂ ನೀವು ತಪ್ಪಿಸಿಕೊಂಡು ಹೋಗಬಹುದು. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಪ್ರೇಮಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಸೃಜನಶೀಲತೆಯ ಸಾಮರ್ಥ್ಯದಿಂದ ನೀವು ನಿಮ್ಮ ಪ್ರೀತಿಪಾತ್ರರನ್ನು ನಿಮ್ಮ ಕಡೆಗೆ ಆಕರ್ಷಿಸಲು ಪ್ರಯತ್ನಿಸುತ್ತೀರಿ.

ಪರಿಹಾರ - ನಿಮ್ಮ ಅತ್ತೆ ಅಥವಾ ಚಿಕ್ಕಮ್ಮನಿಗೆ ಅವರು ಇಷ್ಟಪಡುವ ವಸ್ತುಗಳ ಉಡುಗೊರೆ ನೀಡಿ.

  1. ಕರ್ಕ ರಾಶಿ ಭವಿಷ್ಯ

ಬುಧ ಸಂಚಾರವು ಚಂದ್ರ ಸ್ವಾಮಿತ್ವದ ಕರ್ಕ ರಾಶಿಚಕ್ರದ ಸ್ಥಳೀಯರ ಲಗ್ನದ ಮನೆಯಲ್ಲಿ ಸಂಭವಿಸಲಿದೆ, ಈ ಮನೆಯ ಮೂಲಕ ನಿಮ್ಮ ಚಿತ್ರ, ಸ್ವಭಾವ, ವ್ಯಕ್ತಿತ್ವ ಮತ್ತು ಆತ್ಮದ ಬಗ್ಗೆ ತಿಳಿಯುತ್ತದೆ. ಬುಧ ಸಂಚಾರವು ನಿಮಗೆ ಸವಾಲುಗಳಿಂದ ತುಂಬಿರಬಹುದು. ನಿಮ್ಮ ಕೆಲಸ ಮಾಡುವ ರೀತಿಯನ್ನು ಸುಧಾರಿಸುವ ಅಗತ್ಯವಿದೆ. ಯಾವುದೇ ಕೆಲಸವನ್ನು ಮುಂದೂಡಿಸಿದರೆ ಮುಂಬರುವ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಈ ರಾಶಿಚಕ್ರದ ವ್ಯಾಪಾರಷ್ಟರಾಗಲಿ ಅಥವಾ ಉದ್ಯೋಗದಲ್ಲಿರುವ ಶತಾಳೀಯರಾಗಲಿ, ಅವರು ತಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚು ಕಠಿಣ ಪರಿಶ್ರಮ ಮಾಡುವ ಅಗತ್ಯವಿದೆ. ನಿಮ್ಮ ಯಾವುದೇ ಪರಿಸ್ಥಿತಿ ಅಥವಾ ಯಾವುದೇ ವ್ಯಕ್ತಿಯ ಕಾರಣದಿಂದ ನಿಮ್ಮ ಕೆಲಸದ ಸ್ಥಳದಲ್ಲಿ ಬಿಕ್ಕಟ್ಟುಗಳು ಬರುತ್ತಿವೆ ಎಂದು ನಿಮಗೆ ಅನಿಸಿದರೆ, ಶೀಘ್ರದಲ್ಲೇ ಅದರಿಂದ ದೂರವಾಗಿ. ಅದೇ ಸಮಯದಲ್ಲಿ ಮತ್ತೊಂದೆಡೆ, ವಿದ್ಯಾರ್ಥಿಗಳು ಕೂಡ ಅಧ್ಯಯನ ಮಾಡುವ ಸಮಯದಲ್ಲಿ ಏಕಾಗ್ರತೆಯ ಕೊರತೆಯನ್ನು ಅನುಭವಿಸಬಹುದು. ಆರ್ಥಿಕ ಭಾಗದ ಮೇಲೆ ದೃಷ್ಟಿ ಹಾಕಿದರೆ, ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ. ವಿವಾಹಿತರಾಗಿದ್ದರೆ, ನಿಮ್ಮ ಜೀವನ ಸಂಗಾತಿಯ ಜೊತೆಯಲ್ಲಿ ಉಳಿತಾಯದ ಬಗ್ಗೆ ಮಾತನಾಡಬಹುದು. ಯೋಜನೆಯನ್ನು ರಚಿಸಿ ಮತ್ತು ಅದರ ಲೆಕ್ಕಾಚಾರದಿಂದ ಖರ್ಚಿಸಿ.

ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಚಿಂತೆಕ್ಕೊಳಗಾಗಬಹುದು.ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉಸಿರಿಗೆ ಸಂಬಂಧಿಸಿದ ಸಮಸ್ಯೆಯಾಗಬಹುದು. ಅತಿಯಾದ ಶೀತದ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಿ. ನೀವು ಸಮತೋಲಿತ ದಿನಚರಿಯನ್ನು ಅಳವಡಿಸಿಕೊಂಡರೆ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.

ಪರಿಹಾರ - ಬುಧ ಗ್ರಹದ ಹಾನಿಕಾರಕ ಪರಿಣಾಮಗಳನ್ನು ದೂರ ಮಾಡಲು ಹಸುವಿನ ಸೇವೆ ಮಾಡಿ.

  1. ಸಿಂಹ ರಾಶಿ ಭವಿಷ್ಯ

ಸಿಂಹ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿ ಬುಧ ಗ್ರಹವು ಸಂಚರಿಸುತ್ತಿದೆ. ಈ ಮನೆಯ ಮೂಲಕ ಹಾನಿ, ವೆಚ್ಚ, ಶಿಕ್ಷೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಸಂಚಾರವು ಸಿಂಹ ರಾಶಿಹಚಕ್ರದ ಸ್ಥಳೀಯರ ಜೀವನದಲ್ಲಿ ಸಮಸ್ಯೆಗಳನ್ನು ತರಬಹುದು. ಈ ಸಮಯದಲ್ಲಿ ನೀವು ಮಾನಸಿಕವಾಗಿ ಬಲಪಡಿಸಲು ಉತ್ತಮ ಜನರ ಸಹವಾಸದಲ್ಲಿರಬೇಕು ಮತ್ತು ಸ್ಫೂರ್ತಿದಾಯಕ ಪುಸ್ತಕಗಳನ್ನು ಓದಬೇಕು.

ಬುಧನ ಸಂಚಾರದ ಕಾರಣದಿಂದಾಗಿ ನಿಮ್ಮ ಆಲೋಚನೆಗಳು ತಪ್ಪಾದ ದಿಕ್ಕಿನಲ್ಲಿ ಹೋಗಬಹುದು ಮತ್ತು ನಿಮ್ಮಲ್ಲಿ ನಕಾರಾತ್ಮಕತೆಯನ್ನು ಕಾಣಬಹುದು. ಆರ್ಥಿಕ ಭಾಗದ ಬಗ್ಗೆ ಮಾತನಾಡಿದರೆ, ಅದರಲ್ಲೂ ಬಿಕ್ಕಟ್ಟುಗಳು ಉಂಟಾಗುತ್ತವೆ, ನೀವು ಬಯಸಿದರು ಅನಗತ್ಯ ವೆಚ್ಚಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಕುತುಮ್ಬದ ಸದಸ್ಯರ ಸಹಾಯವನ್ನು ಪಡೆಯಬೇಕು, ಅವರ ಸಲಹೆ ನಿಮಗೆ ಸಹಾಯಕರವೆಂದು ಸಾಬೀತುಪಡಿಸಬಹುದು.

ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಕೆಲವು ಜನರ ಕುಟುಂಬ ಜೀವನಲ್ಲಿ ಸಮಸ್ಯೆಗಳು ಉಂಟಾಗಬಹುದು. ನೀವು ಸಮತೋಲನ ನಡವಳಿಕೆಯನ್ನು ಹೊಂದಿರಬೇಕು ಮತ್ತು ಮನೆಯ ಎಲ್ಲಾ ಸದಸ್ಯರ ಮಾತುಗಳನ್ನು ಕೇಳಿ ಸಾಮರಸ್ಯವನ್ನು ಉಳಿಸಲು ಪ್ರಯತ್ನಿಸಬೇಕು. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಉತ್ತಮವಾಗಿರುತ್ತದೆ. ನೀವು ವಿದೇಶದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಈ ಸಂಚಾರದ ಸಮಯದಲ್ಲಿ ನೀವು ಉನ್ನತ ಸ್ಥಾನವನ್ನು ಪಡೆಯಬಹುದು.

ಆರೋಗ್ಯದ ಬಗ್ಗೆ ಈ ರಾಶಿಹಚಕ್ರದ ಜನರು ಸ್ವಲ್ಪ ಜಾಗರೂಕರಾಗಿರಬೇಕು. ಎಲರ್ಜಿಯ ಸಮಸ್ಯೆ ಉಂಟಾಗಬಹುದು. ನೀವು ಮೊದಲಿನಿಂದಲೇ ಈ ಸಮಸ್ಯೆಯನ್ನು ಹೊಂದಿದ್ದರೆ, ಈ ಸಂಚಾರದ ಸಮಯದಲ್ಲಿ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

ಪರಿಹಾರ - ವಿಷ್ಣು ಸಹಸ್ತ್ರನಾಮವನ್ನು ಪಠಿಸುವುದು ನಿಮಗೆ ಶುಭಕರ.


ಕೋಗ್ನಿ ಆಸ್ಟ್ರೋ ರಿಪೋರ್ಟ್ ಮೂಲಕ ನಿಮ್ಮ ವೃತ್ತಿಜೀವನದಲ್ಲಿ ಬರುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ.
  1. ಕನ್ಯಾ ರಾಶಿ ಭವಿಷ್ಯ

ಬುಧ ಸಂಚಾರವು ಕನ್ಯಾ ರಾಶಿಚಕ್ರದ ಹನ್ನೊಂದನೇ ಮನೆಯಲ್ಲಾಗುತ್ತಿದೆ. ಇದನ್ನು ಲಾಭದ ಮನೆಯೇನು ಕರೆಯಲಾಗುತ್ತದೆ ಮತ್ತು ಇದರ ಮೂಲಕ ನಿಮ್ಮ ಆಸೆಗಳು, ಸ್ನೇಹಿತರು, ಹಿರಿಯ ಸಹೋದರ ಸಹೋದರಿಯರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚಾರವು ತುಂಬಾ ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದು ಲಾಭದ ಮನೆ ಮತ್ತು ಬುಧವನ್ನು ವ್ಯಾಪಾರ, ಆರ್ಥಿಕ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ, ಆದ್ದರಿಂದ ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ವ್ಯಾಪಾರಸ್ಥರಿಗೆ ಅದ್ಭುತ ಲಾಭವಾಗಬಹುದು. ಯಾವುದೇ ಕಾರಣದಿಂದಾಗಿ ನಿಮ್ಮ ಯಾವುದೇ ಕೆಲಸವೂ ಸಿಲುಕಿಕೊಂಡಿದ್ದರೆ, ಅದು ಕೂಡ ಈ ಸಮಯದಲ್ಲಿ ಪೂರ್ಣಗೊಳ್ಳಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ರಾಶಿಚಕ್ರದ ಉದ್ಯೋಗದಲ್ಲಿರುವ ಜನರ ಬಗ್ಗೆ ಮಾತನಾಡಿದರೆ, ಅವರು ತಮ್ಮ ಕೆಲಸದ ಸ್ಥಳದಲ್ಲಿ ಯಶಸ್ಸು ಪಡಯುತ್ತಾರೆ. ನೀವು ಯಾರಿಗಾದರೂ ಸಾಲ ನೀಡಿದ್ದರೆ. ಈ ಸಮಯದಲ್ಲಿ ಅದನ್ನು ಸಹ ಮರಳಿ ಪಡೆಯಬಹುದು.

ನಿಮ್ಮ ಬಯಕೆಗಳನ್ನು ಈಡೇರಿಸಲು ನೀವು ಈ ಸಮಯದಲ್ಲಿ ಸಂಪೂರ್ಣವಾಗಿ ಪ್ರಯತ್ನಿಸುತ್ತೀರಿ ಮತ್ತು ಯಶಸ್ಸು ಪಡೆಯುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ತಮ್ಮ ಹಿರಿಯ ಸಹೋದರ ಸಹೋದರಿಯರ ಬೆಂಬಲವನ್ನು ಪಡೆಯುತ್ತಾರೆ ಮತ್ತು ಕುಟುಂಬ ಪರಿಸ್ಥಿತಿಯು ಸಹ ಸುಧಾರಿಸುತ್ತದೆ. ಈ ರಾಶಿಚಕ್ರದ ಆರೋಗ್ಯದಲ್ಲೂ ಈ ಸಮಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಲಾಗುತ್ತದೆ, ದೀರ್ಘಕಾಲದಿಂದ ಯಾವುದೇ ರೋಗದಿಂದ ಬಳಲುತ್ತಿದ್ದರೆ , ಅದರಲ್ಲಿ ಕೂಡ ಈ ಸಮಯಲ್ಲಿ ಆರಾಮವನ್ನು ಪಡೆಯಬಹುದು.

ಸಾಮಾಜಿಕ ಜೀವನದಲ್ಲಿ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ಹಳೆಯ ಸ್ನೇಹಿತರೊಬ್ಬರನ್ನು ಭೇಟಿ ಮಾಡಬಹುದು. ಒಟ್ಟಾರೆಯಾಗಿ ಹೇಳಿದರೆ ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹದ ಈ ಸಂಚಾರವು ಅನೇಕ ಸಾಧ್ಯತೆಗಳನ್ನು ತರುತ್ತದೆ.

ಪರಿಹಾರ - ಬುಧವಾರದಂದು ದೇವಾಲಯದಲ್ಲಿ ಕರ್ಪುರದ ದಾನ ಮಾಡಿದರೆ ನಿಮಗೆ ಲಾಭವಾಗುತ್ತದೆ.

  1. ತುಲಾ ರಾಶಿ ಭವಿಷ್ಯ

ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚಾರವು ಹತ್ತನೇ ಮನೆಯಲ್ಲಾಗಲಿದೆ. ಈ ಮನೆಯಿಂದ ನಿಮ್ಮ ಕರ್ಮ , ಕೆಲಸದ ಸ್ಥಳ, ವ್ಯಾಪಾರ, ನಾಯಕತ್ವದ ಸಾಮರ್ಥ್ಯ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ.

ನಿಮ್ಮ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಮಾಲೀಕ ಬುಧ ಗ್ರಹವು ಹತ್ತನೇ ಮನೆಯಲ್ಲಿ ಕುಳಿತಿರುತ್ತದೆ, ಆದ್ದರಿಂದ ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ನಾಯಕತ್ವದ ಸಾಮರ್ಥ್ಯವು ಸಹ ಈ ಸಮಯದಲ್ಲಿ ಹೇಹಾಗುತ್ತದೆ. ಈ ಕಾರಣದಿಂದ ಕೆಲಸದ ಸ್ಥಳದಲ್ಲಿ ನಿಮಗೆ ಯಾವುದೇ ಪ್ರಮುಖ ಜವಾಬ್ದಾರಿಯನ್ನು ನೀಡಬಹುದು, ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲವು ಸ್ಥಳೀಯರು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ.

ಈ ರಾಶಿಚಕ್ರದ ವ್ಯಾಪಾರಸ್ಥರು ಈ ಸಮಯದಲ್ಲಿ ತಮ್ಮ ಆಲೋಚನೆಗಳಿಗೆ ನಿಜವಾದ ಆಕಾರವನ್ನು ನೀಡಲು ಮುಂದುವರಿಯುತ್ತಾರೆ. ಹೊಸ ವ್ಯಾಪಾರವನ್ನು ಆರಂಭಿಸಲು ಇದು ಉತ್ತಮ ಸಮಯ. ಈ ರಾಶಿಚಕ್ರದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ತಮ್ಮ ಉದ್ದೇಶಗಳನ್ನು ಪೂರ್ಣಗೊಳಿಸಲು ನೀವು ದೃಢ ನಿಶ್ಚಯದಿಂದ ಇರುತ್ತೀರಿ. ನೀವು ಜನರೊಂದಿಗೆ ಮಾತನಾಡುವುದಕ್ಕಿಂತ ಹೆಚ್ಚು ಪುಸ್ತಕಗಳ ಮಧ್ಯೆ ಸಮಯ ಕಳೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಜನರು ಸಹ ಈ ಸಮಯದಲ್ಲಿ ಸಂಪೂರ್ಣ ಲಾಭ ಪಡೆಯುವ ಸಾಧ್ಯತೆ ಇದೆ.

ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಸಮಯ ಉತ್ತಮವಾಗಿದೆ. ಯಾವುದೇ ವಿಷಯದ ಬಗ್ಗೆ ತಂದೆಯೊಂದಿಗೆ ನಡೆಯುತ್ತಿದ್ದ ವಿರೋಧಾಭಾಸವು ಈ ಸಮಯದಲ್ಲಿ ಕೊನೆಗೊಳ್ಳಬಹುದು. ಕುಟುಂಬದ ಸದಸ್ಯರೊಂದಿಗೆ ಸೇರಿ ಹಣಕಾಸಿನ ಸರಿಯಾದ ನಿರ್ವಹಣೆಯ ಬಗ್ಗೆ ಮಾತನಾಡಬಹುದು. ಆರೋಗ್ಯವನ್ನು ಸುಧಾರಿಸಲು ನಿಮ್ಮ ದೇಹವನ್ನು ಸಕ್ರಿಯವಾಗಿರಿಸಿಕೊಳ್ಳಿ.

ಪರಿಹಾರ - ನಿಮ್ಮ ತಂಗಿ, ಅತ್ತೆ ಅಥವಾ ಚಿಕ್ಕಮ್ಮನಿಗೆ ಬುಧವಾರದ ದಿನದಂದು ಉಡುಗೊರೆಯನ್ನು ನೀಡಿದರೆ ಜೀವನಲ್ಲಿ ಸ್ಥಿರತೆ ಬರುತ್ತದೆ.

  1. ವೃಶ್ಚಿಕ ರಾಶಿ ಭವಿಷ್ಯ

ಬುದ್ಹಿಯ ದೇವರೆಂದು ಹೇಳಲಾಗುವ ಬುಧ ದೇವರ ಸಂಚಾರವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಯಲ್ಲಾಗುತ್ತದೆ. ಈ ಮನೆಯ ಮೂಲಕ ಅದೃಷ್ಟ, ಧರ್ಮ, ಚಿತ್ರ, ದೊರಸ್ಥ ಪ್ರಯಾಣ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ನಿಮ್ಮ ಒಂಬತ್ತನೇ ಮನೆಯಲ್ಲಿ ಬುಧ ಸಂಚಾರವು ತುಂಬಾ ಉತ್ತಮವೆಂದು ಹೇಳಲಾಗುವುದಿಲ್ಲ.

ನಿಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಈ ಸಮಯದಲ್ಲಿ ನೀವು ಸರಾಸರಿಗಿಂತ ಹೆಚ್ಚು ಕಠಿಣ ಪರಿಶ್ರಮವನ್ನು ಮಾಡಬೇಕಾಗುತ್ತದೆ. ನಿಮ್ಮ ಗಮನವನ್ನು ಅಲೆದಾಡದಂತೆ ಮಾಡಲು ನೀವು ಪ್ರಯತ್ನಗಳನ್ನು ಮಾಡಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಬೇಕು. ಅವರು ಯಾವುದೇ ದೀರ್ಘಕಾಲದ ರೋಗವನ್ನು ಹೊಂದಿದ್ದರೆ, ಕಾಲ ಕಾಲಕ್ಕೆ ವೈದ್ಯರನ್ನು ಸಂಪರ್ಕಿಸಬೇಕು.

ಉದ್ಯೋಗದಲ್ಲಿರುವ ಸ್ಥಳೀಯರಿಗೆ ಈ ಸಂಚಾರವು ಅನುಕೂಲಕರವಾಗಿರಬಹುದು. ಆದಾಯದ ಹೊಸ ಮೂಲಗಳನ್ನು ಪಡೆಯಬಹುದು ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲವು ಜನರು ಉತ್ತಮ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ. ಆದಾಗ್ಯೂ ಪ್ರಯಾಣಗಳ ದೃಷ್ಟಿಯಿಂದ ಬುಧ ಸಂಚಾರವು ಉತ್ತಮವಲ್ಲ. ಆದ್ದರಿಂದ ಈ ಸಮಯದಲ್ಲಿ ಪ್ರಯಾಣಗಳನ್ನು ಮಾಡದೆ ಇರುವುದು ಉತ್ತಮ.

ಈ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಗುರುಗಳೊಂದಿಗೆ ವ್ಯತ್ಯಾಸವನ್ನು ಹೊಂದಿರಬಹುದು. ಹೇಗಾದರೂ, ಯಾವುದೇ ಪರಿಸ್ಥಿತಿಯಲ್ಲಿ ನೀವು ಅವರನ್ನು ಅವಮಾನಿಸುತ್ತಿದ್ದೀರಿ ಎಂದು ನಿಮ್ಮ ಗುರುಗಳು ಅನಿಸುವಂತಹ ನಡವಳಿಕೆಯನ್ನು ತಪ್ಪಿಸಬೇಕು.

ಪರಿಹಾರ - ಬುಧವಾರದಂದು ಪಕ್ಷಿಗಳ ಜೋಡಿಯನ್ನು ಮುಕ್ತಗೊಳಿಸಿ.

  1. ಧನು ರಾಶಿ ಭವಿಷ್ಯ

ಧನು ರಹಿಚಕಡ್ ಸ್ಥಳೀಯರ ಎಂಟನೇ ಮನೆಯಲ್ಲಿ ಬಹ ಸಂಚರಿಸುತ್ತಿದ್ದಾರೆ. ಎಂಟನೇ ಮನೆಯನ್ನು ವಯಸ್ಸು, ಜೀವನದಲಿ ಬರಲಾಗುವ ಸಮಸ್ಯೆಗಳು, ಅಡೆತಡೆಗಳು, ಪೂರ್ವಜರ ಆಸ್ತಿ ಇತ್ಯಾದಿಗಳ ಬಗ್ಗೆ ಪರಿಗಣಿಯಲಾಗುತ್ತದೆ. ಬುಧ ಸಂಚಾರವು ಧನು ರಾಶಿಚಕ್ರದ ಶಾಲೀಯರಿಗೆ ಶುಭವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಸಮಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣವನ್ನು ಗಳಿಸುವ ಸಾಮರ್ಥ್ಯವು ಹೆಚ್ಚಾಗುತ್ತದೆ. ನೀವು ರಾಜಕೀಯ ಅಥವಾ ಜನರೊಂದಿಗೆ ಸಂಬಂಧವನ್ನು ಹೊಂದುವಂತಹ ಯಾವುದೇ ಕೆಲಸದಲ್ಲಿ ತೊಡಗಿದ್ದರೆ, ಈ ಸಾಗಣೆಯು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಮಾತುಗಳಿಂದ ಜನರು ಮಂತ್ರಮುಗ್ದರಾಗಬಹುದು. ನಿಮ್ಮ ಜೇವನದಲ್ಲಿ ಯಾವುದೇ ರೀತಿಯ ಅಡಚಣೆಗಳಿದ್ದರೆ, ಆ ಕಾರಣದಿಂದಾಗಿ ನೀವು ಮುಂದುವರಿಯಲು ಸಾಧ್ಯವಾಗಿಲ್ಲವಾದರೆ, ಈ ಸಮಯದಲ್ಲಿ ಆ ನಿರ್ಬಂಧವನ್ನು ಷ ನಿವಾರಿಸಬಹುದು.

ಕುಟುಂಬ ಜೀವನದಲ್ಲಿ ಸಮಸ್ಯೆ ಇರುತ್ತದೆ, ಆದರೆ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ನೀವು ತೊಂದರೆಕ್ಕೊಳಗಾಗಬಹುದು. ಅವರ ಬಗ್ಗೆ ಕಾಳಜಿ ವಹಿಸಿದರೆ ಪರಿಸ್ಥಿತಿಗಳು ನಿಧಾನವಾಗಿ ಸುಧಾರಿಸುತ್ತವೆ. ಈ ರಾಶಿಚಕ್ರದ ವಿವಾಹಿತ ಜನರು ಈ ಸಮಯದಲ್ಲಿ ತಮ್ಮ ಅತ್ತೆಮನೆಯ ಸದಸ್ಯರಿಂದ ಸಹಾಯವನ್ನು ಪಡೆಯಬಹುದು.

ಈ ರಾಶಿಚಕ್ರದ ವಿದ್ಯಾರ್ಥಿಗಳಿಗೂ ಈ ಸಂಚಾರವು ಉತ್ತಮವಾಗಿರುತ್ತದೆ. ನೀವು ಯಾವುದೇ ಹೊಸ ವಿಷಯವನ್ನು ಕಲಿಯಲು ಬಯಸಿದರೆ, ಈ ಸಮಯವೂ ನಿಮಗೆ ಅನುಕೂಲವಾಗಿರುತ್ತದೆ. ಈ ರಾಶಿಚಕ್ರದ ಸ್ಥಳೀಯರು ಅತಿಯಾದ ಲಾಭವನ್ನು ಸಮಪಡಿಸುವುದನ್ನು ತಪ್ಪಿಸಬೇಕು.

ಪರಿಹಾರ - ಬುಧವಾರದಂದು ನಪುಂಸಕರಿಗೆ ದಾನ ಮಾಡಿ.

  1. ಮಕರ ರಾಶಿ ಭವಿಷ್ಯ

ಬುಧ ಸಂಚಾರವು ಮಕರ ರಾಶಿಚಕ್ರದ ಸ್ಥಳೀಯರ ಏಳನೇ ಮನೆಯಲ್ಲಾಗುತ್ತದೆ. ಇದು ಪಾಲುದಾರಿಕೆ, ಜೀವನ ಸಂಗಾತಿ ಇತ್ಯಾದಿಗಳ ಮನೆಯಾಗಿದೆ.ಈ ಮನೆಯಲ್ಲಿ ಬುಧನ ಸಂಚಾರವು ಪ್ರೀತಿ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದ.ಯಾವುದೇ ವಿಷಯದ ಬಗ್ಗೆ ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ವಿರೋಧಾಭಾಸವು ಉಂಟಾಗಬಹುದು. ಹೇಗಾದರೂ, ಅಂತಹ ಸಮಯದಲ್ಲಿ ನೀವು ಪರಸ್ಪರ ಸಲಹೆಯನ್ನು ಪಡೆಕೊಂಡ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕು ನೀವು ಈ ವಿಷಯವನ್ನು ಇನ್ನೊಬ್ಬರಿಗೆ ಹೇಳಿದರೆ ಸಮೀಕರಣವು ಇನ್ನಷ್ಟು ಹದಗೆಡಬಹುದು.ಇದರೊಂದಿಗೆ ಅನಗತ್ಯ ವಿಡಂಬನೆಯ ಅಭ್ಯಾಸವನ್ನು ಸಹ ನೀವು ಸುಧಾರಿಸಬೇಕಾಗಿದೆ.

ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಹೆಚ್ಚು ಯೋಚಿಸವುದನ್ನು ತಪ್ಪಿಸಬೇಕು, ಈ ಸಮಯದಲ್ಲಿ ಸಣ್ಣ ಪುಟ್ಟ ವಿಷಯಗಳ ಬಗ್ಗೆ ನ್ಯೂನತೆ ತೇಗುವುದನ್ನು ಕಾಣಲಾಗುತ್ತದೆ. ಈ ಕಾರಣದಿಂದಾಗಿ ವ್ಯಾಪಾರದಲ್ಲಿ ಬಾನಿಯಾಗಬಹುದು. ಇದಲ್ಲದೆ ಸಣ್ಣ ಪುಟ್ಟ ಪ್ರವಾಸಗಳ ಮೂಲಕ ಈ ರಾಶಿಚಕ್ರದ ಸ್ಥಳೀಯರಿಗೆಲಾಭವಾಗುವ ಸಾಧ್ಯತೆ ಇದೆ. ಸಾಮಾಜಿಕ ಜೀವನದಲ್ಲಿಮಕರ ರಾಶಿಚಕ್ರದ ಸ್ಥಲೇಯರು ಈ ಸಮಯದಲ್ಲಿ ಜಾಗರೂಕರಾಗಿರುವ ಅಗತ್ಯವಿದೆ. ಏಕೆಂದರೆ ನಿಮ್ಮ ಕಠೋರ ಧ್ವನಿಯು ಇತರರನ್ನು ನೋಯಿಸಬಹುದು.. ಇದರ ನಂತರ ನೀವು ಸಹ ಕೆಟ್ಟದನ್ನು ಅನುಭವಿಸಬಹುದು. ನೀವು ನಿಮ್ಮ ನಡವಳಿಕೆಯಲ್ಲಿ ಎಷ್ಟು ಸಾಮಾನ್ಯವಾಗಿರುತ್ತಿರೋ ಅಷ್ಟೇ ನಿಮಗೆ ಉತ್ತಮವಾಗಿರುತ್ತದೆ.

ಪರಿಹಾರ - ಬುಧವಾರದ ದಿನದಂದು ಹಸಿರು ಹೆಸರು ಬೇಳೆಯ ದಾನ ಮಾಡಿ.

  1. ಕುಂಭ ರಾಶಿ ಭವಿಷ್ಯ

ಕುಂಭ ರಾಶಿಚಕ್ರದ ಸ್ಥಳೀಯರ ಆರನೇ ಮನೆಯಲ್ಲಿ ಬುಧ ಗ್ರಹದ ಸಂಚಾರವಾಗುತ್ತದೆ. ಈ ಮನೆಯ ಮೂಲಕ ನಾವು ಋಣ, ರೋಗ, ವಿವಾದ,ಅತ್ತೆ ಮಾವ, ಶತ್ರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗತ್ತದೆ. ಕುಂಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚಾರವು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ನೀವು ಲಾಭವನ್ನು ಪಡೆಯಬಹುದು. ಆದಾಯದ ಬಗ್ಗೆ ನೀವು ತೊಂದರೆಗೀಡಾಗಿದ್ದರೆ, ಈ ಸಮಯದಲ್ಲಿ ಅದರಲ್ಲಿ ಸಹ ಪ್ರಯೋಜನವಾಗಬಹುದು. ಹಣವನ್ನು ಹಣವನ್ನು ಗಳಿಸುವ ಹೊಸ ಮೂಲಗಳ ಬಗ್ಗೆ ಈ ಸಮಯದಲ್ಲಿ ನಿಯಂಗೆ ತಿಳಿಯುತ್ತದೆ.

ಅದೇ ಸಮಯದಲ್ಲಿ ಮತ್ತೊಂದೆಡೆ, ಈ ಸಮಯದಲ್ಲಿ ನಿಮ್ಮ ಪ್ರೀತಿಪರರು ಅಥವಾ ಯಾವುದೇ ಆಪ್ತರ ಮೂಲಕ ಇದ್ದಕ್ಕಿದ್ದಂತೆ ನೀವು ಉಡುಗೊರೆಯನ್ನು ಪಡೆಯಬಹುದು. ಉದ್ಯೋಗದಲ್ಲಿರುವ ಸ್ಥಳೀಯರ ಬಗ್ಗೆ ಮಾತನಾಡಿದರೆ, ನೀವು ಯಾವುದೇ ಉನ್ನತ ಹುದ್ದೆಯಲ್ಲಿದ್ದರೆ, ನಿಮ್ಮ ಸಹೋದ್ಯೋಗಿಗಳು ಈ ಸಮಯದಲ್ಲಿ ನಿಮ್ಮ ವರ್ತನೆಯಿಂದ ಸಂತೋಷಪಡುತ್ತಾರೆ ಮಾತು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳ ಮೇ ಸಹ ಪ್ರಾಬಲ್ಯ ಸಾಧಿಸುವಿರಿ.ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ತಾಯಿಯ ಕಡೆಯವರಿಂದ ಬೆಂಬಲದೊಂದಿಗೆ ನಿಯಂಗೆ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ.ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಉತ್ತಮ ಭಕ್ಷ್ಯಗಳನ್ನು ತಿನ್ನಲು ಅವಕಾಶಗಳನ್ನು ಪಡೆಯುತ್ತಾರೆ . ಮಕ್ಕಳನ್ನು ಹೊಂದಿರುವ ಜನರು ಈ ಸಮಯದಲ್ಲಿ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರ ಆರೋಗ್ಯವು ದುರ್ಬಲವಾಗುವ ಸಾಧ್ಯತೆ ಇದೆ.

ಪರಿಹಾರ - ಬುಧವಾರದ ದಿನದಂದು ಹಸುವಿಗೆ ಹಸಿರು ಮೇವನ್ನು ತಿನ್ನಿಸಿ.

  1. ಮೀನಾ ರಾಶಿ ಭವಿಷ್ಯ

ಬುಧ ಸಂಚಾರವು ಮಕರ ರಾಶಿಚಕ್ರದ ಐದನೇ ಮನೆಯಲ್ಲಾಗುತ್ತಿದೆ. ಐದನೇ ಮನೆಯ ಮೂಲಕ ನಿಮ್ಮ ಮಕ್ಕಳು, ಶಿಕ್ಷಣ, ಬುದ್ಧಿ, ಪ್ರೀತಿ ಸಂಬಂಧ, ಪ್ರತಿಷ್ಠೆ ಇತ್ಯಾದಿಯ ಬಗ್ಗೆ ಪೈಗಣಿಸಲಾಗುತ್ತದೆ. ಕರ್ಕ ರಾಶಿಯಲ್ಲಿ ಬುಧನ ಈ ಸಂಚಾರವು ನಿಮಗೆ ಸವಾಲುಗಳಿಂದ ತುಂಬಿರುತ್ತದೆ. ಈ ರಾಶಿಚಕ್ರದ ಸ್ಥಳೀಯರ ಏಕಾಗ್ರತೆಯಲ್ಲಿ ಕೊರತೆ ಉಂಟಾಗಬಹುದು. ವಿಶೇಷವಾಗಿ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳು ಏಕಾಗ್ರತೆಯಲ್ಲಿ ಕೊರತೆಯ ಸಮಸ್ಯೆಯನ್ನು ಕಾಣಲಾಗುತ್ತದೆ. ಇದರೊಂದಿಗೆ ಸಂತೋಷ ಸಂಪನ್ಮೂಲಗಳಲ್ಲಿ ಸಹ ಕೊರತೆ ಬರಬಹುದು.

ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಗೊಂದಲದ ಮನಸ್ಥಿತಿಯಲ್ಲಿರುತ್ತಾರೆ, ಇದರ ಕಾರಣದಿಂದಾಗಿ ಇದು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರೋಧಿಗಳಿಂದ ನೀವು ತಪ್ಪಿಸಿಕೊಂಡಿರಬೇಕು. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದರೆ, ಹೆಚ್ಚು ಕಠಿಣ ಮಾಡುವ ಅಗತ್ಯವಿದೆ. ನೀವು ಅಜಾಗರೂಕತೆ ವಹಿಸಿದರೆ ಈ ಸಮಯದಲ್ಲಿ ನಿಮ್ಮ ಬಳಿ ಪ್ರಾಯಶ್ಚಿತ್ತವನ್ನು ಹೊರೆತುಪಡಿಸಿ ಬೇರೇನೂ ಇರುವುದಿಲ್ಲ. ಕುಟುಂಬ ಜೀವನವು ಸಾಮಾನ್ಯವಾಗಿರುತ್ತದೆ ಆದರೆ ಮಕ್ಕಳ ಆರೋಗ್ಯದ ಬಗ್ಗೆ ಕೆಲವು ಸಮಸ್ಯೆಗಳು ಉಂಟಾಗಬಹುದು.

ನೀವು ಕ್ರೀಡೆಗಳಲ್ಲಿ ಭಾಗವಹಿಸಿದರೆ, ಸುರಕ್ಷತೆಗಾಗಿ ಮಾಡಿರುವ ಎಲ್ಲಾ ವಸ್ತುಗಳನ್ನು ನೀವು ಬಳಸಬೇಕು. ಇಲ್ಲದಿದ್ದರೆ ಯಾವುದೇ ಅಪಘಾತಕ್ಕೆ ಬಲಿಯಾಗಬಹುದು. ಒಟ್ಟಾರೆಯಾಗಿ ಹೇಳಿದರೆ ಮೀನಾ ರಾಶಿಚಕ್ರದ ಸ್ಥಳೀಯರು ಬುಧ ಸಂಚಾರದ ಸಮಯದಲ್ಲಿ ಬಹಳ ಜಾಗರೂಕತೆಯಿಂದ ಮುಂದುವರಿಯಬೇಕು.

ಪರಿಹಾರ - ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಶುದ್ಧ ತುಪ್ಪದ ದಾನ ಮಾಡಿ.


ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer