• Talk To Astrologers
  • AstroSage Brihat Horoscope
  • Ask A Question
  • Raj Yoga Report
  • Personalized Horoscope 2021

ಬುಧ ಸಂಚಾರ ಮೀನಾ ರಾಶಿಯಲ್ಲಿ - Mercury Transit in Pisces in Kannada

ಬುಧ ಗ್ರಹವು ಮಂಗಳವಾರ, 7 ಏಪ್ರಿಲ್ 2020 ಮಧ್ಯಾಹ್ನ 2:16 ಗಂಟೆಗೆ ತನ್ನ ಸ್ನೇಹ ಗ್ರಹ ಶನಿ ಸ್ವಾಮಿತ್ವದ ಕುಂಭ ರಾಶಿಚಕ್ರದಿಂದ ಹೊರಬಂದು ಗುರು ಗ್ರಹ ಅಧಿಪತ್ಯದ ಮೀನಾ ರಾಶಿಚಕ್ರದಲ್ಲಿ ಪ್ರವೇಶಿಸಲಿದೆ. ಈ ರಾಶಿ ಬುಧ ಗ್ರಹದ ದುರುದ್ವೇಷಪೂರಿತ ರಾಶಿಯಾಗಿದೆ ಮತ್ತು ಇದನ್ನು ಕಾಲಪುರುಷ ಜಾತಕದಲ್ಲಿ ಹನ್ನೆರಡನೇ ಅಂದರೆ ವೆಚ್ಚದ ಮನೆಯ ರಾಶಿ ಎಂದು ಪರಿಗಣಿಸಲಾಗಿದೆ. ಇದು ನೀರಿನ ಅಂಶದ ರಾಶಿ ಕೂಡ ಆಗಿದೆ , ಆದ್ದರಿಂದ ಈ ರಾಶಿಚಕ್ರದಲ್ಲಿ ಬುಧ ಸಂಚಾರವು ಪ್ರಮುಖ ಫಲಿತಾಂಶಗಳನ್ನು ನೀಡುತ್ತದೆ

ಯಾವುದೇ ಸಮಸ್ಯೆಯಿಂದ ತೊಂದರೆಗೊಂಡಿದ್ದರೆ, ನಿವಾರಣೆಗಾಗಿ ಪ್ರಶ್ನೆ ಕೇಳಿ

ನಿಮ್ಮ ಜಾತಕದಲ್ಲಿ ಬುಧ ಗ್ರಹ ಸಾಗಣೆಯು ಹಠಾತ್ ಪರಿಣಾಮವನ್ನು ತೋರಿಸುತ್ತದೆ ಮತ್ತು ಬುಧ ಗ್ರಹವು ಬುದ್ಧಿವನ್ನು ಒದಗಿಸುತ್ತದೆ ಆದ್ದರಿಂದ ಬುಧ ಸಂಚಾರವು ನಿಮ್ಮ ಬುದ್ಧಿ, ನಿಮ್ಮ ತಿಳುವಳಿಕೆಯ ಶಕ್ತಿ ಮತ್ತು ನಮ್ಮ ಧ್ವನಿಯ ಮೇಲೆ ಹೆಚ್ಚಾಗಿಪರಿಣಾಮ ಬೀರುತ್ತದೆ.

ಬುಧ ಗ್ರಹದ ಮೀನಾ ರಾಶಿಯಲ್ಲಿ ಸಂಚಾರದ ರಾಶಿ ಭವಿಷ್ಯ

ನಡೆಯಿರಿ ಮೀನಾ ರಾಶಿಯಲ್ಲಿ ಬುಧನ ಸಂಚಾರದಿಂದ ಎಲ್ಲಾ ಹನ್ನೆರಡು ರಾಶಿಚಕ್ರಗಳ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ:

ಈ ರಾಶಿ ಭವಿಷ್ಯ ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಯನ್ನು ತಿಳಿಯಿರಿ.

ಮೇಷ ರಾಶಿ ಭವಿಷ್ಯ

ಮೇಷ ರಾಶಿಚಕ್ರದಿಂದ ಮೂರನೇ ಮತ್ತು ಆರನೇ ಮನೆಯ ಮಾಲೀಕ ಬುಧ ಗ್ರಹವು ಈ ಸಂಚಾರದಲ್ಲಿ ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸಲಿದೆ. ಈ ಸಾಗಣೆಯ ಪರಿಣಾಮದಿಂದಾಗಿ ನಿಮ್ಮ ಆರೋಗ್ಯದಲ್ಲಿ ಕುಸಿತವನ್ನು ನೋಡಲಾಗುತ್ತದೆ. ದೈಹಿಕ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ವೆಶೇಷವಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಬಹುದು ಮತ್ತು ಈ ಸಮಯದಲ್ಲಿ ನಿಮ್ಮ ನಿದ್ರೆ ಕೂಡ ಹದಗೆಡಬಹುದು. ಅಂದರೆ ನಿಮ್ಮ ನಿದ್ರೆ ಕಡಿಮೆಯಾಗಬಹುದು ಈ ಕಾರಣದಿಂದಾಗಿ ನೀವು ಅಸಮಾಧಾನವನ್ನು ಅನುಭವಿಸಬಹುದು. ನಿಮ್ಮ ಮೂಲಕ ಮಾಡಲಾಗಿರುವ ಪ್ರಯತ್ನಗಳಿಗೆ ಈ ಸಮಯದಲ್ಲಿ ಆರ್ಥಿಕ ಯಶಸ್ಸು ಸಿಗದಿರುವ ಕಾರಣದಿಂದಾಗಿ ನಿಮ್ಮ ಮನಸ್ಸು ಅಸಮಾಧಾನಗೊಳ್ಳಬಹುದು.

ಈ ಸಮಯದಲ್ಲಿ ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು ಮತ್ತು ನಿಮ್ಮನ್ನು ತೊಂದರೆಗೊಳಿಸಲು ಯಾವುದೇ ರೀತಿಯಲ್ಲಿ ಹಿಂಜರಿಯುವುದಿಲ್ಲ. ಆದಾಗ್ಯೂ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಮಯವು ವಿಶೇಷ ಫಲಿತಾಂಶಗಳನ್ನು ನೀಡಬಹುದು. ಆದರೆ ಸಾಕಷ್ಟು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಕಾನೂನು ಪ್ರಕರಣದ ವಿಷಯಗಳಲ್ಲಿ ಭಾಗಶಃ ಈ ಸಮಯದಲ್ಲಿ ನಿಮಗೆ ಯಶಸ್ಸು ಸಿಗಬಹುದು ಮತ್ತು ನಿಮ್ಮ ವೆಚ್ಚಗಳು ಸಹ ವಿವಿಧ ರೀತಿಯಲ್ಲಿ ಹೆಚ್ಚಾಗುತ್ತವೆ. ಇದು ಆರ್ಥಿಕ ಸ್ಥಿತಿಯ ಮೇಲೆ ಹೊರೆಯಾಗಬಹುದು. ನಿಮ್ಮ ಸಹೋದರ ಸಹೋದರಿಯರಲ್ಲಿ ಒಬ್ಬರು ವಿದೇಶಕ್ಕೆ ಹೋಗಬಹುದು ಮತ್ತು ವಿದೇಶಿ ಕಂಪನಿ ಅಥವಾ ಬಹುರಾಷ್ಟ್ರೀಯ ಕಂಪನಿಯಿಂದ ನಿಮಗೆ ಉದ್ಯೋಗದ ಆಫರ್ ಸಿಗಬಹುದು. ಕಾನೂನು ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಂಚಾರವು ಅನುಕೂಲಕರ ಫಲಿತಾಂಶಗಳನ್ನು ಒದಗಿಸುತ್ತದೆ.

ಪರಿಹಾರ: ಬುಧವಾರದಂದುಶ್ರೀ ಗಣೇಶ ದೇವರಿಗೆ ದುರ್ವಾ ಹುಲ್ಲು ಅರ್ಪಿಸಿ.

ವೃಷಭ ರಾಶಿ ಭವಿಷ್ಯ

ಬುಧ ಗ್ರಹವು ನಿಮ್ಮ ರಾಶಿಯ ಮಾಲೀಕ, ಶುಕ್ರ ಗ್ರಹದ ಆಪ್ತ ಸ್ನೇಹಿತ ಮತ್ತು ನಿಮ್ಮ ಜಾತಕದಲ್ಲಿ ಇದು ನಿಮ್ಮ ಎರಡನೇ ಮತ್ತು ಐದನೇ ಮನೆಯ ಮಾಲೀಕ ಕೂಡ ಆಗಿದೆ. ತನ್ನ ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಹನ್ನೊಂದನೇ ಮನೆಗೆ ಸಾಗಣಿಸುತ್ತದೆ. ಇದನ್ನು ಆದಾಯ ಅಥವಾ ಲಾಭದ ಮನೆ ಎಂದು ಸಹ ಕರೆಯಲಾಗುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ, ನಿಮ್ಮ ವ್ಯಾಪಾರವನ್ನು ಬೆಳೆಸಲು ನಿಮಗೆ ಸಹಾಯ ಸಿಗುತ್ತದೆ. ನಿಮ್ಮ ವ್ಯಾಪಾರವನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಗುರಿಯೊಂದಿಗೆ ನಿಮ್ಮ ಹಣಕಾಸಿನ ದೊಡ್ಡ ಭಾಗದ ಹೂಡಿಕೆ ಮಾಡಬಹುದು. ಕುಟುಂಬದ ಸದಸ್ಯರು ಕೂಡ ನಿಮಗೆ ಸಹಾಯ ಮಾಡುತ್ತಾರೆ.

ಈ ಸಮಯದಲ್ಲಿ ನಿಮ್ಮ ಆದಾಯವು ಹೆಚ್ಚಾಗುತ್ತದೆ ಮತ್ತು ಆರ್ಥಿಕವಾಗಿ ನಡೆಯುತ್ತಿದ್ದ ಸಮಸ್ಯೆಗಳು ಈ ಸಮಯದಲ್ಲಿ ದುರ್ಬಲಗೊಳ್ಳುತ್ತವೆ. ನೀವು ಬಹಳಷ್ಟು ಉತ್ತಮವಾಗಿ ವ್ಯವಹಾರ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ ನಿಮ್ಮ ಪ್ರೀತಿ ಜೀವನದ ದೃಷ್ಟಿಕೋನದಿಂದಲೂ ಈ ಸಂಚಾರವು ಬಹಳಷ್ಟು ಪ್ರಯೋಜನಕಾರಿಯಾಗಿರುತ್ತದೆ. ಏಕೆಂದರೆ ನಿಮ್ಮ ಪ್ರೀತಿ ಜೇವನದಲ್ಲಿ ನಡೆಯುತ್ತಿದ್ದ ತಪ್ಪು ಗ್ರಹಿಕೆಗಳು ಈ ಸಮಯದಲ್ಲಿ ನಿವಾರಿಸಲಾಗುತ್ತವೆ ಮತ್ತು ಪರಸ್ಪರ ಬಗೆಗಿನ ತಿಳುವಳಿಕೆ ಹೆಚ್ಚಾಗುತ್ತದೆ. ನಿಮ್ಮ ಪರಸ್ಪರ ಬಗೆಗಿನ ವಿಷಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಮತ್ತು ಪರಸ್ಪರರ ಬಗ್ಗೆ ಸಾಕಷ್ಟು ಬುದ್ಧಿವಂತಿಕೆಯನ್ನು ತೋರಿಸುವಿರಿ. ನಿಮ್ಮ ಬುದ್ಧಿವಂತಿಕೆ ಬಲಗೊಳ್ಳುತ್ತದೆ. ಈ ಸಮಯದಲ್ಲಿ ಹೊಸ ವಿಷಯಗಳ ಬಗ್ಗೆ ಕಲಿಯಲು ಆಸಕ್ತಿ ಹೊಂದುವಿರಿ ಮತ್ತು ಶಿಕ್ಷಣ ಪಡೆಯುವ ದಿಕ್ಕಿನಲ್ಲಿ ಮುಂದುವರಿಯುತ್ತಿರಿ. ಇದಲ್ಲದೆ ನಿಮ್ಮ ಜೀವನದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕುಟುಂಬದ ಸದಸ್ಯರು ನಿಮ್ಮನ್ನು ಬೆಂಬಲಿಸಬಹುದು.

ಪರಿಹಾರ - ಬುಧವಾರದ ದಿನದಂದು ವಿಧರದ ಮೂಲವನ್ನು ನೀರಿನಲ್ಲಿ ನೆನೆಸಿ ಸ್ನಾನ ಮಾಡಿದರೆ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.

ಮಿಥುನ ರಾಶಿ ಭವಿಷ್ಯ

ಈ ಸಂಚಾರದ ಸಮಯದಲ್ಲಿ ಮಿಥುನ ರಾಶಿಚಕ್ರದ ಮಾಲೀಕ ಬುಧ ದೇವ ನಿಮ್ಮ ಹತ್ತನೇ ಮನೆಗೆ ಸಂಚರಿಸುತ್ತಾರೆ. ಇದು ನಿಮ್ಮ ಮೊದಲನೇ ಮನೆಯ ಮಾಲೀಕನಾಗಿರುವ ಜೊತೆಗೆ ನಿಮ್ಮ ನಾಲ್ಕನೇ ಮನೆಯ ಮಾಲೀಕ ಕೂಡ ಆಗಿದೆ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ವೃತ್ತಿ ಜೇವನ, ನಿಮ್ಮ ಕುಟುಂಬ ಮತ್ತು ನಿಮ್ಮ ವ್ಯಕ್ತಿತ್ವದ ಬಗ್ಗೆ ಯೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ಸಂಪೂರ್ಣ ಅವಕಾಶವನ್ನು ಪಡೆಯುತ್ತೀರಿ. ನಿಮ್ಮ ಕೆಲವು ನಿರ್ಧಾರಗಳು ಉತ್ತಮವಾಗಿರುತ್ತವೆ, ಇವು ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಸಹಾಯ ನೀಡುತ್ತವೆ. ಹಲವು ವಿಷಯಗಳಲ್ಲಿ ನೀವು ಅತಿಯಾದ ಮನೋಬಲಕ್ಕೆ ಬಲಿಯಾಗಬಹುದು. ಈ ಕಾರಣದಿಂದಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು.

ಈ ಸಮಯದಲ್ಲಿ, ಕುಟುಂಬ ಜೀವನದಲ್ಲಿ ಸಂತೋಷದಿಂದ ತುಂಬಿರುವ ಕ್ಷಣಗಳನ್ನು ಪಡೆಯುತ್ತೀರಿ ಮತ್ತು ಕುಟುಂಬದ ಸದಸ್ಯರು ತಮ್ಮ ವಿಷಯಗಳನ್ನು ಪರಸ್ಪರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಅಂತಹ ಸಂದರ್ಭದಲ್ಲಿ ಕುಟುಂಬದಲ್ಲಿ ಸಮರಸ್ಯದ ವಾತಾವರಣ ಉಳಿದಿರುತ್ತದೆ. ಈ ಸಮಯದಲ್ಲಿ ಕೆಲವು ಸ್ಥಳೀಯರು ಯಾವುದೇ ಅಸ್ತಿ ಖರೀದಿಸುವಲ್ಲಿ ಯಶಸ್ವಿಯಾಗಬಹುದು. ಆದರೆ ಕಾಗದಪತ್ರದ ಕೆಲಸದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ನಿಮ್ಮ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವಿರಿ. ಈ ಕಾರಣದಿಂದಾಗಿ ನೀವು ಆಯಾಸವನ್ನು ಸಹ ಅನುಭವಿಸುತ್ತೀರಿ ಮತ್ತು ದೈಹಿಕವಾಗಿ ನೀವು ದುರ್ಬಲತೆಯನ್ನು ಅನುಭವಿಸಬಹುದು. ಆದ್ದರಿಂದ ನಿಮ್ಮ ಬುದ್ಧಿ ಮತ್ತು ಬಲವನ್ನು ನೀವು ನಿಮ್ಮ ಕೆಲಸದಲ್ಲಿ ಸರಿಯಾದ ರೀತಿಯಲ್ಲಿ ಬಳಸಬೇಕು. ಇದರಿಂದ ನೀವು ನಿಮ್ಮ ಕೆಲಸವನ್ನು ಉತ್ತಮ ರೀತೀಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ದೇಹವು ಕೂಡ ಸರಿಯಾಗಿರುತ್ತದೆ. ಈ ಸಮಯದಲ್ಲಿ ವಿಶೇಷವಾಗಿ ನಿಮ್ಮ ಮನೆಯ ವಿಷಯಗಳನ್ನು ಕಚೇರಿಯಲ್ಲಿ ಯಾರೊಂದಿಗೂ ಚರ್ಚಿಸಬೇಡಿ.

ಪರಿಹಾರ - ನೀವು ನಿಯಮಿತವಾಗಿ ಪ್ರತಿದಿನ ಬುಧ ಗ್ರಹದ ಬೀಜ ಮಂತ್ರವನ್ನು ಜಪಿಸಬೇಕು “ ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ “.

ಕರ್ಕ ರಾಶಿ ಭವಿಷ್ಯ

ಬುಧ ದೇವ ಕರ್ಕ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮತ್ತು ಮೂರನೇ ಮನೆಯ ಮಾಲೀಕ, ಸಾಗುವಿಕೆಯ ಈ ಸಮಯದಲ್ಲಿ ಅವರು ನಿಮ್ಮ ಒಂಬತ್ತನೇ ಮನೆಗೆ ಸಾಗುತ್ತಾರೆ. ಈ ಸಾಚಾರದ ಪರಿಣಾಮದಿಂದಾಗಿ ವಿದೇಶಕ್ಕೆ ಹೋಗಲು ನೀವು ಅವಕಾಶವನ್ನು ಪಡೆಯಬಹುದು. ಇದಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುತ್ತಿದ್ದ ವಿದ್ಯಾರ್ಥಿಗಳ ಅಸೆ ಈ ಸಮಯದಲ್ಲಿ ಈಡೇರುವ ಸಂಪೂರ್ಣ ಸಾಧ್ಯತೆ ಇದೆ. ನಿಮ್ಮ ಬುದ್ಧಿ ಬಲಗೊಳ್ಳುತ್ತದೆ ಮತ್ತು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತೀರಿ. ನೀವು ನಿಮ್ಮ ಪ್ರಯತ್ನಗಳ ಮೂಲಕ ನಿಮ್ಮ ಜೀವನಕ್ಕೆ ಹೊಸ ದಿಕ್ಕು ನೀಡುವಿರಿ ಮತ್ತು ಬರೆಯುವ ಕೆಲಸದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವಿರಿ. ಇದನ್ನು ನಿಮ್ಮ ವೃತ್ತಿಯಾಗಿಸಲು ಸಹ ಯೋಚಿಸಬಹುದು.

ನೀವು ಸಾಮಾಜಿಕ ಮಾಧ್ಯಮಕ್ಕೆ ಕೆಲಸ ಮಾಡುವುದನ್ನು ಆನಂದಿಸುವಿರಿ. ಇದಲ್ಲದೆ ಈ ಸಮಯದಲ್ಲಿ ನೀವು ಬಹಿರಂಗವಾಗಿ ನಿಮ್ಮ ವಿಷಯಗಳನ್ನು ಹೇಳುತ್ತೀರಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದುವರಿದು ಭಾಗವಹಿಸುವಿರಿ. ನಿಮ್ಮ ಆದಾಯವು ಹೆಚ್ಚಾಗುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರು ಸಹ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಈ ಸಮಯದಲ್ಲಿ ಯಾವುದಾದರು ನಿಮ್ಮ ಹವ್ಯಾಸವನ್ನು ಮುಂದುವರಿಸುತ್ತೀರಿ. ಇಷ್ಟೇ ಅಲ್ಲದೆ ಲೇಖನ, ತೋಟಗಾರಿಕೆ ಅಥವಾ ನಟನೆಗಳಂತಹ ಕೆಲಸಗಳಲ್ಲಿ ಹೆಚ್ಚು ಆಸಕ್ತಿ ಹೊಂದುವಿರಿ. ಸೃಜನಶೀಲ ಕೆಲಸಗಳ ಮೂಲಕ ಸಮಾಜದಲ್ಲಿನ ಯಾವುದಾದರು ದುಷ್ಕೃತ್ಯಗಳ ವಿರುದ್ಧವಾಗಿ ಯಾವುದೇ ಉದ್ದೇಶದಿಂದ ಮುಂದುವರಿಯುತ್ತಿರಿ. ಈ ಸಮಯದಲ್ಲಿ ನಿಮ್ಮ ಸಂವಹನ ಕೌಶಲ್ಯಗಳು ಉತ್ತಮಗೊಳ್ಳುತ್ತವೆ ಮತ್ತು ನೀವು ನಿಮ್ಮ ಪರಿಶ್ರಮದ ಫಲಿತಾಂಶವನ್ನು ಪಡೆಯುತ್ತೀರಿ, ಹೆಚ್ಚಾಗಿ ಮಾತನಾಡುವ ನಿಮ್ಮ ವರ್ತನೆಯು ನಿಮ್ಮ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ಇದರ ಬಗ್ಗೆ ವಿಶೇಷ ಗಮನ ಹರಿಸಿ.

ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ ಚಂದ್ರ ದೇವರನ್ನು ಆರಾಧಿಸಬೇಕು.

ಸಿಂಹ ರಾಶಿ ಭವಿಷ್ಯ

ಸಂಚಾರದ ಈ ಸಮಯದಲ್ಲಿ ಬುಧ ಗ್ರಹವು ಸಿಂಹ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಗೆ ಪ್ರವೇಶಿಸಲಿದೆ. ಬುಧ ಗ್ರಹವು ದುರಾದೃಷ್ಟದ ರಾಶಿಯಲ್ಲಿ ನೆಲೆಗೊಳ್ಳುವ ಕಾರಣದಿಂದಾಗಿ ಖಂಡಿತವಾಗಿಯೂ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೂ ಈ ಸಂಚಾರದ ಕೆಲವು ಅನುಕೂಲಕರ ಫಲಿತಾಂಶಗಳನ್ನು ನೀವು ಪಡೆಯಲಿದ್ದೀರಿ. ಬುಧ ಗ್ರಹವು ನಿಮ್ಮ ರಾಶಿಚಕ್ರದ ಎರಡನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಈ ಕಾರಣದಿಂದಾಗಿ ನಿಮ್ಮ ಆದಾಯದಲ್ಲಿ ಇದ್ದಕ್ಕಿದ್ದಂತೆ ಕುಸಿತವನ್ನು ಕಾಣಬಹುದು.

ನಿಮ್ಮ ಯಾವುದೇ ವ್ಯಾಪಾರ ಒಪ್ಪಂದವು ವೈಫಲ್ಯಗೊಳ್ಳುವ ಸಾಧ್ಯತೆಯೂ ಇದೆ, ಈ ಕಾರಣದಿಂದಾಗಿ ನಿಮಗೆ ಹಾನಿಯಾಗಬಹುದು. ಆದರೆ ಮತ್ತೊಂದೆಡೆ, ಇದ್ದಕ್ಕಿದ್ದಂತೆ ನಿಮ್ಮ ಆದಾಯ ಹೆಚ್ಚಾಗಬಹುದು. ಇದಲ್ಲದೆ ನಿಮ್ಮ ಆರ್ಥಿಕ ಪರಿಸ್ಥಿತಿ ಇದ್ದಕ್ಕಿದ್ದಂತೆ ಪ್ರಗತಿ ಪಡೆಯುವಂತಹ ಯಾವುದೇ ಮೂಲವನ್ನು ಸಹ ನೀವು ಪಡೆಯಬಹುದು. ಸಿಂಹ ರಾಶಿಚಕ್ರದ ಸ್ಥಳೀಯರು ತಮ್ಮ ಅತ್ತೆಮನೆಯ ಸದಸ್ಯರನ್ನು ಭೇಟಿಯಾಗುವ ಅವಕಾಶವನ್ನು ಪಡೆಯುತ್ತೀರಿ. ಅವರೊಂದಿಗೆ ಸಾಕಷ್ಟು ಮಾತನಾಡುವಿರಿ ಮತ್ತು ಯಾವುದೇ ವಿಶೇಷ ವಿಷಯದ ಬಗ್ಗೆ ವಿಚಾರಿಸಬಹುದು.

ನಿಮ್ಮ ಕಚೇರಿಯಲ್ಲಿ ನಿಮ್ಮ ಕೆಲಸವೂ ಹಲವು ಏರಿಳಿತಗಳಿಂದ ತುಂಬಿರಲಿದೆ. ಇದರಿಂದ ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಪರಿಣಾಮವಾಗಿ ನಿಮ್ಮ ಉದ್ಯೋಗವನ್ನು ನೀವು ಕಳೆದುಕೊಳ್ಳಲಾಗಬಹುದು. ಆದ್ದರಿಂದ ಖಂಡಿತವಾಗಿಯೂ ನೀವು ಎಚ್ಚರದಿಂದಿರಬೇಕು ಮತ್ತು ಯಾವುದೇ ಕಾರಣವಿಲ್ಲದೆ ಯಾರೊಂದಿಗೂ ವಿವಾದಿಸಬಾರದು. ನಿಮ್ಮ ಮನಸ್ಸು ಹೆಚ್ಚಾಗಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೊಂದಿರುತದೆ ಮತ್ತು ಪೂಜೆಗಳಲ್ಲಿ ಆಸಕ್ತಿ ಜಾಗೃತಗೊಳ್ಳುತ್ತದೆ. ಮಂತ್ರ ಜಪಿಸುವುದನ್ನು ಆನಂದಿಸುವಿರಿ. ಇದಲ್ಲದೆ ಏನಾದರು ಹೊಸದಾಗಿ ಕಲಿಯುವುದರಲ್ಲಿ, ಏನಾದರು ಹೊಸದನ್ನು ಓದುವುದು ಮತ್ತು ತಿಳಿಯುವುದರಲ್ಲಿ ಮನಸ್ಸು ಹೊಂದಿರುತ್ತೀರಿ. ಇದರಿಂದಾಗಿ ನಿಮ್ಮ ಬುದ್ಧಿವಂತಿಕೆ ಕಣ್ಣು ಬಲವಾಗುತ್ತದೆ.

ಪರಿಹಾರ - ನೀವು ಬುಧವಾರದಂದು ರಾಧ ದೇವಿಯನ್ನು ಅಲಂಕರಿಸಿದ ನಂತರ ಅವರನ್ನು ಆರಾಧಿಸಬೇಕು.

ಕನ್ಯಾ ರಾಶಿ ಭವಿಷ್ಯ

ಸಂಚಾರದ ಈ ಸಮಯದಲ್ಲಿ ಬುಧ ದೇವ ಕನ್ಯಾ ರಾಶಿಚಕ್ರದ ಸ್ಥಳೀಯರ ಏಳನೇ ಮನೆಗೆ ಸಾಗಣಿಸುತ್ತಾರೆ. ಇದು ನಿಮ್ಮ ಹತ್ತನೇ ಮನೆಯ ಮಾಲೀಕ, ಆದ್ದರಿಂದ ಈ ಸಂಚಾರವು ನಿಮಗಾಗಿ ಬಹಳ ಪರಿಣಾಮಕಾರಿಯಾಗಲಿದೆ. ಈ ಸಂಚಾರದ ಪರಿಣಾಮದಿಂದಾಗಿ ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ನಿಮ್ಮ ಪರವಾಗಿರುತ್ತವೆ ಮತ್ತು ನಿಮ್ಮ ಕೆಲಸದಲ್ಲಿ ನೀವು ಉನ್ನತ ಸ್ಥಾನವನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಯಾವ ಕೆಲಸದಲ್ಲಿ ಕೈ ಹಾಕಿದರೂ, ಅದರಲ್ಲಿ ಯಶಸ್ಸು ಗಳಿಸುವಿರಿ.

ನೀವು ಯಾವೂದಾದರೂ ವ್ಯಾಪಾರದಲ್ಲಿ ತೊಡಗಿದ್ದರೆ, ನಿಮ್ಮ ವ್ಯಾಪಾರವು ವೇಗವಾಗುತ್ತದೆ ಮತ್ತು ನೀವು ಅದರಲ್ಲಿ ಯಶಸ್ಸು ಪಡೆಯುತ್ತೀರಿ. ಆದರೆ ಇಲ್ಲಿ ಬುಧ ಗ್ರಹವು ತನ್ನ ದುರಾದೃಷ್ಟದ ರಾಶಿಯಲ್ಲಿದೆ. ಈ ಕಾರಣದಿಂದಾಗಿ ನಿಮ್ಮ ಆರೋಗ್ಯವು ಕುಸಿಯಬಹುದು ಮತ್ತು ನಿಮ್ಮ ಸಂಪೂರ್ಣ ಗಮನ ನಿಮ್ಮ ಜೀವನ ಸಂಗಾತಿಯ ಮೇಲಿರುತ್ತದೆ. ಅವರಿದ ಸಲಹೆ ಪಡೆದ ನಂತರ ಯಾವುದೇ ಕೆಲಸವನ್ನು ಮಾಡುತ್ತೀರಿ. ಈ ಕಾರಣದಿಂದಾಗಿ ಕೆಲವು ಕಾರ್ಯಗಳಲ್ಲಿ ನೀವು ಹತಾಶೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಮೂಲಕ ಕೆಲವು ತಪ್ಪಾಗಿದೆ ಎಂದು ಸಹ ನಿಮಗೆ ಅನಿಸಬಹುದು. ತಂದೆಯೊಂದಿಗಿನ ನಿಮ್ಮ ಸಂಬಂಧವು ಉತ್ತಮಗೊಳ್ಳುತ್ತದೆ ಮತ್ತು ನಿಮ್ಮಿಬ್ಬರ ಸಂಬಂಧದಲ್ಲಿ ನಿಕಟತೆ ಬರುತ್ತದೆ. ಜೀವನ ಸಂಗಾತಿಯೊಂದಿಗೆ ಸಂಬಂಧ ಸುಧಾರಿಸುತ್ತದೆ ಮತ್ತು ನಿಮ್ಮ ಕೆಲಸಕ್ಕೆ ನೀವು ಪ್ರಾಮುಖ್ಯತೆ ನೀಡುತ್ತಿರಿ. ಸಂಚಾರದ ಈ ಸಮಯದಲ್ಲಿ ನಿಮಗೆ ಖಂಡಿತವಾಗಿಯೂ ಹಣಕಾಸಿನ ಲಾಭವಾಗುತ್ತದೆ ಮತ್ತು ನಿಮ್ಮ ತೀಕ್ಷ್ಣ ಬುದ್ಧಿವಂತಿಕೆಯನ್ನು ವ್ಯಾಪಾರದಲ್ಲಿ ಸರಿಯಾಗಿ ಬಳಸುತ್ತೀರಿ.

ಪರಿಹಾರ - ನೀವು ಬುಧ ಗ್ರಹದ ಯಂತ್ರವನ್ನು ಅಥವಾ ರತ್ನವನ್ನು ಧರಿಸಬೇಕು.

ತುಲಾ ರಾಶಿ ಭವಿಷ್ಯ

ಈ ಸಮಯದಲ್ಲಿ ಬುಧ ದೇವರ ಸಂಚಾರವು ತುಲಾ ರಾಶಿಚಕ್ರದ ಸ್ಥಳೀಯರ ರಾಶಿಯಿಂದ ಆರನೇ ಮನೆಯಲ್ಲಿರುತ್ತದೆ. ಈ ಮನೆಯಲ್ಲಿ ಬುಧ ಗ್ರಹದ ಸಾಗುವಿಕೆಯು ನಿಮಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ ಏಕೆಂದರೆ ಇದು ನಿಮ್ಮ ಜಾತಕದ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಮಾಲೀಕ. ಒಂಬತ್ತನೇ ಮನೆಯಲ್ಲಿ ಅದೃಷ್ಟದ ಮಾಲೀಕ ಪ್ರವೇಶಿಸುವುದರಿಂದ, ಇದು ಹೆಚ್ಚು ಕಠಿಣ ಪರಿಶ್ರಮವನ್ನು ತೋರಿಸುತ್ತಿದೆ. ಅಂತಹ ಸಂದರ್ಭದಲ್ಲಿ ಹೆಚ್ಚು ಕಠಿಣ ಪರಿಶ್ರಮದ ನಂತರ ಮಾತ್ರ ಅಲ್ಪ ಯಶಸ್ಸು ನಿಮ್ಮ ಕೈಗೊಳ್ಳುತ್ತದೆ. ನಿಮ್ಮ ಕಾರ್ಯಗಳಲ್ಲಿ ಅಡತಡೆಗಳು ಉಂಟಾಗುವುದರಿಂದಾಗಿ ನೀವು ತೊಂದರೆಕ್ಕೊಳಗಾಗಬಹುದು ಮತ್ತು ಈ ಸಮಯದಲ್ಲಿ, ನಿಮ್ಮ ಆದಾಯದಲ್ಲಿ ಕೂಡ ಕುಸಿತ ಉಂಟಾಗಬಹುದು.

ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ನಿಮ್ಮ ಆಹಾರ ಪಾನೀಯದ ಬಗ್ಗೆಯೂ ವಿಶೇಷ ಗಮನ ವಹಿಸಬೇಕು. ಈ ಸಂಚಾರದ ಸಮಯದಲ್ಲಿ ಅನಗತ್ಯ ವಿವಾದಗಳನ್ನು ತಪ್ಪಿಸಬೇಕು. ಈ ಸಮಯದಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವುದು ಸಹ ನಿಮಗೆ ಸವಾಲಾಗಿರಬಹುದು. ಈ ಸಂಚಾರದ ಪರಿಣಾಮದಿಂದಾಗಿ ಕುಟುಂಬದಲ್ಲಿ ನಿಮ್ಮ ತಂದೆ ದೊಡ್ಡ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಅವರು ತಮ್ಮ ಕೆಲಸದ ಸ್ಥಳದಲ್ಲಿ ಬಹಳ ಉತ್ತಮ ಲಾಭವನ್ನು ಪಡೆಯುತ್ತಾರೆ. ತುಲಾ ರಾಶಿಚಕ್ರದ ಸ್ಥಳೀಯರು ಉದ್ಯೋಗದಲ್ಲಿದ್ದರೆ, ಕೆಲಸದ ಸ್ಥಳದಲ್ಲಿ ನಿಮ್ಮ ಹೃದಯದ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದರ ಬಗ್ಗೆ ವಿಶೇಷ ಗಮನ ಹರಿಸಬೇಕು. ಏಕೆಂದರೆ ಅವರು ನಿಮ್ಮ ದೌರ್ಬಲ್ಯದ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ಹೆಚ್ಚು ಮಾತನಾಡುವ ನಿಮ್ಮ ಪ್ರವೃತ್ತಿಯ ಕಾರಣದಿಂದಾಗಿ ನೀವಾಗಿ ನೀವೇ ನಿಮ್ಮ ಶತ್ರುಗಳನ್ನು ಸೃಷ್ಟಿಸಬಹುದು. ಇದರಿಂದಾಗಿ ನೀವು ತೊಂದರೆಕ್ಕೊಳಗಾಗಬಹುದು.

ಪರಿಹಾರ - ನೀವು ಬುಧ ಗ್ರಹದ ಅನುಕೂಲತೆಯನ್ನು ಪಡೆಯಲು ನಾಲ್ಕು ;ಮುಖ ರುದ್ರಾಕ್ಷವನ್ನು ಧರಿಸಬೇಕು.

ವೃಶ್ಚಿಕ ರಾಶಿ ಭವಿಷ್ಯ

ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ನಿಮ್ಮ ಎಂಟನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ತನ್ನ ಈ ಸಂಚಾರದ ಸಮಯದಲ್ಲಿ ಬುಧ ಗ್ರಹವು ನಿಮ್ಮ ಐದನೇ ಮನೆಗೆ ಪ್ರವೇಶಿಸುತ್ತದೆ ಮತ್ತು ತನ್ನ ದುರ್ಬಲ ಸ್ಥಾನದಲ್ಲಿರುತ್ತದೆ. ಈ ಸಾಂಚಾರದ ಪರಿಣಾಮದಿಂದಾಗಿ ನಿಮ್ಮ ಪ್ರೀತಿ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡು ಫಲಿತಾಂಶಗಳನ್ನು ಪಡೆಯುತ್ತೀರಿ. ಒಂದೆಡೆ ನಿಮ್ಮ ಪ್ರೀತಿಪಾತ್ರರು ನೊಮ್ಮೊಂದಿಗೆ ಪ್ರೀತಿಯಿಂದ ಮಾತನಾಡಿದರೆ, ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ಮಾತುಗಳು ಅವರಿಗೆ ಕಡಿಮೆ ಅರ್ಥವಾಗುತ್ತದೆ. ಯಾವುದೇ ವಿಷಯದ ಬಗ್ಗೆ ತಪ್ಪು ಗ್ರಹಿಕೆಗಳ ಕಾರಣದಿಂದಾಗಿ ನಿಮಿಬ್ಬರ ನಡುವೆ ವಿವಾದ ಉಂಟಾಗಬಹುದು. ನಿಮ್ಮ ಸಂಬಂಧದಲ್ಲಿ ಘರ್ಷಣೆಯ ಪರಿಸ್ಥಿತಿ ಉಂಟಾಗಬಹುದು.

ಅಂತಹ ಪರಿಸ್ಥಿತಿಯಲ್ಲಿ ಯಾವುದೇ ವಿಷಯವನ್ನು ನೀವು ಬಹಳ ಬುದ್ಧಿವಂತಿಕೆಯಿಂದ ಮಾತನಾಡಬೇಕು. ನೀವು ವಿವಾಹಿತರಾಗಿದ್ದರೆ, ಸಂಚಾರದ ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳ ಪರವಾಗಿ ವಿಶ್ರಾಂತಿ ಪಡೆಯುತ್ತೀರಿ. ಅವರು ಸಹ ತಮ್ಮ ಶಿಕ್ಷಣದಲ್ಲಿ ಉತ್ತಮ ಗಮನವನ್ನು ಹೊಂದುತ್ತಾರೆ. ಆದರೆ ಅವರು ತಮ್ಮ ಶಿಕ್ಷಣವನ್ನು ಹೊರತುಪಡಿಸಿ ಇತರ ಚಟುವಟಿಕೆಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು ಎಂಬುದರ ಬಗ್ಗೆ ನೀವು ಗಮನ ಹರಿಸಬೇಕು. ಈ ಸಮಯದಲ್ಲಿ ಕೆಲವು ಜನರಿಗೆ ಇದ್ದಕ್ಕಿದ್ದಂತೆ ಹಣ ಪಡೆಯಲು ಅನೇಕ ದಾರಿಗಳು ಕಂಡುಬರುತ್ತವೆ. ಲಾಟರಿ, ಶೇರ್ ಮಾರ್ಕೆಟ್ ಗಳಲ್ಲಿ ಹೂಡಿಕೆಯ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಮತ್ತು ನಿಮ್ಮ ಆರ್ಥಿಕ ಮಟ್ಟವು ಬಲಗೊಳ್ಳುತ್ತದೆ.

ಈ ಸಮಯದಲ್ಲಿ ಆದಾಯದ ಅನೇಕ ಮೂಲಗಳನ್ನು ನೀವು ಪಡೆಯಬಹುದು. ಇದರಿಂದ ಈ ಸಂಚಾರದ ಉತ್ತಮ ಫಲಿತಾಂಶಗಳನ್ನು ನೀವು ಪಡೆಯಬಹುದು. ನೀವು ವಿಧ್ಯಾರ್ಥಿಯಾಗಿದ್ದರೆ, ಈ ಸಮಯದ ಸಂಪೂರ್ಣ ಲಾಭವನ್ನು ಪಡೆಯಲು ಪ್ರಯತ್ನಿಸಿ ಏಕೆಂದರೆ ಶಿಕ್ಷಣಕ್ಕೆ ಈ ಸಮಯ ಉತ್ತಮವಾಗಿರುತ್ತದೆ.

ಪರಿಹಾರ - ಬುಧವಾರದಂದು ನೀವು ಉಪವಾಸವನ್ನು ಅನುಸರಿಸಬೇಕು.

ಧನು ರಾಶಿ ಭವಿಷ್ಯ

ಬುಧ ಗ್ರಹದ ಸಂಚಾರವು ಧನು ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಯಲ್ಲಿರುತ್ತದೆ. ನಿಮಗಾಗಿ ಬುಧ ಏಳನೇ ಮತ್ತು ಹತ್ತನೇ ಮನೆಯ ಮಾಲೀಕ ಮತ್ತು ಸಂಚಾರದ ಸಮಯದಲ್ಲಿ ಸಂಪೂರ್ಣ ಏಳನೇ ದೃಷ್ಟಿಯಿಂದ ನಿಮ್ಮ ಹತ್ತನೇ ಮನೆಯನ್ನು ನೋಡುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ, ನಿಮ್ಮ ಕೌಟುಂಬಿಕ ಜೀವನದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ನೇರವಾದ ಪರಿಣಾಮವು ನಿಮ್ಮ ಕೆಲಸದ ಮೇಲೆ ಬೀರುತ್ತದೆ. ಆದ್ದರಿಂದ ನೀವು ನಿಮ್ಮ ನಿಮ್ಮನ್ನು ತುಂಬಾ ಸಮತೋಲನವಾಗಿ ಇರಿಸಿಕೊಳ್ಳಬೇಕು. ಕುಟುಂಬದ ಪರಿಸರವು ಉತ್ತಮವಾಗಿರುತ್ತದೆ. ಕುಟುಂಬದ ಸದಸ್ಯರು ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ. ಆದರೂ ಯಾವುದೇ ವಿಷಯದ ಬಗ್ಗೆ ವಿವಾದ ಸಂಭವಿಸಬಹುದು. ಏಕೆಂದರೆ ಕುಟುಂಬದ ಸದಸ್ಯರ ನಡುವೆ ಯಾವುದೇ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಆದ್ದರಿಂದ ಕುಟುಂಬದಲ್ಲಿನ ಶಾಂತಿಯನ್ನು ಕಾಪಾಡಿಕೊಳ್ಳಿ ಮತ್ತು ಯಾವುದೇ ವಿವಾದವನ್ನು ತಪ್ಪಿಸಿ.

ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸಬೇಕು, ಏಕೆಂದರೆ ಅವರ ಈ ಸಮಸ್ಯೆಯಲ್ಲಿ ನಿಮ್ಮ ಸಹಾಯದ ಅಗತ್ಯವಿರುತ್ತದೆ. ನೀವು ನಿಮ್ಮ ಕೆಲಸದ ಸ್ಟಳದಲ್ಲಿ ಹೆಚ್ಚು ಕಠಿಣ ಪರಿಶ್ರಮ ಮಾಡುತ್ತೀರಿ ಮತ್ತು ನಿಮ್ಮ ಬುದ್ಧಿಯನ್ನು ಬಳಸಿ ಹೊಸ ಯೋಜನೆಗಳನ್ನು ತರುವಿರಿ. ಇದು ನಿಮ್ಮ ಕೆಲಸವನ್ನು ತುಂಬಾ ಆಸಕ್ತಿ ಮತ್ತು ಸುಲಭವಾಗಿಸುತ್ತದೆ. ನಿಮ್ಮ ಕೆಲಸವೂ ಉತ್ತಮವಾಗಿರುತ್ತದೆ ಮತ್ತು ವ್ಯಾಪರದಲ್ಲಿ ಕೂಡ ಈ ಸಮಯ ಪ್ರಗತಿ ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ತಾಯಿ ಸಹ ಕುಟುಂಬದಲ್ಲಿ ತನ್ನ ಸಲಹೆಯನ್ನು ವ್ಯಕ್ತಪಡಿಸುತ್ತಾರೆ ಮತ್ತು ಅದನ್ನು ಎಲ್ಲರು ಪಾಲಿಸಬೇಕಾಗುತ್ತದೆ.

ಪರಿಹಾರ - ನೀವು ಬುಧವಾರದಂದು ಸಾಯಂಕಾಲದ ವೇಳೆಯಲ್ಲಿ ಸಂಪೂರ್ಣ ಹೆಸರು ಬೇಳೆಯನ್ನು ಸೇವಿಸಿ.

ಮಕರ ರಾಶಿ ಭವಿಷ್ಯ

ಬುಧ ಸಂಚಾರವು ನಿಮಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಅದು ನಿಮ್ಮ ಅದೃಷ್ಟ ಮನೆಯ ಮಾಲೀಕ. ನಿಮ್ಮ ಜಾತಕದಲ್ಲಿ ಬುಧ ಗ್ರಹವು ಆರನೇ ಮನೆ ಮತ್ತು ಒಂಬತ್ತನೇ ಮನೆಯ ಮಾಲೀಕ. ಸಂಚಾರದ ಈ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಪ್ರವೇಶಿಸಲಿದೆ. ಈ ಸಂಚಾರದ ಪರಿಣಾಮದಿಂದಾಗಿ, ನೀವು ನಿಮ್ಮ ಸಂವಹನ ಕೌಶಲ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಏಕೆಂದರೆ ದುರಾದೃಷ್ಟದ ರಾಶಿಯಲ್ಲಿ ಬುಧನ ಸ್ಥಾನದ ಕಾರಣದಿಂದಾಗಿ ನಿಮ್ಮ ಆಪ್ತರಿಗೆ ಕೆಟ್ಟದನಿಸುವಂತಹ ಸಂವಹನವು ಸಂಭವಿಸಬಹುದು ಮತ್ತು ಇದರಿಂದ ನಿಮ್ಮ ಕೆಲವು ಕೆಲಸಗಳು ಸಹ ಹದಗೆಡಬಹುದು.

ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಬಹುದು ಮತ್ತು ನಿಮ್ಮ ಚಿತ್ರಕ್ಕೆ ಹಾನಿಗೊಳಿಸಲು ಪ್ರಯತ್ನಿಸಬಹುದು. ಈ ಸಮಯದಲ್ಲಿ ನೀವು ಯಾವುದಾದರು ಬ್ಯಾಂಕ್ ಲೋನ್ ಇತ್ಯಾದಿಯನ್ನು ತೆಗೆದುಕೊಳ್ಳಬಹುದು ಮತ್ತು ಅದರಲ್ಲಿ ಯಶಸ್ಸು ಪಡೆಯುತ್ತೀರಿ. ಅದೃಷ್ಟವು ನಿಮ್ಮನ್ನು ಬೆಂಬಲಿಸಬಹುದು. ನೀವು ಏನನ್ನು ಪ್ರಯತ್ನಿಸುತ್ತಿರೋ ಅದರಲ್ಲಿ ಯಶಸ್ವಿಯಾಗುತ್ತೀರಿ. ಕೆಲಸದ ಸ್ಟಳದಲ್ಲಿ ಸಹೋದ್ಯೋಗಿಗಳೊಂದಿಗಿನ ಉತ್ತಮ ವರ್ತನೆಯು ನಿಮ್ಮ ಕೆಲಸದಲ್ಲಿ ಪ್ರಗತಿ ನೀಡುವ ಕೆಲಸ ಮಾಡುತ್ತದೆ. ಸಹೋದ್ಯೋಗಿಗಳು ನಿಮ್ಮ ಪರವಾಗಿರುತ್ತಾರೆ ಮತ್ತು ನೀವು ಶೀಘ್ರದಲ್ಲೇ ಯಶಸ್ವಿಯಾಗುತ್ತೀರಿ.

ಈ ಸಮಯದಲ್ಲಿ ಕಾನೂನು ಮತ್ತು ವಕಾಲತ್ತು ಮಾಡುತ್ತಿರುವ ಜನರು ಉತ್ತಮ ಲಾಭವನ್ನು ಪಡೆಯುತ್ತಾರೆ ಮತ್ತು ಅವರು ಯಶಸ್ವಿಯಾಗುತ್ತಾರೆ. ಈ ಸಮಯದಲ್ಲಿ ಯಾವುದೇ ಮಾಧ್ಯಮ ವೇದಿಕೆಯ ಮೂಲಕ ಸಮಾಜಕ್ಕೆ ವಿರುದ್ಧವಾಗಿ ಯಾವುದೇ ವಿಷಯವನ್ನು ಹಾಕಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಇದರ ಮೂಲಕ ನಿಮಗೆ ಸಮಸ್ಯೆಗಳಾಗಬಹುದು.

ಪರಿಹಾರ - ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸಿ.

ಕುಂಭ ರಾಶಿ ಭವಿಷ್ಯ

ಸಂಚಾರದ ಈ ಸಮಯದಲ್ಲಿ ಬುಧ ಗ್ರಹವು ಕುಂಭ ರಾಶಿಚಕ್ರದ ಮೂರನೇ ಮನೆಯಲ್ಲಿರುತ್ತದೆ. ಇದು ನಿಮಗೆ ಐದನೇ ಮತ್ತು ಎಂಟನೇ ಮನೆಯ ಮಾಲೀಕ. ಈ ಸಂಚಾರದ .ಪರಿಣಾಮದಿಂದಾಗಿ, ಇದ್ದಕ್ಕಿದ್ದಂತೆ ನಿಮ್ಮ ಧ್ವನಿಯಲ್ಲಿ ಕೆಲವು ರಹಸ್ಯವಾದ ಸಂಗತಿಗಳು ಇರುತ್ತವೆ. ಅಂದರೆ ನೀವು ರಹಸ್ಯ ಅಂದಾಜಿನಲ್ಲಿ ಮಾತನಾಡುತ್ತೀರಿ. ನಿಮ್ಮ ವಿಷಯಗಳು ಅರ್ಥವಾಗುತ್ತವೆ ಆದರೆ ಪೂರ್ಣವಾಗಿ ಇಲ್ಲ. ಆದ್ದರಿಂದ ಅಸಮಾಧಾನದ ಪರಿಸ್ಥಿತಿ ಉಂಟಾಗುತ್ತದೆ.

ಈ ಸಮಯದಲ್ಲಿ ಆಹಾರ ಪಾನೀಯದ ಬಗ್ಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ. ಇಲ್ಲದಿದ್ದರೆ ನಿಮ್ಮ ಅರೋಗ್ಯ ಹದಗೆಡಬಹುದು. ಇದ್ದಕ್ಕಿದ್ದಂತೆ ಹಣಕಾಸಿನ ಹಾದಿ ತೆರೆಯುತ್ತದೆ ಮತ್ತು ನೀವು ನಿಮ್ಮ ಭರವಸೆಗಳಿಗೆ ವಿರುದ್ಧ ಉತ್ತಮ ಹಣಕಾಸಿನ ಲಾಭವನ್ನು ಪಡೆಯುತ್ತೀರಿ. ಇದು ನಿಮಗೆ ಸಾಕಷ್ಟು ಸಂತೋಷ ನೀಡುತ್ತದೆ. ಶಿಕ್ಷಣದ ಕ್ಷೇತ್ರದಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗುತ್ತದೆ ಮತ್ತು ನೀವು ವಿಧ್ಯಾರ್ಥಿಯಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಪರೀಕ್ಷೆಯ ಪರಿಣಾಮವು ನಿಮ್ಮ ಪರವಾಗಿ ಬರಬಹುದು. ಇದರಿಂದ ನೀವು ಬಹಳಷ್ಟು ಸಂತೋಷಪಡುವಿರಿ ಮತ್ತು ನಿಮ್ಮ ಮನೋಬಲವು ಹೆಚ್ಚಾಗುತ್ತದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳ ಮೂಲಕ ನೀವು ಸಂತೋಷ ಪಡಿತ್ತಿರಿ ಮತ್ತು ಅಗತ್ಯವಿದ್ದಾಗ ಆರ್ಥಿಕವಾಗಿ ನಿಮಗೆ ಸಹಾಯ ಮಾಡುತ್ತಾರೆ.

ನೀವು ಯಾರೊಂದಿಗಾದರೂ ಪ್ರೀತಿ ಸಂಬಂಧದಲ್ಲಿದ್ದರೆ, ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರನ್ನು ಕುಟುಂಬದ ಸದಸ್ಯರೊಂದಿಗೆ ಪರಿಚಯಿಸುತ್ತೀರಿ ಮತ್ತು ಸಂಪೂರ್ಣ ಕುಟುಂಬದ ಮಾತಿನಲ್ಲಿ ಕೇವಲ ಅವರ ಬಗ್ಗೆ ಮಾತ್ರ ಇರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಅವರ ಅರೋಗ್ಯ ಕುಸಿಯಬಹುದು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಅವರನ್ನು ಕಾಡಬಹುದು.

ಪರಿಹಾರ - ಬುಧವಾರದಂದು ಸಂಪೂರ್ಣ ಹೆಸರು ಬೇಳೆಯನ್ನು ನಿಮ್ಮ ಕೈಯಿಂದ ಹಸುವಿಗೆ ತಿನ್ನಿಸಿ. ಶ್ರೀ ಗಣೇಶ ದೇವರನ್ನು ಪೂರ್ಜಿಸಿ.

ಮೀನಾ ರಾಶಿ ಭವಿಷ್ಯ

ಮೀನಾ ರಾಶಿಯಲ್ಲಿ ಬುಧ ಗ್ರಹವು ಸಾಗುತ್ತಿದೆ. ಆದ್ದರಿಂದ ಬುಧ ಗ್ರಹದ ಸಾಗಣೆಯು ಮೀನಾ ರಾಶಿಚಕ್ರದ ಸ್ಥಳೀಯರ ಮೊದಲನೇ ಮನೆಯಲ್ಲಿರುತ್ತದೆ. ಬುಧ ಗ್ರಹವು ನಿಮ್ಮ ನಾಲ್ಕನೇ ಮತ್ತು ಏಳನೇ ಮನೆಯ ಮಾಲೀಕ. ಈ ಸಂಚಾರದ ಪರಿಣಾಮವಾಗಿ, ಬುಧ ಗ್ರಹದ ಪರಿಣಾಮವು ವಿಶೇಷವಾಗಿ ನಿಮ್ಮ ಬುದ್ಧಿ ಮತ್ತು ಸ್ಮರಣೆ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವುದೇ ನಿರ್ಧಾರವನ್ನು ತುರಾತುರಿಯಲ್ಲಿ ತೆಗೆದುಕೊಳ್ಳಬಹುದು. ಈ ಕಾರಣದಿಂದಾಗಿ ತದನಂತರ ನೀವು ತೊಂದರೆಕ್ಕೊಳಗಾಗಬಹುದು. ಆದ್ದರಿಂದ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಈ ಸಮಯದಲ್ಲಿ ನಿಮ್ಮ ವ್ಯಾಪಾರ ಮುಂದುವರಿಯುತ್ತದೆ. ಆದರೆ ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಅನುಭವಿ ವ್ಯಕ್ತಿಯ ಸಲಹೆ ಪಡೆದುಕೊಂಡು ಮುಂದುವರಿಯಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮನ್ನು ತೊಂದರೆಗೊಳಿಸುವಂತಹ ಕೆಲವು ಪರಿಣಾಮಗಳನ್ನು ಕಾಣಲಾಗುತ್ತದೆ.

ನಿಮ್ಮ ಧ್ವನಿಯಲ್ಲಿ ಬದಲಾವಣೆ ಬರುತ್ತದೆ ಮತ್ತು ನಿಮ್ಮ ವ್ಯವಹಾರವು ಅನೇಕ ವ್ಯಕ್ತಿಗಳಿಗೆ ಹೆಚ್ಚು ಪ್ರಾಯೋಗಿಕ ಅನಿಸಬಹುದು. ಆದ್ದರಿಂದ ನಿಮ್ಮನ್ನು ನೀವು ನಿಯಂತ್ರಿಸುವ ಅಗತ್ಯವಿದೆ. ಈ ಸಮಯದಲ್ಲಿ ಆಸ್ತಿಯ ಬಗ್ಗೆಯೂ ಚರ್ಚಿಸಬಹುದು ಮತ್ತು ಈ ವಿಷಯಗಳು ಮುಂದಿನ ಸಮಯದಲ್ಲಿ ಹೆಚ್ಚಾಗಬಹುದು. ತಾಯಿಯ ಸಹಕಾರವನ್ನು ಪಡೆಯುತ್ತೀರಿ ಮತ್ತು ಅವರು ನಿಮಗೆ ಉತ್ತಮ ಸಲಹೆ ನೀಡಲಿದ್ದಾರೆ. ದಾಂಪತ್ಯ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಪರಸ್ಪರರ ಮಾತುಗಳನ್ನು ಒಪ್ಪದಿರುವುದು ಅಂತಹ ಯಾವುದೇ ವಿಷಯದ ಬಗ್ಗೆ ಅಹಂಕಾರದ ಭಾವನೆಯನ್ನು ಹೊಂದಿರುವುದು ನಿಮ್ಮ ಸಮಸ್ಯೆಗಳಿಗೆ ಕಾರಣವಾಗಿರಬಹುದು. ಇದರಿಂದ ನಿಮ್ಮ ಸಂಬಂಧವು ಹದಗೆಡಬಹುದು ಎಂಬುದನ್ನು ನೆನಪಿಡಬೇಕು. ಈ ಸಮಯದಲ್ಲಿ ನೀವು ಹೊಸದಾಗಿ ಏನನ್ನಾದರೂ ಕಲಿಯುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ ಮತ್ತು ಯಾವುದೇ ವಿಷಯವನ್ನು ಆಳವಾಗಿ ತಿಳಿಯಲು ಇಷ್ಟಪಡುವಿರಿ.

ಪರಿಹಾರ - ಬುಧ ದೇವರ ವಿಶೇಷ ಅನುಗ್ರಹವನ್ನು ಪಡೆಯಲು ನೀವು ವಿಧರದ ಮೂಲವನ್ನು ಧರಿಸಬೇಕು.


ರತ್ನದಕಲ್ಲು, ರುದ್ರಾಕ್ಷದ ಜೊತೆಯಲ್ಲಿ ಎಲ್ಲಾಜ್ಯೋತಿಷ್ಯ ಪರಿಹಾರಕ್ಕಾಗಿ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್ ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 799/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com