ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರ (11 ಡಿಸೆಂಬರ್ 2020)

ಪ್ರಸ್ತುತ ಸಮಯದಲ್ಲಿ ಎಲ್ಲಾ ರೀತಿಯ ಸಂತೋಷಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವ ಗ್ರಹವೆಂದು ಶುಕ್ರ ಗ್ರಹವನ್ನು ಪರಿಗಣಿಸಲಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ಇದನ್ನು ಅತ್ಯಂತ ಶುಭ ಗ್ರಹಗಳಲ್ಲಿ ಎಣಿಸಲಾಗುತ್ತದೆ. ಶುಕ್ರ ಗ್ರಹವು ಅನುಕೂಲಕರವಾದಾಗ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮತ್ತು ವ್ಯಕ್ತಿಯು ಎಲ್ಲಾ ಭೌತಿಕ ಸಂಪನ್ಮೂಲಗಳನ್ನು ಪಡೆಯುತ್ತಾನೆ.

ಈ ಶುಕ್ರ ಗ್ರಹವು 11 ಡಿಸೆಂಬರ್ 2020 ರಂದು ಶುಕ್ರವಾರದ ಬೆಳಿಗ್ಗೆ 05:04 ಗಂಟೆಗೆ ತನ್ನ ಸ್ವರಾಶಿ ತೂಲದಿಂದ ಹೊರಬಂದು ಮಂಗಳ ಅಧಿಪತ್ಯದ ವೃಶ್ಚಿಕ ರಾಶಿಯಲ್ಲಿ ಪ್ರವೇಶಿಸುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಶುಕ್ರ ಸಂಚಾರದ ವಿಶೇಷ ಪರಿಣಾಮವನ್ನು ಕಾಣಲಾಗುತ್ತದೆ.

ವೃಶ್ಚಿಕ ರಾಶಿ ನೀರಿನ ಅಂಶದ ಸರಹಿ ಮತ್ತು ಕಾಲಪುರುಷ ಜಾತಕದಲ್ಲಿ ಎಂಟನೇ ಮನೆಯ ರಾಶಿಯಾಗಿರುವ ಕಾರಣದಿಂದಾಗಿ ರಹಸ್ಯ ಕೆಲಸದಲ್ಲಿ ಪರಿಣಿತವೆಂದು ಪರಿಗಣಿಸಾಲಾಗಿದೆ. ಈ ರಾಶಿಯಲ್ಲಿ ಶುಕ್ರನ ಉಪಸ್ಥಿತಿಯ ಕಾರಣದಿಂದಾಗಿ, ಸಂತೋಷಗಳನ್ನು ಆನಂದಿಸುವ ಪ್ರವೃತ್ತಿ ಹೆಚ್ಚಾಗುತ್ತದೆ ಮತ್ತು ಜನರು ಈ ದಿಕ್ಕಿನಲ್ಲಿ ಬಹಳ ಶ್ರಮಿಸುತ್ತಾರೆ.

ಶುಕ್ರ ಗ್ರಹದ ಈ ಸಂಚಾರವು ಕೆಲವು ಜನರಿಗೆ ಹೆಚ್ಚು ಶುಭಕರವಾಗಿರುತ್ತದೆ ಮತ್ತು ಕೆಲವರಿಗೆ ಕೆಟ್ಟ ಫಲಿತಾಂಶಗಳನ್ನು ತರಬಹುದು.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

ಮೇಷ ರಾಶಿ

ಶುಕ್ರ ದೇವ ಮೇಷ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಏಳನೇ ಮನೆಯ ಅಧಿಪತಿ. ಶುಕ್ರ ಗ್ರಹವು ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಸಾಗಲಿದೆ. ಇದನ್ನು ಅನುಕೂಲಕರ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಎಂಟನೇ ಮನೆಯನ್ನು ಇದ್ದಕ್ಕಿದ್ದಂತೆ ಸಂಭವಿಯಾಲಾಗುವ ಚಟುವಟಿಕೆಗಳು ಮತ್ತು ನಕಾರಾತ್ಮಕ ಭಾವನೆಯ ಮನೆಯೆಂದು ಸಹ ಕರೆಯಲಾಗುತ್ತದೆ. ಆದಾಗ್ಯೂ, ಎಂಟನೇ ಮನೆಯಲ್ಲಿ ಶುಕ್ರ ಗ್ರಹವು ಹೆಚ್ಚು ದುರುದ್ವೇಷಪೂರಿತ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗುವುದಿಲ್ಲ.

ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣವಾಗಿ ಕಾಳಜಿ ವಹಿಸಬೇಕು. ಅತಿಯಾದ ಭೋಗ ಮತ್ತು ಐಷಾರಾಮಿಯಲ್ಲಿ ತೊಡಗಿರುವುದರಿಂದ ನಿಮ್ಮ ದೇಹವು ಹಾಳಾಗಬಹುದು ಮತ್ತು ಇದರಿಂದಾಗಿ ನೀವು ಕಾಯಿಲೆಗಳಿಗೆ ಒಳಗಾಗಬಹುದು. ಕೆಲವರು ರಹಸ್ಯವಾಗಿ ಸಂತೋಷಕ್ಕಾಗಿ ಹಂಬಲಿಸುತ್ತಾರೆ ಮತ್ತು ಅನಗತ್ಯ ವೆಚ್ಚಗಳನ್ನು ಮಾಡುತ್ತಾರೆ. ಇದರಿಂದಾಗಿ ಆರ್ಥಿಕ ಪರಿಸ್ಥಿತಿ ಸಹ ಹದಗೆಡಬಹುದು.

ಈ ಸಮಯಾವಧಿಯಲ್ಲಿ ನಿಮ್ಮ ಜೀವನ ಸಂಗಾತಿ ತಮ್ಮ ಕುಟುಂಬದೊಂದಿಗೆ ಅಂದರೆ ನಿಮ್ಮ ಅತ್ತೆಮನೆಯವರೊಂದಿಗೆ ಭೇಟಿ ಮಾಡುತ್ತಾರೆ. ನೀವು ಸಹ ಅವರನ್ನು ಬೇಟಿಸಲು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ದಿನಚರಿಯನ್ನು ಸುಧಾರಿಸಬೇಕು ಮತ್ತು ವಿಶೇಷವಾಗಿ ನಿಮ್ಮ ಆಹಾರ ಪಾನೀಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಸಂಚಾರದ ಪರಿಣಾಮವಾಗಿ ವ್ಯಾಪಾರದಲ್ಲಿ ಕೆಲವು ಏರಿಳಿತದ ಪರಿಸ್ಥಿತಿಗಳು ಉಂಟಾಗುತ್ತವೆ. ಈ ಕಾರಣದಿಂದಾಗಿ ನಿಮ್ಮ ಚಿಂತೆ ಹೆಚ್ಚಾಗಬಹುದು.

ಶುಕ್ರ ಸಂಚಾರದ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ.

ಪರಿಹಾರ - ಶುಕ್ರವಾರದಂದು ನೀವು ಶಿವ ದೇವಾಲಯಕ್ಕೆ ಹೋಗಬೇಕು ಮತ್ತು ನಿಮ್ಮ ಎರಡು ಕೈಯಿಂದ ಶಿವಲಿಂಗದ ಮೇಲೆ ಅಕ್ಷತವನ್ನು ಅರ್ಪಿಸಬೇಕು.

ಜೀವನವನ್ನು ಸಮೃದ್ಧಗೊಳಿಸುವ ರಾಜ ಯೋಗವು ನಿಮ್ಮ ಜಾತಕದಲ್ಲಿ ಮರೆಯಾಗಿದೆ.

ಮೇಷ ರಾಶಿ ವಾರದ ರಾಶಿ ಭವಿಷ್ಯ

ವೃಷಭ ರಾಶಿ

ನಿಮಗಾಗಿ ಶುಕ್ರನ ಯಾವುದೇ ಸಂಚಾರವು ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ಶುಕ್ರ ನಿಮ್ಮ ರಾಶಿಯ ಅಧಿಪತಿ ಗ್ರಹ. ಇದರೊಂದಿಗೆ ಇದು ನಿಮ್ಮ ಆರನೇ ಮನೆಯ ಮಾಲೀಕ ಕೂಡ ಆಗಿದ್ದಾರೆ ಮತ್ತು ತನ್ನ ವೃಶ್ಚಿಕ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಏಳನೇ ಮನೆಗೆ ಪ್ರವೇಶಿಸುತ್ತದೆ. ಏಳನೇ ಮನೆಯು ಆಮದು ರಫ್ತು ಮತ್ತು ದೀರ್ಘಕಾಲದ ಪಾಲುದಾರಿಕೆಯ ಮನೆಯಾಗಿದೆ. ಇದರಿಂದ ನಿಮ್ಮ ದಾಂಪತ್ಯ ಜೀವನದ ಬಗ್ಗೆಯೂ ತಿಳಿಯುತ್ತದೆ ಮತ್ತು ಸಾಮಾಜಿಕ ಮಟ್ಟದಲ್ಲಿ ನಿಮ್ಮ ಚಿತ್ರದ ಬಗ್ಗೆ ಸಹ ತಿಳಿಯುತ್ತದೆ.

ಶುಕ್ರ ಸಂಚಾರವು ನಿಮಗೆ ಅನೇಕ ರೀತಿಯ ಶುಭ ಮಾಹಿತಿಯನ್ನು ತರುತ್ತದೆ. ನಿಮ್ಮ ಆರೋಗ್ಯವು ಸುಧಾರಿಸುತ್ತದೆ ಮತ್ತು ಹಳೆಯ ಯಾವುದೇ ಅರೋಗ್ಯ ಸಮಸ್ಯೆಯಿಂದ ಮುಕ್ತರಾಗಬಹುದು. ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವ ಮತ್ತು ಧ್ವನಿಯಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಇದರಿಂದ ನೀವು ಜನರ ಬೆಂಬಲ ಮತ್ತು ಸಹಕಾರವನ್ನು ಪಡೆಯುತ್ತೀರಿ. ಆರ್ಥಿಕ ದೃಷ್ಟಿಕೋನದಿಂದ ಶುಕ್ರನ ಈ ಸಂಛಹ್ರ್ ಅನುಕೂಲಕರವಾಗಿರುತ್ತದೆ. ನೀವು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ನಿಮ್ಮ ಪಾಲುದಾರರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ಸಂಬಂಧವು ಬಲಗೊಳ್ಳುವುದರಿಂದಾಗಿ ನೀವು ಪರಸ್ಪರರ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದುವಿರಿ ಮತ್ತು ನಿಮ್ಮ ವ್ಯಾಪಾರವನ್ನು ಮುನ್ನಡೆಸಲು ಪ್ರಯತ್ನಿಸುತ್ತೀರಿ.

ದಾಂಪತ್ಯ ಜೀವನಕ್ಕೆ ಶುಕ್ರ ಸಂಚಾರವು ಅನುಕೂಲಕರ ಪರಿಣಾಮಗಳನ್ನು ಟ್ಟರುತ್ತದೆ ಮತ್ತು ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಇದಲ್ಲದೆ ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ಮಧ್ಯೆ ನಿಕಟತೆ ಹೆಚ್ಚಾಗುತ್ತಾ ಮತ್ತು ಪ್ರಣಯದ ಅವಕಾಶಗಳು ಸಿಗುತ್ತವೆ. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಿರುತ್ತಾರೆ ಎಂಬುದರ ಬಗ್ಗೆ ನೀವು ಗಮನ ಹರಿಸಬೇಕು ಮತ್ತು ಅವರು ನಿಮ್ಮನ್ನು ತೊಂದರೆಗೊಳಿಸಲು ಸಹ ಪ್ರಯತ್ನಿಸಬಹುದು. ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ಈ ಸಮಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಕಲಾತ್ಮಕ ಭಾಗವು ಜನರ ಮುಂದೆ ಬರುತ್ತದೆ ಮತ್ತು ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ.

ಪರಿಹಾರ - ಶುಕ್ರನ ಶುಭ ಪರಿಣಾಮಗಳನ್ನು ಹೆಚ್ಚಿಸಲು ನೀವು ಶುಕ್ರವಾರದಂದು ಓಪಲ್ ರತ್ನವನ್ನು ಬೆಳ್ಳಿಯ ಉಂಗುರದಲ್ಲಿ ತಯಾರಿಸಿ ಉಂಗುರದ ಬೆರಳಿನಲ್ಲಿ ಧರಿಸಬೇಕು.

ವೃಷಭ ರಾಶಿ ವಾರದ ರಾಶಿ ಭವಿಷ್ಯ

ಮಿಥುನ ರಾಶಿ

ಶುಕ್ರ ದೇವ ಮಿಥುನ ರಾಶಿಯ ಐದನೇ ಮತ್ತು ಹನ್ನೆರಡನೇ ಮನೆಯ ಮಾಲೀಕ ಮತ್ತು ಶುಕ್ರನ ಈ ಸಂಚಾರವು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಸಂಭವಿಸಲಿದೆ. ಆರನೇ ಮನೆಯನ್ನು ವಿವಿಧ ರೀತಿಯ ಸಂಘರ್ಷಗಳ ಮನೆಯೆಂದು ಕರೆಯಲಾಗುತ್ತದೆ ಏಕೆಂದರೆ ಈ ಮನೆಯ ಮೂಲಕ ದೈಹಿಕ ಸಮಸ್ಯೆ, ಸಾಲ, ಮತ್ತು ಶತ್ರುಗಳು, ವಿರೋಧಿಗಳ ಬಗ್ಗೆ ತಿಳಿಯುತ್ತದೆ. ಇದು ಚುನಾವಣೆ ಮತ್ತು ಸ್ಪರ್ಧೆಯ ಮನೆಯು ಆಗಿದೆ. ಈ ಸಂಚಾರದ ಪರಿಣಾಮವಾಗಿ ನಿಮ್ಮ ಆರೋಗ್ಯವು ಕುಸಿಯಬಹದು. ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ವಿಶೇಷವಾಗಿ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಈ ಸಮಯದಲ್ಲಿ ನಿಮ್ಮನ್ನು ಕಾಡಬಹುದು. ಆದ್ದರಿಂದ ವಿಶೇಸಹವಾಗಿ ನಿಮ್ಮ ಆಹಾರ ಪಾನೀಯ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಈ ಸಂಚಾರದ ಪರಿಣಾಮವಾಗಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು ಮತ್ತು ಅದನ್ನು ನಿಯಂತ್ರಿಸಲು ಕೂಡ ನಿಮಗೆ ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಬಜೆಟ್ ಹಾಳಾಗಬಹುದು. ಆದ್ದರಿಂದ ಯಾವುದೇ ರೀತಿಯ ತೊಂದರೆಗಳಾಗದಂತೆ ನಿಮ್ಮ ಹಣಕಾಸನ್ನು ಯೋಜಿತ ರೀತಿಯಲ್ಲಿ ಮುಂಚಿತವಾಗಿ ನಿರ್ವಹಿಸಿ. ನಿಮ್ಮ ರಾಶಿಯ ವಿದ್ಯಾರ್ಥಿಗಳಿಗೆ ಈ ಸಂಚಾರವು ಅನುಕೂಲಕ್ರವಾಗಿರಲಿದೆ. ಅವರು ತಮ್ಮ ಶಿಕ್ಷಣದಲ್ಲಿ ಸರಿಯಾದ ಫಲಿತಾಂಶಗಳನ್ನು ಪಡೆಯುತ್ತಾರೆ. ಆದರೆ ಅವರು ತಮ್ಮ ಏಕಾಗ್ರತೆಯನ್ನು ಕೆಡದಂತೆ ನೋಡಿಕೊಳ್ಳಬೇಕು. ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳು ಪ್ರಗತಿ ಪಡೆಯುತ್ತಾರೆ.

ನೀವು ಪ್ರೀತಿಯ ಸಂಬಂಧದಲ್ಲಿದ್ದರೆ, ಈ ಸಮಯವೂ ನಿಮ್ಮ ಪ್ರೀತಿ ಜೀವನವನ್ನು ಸುಧಾರಿಸುತ್ತದೆ ಮತ್ತು ಹೃದಯದ ಆಳದಿಂದ ನೀವು ನಿಮ್ಮ ಪ್ರೀತಿಪಾತ್ರರನ್ನು ಪ್ರೀತಿಸುತ್ತೀರಿ. ಇದರಿಂದಾಗಿ ನಿಮ್ಮಿಬ್ಬರ ನಡುವಿನ ಸಂಬಂಧವು ಇನ್ನಷ್ಟು ಹೆಚ್ಚು ಬಲಗೊಳ್ಳುತ್ತದೆ ಮತ್ತು ಸಂಬಂಧದಲ್ಲಿ ನೀವು ಮುಂದುವರಿಯುತ್ತಿರಿ.

ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ ನಿಮ್ಮ ಕೈಯಿಂದ ಹಸುವಿಗೆ ಗೋಧಿ ಹಿಟ್ಟು ತಿನ್ನಿಸಬೇಕು.

ಮಿಥುನ ರಾಶಿ ವಾರದ ರಾಶಿ ಭವಿಷ್ಯ

ಜೀವನದಲ್ಲಿನ ಯಾವುದೇ ಸಮಸ್ಯೆಯ ಪರಿಹಾರಕ್ಕಾಗಿ ಪ್ರಶ್ನೆ ಕೇಳಿ

ಕರ್ಕ ರಾಶಿ

ಶುಕ್ರ ಗ್ರಹವು ಕರ್ಕ ರಾಶಿಯ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಇದು ನಿಮ್ಮ ಸಂತೋಷ ಮತ್ತು ಲಾಭದ ಮನೆಯ ಅಧಿಪತಿಯಾಗಿ ಹೆಚ್ಚು ಪ್ರಮುಖ ಗ್ರಹವಾಗಿದೆ. ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರವು ನಿಮ್ಮ ಐದನೆ ಮನೆಯಲ್ಲಿ ಸಂಭವಿಸಲಿದೆ. ಐದನೇ ಮನೆಯ ಮೂಲಕ ಬುದ್ಹಿ ಮತ್ತು ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಜೀವನದ ಒಲವು, ಪ್ರೀತಿ ಸಂಬಂಧ, ಮಕ್ಕಳು ಮತ್ತು ಕಲಾತ್ಮಕತೆಯ ಬಗ್ಗೆ ಸಾಕಷ್ಟು ಮಟ್ಟಿಗೆ ಮಾಹಿತಿ ತಿಳಿಯಬಹುದು.

ಈ ಸಂಚಾರದ ಪರಿಣಾಮವಾಗಿ ನಿಮ್ಮ ಪ್ರೀತಿ ಜೀವನಕ್ಕೆ ಸಂಜೀವನಿ ದೊರೆಯುತ್ತದೆ. ನೀವು ಪ್ರೀತಿ ಸಂಬಂಧದಲ್ಲಿದ್ದರೆ, ನಿಮ್ಮ ಪ್ರೀತಿ ಜೀವನ ಸುಂದರಾಗುತ್ತದೆ. ನಿಮ್ಮ ಸಂಬಂಧದಲ್ಲಿ ಪ್ರೀತಿ, ಬಾಂದವ್ಯ, ಸ್ನೇಹ ಮತ್ತು ಪರಸ್ಪರರ ಸಂಪರ್ಕ ಹೆಚ್ಚಾಗುತ್ತದೆ. ನೀವು ನಿಮ್ಮ ಪ್ರೀತಿ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತೀರಿ. ಇದರಿಂದ ನೀವು ಒಳ್ಳೆಯದಾಗಿ ಅನುಭವಿಸುತ್ತೀರಿ ಮತ್ತು ಜೇವನದಲ್ಲಿ ಸಂತೋಷವನ್ನು ಪಡೆಯುತ್ತೀರಿ.

ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಆದಾಯವು ಹೆಚ್ಚಾಗುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಹೆಚಾಗುವತ್ತ ಸಾಗುತ್ತದೆ. ನೀವು ನಿಮ್ಮ ಯಾವುದೇ ಕಲಾತ್ಮಕ ಅಭಿವ್ಯಕ್ತಿಯ ಮೂಲಕ ಸಮಾಜದಲ್ಲಿ ನಿಮ್ಮನ್ನು ಮುನ್ನಡೆಸುತ್ತೀರಿ ಮತ್ತು ಇದರಿಂದಲೂ ನೀವು ಆರ್ಥಿಕ ಪಡೆಯುವ ಜೊತೆಯಲ್ಲಿ ನಿಮ್ಮ ಸಾಮಾಜಿಕ ಮಟ್ಟವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಯಾವುದೇ ಗುಪ್ತ ಪ್ರತಿಭೆಯನ್ನು ಹೊರತರಬಹುದು. ನೇರವಾಗಿ ಜನರ ಮುಂದೆ ಇರದಿರುವ ಕೆಲವು ಕಾರ್ಯಗಳಲ್ಲಿ ನಿಮ್ಮ ಮನಸ್ಸು ತೊಡಗುತ್ತದೆ.

ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳಿಗೆ ಈ ಸಮಯ ಉತ್ತಮವಾಗಿರುತ್ತದೆ, ಒಂದೆಡೆ ಅವರಲ್ಲಿ ಹೊಸ ಗುಣಗಳು ಬೆಳೆಯುತ್ತವೆ ಮತ್ತು ಅವರು ಜೀವನದ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ, ಮತ್ತೊಂದೆಡೆ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಮತ್ತು ಮಾನಸಿಕವಾಗಿ ಅವರು ಸಂತೋಷಪಡುತ್ತಾರೆ.

ಪರಿಹಾರ - ಶುಕ್ರವಾರದಂದು ತಾಯಿ ಲಕ್ಷ್ಮಿಯನ್ನು ಪೂಜಿಸಿ ಮತ್ತು ಶ್ರೀ ಸೂಕ್ತವನ್ನು ಪಠಿಸಬೇಕು.

ಕರ್ಕ ರಾಶಿ ವಾರದ ರಾಶಿ ಭವಿಷ್ಯ

ಸಿಂಹ ರಾಶಿ

ಶುಕ್ರ ಗ್ರಹವು ಸಿಂಹ ರಾಶಿಯ ಮೂರನೇ ಮತ್ತು ಹತ್ತನೇ ಮನೆಯ ಮಾಲೀಕ. ಹತ್ತನೇ ಮನೆಯು ನಿಮ್ಮ ವ್ಯಾಪಾರ ಅಂದರೆ ವೃತ್ತಿಪರ ಜೀವನದ ಬಗ್ಗೆ ತಿಳಿಸುತ್ತದೆ ಮತ್ತು ಮೂರನೇ ಮನೆಯು ನಿಮ್ಮ ಸಹೋದರ ಸಹೋದರಿ ಮತ್ತು ನಿಮ್ಮ ಪ್ರಯತ್ನಗಳ ಸಾಮರ್ಥ್ಯದ ಬಗ್ಗೆ ತಿಳಿಸುತ್ತದೆ.

ಶುಕ್ರ ಸಂಚಾರವು ನಿಮ್ಮ ರಾಶಿಯಿಂದ ನಾಲ್ಕನೇ ಮನೆ ಅಂದರೆ ಸಂತೋಷದ ಸ್ಥಾನದಲ್ಲಿ ಸಂಭವಿಸಲಿದೆ. ನಾಲ್ಕನೇ ಮನೆಯನ್ನು ಸಂತೋಷ ಮತ್ತು ತಾಯಿಯ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ತಾಯಿ, ಸಂತೋಷ, ಸ್ಥಿರ ಅಸ್ಥಿರ ಸಂಪತ್ತು ಮತ್ತು ಜೀವನದಲ್ಲಿನ ಎಲ್ಲಾ ರೀತಿಯ ಸಂತೋಷ ಸಂಪನ್ಮೂಲಗಳನ್ನು ಕಾಣಲಾಗುತ್ತದೆ. ಶುಕ್ರ ಸಂಚಾರವು ಈ ಮನೆಯಲ್ಲಿರುವ ಕಾರಣದಿಂದಾಗಿ ನಿಮ್ಮ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನೀವು ವಿವಿಧ ಮೂಲಗಳಿಂದ ಕೆಲವು ಉತ್ತಮ ವಸ್ತುಗಳನ್ನು ಪಡೆಯುತ್ತೀರಿ. ಇದು ನಿಮಗೆ ಸಂತೋಷವನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ನೀವು ಯಾವುದೇ ಹೊಸ ವಸ್ತುವನ್ನು ಖರೀದಿಸಬಹುದು. ಉದಾಹರಣೆಗೆ :- ಟಿವಿ, ಫ್ರಿಡ್ಜ್, ಇತ್ಯಾದಿಗಳು. ಕುಟುಂಬದ ವಾತಾವರಣವು ಉತ್ತಮಾಗಿರುತ್ತದೆ. ಈ ಸಮಯದಲ್ಲಿ ನೀವು ಮನೆಯ ಅಲಂಕಾರ ಅಥವಾ ವಾಸ್ತುಶಿಲ್ಪದ ಬಗ್ಗೆ ವಿಶೇಷವಾಗಿ ಗಮನ ಹರಿಸುತ್ತೀರಿ ಮತ್ತು ದೇಶೀಯವಾಗಿಯೂ ಖರ್ಚು ಮಾಡುವಿರಿ. ಇದಲ್ಲದೆ ಕುಟುಂಬದಲ್ಲಿ ಯಾವುದೇ ವಿಷಯದ ಬಗ್ಗೆ ವಿವಾದ ಸಂಭವಿಸಬಹುದು ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ.

ಈ ಸಮಯವೂ ಕೆಲಸಾದ ಸ್ಥಳಕ್ಕೆ ಅನುಕೂಲಕರವಾಗಿರಲಿದೆ. ನಿಮ್ಮ ಪ್ರಯತ್ನಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತವೆ. ನೀವು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದರಿಂದ ನೀವು ವಿರುದ್ಧ ಪರಿಸ್ಥಿತಿಗಳಿಂದ ಹೊರಬರಲು ಸಾಧ್ಯವಾಗುತ್ತದೆ. ನೀವು ನಿಮ್ಮ ಪ್ರಯತ್ನಗಳ ಮೂಲಕ ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಸುಧಾರಿಸಬಹುದು. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ತಾಯಿಗೂ ಉತ್ತಮ ಫಲಿತಾಂಶಗಳು ದೊರೆಯುತ್ತವೆ.

ಈ ಸಮಯದಲ್ಲಿ ನಿಮ್ಮ ಕುಟುಂಬದ ಆದಾಯ ಹೆಚ್ಚಾಗುತ್ತದೆ ಮತ್ತು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಯಾವುದೇ ಶುಭ ಕಾರ್ಯವು ಸಂಭವಿಸಬಹುದು. ಇದರಿಂದಾಗಿ ಕುಟುಂಬದ ವಾತಾವರಣವು ಉತ್ಸಾಹದಿಂದ ತುಂಬಿರುತ್ತದೆ.

ಪರಿಹಾರ - ನೀವು ತಾಯಿ ಮಹಾಲಕ್ಷ್ಮಿಯ ಓಂ ಶ್ರೀ ಮಹಾಸರಸ್ವತ್ಯೆ ನಮಃ ಮಂತ್ರವನ್ನು ಜಪಿಸಬೇಕು, ಇದನ್ನು ಶುಕ್ರವಾರದಂದು ಆರಂಭಿಸುವುದು ಉತ್ತಮ.

ಸಿಂಹ ರಾಶಿ ವಾರದ ರಾಶಿ ಭವಿಷ್ಯ

ಕನ್ಯಾ ರಾಶಿ

ಶುಕ್ರ ಗ್ರಹವು ಕನ್ಯಾ ರಾಶಿಯ ಎರಡನೇ ಮತ್ತು ಒಂಬತ್ತನೇ ಮನೆಯ ಮಾಲೀಕ. ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ರಾಶಿಯಿಂದ ಮೂರನೇ ಮನೆಗೆ ಸಂಚರಿಸಲಿದೆ. ಮೂರನೇ ಮನೆಯ ಮೂಲಕ ನಮ್ಮ ಸಂವಹನದ ಕೌಶಲ್ಯ, ಸಂವಹನ ಸಾಮರ್ಥ್ಯ, ಸಣ್ಣ ಪ್ರವಾಸಗಳು, ಕಿರಿಯ ಸಹೋದರ ಸಹೋದರಿಯರು, ಸಂಬಂಧಿಕರು ಮತ್ತು ನೆರೆಹೊರೆಯವರ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತದೆ. ಶುಕ್ರ ಗ್ರಹವು ಮೂರನೇ ಮನೆಯಲ್ಲಿ ಪ್ರವೇಶಿಸುವುದರಿಂದಾಗಿ ನಿಮ್ಮ ಪ್ರಯತ್ನಗಳು ವೇಗಗೊಳ್ಳುತ್ತವೆ ಮತ್ತು ನೀವು ನಿಮ್ಮ ಜೀವನದಲ್ಲಿ ಉತ್ತಮ ವಸ್ತುಗಳನ್ನು ಪಡೆಯಲು ಹೆಚ್ಚು ಪರಿಶ್ರಮ ಮತ್ತು ಪ್ರಯತ್ನಗಳನ್ನು ಮಾಡುವಿರಿ. ನಿಮ್ಮ ಅದೃಷ್ಟದಲ್ಲಿ ಹೆಚ್ಚಳವಾಗುತ್ತದೆ. ಈ ಕಾರಣದಿಂದಾಗಿ ನಿಮ್ಮ ಅನೇಕ ಸಿಲುಕಿಕೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ, ಇದರಿಂದ ಆರ್ಥಿಕವಾಗಿ ಸಹ ಲಾಭವಾಗುತ್ತದೆ.

ನೀವು ನಿಮ್ಮ ಕಿರಿಯ ಸಹೋದರ ಸಹೋದರಿಯರಿಗೆ ಸಾಧ್ಯವಾದಷ್ಟು ಸಹಾಯ ಮಾಡುವಿರಿ ಮತ್ತು ಅವರಿಗೆ ಅಗತ್ಯವಿದ್ದರೆ ಆರ್ಥಿಕವಾಗಿ ಕೂಡ ಅವರೊಂದಿಗೆ ನಿಲ್ಲುವಿರಿ. ಈ ಸಮಯ್ದಲ್ಲಿ ನೀವು ನಿಮ್ಮನ್ನು ಸಾಕಷ್ಟು ಬಲವಾದ ಸ್ಥಾನದಲ್ಲಿ ಕಾಣುವಿರಿ ಮತ್ತು ಇತರರ ಬಗ್ಗೆ ಯೋಚಿಸುವುದು ನಿಮ್ಮ ಮುಖ್ಯವಾದ ಆಲೋಚನೆಯಾಗುತ್ತದೆ. ಯಾವುದೇ ಧಾರ್ಮಿಕ ಸ್ಥಳಕ್ಕೆ ಹೋಗುವುದು ಅಥವಾ ಚಿಕ್ಕ ದೂರದ ಸ್ಥಳಗಳಿಗೆ ಪ್ರಯಾಣಿಸುವುದು ನಿಮಗೆ ಸಂತೋಷವನ್ನು ನೀಡುತ್ತವೆ ಮತ್ತು ಈ ದಿಕ್ಕಿನಲ್ಲಿ ನೀವು ಮುಂದುವರೆದು ಪ್ರಯತ್ನಿಸುವಿರಿ. ಈ ಸಮಯದಲ್ಲಿ ನೀವು ನಿಮ್ಮ ಕಿರಿಯ ಸಹೋದರ ಸಹೋದರಿಯರ ಜೊತೆಯಲ್ಲಿ ಯಾವುದೇ ಚಲನಚಿತ್ರವನ್ನು ನೋಡಲು ಸಹ ಹೋಗಬಹುದು. ಇದರಿಂದ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳಬಹುದು.

ಈ ಸಮಯದಲ್ಲಿ ನಿಮ್ಮ ನೆರೆಹೊರೆಯವರು ಅಥವಾ ಕೆಲವು ಸಂಬಂಧಿಕರೊಂದಿಗೆ ವಿಶೇಷವಾಗಿ ಯಾವುದೇ ವಿಷಯದ ಬಗ್ಗೆ ನಿಮ್ಮ ಜಗಳವಾಗಬಹುದು. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ ಮತ್ತು ಯಾವುದೇ ಇತರ ವ್ಯಕ್ತಿಯ ಜಗಳ ನಡೆಯುತ್ತಿದ್ದರೆ, ಅದರಲ್ಲಿ ನೀವು ಹಸ್ತಕ್ಷೇಪ ಅಥವಾ ಮಧ್ಯಸ್ಥಿಕೆ ವಹಿಸಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಏಕೆಂದರೆ ಇದರಿಂದಾಗಿ ನೀವು ನಷ್ಟವನ್ನು ಎದುರಿಸಬೇಕಾಗಬಹುದು. ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮವಾಗಿ ವರ್ತಿಸಿ. ಇದರಿಂದ ಕೆಲಸದ ಸ್ಥಳದಲ್ಲಿ ನಿಮಗೆ ಲಾಭವಾಗಬಹುದು.

ಪರಿಹಾರ - ಶುಕ್ರ ಗ್ರಹದ ಶುಭತೆಯನ್ನು ಹೆಚ್ಚಿಸಲು ಶುಕ್ರವಾರದಂದು ಬಿಳಿ ದಾರದಲ್ಲಿ ಆರು ಮುಖ ರುದ್ರಾಕ್ಷವನ್ನು ಧರಿಸುವುದು ಉತ್ತಮ.

ಕನ್ಯಾ ರಾಶಿ ವಾರದ ರಾಶಿ ಭವಿಷ್ಯ

ತುಲಾ ರಾಶಿ

ಶುಕ್ರ ಗ್ರಹವು ನಿಮ್ಮ ರಾಶಿಯ ಅಧಿಪತಿ, ಆದ್ದರಿಂದ ಶುಕ್ರನ ಯಾವುದೇ ಸಂಚಾರವು ನಿಮಗೆ ಉತ್ತಮವೆಂದು ಸಾಬೀತುಪಡಿಸುತ್ತದೆ. ನಿಮ್ಮ ರಾಶಿ ಅಂದರೆ ನಿಮ್ಮ ಮೊದಲನೇ ಮನೆಯ ಮಾಲೀಕನಾಗಿರುವ ಜೊತೆಯಲ್ಲಿ ಶುಕ್ರ ನಿಮ್ಮ ಎಂಟನೇ ಮನೆಯ ಮಾಲೀಕ ಕೂಡ ಆಗಿದೆ ಮತ್ತು ಸಂಚಾರದ ಈ ಸಮಯದಲ್ಲಿ ಅದು ನಿಮ್ಮ ಎರಡನೇ ಮನೆಗೆ ಸಾಗುತ್ತದೆ. ಎರಡನೇ ಮನೆಯನ್ನು ಹಣಕಾಸಿನ ಮನೆಯೆಂದು ಕರೆಯಲಾಗುತ್ತದೆ. ಏಕೆಂದರೆ ಈ ಮನೆಯ ಮೂಲಕ ನಿಮ್ಮ ಸಂಗ್ರಹಿಸಲಾದ ಹಣ ನಿಮ್ಮ ಪರಿವಾರಮ್ ನಿಮ್ಮ ಆಹಾರ ಪಾನೀಯ, ನಿಮ್ಮ ಮುಖ ಮತ್ತು ಧ್ವನಿಯ ಬಗ್ಗೆ ಪರಿಗಣಿಸಲಾಗುತ್ತದೆ.

ಸಂಚಾರದ ಪರಿಣಾಮದಿಂದಾಗಿ ನೀವು ಅಪೇಕ್ಷಿತ ಹಣಕಾಸು ಪಡೆಯುತ್ತೀರಿ ಮತ್ತು ನೀವು ವಿವಿಧ ಮೂಲಗಳಿಂದಲೂ ಹಣವನ್ನು ಪಡೆಯುವ ಸಾಧ್ಯತೆ ಇದೆ. ಇದ್ದಕ್ಕಿದ್ದಂತೆ ಕೂಡ ನೀವು ಹಣವನ್ನು ಪಡೆಯಬಹುದು. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹಠಾತ್ ಉತ್ತಮಗೊಳ್ಳುತ್ತದೆ. ಇದಲ್ಲದೆ ಕೆಲವು ಜನರು ತಮ್ಮ ಅತ್ತೆಮನೆಯ ಕಡೆಯಿಂದ ಸಹ ಸಂತೋಷದ ಸಂಪನ್ಮೂಲಗಳನ್ನು ಪಡೆಯಬಹುದು.

ಶುಕ್ರನ ಈ ಸಂಚಾರವು ದೀರ್ಘಕಾಲದಿಂದ ಕುಟುಂಬದಲ್ಲಿ ನಡೆಯುತ್ತಿದ್ದ ಒತ್ತಡದಿಂದಲೂ ನಿಮಗೆ ಮುಕ್ತಿ ನೀಡಬಹುದು ಮತ್ತು ಜನರ ಮಧ್ಯೆ ಪರಸ್ಪರರನ್ನು ಅರ್ಥಮಾಡಿಕೊಳ್ಳುವ ಪ್ರವೃತ್ತಿ ಜನಿಸುತ್ತದೆ. ನೀವು ನಿಮ್ಮ ಕುಟುಂಬದ ಬಗೆ ಸಂಪೂರ್ಣ ಗಮನ ಹರಿಸುತ್ತೀರಿ ಮತ್ತು ನಿಮ್ಮ ಕುಟುಂಬದ ಒಳ್ಳೆಯದಕ್ಕಾಗಿ ಕೆಲವು ಹೊಸ ಹೆಜ್ಜೆಗಳನ್ನು ಸಹ ಎತ್ತಬಹುದು. ಇದರಲ್ಲಿ ನೀವು ಕಹಿಯಾಗಿ ಏನನ್ನಾದರೂ ಹೇಳಬೇಕಾಗಬಹುದು, ಆದರೆ ಇದು ಅಗತ್ಯವಿದ್ದರೆ ಈ ದಿಕ್ಕಿನಲ್ಲಿ ನೀವು ಸಾಗಿ.

ನಿಮ್ಮ ಮನಸ್ಸು ಸಂತೋಷವನ್ನು ಅನುಭವಿಸುತ್ತದೆ. ಈ ಸಮಯದಲ್ಲಿ ನೀವು ಹಣವನ್ನು ಸಂಗ್ರಹಿಸುವಲ್ಲಿ ಸಹ ಯಶಸ್ವಿಯಾಗುತ್ತೀರಿ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ವ್ಯಾಪಾರದ ವಿಷಯದಲ್ಲಿ ಮಾಡಲಾದ ಪ್ರಯತ್ನಗಳು ನಿಮಗೆ ಯಶಸ್ಸು ನೀಡುತ್ತವೆ ಮತ್ತು ನಿಮಗೆ ಆರ್ಥಿಕ ಲಾಭವಾಗುತ್ತದೆ.

ಪರಿಹಾರ - ಶುಕ್ರ ಗ್ರಹದ ಓಂ ದ್ರಾಮ್ ದ್ರೀಮ್ ದ್ರೌಮ್ ಶುಕ್ರಾಯ್ ನಮಃ ಬೀಜ ಮಂತ್ರವನ್ನು ಜಪಿಸಿ. ಇದನ್ನು ಶುಕ್ರವಾರದಿಂದಲೇ ಆರಂಭಿಸಿ.

ತುಲಾ ರಾಶಿ ವಾರದ ರಾಶಿ ಭವಿಷ್ಯ

ವೃಶ್ಚಿಕ ರಾಶಿ

ಶುಕ್ರ ಗ್ರಹವು ವೃಶ್ಚಿಕ ರಾಶಿಯ ಏಳನೇ ಮತ್ತು ಹನ್ನೆರಡನೇ ಮನೆಯ ಮಾಲೀಕ ಮತ್ತು ಶುಕ್ರ ಸಂಚಾರವು ವೃಶ್ಚಿಕ ರಾಶಿಯಲ್ಲಿ ನಿಮ್ಮದೇ ರಾಶಿಯಲ್ಲಿ ಸಂಭವಿಸಲಿದೆ. ಅದಂರೆ ನಿಮ್ಮ ಮೊದಲನೇ ಮನೆಯಲ್ಲಿ. ಮೊದಲನೇ ಮನೆಯ ಮೂಲಕ ಮೆದುಳು, ಯೊಚ್ಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ, ವ್ಯಕ್ತಿಯ, ಸಮಾಜದ ಮುಂದೆ ನಮ್ಮ ಮುಖ, ದೈಹಿಕ ರಚನೆ ಮತ್ತು ಬಣ್ನದ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಶುಕ್ರ ಸಂಚಾರದ ಪರಿಣಾಮವಾಗಿ ನಿಮ್ಮಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಸಹಜವಾಗಿ ಜನಿಸುತ್ತದೆ. ನಿಮಗೆ ಸಂತೋಷ ನೀಡುವಂತಹ ಹೊಸ ವಸ್ತುಗಳನ್ನು ನೀವು ಖರೀದಿಸಲು ಇಷ್ಟಪಡುವಿರಿ ಮತ್ತು ಇದು ನಿಮಗೆ ಸಂತೋಷದ ವಿಷಯವಾಗಿರುತ್ತದೆ.

ಈ ಸಮಯದಲ್ಲಿ ನೀವು ನಿಮ್ಮ ಮನರಂಜನೆಗಾಗಿ ಸಹ ಖರ್ಚು ಮಾಡುತ್ತೀರಿ ಮತ್ತು ಯಾವುದೇ ಹೊಸ ಗ್ಯಾಡ್ಜೆಟ್ ಅನ್ನು ಸಹ ಖರೀದಿಸಬಹುದು. ನೀವು ನಿಮ್ಮ ವ್ಯಕ್ತಿತ್ವನ್ನು ಸುಧಾರಿಸಲು ಪ್ರಯತ್ನಿಸುತ್ತೀರಿ. ಅದು ಸೌಂದರ್ಯವರ್ಧಕವಾಗಲಿ ಅಥವಾ ಕೆಲವು ವಿಶೇಷ ಬಟ್ಟೆಯಾಗಲಿ, ನೀವು ಎಲ್ಲವನ್ನು ನಿಮಗಾಗಿ ಪಡೆಯಲು ಬಯಸುತ್ತೀರಿ. ಇದರಿಂದ ಖಂಡಿತವಾಗಿಯೂ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಆದರೆ ಇವೆಲ್ಲವೂ ನಿಮಗೆ ಸಮಾಧಾನವನ್ನು ನೀಡುತ್ತವೆ ಮತ್ತು ಸಂತೋಷವನ್ನು ಪಡೆಯುತ್ತೀರಿ.

ಶುಕ್ರ ಸಂಚಾರವು ನಿಮ್ಮ ದಾಂಪತ್ಯ ಜೀವನಕ್ಕೆ ಯಾವುದೇ ಕೊಡುಗೆಯಿಂದ ಕಡಿಮೆ ಇರುವುದಿಲ್ಲ. ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಯಾವುದೇ ಒತ್ತಡವು ನಡೆಯುತ್ತಿದ್ದರೆ, ಅದರಿಂದಲೂ ನೀವು ಮುಕ್ತರಾಗುವಿರಿ. ನಿಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ ಮತ್ತು ಇದಲ್ಲದೆ ಜೊತೆಯಲ್ಲಿ ಸಮಯವನ್ನು ಕಳೆಯಲು ಅವಕಾಶವನ್ನು ಪಡೆಯುತ್ತೀರಿ. ನಿಮ್ಮ ವ್ಯಾಪಾರವು ಹೆಚ್ಚಾಗುತ್ತದೆ ಮತ್ತು ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಇದರಿಂದ ಹಣಕಾಸಿನ ಲಾಭವಾಗುತ್ತದೆ. ಆದಾಗ್ಯೂ ಕೆಲವು ಜನರು ಕ್ಷೀಣಿಸುತ್ತಿರುವ ಆರೋಗ್ಯವನ್ನು ಎದುರಿಸಬೇಕಾಗಬಹುದು. ಇದರಿಂದ ಅವರು ತೊಂದರೆಗೆ ಒಳಗಾಗಬಹುದು.

ಪರಿಹಾರ - ವಿಶೇಷ ಲಾಭವನ್ನು ಪಡೆಯಲು ನೀವು ಶುಕ್ರವಾರದಂದು ಬಿಳಿ ಹಸುವಿನ ದಾನ ಮಾಡಿ.

ವೃಶ್ಚಿಕ ರಾಶಿ ವಾರದ ರಾಶಿ ಭವಿಷ್ಯ

ಧನು ರಾಶಿ

ಶುಕ್ರ ಗ್ರಹವು ಧನು ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಗೆ ಸಾಗುತ್ತದೆ. ಶುಕ್ರ ಗ್ರಹವು ನಿಮ್ಮ ರಾಶಿಚಕ್ರದ ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಶುಕ್ರ ಗ್ರಹವು ಹನ್ನೆರಡನೇ ಮನೆಗೆ ಸಂಚರಿಸುವುದು ನಿಮಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಹನ್ನೆರಡನೇ ಮನೆಯನ್ನು ವೆಚ್ಚ ಅಥವಾ ಹಾನಿಯ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಮನೆಯ ಮೂಲಕ ನಮ್ಮ ವೆಚ್ಚಗಳು, ವೇದೇಶಕ್ಕೆ ಹೋಗುವುದು, ಅರೋಗ್ಯ ಸಮಸ್ಯೆಗಳು, ಎಡಗಣ್ಣು, ನಿದ್ರೆ ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು, ನಿದ್ರೆಯ ಆನಂದ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಶುಕ್ರ ಗ್ರಹದ ಪರಿಣಾಮವಾಗಿ ಸರ್ವಪ್ರಥಮವಾಗಿ ನೀವು ನಿಮ್ಮ ಶತ್ರುಗಳಿಂದ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಅವರು ಹೆಚ್ಚು ಪ್ರಬಲವಾಗಿರುತ್ತಾರೆ ಮತ್ತು ನಿಮಗೆ ಯಾವುದೇ ರೀತಿಯ ಆರ್ಥಿಕ ಅಥವಾ ಸಾಮಾಜಿಕ ಹಾನಿಯನ್ನು ನೀಡಲು ಪ್ರಯತ್ನಿಸುತ್ತಾರೆ ಇದಲ್ಲದೆ ನಿಮ್ಮ ವೆಚ್ಚಗಳಲ್ಲಿ ಅನಿರೀಕ್ಷಿತ ಹೆಚ್ಚಳವು ನಿಮ್ಮ ಹಣೆಯ ಮೇಲೆ ಚಿನ್ತಯನ್ನುಂಟು ಮಾಡುತ್ತವೆ. ಏಕೆಂದರೆ ಈ ವೆಚ್ಚಗಳು ನಿಮ್ಮ ನಿಯಂತ್ರಣದಿಂದ ಹೊರಬರಬಹುದು ಮತ್ತು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.

ಈ ಸಮಯದಲ್ಲಿ ನೀವು ನಿಮ್ಮ ವಿವಿಧ ಚಟುವಟಿಕೆಗಳ ಮೇಲು ಗಮನ ಹರಿಸಬೇಕು ಮತ್ತು ಯಾವುದು ಅವಶ್ಯಕ ಖರ್ಚು ನೀವು ಮಾಡಬೇಕು ಎಂಬುದನ್ನು ನೀವು ಕಲಿಯಬೇಕು ಮತ್ತು ಉಳಿದ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ ಎಂದು ನಿಮಗೆ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯ ಅನುಕೂಲಕರವಾಗಿರುವುದಿಲ್ಲ. ನೀವು ಯಾವುದೇ ದೈಹಿಕ ಸಮಸ್ಯೆಯನ್ನು ಹೊಂದುವ ಸಾಧ್ಯತೆ ಇದೆ, ಆದ್ದರಿಂದ ನೀವು ನಿಮ್ಮ ಆಹಾರ ಪಾನೀಯ ಮತ್ತು ದಿನಚರಿಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದರಿಂದ ನೀವು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಭವಿಷ್ಯದ ಬಗ್ಗೆ ಯೋಚಿಸದೆ ನಿಮ್ಮ ಎರಡು ಕೈಗಳಿಂದ ತೆರೆದ ಮನಸ್ಸಿನಿಂದ ಹಣಕಾಸು ಖರ್ಚು ಮಾಡುವಿರಿ. ಆದರೆ ನಿಮ್ಮ ಈ ಹವ್ಯಾಸವನ್ನು ತಪ್ಪಿಸಿ ಇಲ್ಲದಿದ್ದರೆ ನಂತರ ನೀವು ಪಶ್ಚತ್ತಾಪ ಪಡಬೇಕಾಗಬಹುದು.

ಪರಿಹಾರ - ದೇವಾಲಯದಲ್ಲಿ ಮಹಿಳಾ ಅರ್ಚಕರಿಗೆ ಸೌಂದರ್ಯವರ್ಧಕಗಳನ್ನು ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

ಧನು ರಾಶಿ ವಾರದ ರಾಶಿ ಭವಿಷ್ಯ

ಮಕರ ರಾಶಿ

ಶುಕ್ರ ಗ್ರಹವು ಮಕರ ರಾಶಿಯ ಹನ್ನೊಂದನೇ ಮನೆಗೆ ಸಾಗಲಿದೆ. ಶುಕ್ರ ಗ್ರಹವು ನಿಮ್ಮ ಜಾತಕದಲ್ಲಿ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಗ್ರಹ. ಹನ್ನೊಂದನೇ ಮನೆಯನ್ನು ಲಾಭದ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಮನೆಯ ಮೂಲಕ ವಿವಿಧ ರೀತಿಯಲ್ಲಿ ಉಂಟಾಗುವ ಲಾಭಗಳು, ಆದಾಯ, ಮಹತ್ವಾಕಾಂಕ್ಷೆಗಳು ಮತ್ತು ಜೀವನದಲ್ಲಿ ಪಡೆಯಲಾಗುವುದರ ಬಗ್ಗೆ ಪರಿಗಣಿಸಲಾಗುತ್ತದೆ.

ಈ ಸಂಚಾರವು ನಿಮ್ಮ ಆದಾಯವನ್ನು ಕೆಲಸ ಮಾಡುತ್ತದೆ ಮತ್ತು ನಿಮ್ಮ ಐದು ಬೆರಳುಗಳು ತುಪ್ಪದಲ್ಲಿರುತ್ತವೆ. ನಿಮ್ಮ ಮಹತ್ವಾಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ. ಇದು ನಿಮಗೆ ಪ್ರೋತ್ಸಾಹವನ್ನು ನೀಡುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಸಾಮಾಜಿಕ ವಲಯವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಈ ರೀತಿ ಈ ಸಂಚಾರವು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನೀವು ವಿವಾಹಿತರಾಗಿದ್ದರೆ ಸಂಚಾರದ ಈ ಸಮಯದಲ್ಲಿ ನಿಮ್ಮ ಮಕ್ಕಳು ಅನೇಕ ಲಾಭವನ್ನು ಪಡೆಯುತ್ತಾರೆ ಮತ್ತು ಶಿಕ್ಷಣದಲ್ಲಿ ಅವರು ಅದ್ಭುತ ಅನುಕೂಲತೆಯನ್ನು ಪಡೆಯುತ್ತಾರೆ. ಇದಲ್ಲದೆ ನೀವು ಯಾವುದೇ ಪ್ರೀತಿಯ ಸಂಬಂಧವನ್ನು ಹೊಂದಿದ್ದರೆ, ನಿಮ್ಮ ಪ್ರೀತಿ ಜೀವನದಲ್ಲಿ ನಡೆಯುತ್ತಿದ್ದ ಒತ್ತಡವನ್ನು ಶುಕ್ರ ಸಂಚಾರವು ಪರಿಹರಿಸುತ್ತದೆ. ನಿಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಸ್ನೇಹ ಹೆಚ್ಚಾಗುತ್ತದೆ. ಇದು ನಿಮ್ಮ ಪ್ರೀತಿ ಜೀವನವನ್ನು ಸುಗಮವಾಗಿ ಮಾಡುತ್ತದೆ.

ಅಪೇಕ್ಷಿತ ಕಾಲೇಜ್ ನಲ್ಲಿ ಪ್ರವೇಶ ಪಡೆಯುವ ನಿಮ್ಮ ಅಸೆ ಈ ಸಮಯದಲ್ಲಿ ಈಡೇರಬಹುದು. ಇದರೊಂದಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಧಿಕಾರಿಗಳಿಂದಿಗೆ ನಿಕಟತೆಯನ್ನು ಉಳಿಸುತ್ತೀರಿ. ಅದರ ಸರಿಯಾದ ಲಾಭವನ್ನು ನೀವು ಸರಿಯಾದ ಸಮಯದಲ್ಲಿ ಪಡೆಯುತ್ತೀರಿ.

ಪರಿಹಾರ - ಶುಕ್ರ ಗ್ರಹ ಉತ್ತಮ ಫಲಿತಾಂಶಗಳನ್ನು ಪಡೆಯಲು ಶುಕ್ರವಾರದಂದು ಓಪಲ್ ರತ್ನವನ್ನು ಬೆಳ್ಳಿಯಲ್ಲಿ ತಯಾರಿಸಿ ನಿಮ್ಮ ಉಂಗುರದ ಬೆರಳಿನಲ್ಲಿ ಧರಿಸಿ.

ಮಕರ ರಾಶಿ ವಾರದ ರಾಶಿ ಭವಿಷ್ಯ

ಕುಂಭ ರಾಶಿ

ಶುಕ್ರ ಗ್ರಹವು ನಿಮ್ಮ ರಾಶಿಗೆ ವಿಶೇಷ ಸ್ಥಾನವನ್ನು ಹೊಂದಿದೆ ಏಕೆಂದರೆ ಇದು ನಿಮ್ಮ ರಾಶಿಯ ನಾಲ್ಕನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಹತ್ತನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಅನೇಕ ರೀತಿಯ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಹತ್ತನೇ ಮನೆಯನ್ನು ವ್ಯಾಪಾರದ ಮನೆಯೆಂದು ಸಹ ಕರೆಯಲಾಗುತ್ತದೆ. ಇದರ ಮೂಲಕ ಜೀವನೋಪಾಯ, ಯಶಸ್ಸು ಮತ್ತು ಯಶಸ್ಸಿನ ಬಗ್ಗೆ ತಿಳಿಯುತ್ತದೆ. ಹತ್ತನೇ ಮನೆಯಲ್ಲಿ ಶುಕ್ರ ಸಂಚಾರದ ಪರಿಣಾಮವು ನೇರವಾಗಿ ನಿಮ್ಮ ಕೆಲಸದ ಕ್ಷೇತ್ರದ ಮೇಲೆ ಬೀರುತ್ತದೆ ಮತ್ತು ಕೆಲಸದಲ್ಲಿ ನೀವು ಬಡ್ತಿ ಪಡೆಯುವ ಸಾಧ್ಯತೆ ಇದೆ. ಅದೃಷ್ಟದ ಬೆಂಬಲವನ್ನು ನೀವು ಪಡೆಯುತ್ತೀರಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸಹ ಬಲಗೊಳ್ಳುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮನ್ನು ಪ್ರಶಂಸಿಸಲಾಗುತ್ತದೆ. ಆದರೆ ಶುಕ್ರ ಸಂಚಾರದ ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ನೀವು ಸ್ವಲ್ಪ ಕೂಡ ನಿರ್ಲಕ್ಶ್ಯ ವಹಿಸಿದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸಹ ಇದು ಸೂಚಿಸುತ್ತದೆ. ಅರ್ಥಹೀನ ವಿವಾದಗಳು ಮತ್ತು ಇತರ ಜನರ ಬಗ್ಗೆ ಕೆಟ್ಟದ್ದನ್ನು ಹೇಳುವುದನ್ನು ನೀವು ತಪ್ಪಿಸಬೇಕು. ಇಲ್ಲದಿದ್ದರೆ, ಇದು ನಿಮಗೆ ನಷ್ಟವನ್ನು ನೀಡಬಹುದು.

ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರದ ಸಮಯವೂ ನಿಮ್ಮ ಕುಟುಂಬ ಜೀವನಕ್ಕೆ ಅನುಕೊಲಕರವಾಗಿರುತ್ತದೆ ಮತ್ತು ಕುಟುಂಬದಲ್ಲಿ ಸಾಮರಸ್ಯ ಉಳಿದಿರುತ್ತದೆ. ಜನರು ಪರಸ್ಪರರೊಂದಿಗೆ ಉತ್ತಮವಾಗಿ ವರ್ತಿಸುತ್ತಾರೆ. ಇದರಿಂದ ನೀವು ಸಂತೋಷ ಅಮ್ತ್ತು ಸಮಾಧಾನವನ್ನು ಆಭವಿಸುತ್ತೀರಿ. ಈ ಸಮಯದಲ್ಲಿ ಕೆಲವರು ತಮ್ಮ ಕೆಲಸದ ಬಗ್ಗೆ ಕುಟುಂಬದ ಬೆಂಬಲವನ್ನು ಪಡೆಯುತ್ತಾರೆ, ಇದರಿಂದ ಅವರ ಕೆಲಸವೂ ಇನ್ನಷ್ಟು ಬೆಳೆಯುತ್ತದೆ. ವ್ಯಾಪದರ ವಿಷಯದಲ್ಲಿಯೂ ನಿಮಗೆ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ.

ಪರಿಹಾರ - ಶುಕ್ರವಾರ ಶುಭ ಮುಹೂರ್ತದಲ್ಲಿ ಆರು ಮುಖ ರುದ್ರಾಕ್ಷವನ್ನು ಧರಿಸುವುದರಿಂದ ನೀವು ಶುಕ್ರ ಗ್ರಹದ ಎಲ್ಲಾ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಕುಂಭ ರಾಶಿ ವಾರದ ರಾಶಿ ಭವಿಷ್ಯ

ಮೀನಾ ರಾಶಿ

ವೃಶ್ಚಿಕ ರಾಶಿಯಲ್ಲಿ ಶುಕ್ರ ಗ್ರಹವು ಸಂಚರಿಸುವ ಸಮಯದಲ್ಲಿ ಇದು ನಿಮ್ಮ ಒಂಬತ್ತನೇ ಮನೆಗೆ ಸಾಗುತ್ತದೆ ಅಂದರೆ ನಿಮ್ಮ ಅದೃಷ್ಟದ ಮನೆಗೆ ಸಾಗುತ್ತದೆ. ಈ ಮನೆಯ ಮೂಲಕ ನಿಮ್ಮ ಅದೃಷ್ಟ, ದೂರಸ್ಥ ಪ್ರಯಾಣ, ತೀರ್ಥ ಯಾತ್ರೆ, ಧಾರ್ಮಿಕ ಲೋಕೋಪಕಾರದ ಕೆಲಸ, ಧಾರ್ಮ ಗುರು, ಗುರುವಿನಂತಹ ಜನರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಶುಕ್ರ ಗ್ರಹವು ನಿಮ್ಮ ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ. ಶುಕ್ರ ಸಂಚಾರದ ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ಶುಕ್ರ ಸಂಚಾರದ ಪರಿಣಾಮದಿಂದಾಗಿ ಇದ್ದಕ್ಕಿದ್ದಂತೆ ನಿಮ್ಮ ಜೀವನದಲ್ಲಿ ನೀವು ಕೆಲವು ಏರಿಳಿತಗಳನ್ನು ಅನುಭವಿಸಬಹುದು. ಅವುಗಳಲ್ಲಿ ಕೆಲವು ಒಳ್ಳೆಯದು ಕೆಅಲ್ವು ಕೆಟ್ಟದಾಗಿರುತ್ತವೆ. ಸಮಯದಲ್ಲಿ ನೀವು ಅರ್ಥಿಕವಾಗಿ ಯಾವುದೇ ದೊಡ್ಡ ಲಾಭವನ್ನು ಸಹ ಪಡೆಯಬಹುದು. ಇದರಿಂದಾಗಿ ನೀವು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಹ ಸಾಧ್ಯವಾಗುತ್ತದೆ. ಮತ್ತೊಂದೆಡೆ, ಈ ಸಮಯದಲ್ಲಿ ಇದಕ್ಕೆ ವಿರುದ್ಧವಾಗಿ ತಂದೆ ಅಥವಾ ಗುರುವಿನಂತಹ ವ್ಯಕ್ತಿಗೆ ದೇಹದ ನಷ್ಟವಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನೀವು ಮಾನಸಿಕವಾಗಿ ಚಿಂತೆಗೆ ಒಳಗಾಗುವಿರಿ. ಈ ಸಂಚಾರದ ಪರಿಣಾಮದಿಂದಾಗಿ ಕುಟುಂಬದಲ್ಲಿ ನಿಮ್ಮ ಕಿರಿಯ ಸಹೋದರ ಸಹೋದರಿಯರು ಸಂಪೂರ್ಣವಾಗಿ ನಿಮಗೆ ಸಮರ್ಪಿತರಾಗಿರುತ್ತಾರೆ ಮತ್ತು ನೀವು ಅವರೊಂದಿಗೆ ಎಲ್ಲಾದರೂ ಸುತ್ತಾಡಲು ಸಹ ಹೋಗಬಹುದು.

ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯಲು ಈ ಸಮಯವು ಉತ್ತಮವಾಗಿರುತ್ತದೆ. ಶುಕ್ರ ಗ್ರಹದ ಪರಿಣಾಮದಿಂದಾಗಿ ನಿಮ್ಮ ಕಿಟಿಯ ಸಹೋದರ ಸಹೋದರಿಯರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಅವರು ತಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಪಡೆಯುತ್ತಾರೆ. ಅವರು ಯಾವುದೇ ವ್ಯಾಪಾರದಲ್ಲಿ ತೊಡಗಿದ್ದರೆ, ಅದರಲ್ಲಿ ಸಹ ಪ್ರಗತಿ ಪಡೆಯುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ವೈಯಕ್ತಿಕ ಪ್ರಯತ್ನಗಳಿಂದ ಹೆಚ್ಚು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ಈ ಸಮಯದಲ್ಲಿ ನಿಮ್ಮ ಆರೋಗ್ಯವು ಹದಗೆಡಬಹುದು ಮತ್ತು ನೀವು ಅರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ತೊಂದರೆಗೆ ಒಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ವಿಶೇಷವಾಗಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಪರಿಹಾರ - ಶುಕ್ರವಾರದಂದು ಹಸುವಿಗೆ ಹಿಟ್ಟಿನ ಹುಂಡಿಗಳನ್ನು ನಿಮ್ಮ ಕೈಯಿಂದ ತಿನ್ನಿಸಿ.

ಮೀನಾ ರಾಶಿ ವಾರದ ರಾಶಿ ಭವಿಷ್ಯ

ರತ್ನ, ರುದ್ರಾಕ್ಷಾ ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer