ಸಂಖ್ಯಾಶಾಸ್ತ್ರ ವಾರ ಭವಿಷ್ಯ: 26 ಜೂನ್ - 02 ಜುಲೈ 2022
ನಿಮ್ಮ ಮೂಲ ಸಂಖ್ಯೆಯನ್ನು ತಿಳಿಯುವುದು ಹೇಗೆ?
ಸಂಖ್ಯಾಶಾಸ್ತ್ರವು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ತಿಂಗಳಲ್ಲಿ ನೀವು ಜನಿಸಿದ ದಿನಾಂಕ ಮತ್ತು ಅದನ್ನು ಒಂದು ಬಿಡಿ ಸಂಖ್ಯೆಗೆ ಪರಿವರ್ತಿಸಿದಾಗ ಸಿಗುವ ಸಂಖ್ಯೆ ನಿಮ್ಮ ಮೂಲ ಸಂಖ್ಯೆಯಾಗಿರುತ್ತದೆ. ಮೂಲ ಸಂಖ್ಯೆಯು 1 ರಿಂದ 9 ರವರೆಗೆ ಯಾವುದಾದರೂ ಆಗಿರಬಹುದು, ಉದಾಹರಣೆಗೆ - ನೀವು ತಿಂಗಳ 10 ರಂದು ಜನಿಸಿದರೆ, ನಿಮ್ಮ ಮೂಲ ಸಂಖ್ಯೆ 1 + 0 ಆಗಿರುತ್ತದೆ ಅಂದರೆ 1. ಈ ರೀತಿಯಲ್ಲಿ, ನಿಮ್ಮ ಮೂಲ ಸಂಖ್ಯೆಯನ್ನು ತಿಳಿದುಕೊಳ್ಳುವ ಮೂಲಕ ನಿಮ್ಮ ಸಂಖ್ಯಾಶಾಸ್ತ್ರದ ವಾರ ಭವಿಷ್ಯವನ್ನು ನೀವು ತಿಳಿದುಕೊಳ್ಳಬಹುದು.
ನಿಮ್ಮ ಜನ್ಮ ದಿನಾಂಕದಿಂದ ನಿಮ್ಮ ವಾರ ಭವಿಷ್ಯವನ್ನು ತಿಳಿಯಿರಿ ( 26 ಜೂನ್ - 02 ಜುಲೈ 2022 )
ಸಂಖ್ಯಾಶಾಸ್ತ್ರವು ನಮ್ಮ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಏಕೆಂದರೆ ಸಂಖ್ಯೆಗಳು ನಮ್ಮ ಜನ್ಮ ದಿನಾಂಕಗಳೊಂದಿಗೆ ಎಲ್ಲವನ್ನೂ ಹೊಂದಿವೆ. ನಾವು ಈಗಾಗಲೇ ಮೇಲೆ ಉಲ್ಲೇಖಿಸಿರುವಂತೆ, ವ್ಯಕ್ತಿಯ ಮೂಲ ಸಂಖ್ಯೆಯು ಅವನ ಅಥವಾ ಅವಳ ಜನ್ಮ ದಿನಾಂಕವನ್ನು ಕೂಡಿಸುತ್ತದೆ ಮತ್ತು ಅದು ವಿವಿಧ ಗ್ರಹಗಳ ಆಡಳಿತದ ಅಡಿಯಲ್ಲಿ ಬರುತ್ತದೆ.
ಸಂಖ್ಯೆ 1 ನ್ನು ಸೂರ್ಯ, 2 ನ್ನು ಚಂದ್ರ, 3 ನ್ನು ಗುರು, 4 ನ್ನು ರಾಹು, 5 ನ್ನು ಬುಧ, 6 ನ್ನು ಶುಕ್ರ, 7 ನ್ನು ಕೇತು ಮತ್ತು 8 ನ್ನು ಶನಿ ಮತ್ತು 9 ನೇ ಸ್ಥಾನವನ್ನು ಮಂಗಳ ಆಳುತ್ತಾನೆ. ಈ ಗ್ರಹಗಳ ಚಲನೆಯಿಂದಾಗಿ ಒಬ್ಬರ ಜೀವನದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ ಮತ್ತು ಅವುಗಳು ನಿರ್ವಹಿಸುವ ಸಂಖ್ಯೆಗಳು ಪ್ರಮುಖ ಪಾತ್ರವನ್ನು ಹೊಂದಿವೆ.
ನಮ್ಮ ಹೆಸರಾಂತ ಸಂಖ್ಯಾಶಾಸ್ತ್ರಜ್ಞರಿಗೆ ಕರೆ ಮಾಡಿ, ಮಾತನಾಡಿ ಮತ್ತು ನಿಮ್ಮ ಹಿತಾಸಕ್ತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಿ.
ಮೂಲ ಸಂಖ್ಯೆ 1
(ನೀವು ಯಾವುದೇ ತಿಂಗಳ 1, 10, 19, 28 ರಂದು ಜನಿಸಿದ್ದರೆ)
ಮೂಲ ಸಂಖ್ಯೆ 1ರ ಜನರು ಈ ವಾರ ನೀವು ತುಂಬಾ ಧೈರ್ಯಶಾಲಿ ಮತ್ತು ನಿರ್ಭೀತರಾಗಿರುತ್ತೀರಿ ಆದರೆ ನಿಮ್ಮ ಸಂವಹನ ಮತ್ತು ಸನ್ನೆಗಳಲ್ಲಿ ನೀವು ಸೊಕ್ಕಿನ ಅಥವಾ ಆಕ್ರಮಣಕಾರಿಯಾಗದಂತೆ ದಯವಿಟ್ಟು ಗಮನ ಕೊಡಿ ಏಕೆಂದರೆ ಹೀಗೆ ಮಾಡಿದಾಗ ನಿಮ್ಮ ಪ್ರೇಮಿಗೆ ನೋವುಂಟಾಗಬಹುದು.
ಪ್ರಣಯ ಸಂಬಂಧ- ಈ ವಾರ ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ನೀವು ಹೆಚ್ಚು ಜಾಗೃತರಾಗಿರಬೇಕು ಏಕೆಂದರೆ ಈ ವಾರದ ಸಂಖ್ಯೆಗಳು ಹೆಚ್ಚು ಅನುಕೂಲಕರವಾಗಿಲ್ಲದ ಕಾರಣ ನೀವು ತುಂಬಾ ನಿಂದನೀಯ ಮೌಖಿಕ ಜಗಳಗಳಿಗೆ ಒಳಗಾಗಬಹುದು ಮತ್ತು ಪರಸ್ಪರ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು ಆದ್ದರಿಂದ ಘರ್ಷಣೆಗಳನ್ನು ತಪ್ಪಿಸಿ ಮತ್ತು ನಿಮ್ಮನ್ನು ಶಾಂತವಾಗಿಡಲು ಇಬ್ಬರೂ ಧ್ಯಾನ ಮಾಡಿ.
ಶಿಕ್ಷಣ- ನೀವು ಇಂಜಿನಿಯರಿಂಗ್ ಓದುತ್ತಿದ್ದರೆ ಅಥವಾ ಇಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶಕ್ಕೆ ತಯಾರಿ ನಡೆಸುತ್ತಿದ್ದರೆ ಈ ವಾರ ನಿಮಗೆ ಒಳ್ಳೆಯದಾಗಿರುತ್ತದೆ.
ವೃತ್ತಿ- ಈ ವಾರ ನಾಯಕರಾಗಿ ನೀವು ನಿಮ್ಮ ಉದ್ಯೋಗದಾತರು ಮತ್ತು ಸಹೋದ್ಯೋಗಿಗಳಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ ಮತ್ತು ಅವರ ಪರವಾಗಿ ನಿಲ್ಲಲು ಸಾಧ್ಯವಾಗುತ್ತದೆ. ಇದರೊಂದಿಗೆ ನೀವು ಉತ್ತಮ ನಾಯಕರಾಗಿ ಹೊರಹೊಮ್ಮುತ್ತೀರಿ ಮತ್ತು ನಿಮ್ಮ ಕೆಲಸದ ಮೂಲಕ ನೀವು ಜನಪ್ರಿಯತೆಯನ್ನು ಗಳಿಸಲು ಸಾಧ್ಯವಾಗುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ.
ಆರೋಗ್ಯ- ಆರೋಗ್ಯದ ದೃಷ್ಟಿಯಿಂದ, ಈ ಅವಧಿಯಲ್ಲಿ ನೀವು ಶಕ್ತಿಯಿಂದ ತುಂಬಿರಬಹುದು ಮತ್ತು ಹೆಚ್ಚು ಉತ್ಸಾಹದಿಂದ ಇರಬಹುದು; ಆದಾಗ್ಯೂ, ಹೆಚ್ಚಿನ ಶಕ್ತಿಯ ಮಟ್ಟದಿಂದಾಗಿ, ನೀವು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ ನಿಮ್ಮ ಕೋಪ ಮತ್ತು ಶಕ್ತಿಯ ಮಟ್ಟವನ್ನು ನಿಯಂತ್ರಿಸಲು ಸಲಹೆ ನೀಡಲಾಗುತ್ತದೆ ಏಕೆಂದರೆ ಇದು ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ.
ಪರಿಹಾರ - ಯಾವುದೇ ಚಿನ್ನದ ಆಭರಣವನ್ನು ಧರಿಸಿ
ಮೂಲ ಸಂಖ್ಯೆ 2
(ನೀವು ಯಾವುದೇ ತಿಂಗಳ 2, 11, 20, 29 ರಂದು ಜನಿಸಿದ್ದರೆ)
ಈ ವಾರ ಈ ಸಂಖ್ಯೆಯವರು ಭಾವನಾತ್ಮಕ ಮಟ್ಟದಲ್ಲಿ ತೊಂದರೆಯನ್ನು ಅನುಭವಿಸಬಹುದು. ಗೊಂದಲ ಮತ್ತು ಮನಸ್ಸಿನಲ್ಲಿನ ಆಲೋಚನೆಗಳ ಸ್ಪಷ್ಟತೆಯ ಕೊರತೆಯಿಂದಾಗಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ಕಷ್ಟವಾಗುತ್ತದೆ, ಆದ್ದರಿಂದ ನೀವು ಧ್ಯಾನ ಮಾಡಲು ಮತ್ತು ಆಲೋಚನೆಗಳ ಸ್ಪಷ್ಟತೆಗಾಗಿ ಆಧ್ಯಾತ್ಮಿಕ ಸಹಾಯವನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.
ಪ್ರಣಯ ಸಂಬಂಧ- ಈ ವಾರ ನಿಮ್ಮ ಭಾವನಾತ್ಮಕ ಸಮತೋಲನಕ್ಕಾಗಿ ನಿಮ್ಮ ಸಂಗಾತಿಯಿಂದ ಸಹಾಯವನ್ನು ಪಡೆಯಲು ಸಲಹೆ ನೀಡಲಾಗುತ್ತದೆ ಏಕೆಂದರೆ ಇದು ಅವರೊಂದಿಗೆ ತಪ್ಪು ತಿಳುವಳಿಕೆಯನ್ನು ತಪ್ಪಿಸುತ್ತದೆ ಮತ್ತು ಬಂಧವನ್ನು ಗಟ್ಟಿಗೊಳಿಸುತ್ತದೆ.
ಶಿಕ್ಷಣ- ಮೂಲ ಸಂಖ್ಯೆ 2 ವಿದ್ಯಾರ್ಥಿಗಳು ಈ ಸಮಯದಲ್ಲಿ ಗಮನ ಕೇಂದ್ರೀಕರಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ, ಏಕೆಂದರೆ ಭಾವನಾತ್ಮಕ ಮಟ್ಟದಲ್ಲಿನ ಗೊಂದಲಗಳು ಅವರನ್ನು ತಮ್ಮ ಗುರಿಗಳಿಂದ ತೊಂದರೆಗೊಳಿಸಬಹುದು ಮತ್ತು ಬೇರೆಡೆಗೆ ತಿರುಗಿಸಬಹುದು.
ವೃತ್ತಿ- ವೃತ್ತಿಪರ ರಂಗದಲ್ಲಿ, ಸ್ಥಳೀಯರು ಕೆಲವು ಅಡೆತಡೆಗಳನ್ನು ಕಂಡುಕೊಳ್ಳಬಹುದು ಮತ್ತು ಕೆಲಸದ ಸ್ಥಳದಲ್ಲಿ ಹಿರಿಯರು ಮತ್ತು ಸಹೋದ್ಯೋಗಿಗಳ ಬೆಂಬಲದ ಕೊರತೆ ಇರಬಹುದು. ಆದ್ದರಿಂದ ಈ ವಾರ ಶಾಂತ ಮತ್ತು ತಾಳ್ಮೆಯಿಂದಿರಿ ಮತ್ತು ಘರ್ಷಣೆಯನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ.
ಆರೋಗ್ಯ- ಆರೋಗ್ಯದ ದೃಷ್ಟಿಯಿಂದ ಮೂಲ ಸಂಖ್ಯೆ 2 ಸ್ಥಳೀಯರಿಗೆ ಇದು ತುಂಬಾ ಅನುಕೂಲಕರ ವಾರವಲ್ಲ. ಮಾನಸಿಕ ಒತ್ತಡ ಮತ್ತು ಆತಂಕದ ಕಾರಣದಿಂದ ನೀವು ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು. ಆದ್ದರಿಂದ ಹೆಚ್ಚು ಯೋಚಿಸಬೇಡಿ ಮತ್ತು ಒತ್ತಡ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಲಾಗುತ್ತದೆ.
ಪರಿಹಾರ- ಪ್ರತಿದಿನ ಶಿವಲಿಂಗಕ್ಕೆ ಹಾಲನ್ನು ಅರ್ಪಿಸಿ.
250+ ಪುಟಗಳು ವೈಯಕ್ತೀಕರಿಸಿದ ಆಸ್ಟ್ರೋಸೇಜ್ ಬೃಹತ್ ಜಾತಕವು ಮುಂಬರುವ ಎಲ್ಲಾ ಘಟನೆಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ
ಮೂಲ ಸಂಖ್ಯೆ 3
(ನೀವು ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ್ದರೆ)
ಮೂಲ ಸಂಖ್ಯೆ 3ರ ನೀವು ಆಧ್ಯಾತ್ಮಿಕ ಸಾಧಕರಾಗಿದ್ದರೆ ಈ ವಾರ ನಿಮಗೆ ಒಳ್ಳೆಯದಾಗಲಿದೆ, ನಿಮ್ಮ ಆಧ್ಯಾತ್ಮಿಕತೆ ಮತ್ತು ಧ್ಯಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನೀವು ದೀರ್ಘಕಾಲ ಅನುಭವಿಸಲು ಪ್ರಯತ್ನಿಸುತ್ತಿದ್ದ ಆಧ್ಯಾತ್ಮಿಕ ತೃಪ್ತಿಯನ್ನು ಪಡೆಯುತ್ತೀರಿ. .
ಪ್ರಣಯ ಸಂಬಂಧ- ಮೂಲ ಸಂಖ್ಯೆ 3 ಸ್ಥಳೀಯರು ನೀವು ವಿವಾಹಿತರಾಗಿದ್ದರೆ, ಈ ವಾರ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ತೀರ್ಥಯಾತ್ರೆಗೆ ಹೋಗಬಹುದು. ಅಥವಾ ಮನೆಯಲ್ಲಿ ಸತ್ಯನಾರಾಯಣ ಕಥೆ ಅಥವಾ ಹೋರಾ ಮುಂತಾದ ಕೆಲವು ಆಧ್ಯಾತ್ಮಿಕ ಚಟುವಟಿಕೆಗಳನ್ನು ಮಾಡಿ.
ಶಿಕ್ಷಣ- ಸಂಶೋಧನಾ ಕ್ಷೇತ್ರದಲ್ಲಿ ಅಥವಾ ಪ್ರಾಚೀನ ಸಾಹಿತ್ಯ ಮತ್ತು ಇತಿಹಾಸದಲ್ಲಿ ತಮ್ಮ ಪಿಎಚ್‌ಡಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇದು ಉತ್ತಮ ವಾರವಾಗಿದೆ. ನೀವು ಜ್ಯೋತಿಷ್ಯ, ಅಕ್ಯುಲೆಟ್ ವಿಜ್ಞಾನ ಅಥವಾ ಪೌರಾಣಿಕ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುತ್ತೀರಿ.
ವೃತ್ತಿ- ವೃತ್ತಿಪರವಾಗಿ, ಶಿಕ್ಷಕರು, ಮಾರ್ಗದರ್ಶಕರು, ಧರ್ಮ ಗುರುಗಳು, ಪ್ರೇರಕ ಭಾಷಣಕಾರರಾದ ಸ್ಥಳೀಯರಿಗೆ ಇದು ಉತ್ತಮ ವಾರವಾಗಲಿದೆ, ನೀವು ಇತರರಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ.
ಆರೋಗ್ಯ- ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಅನುಕೂಲಕರವಾಗಿದೆ. ನೀವು ಉತ್ತಮ ರೋಗನಿರೋಧಕ ಶಕ್ತಿ ಮತ್ತು ದೈಹಿಕ ಶಕ್ತಿಯನ್ನು ಹೊಂದಿರುವಿರಿ ಆದ್ದರಿಂದ ನೀವು ಸಾತ್ವಿಕ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ ಮತ್ತು ಯೋಗ ಮತ್ತು ಧ್ಯಾನದಂತಹ ಕೆಲವು ಆಧ್ಯಾತ್ಮಿಕ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
ಪರಿಹಾರ - ಗಣಪತಿಯನ್ನು ಪೂಜಿಸಿ ಮತ್ತು 5 ಕಡ್ಲೆಹಿಟ್ಟಿನ ಲಡ್ಡುಗಳನ್ನು ಅರ್ಪಿಸಿ.
ಮೂಲ ಸಂಖ್ಯೆ 4
(ನೀವು ಯಾವುದೇ ತಿಂಗಳ 4, 13, 22, 31 ರಂದು ಜನಿಸಿದ್ದರೆ)
ಮೂಲ ಸಂಖ್ಯೆ 4ರ ಜನರು ಸಣ್ಣ ವಿಷಯಕ್ಕೂ, ಭಯಪಡಬಹುದು, ಗೊಂದಲಕ್ಕೊಳಗಾಗಬಹುದು. ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಯನ್ನು ಕಂಡುಹಿಡಿಯುತ್ತೀರಿ ಮತ್ತು ಅದರ ಬಗ್ಗೆ ಖಿನ್ನತೆಯನ್ನು ಅನುಭವಿಸುತ್ತೀರಿ
ಪ್ರಣಯ ಸಂಬಂಧ- ನಿಮ್ಮ ಸಮಸ್ಯೆಗಳು ಮತ್ತು ಭಾವನೆಗಳಿಂದಾಗಿ ನೀವು ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸುವ ಅಥವಾ ಅಗೌರವಿಸುವ ಸಾಧ್ಯತೆಗಳಿವೆ, ಅದು ನಿಮ್ಮಿಬ್ಬರ ನಡುವೆ ಘರ್ಷಣೆಯನ್ನು ಉಂಟುಮಾಡಬಹುದು. ಆದ್ದರಿಂದ ಈ ವಾರದಲ್ಲಿ ನಿಮ್ಮ ಸಂಬಂಧಕ್ಕೆ ಸಮಾನ ಆದ್ಯತೆ ನೀಡಲು ಸಲಹೆ ನೀಡಲಾಗುತ್ತದೆ.
ಶಿಕ್ಷಣ- ಮೂಲ ಸಂಖ್ಯೆ 4 ವಿದ್ಯಾರ್ಥಿಗಳಿಗೆ, ಈ ವಾರ ಸ್ವಲ್ಪ ಕಠಿಣವೆಂದು ಸಾಬೀತುಪಡಿಸಬಹುದು, ಏಕೆಂದರೆ ನಿಮ್ಮ ಕಲಿಕೆಯ ವಿಧಾನ ಅಥವಾ ಇತರರಿಗೆ ಅಧ್ಯಯನ ಮಾಡುವ ವಿಭಿನ್ನ ಸೃಜನಶೀಲ ವಿಚಾರಗಳನ್ನು ವ್ಯಕ್ತಪಡಿಸಲು ನಿಮಗೆ ಕಷ್ಟವಾಗಬಹುದು. ಆದ್ದರಿಂದ, ಇತರರನ್ನು ನಿರ್ಲಕ್ಷಿಸಿ ಮತ್ತು ನಿಮ್ಮ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ನಿಮಗೆ ಸಲಹೆ ನೀಡಲಾಗುತ್ತದೆ.
ವೃತ್ತಿ- ಮೂಲ ಸಂಖ್ಯೆ 4 ರಫ್ತು ಮತ್ತು ಆಮದು ವ್ಯವಹಾರದಲ್ಲಿರುವ ಅಥವಾ MNC ಗಾಗಿ ಕೆಲಸ ಮಾಡುವ ಸ್ಥಳೀಯರು ಉತ್ತಮ ವಾರವನ್ನು ಹೊಂದಿರುತ್ತಾರೆ.
ಆರೋಗ್ಯ- ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲ. ನಿಮ್ಮ ಮಾನಸಿಕ ಆರೋಗ್ಯಕ್ಕೆ ಅಡ್ಡಿಯುಂಟುಮಾಡುವ ಅತಿಯಾದ ಆಲೋಚನೆಯಲ್ಲಿ ನೀವು ತೊಡಗಿಸಿಕೊಳ್ಳಬೇಡಿ ಮತ್ತು ಖಿನ್ನತೆಗೆ ಒಳಗಾಗಬೇಡಿ.
ಪರಿಹಾರ- ಮೀನುಗಳಿಗೆ ಹಿಟ್ಟಿನ ಉಂಡೆಗಳನ್ನು ತಿನ್ನಿಸಿ.
ನಮ್ಮ ಗೌರವಾನ್ವಿತ ಜ್ಯೋತಿಷಿಗಳ ಬಳಿ ಮುಂದೆ ಏನಾಗಬಹುದು ಎಂಬುದರ ಕುರಿತು ಸುಳಿವುಗಳು ಲಭ್ಯವಿವೆ
ಮೂಲ ಸಂಖ್ಯೆ 5
(ನೀವು ಯಾವುದೇ ತಿಂಗಳ 5, 14 ಮತ್ತು 23 ರಂದು ಜನಿಸಿದ್ದರೆ)
ಮೂಲ ಸಂಖ್ಯೆ 5 ಸ್ಥಳೀಯರು ಈ ವಾರದಲ್ಲಿ ತಮ್ಮ ಸಂವಹನ ಕೌಶಲ್ಯದಿಂದ ಸಮಸ್ಯೆಗಳನ್ನು ಎದುರಿಸಬಹುದು ಈ ವಾರದಲ್ಲಿ ನೀವು ನಿಮ್ಮ ಸಂವಹನದಲ್ಲಿ ಮೊಂಡು ಮತ್ತು ನೇರವಾಗಿರುತ್ತೀರಿ ನೀವು ಮಾತನಾಡುವ ನಿಮ್ಮ ಮಾತುಗಳ ಮೇಲೆ ನಿಗಾ ಇಡಲು ಮತ್ತು ಡಿಪ್ಲೊಮ್ಯಾಟಿಕ್ ಆಗಿರಲು ಸಲಹೆ ನೀಡಲಾಗುತ್ತದೆ.
ಪ್ರಣಯ ಸಂಬಂಧ- ನೀವು ಚಿಕ್ಕ ವಯಸ್ಸಿನವರಾಗಿದ್ದು, ಪ್ರೀತಿಯಲ್ಲಿ ಬಿದ್ದಿದ್ದರೆ, ಈ ವಾರ ನಿಮಗೆ ಪರೀಕ್ಷೆಯ ಸಮಯವಾಗಿದೆ, ಆದ್ದರಿಂದ ನೀವು ಒಬ್ಬರಿಗೊಬ್ಬರು ಪ್ರಾಮಾಣಿಕವಾಗಿದ್ದರೆ ಮಾತ್ರ ಸಂಬಂಧ ಗಟ್ಟಿಯಾಗಬಹುದು, ಇಲ್ಲವಾದರೆ ನೀವು ಪರಸ್ಪರ ದೂರವಾಗಬಹುದು.
ಶಿಕ್ಷಣ- ನೀವು ಫೈನಾನ್ಸ್ ಮತ್ತು ಅಕೌಂಟಿಂಗ್ ಅಧ್ಯಯನ ಮಾಡುತ್ತಿದ್ದರೆ ಈ ವಾರ ನಿಮಗೆ ಚೆನ್ನಾಗಿದೆ ಆದರೆ ನೀವು ಸಮೂಹ ಸಂವಹನದಂತಹ ಸೃಜನಶೀಲತೆಯನ್ನು ಅಧ್ಯಯನ ಮಾಡುತ್ತಿದ್ದರೆ ನಿಮ್ಮ ಐಡಿಯಾಗಳನ್ನು ತಲುಪಿಸುವಲ್ಲಿ ನಾವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವೃತ್ತಿ- ವೃತ್ತಿಪರ ರಂಗದಲ್ಲಿ, ಉದ್ಯೋಗಿಗಳಿಗೆ ಈ ವಾರ ಸ್ಥಬ್ದವಾಗಿರುತ್ತದೆ, ಆದರೆ ನೀವು ಬದಲಾವಣೆ ಅಥವಾ ಸ್ವಿಚ್‌ಗಾಗಿ ಬಯಸಿದರೆ ಈ ವಾರದ ಯೋಜನೆಯನ್ನು ಮುಂದೂಡಲು ನಿಮಗೆ ಸಲಹೆ ನೀಡಲಾಗುತ್ತದೆ.
ಆರೋಗ್ಯ- ಈ ಅವಧಿಯಲ್ಲಿ ಚರ್ಮ ಮತ್ತು ಅಲರ್ಜಿ ಸಮಸ್ಯೆಗಳಿಂದಾಗಿ ನೀವು ಕೆಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಮಹಿಳೆಯರು ಹಾರ್ಮೋನುಗಳು ಅಥವಾ ಋತುಬಂಧಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬಹುದು.
ಪರಿಹಾರ - ಗಣಪತಿಯನ್ನು ಪೂಜಿಸಿ ಮತ್ತು ದೂರ್ವಾ (ಹುಲ್ಲು) ಅರ್ಪಿಸಿ.
ಮೂಲ ಸಂಖ್ಯೆ 6
(ನೀವು ಯಾವುದೇ ತಿಂಗಳ 6, 15, 24 ರಂದು ಜನಿಸಿದ್ದರೆ)
ಈ ವಾರ ನೀವು ಇತರರಿಗೆ ಸಹಾಯ ಮಾಡಲು ಮತ್ತು ಸೇವೆ ಸಲ್ಲಿಸಲು ಹೆಚ್ಚು ಒಲವು ತೋರುತ್ತೀರಿ,
ಪ್ರಣಯ ಸಂಬಂಧ- ನಿಮ್ಮ ಸಂಗಾತಿಯ ಆರೋಗ್ಯ ಮತ್ತು ಭಾವನಾತ್ಮಕ ಅಗತ್ಯಗಳ ಬಗ್ಗೆ ನೀವು ಹೆಚ್ಚಿನ ಗಮನ ಹರಿಸಬೇಕು ಏಕೆಂದರೆ ನಿರ್ಲಕ್ಸ್ಯವು ಅವರ ಆರೋಗ್ಯ ಮತ್ತು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು.
ಶಿಕ್ಷಣ- ಸೃಜನಾತ್ಮಕ ಬರವಣಿಗೆ, ಕವನ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ತಲುಪಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಈ ವಾರದಲ್ಲಿ ಅವರಿಗೆ ಗಮನಹರಿಸುವುದು ಕಷ್ಟಕರವಾಗಿರುತ್ತದೆ. ಆದರೆ ನೀವು ವೈದಿಕ ಜ್ಯೋತಿಷ್ಯ ಅಥವಾ ಟ್ಯಾರೋ ಓದುವಂತಹ ಅತೀಂದ್ರಿಯ ವಿಜ್ಞಾನದಲ್ಲಿ ಏನನ್ನಾದರೂ ಕಲಿಯಲು ಯೋಜಿಸುತ್ತಿದ್ದರೆ ಅದು ಉತ್ತಮ ಸಮಯ.
ವೃತ್ತಿ- ನಿಮ್ಮ ವೃತ್ತಿಪರ ಜೀವನದ ಬೆಳವಣಿಗೆಗೆ ಹೆಚ್ಚಿನ ಪ್ರಯತ್ನ ಮತ್ತು ಗಮನವನ್ನು ನೀಡುವ ಮೂಲಕ ನೀವು ಈ ವಾರವನ್ನು ಬಳಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ನೀವು ಬೆಳವಣಿಗೆಗೆ ಹೊಸ ಆಲೋಚನೆಗಳನ್ನು ಹೊಂದಿರಬಹುದು ಮತ್ತು ನೀವು ಹೊಸ ತಂತ್ರಗಳನ್ನು ನಿರ್ಮಿಸುತ್ತೀರಿ ಆದರೆ ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆರೋಗ್ಯ- ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ. ತುಂಬಾ ಜಿಡ್ಡಿನ ಮತ್ತು ಸಿಹಿಯಾದ ಆಹಾರವನ್ನು ಸೇವಿಸುವುದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಅಲ್ಲದೆ, ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಲು ಗಮನ ಕೊಡಿ.
ಪರಿಹಾರ - ದೇವಸ್ಥಾನದಲ್ಲಿ ಕಪ್ಪು ಹೊದಿಕೆ ಅಥವಾ ಬಟ್ಟೆಯನ್ನು ದಾನ ಮಾಡಿ
ನಿಮ್ಮ ವೃತ್ತಿ ಮತ್ತು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಲು: ನಿಮ್ಮ ಕಾಗ್ನಿಆಸ್ಟ್ರೋ ವರದಿಯನ್ನು ಈಗಲೇ ಆರ್ಡರ್ ಮಾಡಿ!
ಮೂಲ ಸಂಖ್ಯೆ 7
(ನೀವು ಯಾವುದೇ ತಿಂಗಳ 7, 16, 25 ರಂದು ಜನಿಸಿದ್ದರೆ)
ಈ ವಾರ ನೀವು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಮತ್ತು ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ಇಲ್ಲಿಯವರೆಗೆ ಮಾಡುತ್ತಿದ್ದ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನೀವು ಆಧ್ಯಾತ್ಮಿಕತೆಯನ್ನು ಸಹ ಅನುಭವಿಸುವಿರಿ ಮತ್ತು ಅಗತ್ಯವಿರುವವರಿಗೆ ದಾನ ಮಾಡಲು ಒಲವು ತೋರುತ್ತೀರಿ.
ಪ್ರಣಯ ಸಂಬಂಧ- ಪ್ರೀತಿ ಮತ್ತು ಮದುವೆ ಸಂಬಂಧಿತ ವಿಷಯಗಳು ನಿಯಂತ್ರಣದಲ್ಲಿರುತ್ತವೆ ಆದರೆ ನೀವು ಅಹಂಕಾರ ಮತ್ತು ವಾದದಿಂದ ದೂರವಿರಬೇಕು, ಏಕೆಂದರೆ ಅನಗತ್ಯ ಅಹಂಕಾರ ಘರ್ಷಣೆಗಳು ಮತ್ತು ವಾದಗಳಿಂದಾಗಿ, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಕೆಲವು ಏರಿಳಿತಗಳಿಗೆ ಸಾಕ್ಷಿಯಾಗಬಹುದು.
ಶಿಕ್ಷಣ- ಪೊಲೀಸ್ ಪಡೆ ಅಥವಾ ಸೇನೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ಅವರು ತಮ್ಮ ಪರೀಕ್ಷೆಗಳನ್ನು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಮಾಡುತ್ತಾರೆ.
ವೃತ್ತಿ- ಈ ವಾರ ನಿಮ್ಮ ಉದ್ಯೋಗದಲ್ಲಿ ಸ್ವಲ್ಪ ಬೆಳವಣಿಗೆ, ಬಡ್ತಿ ಮತ್ತು ಏರಿಕೆಯಾಗಬಹುದು. ನೀವು ಕೆಲಸದಲ್ಲಿ ಹೊಸ ಶಕ್ತಿಯನ್ನು ಹೊಂದಿರುತ್ತೀರಿ ಮತ್ತು ನಿಮ್ಮ ನಾಯಕತ್ವದ ಗುಣಮಟ್ಟವನ್ನು ಪ್ರಶಂಸಿಸಲಾಗುತ್ತದೆ.
ಆರೋಗ್ಯ- ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಅನುಕೂಲಕರವಾಗಿದೆ. ನೀವು ಉತ್ತಮ ರೋಗನಿರೋಧಕ ಶಕ್ತಿ ಮತ್ತು ದೈಹಿಕ ಶಕ್ತಿಯನ್ನು ಹೊಂದಿರುತ್ತೀರಿ ಆದ್ದರಿಂದ ನೀವು ಆರೋಗ್ಯಕರವಾಗಿ ತಿನ್ನಲು ಮತ್ತು ವ್ಯಾಯಾಮ ಮಾಡಲು ಮತ್ತು ಅದನ್ನು ಕಾಪಾಡಿಕೊಳ್ಳಲು ಧ್ಯಾನ ಮಾಡಲು ಸಲಹೆ ನೀಡಲಾಗುತ್ತದೆ.
ಪರಿಹಾರ - ಅದೃಷ್ಟಕ್ಕಾಗಿ ಬೆಕ್ಕಿನ ಕಣ್ಣಿನ ಕಂಕಣವನ್ನು ಧರಿಸಿ.
ಮೂಲ ಸಂಖ್ಯೆ 8
(ನೀವು ಯಾವುದೇ ತಿಂಗಳ 8, 17, 26 ರಂದು ಜನಿಸಿದ್ದರೆ)
ಈ ವಾರ ಜೀವನದಲ್ಲಿ ಎಲ್ಲವೂ ವಿಳಂಬವಾಗುವುದರಿಂದ ನೀವು ಸಿಡಿಮಿಡಿ ಮತ್ತು ಹತಾಶೆಯ ಸ್ವಭಾವವನ್ನು ಹೊಂದಿರಬಹುದು. ನಿಮ್ಮ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳದಂತೆ ಆಧ್ಯಾತ್ಮಿಕ ಸಹಾಯವನ್ನು ತೆಗೆದುಕೊಳ್ಳಲು ಮತ್ತು ಧ್ಯಾನ ಮಾಡಲು ನಿಮಗೆ ಸಲಹೆ ನೀಡಲಾಗುತ್ತದೆ.
ಪ್ರಣಯ ಸಂಬಂಧ- ಪ್ರಣಯ ಸಂಬಂಧದಲ್ಲಿರುವವರು ಡಲ್ ವಾರವನ್ನು ಹೊಂದಿರುತ್ತಾರೆ. ಈ ಅವಧಿಯಲ್ಲಿ ನಿಮ್ಮ ನಿರಾಸಕ್ತಿ ಮತ್ತು ಪ್ರಣಯ ವಿಚಾರಗಳಿಗೆ ಪ್ರತಿಕ್ರಿಯಿಸದ ಕಾರಣ ನಿಮ್ಮ ಸಂಗಾತಿಯು ಸಂತೋಷವಾಗಿರುವುದಿಲ್ಲ. ವಿವಾಹಿತ ಸ್ಥಳೀಯರು ಸಹ ಅದೇ ನಡವಳಿಕೆಯಿಂದ ಸ್ವಲ್ಪ ಉದ್ವಿಗ್ನತೆಯನ್ನು ಎದುರಿಸಬಹುದು.
ಶಿಕ್ಷಣ- ಸಂಶೋಧನಾ ಕ್ಷೇತ್ರದಲ್ಲಿ ಅಥವಾ ಪ್ರಾಚೀನ ಸಾಹಿತ್ಯ ಮತ್ತು ಇತಿಹಾಸದಲ್ಲಿ ತಮ್ಮ ಪಿಎಚ್‌ಡಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇದು ಉತ್ತಮ ವಾರವಾಗಿದೆ. ನೀವು ಜ್ಯೋತಿಷ್ಯ, ಅಕ್ಯುಲೆಟ್ ವಿಜ್ಞಾನ ಅಥವಾ ಪೌರಾಣಿಕ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುತ್ತೀರಿ.
ವೃತ್ತಿ- ಈ ವಾರ ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ತುಂಬಾ ಅತೃಪ್ತರಾಗುತ್ತೀರಿ, ನಿಮ್ಮದೇ ಆದ ಹೊಸದನ್ನು ಪ್ರಾರಂಭಿಸುವ ಬಯಕೆಯನ್ನು ನೀವು ಅನುಭವಿಸುತ್ತೀರಿ ಅದು ನಿಮಗೆ ತೃಪ್ತಿ ಮತ್ತು ಬೆಳವಣಿಗೆಯನ್ನು ನೀಡುತ್ತದೆ ಮತ್ತು ನಿಮ್ಮ ಜೀವನಕ್ಕೆ ಹೊಸ ದಿಕ್ಕನ್ನು ನೀಡುತ್ತದೆ.
ಆರೋಗ್ಯ- ಆರೋಗ್ಯವಾಗಿ, ನೀವು ಕೆಲವು ಸಣ್ಣ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ನೀವು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ದಿನಚರಿಯಲ್ಲಿ ಆರೋಗ್ಯಕರ ಆಹಾರ ಮತ್ತು ವ್ಯಾಯಾಮವನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ.
ಪರಿಹಾರ- ಬೀದಿ ನಾಯಿಗಳಿಗೆ ಆಹಾರ ಮತ್ತು ಆಶ್ರಯ ನೀಡಿ
ಮೂಲ ಸಂಖ್ಯೆ 9
(ನೀವು ಯಾವುದೇ ತಿಂಗಳ 9, 18, 27 ರಂದು ಜನಿಸಿದ್ದರೆ)
ಈ ವಾರ ನೀವು ನಿಮ್ಮ ಜೀವನದ ಗುರಿಗಳ ಕಡೆಗೆ ಹೆಚ್ಚು ಗಮನಹರಿಸುತ್ತೀರಿ. ನಿಮ್ಮ ಕ್ರಿಯೆಗಳ ಬಗ್ಗೆ ನೀವು ಜಾಗರೂಕರಾಗಿರಬೇಕು ಏಕೆಂದರೆ ನೀವು ಸ್ವಾರ್ಥಿ ಮತ್ತು ದುರಹಂಕಾರದಿಂದ ವರ್ತಿಸಬಹುದು ಅದು ನಿಮ್ಮ ಆತ್ಮೀಯರನ್ನು ನೋಯಿಸಬಹುದು.
ಪ್ರಣಯ ಸಂಬಂಧ- ನಿಮ್ಮ ಸಣ್ಣ ಕೋಪ ಮತ್ತು ಅಹಂಕಾರದ ಬಗ್ಗೆ ನೀವು ಜಾಗರೂಕರಾಗಿರಬೇಕು. ಇದು ನಿಮ್ಮ ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಲು ಸಲಹೆ ನೀಡಲಾಗುತ್ತದೆ.
ಶಿಕ್ಷಣ- ಪೊಲೀಸ್ ಪಡೆ ಅಥವಾ ರಕ್ಷಣಾ ಪಡೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ತಯಾರಿಗಾಗಿ ಉತ್ತಮ ವಾರವನ್ನು ಹೊಂದಿರುತ್ತಾರೆ, ನೀವು ಯಾವುದೇ ರೀತಿಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದರೂ ಸಹ ನೀವು ಯಶಸ್ವಿಯಾಗುವ ಹೆಚ್ಚಿನ ಅವಕಾಶಗಳಿವೆ.
ವೃತ್ತಿ- ನೀವು ಪೊಲೀಸ್ ಪಡೆ, ರಕ್ಷಣಾ ಪಡೆ ಅಥವಾ ಕ್ರೀಡಾ ವ್ಯಕ್ತಿಗಳಾಗಿದ್ದರೆ ಈ ವಾರ ನಿಮಗೆ ನಿಜವಾಗಿಯೂ ಒಳ್ಳೆಯದು. ನೀವು ಕೆಲಸದಲ್ಲಿ ಹೊಸ ಶಕ್ತಿಯನ್ನು ಹೊಂದಿರುತ್ತೀರಿ ಮತ್ತು ನಿಮ್ಮ ನಾಯಕತ್ವದ ಗುಣಮಟ್ಟವನ್ನು ಪ್ರಶಂಸಿಸಲಾಗುತ್ತದೆ.
ಆರೋಗ್ಯ-ಆರೋಗ್ಯದ ದೃಷ್ಟಿಯಿಂದ, ನೀವು ಈ ವಾರದಲ್ಲಿ ಫಿಟ್ ಮತ್ತು ಆರೋಗ್ಯಕರ ಭಾವನೆಯನ್ನು ಹೊಂದಿರುತ್ತಾರೆ, ಪ್ರಯಾಣಿಸುವಾಗ ಮತ್ತು ಚಾಲನೆ ಮಾಡುವಾಗ ಜಾಗರೂಕರಾಗಿರಬೇಕು.
ಪರಿಹಾರ- ಕೆಂಪು ಬಣ್ಣದ ಹಿಟ್ಟನ್ನು ಹನುಮಂತನಿಗೆ ಅರ್ಪಿಸಿ.
ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನಮ್ಮೊಂದಿಗೆ ಸಂಪರ್ಕದಲ್ಲಿರುವುದಕ್ಕಾಗಿ ಧನ್ಯವಾದಗಳು!