• Talk To Astrologers
  • AstroSage Brihat Horoscope
  • Ask A Question
  • Raj Yoga Report
  • Personalized Horoscope 2021

ಧನು ರಾಶಿಯಲ್ಲಿ ಬುಧ ಸಂಚಾರ (17 ಡಿಸೆಂಬರ್ 2020)

ಬುಧ ಗ್ರಹವು ಗುರುವಾರ 17 ಡಿಸೆಂಬರ್ 2020 ರಂದು ಬೆಳಿಗ್ಗೆ 11:26 ಗಂಟೆಗೆ ಮಂಗಳದ ರಾಶಿ ವೃಶಿಕದಿಂದ ಹೊರಬಂದು ಗುರುವಿನ ಸ್ವಾಮಿತ್ವದ ಧನು ರಾಶಿಯಲ್ಲಿ ಪ್ರವೇಶಿಸುತ್ತದೆ. ಇದನ್ನು ಕಾಲಪುರುಷ ಜಾತಕದಲ್ಲಿ ಒಂಬತ್ತನೇ ಮನೆ ಅಂದರೆ ಅದೃಷ್ಟದ ಮನೆಯೆಂದು ಪರಿಗಣಿಸಲಾಗಿದೆ. ಇದು ಬೆಂಕಿಯ ಅಂಶದ ರಾಶಿ. ಆದ್ದರಿಂದ ಈ ರಾಶಿಯಲ್ಲಿ ಬುಧ ಸಂಚಾರವು ಶೀಘ್ರ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ.

ಯಶಸ್ವಿ ವೃತ್ತಿಜೀವನವನ್ನು ಆಯ್ಕೆ ಮಾಡಲು ಸರಿಯಾದ ಮಾರ್ಗವನ್ನು ತಿಳಿಯಿರಿ - ಕಾಗ್ನಿಆಸ್ಟ್ರೋ ರಿಪೋರ್ಟ್

ಧನು ರಾಶಿಯಲ್ಲಿ ಬುಧ ಸಂಚಾರದ ರಾಶಿ ಭವಿಷ್ಯ

ಬುಧ ಗ್ರಹವು ಧನು ರಾಶಿಯಲ್ಲಿ ಪ್ರವೇಶಿಸಲಿದೆ. ನಡೆಯಿರಿ ಈ ಸಂಚಾರವು ನಿಮ್ಮ ರಾಶಿಚಕ್ರದ ಮೇಲೆ ಏನು ವಿಶೇಷ ಪರಿಣಾಮ ಬೀರಲಿದೆ ಎಂದು ತಿಳಿಯೋಣ:

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

  1. ಮೇಷ ರಾಶಿ

ಬುಧ ಗ್ರಹವು ಮೇಷ ರಾಶಿಯ ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಧನು ರಾಶಿಯಲ್ಲಿ ಸಂಚರಿಸುವ ಕಾರಣದಿಂದಾಗಿ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಪ್ರವೇಶಿಸಲಿದೆ. ಒಂಬತ್ತನೇ ಮನೆಯನ್ನು ಅದೃಷ್ಟದ ಮನೆಯೆಂದು ಮತ್ತು ಈ ಮನೆಯ ಮೂಲಕ ದೂರಸ್ಥ ಪ್ರಯಾಣ, ಗುರು ಅಥವಾ ಗುರುವಿನಂತಹ ಜನರು, ಧರ್ಮ, ಭಕ್ತಿ, ತೀರ್ಥ ಯಾತ್ರೆ, ಸಮಾಜದಲ್ಲಿನ ಗೌರವ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ.

ಒಂಬತ್ತನೇ ಮನೆಯಲ್ಲಿ ಬುಧ ಸಂಚಾರದ ಪರಿಣಾಮದಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿಶೇಷವಾಗಿ ಯಾವುದೇ ಪ್ರಯಾಣದಲ್ಲಿ ನೀವು ಸ್ವಲ್ಪ ಅಸ್ವಸ್ಥೆತೆಯನ್ನು ಹೊಂದಬಹುದು. ಪ್ರವಾಸಕ್ಕೆ ಹೋಗುವ ಮೊದಲು ಸಂಪೂರ್ಣವಾಗಿ ತಯಾರಿ ಮಾಡಿಕೊಳ್ಳಿ ಮತ್ತು ನಿಮ್ಮ ಎಲ್ಲಾ ಅಗತ್ಯವಾದ ಕಾಗದಪತ್ರಗಳನ್ನು ಇಟ್ಟುಕೊಳ್ಳಿ. ಇಲ್ಲದಿದ್ದರೆ ನೀವು ತೊಂದರೆಯನ್ನು ಎದುರಿಸಬೇಕಾಗುತ್ತದೆ. ಈ ಸಮಾಯ್ದಲ್ಲಿ ಮಾಡಲಾಗುವ ಪ್ರಯಾಣಗಳ ಮೂಲಕ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ಆದ್ದರಿಂದ ಖಂಡಿತವಾಗಿಯೂ ಸ್ವಲ್ಪ ಗಮನ ಹರಿಸಿ.

ಇದರಿಂದಾಗಿ ಅಪಾಯವನ್ನು ತೆಗೆದುಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ವ್ಯಾರದಲ್ಲಿ ಉತ್ತಮ ಫಲಿತಾಂಶಗಳು ಸಿಗಲು ಆರಂಭಿಸುತ್ತವೆ. ನೀವು ಸಾಕಷ್ಟು ಕಠಿಣ ಪರಿಶ್ರಮ ಮಾಡುವಿರಿ. ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಕಿರಿಯ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಸಮಾಜದಲ್ಲಿ ನಿಮ್ಮ ಸ್ಥಾನವನ್ನು ಸುಧಾರಿಸಲು ಸಹ ಅವರು ನಿಮ್ಮನ್ನು ಸಂಪೂರ್ಣವಾಗಿ ಸಹಕರಿಸುತ್ತಾರೆ. ಈ ಸಮಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ನೀವು ಹೆಚ್ಚು ಪರಿಶ್ರಮ ಮಾಡಬೇಕಾಗುತ್ತದೆ. ನೀವು ಮಾರ್ಕೆಟಿಂಗ್, ಸಂವಹನ ಅಥವಾ ಬರವಣಿಗೆ ಕ್ಷೇತ್ರಕ್ಕೆ ಸಂಬಂಧಿಸಿದ್ದರೆ ಈ ಸಮಯವೂ ಉತ್ತಮವೆಂದು ಸಾಬೀತುಪಡಿಸುತ್ತದೆ. ಉನ್ನತ ಶಿಕ್ಷಣದಲ್ಲಿ ನೀವು ಅದ್ಭುತ ಯಶಸ್ಸು ಪಡೆಯುತ್ತೀರಿ ಮತ್ತು ನಿಮ್ಮ ಜನಪ್ರಿಯತೆ ಸಹ ಹೆಚ್ಚಾಗುತ್ತದೆ. ತಾಯಿಯ ಕಡೆಯ ಜನರೊಂದಿಗೆ ದೂರ ಹೋಗಲು ಅವಕಾಶವನ್ನು ಪಡೆಯುತ್ತೀರಿ ಮತ್ತು ಈ ಸಮಯದಲ್ಲಿ ಅವರೊಂದಿಗಿನ ನಿಮ್ಮ ಸಂಬಂಧವು ಉತ್ತಮಗೊಳ್ಳುತ್ತದೆ.

ಪರಿಹಾರ - ಬುಧವಾರದಂದು ನೀವು ಉಪವಾಸವನ್ನು ಅನುಸರಿಸುವುದು ನಿಮಗೆ ಉತ್ತಮವಾಗಿರುತ್ತದೆ.


ಯಾವುದೇ ಸಮಸ್ಯೆಯಿದೆ ತೊಂದರೆಗೀಡಾಗಿದ್ದರೆ, ಪರಿಹಾರಕ್ಕಾಗಿ ಪ್ರಶ್ನೆ ಕೇಳಿ
  1. ವೃಷಭ ರಾಶಿ

ಮೇಷ ರಾಶಿಯ ಅಧಿಪತಿ ಶುಕ್ರ, ಅವರ ಆಪ್ತ ಸ್ನೇಹಿತ ಬುಧ ಮತ್ತು ಇದು ನಿಮ್ಮ ಐದನೇ ಮನೆಯ ಮಾಲೀಕನಾಗಿ ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಪ್ರವೇಶಿಸುತ್ತದೆ. ಎಂಟನೇ ಮನೆಯ ಮೂಲಕ ಇದ್ದಕ್ಕಿದ್ದಂತೆ ಜೀವನದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಪರಿಗಣಿಸಲಾಗುತ್ತದೆ. ಇದಲ್ಲದೆ ಇದು ಜೀವನದಲ್ಲಿ ಅನಗತ್ಯ ಪ್ರಯಾಣಗಳ ಬಗ್ಗೆ ತಿಳಿಯುತ್ತದೆ.

ನಿಮ್ಮ ಎಂಟನೇ ಮನೆಯಲ್ಲಿ ಬುಧ ಸಾಗುತ್ತಿರುವುದರಿಂದಾಗಿ ಹಣಕಾಸಿನ ವಿಷಯಗಳಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬೇಕಾಗುತ್ತದೆ ಮತ್ತು ಹಣಕಾಸಿನ ನಷ್ಟವಾಗುವ ಸಾಧ್ಯತೆ ಇದೆ. ಇದರಲ್ಲಿ ನಿಮ್ಮವರೇ ಕೆಲವು ಜನರು ಇರಬಹುದು, ಇದು ನಿಮ್ಮನ್ನು ಕಾಡಬಹುದು. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳ ಮೂಲಕ ಉತ್ತಮ ಸುದ್ಧಿಯನ್ನು ಕೇಳಬಹುದು ಮತ್ತು ಅವರು ಸಂತೋಷವನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಮಕ್ಕಳು ಪ್ರಗತಿಯನ್ನು ಪಡೆಯುತ್ತಾರೆ ಮತ್ತು ಅವರ ಪ್ರಗತಿಯು ನಿಮಗೆ ಸಂತೋಷವನ್ನು ನೀಡುತ್ತದೆ.

ಪ್ರೀತಿಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯವೂ ತುಂಬಾ ಅನುಕೂಲಕರವಾಗಿದೆ ಮತ್ತು ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಲು ಅವಕಾಶವನ್ನು ಪಡೆಯುತ್ತೀರಿ. ಇದಲ್ಲದೆ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ನೀವು ಪರಸ್ಪರರೊಂದಿಗೆ ನಿಮ್ಮ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವಿರಿ. ಇದರಿಂದ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ ಮತ್ತು ಪರಸ್ಪರರ ಬಗೆಗಿನ ನಂಬಿಕೆ ಹೆಚ್ಚಾಗುತ್ತದೆ.

ಈ ಸಮಯದಲ್ಲಿ ನೀವು ಯಾವುದೇ ರೀತಿಯ ಮಂತ್ರವನ್ನು ಸಿದ್ಧಪಡಿಸಲು ಬಯಸಿದರೆ ಈ ಸಮಯ ಅದಕ್ಕಾಗಿ ಒಳ್ಳೆಯದು. ಈ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಆಧ್ಯಾತ್ಮಿಕವಾಗಿ ನೀವು ಪ್ರಗತಿಯನ್ನು ಪಡೆಯಬಹುದು.

ಪರಿಹಾರ - ಬುಧ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು ನೀವು ನಾಲ್ಕು ಮುಖ ರುದ್ರಾಕ್ಷವನ್ನು ಹಸಿರು ಬಣ್ಣದ ದಾರದಲ್ಲಿ ತಯಾರಿಸಿ ಬುಧವಾರದಂದು ಧರಿಸಬೇಕು.

  1. ಮಿಥುನ ರಾಶಿ

ಮಿಥುನ ರಾಶಿಯ ಅಧಿಪತಿ ಬುಧ, ಆದ್ದರಿಂದ ಬುಧ ಸಂಚಾರವು ನಿಮಗೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಈ ಸಂಚಾರದ ನೇರವಾದ ಪರಿಣಾಮವು ನಿಮ್ಮನ್ನು ಪ್ರಭಾವಿಸುತ್ತದೆ. ಬುಧ ದೇವ ನಿಮ್ಮ ಮೊದಲನೇ ಮತ್ತು ನಾಲ್ಕನೇ ಮನೆಯ ಮಾಲೀಕ ಮತ್ತು ತನ್ನ ಈ ಸಂಚಾರದ ಸಮಯದಲ್ಲಿ ಅದು ನಿಮ್ಮ ರಾಶಿಯಿಂದ ಏಳನೇ ಮನೆಗೆ ಪ್ರವೇಶಿಸುತ್ತದೆ. ಏಳನೇ ಮನೆಯ ಮೂಲಕ ದೀರ್ಘಕಾಲದ ಪಾಲುದಾರಿಕೆ, ಮದುವೆ, ವ್ಯಾಪಾರ ಮತ್ತು ಆಮದು ರಾಫ್ತು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ.

ಬುಧ ಸಂಚಾರವು ಏಳನೇ ಮನೆಯಲ್ಲಿರುವುದರಿಂದ ವ್ಯಾಪಾರದಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ವ್ಯಾಪಾರವು ವಿಸ್ತಾರವನ್ನು ಪಡೆಯುತ್ತದೆ. ಕೆಲವು ಹೊಸ ಯೋಜನೆಗಳನ್ನು ಸಹ ನೀವು ಆರಂಭಿಸಬಹುದು, ಅದು ನಿಮ್ಮ ವ್ಯಾಪಾರಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಹೊಸ ಬಂಡವಾಳ ಹೂಡಿಕೆಯು ನಿಮ್ಮ ವ್ಯಾಪಾರವನ್ನು ಹೊಳೆಯುವಂತೆ ಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಉತ್ತಮ ಕ್ಷಣಗಳನ್ನು ನೀವು ಹೊಂದಿರುತ್ತೀರಿ ಮತ್ತು ಜೀವನ ಸಂಗಾತಿಯೊಂದಿಗೆ ನಡೆಯುತ್ತಿದ್ದ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ.

ನೀವು ನಿಮ್ಮ ಜೀವನ ಸಂಗಾತಿಯ ಕಡೆ ಸಮರ್ಪಿತರಾಗಿರುತ್ತೀರಿ ಮತ್ತು ಅವರ ಮಾತುಗಳನ್ನು ಗಮನಾರ್ಹವಾಗಿ ಕೇಳುತ್ತೀರಿ. ಅವರ ಬಗ್ಗೆ ಕಾಳಜಿ ವಹಿಸುವಿರಿ. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಇದಲ್ಲದೆ ಜೀವನ ಸಂಗಾತಿ ಎಲ್ಲಾದರೂ ಕೆಲಸದಲ್ಲಿ ತೊಡಗಿದ್ದಾರೆ ಈ ಸಮಯದಲ್ಲಿ ಅವರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಉನ್ನತ ಸ್ಥಾನವನ್ನು ಸಹ ಪಡೆಯಬಹುದು. ಸಮಾಜದಲ್ಲಿ ಅವರ ಚಿತ್ರವೂ ಉತ್ತಮವಾಗುತ್ತದೆ ಮತ್ತು ಈ ಸಮಯದಲ್ಲಿ ಸಂಪತ್ತಿನ ಬಗ್ಗೆ ಯಾವುದೇ ದೊಡ್ಡ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಾರೆ. ನೀವು ಯಾವುದೇ ಸಂಪತ್ತು ಖರೀದಿಸುವ ಮೂಲಕ ಯಶಸ್ಸು ಪಡೆಯಬಹುದು. ಇದು ನಿಮ್ಮ ಸಂತೋಷವನ್ನು ದ್ವಿಗುಣಗೊಳಿಸುತ್ತದೆ.

ಪರಿಹಾರ - ನೀವು ಉತ್ತಮ ಗುಣಮಟ್ಟದ ರತ್ನ ಅಥವಾ ಬುಧ ಗ್ರಹ ಯಂತ್ರವನ್ನು ಬುಧವಾರದ ದಿನದಂದು ಧರಿಸುವುದು ನಿಮಗೆ ಉತ್ತಮ

  1. ಕರ್ಕ ರಾಶಿ

ಕರ್ಕ ರಾಶಿಚಕ್ರದ ಮೂರನೇ ಮತ್ತು ಹನ್ನೆರಡನೇ ಮನೆಯ ಮಾಲೀಕ ಬುಧ ದೇವ. ಧನು ರಾಶಿಯಲ್ಲಿ ಬುಧ ಸಾಚಾರದ ಸಣಯದಲ್ಲಿ ಅದು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿರುತ್ತದೆ. ಆರನೇ ಮನೆಯನ್ನು ದುರದೃಷ್ಟದ ಮನೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಇದನ್ನು ಶತ್ರು, ವಿರೋಧಿ, ಸ್ಪರ್ಧೆ, ಚುನಾವಣೆ, ರೋಗಗಳು, ದೈಹಿಕ ನೋವು, ಸಾಲ ಮತ್ತು ಸಂಘರ್ಷದ ಮನೆಯೆಂದು ಪರಿಗಣಿಸಲಾಗಿದೆ.

ಆರನೇ ಮನೆಯಲ್ಲಿ ಬುಧ ಗ್ರಹವು ಸಂಚರಿಸುವುದರಿಂದ ನಿಮ್ಮ ವೆಚ್ಚಗಳ ಬಗ್ಗೆ ನೀವು ಗಮನ ಹರಿಸಬೇಕು. ಏಕೆಂದರೆ ಅವು ಅಗತ್ಯಕ್ಕಿಂತ ಹೆಚ್ಚು ಹೆಚ್ಚಾಗಬಹುದು ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಬಹುದು. ಇದಾಳಲ್ಲದೆ ನೀವು ನಿಮ್ಮ ವಿರೋಧಿಗಳಿಂದಲೂ ಎಚ್ಚರಿಕೆಯಿಂದಿರಬೇಕು. ಏಕೆಂದರೆ ಈ ಸಮಯದಲ್ಲಿ ಅವರು ಸಾಕಷ್ಟು ಪ್ರಬಲವಾಗಿರಬಹುದು ಮತ್ತು ಅವರ ಕಾರಣದಿಂದಾಗಿ ನೀವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಈ ಸಮಯದಲ್ಲಿ ನೀವು ಬಹಳ ಚಿಂತನಶೀಲವಾಗಿ ಮಾತನಾಡಬೇಕು ಮತ್ತು ಅನಗತ್ಯವಾಗಿ ಜಗಳಕ್ಕೆ ಇಳಿಯುವುದನ್ನು ನೀವು ತಪ್ಪಿಸಬೆಕು. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ಧ್ವನಿಯಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು ಎಂಬುದರ ಬಗ್ಗೆ ಗಮನ ಹರಿಸಿ. ಅಂದರೆ ನಿಮ್ಮ ಜನರು ನಿಮ್ಮ ಶತ್ರುಗಳಾಗುವಂತಹ ಯಾವುದೇ ವಿಷಯವನ್ನು ನೀವಾಗಿ ನೀವೇ ಮಾತನಾಡಬಹುದು. ಆದ್ದರಿಂದ ವಿಶೇಷವಾಗಿ ವೃತ್ತಿಪರ ಜೀವನದಲ್;ಈ ಇದರ ಹಾನಿಯನ್ನು ಎದುರಿಸಬೇಕಾಗಬಹುದು.

ನಿಮ್ಮ ಕೆಲಸದ ಬಗ್ಗೆ ನೀವು ತುಂಬಾ ಗಂಭೀರರಾಗಿರುತ್ತೀರಿ. ಮತ್ತು ನಿಮ್ಮ ಪರಿಶ್ರಮ ಜನರ ದೃಷ್ಟಿಯಲ್ಲಿ ಬರುತ್ತದೆ. ಇದರಿಂದ ನೀವು ಪ್ರಶಂಸೆಯನ್ನು ಸಹ ಪಡೆಯುತ್ತೀರಿ ಮತ್ತು ನಿಮ್ಮ ಕೆಲವು ವಿರೋಧಿಗಳು ಸಹ ನಿಮ್ಮನ್ನು ಹೊಗಳುತ್ತಾರೆ. ಈ ಸಮಯದಲ್ಲಿ ನಿಮ್ಮ ಮನೋಬಲ ಹೆಚ್ಚಾಗುತ್ತದೆ. ನಿಮ್ಮ ಕೆಲಸ ಮತ್ತು ಸ್ಥಾನಮಾನವು ಹೆಚ್ಚಾಗುವ ಪ್ರಬಲ ಸಾಧ್ಯತೆ ಇದೆ.

ಪರಿಹಾರ - ಬುಧವಾರ ಸಾಯಂಕಾಲ ಯಾವುದೇ ದೇವಸ್ಥಾನ ಅಥವಾ ತೀರ್ಥ ಸ್ಥಳದಲ್ಲಿ ಕಪ್ಪು ಎಳ್ಳಿನ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ


ನಿಮ್ಮ ಜೀವನದ ವಿವರವಾದ ಮುನ್ಸೂಚನೆಯನ್ನು ಪಡೆಯಿರಿ : ಈಗಲೇ ಆದೇಶಿಸಿ ಅಸ್ಗ್ಟ್ರಾಸೆಜ್ ಬೃಹತ್ ಕುಂಡಲಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ
  1. ಸಿಂಹ ರಾಶಿ

ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಎರಡನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಎರಡನೇ ಮನೆ ಹಣಕಾಸಿನದು ಮತ್ತು ಹನ್ನೊಂದನೇ ಮನೆಯನ್ನು ಆದಾಯದ ಮನೆಯೆಂದು ಪರಿಗಣಿಸಲಾಗಿದೆ. ಆದ್ದರಿಂದ ಎರಡೂ ಮನೆಗಳು ಬಹಳ ಮುಖ್ಯ. ಬುಧ ಗ್ರಹದ ಸಂಚಾರವು ನಿಮ್ಮ ಐದನೇ ಮನೆಯಲ್ಲಿ ಸಂಭವಿಸಲಿದೆ. ಐದನೇ ಮನೆಯ ಮೂಲಕ ನಮ್ಮ ಬುದ್ಧಿ, ವಿವೇಚನೆ, ಕಲಾತ್ಮಕತೆ, ಪ್ರೀತಿಯ ಸಂಬಂಧ, ಜೀವನದ ಒಲವು, ಮಕ್ಕಳು ಇತ್ಯಾದಿಗಳ ಬಗ್ಗೆ ವಿಶೇಷವಾಗಿ ಪರಿಗಣಿಸಲಾಗುತ್ತದೆ. ಇದನ್ನು ಉತ್ತಮ ಮನೆಯೆಂದು ಪರಿಗಣಿಸಲಾಗಿದೆ.

ಬುಧ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಆದಾಯವು ಹೆಚ್ಚಾಗುವ ಪ್ರಬಲ ಸಾಧ್ಯತೆ ಇದೆ ಮತ್ತು ವ್ಯಾಪಾರ ಸಂಸ್ಥೆಗಳಿಂದಲೂ ನೀವು ಲಾಭವನ್ನು ಪಡೆಯುತ್ತೀರಿ. ನೀವು ಈಗಾಗಲೇ ಯಾವುದೇ ವ್ಯಾಪಾರದಲ್ಲಿ ತೊಡಗಿದ್ದಾರೆ, ಈ ಸಂಚಾರವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ ಅಮ್ತ್ತು ವಿವಿಧ ರೀತಿಯ ಮೂಲಗಳಿಂದಲೂ ಹಣವನ್ನು ಪಡೆಯುವ ಸಾಧ್ಯತೆ ಇದೆ. ಇದನ್ನು ಹೊರೆತುಪಡಿಸಿ, ಕೆಲವು ಜನರು ತಮ್ಮ ವ್ಯಾಪಾರದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲು ಆಲೋಚಿಸಬಹುದು. ಇದು ನಿಮಗೆ ಲಾಭವನ್ನು ನೀಡುತ್ತದೆ.

ಬುಧ ಗ್ರಹದ ಸಂಚಾರವು ನಿಮ್ಮ ಮಕ್ಕಳಿಗೆ ಅನುಕೂಲಕರವಾಗಿರುತ್ತದೆ ಮತ್ತು ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಅವರು ವಿಧ್ಯಾರ್ಥಿಗಳಾಗಿದ್ದರೆ, ಶಿಕ್ಷಣದಲ್ಲಿ ಅವರ ಬುದ್ಧಿವಂತಿಕೆ ತೀಕ್ಷ್ಣಗೊಳ್ಳುತ್ತದೆ ಮತ್ತು ಯಾವುದೇ ಕೆಲಸದಲ್ಲಿ ತೊಡಗಿದ್ದರೆ, ಅದರಲ್ಲಿ ಸಹ ಅವರು ಪ್ರಗತಿ ಹೊಂದುತ್ತಾರೆ. ಅವರಿಗೆ ಈ ಸಮಯ ಉತ್ತಮವಾಗಿರುತ್ತದೆ. ನೀವು ಪ್ರೀತಿಯ ಸಂಬಂಧದಲ್ಲಿದ್ದರೆ, ಈ ಸಮಯದಲ್ಲಿ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಪರಸ್ಪರರೊಂದಿಗೆ ಸ್ಪಷ್ಟವಾಗಿ ಮಾತನಾಡಲು ಅವಕಾಶವನ್ನು ಪಡೆಯುತ್ತೀರಿ. ಇದು ನಿಮ್ಮ ಮನಸ್ಸಿನ ಭಾವನೆಯನ್ನು ಪ್ರಸ್ತುತಪಡಿಸುತ್ತದೆ ಮತ್ತು ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಇದರೊಂದಿಗೆ ನೀವು ಎಲ್ಲೋ ಒಟ್ಟಿಗೆ ಪ್ರಯಾಣಿಸುವ ಸಾಧ್ಯತೆಯೂ ಇದೆ. ಇದಲ್ಲದೆ ಬುಧ ಸಂಚಾರವು ಸಿಂಹ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಅನುಕೂಲಕರವೆಂದು ಸಾಬೀತಾಗುತ್ತದೆ ಮತ್ತು ಹೊಸ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಅವರ ಕಡುಬಯಕೆ ಹೆಚ್ಚಾಗುತ್ತದೆ. ಅವರು ಏನಾದರು ಹೊಸದನ್ನು ಕಲಿಯುತ್ತಾರೆ. ಅವರ ನೆನಪು ಬೆಳೆಯುತ್ತದೆ ಮತ್ತು ಈ ಸಮಯದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಉತ್ತಮ ಫಲಿತಾಂಶಗಳನ್ನು ಅವರು ಪಡೆಯುತ್ತಾರೆ.

ಪರಿಹಾರ - ಬುಧ ಗ್ರಹದ ಫಲಿತಾಂಶಗಳನ್ನು ಪಡೆಯಲು ನೀವು ಭುಧವಾರ ಹಸಿರು ಸಸ್ಯಗಳನ್ನು ನೆಡಬೇಕು.

  1. ಕನ್ಯಾ ರಾಶಿ

ಬುಧ ಗ್ರಹವು ಕನ್ಯಾ ರಾಶಿಯ ಅಧಿಪತಿ, ಆದ್ದರಿಂದ ಬುಧ ಸಂಚಾರವು ನಿಮಗೆ ವಿಶೇಷವಾಗಿ ಮುಖ್ಯ. ಏಕೆಂದರೆ ಇದರ ಪ್ರತಿಯೊಂದು ಸಂಚಾರವು ನಿಮ್ಮ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಮೊದಲನೇ ಮನೆಯನ್ನು ಹೊರೆತುಪಡಿಸಿ ಇದು ನಿಮ್ಮ ಹತ್ತನೇ ಮನೆ ಅಂದರೆ ನಿಮ್ಮ ಕರ್ಮದ ಮನೆಯ ಅಧಿಪತಿಯಾಗಿದೆ. ಮೊದಲನೇ ಮನೆ ನಿಮ್ಮ ಅರೋಗ್ಯ, ಆಲೋಚನೆ, ದೈಹಿಕ ನೋಟ, ಬಣ್ಣ, ರಚನೆ ಮತ್ತು ಪಾತ್ರದ ಬಗ್ಗೆ ಹೇಳಿದರೆ, ಹತ್ತನೇ ಮನೆ ನಿಮ್ಮ ಜೀವನೋಪಾಯ, ಕಾರ್ಯ ವ್ಯಾಪಾರ ಮತ್ತು ಕರ್ಮದ ವೇಗವನ್ನು ತೋರಿಸುತ್ತದೆ. ಬುಧ ಗ್ರಹದ ಸಂಚಾರವು ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಸಂಭವಿಸಲಿದೆ. ಇದನ್ನು ಸಂತೋಷದ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಮನೆಯ ಮೂಲಕ ವ್ಯಕ್ತಿಯ ತಾಯಿ, ಜೀವನದಲ್ಲಿ ಪಡೆಯಲಾಗುವ ವಿವಿಧ ರೀತಿಯ ಸಂತೋಷ, ವಾಹನ, ಸ್ಥಿರ ಅಥವಾ ಅಸ್ಥಿರ ಸಂಪತ್ತು, ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ.

ಈ ಸಂಚಾರದ ಪರಿಣಾಮದಿಂದಾಗಿ ಕುಟುಂಬ ಜೀವನದಲ್ಲಿ ನೀವು ಅನೇಕ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಕುಟುಂಬದಲ್ಲಿ ಸಂಭಸಲಾಗುವ ಯಾವುದೇ ಅಹಂ ಸಂಘರ್ಷವನ್ನು ತಡೆಯಲು ನೀವು ಪ್ರಯತ್ನಿಸಬೇಕು. ಏಕೆಂದರೆ ಈ ಸಮಯದಲ್ಲಿ ಕುಟುಂಬದ ಸದಸ್ಯರು ಅಸಂಘಟಿತರಾಗುವುದರಿಂದ ಕುಟುಂಬದ ಅಧಿಪತ್ಯ ಅಲೆದಾಡಬಹುದು. ನಿಮ್ಮ ಸಂಪೂರ್ಣ ಗಮನ ಮನೆಯ ಮೇಲೆ ಮತ್ತು ಮನೆಗೆ ಸಂಬಂಧಿಸಿದ ಪರಿಸ್ಥಿತಿಗಳ ಮೇಲೆ ಇರುತ್ತದೆ, ಇದರಿಂದ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ನಿಮ್ಮ ವೈಯಕ್ತಿಕ ಜವಾಬ್ದಾರಿಯು ಹೆಚ್ಚಾಗುತ್ತದೆ. ಬುಧ ಸಂಚಾರವು ನಿಮಗೆ ಯಾವುದೇ ಸಂಪತ್ತನ್ನು ನೀಡಬಹುದು. ನೀವು ಯಾವುದೇ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ಖರೀದಿಸಬಹುದು. ಏಕೆಂದರೆ ನಿಮಗೆ ಸಾಕಷ್ಟು ಶುಭವಾಗಿರುತ್ತದೆ ಮತ್ತು ನಿಮಗೆ ಪ್ರಗತಿಯನ್ನು ನೀಡುತ್ತದೆ.

ಈ ಸಮಯದಲ್ಲಿ ನೀವು ನಿಮ್ಮ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಕಾರಣದಿಂದ ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನೀವು ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನೀವು ಪ್ರಶಂಸೆಯನ್ನು ಸಹ ಪಡೆಯಬಹುದು. ಈ ಸಮಯದಲ್ಲಿ ವ್ಯಾಪಾರದಲ್ಲಿ ಸಹ ಶುಭವಾಗುತ್ತದೆ ಮತ್ತು ನಿಮ್ಮ ವ್ಯಾಪಾರವು ಬೆಳೆಯುತ್ತದೆ. ಅಂದರೆ ನೀವು ನಿಮ್ಮ ವ್ಯಾಪಾರವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಜೀವನ ಸಂಗಾತಿ ಕೆಲಸದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ಅವರು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಪರಿಹಾರ - ಪ್ರತಿದಿನ ನಿಯಮಿತವಾಗಿ ಬುಧ ಬೀಜ ಮಂತ್ರವನ್ನು ಜಪಿಸುವದು ನಿಮಗೆ ಶುಭವಾಗಿರುತ್ತದೆ. ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ ಇದನ್ನು ನೀವು ಬುಧವಾರ ಆರಂಭಿಸಬಹುದು.

  1. ತುಲಾ ರಾಶಿ

ಬುಧ ಸಂಚಾರವು ತುಲಾ ರಾಶಿಯ ಮೂರನೇ ಮನೆಯಲ್ಲಿ ಸಂಭವಿಸಲಿದೆ. ಕಾಲ ಪುರುಷದ ಜಾತಕದಲ್ಲಿ ಮೂರನೇ ಮನೆಯನ್ನು ಮಿಥುನ ರಾಶಿಯ ಮೆನೆಯೆಂದು ಹೇಳಲಾಗುತ್ತದೆ. ಆದ್ದರಿಂದ ಈ ಸಂಚಾರದ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಮೂರನೇ ಮನೆ ಕಿವಿ, ನಿಮ್ಮ ಭುಜ, ತೋಳುಗಳು ಮತ್ತು ಕತ್ತಿನ ಮನೆಯಾಗಿದೆ. ಇದರೊಂದಿಗೆ ಸಂವಹನ ಕೌಶಲ್ಯ, ಮಾರ್ಕೆಟಿಂಗ್, ನಿಮ್ಮ ಹವ್ಯಾಸ, ಇತ್ಯಾದಿ ಮತ್ತು ಕಿರಿಯ ಸಹೋದರ ಸಹೋದರಿಯರ ಬಗ್ಗೆ ಸಹ ಅಂದಾಜಿಸಲಾಗುತ್ತದೆ. ಬುಧ ಗ್ರಹವು ನಿಮ್ಮ ರಾಶಿಚಕ್ರದ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ.

ಮೂರನೇ ಮನೆಯಲ್ಲಿ ಬುಧ ಗ್ರಹದ ಸಂಚಾರವು ನೀವು ನಿಮ್ಮ ವಿಷಯವನ್ನು ಇತರರ ಮುಂದಿಡಲು ಸಹಾಯ ಮಾಡುತ್ತದೆ ಮತ್ತು ಇದರಿಂದ ನಿಮ್ಮ ಮನೋಬಲವು ಹೆಚ್ಚಾಗುತ್ತದೆ. ನೀವು ನಿಮ್ಮ ಪ್ರಯತ್ನಗಳ ಮೂಲಕ ನಿಮ್ಮ ಕೆಲಸವನ್ನು ತೀವ್ರಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ. ನೀವು ಟೂರ್ಸ್ ಅಂಡ್ ಟ್ರಾವೆಲ್ಸ್ ಕೆಲಸದಲ್ಲಿ ತೊಡಗಿದ್ದರೆ, ಈ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ ಮತ್ತು ನೀವು ಲಾಭವನ್ನು ಪಡೆಯುತ್ತೀರಿ. ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಅದೃಷ್ಟವು ಬಲಗೊಳ್ಳುತ್ತದೆ. ಈ ಕಾರಣದಿಂದಾಗಿ ನಿಮ್ಮ ಸಿಲುಕಿಕೊಂಡಿರುವ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ ಮತ್ತು ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭಾತಿಸಬಹುದು. ಇದರಿಂದ ನಿಮ್ಮ ಹಳೆಯ ನೆನಪುಗಳು ತಾಜಾವಾಗುತ್ತವೆ ಮತ್ತು ಈ ಸಮಯದಲ್ಲಿ ಕೆಲವು ಹೊಸ ಜನರೊಂದಿಗೆ ನಿಮ್ಮ ಸ್ನೇಹಿತದ ಸಾಧ್ಯತೆಯೂ ಇದೆ.

ನೀವು ನಿಮ್ಮ ಸಂತೋಷ ಮತ್ತು ಸಮಸ್ಯೆ ಎರಡನ್ನೂ ನಿಮ್ಮ ಸಹೋದರ ಸಹೋದರಿಯರೊಂದಿಗೆ ಹಂಚಿಕೊಳ್ಳುವಿರಿ. ಇದರಿಂದ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ವಿದೇಶಿ ಸಂಪರ್ಕಗಳಿಂದ ಲಾಭವನ್ನು ಪಡೆಯಲು ಸಹ ಪ್ರಯತ್ನಿಸುವಿರಿ, ಆದರೆ ಒಂದು ಬಾರಿ ಪ್ರಯತ್ನಿಸಿದರೆ ನಿಮಗೆ ಯಶಸ್ಸು ಸಿಗುತ್ತದೆ. ನೀವು ಏನ್ನನ್ನಾದರೂ ಬರೆಯುತ್ತಿದ್ದರೆ, ಈ ಸಮಯವೂ ನಿಂಬ ಒಳ್ಳೆಯದು ಮತ್ತು ನಿಮ್ಮ ಹವ್ಯಾಸವನ್ನು ನೀವು ಮುಂದುವರಿಸಲು ಸಹ ನಿಮಗೆ ಸಾಧ್ಯವಾಗುತ್ತದೆ.

ಪರಿಹಾರ - ಬುಧವಾರ ವಿಧಾರದ ಮೂಲವನ್ನು ನೀರಿನಲ್ಲಿ ನೆನೆಸಿ, ಆ ನೀರಿನಿಂದ ಸ್ನಾನ ಮಾಡವುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.

  1. ವೃಶ್ಚಿಕ ರಾಶಿ

ಬುಧ ಗ್ರಹವು ವೃಶ್ಚಿಕ ರಾಶಿಯ ಎಂಟನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಎಂಟನೇ ಮನೆ ಅನಿಶ್ಚಿತತೆಯ ಮನೆ ಮತ್ತು ಹನ್ನೊಂದನೇ ಮನೆಯನ್ನು ಆದಾಯದ ಮನೆಯೆಂದು ಪರಿಗಣಿಸಲಾಗಿದೆ. ಬುಧ ಸಂಚಾರವು ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಸಂಭವಿಸಲ್ದೆ. ಎರಡನೇ ಮನೆ ಧ್ವನಿಯ ಮನೆಯಾಗಿದೆ. ಇದರಿಂದ ಕುಟುಂಬದ ಬಗೆಗಿನ ಮಾಹಿತಿಯನ್ನು ಪಡೆಯಲಾಗುತ್ತದೆ ಅಥವಾ ನಿಮ್ಮ ಹಣಕಾಸು, ಆಹಾರ ಪಾನೀಯ, ನಿಮ್ಮ ಜೀವನ ಪದ್ಧತಿ ಇತ್ಯಾದಿಗಳ ಬಗ್ಗೆ ತಿಳಿಯಲಾಗುತ್ತದೆ.

ಎರಡನೇ ಮನೆಯಲ್ಲಿ ಬುಧ ಸಂಚಾರದ ಕಾರಣದಿಂದಾಗಿ ನೀವು ನಿಮ್ಮ ಆದಾಯವನ್ನು ಸಂಗ್ರಹಿಸುವಲ್ಲಿ ಅಂದರೆ ಉಳಿಸುವಲ್ಲಿ ಲಾಭವನ್ನು ಪಡೆಯುತ್ತೀರಿ. ಹಣವನ್ನು ಸಂಗ್ರಹಿಸಲು ಸಾಧಯ್ವಾಗುತ್ತದೆ, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಕುಟುಂಬದ ಸ್ಥಿತಿಯನ್ನು ಸಹ ಬಲಪಡಿಸುತ್ತದೆ. ಬಹಳ ಸರಾಗವಾಗಿ ನೀವು ನಿಮ್ಮ ಜವಾಬ್ದಾರಿಗಳನ್ನು ನಿರಹಿಸುವಿರಿ, ಇದರಿಂದಾಗಿ ಕುಟುಂಬದ ಸದಸ್ಯರು ಸಹ ನಿಮ್ಮನ್ನು ಗೌರವಿಸುತ್ತಾರೆ.

ಈ ಸಮಯದಲ್ಲಿ ಇದ್ದಕ್ಕಿದ್ದಂತೆ ನಿಮಗೆ ಲಾಭವಾಗುವಂತಹ ಕೆಲವು ಘಟನೆಗಳು ಸಂಭವಿಸುತ್ತವೆ. ಈ ಸಮಯದಲ್ಲಿ ನೀವು ನಿಮ್ಮ ಧ್ವನಿಯನ್ನು ನಿಯಂತ್ರಿಸುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ಕೆಲವೊಮ್ಮೆ ನೀವು ನಿಮ್ಮ ವಿರುದ್ಧವಾಗಿರುವಂತಹ ವಿಷಯವನ್ನು ಸಹ ನೀವು ಹೇಳಬಹುದು. ಈ ಸಮಯದಲ್ಲಿ ನೀವು ನಿಮ್ಮ ಅತ್ತೆಮನೆ ಕಡೆಯಿಂದಲೂ ಲಾಭವನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ ಮತ್ತು ಯಾವುದೇ ಕೆಲಸದಲ್ಲಿ ನಿಮಗೆ ಸಹಾಯವನ್ನು ಮಾಡುತ್ತಾರೆ.

ಪರಿಹಾರ - ಬುಧವಾರ ಹಸಿರು ಹುಲ್ಲು ಅಥವಾ ಹಸಿರು ಹುಲ್ಲು ಹಸುವಿಗೆ ತಿನ್ನಿಸುವುದು ನಿಮಗೆ ಲಾಭದಾಯಕ

  1. ಧನು ರಾಶಿ

ಬುಧ ಸಂಚಾರವು ಬುಧ ರಾಶಿಯ ಮೊದಲನೇ ಮನೆಯಲ್ಲಿ ಸಂಭವಿಸಲಿದೆ. ಅಂದರೆ ನಿಮ್ಮದೇ ರಾಶಿಯಲ್ಲಿ ಬುಧ ಸಾಗುತ್ತಿರುವುದರಿಂದಾಗಿ ವಿಶೇಷವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಜಾತಕದಲ್ಲಿ ಇದು ಏಳನೇ ಮತ್ತು ಹತ್ತನೇ ಮನೆಯ ಅಧಿಅಪ್ಟಿ. ಏಳನೇ ಮನೆ ದೀರ್ಘಕಾಲದ ಪಾಲುದಾರಿಕೆ, ಮದುವೆ ಮತ್ತು ಆಮದು ರಾಫ್ತುವಿನ ಮನೆಯಾಗಿದೆ ಮತ್ತು ಹತ್ತನೇ ಮನೆಯ ಮೂಲಕ ಕೆಲಸ, ವ್ಯಾಪಾರ,ಅತ್ತು ಜೀವನೋಪಾಯದ ಬಗ್ಗೆ ಪರಿಗಣಿಸಲಾಗುತ್ತದೆ. ಮೊದಲನೇ ಮನೆಯು ವಿಶೇಷವಾಗಿ ನಿಮ್ಮ ವ್ಯಕ್ತಿತ್ವ, ದೈಹಿಕ ರಚನೆ, ಬಣ್ಣ ಮತ್ತು ಸಮಾಜದಲ್ಲಿ ನಿಮ್ಮ ಮುಖ ಏನೆಂದು ತಿಳಿಯಲು ಇದು ಸಹಾಯ ಮಾಡುತ್ತದೆ, ಇದರೊಂದಿಗೆ ನಿಮ್ಮ ದೇಹದ ಬಗ್ಗೆಯೂ ತಿಳಿಯುತ್ತದೆ.

ಮೊದಲನೇ ಮನೆಯಲ್ಲಿ ಬುಧ ಸಂಚಾರದ ಕಾರಣದಿಂದಾಗಿ ನೀವು ತಮಾಷೆಯಾಗಿರುತ್ತೀರಿ ಅಂದರೆ ತಮಾಷೆಯ ಶೈಲಿಯನ್ನು ಹೊಂದಿರುತ್ತೀರಿ. ಇದರಿಂದಾಗಿ ಜನರು ನಿಮ್ಮ ಸಹವಾಸವನ್ನು ಇಷ್ಟಪಡುತ್ತಾರೆ ಮತ್ತು ನಿಮ್ಮ ಸಾಮಾಜಿಕ ಪರಿಸ್ಥಿತಿಯು ಸುಧಾರಿಸುತ್ತದೆ. ವ್ಯಾಪಾರದ ದೃಷ್ಟಿಕೋನದಿಂದ ಈ ಸಂಚಾರವು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ ನಿಮಮ್ ವ್ಯಾಪಾರವು ದೈನಂದಿನ ಬೆಳೆಯುತ್ತದೆ. ಇದು ನಿಮಗೆ ಹೆಚ್ಚು ಸಂತೋಷವನ್ನು ಸಹ ನೀಡುತ್ತದೆ.

ದಾಂಪತ್ಯ ಜೀವನಕ್ಕೂ ಈ ಸಂಚಾರವು ಉತ್ತಮವಾಗಿರುತ್ತದೆ, ಏಕೆಂದರೆ ನಿಮ್ಮ ಸಂಬಂಧದಲ್ಲಿ ನಡೆಯುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಲು ಸಹ ಇದು ಸಹಾಯ ಮಾಡುತ್ತದೆ. ನೀವು ನಿಮ್ಮ ಮನಸ್ಸಿನ ಗಂಟುಗಳನ್ನು ತೆರೆಯುವಲ್ಲಿ ಯಶಸ್ವಿಯಾಗುತ್ತೀರಿ ಮತ್ತು ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ, ಇದು ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಈ ಸಮಯವೂ ನಿಮ್ಮ ದಾಂಪತ್ಯ ಜೀವನಕ್ಕೆ ಬಲವನ್ನು ನೀಡುತ್ತದೆ.

ಕೆಲಸದ ಸ್ಥಳದಲ್ಲಿನ ನಿಮ್ಮ ಪರಿಸ್ಥಿತಿ ಬಲಗೊಳ್ಳುತ್ತದೆ ಆದರೆ ವಿಶೇಷವಾಗಿ ನೀವು ನಿಮ್ಮ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಈ ಸಮಯದಲ್ಲಿ ನೀವು ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ತರಲು ಸಹ ಪ್ರಯತ್ನಿಸುವಿರಿ.

ಪರಿಹಾರ - ನೀವು ಪ್ರತಿದಿನ ಭಗವಂತ ವಿಷ್ಣುವನ್ನು ಆರಾಧಿಸಬೇಕು ಮತ್ತು ಶ್ರೀ ಸಹಸ್ತ್ರನಾಮ ಸ್ತೋತ್ರವನ್ನು ಪಠಿಸಬೇಕು.

  1. ಮಕರ ರಾಶಿ

ಬುಧ ಗ್ರಹವು ನಿಮ್ಮ ರಾಶಿಯ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಆರನೇ ಮನೆಯನ್ನು ರೋಗ, ಶತ್ರು ಮತ್ತು ಸಾಲದ ಮನೆಯೆಂದು ಹೇಳಿದರೆ ಮತ್ತೊಂದೆಡೆ ಒಂಬತ್ತನೇ ಮನೆಯನ್ನು ಅದೃಷ್ಟದ ಮನೆಯೆಂದು ಹೇಳಲಾಗುತ್ತದೆ. ಬುಧ ಗ್ರಹದ ಸಂಚಾರವು ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಸಂಭವಿಸುತ್ತದೆ. ಹನ್ನೆರಡನೇ ಮನೆಯನ್ನು ನಷ್ಟ ಅಥವಾ ವೆಚ್ಚದ ಮನೆಯೆಂದು ಸಹ ಕರೆಯಲಾಗುತ್ತದೆ. ಇದಲ್ಲದೆ ಆಸ್ಪತ್ರೆಯಲ್ಲಿ ಭರ್ತಿಯಾಗುವುದು, ವಿದೇಶಕ್ಕೆ ಹೋಗುವವುದು, ಜೈಲಿಗೆ ಹೋಗುವುದು, ವೆಚ್ಚಗಳಾಗುವುದು ಇತ್ಯಾದಿಗಳ ಬಗ್ಗೆ ಹನ್ನೆರಡನೇ ಮನೆಯಿಂದ ತಿಳಿಯಲಾಗುತ್ತದೆ.

ಬುಧದ ಸಂಚಾರವು ನಿಮ್ಮ ಶತ್ರುಗಳ ವಿರುದ್ಧ ನೀವು ಹೋರಾಡಲು ನಿಮ್ಮನ್ನ ಸಿದ್ಧಗೊಳಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಅವರು ಬಲವಾಗಿ ಮುಂದುವರಿಯುತ್ತಾರೆ ಆದರೆ ನೀವು ಸಹ ನಿಮ್ಮ ಕಡೆಯಿಂದ ಸಂಪೂರಣವಾಗಿ ಪ್ರಯತ್ನಿಸುವಿರಿ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೇವನದಲ್ಲಿ ನಿಮ್ಮ ಶತ್ರುಗಳಿಂದ ಗೆಲ್ಲಲು ನಿಮ್ಮ ಬುದ್ಧಿಯನ್ನು ಸಂಪೂರ್ಣವಾಗಿ ಬಳಸಬೇಕು. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ, ಆದ್ದರಿಂದ ನಿಮ್ಮ ಬಜೆಟ್ ಅನ್ನು ನಿಯಂತ್ರಿಸಿದರೆ, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವನ್ನು ಬೀರುವುದಿಲ್ಲ.

ಈ ಸಮಯದಲ್ಲಿ ಕೆಲವರು ವಿದೇಶಕ್ಕೆ ಹೋಗುವಲ್ಲಿ ಯಶಸ್ವಿಯಾಗುತ್ತಾರೆ. ಈ ಪ್ರಯಾಣಕ್ಕೆ ಸಮಯವೂ ಸಾಕಷ್ಟು ಅನುಕೂಲಕರವಾಗಿರುತ್ತದೆ ಮತ್ತು ಇದರಿಂದ ನಿಮಗೆ ಲಾಭವಾಗುತ್ತದೆ.

ಬುಧ ಸಂಚಾರದ ಪರಿಣಾಮದಿಂದಾಗಿ ನೀವು ಸಾಲದಿಂದ ಮಕ್ತರಾಗಲು ಸಹಾಯವಾಗುತ್ತದೆ. ಆದರೆ ಅದಕ್ಕಾಗಿ ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಸಾಧ್ಯವಾದಷ್ಟು ಕಠಿಣ ಪರಿಶ್ರಮವನ್ನು ಮಾಡಬೇಕಾಗುತ್ತದೆ. ಆಗ ಮಾತ್ರ ಅವರು ಸಕಾರಾತ್ಮಕ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಲೋಚನೆಗಳ ಬಗ್ಗೆ ನೀವು ಹೆಚ್ಚು ಒಲವು ಹೊಂದುವಿರಿ. ಈ ಸಮಯದಲ್ಲಿ ನೀವು ನಿಮ್ಮ ಆದಾಯ ತೆರಿಗೆಯನ್ನು ಸರಿಯಾಗಿ ಪಾವತಿಸಿದ್ದೀರಿ ಎಂಬುದರ ಬಗ್ಗೆ ಗಮನ ಹರಿಸಿ ಇಲ್ಲದಿದ್ದರೆ ನೀವು ಯಾವುದೇ ಸೂಚನೆ ಸಿಗಬಹುದು.

ಪರಿಹಾರ - ಬುಧ ದೇವರ ವಿಶೇಷ ಅನುಗ್ರಹವನ್ನು ಪಡೆಯಲು ಬುಧವಾರದಂದು ಬುಧ ಹೋರಾ ಸಮಯದಲ್ಲಿ ವಿಧಾರ ಮೂಲವನ್ನು ಧರಿಸಿ.

  1. ಕುಂಭ ರಾಶಿ

ಬುಧ ಗ್ರಹವು ಕುಂಭ ರಾಶಿಯ ಹನ್ನೊಂದನೇ ಮನೆಗೆ ಸಾಗಣಿಸುತ್ತದೆ. ಇದು ನಿಮ್ಮ ರಾಶಿಯ ಐದನೇ ಮತ್ತು ಎಂಟನೇ ಮನೆಯ ಅಧಿಪತಿ. ಆದ್ದರಿಂದ ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಹನ್ನೊಂದನೇ ಮನೆ ನಮ್ಮ ಆದಾಯ ಮತ್ತು ಲಾಭವನ್ನು ತೋರಿಸುತ್ತದೆ. ಇದಲ್ಲದೆ ಇದು ಜೀವನದಲ್ಲಿನ ನಮ್ಮ ಮಹತ್ವಾಕಾಂಕ್ಷೆಗಳು ಮತ್ತು ಅವುಗಳನ್ನು ಪೂರ್ಣಗೊಳಿಸಲು ನಮ್ಮ ಪ್ರಯಾಸಗಳನ್ನು ತೋರಿಸುತ್ತದೆ.

ಹನ್ನೊಂದನೇ ಮನೆಯಲ್ಲಿ ಬುಧ ಸಂಚರಿಸುವುದರಿಂದ, ನೀವು ಸ್ವಾಭಾವಿಕವಾಗಿ ನಿಮ್ಮ ಸಂಪತ್ತನ್ನು ಗುಣಿಸುವಲ್ಲಿ ಸಮಯವನ್ನು ಕಳೆಯುತ್ತೀರಿ. ಅಂದರೆ ಹಣಕಾಸು ಪಡೆಯುವ ಬಗ್ಗೆ ನಿಮ್ಮ ಸಂಪೂರ್ಣ ಗಮನ ಹರಿಸುವಿರಿ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ನೀವು ನಿಮ್ಮ ಬುದ್ಧಿಯನ್ನು ಸಂಪೂರ್ಣವಾಗಿ ಬಳಸುವಿರಿ ಮತ್ತು ನಿಮ್ಮ ಸುತ್ತಲಿಂದ ನೀವು ಲಾಭವನ್ನು ಮಾತ್ರ ಪಡೆಯುತ್ತೀರಿ. ನಿಮ್ಮ ಸಾಮಾಜಿಕ ವಲಯವೂ ಹೆಚ್ಚಾಗುತ್ತದೆ ಮತ್ತು ಕೆಲವು ಹೊಸ ಸ್ನೇಹಿತರನ್ನು ಭೇಟಿಯಾಗಲು ಅವಕಾಶವನ್ನು ಪಡೆಯುತ್ತೀರಿ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಇದು ಉತ್ತಮ ಸಮಯವಾಗಿರುತ್ತದೆ. ಇದನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಬುಧ ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ ಜೀವನವು ಸುಧಾರಿಸುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಲು ಅನೇಕ ಅವಕಾಶವನ್ನು ಪಡೆಯುತ್ತೀರಿ. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ನೀವು ವಿವಾಹಿತರಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಮಕ್ಕಳು ಯಶಸ್ಸು ಪಡೆಯುತ್ತಾರೆ ಮತ್ತು ಅವರು ತಮ್ಮ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಬುದ್ಧಿವಂತಿಕೆ ಅಭಿವೃದ್ಧಿಗೊಳ್ಳುತ್ತದೆ ಮತ್ತು ನಿಮ್ಮ ಸ್ಮರಣ ಶಕ್ತಿಯಲ್ಲಿ ತೀವ್ರತೆ ಬರುತ್ತದೆ.

ಪರಿಹಾರ - ಸಂಪೂರ್ಣ ಹೆಸರು ಬೆಳೆಯನ್ನು ಬುಧವಾರದಂದು ಹಸುವಿಗೆ ನಿಮ್ಮ ಕೈಯಿಂದ ತಿನ್ನಿಸುವುದು ಪ್ರಯೋಜನಕಾರಿ.

  1. ಮೀನಾ ರಾಶಿ

ಬುಧ ಗ್ರಹವು ಮೀನಾ ರಾಶಿಯ ಹತ್ತನೇ ಮನೆಯಲ್ಲಿ ಸಂಚರಿಸುತ್ತದೆ. ಬುಧ ಗ್ರಹವು ನಿಮ್ಮ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ. ನಾಲ್ಕನೇ ಮನೆ ಸಂತೋಷ ಮತ್ತು ಏಳನೇ ಮನೆ ಪಾಲುದಾರಿಕೆಯ ಮನೆಯಾಗಿದೆ. ಹತ್ತನೇ ಮನೆಯಲ್ಲಿ ಬುಧ ಸಂಚಾರವು ವಿಶೇಷವಾಗಿರುತ್ತದೆ. ಇಎಂದರೆ ಹತ್ತನೇ ಮನೆ ಕರ್ಮದ ಮನೆಯಾಗಿದೆ. ಇದರಿಂದ ನಿಮ್ಮ ಜೀವನೋಪಾಯ ಮತ್ತು ವ್ಯಾಪಾರದ ಬಗ್ಗೆ ಪರಿಗಣಿಸಲಾಗುತ್ತದೆ.

ಹತ್ತನೇ ಮನೆಯಲ್ಲಿ ಬುಧ ಸಂಚಾರವು ನಿಮ್ಮನ್ನು ತಕ್ಷಣವೇ ಉತ್ತರವನ್ನು ನೀಡುವವರನ್ನಾಗಿಸುತ್ತದೆ ಮತ್ತು ಯಾವುದೇ ರೀಇಯ ಹಿಂಜರಿಕೆಯಿಂದ ದೂರವಾಗಿಸುತ್ತದೆ. ಇದರಿಂದ ಕೆಲಸದ ಸ್ಥಳದಲ್ಲಿ ನೀವು ಮುಂದುವರಿದು ಭಾಗವಹಿಸುವಿರಿ ಮತ್ತು ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಮಾತ್ರವಲ್ಲದೆ, ಅದನ್ನು ಸುಂದವಾಗಿ ಪ್ರಸ್ತುತಪಡಿಸುವಲ್ಲಿಯೂ ನೀವು ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಬಡ್ತಿ ಪಡೆಯುವ ಸಾಧ್ಯತೆ ಇದೆ. ನಿಮ್ಮ ಆಡುಮಾತಿನ ವರ್ತನೆ ಮತ್ತು ಸೌಜನ್ಯವನ್ನು ಕೆಲಸದ ಸ್ಥಳದ ಜನರು ಇಷ್ಟಪಡುತ್ತಾರೆ ಮತ್ತು ಅವರು ನಿಮ್ಮ ಅಭಿಪ್ರಾಯವನ್ನು ಸಹ ಪಡೆದುಕೊಳ್ಳುತ್ತಾರೆ. ನಿಮ್ಮ ತಮಾಷೆಯ ಶೈಲಿಯು ಕೆಲಸದ ವಾತಾವರಣವನ್ನು ಹಗುರವಾಗಿರಿಸುತ್ತದೆ.

ಇದಲ್ಲದೆ ಕುಟುಂಬ ಜೀವನಕ್ಕೆ ಈ ಸಂಚಾರವು ಸಾಕಷ್ಟು ಅನುಕೂಲಕರವಾಗಿರುತ್ತದೆ. ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಮತ್ತು ಸಮನ್ವಯ ಇರುತ್ತದೆ, ಇದು ನಿಮ್ಮ್ ಸಂಬಂಧದಲ್ಲಿ ಬಲವನ್ನು ಉಂಟುಮಾಡುತ್ತದೆ ಮತ್ತು ಕುಟುಂಬದ ಪ್ರಗತಿಯಾಗುತ್ತದೆ. ನಿಮ್ಮ ಕುಟುಂಬದ ಆದಾಯವು ಹೆಚ್ಚಾಗುತ್ತದೆ ಮತ್ತು ನೀವು ನಿಮ್ಮ ಕುಟುಂಬ ವೆಚ್ಚಗಳ ಬಗ್ಗೆ ಸಹ ಗಮನ ಹರಿಸುತ್ತೀರಿ. ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ನಿಮಗೆ ಸಂತೋಷ ಮತ್ತು ತೃಪ್ತಿಯಾಗುತ್ತದೆ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಕುಳಿತು ಪರಸ್ಪರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದು ನಿಮಗೆ ಉತ್ತಮ.

ಪರಿಹಾರ - ನೀವು ರಾಧಾ ಕೃಷ್ಣ ದೇವರನ್ನು ಅಲಂಕರಿಸಿದ ನಂತರ ಬುಧವಾರದಂಡು ಅವರನ್ನು ಪೂಜಿಸಬೇಕು.


ರತ್ನ, ರುದ್ರಾಕ್ಷಾ ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 799/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com