ಧನು ರಾಶಿಯಲ್ಲಿ ಸೂರ್ಯ ಸಂಚಾರ (15 ಡಿಸೆಂಬರ್ 2020)

15 ಡಿಸೆಂಬರ್, 2020 ರಂದು ಮಂಗಳವಾರ ರಾತ್ರಿ 9 ಗಂಟೆ 19 ನಿಮಿಷಕ್ಕೆ (21:19 ಗಂಟೆ) ಸೂರ್ಯ ದೇವ ಸ್ನೇಹಿತ ಗುರುವಿನ ಸ್ವಾಮಿತ್ವದ ಧನು ರಾಶಿಯಲ್ಲಿ ಸಾಗಲಿದ್ದಾರೆ. ಇದು ಅಗ್ನಿ ತತ್ವದ ರಾಶಿ ಮತ್ತು ಸೂರ್ಯ ಕೂಡ ಬೆಂಕಿಯ ಅಂಶದ ಪ್ರಬಲವಾದ ಗ್ರಹವಾಗಿದೆ. ಇದರಿಂದಾಗಿ ಜೀವನದಲ್ಲಿ ಸಂತೋಷ ಮತ್ತು ಬಡ್ತಿ ಬರುತ್ತದೆ.

ನಡೆಯಿರಿ ಈಗ ಧನು ರಾಶಿಯಲ್ಲಿ ಸೂರ್ಯ ಸಂಚಾರವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

  1. ಮೇಷ ರಾಶಿ

ಸೂರ್ಯ ದೇವ ಮೇಷ ರಾಶಿಯ ಐದನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಪ್ರವೇಶಿಸುತ್ತದೆ. ಈ ಮನೆಯಲ್ಲಿ ಸೂರ್ಯ ದೇವಾ. ಮಿಶ್ರ ಫಲಿತಾಂಶಗಳನ್ನು ನೀಡುತ್ತಾರೆ. ಈ ಸಮಯದಲ್ಲಿ ನಿಮ್ಮ ತಂದೆಯ ಅರೋಗ್ಯ ಸಮಸ್ಯೆಯು ಅವರನ್ನು ಕಾಡಬಹುದು ಮತ್ತು ಅವರು ಅನಾರೋಗ್ಯಕ್ಕೆ ಒಗಳಾಗಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಆವಶ್ಯಕವಾಗಿದೆ. ಇದಲ್ಲದೆ ನಿಮ್ಮ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುತ್ತದೆ. ನೀವು ರಾಜಯೋದಾಗ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ವೃತ್ತಿಪರ ಜೀವನದಲ್ಲಿ ಪ್ರಗತಿಯ ಸಮಯ ಇದು. ನೀವು ಉದ್ಯೋಗದಲ್ಲಿ ತೊಡಗಿದ್ದರೆ, ನಿಮ್ಮ ವರ್ಗಾವಣೆಯ ಸಾಧ್ಯತೆ ಇದೆ. ಮತ್ತು ಕೆಲವು ಜನರು ಉದ್ಯೋಗವನ್ನು ಬದಲಾಯಿಸುವ ಪ್ರಬಲ ಸಾಧ್ಯತೆ ಇದೆ. ಉದ್ಯೋಗದಲ್ಲಿ ಏರಿಳಿತದ ಸಧ್ಯತೆ ಇದೆ ಆದರೆ ಅದು ನಿಮ್ಮ ಪರವಾಗಿ ಇರುತ್ತದೆ ಮತ್ತು ನಿಮಗೆ ನಿಮಗೆ ಪ್ರಬಲ ಲಾಭವನ್ನು ನೀಡುತ್ತವೇ. ನಿಮ್ಮ ಮಕ್ಕಳು ಸಹ ಬಡ್ತಿ ಪಡೆಯುವ ಸಾಧ್ಯತೆ ಇದೆ. ಇದರಿಂದಾಗಿ ಸಮಾಜದಲ್ಲಿ ನಿಮ್ಮ ಮತ್ತು ನಿಮ್ಮ ಕುಟುಂಬದ ನಿಲುವು ಬಲಗೊಳ್ಳುತ್ತದೆ. ಇದಲಲ್ದೆ ಈ ಸಮಯದಲ್ಲಿ ನೀವು ಸಂತೋಷ ಸಂಪನ್ಮೂಲಗಳನ್ನು ಸಹ ಪಡೆಯುತ್ತೀರಿ. ಶಿಕ್ಷಣದಲ್ಲಿ ಕೂಡ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತೀರಿ.

ಪರಿಹಾರ - ಪ್ರತಿದಿನ ನೀವು ಶ್ರೀ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು ಮತ್ತು ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು


ಯಶಸ್ವಿ ವೃತ್ತಿಜೀವನವನ್ನು ಆಯ್ಕೆ ಮಾಡಲು ಸರಿಯಾದ ಮಾರ್ಗವನ್ನು ತಿಳಿಯಿರಿ - ಕಾಗ್ನಿಆಸ್ಟ್ರೋ ರಿಪೋರ್ಟ್
  1. ವೃಷಭ ರಾಶಿ

ಸೂರ್ಯ ದೇವ ವೃಷಭ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಯ ಅಧಿಪತಿ ಮತ್ತು ತನ್ನ ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಪ್ರವೇಶಿಸುತ್ತದೆ. ಈ ಮನೆಯಲ್ಲಿ ಸೂರ್ಯ ಸಂಚಾರವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ನಿಮ್ಮ ಸಂತೋಷವು ಕದಿಕೆಯಾಗುತ್ತದೆ ಮತ್ತು ನಿಮ್ಮ ಆದಾಯದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯವು ತೊಂದರೆಗೊಳಗಾಗಬಹುದು ಮತ್ತು ನಿಮ್ಮ ಕೆಲಸಗಳಲ್ಲಿ ಅಡೆತಡೆಯ ಕಾರಣದಿಂದಾಗಿ ಮಾನಸಿಕವಾಗಿ ನೀವು ಒತ್ತಡಕ್ಕೊಳಗಾಗಬಹುದು. ಅತ್ತೆಮನೆಯ ಕಡೆಯಿಂದ ಸಮಸ್ಯೆ ಉಂಟಾಗಬಹುದು ಮತ್ತು ಅತ್ತೆ ಮನೆಯಲ್ಲಿನ ಒಬ್ಬ ಸದಸ್ಯರ ಅರೋಗ್ಯ ಹದಗೆಡುವುದರಿಂದ ಸಮಸ್ಯೆ ಹೆಚ್ಚಾಗಬಹುದು.

ಈ ಸಮಯದಲ್ಲಿ ನಿಮ್ಮ ಮೂಲಕ ಮಾಡಲಾದ ಯಾವುದೇ ಅನುಚಿತ ಪರಿಣಾಮಗಳನ್ನು ನೀವು ಅನುಭವಿಸಬೇಕಾಗಬಹುದು ಮತ್ತು ಆಡಳಿತದ ಮೂಲಕ ನೀವು ಪಡೆಯಬಹುದು. ಆದಾಗ್ಯೂ ಆಧ್ಯಾತ್ಮಿಕವಾಗಿ ಈ ಸಮಯ ಸಾಕಷ್ಟು ಅನುಕೂಲಕರವಾಗಿರುತ್ತದೆ ಮತ್ತು ನೀವು ಉತ್ತಮವಾಗಿ ಅನುಭವಿಸುತ್ತೀರಿ. ಈ ಸಮಯದಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಇದರಿಂದ ಕೆಲವು ಉತ್ತಮ ಮತ್ತು ಜ್ಞಾನವುಳ್ಳ ಜನರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ನಿಮ್ಮ ಮೂಲಕ ಮಾಡಲಾಗುವ ಕೆಲಸಗಳ ಫಲಿತಾಂಶಗಳನ್ನು ನೀವು ಬೇಗನೆ ಪಡೆಯುತ್ತೀರಿ. ಆದ್ದರಿಂದ ಕಾನೂನಿಗೆ ವಿರುದ್ಧ ಏನನ್ನೂ ಮಾಡಬೇಡಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು.

ಪರಿಹಾರ - ಪ್ರತಿ ಭಾನುವಾರದಂದು ಯಾವುದೇ ದೇವಾಲಯ ಗೌಶಾಲೆಯಲ್ಲಿ ಗೋಧಿ, ಬೆಲ್ಲ, ತಾಮ್ರ, ಹೆಸರುಬೇಳೆ ಮತ್ತು ಕೆಂಪು ಬಣ್ಣದ ಬಟ್ಟೆಯ ದಾನ ಮಾಡಿ.

  1. ಮಿಥುನ ರಾಶಿ

ಸೂರ್ಯ ಸಂಚಾರವು ಮಿಥುನ ರಾಶಿಚಕ್ರದ ಸ್ಥಳೀಯರ ಏಳನೇ ಮನೆಯಲ್ಲಿ ಸಂಭವಿಸಲಿದೆ. ಸೂರ್ಯ ನಿಮ್ಮ ಮೂರನೇ ಮನೆಯ ಅಧಿಪತಿ. ಏಳನೇ ಮನೆಯಲ್ಲಿ ಸೂರ್ಯ ಸಂಚಾರವು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಯಾವುದೇ ವ್ಯಾಪಾರದಲ್ಲಿ ತೊಡಗಿದ್ದರೆ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ, ಇದರಿಂದ ನಿಮಗೆ ಸರಿಯಾದ ಲಾಭವಾಗುತ್ತದೆ. ವ್ಯಾಪಾರದ ವಿಷಯದಲ್ಲಿ ನೀವು ಅದ್ಭುತ ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ವ್ಯಾಪಾರವು ನಾಲ್ಕು ದಿಕ್ಕುಗಳಲ್ಲಿ ವಿಸ್ತರಿಸುವ ಸಾಧ್ಯತೆ ಇದೆ ಮತ್ತು ಅದು ಹೆಚ್ಚಾಗುತ್ತದೆ.

ಇದಕ್ಕೆ ವಿರುದ್ಧವಾಗಿ ನಿಮ್ಮ ದಾಂಪತ್ಯ ಜೀವನದ ದೃಷ್ಟಿಕೋನದಿಂದ ಈ ಸಂಚಾರವು ಹೆಚ್ಚು ಅನುಕೂಲಕರವಾಗಿರುವುದಿಲ್ಲ ಮತ್ತು ನೀವು ಮತ್ತು ನಿಮ್ಮ ಜೀವನ ಸಂಗಾತಿಯ ಮಧ್ಯೆ ಒತ್ತಡ ಹೆಚ್ಚಾಗುತ್ತದೆ, ಇದರಿಂದ ಸಂಬಂಧದಲ್ಲಿ ಕಹಿ ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ತಾಳ್ಮೆಯಿಂದಿರುವುದು ನಿಮಗೆ ತುಂಬಾ ಅವಶ್ಯಕ, ಇಲ್ಲದಿದ್ದರೆ ಸಂಬಂಧ ಹದಗೆಡಬಹುದು. ನಿಮ್ಮ ಜೀವನ ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ ಬರುತ್ತದೆ ಮತ್ತು ಅವರು ಸ್ವಲ್ಪ ಅಹಂಕಾರಿಯಾಗಿ ನಿಮ್ಮೊಂದಿಗೆ ಮಾತನಾಡಬಹುದು. ಇದನ್ನು ನೀವು ಇಷ್ಟಪಡುವುದಿಲ್ಲ ಮತ್ತು ಇದು ನಿಮ್ಮ ತೊಂದರೆಗೆ ಕಾರಣವಾಗಬಹುದು. ಇದಲ್ಲದೆ ನೀವು ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಕೂಡ ಗಮನ ಹರಿಸಬೇಕು. ಏಕೆಂದರೆ ಈ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಬಹುದು. ಕೆಲಸದ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿವು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ತೊಡಗಿದ್ದರೆ, ಪಾಲುದಾರರೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ಗಮನ ಹರಿಸಿ. ಏಕೆಂದರೆ ಇದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.

ಪರಿಹಾರ - ನೀವು ಭಾನುವಾರದಿಂದ ಆರಂಭಿಸಿ ಪ್ರತಿದಿನ ಕನಿಷ್ಠ 108 ಗಾಯತ್ರಿ ಮಂತ್ರವನ್ನು ಖಂಡಿತವಾಗಿಯೂ ಜಪಿಸಬೇಕು.

  1. ಕರ್ಕ ರಾಶಿ

ಸೂರ್ಯ ಸಂಚಾರವು ಕರ್ಕ ರಾಶಿಚಕ್ರದ ಸ್ಥಳೀಯರ ಆರನೇ ಮನೆಯಲ್ಲಿ ಸಂಭವಿಸಲಿದೆ. ಸೂರ್ಯ ದೇವ ನಿಮ್ಮ ರಾಶಿಚಕ್ರದ ಎರಡನೇ ಮನೆಯ ಅಧಿಪತಿ. ಆರನೇ ಮನೆಯಲ್ಲಿ ಸೂರ್ಯ ಸಂಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಉದ್ಯೋಗದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ನಿಮ್ಮ ಪರಿಶ್ರಮವೂ ನಿಮ್ಮ ಪರವಾಗಿ ಫಲಿತಾಂಶಗಳನ್ನು ಒದಗಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ ಮತ್ತು ಅವರು ಬಯಸಿದರು ನಿಮಗೆ ಏನು ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಾಯ್ದಲ್ಲಿ ನೀವು ಯಾವುದೇ ಕಾನೂನು ಪ್ರಕರಣದ ವಿಷಯಗಳಲ್ಲಿ ಯಶಸ್ಸು ಗಾಳಿಸುವೈರಿ ಮತ್ತು ಅದರಿಂದಲೂ ನಿಮಗೆ ಲಾಭವಾಗುತ್ತದೆ.

ಸರ್ಕಾರಿ ಕ್ಷೇತ್ರ ಅಥವಾ ಆಡಳಿತದಿಂದ ನೀವು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ದೆ. ಹಿರಿಯ ಅಧಿಕಾರಿಗಳು ಮತ್ತು ಸಮಾಜದ ವಿಶೇಷ ಜನರು ನಿಮ್ಮೊಂದಿಗೆ ಸಂಪರ್ಕವನ್ನು ಹೊಂದುತ್ತಾರೆ ಮತ್ತು ಅವರ ಮೂಲಕ ನಿಮಗೆ ಉತ್ತಮ ಲಾಭಗಳು ದೊರೆಯುತ್ತವೆ. ಇದಕ್ಕೆ ವಿರುದ್ಧವಾಗಿ ಕುಟುಂಬದ ಯಾರೊಂದಿಗಾದರೂ ನಿಮ್ಮ ವಿವಾದ ಹೆಚ್ಚಾಗಬಹುದು, ಇದರಿಂದ ನೀವು ಚಿಂತೆಗೆ ಒಳಗಾಗುವಿರಿ ಮತ್ತು ಈ ಸಮಯದಲ್ಲಿ ನಿಮ್ಮ ಆರೋಗ್ಯವು ಹದಗೆಡಬಹುದು. ಆದ್ದರಿಂದ ನಿಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ. ದೇಹದ ಉಷ್ಣತೆಯು ಅಧಿಕವಾಗಿರುತ್ತದೆ ಮತ್ತು ನಿಮಗೆ ಜ್ವರವಾಗಬಹುದು. ಇದಲ್ಲದೆ, ವ್ಯರ್ಥವಾಗಿ ಯಾರೊಂದಿಗೂ ವಿವಾದಕ್ಕೆ ಒಳಗಾಗಬೇಡಿ.

ಪರಿಹಾರ - ನೀವು ಸೂರ್ಯ ದೇವರ “ಓಂ ಘೃಣಿ ಸೂರ್ಯಾಯ ನಮಃ” ಬೀಜ ಮಂತ್ರವನ್ನು ಭಾನುವಾರದಿಂದ ಆರಂಭಿಸಿ ಸಾಧ್ಯವಾದಷ್ಟು ಜಪಿಸುವುದು ಉತ್ತಮ.


ನಿಮ್ಮ ಜೀವನದ ವಿವರವಾದ ಮುನ್ಸೂಚನೆಯನ್ನು ಪಡೆಯಿರಿ : ಈಗಲೇ ಆದೇಶಿಸಿ ಅಸ್ಗ್ಟ್ರಾಸೆಜ್ ಬೃಹತ್ ಕುಂಡಲಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ
  1. ಸಿಂಹ ರಾಶಿ

ಸೂರ್ಯ ಸಂಚಾರವು ನಿಮಗೆ ಬಹಳ ಪ್ರಮುಖವಾಗಿರಲಿದೆ, ಏಕೆಂದರೆ ಸೂರ್ಯ ದೇವ ನಿಮ್ಮ ರಾಶಿಯ ಅಧಿಪತಿ. ಅಂದರೆ ನಿಮ್ಮ ಮೊದಲನೇ ಮಾಲೀಕ ಸೂರ್ಯ ದೇವ ತನ್ನ ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಐದನೇ ಮನೆಗೆ ಪ್ರವೇಶಿಸುತ್ತಾರೆ, ಇಲ್ಲಿ ಸೂರ್ಯ ಸಂಚಾರವನ್ನು ಶುಭವೆಂದು ಪರಿಗಣಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರದ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಸೂರ್ಯ ಸಂಚಾರವು ನಿಮ್ಮ ಆದಾಯವನ್ನು ಹೆಚ್ಚಿಸುವ ಮಾರ್ಗವನ್ನು ತೋರಿಸುತ್ತದೆ ಮತ್ತು ಸಮಾಜದ ಪ್ರಭಾವಿ ಜನರೊಂದಿಗೆ ನಿಮ್ಮ ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಸಂಪರ್ಕಗಳ ಮೂಲಕ ಭವಿಷ್ಯದಲ್ಲಿ ನಿಮಗೆ ಲಾಭವಾಗುತ್ತದೆ ಎಂದು ಸಾಬೀತುಪಡಿಸುತ್ತದೆ. ಆದರೆ ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಮಕ್ಕಳು ಯಾವುದೇ ಕಷ್ಟವನ್ನು ಹೊಂದಬಹುದು, ಈ ಕಾರಣದಿಂದಾಗಿ ನಿಮ್ಮ ಚಿಂತೆ ಹೆಚ್ಚಾಗುತ್ತದೆ.

ನೀವು ಪ್ರೀತಿಯ ಸಂಬಂಧದಲ್ಲಿದ್ದರೆ, ಈ ಸಂಚಾರವು ನಿಮಗೆ ಕೆಲವು ಸಮಸ್ಯೆಗಳನ್ನು ಹೆಚ್ಚಿಸುವ ಕೆಲಸ ಮಾಡಬಹುದು. ಯಾವುದೇ ವಿಷಯದ ಬಗ್ಗೆ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಡಬೇಡಿ ಮತ್ತು ಅವರು ಹೆಮ್ಮೆಯ ಅಡಿಯಲ್ಲಿ ಏನಾದರೂ ತಪ್ಪು ಹೇಳಿದರೂ, ಅದನ್ನು ಶಾಂತವಾಗಿ ಕೇಳಿ. ಸಮಯ ಬಂದಾಗ ಪ್ರೀತಿಯಿಂದ ಅವರ ತಪ್ಪು ಅವರಿಗೆ ತಿಳಿಸಿ. ಇದರಿಂದ ನಿಮ್ಮ ಪ್ರೀತಿ ಜೀವನವು ಸಾಮಾನ್ಯವಾಗಿರುತ್ತದೆ ಮತ್ತು ಸರಾಗವಾಗಿ ನಡೆಯಲು ಸಾಧಯವಾಗುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಶಿಕ್ಷಣದ ಕ್ಷೇತ್ರದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಮನಸ್ಥಿತಿಯ ಕೊರತೆ ಅಥವಾ ನಿಮ್ಮ ಏಕಾಗ್ರತೆ ಗೊಂದಲಕ್ಕೊಳಗಾಗುವುದು ಇದರ ಪ್ರಮುಖ ಕಾರಣವಾಗಬಹುದು. ನಿಮ್ಮ ಜೀವನ ಸಂಗಾತಿ ಯಾವುದೇ ರೀತಿಯ ಕೆಲಸದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ಅವರು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ನಿಮಗೂ ಲಾಭವಾಗಬಹುದು.

ಪರಿಹಾರ - ರಾತ್ರಿಯಲ್ಲಿ ಒಂದು ತಾಮ್ರದ ಪಾತ್ರದಲ್ಲಿ ನೀರು ತುಂಬಿಸಿ ಅದನ್ನು ತಲೆಯ ಪಕ್ಕದಲ್ಲಿ ಇರಿಸಿ. ಮರುದಿನ ಬೆಳಿಗ್ಗೆ ಆ ನೀರನ್ನು ಕುಡಿಯಿರಿ. ಇದನ್ನು ನೀವು ಶನಿವಾರದಿಂದ ಆರಂಭಿಸಬಹುದು.

  1. ಕನ್ಯಾ ರಾಶಿ

ಸೂರ್ಯ ಸಂಚಾರವು ಕನ್ಯಾ ರಾಶಿಯ ನಾಲ್ಕನೇ ಮನೆಯಲ್ಲಿ ಸಂಭವಿಸಲಿದೆ. ಇದು ನಿಮ್ಮ ಹನ್ನೊಂದನೇ ಮನೆಯ ಮಾಲೀಕ. ನಾಲ್ಕನೇ ಮನೆಯಲ್ಲಿ ಸಂಭವಿಸುವ ಸೂರ್ಯನ ಈ ಸಂಚಾರವು ನಿಮಗೆ ಅನುಕೂಲಕರವೆಂದು ಹೇಳಲು ಸಾಧ್ಯವಿಲ್ಲ ಮತ್ತು ಇದರ ಕಾರಣದಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಒತ್ತಡವನ್ನು ಕಾಣಲಾಗುತ್ತದೆ. ಕುಟುಂಬದಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯ ಆರೋಗ್ಯವು ಹದಗೆಡಬಹುದು. ಇದರಿಂದಾಗಿ ನೀವು ನಿಮ್ಮ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಮತ್ತು ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ತಾಯಿಯನ್ನು ಸಹ ಅರೋಗ್ಯ ಸಮಸ್ಯೆಯು ಕಾಡಬಹುದು ಮತ್ತು ಕುಟುಂಬದಲ್ಲಿ ನಿಮ್ಮ ಹಸ್ತಕ್ಷೇಪ ತುಂಬಾ ಇರುವುದರಿಂದಾಗಿ ಜನರು ನಿಮ್ಮಿಂದ ಅಸಮಾಧಾನಗೊಳ್ಳಬಹುದು. ನೀವು ಉತ್ತಮವೆಂದು ಸಾಬೀತುಪಡಿಸುವ ಓಟದಲ್ಲಿ ಇತರರನ್ನು ಅವಮಾನಿಸಬೇಡಿ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದಲ್ಲಿ ಏನಾದರೂ ಹೊಸದಾಗಿ ಮಾಡಲು ಪ್ರಯತ್ನಿಸುತ್ತೀರಿ. ವಿದೇಶದಲ್ಲಿ ವಾಸಿಸುತ್ತಿರುವವರು ಈ ಸಮಯದಲ್ಲಿ ತಮ್ಮ ಮನೆಗೆ ಮರಳಿ ಬರಲು ಅವಕಾಶವನ್ನು ಪಡೆಯುತ್ತಾರೆ. ಸೂರ್ಯನ ಈ ಸಂಚಾರವು ಕೆಲಸದ ಸ್ಥಳದಲ್ಲಿ ನಿಮಗೆ ಲಾಭವನ್ನು ನೀಡುತ್ತದೆ ಮತ್ತು ನಿಮ್ಮ ಪರಿಶ್ರಮದಿಂದ ನಿಮಗೆ ಪ್ರಯೋಜನವಾಗುತ್ತದೆ. ಆದರೆ ಕುಟಿಎಂಬದಲ್ಲಿ ನಿರತತೆಯ ಕಾರಣದಿಂದಾಗಿ ನೀವು ನಿಮ್ಮ ಕೆಲಸದ ಬಗ್ಗೆ ಕಡಿಮೆ ಗಮನ ಹರಿಸುವಿರಿ. ಈ ಕಾರಣದಿಂದಾಗಿ ನಿಮ್ಮ ಮೂಲಕ ಯಾವುದೇ ತಪ್ಪು ಸಂಭವಿಸುವ ಸಾಧ್ಯತೆ ಇದೆ. ವಿದೇಶಿ ಮೂಲಗಳಿಂದ ಯಾವುದೇ ರೀತಿಯ ಉತ್ತಮ ಲಾಭವನ್ನು ನೀವು ಪಡೆಯಬಹುದು ಮತ್ತು ಸಂಚಾರವು ಸರ್ಕಾರಿ ವಲಯದಿಂದಲೂ ನಿಮಗೆ ಲಾಭವನ್ನು ಒದಗಿಸಬಹುದು. ಆದರೆ ಇದಕ್ಕೆ ವ್ಯಕ್ತಿರಿತವಾಗಿ ಕೆಲವು ತಪ್ಪುಗಳಲ್ಲಿ ಭಾಗಿಯಾಗುವುದರಿಂದ ಆಡಳಿತದ ಶಿಕ್ಷೆಗೆ ನೀವು ಹೊಣೆಗಾರರಾಗಬಹುದು. ಪರಿಹಾರ - ಪ್ರತಿದಿನ ಭಗವಂತ ಶ್ರೀ ಹರಿ ವಿಷುವಿನ ಪೂಜೆ ಮಾಡಿ ಮತ್ತು ಅವರಿಗೆ ಹಳದಿ ಶ್ರೀಗಂಧವನ್ನು ಅರ್ಪಿಸಿ.

  1. ತುಲಾ ರಾಶಿ

ಸೂರ್ಯ ಗ್ರಹವು ತುಲಾ ರಾಶಿಯ ಹನ್ನೊಂದನೇ ಮನೆಯ ಅಧಿಪತಿ ಮತ್ತು ತನ್ನ ಈ ಸಂಚಾರದ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತಾರೆ. ಮೂರನೇ ಮನೆಯಲ್ಲಿ ಸೂರ್ಯ ಸಂಚಾರವು ನಿಮಗೆ ಶುಭ ಸುದ್ಧಿಯನ್ನು ತರುತ್ತದೆ ಮತ್ತು ಜೀವನದಲ್ಲಿ ನಿಮಗೆ ಯಶಸ್ಸು ನೀಡುತ್ತದೆ. ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ಅದರಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಮತ್ತು ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನೀವು ಸರ್ಕಾರಿ ಯಂತ್ರೋಪಕರಣಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಸರ್ಕಾರಿ ಕ್ಷೇತ್ರದಿಂದ ಲಾಭವಾಗುವ ಪ್ರಬಲ ಸಾಧ್ಯತೆ ಇದೆ. ಈ ಸಮಯದಲ್ಲಿ ಮಾಡಲಾಗುವ ಪ್ರಯಾಣಗಳು ನಿಮ್ಮ ತುಂಬಾ ಕೆಲಸಕ್ಕೆ ಬರುತ್ತವೆ ಮತ್ತು ನಿಮ್ಮನ್ನು ಸಮಾಜದಲ್ಲಿ ಸ್ಥಾಪಿಸಲು ಸಹಕಾರಿಯಾಗುತ್ತವೆ. ನೀವು ಸಾಮಾಜಿಕ ಚಟುವಟಿಕೆಗಳಲ್ಲಿ ಸಹ ಮುಂದುವರಿದು ಪಾಲ್ಗೊಳ್ಳುವಿರಿ, ಇದು ನಿಮ್ಮ ಚಿತ್ರವನ್ನು ಬಲಪಡಿಸುತ್ತದೆ. ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗುತ್ತದೆ. ವ್ಯಾಪದಲ್ಲಿ ನೀವು ಹೆಚ್ಚು ಪರಿಶ್ರಮ ಮಾಡುವಿರಿ ಮತ್ತು ಅದರ ಮೂಲಕ ಮುಂದುವರಿಯುವಲ್ಲಿ ಯಶಸ್ವಿಯಾಗುವಿರಿ. ಈ ಸಮಯದಲ್ಲಿ ನಿಮ್ಮೊಂದಿಗೆ ಕೆಲಸ ಮಾಡುವ ಸಹೋದ್ಯೋಗಿಗಳು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಮತ್ತು ನಿಮ್ಮ ಸ್ಥಿತಿಯನ್ನು ಉತ್ತಮಗೊಳಿಸಲು ಅವರು ನಿಮಗೆ ಸಹಾಯವನ್ನು ಸಹ ಮಾಡುತ್ತಾರೆ. ನೀವು ನಿಮ್ಮ ಪ್ರಯತ್ನಗಳ ಮೂಲಕ ನಿಮ್ಮ ಆದಾಯವನ್ನು ಅನೇಕ ಪಟ್ಟು ಹೆಚ್ಚಿಸುವಿರಿ ಮತ್ತು ನಿಮ್ಮ ಜೀವನ ಸಂಗಾತಿಯ ಅದೃಷ್ಟವು ಸಹ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕಿರಿಯ ಸಹೋದರ ಸಹೋದರಿಯರಿಗೆ ಸಾಧ್ಯವಾದಷ್ಟು ಸಹಾಯ ಮಾಡುವಿರಿ. ಇದರಿಂದಾಗಿ ಅವರ ಮನಸ್ಸಿನಲ್ಲಿ ಪ್ರೀತಿ ಮತ್ತು ಗೌರವ ನಿಮ್ಮ ಬಗ್ಗೆ ಹೆಚ್ಚಾಗುತ್ತದೆ.

ಪರಿಹಾರ - ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದೇಳುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ ಮತ್ತು ಕೆಮೋಪು ಬಣ್ಣದ ಹೂವಿನ ಸಸ್ಯ ಅಥವಾ ಮರಗಳ ನೇರವಾಗಿ ಮಾಡಿ.


ನಿಮ್ಮ ಜಾತಕದಲ್ಲಿ ರಾಜ ಯೋಗವಿದೆಯೇ ಎಂದು ತಿಳಿದಿದೆಯೇ? ಈಗಲೇ ಆದೇಶಿಸಿ ರಾಜ ಯೋಗ ರಿಪೋರ್ಟ್
  1. ವೃಶ್ಚಿಕ ರಾಶಿ

ಸೂರ್ಯ ದೇವ ವೃಶ್ಚಿಕ ರಾಶಿಯ ಹತ್ತನೇ ಮನೆಯ ಅಧಿಪತಿ ಮತ್ತು ಹತ್ತನೇ ಮನೆ ಅತ್ಯಂತ ಪ್ರಮುಖವಾದ ಮನೆಯಾಗಿದೆ. ಎಕೆನ್ದರೆ ಇದನ್ನು ಕರ್ಮದ ಮನೆಯೆಂದು ಸಹ ಕರೆಯಲಾಗುತ್ತದೆ. ಆದ್ದರಿಂದ ಸುಯ ಸಂಚಾರವು ನಿಮಗೆ ಹೆಚ್ಚು ಪ್ರಮುಖವಾಗಿರುತ್ತದೆ. ತನ್ನ ಸಂಚಾರದ ಈ ಸಮಯದಲ್ಲಿ ಸೂರ್ಯ ನಿಮ್ಮ ಎರಡನೇ ಮನೆಗೆ ಪ್ರವೇಶಿಸುತ್ತಾರೆ. ಸಾಮಾನ್ಯವಾಗಿ ಎರಡನೇ ಮನೆಯಲ್ಲಿ ಸೂರ್ಯ ಸಂಚಾರವು ಹೆಚ್ಚು ಅನುಕೂಲಕರವೆಂದು ಪರಿಗಣಿಸುವುದಿಲ್ಲ ಆದರೆ ಪರಿಣಾಮವಾಗಿ ಇದು ನಿಮ್ಮ ಹಣವನ್ನು ಹೆಚ್ಚಿಸುವ ಸಮಯವಾಗಬಹುದು. ಇಂದಿನವರೆಗೆ ನಿಮ್ಮ ಮೂಲಕ ಮಾಡಲಾದ ಪರಿಶ್ರಮದ ಉತ್ತಮ ಫಲಿತಾಂಶವನ್ನು ನೀವು ಪಡೆಯುತ್ತೀರಿ ಮತ್ತು ಹಣವನ್ನು ಸಂಗ್ರಹಿಸುವಲ್ಲಿ ಸಹ ನೀವು ಯಶಸ್ವಿಯಾಗುತ್ತೀರಿ.

ಕುಟುಂಬದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ಕುಟುಂಬದ ಸದಸ್ಯರು ಸಹ ಎಲ್ಲದರಲ್ಲೂ ನಿಮ್ಮನ್ನು ಗೌರವಿಸುತ್ತಾರೆ ಮತ್ತು ನಿಮ್ಮ ಸಲಹೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ಇದರ ಹೊರೆತಾಗಿಯೂ ಕುಟುಂಬದಲ್ಲಿ ಗೊಂದಲ ಉಂಟಾಗಬಹುದು ಮತ್ತು ಇದರಿಂದ ನೀವು ಒತ್ತಡವನ್ನು ಅನುಭವಿಸುತ್ತೀರಿ. ನಿಮ್ಮ ಧ್ವನಿಯಲ್ಲಿ ದೋಷ ಉದ್ಭವಿಸಬಹುದು. ಅಹಂಕಾರದ ಕಾರಣದಿಂದಾಗಿ ನೀವು ನಿಮ್ಮ ಕುಟುಂಬ ಸದಸ್ಯರಿಗೆ ಕೆಲವು ನಿಂದನೆಗಳನ್ನು ಹೇಳಬಹುದು, ಅದು ಅವರ ಹೃದಯವನ್ನು ದ್ರವಗೊಳಿಸುತ್ತದೆ. ನೀವು ನಿಮ್ಮ ಕುಟುಂಬ ಜೀವನದ ಬಗ್ಗೆ ಅತೃಪ್ತರಾಗಿರುತ್ತೀರಿ. ಆದಾಗ್ಯೂ ಕೆಲಸದ ಸ್ಥಳದಲ್ಲಿ ಈ ಸಂಚಾರವು ನಿಮಗೆ ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸುತ್ತದೆ ಮತ್ತು ನಿಮ್ಮ ಸ್ಥಾನವು ಬಲವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಪ್ರತಿಯೊಂದು ಕೆಲಸದಲ್ಲಿ ಅವರು ನಿಮ್ಮನ್ನು ಸಹಕರಿಸುತ್ತಾರೆ. ಇದರಿಂದಾಗಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಾಧಯವಾಗುತ್ತದೆ.

ಪರಿಹಾರ - ಭಾನುವಾರದ ಬೆಳಿಗ್ಗೆ ಕಲವ ಅಂದರೆ ಕೆಂಪು ದಾರವನ್ನು ನಿಮ್ಮ ಮಣಿಕಟ್ಟಿನ ಮೇಲೆ ಆರು ಬರಿ ಸುತ್ತಿ ಕಟ್ಟಿಕೊಳ್ಳಿ

  1. ಧನು ರಾಶಿ

ಧನು ರಾಶಿಗೆ ಸೂರ್ಯನ ಈ ಸಂಚಾರವು ಅತ್ಯಂತ ಮುಖ್ಯವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಸೂರ್ಯ ನಿಮ್ಮದೇ ರಾಶಿ ಅಂದರೆ ನಿಮ್ಮ ಮೊದಲನೇ ಮನೆಗೆ ಸಾಗುತ್ತಾರೆ. ಇದು ನಿಮ್ಮ ರಾಶಿಯ ಒಂಬತ್ತನೇ ಮನೆಯ ಅಧಿಪತಿ ಮತ್ತು ಈ ರೀತಿ ಮೊದಲನೇ ಮನೆಯಲ್ಲಿ ಸಂಚರಿಸಿ ರಾಜ ಯೋಗವನ್ನು ಸೃಷ್ಟಿಸುತ್ತದೆ. ನಿಮ್ಮ ಜಾತಕದಲ್ಲಿ ದಶೆ ಅನುಕೂಲಕರವಾಗಿದ್ದರೆ, ಸೂರ್ಯನ ಈ ಸಂಚಾರವು ನಿಮ್ಮ ಜೀವನದಲ್ಲಿ ಹೆಚ್ಚು ಪ್ರಗತಿಯನ್ನು ನೀಡಬಹುದು ಮತ್ತು ಸಮಾಜದಲ್ಲಿ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ ಮತ್ತು ಸರ್ಕಾರಿ ಕ್ಷೇತ್ರದಿಂದ ಮತ್ತು ಸಮಾಜದ ಇತರ ಕ್ಷೇತ್ರಗಳ ಮೂಲಕ ನಿಮಗೆ ಲಾಭ ಮತ್ತು ಗೌರವ ದೊರೆಯುತ್ತದೆ.

ಇದಕ್ಕೆ ವಿರುದ್ಧವಾಗಿ, ನೀವು ಸ್ವಭಾವತಃ ಅಹಂ ಪ್ರವೃತ್ತಿಯನ್ನು ಹೊಂದುವಿರಿ ಮತ್ತು ನೀವು ಸ್ವಲ್ಪ ಕೋಪದ ವರ್ತನೆಯನ್ನು ತೋರಿಸಬಹುದು. ಈ ಕಾರಣದಿಂದಾಗಿ ದಾಂಪತ್ಯ ಜೀವನದಲ್ಲಿ ಸೂರ್ಯ ಸಂಚಾರವು ಒತ್ತಡವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಬರುತ್ತದೆ ಮತ್ತು ನೀವು ಸ್ವಲ್ಪ ಅಹಂಕಾರಿಯಾಗಬಹುದು. ಇದು ನೇರವಾಗಿ ನಿಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಈ ನಡವಳಿಕೆಯಿಂದ ಜೀವನ ಸಂಗಾತಿ ತೊಂದರೆಗೆ ಒಳಗಾಗುತ್ತಾರೆ. ಇದರ ಪರಿಣಾಮವಾಗಿ ದಾಂಪತ್ಯ ಜೀವನದಲ್ಲಿ ನೀವು ಕಹಿಯನ್ನು ಅನುಭವಿಸುವಿರಿ. ವ್ಯಾಪಾರದ ವಿಷಯದಲ್ಲಿ ಸೂರ್ಯ ಸಂಚಾರವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ.

ಪರಿಹಾರ - ಕಂದು ಅಥವಾ ಕೆಂಪು ಬಣ್ಣದ ಹಸುವಿಗೆ ಭಾನುವಾರ ಮಧ್ಯಾಹ್ನ ನಿಮ್ಮ ಎರಡು ಕೈಯಲ್ಲಿ ಗೋಧಿಯನ್ನು ತುಂಬಿ ತಿನ್ನಿಸಿ.

  1. ಮಕರ ರಾಶಿ

ಸೂರ್ಯ ದೇವ ಮಕರ ರಾಶಿಚಕ್ರದ ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾರೆ. ಹನ್ನೆರಡನೇ ಮನೆಯಲ್ಲಿ ಸೂರ್ಯ ಸಂಚಾರವು ಹೆಚ್ಚು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಸೂರ್ಯನ ಈ ಸಂಚಾರವು ನಿಮ್ಮ ಆರೋಗ್ಯಕ್ಕೆ ದುರ್ಬಲವೆಂದು ಸಾಬೀತುಪಡಿಸುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಆರೋಗ್ಯದಲ್ಲಿ ಕುಸಿತವನ್ನು ಕಾಣಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಆದಾಯದಲ್ಲಿ ಇಳಿಕೆಯನ್ನು ಕಾಣಬಹುದು, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ದುರ್ಬಲಗೊಳ್ಳಬಹುದು. ಆದರೆ ವಿರುದ್ಧ ಸಂದರ್ಭಗಳಲ್ಲೂ ನಿಮಗೆ ಧೈರ್ಯವನ್ನು ನೀಡುತ್ತದೆ ಎಂಬುದು ಒಳ್ಳೆಯ ವಿಷಯ ಮತ್ತು ನೀವು ಯಾವುದೇ ಪರಿಸ್ಥಿತ್ಯಿಂದ ಬೆದರುವುದಿಲ್ಲ. ಧೈರ್ಯವಾಗಿ ಎದುರಿಸುವಿರಿ. ಇದರಿಂದಾಗಿ ನಿಧಾನವಾಗಿ ನಿಮ್ಮ ಕೆಲಸಗಳು ಪೂರ್ಣಗೊಳ್ಳಲು ಆರಂಭಿಸುತ್ತವೆ.

ಈ ಸಮಯದಲ್ಲಿ ನೀವು ಅಪೇಕ್ಷಿಸದ ಪ್ರಯಾಣವನ್ನು ಮಾಡಲು ಅವಕಾಶವನ್ನು ಪಡೆಯುತ್ತೀರಿ. ಈ ರಾಶಿಚಕ್ರದ ಕೆಲವರು ಈ ಸಮಯಾದಲ್ಲಿ ವಿದೇಶಕ್ಕೆ ಹೋಗಲು ಅವಕಾಶವನ್ನು ಪಡೆಯಬಹುದು ಮತ್ತು ಅಲ್ಲಿ ಅವರ ಗೌರವವು ಹೆಚ್ಚಾಗುತ್ತದೆ. ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಈ ಸಂಚಾರವು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಮತ್ತು ನೀವು ಗೆಲ್ಲುವಿರಿ. ಆದರೆ ಈ ಸಮಯದಲ್ಲಿ ನಿಮ್ಮೆ ವೆಚ್ಚಗಳು ಹೆಚ್ಚಾಗುತ್ತವೆ. ಇದು ನಿಮಗೆ ಸಮಸ್ಯೆಯನ್ನು ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣಕಾಸನ್ನು ಹೇಗೆ ನಿಯಂತ್ರಿಸಬೇಕೆಂದು ನೀವು ಕಾಳಜಿವಹಿಸಬೇಕು.

ಪರಿಹಾರ - ನಿಮ್ಮ ತಂದೆಯನ್ನು ಹೃದಯಪೂರಕವಾಗಿ ಗೌರವಿಸಿ ಮತ್ತು ಬೆಳಿಗ್ಗೆ ಬೇಗನೆ ಎದ್ದೇಳುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ.

  1. ಕುಂಭ ರಾಶಿ

ಸೂರ್ಯ ಸಂಚಾರವು ಕುಂಭ ರಾಶಿಚಕ್ರದ ಹನ್ನೊಂದನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯಲ್ಲಿ ಸೂರ್ಯ ಸಂಚಾರವು ಹೆಚ್ಚಾಗಿ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ನಿಮ್ಮ ಜಾತಕದಲ್ಲಿ ಸೂರ್ಯ ದೇವ ಏಳನೇ ಮನೆಯ ಅಧಿಪತಿ, ಆದ್ದರಿಂದ ಈ ಸಂಚಾರವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುವಲ್ಲಿ ಸಾಮರ್ಥ್ಯವಾಗಿದೆ. ನೀವು ವ್ಯಾಪಾರದಲ್ಲಿ ತೊಡಗಿದ್ದರೆ, ನಿಮ್ಮ ವ್ಯಾಪಾರವು ಹೆಚ್ಚುತ್ತದೆ ಮತ್ತು ನಿಮ್ಮ ಆದಾಯದಲ್ಲಿ ಅದ್ಭುತ ಹೆಚ್ಚಳವಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಎರಡು ರೂಪಗಳಲ್ಲಿ ನಿಮ್ಮ ಸಮೃದ್ಧಿಯಾಗುತ್ತದೆ. ಸಮಾಜದ ಹಿರಿಯ ಮತ್ತು ವಿಶೇಷ ಜನರೊಂದಿಗೆ ನೀವು ಸಂಪರ್ಕ ಹೊಂದುವಿರಿ. ಇದು ಭವಿಷ್ಯದಲ್ಲಿ ನಿಮಗೆ ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವೆ ವೈಯಕ್ತಿಕ ಆಲೋಚನೆಯ ವ್ಯತ್ಯಾಸವಿರಬಹುದು.

ಈ ಸಮಯದಲ್ಲಿ ನಿಮ್ಮ ಮಹತ್ವಾಕಾಂಕ್ಷೆಗಳು ಸಾಕಷ್ಟು ಹೆಚ್ಚಾಗುತ್ತವೆ. ಈ ಕಾರಣದಿಂದಾಗಿ ನಿಮ್ಮ ಪ್ರೀತಿಪಾತ್ರರು ತಮ್ಮನ್ನು ನಿಮ್ಮಿಂದ ಭಿನ್ನರು ಎಂದು ಭಾವಿಸುತ್ತಾರೆ ಮತ್ತು ಇದರಿಂದ ನಿಮ್ಮ ಸಂಬಂಧದಲ್ಲಿ ದೂರ ಹೆಚ್ಚಾಗಬಹುದು. ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳಿಗೆ ಈ ಸಂಚಾರವು ಅನುಕೂಲಕರವಾಗಿರುತ್ತದೆ ಮತ್ತು ಈ ಸಂಚಾರದ ಪರಿಣಾಮದಿಂದಾಗಿ ಅವರು ತಮ್ಮ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ನೀವು ವಿಧ್ಯಾರ್ಥಿಯಾಗಿದ್ದರೆ, ಸೂರ್ಯನ ಈ ಸಂಚಾರವು ನಿಮ್ಮನ್ನು ಇನ್ನಷ್ಟು ಹೆಚ್ಚು ಕಠಿಣ ಪರಿಶ್ರಮ ಮಾಡಲು ಪ್ರೇರೇಪಿಸುತ್ತದೆ. ಆಗ ಮಾತ್ರ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರಿ ಕ್ಷೇತ್ರದಿಂದ ನೀವು ಲಾಭವನ್ನು ಪಡೆಯುತ್ತೀರಿ.

ಪರಿಹಾರ - ಭಾನುವಾರ ಒಂದು ತಾಮ್ರದ ಪಾತ್ರದಲ್ಲಿ ನೀರು ತುಂಬಿಸಿ ಅದರಲ್ಲಿ ಕೆಂಪು ಶ್ರೀಗಂಧವನ್ನು ಸೇರಿಸಿ, ನಂತರ ಆ ನೀರನ್ನು ಸೂರ್ಯ ದೇವರಿಗೆ ಅರ್ಪಿಸಿ.

  1. ಮೀನಾ ರಾಶಿ

ಸೂರ್ಯ ದೇವ ಮೀನಾ ರಾಶಿಯ ಆರನೇ ಮನೆಯ ಅಧಿಪತಿ ಮತ್ತು ಧನು ರಾಶಿಯಲ್ಲಿ ಸಂಚಾರದ ಸಮಯದಲ್ಲಿ ಅವರು ನಿಮ್ಮ ರಾಶಿಯಿಂದ ಹತ್ತನೇ ಮನೆಗೆ ಪ್ರವೇಶಿಸುತ್ತಾರೆ. ಹತ್ತನೇ ಮನೆಯಲ್ಲಿ ಸೂರ್ಯ ಗ್ರಹವು ಬಲವಾಗಿರುತ್ತದೆ ಮತ್ತು ಇದನ್ನು ನಿಮ್ಮ ಕರ್ಮ ಮತ್ತು ವ್ಯಾಪಾರದ ಮನೆಯೆಂದು ಕರೆಯಲಾಗುತ್ತದೆ. ಆದ್ದರಿಂದ ಸೂರ್ಯ ಸಂಚಾರವು ನಿಮಗೆ ಹೆಚ್ಚು ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಇದರ ಅನೇಕ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಸೂರ್ಯ ದೇವರ ಅನುಗ್ರಹದಿಂದ ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಪ್ರಗತಿ ಪಡೆಯುತ್ತೀರಿ. ನೀವು ಉನ್ನತ ಸ್ಥಾನವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೆಲಸದ ಹೊರೆ ಕೂಡ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಹಕ್ಕುಗಳು ಹೆಚ್ಚಾಗುತ್ತವೆ ಮತ್ತು ನೀವು ಶಕ್ತಿಶಾಲಿಯಾಗುತ್ತೀರಿ. ಈ ಸಂಚಾರವು ನಿಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಉತ್ತಮ ಫಲಿತಾಂಶಗಳನ್ನು ತುಂಬುತ್ತದೆ ಮತ್ತು ಈ ಸಮಯದಲ್ಲಿ ನೀವು ಕುಟುಂಬದ ಬೆಂಬಲವನ್ನು ಸಹ ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಸ್ಥಾನವು ಬಲಗೊಳ್ಳುತ್ತದೆ ಮತ್ತು ಜನರು ನಿಮ್ಮನ್ನು ಪ್ರಶಂಸಿಸುತ್ತಾರೆ.

ವರಿಷ್ಠ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಉತ್ತಮಗೊಳ್ಳುತ್ತದೆ, ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಯಶಸ್ವಿಯಾಗಲು ಸಂಪೂರ್ಣವಾಗಿ ಸಾಧ್ಯವಾಗುತ್ತದೆ. ಸ್ಪರಾಧಾತ್ಮಕ ಪ್ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಂಚಾರವು ಸಾಕಷ್ಟು ಉತ್ತಮವಾಗಿರುತ್ತದೆ. ನೀವು ಯಶಸ್ಸು ಪಡೆಯುವ ಪ್ರಬಲ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯವು ದುರ್ಬಲಗೊಳ್ಳುವ ಸಾಧ್ಯತೆ ಇದೆ ಆದ್ದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ಸಮಯದಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯು ನಿಮಗೆ ಸಹಾಯ ಮಾಡಬಹುದು. ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಹೊಸ ನೀತಿಯನ್ನು ಯೋಜಿಸಬಹುದು, ಅದನ್ನು ಜನರು ಬಹಳಷ್ಟು ಇಷ್ಟಪಡುತ್ತಾರೆ ಮತ್ತು ಇದರಿಂದ ನೀವು ಪ್ರಶಂಸೆಯನ್ನು ಪಡೆಯುತ್ತೀರಿ.

ಪರಿಹಾರ - ಭಾನುವಾರ ಕೆಂಪು ಶ್ರೀಗಂಧವನ್ನು ಸ್ನಾನ ಮಾಡುವ ನೀರಿನಲ್ಲಿ ಸೇರಿಸಿ, ನಂತರ ಅದೇ ನೀರಿನಿಂದ ಸ್ನಾನ ಮಾಡಿ.


ರತ್ನ, ರುದ್ರಾಕ್ಷಾ ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer