• Big Astro Festival
  • Talk To Astrologers
  • AstroSage Brihat Horoscope
  • Ask A Question
  • Raj Yoga Report
  • Child Report

ಮೇಷ ರಾಶಿ ಭವಿಷ್ಯ 2021 - Aries Horoscope 2021 in Kannada

ಮೇಷ ರಾಶಿ ಭವಿಷ್ಯ 2021 ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಮೇಷ ರಾಶಿಚಕ್ರದ ಸ್ಥಳೀಯರಿಗೆ ಮುಂಬರುವ ಹೊಸ ವರ್ಷವೂ ಉತ್ಸಾಹ, ಪರಾಕ್ರಮ ಮತ್ತು ಅನೇಕ ಬದಲಾವಣೆಗಳಿಂದ ತುಂಬಿರಲಿದೆ. ಏಕೆಂದರೆ ಈ ವರ್ಷ ಈ ವಾರ ಅನೇಕ ಕ್ಷೇತ್ರದಲ್ಲಿ ನೀವು ನಿಮ್ಮ ದೀರ್ಘಕಾಲದ ಕೆಲಸಗಳನ್ನು ಪೂರ್ಣಗೊಳಿಸುವ ಮಾತ್ರವಲ್ಲದೆ, ಈ ವರ್ಷ ಗ್ರಹ ನಕ್ಷತ್ರಗಳು ಸಹ ನಿಮ್ಮನ್ನು ಬೆಂಬಲಿಸುವುದನು ಕಾಣಲಾಗುತದೆ. ಉದ್ಯೋಗದಲ್ಲಿರುವ ಸ್ಥಳೀಯರು ಯಶಸ್ಸು ಪಡೆಯುತ್ತಾರೆ ಮತ್ತು ಅವರಿಗೆ ಅದೃಷ್ಟದ ಬೆಂಬಲ ಸಿಗುತ್ತದೆ. ಇದರಿಂದ ಅವರ ವೃತ್ತಿ ಜೀವನವು ವೇಗ ಹಿಡಿಯುವುದನ್ನು ಕಾಣಲಾಗುತ್ತದೆ. ಈ ವರ್ಷ ನೀವು ಅನೇಕ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಅಂತಹ ಸಂದರ್ಭದಲ್ಲಿ ನೀವು ತಾಳ್ಮೆಯಿಂದಿದ್ದು ಯಾವುದೇ ನಿರ್ಧಾರಕ್ಕೆ ತಲುಪುವುದು ನಿಮಗೆ ಉತ್ತಮವಾಗಿರಲಿದೆ. ವ್ಯಾಪಾರ ವರ್ಗವು ಈ ವರ್ಷ ಸ್ವಲ್ಪ ನಿರಾಶೆಗೊಳ್ಳಬಹುದು. ಏಕೆಂದರೆ ಶನಿ ದೇವ ನಿಮ್ಮಿಂದ ಹೆಚ್ಚು ಶ್ರಮಿಸುವಂತೆ ಮಾಡಲಿದ್ದಾರೆ. .

ವಾರ್ಷಿಕ ಜಾತಕ 2021 ರಿಂದ ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತು ಮದುವೆ ಇತ್ಯಾದಿಗಳಿಗೆ ಸಂಬಂಧಿಸಿದ ನಿಖರವಾದ ಮುನ್ಸೂಚನೆಯನ್ನು ಪಡೆಯಿರಿ

ಆರ್ಥಿಕ ದ್ರಷ್ಟಿಯಿಂದ, ಈ ವರ್ಷ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಏಕೆಂದರೆ ಈ ವರ್ಷದ ಆರಂಭದಲ್ಲಿ ನಿಮಗೆ ಹಣಕಾಸಿನ ನಷ್ಟವಾಗುವ ಸಾಧ್ಯತೆ ಇದೆ. ವರ್ಷದ ಮಧ್ಯದಲ್ಲಿ ಗುರುವಿನ ಸಂಚಾರವು ನೀವು ಅಪಾರ ಸಂಪತ್ತನ್ನು ಪಡೆಯುತ್ತೀರಿ. ಆದಾಗ್ಯೂ ನೀವು ನಿಮ್ಮ ರೋಗದ ಮೇಲೆ ಹಣವನ್ನು ಖರ್ಚಿಸಬೇಕಾಗುತ್ತದೆ. ರಾಹುವಿನ ದೃಷ್ಟಿಯು ಸಹ ಈ ವರ್ಷ ನಿಮ್ಮ ಆರ್ಥಿಕ ಜೀವನಕ್ಕೆ ಶುಭಕರ ಎಂದು ಸಾಬೀತುಪಡಿಸುತ್ತದೆ. ಆದರೆ ವಿದ್ಯಾರ್ಥಿಗಳಿಗೆ ರಾಹುವು ಅವರ ಗಮನವನ್ನು ವಿಚಲಿತಗೊಳಿಸುವ ಕೆಲಸ ಮಾಡುತ್ತದೆ. ಇದರಿಂದ ಅಧ್ಯಯನದಲ್ಲಿ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಆದರೆ ಈ ರಾಶಿಚಕ್ರದ ಕೆಲವು ವಿದ್ಯಾರ್ಥಿಗಳಿಗೆ ಈ ವರ್ಷದ ಆರಂಭವು ಮತ್ತು ವರ್ಷದ ಅಂತ್ಯವು ಬಹಳ ಉತ್ತಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ಅವರಿಗೆ ಪರೀಕ್ಷೆಯಲ್ಲಿ ಸಂಪೂರ್ಣ ಯಶಸ್ಸು ಸಿಗುತ್ತದೆ, ಇದರಿಂದ ಶಿಕ್ಷಕರು ಮತ್ತು ಕುಟುಂಬದ ಸದಸ್ಯರು ಸಂತೋಷಪಡುತ್ತಾರೆ.

ಈ ವರ್ಷ ಶನಿ ದೇವ ನಿಮ್ಮ ಕುಟುಂಬ ಜೀವನಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಲಿದ್ದಾರೆ. ಏಕೆಂದರೆ ಈ ವರ್ಷದ ಆರಂಭದಿಂದ ಆಗಸ್ಟ್ ವರೆಗೆ ಕುಟುಂಬದ ಸಂತೋಷ ಪಡೆಯುವಲ್ಲಿ ನಿಮಗೆ ಅಡೆತಡೆಗಳು ಬರಬಹುದು. ಕೆಲಸದ ಕಾರಣದಿಂದ ನೀವು ಅವರಿಂದ ದೂರ ಹೋಗಬೇಕಾಗುತ್ತದೆ, ಇದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ತಂದೆ - ತಾಯಿ ಮತ್ತು ಸಹೋದರ - ಸಹೋದರಿಗೆ ಈ ವಾರ್ಷ ಉತ್ತಮವಾಗಿರುವುದಿಲ್ಲ. ನೀವು ವಿವಾಹಿತರಾಗಿದ್ದರೆ, ಈ ಸಮಯವೂ ನಿಮಗೆ ಸ್ವಲ್ಪ ಕಡಿಮೆ ಅನುಕೂಲಕರವಾಗಿರಲಿದೆ. ಏಕೆಂದರೆ ನಿಮ್ಮ ಮತ್ತು ಜೀವನ ಸಂಗಾತಿಯ ನಡುವೆ ಒತ್ತಡ ಹಾಗೆಯೆ ಉಳಿದಿರುತ್ತದೆ. ಪರಸ್ಪರ ಭಾವನೆಗಳನ್ನು ನೀವಿಬ್ಬರು ಅರ್ಥಮಾಡಿಕೊಳ್ಳದೆ, ನಿಮ್ಮ ಕೋಪವನ್ನು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅನುಮತಿಸುತ್ತೀರಿ. ಮಕ್ಕಳಿಗೆ ಸಮಯ ಉತ್ತಮವಾಗಿರುತ್ತದೆ, ಅವರು ತಮ್ಮ ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯುತ್ತಾರೆ ಮತ್ತು ಅವರ ಪ್ರದರ್ಶನವು ಕೂಡ ಬಹಳ ಪ್ರಶಂಸನೀಯವಾಗಲಿದೆ.

ಪ್ರೀತಿಯಲ್ಲಿರುವ ಸ್ಥಳೀಯರಿಗೆ ಈ ವರ್ಷ ಉತ್ತಮವಾಗಿರಲಿದೆ. ನಿಮ್ಮ ಪ್ರೀತಿ ಮದುವೆಯಾಗುವ ಸಾಧ್ಯತೆ ಇದೆ. ಪ್ರೀತಿಪಾತ್ರರು ನಿಮಗೆ ಸಹಾಯಕವಾಗಲಿದ್ದಾರೆ, ಇದರಿಂದ ನಿಮಗೆ ಲಾಭ ಸಿಗುತ್ತದೆ. ಪ್ರೀತಿಪಾತ್ರರೊಂದಿಗೆ ಎಲ್ಲಾದರೂ ಸುತ್ತಾಡಲು ಯೋಜಿಸಬಹುದು. ಆದರೆ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಾಗ, ಅಲ್ಲಿ ಇಲ್ಲಿನ ವಿಷಯಗಳನ್ನು ಮಧ್ಯದಲ್ಲಿ ಅಡ್ಡಿಪಡಿಸಬಾರದು ಎಂಬುದರ ಬಗ್ಗೆ ಈ ಸಮಯದಲ್ಲಿ ನೀವು ಗಮನ ಹರಿಸುವ ಅಗತ್ಯವಿದೆ. ಈ ವರ್ಷ ಆರೋಗ್ಯವು ಸುಧಾರಿಸುತ್ತದೆ ಮತ್ತು ದೀರ್ಘಕಾಲದ ಯಾವುದೇ ರೋಗದಿಂದ ಮುಕ್ತರಾಗುವ ಸಾಧ್ಯತೆಯೂ ಇದೆ. ಈ ವರ್ಷ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊರೆತುಪಡಿಸಿ ಯಾವುದೇ ದೊಡ್ಡ ರೋಗವಾಗುವುದಿಲ್ಲ. ಇದಕ್ಕಾಗಿ ಆರಂಭದಿಂದಲೇ ನಿಮ್ಮ ಸರಿಯಾದ ದಿನಚರಿಯ ಜೊತೆ ನಿಮ್ಮ ಆಹಾರ ಪಾನೀಯದ ಬಗ್ಗೆಯೂ ಗಮನ ಹರಿಸಿ.

Read in English - Aries Horoscope 2021

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Aries horoscope 2021

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಮೇಷ ರಾಶಿಚಕ್ರದ ಸ್ಥಳೀಯರು ವರ್ಷ 2021 ರಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಏಕೆಂದರೆ ಶನಿ ದೇವ ಈ ಇಡೀ ವರ್ಷ ನಿಮ್ಮ ರಾಶಿಚಕ್ರದ ನಿಮ್ಮ ಹತ್ತನೇ ಮನೆಯಲ್ಲೇ ಕುಳಿತಿರಲಿದ್ದಾರೆ. ಪರಿಣಾಮವಾಗಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಮೇಲೆ ಶನಿಯ ದೃಷ್ಟಿಯು ಬೀಳಲಿದೆ. ಅಂತಹ ಪರಿಸ್ಥಿತಿಯಲ್ಲಿ ಶನಿ ದೇವರ ಈ ಪರಿಣಾಮವು ನಿಮಗೆ ಅತ್ಯಂತ ಉತ್ತಮವಾಗಿರಲಿದೆ ಎಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ಹಿಂದಿನ ಸಮಯಕ್ಕೆ ತಕ್ಕಂತೆ ನೀವು ಉತ್ತಮ ಪರಿಣಾಮವನ್ನು ಪಡೆಯುತ್ತೀರಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಜನರ ಸಹಾಯದಿಂದ ನಿಮ್ಮ ಕೆಲಸದ ಸ್ಥಳದ್ಲಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಲು ಯಶಸ್ವಿಯಾಗುತ್ತೀರಿ. ಈ ವರ್ಷ ನೀವು ವಿದೇಶಿ ಸಂಪರ್ಕಗಳೊಂದಿಗೆ ಸೇರಲು ಅವಕಾಶ ಪಡೆಯುತ್ತೀರಿ. ಇದರೊಂದಿಗೆ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತೀರಿ. ವಿದೇಶಿ ಮೂಲಗಳೊಂದಿಗೆ ನಿಮ್ಮ ಸಂವಹನವನ್ನು ಹೆಚ್ಚಿಸಲು ಮತ್ತು ಅವರಿಂದ ಉತ್ತಮ ಲಾಭವನ್ನು ಗಾಳಿಸಾಯುವ ಪ್ರಯತ್ನಗಳನ್ನು ಮುಂದುವರಿಸಬೇಕಾಗುತ್ತದೆ.

ನೀವು ಉದ್ಯೋಗದಲ್ಲಿದ್ದರೆ, ಕೆಲಸದ ಸ್ಟಳದಲ್ಲಿ ನೀವು ಉತ್ತಮ ಸ್ಥಾನವನ್ನು ಪಡೆಯುತ್ತೀರಿ, ಇದರಿಂದ ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ನಿಮ್ಮಿಂದ ಸಂತೋಷಪಡುತ್ತಾರೆ. ಆದಾಗ್ಯೂ ಈ ವರ್ಷದ ಆರಂಭದಿಂದ ಏಪ್ರಿಲ್ ಮಧ್ಯೆ ನೀವು ಸ್ವಲ್ಪ ಸಮಸ್ಯೆಯನ್ನು ಅನುಭವಿಸುತ್ತೀರಿ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮೇಲೆ ಯಾವುದೇ ದೊಡ್ಡ ಆರೋಪವನ್ನು ಹಾಕುವ ಸಾಧ್ಯತೆಯೂ ಇದೆ, ಇದರಿಂದ ನಿಮ್ಮ ಚಿತ್ರಕ್ಕೆ ಹಾನಿಯಾಗುತ್ತದೆ. ನೀವು ವ್ಯಾಪಾರದಲ್ಲಿದ್ದರೆ, ಈ ವರ್ಷ ವ್ಯಾಪಾರಸ್ಥರು ಹಾನಿಯನ್ನು ಎದುರಿಸಬೇಕಾಗಬಹುದು. ಆದಾಗ್ಯೂ ವ್ಯಪಾರವನ್ನು ವಿಸ್ತರಿಸಲು ಮತ್ತು ವ್ಯಾಪಾರದಲ್ಲಿ ಲಾಭಕ್ಕಾಗಿ ಹೊಸ ತಂತ್ರ ಮಾಡುವುದನ್ನು ಕಾಣಲಾಗುತ್ತದೆ. ಈ ಕಾರಣದಿಂದ ಭವಿಷ್ಯದಲ್ಲಿ ಈ ತಂತ್ರ ಮತ್ತು ಹೊಸ ಅವ್ವಕಾಶಗಳ ಮೂಲಕ ನಿಮಗೆ ಪ್ರಯೋಜನ ಸಿಗಬಹುದು.

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according Aries horoscope 2021

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಮೇಷ ರಾಶಿಚಕ್ರದ ಸ್ಥಳೀಯರ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷ ನಿಮಗೆ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಉತ್ತಮವಾಗಿರುತ್ತದೆ. ನಿಮ್ಮ್ ಜೀವನದಲ್ಲಿ ಅನೇಕ ಸವಾಲುಗಳು ಬರುತ್ತವೆ, ಇದರಿಂದ ನೀವು ತೊಂದರೆಕ್ಕೊಳಗಾಗಬಹುದು. ವರ್ಷದ ಆರಂಭದಲ್ಲಿ ಆರ್ಥಿಕ ವಿಷಯಗಳಲ್ಲಿ ದುರ್ಬಲತೆಯನ್ನು ಕಾಣಲಾಗುತ್ತದೆ. ಹೇಗಾದರೂ, ಇದರ ಹೊರೆತಾಗಿಯೂ ನಿಮ್ಮ ಆರ್ಥಿಕ ಜೀವನವನ್ನು ಉತ್ತಮಗೊಳಿಸಲು ನಿಮ್ಮ ಪರಿಶ್ರಮ ಮತ್ತು ಪ್ರಗತಿ ಮಾಡುವುದನ್ನು ಕಾಣಲಾಗುತ್ತದೆ. ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವೂ ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಗುರುವು ನಿಮ್ಮ ಹನ್ನೊಂದನೇ ಮನೆಯಲ್ಲಿ ಇರುತ್ತಾರೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ನಿಮ್ಮ ಆದಾಯವು ಪ್ರಯೋಜನ ಪಡೆಯುತ್ತದೆ. ಗುರುವಿನ ಉಪಸ್ಥಿತಿಯು ಈ ಸಮಯದಲ್ಲಿ ನಿಮ್ಮ ಅನೇಕ ಮಾನಸಿಕ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಮಾಡುತ್ತದೆ. ಈ ವರ್ಷ ಸೆಪ್ಟೆಂಬರ್ ರಿಂದ ನವೆಂಬರ್ ಮಧ್ಯೆ ಆರ್ಥಿಕ ಪರಿಸ್ಥಿತಿಯಲ್ಲಿ ಏರಿಳಿತ ಬರುತ್ತದೆ. ಇದರಿಂದ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.

ಇದರ ನಂತರ ಡಿಸೆಂಬರ್ ತಿಂಗಳಲ್ಲಿ ಉತ್ತಮ ಸಮಯ ಮತ್ತೆ ಆರಂಭವಾಗುತ್ತದೆ. ಏಕೆಂದರೆ ವರ್ಷದ ಅಂತ್ಯದಲ್ಲಿ ರಾಹುವಿನ ಉಪಸ್ಥಿತಿಯು ನಿಮ್ಮ ರಾಶಿಚಕ್ರದ ಎರಡನೇ ಮನೆಯಲ್ಲಿರುವ ಕಾರಣದಿಂದಾಗಿ, ನೀವು ಹಣವನ್ನು ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಈ ಎಲ್ಲಾ ಅವಕಾಶಗಳನ್ನು ನೀವು ನಿಮ್ಮ ಎಚ್ಚರಿಕೆಯಿಂದ ಮತ್ತು ಬಹಳ ಬುದ್ಧಿವಂತಕೆಯಿಂದ ಬಳಸುವ ಅವಶ್ಯಕತೆಯಿದೆ. ಆಗ ಮಾತ್ರ ನೀವು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಯಾರಾದರೂ ಮೂರನೇ ವ್ಯಕ್ತಿ ಇದರ ಲಾಭವನ್ನು ಪಡೆದುಕೊಳ್ಳಬಹುದು. ಈ ಸಮಯದಲ್ಲಿ ನೀವು ಅನಾರೋಗ್ಯಕ್ಕೆ ಸಹ ಒಳಗಾಗಬಹುದು. ಇದರಿಂದ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು ಮತ್ತು ನೀವು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ಸಮಯ ಇರುವಾಗಲೇ, ಉತ್ತಮ ಅರ್ಗ್ಯ ಪಾಲಿಸಿಯನ್ನು ಪಡೆದುಕೊಳ್ಳಿ.

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ - Education life according Aries horoscope 2021

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಶಿಕ್ಷಣದ ಕ್ಷೇತ್ರದಲ್ಲಿ ಈ ವರ್ಷ ಮೇಷ ರಾಶಿಚಕ್ರದ ಸ್ಥಳೀಯರು ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಏಕೆಂದರೆ ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ ರಿಂದ ಮಾರ್ಚ್ ವರೆಗೆ, ವಿದ್ಯಾರ್ಥಿಗಳು ಅಧ್ಯಯನದಲ್ಲಿ ಒಲವು ಹೊಂದಿರುತ್ತಾರೆ ಮತ್ತು ಯಶಸ್ಸು ಪಡೆಯುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ರಾಹು -ಕೇತುವು ಅನೇಕ ವಿದ್ಯಾರ್ಥಿಗಳ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಪರಿಶ್ರಮವನ್ನು ಮುಂದುವರಿಸುವ ಅಗತ್ಯವಿರುತ್ತದೆ. ನೀವು ನಿಮ್ಮ ಕೆಟ್ಟ ಸವಾಸದ ಬಗ್ಗೆ ಹೆಚ್ಚು ಗಮನ ಹರಿಸದೆ, ನಿಮ್ಮ ಸ್ವಂತ ವ್ಯವಹಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಆದಾಗ್ಯೂ ಮಾರ್ಚ್ ನಂತರ ಏಪ್ರಿಲ್ ತಿಂಗಳಲ್ಲಿ ಪರಿಸ್ಥಿತಿಗಳು ಹದಗೆಡುತ್ತವೆ ಮತ್ತು ನೀವು ನಿಮ್ಮ ಅನೇಕ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಶೇಷ ಸಮಸ್ಯೆಗಳನ್ನು ಎದುರಿಸಬೇಕಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ನಡೆಯಲಾಗುವ ಸಮಸ್ಯೆಗಳಿಂದ ಹೊರಬರಲು ನೀವು ವಿಫಲರಾಗುತ್ತೀರಿ. ಇದರಿಂದ ಅಧ್ಯಯನದಲ್ಲಿ ಮನಸ್ಸು ಹೊಂದಲು ನಿಮಗೆ ಸಾಧ್ಯವಾಗುವುದಿಲ್ಲ.

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ನಂತರ ಮೇ ರಿಂದ ಜೂಲೈ ತಿಂಗಳಲ್ಲಿ ಪರಿಸ್ಥಿತಿಗಳಲ್ಲಿ ನಿಮಗೆ ಬದಲಾವಣೆ ಕಂಡುಬರುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಯಾವುದೇ ರೀತಿಯ ಸ್ಪರ್ಧಾತ್ಮಕ ಪರಿಕ್ಷೆಯ ತಯಾರಿಯಲ್ಲಿ ತೊಡಗಿದ್ದರೆ, ಅದಕ್ಕಾಗಿ ನವೆಂಬರ್ ತಿಂಗಳು ಅದ್ಭುತವಾಗಿರಲಿದೆ. ಈ ಸಮಯದಲ್ಲಿ ಶನಿ ದೇವ ನಿಮ್ಮನ್ನು ಬೆಂಬಲಿಸುತ್ತಾರೆ. ಪರಿಣಾಮವಾಗಿ ನೀವು ಉತ್ತಮ ಯಶಸ್ಸು ಪಡೆಯುತ್ತೀರಿ. ವರ್ಷ 2021 ರಲ್ಲಿ ಮಂಗಳ ದೇವ . 6 ಸೆಪ್ಟೆಂಬರ್ ರಿಂದ 22 ಅಕ್ಟೋಬರ್ ತಿಂಗಳ ಸಮಯದಲ್ಲಿ ನಿಮ್ಮ ಆರನೇ ಮನೆಯಲ್ಲಿರುತ್ತಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಯಶಸ್ವಿಯಾಗುತ್ತಾರೆ. ಇದರೊಂದಿಗೆ ನಿಮ್ಮ ಹನ್ನೊಂದನೇ ಮನೆಯಲ್ಲಿರುವ ಗುರು ಗ್ರಹವು ಕೂಡ ನಿಮಗೆ ಉತ್ತಮ ಪರಿಣಾಮವನ್ನು ನೀಡಲಿದ್ದಾರೆ. ಆದ್ದರಿಂದ ನೀವು ವಿದೇಶಕ್ಕೆ ಹೋಗಲು ಕನಸು ಕಾಣಿತ್ತಿದ್ದರೆ, ನಿಮ್ಮ ರಾಶಿಯಲ್ಲಿನ ಗುರುವಿನ ಶುಭ ದೃಷ್ಟಿಯು ನಿಮಗೆ ವಿದೇಶಿ [ಪಾಠಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ದಾಖಿಲ ನೀಡುವ ಕೆಲಸ ಮಾಡುತ್ತಾರೆ.

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according Aries horoscope 2021

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಮೇಷ ರಾಶಿಚಕ್ರದ ಸ್ಥಳೀಯರ ಕುಟುಂಬ ಜೀವನವು ಸ್ವಲ್ಪ ಕಡಿಮೆ ಅನುಕೂಕರವಾಗಿರಲಿದೆ. ಏಕೆಂದರೆ ಶನಿ ದೇವ ನಿಮಗೆ ನಿಮ್ಮ ಕರ್ಮಕ್ಕೆ ತಕ್ಕಂತೆ ಫಲವನ್ನು ನೀಡುತ್ತಾ, ಈ ಇಡೀ ವರ್ಷ ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿರುತ್ತಾರೆ. ಇದರಿಂದ ಕುಟುಂಬ ಜೀವನದಲ್ಲಿ ನೀವು ಕೊರತೆಯನ್ನು ಅನುಭವಿಸುತ್ತೀರಿ, ಈ ಸಮಯದಲ್ಲಿ ನೀವು ನಿಮ್ಮನ್ನು ಬಹಳ ಒಂಟಿಯಾಗಿ ಭಾವಿಸುತ್ತೀರಿ. ಇದಲ್ಲದೆ ಯಾವುದೇ ಕಾರಣದಿಂದಾಗಿ ನೀವು ನಿಮ್ಮ ಮನೆಯಿಂದ ದೂರ ಹೋಗಬೇಕಾಗಬಹುದು. ಮನೆಯಿಂದ ದೂರವಿದ್ದು, ಮನೆ ಕುಟುಂಬದ ಬೆಂಬಲವು ನಿಮಗೆ ಸಿಗುವುದಿಲ್ಲ. ಈ ಕಾರಣದಿಂದ ನಿಮ್ಮ ಸ್ವಭಾವದಲ್ಲಿ ಕಿರಿಕಿರಿಯನ್ನು ಕಾಣಲಾಗುತ್ತದೆ. ಕೆಲಸದ ಸ್ಥಳದಲ್ಲಿನ ಹೆಚ್ಚು ಕಾರ್ಯ ನಿರತ್ತೆಯ ಕಾರಣದಿಂದಾಗಿ ನೀವು ನಿಮ್ಮ ಕುಟುಂಬದ ಸದಸ್ಯರಿಗೆ ಸಮಯ ನೀಡಲಾಗುವುದಿಲ್ಲ.ಈ ಕಾರಣದಿಂದ ಕುಟುಂಬದ ಸದಸ್ಯರು ಕೂಡ ನಿಮ್ಮೊಂದಿಗೆ ಕೋಪಗೊಳ್ಳುವುದನ್ನು ಕಾಣಲಾಗುತ್ತದೆ.

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಜೂಲೈ ಮತ್ತು ಆಗಸ್ಟ್ ತಿಂಗಳು ಕುಟುಂಬದೊಂದಿಗೆ ನಿಮ್ಮ ವಿವಾದವಾಗುತ್ತದೆ ಎಂದು ಸಾಬೀತುಪಡಿಸುತ್ತವೆ. ಈ ಸಮಯದಲ್ಲಿ ತಂದೆ ತಾಯಿಯು ಆರೋಗ್ಯದ ಸಮಸ್ಯೆಗಳನ್ನು ಹೊಂದಿರುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಅವರ ಕಷ್ಟವನ್ನು ಹೆಚ್ಚಿಸದೆ ನೀವು ಪ್ರತಿಯೊಂದು ವಿವಾದವನ್ನು ಪರಿಹರಿಸಲು ಪ್ರಯತ್ನಿಸುತ್ತಿರುವ ಅಗ್ಯವಿರುತ್ತದೆ. ಹೇಗಾದರೂ, ಸೆಪ್ಟೆಂಬರ್ ರಿಂದ ನವೆಂಬರ್ ತಿಂಗಳಲ್ಲಿ ಪರಿಸ್ಥಿತಿಗಳು ಸ್ವಲ್ಪ ಸುಧಾರಿಸುತ್ತವೆ ಮತ್ತು ನೀವು ನಿಮ್ಮ ಕುಟುಂಬದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರು ಸಹ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು. ಏಕೆಂದರೆಕೆಲಸದ ಸ್ಥಳದಲ್ಲಿ ಅವರಿಗೆ ಯಾವುದೇ ರೀತಿಯ ನಷ್ಟವಾಗುವ ಸಾಧ್ಯತೆ ಇದೆ. ಇದಲ್ಲದೆ ನೀವು ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ನಿಮಗೆ ಸಲಹೆ ನೀಡಲಾಗಿದೆ

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ ವೈವಾಹಿಕ ಜೀವನ ಮತ್ತುಮಕ್ಕಳು - Children & Marriage life according Aries horoscope 2021

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ವೈವಾಹಿಕ ಜನರಿಗೆ ವರ್ಷ 2021, ಸಾಮಾನ್ಯಕ್ಕಿಂತ ಕಡಿಮೆ ಉತ್ತಮವಾಗಿರಲಿದೆ. ಏಕೆಂದರೆ ವರ್ಷದ ಆರಂಭದಿಂದಲೇ ಮಂಗಳ ದೇವ ಮೇಷ ರಾಶಿಚಕ್ರದ ಲಗ್ನದ ಮನೆಯಲ್ಲಿ ಕುಳಿತಿರಲಿದ್ದಾರೆ. ಇದರೊಂದಿಗೆ ಈ ಸಮಯದಲ್ಲಿನಿಮಮ್ ರಾಶಿಚಕ್ರದ ಏಳನೇ ಮನೆಯ ಮೇಲೆ ಶನಿ ದೇವರ ದೃಷ್ಟಿ ಇರುತ್ತದೆ. ಈ ಕಾರಣದಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಒತ್ತಡ ಉಳಿದಿರುತ್ತದೆ. ಜೀವನ ಸಂಗಾತಿಯೊಂದಿಗೆ ನಿಮ್ಮ ವಿವಾದವು ಸಂಭವಿಸಬಹುದು. ಇದಲ್ಲದೆ ನಿಮ್ಮ ಯಾವುದೇ ಹಿಂದಿನ ರಹಸ್ಯದ ಕಾರಣದಿಂದಾಗಿ ನಿಮ್ಮಿಬರ ಮಧ್ಯೆ ವಿವಾದವಾಗುವ ಸಾಧ್ಯತೆಯೂ ಇದೆ. ಈ ವರ್ಷ ಶುಕ್ರ ದೇವ ಕೂಡ 21ಫೆಬ್ರವರಿ ರಿಂದ 17 ಮಾರ್ಚ್ ಮಧ್ಯೆ ನಿಮ್ಮ ರಾಶಿಚಕ್ರದ ಹನ್ನೊಂದನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ವೈವಾಹಿಕ ಜೀವನದ ಸಂತೋಷವನ್ನು ಅನುಭವಿಸುತ್ತೀರಿ. ಏಕೆಂದರೆ ಶುಕ್ರ ದೇವ ಭೌತಿಕ ಸಂತೋಷದ ಅಂಶ, ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ರಾಶಿಚಕ್ರದ ಹನ್ನೊಂದನೇ ಮನೆಯಲ್ಲಿ ಅವರ ಉಪಸ್ಥಿತಿಯು ನಿಮ್ಮ ಮತ್ತು ಜೀವನ ಸಂಗಾತಿಯ ನಡುವಿನ ನಿರಾಕನ್ನು ಕೊನೆಗೊಳಿಸುತ್ತದೆ ಮತ್ತು ನಿಮ್ಮಿಬ್ಬರ ಗೌರವವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

ಆದಾಗ್ಯೂ ಈ ವರ್ಷ ನಿಮ್ಮ ತಾಯಿಯೊಂದಿಗೆ ಜೀವನ ಸಂಗಾತಿಯ ಸಮನ್ವಯದ ಕೊರತೆಯನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ತಾಯಿ ಮತ್ತು ಜೀವನ ಸಂಗಾತಿಯ ನಡುವೆ ವಿರೋಧಾಭಾಸವು ಉಂಟಾಗುವ ಸಾಧ್ಯತೆಯೂ ಇದೆ. ಈ ಕಾರಣದಿಂದಾಗಿ ನೀವು ನಿಮ್ಮ ತಾಯಿಯ ಪರವಾಗಿ ಕಾಣುವಿರಿ. ಅದನ್ನು ಮಾಡುವುದರಿಂದ ನೀವು ನಿಮ್ಮ ಜೀವನ ಸಂಗಾತಿಯನ್ನು ಕೋಪಗೊಳಿಸಬಹುದು. ಏಪ್ರಿಲ್ ತಿಂಗಳಲ್ಲಿ ನಿಮ್ಮ ಪರಿಸ್ಥಿತಿಗಳು ಸುಧಾರಿಸುತ್ತವೆ, ಇದು ಸೆಪ್ಟೆಂಬರ್ ವರೆಗೆ ಹಾಗೆಯೆ ಮುಂದುವರಿಯುತ್ತದೆ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನವು ಉತ್ತಮವಾಗಿರುತ್ತದೆ. ಮಕ್ಕಳು ಸಾಧನವನ್ನು ಪಡೆಯುತ್ತಾರೆ, ಇದರಿಂದ ದಾಂಪತ್ಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಲಾಗುತ್ತದೆ. ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯೆ ನೀವು ಜೀವನ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ. ಅಂತಹ ಸಂದರ್ಭದಲ್ಲಿ ಸಾಧ್ಯವಾದರೆ, ಅವರೊಂದಿಗೆ ಎಲ್ಲಾದರೂ ಹೊರಗೆ ಸುತ್ತಾಡಲು ಹೋಗಿ ಅಥವಾ ಅವರಿಗೆ ಯಾವುದಾದರು ಉಡುಗೊರೆಯನ್ನು ನೀಡಿ. ನಿಮ್ಮ ಸಂಗಾತಿ ವಾಹನವನ್ನು ಚಲಾಯಿಸುತ್ತಿದ್ದರೆ ಅವರೊಂದಿಗೆ ಅಪಘಾತ ಸಂಭವಿಸಬಹುದು ಆದ್ದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಪ್ರೀತಿ ಜೀವನ - Love life according Aries horoscope 2021

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಪ್ರೀತಿಯಲ್ಲಿರುವ ಸ್ಥಳೀಯರು ಈ ವರ್ಷ ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ಆದಾಗ್ಯೂ ವರ್ಷದ ಆರಂಭವು ನೀವು ಬಯಸಿದಂತೆ ಇರುವುದಿಲ್ಲ, ಆದರೆ ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳ ಸಮಯವು ನಿಮ್ಮ ಪ್ರೀತಿ ಜೀವನಕ್ಕೆ ತುಂಬಾ ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ನೀವಿಬ್ಬರು ಪರಸ್ಪರರ ಪ್ರೀತಿಯಲ್ಲಿರುವುದನ್ನು ಕಾಣಲಾಗುತ್ತದೆ ಮತ್ತು ನೀವಿಬ್ಬರೂ ಮದುವೆಯಾಗಲು ಸಹ ನಿರ್ಧರಿಸಬಹುದು. ಪ್ರೀತಿಪಾತ್ರರೊಂದಿಗೆ ಪ್ರತಿಯೊಂದು ಕ್ಷಣವನ್ನು ಆನಂದಿಸುವಿರಿ ಮತ್ತು ಈ ವರ್ಷವು ನಿಮಗೆ ತಾಜಾತನ ಮತ್ತು ಸಂತೋಷದ ಅನುಭವವನ್ನು ನೀಡುತ್ತದೆ, ಇದರಿಂದ ನೀವಿಬ್ಬರು ಯಾವುದೇ ಉತ್ತಮ ಪ್ರಯಾಣ ಮಾಡಲು ಯೋಜಿಸಬಹುದು.

ನವೆಂಬರ್ ಮಧ್ಯೆ ನೀವು ಸ್ವಲ್ಪ ಜಾಗರೂಕರಾಗಿರಬೇಕು, ಏಕೆಂದರೆ ಈ ಸಮಯದಲ್ಲಿ ಪ್ರೀತಿಪಾತ್ರರ ಮನೆಯವರ ಕಾರಣದಿಂದಾಗಿ ನಿಮ್ಮ ಪ್ರೀತಿ ಜೇವನವು ಒತ್ತಡಕ್ಕೊಳಗಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ನೀವು ಪ್ರತಿಯೊಂದು ವಿಷಯವನ್ನು ತಿಳಿಸುತ್ತ, ತಮ್ಮ ಸಂಬಂಧಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿದೆ. ಜೂನ್ - ಜೂಲೈ ತಿಂಗಳ ಮಧ್ಯೆ ನಿಮ್ಮ ಸಂಗಾತಿಯೊಂದಿಗೆ ವಿವಾದವಾಗಬಹುದು. ನಿಮ್ಮ ಬೇಕಾಗಿರುವುದಕ್ಕಿಂತ ಹೆಚ್ಚು ಫೋನ್ ನಲ್ಲಿ ನಿರತರಾಗಿರುವುದು ಇದರ ಹಿಂದಿನ ಕಾರಣವಾಗಿರುತ್ತದೆ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ, ಅವರನ್ನು ಭೇಟಿ ಮಾಡುವಾಗ ಸಾಧ್ಯವಾದಷ್ಟು ಫೋನ್ ಅನ್ನು ನಿಮ್ಮಿಂದ ದೂರವಿಡಿ

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ ಆರೋಗ್ಯ ಜೀವನ - Health life according Aries horoscope 2021 ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಅರೋಗ್ಯ ಜೀವನದಲ್ಲಿ ನಿಮಗೆ ಸಾಮಾನ್ಯಕ್ಕಿಂತ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಏಕೇದರೆ ಗ್ರಹಗಳ ದೃಷ್ಟಿಯು ನಿಮಗೆ ಯಾವುದೇ ಗಂಭೀರ ಅರೋಗ್ಯ ಸಮಸ್ಯೆಯನ್ನು ನೀಡುವುದಿಲ್ಲ. ಆದರೆ ಈ ಮಧ್ಯೆ ನಿಮಗೆ ಆಯಾಸ ಮತ್ತು ಒತ್ತಡ ಸಿಗುತ್ತಿರುತ್ತದೆ. ಇದರಿಂದ ನಿಮ್ಮ ಸ್ವಭಾವದಲ್ಲಿ ಕಿರಿಕಿರಿಯನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ. ಇದರೊಂದಿಗೆ ನೆರಳಿನ ಗ್ರಹ ಕೇತು - ರಾಹುವೀಣೆ ದೃಷ್ಟಿಯು ಕೂಡ ಈ ವರ್ಷ ನಿಮ್ಮ ರಾಶಿಚಕ್ರದ ಎಂಟನೇ ಮತ್ತು ಎರಡನೇ ಮನೆಯಲ್ಲಿರುವ ಕಾರಣದಿಂದಾಗಿ ನಿಮಗೆ ಹೊಟ್ಟೆ ಸಂಬಂಧಿತ ಸಮಸ್ಯೆಗಳಾಗಬಹುದು. ಆದ್ದರಿಂದ ಆಹಾರ ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಗುದದ ಕಾಯಿಲೆ, ರಕ್ತ ಸಂಬಂಧಿತ ಸಮಸ್ಯೆ , ಸೊಂಟ ನೋವು, ನಿದ್ರಾಹೀನತೆ, ಅಜೀರ್ಣ, ಅನಿಲ ಇತ್ಯಾದಿಗಳಂತಹ ಸಣ್ಣ ಪುಟ್ಟ ದೂರುಗಳ ಹೊರೆತಾಗಿ ಅರೋಗ್ಯ ದೃಷ್ಟಿಕೋನದಿಂದ ಈ ವರ್ಷ ನಿಮಗೆ ಉತ್ತಮವಾಗಿರಲಿದೆ.

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರಗಳು - Astrological remedies according Aries horoscope 2021

  • ನಿಮ್ಮ ಬಲಗೈ ಉಂಗುರ ಬೆರಳಿನಲ್ಲಿ ಹವಳದ ರತ್ನವನ್ನು ಚಿನ್ನ / ತಾಮ್ರದಲ್ಲಿ ತಯಾರಿಸಿ ಧರಿಸಬೇಕು. ಇದರಿಂದ ನಿಮಗೆ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.
  • ಗುದಕ್ಕೆ ಸಂಬಂಧಿಸಿದ ರೋಗಗಳಿಂದ ತಪ್ಪಿಸಲು ಹಾಳುಬಳ್ಳಿ ಮೂಲವನ್ನು ಧರಿಸುವುದು ಸೂಕ್ತವಾಗಿರುತ್ತದೆ.
  • ಪ್ರತಿಯೊಂದು ಮಂಗಳವಾರ ಮತ್ತು ಶನಿವಾರದಂದು ಸುಂದರಕಾಂಡವನ್ನು ಪಠಿಸಿ
  • ಇದರೊಂದಿಗೆ ಬಜರಂಗ ಬಾಣವನ್ನು ಪಠಿಸುವುದು ಕೂಡ ನಿಮಗೆ ಶುಭಕರ
  • ಈ ವರ್ಷ ಸಂಪೂರ್ಣ ಕುಟುಂಬದೊಂದಿಗೆ ಯಾವುದಾದರು ಒಂದು ಜ್ಯೋತಿರ್ಲಿಂಗದ ದರ್ಶನೆ ಮಾಡಿ.
  • ವರ್ಷದಲ್ಲಿ ಒಂದು ಬಾರಿ ರುದ್ರಾಭಿಷೇಕ ಮಾಡುವುದು ಸಹ ನಿಮಗೆ ಶುಭವಾಗಿರುತ್ತದೆ.
  • ಪ್ರತಿದಿನ ನಿಯಮಿತವಾಗಿ ಸೂರ್ಯ ದೇವರಿದ ನೀರು ಅರ್ಪಿಸುತ್ತ ನಮಸ್ಕರಿಸಿ

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 750/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com