• Big Astro Festival
  • Talk To Astrologers
  • AstroSage Brihat Horoscope
  • Ask A Question
  • Raj Yoga Report
  • Child Report

ಸಿಂಹ ರಾಶಿ ಭವಿಷ್ಯ 2021 - Leo Horoscope 2021 in Kannada

ಸಿಂಹ ರಾಶಿ ಭವಿಷ್ಯ 2021 ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಏರಿಳಿತದಿಂದ ತುಂಬಿರುತ್ತದೆ. ಈ ವರ್ಷ ರಾಹುವು ನಿಮ್ಮ ರಾಶಿಚಕ್ರದ ಹತ್ತನೇ ಮನೆಯಲ್ಲಿರುವ ಕಾರಣದಿಂದಾಗಿ, ವರ್ಷದ ಆರಂಭದಲ್ಲಿ ನಿಮಗೆ ಉತ್ತಮ ಫಲಿತಾಂಶಗಳು ಸಿಗಬಹುದು. ಆದರೆ ಈ ವರ್ಷ ನಿಮ್ಮ ಜಾತಕದ ಆರನೇ ಮನೆಯಲ್ಲಿ ಶನಿ ಮತ್ತು ಗುರುವಿನ ಸಂಯೋಜನೆಯ ಕಾರಣದಿಂದಾಗಿ ನೀವು ನಿಮ್ಮನ್ನು ಶತ್ರುತಳಿಂದ ಸುತ್ತುವರೆದಿರುವಂತೆ ಅನುಭವಿಸುತ್ತೀರಿ.

ಇದರೊಂದಿಗೆ ವರ್ಷದ ಆರಂಭದಲ್ಲಿ ಮಂಗಳ ಗ್ರಹವು ನಿಮ್ಮ ಜಾತಕದ ಒಂಬತ್ತನೇ ಮನೆಯಲ್ಲಿರುತ್ತದೆ ಇದರ ಪರಿಣಾಮದಿಂದಾಗಿ ಅದೃಷ್ಟದ ಬೆಂಬಲದೊಂದಿಗೆ ಕೇಳದ ಸ್ಥಳದಲ್ಲಿಯೂ ನೀವು ಉತ್ತಮ ಸಂಬಂಧವನ್ನು ಬೆಳೆಸುವಲ್ಲಿ ಕೂಡ ನೀವು ಯಶಸ್ವಿಯಾಗುತ್ತೀರಿ. ವ್ಯಾಪಾರದ ಕ್ಷೇತ್ರಕ್ಕೆ ಸಂಬಂಧಿಸಿರುವ ಜನರು ಈ ವರ್ಷ ವಿಶೇಷ ಜಾಗರೂಕರಾಗಿರಬೇಕು. ಏಕೆಂದರೆ ಅವರಿಗೆ ನಷ್ಟವಾಗುವ ಸಾಧ್ಯತೆ ಇದೆ.

ಆಸ್ಟ್ರೋಸೇಜ್ ಬೃಹತ್ ಕುಂಡಲಿ ಯಲ್ಲಿ 250+ ಪುಟಗಳ ವರ್ಣರಂಜಿತ ಕಾಲಪುರುಷ ಜಾತಕವನ್ನು ಪಡೆಯಿರಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಆರ್ಥಿಕ ವಿಷಯಗಳ ದೃಷ್ಟಿಯಿಂದ ಈ ವರ್ಷ ಸಾಮಾನ್ಯವಾಗಿರಲಿದೆ. ಈ ವರ್ಷ ನೀವು ನಿಮ್ಮ ಆದಾಯ ಮತ್ತು ನಿಮ್ಮ ಕುಟುಂಬದ ಬೆಂಬಲದಿಂದ ಹಣವನ್ನು ಗಳಿಸುವಲ್ಲಿ ಯಶಸ್ಸು ಪಡೆಯುತ್ತೀರಿ. ಈ ವರ್ಷ ನೀವು ಯಾವುದೇ ದೊಡ್ಡ ಹೂಡಿಕೆಯ ಬಗ್ಗೆ ಯೋಚಿಸುತ್ತಿದ್ದರೆ, ಈ ವರ್ಷ ನೀವು ಬಹಳ ಬುದ್ಧಿವಂತಿಕೆಯೊಂದಿಗೆ ಹೆಜ್ಜೆ ಹಾಕುವ ಅಗತ್ಯವಿದೆ ಏಕೆಂದರೆ ಈ ಸಮಯವೂ ನಿಮಗೆ ಅನುಕೂಲಕರವೆಂದು ಸಾಬೀತುಪಡಿಸುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಅಧ್ಯಯನದಲ್ಲಿ ವೈವುದೇ ರೀತಿಯ ಕಿರುಹಾದಿಯನ್ನು ಅಳವಡಿಸಿಕೊಳ್ಳಬೇಡಿ, ಇಲ್ಲದಿದ್ದರೆ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಕೇವಲ ಪರಿಶ್ರಮ ಮಾಡಿ ಆಗ ಮಾತ್ರ ನೀವು ಅದರ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೆ ಈ ವರ್ಷ ಸಿಂಹ ರಾಶಿಚಕ್ರದ ಸ್ಥಳೀಯರ ಜಾತಕದಲ್ಲಿ ಗುರು ದೇವ ಆರನೇ ಮನೆಯಿಂದ ಎರಡನೇ ಮನೆಗೆ ಪ್ರವೇಶಿಸಲಿದ್ದಾರೆ. ಅಂತಹ ಸಂದರ್ಭದಲ್ಲಿ ಇದು ಅನೇಕ ಜನರಿಗೆ ಮಿಶ್ರ ಫಲಿತಾಂಶಗಳನ್ನು ನೀಡಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಸಿಂಹ ರಾಶಿಚಕ್ರದ ಸ್ಥಳೀಯರು ವಿಶೇಷವಾಗಿ ತಮ್ಮ ತಂದೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಏಕೆಂದರೆ ಈ ವರ್ಷ ಅವರ ಆರೋಗ್ಯವು ಏರಿಳಿತದಿಂದ ತುಂಬಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ತಮ್ಮ ಸ್ವಂತ ಮನೆಯ ಕನಸು ಕಾಣುತ್ತಿರುವ ಜನರು ಫೆಬ್ರವರಿ ರಿಂದ ಏಪ್ರಿಲ್ ತಿಂಗಳ ಮಧ್ಯೆ ತಮ್ಮ ಕನಸು ನನಸಾಗುವುದನ್ನು ನೋಡುತ್ತಾರೆ. ವೈವಾಹಿಕ ಜೀವನ ಮತ್ತು ಮಕ್ಕಳ ಜೀವನದ ಬಗ್ಗೆ ನೋಡಿದರೆ, ಸಿಂಹ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ರ ಆರಂಭವು ಒತ್ತಡದಿಂದ ಕೂಡಿರುತ್ತದೆ. ಪ್ರೀತಿಯಲ್ಲಿರುವ ಕೆಲವು ಸ್ಥಳೀಯರು ಈ ವರ್ಷ ಪ್ರೀತಿ ಮದುವೆಯ ಉಡುಗೊರೆಯನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ವರ್ಷ 2021 ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಅತ್ಯಂತ ಸವಾಲುಗಳಿಂದಿರುವ ಸಂಪೂರ್ಣ ಸಾಧ್ಯತೆ ಇದೆ. ಈ ವರ್ಷ ನೀವು ನಿಮ್ಮ ಆರೋಗ್ಯದ ಬಗ್ಗೆ ತುಂಬಾ ಗಮನ ಹರಿಸಬೇಕು ಇಲ್ಲದಿದ್ದರೆ ಕೈ, ಹೊಟ್ಟೆ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳು ಈ ವರ್ಷ ನಿಮ್ಮನ್ನು ಕಾಡಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Leo horoscope 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಈ ಪೂರ್ತಿ ವರ್ಷ ರಾಹುವು ನಿಮ್ಮ ಹತ್ತನೇ ಮನೆಯಲ್ಲಿ ನೆಲೆಗೊಂಡಿರುವ ಕಾರಣದಿಂದಾಗಿ, ಇದು ನಿಮ್ಮ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ರಾಹುವಿನ ಈ ಸ್ಥಾನದ ಕಾರಣದಿಂದಾಗಿ ನೀವು ಇತರರ ಮೇಲೆ ಪ್ರಾಬಲ್ಯ ಸಾಧಿಸುವ ಮೂಲಕ ನಿಮ್ಮ ಪ್ರತಿಯೊಂದು ವಿಷಯವನ್ನು ಜನರೊಂದಿಗೆ ಮನವೊಲಿಸುವಲ್ಲಿ ಯಶಸ್ವಿಯಾಗುತ್ತೀರಿ. ಸಣ್ಣ ಪುಟ್ಟ ಸುಳಿವುಗಳೊಂದಿಗೆ ನಿಮ್ಮ ಕೆಲಸವನ್ನು ಪೂರೈಸುವಲ್ಲಿ ಕೂಡ ನೀವು ಯಶಸ್ಸು ಪಡೆಯುತ್ತೀರಿ.

ಈ ವರ್ಷ ಇದ್ದಕ್ಕಿದ್ದಂತೆ ನಿವು ಬಡ್ತಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಆದರೆ ಇದು ಸಂಭವಿಸುವ ಸಂದರ್ಭದಲ್ಲಿ, ಕೆಲವು ಜನರು ಈ ವಿಷಯದ ಬಗ್ಗೆ ಕೆಟ್ಟದಾಗಿ ಭಾವಿಸಬಹುದು ಮತ್ತು ಇದರಿಂದಾಗಿ ನಿಮ್ಮ ಶತ್ರುಗಳ ಸಂಖ್ಯೆ ಹೆಚ್ಚಾಗುವ ಸಂಪೂರ್ಣ ಸಾಧ್ಯತೆ ಇದೆ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮ್ಮ ಜಾತಕದ ಆರನೇ ಮನೆಯಲ್ಲಿ ಶನಿ ಮತ್ತು ಗುರುವಿನ ಸಂಯೋಜನೆಯಾಗುವ ಕಾರಣದಿಂದಾಗಿ ನೀವು ಶತ್ರುಗಳಿಂದ ಸುತ್ತುವರಿಯಲಿದ್ದೀರಿ. ಆದಾಗ್ಯೂ ಪರಿಸ್ಥಿತಿಗಳು ಇಡೀ ವರ್ಷ ಹಾಗೆಯೆ ಇರುತ್ತವೆ. ಈ ಮಧ್ಯೆ ನೀವು ಅವರಿಂದ ಗೆಲ್ಲಲು ಸಹ ಸಾಧ್ಯವಾಗುತ್ತದೆ. ಶಾಜಿತ್ರುಗಳೊಂದಿಗೆ ನಡೆಯಲಾಗುವ ಸ್ಲ್ಯಾಮಿಂಗ್ ನಿಂದಾಗಿ ವರ್ಷದುದ್ದಕ್ಕೂ ನೀವು ಮಾನಸಿಕ ಒತ್ತಡವನ್ನು ಹೊಂದಿರುತ್ತೀರಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರ ಆರಂಭದಲ್ಲಿ ಮಂಗಳ ದೇವ ನಿಮ್ಮ ಜಾತಕದ ಒಂಬತ್ತನೇ ಮನೆಯಲ್ಲಿರುತ್ತಾರೆ, ಇದರ ಪರಿಣಾಮವಾಗಿ ಅದೃಷ್ಟದೊಂದಿಗೆ ಕೆಲಸದ ಸ್ಥಳದಲ್ಲಿಯೂ ನೀವು ಉತ್ತಮ ಸಮಬಂಧವನ್ನು ಹೊಂದುವಲ್ಲಿ ಯಶಸ್ವಿಯಾಗುತ್ತೀರಿ. ಆದಾಗ್ಯೂ ಏಪ್ರಿಲ್ ಮಾತು ಮೇ ತಿಂಗಳ ಮಧ್ಯದ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಏಕೆಂದರೆ ಈ ಸಮಯದಲ್ಲಿ ಮಂಗಳ ನಿಮ್ಮ ಜಾತಕದ ಹನ್ನೊಂದನೇ ಮನೆಯಲ್ಲಿರುತ್ತಾರೆ. ಇದರ ಪರಿಣಾಮವಾಗಿ ಈ ಸಮಯದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಹದಗೆಡುವ ಸಾಧ್ಯತೆಯಿದೆ. ಆದ್ದರಿಂದ ಸಾಧ್ಯವಾದರೆ ಇದನ್ನು ತಪ್ಪಿಸಿ.

ಏಪ್ರಿಲ್, ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸುವ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ. ಎಲ್ಲಾ ರೀತಿಯಲ್ಲೂ ಇದು ನಿಮ್ಮ ಯಶಸ್ಸಿನ ಪ್ರತಿಯೊಂದು ವಿಷಯದಲ್ಲಿ ಅಡಚಣೆಯನ್ನು ಉಂಟುಮಾಡುವ ಕೆಲಸ ಮಾಡುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಸ್ಥಳೀಯರು ಈ ವರ್ಷ ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ, ಏಕೆಂದರೆ ನಿಮಗೆ ನಷ್ಟವಾಗುವ ಸಂಪೂರ್ಣ ಸಾಧ್ಯತೆ ಕಂಡುಬರುತ್ತಿದೆ.

ಈ ವರ್ಷ ಹಣಕಾಸಿನ ಹೂಡಿಕೆಯ ಬಗ್ಗೆ ಯೋಚಿಸುತ್ತಿರುವ ಜನರು ಸಹ ಬಹಳಷ್ಟು ಮಟ್ಟಿಗೆ ಜಾಗರೂಕರಾಗಿರುವ ಅಗತ್ಯವಿದೆ. ಉತ್ತಮ ರೀತಿಯಲ್ಲಿ ಚಿಂತನಶೀಲವಾಗಿ ಬುದ್ದಿವಂತಿಕೆಯಿಂದ ಮಾತ್ರ ಯಾವುದೇ ಹೂಡಿಕೆ ಮಾಡಿ, ಇಲ್ಲದಿದ್ದರೆ ಮಾಡಿದ ಕೆಲಸವೂ ಹದಗೆಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according Leo horoscope 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಆರ್ಥಿಕ ದೃಷ್ಟಿಯಿಂದ ಈ ವರ್ಷ ಏರಿಳಿತವಾಗಿರಲಿದೆ. ಸಿಂಹ ರಾಶಿಚಕ್ರದ ಕೆಲವು ಸ್ಥಳೀಯರಿಗೆ ಈ ವರ್ಷ ಸಾಮಾನ್ಯವಾಗಿರುತ್ತದೆ ಆದರೆ ಈ ವರ್ಷ ನಿಮ್ಮ ವೆಚ್ಚಗಳು ಹೆಚ್ಚಾಗುವ ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಇದರ ನೇರವಾದ ಪರಿಣಾಮ ಬೀರುತ್ತದೆ. ಈ ವರ್ಷ ನೀವು ನಿಮ್ಮ ಆದಾಯವನ್ನು ಹೆಚ್ಚಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕು.

ಈ ವಿಷಯದಲ್ಲಿ ವರ್ಷದ ಆರಂಭವು ಸಾಮಾನ್ಯವಾಗಿರುತ್ತದೆ. ಏಪ್ರಿಲ್ ತಿಂಗಳು ಇನ್ನಷ್ಟು ಉತ್ತಮವಾಗಿರುತ್ತದೆ. ಈ ತಿಂಗಳು ನಿಮ್ಮ ಆದಾಯವು ಸಹ ಹೆಚ್ಚಾಗುತ್ತದೆ ಮತ್ತು ಆದಾಯದ ಕೆಲವು ಹೊಸ ಮೂಲಗಳು ಸಹ ತೆರೆಯುತ್ತವೆ. ಈ ವರ್ಷ ಆಗಸ್ಟ್ ರಿಂದ ಅಕ್ಟೋಬರ್ ನಡುವೆ ನೀವು ಸರಿಯಾಗಿ ಹಣಕಾಸು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ. ಈ ವರ್ಷ ನೀವು ನಿಮ್ಮ ಆದಾಯ ಮತ್ತು ನಿಮ್ಮ ಕುಟುಂಬದ ಬೆಂಬಲದಿಂದ ಹಣವನ್ನು ಗಳಿಸುವಲ್ಲಿ ಯಶಸ್ಸು ಪಡೆಯುತ್ತೀರಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯದ ವರೆಗೆ ದಾಂಪತ್ಯ ಜೀವನ ಅಥವಾ ವೈವಾಹಿಕ ಜೀವನದ ಸಂಬಂಧದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ವ್ಯಾಪಾರಸ್ಥರು ಈ ವರ್ಷ ವಿಶೇಷ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ನಿಯಂಗೆ ನಷ್ಟವಾಗುವ ಸಾಧ್ಯತೆ ಇದೆ.

ಈ ವರ್ಷ ನೀವು ಯಾವುದೇ ರೀತಿಯ ವ್ಯಾಪಾರವನ್ನು ಆರಂಭಿಸಲು ಯೋಚಿಸುತ್ತಿದ್ದರೆ, ಸಾಧ್ಯವಾದರೆ ನೀವೇ ಸ್ವತಃ ವ್ಯಾಪಾರವನ್ನು ಆರಂಭಿಸುವುದು ಲಾಭದಾಯಕವಾಗಿರುತ್ತದೆ.

ಸಿಂಹ ರಾಶಿ ಭವಿಷ್ಯ 2021 ಪ್ರಕಾರ ಶಿಕ್ಷಣ ಜೀವನ - Education life according Leo horoscope 2021

ಸಿಂಹ ರಾಶಿ ಭವಿಷ್ಯ 2021 ಪ್ರಕಾರ, ಸಿಂಹ ರಾಶಿಚಕ್ರದ ಸ್ಟಲೀಯರು ವರ್ಷ 2021 ರಲ್ಲಿ ಅಧ್ಯಯನದ ಕ್ಷೇತ್ರದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಸುತ್ತಿರುವ ಸ್ಪರ್ಧಿಗಳಿಗೆ ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವೂ ಕಠಿಣವಾಗಿರುತ್ತದೆ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ಅಧ್ಯಯನದಂ ವಿಷಯದಲ್ಲಿ ನೀವು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ.

ಜನವರಿ ರಿಂದ ಏಪ್ರಿಲ್ ವರೆಗಿನ ಸಮಯವೂ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಕರವಾಗಿರಲಿದೆ. ಇದರ ನಂತರ ಮೇ ರಿಂದ ಆಗಸ್ಟ್ ವರೆಗಿನ ಸಮವವು ಸ್ವಲ್ಪ ಸವಾಲುಗಳಿಂದ ತುಂಬಿರುತ್ತದೆ ಮತ್ತು 15 ಸೆಪ್ಟೆಂಬರ್ ರಿಂದ 20 ನವೆಂಬರ್ ವರೆಗೆ ಮತ್ತೊಂದು ಬಾರಿ ಸಿಂಹ ರಾಶಿಚಕ್ರದ ವಿದ್ಯಾರ್ಥಿಗಳ ಅನುಕೂಲಕರ ಸಮಯ ಆರಂಭವಾಗುತ್ತದೆ.

ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಈ ವರ್ಷ ಸಾಕಷ್ಟು ಪರಿಶ್ರಮ ಮಾಡಬೇಕಾಗುತ್ತದೆ. ನೀವು ವಿದೇಶಕ್ಕೆ ಹೋಗಲು ಬಯಸುತ್ತಿದ್ದರೆ, ಈ ವರ್ಷ ಸ್ವಲ್ಪ ಸಮಸ್ಯೆಯನ್ನು ನೀಡಬಹುದು. ಆದ್ದರಿಂದ ತಲ್ಮೆಯಿಂದಿರಿ.

ಸಿಂಹ ರಾಶಿ ಭವಿಷ್ಯ 2021 ಪ್ರಕಾರ, ವಿದೇಶಕ್ಕೆ ಹೋಗುವ ಸ್ಥಳೀಯಾಯ್ರ ಹಾದಿಯಲ್ಲಿ ಅಡೆತಡೆಗಳು ಉಂಟಾಗಬಹುದು. ಈ ವರ್ಷ ನೀವು ನಿಮಗೆ ನೇಚಿದ ವಿಶ್ವವಿದ್ಯಾಲದಲ್ಲಿ ದಾಖಿಲ ಪಡೆಯಲು ಬಯಸುತ್ತಿದ್ದರೆ, ಅದರಲ್ಲಿ ಕೂಡ ಕಡಿಮೆ ಸಾಧ್ಯತೆ ಕಂಡುಬರುತ್ತಿದೆ. ಅಧ್ಯನದಲ್ಲಿ ಯಾವುದೇ ರೀತಿಯ ಕಿರುಹಾದಿಯನ್ನು ತಪ್ಪಿಸಿ. ಕಠಿಣ ಪರಿಶ್ರಮ ಮಾಡಿದರೆ ಖಂಡಿತವಾಗಿಯೂ ನೀವು ಅದರ ಫಲಿತಾಂಶವನ್ನು ಪಡೆಯುತ್ತೀರಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according Leo horoscope 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಕೇತುವು ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿರುವ ಕಾರಣದಿಂದಾಗಿ ಪರಿಸ್ಥಿತಿಗಳು ಅನುಕೂಲಕರವಾಗದಿರುವ ಬಗ್ಗೆ ಸೂಚಿಸುತ್ತಿದೆ. ಆದಾಗ್ಯೂ ಸಿಂಹ ರಾಶಿಚಕ್ರದ ಶತಾಳೀಯರ ಜಾತಕದಲ್ಲಿ ಗುರುವು ಆರನೇ ಮನೆಯಿಂದ ಎರಡನೇ ಮನೆಗೆ ಪ್ರವೇಶಿಸಲಿದೆ. ಅಂತಹ ಸಂದರ್ಭದಲ್ಲಿ ಈ ಸ್ಥಾನವು ಸ್ಥಳೀಯರಿಗೆ ಮಿಶ್ರ ಫಲಿತಾಂಶಗಳನ್ನು ನೀಡಬಹುದು.

ಜಾತಕದಲ್ಲಿ ಉಂಟಾಗುವ ಈ ಬದಲಾವಣೆಯ ಪರಿಣಾಮದಿಂದಾಗಿ ಸಿಂಹ ರಾಶಿಚಕ್ರದ ಸ್ಥಳೀಯರ ಕುಟುಂಬ ಜೀವನದಲ್ಲಿ ಕೆಲವೊಮ್ಮೆ ಸಾಮರಸ್ಯ ಉಳಿದಿದ್ದರೆ, ಕೆಲವೊಮ್ಮೆ ಕುಟುಂಬದಲ್ಲಿ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಈ ವರ್ಷ ನೀವು ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಏಕೆಂದರೆ ಈ ವರ್ಷ ನಿಮ್ಮ ಪೋಷಕರ ಆರೋಗ್ಯವು ಏರಿಳಿತಗಳಿಂದ ತುಂಬಿರಲಿದೆ ಎಂದು ನಿರೀಕ್ಷಿಸಲಾಗಿದೆ.

ವರ್ಷ 2021 ರಲ್ಲಿ ನೀವು ನಿಮ್ಮ ವಿರೋಧಿಗಳಿಂದ ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ. ಏಕೆಂದರೆ ಅವರು ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಉಂಟುಮಾಡಬಹುದು. ವರ್ಷ 2021 ರಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರ ಕಿರಿಯ ಸಹೋದರ ಸಹೋದರಿಯರು ಅವರ ಸಂತೋಷಕ್ಕೆ ಪ್ರಮುಖ ಕಾರಣವಾಗಿರಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ತಮ್ಮ ಸ್ವಂತ ಮನೆಯ ಕನಸು ಕಾಣುತ್ತಿರುವ ಸಿಂಹ ರಾಶಿಚಕ್ರದ ಸ್ಥಳೀಯರ ಕನಸು ಫೆಬ್ರವರಿ ರಿಂದ ಏಪ್ರಿಲ್ ತಿಂಗಳ ಮಧ್ಯೆ ನಿಜವಾಗಬಹುದು. ಈ ಸಮಯದಲ್ಲಿ ಮನೆ ಮತ್ತು ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ಇದರ ನಂತರ 5 ಡಿಸೆಂಬರ್ ನಂತರ ಮತ್ತೆ ಈ ಯೋಗವು ಉಂಟಾಗುತ್ತದೆ ಆದರೆ ಈ ಸಮಯದಲ್ಲಿ ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವು ಹದಗೆಡಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Marriage life according Leo horoscope 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರ ಮಕ್ಕಳು ಮತ್ತು ವೈವಾಹಿಕ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷದ ಆರಂಭದ ದಿನಗಳಲ್ಲಿ ಒತ್ತಡವಿರುತ್ತದೆ ಮತ್ತು ನಿಮ್ಮ ಜೀವನದಲ್ಲಿ ಉಂಟಾಗಿರುವ ಈ ಸಮಸ್ಯೆಗಳು ಗುರುವಿನ ಅನುಗ್ರಹದ ಮೂಲಕ ಮಾತ್ರ ದೂರವಾಗಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಇದು ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯದಲ್ಲಿ ಈ ಒತ್ತಡವು ಹೆಚ್ಚಾಗಬಹುದು ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳಲ್ಲಿ ನೀವು ನಿಮ್ಮ ದಾಂಪತ್ಯ ಜೀವನಕ್ಕೆ ಹೆಚ್ಚು ಸಮಯ ನೀಡಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಂಬಂಧದಲ್ಲಿ ಉದ್ವಿಗ್ನತೆಯ ಸ್ಥಿತಿ ಕೂಡ ಉಂಟಾಗಬಹುದು. ಇದಲ್ಲದೆ ನಿಮ್ಮ ಸಂಬಂಧವೂ ಕೊನೆಗೊಳ್ಳುವ ಸಾಧ್ಯತೆಯೂ ಇದೆ. ಆದ್ದರಿಂದ ಎಚ್ಚರದಿಂದಿರಿ.

ಕಾನೂನು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯ ವಿದ್ದರೆ, ಸ್ವಲ್ಪ ಸಮಯಕ್ಕೆ ನಿಲ್ಲಿಸುವುದು ಉತ್ತಮವಾಗಿರುತ್ತದೆ. ಸರಿಯಾದ ಸಮಯ ಬಂದ ನಂತರ ಮಾತ್ರ ಈ ವಿಷಯಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದು ಉತ್ತಮವಾಗಿರುತ್ತದೆ. ಈ ವರ್ಷ ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಏಕೆಂದರೆ ಅವರ ಆರೋಗ್ಯವೂ ದುರ್ಬಲವಾಗಿರಬಹುದು. ಇದರಲ್ಲಿ ನೀವು ನಿಮ್ಮ ಹೆಚ್ಚಿನ ಹಣಕಾಸು ಖರ್ಚು ಮಾಡಬಹುದು.

ಇದಲ್ಲದೆ ನಿಮ್ಮ ಮಕ್ಕಳ ಬಗ್ಗೆ ಮಾತನಾಡಿದರೆ, ಅವರ ದೃಷ್ಟಿಯಿಂದ ವರ್ಷ 2021 ರ ಸಮಯವೂ ಸಾಕಷ್ಟು ಉತ್ತಮವಾಗಲಿದೆ. ಸಿಂಹ ರಾಶಿಚಕ್ರದ ಸ್ಥಳೀಯರ ಮಕ್ಕಳಿಗೆ ಈ ವರ್ಷ ಅವರ ಪ್ರತಿಯೊಂದು ಕ್ಷೇತ್ರದಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಮತ್ತು ಅವರು ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಪಡೆಯುವುದನ್ನು ನೋಡಿ ನಿಮಗೂ ನೀವು ಸಹ ನಿರಾಳರಾಗುತ್ತೀರಿ. ಅಂದರೆ ಮಕ್ಕಳ ದೃಷ್ಟಿಯಿಂದ ಈ ವರ್ಷ ಸಾಕಷ್ಟು ಉತ್ತಮವಾಗಿರುವ ಸಾಧ್ಯತೆ ಇದೆ.

ಸಿಂಹ ರಾಶಿ ಭವಿಷ್ಯ 2021 ಪ್ರಕಾರ ಪ್ರೀತಿ ಜೀವನ - Love Life according Leo horoscope 2021

ಸಿಂಹ ರಾಶಿ ಭವಿಷ್ಯ 2021 ಪ್ರಕಾರ, ಪ್ರೀತಿ ಜೀವನದಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಪ್ರೀತಿಯಲ್ಲಿ ರುವ ಕೆಲವು ಪ್ರೇಮಿಗಳು ಈ ವರ್ಷ ಪ್ರೀತಿ ಮದುವೆಯ ಉಡಗೊರೆಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಪ್ರೀತಿ ಮದುವೆಯ ಸಂಯೋಗವು ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ಪಡೆಯಬಹುದು.

ಇದಲ್ಲದೆ, ನವೆಂಬರ್ ರಿಂದ ಡಿಸೆಂಬರ್ ತಿಂಗಳಲ್ಲಿ ಮದುವೆಗೆ ಅರ್ಹರಾಗಿರುವ ಜನರ ಮದುವೆಯಾಗುವ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ. ಈ ವರ್ಷ ಪ್ರೀತಿ ಸಂಬಂಧಗಳ ಬಗ್ಗೆ ನಿಗಾ ಇರಿಸಬೇಕು ಏಕೆಂದರೆ ಈ ವರ್ಷ ನಿಮ್ಮ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು.

ಪ್ರೀತಿ ಸಂಬಂಧದಲ್ಲಿ ಮಧುರ್ಯವನ್ನು ಉಳಿಸಿಕೊಳ್ಳಲು ಮತ್ತು ಬಿಕ್ಕಟ್ಟುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ನೀವು ಪರಸ್ಪರ ರೊಂದಿಗೆ ಸಮಯ ಕಳೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ಆರೋಗ್ಯ ಜೀವನ - Health life according Leo horoscope 2021

ಸಿಂಹ ರಾಶಿ ಭವಿಷ್ಯ 2021ರ ಪ್ರಕಾರ, ಈ ವರ್ಷ ಸಿಂಹ ರಾಶಿಚಕ್ರದ ಸ್ಥಳೀಯರು ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಮೊದಲಿನಿಂದಲೇ ನೀವು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಇದಲ್ಲದೆ ಜಾತಕದಲ್ಲಿನ ಆರನೇ ಮನೆಯಲ್ಲಿ ಉಂಟಾಗುತ್ತಿರುವ ಶನಿ ಮತ್ತು ಗುರುವಿನ ಸಂಯೋಗವೂ ಈ ವರ್ಷ ನಿಮಗೆ ಯಾವುದೇ ದೊಡ್ಡ ರೋಗವಾಗಬಹುದು ಎಂದು ಸೂಚಿಸುತ್ತಿದೆ. ಅಂದರೆ ಆರೋಗ್ಯದ ದೃಷ್ಟಿಯಿಂದ ಸಿಂಹ ರಾಶಿಚಕ್ರದ ಸ್ಥಳೀಯರು ವರ್ಷ 2021 ತುಂಬಾ ಸವಾಲು ಗಳಿರುವ ಪ್ರಬಲ ಸಾಧ್ಯತೆ ಇದೆ.

ಸಿಂಹ ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಕೈ, ಹೊಟ್ಟೆ ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ರೋಗಗಳು ಅವರಿಗೆ ತೊಂದರೆ ನೀಡಬಹುದು. ಇದಲ್ಲದೆ ವಾಯು ರೋಗ ಮತ್ತು ಕೀಲುಗಳ ರೋಗವು ಸಹ ನಿಮ್ಮನ್ನು ಕಾಡಬಹುದು. ಈ ವರ್ಷ ಮಧುಮೇಹದಿಂದ ಬಳಲುತ್ತರುವವರು ತಮ್ಮವಿಶೇಶ ಗಮನ ಹರಿಸಬೇಕು, ಇಲ್ಲದಿದ್ದರೆ ಸಮಸ್ಯೆ ಹೆ ಹೆಚ್ಚಾಗಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರಗಳು - Astrological remedies according Leo horoscope 2021

  • ಉತ್ತಮ ಗುಣಮಟ್ಟದ ಮಾಣಿಕ್ಯ ರತ್ನವನ್ನು ತಾಮ್ರದಲ್ಲಿ ತಯಾರಿಸಿ ಭಾನುವಾರದಂದು ಧರಿಸುವುದು ಉತ್ತಮವಾಗಿರುತ್ತದೆ.
  • ಭಾನುವಾರದಂದು ಹಸುವಿಗೆ ಬೆಲ್ಲ ಅಥವಾ ಹಿಟ್ಟಿನ ಉಂಡೆಗಳನ್ನು ತಿನ್ನಿಸಿ.
  • ತಂದೆಯ ಸೇವೆ ಮತ್ತು ಅವರನ್ನು ಗೌರವಿಸಿ.
  • ಶನಿವಾರದಂದು ಸಾಸ್ವೆ ಎಣ್ಣೆಯಲ್ಲಿ ನೆರಳು ನೋಡಿ ದಾನ ಮಾಡುವುದು ಉತ್ತಮವಾಗಿರುತ್ತದೆ.
  • ಗುರುವಾರದಂದು ಉಪವಾಸ ಇಡುವುದು ಅಥವಾ ಅಶ್ವತ್ಥ ಮರವನ್ನು ಮುಟ್ಟದೆ ನೀರು ಅರ್ಪಿಸುವುದು ಉತ್ತಮವಾಗಿರುತ್ತದೆ.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 750/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com