• Big Astro Festival
  • Talk To Astrologers
  • AstroSage Brihat Horoscope
  • Ask A Question
  • Raj Yoga Report
  • Child Report

ಮಿಥುನ ರಾಶಿ ಭವಿಷ್ಯ 2021 - Gemini Horoscope 2021 in Kannada

ಮಿಥುನ ರಾಶಿ ಭವಿಷ್ಯ 2021 ಮಿಥುನ ಭವಿಷ್ಯ 2021 ರ ಪ್ರಕಾರ, ಮಿಥುನ ರಾಶಿಚಕ್ರದ ಸ್ಥಳೀಯರು ಮುಂಬರುವ ಹೊಸ ವರ್ಷದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಒಂದೆಡೆ ನಿಮ್ಮ ವೃತ್ತಿ ಜೀವನವು ವೇಗದಿಂದ ತುಂಬಿದ್ದರೆ ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ಆರೋಗ್ಯವು ಆ ವೇಗವನ್ನು ನಿಧಾನಗೊಳಿಸಬಹುದು. ಅಂತಹ ಸಂದರ್ಭದಲ್ಲಿ ಆಸ್ಟ್ರೋಸೇಜ್ ಮತ್ತೊಮ್ಮೆ ಈ ಇಡೀ ವರ್ಷದ ಖಾತೆಯನ್ನು ನಿಮಗಾಗಿ ತಂದಿದೆ. ಇದರ ಸಹಾಯದಿಂದ ನೀವು ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಮಿಥುನ ಭವಿಷ್ಯ 2021 ರ ಪ್ರಕಾರ, ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಮಿಥುನ ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದರ ಹೊರೆತಾಗಿಯೂ ಕೆಲಸದ ಸ್ಥಳದಲ್ಲಿ ನೀವು ಸಂಪೂರ್ಣ ಯಶಸ್ಸು ಪಡೆಯುತ್ತೀರಿ. ಏಕೆಂದರೆ ನಿಮ್ಮ ಒಂಬತ್ತನೇ ಮನೆಯಲ್ಲಿ ಗುರುವಿನ ಸಂಚಾರವು ಇರುವುದರಿಂದಾಗಿ ಉದ್ಯೋಗದಲ್ಲಿರುವ ಸ್ಥಳೀಯರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಇದರಿಂದ ಅವರು ಪ್ರಗತಿ ಪಡೆಯುತ್ತಾರೆ. ಮತ್ತೊಂದೆಡೆ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಸ್ಥರು ಈ ವರ್ಷ ಜಾಗರೂಕರಾಗಿರಬೇಕೆಂದು ಸಲಹೆ ನೀಡಲಾಗಿದೆ. ಇದಲ್ಲದೆ ಗುರು ಮತ್ತು ಶನಿ ಎಂಟನೇ ಮನೆಯಲ್ಲಿ ಜೋಡಿಯಾಗುತ್ತಾರೆ, ಇದು ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮವನ್ನು ಬೀರುತ್ತಾ ಹಣಕಾಸಿನ ಹಾನಿ ಮಾಡಬಹುದು.ಈ ಇಡೀ ವರ್ಷ ಆರ್ಥಿಕ ಬಿಕ್ಕಟ್ಟು ನಿಮ್ಮನ್ನು ಕಾಡುತ್ತದೆ, ಇದರಿಂದ ನಿಮ್ಮ ಒತ್ತಡವು ಹೆಚ್ಚಾಗುತ್ತದೆ.

ಕಾಗ್ನಿಅಸ್ಟ್ರೋ ವೃತ್ತಿ ಜೀವನ ಸಮಾಲೋಚನೆ ರಿಪೋರ್ಟ್ ಮೂಲಕ ನಿಮ್ಮ ಜೀವನದ ಸರಿಯಾದ ಆಯ್ಕೆಯನ್ನು ಆರಿಸಿ!

ಮಿಥುನ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮ್ಮ ಆರನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯ ಕಾರಣದಿಂದಾಗಿ ಮಿಥುನ ರಾಶಿಚಕ್ರದ ವಿದ್ಯಾರ್ಥಿಗಳು ಸಂಪೂರ್ಣ ಪ್ರಯತ್ನದ ನಂತರ ಮಾತ್ರ ಯಶಸ್ಸು ಪಡೆಯುತ್ತಾರೆ. ನೀವು ಕಠಿಣ ಪರಿಶ್ರಮ ಮಾಡದಿದ್ದರೆ, ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿರಂತರವಾಗಿ ನಿಮ್ಮ ಪರಿಶ್ರಮ ಮತ್ತು ಪ್ರಯತ್ನಗಳನ್ನು ಮುಂದುವರಿಸಿ. ಸೆಪ್ಟೆಂಬರ್ ತಿಂಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉತ್ತಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನೀವು ಶನಿ ದೇವರ ಅಪಾರ ಅನುಗ್ರಹವನ್ನು ಪಡೆಯುತ್ತೀರಿ. ಇದರಿಂದ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಕುಟುಂಬ ಜೀವನಕ್ಕೆ ಈ ವರ್ಷ ಉತ್ತಮವಾಗಿರಲಿದೆ. ಏಕೆಂದರೆ ಮನೆಯಲ್ಲಿ ಮಂಗಲಿಕ ಕಾರ್ಯವನ್ನು ಆಯೋಜಿಸುವುದರಿಂದಾಗಿ ನಿಮಗೆ ಸಂತೋಷವಾಗುತ್ತದೆ. ಮನೆಯಲ್ಲಿ ಅರಿತಿಗಳ ಆಗಮನವು ಕುಟುಂಬದಲ್ಲಿ ಉತ್ಸಾಹದ ವಾತಾವರಣವನ್ನು ತರಲು ಸಹಕಾರಿಯಾಗುತ್ತದೆ. ಆದಾಗ್ಯೂ, ಸೆಪ್ಟೆಂರ್ ರಿಂದ ಅಕ್ಟೋಬರ್ ಮಧ್ಯೆ ಕುಟುಂಬ ಜೀವನದಿಂದ ನೀವು ಸ್ವಲ್ಪ ಅಸಮಾಧಾನವನ್ನು ಅನುಭವಿಸುತ್ತೀರಿ. ಈ ಸಮಯದಲ್ಲಿ ನಿಮ್ಮ ಮೂಲಕ ಆಯಸದಿದ್ದರೂ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ನೀವು ನಂತರ ವಿಷಾದಿಸುತ್ತೀರಿ.

ನೀವು ವಿವಾಹಿತರಾಗಿದ್ದರೆ, ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಬುಧನ ಸಂಯೋಜನೆಯು ನಿಮಗೆ ಉತ್ತಮವೆಂದು ಸಾಬೀತುಪತುಪಡಿಸುತ್ತದೆ. ಆದರೆ ಈ ವರ್ಷ ನಿಮ್ಮ ಜೀವನ ಸಂಗಾತಿಯಲ್ಲಿ ಇದ್ದಕ್ಕಿದ್ದಂತೆ ಅಹಂಕಾರವು ಹೆಚ್ಚಾಗುತ್ತದೆ. ಇದು ನಿಮ್ಮ ಸಂಬಂಧದಲ್ಲಿ ಕಹಿ ಸೇರಿಸುವ ಕೆಲಸ ಮಾಡುತ್ತದೆ. ಇದರಿಂದ ನಿಮ್ಮ ದಾಂಪತ್ಯ ಜೀವನವು ಅತ್ಯಂತ ಹೆಚ್ಚು ಪ್ರಭಾವಿತವಾಗುತ್ತದೆ. ಇದರ ಹೊರೆತಾಗಿಯೂ ಮೇ ಮತ್ತು ಜೂನ್ ತಿಂಗಳು ನಿಮಗೆ ಬಹಳಷ್ಟು ಉತ್ತಮವಾಗಿರಲಿವೆ. ಈ ಸಮಯದಲ್ಲಿ ನಿಮ್ಮ ಮಕ್ಕಳು ಪ್ರಗತಿ ಸಾಧಿಸುತ್ತಾರೆ, ಇದನ್ನು ನೋಡಿ ನಿಮಗೆ ಸಂತೋಷವಾಗುತ್ತದೆ. ಅದೇ ಸಮಯದಲ್ಲಿ ಒಂದೆಡೆ ಪ್ರೀತಿಯಲ್ಲಿರುವ ಕೆಲವು ಸ್ಥಳೀಯರ ಪ್ರೀತಿ ಜೇವನವು ಬಹಳ ಉತ್ತಮವಾಗಿರಲಿದೆ. ಮತ್ತೊಂದೆಡೆ ಕೆಲವು ಪ್ರೇಮಿಗಳಿಗೆ ಮಂಗಳನ ದೃಷ್ಟಿಯು ಪ್ರತಿಕೂಲವೆಂದು ಸಾಬೀತುಪಡಿಸುತ್ತದೆ, ಪರಿಣಾಮವಾಗಿ ಪ್ರೀತಿ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅಂತಹ ಸಂದರ್ಭದಲ್ಲಿ ಈ ವರ್ಷ ಮಂಗಳ ದೇವರಿಂದ ತಪ್ಪಿಸಿಕೊಂಡಿರುವುದು ಅವರಿಗೆ ಉತ್ತಮ.

ಮಿಥುನ ಭವಿಷ್ಯ 2021 ರ ಪ್ರಕಾರ, ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷ ಸ್ವಲ್ಪ ದುರ್ಬಲವಾಗಿರಲಿದೆ. ಈ ವರ್ಷ ಎಂಟನೇ ಮನೆಯಲ್ಲಿ ಶನಿ ಮತ್ತು ಗುರುವಿನ ಸಂಯೋಜನೆಯು ನಿಮಗೆ ಅರೋಗ್ಯ ಕಷ್ಟವಾಗುವ ಯೋಗವನ್ನು ರಚಿಸುತ್ತದೆ. ಇದರಿಂದ ನಿಮಗೆ ರಕ್ತ ಸಂಬಂಧಿತ ಮತ್ತು ವಾಯು ಸಂಬಂಧಿತ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಇದರೊಂದಿಗೆ ಅತಿಯಾದ ಕೋಬಿನ ಆಹಾರವನ್ನು ತಿನುವುದರಿಂದ ಉಂಟಾಗುವ ಕಣ್ಣಿನ ರೋಗ, ನಿದ್ರಾಹೀನತೆ, ಅನಿಲ, ಅಜೀರ್ಣ ಮತ್ತು ಸಂಧಿವಾತದಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು, ಆದ್ದರಿಂದ ನಿಮ್ಮ ಕಾಳಜಿ ವಹಿಸುವುದು ನಿಮ್ಮ

ಆದ್ಯತೆಯಾಗಿರುತ್ತದೆ.

Read in English - Gemini Horoscope 2021

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Gemini horoscope 2021

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನೀವು ನಿಮ್ಮ ಕೆಳಸದ ಸ್ಥಳದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ಏಕೆಂದರೆ ನಿಮ್ಮ ಸಹೋದ್ಯೋಗಿಯ ಸಹಾಯದಿಂದ ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಇದರಿಂದ ನಿಮಗೆ ಉತ್ತಮ ಲಾಭವಾಗುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ನೀವು ಯಶಸ್ಸು ಪಡೆಯುತ್ತೀರಿ.

ಸಮಯದಲ್ಲಿ ನೀವು ನಿಮ್ಮ ಎಲ್ಲಾ ಕಾರ್ಯಗಳನ್ನು ಸಮಯಕ್ಕೆ ಮೊದಲೇ ಪೂರ್ಣಗೊಳಿಸುವಲ್ಲಿ ಸಾಮರ್ಥ್ಯರಾಗಿರುತ್ತೀರಿ. ಈ ವರ್ಷ ಗುರುವು ನಿಮ್ಮ ರಾಷ್ಚೀಕ್ರದ ಅಧಿಪತಿಯಾಗಿದ್ದು, ವರ್ಷದ ಆರಂಭದಲ್ಲಿ ನಿಮ್ಮ ರಾಶಿಚಕ್ರದ ಎಂಟನೇ ಮನೆಯಲ್ಲಿ ಕುಳಿತಿರುತ್ತಾರೆ ಮತ್ತು ಏಪ್ರಿಲ್ ತಿಂಗಳ ವರೆಗೆ ಅಲ್ಲೇ ನೆಲೆಗೊಳ್ಳುತ್ತಾರೆ. ಈ ಸಮಯದಲ್ಲಿ ನಿಮ್ಮ ವ್ರಿತ್ತಿ ಜೀವನದಲ್ಲಿ ಕೆಲವು ಸವಾಲುಗಳನ್ನು ನೀವು ಅನುಭವಿಸುವಿರಿ, ಆದರೆ ಈ ಎಲ್ಲಾ ಸವಾಲುಗಳನ್ನು ಎದುರಿಸಲು ನೀವು ಸಾಮರ್ಥ್ಯರಾಗಿರುತ್ತೀರಿ.

ಕೆಲಸದ ಬಗ್ಗೆ ನಿಮ್ಮ ಪರಿಶ್ರಮ ಮತ್ತು ಒಲವನ್ನು ನೋಡಿ ನಿಮ್ಮ ಹಿರಿಯ ಅಧಿಕಾರಿ ನಿಮ್ಮಿಂದ ಪ್ರಭಾವಿತರಾಗುತ್ತಾರೆ. ನೀವು ಉದ್ಯೋಗದಲ್ಲಿದ್ದರೆ, ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯೆ ನೀವು ಯಶಸ್ಸು ಪಡೆಯಬಹುದು. ಏಕೆಂದರೆ ಈ ಸಮಯದಲ್ಲಿ ನಿಮಗೆ ಅದೃಷ್ಟದ ಬೆಂಬಲ ಸಿಗುತ್ತದೆ. ಇದರಿಂದ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಬಡ್ತಿಯ ಬಗ್ಗೆ ಆಲೋಚಿಸಬಹುದು.

ಇದಲ್ಲದೆ ಉದ್ಯೋಗದಲ್ಲಿರುವ ಸ್ಥಳೀಯರಿಗೆ ಸೆಪ್ಟೆಂಬರ್ ರಿಂದ ನವೆಂಬರ್ ವರೆಗಿನ ಸಮಯವೂ ಸ್ವಲ್ಪ ಪ್ರತಿಕೂಲವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಗಮನಾರ್ಹ ಜಾಗರೂಕರಾಗಿರುವ ಅಗತ್ಯವಿದೆ. ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು.

ವ್ಯಾಪಾರಸ್ಥರು ವಿಶೇಷವಾಗಿ ಪಾಲುದಾರಿಕೆಯ ವ್ಯಾಪಾರ ಮಾಡುತ್ತಿರುವವರು, ಈ ವರ್ಷ ಎಚ್ಚರದಿಂದಿರಬೇಕು. ಏಕೆಂದರೆ ಈ ವರ್ಷ ನಿಮ್ಮ ಪಾಲುದಾರರು ನಿಮ್ಮ ಲಾಭವನ್ನು ಪಡೆದುಕೊಂಡು ನಿಮಗೆ ಹಾನಿ ಮಾಡಬಹುದು. ಆದರೆ ಈ ವರ್ಷ ನೀವು ನಿಮ್ಮ ಸಂಗಾತಿಯ ಹೆಸರಿನಲ್ಲಿ ಯಾವುದೇ ವ್ಯಾಪಾರವನ್ನು ಆರಂಭಿಸಲು ಬಯಸುತ್ತಿದ್ದರೆ, ವರ್ಷ 2021 ರ ಮಧ್ಯೆ ನಿಮಗೆ ಅಪಾರ ಯಶಸ್ಸು ಸಿಗುತ್ತದೆ.

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according Gemini horoscope 2021

ಮೇಷ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮ್ಮ ಆರ್ಥಿಕ ಜೀವನ ಸಾಮಾನ್ಯವಾಗಿರಲಿದೆ. ಏಕೆಂದರೆ ನಿಮ್ಮ ರಾಶಿಚಕ್ರದ ಎಂಟನೇ ಮನೆಯಲ್ಲಿ ಗುರು ಮತ್ತು ಶನಿಯು ಸಂಯೋಜನೆ ಮಾಡುತ್ತಾರೆ. ಈ ಇಡೀ ವರ್ಷ ಶನಿ ಇದೆ ಮನೆಯಲ್ಲಿ ಕುಳಿತಿರುತ್ತಾರೆ. ಪರಿಣಾಮವಾಗಿ ನಿಮಗೆ ಹಣಕಾಸಿನ ನಷ್ಟದ ಸಾಧ್ಯತೆ ಇರುತ್ತದೆ. ಗುರು ಮತ್ತು ಶನಿ ಸಂಚಾರದ ಕಾರಣದಿಂದಾಗಿ ಆರ್ಥಿಕ ಹಾನಿಯಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ವಹಿವಾಟಿನ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಆದಾಗ್ಯೂ ಗುರುವು ಕುಂಭ ರಾಶಿಯಲ್ಲಿ ಸಂಚರಿಸಿದಾಗ, ಪರಿಸ್ಥಿತಿಗಳಲ್ಲಿ ನೀವು ಸುಧಾರಣೆಯನ್ನು ಅನುಭವಿಸುತ್ತೀರಿ ಮತ್ತು ಈ ಸಮಯದಲ್ಲಿ ನಿಮಗೆ ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ. ಆದರೆ ನಿಮ್ಮ ಮಾನಸಿಕ ಒತ್ತಡ ಹಾಗೆಯೆ ಉಳಿದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಗಮನವು ಸಹ ಗೊಂದಲಕ್ಕೊಳಗಾಗಬಹುದು.

ಜನವರಿ ಅಂತ್ಯದಿಂದ ಫೆಬ್ರವರಿ, ಏಪ್ರಿಲ್, ಮೇ ಮತ್ತು ನಂತರ ಸೆಪ್ಟೆಂಬರ್ ತಿಂಗಳು ಅತ್ಯಂತ ಅನುಕೂಲಕರವಾಗಿರುತ್ತವೆ. ಈ ಸಮಯದಲ್ಲಿ ನೀವು ಯಾವುದೇ ಪ್ರಯತ್ನ ಮಾಡಿದರು, ನಿಮಗೆ ಅಪಾರ ಹಣ ಸಿಗುತ್ತದೆ ಮತ್ತು ನಿಮ್ಮ ಆರ್ಥಿಕ ಜೀವನವು ಬಲಗೊಳ್ಳುತ್ತದೆ. ಆರ್ಥಿಕ ಜೀವನಕ್ಕಾಗಿ, ಈ ವರ್ಷ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿನ ನೆರಳಿನ ಗ್ರಹ ರಾಹುವಿನ ಉಪಸ್ಥಿತಿಯು ನಿಮ್ಮ ವೆಚ್ಚಗಳನ್ನು ಹೆಚ್ಚಿಸುತ್ತದ. ಅದನ್ನು ನಿಯಂತ್ರಿಸುವುದು ನಿಮ್ಮ ಮೊದಲ ಕೆಲಸವಾಗಿರುತ್ತದೆ. ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಬಹುದು, ಈ ಕಾರಣದಿಂದಾಗಿ ನಿಮ್ಮ ವೈಯಕ್ತಿಕ ಜೀವನವು ಪ್ರಭಾವಿತವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ.

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ - Education life according Gemini horoscope 2021

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ, ಶಿಕ್ಷಣದ ಕ್ಷೇತ್ರದಲ್ಲಿ ಈ ವರ್ಷ ವಿದ್ಯಾರ್ಥಿಗಳಿಗೆ ಅನೇಕ ಬದಲಾವಣೆಗಳು ಕಂಡುಬರುತ್ತವೆ. ವಿಶೇಷವಾಗಿ ವಿದೇಶದಲ್ಲಿ ಅಧ್ಯಯನ ಮಾಡಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷ ವಿಶೇಷವಾಗಿ ಫಲಪ್ರದವಾಗಿದೆ ಎಂದು ಸಾಬೀತುಪಡಿಸುತ್ತದೆ. ಈ ವರ್ಷದ ಜನವರಿ, ಫೆಬ್ರವರಿ ಮತ್ತು ಮೇ ತಿಂಗಳು ವಿದ್ಯಾರ್ಥಿಗಳಿಗೆ ಅತ್ಯಮ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಪರಿಶ್ರಮದ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ಶನಿ ದೇವರ ಅನುಗ್ರಹದಿಂದ ನೀವು ಪ್ರತಿಯೊಂದು ಪರೀಕ್ಷೆಯಲ್ಲಿ ಯಶಸ್ಸು ಪಡೆಯುತ್ತೀರಿ.

ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವೂ ವಿಶೇಷ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಪ್ರತಿಯೊಂದು ವಿಷಯವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಆದಾಗ್ಯೂ ಈ ವರ್ಷ ಕೇತುವು ನಿಮ್ಮ ರಾಶಿಚಕ್ರದ ಆರನೇ ಮನೆಯಲ್ಲಿ ಇರುತ್ತಾರೆ, ಇದರಿಂದ ಕೆಲವು ವಿದ್ಯಾರ್ಥಿಗಳು ಹಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅನೇಕ ಸವಾಲುಗಳನ್ನು ಅನುಭವಿಸುತ್ತಾರೆ. ಆದರೂ ಅವುಗಳನ್ನು ತೊಡೆದುಹಾಕುವ ಮೂಲಕ ನೀವು ಯಶಸ್ಸು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಇದರ ಹೊರೆತಾಗಿಯೂ ನೀವು ನಿರಂತರ ಪ್ರಯತ್ನ ಮಾಡುವುದು ಮತ್ತು ನಿಮ್ಮ ಗುರಿಯ ಬಗ್ಗೆ ಜಾಗರೂಕರಾಗಿರಬೇಕು.

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ, ಕುಟುಂಬ ಜೀವನ - Family life according Gemini horoscope 2021

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ, ನಿಮ್ಮ ಕುಟುಂಬ ಜೀವನವು ತುಂಬಾ ಅನುಕೂಲಕರವಾಗಿರಲಿದೆ. ಏಕೆಂದರೆ ಈ ವರ್ಷ ನೀವು ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇದರೊಂದಿಗೆ ತಾಯಿಯ ಆರೋಗ್ಯವು ಉತ್ತಮವಾಗಿರುವ ಕಾರಣದಿಂದಾಗಿ ಕುಟುಂಬದ ವಾತಾವರಣವು ಸಂತೋಷವಾಗಿರಲಿದೆ. ಈ ವರ್ಷ ನೀವು ಮನೆಗೆ ಅನುಗುಣವಾಗಿ ಶಾಪಿಂಗ್ ಮಾಡುವುದನ್ನು ಕಾಣಲಾಗುತ್ತದೆ, ಇದರಿಂದ ಮನೆಯ ಸದಸ್ಯರ ನಡುವೆ ನಿಮ್ಮ ಗೌರವವು ಹೆಚ್ಚಾಗುತ್ತದೆ. ಕುಟುಂಬದಲ್ಲಿ ಯಾವುದೇ ಶುಭ ಮತ್ತು ಮಂಗಳಕರ ಕಾರ್ಯಕ್ರಮವನ್ನು ಆಯೋಜಿಸುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ, ಈ ಸಮಯದಲ್ಲಿ ಅತಿಥಿಗಳ ಆಗಮನವು ಮನೆ-ಕುಟುಂಬದಲ್ಲಿ ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಆದರೂ ವರ್ಷದ ಮಧ್ಯದಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಯಾವುದೋ ವಿಷಯದ ಕಾರಣದಿಂದಾಗಿ ನಿಮಗೆ ಮಾನಸಿಕ ಒತ್ತಡವಾಗುವ ಸಾಧ್ಯತೆಯೂ ಇದೆ. ಆದರೆ ನೀವು ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುವಲ್ಲಿ ಯಶಸ್ವಿಯಾಗುವ ಸಂಪೂರ್ಣ ಸಾಧ್ಯತೆ ಇದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ತಾಯಿಯೊಂದಿಗೆ ನಿಮ್ಮ ಜೀವನ ಸಂಗಾತಿಯ ಜಗಳವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಇಬ್ಬರ ನಡುವೆ ನೀವು ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಬೇಕು.

ಜೂನ್ ತಿಂಗಳಲ್ಲಿ ನೀವು ಯಾವುದಾದರು ಶುಭ ಸುದ್ಧಿಯನ್ನು ಕೇಳಬಹುದು. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಚಿಕ್ಕ ಅತಿಥಿ ಅಥವಾ ಹೊಸ ಸದಸ್ಯೆಯ ಆಗಮನವು ಸಹ ಸಂಭವಿಸಬಹುದು. ವರ್ಷದ ಮಧ್ಯೆ ಮಂಗಳ ದೇವ ನಿಮ್ಮ ನಾಲ್ಕನೇ ಮನೆಯಲ್ಲಿ ಕುಳಿತಿರುತ್ತಾರೆ, ಪರಿಣಾಮವಾಗಿ ಕುಟುಂಬದಲ್ಲಿ ಒತ್ತಡವನ್ನು ಅನುಭವಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ ತಾಳ್ಮೆಯಿಂದಿರಬೇಕು. ಇದಲ್ಲದೆ ತಾಯಿಯ ಕಡೆಯ ಸದಸ್ಯರೊಂದಿಗೆ ಕೆಲವು ಸಮಸ್ಯೆಗಳಾಗುವ ಸಾಧ್ಯತೆ ಇದೆ, ಈ ಕಾರಣದಿಂದಾಗಿ ನೀವು ನಿಮ್ಮ ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಮತ್ತು ನಿಮ್ಮ ಚಿತ್ರವನ್ನು ಹಾಳುಮಾಡುವಂತಹದನ್ನು ಸಹ ನೀವು ಮಾಡಬಹುದು, ಆದಾಗ್ಯೂ ನಿಮ್ಮ ಸ್ನೇಹಿತ ಮತ್ತು ಕಿರಿಯ ಸಹೋದರ ಸಹೋದರಿಯರು ನಿಮ್ಮನ್ನು ಸಹಕರಿಸುತ್ತಾರೆ ಮತ್ತು ಎಲ್ಲಾ ಪರಿಸ್ಥಿತಿಯಲ್ಲಿ ನಿಮ್ಮೊಂದಿಗೆ ನಿಂತಿರುತ್ತಾರೆ.

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ ವೈವಾಹಿಕ ಮತ್ತು ಮಕ್ಕಳ ಜೀವನ - Children & Marriage life according Gemini horoscope 2021

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ, ನೀವು ವಿವಾಹಿತರಾಗಿದ್ದರೆ, ವರ್ಷ 2021 ನಿಮ್ಮ ವೈವಾಹಿಕ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಲಿದೆ. ಏಕೆಂದರೆ ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಬುಧ ದೇವ ನಿಮ್ಮ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ, ಪರಿಣಾಮವಾಗಿ ನಿಮ್ಮ ಮತ್ತು ಜೀವನ ಸಂಗಾತಿಯ ಮದ್ಯೆ ಪ್ರೀತಿ ಹೆಚ್ಚಾಗುತ್ತದೆ. ಡೆದರೆ ಈ ಸಮಯದಲ್ಲಿ ಜೀವನ ಸಂಗಾತಿಯಲ್ಲಿ ಕೆಲವು ಬದಲಾವಣೆಗಳು ಸಹ ಉಂಟಾಗುತ್ತವೆ. ಇದು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜೇವನ ಸಂಗಾತಿಯ ಈ ಬದಲಾಗುತ್ತಿರುವ ಸ್ವಭಾವವು ನಿಮ್ಮ ದಾಂಪತ್ಯ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಮತ್ತು ಇದರಿಂದ ಜೀವನ ಸಂಗಾತಿಯಲ್ಲಿ ಅಹಂಕಾರವು ಹೆಚ್ಚಾಗುತ್ತದೆ. ಈ ಕಾರಣದಿಂದ ನಿಮ್ಮ ಮತ್ತು ಅವರ ನಡುವೆ ವಿವಾದವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ವೈವಾಹಿಕ ಜೀವನವನ್ನು ಸುಧಾರಿಸಲು ಮತ್ತು ಅದನ್ನು ಅನುಕೂಲಕರವಾಗಿ ಮಾಡಲು ಪ್ರಯತ್ನ್ನಿಸಿ, ಈ ವರ್ಷ ಶನಿ ಮತ್ತು ಗುರುವಿನ ಸಂಯೋಜನೆಯು ನಿಮ್ಮ ಅತ್ತೆಮನೆ ಬದಿಗೆ ಉತ್ತಮವಾಗಿರುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಅತ್ತೆಮನೆಯ ಸದಸ್ಯರೊಬ್ಬರು ಅರೋಗ್ಯ ಹಾನಿಯನ್ನು ಅನುಭವಿಸುವ ಸಾಧ್ಯತೆ ಇದೆ. ಅದರಲ್ಲಿ ನೀವು ಸಹ ಹಣವನ್ನು ಖರ್ಚು ಮಾಡಬಹುದು.

ನಿಮಗಾಗಿ ಜನವರಿ ತಿಂಗಳು ಉತ್ತಮವಾಗಿರಲಿದೆ, ಏಕೆಂದರೆ ಈ ಸಮಯದಲ್ಲಿ ಶುಕ್ರ ದೇವ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿರುತ್ತಾರೆ. ಈ ಸಮಯದಲ್ಲಿ ನಿಮ್ಮ ಮತ್ತು ಜೀವನ ಸಂಗಾತಿಯ ನಡುವೆ ಪ್ರೀತಿ ಹೆಚ್ಚಾಗುತ್ತದೆ. ನೀವು ಇಬ್ಬರು ಯಾವುದಾದರು ಪ್ರಯಾಣಕ್ಕೆ ಹೋಗಲು ಯೋಜಿಸಬಹುದು. ಇದರ ನಂತರ ಜೂನ್ ತಿಂಗಳಲ್ಲಿ ನಿಮ್ಮಿಬ್ಬರ ಸಂಬಂಧವು ಉತ್ತಮಗೊಳ್ಳುತ್ತದೆ. ಈ ಸಮಯದಲ್ಲಿ ನೀವು ಇಬ್ಬರು ಸೇರಿ ಪ್ರತಿಯೊಂದು ವಿವಾದವನ್ನು ನಿವಾರಿಸಲು ಪ್ರಯತ್ನಿಸಬಹುದು. ಇದಲ್ಲದೆ ಜೇವನ ಸಂಗಾತಿಯೊಂದಿಗೆ ನೀವು ನಿಮ್ಮ ಪ್ರಯೊಂದು ವಿಷಯ ಹಂಚಿಕೊಳ್ಳುವುದನ್ನು ಸಹ ಕಾಣಲಾಗುತ್ತದೆ ಮತ್ತು ಗ್ರಹಗಳ ದೃಷ್ಟಿಯು ನಿಮ್ಮಿಬ್ಬರನ್ನು ನಿಕಟ ತರಲು ಮತ್ತು ನಿಮ್ಮ ದಾಂಪತ್ಯ ಜೀವನವನ್ನು ಉತ್ತಮಗೊಳಿಸುವ ಕೆಲಸ ಮಾಡುತ್ತವೆ. ಮಕ್ಕಳ ಬಗ್ಗೆ ಮಾತನಾಡಿದರೆ, ಈ ವರ್ಷ ನಿಮ್ಮ ಮಕ್ಕಳು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಅವರು ಏಪ್ರಿಲ್ ಮತ್ತು ಆಗಸ್ಟ್ ತಿಂಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ.

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according Gemini horoscope 2021

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ, ಮಿಥುನ ರಾಶಿಚಕ್ರದ ಸ್ಥಳೀಯರು ಈ ವರ್ಷ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಏಕೆಂದರೆ ಈ ವರ್ಷದ ಆರಂಭದಲ್ಲಿ, ಜನವರಿ ರಿಂದ ಫೆಬ್ರವರಿ ಮಧ್ಯೆ ಪ್ರೀತಿ ಮದುವೆಯಾಗುವ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ. ನಿಮ್ಮ ಪ್ರೀತಿ ಜೀವನದಲ್ಲಿ ಸಂತೋಷ ಬರುತ್ತದೆ ಮತ್ತು ನೀವಿಬ್ಬರು ಪರಸ್ಪರರೊಂದಿಗೆ ಉತ್ತಮ ಸಮಯ ಕಳೆಯುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ ಅನೇಕ ಪ್ರೇಮಿಗಳು ಅನೇಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಪ್ರೇಮಿಯೊಂದಿಗೆ ತುಂಬಾ ಪ್ರೀತಿಯಿಂದ ಮಾತನಾಡಿದರೆ, ನೀವು ಈ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ಇದಲ್ಲದೆ ನೀವು ನಿಮ್ಮ ಪಾತ್ರರಿಗೆ ಮೋಸ ಮಾಡುತ್ತಿದ್ದರೆ, ವಿರುದ್ಧ ಫಲಿತಾಂಶಗಳನ್ನು ಪಡೆಯುತ್ತೀರಿ.

ಈ ವರ್ಷದ ಆರಂಭದಲ್ಲಿ, ಮಂಗಳನ ದೃಷ್ಟಿ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿರುವ ಕಾರಣದಿಂದಾಗಿ ನೀವು ಕೆಲವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಆದ್ದರಿಂದ ವ್ಯರ್ಥವಾದ ವಿಷಯಗಳ ಬಗ್ಗೆ ಗಮನ ಹರಿಸದೆ, ನಿಮ್ಮ ಸಂಗಾತಿಯ ಬಗ್ಗೆ ಮಾತ್ರ ಗಮನ ಹರಿಸಿ. ಯಾವುದೇ ವಿವಾದ ಅಥವಾ ಜಗಳಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದೆ, ನಿಮ್ಮ ನಡುವಿನ ಎಲ್ಲಾ ತಪ್ಪುಗ್ರಹಿಕೆಗಳನ್ನು ನಿವಾರಿಸಲು ಪ್ರಯತ್ನಿಸುತ್ತೀರಿ. ಜೂಲೈ ತಿಂಗಳಲ್ಲಿ ನಿಮ್ಮ ಪ್ರೀತಿಪಾತ್ರರು ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮಿಂದ ದೂರ ಹೋಗಬೇಕಾಗಬಹುದು. ಈ ಸಮಯದಲ್ಲಿ ನೀವು ಅವರೊಂದಿಗೆ ಫೋನ್ ಮೂಲಕ ಮಾತನಾಡುತ್ತೀರಿ. ಜನವರಿ, ಮಾರ್ಚ್, ಏಪ್ರಿಲ್, ಮೇ, ಜೂನ್, ಜೂಲೈ ಮತ್ತು ಸೆಪ್ಟೆಂಬರ್ ತಿಂಗಳು ನಿಮಗಾಗಿ ಬಹಳ ಉತ್ತಮವಾಗಿರಲಿವೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರರಿಗೆ ಸಂಬಂಧಿಸಿದ ಯಾವುದೇ ದೊಡ್ಡ ನಿರ್ಧವನ್ನು ತೆಗೆದುಕೊಳ್ಳಬಹುದು.

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ ಆರೋಗ್ಯ ಜೀವನ - Health life according Gemini horoscope 2021

ಮಿಥುನ ರಾಶಿ ಭವಿಷ್ಯ 2021 ರ ಪ್ರಕಾರ, ಮಿಥುನ ರಾಶಿಚಕ್ರದ ಸ್ಥಳೀಯರ ಅರೋಗ್ಯ ಜೀವನದ ದೃಷ್ಟಿಯಿಂದ ಈ ವರ್ಷ ಸ್ವಲ್ಪ ದುರ್ಬಲವಾಗಿರಲಿದೆ, ಏಕೆಂದರೆ ವರ್ಷದ ಆರಂಭದಲ್ಲಿ ಎಂಟನೇ ಮನೆಯಲ್ಲಿ ಶನಿ ಮತ್ತು ಗುರುವಿನ ಸಂಯೋಜನೆ ಮತ್ತು ನಿಮ್ಮ ಆರನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಮಯದಲ್ಲಿ ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಸಾಧ್ಯವಾದಷ್ಟು ನಿಮ್ಮ ಆಹಾರ - ಪಾನೀಯ ಮತ್ತು ನಿಮ್ಮ ದಿನಚರಿಯದ ಬಗ್ಗೆ ಜಾಗರೂಕರಾಗಿರಿ.

ಇದಲ್ಲದೆ ಇತರ ಗ್ರಹಗಳ ಪರಿಣಾಮದಿಂದಾಗಿ, ನಿಮಗೆ ರಕ್ತ ಮತ್ತು ಗಾಳಿಗೆ ಸಂಬಂಧಿಸಿದ ಕಾಯಿಲೆಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಈ ವರ್ಷ ನೀವು ಹೆಚ್ಚು ಕೆಬ್ಬಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು ಮತ್ತು ಸಾಧ್ಯವಾದಷ್ಟು ಧೂಳಿನ ಸ್ಥಳಗಳಿಗೆ ಹೂಗುವುದನ್ನು ತಪ್ಪಿಸಿ. ಇಲ್ಲದಿದ್ದರೆ ಕಣ್ಣಿನ ರೋಗ, ನಿದ್ರಾಹೀನತೆಯಂತಹ ರೋಗಗಳು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇದರ ಮೇಲೆ ನಿಮ್ಮ ಸಾಕಷ್ಟು ಹಣಕಾಸು ಕೂಡ ಖರ್ಚಾಗುತ್ತದೆ. ಇದರಿಂದ ನೀವು ಮಾನಸಿಕ ಒತ್ತಡವನ್ನು ಸಹ ಅನುಭವಿಸುತ್ತೀರಿ.

ಮಿಥುನ ರಾಶಿ ಭವಿಷ್ಯ 2 021 ಜ್ಯೋತಿಷ್ಯ ಪರಿಹಾರಗಳು - Astrological remedies according Gemini horoscope 2021

  • ಯಾವುದೇ ಬುಧವಾರದಂದು ಒಂದು ಜೋಡಿ ಪಕ್ಷಿಗಳನ್ನು ಪಂಜರದಿಂದ ಮುಕ್ತಗೊಳಿಸಿ.
  • ಅನಾಮಿಕಾ ಬೆರಳಿನಲ್ಲಿ ಉತ್ತಮ ಗುಣಮಟ್ಟದೆ ಪನ್ನ ರತ್ನ ವನ್ನು ಧರಿಸುವುದರಿಂದ ಉತ್ತಮ ಫಲಿತಾಂಶಗಳು ಸಿಗುತ್ತವೆ.
  • ಮನೆಯ ಹಿರಿಯ ಮಹಿಳೆಯರಿಗೆ ಬುಧವಾರದಂದು ಹಸಿರು ಬಣ್ಣದ ಬಟ್ಟೆ ಅಥವಾ ಬಳೆಗಳನ್ನು ಉಡುಗೊರೆಯಾಗಿ ನೀಡಿ.
  • ಪ್ರತಿದಿನ ನಿಯಮಿತವಾಗಿ ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ” ಬುಧ ಬೀಜ ಮಂತ್ರವನ್ನು 108 ಬಾರಿ ಜಪಿಸಿ. ಇದರಿಂದ ಕೆಲಸದ ಸ್ಥಳದಲ್ಲಿ ಬರುವ ಸಮಸ್ಯೆಗಳು ದೂರವಾಗುತ್ತವೆ.
  • ಸಾಧ್ಯವಾದರೆ ಆಹಾರದಲ್ಲಿ ಕೆಂಪು ಮೆಣಸಿನ ಕಾಯಿಯ ಬದಲು ಹಸಿರು ಮೆಣಸಿನ ಕಾಯಿಯನ್ನು ಸೇವಿಸಿ.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 750/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com