ತುಲಾ ರಾಶಿಯಲ್ಲಿ ಶುಕ್ರ ಸಂಚಾರ ( 6th September 2021 )

ಶುಕ್ರವನ್ನು ನೈಸರ್ಗಿಕವಾಗಿ ಶುಭಕರ ಗ್ರಹವೆಂದು ಪರಿಗಣಿಸಲಾಗಿದೆ ಮತ್ತು ವೈದಿಕ ಜ್ಯೋತಿಷ್ಯದಲ್ಲಿ ಇದನ್ನು ಸ್ತ್ರೀ ಗ್ರಹವಾಗಿ ತೋರಿಸಲಾಗುತ್ತದೆ. ಇದು ಐಷಾರಾಮಿ ಮತ್ತು ವಿಶ್ರಾಂತಿಯ ಅಂಶ. ಜ್ಯೋತಿಷ್ಯದಲ್ಲಿ ಶುಕ್ರವು ಮದುವೆ, ಜೀವನ ಸಂಗಾತಿ, ಭೌತಿಕವಾದ ಸಂತೋಷ, ಹಣ, ವಾಹನ, ಉತ್ತಮ ಆಹಾರ, ಕಲಾತ್ಮಕ ಪ್ರವೃತ್ತಿ ಇತ್ಯಾದಿಗಳ ಮುಖ್ಯ ಗ್ರಹವಾಗಿದೆ ಶುಕ್ರವು ಸೌಂದರ್ಯವನ್ನು ಕೂಡ ತೋರಿಸುತ್ತದೆ ಮತ್ತು ಜೀವನದಲ್ಲಿ ಧನಾತ್ಮಕತೆಯನ್ನು ತರುತ್ತದೆ.

ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ

ರಾಶಿಚಕ್ರದಲ್ಲಿ ಶುಕ್ರ ಗ್ರಹವು ವೃಷಭ ಮತ್ತು ತುಲಾ ರಾಶಿಯ ಅಧಿಪತಿ, ಇದು ಮೀನ ರಾಶಿಯಲ್ಲಿ ಉನ್ನತ ಮತ್ತು ಕನ್ಯಾ ರಾಶಿಯಲ್ಲಿ ದುರುದ್ವೇಷಪೂರಿತವಾಗಿರುತ್ತದೆ. ಇದು ಶನಿ ಮತ್ತು ಬುಧದ ಸ್ನೇಹಿತ, ಆದರೆ ಇದು ಸೂರ್ಯ ಮತ್ತು ಚಂದ್ರನ ಶತ್ರು, ಮಂಗಳ ಮತ್ತು ಗುರುವಿನೊಂದಿಗಿನ ಇದರ ಸಂಬಂಧವು ತಟಸ್ಥವಾಗಿದೆ. ತನ್ನ ಸ್ವಂತ ರಾಶಿಯಲ್ಲಿ ಶುಕ್ರನ ಸಂಚಾರವು ನಿಮ್ಮ ಪ್ರೀತಿಯ ಸಂಬಂಧಗಳನ್ನು ಸುಧಾರಿಸುತ್ತದೆ. ಇದಲ್ಲದೆ ನಿಮ್ಮ ಉಳಿದ ಅವಶ್ಯಕ ಸಂಬಂಧಗಳನ್ನು ಸಹ ಸುಧಾರಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಸಂಬಂಧಗಳನ್ನು ಸರಿಪಡಿಸಲು ನೀವು ಈ ಸಂಚಾರದ ಲಾಭವನ್ನು ಪಡೆದುಕೊಳ್ಳಬಹುದು, ಸಂಬಂಧವನ್ನು ಬಲಪಡಿಸಬಹುದು ಮತ್ತು ನಿಮ್ಮ ಸಾಮಾಜಿಕ, ಪ್ರಣಯದ ಜೀವನವನ್ನು ಸಹ ನೀವು ಬಲಪಡಿಸಬಹುದು.

ಈ ಸಂಚಾರದ ಪರಿಣಾಮದಿಂದಾಗಿ ಜನರು ಐಷಾರಾಮಿ ಜೀವನವನ್ನು ಬದುಕಬಹುದು., ಭೌತಿಕವಾಡಿ ವಸ್ತುಗಳ ಲಾಭವನ್ನು ಪಡೆಯಬಹುದು. ವಿವಾಹಿತ ಜನರಿಗೆ ಈ ಸಂಚಾರ ಉತ್ತಮವಾಗಿರುತ್ತದೆ, ಈ ಸಮಯದಲ್ಲಿ ಕೆಲವು ಸ್ಥಳೀಯರು ಪ್ರಾಪರ್ಟಿ ಅಥವಾ ವಾಹನವನ್ನು ಸಹ ಖರೀದಿಸಬಹುದು. ಶುಕ್ರ ಗ್ರಹವು ತುಲಾ ರಾಶಿಯಲ್ಲಿ 6 ಸೆಪ್ಟೆಂಬರ್ 2021ರಂದು, 12:39 ಗಂಟೆ ಸಾಗುತ್ತದೆ ಮತ್ತು 2 ಅಕ್ಟೋಬರ್ 2021 ರಂದು 09 ಗಂಟೆ 35 ನಿಮಿಷದ ವರೆಗೆ ಇದೆ ರಾಶಿಯಲ್ಲಿರುತ್ತದೆ ಮತ್ತು ಆದರೆ ನಂತರ ವೃಶ್ಚಿಕ ರಾಶಿಗೆ ಗೋಚರಿಸುತ್ತದೆ.

ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಶುಕ್ರ ಸಂಚಾರದ ಪರಿಣಾಮವನ್ನು ತಿಲೊಯೋಣ :

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

ಮೇಷ ರಾಶಿ

ಶುಕ್ರ ದೇವ ಮೇಷ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಪ್ರವೇಶಿಸಲಿದ್ದಾರೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಮುಂದುವರಿಯುತ್ತೀರಿ ಮತ್ತು ಬಡ್ತಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಬಾಸ್ ಮತ್ತು ಮೇಲಧಿಕಾರಿಗಳೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಸಹಭಾಗಿತ್ವದ ವ್ಯಾಪಾರ ಮತ್ತು ವ್ಯಾಪಾರದಿಂದಲೂ ಈ ರಾಶಿಚಕ್ರದ ಸ್ಥಳೀಯರು ಲಾಭವನ್ನು ಪಡೆಯುತ್ತಾರೆ. ಸಾಮಾಜಿಕ ವಲಯದಲ್ಲಿ ಹೊಸ ಜನರನ್ನು ಸಂಪರ್ಕಿಸಬಹುದು ಮತ್ತು ಇದು ನಿಮ್ಮ ವ್ಯವಹಾರಕ್ಕೆ ಉಪಯುಕ್ತವಾಗಬಹುದು.

ಆರ್ಥಿಕವಾಗಿ ಈ ಸಂಚಾರದ ಸಮಯದಲ್ಲಿ ನೀವು ಹಣದ ಹೂಡಿಕೆ ಮಾಡುವಿರಿ ಮತ್ತು ಪೂರ್ವಜರ ಸಂಪತ್ತಿನಿಂದಲೂ ನೀವು ಲಾಭವನ್ನು ಪಡೆಯುತ್ತೀರಿ. ನಿಮ್ಮ ಸಂಬಂಧಗಳ ಮೇಲೆ ದೃಷ್ಟಿ ಹಾಕಿದರೆ, ವೈವಾಹಿಕ ಜೀವನದಲ್ಲಿ ನೀವು ಅದ್ಭುತ ಬದಲಾವಣೆಗಳನ್ನು ಅನುಭವಿಸುವಿರಿ ಮತ್ತು ಜೀವನ ಸಂಗಾತಿಯೊಂದಿಗೆ ಆನಂದದ ಅನೇಕ ಅವಕಾಶಗಳನ್ನು ನೀವು ಪಡೆಯುತ್ತೀರಿ. ಮದುವೆಯಾಗಲು ಬಯಸುತ್ತಿರುವ ಜನರಿಗೆ ಈ ಸಮಯ ಉತ್ತಮವಾಗಿರಲಿದೆ, ಈ ಸಮಯದಲ್ಲಿ ನೀವು ಉತ್ತಮ ಪ್ರಸ್ತಾಪಗಳನ್ನು ಪಡೆಯಬಹುದು. ಮಾನಸಿಕ ಮತ್ತು ದೈಹಿಕವಾಗಿ ಈ ಸಮಯವೂ ಮೇಷ ರಾಶಿಚಕ್ರದ ಸ್ಥಳೀಯರಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಣಯ ಡಿನ್ನರ್ ಅಥವಾ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಎಲ್ಲಾದರೂ ಸುತ್ತಾಡಲು ಹೋಗಬಹುದು. ಇದು ನಿಮ್ಮ ಸಂಬಂಧಗಳನ್ನು ಸುಧಾರಿಸುತ್ತದೆ. ಮೇಷ ರಾಶಿಚಕ್ರದ ಸ್ಥಳೀಯರು ಶುಕ್ರ ಸಂಚಾರದ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಪರಿಹಾರ - ಶುಕ್ರವಾರ ಏಳು ಬಗೆಯ ಧಾನ್ಯಗಳನ್ನು ದಾನ ಮಾಡಿ.

ವೃಷಭ ರಾಶಿ

ಶುಕ್ರ ದೇವ ವೃಷಭ ರಾಶಿಚಕ್ರದ ಸ್ಥಳೀಯರ ಮೊದಲನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಸ್ಪರ್ಧೆ, ರೋಗ ಮತ್ತು ನಿಮ್ಮ ಶತ್ರುಗಳ ಆರನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ, ಆರನೇ ಮನೆಯಲ್ಲಿ ಶುಕ್ರವು ನಿಮಗೆ ಹೊಸ ಅವಕಾಶಗಳನ್ನು ತರುತ್ತದೆ ಮತ್ತು ದೀರ್ಘಕಾಲದಿಂದ ನೀವು ಪರಿಶ್ರಮಿಸುತ್ತಿದ್ದ ವಿಷಯಗಳಲ್ಲಿ ಯಶಸ್ವಿಯಾಗುತ್ತೀರಿ. ಉದ್ಯೋಗದಲ್ಲಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಬಡ್ತಿ ಅಥವಾ ವೇತನದ ಹೆಚ್ಚಳವನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ಬೆಳವಣಿಗೆಯ ಸಾಧ್ಯತೆ ಇದೆ. ಆರ್ಥಿಕವಾಗಿ ಹಣಕಾಸು ಉಳಿಸುವತ್ತ ನೀವು ಗಮನ ಹರಿಸಬೇಕು ಮತ್ತು ನಿಮ್ಮ ವೆಚ್ಚಗಳನ್ನು ನಿಯಂತ್ರಿಸಬೇಕು. ಏಕೆಂದರೆ ಈ ಸಮಯದಲ್ಲಿ ಅನಗತ್ಯ ಖರ್ಚುಗಳ ಪ್ರಬಲ ಸಾಧ್ಯತೆ ಇದೆ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಸಂಬಂಧಗಳ ಬಗ್ಗೆ ಮಾತನಾಡಿದರೆ, ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ಅಸಮಾಧ್ನವನ್ನು ನೋಡಬಹುದು. ಆದ್ದರಿಂದ ಯಾವುದೇ ರೀತಿಯ ವಿವಾದಗಳನ್ನು ತಪ್ಪಿಸಲು ಪ್ರಯತ್ನಿಸಿ ಮತ್ತು ನಿಮ್ಮ ಸಂಗಾತಿಯೊಂದಿಗೆ ತಾಳ್ಮೆಯಿಂದ ಮಾತನಾಡಿ ಇಲ್ಲದಿದ್ದರೆ, ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉತದ್ಭವಿಸಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಕಣ್ಣುಗಳು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಆದ್ದರಿಂದ ಸರಿಯಾದ ಆಹಾರವನ್ನು ಸೆವೆಸಿ.

ಪರಿಹಾರ - ಸೋಂಪು, ಜೇನು ತುಪ್ಪ ಮತ್ತು ಕೆಂಪು ಬೇಳೆ ದಾನ ಮಾಡಿ.


ಜಾತಕದಲ್ಲಿರುವ ರಾಜ ಯೋಗದ ಬಗೆಗಿನ ಎಲ್ಲಾ ಮಾಹಿತಿಯನ್ನು ಪಡೆಯಿರಿ

ಮಿಥುನ ರಾಶಿ

ದೇವ ಮಿಥುನ ರಾಶಿಚಕ್ರದ ಸ್ಥಳೀಯರ ಐದನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ, ಪ್ರಣಯ ಮತ್ತು ಮಕ್ಕಳ ಐದನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಮತ್ತು ಮಕ್ಕಳ ಮೇಲೆ ನಿಮ್ಮ ಮುಖ್ಯ ಗಮನ ಹರಿಸುತ್ತೀರಿ. ಸಂಗೀತ ಮತ್ತು ಕಲೆಯತ್ತ ಹೆಚ್ಚು ಒಲವು ಹೊಂದಿರುತ್ತೀರಿ, ಇದರೊಂದಿಗೆ ಈ ಸಂಚಾರದ ಸಮಯದಲ್ಲಿ ನಿಮ್ಮಲ್ಲಿ ನೀವು ಪ್ರಣಯವನ್ನು ಕಾಣುವಿರಿ ವೃತ್ತಿಪರ ಜೀವನದಲ್ಲಿ ನಿಮ್ಮ ಸ್ನೇಹಿತರ ಬೆಂಬಲವನ್ನು ನೀವು ಪಡೆಯುತ್ತೀರಿ ಮತ್ತು ನಿಮ್ಮ ಪ್ರಯತ್ನಗಳು ಉತ್ತಮವಾಗಿರುತ್ತವೆ, ಮುಂದುವರಿಯಲು ಅವರು ನಿಮಗೆ ಸಹಾಯ ಮಾಡುತ್ತಾರೆ. ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಬಯಸುತ್ತಿರುವ ಅಥವಾ ತಮ್ಮ ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುತ್ತಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಸಮಯ ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಈ ಸಮಯ ಅನುಕೂಲಕರವಾಗಿರಲಿದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುತ್ತಿರುವವರು ಅಥವಾ ವಿದೇಶದಲ್ಲಿ ಅಧ್ಯಯನ ಮಾಡಲು ಪ್ರಯತ್ನಿಸುತ್ತಿರುವವರು ಯಶಸ್ವಿಯಾಗಬಹುದು. ದೀರ್ಘಕಾಲದಿಂದ ತಾಯಿಯಾಗಲು ಕಾಯುತ್ತಿದ್ದ ಮಹಿಳೆಯರು ಈ ಸಮಯದಲ್ಲಿ ಗರ್ಭಿಣಿಯಾಗಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ಮಿಥುನ ರಾಶಿಚಕ್ರದ ಜನರು ಆರೋಗ್ಯಕರ ಜೀವನವನ್ನು ಅನುಭವಿಸುತ್ತಾರೆ.

ಪರಿಹಾರ - ನಿಮ್ಮ ಆಹಾರದ ಸ್ವಲ್ಪ ಭಾಗವನ್ನು ಹಸುವಿಗೆ ನೀಡಿ.

ಕರ್ಕ ರಾಶಿ

ಶುಕ್ರ ದೇವ ಕರ್ಕ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವಿಶ್ರಾಂತಿ, ತಾಯಿ, ಸಂಪತ್ತಿ, ವಾಹನ ಮತ್ತು ಸಂತೋಷದ ನಾಲ್ಕನೇ ಮನೆಗೆ ಸಾಗಲಿದೆ. ಈ ಸಂಚಾರದ ಸಮಯದಲ್ಲಿ ಕರ್ಕ ರಾಶಿಚಕ್ರದ ಜನರು ಮನೆಯನ್ನು ಅಲಂಕರಿಸಲು ಮತ್ತು ಸುಂದರವಾಗಿಸಲು, ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಇದಲ್ಲದೆ ನೀವು ವಾಹನವನ್ನು ಹೊಂದಿದ್ದರೆ, ಅದರಲ್ಲೂ ಕೆಲವು ಉತ್ತಮ ಬದಲಾವಣೆಗಳನ್ನು ಮಾಡಬಹುದು. ವೃತ್ತಿಪರ ಜೀವನದಲ್ಲಿ ನಿಮ್ಮ ಮೇಲಧಿಕಾರಿಗಳು, ಸಹೋದ್ಯೋಗಿಗಳು ಮತ್ತು ನಿಮ್ಮ ಅಧೀನ ಕೆಲಸ ಮಾಡುವ ಜನರೊಂದಿಗೆ ಯಾವುದೇ ರೀತಿಯ ವಿವಾದವನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಇದು ಸವಾಲಿನ ಸಮಯವಾಗಿರಬಹುದು. ನಿಮ್ಮ ಸಾಮರ್ಥ್ಯವನ್ನು ಸನೀತುಪಡಿಸಲು ಈ ಸಮಯದಲ್ಲಿ ಸಮಯ ಮತ್ತು ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಇದು ಪ್ರೀತಿ ಮತ್ತು ಪ್ರಣಯಕ್ಕೆ ಉತ್ತಮ ಗೋಚರವಾಗಿರುತ್ತದೆ. ನಾಲ್ಕನೇ ಮನೆಯನ್ನು ಭಾವನೆಗಳ ಮನೆಯೆಂದು ಸಹ ಕರೆಯಲಾಗುತದೆ. ಆದ್ದರಿಂದ ಶುಕ್ರ ಸಂಚಾರದ ಸಮಯದಲ್ಲಿ ಭಾವನಾತ್ಮಕವಾಗಿ ನೀವು ಸಕ್ರಿಯರಾಗಬಹುದು ಮತ್ತು ಅವುಗಳನ್ನು ಬಹಿರಂಗವಾಗಿ ವಕ್ತಪಡಿಸಬಹುದು. ಈ ಕಾರಣದಿಂದಾಗಿ ಈ ಸಮಯದಲ್ಲಿ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಹೊಳಪು ಬರುತ್ತದೆ ಆರೋಗ್ಯದ ಬಗ್ಗೆ ಮಾತನಾಡಿದರೆ, ತುಂಬಾ ತಣ್ಣನೆಯ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಿ. ಏಕೆಂದರೆ ಈ ಸಮಯದಲ್ಲಿ ಶೀತ ಮತ್ತು ಎದೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು.

ಪರಿಹಾರ - ಶುಕ್ರವಾರ ಕಡ್ಲೆ ಬೇಳೆ ಮತ್ತು ಅರಿಶಿನವನ್ನು ಬಾವಿಯಲ್ಲಿ ಹಾಕಿ.

ಸಿಂಹ ರಾಶಿ

ಶುಕ್ರ ದೇವ ಸಿಂಹ ರಾಶಿಚಕ್ರದ ಸ್ಥಳೀಯರ ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಹವ್ಯಾಸ, ಆಸಕ್ತಿಗಳು ಮತ್ತು ನಿಮ್ಮ ಸಹೋದರ ಸಹೋದರಿಯರ ಮೂರನೇ ಮನೆಗೆ ಸಾಗುತ್ತಾರೆ. ನಿಮ್ಮ ವೃತ್ತಿಪರ ಕೌಶಲ್ಯಗಳನ್ನು ನೀವು ಹೆಚ್ಚಿಸುವಿರಿ ಮತ್ತು ಹೊಸ ಕೌಶಲ್ಯಗಳನ್ನು ಸಹ ಅಭಿವೃದ್ಧಿಪಡಿಸುವಿರಿ. ಸಾಮಾಜಿಕ ಮಟ್ಟದಲ್ಲಿ ನಿಮ್ಮ ವ್ಯಾಪಾರಣ್ ಹೆಚ್ಚಾಗುತ್ತದೆ ಮತ್ತು ಈ ಸಮಯದಲ್ಲಿ ನೀವು ದೂರಸ್ಥ ಪ್ರಯಾಣವನ್ನು ಸಹ ಮಾಡಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಅಧೀನ ಜನರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಈ ಅಸ್ಮಹ್ಯದಲ್ಲಿ ನಿಮ್ಮ ಸೃಜನಶೀಲ ಭಾಗವು ಸಹ ಬಲಗೊಳ್ಳುತ್ತದೆ ಮತ್ತು ಈ ಪ್ರಯಾಣದ ಮೂಲಕ ನೀವು ಅನೇಕ ಹೊಸ ಸ್ಥಳಗಳಿಗೆ ಸಹ ಸುತ್ತಾಡಲು ಹೋಗಬಹುದು. ಈ ಸಮಯದಲ್ಲಿ ಈ ರಾಶಿಚಕ್ರದ ಕೆಲವು ಸ್ಥಳೀಯರು ದುಬಾರಿ ಗ್ಯಾಡ್ಜೆಟ್ ಅನ್ನು ಸಹ ಖರೀದಿಸಬಹುದು. ಯಾರೊಂದಿಗಾದರೂ ನಿಮ್ಮ ಪ್ರೀತಿಯನ್ನು ಪ್ರಸ್ತಾಪಿಸಲು ಈ ಸಮಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಈ ರಾಶಿಚಕ್ರದ ಜನರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಯಾರೇ ಆಗಲಿ, ಸಾಲ ನೀಡುವುದನ್ನು ತಪ್ಪಿಸಿ, ಹೂಡಿಕೆ ಮಾಡಲು ಬಯಸುತ್ತಿದ್ದರೆ, ಎಚ್ಚರಿಕೆಯಿಂದ ಮಾಡಿ. ಅರೋಗ್ಯ ಜೀವನ ಉತಮವಾಗಿರುತ್ತದೆ, ಈ ಸಮಯದಲ್ಲಿ ನೀವು ಆರೋಗ್ಯಕರವಾಗಿ ಅನುಭವಿಸುವಿರಿ.

ಪರಿಹಾರ - ಶುಕ್ರವಾರ 108 ಬಾರಿ ‘ ಓಂ ಶುಕ್ರಾಯ್ ನಮಃ ‘ ಶುಕ್ರ ಮಂತ್ರವನ್ನು ಜಪಿಸಿ.

ಕನ್ಯಾ ರಾಶಿ

ಶುಕ್ರ ಗ್ರಹವು ಕನ್ಯಾ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಕುಟುಂಬ, ಭಾಷಣೆ ಮತ್ತು ಹಣದ ಎರಡನೇ ಮನೆಗೆ ಗೋಚರಿಸುತ್ತದೆ. ಈ ಅಂಚಾರದ ಅಮಾಯದಲ್ಲಿ ನಿಮ್ಮ ಸಂಚಿತ ಹಣದಿಂದ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಮತ್ತು ಹಣಕಾಸು ಉಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ಎಲ್ಲಾದರೂ ಹೂಡಿಕೆ ಮಾಡಿದ್ದರೆ, ಅದರಿಂದಲೂ ಲಾಭವಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಈ ಸಮಯ ತುಂಬಾ ಉತ್ತಮವಾಗಿರುತ್ತದೆ. ನಿಮ್ಮ ಹಣವನ್ನು ಸರಿಯಾಗಿ ಬಳಸಲು ನೀವು ಅವಕಾಶವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರದರ್ಶನ ಸುಧಾರಿಸುತ್ತದೆ ಮತ್ತು ಕೆಲಸದ ಬಗ್ಗೆ ನೀವು ನಿಷ್ಠರಾಗಿರುತ್ತೀರಿ. ಈ ಸಮಯದಲ್ಲಿ ನಿಮ್ಮ ಮೇಲಧಿಕಾರಿಗಳು ಸಹ ನಿಮಗೆ ತುಂಬಾ ಸಹಾಯ ಮಾಡುತ್ತಾರೆ. ಈ ಸಮಯದಲ್ಲಿ ನೀವು ಯಾವುದೇ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಇದು ನಿಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಸ್ನೇಹಿತರಿಂದಲೂ ನೀವು ಸಹಾಯವನ್ನು ತೆಗೆದುಕೊಳ್ಳಬಹುದು ಮತ್ತು ಈ ಅವಧಿಯಲ್ಲಿ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ನೀವು ಮನಸ್ಫೂರ್ತಿಯಿಂದ ಸಂಪರ್ಕಿಸುವಿರಿ. ನೀವು ಅಲ್ಪ ದೂರದ ಪ್ರಯಾಣಗಳಿಗೆ ಹೋಗಬಹುದು. ಇದರಿಂದ ನೀವು ಲಾಭವನ್ನು ಸಹ ಪಡೆಯಬಹುದು. ಆರೋಗ್ಯದ ದೃಷ್ಟಿಕೋನದಿಂದ ಗರ್ಭಿಣಿಯರು ಈ ಸಮಯದಲ್ಲಿ ಅರೋಗ್ಯ ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ. ಈ ಸಮಯದಲ್ಲಿ ಕನ್ಯಾ ರಾಶಿಚಕ್ರದ ಜನರು ತಮ್ಮ ಆಹಾರ ಪದ್ಧತಿಯನ್ನು ಸುಧಾರಿಸಬೇಕು.

ಪರಿಹಾರ - ಶುಕ್ರವಾರ ಅಗತ್ಯವಿರುವ ಜನರಿಗೆ ಸಕ್ಕರೆ, ಬೆಲ್ಲದಂತಹ ಸಿಹಿ ವಸ್ತುಗಳ ದಾನ ಮಾಡಿ.


ಬೃಹತ್ ಕುಂಡಲಿ: ನಿಮ್ಮ ಜೀವನದ ಮೇಲೆ ಗ್ರಹಗಳ ಪರಿಣಾಮ ಮತ್ತು ಪರಿಹಾರವನ್ನು ತಿಳಿಯಿರಿ

ತುಲಾ ರಾಶಿ

ಶುಕ್ರ ಗ್ರಹವು ತುಲಾ ರಾಶಿಚಕ್ರದ ಜನರ ಮೊದಲನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಆತ್ಮ ಮತ್ತು ವ್ಯಕ್ತಿತ್ವದ ಮೊದಲನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಸಂಪೂರ್ಣ ವ್ಯಕ್ತಿತ್ವ ಸುಧಾರಿಸುತ್ತದೆ ಮತ್ತು ನೀವು ವೃತ್ತಿಪರ ಜೀವನದೊಂದಿಗೆ ಕುಟುಂಬ ಜೀವನವಲ್ಲೂ ಉತ್ತಮ ಪರಿಣಾಮ ಬೀರಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ನೀವು ಆತ್ಮವಿಶ್ವಾಸ ಮತ್ತು ಸಾಕಾರತ್ಮಕತೆಯಲ್ಲಿ ಸುಧಾರಣೆಯನ್ನು ಕಾಣುವಿರಿ ಮತ್ತು ನಿಮ್ಮ ವ್ಯಾಪಾರದಲ್ಲಿ ಯಶಸ್ವಿಯಾಗಲು ಮತ್ತು ಲಾಭವನ್ನು ಗಳಿಸಲು ನೀವು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಆರ್ಥಿಕವಾಗಿ ಈ ಅವಧಿಯು ನಿಮ್ಮ ಹಣಕಾಸಿನಲ್ಲಿ ಸುಧಾರಣೆಯನ್ನು ತರಲಿದೆ ಮತ್ತು ನೀವು ನಿಮ್ಮ ದೀರ್ಘಕಾಲದ ಹೂಡಿಕೆಗಳಿಂದ ಲಾಭವನ್ನು ಗಳಿಸಬಹುದು. ಈ ಸಮಯದಲ್ಲಿ ನೀವು ದುಬಾರಿ ವಸ್ತುಗಳ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಜನರು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು ಮತ್ತು ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಮದುವೆ ಅಥವಾ ನಿಶ್ಚಿತಾರ್ಥವನ್ನು ಮಾಡಿಕೊಳ್ಳಬಹುದು. ವಿವಾಹಿತ ಜನರು ಈ ಸಂಚಾರದ ಸಮಯದಲ್ಲಿ ಸಂತೋಷ ಮತ್ತು ಆನಂದವನ್ನು ಪಡೆಯಬಹುದು. ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಮತ್ತು ಈ ಸಮಯದಲ್ಲಿ ನಿಮಗೆ ಯಾವುದೇ ದೊಡ್ಡ ತೊಂದರೆಯಾಗುವುದಿಲ್ಲ.

ಪರಿಹಾರ - ಕಪ್ಪು ಹಸು ಅಥವಾ ಕುದರೆಗೆ ನಿಯಮಿತವಾಗಿ ರೊಟ್ಟಿಯನ್ನು ತಿನ್ನಿಸಿ.

ವೃಶ್ಚಿಕ ರಾಶಿ

ಶುಕ್ರ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಏಳನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ನಷ್ಟ, ಆಧ್ಯಾತ್ಮಿಕತೆ, ವಿದೇಶ ಲಾಭ ಮತ್ತು ಆಸ್ಪತ್ರೆಯಲ್ಲಿ ದಾಖಲಾಗುವ ಹನ್ನೆರಡನೇ ಮನೆಗೆ ಸಾಗುತ್ತದೆ. ಈ ಸಮಯದಲ್ಲಿ ನೀವು ಪಾರ್ಟಿ ಮಾಡುವ ಮನಸ್ಥಿತಿಯಲ್ಲಿರುತ್ತೀರಿ, ಇದು ನಿಮ್ಮ ಖರ್ಚುಗಳನ್ನು ಹೆಚ್ಚಿಸಬಹುದು. ಈ ಸಮಯದಲ್ಲಿ ವಿದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆಯೂ ಇದೆ ಮತ್ತು ನಿಮ್ಮ ನಿಕಟ ಜನರು ಈ ಪ್ರಯಾಣವನ್ನು ಸ್ಮರಣೀಯವಾಗಿಸಬಹುದು. ಈ ಸಮಯದಲ್ಲಿ ನೀವು ಉತ್ತಮ ಭಕ್ಷ್ಯಗಳನ್ನು ಸಹ ಆನಂದಿಸಬಹುದು. ಕೆಲಸದ ಸ್ಥಳದಲ್ಲಿ ಕೆಲಸ ಸುಲಭವಾಗಿರುತ್ತದೆ ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ನೀವು ಯಾವುದೇ ರೀತಿಯ ದಿನಚರಿಯನ್ನು ಅನುಸರಿಸಬಹುದು.

ವಿದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ವೇದೇಶದಲ್ಲಿ ಉದ್ಯೋಗವನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ, ಅದರಲ್ಲಿಯೂ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ನಿಮ್ಮ ಪ್ರೀತಿಯ ಜೀವನವು ಸಹ ಅತ್ಯುತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಕೆಲವು ಸಣ್ಣ ಪುಟ್ಟ ಸಮಸ್ಯೆಗಳಾಗುವ ಸಾಧ್ಯತೆ ಇದೆ.

ಪರಿಹಾರ - ಸೂರ್ಯೋದಯದ ಸಮಯದಲ್ಲಿ ಲಲಿತ ಸಹಸ್ತ್ರನಾಮವನ್ನು ಪಠಿಸಿ.


ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

धनु / ಧನು ರಾಶಿ

ಶುಕ್ರ ಗ್ರಹವು ಧನು ರಾಶಿಚಕ್ರದ ಸ್ಥಳೀಯರ ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಆದಾಯ, ಲಾಭ ಮತ್ತು ಆಸೆಗಳ ಹನ್ನೊಂದನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಉತ್ತಮ ಕಾರ್ಯಕ್ಷಮತೆಗೆ ನಿಮ್ಮ ಮೇಲಧಿಕಾರಿಗಳಿಂದ ನೀವು ಬಹುಮಾನ ಮತ್ತು ಗೌರವವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಸಾಮಾಜಿಕವಾಗಿ ನೀವು ಒಳ್ಳೆಯ ಜನರ ಸಹವಾಸವನ್ನು ಹೊಂದಿರುತ್ತೀರಿ ಮತ್ತು ಸ್ನೇಹಿತರೊಂದಿಗಿನ ಸಾಮಾಜಿಕ ಸಂಬಂಧಗಳಿಂದಲೂ ನೀವು ಲಾಭವನ್ನು ಪಡೆಯಬಹುದು. ಇದರೊಂದಿಗೆ ಈ ಸಮಯದಲ್ಲಿ ನೀವು ಸಾಕಷ್ಟು ಸಮಯದ ನಂತರ ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು, ಇದು ನಿಮಗೆ ಸಂತೋಷವನ್ನು ನೀಡುತ್ತದೆ.

ಈ ರಾಶಿಚಕ್ರದ ಜನರು ಪ್ರೀತಿ ಮತ್ತು ಪ್ರಣಯದ ವಿಷಯಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ನಿಮ್ಮ ಸಂಗಾತಿ ನಿಮ್ಮ ಭಾವನೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಅವರ ಬೆಂಬಲವನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗಬಹುದು. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ. ಆದರೂ ಸರಿಯಾದ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಮಾಡಲು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಶುಕ್ರವಾರ ಚಿಕ್ಕ ಹುಡುಗಿಯರಿಗೆ ಹಾಲು ಮಾತು ಸಕ್ಕರೆ ಕಲ್ಲು ದಾನ ಮಾಡುವುದು ಶುಭಕರವಾಗಿರುತ್ತದೆ. .

ಮಕರ ರಾಶಿ

ಮಕರ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವೃತ್ತಿ, ಹೆಸರು ಮತ್ತು ಖ್ಯಾತಿಯ ನಿಮ್ಮ ಹತ್ತನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ವೃತ್ತಿ ಜೀವನದಲ್ಲಿ ನೀವು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಪ್ರಯತ್ನಗಳ ಸರಿಯಾದ ಫಲಿತಾಂಶಗಳನ್ನು ಪಡೆಯಲು ನಿಮಗೆ ಕಷ್ಟವಾಗುತ್ತದೆ. ಆದರೂ ನಿಮ್ಮ ಪ್ರಯತ್ನಗಳನ್ನು ನಿಮ್ಮ ಪ್ರಯತ್ನಗಳನ್ನು ನೀವು ಪ್ರಾಮಾಣಿಕವಾಗಿ ಮುಂದುವರಿಸಬೇಕು. ಗುರಿಗಳನ್ನು ತಲುಪಲು ಈ ರಾಶಿಚಕ್ರದ ಸ್ಥಳೀಯರು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಮೇಲಧಿಕಾರಿಗಳು ಮತ್ತು ಸಹೋದೋಗಿಗಳೊಂದಿಗೆ ವಾದ ಮತ್ತು ಯಾವುದೇ ತಪ್ಪು ಗ್ರಹಿಕೆಗಳನ್ನು ಈ ರಾಶಿಚಕ್ರದ ಜನರು ತಪ್ಪಿಸಬೇಕು. ಏಕೆಂದರೆ ಅವರೊಂದಿಗಿನ ನಿಮ್ಮ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬದಲಾವಣೆ ತರಲು ಬಯಸುತ್ತಿದ್ದರೆ, ಸಂಪೂರ್ಣ ಸಿದ್ಧತೆ ಮತ್ತು ಸಂಶೋಧನೆ ಮಾಡಿ.

ಈ ಸಮಯದಲ್ಲಿ ಈ ರಾಶಿಚಕ್ರದ ಪ್ರೇಮಿಗಳು ತಮ್ಮ ಪ್ರೀತಿಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿ ಕೆಲವು ಸಂದರ್ಭಗಳಲ್ಲಿ ನಿಮ್ಮ ಹೃದಯವನ್ನು ನೋಯಿಸಬಹುದು. ವಿವಾಹಿತ ಜನರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ದಾಂಪತ್ಯ ಜೀವನದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ನಿಮ್ಮ ಮಾನಸಿಕ ಅಸಮಾಧಾನಕ್ಕೆ ಒಳಗಾಗಬಹುದು. ನಿಮ್ಮ ಜೀವನದ ಸಮಸ್ಯೆಗಳನ್ನು ತೊಡೆದುಹಾಕಲು ನೀವು ಧೈರ್ಯದಿಂದಿರಬೇಕು. ಅರೋಗ್ಯ ಜೀವನದಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.

ಪರಿಹಾರ - ಉತ್ತಮ ಗುಣಮಟ್ಟದ 5 ರಿಂದ 6 ಕ್ಯಾರಟ್ ಓಪಲ್ ರತ್ನವನ್ನು ಬೆಳ್ಳಿಯ ಉಂಗುರದಲ್ಲಿ ತಯಾರಿಸಿ ಧರಿಸುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ಕುಂಭ ರಾಶಿ

ಕುಂಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ನಾಲ್ಕನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಅದೃಷ್ಟ, ಅಂತರರಾಷ್ಟ್ರೀಯ ಪ್ರಯಾಣ ಮತ್ತು ತಂದೆಯ ಒಂಬತ್ತನೇ ಮನೆಗೆ ಗೋಚರಿಸಲಿದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಕುಟುಂಬ ಮತ್ತು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ನೀವು ಪೂರೈಸುತ್ತಿರಿ ಮತ್ತು ಬದಲಾಗಿ ನಿಮ್ಮ ಕುಟುಂಬದ ಸದಸ್ಯರ ಸಹಕಾರವನ್ನು ನೀವು ಪಡೆಯುತ್ತೀರಿ. ಆರ್ಥಿಕ ವಿಷಯಗಳಲ್ಲಿ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಉದ್ಯೋಗವನ್ನು ಹುಡುಕುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಉತ್ತಮ ಅವಕಾಶಗಳನ್ನು ಪಡೆಯಬಹುದು. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ವಿವಿಧ ಮೂಲಗಳಿಂದಲೂಅವಕಾಶವನ್ನು ಪಡೆಯುತ್ತೀರಿ.

ಈ ರಾಶಿಚಕ್ರದ ಉದ್ಯೋಗಪರರು ಮೇಲಧಿಕಾರಿಗಳ ಮೂಲಕ ಪ್ರಶಂಸೆ ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮ ಬಣ್ಣ ತರುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಲಾಭವನ್ನು ಪಡೆಯುತ್ತಾರೆ. ಈ ರಾಶಿಚಕ್ರದ ಪ್ರೇಮಿಗಳ ಪ್ರೀತಿ ಜೀವನವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಜೀವನ ಸಂಗಾತಿಯ ಸಹಕರನ್ನು ಪಡೆಯುತ್ತೀರಿ ಮತ್ತು ಶಾಂತಿಯುತ ವೈವಾಹಿಕ ಜೀವನವನ್ನು ಆನಂದಿಸುವಿರಿ. ಈ ಸಮಯದಲ್ಲಿ ಈ ರಾಶಿಚಕ್ರದ ಜನರ ಅರೋಗ್ಯ ಜೇವನವು ಉತ್ತಮವಾಗಿರುತ್ತದೆ ಆದರೆ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ನಿಮಗೆ ಸೂಚಿಸಲಾಗಿದೆ.

ಪರಿಹಾರ - ನಕಾರಾತ್ಮಕತೆಯನ್ನು ತೊಡೆದುಹಾಕಲು, ಪ್ರತಿದಿನ ಸಂಜೆ ಮನೆಯಲ್ಲಿ ಕರ್ಪುರವನ್ನು ಬೆಳಗಿಸಿ.

ಮೀನ ರಾಶಿ

ಮೀನ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಹಠಾತ್ ಲಾಭ / ನಷ್ಟ, ಮರಣದ ಎಂಟನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ವೈವುದೇ ರೀತಿಯ ವಿಚಿತ್ರವಾದ ನಡವಳಿಕೆಯನ್ನು ತಪ್ಪಿಸಿ ಮತ್ತು ವಿರುದ್ಧ ಲಿಂಗದ ಜನರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ಯಾವುದೇ ರೀತಿಯ ನಿಮ್ಮ ಪ್ರತಿಭೆಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ, ಇಲ್ಲದಿದ್ದರೆ ನೀವು ಗಂಭೀರ ಫಲಿತಾಂಶಗಳು ಉಂಟಾಗಬಹುದು. ಈ ಸಮಯದಲ್ಲಿ ಬೆಟ್ಟಿಂಗ್ ಗಳಂತಹ ಚಟುವಟಿಕೆಗಳಿಂದ ದೂರವಿರಿ. ವ್ಯಾಪಾರ ಮಾಡುತ್ತಿರುವ ಈ ರಾಶಿಚಕ್ರದ ಜನರು, ಬೆಟ್ಟಿಂಗ್ ಅಥವಾ ಈ ರೀತಿಯ ಯಾವುದೇ ಕೆಲಸದಿಂದ ಲಾಭವನ್ನು ಗಳಿಸಬಹುದು ಆದರೂ ಇಂತಹ ಚಟುವಟಿಕೆಗಳಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ.

ಈ ರಾಶಿಚಕ್ರದ ಉದ್ಯೋಗಪರರ ಜವಾಬ್ದಾರಿಗಳು ಕೆಲಸದ ಸ್ಥಳದಲ್ಲಿ ಹೆಚ್ಚಾಗಬಹುದು. ಕೆಲಸದ ಸ್ಥಳದಲ್ಲಿ ಯಶಸ್ಸಿನ ಹಾದಿ ಅಷ್ಟು ಸುಲಭವಾಗಿರುವುದಿಲ್ಲ. ಏನ್ ರಾಶಿಚಕ್ರದ ವ್ಯಾಪಾರಸ್ಥರು ಕಠಿಣ ಪರಿಶ್ರಮದ ನಂತರ ಮಾತ್ರ ಯಶಸ್ವಿಯಾಗಬಹುದು. ಈ ರಾಶಿಚಕ್ರದ ಕೆಲವು ಪ್ರೇಮಿಗಳು ತಮ್ಮ ಪ್ರೀತಿಪಾತ್ರರೊಂದಿಗೆ ಮದುವೆಯಾಗಬಹುದು. ಇನ್ನೂ ಒಂಟಿಯಾಗಿರುವ ಜನರು ಈ ಸಮಯದಲ್ಲಿ ಉತ್ತಮ ಸಂಗಾತಿಯನ್ನು ಪಡೆಯಬಹುದು. ಈ ರಾಶಿಚಕ್ರದ ಸ್ಥಳೀಯರ ದಾಂಪತ್ಯ ಜೀವನವು ಸಹ ಸಂತೋಷದಿಂದ ತುಂಬಿರುತ್ತದೆ. ಆರೋಗ್ಯವು ಹದಗೆಡಬಹುದು, ಈ ಕಾರಣದಿಂದಾಗಿ ನಿಮ್ಮ ಅನೇಕ ಯೋಜನೆಗಳು ಕೆಲವು ಸಮಯಕ್ಕೆ ಸ್ಥಗಿತಗೊಳ್ಳಬಹುದು.

ಪರಿಹಾರ - ಯಾವುದೇ ಮಹಿಳೆಗೆ ಸುಗಂಧ ದ್ರವ್ಯ, ಬಟ್ಟೆ ಮತ್ತು ಬೆಳ್ಳಿ ಆಭರಣಗಳನ್ನು ಉಡುಗೊರೆಯಾಗಿ ನೀಡಿ


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ವಾರ್ತಾದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಧನ್ಯವಾದಗಳು>

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer