ತುಲಾ ರಾಶಿಯಲ್ಲಿ ಶುಕ್ರ ಸಂಚಾರ (17 November 2020)

ಜ್ಯೋತಿಷ್ಯ ವಿಜ್ಞಾನದಲ್ಲಿ ಶುಕ್ರ ಗ್ರಹವನ್ನು ಲಾಭವನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಇದರಿಂದ ಕಲೆ, ಪ್ರೀತಿ, ಸೌಂದರ್ಯ ಮತ್ತು ಲೌಕಿಕ ಸಂತೋಷಗಳ ಅಂಶಗಳನ್ನು ಪಡೆಯಲಾಗುತ್ತದೆ. ಶುಕ್ರನ ಈ ಸಂಚಾರವು ತುಂಬಾ ಮುಖ್ಯವಾಗಲಿದೆ. ಏಕೆಂದರೆ ಈ ಸಂಚಾರದ ಸಮಯದಲ್ಲಿ ಶುಕ್ರ ದೇವ ತನ್ನದೇ ರಾಶಿಯಲ್ಲಿ ಅಂದರೆ ತುಲಾ ರಾಶಿಯಲ್ಲಿ ಕುಳಿತುಕೊಳ್ಳಲಿದೆ.

ಜೀವನದಲ್ಲಿ ಯಾವುದೇ ಸಮಸ್ಯೆಯ ಪರಿಹಾರವನ್ನು ಪಡೆಯಲು ಜ್ಯೋತಿಷಿಯೊಂದಿಗೆ ಪ್ರಶ್ನೆ ಕೇಳಿ

ಸಂಚಾರದ ಸಮಯ

ಐಷಾರಾಮಿ, ವಾಹನ, ವಿದೇಶ ಪ್ರಯಾಣ, ಎಲೆಕ್ಟ್ರಾನಿಕ್ ಉಪಕರಣಗಳು, ವೈವಾಹಿಕ ಮತ್ತು ಪ್ರೀತಿಯ ಸಂಬಂಧದ ಅಂಶ ದೇವ ಶುಕ್ರ 17 ನವೆಂಬರ್ 2020, ರಂದು ಮಂಗಳವಾರ ಮಧ್ಯಾಹ್ನ 12 ಗಂಟೆ 50 ನಿಮಿಷಕ್ಕೆ ಕನ್ಯಾ ರಾಶಿಯಿಂದ ತುಲಾ ರಾಶಿಯಲ್ಲಿ ಸಂಚರಿಸಲಿದೆ ಮತ್ತು 11 ಡಿಸೆಂಬರ್ 2020, ಶುಕ್ರವಾರ ಬೆಳಿಗ್ಗೆ 05 ಗಂಟೆ 04 ನಿಮಿಷದ ವರೆಗೆ ಇದೇ ರಾಶಿಯಲ್ಲಿ ಇರುತ್ತದೆ. ಶುಕ್ರ ಗ್ರಹವು ಸ್ವತಃ ತುಲಾ ರಾಶಿಯ ಅಧಿಪತಿ, ಆದ್ದರಿಂದ ತುಲಾ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ವಿಶೇಷವಾಗಿ ಶುಭವಾಗಿರಲಿದೆ. ನಡೆಯಿರಿ ತುಲಾ ರಾಶಿಯಲ್ಲಿ ಶುಕ್ರ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ

Click here to read in English...

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

  1. ಮೇಷ ರಾಶಿ

ಶುಕ್ರ ಮೇಷ ರಾಶಿಯ ಎರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಾಯ್ದಲ್ಲಿ ಶುಕ್ರ ನಿಮ್ಮ ರಾಶಿಯಿಂದ ಏಳನೇ ಮನೆಗೆ ಸಾಗುತ್ತಾರೆ. ಜಾತಕದಲ್ಲಿ ಏಳನೇ ಮನೆಯ ಮೂಲಕ ವ್ಯಕ್ತಿಯ ವೈವಾಹಿಕ ಜೀವನ, ಜೀವನ ಸಂಗಾತಿ ಮತ್ತು ಜೀವನದ ಇತರ ಕ್ಷೇತ್ರಗಳಲ್ಲಿ ಉಂಟಾಗುವ ಪಾಲುದಾರಿಕೆಯ ಬಗ್ಗೆ ಪರಿಗಣಿಸಲಾಗುತ್ತದೆ. ಸಂಚಾರದ ಸಮಯದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.

ತನ್ನ ಸಂಚಾರದ ಸಮಯದಲ್ಲಿ ಶುಕ್ರ ದೇವ ನಿಮಮ್ ಕೆಳಸದ ಸ್ಥಳ ಮತ್ತು ವೃತ್ತಿಪರ ಜೀವನದ ಮೇಲೆ ಹೆಚ್ಚು ಪರಿಣಾಮವನ್ನು ಬೀರಲಿದೆ. ನೀವು ಯಾವುದೇ ಹೊಸ ವ್ಯಾಪಾರ ಅಥವಾ ನಿಮ್ಮ ಯಾವುದೇ ಕಾರ್ಯವನ್ನು ಪುನಃ ಬಯಸುತ್ತಿದ್ದರೆ, ಅದಕ್ಕಾಗಿಯೂ ಶುಕ್ರ ದೇವರ ಈ ಸಂಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ದೀರ್ಘಕಾಲದಿಂದ ತಮ್ಮ ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿರುವವರು ಸಹ ಈ ಸಮಯದಲ್ಲಿ ಉತ್ತಮ ಫಲವನ್ನು ಪಡೆಯುತ್ತಾರೆ.

ಇದರೊಂದಿಗೆ ಉನ್ನತ ಸ್ಥಾನ ಮತ್ತು ಪ್ರಗತಿಯನ್ನು ಪಡೆಯಲು ಸಹ ಈ ಸಮಯ ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಹಿರಿಯ ಅಧಿಕಾರಿಗಳ ಸಹಕಾರವನ್ನು ಪಡೆಯುತ್ತೀರಿ. ಮತ್ತೊಂದೆಡೆ, ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರಿಗೂ ಈ ಸಮಯವೂ ಸಾಮಾನ್ಯಕ್ಕಿಂತ ಹೆಚ್ಚು ಉತ್ತಮ ಪರಿಣಾಮವನ್ನು ತರಲಿದೆ ಮತ್ತು ವ್ಯಾಪಾರದಲ್ಲಿ ನೀವು ಲಾಭವನ್ನು ಪಡೆಯುತ್ತೀರಿ.

ಇನ್ನು ಒಬ್ಬಂಟಿಯಾಗಿರುವಾರು ಅಥವಾ ಯಾರೊಂದಿಗಾದರೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುತ್ತಿರುವವರಿಗೆ ಶುಕ್ರ ದೇವ ಪ್ರೀತಿಯ ಉಡುಗೊರೆಯನ್ನು ತರಲಿದ್ದಾರೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಯಲ್ಲಿ ಯಶಸ್ಸು ಪಡೆಯುವುದಲ್ಲದೆ, ಪ್ರೇಮಿಯೊಂದಿಗೆ ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಅವಕಾಶವನ್ನು ಸಹ ಪಡೆಯುತ್ತೀರಿ. ವಿವಾಹಿತ ಜನರು ತಮ್ಮ ಜೀವನ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ಅನೇಕ ಅವಕ್ಶಗಳನ್ನು ಪಡೆಯುತ್ತಾರೆ. ಇದಲ್ಲದೆ ದಾಂಪತ್ಯ ಜೀವನವನ್ನು ಹೆಚ್ಚಿಸಲು ಬಯಸುತ್ತಿರುವ ಜನರಿಗೂ ಈ ಸಮಯ ಸಾಕಷ್ಟು ಉತ್ತಮವಾಗಿರಲಿದೆ.

ಈ ಸಮಯದಲ್ಲಿ ಪ್ರವಾಸಗಳಿಗೆ ಹೋಗಲು ಅನೇಕ ಅವಕ್ಶಗಳನ್ನು ಪಡೆಯುತ್ತೀರಿ ಮತ್ತು ಅವುಗಳಿಂದ ನಿಮಗೆ ಲಾಭವಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಆರೋಗ್ಯದ ಬಗ್ಗೆ ಹೆಚ್ಚು ಜಾಗರುಅರಗಿರುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಇದರೊಂದಿಗೆ ಮಾತ್ರಕ್ಕೆ ಸಂಬಂಧಿಸಿದ ಸಮಸ್ಯೆಯು ಉಂಟಾಗಬಹುದು. ಆದ್ದರಿಂದ ಕಾಲಕಾಲಕ್ಕೆ ಸಾಧಯ್ವಾದಷ್ಟು ನೀರು ಕುಡಿಯಿರಿ.

ಪರಿಹಾರ - ಉತ್ತಮ ಫಲಿತಾಂಶಗಳನ್ನು ಪಡೆಯಲು ಸೋಮವಾರ ಮತ್ತು ಶುಕ್ರವಾರದಂದು ಬಿಳಿ ಬಟ್ಟೆಗಳನ್ನು ಧರಿಸಿ.

ಮುಂದಿನ ವಾರದ ಮೇಷ ರಾಶಿ ಭವಿಷ್ಯ

  1. ವೃಷಭ ರಾಶಿ

ಶುಕ್ರ ಡೀ ನಿಮ್ಮ ಜಾತಕದಲ್ಲಿ ಆರನೇ ಮನೆ ಮತ್ತು ನಿಮ್ಮ ಮೊದಲನೇ ಮನೆಯ ಮಾಲೀಕ. ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಆರನೇ ಮನೆಗೆ ಸಂಚರಿಸುತ್ತಾರೆ. ಇದನ್ನು ಶತ್ರುವಿನ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಮನೆಯ ಮೂಲಕ ವಿರೋಧಿಗಳು, ರೋಗ, ನೋವು, ಉದ್ಯೋಗ, ಸ್ಪರ್ಧೆ, ರೋಗ ನಿರೋಧಕ ಸಾಮರ್ಥ್ಯ, ಮದುವೆಯಲ್ಲಿ ಪ್ರತ್ಯೇಕತೆ ಮತ್ತು ಕಾನೂನು ವಿವಾದಗಳ ಬಗ್ಗೆ ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ಈ ಸಮಯದಲ್ಲಿ ನೀವು ನಿಮ್ಮನ್ನು ಶತ್ರುಗಳ ತಂತ್ರದಲ್ಲಿ ಸಿಲುಕಿಸಿಕೊಳ್ಳುತ್ತೀರಿ, ಇದು ನಿಮ್ಮ ಕೆಲಸದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನೀವು ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗುತ್ತೀರಿ. ಆದ್ದರಿಂದ ಈ ಸಮಯದಲ್ಲಿ ನೀವು ತಾಳ್ಮೆಯಿಂದಿರಿ ಮತ್ತು ಯಾವುದೇ ರೀತಿಯ ವಿವಾದ ಅಥವಾ ಜಗಳದಿಂದ ದೂರವಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಯಿಂದ ಎಚ್ಚರದಿಂದಿರುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ಅವರು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಕೆಲಸದ ಬಗ್ಗೆ ಮನಸ್ಸು ಹೊಂದಿರುವುದಿಲ್ಲ. ಆದ್ದರಿಂದ ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ಇನ್ನು ಸ್ವಲ್ಪ ಸಮಯ ಕಾಯಿರಿ ಮತ್ತು ಸಂಚಾರದ ಸಮಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಪ್ರೀತಿ ಮತ್ತು ಪ್ರಣಯದ ಬಗ್ಗೆ ಮಾತನಾಡಿದರೆ, ವಿವಾಹಿತ ಜನರ ಜೀವನದಲ್ಲಿ ಅನೇಕ ಏರಿಳಿತಗಳು ಬರಲಿವೆ, ಆದ್ದರಿಂದ ಕಾಲಕಾಲಕ್ಕೆ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಮಾತನಾಡುವುದು ಮತ್ತು ನಿಮ್ಮ ಪ್ರೀತಿಯನ್ನು ಅವರ ಮುಂದೆ ವ್ಯಕ್ತಪಡಿಸುತ್ತಿರುವುದು ನಿಮಗೆ ಉತ್ತಮ.

ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮಾಗಿರುತ್ತದೆ. ಈ ಸಮಯದಲ್ಲಿ ಅವರು ತಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶವನ್ನು ಪಡೆಯುತ್ತಾರೆ. ಆರೋಗ್ಯದ ದೃಷ್ಟಿಯಿಂದ ಈ ಸಂಚಾರವು ಕಣ್ಣು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿಮಗೆ ನೀಡಬಹುದು. ಆದ್ದರಿಂದ ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಲಾಗಿದೆ.

ಪರಿಹಾರ - ಪ್ರಗತಿ ಪಡೆಯಲು ಮೇಯಲ್ಲಿ ಯಾವುದೇ ಬಿಳಿ ಬಣ್ಣದ ಹೂವಿನ ಸಸ್ಯವನ್ನು ನೆಡೆಯಿರಿ

ಮುಂದಿನ ವಾರದ ವೃಷಭ ಭರಾಶಿ ಭವಿಷ್ಯ

  1. ಮಿಥುನ ರಾಶಿ

ಶುಕ್ರ ದೇವ ಮಿಥುನ ರಾಶಿಚಕ್ರದ ಐದನೇ ಮತ್ತು ಹನ್ನೆರಡನೇ ಮನೆಯ ಮಾಲೀಕ. ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಐದನೇ ಮನೆಗೆ ಪ್ರವೇಶಿಸುತ್ತಾರೆ. ಜಾತಕದಲ್ಲಿ ಈ ಮನೆಯನ್ನು ಮಕ್ಕಳ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ಪ್ರಣಯ, ಮಕ್ಕಳು, ಸೃಜನಶೀಲತೆ, ಬೌದ್ಧಿಕ ಸಾಮರ್ಥ್ಯ, ಶಿಕ್ಷಣ ಮತ್ತು ಹೊಸ ಅವಕಾಶಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಹೆಚ್ಚು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.

ಶುಕ್ರನ ಸಂಚಾರದ ಸಮಯದಲ್ಲಿ ನಿಮ್ಮಲ್ಲಿ ಸ್ಫೂರ್ತಿದಾಯಕ ಮತ್ತು ಸೃಜನಶೀಲ ಶಕ್ತಿ ಬೆಳೆಯುತ್ತದೆ, ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಮಾತು ಮತ್ತು ಆಲೋಚನೆಗಳಿಂದ ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುವಲ್ಲಿ ಯಶಸ್ವಿಯಾಗುವಿರಿ. ಇದರಿಂದ ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ನಿಮ್ಮ ಬಾಸ್ ಕೂಡ ಪ್ರಭಾವಿತರಾಗುತ್ತಾರೆ ಮತ್ತುಅವರು ನಿಮ್ಮನ್ನು ಪ್ರಶಂಸಿಸುತ್ತಾರೆ.

ಉದ್ಯೋಗದಲ್ಲಿರುವವರು ಮತ್ತು ಯಾವುದೇ ದೊಡ್ಡ ಅವಕಾಶವನ್ನು ಕಾಯುತಿರುವವರು, ಈ ಸಮಯದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಉನ್ನತ ಸ್ಥಾನ ಮತ್ತು ಅಪೇಕ್ಷಿತ ವರ್ಗಾವಣೆಯನ್ನು ಬಯಸುತ್ತಿರುವವರಿಗೂ ಶುಕ್ರ ದೇವ ಶುಭ ಫಲಿತಾಂಶಗಳನ್ನು ನೀಡುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವಿವಿಧ ಮೂಲಗಳಿಂದ ಪ್ರಗತಿ ಮತ್ತು ಅಭಿವೃದ್ಧಿಯ ಅವಕಾಶಗಳನ್ನು ಪಡೆಯುತ್ತೀರಿ.

ಪ್ರೀತಿ ಜೀವನಕ್ಕೂ ಸಮಯ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ನಿಮ್ಮ ಪ್ರೀತಿ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವಿರಿ. ಇದರಿಂದಾಗಿ ನಿಮ್ಮಿಬ್ಬರ ನಡುವಿನ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ. ಇದರೊಂದಿಗೆ ನೀವಿಬ್ಬರು ನಿಮ್ಮ ಸಂಬಂಧವನ್ನು ಮದುವೆಯಲ್ಲಿ ಬದಲಾಯಿಸಲು ನಿರ್ಧರಿಸಬಹುದು. ಮತ್ತೊಂದೆಡೆ, ವಿವಾಹಿತ ಜನರಿಗೂ ಈ ಸಮಯ ಉತ್ತಮವಾಗಿರಲಿದೆ.

ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುತ್ತಿರುವ ವಿದ್ಯಾರ್ಥಿಗಳ ಕನಸು ಈ ಸಮಯದಲ್ಲಿ ಈಡೇರಬಹುದು. ಇದರಿಂದ ನಿಮ್ಮ ಪೊಸಹಕರು ಸಹ ಸಂತೋಷಪಡುತ್ತಾರೆ.

ಒಟ್ಟಾರೆಯಾಗಿ ಹೇಳಿದರೆ, ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಸಂಚಾರವು ವಿಶೇಷವಾಗಿ ಅತ್ಯಂತ ಶುಭ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ನೀವು ನಿಮ್ಮ ಹಣಕಾಸು ಸರಿಯಾದ ಯೋಜನಾದ ಪ್ರಕಾರ ಖರ್ಚು ಮಾಡಿ, ಇಲ್ಲದಿದ್ದರೆ ಭವಿಷ್ಯದಲ್ಲಿ ನೀವು ತೊಂದರೆಕ್ಕೊಳಾಗಬಹುದು.

ಪರಿಹಾರ - ಪ್ರತಿದಿನ ಊಟ ಮಾಡುವ ಮೊದಲು ಹಸುವಿಗೆ ಸ್ವಲ್ಪ ಆಹಾರವನ್ನು ತೆಗೆದಿಡಿ.

ಮುಂದಿನ ವಾರದ ಮಿಥುನ ರಾಶಿ ಭವಿಷ್ಯ

  1. ಕರ್ಕ ರಾಶಿ

ಶುಕ್ರ ದೇವ ನಿಮ್ಮ ರಾಶಿಯ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ನಾಲ್ಕನೇ ಮನೆಗೆ ಸಾಗುತ್ತಾರೆ. ಜಾತಕದಲ್ಲಿ ನಾಲ್ಕನೇ ಮನೆಯನ್ನು ಸಂತೋಷದ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಮನೆಯ ಮೂಲಕ ತಾಯಿ, ಜೀವನದಲ್ಲಿ ಪಡೆಯಲಾಗುವುದು ಎಲ್ಲಾ ರೀತಿಯ ಸಂತೋಷ ಸಂಪನ್ಮೂಲಗಳು, ಸ್ಥಿರ ಅಸ್ಥಿರ ಸಂಪತ್ತು, ಜನಪ್ರಿಯತೆ ಮತ್ತು ಭಾವನೆಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ತುಲಾ ರಾಶಿಯಲ್ಲಿ ಶುಕ್ರ ಸಂಚಾರದ ಸಮಯದಲ್ಲಿ, ನಿಮ್ಮ ತಾಯಿಯ ಕಳಪೆ ಆರೋಗ್ಯವೂ ಸುಧಾರಿಸುತ್ತದೆ ಮತ್ತು ಅವ್ರು ಬಹಿರಂಗವಾಗಿ ನಿಮ್ಮನ್ನು ಬೆಂಬಲಿಸುತ್ತಾರೆ. ಈ ಕಾರಣದಿಂದಾಗಿ ನೀವು ಅವರ ಮೂಲಕ ಲಾಭವನ್ನು ಪಡೆಯುತ್ತೀರಿ. ಈ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬಕ್ಕೆ ಸಮಯ ನೀಡುವುದನ್ನು ಕಾಣಲಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ನೀವು ಮನೆಯ ಅಲಂಕಾರದ ವಸ್ತುಗಳ ಮೇಲೆ ಹಣಕಾಸು ಸಹ ಖರ್ಚು ಮಾಡುತ್ತೀರಿ. ಆದರೆ ಅದು ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ.

ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಂಡಾಗ ನೀವು ಯಾವುದೇ ಹೊಸ ವಾಹನವನ್ನು ಖರೀದಿಸಲು ಯೋಜಿಸಬಹುದು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಮನರಂಜನೆಯ ಮೇಲೆ ಹೆಚ್ಚು ಹಣ ಖರ್ಚು ಮಾಡುತ್ತೀರಿ, ಮತ್ತೊಂದೆಡೆ ಈ ಸಮಯದಲ್ಲಿ ಸಂಪತ್ತಿಗೆ ಸಂಬಂಧಿಸಿದ ವಿಷಯದಿಂದ ನೀವು ಉತ್ತಮ ಲಾಭವನ್ನು ಪಡೆಯುವ ಸಾಧ್ಯೆಗಳಿವೆ.

ನಿಮ್ಮ ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ನೀವು ನಿಮ್ಮ ಸೃಜನಶೀಲತೆ ಮತ್ತು ಯಾವುದೇ ಕಲೆಯ ಬಲದ ಮೇಲೆ ಬಡ್ತಿ ಪಡೆಯಲು ಅವಕಾಶವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳಾ ಸಹೋದ್ಯೋಗಿ ಸಹ ನಿಮ್ಮ ದೊಡ್ಡ ಮಿತ್ರನಾಗಿ ಹೊರಹೊಮ್ಮಬಹುದು.

ಪ್ರೀತಿ ಜೀವನಕ್ಕೆ ಶುಕ್ರ ಸಂಚಾರವೂ ಅತ್ಯಂತ ಶುಭ ವಾಗಿರುತ್ತದೆ. ನೀವು ನಿಮ್ಮ ಪ್ರೀತಿ ಮತ್ತು ಭಾವನೆಯನ್ನು ನಿಮ್ಮ ಪ್ರೀತಿಪಾತ್ರರ ರ ಮುಂದೆ ವ್ಯಕ್ತಪಡಿಸುವ ಲ್ಲಿ ಯಹಸ್ವಿಯಾಗುತ್ತೀರಿ. ಈ ಕಾರಣದಿಂದಾಗಿ ನಿಮ್ಮ ಸಂಗಾತಿ ಕೂಡ ತಮ್ಮ ಪ್ರೀತಿಯನ್ನು ನಿಮ್ಮ ಮುಂದೆ ವ್ಯಕ್ತಪಡಿಸುತ್ತಾರೆ. ಈ ಸಮಯದಲ್ಲಿ ನೀವಿಬ್ಬರೂ ಪರಸ್ಪರ ರೊಂದಿಗೆ ಪ್ರೀತಿ ಮತ್ತು ಪ್ರಣಯದ ಸಮುದ್ರದಲ್ಲಿ ಧುಮುಕುವುದು ಕಂಡುಬರುತ್ತದೆ. ಇದರಿಂದಾಗಿ ನಿಮ್ಮ ಈ ಸುಂದರವಾದ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಸಹಾಯ ದೊರೆಯುತ್ತದೆ.

ನಿಮ್ಮ ಆರೋಗ್ಯವನ್ನು ನೋಡಿದರೆ, ಹೆಚ್ಚು ತಿನ್ನುವ ನಿಮ್ಮ ಅಭ್ಯಾಸವನ್ನು ಸುಧಾರಿಸಬೇಕು ಮತ್ತು ತಣ್ಣನೆಯ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಇಲ್ಲದಿದದರೆ, ನೀವು ಕೆಮ್ಮು , ಶೀತದಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸಬೇಕಾಗಬಹುದು.

ಪರಿಹಾರ ಶುಕ್ರವಾರದಂದು ಚಿಕ್ಕ ಹುಡುಗಿಯರಿಗೆ ಕಲ್ಲು ಸಕ್ಕರೆ ಮತ್ತು ಹಾಲು ವಿತರಿಸಿ ಮತ್ತು ಅವರ ಆಶೀರ್ವಾದವನ್ನು ಪಡೆಯಿರಿ.

ಮುಂದಿನ ವಾರದ ಕರ್ಕ ರಾಶಿ ಭವಿಷ್ಯ

ನಿಮ್ಮ ಜೀವನದ ವಿವರವಾದ ಮುನ್ಸೂಚನೆಯನ್ನು ಪಡೆಯಿರಿ : ಈಗಲೇ ಆದೇಶಿಸಿ ಅಸ್ಗ್ಟ್ರಾಸೆಜ್ ಬೃಹತ್ ಕುಂಡಲಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ

  1. ಸಿಂಹ ರಾಶಿ

ಶುಕ್ರ ದೇವ ನಿಮ್ಮ ರಾಶಿಚಕ್ರದ ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ ಮಾತು ತುಲಾ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಸಾಗುತ್ತಾರೆ. ಜಾತಕದಲ್ಲಿ ಮೂರನೇ ಮನೆಯನ್ನು ಸ್ವಯಂಪ್ರೇರಿತ ಮನೆಯೆಂದು ಕರಯಲಾಗುತ್ತದೆ. ಈ ಮನೆಯ ಮೂಲಕ ಧೈರ್ಯ, ಆಸೆ, ಕಿರಿಯ ಸಹೋದರ ಸಹೋದರಿಯರು, ಕುತೂಹಲ, ಶಕ್ತಿ ಮತ್ತು ಉತ್ಸಾಹದ ಬುಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಶುಕ್ರನ ಸಂಚಾರವು ನಿಮಗೆ ಶುಭ ವೆಂದು ಸಾಬೀತುಪಡಿಸುತ್ತದೆ.

ಈ ಸಂಚಾರದ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನ ಮತ್ತು ಪರಿಶ್ರಮ ಮಾತ್ರ ನಿಮ್ಮನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಕೆಲಸ ಮಾಡುತ್ತವೆ. ಇದರಿಂದಾಗಿ ನೀವು ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಸಂಪೂರ್ಣ ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಆಲೋಚನೆಗಳನ್ನು ಇತರರ ಮುಂದೆ ವ್ಯಕ್ತಪಡಿಸಲು ಸಹ ಶುಕ್ರನ ಸಂಚಾರವು ನಿಮಗೆ ಸಹಾಯ ಮಾಡುತ್ತದೆ. ಇದರಿಂದಾಗಿ ನೀವು ಇತರರ ಬೆಂಬಲವನ್ನು ಪಡೆಯುತ್ತೀರಿ ಮತ್ತು ನೀವು ನಿಮ್ಮ ಕೆಲಸವನ್ನು ಉತ್ತಮವಾಗಿ, ಸಮಯ ಇರುವಾಗಲೇ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಶುಕ್ರ ಸಂಚಾರದ ಸಮಯದಲ್ಲಿ, ಕಾಲಕಾಲಕ್ಕೆ ನೀವು ನಿಮ್ಮ ತಂಡವನ್ನು ಪ್ರೋತ್ಸಾಹಿಸಲು ಸಹ ಕೆಲಸ ಮಾಡುತ್ತೀರಿ. ಇದು ನಿಮಗೆ ಪ್ರಯೋಜನಕಾರಿಯಾಗಿದೆ. ಶುಕ್ರ ಸಂಚಾರದ ಸಮಯದಲ್ಲಿ ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ನಿಮ್ಮ ಒಲವು ಹೆಚ್ಚಾಗಿರುತ್ತದೆ ಮತ್ತು ಇದರಿಂದಾಗಿ ನಿಮ್ಮ ಸೃಜನಶೀಲ ಸಾಮರ್ಥ್ಯವು ಹೆಚ್ಚಾಗುತ್ತದೆ.

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ, ನೀವು ನಿಮ್ಮ ಸಹೋದರ ಸಹೋದರಿ ಯರೊಂದಿಗೆ ಸಮಯವನ್ನು ಕಳೆ ಯುವಿರಿ. ಇದರಿಂದ ನಿಮ್ಮ ಮತ್ತು ಅವರೊಂದಿಗಿನ ಸಂಬಂಧಕ್ಕೆ ಬಳ ಸಿಗುತ್ತದೆ. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ಪ್ರೀತಿ ಜೀವನವು ಸಹ ಉತ್ತಮವಾಗಿರುತ್ತದೆ. ಮತ್ತೊಂದೆಡೆ, ವೈವಾಹಿಕ ಜನರು ಜೀವನ ಸಂಗಾತಿಯೊಂದಿಗೆ ಕೆಲವು ಮನರಂಜನಾ ಚಟುವಟಿಕೆಗಳಲ್ಲಿ ಮುಂದುವರಿದು ಭಾಗವಹಿಸುವುದನ್ನು ಕಾಣಲಾಗುತ್ತದೆ. ಇದರಿಂದಾಗಿ ನಿಮ್ಮಿಬ್ಬರ ಸಂಬಂಧದಲ್ಲಿ ಪ್ರೀತಿ ಮತ್ತು ಸಂತೋಷದ ಮಳೆ ಬೀಳುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶುಕ್ರನ ಈ ಸಂಚಾರವು ಸಿಂಹ ರಾಶಿಚಕ್ರದ ಸ್ಥಳೀಯರಿಗೆ ತುಂಬಾ ಉತ್ತಮವೆಂದು ಸಾಬೀತಾಗುತ್ತದೆ.

ಪರಿಹಾರ - ಶುಕ್ರ ಬೀಜ ಮಂತ್ರವನ್ನು ಪ್ರತಿದಿನ ನಿಯಮಿತವಾಗಿ 108 ಬಾರಿ ಜಪಿಸಿ " ಓಂ ಶುಂ ಶುಕ್ರಾಯ್ ನಮಃ.

ಮುಂದಿನ ವಾರದ ಸಿಂಹ ರಾಶಿ ಭವಿಷ್ಯ

  1. ಕನ್ಯಾ ರಾಶಿ

ಶುಕ್ರ ದೇವ ಕನ್ಯಾ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಎರಡನೇ ಮನೆಗೆ ಸಾಗುತ್ತಾರೆ. ಜ್ಯೋತಿಷ್ಯದಲ್ಲಿ ಎರಡನೇ ಮನೆಯ ಮೂಲಕ ವ್ಯಕ್ತಿಯ ಕುಟುಂಬ, ಧ್ವನಿ, ಶಿಕ್ಷಣದ ಮತ್ತು ಹಣದ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಶುಕ್ರ ಸಂಚಾರವು ನಿಮಗೆ ಉತ್ತಮವೆಂದು ಸಾಬೀತಾಗುತ್ತದೆ.

ಈ ಸಮಯದಲ್ಲಿ ಆರ್ಥಿಕ ಜೀವನದಲ್ಲಿ ನೀವು ಸಂಪೂರ್ಣ ಯಶಸ್ಸು ಪಡೆಯುತ್ತೀರಿ. ಇದರಿಂದ ನೀವು ಉತ್ತಮ ಹಣದ ಲಾಭವನ್ನು ಪಡೆಯುತ್ತೀರಿ. ಇದರೊಂದಿಗೆ ಸಂಚಾರದ ಈ ಸಮಯದಲ್ಲಿ ನೀವು ಹಣವನ್ನು ಸಂಗ್ರಹಿಸುವಲ್ಲಿ ಸಹ ಯಶಸ್ಸು ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ನೀವು ನಿಮ್ಮ ಕುಟುಂಬದ ಬಗ್ಗೆ ಜಾಗರೂಕರಾಗಿ ಕಾಣುವಿರಿ. ಇದಕ್ಕಾಗಿ ನೀವು ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯುವದು ಮತ್ತು ಅವರನ್ನು ಬೆಂಬಲಿಸುವುದನ್ನು ಕಾಣಲಾಗುತ್ತದೆ. ನಿಮ್ಮ ಈ ನಡವಳಿಕೆಯನ್ನು ನೋಡಿ ಕುಟುಂಬದಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಣಲಾಗುತ್ತದೆ.

ವ್ಯಾಪಾರಿ ವರ್ಗದ ಬಗ್ಗೆ ಮಾತನಾಡಿದರೆ, ವಿಶೇಷವಾಗಿ ಕುಟುಂಬದ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಶುಕ್ರ ದೇವ ಹಣವನ್ನು ಗಳಿಸಲು ಮತ್ತು ವ್ಯಾಪಾರದಲ್ಲಿ ಪಡೆಯಲಾಗು ವ ಅನೇಕ ಸುವರ್ಣ ಅವಕಾಶಗಳಿಂದ ಲಾಭವನ್ನು ಪಡೆಯಲು ಪ್ರೋತ್ಸಾಹಿಸುತ್ತಾರೆ. ಈ ಅವಧಿಯಲ್ಲಿ ನಿಮ್ಮ ಸಂವಹನ ಶೈಲಿ ಮತ್ತು ನಿಮ್ಮ ಸಾಮರ್ಥ್ಯವು ಸಹ ಬಹಿರಂಗವಾಗುತ್ತದೆ. ಈ ಕಾರಣದಿಂದಾಗಿ ನೀವು ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುವ ಮೂಲಕ ಅವರಿಂದ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಸಮಯದಲ್ಲಿ ನೀವು ತಂದೆ ಅಥವಾ ತಂದೆ ಯಂತಹ ವ್ಯಕತಿಯಿಂದ ಸಹಕಾರ ಮತ್ತು ಸಲಹೆ ಪಡೆದುಕೊಳ್ಳುವು ದನ್ನು ಸಹ ಕಾಣಲಾಗುತ್ತದೆ. ಇದು ನಿಮಗೆ ಸರಿಯಾಗಿ ಮಾರ್ಗದರ್ಶನ ನೀಡುತ್ತದೆ ಮತ್ತು ಅವರ ಸಲಹೆಯನ್ನು ಅನುಸರಿಸುವ ಮೂಲಕ ನೀವು ಅನೇಕ ರೀತಿಯ ನಷ್ಟದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.

ನಿಮ್ಮ ಆರೋಗ್ಯ ಜೀವನವನ್ನು ನೋಡಿದರೆ, ಶುಕ್ರ ಸಂಚಾರದ ಸಮಯದಲ್ಲಿ ನೀವು ಅತಿಯಾಗಿ ತಿನ್ನುವುದನ್ನು ಬಳಸಿಕೊಳ್ಳಬಹುದು. ಇದರಿಂದ ನಿಮ್ಮ ದೇಹದ ತೂಕವು ಸಹ ಹೆಚ್ಚಾಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸಿ ಮತ್ತು ಅದರಲ್ಲಿ ಕ್ರಮಬದ್ಧತೆ ಯನ್ನು ಅಳವಡಿಸಿಕೊಳ್ಳಿ.

ಪರಿಹಾರ - ನಿರ್ಗತಿಕ ಬಡವರಿಗೆ ಮತ್ತು ಮುದುಕರಿಗೆ ಸಕ್ಕರೆ ಮತ್ತು ಬೆಲ್ಲದ ದಾನ ಮಾಡಿ.

ಮುಂದಿನ ವಾರದ ಕನ್ಯಾ ರಾಶಿ ಭವಿಷ್ಯ

  1. ತುಲಾ ರಾಶಿ

ಶುಕ್ರ ಗ್ರಹದ ಪಾತ್ರವೂ ನಿಮಗೆ ಬಹಳ ಮುಖ್ಯ. ಏಕೆಂದರೆ ಅವರು ನಿಮ್ಮ ಎಂಟನೇ ಮತ್ತು ಮೊದಲನೇ ಮನೆಯ ಅಧಿಪತಿ. ಅಲ್ಲದೆ ಸಂಚಾರದ ಈ ಸಮಯದಲ್ಲಿ ನಿಮ್ಮ ಮೊದಲನೇ ಮನೆಗೆ ಪ್ರವೇಶಿಸುತ್ತಾರೆ. ಆದ್ದರಿಂದ ಈ ಸಂಚಾರದ ಸಮಯವು ನಿಮಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಈ ಸಮಯದಲ್ಲಿ ನಿಮ್ಮ ಸ್ವಭಾವದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಲಾಗುತ್ತದೆ.

ಸಂಚಾರದ ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನ ಮತ್ತು ಉತ್ತಮ ಪ್ರಯೋಜನನ್ನು ಪಡೆಯುವಂತಹ ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ವ್ಯಾಪಾರವನ್ನು ನಡೆಸುತ್ತಿರುವ ಜನರು ಸಹ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ನೀವು ಹೂಡಿಕೆ ಮತ್ತು ಹೊಸ ವ್ಯಾಪಾರದ ಮೂಲಕ ಸಹ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗತ್ತದೆ. ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ನೀವು ನಿಮ್ಮ ಪಾಲುದಾರರ ಬೆಂಬಲವನ್ನು ಪಡೆಯುತ್ತೀರಿ. ಇದರೊಂದಿಗೆ ನೀವಿಬ್ಬರೂ ನಿಮ್ಮ ತಿಳುವಳಿಕೆಯಿಂದ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ದೊಡ್ಡ ಹೂಡಿಕೆಯನ್ನು ಮಾಡುವುದು ನಿಮಗೆ ಉತ್ತಮವಾಗಿರುತ್ತದೆ.

ಈ ಸಂದರ್ಭದಲ್ಲಿ ಶುಕ್ರ ನಿಮ್ಮ ಏಳನೇ ಮನೆಯ ಮೇಲೂ ದೃಷ್ಟಿ ಹಾಕುತ್ತಾರೆ ಇದು ಸಮಾಜವನ್ನು ತೋರಿಸುತ್ತದೆ. ಈ ಸಂಚಾರದ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಚಿತ್ರಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ. ಜನರ ನಿಮ್ಮ ಸಲಹೆಯನ್ನು ಪಡೆದುಕೊಳ್ಳು ವಂತಹ ಸಮಯ ಇದು. ಇದರಿಂದಾಗಿ ಕುಟುಂಬದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ಈ ಸಂಚಾರವು ಎಲ್ಲಾ ಸ್ಥಳೀಯರಿಗೆ ಅತ್ಯಂತ ಉತ್ತಮವೆಂದು ಸಾಬೀತುಪಡಿಸುತ್ತದೆ. ವಿಶೇಷವಾಗಿ ತಮ್ಮ ಸಂಬಂಧವನ್ನು ಮುಂದುವರಿಸಲು ಬಯಸುತ್ತಿರುವ ಜನರಿಗೆ ಒಳ್ಳೆಯದು. ವಿವಾಹಿತ ಜನರು ಈ ಸಮಯದಲ್ಲಿ ಸಂತೋಷವನ್ನು ಅನುಭವಿಸುತ್ತಾರೆ. ಇದರಿಂದಾಗಿ ನೀವು ನಿಮ್ಮ ದಾಂಪತ್ಯ ಜೀವನವನ್ನು ವಿಸ್ತರಿಸುವ ಬಗ್ಗೆ ಆಲೋಚಿಸಬಹುದು ಮತ್ತು ಅದಕ್ಕಾಗಿ ಸಮಯವು ಅತ್ಯಂತ ಶುಭವೆಂದು ಸಾಬೀತುಪಡಿಸುತ್ತದೆ.

ಆರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯವು ಉತ್ತಮವಾಗಿರುತ್ತದೆ. ಆದಾಗ್ಯೂ, ನೀವು ಹೆಚ್ಚು ಯೋಚಿಸುವುದನ್ನು ತಪ್ಪಿಸಬೇಕು ಮತ್ತು ಸಾಧ್ಯವಾದಷ್ಟು ಈ ಸಂಚಾರದ ಲಾಭವನ್ನು ಪಡೆದುಕೊಂಡು ನಿಮ್ಮ ಪರಿಶ್ರಮವನ್ನು ಮುಂದುವರಿಸಿ.

ಪರಿಹಾರ - ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಲಲಿತಾ ಸಹಸ್ರನಾಮ ವನ್ನೂ ಪಠಿಸಿ.

ಮುಂದಿನ ವಾರದ ತುಲಾ ರಾಶಿ ಭವಿಷ್ಯ

ನಿಮ್ಮ ಜಾತಕದಲ್ಲಿ ರಾಜ ಯೋಗವಿದೆಯೇ ಎಂದು ತಿಳಿದಿದೆಯೇ? ಈಗಲೇ ಆದೇಶಿಸಿ ರಾಜ ಯೋಗ ರಿಪೋರ್ಟ್

  1. ವೃಶ್ಚಿಕ ರಾಶಿ

ಶುಕ್ರ ದೇವ ನಿಮ್ಮ ರಾಶಿಚಕ್ರದ ಏಳನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೆರಡನೇ ಮನೆಗೆ ಸಾಗುತ್ತಾರೆ. ಜ್ಯೋತಿಷ್ಯದಲ್ಲಿ ಇದನ್ನು ವೆಚ್ಚದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ವೆಚ್ಚ, ನಷ್ಟ, ಮೋಕ್ಷ, ವಿದೇಶ ಪ್ರಯಾಣ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಶುಕ್ರ ಸಂಚಾರವು ನಿಮಗೆ ಸಾಮಾನ್ಯಕ್ಕಿಂತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ನೀವು ವಿದೇಶಕ್ಕೆ ಹೋಗಲು ಕನಸು ಕಾಣುತ್ತಿದ್ದರೆ, ಈ ಸಮಯದಲ್ಲಿ ನೀವು ಈ ಅವಕಾಶವನ್ನು ಪಡೆಯಬಹುದು. ಅಲ್ಲದೆ ನೀವು ದೀರ್ಘಕಾಲದಿಂದ ಕನಸು ಕಾಣುತ್ತಿದ್ದ ಪ್ರಯಾಣಕ್ಕೆ ಹೋಗಲು ಸಹ ಸಂಚಾರದ ಈ ಸಮಯದಲ್ಲಿ ಅವಕಾಶವನ್ನು ಪಡೆಯುತ್ತೀರಿ.

ಕೆಲಸದ ಸ್ಥಳದಲ್ಲಿ ಸಹ ವಿದೇಶಿ ಮೂಲಗಳಿಂದ ನಮ್ಮ ವು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ವಿಶೇಷವಾಗಿ ವಿದೇಶದೊಂದಿಗೆ ವ್ಯಾಪಾರವನ್ನು ಮಾಡುತ್ತಿರುವ ಸ್ಥಳೀಯರಿಗೆ ಶುಕ್ರ ಸಂಚಾರವು ಉತ್ತಮವಾಗಿ ರಲಿ ದೆ. ಅದೇ ಸಮಯದಲ್ಲಿ ಮತ್ತೊಂದೆಡೆ ಉದ್ಯೋಗದಲ್ಲಿ ತೊಡಗಿರುವ ಜನರು ಯಾವುದೇ ಬಹುರಾಷ್ಟ್ರೀಯ ಕಂಪನಿಯ ಮೂಲಕ ದೊಡ್ಡ ಆಫರ್ ಪಡೆಯಬಹುದು.ನೀವು ಯಾವುದೇ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ವಿದೇಶಕ್ಕೆ ಹೋಗಲು ಮತ್ತು ಅಲ್ಲೇ ವಾಸಿಸಲು ಸಂಚಾರದ ಈ ಸಮಯದಲ್ಲಿ ಅವಕಾಶವನ್ನು ಪಡೆಯಬಹುದು.

ಆಮದು ರಫ್ತು ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಶುಕ್ರ ಸಂಚಾರವು ಹೆಚ್ಚು ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯವು ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಯಾವುದೇ ಲೋನ್ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ನೀವು ಅದಕ್ಕೆ ಅರ್ಜಿ ಸಲ್ಲಿಸಬಹುದು. ಅದರಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಐಷಾರಾಮಿ ಮತ್ತು ಆಸೆಗಳ ಮೇಲೂ ಬಹಿರಂಗವಾಗಿ ಖರ್ಚು ಮಾಡುವಿರಿ. ಆದ್ದರಿಂದ ಈ ಸಮಯದಲ್ಲಿ ನೀವು ಹಣವನ್ನು ಖರ್ಚು ಮಾಡಲು ಸರಿಯಾದ ತಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದ ರಿಂದಾಗಿ ನಿಮಗೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು.

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಶುಕ್ರ ದೇವ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತಾರೆ. ವಿಶೇಷವಾಗಿ ವಿವಾಹಿತ ಜನರು ತಾವು ಬಯಸುವ ಪ್ರಕಾರ ತಮ್ಮ ಜೀವನ ಸಂಗಾತಿಯೊಂದಿಗೆ ಸಮಯ ಕಳೆಯುವುದು ಕಂಡುಬರುತ್ತದೆ. ಈ ಸಮಯದಲ್ಲಿ ಅವರು ತಮ್ಮ ಜೀವನ ಸಂಗಾತಿಯ ಸಂಪೂರ್ಣ ಪ್ರೀತಿಯನ್ನು ಪಡೆಯುತ್ತಾರೆ. ಅಲ್ಲದೆ ಜೀವನ ಸಂಗಾತಿಯೊಂದಿಗೆ ಯಾವುದೇ ಪ್ರಯಾಣಕ್ಕೆ ಹೋಗಲು ಸಹ ಯೋಜಿಸ ಬಹುದು. ಈ ಪ್ರಯಾಣದಲ್ಲಿ ನೀವಿಬ್ಬರೂ ಪರಸ್ಪರರ ನಿಕಟ ಬರುವ ಸಾಧ್ಯತೆ ಇದೆ ಮತ್ತು ಸಂಬಂಧವನ್ನು ಬಲಪಡಿಸಲು ಸಾಧ್ಯವಾದಷ್ಟು ಪ್ರಯತ್ನಿಸು ವುದ ನ್ನು ಕಾಣಲಾಗುತ್ತದೆ.

ಪ್ರೀತಿಯಲ್ಲಿ ರುವ ಜನರು ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ ಇದು ಹೆಚ್ಚಿನ ಸಮಯದ ವರೆಗೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಕಾಲಕಾಲಕ್ಕೆ ಮಾತನಾಡಿ ನಿಮ್ಮ ಸ್ವಂಧವನ್ನು ಬಲಪಡಿಸುವ ಅಗತ್ಯವಿದೆ. ಇಲ್ಲದಿದ್ದರೆ ನಿಮ್ಮ ಮಧ್ಯೆ ಜಗಳದ ಸಾಧ್ಯತೆ ಇದೆ.

ಈ ಸಮಯದಲ್ಲಿ ನೀವು ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ಪರಿಹಾರ - ಉತ್ತಮ ಫಲಿತಾಂಶಗಳನ್ನು ಪಡೆಯಲು, ವಿಷ್ಣು ಅವತಾರ ಪರಶುರಾಮರ ಪೌರಾಣಿಕ ಕಥೆಯನ್ನು ಕೇಳಿ.

ಮುಂದಿನ ವಾರದ ವೃಶ್ಚಿಕ ರಾಶಿ ಭವಿಷ್ಯ

  1. ಧನು ರಾಶಿ

ಶುಕ್ರ ದೇವ ಧನು ರಾಶಿಚಕ್ರದ ಸ್ಥಳೀಯರ ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಗೆ ಸಾಗುತ್ತಾರೆ. ಜಾತಕದಲ್ಲಿ ಹನ್ನೊಂದನೇ ಮನೆಯನ್ನು ಆದಾಯದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ಆದಾಯ ಜೀವನದಲ್ಲಿ ದೊರೆಯುವ ಎಲ್ಲಾ ರೀತಿಯ ಸಾಧನೆಗಳು, ಸ್ನೇಹಿತರು, ಹಿರಿಯ ಸಹೋದರ ಸಹೋದರಿಯರ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಹಿರಿಯ ಅಧಿಕಾರಿಗಳ ಪ್ರಶಂಸೆಯನ್ನು ಪಡೆಯುತ್ತೀರಿ. ಇದರಿಂದಾಗಿ ನೀವು ಭವಿಷ್ಯದಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ನೋಡಿ ನಿಮ್ಮ ಸಹೋದ್ಯೋಗಿಗಳು ಸಹ ಸಂತೋಷ ಪಡುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನೀವು ವ್ಯಾಪಾರದಲ್ಲಿ ತೊಡಗಿದ್ದರೆ, ಶುಕ್ರ ದೇವ ನಿಮಗೆ ಉತ್ತಮ ಲಾಭವನ್ನು ಗಳಿಸಲು ಅವಕಾಶವನ್ನು ನೀಡುತ್ತಾರೆ.

ನ್ಯಾಯಾಲಯ ಪ್ರಕರಣದಲ್ಲಿ ದೀರ್ಘಕಾಲದಿಂದ ಯಾವುದೇ ವಿಷಯ ನಡೆಯುತ್ತಿದ್ದರೆ ಈ ಸಮಯದಲ್ಲಿ ಅದು ನಿಮ್ಮ ಪರವಾಗಿ ಬರುವ ಸಾಧ್ಯತೆ ಹೆಚ್ಚಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರು, ಸ್ನೇಹಿತರು ಮತ್ತು ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇದಲ್ಲದೆ ನೀವು ನಿಮ್ಮ ಹಳೆಯ ಸ್ನೇಹಿತ ರೊಬ್ಬರನ್ನು ಭೇಟಿ ಮಾಡಬಹುದು. ಇದರಿಂದಾಗಿ ನೀವಿಬ್ಬರೂ ಸಂತೋಷ ಮತ್ತು ಉತ್ಸಾಹವನ್ನು ಅನುಭವಿಸುತ್ತೀರಿ.

ಆದಾಗ್ಯೂ ಆರ್ಥಿಕ ಜೀವನವು ಸ್ವಲ್ಪ ಪ್ರತಿಕೂಲ ವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಎಲ್ಲಾ ರೀತಿಯ ವಹಿವಾಟುಗಳನ್ನು ತಪ್ಪಿಸಬೇಕು. ಪ್ರಣಯ ಮತ್ತು ಪ್ರೀತಿಗೆ ಸಮಯ ಉತ್ತಮವಾಗಿದೆ. ಏಕೆಂದರೆ ಅದರಲ್ಲಿ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಸಂಗಾತಿ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ. ನಿಮ್ಮ ಪ್ರೀತಿ ಮತ್ತು ಭಾವನೆಗಳನ್ನು ಗೌರವಿಸಿ ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ಇದರಿಂದಾಗಿ ನಿಮ್ಮ ವಿವಾಹಿತ ಜೀವನವು ಸಂತೋಷ ವಾಗಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಇನ್ನೂ ಒಬ್ಬಂಟಿಯಾಗಿ ರುವವರು ಮತ್ತು ವಿಶೇಷ ವ್ಯಕ್ತಿಗಾಗಿ ಕಾಯುತ್ತಿರುವವವರ ಆಸೆ ಈ ಸಂಚಾರದ ಸಮಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಮುಂದಿನ ಸಮಯದಲ್ಲಿ ಅವರು ನಿಮ್ಮ ಜೀವನ ಸಂಗಾತಿ ಯಾಗುವ ಸಾಧ್ಯತೆ ಇದೆ.

ಪ್ರೀತಿಯ ಸಂಬಂಧದಲ್ಲಿ ಇರುವ ಜನರಿಗೆ ಈ ಸಮಯ ಉತ್ತ್ಮವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ಸಂಬಂಧವನ್ನು ಮುಂದುವರಿಸಲು ಅವಕಾಶವನ್ನು ಪಡೆಯಬಹುದು. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿರುವ ವಿಧ್ಯಾರ್ಥಿಗಳು ಈ ಸಮಯದಲ್ಲಿ ತಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶಗಳನ್ನು ಪಡೆಯುತ್ತಾರೆ.

ಪರಿಹಾರ - ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಶ್ರೀ ಸೂಕ್ತ ವಾನ್ನು ಜಪಿಸಿ.

ಮುಂದಿನ ವಾರದ ಧನು ರಾಶಿ ಭವಿಷ್ಯ

ಶುಕ್ರ ಶಾಂತಿಗಾಗಿ ಧರಿಸಿ ಅಮೇರಿಕನ್ ಡೈಮಂಡ್

  1. ಮಕರ ರಾಶಿ

ಶುಕ್ರ ದೇವ ನಿಮ್ಮ ರಾಶಿಚಕ್ರದ ಐದನೇ ಮತ್ತು ಹತ್ತನೇ ಮನೆಯಬಾಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹತ್ತನೇ ಮನೆಗೆ ಸಾಗುತ್ತಾರೆ. ಜ್ಯೋತಿಷ್ಯದಲ್ಲಿ ಹತ್ತನೇ ಮನೆಯ ಮೂಲಕ ವೃತ್ತಿ ಜೀವನ, ತಂದೆಯ ಪರಿಸ್ಥಿತಿ, ಸ್ಥಿತಿ, ರಾಜಕೀಯ ಮತ್ತು ಜೀವನದ ಗುರಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಇದನ್ನು ಕರ್ಮದ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ಕೆಲಸದ ಸ್ಥಳದಲ್ಲಿ , ಈ ಸಮಯದಲ್ಲಿ ನೀವು ಹೆಚ್ಚು ಸಮಸೆಯಗಳನ್ನು ಅನುಭವಿಸುತ್ತೀರಿ. ಏಕೆಂದರೆ ನೀವು ಪೂರ್ಣಗೊಳಿಸುವಲ್ಲಿ ವಿಫಲರಾಗುವಂತಹ ಯಾವುದೇ ಕಾರ್ಯವನ್ನು ನಿಮಗೆ ನೀಡುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಒತ್ತಡವು ಹೆಚ್ಚಾಗುತ್ತದೆ ಮತ್ತು ಈ ಕಾರಣದಿಂದಾಗಿ ನಿಮ್ಮ ಸಹೋದ್ಯೋಗಿ ಅಥವಾ ಹಿರಿಯ ಅಧಿಕಾರಿಯೊಂದಿಗೆ ನಿಮ್ಮ ಜಗಳವಾಗುವ ಸಾಧ್ಯತೆಯೂ ಇದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಎಲ್ಲಾ ರೀತಿಯ ವಿವಾದಗಳಿಂದ ನಿಮ್ಮನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಉದ್ಯೋಗವನ್ನು ಹುಡುಕುತ್ತಿರುವ ಜನರು ಈ ಸಮಯದಲ್ಲಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮತ್ತೊಂದೆಡೆ ಪ್ರೀತಿ ಜೀವನದಲ್ಲಿ ಸಂಗಾತಿಯೊಂದಿಗೆ ಯಾವುದೇ ಕಾರಣದಿಂದಾಗಿ ವಿವಾದದ ಸಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ಸಂಬಂಧವನ್ನು ಸುಧಾರಿಸಲು ನಿಮ್ಮ ಸಂಗಾತಿಗೆ ಯಾವುದೇ ಉಡುಗೊರೆ ಅಥವಾ ಹೂವುಗಳನ್ನು ನೀಡಬಹುದು. ಸಾಧ್ಯವಾದರೆ ಎಲ್ಲಾದರೂ ಸುಂದರವಾದ ಸ್ಥಳಕ್ಕೆ ಕೊಂದಿಯ್ಯಲು ಪ್ರಯತ್ನಿಸಿ. ಏಕೆಂದರೆ ಇದರಿಂದಾಗಿ ನಿಮ್ಮ ಸಂಬಂಧವು ಬಲಗೊಳ್ಳುವ ಸಾಧ್ಯತೆ ಇದೆ ಮತ್ತು ನಿಮ್ಮಿಬ್ಬರ ನಡುವಿನ ವಿವಾದವು ಕೊನೆಗೊಳ್ಳಬಹುದು.

ಆರೋಗ್ಯದ ದೃಷ್ಟಿಯಿಂದ ಈ ಸಮಯ ಉತ್ತಮಾವಾಗಿರಲಿದೆ. ಆದ್ದರಿಂದ ಆರಂಭದಿಂದಲೇ ಈ ಸಮಯದಲ್ಲಿ ನೀವು ನಿಮ್ಮನ್ನು ಎಲ್ಲಾ ರೀತಿಯ ಒತ್ತಡಗಳಿಂದ ದೂರವಿಡಲು ಪ್ರಯತ್ನಿಸಬೇಕು.

ಪರಿಹಾರ - ಉತ್ತಮ ಗುಣಮಟ್ಟದ ಓಪಲ್ ರತ್ನವನ್ನು ಬೆಳ್ಳಿಯ ಉಂಗುರದಲ್ಲಿ ಧರಿಸುವುದು ನಿಮಗೆ ಅದೃಷ್ಟದ ಬೆಂಬಲವನ್ನು ನೀಡುತ್ತದೆ.

ಮುಂದಿನ ವಾರದ ಮಕರ ರಾಶಿ ಭವಿಷ್ಯ

  1. ಕುಂಭ ರಾಶಿ

ಶುಕ್ರ ದೇವ ಕುಂಭ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮತ್ತು ಒಂಬತ್ತನೇ ಮನೆಯ ಮಾಲೀಕ. ಆದ್ದರಿಂದ ಈ ಸಂಚಾರವು ನಿಮಗೆ ಸಾಕಷ್ಟು ಪ್ರಮುಖವಾಗಿರಲಿದೆ. ತನ್ನ ಈ ಸಂಚಾರದ ಸಮಯದಲ್ಲಿ ಶುಕ್ರ ದೇವ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಪ್ರವೇಶಿಸುತದೆ. ಜ್ಯೋತಿಷ್ಯದಲ್ಲಿ ಒಂಬತ್ತನೇ ಮನೆಯನ್ನು ಅದೃಷ್ಟದ ಮನೆಯೆಂದು ಕರೆಯಲಾಗುತದೆ. ಈ ಮನೆಯ ಮೂಲಕ ವ್ಯಕ್ತಿಯ ಅದೃಷ್ಟ, ಗುರು, ಧರ್ಮ, ಪ್ರಯಾಣ, ತೀರ್ಥ ಸ್ಥಳ, ತತ್ವಗಳ ಬಗ್ಗೆ ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಕುಂಭ ರಾಶಿಚಕ್ರದ ಸ್ಥಳೀಯರಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ.

ಸಂಚಾರದ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶಗಳನ್ನು ಪಡೆಯುವಿರಿ. ಆದ್ದರಿಂದ ಉದ್ಯೋಗವನ್ನು ಬದಲಾಯಿಸಲು ಬಯಸುತ್ತಿದ್ದರೆ, ಈ ಸಮಯ ನಿಮಗೆ ಉತ್ತಮವೆಂದು ಸಾಬೀತಾಗುತದೆ. ಇದರೊಂದಿಗೆ ಈ ಸಮಯದಲ್ಲಿ, ನೀವು ನಿಮ್ಮ ಬಯಕೆಯ ಪ್ರಕಾರ ಕೆಲಸವನ್ನು ಪೂರ್ಣಗೊಳಿಸಲು ಅವಕಾಶವನ್ನು ಪಡೆಯುತ್ತೀರಿ, ಅದನ್ನು ನೀವು ಪೂರ್ಣಗೊಳಿಸಲು ಸಹ ಸಾಧ್ಯವಾಗುತ್ತದೆ.

ಅದೇ ಸಮಯದಲ್ಲಿ ಮತ್ತೊಂದೆಡೆ, ವ್ಯಾಪಾರಸ್ಥರಿಗೆ ಶುಕ್ರ ದೇವ ಉತ್ತಮ ಅವಕಾಶಗಳನ್ನು ಒದಗಿಸುತ್ತಾರೆ. ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಮಧ್ಯೆ ಹೊಸ ದಾಖಲೆಗಳು ಮತ್ತು ಹೊಸ ಮೂಲಗಳ ಮೂಲಕ ಯಶಸ್ಸಿನ ಹೊಸ ದಿಕ್ಕನ್ನು ಖಚಿತಪಡಿಸಿಕೊಳ್ಳಲು ಸಹಾಯ ಪಡೆಯುತ್ತೀರಿ. ಉದ್ಯೋಗಿಗಳ ಬಗ್ಗೆ ಮಾತನಾಡಿದರೆ, ಕೆಲಸದ ಸ್ಥಳದಲ್ಲಿ ವರಿಷ್ಠ ಅಧಿಕಾರಿಗಳ ಮೂಲಕ ಸಹಕಾರ ಮತ್ತು ಪ್ರಶಂಸೆಯನ್ನು ನೀವು ಪಡೆಯುತ್ತೀರಿ. ಸರ್ಕಾರಿ ವಲಯದಿಂದಲೂ ಕುಂಭ ರಾಶಿಚಕ್ರದ ಸ್ಥಳೀಯರು ಉತ್ತಮ ಲಾಭವನ್ನು ಪಡೆಯುವ ಸಾಧಯ್ಟ್ ಇದೆ.

ಈ ಸಮಯದಲ್ಲಿ ನಿಮ್ಮ ಕುಟುಂಬ ಜೀವನವು ಕೂಡ ಉತ್ತಮವಾಗಿರುತ್ತದೆ. ಏಕೆಂದರೆ ಅದರಲ್ಲಿ ನಿಮ್ಮ ತಂದೆ ಅಥವಾ ತಂದೆಯಂತಹ ವಕ್ತಿಯ ಮೂಲಕ ಕಾಲಕಾಲಕ್ಕೆ ಪ್ರೋತ್ಸಾಹ ಮತ್ತು ಆರ್ಥಿಕ ಸಹಾಯ ದೊರೆಯುತ್ತದೆ. ಈ ಸಹಕಾರದಿಂದ ನೀವು ನಿರಂತರವಾಗಿ ಮುಂದುವರಿಯುತ್ತಿರಿ. ಇದಲ್ಲದೆ ನಿಮ್ಮ ತಾಯಿಯ ಕಳಪೆ ಆರೋಗ್ಯವು ಸಹ ಸುಧಾರಿಸುತ್ತದೆ ಮತ್ತು ಅವರು ನಿಮಗೆ ಆರ್ಥಿಕ ಸಹಾಯವನ್ನು ಸಹ ಮಾಡಬಹುದು. ಇದರಿಂದ ನೀವು ಯಾವುದೇ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ.

ವೈವಾಹಿಕ ಜೀವನದ ಬಗ್ಗೆ ಮಾತನಾಡಿದರೆ, ನೀವು ನಿಮ್ಮ ಸಂಗಾತಿಯಿಂದ ಎಲ್ಲ ಸಹಾಯವನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನವು ಸರಾಗವಾಗಿ ನಡೆಯುತ್ತಿರುತ್ತದೆ. ಪ್ರೀತಿ ಜೀವನಕ್ಕೆ ಈ ಸಮಯ ಉತ್ತಮವಾಗಿ ಕಂಡುಬರುತ್ತಿದೆ. ಈ ಸಮಯದಲ್ಲಿ ಧಾರ್ಮಿಕ ಚಟಿವಟಿಕೆಗಳಲ್ಲಿ ನಿಮ್ಮ ಹೆಚ್ಚಾಗಿರುತ್ತದೆ, ಆದ್ದರಿಂದ ನೀವು ಯಾವುದೇ ಧಾರ್ಮಿಕ ಅಥವಾ ತೀರ್ಥ ಯಾತ್ರೆಗೆ ಹೋಗಲು ನಿರ್ಧರಿಸುವ ಸಾಧ್ಯತೆ ಇದೆ. ಈ ಪ್ರಯಾಣದಿಂದ ನಿಮ್ಮ ಮನಸ್ಸಿನಲ್ಲಿ ಸಂತೋಷ ಮತ್ತು ಆಂತರಿಕ ತಾಜಾತನವನ್ನು ಅನುಭವಿಸುವಿರಿ.

ಪರಿಹಾರ - ಮನೆಯ ಮಹಿಳೆಯರಿಗೆ ಸುಗಂಧ ದ್ರವ್ಯ, ಹೊಸ ಬಟ್ಟೆ ಅಥವಾ ಬೆಳ್ಳಿ ಆಭರಣಗಳನ್ನು ನೀಡುವುದರಿಂದ ಕೆಲಸದ ಸ್ಥಳದಲ್ಲಿ ಪ್ರಗತಿ ಸಿಗುತ್ತದೆ.

ಮುಂದಿನ ವಾರದ ಕುಂಭ ರಾಶಿ ಭವಿಷ್ಯ

  1. ಮೀನಾ ರಾಶಿ

ಶುಕ್ರ ದೇವ ಮೀನಾ ರಾಶಿಚಕ್ರದ ಮೂರನೇ ಮತ್ತು ಎಂಟನೇ ಮನೆಯ ಮಾಲೀಕ. ಸಂಚಾರದ ಈ ಸಮಯದಲ್ಲಿ ಅವರು ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತಾರೆ. ಜ್ಯೋತಿಷ್ಯದಲ್ಲಿ ಜಾತಕದ ಆರನೇ ಮನೆಯನ್ನು ಆಯುಷ್ಯದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ಜೀವನದಲ್ಲಿ ಬರುವ ಏರಿಳಿತಗಳು, ಇದ್ದಕ್ಕಿದ್ದಂತೆ ಉಂಟಾಗುವ ಘನೆಗಳು, ವಯಸ್ಸು, ರಹಸ್ಯ, ಸಂಶೋಧನೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಮೀನಾ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಮಿಶ್ರ ಫಲಿತಾಂಶಗಳನ್ನು ನೀಡಲಿದೆ.

ಆರೋಗ್ಯದ ದೃಷ್ಟಿಯಿಂದ ಮೀನಾ ರಾಶಿಚಕ್ರದ ಸ್ಥಳೀಯರಿಗೆಈ ಸಮಯವು ಸ್ವಲ್ಪ ಕಷ್ಟವಾಗಿರುತ್ತದೆ. ಈ ಕಾರಣದಿಂದಾಗಿ ಕಳಪೆ ಆರೋಗ್ಯವು ಕೆಲಸದ ಮೇಲು ಪರಿಣಾಮ ಬೀರುತ್ತದೆ. ಇದರಿಂದಾಗಿ ಕೆಲಸದ ಸ್ಥಳದಲ್ಲಿ ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ವೈಫಲ್ಯವನ್ನು ಅನುಭವಿಸುತ್ತೀರಿ. ಇದಲ್ಲದೆ ನೀವು ನಿಮ್ಮ ವೃತ್ತಿ ಜೀವನದಲ್ಲಿ ಕೂಡ ಅಡೆತಡೆಯನ್ನು ಅನುಭವಿಸುತ್ತೀರಿ. ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ.

ವ್ಯಾಪಾರಸ್ಥರು ತಮ್ಮ ಹಿಂದಿನ ಪರಿಶ್ರಮದ ಕಾರಣದಿಂದಾಗಿ, ಈ ಸಮಯದಲ್ಲ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದಲ್ಲದೆ ಮೀನಾ ರಾಶಿಚಕ್ರದ ಸ್ಥಳೀಯರು ಪೂರ್ವಜರ ಸಂಪತ್ತಿನಿಂದ ಕೂಡ ಲಾಭವನ್ನು ಪಡೆಯಬಹುದು.

ಪ್ರೀತಿ ಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ಏಕೆಂದರೆ ಶುಕ್ರ ಸಂಚಾರದ ಸಮಯದಲ್ಲಿ ನಿಮ್ಮ ಸಂಗಾತಿ ನಿಮ್ಮ ಸಂಗಾತಿ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ. ಇದರಿಂದ ನೀವು ಸಂತೋಷಪಡುತ್ತೀರಿ ಮತ್ತು ನಿಮ್ಮ ಒತ್ತಡವು ಸಹ ದೂರವಾಗುತ್ತದೆ. ನೀವು ಇನ್ನು ಒಬ್ಬಂಟಿಯಾಗಿದ್ದರೆ, ಒಬ್ಬ ವಿಶೇಷ ವ್ಯಕ್ತಿಯನ್ನು ನೀವು ಭೇಟಿ ಮಾಡಬಹುದು

ವಿದ್ಯಾರ್ಥಿಗಳು ಈ ಸಮಯದಲ್ಲಿ ತಮ್ಮ ಅಧ್ಯಯನದ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ವಿಶೇಷವಾಗಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಸಹವಾಸವನ್ನು ಸರಿಪಡಿಸುವುದು ಮತ್ತು ಪರಿಶ್ರಮವನ್ನು ಮುಂದುವರಿಸಲು ಸಲಹೆ ನೀಡಲಾಗಿದೆ. ಇಲ್ಲದಿದ್ದರೆ, ಅಧ್ಯಯನದಲ್ಲಿ ಅಡೆತಡೆ ಉಂಟಾಗುವುದರಿಂದ ನೀವು ತೊಂದರೆಕ್ಕೊಳಗಾಗಬಹುದು.

ಪರಿಹಾರ - ನಿರ್ಗತಿಕ ಮತ್ತು ಅಗತ್ಯವಿರುವ ಬಡವರಿಗೆ ಸೋಮವಾರ ಮತ್ತು ಶುಕ್ರವಾರದಂದು ಹಾಲು ವಿತರಿಸಿ.

ಮುಂದಿನ ವಾರದ ಮೀನಾ ರಾಶಿ ಭವಿಷ್ಯ

ರತ್ನದ ಕಲ್ಲು ಇತ್ಯಾದಿಗಳಂತಹ ಜ್ಯೋತಿಷ್ಯ ಪರಿಹಾರಗಳಿಗೆ ಆಸ್ಟ್ರೋಸೇಜ್ ಆನ್ಲೈನ್ ಸ್ಟೋರ್ ಅನ್ನು ಸಂಪರ್ಕಿಸಿ

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer