ಗೋವರ್ಧನ ಪೂಜೆ 2021 (5th November)
ಅನೇಕ ಕಡೆ ದೀಪಾವಳಿ ಹಬ್ಬವನ್ನು 5 ದಿನಗಳ ವರೆಗೆ ಆಚರಿಸಲಾಗುತ್ತದೆ. ಅಂತಹ ಸನ್ನಿವೇಶದಲ್ಲಿ ದೀಪಾವಳಿಯ ನಾಲ್ಕನೇ ದಿನವನ್ನು ಗೋವರ್ಧನ ಪೂಜೆಗಾಗಿ ನಿರ್ಧರಿಸಲಾಗಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪಾದ ತಿಥಿಯಂದು ಗೋವರ್ಧನ ಪೂಜಾ ಹಬ್ಬವನ್ನು ಆಚರಿಸಲಾಗುತ್ತದೆ. ಅನೇಕ ಸ್ಥಳಗಳಲ್ಲಿ ಈ ದಿನದಂದು ಅನ್ನಕೂಟ ಪೂಜೆ ಮತ್ತು ಬಲಿ ಪೂಜೆಯನ್ನು ಸಹ ಮಾಡಲಾಗುತ್ತದೆ. ದೀಪಾವಳಿಯ ಮರುದಿನ ಆಚರಿಸಲಾಗುವ ಗೋವರ್ಧನ ಪೂಜೆಯ ಹಬ್ಬವು ಪ್ರಕೃತಿ ಮತ್ತು ಮಾನವ ಜೀವನದ ನಡುವೆ ನೇರ ಮತ್ತು ಸ್ಪಷ್ಟವಾದ ಸಂಬಂಧವನ್ನು ಸ್ಥಾಪಿಸುತ್ತದೆ
ಗೋವರ್ಧನ ಪೂಜೆಯ ದಿನದಂದು ಹಸುವನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಹಸುವು ತಾಯಿಯ ಸ್ಥಾನವನ್ನು ಪಡೆದಿದೆ ಮತ್ತು ಶಾಸ್ತ್ರಗಳಲ್ಲಿ ತಾಯಿ ಗಂಗೆಯ ನಿರ್ಮಲ ನೀರಿನಂತೆ ಪವಿತ್ರ ಮತ್ತು ಶುದ್ಧವಾಗಿದೆ ಎಂದು ಹಸುವಿನ ಬಗ್ಗೆ ಉಲ್ಲೇಖಿಸಲಾಗಿದೆ. ಗೋವರ್ಧನ ಪೂಜೆಯ ಹಬ್ಬವನ್ನು ದೀಪಾವಳಿಯ ಮರುದಿನ ಆಚರಿಸಲಾಗುತ್ತದೆ ಆದರೆ ಕೆಲವೊಮ್ಮೆ ಈ ಎರಡು ಹಬ್ಬಗಳ ನಡುವೆ ಒಂದು ದಿನದ ಅಂತರವಿರುತ್ತದೆ.
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ಗೋವರ್ಧನ ಪೂಜೆ ಶುಭ ಮುಹೂರ್ತ 2021
ಸರ್ವ ಪ್ರಥಮವಾಗಿ ಈ ವರ್ಷ ಗೋವರ್ಧನ ಪೂಜೆಯನ್ನು ಮಾಡಲು ಶುಭ ಮುಹೂರ್ತ ಯಾವುದೇ ಎಂದು ತಿಳಿಯೋಣ.
5 ನವೆಂಬರ್ , 2021 (ಶುಕ್ರವಾರ)
ಗೋವರ್ಧನ ಪೂಜೆ ಮುಹೂರ್ತ
ಗೋವರ್ಧನ ಪೂಜೆ ಬೆಳಿಗ್ಗೆ ಮುಹೂರ್ತ:06:35:38 ರಿಂದ 08:47:12 ವರೆಗೆ
ಅವಧಿ :2 ಗಂಟೆ 11 ನಿಮಿಷ
ಗೋವರ್ಧನ ಪೂಜೆ ಸಾಯಂಕಾಲ ಮುಹೂರ್ತ :15:21:53 ರಿಂದ 17:33:27 ವರೆಗೆ
ಅವಧಿ :2 ಗಂಟೆ 11 ನಿಮಿಷ
ಮಾಹಿತಿ : ಮೇಲೆ ನೀಡಿರುವ ಮುಹೂರ್ತವು ದೆಹಲಿಗೆ ಮಾನ್ಯವಾಗಿದೆ. ನಿಮ್ಮ ನಗರಕ್ಕೆ ಅನುಗುಣವಾಗಿ ಗೋವರ್ಧನ ಪೂಜೆಯ ಮಂಗಳಕರ ಸಮಯವನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ಇಲ್ಲಿ ಕ್ಲಿಕ್ ಮಾಡಬಹುದು
ಗೋವರ್ಧನ ಪೂಜೆ ಮಹತ್ವ
ಗೋವರ್ಧನ ಪರ್ವತವು ಬೃಜ ಪ್ರದೇಶದಲ್ಲಿ ಒಂದು ಸಣ್ಣ ಬೆಟ್ಟದ ರೂಪದಲ್ಲಿದೆ ಆದರೂ ಇದನ್ನು ಪರ್ವತಗಳ ರಾಜ ಎಂದು ಹೇಳಲಾಗುತ್ತದೆ. ಶ್ರೀಕೃಷ್ಣನ ಕಾಲದ ಏಕೈಕ ಶಾಶ್ವತ ಮತ್ತು ಸ್ಥಿರವಾದ ಅವಶೇಷ ಇದಕ್ಕೆ ಕಾರಣವಾಗಿದೆ. ಇದರ ಹೊರತಾಗಿ ಗೋವರ್ಧನನನ್ನು ಶ್ರೀ ಕೃಷ್ಣ ದೇವರ ಸ್ವರೂಪವೆಂದು ಸಹ ಪರಿಗಣಿಸಲಾಗಿದೆ ಮತ್ತು ಈ ರೂಪದಲ್ಲಿ ಗೋವರ್ಧನ ಪೂಜೆಯ ದಿನದಂದು ಅವರನ್ನು ಪೂಜಿಸಲಾಗುತ್ತದೆ. ಗರ್ಗ ಸಂಹಿತೆಯಲ್ಲಿ ಗೋವರ್ಧನ ಪ್ರಾಮುಖ್ಯತೆಯನ್ನು ಚಿತ್ರಿಸುತ್ತಿರುವ ಸಾಲಿನ ಪ್ರಕಾರ, “ ಗೋವರ್ಧನನು ಪರ್ವತಗಳ ರಾಜ ಮತ್ತು ಹರಿ ದೇವರಿಗೆ ಪ್ರಿಯ. ಭೂಮಿ ಮತ್ತು ಸ್ವರ್ಗದಲ್ಲಿ ಅದರಂತಹ ಯಾವುದೇ ತೀರ್ಥ ಯಾತ್ರೆ ಇನ್ನೊಂದಿಲ್ಲ. “
ಬೃಹತ್ ಕುಂಡಲಿ: ನಿಮ್ಮ ಜೀವನದ ಮೇಲೆ ಗ್ರಹಗಳ ಪರಿಣಾಮ ಮತ್ತು ಪರಿಹಾರವನ್ನು ತಿಳಿಯಿರಿ
ಗೋವರ್ಧನ ಪೂಜಾ ವಿಧಾನ
ನಡೆಯಿರಿ ಮುಂದುವರಿಯೋಣ ಮತ್ತು ಗೋವರ್ಧನ ಪೂಜೆಯ ಸರಿಯಾದ ವಿಧಾನ ಯಾವುದು ಮತ್ತು ಅದನ್ನು ಅಳವಡಿಸಿಕೊಳ್ಳುವ ಮೂಲಕ ಈ ದಿನದ ಪ್ರಯೋಜನವನ್ನು ಹೇಗೆ ತಿಳಿಯುವುದು ಎಂದು ತಿಳಿಯೋಣ.
- ಮೊದಲ ಮತ್ತು ಪ್ರಮುಖವಾದ ವಿಶೇಷವೆಂದರೆ ಗೋವರ್ಧನ ಪೂಜೆಯನ್ನು ಬೆಳಿಗ್ಗೆ ಅಥವಾ ಸಾಯಂಕಾಲ ಮಾಡಲಾಗುತ್ತದೆ.
- ಈ ದಿನದಂದು ಗೋವಿನ ಸಗಣಿಯಿಂದ ಗೋವರ್ಧನವನ್ನು ತಯಾರಿಸಿ ಹೂವುಗಳಿಂದ ಅಲಂಕಿರಿಸಲಾಗುತ್ತದೆ
- ಪೂಜೆಯಲ್ಲಿ ದೀಪ, ಹಣ್ಣು, ನೀರು, ಕಡ್ಡಿ ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ.
- ಇದರ ಹೊರತಾಗಿ ಈ ದಿನದಂದು ಹಸು, ಗೂಳಿ ಮತ್ತು ಕೃಷಿ ಕೆಲಸದಲ್ಲಿ ಬಳಸಲಾಗುವ ಪ್ರಾಣಿಗಳನ್ನು ಪೂಜಿಸಲಾಗುತ್ತದೆ.
- ಈ ದಿನದಂದು ಗೋವರ್ಧನ ದೇವರನ್ನು ಮಲಗಿರುವ ಪುರುಷನಂತೆ ಸಗಣಿಯಲ್ಲಿ ತಯಾರಿಸಲಾಗುತ್ತದೆ. ಇದರ ಹೊಕ್ಕುಳದ ಸ್ಥಳದಲ್ಲಿ ಮಣ್ಣಿನ ದೇಪವನ್ನು ಬೆಳಗಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ದೀಪದಲ್ಲಿ ಮೊಸರು, ಹಾಲು, ಗಂಗಾಜಲ, ಜೇನುತುಪ್ಪ, ಸಕ್ಕರೆಕಲ್ಲು ಇತ್ಯಾದಿಯನ್ನು ಅರ್ಪಿಸಲಾಗುತ್ತದೆ ಮತ್ತು ಪೂಜೆಯ ನಂತರ ಇದನ್ನು ಪ್ರಸಾದವಾಗಿ ಎಲ್ಲರಿಗೂ ಹಂಚಲಾಗುತ್ತದೆ.
- ಪೂಜೆಯ ನಂತರ ಗೋವರ್ಧನ ದೇವರನ್ನು ಏಳು ಬಾರಿ ಪ್ರದಕ್ಷಿಣೆ ಮಾಡಲಾಗುತ್ತದೆ ಮತ್ತು ಈ ಸಮಯದಲ್ಲಿ ಗೋವರ್ಧನ ದೇವರ ಜೈ ಎಂದು ಹೇಳಲಾಗುತ್ತದೆ.
- ಪ್ರದಕ್ಷಿಣೆ ಮಾಡುವಾಗ ನೀರಿನಿಂದ ತುಂಬಿರುವ ಲೋಟವನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು ಮತ್ತು ಈ ನೀರನ್ನು ಸುರಿದು ಬಿತ್ತನೆಯ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲಾಗುತ್ತದೆ.
ಗೋವರ್ಧನ ಪೂಜೆ ಮಾಡುವುದರಿಂದ ವ್ಯಕ್ತಿಯು ಮನೆಯಲ್ಲಿ ಹಣಕಾಸಿನ ವೃದ್ಧಿ ಮತ್ತು ಮಕ್ಕಳನ್ನು ಪಡೆಯುತ್ತಾರೆ. ಗೋವರ್ಧನ ಪೂಜೆಯ ದಿನದಂದು ವಿಶ್ವಕರ್ಮ ದೇವರನ್ನು ಸಹ ಪೂಜಿಸಲಾಗುತ್ತದೆ. ಅನೇಕ ಜನರು ಈ ದಿನದಂದು ಕಾರ್ಖಾನೆಗಳು ಮತ್ತು ಯಂತ್ರಗಳನ್ನು ಸಹ ಪೂಜಿಸುತ್ತಾರೆ.
ಈ ದಿನ ಸಾಯಂಕಾಲ ದೈತ್ಯರಾಜ ಬಲಿಯನ್ನು ಸಹ ಪೂಜಿಸಲಾಗುತ್ತದೆ.
ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್
ಶ್ರೀ ಕೃಷ್ಣ ದೇವರ ಆಶೀರ್ವಾದವನ್ನು ಪಡೆಯಲು ರಾಶಿಚಕ್ರದ ಪ್ರಕಾರ ಪರಿಹಾರ
ಮೇಷ ರಾಶಿ : ಮೇಷ ರಾಶಿಚಕ್ರದ ಜನರು ಶ್ರೀ ಕೃಷ್ಣ ದೇವರ ಗೋವರ್ಧನ ಪರ್ವತವನ್ನು ಎತ್ತಿಕೊಂಡಿರುವ ರೂಪವನು ಪೂಜಿಸಬೇಕು ಮತ್ತು ಅವರಿಗೆ ಹಳದಿ ಹೂವುಗಳನ್ನು ಅರ್ಪಿಸಬೇಕು.
ವೃಷಭ ರಾಶಿ : ವೃಷಭ ರಾಶಿಚಕ್ರದ ಜನರು ಬಿಳಿ ಹೂವುಗಳನ್ನು ಮತ್ತು ಬೆಳ್ಳಿ ಕೊಳಲನ್ನು ಅರ್ಪಿಸಬೇಕು.
ಮಿಥುನ ರಾಶಿ : ಮಿಥುನ ರಾಶಿಚಕ್ರದ ಜನರು ಶ್ರೀ ಕೃಷ್ಣ ದೇವರಿಗೆ ಹಸಿರು ಬಣ್ನದ ಬಟ್ಟೆಗಳನ್ನು ಹಾಕಬೇಕು ಮತ್ತು ರಾಧಾಕೃಷ್ಣನನ್ನು ಆರಾಧಿಸಬೇಕು.
ಕರ್ಕಾಟಕ ರಾಶಿ : ಕರ್ಕ ರಾಶಿಚಕ್ರದ ಜನರು ಶ್ರೀ ಕೃಷ್ಣ ದೇವರಿಗೆ ಹಾಲನ್ನು ಅರ್ಪಿಸಬೇಕು ಮತ್ತು ಓಂ ಕ್ಲಿಂ ಕೃಷ್ಣಾಯ್ ನಮಃ ಮಂತ್ರವನ್ನು ಜಪಿಸಬೇಕು.
ಸಿಂಹ ರಾಶಿ : ಸಿಂಹ ರಾಶಿಚಕ್ರದ ಜನರು ಕೆಂಪು ಹೂವುಗಳಿಂದ ಶ್ರೀ ಕೃಷ್ಣ ದೇವರನ್ನು ಪೂಜಿಸಬೇಕು ಮತ್ತು ಶ್ರೀ ಕೃಷ್ಣ ದೇವರ ಯೋಗಿರಾಜ ಸ್ವರೂಪವನ್ನು ಧ್ಯಾನಿಸಬೇಕು.
ಕನ್ಯಾ ರಾಶಿ : ಕನ್ಯಾ ರಾಶಿಚಕ್ರದ ಜನರು ಶ್ರೀ ಕೃಷ್ಣ ದೇವರೊಂದಿಗೆ ರಾಧಾ ರಾಣಿಯನ್ನು ಸಹ ಪೂಜಿಸಬೇಕು ಮತ್ತು ಹಸುವಿಗೆ ಆಹಾರವನ್ನು ನೀಡಬೇಕು.
ತುಲಾ ರಾಶಿ : ತುಲಾ ರಾಶಿಚಕ್ರದ ಜನರು ಬೆಳ್ಳಿ ಚಮಚ ಮತ್ತು ಬಟ್ಟಲಿನಿಂದ ಶ್ರೀ ಕೃಷ್ಣ ದೇವರಿಗೆ ಪಾಯಸವನ್ನು ಅರ್ಪಿಸಬೇಕು.
ವೃಶ್ಚಿಕ ರಾಶಿ - ವೃಶ್ಚಿಕ ರಾಶಿಚಕ್ರದ ಜನರು ಕೃಷ್ಣ ದೇವರ ಬಾಲ ಸ್ವರೂಪವನ್ನು ಪೂಜಿಸಬೇಕು ಮತ್ತು ದೇವರಿಗೆ ಐವತ್ತಾರು ಆಹಾರವನ್ನು ಅರ್ಪಿಸಬೇಕು.
ಧನು ರಾಶಿ : ಧನು ರಾಶಿಚಕ್ರದ ಜನರು ವಿಷ್ಣು ದೇವರನ್ನು ಪೂಜಿಸಬೇಕು ಮತ್ತು ಅವರ ಕೃಷ್ಣನ ಗೋವರ್ಧನ ಸ್ವರೂಪವನ್ನು ಪೂಜಿಸಬೇಕು.
ಮಕರ ರಾಶಿ - ಮಕರ ರಾಶಿಚಕ್ರದ ಜನರು ಕೃಷ್ಣ ದೇವರಿಗೆ ನೀಲಿ ಬಣ್ಣದ ಹೂವುಗಳು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಹಾಕಿ ಅವರನ್ನು ಪೂಜಿಸಬೇಕು.
ಕುಂಭ ರಾಶಿ : ಕುಂಭ ರಾಶಿಚಕ್ರದ ಜನರು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ, ಭಗವಂತನಿಗೆ ನವಿಲು ಗರಿಗಳನ್ನು ಅರ್ಪಿಸಬೇಕು.
ಮೀನ ರಾಶಿ : ಮೀನ ರಾಶಿಚಕ್ರದ ಜನರು ಶ್ರೀ ಕೃಷ್ಣ ದೇವರ ಮೂಲ ಮಂತ್ರವನ್ನು ಜಪಿಸಬೇಕು ಮತ್ತು ಅವರೊಂದಿಗೆ ರಾಧಾ ರಾಣಿ ಮತ್ತು ಬಲರಾಮರನ್ನು ಸಹ ಪೂಜಿಸಬೇಕು.
ಗೋವರ್ಧನ ಪೂಜೆ ಉಪವಾಸದ ಕಥೆ
ವಿಷ್ಣು ಪುರಾಣದಲ್ಲಿ ಗೋವರ್ಧನ ಪೂಜೆಯ ಪ್ರಾಮುಖ್ಯತೆಯನ್ನು ಉಲ್ಲೇಖಿಸಲಾಗಿದೆ. ಇಂದು ಕಾಲದಲ್ಲಿ ದೇವರಾಜ ಇಂದ್ರನು ತನ್ನ ಶಕ್ತಿಯ ಬಗ್ಗೆ ಹೆಚ್ಚು ಹೆಮ್ಮೆ ಪಡುತ್ತಿದ್ದ ಎಂದು ಹೇಳಾಗುತ್ತದೆ. ಆಗ ಶ್ರೀ ಕೃಷ್ಣ ದೇವರು ಇಂದ್ರ ದೇವನ ಅಹಂಕಾರವನ್ನು ತೊಡೆದುಹಾಕಲು ಒಂದು ಲೀಲೆಯನ್ನು ರಚಿಸಿದರು. ಒಂದಾನೊಂದು ಕಾಲದಲ್ಲಿ ಗೋಕುಲದಲ್ಲಿ ಜನರು ವಿವಿಧ ರೀತಿಯ ಭಾಖ್ಯಗಳನ್ನು ತಯಾರಿಸುತ್ತಿದ್ದರು ಮತ್ತು ಸಂತಿಷವನ್ನು ಆಚರಿಸುತ್ತಿದ್ದರು. ಆಗ ಬಾಲ ಕೃಷ್ಣ ತಾಯಿ ಯಶೋಧೆಯನ್ನು ಇದೆಲ್ಲ ಏನಾಗುತ್ತಿದೆ ಮತ್ತು ಜನರು ಯಾವ ಹಬ್ಬಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂದು ಕೇಳಿದರು.
ಇದರ ನಂತರ ಬಾಲ ಕೃಷ್ಣನು, ನಾವು ಇಂದ್ರ ದೇವರನ್ನು ಏಕೆ ಪೂಜಿಸುತ್ತೇವೆ ಎಂದು ತಾಯಿ ಯಶೋದೆಯನ್ನು ಕೇಳಿದನು. ಇಂದ್ರ ದೇವರ ಕೃಪತೆಯಿಂದ ಮಳೆಯಾಗುತ್ತದೆ, ಇದರಿಂದ ಬೆಳೆ ಚೆನ್ನಾಗಿ ಬರುತ್ತದೆ ಮತ್ತು ನಮ್ಮ ಹಸುಗಳಿಗೆ ಮೇವು ಅಂದರೆ ಆಹಾರ ಸಿಗುತ್ತದೆ ಎಂದು ತಾಯಿ ಯಶೋದೆ ಹೇಳಿದರು. ತಾಯಿ ಯಶೋದೆಯ ಈ ಮಾತನ್ನು ಕೇಳಿದ ತಕ್ಷಣ ಶ್ರೀ ಕೃಷ್ಣ ಹೇಳಿದರು, ಹೀಗಾದರೆ ನಾವು ಗೋವರ್ಧನ ಪರ್ವತವನ್ನು ಪೂಜಿಸಬೇಕು, ಏಕೆಂದರೆ ನಮ್ಮ ಹಸುಗಳು ಗೋವರ್ಧನ ಪರ್ವತದಿಂದ ಮೇವು ತಿನ್ನುತ್ತವೆ, ಇದರಿಂದ ಅವುಗಳ ಹೊಟ್ಟೆ ತುಂಬುತ್ತದೆ ಮತ್ತು ಗೋವರ್ಧನ ಪರ್ವತದಲ್ಲಿರುವ ಮರಗಳಿಂದ ಮಳೆಯಾಗುತ್ತದೆ ಎಂದು ಹೇಳಿದರು.
ಶ್ರೀ ಕೃಷ್ಣನ ಈ ಮಾತನ್ನು ಕೇಳಿದ ನಂತರ ಎಲ್ಲಾ ಜನರು ಅಂದಿನಿಂದ ಗೋವರ್ಧನ ಪರ್ವತವನ್ನು ಪೂಜಿಸಲು ಆರಂಭಿಸಿದರು. ಇದನ್ನು ನೋಡಿ ಇಂದ್ರ ದೇವರು ತುಂಬಾ ಕೋಪಗೊಂಡು ಸೇಡು ತೀರಿಸಿಕೊಳ್ಳಲು ಗೋಕುಲದಲ್ಲಿ ಮಳೆಯನ್ನು ಆರಂಭಿಸಿದನು. ಜೋರಾಗಿ ಬೀಳುತ್ತಿರುವ ಮಳೆಯನ್ನು ನೋಡಿ ಗೋಕುಲದ ಪ್ರತಿಯೊಬ್ಬ ನಿವಾಸಿಗಳು, ಜೀವಿಗಳು ಮತ್ತು ಪ್ರಾಣಿಗಳು ಭಯಭೀತರಾದರು. ಶ್ರೀ ಕೃಷ್ಣ ದೇವರು ಗೋಕುಲ ನಿವಾಸಿಗಳನ್ನು ಮತ್ತು ಅವರ ಪ್ರಾಣಿಗಳನ್ನು, ಪಕ್ಷಿಗಳನ್ನು ಧಾರಾಕಾರ ಮಳೆಯ ಕೋಪದಿಂದ ತಪ್ಪಿಸಲು ಗೋವರ್ಧನ ಪರ್ವತವನ್ನು ತನ್ನ ಚಿಕ್ಕ ಬೆರಳಿನಲ್ಲಿ ಎತ್ತಿದರು ಮತ್ತು ಎಲ್ಲಾ ಹಳ್ಳಿಗರನ್ನು ಪರ್ವತದ ಕೆಳಗೆ ಬರಲು ಹೇಳಿದರು.
ಇದನ್ನು ನೋಡಿದ ಇಂದ್ರ ದೇವನಿಗೆ ಇನ್ನಷ್ಟು ಕೋಪ ಬಂದು, ಮಳೆಯನ್ನೂ ಇನ್ನಷ್ಟು ತೀವ್ರಗೊಳಿಸಿದನು. ಈ ಮಳೆಯು 7 ದಿನಗಳ ವರೆಗೆ ಸುರಿದರೂ ಒಬ್ಬ ಗೋಕುಲ ನಿವಾಸಿಗೂ ಯಾವುದೇ ತೊಂದರೆ ಅತಃವ ನಷ್ಟವಾಗಲಿಲ್ಲ. ಆಗ ತನ್ನೊಂದಿಗೆ ಸ್ಪರ್ಧಿಸಬಲ್ಲ ಈ ಮಗು ಸಾಮಾನ್ಯ ವ್ಯಕ್ತಿಯಲ್ಲ ಎಂದು ಅರಿವಾಯಿತು. ಇದರ ನಂತರ ತನ್ನೊಂದಿಗೆ ಹೋರಾಡುತ್ತಿರುವ ಈ ಮಾತು ಬೇರಾರೂ ಅಲ್ಲ ಸ್ವಯಂ ಶ್ರೀ ಕೃಷ್ಣ ಎಂದು ತಿಳಿದಾಗ, ಕ್ಷಮೆಯಾಚಿಸಿ ಅವರನ್ನು ಪೂಜಿಸಿ ಅವರಿಗೆ ಪ್ರಸಾದವನ್ನು ಅರ್ಪಿಸಿದನು. ಈ ಘಟನೆಯ ನಂತರದಿಂದ ಗೋವರ್ಧನ ಪರ್ವತವನ್ನು ಪೂಜಿಸುವ ಸಂಪ್ರದಾಯ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.
- ಗೋವರ್ಧನ ಪರ್ವತ ಉತ್ತರ ಪ್ರದೇಶದ ಮಥುರ ಜಿಲ್ಲೆಯಲ್ಲಿದೆ. ಗೋವರ್ಧನ ಪೂಜೆಯಂದು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರು ಇಲ್ಲಿಗೆ ಸೇರುತ್ತಾರೆ ಮತ್ತು ಗೋವರ್ಧನ ಪರ್ವತದ ಪ್ರದಕ್ಷಿಣೆ ಮಾಡುತ್ತಾರೆ.
ಗುಜರಾತು ಹೊಸ ವರ್ಷ ತಿಥಿ ಮತ್ತು ಈ ದಿನದ ಪ್ರಾಮುಖ್ಯತೆ
ಗುಜರಾತಿ ಸಮುದಾಯದ ಜನರು ಸಹ ತನ್ನದೇ ಆದ ಹೊಸ ವರ್ಷವನ್ನು ಆಚರಿಸುತ್ತಾರೆ. ಗುಜರಾತಿ ಜನರ ಈ ಹೊಸ ವರ್ಷವೂ ಅನ್ನಕೂಟ ಪೂಜೆಯ ದಿನದಂದು ಆರಂಭಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ವರ್ಷ ಕೂಡ ಗುಜರಾತಿ ಹಸ ವರ್ಷವು 5 ನವೆಂಬರ್ 2021 ಶುಕ್ರವಾರದಂದು ಆರಂಭವಾಗುತ್ತದೆ. ಈ ದಿನ ಗುಜರಾತಿ ಸಮುದಾಯದ ಜನರು ತಾಯಿ ಲಕ್ಷ್ಮಿಯನ್ನು ಪೂಜಿಸುತ್ತಾರೆ, ಅನೇಕ ಸ್ಥಳಗಳಲ್ಲಿ ಇದನ್ನು ಚೋಪಡಾ ಪೂಜೆಯ ಹೆಸರಿಂದಲೂ ಪರಿಗಣಿಸಲಾಗಿಯೇ.
ಗುಜರಾತಿ ಹೊಸ ವರ್ಷ 5 ನವೆಂಬರ್ 2021, ದಿನ - ಶುಕ್ರವಾರ
ಪ್ರತಿಪದಾ ತಿಥಿ ಆರಂಭ 4 ನವೆಂಬರ್ 2021 ರಂದು ರಾತ್ರಿ 02 ಗಂಟೆ 48 ನಿಮಿಷದಿಂದ
ಪ್ರತಿಪದಾ ತಿಥಿ ಅಂತ್ಯ 5 ನವೆಂಬರ್ 2021 ರಂದು ರಾತ್ರಿ 11 ಗಂಟೆ 17 ನಿಮಿಷದ ವರೆಗೆ
ಗುಜರಾತಿ ಹೊಸ ವರ್ಷದ ಮಹತ್ವ ಮತ್ತು ಈ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಗುಜರಾತಿ ಸಮುದಾದ ಜನರಿಗೆ ಗುಜರಾತಿ ಹೊಸ ವರ್ಷವನ್ನು ತುಂಬಾ ದೊಡ್ಡ ಹಬ್ಬವೆಂದು ಪರಿಗಣಿಸಲಾಗಿದೆ. ಈ ದಿನದಂದು ಗುಜರಾತಿ ಜನರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಾರೆ ಮತ್ತು ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಈ ದಿನವನ್ನು ಸಂತೋಷದಿಂದ ಆಚರಿಸುತ್ತಾರೆ. ದೀಪಾವಳಿಯಂತೆ ಈ ದಿನವು ಸಹ ಮನೆಗಳನ್ನು ಅಲಂಕರಿಸಲಾಗುತ್ತದೆ ಮತ್ತು ಪಟಾಕಿಗಳನ್ನು ಹೊಡೆಯಲಾಗುತ್ತದೆ. ಇದರ ಹೊರತಾಗಿ ಈ ದಿನದಂದು ಮನೆಯಲ್ಲಿ ರುಚಿಕರ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ ಇದನ್ನು ಜನರು ತಮ್ಮ ಕುಟುಂಬದೊಂದಿಗೆ ಆನಂದಿಸುತ್ತಾರೆ.
ಗುಜರಾತಿ ಸಮುದಾಯದ ಜನರಿಗೆ ದೀಪಾವಳಿ ವರ್ಷದ ಕೊನೆಯ ದಿನವಾಗಿದೆ ಮತ್ತು ಅದರ ಮರುದಿನ ಹೊಸ ವರ್ಷ ಆರಂಭವಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಶುಕ್ಲಪಕ್ಷದ ಪ್ರತಿಪದಾ ತಿಥಿ ಗುಜರಾತಿ ಹೊಸ ವರ್ಷದ ಸಂಕೇತವಾಗಿದೆ. ಇದರ ಹೊರತಾಗಿ ಕಾರ್ತಿಕ ಮಾಸವು ವರ್ಷದ ಮೊದಲ ತಿಂಗಳು ಮತ್ತು ಈ ದಿನ ಗುಜರಾತಿ ಹೊಸ ವರ್ಷದ ಮೊದಲ ದಿನ. ಈ ಕಾರಣದಿಂದಾಗಿ ಈ ದಿನವನ್ನು ಆರ್ಥಿಕ ಹೊಸ ವರ್ಷದ ಆರಂಭವಾಗಿ ಪರಿಗಣಿಸಲಾಗಿದೆ.
ಗೋವರ್ಧನ ಪೂಜೆಯ ಆಚರಣೆಗಳು
ಗೋವರ್ಧನ ಪೂಜೆಯ ಸಂದರ್ಭದಲ್ಲಿ ದೇಶಾದ್ಯಂತ ದೇವಸ್ಥಾನಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಮತ್ತು ಅನ್ನಕೂಟ ಅಂದರೆ ಮೇಲಿಗೆಗಳನ್ನು ಆಯೋಜಿಸಲಾಗುತ್ತದೆ. ಈ ದಿನದ ಪೂಜೆಯ ನಂತರ ಜನರಲ್ಲಿ ಆಹಾರವನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ
ಗೋವರ್ಧನ ಪೂಜೆಯ ದಿನ ಅನ್ನಕೂಟ ಹಬ್ಬ
ಸರಳ ಪದಗಳಲ್ಲಿ ಅನ್ನಕೂಟ ಅಂದರೆ ವಿವಿಧ ರೀತಿಯ ಆಹಾರ ಧಾನ್ಯಗಳು, ಈ ದಿನ ಶ್ರೀ ಕೃಷ್ಣ ದೇವರಿಗೆ ಪ್ರಸಾದವಾಗಿ ಅರ್ಪಿಸಲಾಗುತ್ತದೆ. ಹಲವೆಡೆ ಈ ದಿನದಂದು ಪೂರಿ ಮತ್ತು ಸಜ್ಜೆ ಪೊಂಗಲ್ ಅನ್ನು ತಯಾರಿಸಲಾಗುತ್ತದೆ. ಅನ್ನಕೂಟವನ್ನು ಹೊರತುಪಡಿಸಿ ಹಾಲಿನಿಂದ ತಯಾರಿಸಿದ ಸಿಹಿತಿಂಡಿಗಳನ್ನು ಸಹ ಶ್ರೀ ಕೃಷ್ಣ ದೇವರಿಗೆ ಅರ್ಪಿಸಲಾಗುತ್ತದೆ ಮತ್ತು ಪೂಜೆಯ ನಂತರ ಇದನ್ನು ಪ್ರಸಾದವಾಗಿ ಜನರಲ್ಲಿ ವಿತರಿಸಲಾಗುತ್ತದೆ.
ಮಕ್ಕಳನ್ನು ಪಡೆಯಲು ಗೋವರ್ಧನ ಪೂಜೆ
ಮಕ್ಕಳನ್ನು ಪಡೆಯಲು ಸಹ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನದಂದು ಮೊದಲು ಹಾಲು, ಮೊಸರು, ಸಕ್ಕರೆ, ಜೇನುತುಪ್ಪವನ್ನು ಸೇರಿಸಿ ಪಂಚಾಮೃತವನ್ನು ತಯಾರಿಸಿ. ಇದರ ನಂತರ ಇದರಲ್ಲಿ ಗಂಗಾಜಲ ಮತ್ತು ತುಳಸಿಯನ್ನು ಸೇರಿಸಿ. ತಯಾರಿಸಲಾಗಿರುವ ಈ ಪಂಚಾಮೃತವನ್ನು ಶಂಖದಲ್ಲಿ ತುಂಬಿಸಿ ಅದನ್ನು ಶ್ರೀ ಕೃಷ್ಣ ದೇವರಿಗೆ ಅರ್ಪಿಸಿ. ಪೂಜೆಯ ನಂತ್ರ ಈ ಪಂಚಾಮೃತವನ್ನು ಪ್ರಸಾದವಾಗಿ ತೆಗೆದುಕೊಳ್ಳಿ. ಇದನ್ನು ಮಾಡುವುದರಿಂದ ವ್ಯಕ್ತಿಯ ಮಕ್ಕಳನ್ನು ಪಡೆಯುವ ಬಯಕೆಯು ಖಂಡಿತವಾಗಿಯೂ ಈಡೇರುತ್ತದೆ ಎಂದು ಹೇಳಲಾಗುತ್ತದೆ.
ಆರ್ಥಿಕ ಸಮೃದ್ಧಿಗಾಗಿ ಗೋವರ್ಧನ ಪೂಜೆಯನ್ನು ಹೇಗೆ ಮಾಡಬೇಕು?
ಇದರ ಹೊರತಾಗಿ ಆರ್ಥಿಕ ಸಮೃದ್ಧಿ ಮತ್ತು ತನ್ನ ಜೀವನದಲ್ಲಿ ಸಂತೋಷಕ್ಕಾಗಿ ಜನರು ಗೋವರ್ಧನ ಪೂಜೆಯನ್ನು ಮಾಡಬೇಕಾಗುತ್ತದೆ, ಈ ದಿನದಂದು ಅವರು ಎಲ್ಲರಿಗಿಂತ ಮೊದಲ ಎದ್ದು ಹಸುವಿಗೆ ಸ್ನಾನ ಮಾಡಿಸಿ, ಅದಕ್ಕೆ ತಿಲಕ ಹಚಿಸುವ ವಿಧಾನವನ್ನು ಹೇಳಲಾಗಿದೆ. ಇದರ ನಂತರ ಹಸುವಿಗೆ ಮೇವು ಮತ್ತು ಏಳು ಬಾರಿ ಹಸುವಿನ ಪ್ರದಕ್ಷಿಣೆ ಮಾಡಬೇಕು. ಹಸುವಿನ ಬಳಿಯ ಮಣ್ಣನ್ನು ಒಂದು ಗಾಜಿನ ಬಾಟಲಿಯಲ್ಲಿ ತುಂಬಿ, ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ವಾರ್ತಾದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಧನ್ಯವಾದಗಳು.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Aja Ekadashi 2025: Read And Check Out The Date & Remedies!
- Venus Transit In Cancer: A Time For Deeper Connections & Empathy!
- Weekly Horoscope 18 August To 24 August, 2025: A Week Full Of Blessings
- Weekly Tarot Fortune Bites For All 12 Zodiac Signs!
- Simha Sankranti 2025: Revealing Divine Insights, Rituals, And Remedies!
- Sun Transit In Leo: Bringing A Bright Future Ahead For These Zodiac Signs
- Numerology Weekly Horoscope: 17 August, 2025 To 23 August, 2025
- Save Big This Janmashtami With Special Astrology Deals & Discounts!
- Janmashtami 2025: Date, Story, Puja Vidhi, & More!
- 79 Years of Independence: Reflecting On India’s Journey & Dreams Ahead!
- अजा एकादशी 2025 पर जरूर करें ये उपाय, रुके काम भी होंगे पूरे!
- शुक्र का कर्क राशि में गोचर, इन राशि वालों पर पड़ेगा भारी, इन्हें होगा लाभ!
- अगस्त के इस सप्ताह राशि चक्र की इन 3 राशियों पर बरसेगी महालक्ष्मी की कृपा, धन-धान्य के बनेंगे योग!
- टैरो साप्ताहिक राशिफल (17 अगस्त से 23 अगस्त, 2025): जानें यह सप्ताह कैसा रहेगा आपके लिए!
- सिंह संक्रांति 2025 पर किसकी पूजा करने से दूर होगा हर दुख-दर्द, देख लें अचूक उपाय!
- बारह महीने बाद होगा सूर्य का सिंह राशि में गोचर, सोने की तरह चमक उठेगी इन राशियों की किस्मत!
- अंक ज्योतिष साप्ताहिक राशिफल: 17 अगस्त से 23 अगस्त, 2025
- जन्माष्टमी स्पेशल धमाका, श्रीकृष्ण की कृपा के साथ होगी ऑफर्स की बरसात!
- जन्माष्टमी 2025 कब है? जानें भगवान कृष्ण के जन्म का पावन समय और पूजन विधि
- भारत का 79वां स्वतंत्रता दिवस, जानें आने वाले समय में क्या होगी देश की तस्वीर!
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025