• Talk To Astrologers
  • AstroSage Brihat Horoscope
  • Ask A Question
  • Raj Yoga Report
  • Personalized Horoscope 2021

ಕುಂಭ ರಾಶಿ ಭವಿಷ್ಯ 2020 - Kumbh Rashi bhavishya 2020

ಕುಂಭ ರಾಶಿ ಭವಿಷ್ಯ 2020 ಕುಂಭ ರಾಶಿ ಭವಿಷ್ಯ 2020 (Kumbh Rashi bhavishya 2020) ರ ಪ್ರಕಾರ, ಕುಂಭ ರಾಶಿಚಕ್ರದ ಜನರು ಈ ವರ್ಷ ಮಿಶ್ರಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ವರ್ಷವೂ ನಿಮಗೆ ಸ್ವಲ್ಪ ಮಟ್ಟಿಗೆ ಸವಾಲುಗಳಿಂದ ಇರಬಹುದು. ಆದರೆ ನಿಮ್ಮ ಬಯಕೆಯ ಬಲದ ಮೇಲೆ ನೀವು ಪ್ರತಿಯೊಂದು ಸಮಸ್ಯೆಯನ್ನು ಎದುರಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ನಿಮ್ಮ ರಾಶಿಚಕ್ರದ ಅಧಿಪತಿ ಶನಿ 24 ಜನವರಿ 2020 ಗೆ ಮಕರ ರಾಶಿಚಕ್ರದಲ್ಲಿ ನಿಮ್ಮ ಹನ್ನೊಂದನೇ ಮನೆಯಲ್ಲಿ ಪ್ರವೇಶಿರುತ್ತಾನೆ ಮತ್ತು ಇಡೀ ವರ್ಷ ಅದೇ ರಾಶಿಚಕ್ರದಲ್ಲಿ ಉಳಿದಿರುತ್ತಾನೆ. ಗುರುದೇವ ಗುರು ಗ್ರಹವು 30 ಮಾರ್ಚ್ ಗೆ ಮಕರ ರಾಶಿಚಕ್ರದಲ್ಲಿ ಹನ್ನೊಂದನೇ ಮನೆಯಲ್ಲಿ ಪ್ರವೇಶಿರುತ್ತಾನೆ ಮತ್ತು 14 ಮೇ ಗೆ ವಕ್ರತೆಯನ್ನು ಹೊಂದುತ್ತಾರೆ. ಈ ವಕ್ರತೆಯ ಸ್ಥಿತಿಯಲ್ಲಿ 30 ಜೂನ್ ರಂದು ಮತ್ತೆ ಧನು ರಾಶಿಚಕ್ರದಲ್ಲಿ ಹನ್ನೊಂದನೇ ಮನೆಗೆ ತಿರುಗಿ ಬರುತ್ತಾನೆ. ಇಲ್ಲಿ 13 ಸೆಪ್ಟೆಂಬರ್ ಗೆ ನೇರವಾಗಿ ಮತ್ತು 20 ನವೆಂಬರ್ ರಂದು ನಿಮ್ಮ ಹನ್ನೆರಡನೇ ಮನೆಯಲ್ಲಿ ತಲುಪುತ್ತಾನೆ. ರಾಹು ಮಹಾರಾಜ ನಿಮ್ಮ ಐದನೇ ಮನೆಯಲ್ಲಿ ಸೆಪ್ಟೆಂಬರ್ ಮಧ್ಯದ ವರೆಗೆ ಇರುತ್ತಾರೆ. ಇದರ ನಂತರ ನಾಲ್ಕನೇ ಮನೆಗೆ ಸಾಗಣಿಸುತ್ತಾರೆ. ರಾಶಿಚಕ್ರ ಸ್ವಾಮಿಯ ಹನ್ನೆರಡನೇ ಮನೆಯಲ್ಲಿ ಹೋಗುವುದು ಅನೇಕ ಪ್ರಯಾಣಗಳನ್ನು ತೋರಿಸುತ್ತದೆ. ಇವುಗಳಲ್ಲಿ ಕೆಲವು ಪ್ರಯಾಣಗಳು ನಿಮ್ಮ ಇಷ್ಟದಿಂದ ಇರುತ್ತವೆ ಮತ್ತು ಕೆಲವು ನೀವು ಅನಗತ್ಯ ರೀತಿಯಲ್ಲಿ ಮಾಡಬೇಕಾಗುತ್ತದೆ. ವಿದೇಶ ಪ್ರಯಾಣದ ಪ್ರಬಲ ಸಾಧ್ಯತೆ ಉಂಟಾಗಬಹುದು. ಆದಾಗ್ಯೂ, ಹೆಚ್ಚಿನ ಪ್ರವಾಸಗಳು ನಿಮಗೆ ಯಶಸ್ವಿಯಾಗುತ್ತವೆ ಎಂಬುದು ಸಂತೋಷದ ವಿಷಯ.

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನೀವು ತೀರ್ಥ ಯಾತ್ರೆಗಳಿಗೂ ಹೋಗುತ್ತೀರಿ. ಆದರೆ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸಬೇಕು. ಏಕೆಂದರೆ ವಿರುದ್ಧ ಪರಿಸ್ಥಿತಿಗಳಲ್ಲಿ ನೀವು ಆಸ್ಪತ್ರೆಗೂ ಹೋಗಬೇಕಾಗಬಹುದು. ಈ ವರ್ಷ ನಿಮ್ಮ ಖರ್ಚುಗಳಲ್ಲಿ ಹೆಚ್ಚಳವಾಗುತ್ತದೆ. ಮತ್ತು ಕೆಲವು ಒಳ್ಳೆಯ ಕಾರ್ಯಗಳು ವಿಶೇಷವಾಗಿ ಧರ್ಮ-ಕರ್ಮ ಮತ್ತು ಪುಣ್ಯದ ಕಾರ್ಯಗಳಲ್ಲೂ ಸಹ ಖರ್ಚು ಮಾಡುತ್ತೀರಿ. ಈ ವರ್ಷ ನೀವು ಹೆಚ್ಚು ಹಣಕಾಸಿನ ಲಾಭವನ್ನು ಪಡೆಯುತ್ತೀರಿ ಆದರೆ ಅದೇ ಪ್ರಮಾಣದಲ್ಲಿ ನಿಮ್ಮ ಖರ್ಚುಗಳು ಸಹ ಹೆಚ್ಚಾಗುತ್ತವೆ. ಆದ್ದರಿಂದ ಹಣಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ನೀವು ಚೆನ್ನಾಗಿ ಯೋಚಿಸಿ - ಪರಿಗಣಿಸಿ ಮಾಡುವುದು ನಿಮಗೆ ಉತ್ತಮ. ರಹಸ್ಯವಾದ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕತೆಗೆ ಸಂಬಂಧಿಸಿದ ಜನರಿಗೆ ಬಹಳಷ್ಟು ಉತ್ತಮ ಅನುಭವಗಳನ್ನು ಹೊಂದಿರುತ್ತಾರೆ. ಧರ್ಮ-ಕರ್ಮಕ್ಕೆ ಸಂಬಂಧಿಸಿದ ಜನರಿಗೆ ವಿದೇಶದಲ್ಲಿ ಹೋಗಿ ಧರ್ಮ ಪ್ರಚಾರಣೆಯನ್ನು ಮಾಡುವೆ ಅವಕಾಶ ಸಿಗಬಹುದು ಮತ್ತು ಸಂಸ್ಥೆಯಲ್ಲಿ ಅವರ ಶಿಷ್ಯರ ಸಂಖ್ಯೆ ಹೆಚ್ಚಾಗಬಹುದು. 27 ಡಿಸೆಂಬರ್ ರಿಂದ ವರ್ಷದ ಕೊನೆಯ ವರೆಗೆ ವಿಶೇಷವಾಗಿ ನಿಮ್ಮ ಆಹಾರ ಮತ್ತು ಆರೋಗ್ಯದ ಮೇಲೆ ಗಮನ ಹರಿಸಿ. ಇದರಿಂದ ನೀವು ಯಾವುದೇ ರೀತಿಯ ದೈಹಿಕ ಸಮಸ್ಯೆಯನ್ನು ತಪ್ಪಿಸಬಹುದು. ಈ ವರ್ಷ ಸ್ವತಃ ಅಥವಾ ಆಪ್ತರ ಚಿಕಿತ್ಸೆಯ ಮೇಲು ಸಹ ನಿಮ್ಮ ಹಣ ಖರ್ಚು ಮಾಡಬೇಕಾಗಬಹುದು. ಈ ವರ್ಷ ನಿಮ್ಮ ಸ್ಥಳವನ್ನು ಬದಲಾಯಿಸುವುದು ಖಚಿತ. ಈ ಸ್ಥಳಾಂತರದಿಂದಾಗಿ ನೀವು ನಿಮ್ಮ ಪ್ರಸ್ತುತ ಸ್ಟಳವನ್ನು ಬಿಟ್ಟು ಎಲ್ಲಾದರೂ ದೂರ ಹೋಗಿ ಇರಬೇಕಾಗುತ್ತದೆ, ಇದರ ಕಾರಣದಿಂದಾಗಿ ನೀವು ನಿಮ್ಮ ಕುಟುಂಬದಿಂದ ಸ್ವಲ್ಪ ಸಮಯದವರೆಗೆ ದೂರ ಹೋಗಬೇಕಾಗಬಹುದು. ಸಂಬಂಧದಲ್ಲಿ ಯಾವುದೇ ಅಂತರವಿಲ್ಲ ಎಂದು ಖಚಿತಪಡಿಸಿಕೊಳ್ಳಲು ನೀವು ನಿಮ್ಮ ಕಡೆಯಿಂದ ಪ್ರಯತ್ನಿಸಬೇಕು ಮತ್ತು ಕಾಲ ಕಾಲಕ್ಕೆ ಕುಟುಂಬ ಸದಸ್ಯರಿಗೆ ಉತ್ತಮ ಉಡುಗೊರೆಗಳನ್ನು ನೀಡಬೇಕು.

ಈ ರಾಶಿಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ನಿಮಗೆ ತಿಳಿದಿಲ್ಲದಿದ್ದರೆ, ಇಲ್ಲಿ ಕ್ಲಿಕ್ ಮಾಡಿ. ಚಂದ್ರ ರಾಶಿಚಕ್ರ ಕ್ಯಾಲ್ಕುಲೇಟರ್

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ವೃತ್ತಿಪರ ಜೀವನಕ್ಕೆ ಏರಿಳಿತಗಳಿಂದ ತುಂಬಿರಬಹುದು. ಆದ್ದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಆಲೋಚಿಸಿ ತೆಗೆದುಕೊಳ್ಳಿ . ಈ ವರ್ಷ ನಿಮ್ಮ ಉದ್ಯೋಗದಲ್ಲಿ ವರ್ಗಾವಣೆಯ ಬಲವಾದ ಯೋಗವು ಉಂಟಾಗುತ್ತಿದೆ ಮತ್ತು ಕೆಲಸದ ಸ್ಥಳದಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು.ಇದರಿಂದಾಗಿ ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಆಲೋಚಿಸಬಹುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ವರ್ಷ ಬಹಳಷ್ಟು ಮಟ್ಟಿಗೆ ನೆಮ್ಮದಿಯಿಂದ ತುಂಬಿರುವ ವರ್ಷವಾಗಿರುವ ಭರವಸೆ ಇದೆ. ಗಮನಾರ್ಹವಾಗಿ ಜನವರಿ ಇಂದ 30 ಮಾರ್ಚ್ ಮತ್ತು 30 ಜೂನ್ ರಿಂದ 20 ನವೆಂಬರ್ ಮಧ್ಯ ನಿಮ್ಮ ವ್ಯವಹಾರವು ಹಂತಹಂತವಾಗಿ ಬೆಳೆಯುತ್ತದೆ. ನೀವು ಯಶಸ್ಸಿನ ಹೊಸ ದಾಖಲೆಗಳನ್ನು ರಚಿಸುವಿರಿ.

ಕುಂಭ ರಾಶಿ ಭವಿಷ್ಯ 2020 (Kumbh Rashi 2020) ರ ಪ್ರಕಾರ, ಈ ವರ್ಷ ನಿಮ್ಮ ವ್ಯವಹಾರದ ಜೀವನಕ್ಕೆ ಸಾಧಾರಣವಾಗಿ ಶುಭವಾಗಿರಬಹುದು. ನೀವು ಯಾವುದೇ ಹೊಸ ವ್ಯಾಪರವನ್ನು ಮಾಡಲು ಬಯಸುತ್ತಿದ್ದರೆ, ನಿಮ್ಮ ಆ ವ್ಯಾಪಾರದಲ್ಲಿ ಅನುಭವ ಹೊಂದಿರುವ ಜನರು ಅಗತ್ಯವಾಗಿರಬೇಕು ಎಂಬುದರ ಬಗ್ಗೆ ಗಮನ ಹರಿಸಿ. ಇಲ್ಲದಿದ್ದರೆ ಲಾಭದ ಸ್ಥಳದಲ್ಲಿ ನಷ್ಟವಾಗಬಹುದು. ತಮ್ಮ ಕುಟುಂಬದ ಸದಸ್ಯರೊಂದಿಗೆ ಸದ್ಯಕ್ಕೆ ಯಾವುದೇ ಪಾಲುದಾರಿಕೆಯನ್ನು ಮಾಡಬೇಡಿ ಮತ್ತು ತಮ್ಮ ಕೆಲಸದ ಸ್ಥಳದಲ್ಲಿ ಅವರನ್ನು ಹಸ್ತಕ್ಷೇಪ ಮಾಡಲು ಬಿಡಬೇಡಿ. ಹೂಡಿಕೆ ಮಾಡಲು ಬಯಸುತ್ತಿದ್ದರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ತಮ್ಮ ವ್ಯಾಪಾರ ಅಥವಾ ಇಂತಹ ಹೂಡಿಕೆಯಲ್ಲಿ ನೀವು ನಷ್ಟವನ್ನು ಹೊಂದಿರಬಹುದು. ಈ ವರ್ಷ ನೀವು ಕೆಲಸಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಅಪಾಯ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನೀವು ಉದ್ಯೋಗದಲ್ಲಿದ್ದರೆ ನಿಮ್ಮ ವರಿಷ್ಠ ಅಧಿಕಾರಿಗಳೊಂದಿಗೆ ಉತ್ತಮ ವ್ಯವಹಾರವನ್ನು ಹೊಂದಿರಿ, ಇದರಿಂದ ನೀವು ಯಾವುದೇ ರೀತಿಯ ಸವಾಲಿನ ಸಮಸ್ಯೆಯನ್ನು ತಪ್ಪಿಸಬಹುದು. ಜನವರಿಯ ತಿಂಗಳು ನಿಮ್ಮ ವೃತ್ತಿಪರ ಜೀವನಕ್ಕೆ ಉತ್ತಮವಾಗಲಿದೆ. ಈ ವರ್ಷ ನೀವು ಉದ್ಯೋಗ ಅಥವಾ ವ್ಯಾಪಾರದ ಸಂದರ್ಭದಲ್ಲಿ ವಿದೇಶಹಕ್ಕೆ ಹೋಗಬೇಕಾಗಬಹುದು, ಗಮನಾರ್ಹವಾಗಿ ಮಾರ್ಚ್ ರಿಂದ ಮೇ ಮಧ್ಯ. ಈ ಪ್ರಯಾಣಗಳು ನಿಮ್ಮ ಕಾರ್ಯಗಳಿಗೆ ಹೊಸ ಶಕ್ತಿಯ ಸಂವಹನ ಮಾಡುತ್ತವೆ ಮತ್ತು ನಿಮಗೆ ಲಾಭವನ್ನು ನೀಡುತ್ತವೆ.

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಆರ್ಥಿಕ ಜೀವನ

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಆರ್ಥಿಕ ದೃಷ್ಟಿಕೋನ ಸಾಕಷ್ಟು ಸಮಾನ್ಯವಾಗಿರುವ ಭರವಸೆ ಇದೆ. ಈ ವರ್ಷ ನೀವು ನಿಮ್ಮ ಹಣದ ಹೂಡಿಕೆ ಮತ್ತು ಖರ್ಚುಗಳ ಮೇಲೆ ವಿಶೇಷವಾಗಿ ಗಮನ ಹರಿಸುವ ಅಗತ್ಯವಿದೆ. ಏಕೆಂದರೆ ಹನ್ನೆರಡನೇ ಮನೆಯಲ್ಲಿ ಶನಿಯ ಸ್ಥಾನವು ನಿಮ್ಮ ಉಳಿತಾಯದ ಮೇಲೆ ಗ್ರಹಣ ಹಾಕಬಹುದು ಮತ್ತು ಖರ್ಚುಗಳಲ್ಲಿ ಹೆಚ್ಚಳ ಮಾಡಬಹುದು. ಇದಲ್ಲದೆ 30 ಮಾರ್ಚ್ ರಿಂದ 30 ಜೂನ್ ಮಧ್ಯ ಗುರುವಿನ ಸಾಗಣೆ ನಿಮ್ಮ ಹನ್ನೆರಡನೇ ಮನೆಯಲ್ಲಿ ಇರುತ್ತದೆ ಇದರ ಪರಿಣಾಮವಾಗಿ, ನಿಮ್ಮ ಆದಾಯದ ಹೊರೆತಾಗಿಯೂ ಖರ್ಚುಗಳಲ್ಲಿ ಅನಿರೀಕ್ಷಿತ ಹೆಚ್ಚಳವಾಗಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಬಹುದು. 30 ಜೂನ್ ರಿಂದ 20 ನವೆಂಬರ್ ಮಧ್ಯ ನೀವು ಬಹಳಷ್ಟು ಮಟ್ಟಿಗೆ ನೆಮ್ಮದಿಯನ್ನು ಅನುಭವಿಸುವಿರಿ. ಆದರೆ 20 ನವೆಂಬರ್ ನಂತರವೂ ಸಹ ನಿಮ್ಮ ಖರ್ಚುಗಳ ಪರಿಸ್ಥಿತಿ ಹಾಗೆಯೆ ಉಳಿದಿರುತ್ತದೆ. ಆದ್ದರಿಂದ ಹಣಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಹಣದ ಹೂಡಿಕೆ ಮಾಡದೇ ಇರುವುದು ಉತ್ತಮ. ನಿಮ್ಮ ಆದಾಯವು ಈ ವರ್ಷ ನಿಯಮಿತವಾಗಿರುತ್ತದೆ ಆದರೆ ನೀವು ಅದನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ.

ಕುಂಭ ರಾಶಿ ಭವಿಷ್ಯ 2020 (Kumbh Rashi 2020) ರ ಪ್ರಕಾರ, ನೀವು ಯಾವುದೇ ರೆಟಿಯ ಹೂಡಿಕೆಯನ್ನು ಮಾಡಲೇ ಬೇಕೆಂದು ಬಯಸುತ್ತಿದ್ದರೆ , ಆ ವಿಷಯದ ಪರಿಣಿತ ಜನರಿಂದ ಸಲಹೆಯನ್ನು ತೆಗೆದುಕೊಂಡು ಹಾಗೆ ಮಾಡಬೇಕು. ವಿಶೇಷವಾಗಿ ಆ ಕೆಲಸದಲ್ಲಿ ಅನುಭವ ಹೊಂದಿರುವ ಜನರಿಂದ. ಇಲ್ಲದಿದ್ದರೆ ನಷ್ಟವನ್ನು ಅನುಭವಿಸಬೇಕಾಗಬಹುದು. ಈ ವರ್ಷ ನೀವು ಯಾವುದೇ ಅನಿರೀಕ್ಷಿತ ಖರ್ಚುಗಳಿಂದ ಜಾಗರೂಕರಾಗಿರಬೇಕು ಮತ್ತು ವ್ಯರ್ಥವಾದ ಖರ್ಚುಗಳನ್ನು ಮಾಡಬಾರದು. ಶೇರ್ ಮಾರ್ಕೆಟ್, ಜೂಜು ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದರ ಬಗ್ಗೆ ಜಾಗರೂಕರಾಗಿರಬೇಕು. ನೀವು ವಿದೇಶಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವ್ಯಾಪಾರವನ್ನು ಹೊಂದಿದ್ದರೆ, ನೀವು ಲಾಭವನ್ನು ಪಡೆಯಬಹುದು. ಇದಕ್ಕೆ ವಿರುದ್ಧವಾಗಿ ನೀವು ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ, ನಿಮಗಾಗಿ ಲಾಭದ ಯೋಗವಿದೆ. ಮೇ ಮಧ್ಯದಿಂದ ಆಗಸ್ಟ್ ಮಧ್ಯ ಮತ್ತು 17 ಸೆಪ್ಟೆಂಬರ್ ನಂತರ ನೀವು ಉತ್ತಮ ಹಣದ ಲಾಭವನ್ನು ನಿರೀಕ್ಷಿಸಬಹುದು. ಇದಲ್ಲದೆ ಫೆಬ್ರವರಿಯ ತಿಂಗಳು ಕೂಡ ನಿಮಗೆ ಉತ್ತಮ ಲಾಭವನ್ನು ಕೊಟ್ಟು ಹೋಗಬಹುದು.

ಕುಂಭ ರಾಶಿ ಭವಿಷ್ಯ 2020 ಪ್ರಕಾರ ಶಿಕ್ಷಣ

ಕುಂಭ ರಾಶಿ ಭವಿಷ್ಯ 2020 ಪ್ರಕಾರ ವರ್ಷದ ಆರಂಭವು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕ್ರವಾಗಿಲ್ಲ, ಆದ್ದರಿಂದ ನೀವು ಹೆಚ್ಚು ಪರಿಶ್ರಮಕ್ಕಾಗಿ ತಯಾರಾಗಿರಬೇಕು. ಮಧ್ಯ ಸೆಪ್ಟೆಂಬರ್ ವರೆಗೆ ರಾಹುವಿನ ಸಾಗಣೆ ಐದನೇ ಮನೆಯಲ್ಲಿ ಇರುವುದರಿಂದಾಗಿ ಶಿಕ್ಷಣದ ಕ್ಷೇತ್ರದಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗಬಹುದು,. ಆದಾಗ್ಯೂ 30 ಮಾರ್ಚ್ ರಿಂದ 30 ಜೂನ್ ಮಧ್ಯ ಗುರು ಮತ್ತು ಶನಿಯ ಪರಿಣಾಮದ ಕಾರಣದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ಮಾಹಿತಿ ತಂತ್ರಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವರ್ಷವು ವಿಶೇಷವಾಗಿ ಸಾಧನೆಗಳಿಂದ ತುಂಬಿದೆ ಎಂದು ಸಾಬೀತುಪಡಿಸುತ್ತದೆ. ಆದಾಗ್ಯೂ ತಾಂತ್ರಿಕ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಕೆಲವು ಕಷ್ಟಗಳನ್ನು ಎದುರಿಸಬೇಕಾಗಬಹುದು.

ಕುಂಭ ರಾಶಿ ಭವಿಷ್ಯ 2020 (Kumbh Rashi 2020) ರ ಪ್ರಕಾರ ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುವ ಜನರಿಗಾಗಿ ವರ್ಷದ ಮಧ್ಯಭಾಗವು ಅನುಕೂಲಕರವಾಗಿದೆ ಎಂದು ತೋರುತ್ತದೆ. ಸೆಪ್ಟೆಂಬರ್ ಮಧ್ಯದ ನಂತರ ರಾಹುವಿನ ಸಾಗಣೆ ನಿಮ್ಮ ನಾಲ್ಕನೇ ಮನೆಯಲ್ಲಿ ಇರುತ್ತದೆ. ಆಗ ಶಿಕ್ಷಣ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳು ಸ್ವಯಂಚಾಲಿತವಾಗಿ ದೂರವಾಗುತ್ತವೆ ಮತ್ತು ನೀವು ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ. ಇದರ ನಂತರದ ಅವಧಿ ನಿಮ್ಮ ಶಿಕ್ಷಣಕ್ಕಾಗಿ ಸಾಕಷ್ಟು ಸುಲಭವಾಗುತ್ತದೆ ಮತ್ತು ನೀವು ಯಾವುದೇ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಿಲ್ಲ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಳ್ಳುವುದನ್ನು ತಪ್ಪಿಸಬೇಕು ಮತ್ತು ತಮ್ಮ ಪರಿಶ್ರಮದ ಮೇಲೆ ಸಂಪೂರ್ಣ ಭರವಸೆಯನ್ನು ಇತ್ತು ಮುಂದುವರಿಯಬೇಕು. ಆಗ ಮಾತ್ರ ಉತ್ತಮ ಫಲಿತಾಂಶಗಳನ್ನು ಪಡೆಯಲಾಗುತ್ತದೆ.

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೀವನ

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಕುಟುಂಬ ಜೀವನಕ್ಕೆ ಮಿಶ್ರಿತ ಫಲಿತಾಂಶಗಳನ್ನು ತಂದಿದೆ.ವರ್ಷದ ಪೂರ್ವಾರ್ಧದಲ್ಲಿ ಒಂದೆಡೆ ಕುಟುಂಬ ಸಾಮರಸ್ಯ ಇದ್ದರೆ, ನಿಮಮ್ ಮಕ್ಕಳಿಗೆ ಕೆಲವು ಸಮಸ್ಯೆಗಳು ಬರುತ್ತವೆ ಆಹತವ ಅವರ ಅರೋಗ್ಯ ಹದಗೆಡಬಹುದು. ಅದೇ ಸಮಯದಲ್ಲಿ ವರ್ಷದ ಉತ್ತರಾರ್ಧದಲ್ಲಿ ಕೌಟುಂಬಿಕ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು ಮತ್ತು ಪೋಷಕರ ಅರೋಗ್ಯವು ಚಿಂತೆಗೊಳಿಸಬಹುದು. ಇದಲ್ಲದೆ ನೀವು ನಿಮ್ಮ ಕೆಲಸದಲ್ಲಿಯೂ ಹೆಚ್ಚು ಕಾರ್ಯನಿರತರಾಗಿರುತ್ತೀರಿ, ಇದರಿಂದ ಕುಂಭಕ್ಕೆ ಕಡಿಮೆ ಸಮಯವನ್ನು ನೀಡಲಾಗುತ್ತದೆ. ಇದಕ್ಕಾಗಿ ನಿಮ್ಮ ಕುಟುಂಬವು ನಿಮಗೆ ದೂರು ನೀಡುತ್ತದೆ. ಆದಾಗ್ಯೂ ವರ್ಷದ ಆರಂಭವು ಅದ್ಭುತವಾಗಿರುತ್ತದೆ ಮತ್ತು ಆಪ್ತರೊಂದಿಗೆ ಸೇರಿ ತಮ್ಮ ಲಾಭವನ್ನು ಹಂಚಿಕೊಳ್ಳುತ್ತೀರಿ. ಕೌಟುಂಬಿಕ ಜೀವನದಲ್ಲಿ ಸುಖ ಮತ್ತು ಶಾಂತಿ ಉಳಿದಿರುತ್ತದೆ.

ಕುಂಭ ರಾಶಿ ಭವಿಷ್ಯ 2020 (Kumbh Rashi 2020) ರ ಪ್ರಕಾರ ನಿಮ್ಮ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ ಮತ್ತು ಅವರೊಂದಿಗಿನ ನಿಮ್ಮ ಸಂಬಂಧ ಸುಧಾರಿಸುತ್ತದೆ, ಇದರಿಂದ ನಿಮ್ಮ ಕುಟುಂಬದಲ್ಲಿ ಶಾಂತಿ ಬರುತ್ತದೆ. ಸೆಪ್ಟೆಂಬರ್ ಮಧ್ಯದ ನಂತರ ರಾಹುವಿನ ಸಾಗಣೆ ನಿಮ್ಮ ನಾಲ್ಕನೇ ಮನೆಯಲ್ಲಿ ಇರುವುದರಿಂದಾಗಿ ಕೌಟುಂಬಿಕ ಶಾಂತಿಯಲ್ಲಿ ಗ್ರಹಣ ಅಂಟಿಕೊಳ್ಳಬಹುದು. ಆದ್ದರಿಂದ ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ ಮತ್ತು ವಿಶೇಷವಾಗಿ ನಿಮ್ಮ ತಾಯಿಯ ಆರೋಗ್ಯದ ಬೆಗ್ಗೆ ಕಾಳಜಿ ವಹಿಸಿ. ಏಕೆಂದರೆ ಈ ಸಮಯದಲ್ಲಿ, ಅವರ ಅರೋಗ್ಯವು ಕ್ಷೀಣಿಸಬಹುದು. 28 ಮಾರ್ಚ್ ರಿಂದ 1 ಆಗಸ್ಟ್ ಮಧ್ಯ ನೀವು ವಾಹನವನ್ನು ಖರೀದಿಸುವ ಯೋಗವಿದೆ.

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ವೈವಾಹಿಕ ಜೀವನಕ್ಕೆ ಮಿಶ್ರಿತ ಫಲಿತಾಂಶಗಳನ್ನು ತಂದಿದೆ.ಈ ವರ್ಷ ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ಬಿಸಿಲು ಇದ್ದರೆ ಕೆಲವೊಮ್ಮೆ ನೆರಳನ್ನು ಅನುಭವಿಸಬಹುದು. ಜನವರಿ 30 ರಿಂದ ಮಾರ್ಚ್ ಮಧ್ಯ ಗುರು ನಿಮ್ಮ ಹನ್ನೊಂದನೇ ಮನೆಯಲ್ಲಿ ಕುಳಿತಿದ್ದು ಏಳನೇ ಮನೆಗೆ ಸಂಪೂರ್ಣ ದೃಷ್ಟಿಯನ್ನು ನೀಡುತ್ತಾರೆ. ಇದರ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನ ಮಾಧುರ್ಯದೊಂದಿಗೆ ನಡೆಯುತ್ತಿರುತ್ತದೆ ಮತ್ತು ನಿಮ್ಮ ಪರಸ್ಪರ ಸಮನ್ವಯದಿಂದಾಗಿ ದಾಂಪತ್ಯ ಜೀವನದಲ್ಲಿ ಸಂತೋಷವು ಮೇಲುಗೈ ಸಾಧಿಸುತ್ತದೆ. ಇದರ ನಂತರ 30 ಜೂನ್ ವರೆಗಿನ ಸಮಯವೂ ಸವಾಲುಗಳಿಂದ ಇರುತ್ತದೆ ಮತ್ತು ಈ ಸಮಯದಲ್ಲಿ ದಾಂಪತ್ಯ ಜೀವನದಲ್ಲಿ ಜಗಳ ಅಥವಾ ಅಪಶ್ರುತಿಯ ಸಾಧ್ಯತೆಗಳು ಹೆಚ್ಚಾಗಬಹುದು. ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ಆರೋಗ್ಯವು ದುರ್ಬಲವಾಗಿರುತ್ತದೆ, ಇದರಿಂದ ದಾಂಪತ್ಯ ಜೀವನದಲ್ಲಿನ ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. 30 ಜೂನ್ ರಿಂದ 20 ನವೆಂಬರ್ ಮಧ್ಯ ಸಂಬಂಧಗಳಲ್ಲಿ ಭಾವನಾತ್ಮಕ ತಿರುವು ಬರುತ್ತದೆ ಮತ್ತು ನೀವಿಬ್ಬರು ಪರಸ್ಪರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತುಪರಸ್ಪರ ನಿಕಟ ಬರುತ್ತಿರಿ. ಇದರ ಪರಿಣಾಮವಾಗಿ ದಾಂಪತ್ಯ ಜೀವನದಲ್ಲಿ ಮತ್ತೆ ಹೊರಬರುತ್ತದೆ. ಆದಾಗ್ಯೂ ಅದರ ನಂತರದ ಸಮಯವು ಸ್ವಲ್ಪ ತೊಂದರೆಗೊಳಿಸಬಹುದು ಆದ್ದರಿಂದ ಈ ವರ್ಷ ನೀವು ವೈವಾಹಿಕ ಜೀವನದ ಬಗ್ಗೆ ತಾಳ್ಮೆ ತೋರಿಸಬೇಕು ಮತ್ತು ಸಮಯದ ಪ್ರಕಾರ ನಡೆಯಬೇಕು

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಸೆಪ್ಟೆಂಬರ್ ಮಧ್ಯದ ವರೆಗೆ ರಾಹುವಿನ ಸಾಗಣೆ ನಿಮ್ಮ ಐದನೇ ಮನೆಯಲ್ಲಿ ಇರುತ್ತದೆ, ಇದರ ಕಾರಣದಿಂದಾಗಿ ಇದು ನಿಮ್ಮ ಮಕ್ಕಳ ಆರೋಗ್ಯದ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಬಹುದು. ಗರ್ಭಿಣಿಯರು ಗಮನಾರ್ಹವಾಗಿ ಜಾಗರೂಕರಾಗಿರಬೇಕು. ನಿಮ್ಮ ಮಕ್ಕಳ ಪ್ರಗತಿಯ ಹಾದಿಯಲ್ಲಿ ಕೆಲವು ಅಡೆತಡೆಗಳು ಬರುತ್ತವೆ. ಆದರೆ ಅವರು ಕಠಿಣ ಪರಿಶ್ರಮ ಸಹ ಮಾಡುತ್ತಾರೆ ಅದರ ಆಹ್ಲಾದಕರ ಪರಿಣಾಮ ಅವರಿಗೆ ಸಿಗುತ್ತದೆ. ಈ ವರ್ಷ ನಿಮ್ಮ ಮಕ್ಕಳ ಮದುವೆಯಾಗುವುದರಿಂದ ಮನೆ ಮತ್ತು ಕುಟುಂಬದಲ್ಲಿ ಸಂತೋಷ ಬರುತ್ತದೆ.

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಪ್ರೀತಿ ಜೀವನ

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಪ್ರೀತಿ ಸಂಬಂಧಕ್ಕೆ ಈ ವರ್ಷ ಹೆಚ್ಚು ಅನುಕೂಲಕರವಾಗಿಲ್ಲ. ಆದ್ದರಿಂದ ನೀವು ಮೊದಲಿನಿಂದಲೇ ಸಂಬಂಧದಲ್ಲಿದ್ದರೆ, ನೀವು ಸಂಬಂಧವನ್ನು ಬಲಪಡಿಸಲು ನಿಮ್ಮ ಪ್ರೀತಿಪಾತ್ರರನ್ನು ಸಂತೋಷವಾಗಿ ಇರಿಸಿ. ವರ್ಷದ ಆರಂಭದಲ್ಲಿ 5 ಗುರುಗಳ ಸಂಯೋಜನೆ ಹನ್ನೊಂದನೇ ಮನೆಯಲ್ಲಿ ಆಗುವುದರಿಂದ ನಿಮ್ಮ ಪ್ರೀತಿ ಜೀವನದ ಮೇಲೆ ಕೆಲವು ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ವಿವಿಧ ರೀತಿಯ ಮಾತುಗಳು ಮತ್ತು ನಿಮ್ಮ ಹತ್ತಿರವಿರುವ ಕೆಲವು ಸ್ನೇಹಿತರ ಕಾರಣದಿಂದಾಗಿ ನಿಮ್ಮ ಸಂಬಂಧದಲ್ಲಿ ಘರ್ಷಣೆ ಹೆಚ್ಚಾಗಬಹುದು. ತಮ್ಮ ಪ್ರೀತಿಪಾತ್ರರ ನಡುವೆ ಯಾವುದೇ ಮೂರನೇ ವ್ಯಕ್ತಿಯನ್ನು ಬರಲು ಬಿಡಬೇಡಿ. ಈ ವರ್ಷ ಒಂದಕ್ಕಿಂತ ಹೆಚ್ಚು ಜನರಲ್ಲಿ ನಿಮ್ಮ ಒಲವು ಹೆಚ್ಚಾಗುವ ಸಾಧ್ಯತೆ ಇದೆ. ನೀವು ಒಂದಕ್ಕಿಂತ ಹೆಚ್ಚು ಜನರೊಂದಿಗೆ ಪ್ರೀತಿ ಸಂಬಂಧವನ್ನು ಹೊಂದಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಬೀಳದೆ ಇರುವುದು ನಿಮಗೆ ಉತ್ತಮ. ತಮ್ಮ ಮೇಲೆ ನಿಯಂತ್ರಣವನ್ನು ಇಟ್ಟಿಕೊಳ್ಳುತ್ತ ನಿಮ್ಮ ವಿಶೇಷ ಪ್ರೀತಿಪಾತ್ರರೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಿ.

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಫೆಬ್ರವರಿ ಇಂದ ಮಾರ್ಚ್ ಮಧ್ಯದ ಅವಧಿ ಬಹಳಷ್ಟು ಉತ್ತಮವಾಗಲಿದೆ ಮಟ್ಟಿ ನಿಮ್ಮಲ್ಲಿ ಕೆಲವು ಸಿಂಗಲ್ ಜನರ ಮದುವೆಯ ಸಾಧ್ಯತೆ ಹೆಚ್ಚಾಗುತ್ತದೆ. ಇದರ ನಂತರ ಮಾರ್ಚ್ ರಿಂದ ಜೂನ್ ವರೆಗಿನ ಸಮಯ ಸ್ವಲ್ಪ ಪ್ರತಿಕೂಲವಾಗಲಿದೆ, ಈ ಸಮಯದಲ್ಲಿ ನೀವು ವಿಶೇಷ ಗಮನ ಹರಿಸುವ ಅಗತ್ಯವಿದೆ. 30 ಜೂನ್ ರಿಂದ 20 ನವೆಂಬರ್ ವರೆಗೆ ಸಮಯವು ನಿಮ್ಮ ಪ್ರೀತಿಯ ಜೀವನಕ್ಕೆ ವರವಾಗಿ ಸಾಬೀತುಪಡಿಸುತ್ತದೆ ಮತ್ತು ಈ ಸಮಯ್ದಲ್ಲಿ ನಿಮ್ಮ ಪ್ರೀತಿ ಜೀವನವು ಅರಳುತ್ತದೆ. ನಿಮ್ಮ ಪ್ರೀತಿಯ ಜೀವನ ಸುಧಾರಿಸುತ್ತದೆ ಮತ್ತು ಅಳವು ಸಹ ಬರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿ ಜೀವನಕ್ಕೆ ಒಂದು ಹೊಸ ದಿಕ್ಕನ್ನು ನೀಡಬಹುದು. ನೀವಿಬ್ಬರು ಒಟ್ಟಿಗೆ ಸೇರಿ ಎಲ್ಲಾದರೂ ಸುತ್ತಾಡಲು ಯೋಜಿಸಬಹುದು ಮತ್ತು ಉತ್ತಮ ಸಮಯವನ್ನು ಕಳೆಯಬಹುದು. 20 ಸೆಪ್ಟೆಂಬರ್ ನಂತರ ಪರಿಸ್ಥಿತಿಗಳು ಸ್ವಲ್ಪ ಹದಗೆಡಬಹುದು. ಆದ್ದರಿಂದ ತಾಳ್ಮೆಯಿಂದ ಕೆಲಸವನ್ನು ತೆಗೆದುಕೊಳ್ಳುವುದು ಉತ್ತಮ.

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಅರೋಗ್ಯ

ಕುಂಭ ರಾಶಿ ಭವಿಷ್ಯ 2020 ಪ್ರಕಾರ, ಈ ವರ್ಷ ನೀವು ತಮ್ಮ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸುವ ಅಗತ್ಯವಿದೆ. ನಿಮ್ಮ ರಾಶಿಚಕ್ರದ ಅಧಿಪತಿ ಗ್ರಹ ಶನಿಯು 24 ಜನವರಿಗೆ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾನೆ ಮತ್ತು ಸಂಪೂರ್ಣ ವರ್ಷ ಇದೆ ಮನೆಯಲ್ಲಿ ಇರುತ್ತಾನೆ. ಇದ್ರ ಪರಿಣಾಮದಿಂದಾಗಿ ನಿಮ್ಮ ಆರೋಗ್ಯದಲ್ಲಿ ಏರಿಳಿತದ ಪರಿಸ್ಥಿತಿ ಉಳಿದಿರುತ್ತದೆ. ವಿಶೇಷವಾಗಿ ಫೆಬ್ರವರಿ ಇಂದ ಮೇ ಮಧ್ಯ ನೀವು ನಿಮ್ಮ ಆರೋಗ್ಯದ ಬಗ್ಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಮಾನಸಿಕ ಒತ್ತಡದಲ್ಲಿ ಹೆಚ್ಚಳವಾಗುತ್ತದೆ ಇದು ಮುಖ್ಯವಾಗಿ ನಿಮ್ಮ ಎಲ್ಲಾ ದೈಹಿಕ ಸಮಸ್ಯೆಗಳ ಮೂಲ ಕಾರಣವಾಗುತ್ತದೆ.

ಕುಂಭ ರಾಶಿ ಭವಿಷ್ಯ 2020 (Kumbh Rashi 2020) ರ ಪ್ರಕಾರ, ನಿದ್ರಾಹೀನತೆ, ಕಣ್ಣಿನ ಕಾಯಿಲೆಗಳು, ಹೊಟ್ಟೆಯ ಕಾಯಿಲೆಗಳು ಇತ್ಯಾದಿಗಳು ನಿಮ್ಮನ್ನು ಕಾಡಬಹುದು. ಸಮಯವಿರುವಾಗಲೇ ಇವುಗಳಿಂದ ನೀವು ತಪ್ಪಿಸುವುದು ನಿಮಗೆ ಉತ್ತಮ. ಮಾನಸಿಕ ಒತ್ತಡವನ್ನು ಸಹ ನೀವು ಹೋರಾಡಬೇಕಾಗಬಹುದು. ಆದಾಗ್ಯೂ ಯಾವುದೇ ದೊಡ್ಡ ಸಮಸ್ಯೆ ಹೊಂದಿರುವ ಸಧ್ಯ ಕಂಡುಬರುತ್ತಿಲ್ಲ ಆದ್ದರಿಂದ ನೀವು ನೆಮ್ಮದಿಯ ಉಸಿರನ್ನು ತೆಗೆದುಕೊಳ್ಳಬಹುದು. ನೀವು ನಿಮ್ಮ ಆಹಾರ ಮತ್ತು ಪಾನೀಯವನ್ನು ನಿಯಂತ್ರಿಸಿ ಮತ್ತು ನಿಮ್ಮ ದಿನಚರಿಯನ್ನು ನಿಯಮಿತವಾಗಿ ಮಾಡಿ. ಕಾಲ ಕಾಲಕ್ಕೆ ಯೋಗಾಭ್ಯಾಸ ಮತ್ತು ಧ್ಯಾನವನ್ನು ಮಾಡುತ್ತೀರಿ, ಇದರಿಂದ ನಿಮ್ಮ ದೇಹ ಶಕ್ತಿಯುತವಾಗಿರುತ್ತದೆ ಮತ್ತು ನೀವು ಪ್ರತಿಯೊಂದು ಕಾರ್ಯವನ್ನು ಚುರುಕುತನದಿಂದ ಪೂರ್ಣಗೊಳಿಸುತ್ತೀರಿ. ಅತಿಯಾಗಿ ಹುರಿದ ಅಥವಾ ಕೊಬ್ಬಿನ ಆಹಾರವನ್ನು ಸೇವಿಸಬೇಡಿ, ಇಲ್ಲದಿದ್ದರೆ ನೀವು ಅಧಿಕ ತೂಕ ಹೊಂದಿರಬಹುದು. ವಿಟಮಿನ್ ಡಿ ಯ ಮೂಲವಾದ ಸೂರ್ಯನ ಕಿರಣಗಳು ನಿಮಗಾಗಿ ಲಭ್ಯವಿದೆ, ಅವುಗಳನ್ನು ಪೂರ್ಣವಾಗಿ ಬಳಸಿ, ಇದರಿಂದ ಸಹ ಆರೋಗ್ಯದಿಂದ ತುಂಬಿರುತ್ತೀರಿ.

ಕುಂಭ ರಾಶಿ ಭವಿಷ್ಯ 2020 ರಲ್ಲಿ ಮಾಡಬೇಕಾದ ವಿಶೇಷ ಜ್ಯೋತಿಷ್ಯ ಪರಿಹಾರಗಳು

ಈ ವರ್ಷ ನೀವು ಈ ಪರಿಹಾರಗಳನ್ನು ಪೂರ್ತಿ ವರ್ಷ ಮಾಡಬೇಕು ಇದರ ಪರಿಣಾಮದಿಂದಾಗಿ ನೀವು ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತಿರಿ ಮತ್ತು ನೀವು ಪ್ರಗತಿಯ ಮಾರ್ಗದಲ್ಲಿ ಮುಂದುವರಿಯುತ್ತಿರಿ :

  • ಈ ವರ್ಷ ನೀವು ಶ್ರೀ ಯಂತ್ರ ಸ್ಥಾಪಿಸಿ ನಿಯಮಿತವಾಗಿ ಅದನ್ನು ಪೂಜಿಸಬೇಕು.
  • ತಾಯಿ ಲಕ್ಷ್ಮಿಯ ಯಾವುದಾದರು ಮಂತ್ರವನ್ನು ಜಪಿಸಬೇಕು.
  • ಹಸುವಿಗೆ ರೊಟ್ಟಿಯನ್ನು ತಿನ್ನಿಸುವುದು ಸಹ ನಿಮಗೆ ಉತ್ತಮ.
  • ಹಾಗೆಯೇ ಹಸುವಿನ ಬಳಿಗೆ ಹೋಗಿ ಹಸುವನ್ನು ದಾನ ಮಾಡಿ.
  • ಮಹಿಳೆಯರೊಂದಿಗೆ ಗೌರವದಿಂದ ವರ್ತಿಸಿ.
  • ಇರುವೆಗಳಿಗೆ ಹಿಟ್ಟನ್ನು ಹಾಕಿ.
  • ತಮ್ಮ ಸಹೋದ್ಯೋಗಿಗಳು ಮತ್ತು ಬಡವರೊಂದಿಗೆ ಉತ್ತಮವಾಗಿ ವರ್ತಿಸಿ ಮತ್ತು ಸಾಧ್ಯವಾದಷ್ಟು ಅವರಿಗೆ ಸಹಾಯವನ್ನು ಮಾಡಿ.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 799/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com