ಮಕರ ರಾಶಿಯಲ್ಲಿ ಬುಧ ಸಂಚಾರ (5th January 2021)

ಬುಧ ಗ್ರಹವನ್ನು ಸಂವಹನ, ಬುದ್ಧಿ, ವಿಜ್ಞಾನ, ವ್ಯಾಪಾರ, ಮತ್ತು ಸಂಶೋಧನೆ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ವರ್ಷ 2021 ರ ಆರಂಭದಲ್ಲೇ ತನ್ನ ಸ್ಥಾನವನ್ನು ಬದಲಾಯಿಸುತ್ತ 05 ಜನವರಿ, ಮಂಗಳವಾರ ಬೆಳಿಗ್ಗೆ 03 ಗಂಟೆ 42 ನಿಮಿಷಕ್ಕೆ ಧನು ರಾಶಿಯಿಂದ ಮಕರ ರಾಶಿಗೆ ಸಾಗಣಿಸುತ್ತದೆ. ಇದರ ನಂತರ ಮಕರ ರಾಶಿಯಲ್ಲೇ ಮುಂದಿನ 25 ಜನವರಿ ವರೆಗೆ ಇರುತ್ತದೆ ಮತ್ತು ನಂತರ ಮಧ್ಯಾಹ್ನ 04 ಗಂಟೆ 42 ನಿಮಿಷಕ್ಕೆ ಮಕರ ರಾಶಿಯಿಂದ ಕುಂಭ ರಾಶಿಯಲ್ಲಿ ಪ್ರವೇಶಿಸುತ್ತದೆ. ಬುಧನ ಈ ಸಂಚಾರವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ನಡೆಯಿರಿ ಈಗ ಈ ಸಂಚಾರದ ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

ಮೇಷ ರಾಶಿ

ಬುಧ ಮೇಷ ರಾಶಿಚಕ್ರದ ಮೂರನೇ ಮತ್ತು ಆರನೇ ಮನೆಯ ಮಾಲೀಕನಾಗಿದ್ದು, ಈ ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಹತ್ತನೇ ಮನೆಗೆ ಸಾಗಣಿಸುತ್ತದೆ. ಬುಧನ ಈ ಸ್ಥಾನವು, ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ತೋರಿಸುತ್ತದೆ. ಏಕೆಂದರೆ ನಿಮ್ಮ ಉತ್ತಮ ಸಂವಹನ ಕೌಶಲ್ಯದಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳನ್ನು ಸಂತೋಷಪಡಿಸುವಲ್ಲಿ ಯಶಸ್ವಿಯಾಗುತ್ತೀರಿ. ಹೊಸ ತಂತ್ರಗಳನ್ನು ತಯಾರಿಸಲು ಈ ಸಮಯವೂ ಉತ್ತಮವಾಗಿರುತ್ತದೆ, ಇದರಿಂದಾಗಿ ನಿಮ್ಮ ವೃತ್ತಿ ಜೀವನದಲ್ಲಿ ಮುಂದುವರಿಯಲು ನಿಮಗೆ ಸಾಧ್ಯವಾಗುತ್ತದೆ.

ನಿಮ್ಮ ಆಲೋಚನೆಗಳು ಮತ್ತು ಸಲಹೆಗಳಿಂದ ಹಿರಿಯ ಅಧಿಕಾರಿಗಳನ್ನು ನಿಮ್ಮ ಕಡೆಗೆ ಆಕರ್ಷಿಸಲು ಸಾಧ್ಯವಾಗುತ್ತದೆ. ಶತ್ರು ಸಕ್ರಿಯರಾಗಿರುತ್ತಾರೆ. ಈ ಸಮಯದಲ್ಲಿ ವ್ಯಾಪಾರ ಅಥವಾ ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಯಾಣ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ನೀವು ಸ್ಥಾನಮಾನ ಮತ್ತು ಉತ್ತಮ ಲಾಭವನ್ನು ಪಡೆಯುತ್ತೀರಿ. ಕ್ರೀಡೆ ಅಥವಾ ಇತರ ಕಲೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಸಮಯವೂ ಉತ್ತಮವಾಗಿರಲಿದೆ.

ಈ ಸಮಯದಲ್ಲಿ ನೀವು ನಿಮ್ಮ ಆಸೆಗಳನ್ನು ಈಡೇರಿಸುವುದನ್ನು ಕಾಣಲಾಗುತ್ತದೆ. ನಿಮ್ಮ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ಕುಟುಂಬದ ಪರಿಸರವು ಸಂತೋಷವಾಗಿ ಕಂಡುಬರುತ್ತದೆ.

ಇದಲ್ಲದೆ ಈ ಸಮಯದಲ್ಲಿ ಬುಧ ಗ್ರಹವು ಶನಿಯೊಂದಿಗೆ ಸಂಯೋಜಿಸುತ್ತದೆ, ಪರಿಣಾಮವಾಗಿ ನೀವು ನಿಮ್ಮ ಪ್ರತಿಷ್ಠೆ, ಯಶಸ್ಸು ಮತ್ತು ಜವಾಬ್ದಾರಿಗಳ ಬಗ್ಗೆ ಸ್ವಲ್ಪ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಈ ಸಲಹೆ ನಿಮ್ಮ ಒತ್ತಡ ಮತ್ತು ಆಯಾಸವು ಹೆಚ್ಚಾಗುತ್ತದೆ. ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಪರಿಹಾರ - ಬುಧವಾರ ಗಣೇಶ ದೇವರಿಗೆ ದೂರ್ವಾವನ್ನು ಅರ್ಪಿಸಿ.


ಲಾಲ್ ಕಿತಾಬ್ ಕುಂಡಲಿ, ಲಾಲ್ ಕಿತಾಬ್ ಪರಿಹಾರ, ತೇವಾ ಪ್ರಕಾರಗಳು, ವಾರ್ಷಿಕ ಜಾತಕ ಮತ್ತು ಇನ್ನಷ್ಟು: ಆಸ್ಟ್ರೋಸೇಜ್ ಬೃಹತ್ ಕುಂಡಲಿ

ವೃಷಭ ರಾಶಿ

ಬುಧ ನಿಮ್ಮ ಎರಡನೇ ಮತ್ತು ಐದನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆಯಲ್ಲಿ ಕುಳಿತಿರುತ್ತಾರೆ. ಇದು ಅದೃಷ್ಟದ ಮನೆ. ಅಂತಹ ಪರಿಸ್ಥಿತಿಯಲ್ಲಿ. ವೃಷಭ ರಾಶಿಚಕ್ರದ ಸ್ಥಳೀಯರಿಗೆ ಬುಧದ ಸಂಚಾರವು ತುಂಬಾ ಅದೃಷ್ಟಶಾಲಿಯಾಗಲಿದೆ. ವಿಶೇಷವಾಗಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಅವರು ತಮ್ಮ ಹಾದಿಯಲ್ಲಿ ಬರುತ್ತಿದ್ದ ಎಲ್ಲಾ ಅಡೆತಡೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗುತ್ತಾರೆ.

ವೈಯಕ್ತಿಕ ಜೀವನದಲ್ಲಿ ದಾಂಪತ್ಯ ಜನರು ತಮ್ಮ ಮಕ್ಕಳೊಂದಿಗಿನ ಸಂಬಂಧವನ್ನು ಸುಧಾರಿಸುವುದನ್ನು ಕಾಣಲಾಗುತ್ತದೆ. ಆದರೆ ಈ ಸಮಯದಲ್ಲಿ ಮಕ್ಕಳ ಆರೋಗ್ಯವು ಹದಗೆಡುವ ಸಾಧ್ಯತೆಯೂ ಇದೆ. ಪ್ರೀತಿಯಲ್ಲಿರುವ ಸ್ಥಳೀಯರು ಈ ಸಮಯದಲ್ಲಿ ತಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಇದರಿಂದಾಗಿ ಅವರ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ. ಈ ಸಮಯದಲ್ಲಿ ಆಧ್ಯಾತ್ಮಿಕ ಮತ್ತು ರಹಸ್ಯ ವಿಜ್ಞಾನದಂತಹ ಜ್ಯೋತಿಷ್ಯ ಇತ್ಯಾದಿಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗ ಬಹುದು

ಕೆಲಸದ ಸ್ಥಳ ಮತ್ತು ಆರ್ಥಿಕ ಜೀವನದಲ್ಲಿ ಬುಧ ಸ್ವಲ್ಪ ಕಡಿಮೆ ಸಾಮಾನ್ಯ ಫಲವನ್ನು ನೀಡುತ್ತಾರೆಏಕೆಂದರೆ , ಏಕೆಂದರೆ ಈ ಸಮಯದಲ್ಲಿ ಅವರು ಶನಿಯೊಂದಿಗೆ ಸಂಯೋಜಿಸುತ್ತಾರೆ. ಪರಿಣಾಮವಾಗಿ, ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಇನ್ನೂ ಸ್ವಲ್ಪ ಕಾಯಬೇಕಾಗಬಹುದು. ಆದರೆ ಶೇರ್ ಮಾರ್ಕೆಟ್ ಇತ್ಯಾದಿಗಳಿಗೆ ಸಮಬಂಧಿಸಿದ ಜನರಿಗೆ ಉತ್ತಮ ಪ್ರಯೋಜನವನ್ನು ತರುವ ಸಮಯ ಇದು.

ಇದಲ್ಲದೆ ಈ ಸಮಯದಲ್ಲಿ ಈ ರಾಶಿಚಕ್ರದ ಕೆಲವು ಸ್ಥಳೀಯರು, ಈ ಸಮಯದಲ್ಲಿ ಉತ್ತಮ ಅವಕಾಶಗಳ ಸರಿಯಾದ ಲಾಭವನ್ನು ಪಡೆಯುವಲ್ಲಿ ವಿಫಲರಾಗಬಹುದು.

ಆರೋಗ್ಯದ ದೃಷ್ಟಿಯಿಂದಲೂ, ಸಮಯವು ಸ್ವಲ್ಪ ದುರ್ಬಲವಾಗಿರುತ್ತದೆ. ನೀವು ವಿಸ್ಮೃತಿ ಅಥವಾ ಮೆಮೊರಿ ದುರ್ಬಲವಾಗುವ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಜಾಗರೂಕರಾಗಿದ್ದು, ಸಮಯಕ್ಕೆ ತಕ್ಕಂತೆ ಪ್ರತಿಯೊಂದು ಅವಕಾಶದ ಲಾಭವನ್ನು ಪಡೆಯಲು ಪ್ರಯತ್ನಿಸಿ ಮತ್ತು ನಿಮ್ಮನ್ನು ಕೇಂದ್ರೀಕರಿಸಲು ಸಹ ಪ್ರಯತ್ನಿಸಿ.

ಪರಿಹಾರ - ಪ್ರತಿದಿನ ಬೆಳಿಗ್ಗೆ “ವಿಷ್ಣು ಸಹಸ್ತ್ರನಾಮ” ವನ್ನು ಜಪಿಸಿ.

ಮಿಥುನ ರಾಶಿ

ಬುಧವು ಮಿಥುನ ರಾಶಿಯ ಲಗ್ನದ ಮತ್ತು ಐದನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತಾರೆ. ಇದನ್ನು ಪರಿವರ್ತನೆ ಮತ್ತು ಬದಲಾವಣೆಯ ಮನೆಯೆಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ.

ಈ ಸಮಯದಲ್ಲಿ ಬುಧವು ನಿಮ್ಮ ಎಂಟನೇ ಮನೆಯ ಅಧಿಪತಿ ಶನಿಯೊಂದಿಗೆ ಸಂಯೋಜನೆ ನಡೆಸುತ್ತಾರೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ನೀವು ಕೆಲವು ಬದಲಾವಣೆಗಳು ಮತ್ತು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಮಾನಸಿಕ ಒತ್ತಡ ಮತ್ತು ಆಯಾಸವನ್ನು ಹೆಚ್ಚಿಸುತ್ತದೆ. ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತೀರಿ. ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಮತ್ತು ನೀವು ನಿಮ್ಮನ್ನು ದುರ್ಬಲರಾಗಿ ಭಾವಿಸುತ್ತೀರಿ.

ಬುಧವು ನಿಮ್ಮ ಎಂಟನೇ ಮನೆಯಲ್ಲಿದ್ದು, ಎರಡನೇ ಮನೆಗೆ ದೃಷ್ಟಿ ಹಾಕುತ್ತಿರುತ್ತದೆ. ಇದನ್ನು ಉಳಿತಾಯ ಮತ್ತು ಲಾಭದ ಮನೆಯೆಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯಲು ಯಾವುದೇ ರೀತಿಯ ಕಿರುಹಾದಿಗಳನ್ನು ಸಹ ಅಳವಡಿಸಿಕೊಳ್ಳಬಹುದು. ಆದಾಗ್ಯೂ ಹಾಗೆ ಮಾಡುವುದನ್ನು ನೀವು ತಪ್ಪಿಸಬೇಕು, ಹಣಕಾಸಿನ ಲಾಭವನ್ನು ಪಡೆಯಲು ಸರಿಯಾದ ಸರಿಯಾದ ತಂತ್ರವನ್ನು ಯೋಜಿಸುವ ಅಗತ್ಯವಿದೆ.

ಕುಟುಂಬ ಜೀವನವನ್ನು ನೋಡಿದರೆ, ನಿಮ್ಮ ತಾಯಿಯ ಆರೋಗ್ಯವು ಕ್ಷೀಣಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಲಾಗಿದೆ. ಯಾವುದೇ ಭೂಮಿಯನ್ನು ಖರೀದಿಸಲು, ಮಾರಾಟ ಮಾಡಲು ಅಥವಾ ದುರಸ್ತಿ ಮಾಡಲು ವಿಳಂಬವಾಗುವ ಸಾಧ್ಯತೆ ಇದೆ.

ಇದಲ್ಲದೆ ಈ ಸಮಯದಲ್ಲಿ ನಿಮ್ಮ ಧ್ವನಿಯಲ್ಲಿ ಕಠೋರತೆ ಉಂಟಾಗಬಹುದು. ಇದರಿಂದಾಗಿ ವಾತಾವರಣವು ನಕಾರಾತ್ಮಕವಾಗುವ ಸಾಧ್ಯತೆಯೂ ಇದೆ. ಆದಾಗ್ಯೂ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸಮಯ ಉತ್ತಮವಾಗಿರುತ್ತದೆ.

ಈ ಸಂಚಾರದ ಸಮಯವೂ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಬರುತ್ತಿದ್ದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗುತ್ತಾರೆ.

ಪರಿಹಾರ - ನಿಮ್ಮ ಬಲಗೈಯ ಚಿಕ್ಕ ಬೆರಳಿನಲ್ಲಿ ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ ಉತ್ತಮ ಗುಣಮಟ್ಟದ ಪಚ್ಛೆಯನ್ನು ಧರಿಸಿ.

ಕರ್ಕ ರಾಶಿ

ಬುಧ ನಿಮ್ಮ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ. ಇದು ಜೀವನ ಸಂಗಾತಿ ಮತ್ತು ಪ್ರವಾಸಗಳ ಮನೆ. ಭುಧದ ಈ ಸ್ಥಾನವು, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ತೋರಿಸುತ್ತಿದೆ.

ನೀವು ಸ್ವಲ್ಪ ದೂರದ ಪ್ರಯಾಣದ ಅವಕಾಶವನ್ನು ಪಡೆಯುತ್ತೀರಿ. ಇದರಿಂದಾಗಿ ನೀವು ಆರ್ಥಿಕ ಪ್ರಯೋಜನವನ್ನು ಪಡೆಯುತ್ತೀರಿ. ಬುಧನ ಈ ಸಂಚಾರವು ಐ.ಟಿ, ತಂತ್ರಜ್ಞಾನ ಮತ್ತು ಸಾರ್ವಜನಿಕ ವ್ಯವಹಾರ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಅಪೇಕ್ಷಿತ ಫಲವನ್ನು ನೀಡುತ್ತದೆ.

ಈ ಸಮಯದಲ್ಲಿ ವ್ಯಾಪಾರಸ್ಥರು, ಸಾಮಾಜಿಕ ಮಾಧ್ಯಮ, ಇಂಟರ್ನೆಟ್, ಇಮೇಲ್ ಇತ್ಯಾದಿಗಳಂತಹ ಎಲ್ಲಾ ರೀತಿಯ ಸಂವಹನ ಸಾಧನಗಳನ್ನು ಬಳಸಿಕೊಂಡು ತಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ವಿದೇಶದಲ್ಲಿ ವಾಸಿಸಲು ಬಯಸುತ್ತಿರುವವರು ಮತ್ತು ವಿದೇಶಿ ಮೂಲಗಳಿಂದ ಆದಾಯವನ್ನು ಗಳಿಸುತ್ತಿರವವರಿಗೆ ವಿಶೇಷವಾಗಿ ಬುಧ ಸಂಚಾರವು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ವೈಯಕ್ತಿಕ ಜೀವನದಲ್ಲಿ ಸಂಚಾರದ ಈ ಸ್ಥಾನವು, ನಿಮ್ಮ ಮತ್ತು ಸಂಗಾತಿಯ ನಡುವೆ ಬರುತ್ತಿದ್ದ ಪ್ರತಿಯೊಂದು ತಪ್ಪುಗ್ರಹಿಕೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಭಾವನೆಗಳನ್ನು ಮತ್ತು ಪ್ರೀತಿಯನ್ನು ನಿಮ್ಮ ಪ್ರೇಮಿಯ ಮುಂದೆ ಬಹಿರಂಗವಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗುತ್ತದೆ. ಸಮಾಜದಲ್ಲಿಯೂ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಕುಟುಂಬದ ವಾತಾವರಣವು ಉತ್ತಮವಾಗಿರುತ್ತದೆ.

ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮಗೆ ನರಮಂಡಲ ಮತ್ತು ಹೊಟ್ಟೆಗೆ ಸಂಬಂಧಿಸಿದ ಕೆಲಸವು ಸಮಸ್ಯೆಗಳಾಗಬಹುದು. ಆದ್ದರಿಂದ ಹೆಚ್ಚಿನ ತೂಕವನ್ನು ಎತ್ತುವುದನ್ನು ತಪ್ಪಿಸುವುದು ನಿಮಗೆ ಒಳ್ಳೆಯದು.

ಪರಿಹಾರ - ನಿಮ್ಮ ಕಚೇರಿ ಮತ್ತು ಮನೆಯಲ್ಲಿ ಕರ್ಪುರವನ್ನು ಬೆಳಗಿಸಿ, ಇದರಿಂದ ನೀವು ಬುಧನ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ಸಿಂಹ ರಾಶಿ

ಬುಧವು ನಿಮ್ಮ ರಾಶಿಚಕ್ರದ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಆರನೇ ಮನೆಯಲ್ಲಿ ಕುಳಿತುರುತ್ತದೆ. ಇದು ಸ್ಪರ್ಧೆ ಮತ್ತು ಸವಾಲುಗಳ ಮನೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಬುಧನ ಈ ಸಂಚಾರವು ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡಲಿದೆ.

ಕೆಲಸದ ಸ್ಥಳದಲ್ಲಿ ನೀವು ನಿಮ್ಮ ವೇಳಾಪಟ್ಟಿ ಮತ್ತು ಕಾರ್ಯಕ್ರಮಗಳನ್ನು ಸಂಘಟಿಸಬೇಕು, ನಿಮ್ಮ ಕೌಶಲ್ಯ ಮತ್ತು ಕಲೆಯನ್ನು ಸಹ ಸುಧಾರಿಸುವ ಅಗತ್ಯವಿದೆ. ಇದು ಕೆಲಸದ ಸ್ಥಳದಲ್ಲಿನ ನಿಮ್ಮ ದಕ್ಷತೆಯನ್ನು ಹೆಹಿಸುತ್ತದೆ. ನಿಮ್ಮ ಅಧೀನ ಕೆಲಸ ಮಾಡುತ್ತಿರುವ ಜನರು ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನಿಮ್ಮ ಗುರಿಯನ್ನು ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ.

ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಬ್ಯಾಂಕ್ ಅಥವಾ ಇತರ ಸಂಸ್ಥೆಗಳಿಂದ ಬೆಂಬಲ ಪಡೆಯಲು ಬಯಸುತ್ತಿದ್ದರೆ, ಈ ಸಾಮ್ಯವು ಅನುಕೂಲಕರವಾಗಿರಲಿದೆ.

ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಅರೋಗ್ಯ ಜೀವನದ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತೀರಿ. ಏಕೆಂದರೆ ಈ ಸಮಯದಲ್ಲಿ ನೀವು ವ್ಯಾಯಾಮ ಮತ್ತು ಇತರ ದೈಹಿಕ ಚಟುವಟಿಕೆಗಳನ್ನು ಆರಂಭಿಸಬಹುದು.

ಇದಲ್ಲದೆ ಈ ಸಮಯದಲ್ಲಿ ನೀವು ಯಾವುದೇ ಪೂರ್ವಜರ ಆಸ್ತಿಯ ಬಗ್ಗೆ ಕೆಲವು ಕಾನೂನು ವಿಷಯಗಳು ಅಥವಾ ನ್ಯಾಯಾಲಯದ ವಿಷಯಗಳಲ್ಲಿ ಸಿಲುಕಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಹಣಕಾಸು ಮತ್ತು ಶಕ್ತಿ ಎರಡೂ ಹಾಳಾಗುವ ಸಾಧ್ಯತೆ ಇದೆ. ಆದಾಗ್ಯೂ, ಭವಿಷ್ಯದಲ್ಲಿ ಈ ವಿಷಯದಲ್ಲಿ ನೀವು ಜಯವನ್ನು ಪಡೆಯುತ್ತೀರಿ. ಮತ್ತೊಂದೆಡೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರಲಿದೆ.

ಪರಿಹಾರ - ವಿಶೇಷವಾಗಿ ಬುಧವಾರದಂದು ನಪುಂಸಕರ ಆಶೀರ್ವಾದವನ್ನು ಪಡೆದುಕೊಳ್ಳುವುದು ನಿಮಗೆ ತುಂಬಾ ಫಲಪ್ರದವಾಗಿರುತ್ತದೆ.

ಕನ್ಯಾ ರಾಶಿ

ಬುಧವು ನಿಮ್ಮ ಲಗ್ನ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಬುಧ ಗ್ರಹವು ಕನ್ಯಾ ರಾಶಿಯಿಂದ ಐದನೇ ಮನೆಗೆ ಸಾಗುತ್ತದೆ. ನಿಮ್ಮ ಐದನೇ ಮನೆಯಲ್ಲಿ ಬುಧನ ಸ್ಥಾನದಿಂದಾಗಿ ನೀವು ವಿವಿಧ ಕ್ಷೇತ್ರಗಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ಬುಧನ ಈ ಸಂಚಾರವು ದಾಂಪತ್ಯ ಸ್ಥಳೀಯರಿಗೆ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಹೆಚ್ಚು ಹಠಮಾರಿಯನ್ನಾಗಿಸುತ್ತದೆ, ಈ ಕಾರಣದಿಂದಾಗಿ ನಿಮ್ಮ ಸಂತತಿಯೊಂದಿಗಿನ ಸಂಬಂಧದಲ್ಲಿ ದೂರ ಉಂಟಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಅನಗತ್ಯವಾಗಿ ಸಹ ಜಗಳವಾಡುತ್ತೀರಿ. ಇದಲ್ಲದೆ ನೀವು ನಿಮ್ಮ ಸಹವಾಸದ ಬಗ್ಗೆಯೂ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಇದಲ್ಲದೆ ಸಂಚಾರದ ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ಕೆಲವು ವಿರುದ್ಧ ಪರಿಸ್ಥಿತಿಗಳು ಉಂಟಾಗಬಹುದು. ಪರಿಣಾಮವಾಗಿ ನಿಮ್ಮ ಉದ್ಯೋಗದ ಬಗ್ಗೆ ಅಭದ್ರತೆ ಮತ್ತು ಅನಿಶ್ಚಿತತೆಯ ಭಾವನೆಗಳು ನಿಮ್ಮನ್ನು ಕಾಡಬಹುದು ಮತ್ತು ಇದರಿಂದಾಗಿ ನಿಮ್ಮ ಒತ್ತಡವು ಹೆಚ್ಚಾಗುತ್ತದೆ.

ಮಾನಸಿಕ ಒತ್ತಡದ ಕಾರಣದಿಂದಾಗಿ, ಕೆಲವು ನಿರ್ಧಾರಗಳನ್ನು ನೀವು ತುರಾತುರಿಯಲ್ಲಿ ತೆಗೆದುಕೊಳ್ಳುವಿರಿ, ಇದರಿಂದಾಗಿ ನೀವು ಭವಿಷ್ಯದಲ್ಲಿ ಯಾವುದೇ ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿಯಲ್ಲಿ ನೀವು ನಿಮ್ಮನ್ನು ಶಾಂತವಾಗಿರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಸಮಯ ಸಾಮಾನ್ಯವಾಗಿರುತ್ತದೆ. ಅಧ್ಯಯನದಲ್ಲಿ ನಿಮ್ಮ ಪ್ರದರ್ಶನವನ್ನು ಉತ್ತಮಗೊಳಿಸಲು ಹೆಚ್ಚು ಕಠಿಣ ಪರಿಶ್ರಮ ಮಾಡುವ ಅಗತ್ಯವಿದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಒತ್ತಡ ಮತ್ತು ಚಿಂತೆ ಹೆಚ್ಚಾಗುತ್ತದೆ. ಇದರಿಂದಾಗಿ ಅಜೀರ್ಣ, ಮಲಬದ್ಧತೆ ಮುಂತಾದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮನ್ನು ಸಾಧ್ಯವಾದಷ್ಟು ಶಾಂತವಾಗಿರಿಸಿಕೊಂಡು ವಿಶ್ರಾಂತಿ ಪಡೆಯಿರಿ.

ಪರಿಹಾರ - ಪ್ರತಿದಿನ ತುಳಸಿ ಸಸ್ಯಕ್ಕೆ ನೀರನ್ನು ಅರ್ಪಿಸಿ, ಅದನ್ನು ಪೂಜಿಸಿ.

ತುಲಾ ರಾಶಿ

ಬುಧ ನಿಮ್ಮ ರಾಶಿಚಕ್ರದ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತಾರೆ. ಇದು ಸಂತೋಷ, ಮನೆ, ತಾಯಿ ಮತ್ತು ವಿಶ್ರಾಂತಿಯ ಮನೆ. ಈ ಸಂಚಾರದ ಪರಿಣಾಮವಾಗಿ ಕುಟುಂಬ ಜೀವನದಲ್ಲಿ ಸಂತೋಷ ಬರುತ್ತದೆ. ತಾಯಿಯ ಆರೋಗ್ಯವು ಸುಧಾರಿಸುತ್ತದೆ. ಇದರಿಂದಾಗಿ ನೀವು ಸಂತೋಷಪಡುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಜೀವನದಿಂದ ತೃಪ್ತರಾಗಿರುತ್ತೀರಿ. ಸಂಗಾತಿಯ ಮೂಲಕ ಯಾವುದೇ ದೊಡ್ಡ ಲಾಭವನ್ನು ಪಡೆಯುತ್ತೀರಿ.

ವೈಯಕ್ತಿಕ ಜೀವನದ ಸಕಾರಾತ್ಮಕತೆಯು, ನಿಮ್ಮ ಕೆಲಸದ ಸ್ಥಳದಲ್ಲಿಯೂ ನಿಮಗೆ ಯಶಸ್ಸು ನೀಡುತ್ತದೆ. ಇದರಿಂದಾಗಿ ಆದಾಯವು ಹೆಚ್ಚಿಸುವ ಅವಕಾಶವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರವಾಸಗಳು ನಿಮಗೆ ಪ್ರಯೋಜನಕಾರಿಯಾಗುತ್ತವೆ. ಏಕೆಂದರೆ ಇದರಿಂದ ತೃಪ್ತಿಯೊಂದಿಗೆ ನೀವು ಹಣಕಾಸು ಪಡೆಯುವ ಸಾಧ್ಯತೆಯೂ ಇದೆ. ವಿದ್ಯಾರ್ಥಿಗಳಿಗೆ ಈ ಸಂಚಾರವು ಉತ್ತಮವಾಗಿರಲಿದೆ. ಏಕೆಂದರೆ ಅವರ ಏಕಾಗ್ರತೆ ಹೆಚ್ಚಾಗುವುದರಿಂದ, ತಮ್ಮ ಎಲ್ಲಾ ವಿಷಯಗಳನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಈ ಸಮಯವು ನಿಮ್ಮ ಸಮೃದ್ಧಿ ಮತ್ತು ಐಷಾರಾಮಿಯಲ್ಲಿ ಹೆಚ್ಚಳವನ್ನು ತರುತ್ತದೆ, ಈ ಕಾರಣದಿಂದಾಗಿ ಯಾವುದೇ ಹೊಸ ಭೂಮಿ ಅತಃವ ಸಂಪತ್ತಿನಲ್ಲಿ ಹೂಡಿಕೆ ಮಾಡಲು ನಿರ್ಧರಿಸಲು ಸಾಧ್ಯವಾಗುತ್ತದೆ. ಪ್ರೀತಿಗೆ ಸಂಬಂಧಿಸಿದ ಯಾವುದೇ ನಿರ್ಧವನ್ನು ತೆಗೆದುಕೊಳ್ಳುವಾಗ ಮನಸ್ಸಿನ ಬದಲು ಹೃದಯವನ್ನು ಬಳಸಿ ಎಂದು ಸಲಹೆ ನೀಡಲಾಗಿದೆ.

ಪರಿಹಾರ - ಪ್ರತಿದಿನ ಬುಧನ ಹೋರಾ ಸಮಯದಲ್ಲಿ ಬುಧ ಗ್ರಹದ ಬೀಜ ಮಂತ್ರವನ್ನು ಜಪಿಸಿ.

ವೃಶ್ಚಿಕ ರಾಶಿ

ಬುಧ ಗ್ರಹವು ವೃಶ್ಚಿಕ ರಾಶಿಚಕ್ರದ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಸಾಗುತ್ತಾರೆ. ಇದು ಸಂವಹನ ಮಾಧ್ಯಮ, ಸಹೋದರ ಸಹೋದರಿಯರು ಮತ್ತು ಸಣ್ಣ ಪ್ರವಾಸಗಳ ಮನೆಯಾಗಿದೆ. ಈ ಸಂಚಾರದ ಸಮಯವು ವೃಶ್ಚಿಕ ರಾಶಿಚಕ್ರದ ಜನರಿಗೆ ಉತ್ತಮವಾಗಿರಲಿದೆ.

ನಿಮ್ಮ ಹನ್ನೊಂದನೇ ಮನೆಯ ಅಧಿಪತಿ ಬುಧ, ಈ ಸಮಯದಲ್ಲಿ ನಿಮ್ಮ ಎರಡನೇ ಮನೆಯ ಅಧಿಪತಿ ಗುರುವಿನೊಂದಿಗೆ ಸಂಯೋಜಿಸುತ್ತದೆ. ಇದರಿಂದಾಗಿ ನಿಮ್ಮ ಆದಾಯ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆದ್ದರಿಂದ ಉದ್ಯೋಗಪರರು ಮತ್ತು ತಮ್ಮ ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿರುವವರಿಗೆ ಸಮಯ ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ಇದು ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ.

ಮನರಂಜನೆ ಮತ್ತು ಆನಂದಕ್ಕಾಗಿ ಮಾಡಲಾಗುವ ಸಣ್ಣ ದೂರದ ಪ್ರಯಾಣದಿಂದ ಲಾಭವಾಗುತ್ತದೆ. ಇದರೊಂದಿಗೆ ಸಾರ್ವಜನಿಕ ವ್ಯವಹಾರ, ದೂರಸಂಪರ್ಕ, ಕೋಶ, ಪ್ರವಾಸೋದ್ಯಮ ಮತ್ತು ಪ್ರವಾಸಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಈ ಸಂಚಾರದ ಸಮಯವೂ ತುಂಬಾ ಉತ್ತಮವಾಗಿರಲಿದೆ.

ವೈಯಕ್ತಿಕ ಜೀವನದಲ್ಲಿ ನಿಮ್ಮ ಕಾರ್ಯನಿರತ ಜೀವನದಿಂದ ಸಮಯವನ್ನು ತೆಗೆದುಕೊಂಡು, ಸಹೋದರ ಸಹೋದರಿಯರೊಂದಿಗೆ ಕೆಲವು ಕ್ಷಣಗಳನ್ನು ಕಳೆಯಿರಿ ಮತ್ತು ಅವರ ನಿರೀಕ್ಷೆಗಳು ಮತ್ತು ಆಸೆಗಳನ್ನು ಅರ್ಥಮಾಡಿಕೊಳ್ಳಿ ಎಂದು ಸಲಹೆ ನಿಮಗೆ ನೀಡಲಾಗಿದೆ. ಆಗ ಮಾತ್ರ ಅವರೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ಸಾಧ್ಯವಾಗುತ್ತದೆ.

ಆರೋಗ್ಯದ ದೃಷ್ಟಿಯಿಂದ, ನಿಮಗೆ ಕೆಲವು ಸಮಸ್ಯೆಗಳು ಉಂಟಾಗುತ್ತವೆ. ಈ ಸಮಯದಲ್ಲಿ, ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸೋಂಕು ಅಥವಾ ಕಿವಿ, ಕಣ್ಣು, ಇತ್ಯಾದಿಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು ಎಂದು ನಿರಿಕ್ಷಿಸಲಾಗಿದೆ. ಆದ್ದರಿಂದ ನಿಮ್ಮ ಆಹಾರ ಪಾನೀಯದತ್ತ ಗಮನ ಹರಿಸಿ, ಧೂಳು ಮತ್ತು ಮಾಲಿನ್ಯವಿರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಪ್ರತಿದಿನ ಬೆಳಿಗ್ಗೆ ಬುಧ ಯಂತ್ರವನ್ನು ಪೂಜಿಸಿ.


ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಿ: ಜ್ಯೋತಿಷ್ಯ ಸಮಾಲೋಚನೆ

ಧನು ರಾಶಿ

ಧನು ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚಾರವು ನಿಮ್ಮ ಎರಡನೇ ಮನೆಯನ್ನು ಪ್ರಭಾವಿಸುತ್ತದೆ. ಇದನ್ನು ಕುಟುಂಬ, ಆದಾಯ, ಉಳಿತಾಯ, ಧ್ವನಿ ಮತ್ತು ಆಹಾರ ಪದ್ಧತಿಯನ್ನು ತೋರಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ಗಮನ ಹರಿಸಬೇಕು. ಏಕೆಂದರೆ ಈ ಸಮಯದಲ್ಲಿ ಒಸಡುಗಳು ಮತ್ತು ಹಲ್ಲುಗಳಿಗೆ ಸಂಬಂಧಿಸಿದ ಸಮಸೆಗಳನ್ನು ನೀವು ಹೊಂದಿರಬಹುದು.

ಈ ಸಂಚಾರದ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಮತ್ತು ಪ್ರೇಮಿಗೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿ. ಇದಲ್ಲದೆ ಮದುವೆಗೆ ಅರ್ಹರಾಗಿರುವ ಜನರು ಈ ಸಮಯದಲ್ಲಿ ಮದುವೆಯ ಅನೇಕ ಉತ್ತಮ ಪ್ರಸ್ತಾಪಗಳನ್ನು ಪಡೆಯುವ ಸಾಧ್ಯತೆ ಇದೆ.

ಕುಟುಂಬ ವ್ಯಾಪಾರ ಮತ್ತು ಪಾಲುದಾರಿಕೆಯ ವ್ಯಾಪರದಲ್ಲಿ ತೊಡಗಿರುವ ಜನರಿಗೂ ಈ ಸಮಯ ವಿಶೇಷವಾಗಿ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ವ್ಯಾಪಾರದಲ್ಲಿ ನಿರಂತರವಾಗಿ ಅಭಿವೃದ್ಧಿಯನ್ನು ಕಾಣಲಾಗುತ್ತದೆ. ಬುಧವು ನಿಮ್ಮ ಸಂವಹನ ಶೈಲಿಯನ್ನು ಸುಧಾರಿಸುತ್ತದೆ. ಇದರ ಸಹಾಯದಿಂದ, ಹಿಂದಿನ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಎಲ್ಲಾ ವ್ಯವಹಾರಗಳು ಮತ್ತು ಯೋಜನೆಗಳಿಂದ ಸಹ ನೀವು ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ನೀವು ಯಾವುದೇ ಸಂಸ್ಥೆಯೊಂದಿಗೆ ಕಾರ್ಯನಿರತರಾಗಿದ್ದರೆ, ನಿಮ್ಮ ಪರಿಶ್ರಮ ಮತ್ತು ಒಲವಿನ ಕಾರಣದಿಂದಾಗಿ ನಿಮಗೆ ನಿಮ್ಮ ವರಿಷ್ಠ ಮತ್ತು ಉನ್ನತ ಅಧಿಕಾರಿಗಳ ಮೂಲಕ ಮೆಚ್ಚುಗೆ ಸಿಗುತ್ತದೆ. ಭೂಮಿ, ಸಂಪತ್ತು, ಸರ್ಕಾರಿ ಬಾಂಡ್ ಅಥವಾ ಯಾವುದೇ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಈ ಸಮಯ ಅನುಕೂಲಕರ ಅವಕಾಶಗಳನ್ನು ತರಲಿದೆ.

ಸ್ಪರ್ಧಾತ್ಮಕ ಮತ್ತು ಇತರ ಯಾವುದೇ ಪರೀಕ್ಷೆಯನ್ನು ನೀಡುತ್ತಿರುವ ಜನರಿಗೆ ಸಮಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಅವರು ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಪರಿಹಾರ - ಅಗತ್ಯವಿರುವವರಿಗೆ ಪುಸ್ತಕಗಳು ಮತ್ತು ಶಿಕ್ಷಣದ ಸಾಮಗ್ರಿಗಳನ್ನು ನೀಡಿ.

ಮಕರ ರಾಶಿ

ಬುಧ ಸಂಚಾರದ ಈ ಸಮಯದಲ್ಲಿ ಮಕರ ರಾಶಿಚಕ್ರದ ಸ್ಥಳೀಯರು ಸೃಜನಶೀಲ ಆಲೋಚನೆಗಳಿಂದ ತುಂಬಿರುತ್ತಾರೆ. ಏಕೆಂದರೆ ಬುಧವು ನಿಮ್ಮದೇ ರಾಶಿಯಲ್ಲಿ ಸಾಗಣಿಸುತ್ತ , ನಿಮ್ಮ ಲಗ್ನದ ಮನೆಯನ್ನು ಪ್ರಭಾವಿಸುತ್ತದೆ. ಬುಧನ ಈ ಸ್ಥಾನ ಮತ್ತು ಅದರ ಪ್ರಭಾವದಿಂದ, ನಿಮ್ಮ ಸ್ಥಾನಮಾನ ಮತ್ತು ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ.

ನಿಮ್ಮ ಯೋಚಿಸುವ, ಅರ್ಥಮಾಡಿಕೊಳ್ಳುವ, ವಿಶ್ಲೇಷಿಸುವ ಮತ್ತು ವ್ಯಾಪಾರ ಮಾಡುವ ಸಾಮರ್ಥ್ಯವು ಅತ್ಯಂತ ಪ್ರಬಲವಾಗಿರುತ್ತದೆ. ಈ ಕಾರಣದಿಂದಾಗಿ ನೀವು ನಿಮ್ಮ ದಾರಿಯಲ್ಲಿ ಬರುತ್ತಿದ್ದ ಪ್ರತಿಯೊಂದು ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತೀರಿ. ಇದರಿಂದಾಗಿ ನೀವು ಪ್ರತಿಯೊಂದು ಕೆಲಸದಲ್ಲಿ ಅದ್ಭುತ ಯಶಸ್ಸನ್ನು ಪಡೆಯುತ್ತೀರಿ.

ನಿಮ್ಮ ಲಗ್ನದ ಮನೆಯಲ್ಲಿ ಬುಧನ ಇರುವಿಕೆಯು, ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ನಿಮಗೆ ಅನಗತ್ಯ ವಿವಾದ ಅಥವಾ ಮಾತುಗಳಲ್ಲಿ ಸಿಲುಕಿಸಿ, ನಿಮ್ಮ ಸಮಯವನ್ನು ಹಾಳುಮಾಡಬಹುದು. ಇದು ನಿಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಸಹ ಹಾನಿಗೊಳಿಸುತ್ತದೆ.

ಕಾಲಪುರುಷ ಜಾತಕದ ಪ್ರಕಾರ, ಬುಧ ದೇವ ನಿಮ್ಮ ಒಂಬತ್ತನೇ ಮನೆಯ ಅಧಿಪತಿ. ಅಂತಹ ಸಂದರ್ಭದಲ್ಲಿ ಆರ್ಥಿಕ ಜೀವನದಲ್ಲಿ ನೀವು ಅದೃಷ್ಟದ ಬೆಮಬಲವನ್ನು ಪಡೆಯುತ್ತೀರಿ. ಇದರಿಂದಾಗಿ ನಿಮಗೆ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಆದರೆ ಬುಧನ ಈ ಸ್ಥಾನದ ಕಾರಣದಿಂದಾಗಿ ನೀವು ಎಲ್ಲವನ್ನೂ ತನಿಖೆ ಮಾಡುವಿರಿ ಮತ್ತು ಎಲ್ಲಾ ಪ್ರಯತ್ನಗಳಲ್ಲಿ ಸಂಪೂರ್ಣ ಯಶಸ್ಸನ್ನು ಸಾಧಿಸಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಕೆಲವು ಸಮಸ್ಯೆಗಳನ್ನ ಎದುರಿಸಬೇಕಾಗಬಹುದು.

ಆರೋಗ್ಯದ ದೃಷ್ಟಿಯಿಂದಲೂ, ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ಯಾವುದೇ ರೀತಿಯ ಚರ್ಮ ರೋಗ, ಅಲೆರ್ಜಿ ಅಥವಾ ಹಾರ್ಮೋನ್, ಇತ್ಯಾದಿಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಾಗುತ್ತವೆ ಎಂದು ನಿರೀಕ್ಷಿಸಲಾಗುತ್ತದೆ.

ಪರಿಹಾರ - ಪ್ರತಿದಿನ ಸೂರ್ಯೋದಯದ ಸಮಯದಲ್ಲಿ “ ಓಂ ನಮೋ ಭಾಗವತೇ ವಾಸುದೇವಾಯಃ ಮಂತ್ರವನ್ನು ಜಪಿಸಿ.

ಕುಂಭ ರಾಶಿ

ಬುಧ ಗ್ರಹವು ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಗೆ ಸಾಗಾಣಿಸುವುದು, ಕುಂಭ ರಾಶಿಚಕ್ರದ ಸ್ಥಳೀಯರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಆದಾಗ್ಯೂ, ಬುಧನ ಈ ಸಂಚಾರವು ವಿದ್ಯಾರ್ಥಿಗಳಿಗೆ ಶುಭವಾಗಿರುತ್ತದೆ. ವಿಶೇಷವಾಗಿ ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣವನ್ನು ಪಡೆಯಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಶುಭ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ.

ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಗುರಿಯನ್ನು ಸಾಧಿಸಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಯಾಕೆಂದರೆ ಬುಧವು ಕರ್ಮದ ಫಲವನ್ನು ನೀಡುವ ಶನಿಯಿಂದ ಬಳಲುತ್ತದೆ, ಈ ಕಾರಣದಿಂದಾಗಿ ನೀವು ನಿಮ್ಮ ಜೀವನದಲ್ಲಿ ತುಂಬಾ ನಿಧಾನಗತಿಯಲ್ಲಿ ಚಲಿಸುವುದನ್ನು ಕಾಣಲಾಗುತ್ತದೆ. ಇದರಿಂದಾಗಿ ನೀವು ಹತಾಶೆ, ಒತ್ತಡ ಮತ್ತು ಅಸಮಾಧಾನವನ್ನು ಆಭವಿಸುತ್ತೀರಿ. ಆದ್ದರಿಂದ ಆರಂಭದಿಂದಲೇ ಧೈರ್ಯವನ್ನು ಹೊಂದಿರುವುದು ನಿಮಗೆ ಏಕೈಕ ಆಯ್ಕೆಯಾಗಿದೆ.

ಆದ್ದರಿಂದ ಸಾಧ್ಯವಾದಷ್ಟು ಪ್ರತಿಯೊಂದು ರೀತಿಯ ವಿವಾದಗಳು ಮತ್ತು ಜಗಳಗಳಿಂದ ದೂರವಿರಲು ಪ್ರಯತ್ನಿಸಿ, ಏಕೆಂದರೆ ಇದರಿಂದಾಗಿ ನಿಮಗೆ ನಷ್ಟವಾಗಬಹುದು. ಇದರೊಂದಿಗೆ ಸಂಚಾರದ ಸಮಯದಲ್ಲಿ ಸುಳ್ಳು ಹೇಳುವುದನ್ನು ತಪ್ಪಿಸಿ. ಇಲ್ಲದಿದ್ದರೆ ನಿಮ್ಮ ಚಿತ್ರ ಹದಗೆಡುವ ಸಾಧ್ಯತೆ ಇದೆ.

ಆರ್ಥಿಕ ಜೀವನದಲ್ಲಿ ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು ನಿಮಗೆ ಸಲಹೆ ನೀಡಲಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯದಲ್ಲಿ ನೀವು ವಿಶೇಷವಾಗಿ ಎಚ್ಚರದಿಂದಿರಬೇಕು. ಇಲ್ಲದಿದ್ದರೆ ಕಾಲು ಮತ್ತು ಹೊಟ್ಟೆಗೆ ಸಮಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇದರೊಂದಿಗೆ ಬುಧದ ಸ್ಥಾನದಿಂದಾಗಿ ನೀವು ನಿಮ್ಮ ಹಳೆಯ ಅನುಭವಗಳು ಮತ್ತು ಅರ್ಹಾತೆಗಳಿಂದಾಗಿ ನೀವು ಅನಗತ್ಯ ಭಯ ಮತ್ತು ತಪ್ಪು ತಿಳುವಳಿಕೆಗೆ ಒಳಗಾಗಬಹುದು.

ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯ ಮುಂದೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಸ್ವಲ್ಪ ತೊಂದರೆಯನ್ನು ಅನುಭವಿಸುತ್ತೀರಿ. ಇದರಿಂದಾಗಿ ನಿಮ್ಮ ಮತ್ತು ಸಂಗಾತಿಯ ನಡುವೆ ವಿರೋಧಾಭಾಸದ ಸ್ಥಿತಿ ಉದ್ಭವಿಸಬಹುದು. ಆದ್ದರಿಂದ ಅವರೊಂದಿಗೆ ಸಾಧ್ಯವಾದಷ್ಟು ಸ್ಪಷ್ಟವಾಗಿ ಮಾತನಾಡಿ ಮತ್ತು ಅವರನ್ನು ಅರ್ಥಮಾಡಿಕೊಳ್ಳಿ.

ಪರಿಹಾರ - ಮನೆ ಮತ್ತು ಕಚೇರಿಯಲ್ಲಿ ಕರ್ಪುರವನ್ನು ಬೆಳಗಿಸಿ.

ಮೀನಾ ರಾಶಿ

ಬುಧವು ಸಂಚಾರದ ಈ ಸಮಯದಲ್ಲಿ ಮೀನಾ ರಾಶಿಚಕ್ರದ ಸ್ಥಳೀಯರಿಗೆ ಜೀವನ ಸಂಗಾತಿಯ ಮೂಲಕ ಪ್ರೀತಿ, ಲಾಭ ಮತ್ತು ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಏಕೆಂದರೆ ಈ ಸಮಯದಲ್ಲಿ ಬುಧ ಗ್ರಹವು ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಗೆ ಸಾಗುತ್ತದೆ. ಇದನ್ನು ಲಾಭ, ಯಶಸ್ಸು ಮತ್ತು ಪ್ರಯೋಜನದ ಮನೆಯೆಂದು ಕರೆಯಲಾಗುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರು ಉತ್ತಮ ಪ್ರಯೋಜನವನ್ನು ಪಡೆಯುತ್ತಾರೆ. ಇದರೊಂದಿಗೆ ತುಂಬಾ ಸಮಯದ ನಂತರ ನಿಮ್ಮ ಸ್ನೇಹಿತರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ.

ಈ ಸಾಗಣೆಯ ಸಮಯದಲ್ಲಿ, ಇತರರನ್ನು ಕೇಳುವ ಮತ್ತು ಇತರರೊಂದಿಗೆ ಸಂವಹನ ಮಾಡುವ ಉತ್ತಮವಾದ ಸಾಮರ್ಥ್ಯವು, ನಿಮಗೆ ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಅಡಿಯಲ್ಲಿ ಕೆಲಸ ಮಾಡುತ್ತಿರುವ ಜನರ ನಡುವೆ ಜನಪ್ರಿಯತೆಯನ್ನು ನೀಡುತ್ತದೆ. ಇದು ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ನಿಮ್ಮ ಹಿರಿಯ ಅಧಿಕಾರಿಗಳು ಸಹ ನಿಮ್ಮನ್ನು ಪ್ರಶಂಸಿಸುತ್ತಾರೆ.

ಕೆಲಸದ ಸ್ಥಳದಲ್ಲಿನ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ನಿಮ್ಮ ಪ್ರಯತ್ನ ಮತ್ತು ಸಾಮರ್ಥ್ಯವು ಮೆಚ್ಚುಗೆ ನೀಡುವ ಕೆಲಸ ಮಾಡುತ್ತದೆ. ಇದರೊಂದಿಗೆ ವ್ಯಾಪಾರಸ್ಥರು ಸಹ ವಿವಿಧ ಮೂಲಗಳಿಂದ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ.

ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇದರೊಂದಿಗೆ ಹೊಸ ವಿಷಯಗಳನ್ನು ಕಲಿಯುವ ಕುತೂಹಲ ಮತ್ತು ಅರ್ಥಮಾಡಿಕೊಳ್ಳುವ ನಿಮ್ಮ ಶಕ್ತಿ ಬೆಳೆಯುತ್ತದೆ. ಇದರಿಂದಾಗಿ ಎಲ್ಲಾ ವಿಷಯಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯ ನಿಮಗೆ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮನ್ನು ಹೆಚ್ಚು ಶಕ್ತಿಯುತರಾಗಿ ಅನುಭವಿಸುತ್ತೀರಿ.

ಪರಿಹಾರ - ನಿಯಮಿತವಾಗಿ ತುಳಸಿ ಸಸ್ಯೆಯನ್ನು ಪೂಜಿಸಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer