ಮೇಷ ರಾಶಿಯಲ್ಲಿ ಮಂಗಳ ಸಂಚಾರ (24 ಡಿಸೆಂಬರ್ 2020)
ಮಂಗಳ ಗ್ರಹವು 24 ಡಿಸೆಂಬರ್ ರಂದು ಮಧ್ಯಾಹ್ನ 11:42 ಗಂಟೆಗೆ ಮೀನಾ ರಾಶಿಯಿಂದ ಹೊರಬಂದು ತನ್ನದೇ ರಾಶಿಯಾದ ಮೇಷದಳ್ಳಿ ಪ್ರವೇಶಿಸುತ್ತದೆ. ಮೇಷ ರಾಶಿಯು ಮಂಗಳ ಗ್ರಹದ ಅಧಿಪತ್ಯದ ರಾಶಿಯಾಗಿದೆ ಮತ್ತು ಬೆಂಕಿಯ ಅಂಶದ ರಾಶಿ. ಇದಲ್ಲದೆ ಮಂಗಳವು ಸ್ವತಃ ಬೆಂಕಿಯ ಅಂಶದ ಗ್ರಹವಾಗಿದೆ. ಈ ರೀತಿಯಾಗಿ, ಇದು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ ಸಾಬೀತುಪಡಿಸುತ್ತದೆ, ದೇಶ ಮತ್ತು ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಆವೇಗ ಬರುತ್ತದೆ. ಈ ಕ್ಷೇತ್ರಗಳು ಒಳ್ಳೆಯದು ಮತ್ತು ಕೆಟ್ಟದ್ದಾಗಿರಬಹುದು. ಏಕೆಂದರೆ ಮಂಗಳ ಸಂಚಾರದ ವಿಭಿನ್ನ ಪರಿಣಾಮವು ವಿಭಿನ್ನ ರಾಶಿಗಳ ಮೇಲೆ ಕಂಡುಬರುತ್ತದೆ. .
ಮಂಗಳ ಗ್ರಹವನ್ನು ದೇವರುಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಮೇಷ ಮತ್ತು ವೃಶ್ಚಿಕ ರಾಶಿಗಳು ಇದರ ಅಧೀನದಲ್ಲಿವೆ. ಇದು ಕರ್ಕ ರಾಶಿಯಲ್ಲಿ ದುರ್ಬಲ ಸ್ಥಿತಿಯಲ್ಲಿ ಮತ್ತು ಮಕರ ರಾಶಿಯಲ್ಲಿ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಪರಿಗಣಿಸಲಾಗಿದೆ. ಸೂರ್ಯ, ಗುರು ಮತ್ತು ಚಂದ್ರ ಅದರ ಆಪ್ತ ಸ್ನೇಹಿತರು. ಮೃಗಶಿರಾ, ಧನಿಷ್ಟಾ ಮತ್ತು ಚಿತ್ರ ನಕ್ಷತ್ರಗಳು ಮಂಗಳ ಗ್ರಹದ ನಕ್ಷತ್ರಪುಂಜಗಳು. ಇದು ಒಂದು ಉರಿಯುತ್ತಿರುವ ಗ್ರಹ ಮತ್ತು ಜಾತಕದ ಮೊದಲನೇ, ನಾಲ್ಕನೇ, ಏಳನೇ, ಎಂಟನೇ ಮತ್ತು ಹನ್ನೆರಡನೇ ಮನೆಯಲ್ಲಿ ಮಂಗಳನ ಸ್ಥಾನವು ಮಂಗಲಿಕ ದೋಷವನ್ನು ಉಂಟು. ಮಾಡುತ್ತದೆ. ತನ್ನ ಸಂಚಾರದ ಸಮಯದಲ್ಲಿ ಮಂಗಳ ಗ್ರಹವು ಶೀಘ್ರ ಫಲಿತಾಂಶಗಳನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಆದ್ದರಿಂದ ಮೇಷ ರಾಶಿಯಲ್ಲಿ ಮಂಗಳ ಗ್ರಹದ ಸಾಗಣೆಯು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ನಾವು ಈಗ ತಿಳಿದುಕೊಳ್ಳೋಣ.
ಯಾವುದೇ ಸಮಸ್ಯೆಯಿದೆ ತೊಂದರೆಗೀಡಾಗಿದ್ದರೆ, ಪರಿಹಾರಕ್ಕಾಗಿ ಪ್ರಶ್ನೆ ಕೇಳಿ
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
- ಮೇಷ ರಾಶಿ
ಮಂಗಳನ ಪ್ರತಿಯೊಂದು ಸಂಚಾರವು ನಿಮ್ಮ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಏಕೆಂದರೆ ಇದು ನಿಮ್ಮ ರಾಶಿಯ ಅಧಿಪತಿ. ಇದಲ್ಲದೆ, ಇದು ನಿಮ್ಮ ಎಂಟನೇ ಮನೆಯ ಮೇಲೆ ಅಧಿಕಾರವನ್ನು ಹೊಂದಿರುತ್ತದೆ. ಮೊದಲನೇ ಮನೆಯು ನಿಮ್ಮ ವಿಶಿಷ್ಟ ಲಕ್ಷಣಗಳು, ದೈಹಿಕ ರಚನೆ, ನೋಟ, ಬಣ್ಣ ಮತ್ತು ಉತ್ತಮ ದೇಹದ ಬಗ್ಗೆ ಹೇಳುತ್ತದೆ. ಈ ಮನೆಯ ಮೂಲಕ ನಿಮ್ಮ ಮೆದುಳು ಮತ್ತು ಬಿದ್ಧಿಯ ಬಗ್ಗೆಯೂ ಮಾಹಿತಿಯನ್ನು ಪಡೆಯಲಾಗುತ್ತದೆ. ಎಂಟನೇ ಮನೆ ಅನಿಶ್ಚಿತತೆಯಿಂದ ತುಂಬಿರುವ ಮನೆಯಾಗಿದೆ. ಏಕೆಂದರೆ ಇದು ಜೀವನದಲ್ಲಿ ಇದ್ದಕ್ಕಿದ್ದಂತೆ ಸಂಭವಿಸುವ ಬದಲಾವಣೆಗಳನ್ನು ಹೇಳುತ್ತದೆ. ಮಂಗಳ ಸಂಚಾರವು ನಿಮ್ಮದೇ ರಾಶಿಯಲ್ಲಿ ಅಂದರೆ ನಿಮ್ಮ ಮೊದಲನೇ ಮನೆಯಲ್ಲಿ ಸಂಭವಿಸಲಿದೆ. ಮೊದಲನೇ ಮನೆಯಲ್ಲಿ ಮಂಗಳ ಸಂಚಾರವನ್ನು ಸಾಮಾನ್ಯವಾಗಿ ಶುಭವೆಂದು ಪರಿಗಣಿಸಲಾಗುವುದಿಲ್ಲ. ಆದರೆ ನಿಮ್ಮ ರಾಶಿಯಲ್ಲಿ ಇರುವುದರಿಂದಾಗಿ ಖಂಡಿತವಾಗಿಯೂ ಕೆಲವು ಶುಭ ಫಲಿತಾಂಶಗಳನ್ನು ಇದು ಒದಗಿಸುತ್ತದೆ.
ಮಂಗಳ ಗ್ರಹದ ಈ ಸಾಗಣೆಯ ಪರಿಣಾಮವಾಗಿ ನಿಮ್ಮ ನಡವಳಿಕೆಯಲ್ಲಿ ವೇಗವಾಗಿ ಬದಲಾವಣೆಗಳು ಉಂಟಾಗುತ್ತವೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಆತುರವನ್ನು ಕಾಣಲಾಗುತ್ತದೆ. ಈ ಆತುರವೂ ನಿಮ್ಮನ್ನು ಕೆಲವೊಮ್ಮೆ ತೊಂದರೆಗೆ ಸಿಲುಕಿಸಬಹುದು. ನಂತರ ನೀವು ವಿಷೇದಿಸಬೇಕಾದಂತಹ ಕೆಲವು ಪರಿಸ್ಥಿತಿಗಳು ಸಹ ಉಂಟಾಗಬಹುದು. ಆದ್ದರಿಂದ ಧೈರ್ಯದಿಂದಿರುವುದು ಅವಶ್ಯಕ. ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ನಿಮ್ಮ ದಾಂಪತ್ಯ ಜೀವನದಲ್ಲಿ ಕೆಅಲ್ವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ಸಮಯದಲ್ಲಿ ಇದರ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು.
ಈ ಸಮಯದಲ್ಲಿ ನೀವು ಸ್ವಲ್ಪ ಹಠಮಾರಿ ಮತ್ತು ನಿಮ್ಮ ವಿಷಯವನ್ನು ಮನವೊಲಿಸುವ ನಡವಳಿಕೆಯನ್ನು ಹೊಂದುವಿರಿ. ಇದನ್ನು ಜನರು ಹೆಚ್ಚು ಇಷ್ಟಪಡುವುದಿಲ್ಲ. ಈ ಸಂಚಾರದ ಪರಿಣಾಮದಿಂದಾಗಿ ಕುಟುಂಬ ಜೀವನದಲ್ಲಿ ಒತ್ತಡವನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನೀವು ಸಂಪತ್ತಿಗೆ ಸಂಬಂಧಿಸಿದ ಯಾವುದೇ ಲಾಭವನ್ನು ಪಡೆಯಬಹುದು. ಈ ಸಾಗಣೆಯ ಪರಿಣಾಮವಾಗಿ ನಿಮ್ಮ ಆರೋಗ್ಯವು ಕ್ಷೀಣಿಸಬಹುದು. ವಿಶೇಷವಾಗಿ ಜ್ವರ ಅಥವಾ ತಲೆ ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು.
ನೀವು ವಾಹನವನ್ನು ಬಹಳ ಎಚ್ಚರಿಕೆಯಿಂದ ಓಡಿಸಬೇಕು. ಯಾವುದೇ ರೀತಿಯ ಶಸ್ತ್ರಾಸ್ತ್ರಗಳಿಂದ ದೂರವಿರಲು ಪ್ರಯತ್ನಿಸಬೇಕು. ಏಕೆಂದರೆ ಇದು ನಿಮಗೆ ಹಾನಿಯನ್ನು ನೀಡಬಹುದು. ಒಂದೆಡೆ ಈ ಸಂಚಾರವು ನಿಮಗೆ ಕೆಲವು ಪ್ರತಿಕೂಲ ಪರಿಸ್ಥಿತಿಗಳನ್ನು ಸೃಷ್ಟಿಸಿದರೆ ಮತ್ತೊಂದೆಡೆ, ಈ ಸಂಚಾರದ ಪರಿಣಾಮದಿಂದಾಗಿ ನೀವು ನಿಮ್ಮ ಗುರಿಗಳನ್ನು ಸಾಧಿಸಲು ಸಧ್ಯವಾಗುತ್ತದೆ. ಈ ರೀತಿಯಾಗಿ ನೀವು ಲಾಭ ಮತ್ತು ಪ್ರಶಂಸೆಯನ್ನು ಪಡೆಯುತ್ತೀರಿ.
ಪರಿಹಾರ - ಮಂಗಳ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು ಮಂಗಳ ಗ್ರಹದ “ಓಂ ಅಂ ಅಂಗಾರಕಾಯ ನಮಃ” ಮಂತ್ರವನ್ನು ಮಂಗಳವಾರ ಆರಂಭಿಸಿ ಪ್ರತಿದಿನ ಜಪಿಸಬೇಕು.
- ವೃಷಭ ರಾಶಿ
ಮಂಗಳ ಗ್ರಹವು ವೃಷಭ ರಾಶಿಯ ಏಳನೇ ಮತ್ತು ಹನ್ನೆರಡನೇ ಮನೆಯ ಮಾಲೀಕ. ಏಳನೇ ಮನೆ ದೀರ್ಘಕಾಲದ ಪಾಲುದಾರಿಕೆಯ ಮನೆಯಾಗಿದೆ ಮತ್ತು ಇದರ ಮೂಲಕ ವಿವಿಧ ರೀತಿಯ ವ್ಯಾಪಾರ, ಆಮದು ರಾಫ್ತು , ಸಮಾಜದಲ್ಲಿ ನಿಮ್ಮ ಚಿತ್ರಣ, ಮದುವೆ ಮತ್ತು ಜೀವನ ಸಂಗಾತಿಯ ಬಗ್ಗೆ ಪರಿಗಣಿಸಲಾಗುತ್ತದೆ. ಹನ್ನೆರಡನೇ ಮನೆಯನ್ನು ವೆಚ್ಚಗಳು, ಜೈಲ್ ಪ್ರಯಾಣ, ಆಸ್ಪತ್ರೆ ಮತ್ತು ವೇದೇಶದ ಮನೆಯೆಂದು ಪರಿಗಣಿಸಲಾಗಿದೆ. ಮಂಗಳ ಸಂಚಾರವು ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯಲ್ಲಿ ಮಂಗಳ ಸಂಚಾರವು ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರದ ಮಿಶ್ರ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ.
ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಇದರಿಂದ ನೀವು ತೊಂದರೆಕ್ಕೊಳಗಾಗಬಹುದು. ಮಾನಸಿಕವಾಗಿ ನೀವು ಒತ್ತಡವನ್ನು ಅನುಭವಿಸುತ್ತೀರಿ. ಈ ಸಮಯದಲ್ಲಿ ನೀವು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಇದಲ್ಲದೆ ನಿಮ್ಮ ವಿರೋಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸುವ ಸಾಧ್ಯತೆಯೂ ಇದೆ ಮತ್ತು ಅವರು ದುರ್ಬಲಗೊಳ್ಳುತ್ತಾ ರೆ. ನ್ಯಾಯಾಲಯದಲ್ಲಿ ಯಾವುದೇ ವಿಷಯ ದೀರ್ಘಕಾಲ ದಿಂದ ನಡೆಯುತ್ತಿದ್ದರೆ, ಅದರ ನಿರ್ಧಾರವು ಸಹ ನಿಮ್ಮ ಪರವಾಗಿ ಬರುವ ಸಂಪೂರ್ಣ ಸಾಧ್ಯತೆ ಇದೆ.
ಈ ಸಂಚಾರವು ನಿಮ್ಮ ಕಿರಿಯ ಸಹೋದರ ಸಹೋದರಿ ಯರಿಗೆ ಉತ್ತಮವೆಂದು ಹೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಈ ಸಮಯದಲ್ಲಿ ನೀವು ನಿಮ್ಮ ಸಾಲದ ಬಗ್ಗೆ ತುಂಬಾ ಗಂಭೀರರಾಗಿರುತ್ತೀರಿ ಮತ್ತು ಅದನ್ನು ಸಾಧ್ಯವಾದಷ್ಟು ಬೇಗನೆ ಮರುಪಾವತಿಸಲು ಪ್ರಯತ್ನಿಸುವಿರಿ. ಈ ಕಾರಣದಿಂದಾಗಿ ಸಾಲವನ್ನು ಮರುಪಾವತಿಸಲು ನೀವು ನಿಮ್ಮ ಕೆಲವು ಹಣವನ್ನು ಸಹ ಖರ್ಚು ಮಾಡುವಿರಿ.
ಮಂಗಳನ ಈ ಸಂಚಾರವು ನಿಮ್ಮ ದಾಂಪತ್ಯ ಜೀವನದ ದೃಷಿಕೋನದಿಂದ ಶುಭವೆಂದು ಹೇಳಲಾಗುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಮತ್ತು ನಿಮ್ಮ ಮಧ್ಯೆ ಒತ್ತಡವು ಹೆಚ್ಚಾಗುವ ಸಾಧ್ಯತೆ ಇದೆ. ಅವರು ಸಹ ಸ್ವಭಾವತಃ ಕೋಪದಿಂದ ತುಂಬಿರುತ್ತಾರೆ, ಇದು ನಿಮ್ಮನ್ನು ಕೆರಳಿಸಬಹುದು ಮತ್ತು ಈ ಕಾರಣದಿಂದಾಗಿ ನಿಮ್ಮ ಸಂಬಂಧವು ತೊಂದರೆಗೆ ಸಿಲುಕಬಹುದು. .
ಪರಿಹಾರ - ಮಂಗಳ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು, ನೀವು ಮಂಗಳವಾರದಂದು ಹನುಮಂತ ದೇವರಿಗೆ ಸಿಹಿ ಎಲೆ ಅಡಿಕೆಯನ್ನು ಅರ್ಪಿಸಬೇಕು.
- ಮಿಥುನ ರಾಶಿ ಭವಿಷ್ಯ
ಮಂಗಳ ಗ್ರಹದ ಸಂಚಾರವು ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಸಂಭವಿಸಲಿದೆ. ಇದು ನಿಮ್ಮ ಜಾತಕದ ಹನ್ನೊಂದನೇ ಮತ್ತು ಆರನೇ ಮನೆಯ ಅಧಿಪತಿ. ಆರನೇ ಮನೆಯು ವಿವಿಧ ರೀತಿಯ ಸಮಸ್ಯೆಗಳು, ತೊಂದರೆಗಳು, ಸ್ಪರ್ಧೆಗಳು, ಚುನಾವಣೆ, ಸಾಲ, ಬ್ಯಾಂಕ್ ಲೋನ್, ರೋಗಗಳು ಮತ್ತು ವಿರೋಧಿಗಳ ಮನೆ. ಆರನೇ ಮನೆಯು ಉದ್ಯೋಗಕ್ಕೆ ಬಹಳ ಮುಖ್ಯವಾಗಿದೆ. ಮತ್ತೊಂದೆಡೆ, ಹನ್ನೊಂದನೇ ಮನೆ ನಮ್ಮ ಸಾಧನೆಗಳ ಮನೆಯಾಗಿದೆ. ಹನ್ನೊಂದನೇ ಮನೆಯಲ್ಲಿ ಮಂಗಳ ಸಂಚಾರವು ಬಹಳಷ್ಟು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ.
ಮಂಗಳ ಗ್ರಹದ ಈ ಸಂಚಾರದ ಪರಿಣಾಮದಿಂದಾಗಿ, ನಿಮ್ಮ ಆದಾಯದಲ್ಲಿ ಅದ್ಭುತ ಹೆಚ್ಚಳವನ್ನು ಕಾಣಲಾಗುತ್ತದೆ. ನೀವು ಅನೇಕ ಮಾಧ್ಯಮಗಳ ಮೂಲಕ ಹಣವನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಸ್ಥಿತಿಯು ವೇಗವಾಗಿ ಮೇಲಕ್ಕೆ ಮುಂದುವರಿಯುತ್ತದೆ ಮತ್ತು ನೀವು ಆರ್ಥಿಕವಾಗಿ ಬಲವನ್ನು ಅನುಭವಿಸುತ್ತೀರಿ. ಇಷ್ಟೇ ಅಲ್ಲದೆ, ನಿಮ್ಮ ಮಹತ್ವಾಕಾಂಕ್ಷೆಗಳು ಪೂರ್ಣಗೊಳ್ಳುವುದರಿಂದ ನಿಮಗೆ ಅತ್ಯಂತ ಸಂತೋಷವಾಗುತ್ತದೆ. ದೀರ್ಘಕಾಕದಿಂದ ಸಿಲುಕಿಕೊಂಡಿರುವ ನಿಮ್ಮ ಕೆಲಸಗಳು ಸಹ ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ, ಇದರಿಂದ ನೀವು ಸಂತೋಷಪಡುವುದಲ್ಲದೆ ಆರ್ಥಿಕ ಲಾಭ ಮತ್ತು ಸಾಮಾಜಿಕ ಪ್ರಯೋಜನವನ್ನು ಸಹ ಪಡೆಯುತ್ತೀರಿ.
ಈ ಸಮಯದಲ್ಲಿ ಸಾಮಾಜಿಕ ಕ್ಷೇತ್ರಗಳಿಂದಲೂ ನಿಮಗೆ ಲಾಭವಾಗುತ್ತದೆ. ನೀವು ಹೊಸ ಜನರೊಂದಿಗೆ ಸ್ನೇಹಿತರಾಗುತ್ತೀರಿ ಮತ್ತು ಕೆಲವರು ನಿಮ್ಮ ಕೆಲಸಕ್ಕೆ ಬರುತ್ತಾರೆ. ಮಂಗಳ ಗ್ರಹದ ಈ ಸಂಚಾರವು ಹಣವನ್ನು ಗಳಿಸಲು ಮತ್ತು ಸಂಗ್ರಹಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ನಿಮ್ಮ ಕುಟುಂಬದ ಮೇಲೂ ಗಮನ ಹರಿಸುವಿರಿ ಅಮ್ತ್ತು ಕುಟುಂಬದ ಅಗತ್ಯಗಳನ್ನು ಪೂರ್ಣಗೊಳಿಸಲು ತಮ್ಮ ಹಣವನ್ನು ಖರ್ಚು ಮಾಡುವಿರಿ. ಈ ಸಂಚಾರದ ನಕಾರಾತ್ಮಕ ಭಾಗವೇನೆಂದರೆ, ನಿಮ್ಮ ಪ್ರೀತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ ಮತ್ತು ನಿಮ್ಮಿಬ್ಬರ ನಡುವೆ ಜಗಳದ ಸಾಧ್ಯತೆ ಇರುತ್ತದೆ. ಇದು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತದೆ, ಆದ್ದರಿಂದ ನೀವು ನಿಮ್ಮ ಪ್ರೀತಿ ಜೀವನವು ಸರಿಯಾಗಿ ಇರಬೇಕೆಂದು ಬಯಸಿದರೆ, ಯಾವುದೇ ರೀತಿಯ ವಿವಾದದಿಂದ ದೂರವಿರಬೇಕು.
ಈ ಸಮಯದಲ್ಲಿ ನಿಮ್ಮ ಮಕ್ಕಳ ಬಗ್ಗೆಯೂ ನೀವು ಸ್ವಲ್ಪ ಗಮನ ಹರಿಸಬೇಕು, ಏಕೆಂದರೆ ಅವರನ್ನು ಅರೋಗ್ಯ ಸಮಸ್ಯೆಗಳು ತೊಂದರೆಗೊಳಿಸಬಹುದು. ಅಧ್ಯಯನದ ವಿಷಯದಲ್ಲಿ ಈ ಸಂಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಆದಾಯವು ಹೆಚ್ಚಾದರೆ, ಸಾಲವನ್ನು ಮರುಪಾವತಿಸುವ ದಿಕ್ಕಿನಲ್ಲಿ ನೀವು ಮುಂದುವರಿಯುತ್ತಿರಿ. ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ ಮತ್ತು ಉದ್ಯೋಗದಲ್ಲಿ ಸಹ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಪರಿಷ್ಟಿತಿ ಬಲಗೊಳ್ಳುತ್ತದೆ ಮತ್ತು ನೀವು ಉತ್ತಮ ಬಡ್ತಿಯನ್ನು ಸಹ ಪಡೆಯಬಹುದು.
ಪರಿಹಾರ - ಮಂಗಳ ಗ್ರಹದ ಶುಭತೆಯನ್ನು ಪಡೆಯಲು ಮಂಗಳವಾರದಂದು ಯಾವುದೇ ಆಸ್ಪತ್ರೆ ಅಥವಾ ಬ್ಲಡ್ ಬ್ಯಾಂಕಿನಲ್ಲಿ ರಕ್ತ ದಾನ ಮಾಡುವುದು ನಿಮಗೆ ಉತ್ತಮ.
- ಕರ್ಕ ರಾಶಿ
ಮಂಗಳ ಗ್ರಹವು ನಿಮ್ಮ ರಾಶಿಗೆ ಅತ್ಯಂತ ಮುಖ್ಯವಾದ ಗ್ರಹವಾಗಿದೆ. ಏಕೆಂದರೆ ಇದು ನಿಮ್ಮ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹತ್ತನೇ ಮನೆಯಲ್ಲಿ ಪ್ರವೇಶಿಸುತ್ತದೆ. ಐದನೇ ಮನೆಯ ಮೂಲಕ ನಮ್ಮ ಬುದ್ಧಿವಂತಿಕೆ, ಆಲೋಚನಾ ಸಾಮರ್ಥ್ಯ, ಕಲಾತ್ಮಕತೆ, ನಮ್ಮ ಮಕ್ಕಳು, ಪ್ರೀತಿಯ ಸಂಬಂಧ ಮತ್ತು ಶಿಕ್ಷಣದ ಬಗ್ಗೆ ಪರಿಗಣಿಸಲಾಗುತ್ತದೆ. ಹತ್ತನೇ ಮನೆಯನ್ನು ಅತ್ಯಂತ ಬಲವಾದ ಕೇಂದ್ರ ಮನೆಯೆಂದು ಸಹ ಕರೆಯಲಾಗುತ್ತದೆ. ಇದು ನಮ್ಮ ವ್ಯಾಪಾರವನ್ನು ನಿರ್ಧರಿಸುತ್ತದೆ ಮತ್ತು ನಮ್ಮ ತಂದೆಯನ್ನು ಸಹ ತೋರಿಸುತ್ತದೆ.
ಹತ್ತನೇ ಮನೆಯಲ್ಲಿ ಮಂಗಳ ಸಂಚಾರವನ್ನು ತುಂಬಾ ಉತ್ತಮವೆಂದು ಹೇಳಲಾಗುತ್ತದೆ ಮತ್ತು ನಿಮ್ಮ ರಾಶಿಯಲ್ಲಿ ಈ ಸಂಚಾರವು ಸಂಭವಿಸುವ ಕಾರಣದಿಂದಾಗಿ, ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ ಮತ್ತು ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಕೆಲಸದ ಹೊರೆ ಹೆಚ್ಚಾಗುತ್ತದೆ. ನಿಮ್ಮ ಅಧಿಕಾರ ಮತ್ತು ನಿಮ್ಮ ಶಕ್ತಿಗಳು ಹೆಚ್ಚಾಗುತ್ತವೆ. ಉನ್ನತ ಸ್ಥಾನ ಮತ್ತು ಬಡ್ತಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಆದರೆ ಕೆಲವೊಮ್ಮೆ ವಿಷಾದವನ್ನುಂಟು ಮಾಡುವಂತಹ ನಿರ್ಧಾರಗಳನ್ನು ಸಹ ವ್ಯಕ್ತಿಯು ಅವಸರದಲ್ಲಿ ತೆಗೆದುಕೊಳ್ಳುತ್ತಾನೆ, ಅಂತಹ ಪರಿಸ್ಥಿತಿಗಳನ್ನು ತಪ್ಪಿಸಬೇಕು ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯಬೇಕು.
ಮಂಗಳನ ಈ ಸಾಗಣೆ ನಿಮ್ಮ ಆರೋಗ್ಯಕ್ಕೆ ಸ್ವಲ್ಪ ಕಡಿಮೆ ಸೂಕ್ತವಾಗಿದೆ, ಆದ್ದರಿಂದ ಕೆಲಸದ ಜೊತೆಗೆ ದೈಹಿಕ ಸಾಮರ್ಥ್ಯದ ಬಗ್ಗೆಯೂ ಗಮನ ಹರಿಸಬೇಕು. ಇಲ್ಲದಿದ್ದರೆ ಅತಿಯಾದ ಕೆಲಸದ ಕಾರಣದಿಂದಾಗಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಮಂಗಳ ಸಂಚಾರವು ನಿಮ್ಮ ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ತರಬಹುದು, ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಮಕ್ಕಳು ಕೆಲವು ಸಮಸ್ಯೆಗಳನ್ನು ಅನುಭವಿಸಬಹುದು. ಅಥವಾ ಅವರೊಂದಿಗಿನ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕಾರ್ಯನಿರತತೆಯ ಕಾರಣದಿಂದಾಗಿ ನೀವು ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ.
ಪ್ರೀತಿ ಜೀವನದ ದೃಷ್ಟಿಕೋನದಿಂದ ಈ ಸಂಚಾರವು ಸೂಕ್ತವಾಗಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರನ್ನು ಸಾಧ್ಯವಾದಷ್ಟು ಕಡಿಮೆ ಭೇಟಿ ಮಾಡಲು ಪ್ರಯತ್ನಿಸಿ. ಏಕೆಂದರೆ ಈ ಸಮಯದಲ್ಲಿ ಅವರೊಂದಿಗೆ ನಿಮ್ಮ ಜಗಳವಾಗುವ ಸಾಧ್ಯತೆ ಹೆಚ್ಚಾಗಿದೆ. ಶಿಕ್ಷಣಕ್ಕೆ ಈ ಸಂಚಾರವು ಸಾಮಾನ್ಯವಾಗಿದೆ. ನೀವು ನಿಮ್ಮ ಅಧ್ಯಯನದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು.
ಪರಿಹಾರ - ಕೆಂಪು ದಾರದಲ್ಲಿ ಮೂರು ಮುಖ ರುದ್ರಾಕ್ಷವನ್ನು ಮಂಗಳವಾರದಂದು ಧರಿಸಬೇಕು.
- ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಮಂಗಳ ಗ್ರಹವು ಒಂಬತ್ತನೇ ಮತ್ತು ನಾಲ್ಕನೇ ಮನೆಯ ಅಧಿಪತಿ. ನಾಲ್ಕನೇ ಮನೆಯ ಮೂಲಕ ಜೀವನದ ಎಲ್ಲಾ ರೀತಿಯ ಸಂತೋಷ ಸಂಪನ್ಮೂಲಗಳು, ತಾಯಿ, ಸ್ಥಿರ - ಅಸ್ಥಿರ ಸಂಪತ್ತು ಇತ್ಯಾದಿಗಳನ್ನು ನೋಡಲಾಗುತ್ತದೆ. ಒಂಬತ್ತನೇ ಮನೆಯನ್ನು ಅದೃಷ್ಟ ಮತ್ತು ಧರ್ಮದ ಮನೆಯೆಂದು ಕರೆಯಲಾಗುತ್ತದೆ. ಮಂಗಳ ಗ್ರಹವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಸಾಗುತ್ತದೆ.
ಮಂಗಳನ ಈ ಸಂಚಾರವು ಸಾಮಾನ್ಯವಾಗಿ ಫ್ಲಿತ್ಮಸಹಗಳನ್ನು ನೀಡುತ್ತದೆ, ಈ ಸಂಚಾರದ ಪರಿಣಾಮದಿಂದಾಗಿ ನೀವು ದೀರ್ಘ ಕಾಲದ ಪ್ರಯಾಣಗಳಿಗೆ ಹೋಗುವ ಅವಕಾಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯವು ಅವರು ಯಾವುದೇ ಅರೋಗ್ಯ ಸಮಸ್ಯೆಗೆ ಒಳಗಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಈ ಸಾಗಣೆಯ ಪರಿಣಾಮವಾಗಿ ನೀವು ಧರ್ಮದ ಬಗ್ಗೆ ಮೂಲಭೂತವಾದಿ ಮನೋಭಾವವನ್ನು ಅಳವಡಿಸಿಕೊಳ್ಳಬಹುದು, ಕೆಲವು ಜನರಿಗೆ ಇಷ್ಟವಾಗದಿರಬಹುದು. ಆದ್ದರಿಂದ ನೀವು ಸ್ವಲ್ಪ ಕಾಳಜಿ ವಹಿಸಬೇಕು. ನೀವು ವಿದೇಶ ಸಂಪರ್ಕಗಳಿಂದ ಶುಭ ಅವಕಾಶಗಳನ್ನು ಪಡೆಯಬಹುದು. ಈ ಸಂಚಾರವು ನಿಮ್ಮ ಸಹೋದರ ಸಹೋದರಿಯರಿಗೆ ಸಾಮಾನ್ಯವಾಗಿರುತ್ತದೆ ಅವರ ಆರೋಗ್ಯವು ಸ್ವಲ್ಪ ದುರ್ಬಲಗೊಳ್ಳಬಹುದು ಆದರೆ ಅವರು ವ್ಯಾಪಾರದಲ್ಲಿ ಉತ್ತಮ ಹಣವನ್ನು ಗಳಿಸುತ್ತಾರೆ. ಈ ಸಂಚಾರವು ನಿಮ್ಮ ಪರಿಶ್ರಮ ಮತ್ತು ಪ್ರಯತ್ನಗಳ ಸರಹಿತಿಯನ್ನು ಬಲಪಡಿಸುತ್ತದೆ.
ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಕುಟುಂಬವು ಯಾವುದೇ ಯಶಸ್ಸು ಪಡೆಯುತ್ತದೆ. ಇದರಿಂದ ಕುಟುಂಬದ ಸದಸ್ಯರು ಸಂತೋಷಪಡುತ್ತಾರೆ ಮತ್ತು ಪರಸ್ಪರರ ಸಂಬಂಧವು ಬಲಗೊಳ್ಳುತ್ತದೆ. ಕುಟುಂಬದಲ್ಲಿ ನಿಮ್ಮ ಮರ್ಯಾದೆ ಹೆಚ್ಚಾಗುತ್ತದೆ ಮತ್ತು ಸಂಪೂರ್ಣ ಗೌರವವನ್ನು ನೀವು ಪಡೆಯುತ್ತೀರಿ. ಕೆಅಲ್ವು ಜನರು ತಮ್ಮ ಕೆಲಸದ ಸ್ಥಳದಲ್ಲಿ ವರ್ಗಾವಣೆಯನ್ನು ಪಡೆಯುವ ಸಾಧ್ಯತೆ ಇದೆ.
ಪರಿಹಾರ - ನೀವು ಪ್ರತಿ ಮಂಗಳವಾರ ಹನುಮಂತ ದೇವರಿಗೆ ಮಲ್ಲಿಗೆ ಎಣ್ಣೆಯನ್ನು ಅರ್ಪಿಸಿ ಒಂದು ದೀಪವನ್ನು ಹಚಿಸಬೇಕು ಮತ್ತು ಸುಂದರಕಾಂಡವನ್ನು ಪಠಿಸಬೇಕು.
- ಕನ್ಯಾ ರಾಶಿ
ಮಂಗಳ ಗ್ರಹವು ನಿಮ್ಮ ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ. ಈ ಎರಡೂ ಮನೆಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಎಂಟನೇ ಮನೆಯು ಜೀವನದಲ್ಲಿ ಸಂಭವಿಸುವ ಅನಿಶ್ಚಿತತೆ ಮತ್ತು ಇದ್ದಕ್ಕಿದ್ದಂತೆ ಸಂಭವಿಸುವ ಒಳ್ಳೆಯ ಮತ್ತು ಕೆಟ್ಟ ಬದಲಾವಣೆಗಳ ಬಗ್ಗೆ ತಿಳಿಸುತ್ತದೆ . ಮೂರನೇ ಮನೆಯ ಮೂಲಕ ನಿಮ್ಮ ಧೈರ್ಯ, ಪರಾಕ್ರಮ, ಸಹೋದರ ಸಹೋದರಿಯರು, ಸಣ್ಣ ಪ್ರವಾಸಗಳು, ನಿಮ್ಮ ಸಂವಹನ ಕೌಶಲ್ಯ, ಪರಿಶ್ರಮ, ಹವ್ಯಾಸ ಇತ್ಯಾದಿಗಳ ಬಗ್ಗೆ ತಿಳಿಯಲಾಗುತ್ತದೆ. ಮಂಗಳ ಗ್ರಹವು ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಸಂಚರಿಸಲಿದೆ. ಇದನ್ನು ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ಹೆಚ್ಚು ಉತ್ತಮ ಫಲಿತಾಂಶಗಳನ್ನು ಪಡೆಯಲಾಗುವುದಿಲ್ಲ.
ಮೇಷ ರಾಶಿಯಲ್ಲಿ ಮಂಗಳ ಸಂಚಾರವು ಆರೋಗ್ಯದ ದೃಷ್ಟಿಯಿಂದ ನಿಮ್ಮನ್ನು ದುರ್ಬಲಪಡಿಸುತ್ತದೆ ಮತ್ತು ಈ ಅವಧಿಯಲ್ಲಿ ಅರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಕೆಲವು ಜನರಿಗೆ ಶಸ್ತ್ರ ಚಿಕಿತ್ಸೆ, ಯಾವುದೇ ರೀತಿಯ ಗಾಯ, ಅಪಘಾತದ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಆಹಾರ ಪಾನೀಯ ಮತ್ತು ದಿನಚರಿಯ ಬಗ್ಗೆ ವಿಶೇಷ ಕಾಳಜಿವಹಿಸಿ. ಈ ಮೂಲಕ ನೀವು ನಿಮ್ಮ ಅರೋಗ್ಯ ಸಮಸ್ಯೆಯನ್ನು ತಪ್ಪಿಸಬಹುದು.
ಮಂಗಳನ ಈ ಸಂಚಾರವು ರಹಸ್ಯ ಮತ್ತು ಅನೈತಿಕ ರೀತಿಯಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ ಆದರೆ ಅನೈತಿಕ ರೀತಿಯಲ್ಲಿ ಬರುವ ಹಣವನ್ನು ಅನೈತಿಕ ಚಟುವಟಿಕೆಗಳಲ್ಲಿ ಮಾತ್ರ ಬಳಸಲಾಗುತ್ತದೆ ಮತ್ತು ಕೆಲವೊಮ್ಮೆ ಅದರ ಕಾರಣದಿಂದ ನೀವು ಬಳಲಬೇಕಾಗುತ್ತದೆ. ಆದ್ದರಿಂದ ನೀವು ಏನು ಮಾಡಬೇಕೆಂದು ಮೊದಲೇ ಯೋಚಿಸಿ.
ಇದಲ್ಲದೆ ಮಂಗಳ ಸಂಚಾರವು ನಿಮ್ಮ ಅತ್ತೆಮನೆಯ ಬದಿಯಿಂದ ಯಾವುದೇ ರೀತಿಯ ಕೆಲವು ಶುಭ ಕಾರ್ಯಗಳನ್ನು ಸಹ ಸೂಚಿಸುತ್ತದೆ ಮತ್ತು ಅತ್ತೆಮನೆಯ ಜನರು ಈ ಸಮಯದಲ್ಲಿ ಹಣವನ್ನು ಪಡೆಯುತ್ತಾರೆ. ಈ ಸಂಚಾರವು ನಿಮ್ಮ ಜೀವನ ಸಂಗಾತಿಯ ಆರೋಗ್ಯಕ್ಕೆ ಒಳ್ಳೆಯದಲ್ಲ ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಕಿರಿಯ ಸಹೋದರ ಸಹೋದರರೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ. ಏಕೆಂದರೆ ಈ ಸಮಯದಲ್ಲಿ ಅವರಿಗೆ ನಿಮ್ಮ ಅಗತ್ಯವಿರಬಹುದು.
ಪರಿಹಾರ - ಮಂಗಳವಾರ ಯಾವುದೇ ದೇವಷ್ಟಾನದಲ್ಲಿ ಬೆಲ್ಲ ಮತ್ತು ಗೋಧಿಯ ದಾನ ಮಾಡಬೇಕು.
- ತುಲಾ ರಾಶಿ
ತುಲಾ ರಾಶಿಯ ಸ್ಥಳೀಯರಿಗೆ ಮಂಗಳ ಗ್ರಹವು ಏಳನೇ ಮತ್ತು ಎರಡನೇ ಮನೆಯ ಅಧಿಪತಿ. ಎರಡನೇ ಮನೆಯ ಮೂಲಕ ನಮ್ಮ ಕುಟುಂಬ, ಧ್ವನಿ, ಆಹಾರ ಪಾನೀಯದ ಬಗ್ಗೆ ಪರಿಗಣಿಸಲಾಗುತ್ತದೆ. ಇದಲ್ಲದೆ ಏಳನೇ ಮನೆ ನಮ್ಮ ಮದುವೆ, ಜೀವನ ಸಂಗಾತಿ, ವ್ಯಾಪಾರ ಪಾಲುದಾರಿಕೆ, ಆಮದು ರಾಫ್ತು ಇತ್ಯಾದಿಗಳ ಬಗ್ಗೆ ತಿಳಿಯುತ್ತದೆ. ಈ ಸ್ಥಳವನ್ನು ಪ್ರತಿವಿಷ ಎಂದು ಕರೆಯುತ್ತಾರೆ. ಈ ಕಾರಣದಿಂದಾಗಿ ನೀವು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಬಹುದು. ಸಂಚಾರದ ಈ ಸಮಯದಲ್ಲಿ ಮಂಗಳ ಗ್ರಹವು ನಿಮ್ಮ ರಾಶಿಯಿಂದ ಏಳನೇ ಮನೆಗೆ ಸಾಗುತ್ತದೆ. ಪರಿಣಾಮವಾಗಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.
ಈ ಸಂಚಾರದ ಪರಿಣಾಮವಾಗಿ, ನಿಮ್ಮ ಜೀವನ ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ ಬರುತ್ತದೆ. ಅವರಲ್ಲಿ ಆತ್ಮವಿಶ್ವಾಸ ಮತ್ತು ಅಸಹನೆ ಎರಡೂ ಹೆಚ್ಚಾಗುತ್ತವೆ. ಅವರು ಸ್ವಲ್ಪ ಹಠಮಾರಿಯಾಗುತ್ತಾರೆ ಮತ್ತು ಅವರು ತಮ್ಮ ಮಾತುಗಳನ್ನು ಮಾನವರಿಸಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಅವರು ಡಾಮಿನೇಟ್ ಆಗಬಹುದು. ಆದಾಗ್ಯೂ ನೀವು ನಿಮ್ಮ ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ಜೀವನ ಸಂಗಾತಿಯ ಆರೋಗ್ಯವು ಬಲಗೊಳ್ಳುತ್ತದೆ ಮತ್ತು ಮೊದಲಿನಿಂದಲೇ ಯಾವುದೇ ಅರೋಗ್ಯ ಸಮಸ್ಯೆಯನ್ನು ಹೊಂದಿದ್ದರೆ, ಅದರಿಂದಲೂ ಮುಕ್ತರಾಗಬಹುದು.
ನೀವು ಉದ್ಯೋಗದಲ್ಲಿ ತೊಡಗಿದ್ದರೆ, ಈ ಸಂಚಾರವು ಉತ್ತಮವಾಗಿರುತ್ತದೆ ಮತ್ತು ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. ಈ ಸ್ಥಾನವು ನಿಮ್ಮನ್ನು ಸಾಕಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ನೀವು ನಿಮ್ಮ ಕಠಿಣ ಪರಿಶ್ರಮವನ್ನು ಮುಂದುವರಿಸಬೇಕು ಮತ್ತು ಮನಸ್ಸನ್ನು ಹೊಂದಿ ಕೆಲಸ ಮಾಡಬೇಕು. ನೀವು ವ್ಯಾಪಾರದಲ್ಲಿ ನಡೆಸುತ್ತಿದ್ದರೆ, ಮಂಗಳ ಸಂಚಾರವು ವ್ಯಾಪಾರ ವಿಸ್ತರಣೆ ಮತ್ತು ಹಣ ಪೂರೈಕೆದಾರರಾಗಬಹುದು. ನಿಮ್ಮ ವ್ಯಾಪಾರ ಬೆಳೆಯುತ್ತದೆ ಮತ್ತು ನಿಮಗೆ ಪ್ರಯೋಜನಗಳು ಸಿಗುವುದು ಆರಂಭವಾಗುತ್ತದೆ. ಆದರೆ ಈ ಸಮಯದಲ್ಲಿ ವ್ಯಾಪಾರ ಪಾಲುದಾರರೊಂದಿಗಿನ ನಿಮ್ಮ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಏಕೆಂದರೆ ಈ ಸಂಚಾರವು ನಿಮ್ಮ ದೇಹದಲ್ಲಿನ ಪಿತ್ತರಸದ ಅಂಶವನ್ನು ಹೆಚ್ಚಿಸುತ್ತದೆ, ಈ ಕಾರಣದಿಂದ ದೇಹದ ಜೀರ್ಣ ಕ್ರಿಯೆಯು ತೊಂದರೆಗೊಳಗಾಗುತದೆ. ನೀವು ರಕ್ತದೊತ್ತಡ, ಅಜೀರ್ಣ, ಎಸಿಡಿಟಿ, ಜ್ವರ, ತಲೆ ನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಮೇಲೆ ಸಾಕಷ್ಟು ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಜೀವನ ಸಂಗಾತಿಯನ್ನು ಸಂತೋಷಪಡಿಸಲು, ಅವರ ಆಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೀರಿ.
ಪರಿಹಾರ - ಮಂಗಳ ಗ್ರಹದ ವಿಶೇಷ ಅನುಗ್ರಹವನ್ನು ಪಡೆಯಲು ತಾಮ್ರದ ಪಾತ್ರದಲ್ಲಿ ಗೋಧಿ ಅಥವಾ ಬೆಲ್ಲವನ್ನು ತುಂಬಿ, ಅದನ್ನು ಯಾವುದೇ ದೇವಾಲಯದಲ್ಲಿ ದಾನ ಮಾಡಬೇಕು.
- ವೃಶ್ಚಿಕ ರಾಶಿ
ಮಂಗಳ ಗ್ರಹದ ಯಾವುದೇ ಸಂಚಾರವು ನಿಮಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಇದು ನಿಮ್ಮ ರಾಶಿಯ ಅಧಿಪತಿ ಮತ್ತು ರಾಶಿಚಕ್ರದ ಅಧಿಪತಿಯ ಸಂಚಾರ ಸ್ಥಾನವು ಬಹಳ ಮುಖ್ಯವಾಗಿದೆ. ಇದು ನಿಮ್ಮ ಮೊದಲನೇ ಮತ್ತು ಆರನೇ ಮನೆಯ ಮಾಲೀಕ ಮತ್ತು ಆರನೇ ಮನೆಯನ್ನು ಕಷ್ಟದ ಮನೆಯೆಂದು ಪರಿಗಣಿಸಲಾಗಿದೆ. ಈ ಮನೆಯು ನಮ್ಮ ಜೀವನದ ಹೋರಾಟವನ್ನು ವ್ಯಾಖ್ಯಾನಿಸುತ್ತದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ನಾವು ಅದನ್ನು ಎದುರಿಸುತ್ತೇವೆಯೋ ಅಥವಾ ಹೆದರಿಕೊಂಡು ಹೋಡಿಹೋಗುತ್ತೇವೆಯೋ ಎಂಬುದನ್ನು ಸಹ ಹೇಳುತ್ತದೆ. ಮಗಳ ಗ್ರಹವು ನಿಮ್ಮ ಆರನೇ ಮನೆಗೆ ಸಂಚರಿಸಲಿದೆ. ಆರನೇ ಮನೆಯಲ್ಲಿ ಮಂಗಳ ಸಂಚಾರವನ್ನು ಸಾಮಾನ್ಯವಾಗಿ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ.
ಈ ಸಂಚಾರದ ಪರಿಣಾಮವಾಗಿ, ಉದ್ಯೋಗದಲ್ಲಿ ನೀವು ಅದ್ಭುತ ಬಡ್ತಿಯನ್ನು ಪಡೆಯುವ ಸಾಧ್ಯತೆ ಇದೆ. ನೀವು ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ ಮತ್ತು ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಇದು ನಿಮ್ಮ ಜನಪ್ರಿಯತೆ ಮತ್ತು ಖ್ಯಾತಿಯನ್ನು ಹೆಚ್ಚಿಸುತ್ತದೆ. ನಿಮ್ಮ ವೆಚ್ಚಗಳನ್ನು ನಿಯಂತ್ರಿಸುತ್ತಿರಿ, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ನೀವು ರಾಜಕಾರಣಿ ಅಥವಾ ಕಾನೂನಿಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದರೆ, ಈ ಸಂಚಾರವು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಈ ಸಂಚಾರದ ಪರಿಣಾಮವಾಗಿ ನೀವು ಅಧಿಕೃತವಾಗಿಯೂ ಲಾಭವನ್ನು ಪಡೆಯಬಹುದು ಅಥವಾ ಯಾವುದೇ ಸರ್ಕಾರಿ ವಲಯದಿಂದ ಲಾಭ ಪಡೆಯಲು ನೀವು ಅರ್ಹರಾಗಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ನೀವೇ ನಿಮ್ಮ ಹಣೆಬರಹವನ್ನು ಬರೆಯುವಿರಿ ಮತ್ತು ನಿಮ್ಮ ಅದೃಷ್ಟವು ಹೆಚ್ಚಾಗುತ್ತದೆ. ಆದಾಗ್ಯೂ ಈ ಸಂಚಾರದ ಒಂದು ನಕಾರಾತ್ಮಕ ಭಾಗವೇನೆಂದರೆ, ಈ ಸಮಯದಲ್ಲಿ ಅರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಈ ಸಂಚಾರದ ಸಂಪೂರ್ಣ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ನಿಮ್ಮ ತಂದೆ ಸಹ ತಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿ ಪಡೆಯುತ್ತಾರೆ. ಇದು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.
ಪರಿಹಾರ - ಮಂಗಳ ಗ್ರಹದ ಶುಭ ಪರಿಣಾಮವನ್ನು ಪಡೆಯಲು ನೀವು ಮಂಗಳ ಬೀಜ ಮಂತ್ರ "ಓಂ ಕ್ರಾಂ ಕ್ರೀಂ ಕ್ರೌಂ ಸಃ ಭೌಮಾಯ ನಮಃ" ಅನ್ನು ನಿಯಮಿತವಾಗಿ ಜಪಿಸಬೇಕು.
- ಧನು ರಾಶಿ
ಮಂಗಳ ಗ್ರಹವು ಧನು ರಾಶಿಚಕ್ರದ ಐದನೇ ಮತ್ತು ಹನ್ನೆರಡನೇ ಮನೆಯ ಮಾಲೀಕ ಮತ್ತು ಮಗಳ ಸಂಚಾರವು ನಿಮ್ಮ ಅಡಿಯಾನೇ ಮನೆಯಲ್ಲಿ ಸಂಭವಿಸಲಿದೆ. ಪರಿಣಾಮವಾಗಿ ನೀವು ಮಿಶ್ರ ಫಲಿತಾಂಶಗಳನ್ನು ಪಡಯುತ್ತಿರಿ. ಏಕೆಂದರೆ ಐದನೇ ಮನೆಯಲ್ಲಿ ಮಂಗಳ ಸಂಚಾರವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗುವುದಿಲ್ಲ.
ಮೇಷ ರಾಶಿಯಲ್ಲಿ ಮಂಗಳ ಸಂಚಾರದ ಪರಿಣಾಮವಾಗಿ, ನಿಮ್ಮ ಕಲೆಯನ್ನು ನೀವು ಮುಂದಿಡುವಲ್ಲಿ ನಿಮಗೆ ಯಾವುದೇ ಸಮಸ್ಯೆ ಬರುವುದಿಲ್ಲ. ನಿಮ್ಮ ಕಲಾತ್ಮಕತೆಯನ್ನು ನೀವು ಗಳಿಸುವ ಸಾಧ್ಯಾನವಾಗಿಯೂ ಮಾಡಬಹುದು. ಅಂದರೆ ನಿಮ್ಮ ಯಾವುದೇ ಸೃಜನಶೀಲತೆ ನಿಮಗಾಗಿ ಹಣದ ಮಾರ್ಘವನ್ನು ತೆರೆಯಬಹುದು. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಸಮಾಜದಲ್ಲಿ ನೀವು ಮುಂದುವರಿಯುತ್ತಿರಿ ಆದರೆ ಮತ್ತೊಂದೆಡೆ ಈ ಸಂಚಾರವು ನಿಮ್ಮ ವೈಯಕ್ತಿಕ ಜೀವನದಲ್ಲಿ ಕೆಅಲ್ವು ಸಮಸ್ಯೆಗಳನ್ನು ಉದ್ಭವಿಸಬಹುದು.
ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಪ್ರೀತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಪ್ರೀತಿಪಾತ್ರರು ಸ್ವಲ್ಪ ಕೋಪದವರಾಗಿರಬಹುದು. ಅವರು ತಮ್ಮ ಎಲ್ಲಾ ವಿಷಯವನ್ನು ಮನವೊಲಿಸಲು ತುಂಬಾ ಪ್ರಯತ್ನಿಸುತ್ತಾರೆ. ಇದರಿಂದ ನೀವು ತೊಂದರೆಗೊಳಗಾಗುತ್ತೀರಿ. ಇದಲ್ಲದೆ ಈ ಸಂಬಂಧವನ್ನು ಮುಂದುವರಿಸಲು ಅವರ ಹೆಚ್ಚು ಆಸಕ್ತಿ ಮತ್ತು ತ್ವರಿತವಾಗಿರುತ್ತಾರೆ, ಅದನ್ನು ನೀವು ಇಷ್ಟಪಡುವುದಿಲ್ಲ ಆದ್ದರಿಂದ ತಾಳ್ಮೆಯಿಂದ ನಿಮ್ಮ ಪ್ರೀತಿ ಪಾತ್ರರ ಮಾತನ್ನು ಕೇಳಿ. ಅಗತ್ಯವಿದ್ದರೆ ಅವರ ಮಾತನ್ನು ಆಲಿಸಿ ಇಲ್ಲದಿದ್ದರೆ ಅವರಿಗೆ ವಿವರಿಸಿ.
ನೀವು ವಿವಾಹಿತರಾಗಿದ್ದರೆ, ಈ ಸಮಯದಲ್ಲಿ ಜೀವನ ಸಂಗಾತಿ ತುಂಬಾ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಮತ್ತು ಅವರು ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯಬಹುದು. ನಿಮ್ಮ ಮಕ್ಕಳಿಗೆ ಸಂಚಾರವು ಸಾಮಾನ್ಯವಾಗಿರುತ್ತದೆ. ಅವರ ಆರೋಗ್ಯವು ಉತ್ತಮಾಗಿರುತ್ತದೆ ಆದರೆ ಅವರು ಸ್ವಲ್ಪ ಹಠಮಾರಿಯಾಗಬಹುದು. ಇದರಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮಂಗಳ ಸಂಚಾರವು ಶಿಕ್ಷಣ ಕ್ಷೇತ್ರಕ್ಕೆ ಸಾಮಾನ್ಯವಾಗಿರುತ್ತದೆ. ನೀವು ಮುಂದುವರಿಯಲು ಸುಲಭವಾಗುತ್ತದೆ ಮತ್ತು ನಿಮ್ಮ ವಿಷಯಗಳ ಬಗ್ಗೆ ಉತ್ತಮ ಹಿಡಿತವನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದಾಗಿ ಪರೀಕ್ಷೆಯ ಫಲಿತಾಂಶಗಳು ಸಹ ಉತ್ತಮವಾಗಿರುತ್ತವೆ. ಈ ಸಮಯದಲ್ಲಿ ನಿಮ್ಮ ಹೊಟ್ಟೆಯಲ್ಲಿ ಉಷ್ಣತೆಯ ಹೆಚ್ಚಳದಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ಸ್ವಲ್ಪ ಕಾಳಜಿ ವಹಿಸಿ.
ಪರಿಹಾರ - ಗುರುವಾರದಂದು ನೀವು ವಿಶೇಷವಾಗಿ ಕಂಡು ಬಣ್ಣದ ಹಸುವಿಗೆ ಬೆಲ್ಲವನ್ನು ತಿನ್ನಿಸಬೇಕು.
- ಮಕರ ರಾಶಿ
ಮಂಗಳ ಗ್ರಹವು ಮಕರ ರಾಶಿಚಕ್ರದ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಮೇಷ ರಾಶಿಯಲ್ಲಿ ಮಂಗಳ ಸಂಚಾರವು ನಿಮ್ಮ ನಾಲ್ಕನೇ ಮನೆಯಲ್ಲಿ ಸಂಭವಿಸಲಿದೆ. ಆದರೆ ನಾಲ್ಕನೇ ಮನೆಯಲ್ಲಿ ಮಂಗಳ ಸಂಚಾರವನ್ನು ಹೆಚ್ಚು ಶುಭವೆಂದು ಹೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.
ನಾಲ್ಕನೇ ಮನೆಯಲ್ಲಿ ಮಂಗಳ ಸಂಚಾರವು ನಿಮಗೆ ಆಸ್ತಿಗೆ ಸಂಬಂಧಿಸಿದ ಲಾಭವನ್ನು ತರುತ್ತದೆ ಅಂದರೆ ಸ್ವಂತ ಮನೆಯನ್ನು ತೆಗೆದುಕೊಳ್ಳುವ ನಿಮ್ಮ ಆಸೆಯನ್ನು ಈ ಸಂಹಾರವು ಈಡೇರಿಸಬಹುದು. ಈ ಸಮಯದಲ್ಲಿ ಸ್ಥಿರ ಅಥವಾ ಅಸ್ಥಿರ ಸಂಪತ್ತಿನ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ ಮತ್ತು ನೀವು ಯಾವುದೇ ಸಂಪತ್ತಿನ ಮಾಲೀಕರಾಗಬಹುದು. ಕೆಲವರು ಈ ಸಂಚಾರದ ಸಮಯದಲ್ಲಿ ಉತ್ತಮ ವಾಹನವನ್ನು ಖರೀದಿಸಬಹುದು.
ಮತ್ತೊಂದೆಡೆ ಇದಕ್ಕೆ ವಿರುದ್ಧವಾಗಿ, ನಿಮ್ಮ ತಾಯಿಯ ಆರೋಗ್ಯವನ್ನು ಈ ಸಂಚಾರವು ಕಾಡುತ್ತದೆ. ಅವರ ನಡವಳಿಕೆಯಲ್ಲಿ ತೀಕ್ಷ್ಣತೆಯೂ ಬರುತ್ತದೆ. ಅದು ಕುಟುಂಬದ ಶಾಂತಿಯನ್ನು ದುರ್ಬಲಗೊಳಿಸುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಅಸಮಾಧವಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಅವಶ್ಯಕ ಮತ್ತು ಜವಾಬ್ದಾರಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು.
ಮಂಗಳ ಗ್ರಹವು ನಿಮ್ಮ ವೃತ್ತಿ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಉದ್ಯೋಗದಲ್ಲಿ ನಿಮ್ಮ ತೀಕ್ಷಣ ನಡವಳಿಕೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಸ್ವಯಂ ನಿಯಂತ್ರಣವನ್ನು ಇಟ್ಟುಕೊಂಡು ನಿಮ್ಮ ಕೆಲಸವನ್ನು ಮಾಡಬೇಕು. ಈ ಸಂಚಾರದ ಪರಿಣಾಮದಿಂದಾಗಿ ದಾಂಪತ್ಯ ಜೀವನದಲ್ಲಿ ಇಒತ್ತಡ ಹೆಚ್ಚಾಗುತ್ತದೆ. ಜೀವನ ಸಂಗಾತಿಯೊಂದಿಗಿನ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ ಮತ್ತು ಕಾರ್ನಾವಿಲ್ಲದ ಯಾವುದೇ ವಿಷಯವನ್ನು ಹೆಚ್ಚಿಸಬೇಡಿ. ಈ ಸಂಚಾರವು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಆದಾಯವು ಹೆಚ್ಚಾಗುವುದರಿಂದಾಗಿ, ಸಂತೋಷ ಸಂಪನ್ಮೂಲಗಳ ಉತ್ತಮ ಲಾಭವನ್ನು ಸಹ ನೀವು ಪಡೆಯುತ್ತೀರಿ.
ಪರಿಹಾರ - ಮಂಗಳವಾರ ನೀವು ಯಾವುದೇ ದೇವಸ್ಥಾನಕ್ಕೆ ಹೋಗಿ ಕೆಂಪು ಬಣ್ಣದ ಧ್ವಜವನ್ನು ಹಾಕಬೇಕು.
- ಕುಂಭ ರಾಶಿ
ಮಂಗಳ ದೇವ ಕುಂಭ ರಾಶಿಯ ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ. ಮಂಗಳನ ಶಕ್ತಿಯಿಂದ ನೀವು ನಿಮ್ಮ ಕೆಲಸದ ಸ್ಥಳವನ್ನು ಬಲಪಡಿಸಲು ಪ್ರಯತ್ನಿಸಬಹುವುದು ಎಂದು ಇದು ತೋರಿಸುತ್ತದೆ. ಮಂಗಳ ಸಂಚಾರವು ನಿಮ್ಮ ಮೂರನೇ ಮನೆಯಲ್ಲಿ ಸಂಭವಿಸಲಿದೆ ಮತ್ತು ಈ ಮನೆಯಲ್ಲಿ ಮಂಗಳ ಸಂಚಾರವು ತುಂಬಾ ಶುಭ ಫಲಿತಾಂಶವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ.
ಮಂಗಳ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಕಾಗುತ್ತದೆ. ಅಪಾಯವನ್ನು ತೆಗೆದುಕೊಳ್ಳುವ ನಿಮ್ಮ ಪ್ರವೃತ್ತಿ ಹೆಚ್ಚಾಗುತ್ತದೆ. ಇದರಿಂದ ನೀವು ಕೆಲಸದಲ್ಲಿ ಮುಂದುವರಿದು ಕೊಡುಗೆ ನೀಡುತ್ತಿರಿ ಮತ್ತು ಯಶಸ್ಸನ್ನು ಗಾಳಿಸುತ್ತೀರಿ. ಮಂಗಳನ ಈ ಸಂಚಾರವು ನಿಮ್ಮ ಸಹೋದರ ಸಹೋದರಿಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಅವರ ಪ್ರತಿಯೊಂದು ಕೆಲಸದಲ್ಲಿ ನೀವು ಅವರನ್ನು ಬೆಂಬಲಿಸುತ್ತಿರಿ.
ಈ ಸಮಯದಲ್ಲಿ ನೀವು ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ ಮತ್ತು ಅವರು ಬಯಸಿದರೂ ನಿಮಗೆ ನೋವು ನೀಡಲು ಸಾಧ್ಯವಾಗುವುದಿಲ್ಲ. ನೀವು ಆಟಗಾರರಾಗಿದ್ದರೆ, ಮಂಗಳ ಸಂಚಾರವು ನಿಮಗೆ ಯಶಸ್ಸು ನೀಡುತ್ತದೆ ಮತ್ತು ನಿಮ್ಮ ಕ್ರೀಡೆಯಲ್ಲಿ ನೀವು ಎತ್ತರವನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.
ಮಂಗಳ ಸಂಚಾರದ ಸಮಯದಲ್ಲಿ ನೀವು ಕೆಲವು ಪ್ರವಾಸಗಳನ್ನು ಸಹ ಮಾಡುತ್ತೀರಿ ಮತ್ತು ಈ ಪ್ರವಾಸಗಳು ನಿಮಗೆ ಲಾಭದ ಮಾರ್ಗವನ್ನು ಮಾಡಿಕೊಡುತ್ತವೆ. ನಿಮ್ಮ ಸ್ನೇಹಿತರ ಸಂಖ್ಯೆಯೂ ಹೆಚ್ಚಾಗುತ್ತದೆ. ಏಕೆಂದರೆ ಈ ಪ್ರಯಾಣಗಳಲ್ಲಿ ನೀವು ಕೆಲವು ಹೊಸ ಜನರನ್ನು ಭೇಟಿಯಾಗುತ್ತೀರಿ ಮತ್ತು ಅವರೊಂದಿಗೆ ನಿಕಟತೆಯನ್ನು ಅನುಭವಿಸುತ್ತೀರಿ.
ನಿಮ್ಮ ಉದ್ಯೋಗದಲ್ಲೂ ನೀವು ಉತ್ತಮ ಸಮಯವನ್ನು ಪಡೆಯುತ್ತೀರಿ ಮತ್ತು ನಿಮ್ಮ ಪ್ರಯತ್ನಗಳ ಬಲದ ಮೇಲೆ ನಿಮ್ಮ ಕೆಲಸವನ್ನು ಕರಗತ ನಾಡಿಕೊಳ್ಳುತ್ತೀರಿ. ಇದರಿಂದಾಗಿ ನಿಮ್ಮನ್ನು ಪ್ರಶಂಸಿಸಲಾಗುತ್ತದೆ. ನೀವು ವ್ಯಾಪಾರ ನಡೆಸುತ್ತಿದ್ದರೆ, ಈ ಸಂಚಾರವು ನಿಮ್ಮ ವ್ಯಾಪಾರದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಸರಕುಗಳ ಬೇಡಿಕೆ ಹೆಚ್ಚಾಗುತ್ತದೆ.
ಪರಿಹಾರ - ಮಂಗಳ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು ಮಂಗಳವಾರದ ದಿನ ದಾಳಿಂಬೆ ಮರಕ್ಕೆ ನೀರನ್ನು ಅರ್ಪಿಸಿ.
- ಮೀನಾ ರಾಶಿ
ಮೀನಾ ರಾಶಿಚಕ್ರದ ಜನರಿಗೆ ಮಂಗಳ ಗ್ರಹವು ನಿಮ್ಮ ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ತನ್ನ ಸಂಚಾರದ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಪ್ರವೇಶಿಸುತ್ತದೆ. ಎರಡನೇ ಮನೆಯಲ್ಲಿ ಮಂಗಳ ಸಂಚಾರವನ್ನು ಹೆಚ್ಚು ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುವುದಿಲ್ಲ. ಆದರೂ ಇದು ನಿಮಗೆ ಕೆಲವು ಉತ್ತಮ ಫಲಿತಾಂಶಗಳನ್ನು ತರಲಿದೆ. ಏಕೆಂದರೆ ತನ್ನದೇ ರಾಶಿಯಲ್ಲಿ ಸಾಗಲಿದೆ ಮತ್ತು ನಿಮ್ಮ ಹಣಕಾಸಿನ ಮನೆಯ ಮಾಲೀಕ ಕೂಡ ಆಗಿದೆ.
ಮಂಗಳ ಸಂಚಾರದ ಪರಿಣಾಮದಿಂದಾಗಿ, ನಿಮ್ಮ ಜೀವನದಲ್ಲಿ ನೀವು ಹಣವನ್ನು ಪಡೆಯುತ್ತೀರಿ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಅತ್ಯಂತ ಬಲಗೊಳ್ಳುತ್ತದೆ. ನೀವು ಅದೃಷ್ಟದ ಸಂಪೂರ್ಣ ಸಹಾಯವನ್ನು ಪಡೆಯುತ್ತೀರಿ ಮತ್ತು ಈ ಹಣದ ಮೂಲಕ ಯಾವುದೇ ಕಾರ್ಯವನ್ನು ಉತ್ತಮವಾಗಿ ಪೂರ್ಣಗೊಳಿಸುವಿರಿ. ಈ ಸಂಚಾರವು ಕುಟುಂಬದ ಸ್ಥಾನಮಾನ ಮತ್ತು ಗೌರವವನ್ನು ಹೆಚ್ಚಿಸುತ್ತದೆ ಎಂದು ಸಾಬೀತುಪಠಿಸುತ್ತದೆ. ಆದರೂ ಯಾವುದಾದರೂ ಒಂದು ಕಾರಣದಿಂದ ಕುಟುಂಬದಲ್ಲಿ ಒತ್ತಡದ ಪರಿಸ್ಥಿತಿ ಉಳಿದಿರುತ್ತದೆ ಮತ್ತು ಕುಟುಂಬದ ಜನರು ಪರಸ್ಪರ ವಿವಾದದಲ್ಲಿ ತೊಡಗಬಹುದು.
ನಿಮ್ಮ ಆರೋಗ್ಯದ ದೃಷ್ಟಿಯಿಂದ ಮಂಗಳ ಸಂಚಾರವು ಹೆಚ್ಚು ಅನುಕೂಲಕರವೆಂದು ಹೇಳಲಾಗುವುದಿಲ್ಲ ಮತ್ತು ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಬೇಕು. ಏಕೆಂದರೆ ಅಸಮತೋಲಿತ ಆಹಾರ ಮತ್ತು ಹೆಚ್ಚು ಮಸಾಲೆಯುಕ್ತ ಅಥವಾ ಬಿಸಿ ಆಹಾರವನ್ನು ಬಳಸುವುದರಿಂದ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಈ ಸಂಚಾರವು ಜೀವನ ಸಂಗಾತಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ನಿವು ಅವರ ಮತ್ತು ನಿಮ್ಮ ಇಬ್ಬರ ಬಗ್ಗೆಯೂ ಗಮನ ಹರಿಸಬೇಕು.
ಈ ಸಂಚಾರದ ಪರಿಣಾಮವಾಗಿ, ಶಿಕ್ಷಣದ ಕ್ಷೇತ್ರದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಪರೀಕ್ಷೆಯ ಫಲಿತಾಂಶಗಳು ಸಹ ಉತ್ತಮವಾಗಿರುತ್ತವೆ. ವಿದ್ಯಾರ್ಥಿಗಳಿಗೆ ಮಂಗಳನ ಈ ಸಂಚಾರವು ಸಾಕಷ್ಟು ಅನುಕೂಲಕರವಾಗಿರುತ್ತದೆ. ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಅಧ್ಯಯನದೊಂದಿಗೆ ಅರೆಕಾಲಿಕ ಉದ್ಯೋಗವನ್ನು ಮಾಡಿ ಸ್ವಲ್ಪ ಹಣವನ್ನು ಸಂಪಾದಿಸಲು ಪ್ರಾರಂಭಿಸುತ್ತಾರೆ.
ಈ ಸಂಚಾರದ ಪರಿಣಾಮದಿಂದ ನಿಮ್ಮ ಪ್ರೀತಿ ಜೀವನದಲ್ಲಿ ಸಮಯ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರನ್ನು ಸಂತೋಷಪಡಿಸಲು ನೀವು ನಿಮ್ಮ ಕಡೆಯಿಂದ ಸಂಪೂರ್ಣವಾಗಿ ಪ್ರಯತ್ನಿಸುತ್ತೀರಿ. ಆದರೂ ಈ ಮಧ್ಯೆ ನಿಮ್ಮ ನಡುವೆ ವಿವಾದದ ಸಾಧ್ಯತೆ ಇದೆ ಆದರೆ ಅವು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತವೆ ಮತ್ತು ಶೀಘ್ರದಲ್ಲೇ ಮತ್ತೆ ಮಾತುಕತೆ ಆರಂಭವಾಗುತ್ತದೆ.
ಪರಿಹಾರ - ಮಂಗಳವಾರದಂದು ಮೂರ ಮುಖ ರುದ್ರಾಕ್ಷವನ್ನು ಧರಿಸಿ. ಇದನ್ನು ಮಾಡುವುದರಿಂದ ನಿಮ್ಮ ಅದೃಷ್ಟವು ಬಲಗೊಳ್ಳುತ್ತದೆ.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Horoscope 2023
- राशिफल 2023
- Calendar 2023
- Holidays 2023
- Chinese Horoscope 2023
- Education Horoscope 2023
- Purnima 2023
- Amavasya 2023
- Shubh Muhurat 2023
- Marriage Muhurat 2023
- Chinese Calendar 2023
- Bank Holidays 2023
- राशि भविष्य 2023 - Rashi Bhavishya 2023 Marathi
- ராசி பலன் 2023 - Rasi Palan 2023 Tamil
- వార్షిక రాశి ఫలాలు 2023 - Rasi Phalalu 2023 Telugu
- રાશિફળ 2023 - Rashifad 2023
- ജാതകം 2023 - Jathakam 2023 Malayalam
- ৰাশিফল 2023 - Rashifal 2023 Assamese
- ରାଶିଫଳ 2023 - Rashiphala 2023 Odia
- রাশিফল 2023 - Rashifol 2023 Bengali
- ವಾರ್ಷಿಕ ರಾಶಿ ಭವಿಷ್ಯ 2023 - Rashi Bhavishya 2023 Kannada