• Talk To Astrologers
  • AstroSage Brihat Horoscope
  • Ask A Question
  • Raj Yoga Report
  • Child Report

ಶುಕ್ರ ಸಂಚಾರ ಮೇಷ ರಾಶಿಯಲ್ಲಿ - Venus Transit in Aries in Kannada

ಭಾರತೀಯ ಜ್ಯೋತಿಷ್ಯದಲ್ಲಿ ಶುಕ್ರಕ್ಕೆ ತನ್ನದೇ ಆದ ಸ್ಥಾನವಿದೆ. ಅಂದಹಾಗೆ, ಇದು ದೈತ್ಯರ ಯಜಮಾನನಾಗಿರುವ ಕಾರಣದಿಂದಾಗಿ ಇದನ್ನು ಶುಕ್ರಾಚಾರ್ಯ ಎಂದು ಸಹ ಕರೆಯಲಾಗುತ್ತದೆ, ಆದರೆ ವೈದಿಕ ಜ್ಯೋತಿಷ್ಯದಲ್ಲಿ ಶುಕ್ರ ಗ್ರಹ ಮಾತ್ರ ಜೀವನದಲ್ಲಿನ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅನುಕೂಲಕರ ಶುಕ್ರನಾಗಿರುವ ಕಾರಣದಿಂದ ವ್ಯಕ್ತಿಯು ಜೀವನದಲ್ಲಿ ಬಹುತೇಕ ಎಲ್ಲಾ ರೀತಿಯ ಭೌತಿಕ ಸಂತೋಷಗಳನ್ನು ಅಪಡೆಯುತ್ತಾನೆ ಮತ್ತು ಅವನ ಜೀವನದಲ್ಲಿ ಪ್ರಗತಿ ಪ್ರಗತಿ ಹೊಂದುತ್ತಾನೆ. ವ್ಯಕ್ತಿಯ ವ್ಯಕ್ತಿತ್ವವು ಆಕರ್ಷಕವಾಗಿರುತ್ತದೆ ಮತ್ತು ಜನರು ಅವನ ಕಡೆಗೆ ಸೆಳೆಯುತ್ತಾರೆ. ಅಂತಹ ವ್ಯಕ್ತಿಯು ಎಲ್ಲರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾನೆ ಮತ್ತು ಅದರ ಆಧಾರದ ಮೇಲೆ ಜೀವನದಲ್ಲಿ ಪ್ರಗತಿ ಪಡೆಯುತ್ತಾನೆ.

ಜೀವನನ್ನು ಸಮೃದ್ಧಗೊಳಿಸಲಗುವ ನಿಮ್ಮ ಜಾತಕದಲ್ಲಿ ರಾಜ ಯೋಗವು ಮರೆಯಾಗಿದೆ

ಶುಕ್ರ ಗ್ರಹವನ್ನು ಒಂದು ಶುಭ ಗ್ರಹವೆಂದು ನಾಮಪದ ನೀಡಲಾಗಿದೆ ಮತ್ತು ಬುಧ ಗ್ರಹವನ್ನು ತನ್ನ ಸ್ನೇಹಿತನೆಂದು ನಂಬುತ್ತದೆ. ಮತ್ತೊಂದೆಡೆ ಸೂರ್ಯ ಮತ್ತು ಚಂದ್ರ ಗ್ರಹವನ್ನು ಶುಕ್ರನ ಶತ್ರು ಎಂದು ಪರಿಗಣಿಸಲಾಗಿದೆ. ನಿಮ್ಮ ಜಾತಕದಲ್ಲಿ ಚಂದ್ರ ಗ್ರಹದ ಸ್ಥಾನವು ಬಲವಾಗಿರುವ ಅವಶ್ಯಕತೆ ಇದೆ ಏಕೆಂದರೆ ಇದು ಎಲ್ಲಾ ಭೌತಿಕ ಸಂತೋಷಗಳನ್ನು ನೀಡುತ್ತದೆ. ಆದ್ದರಿಂದ ಶುಕ್ರ ದುರ್ಬಲವಾಗಿದ್ದರೆ ನಿಮಗೆ ಕೆಲವು ವಿಶೇಷ ಪರಿಣಾಮಕಾರಿ ಪರಿಹಾರಗಳನ್ನು ತಿಳಿಸಲಾಗುತ್ತದೆ. ಅದರಲ್ಲಿ ಶುಕ್ರನ ರತ್ನ ಕಲ್ಲು ವಜ್ರ ಅಥವಾ ಅದರ ಉಪ ರತ್ನ ಓಪಲ್ ರತ್ನವನ್ನು ಧರಿಸುವ ಸಲಹೆ ನೀಡಲಾಗಿದೆ. ಇದಲ್ಲದೆ ನೀವು ರತ್ನವನ್ನು ಧರಿಸಲು ಇಷ್ಟಪಡದಿದ್ದರೆ ಶುಕ್ರ ಯಂತ್ರವನ್ನು ಸ್ಥಾಪಿಸಬಹುದು ಮತ್ತು ನಿಯಮಿತವಾಗಿ ಅದನ್ನು ಪೂಜಿಸುವುದರಿಂದಲೂ ಶುಕ್ರ ಗ್ರಹದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಜೇವನದಲ್ಲಿ ಸಂತೋಷವನ್ನು ಪಡೆಯಲು ಸಾಧ್ಯವಾಗುತ್ತದೆ.

ಸಂಪೂರ್ಣ ವರ್ಷದಲ್ಲಿ ಮುಂಬರುವ ಸಮಯದ ಸಂಪೂರ್ಣ ಮುನ್ಸೂಚನೆಯ ಬಗ್ಗೆ ತಿಳಿಯಿರಿ - ವಾರ್ಷಿಕ ಜಾತಕ 2020

ಶುಕ್ರ ಗ್ರಹವು ಉತ್ತರ ಪೂರ್ವ ಅಂದರೆ ಆಗ್ನೇಯ ಕೋಣದ ಅಧಿಪತಿ ಗ್ರಹ ಮತ್ತು ಹಿಂದೂ ಪಂಚಾಂಗದ ಬಗ್ಗೆ ಮಾತನಾಡಿದರೆ ಜ್ಯೇಷ್ಠ ಮಾಸದ ಅಧಿಪತಿಯು ಸಹ ಶುಕ್ರ ಗ್ರಹವೇ. ಶುಕ್ರ ಗ್ರಹದ ಮೂಲಕ ವೃಷಭ ಮತ್ತು ತುಲಾ ಎರಡು ರಾಶಿಚಕ್ರಗಳ ಮೇಲೆ ಅಳಲಾಗುತ್ತದೆ ಮತ್ತು ಇದರ ಅಧಿಪತ್ಯದ ನಕ್ಷತ್ರಗಳು ಭರಣಿ, ಪೂರ್ವಫಾಲ್ಗುಣಿ ಮತ್ತು ಪೂರ್ವಾಷಾಢಾದಲ್ಲಿರುತ್ತವೆ. ನೀವು ಶುಕ್ರ ಗ್ರಹಕ್ಕೆ ಸಂಬಂಧಿಸಿದ ಪರಿಹಾರ ಮಾಡಲು ಬಯಸಿದರೆ, ಈ ನಕ್ಷತ್ರಪುಂಜಗಳ ಸಮಯದಲ್ಲಿ ನೀವು ಅದನ್ನು ಮಾಡಬೇಕು. ಇದರಿಂದ ನಿಮಗೆ ಶುಕ್ರ ಗ್ರಹದ ಸರಿಯಾದ ಫಲಿತಾಂಶಗಳು ತಕ್ಷಣವೇ ಪಡೆಯಲಾಗುತ್ತದೆ ಮತ್ತು ಜೀವನದಲ್ಲಿ ಪ್ರಗತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಜಾತಕದಲ್ಲಿ ಶುಕ್ರನ ಸ್ಥಾನವು ಅತ್ಯಂತ ಶುಭವಾಗಿದ್ದರೆ, ನೀವು ಎಲ್ಲಾ ರೀತಿಯ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಶುಕ್ರನ ಸ್ಥಾನವು ಹೆಚ್ಚು ದುರ್ಬಲವಾಗಿದ್ದರೆ, ನೀವು ಸಂತೋಷದ ಕೊರತೆಯೊಂದಿಗೆ ದಾಂಪತ್ಯ ಜೀವನದಲ್ಲಿ ದುಃಖ ಮತ್ತು ದುರಾದೃಷ್ಟ ಪರಿಸ್ಥಿತಿ ಇದ್ದರೆ ರೋಗಗಳಾಗುವ ಸಾಧ್ಯತೆ ಇರುತ್ತದೆ.

ನೀವು ಯಾವುದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿವಾರಣೆಗಾಗಿ ಪ್ರಶ್ನೆ ಕೇಳಿ

ಮೇಷ ರಾಶಿಯಲ್ಲಿ ಶುಕ್ರನ ಸಂಚಾರದ ಸಮಯ

ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ ಮತ್ತು ಸಂಪನ್ಮೂಲಗಳ ಅಂಶ ಮತ್ತು ಭೌತಿಕ ಸಂತೋಷವನ್ನು ಒದಗಿಸುವವರಾದ ಶುಕ್ರ ಗ್ರಹ 29 ಫೆಬ್ರವರಿ, ಶನಿವಾರದ ಬೆಳಿಗ್ಗೆ 01:31 ಗಂಟೆಗೆ ಮಂಗಳನ ಸ್ವಾಮಿತ್ವದ ಮೇಷ ರಾಶಿಚಕ್ರದಲ್ಲಿ ಪ್ರವೇಶಿಸಲಿದ್ದಾರೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಶುಕ್ರ ಸಂಚಾರದ ವಿಶೇಷ ಪರಿಣಾಮವನ್ನು ಎಲ್ಲಾ ರಾಶಿಚಕ್ರಗಳ ಮೇಲೆ ನೋಡಲಾಗುತ್ತದೆ. ಏಕೆಂದರೆ ಇದು ಅಗ್ನಿ ಅಂಶದ ಗ್ರಹ ಮತ್ತು ಶುಕ್ರನ ಪ್ರಕೃತಿಗಿಂತ ಭಿನ್ನವಾಗಿದೆ. ನಡೆಯಿರಿ ಈಗ ಶುಕ್ರನ ಮೇಷ ರಾಶಿಯಲ್ಲಿ ಸಂಚಾರವು ಎಲ್ಲ ರಾಶಿಚಕ್ರಗಳ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯೋಣ:

ಈ ರಾಶಿಭವಿಷ್ಯವು ಚಂದ್ರ ರಾಶಿಯ ಮೇಲೆ ಆಧರಿಸಿದೆ. ನಿಮ್ಮ ಚಂದ್ರ ರಾಶಿ ಬಗ್ಗೆ ತಿಳಿಯಿರಿ

ಮೇಷ ರಾಶಿಚಕ್ರ

ನಿಮಗಾಗಿ ಶುಕ್ರ ಮೂರನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಈ ಸಂಚಾರದ ಸಮಯದಲ್ಲಿ ನಿಮ್ಮ ಮೊದಲನೇ ಮನೆಯಲ್ಲಿ ಕುಳಿತಿರುತ್ತಾರೆ. ಈ ಮನೆಯಲ್ಲಿ ಶುಕ್ರನಿರುವ ಕಾರಣದಿಂದಾಗಿ ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ಈ ಕಾರಣದಿಂದ ನೀವು ಬಹಳ ಸಂತೋಷವಾಗಿರುತ್ತೀರಿ ಮತ್ತು ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿಯ ಭಾವನೆಯನ್ನು ಅನುಭವಿಸುವಿರಿ. ಇದರ ಸಕಾರಾತ್ಮಕ ಪರಿಣಾಮವು ನಿಮ್ಮ ದಾಂಪತ್ಯ ಜೀವನದ ಮೇಲೆ ಬೀರುತ್ತದೆ ಮತ್ತು ಜೀವನ ಸಂಗಾತಿಯ ನಿಕಟ ಸಂಬಂಧದಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ನಡುವೆ ಪ್ರೀತಿ ಇರುತ್ತದೆ ಮತ್ತು ದಾಂಪತ್ಯ ಜೀವನವನ್ನು ಆನಂದಿಸುವಿರಿ. ಈ ಸಮಯವೂ ವ್ಯಾಪಾರದಲ್ಲಿ ಯಶಸ್ಸು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ. ಕುತುಂಬದ ಮೂಳಕ ಆರ್ಥಿಕವಾಗಿ ಸಹಾಯ ಪಡೆಯುತ್ತೀರಿ. ಇದಲ್ಲದೆ ನಿಮ್ಮ ಜೀವನ ಸಂಗಾತಿಯು ನಿಮ್ಮ ಪ್ರತಿಯೊಂದು ಸಂದರ್ಭದಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ಯಾವುದಾದರು ಹೊಸ ಗ್ಯಾಡ್ಜೆಟ್ ಖರೀದಿಸಬಹುದು. ಸಮತೋಲಿತ ಮತ್ತು ಉತ್ತಮ ಆಹಾರವನ್ನು ಸೇವಿಸುವ ಮೂಲಕ ನೀವು ನಿಮ್ಮನ್ನು ಡೈಟಿಂಗ್ನಲ್ಲಿ ಇರಿಸಿಕೊಳ್ಳಬಹುದು. ಈ ಸಾಗುವಿಕೆಯ ಸಮಯದಲ್ಲಿ ನೀವು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸುತ್ತೀರಿ. ಈ ಸಾಗುವಿಕೆಯು ನಿಮ್ಮ ಗೌರವ ಮತ್ತು ಮನೋಬಲವನ್ನು ಹೆಚ್ಚಿಸುತ್ತದೆ. ಕೆಳವರಲ್ಲಿ ಅಹಂಕಾರದ ಭಾವನೆಯು ಉದ್ಭವಿಸಬಹುದು.

ಪರಿಹಾರ - ಪ್ರತಿದಿನ ಚಿಕ್ಕ ಹೆಣ್ಣು ಮಕ್ಕಳ ಕಾಲು ಮುಟ್ಟಿ ಅವರ ಆಶೀರ್ವಾದವನ್ನು ಪಡೆಯಿರಿ ಮತ್ತು ಶುಕ್ರವಾರದಂದು ಅವರಿಗೆ ಬಿಳಿ ಸಿಹಿ ತಿಂಡಿಯನ್ನು ವಿತರಿಸಿ.

ವೃಷಭ ರಾಶಿಚಕ್ರ

ಶುಕ್ರ ನಿಮ್ಮ ಜಾತಕದಲ್ಲಿ ಆರನೇ ಮನೆಯ ಮಾಲೀಕನಾಗಿರುವ ಜೊತೆಯಲ್ಲಿ ನಿಮ್ಮ ರಾಶಿಚಕ್ರ ಅಂದರೆ ನಿಮ್ಮ ಮೊದಲನೇ ಮನೆಯ ಮಾಲೀಕ. ರಾಶಿಚಕ್ರ ಮಾಲೀಕನ ಸಾಗುವಿಕೆಯು ವಿಶೇಷವಾಗಿ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಈ ಸಾಗುವಿಕೆಯು ನಿಮಗಾಗಿ ಅತ್ಯಂತ ಪ್ರಮುಖವಾಗಿರುತ್ತದೆ. ತನ್ನ ಈ ಸಂಚಾರದ ಸಮಯದಲ್ಲಿ ಶುಕ್ರ ನಿಮ್ಮ ಹನ್ನೆರಡನೇ ಮನೆಯಲ್ಲಿರುತ್ತಾನೆ. ಹನ್ನೆರಡನೇ ಮನೆಯು ವಿವಿಧ ರೀತಿಯ ಖರ್ಚು ಮತ್ತು ಹಾನಿಯ ಮನೆಯಾಗಿದೆ ಆದರೆ ಶುಕ್ರ ಗ್ರಹವು ಈ ಮನೆಯಲ್ಲಿದ್ದು ನಿಮಗೆ ವಿವಿಧ ರೀತಿಯ ಸಂತೋಷ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ. ಇವುಗಳ ಮೇಲೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಮತ್ತೊಂದೆಡೆ ನೀವು ಈ ವೆಚ್ಚಗಳನ್ನು ಸುಲಭವಾಗಿ ಭರಿಸುವಂತಹ ಆದಾಯವನ್ನು ಸಹ ನಿಮಗೆ ಒದಗಿಸುತ್ತದೆ. ಅಂತಹ ಸಂದರ್ಭದಲ್ಲಿ ಕ ಕೆಲವರು ವಿದೇಶದಲ್ಲಿ ತಮ್ಮ ರಜೆಗಳನ್ನು ಕಳೆಯಲು ಇಷ್ಟಪಡಬಹುದು ಮತ್ತು ಇದರಲ್ಲಿ ನೀವು ಸಂತೋಷಪಡುವಿರಿ. ಈ ಸಮಯದಲ್ಲಿ ನೀವು ಯಾವುದೇ ಗ್ಯಾಡ್ಜೆಟ್, ಮೊಬೈಲ್ ಫೋನ್ ಅಥವಾ ಯಾವುದೇ ಅಪ್ಪ್ಲಿನ್ಸ್ ಅನ್ನು ಮನೆಗೆ ತರಬಹುದು. ಇದರಿಂದ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ನ್ಯಾಯಾಲಯ ಕಚೇರಿಯ ವಿಷಯಗಳಲ್ಲಿ ಈ ಸಮಯವೂ ನಿಮಗಾಗಿ ಅನುಕೂಲಕರವಾಗಿಲ್ಲ. ಆದ್ದರಿಂದ ಇದನ್ನು ತಪ್ಪಿಸುವುದು ನಿಮಗೆ ಉತ್ತಮ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಬಳಳಬಹುದು ಆದ್ದರಿಂದ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಯಾವುದೇ ಅನಿರೀಕ್ಷಿತ ಪ್ರಯಾಣವು ನಿಮ್ಮ ವೆಚ್ಚವನ್ನು ಎಚಿಸಬಹುದು.ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳ ಮೇಲೆ ಕೂಡ ನೀವು ಖರ್ಚಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಬಹಳ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ.

ಪರಿಹಾರ - ನೀವು ಶುಕ್ರವಾರದಂದು ಆರಂಭಿಸಿ ತಾಯಿ ಮಹಾಲಕ್ಷ್ಮಿಯ "ಓಂ ಶ್ರೀಂ ಮಹಾಲಕ್ಷ್ಮ್ಯೈ ನಮಃ" ಮಂತ್ರವನ್ನು ಜಪಿಸಬೇಕು.

ಮಿಥುನ ರಾಶಿಚಕ್ರ

ಶುಕ್ರ ದೇವ ನಿಮ್ಮ ರಾಶಿಚಕ್ರದ ಐದನೇ ಮತ್ತು ಹನ್ನೆರಡನೇ ಮನೆಯ ಸ್ವಾಮಿ ಮತ್ತು ಸಂಚಾರದ ಈ ಅವಧಿಯಲ್ಲಿ ಅವರು ನಿಮ್ಮ ಹನ್ನೊಂದನೇ ಮನೆಯಲ್ಲಿ ಕುಳಿತಿರುತ್ತಾರೆ. ಶುಕ್ರ ದೇವರ ಅನುಗ್ರಹದಿಂದ ನೀವು ಹಣವನ್ನು ಪಡೆಯುತ್ತೀರಿ ಮತ್ತು ಬಹಳ ಶುಭವಾಗಿ ನಿಮಗೆ ಹಣಕಾಸು ಲಭ್ಯವಾಗುತ್ತದೆ. ವಿದೇಶಿ ಮೂಲಗಳಿಂದ ಹಣಕಾಸು ಪಡೆಯಲಾಗುವ ಸಾಧನಗಳು ನಿಮಗೆ ದೊರೆಯುತ್ತವೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗುತ್ತದೆ. ಇಷ್ಟೇ ಮಾತ್ರವಲ್ಲದೆ, ನೀವು ವಿಧ್ಯಾರ್ಥಿಯಾಗಿದ್ದರೆ ಶಿಕ್ಷಣದ ಕ್ಷೇತ್ರದಲ್ಲಿ ನೀವು ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ. ಸೃಜನ ಕ್ಷೇತ್ರದಲ್ಲಿ ನೀವು ಉತ್ತಮ ಪ್ರಯೋಜನವನ್ನು ಪಡೆಯುತ್ತೀರಿ ಮತ್ತು ಕಲಾತ್ಮಕ ಕೃತ್ಯಗಳಲ್ಲಿ ನಿಮ್ಮ ಆಸಕ್ತಿಯಿಂದ ನೀವು ಹಣವನ್ನು ಗಳಿಸುವಿರಿ. ವಿವಾಹಿತ ಸ್ಥಳೀಯರಿಗೆ ಮಕ್ಕಳಿಂದ ಲಾಭವಾಗುತ್ತದೆ ಮತ್ತು ಮಕ್ಕಳ ಸಂತೋಷವನ್ನು ಪಡೆಯುತ್ತೀರಿ. ಪ್ರೀತಿ ಜೀವನವನ್ನು ಬದುಕುತ್ತಿರುವ ಜನರಿಗೆ ಸಮಯವೂ ಬಹಳ ಆಕೂಲಕರವಾಗಿರುತ್ತದೆ. ಯಾವುದೇ ರೀತಿಯ ನಿಮ್ಮ ಮಹತ್ವಾಕಾಂಕ್ಷೆಯನ್ನು ಮಕ್ಕಳು ಪೂರ್ಣಗೊಳಿಸುವುದರಿಂದ ನೀವು ಸಂತೋಷಪಡುವಿರಿ. ಇದಲ್ಲದೆ ಕೆಲವರು ವಿದೇಶಿ ಮೂಲಗಳಿಂದ ಲಾಭ ಪಡೆಯಬಹುದು, ಆರ್ಥಿಕವಾಗಿ ನಿಮ್ಮನ್ನು ಬಲಪಡಿಸುವಲ್ಲಿ ಇದು ಪ್ರಯೋಜನಕಾರಿಯಾಗುತ್ತದೆ. ಕೆಲಸದ ಸ್ಥಳದಲ್ಲಿ ವರಿಷ್ಠ ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ.

ಪರಿಹಾರ - ನೀವು ಶುಕ್ರವಾರದಂದು ತಾಯಿಗೆ ಅಕ್ಕಿ ಪಾಯಸವನ್ನು ಅರ್ಪಿಸಿ ನೀವು ಸಹ ಅದನ್ನು ತಿನ್ನಬೇಕು.

ಕರ್ಕ ರಾಶಿಚಕ್ರ

ಶುಕ್ರ ದೇವ ನಿಮ್ಮ ರಾಶಿಚಕ್ರದ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಮಾಲೀಕನಾಗಿದ್ದು ಈ ಸಂಚಾರದ ಸಮಾಯ್ದಲ್ಲಿ ನಿಮ್ಮ ಹತ್ತನೇ ಮನೆಯಲ್ಲಿ ತನ್ನ ಪ್ರಭಾವವನ್ನು ತೋರಿಸುತ್ತಾರೆ. ಹತ್ತನೇ ಮನೆಯಿಂದ ವೃತ್ತಿ ಜೀವನದ ಬಗ್ಗೆ ತಿಳಿಯುತ್ತದೆ. ಈ ಮನೆಯಲ್ಲಿ ಶುಕ್ರನ ಇರುವಿಕೆಯ ಕಾರಣದಿಂದಾಗಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಏರಿಳಿತವನ್ನು ಎದುರಿಸಬೇಕಾಗಬಹುದು. ನಿಮ್ಮ ಮನಸ್ಸು ಕೆಲಸದ ಹೊರಗಿನ ಇತರ ಚಟುವಟಿಕೆಗಳಲ್ಲಿ ತೊಡಗುತ್ತದೆ. ಈ ಕಾರಣದಿಂದ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ನಡವಳಿಕೆಯನ್ನು ಸರಿಯಾಗಿ ಇರಿಸಿ ಮತ್ತು ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಿ ಮಾತನಾಡಿ. ಆದಾಗ್ಯೂ, ಈ ಸಂಚಾರದ ಪರಿಣಾಮದಿಂದ ಕುಟುಂಬ ಜೀವನದಲ್ಲಿ ಸಂತೋಷದ ಸಮಯ ಬರುತ್ತದೆ. ಕುಟುಂಬದ ಸದಸ್ಯರು ಪರಸ್ಪರರ ಬಗ್ಗೆ ಸಾಮರಸ್ಯ ಮತ್ತು ಪ್ರೀತಿ ಭಾವನೆಯನ್ನು ಇಟ್ಟಿರುತ್ತಾರೆ. ಕುಟುಂಬದ ಹೊಸ ವಾಹನ ಬರಬಹುದು ಮತ್ತು ಸಾಮಾನ್ಯವಾಗಿ ನಿಮಗೆ ಹಣಕಾಸಿನ ಲಾಭವಾಗುತ್ತದೆ, ಈ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ವ್ಯಾಪಾರದ್ಲಲಿ ಹಣಕಾಸಿನ ಹೂಡಿಕೆ ಮಾಡುತ್ತಾರೆ ಮತ್ತು ಕೆಲಸಕ್ಕೆ ಸಂಬಂಧಿಸಿದಂತೆ ಹಲವು ಪ್ರವಾಸಗಳನ್ನು ಸಹ ಮಾಡಬಹುದು. ಅವು ಅವರಿಗೆ ದೀರ್ಘಾವಧಿಯ ಲಾಭದ ಮೂಲವಾಗುತ್ತವೆ. ಕೆಲಸದ ಸ್ಥಳದಲ್ಲಿ ಮಹಿಳಾ ಸಹೋದ್ಯೋಗಿಗಳೊಂದಿಗೆ ಉತ್ತಮವಾಗಿ ವರ್ತಿಸುವುದು ನಿಮಗೆ ಅಗತ್ಯವಾಗಿದೆ ಏಕೆಂದರೆ ನಿಮ್ಮನ್ನು ಕೊಂಡೊಯ್ಯುವಲ್ಲಿ ಅವರು ಪ್ರಮುಖ ಪಾತ್ರವಹಿಸುತ್ತಾರೆ. ನಿಮ್ಮ ಕೆಲಸದಲ್ಲಿ ನಿಮ್ಮ ಮನಸ್ಸು ಹೊಂದಿರುತ್ತದೆ. ಇದು ನಿಮ್ಮ ಪ್ರದರ್ಶನವನ್ನು ಬಹಳಷ್ಟು ಮಟ್ಟಿಗೆ ಸುಧಾರಿಸುತ್ತದೆ. ಆದರೆ ವ್ಯರ್ಥವಾದ ವಿವಾದಗಳಲ್ಲಿ ಸಮಯ ಹಾಳು ಮಾಡುವುದರಿಂದ ನಿಮಗೆ ಹಾನಿಯಾಗಬಹುದು.

ಪರಿಹಾರ - ನೀವು ಬಲೇ ಮರಕ್ಕೆ ಕಡ್ಲೆ ಬೇಳೆ ಮತ್ತು ಬೆಲ್ಲವನ್ನು ಅರ್ಪಿಸಬೇಕು.

ಸಿಂಹ ರಾಶಿಚಕ್ರ

ಶುಕ್ರ ದೇವ ನಿಮ್ಮ ರಾಶಿಚಕ್ರಕ್ಕೆ ಮೂರನೇ ಮತ್ತು ಹತ್ತನೇ ಮನೆಯ ಮಾಲೀಕ ಮತ್ತು ಮೇಷ ರಾಶಿಚಕ್ರದಲ್ಲಿ ಸಾಗಣಿಸುತ್ತಾ ನಿಮ್ಮ ಒಂಬತ್ತನೇ ಮನೆಗೆ ಸಾಗುತ್ತಾರೆ. ಒಂಬತ್ತನೇ ಮನೆಯು ಅದೃಷ್ಟದ ಮನೆಯಾಗಿದೆ. ಕರ್ಮದ ಮನೆ ಅಂದರೆ ಶುಕ್ರನ ತನ್ನದೇ ಮನೆಯಿಂದ ಹನ್ನೆರಡನೇ ಸ್ಥಾನದಲ್ಲಿರುವ ಕಾರಣದಿಂದ ಈ ಸಾಗುವಿಕೆಯ ಸಮಯದಲ್ಲಿ ನಿಮ್ಮ ಉದ್ಯೋಗದಲ್ಲಿ ವರ್ಗಾವಣೆಯ ಪ್ರಬಲ ಸಾಧ್ಯತೆ ಇದೆ. ಈ ವರ್ಗಾವಣೆಯು ನಿಮಗೆ ಹಿತಕರವಾಗಿರುತ್ತದೆ ಎಂಬುದು ಒಳ್ಳೆಯ ವಿಷಯ. ಸುಂದರವಾದ ಸ್ಥಳಗಳಿಗೆ ಹೋಗುವ ಸಾಧ್ಯತೆ ಇದೆ ಮತ್ತು ಈ ವರ್ಗಾವಣೆಯಿಂದ ನೀವು ಲಾಭ ಪಡೆಯುವಿರಿ. ಇದರ ಜೊತೆಗೆ, ಗ್ಲಾಮರ್, ಮೀಡಿಯಾ ಮತ್ತು ನಟನೆ ಮಾಡುವ ಜನರಿಗೆ ಲಾಭವಾಗುತ್ತದೆ. ಈ ಸಾಗುವಿಕೆಯ ಸಮಯದಲ್ಲಿ ನಿಮ್ಮ ಪ್ರಯತ್ನಗಳು ಮತ್ತು ಅದೃಷ್ಟದಲ್ಲಿ ಹೆಚ್ಚಳವಾಗುತ್ತದೆ. ಇಷ್ಟೇ ಅಲ್ಲದೆ, ನಿಮ್ಮೊಂದಿಗೆ ಕೆಲಸ ಮಾಡುವ ಸಹೋದ್ಯೋಗಿಗಳು ಸಹ ನಿಮ್ಮ ಕೆಲಸದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಇದರಿಂದ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ ಮತ್ತು ನೀವು ಸಾಮಾಜಿಕವಾಗಿ ಸ್ಥಾಪಿತರಾಗುವಿರಿ. ನಿಮ್ಮ ಕಿರಿಯ ಸಹೋದರ ಸಹೋದರಿಯರು ಈ ಸಾಗುವಿಕೆಯ ಉತ್ತಮ ಲಾಭವನ್ನು ಪಡೆಯುತ್ತಾರೆ ಮತ್ತು ಈ ಸಮಯದಲ್ಲಿ ಪ್ರಗತಿ ಪಡೆಯುತ್ತಾರೆ. ವ್ಯಾಪಾರದ ಸಂಬಂಧದಲ್ಲಿ ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಪರಿಹಾರ - ನೀವು ಸ್ಪಟಿಕ ಮಾಲೆಯಿಂದ "ಓಂ ಮಹಾಲಕ್ಷ್ಮ್ಯೈ ನಮಃ" ಮಂತ್ರವನ್ನು ಜಪಿಸಬೇಕು.

ಕನ್ಯಾ ರಾಶಿಚಕ್ರ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವರು ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಈ ಸಾಗುವಿಕೆಯ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಸಾಗುತ್ತಾರೆ. ಎಂಟನೇ ಮನೆಯನ್ನು ಅನಿಶ್ಚಿತತೆ ಮತ್ತು ಇದ್ದಕ್ಕಿದ್ದಂತೆ ಸಂಭವಿಸಲಾಗುವ ಘಟನೆಗಳಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ಈ ಮನೆಯಲ್ಲಿ ಶುಕ್ರನ ಸಾಗುವಿಕೆಯ ಕಾರಣದಿಂದಾಗಿ ಇದ್ದಕ್ಕಿದ್ದಂತೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ನೀವು ರಹಸ್ಯ ರೀತಿಯಲ್ಲಿ ಹಣಕಾಸು ಖರ್ಚಿಸಲು ಇಷ್ಟಪಡುತ್ತೀರಿ. ಶುಕ್ರನ ಈ ಸಾಗಾಣಿಯು ನಿಮ್ಮ ಗುರುಗಳು ಮತ್ತು ಗುರುವಿನಂತಹ ಜನರ ಆರೋಗ್ಯಕ್ಕೆ ಕೆಟ್ಟದಾಗಿರುತ್ತದೆ. ನಿಮ್ಮ ತಂದೆ ಮುದುಕರಾಗಿದ್ದರೆ, ಅವರ ಆರೋಗ್ಯವು ಹದಗೆಡಬಹುದು. ಈ ಸಮಯದಲ್ಲಿ ನಿಮ್ಮ ಅದೃಷ್ಟದಲ್ಲಿ ಸ್ವಲ್ಪ ದುರ್ಬಲತೆಯನ್ನು ಕಾಣಲಾಗುತ್ತದೆ, ಈ ಕಾರಣದಿಂದ ನಿಮ್ಮ ಕೆಲಸಗಳಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಆದಾಗ್ಯೂ ನೀವು ಸಂತೋಷವನ್ನು ಪಡೆಯುತ್ತಿರುತ್ತೀರಿ. ಕೆಲವು ಅನಗತ್ಯ ರೀತಿಯಲ್ಲಿ ನೀವು ಹಣಕಾಸು ಪಡೆಯಬಹುದು. ಆರ್ಥಿಕವಾಗಿ ಇದು ನಿಮ್ಮನ್ನು ಬಲಪಡಿಸುತ್ತಾರೆ ಆದರೆ ಮಾನಸಿಕವಾಗಿ ನಿಮ್ಮ ಮಾನಸಿಕ ಶಾಂತಿಯನ್ನು ನಿಮ್ಮಿಂದ ಕಸಿದುಕೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ಅತ್ತೆಮನೆ ಕಡೆಯಿಂದ ನೀವು ಲಾಭ ಪಡೆಯುತ್ತೀರಿ ಎಂದು ನಿರೀಕ್ಷಿಸಲಾಗಿದೆ. ಮತ್ತೊಂದೆಡೆ ಅತ್ತೆಮನೆಯಲ್ಲಿ ಯಾವುದೇ ರೀತಿಯ ಕಾರ್ಯಕ್ರ್ರಮವು ಸಂಭವಿಸಬಹುದು ಇದರಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಸಹ ಖಚಿತಪಡಿಸಿಕೊಳ್ಳಲಾಗುತ್ತದೆ.

ಪರಿಹಾರ - ನೀವು ಶುಕ್ರ ಗ್ರಹದ ಅನುಕೂಲಕರ ಫಲಿತಾಂಸಹವನ್ನು ಪಡೆಯಲು ಚಿಕ್ಕ ಹುಡುಗಿಯರ ಕಾಲು ಮುಟ್ಟಿ ಆಶೀರ್ವಾದ ಪಡೆಯಬೇಕು.

ತುಲಾ ರಾಶಿಚಕ್ರ

ಶುಕ್ರ ದೇವರ ಪಾತ್ರವು ನಿಮಗೆ ಬಹಳ ಮುಖ್ಯ ಏಕೆಂದರೆ ಅವರು ನಿಮ್ಮ ಎಂಟನೇ ಮನೆಯ ಸ್ವಾಮಿಯಾಗಿದ್ದು ಜೊತೆಯಲ್ಲಿ ನಿಮ್ಮ ರಾಶಿಚಕ್ರದ ಅಧಿಪತಿ ಕೂಡ ಆಗಿದ್ದಾರೆ. ಅಂದರೆ ನಿಮ್ಮ ಮೊದಲನೇ ಮನೆಯ ಅಧಿಪತಿಯಾಗಿದ್ದು ಸಾಗುವಿಕೆಯ ಈ ಸಮಯದಲ್ಲಿ ಗಮನಾರ್ಹ ಪ್ರಭಾವಶಾಲಿಯಾಗಿರುತ್ತಾರೆ. ಶುಕ್ರನ ಮೇಷ ರಾಶಿಯಲ್ಲಿ ಸಾಗುವಿಕೆಯ ಸಮಯದಲ್ಲಿ ಅವರು ನಿಮ್ಮ ಏಳನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದು ದೀರ್ಘಕಾಲದ ಪಾಲುದಾರಿಕೆಯ ಮನೆ. ಈ ಸಾಗಣೆಯ ಪರಿಣಾಮದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರೀತಿಯ ನದಿ ಹರಿಯುತ್ತದೆ. ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಿಕಟ ಸಂಬಂಧದಲ್ಲಿ ಹೆಚ್ಚಳವಾಗುತ್ತದೆ. ಪರಸ್ಪರರ ಬಗ್ಗೆ ಆಕರ್ಷಣೆ ಹೆಚ್ಚಾಗುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಾಮಾಣಿಕರಾಗಿರಿ ಏಕೆಂದರೆ ಈ ಸಮಯದಲ್ಲಿ ನೀವು ಇತರ ವ್ಯಕ್ತಿಯಲ್ಲಿ ಆಸಕ್ತಿ ಹೊಂದಿದರೆ ನಿಮ್ಮ ದಾಂಪತ್ಯ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮಲ್ಲಿ ಕಾಮಪ್ರಚೋದಕ ಪ್ರವೃತ್ತಿ ಹೆಚ್ಚಾಗಬಹುದು. ಇದು ನಿಮ್ಮನ್ನು ತೊಂದರೆಕ್ಕೊಳಗಾಗಿಸಬಹುದು. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ. ಈ ಸಮಯದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಅದ್ಭುತ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಮತ್ತು ನೀವು ಅರೋಗ್ಯ ಸಮಸ್ಯೆಗಳನ್ನು ಸಹ ತೊಡೆದುಹಾಕಲು ನಿಮಗೆ ಸಾಧ್ಯವಾಗುತ್ತದೆ. ವ್ಯಾಪಾರ ಪಾಲುದಾರರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗುತ್ತದೆ.

ಪರಿಹಾರ - ನೀವು ಶುಕ್ರ ಯಂತ್ರ ಅಥವಾ ರತ್ನವನ್ನು ಧರಿಸಬೇಕು.

ವೃಶ್ಚಿಕ ರಾಶಿಚಕ್ರ

ಶುಕ್ರ ದೇವ ನಿಮ್ಮ ರಾಶಿಚಕ್ರಕ್ಕೆ ಏಳನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಆರನೇ ಮನೆಗೆ ಪ್ರವೇಶಿಸುತ್ತಾರೆ. ಆರನೇ ಮನೆಯಲ್ಲಿ ಶುಕ್ರನ ಸಾಗುವಿಕೆಯು ನಿಮಗೆ ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಈ ಸಾಗಣೆಯ ಕಾರಣದಿಂದಾಗಿ ಒಂದೆಡೆ ಅನಿರೀಕ್ಷಿತವಾಗಿ ನಿಮ್ಮ ವೆಚ್ಚಗಳಲ್ಲಿ ಹೆಚ್ಚಳವಾದರೆ ಅದೇ ಸಮಯದಲ್ಲಿ ಮತ್ತೊಂದೆಡೆ ನಿಮ್ಮ ವಿರೋಧಿಗಳು ತಲೆ ಎತ್ತುತ್ತಾರೆ ಮತ್ತು ನಿಮ್ಮ ಗೌರವವನ್ನು ಹಾನಿಗೊಳಿಸಲು ಪ್ರಯತ್ನಿಸುತ್ತಾರೆ. ಅವರ ಬಗ್ಗೆಯೂ ನೀವು ಜಾಗರೂಕರಾಗಿರಬೇಕು. ಮಹಿಳೆಯರೊಂದಿಗೆ ಉತ್ತಮವಾಗಿ ವರ್ತಿಸಬೇಕು, ಇಲ್ಲದಿದ್ದರೆ ಅವರಿಂದ ಕೆಲವು ಸಮಸ್ಯೆಗಳಾಗಬಹುದು. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯಕ್ಕೆ ತೊಂದರೆಯಾಗಬಹುದು. ಆರೋಗ್ಯವು ದುರ್ಬಲವಾಗಿರುವುದರಿಂದಾಗಿ ದೈಹಿಕ ಶಕ್ತಿಯಲ್ಲಿ ಕೊರತೆಯನ್ನು ಅನುಭವಿಸಲಾಗುತ್ತದೆ. ಆದಾಗ್ಯೂ ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಈ ಸಾಗಣೆಯು ಪ್ರಯೋಜಕರಿ ಎಂದು ಸಾಬೀತುಪಡಿಸುತ್ತದೆ ಮತ್ತು ನಿಮ್ಮ ಪ್ರಯತ್ನಗಳಿಗೆ ವೇಗ ಸಿಗುತ್ತದೆ. ಈ ಸಮಯದಲ್ಲಿ ಕೆಲವು ಸ್ಥಳೀಯರು ಸಾಲ ತೆಗೆದುಕೊಂಡು ತಮ್ಮ ಹಿಂದಿನ ಸಾಲವನ್ನು ಮರುಪಾವತಿಸಲು ಪ್ರಯತ್ನಿಸುತ್ತಾರೆ, ನ್ಯಾಯಾಲಯ ವಿಷಯಗಳಿಗಾಗಿ ಈ ಸಮಯವು ಅನುಕೂಲಕರವಾಗಿಲ್ಲ. ಈ ಸಮಯದಲ್ಲಿ ಉದ್ಯೋಗದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ ಮತ್ತು ಇದ್ದಕ್ಕಿದ್ದಂತೆ ಮುಂದುವರಿಯುವ ಅವಕಾಶವನ್ನು ನೀವು ಪಡೆಯಬಹುದು.

ಪರಿಹಾರ - ಈ ಸಾಗುವಿಕೆಯ ಸಮಯದಲ್ಲಿ ಶುಕ್ರವಾರದಂದು ನೀವು ಸಕ್ಕರೆಯ ದಾನ ಮಾಡಬೇಕು.

ಧನು ರಾಶಿಚಕ್ರ

ಧನು ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಸಾಗುವಿಕೆಯ ಈ ಅವಧಿಯಲ್ಲಿ ಶುಕ್ರ ದೇವ ನಿಮ್ಮ ಐದನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಐದನೇ ಮನೆಯನ್ನು ಬುದ್ಧಿ , ಪ್ರೀತಿ ಮತ್ತು ಮಕ್ಕಳ ಮನೆಯೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಮನೆಯಲ್ಲಿ ಶುಕ್ರನ ಸಂಚಾರದ ಕಾರಣದಿಂದಾಗಿ ನೀವು ನಿಮ್ಮ ಪ್ರೀತಿ ಜೀವನದಲ್ಲಿ ಬಹಳಷ್ಟು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವಿನ ಸಂಬಂಧವು ಇನ್ನಷ್ಟು ಉಟಂವಾಗುತ್ತದೆ. ನಿಮ್ಮ ನಿಕಟ ಸಂಬಂಧದಲ್ಲಿ ಹೆಚ್ಚಳವಾಗುತ್ತದೆ. ಪರಸ್ಪರರ ಬಗ್ಗೆ ಆಕರ್ಷಣೆ ಹೆಚ್ಚಾಗುವುದರಿಂದಾಗಿ ನಿಮ್ಮ ಈ ಸಂಬಂಧವು ಬಲಗೊಳ್ಳುತ್ತದೆ. ಇದಲ್ಲದೆ ಶಿಕ್ಷಣದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಅಪಡೆಯುತ್ತೀರಿ ಮತ್ತು ನಿಮ್ಮ ಪರಿಶ್ರಮವು ಯಶಸ್ವಿಯಾಗುತ್ತದೆ. ವಿವಾಹಿತ ಜನರು ತಮ್ಮ ಮಕ್ಕಳ ಸಂತೋಷವನ್ನು ಪಡೆಯುತ್ತಾರೆ. ಸಾಲದಲ್ಲಿ ಮುಳುಗಿರುವ ಜನರು ಈ ಸಾಗುವಿಕೆಯಲ್ಲಿ ಲಾಭ ಪಡೆಯಬಹುದು ಮತ್ತು ಸಾಲವನ್ನು ಮರುಪಾವತಿಸಲು ಭಾಗಶಃ ಯಶಸ್ಸು ಪಡೆಯುತ್ತಾರೆ. ಈ ಸಾಗಣೆಯ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುತ್ತದೆ ಮತ್ತು ನಿಮ್ಮ ಆರ್ಥಿಕ ಮಠವು ಬಲಗೊಳ್ಳುತ್ತದೆ.ಆದಾಗ್ಯೂ ಉದ್ಯೋಗದಲ್ಲಿರುವ ಜನರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ಅವರು ತಮ್ಮ ಉದ್ಯೋಗವನ್ನು ಬಲಾಯಿಸುವ ಬಗ್ಗೆ ಯೋಚಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಕೆಲವು ಅನಿಯಮಿತ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ.

ಪರಿಹಾರ - ನೀವು ಶುಕ್ರವಾರದಂದು ಶಿವಲಿಂಗದ ಮೇಲೆ ಅಕ್ಷತವನ್ನು ಅರ್ಪಿಸಬೇಕು.

ಮಕರ ರಾಶಿಚಕ್ರ

ನಿಮ್ಮ ರಾಶಿಚಕ್ರಕ್ಕೆ ಶುಕ್ರ ದೇವ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಾಗುವಿಕೆಯ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತಾರೆ. ಶುಕ್ರ ಗ್ರಹವು ನಿಮಗಾಗಿ ಸಂಯೋಜಕ ಪಾತ್ರವನ್ನು ಸಹ ನಿರ್ವಹಿಸುತ್ತದೆ. ಆದ್ದರಿಂದ ಶುಕ್ರನ ಸಂಚಾರವು ನಿಮಗೆ ಸಾಕಷ್ಟು ಪ್ರಮುಖ ಫಲಿತಾಂಶಗಳನ್ನು ತರುತ್ತದೆ. ಈ ಸಾಗಣೆಯ ಪರಿಣಾಮದಿಂದಾಗಿ ವಿಶೇಷವಾಗಿ ನಿಮ್ಮ ಕುಟುಂಬದಲ್ಲಿ ಶಾಂತಿಯ ಸ್ಥಾಪನೆಯಾಗುತ್ತದೆ ಮತ್ತು ನಿಮ್ಮ ಕುಟುಂಬದ ಪರಿಸರದಲ್ಲಿ ನಿಮಗಾಗಿ ಬಹಳಷ್ಟು ಶಾಂತಿಯನ್ನು ಒದಗಿಸುತ್ತದೆ. ಕುಟುಂಬದಲ್ಲಿ ಸಾಮರಸ್ಯವನ್ನು ಕಾಣಬಹುದು ಮತ್ತು ಜನರು ಪರಸ್ಪರರ ಬಗ್ಗೆ ಸ್ನೇಹದ ಭಾವನೆಯನ್ನು . ಈ ಸಮಯದಲ್ಲಿ ಯಾವುದೇ ಗ್ಯಾಜೆಟ್ ಅಥವಾ ಹೊಸ ವಾಹನವನ್ನು ಖರೀದಿಸುವ ಸಾಧ್ಯತೆ ಇದೆ. ಕೆಲವರು ಮನೆಯ ಅಲಂಕಾರದ ಬಗ್ಗೆ ವಿಶೇಷ ಗಮನ ನೀಡುತ್ತಾರೆ. ದೇಶೀಯ ವೆಚ್ಚಗಳು ಹೆಚ್ಚಾಗುತ್ತವೆ, ಇದು ಕುಟುಂಬದಲ್ಲಿ ನಿಮಗೆ ಇನ್ನಷ್ಟು ಗೌರವವನ್ನು ನೀಡುತ್ತವೆ. ಈ ಸಾಗಣೆಯ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯಬಹುದು ಮತ್ತು ನಿಮ್ಮ ಕಾರ್ಯಕ್ಷಮತೆಯು ಮೊದಲಿಗಿಂತ ಸುಧಾರಿಸುತ್ತದೆ. ಮಕ್ಕಳ ಸಂತೋಷವನ್ನು ಪಡೆಯುತ್ತೀರಿ. ಸೃಜನಶೀಲ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಅದ್ಭುತ ಲಾಭವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸುತ್ತೀರಿ. ಈ ಸಮಯದಲ್ಲಿ ನಿಮ್ಮ ತಾಯಿ ಬಹಳ ಸಂತೋಷವಾಗಿರುತ್ತಾರೆ ಮತ್ತು ಅವರಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ.

ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ ಭಗವಂತ ಗಣೇಶನನ್ನು ಪೂಜಿಸಬೇಕು ಮತ್ತು ಅವರಿಗೆ ದುರ್ವಾ ಅರ್ಪಿಸಬೇಕು.

ಕುಂಭ ರಾಶಿಚಕ್ರ

ಕುಂಭ ರಾಶಿಚಕ್ರದ ಜನರಿಗೆ ಶುಕ್ರ ಗ್ರಹವು ಪ್ರಯೋಜನಕಾರಿ ಗ್ರಹವಾಗಿದೆ ಏಕೆಂದರೆ ನಿಮ್ಮ ಕೇಂದ್ರ ಮನೆ (ನಾಲ್ಕನೇ) ಮತ್ತು ತ್ರಿಕೋನ ಮನೆ (ಒಂಬತ್ತನೇ) ಮನೆಯ ಅಧಿಪತಿಯಾಗಿದೆ ಆದ್ದರಿಂದ ಈ ಸಂಚಾರವು ನಿಮಗೆ ಬಹಳ ಮುಖ್ಯ. ಈ ಸಾಗುವಿಕೆಯ ಸಮಯದಲ್ಲಿ ಶುಕ್ರ ದೇವ ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತಾರೆ, ಈ ಕಾರಣದಿಂದಾಗಿ ನಿಮ್ಮ ಸಮಯವು ಪ್ರವಾಸಗಳಲ್ಲಿ ಕಳೆಯುತ್ತದೆ. ಪ್ರಯಾಣವು ಸಂತೋಷವಾಗಿರುತ್ತದೆ ಮತ್ತು ಅನಾನಂದದಾಯಕವಾಗಿರುತ್ತದೆ. ನಿಮ್ಮ ಗೌರವದಲ್ಲಿ ಹೆಚ್ಚಳವಾಗುತ್ತದೆ. ಅದೃಷ್ಟದಲ್ಲಿ ಅಭಿವೃದ್ಧಿಯಾಗುತ್ತದೆ. ಈ ಕಾರಣದಿಂದಾಗಿ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಾಗುತ್ತವೆ. ದೀರ್ಘಕಾಲದಿಂದ ಸಿಲುಕಿಕೊಂಡಿರುವ ಕೆಲಸಗಳು ಸಹ ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಅದು ನಿಮ್ಮನ್ನು ಮಾನಸಿಕವಾಗಿ ಬಲಪಡಿಸುತ್ತದೆ. ಒತ್ತಡದಿಂದ ಮುಕ್ತರಾಗುವಿರಿ ಮತ್ತು ಹಣಕಾಸಿನ ಉತ್ತಮ ಲಾಭವಾಗುತ್ತದೆ. ಶುಕ್ರನ ಮೇಷ ರಾಶಿಚಕ್ರದಲ್ಲಿ ಸಾಗುವಿಕೆಯ ಸಮಯದಲ್ಲಿ ನಿಮ್ಮ ಸ್ನೇಹಿತರು ನಿಮ್ಮನ್ನು ಬೆಂಬಲಿಸುತ್ತಾರೆ ಮತ್ತು ಅವರು ನಿಮ್ಮ ಪ್ರತಿಯೊಂದು ಕೆಲಸದಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ನೀವು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಿ. ನಿಮ್ಮ ಪ್ರೀತಿ ಜೇವನದಲ್ಲಿ ಸಂತೋಷ ಮತ್ತು ನೀವು ಇನ್ನೂ ಒಬ್ಬಂಟಿಯಾಗಿದ್ದರೆ, ಈ ಸಮಯದಲ್ಲಿ ನೀವು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು. ಇದಲ್ಲದೆ ನೀವು ಯಾರನ್ನಾದರೂ ಪ್ರಸ್ತಾಪಿಸಲು ಬಯಸುತ್ತಿದ್ದರೆ ಈ ಸಾಗಣೆಯು ಅದಕ್ಕೂ ಬಹಳಷ್ಟು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ತಂದೆಗೆ ಲಾಭವಾಗುತ್ತದೆ ಮತ್ತು ಅವರು ತಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿ ಪಡೆಯಬಹುದು.

ಪರಿಹಾರ - ಶುಕ್ರವಾರದಂದು ಹಸುವಿಗೆ ಹಿಟ್ಟಿನ ಹುಂಡೆಗಳನ್ನು ತಯಾರಿಸಿ ತಿನ್ನಿಸಬೇಕು.

ಮೀನಾ ರಾಶಿಚಕ್ರ

ನಿಮ್ಮ ರಾಶಿಚಕ್ರಕ್ಕೆ ಶುಕ್ರ ಗ್ರಹವು ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ. ತನ್ನ ಈ ಸಂಚಾರದ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಪ್ರವೇಶಿಸುತ್ತಾರೆ. ಎರಡನೇ ಮನೆಯನ್ನು ಹಣದ ಮನೆಯೆಂದು ಸಹ ಕರೆಯಲಾಗುತ್ತದೆ. ಆದ್ದರಿಂದ ಈ ಮನೆಯಲ್ಲಿ ಶುಕ್ರನ ಸಾಗುವಿಕೆಯ ಪರಿಣಾಮದಿಂದಾಗಿ ಹಣಕಾಸಿನ ವಿಷಯಗಳಲ್ಲಿ ನಿಮಗೆ ಉತ್ತಮ ಫಲಿತಾಂಶಗಳನ್ನು ಒದಗಿಸುತ್ತದೆ. ಅಂದರೆ ನೀವು ಹಣದ ಲಾಭವನ್ನು ಪಡೆಯುತ್ತೀರಿ ಮತ್ತು ಹಣವನ್ನು ಸಂಗ್ರಹಿಸಲು ಸಹ ಸಾಧ್ಯವಾಗುತ್ತದೆ ಇದರ ಪರಿಣಾಮದಿಂದಾಗಿ ನಿಮ್ಮ ಆರ್ಥಿಕ ಸ್ಥಾನವು ಬಲವಾಗುತ್ತದೆ. ಈ ಸಮಯದಲ್ಲಿ ಉತ್ತಮ ಭಕ್ಷ್ಯಗಳ್ನ್ನು ಆನಂದಿಸುವಿರಿ ಮತ್ತು ಹೊಸ ಹೊಸ ವಸ್ತುಗಳನ್ನು ಇಷ್ಟಪಡುವಿರಿ. ಕುಟುಂಬದಲ್ಲಿ ಸಂತೋಷದ ಘಟನೆ ಸಂಭವಿಸಬಹುದು ಇದರಿಂದ ಕುಟುಂಬದ ಯಾವುದೇ ಕಾರ್ಯಕ್ರಮ ಅಥವಾ ಮದುವೆ ಸಂಭವಿಸಬಹುದು. ಇದರಿಂದ ಮನೆಯಲ್ಲಿ ಅತಿಥಿಗಳ ಆಗಮನವು ನಡೆಯುತ್ತಿರುತ್ತದೆ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣವು ಉಳಿದಿರುತ್ತದೆ. ಕುಟುಂಬದ ಸದಸ್ಯರಲ್ಲಿ ಪರಸ್ಪರರ ಆಬಗ್ಗೆ ಪ್ರೀತಿ ಮತ್ತು ಸಾಮರಸ್ಯದ ಭಾವನೆ ಉಳಿದಿರುತ್ತದೆ. ಇದ್ದಕ್ಕಿದ್ದಂತೆ ಹಣಕಾಸಿನ ಲಬಹವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಕಿರಿಯ ಸಹೋದರ ಸಹೋರಿಯರು ಸಹ ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಕೆಲವು ಜನರಿಗೆ ಈ ಸಮಯದಲ್ಲಿ ಪೂರ್ವಜರ ಸಂಪತ್ತು ಸಿಗಬಹುದು.

ಪರಿಹಾರ - ಶುಕ್ರವಾರದಂದು ನೀವು ಚಿಕ್ಕ ಹುಡುಗಿಯರಿಗೆ ಬಿಳಿ ತಿಂಡಿಯನ್ನು ತಿನ್ನಿಸಬೇಕು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 750/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com