ಕನ್ಯಾ ರಾಶಿಯಲ್ಲಿ ಮಂಗಳ ಸಂಚಾರ ( 6th September 2021 )
ಮಂಗಳ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ ಮತ್ತು ಒಂಬತ್ತು ಗ್ರಹಗಳಲ್ಲಿ ಇದನ್ನು ಅತ್ಯಂತ ಪುರುಷ ಗ್ರಹವೆಂದು ಪರಿಗಣಿಸಲಾಗಿದೆ. ಮಂಗಳ ಗ್ರಹವನ್ನು ಕೃಷಿಯ ಗ್ರಹವೆಂದು ಪರಿಗಣಿಸಲಾಗಿದೆ. ಇದನ್ನು ರೋಮನ್ ಜನರು ಯುದ್ಧದ ದೇವರೆಂದು ಪೂಜಿಸುತ್ತಿದ್ದರು. ಈ ಗ್ರಹದ ಶಕ್ತಿ ತುಂಬಾ ತೀವ್ರವಾಗಿದೆ ಮತ್ತು ಇದು ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಆಗಿರಬಹುದು. ಮಂಗಳ ನಿಮ್ಮನ್ನು ಭಾವುಕ ಪ್ರೇಮಿಯನ್ನಾಗಿಸಬಹುದು, ಆದರೆ ಇದರೊಂದಿಗೆ ಇದು ನಿಮ್ಮನ್ನು ನಿಮ್ಮ ಇಂದ್ರಿಯಗಳ ಗುಲಾಮರನ್ನಾಗಿಸುತ್ತದೆ.
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ಇದು ನಿಮ್ಮನ್ನು ಧೈರ್ಯಶಾಲಿಯೊಂದಿಗೆ ಹಿಂಸಾತ್ಮಕರನ್ನಾಗಿ ಸಹ ಮಾಡುತ್ತದೆ. ಮಂಗಳವನ್ನು ಭೌಮ ಎಂಬುವ ಹೆಸರಿನಿಂದಲೂ ಕರೆಯಲಾಗುತ್ತದೆ. ಇದನ್ನು ಭೂಮಿಯ ಮಗನೆಂದು ಕರೆಯಲಾಗುತ್ತದೆ. ಮಂಗಳವು ವಕ್ರ ಚಲನೆಯನ್ನು ಸಹ ಮಾಡುತ್ತದೆ ಮತ್ತು ಈ ಸಮಯದಲ್ಲಿ ಇದರಲ್ಲಿ ಅತಿಯಾದ ಕೋಪವನ್ನು ಕಾಣಲಾಗುತ್ತದೆ. ಇದನ್ನು ನಾಯಕತ್ವದ ಗ್ರಹವೆಂದು ಸಹ ಪರಿಗಣಿಸಲಾಗುತ್ತದೆ ಮತ್ತು ಇದು ಜಾತಕದ ಮೊದಲನೇ ಮನೆಯ ಮನೆಯನ್ನು ಆಳುತ್ತದೆ. ಜಾತಕದಲ್ಲಿ ಮಂಗಳ ಗ್ರಹದ ಸ್ಥಾನವು ನಿಮ್ಮ ದೈಹಿಕ ರಚನೆ ಹೇಗಿರುತ್ತದೆ ಎಂಬುದರ ಸೂಚನೆಯನ್ನು ನೀಡುತ್ತದೆ. ಒಬ್ಬ ವ್ಯಕ್ತಿಯು ತೆಳ್ಳರಾಗಿರುವುದು, ದಪ್ಪರಾಗಿರುವುದು ಆರೋಗ್ಯಕರವಾಗಿರುವುದು, ಈ ಎಲ್ಲಾ ಅಂಶಗಳು ಮಂಗಳ ಗ್ರಹದಿಂದ ಪ್ರಭಾವಿತವಾಗುತ್ತವೆ. ಉತ್ತಮ ಶಸ್ತ್ರಚಿಕಿತ್ಸಕರು ಸಹ ತಮ್ಮ ಜಾತಕದಲ್ಲಿ ಮಂಗಳನ ಉತ್ತಮ ಸ್ಥಾನವನ್ನು ಕಾಣಬಹುದು. ಮಂಗಳನನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ ಆದರೆ ಕರ್ಕ ಮತ್ತು ಸಿಂಹ ಲಗ್ನ ಜನರಿಗೆ ಇದು ಯೋಗಕಾರಕವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸ್ಥಳೀಯನಿಗೆ ಸಮೃದ್ಧಿ ಮತ್ತು ಗೌರವವನ್ನು ನೀಡುತ್ತದೆ. ಮಂಗಳ ಗ್ರಹವು ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ, ಇದು ಮೇಷ ರಾಶಿಯಲ್ಲಿ ಆಕ್ರಮಣಕಾರಿ ಮತ್ತು ವೃಶ್ಚಿಕ ರಾಶಿಯಲ್ಲಿ ನಾಚಿಕೆ ಮತ್ತು ರಹಸ್ಯವಾಗಿರುತ್ತದೆ.
ಕನ್ಯಾ ರಾಶಿಯಲ್ಲಿ ಮಂಗಳ ಸಂಚಾರವು 6 ಸೆಪ್ಟೆಂಬರ್ 2021 ರಂದು ಬೆಳಿಗ್ಗೆ 3:21 ಗಂಟೆಯ ವೆರೆಗೆ ಇರುತ್ತದೆ. ಇದರ ನಂತರ ತುಲಾ ರಾಶಿಗೆ ಪ್ರವೇಶಿಸುತ್ತದೆ.
ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಈ ಸಂಚಾರವು ಹೇಗಿರುತ್ತದೆ ಎಂದು ತಿಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
मेष/ ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಮೊದಲನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಸಾಲ, ಶತ್ರುಗಳು ಮತ್ತು ವೃತ್ತಿಪರ ಜೀವನದ ಆರನೇ ಮನೆಗೆ ಸಾಗಲಿದೆ. ಸಂಚಾರದ ಈ ಸಮಯದಲ್ಲಿ ನೀವು ಶಕ್ತಿಯುತ ಮತ್ತು ಉತ್ಸುಕರಾಗಿರುತ್ತೀರಿ ಮತ್ತು ನಿಮ್ಮ ಮೆದುಳಿನಲ್ಲಿ ಹೊಸ ಹೊಸ ಆಲೋಚನೆಗಳು ಉಂಟಾಗಬಹುದು. ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಕ್ಷೇತ್ರದಲ್ಲಿ ನೀವು ಯಶಸ್ಸು ಮತ್ತು ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೆಲಸದತ್ತ ಕೇಂದ್ರೀಕರಿಸಲು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸುತ್ತಾರೆ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಸ್ಪರ್ಧಿಗಳನ್ನು ಸಹ ನೀವು ಜಯಿಸುವಿರಿ ಮತ್ತು ಯಶಸ್ಸಿನ ಹೊಸ ಎತ್ತರವನ್ನು ಪಡೆಯುತ್ತೀರಿ.
ಆರ್ಥಿಕವಾಗಿ, ವಿದೇಶಿ ಮೂಲಗಳಿಂದ ನೀವು ಲಾಭವನ್ನು ಪಡೆಯಬಹುದು. ಆದರೆ ನಿಮ್ಮ ಹಣವನ್ನು ನೀವು ಎಚ್ಚರಿಕೆಯಿಂದ ಖರ್ಚು ಮಾಡಲು ನಿಮಗೆ ಸಲಹೆ ನೀಡಲಾಗಿದೆ. ನಿಮ್ಮ ಸಂಬಂಧಗಳ ಮೇಲೆ ದೃಷ್ಟಿ ಹಾಕಿದರೆ, ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಕೆಲವು ಬದಲಾವಣೆಗಳನ್ನು ನೋಡಬಹುದು. ನಿಮ್ಮ ಪಾಲುದಾರ ಅಥವಾ ಪರಿಚಿತ ಜನರೊಂದಿಗೆ ನಿಮ್ಮ ಜಗಳವಾಗಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯವನ್ನು ತುಂಬಾ ಉತ್ತಮವೆಂದು ಹೇಳಲಾಗುವುದಿಲ್ಲ. ನೀವು ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯದತ್ತ ವಿಶೇಷ ಕಾಳಜಿ ವಹಿಸಲು ಸೂಚಿಸಲಾಗಿದೆ.
ಪರಿಹಾರ - ಹನುಮಂತ ದೇವರನ್ನು ಪೋಷಿಸುವುದು ನಿಮಗೆ ಉತ್ತಮ.
वृषभ / ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಹನ್ನೆರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಐದನೇ ಮನೆಗೆ ಸಾಗಲಿದೆ. ಈ ಸಂಚಾರದ ಸಮಯದಲ್ಲಿ ಮಂಗಳವು ನಿಮ್ಮ ಸಂಬಂಧಗಳತ್ತ ಗಮನ ಹರಿಸಲು ನಿಮ್ಮನ್ನು ಆಕರ್ಷಿಸುತ್ತದೆ. ನಿಮ್ಮ ಸಂಗಾತಿಯ ಬಗ್ಗೆ ನಿಮ್ಮ ನಡವಳಿಕೆಯು ತುಂಬಾ ಮುಕ್ತವಾಗಿರುತ್ತದೆ ಮತ್ತು ಇದಲ್ಲದೆ ಅವರೊಂದಿಗೆ ನಿಮ್ಮ ಭಾವನೆಗಳನ್ನು ನೀವು ಬಹಿರಂಗವಾಗಿ ಹಂಚಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಮಂಗಳನ ಸಂಚಾರದಿಂದಾಗಿ ನಿಮ್ಮ ಸಂಬಂಧದಲ್ಲಿ ನೀವು ಪ್ರಾಬಲ್ಯವನ್ನು ಸಾಧಿಸಬಹುದು. ಈ ಸಂಚಾರದ ಸಮಯದಲ್ಲಿ ಆರ್ಥಿಕವಾಗಿ ನೀವು ಯಾವುದೇ ರೀತಿಯ ಬೆಟ್ಟಿಂಗ್ ಅಥವಾ ಜೂಜು ಆಡುವುದನ್ನು ತಪ್ಪಿಸಬೇಕು. ಈ ರಾಶಿಚಕ್ರದ ವೃತ್ತಿಪರ ಜನರು ತಮ್ಮ ಕೆಲಸದ ಸ್ಥಳದಲ್ಲಿ ಸಂಘರ್ಷವನ್ನು ಎದುರಿಸಬೇಕಾಗಬಹುದು. ಇದಲ್ಲದೆ, ಕೆಲಾವು ಸಹೋದ್ಯೋಗಿಗಳು ನಿಮ್ಮ ಬೆನ್ನಿನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು. ಇದರಿಂದಾಗಿ ನೀವು ಸ್ವಲ್ಪ ಕಿರಿಕಿರಿಯನ್ನು ಸಹ ಅನುಭವಿಸಬಹುದು. ಏಕೆಂದರೆ ನಿಮ್ಮ ಪ್ರಯಾಟಿನ್ಗಳಲ್ಲಿ ನೀವು ಅನಗತ್ಯ ಅಡೆತಡೆಗಳನ್ನು ಸಹ ಎದುರಿಸಬೇಕಾಗಬಹುದು. ಈ ರಾಶಿಚಕ್ರದ ವಿವಾಹಿತ ಜನರ ಜೀವನ ಸಂಗಾತಿಯೊಂದಿಗಿನ ಸಂಬಂಧವು ಸಾಮಾನ್ಯವಾಗಿರುತ್ತದೆ.
ಕೆಲವು ಸಂಬಂಧಿಕರು ಅಥವಾ ನೆರೆಹೊರೆಯವಾಗು ನಿಮ್ಮ ಸಂಬಂಧವನ್ನು ನೋಡಿ ಅಸೂಯೆ ಪಡಬಹುದು. ಪ್ರೇಮಿಗಳಿಗೆ ಈ ಸಮಯ ಅನಿಕೂಲಕರವೆಂದು ಹೇಳಲಾಗುವುದಿಲ್ಲ ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಂಬಂಧದಲ್ಲಿ ಬಹಳ ಸುಲಭವಾಗಿ ತಪ್ಪುಗ್ರಹಿಕೆಗಳು ಉಂಟಾಗಬಹುದು. ಈ ಸಮಯದಲ್ಲಿ ನಿಮ್ಮ ಮಕ್ಕಳು ಉತ್ತಮ ಪ್ರದರ್ಶನ ಮಾಡುವುದಿಲ್ಲ ಅಥವಾ ಅವರ ಆರೋಗ್ಯದಿಂದಾಗಿ ನೀವು ಸ್ವಲ್ಪ ಚಿಂತೆಗೆ ಒಳಗಾಗಬಹುದು. ಮಕ್ಕಳ ವರ್ತನೆಯನ್ನು ನೋಡಿ ನೀವು ವಿಚಲಿತರಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು, ಏಕೆಂದರೆ ನೀವು ಜೀರ್ಣಾಂಗಕ್ಕೆ ಸಂಬಂಧಿಸಿದ ಅರೋಗ್ಯ ಸಮಸ್ಯೆಗಳು ಅಥವಾ ಹೊಟ್ಟೆ ನೋವಿನಿಂದ ಬಳಲುತ್ತಬಹುದು. ಈ ಸಂಚಾರದ ಸಮಯದಲ್ಲಿ ನೀವು ಸರಿಯಾದ ಆಹಾರವನ್ನು ಸೇವಿಸಲು ಮತ್ತು ಜಂಕ್ ಫುಡ್ ನಿಂದ ದೂರವಿರಲು ಸಲಹೆ ನೀಡಲಾಗಿದೆ
ಪರಿಹಾರ - ಹನುಮಾನ್ ಚಾಲೀಸವನ್ನು ಪಠಿಸಿ.
मिथुन / ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ದೇವ ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಸಂತೋಷ, ತಾಯಿ, ಐಷಾರಾಮಿ ಮತ್ತು ಸಂಪತ್ತಿನ ನಾಲ್ಕನೇ ಮನೆಗೆ ಗೋಚರಿಸುತ್ತಿದೆ. ಈ ಸಂಚಾರದ ಸಮಯದಲ್ಲಿ ನೀವು ಹೆಚ್ಚು ಆಕ್ರಮಣಕಾರಿ ಎಂದು ಅನುಭವಿಸಬಹುದು. ಈ ಕಾರಣದಿಂದಾಗಿ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಮಕ್ಕಳೊಂದಿಗಿನ ನಿಮ್ಮ ಸಂಬಂಧವು ತುಂಬಾ ಉತ್ತಮವಾಗಿರುವುದಿಲ್ಲ, ಆದರೆ ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ದೇಶೀಯ ಜೀವನವನ್ನು ಸುಧಾರಿಸಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡುವಿರಿ. ನಿಮ್ಮ ಚಟುವಟಿಕೆಗಳು ನೇರವಾಗಿ ಅಥವಾ ಪರೋಕ್ಷವಾಗಿ ನಿಮ್ಮ ಆಂತರಿಕ ಬಯಕೆಗಳಿಗೆ ಸಂಬಂಧಿಸಿರುತ್ತವೆ ಮತ್ತು ಇದು ನಿಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ವೃತ್ತಿಪರ ಜೀವನದಲ್ಲಿ ನೀವು ಅನೇಕ ಪ್ರಮುಖ ಬದಲಾವಣೆಗಳನ್ನು ಕಾಣಬಹುದು.
ನಾಲ್ಕನೇ ಮನೆಯಲ್ಲಿ ಮಂಗಳನ ಸಂಚಾರದಿಂದಾಗಿ ನಿಮ್ಮ ಕುಟುಂಬದ ಸದಸ್ಯರ ಸಹಾಯದಿಂದ ನಿಮ್ಮ ಗುರಿ ಮತ್ತು ಆಸೆಗಳನ್ನು ಪೂರೈಸುವಿರಿ. ಆರ್ಥಿಕ ಜೀವನದ ಬಗ್ಗೆ ಮಾತಾಡಿದರೆ, ನೀವು ಆಸ್ತಿಯನ್ನು ಅಥವಾ ಮಾರಾಟ ಮಾಡಲು ಯೋಚಿಸಬಹುದು. ಈ ರಾಶಿಚಕ್ರದ ಕೆಲವು ಸ್ಥಳೀಯರು ಮನೆಯನ್ನು ನವೀಕರಿಸಲು ಹಣವನ್ನು ಖರ್ಚು ಮಾಡಬಹುದು. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ ಮತ್ತು ಪ್ರೀತಿಯಲ್ಲಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದತ್ತ ನೀವು ಕಾಳಜಿ ವಹಿಸಬೇಕು. ಏಕೆಂದರೆ ರಕ್ತಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಬಹುದು.
ಪರಿಹಾರ - ಮಂಗಳವಾರ ಕೆಂಪು ಬೇಳೆ ದಾನ ಮಾಡುವುದು ನಿಮಗೆ ಉತ್ತಮ.
कर्क / ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ದೇವ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಧೈರ್ಯ, ಸಹೋದರ-ಸಹೋದರಿಯರು ಮತ್ತು ಅಲ್ಪ ಪ್ರಯಾಣಗಳ ಮೂರನೇ ಮನೆಗೆ ಗೋಚರಿಸಲಿದೆ. ಮಂಗಳ ಸಂಚಾರದ ಈ ಸಮಯವು ನಿಮಗೆ ಅನುಕೂಲಕರವೆಂದು ಸಾಬೀತುಪಡಿಸುತ್ತದೆ ಮತ್ತು ನಿಮಗೆ ಧನಾತ್ಮಕ ಫಲಿತಾಂಸಹಗಳನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಧೈರ್ಯ ಮತ್ತು ಶಕ್ತಿಯಿಂದ ತುಂಬಿರುತ್ತೀರಿ ಮತ್ತು ಜೀವನದಲ್ಲಿ ಬರುವ ಕಠಿಣ ಪರಿಸ್ಥಿತಿಗಳು ಮತ್ತು ಸವಾಲುಗಳನ್ನು ಬಹಿರಂಗವಾಗಿ ಎದುರಿಸುತ್ತೀರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಸೃಜನಶೀಲ ಭಾಗವನ್ನು ಕಂಡುಹಿಡಿಯಲು ನೀವು ಬಯಸುತ್ತೀರಿ. ಆರ್ಥಿಕವಾಗಿ ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ನೀವು ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿದರೆ, ಸಮಯ ಇನ್ನೂ ಉತ್ತಮವಾಗಬಹುದು. ನೀವು ಹೂಡಿಕೆ ಮಾಡಲು ಬಯಸುತ್ತಿದ್ದರೆ, ಖಂಡಿತವಾಗಿಯೂ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ ಮತ್ತು ಹಣಕಾಸಿನ ವಹಿವಾಟು ಮಾಡುವಾಗ ಜಾಗರೂಕರಾಗಿರಿ, ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಯಾವುದೇ ಕೆಲಸದ ಬಗ್ಗೆ ಪ್ರಯಾಣಿಸಲು ನಿಮಗೆ ಅವಕಾಶ ಸಿಗುತ್ತದೆ.
ಈ ರಾಶಿಚಕ್ರದ ಕೆಲವು ಸ್ಥಳೀಯರು ಬೆಟ್ಟಿಂಗ್ ನಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಇದರಿಂದಾಗಿ ಲಾಭವಾಗುವ ಸಾಧ್ಯತೆ ಇದೆ. ಆದರೆ ಅಂತಹ ಕೆಲಸಗಳಿಂದ ನೀವು ದೂರವಿರಬೇಕು. ಈ ಸಂಚಾರದ ಸಮಯದಲ್ಲಿ ನೀವು ಬುದ್ಧಿವಂತ ಜನರೊಂದಿಗೆ ಸಂವಹನ ನಡೆಸಲು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಯೋಚಿಸಲು ಅವಕಾಶವನ್ನು ಪಡೆಯಬಹುದು. ನಿಮ್ಮ ಪ್ರತಿಭೆಯನ್ನು ಹೆಚ್ಚಿಸಲು ನಿರಂತರವಾಗಿ ಹೊಸದನ್ನು ಕಲಿಯುತ್ತೀರಿ, ಇದರಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಮತ್ತು ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಆರನೇ ಮನೆಯ ಮೇಲೆ ಮಂಗಳನ ದೃಷ್ಟಿಯಿಂದಾಗಿ ಶೀತ ಜವಾರದಂತಹ ಸರಳವಾದ ಅರೋಗ್ಯ ಸಮಸ್ಯೆಗಳಾಗಬಹುದು. ಋತುಗಳ ಬದಲಾವಣೆಯ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಪರಿಹಾರ - ಮಂಗಳ ಮಂತ್ರವನ್ನು ಜಪಿಸಿ: ಓಂ ಕ್ರಾಂ ಕ್ರೀಮ್ ಕ್ರೌಂ ಸಃ ಭೌಮಾಯ ನಮಃ, 40 ದಿನಗಳಲ್ಲಿ 7000 ಬಾರಿ
सिंह / ಸಿಂಹ ರಾಶಿ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ನಾಲ್ಕನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹಣ, ಧ್ವನಿ ಮತ್ತು ಸಂವಹನದ ಎರಡನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ಆರ್ಥಿಕವಾಗಿ ನೀವು ತುಂಬಾ ಅದೃಷ್ಟಶಾಲಿಯಾಗಿರುವುದಿಲ್ಲ. ಏಕೆಂದರೆ ನಿಮ್ಮ ಹೂಡಿಕೆಯಿಂದ ನೀವು ಸರಾಸರಿ ಆದಾಯವನ್ನು ಮಾತ್ರ ಪಡೆಯುತ್ತೀರಿ, ಬೆಟ್ಟಿಂಗ್ ನಲ್ಲಿ ಹಣಕಾಸಿನ ಹೂಡಿಕೆ ಮಾಡುವುದು ಅಥವಾ ಯಾರಿಂದಾದರೂ ಸಾಲವನ್ನು ತೆಗೆದುಕೊಳ್ಳುವುದು ಈ ಸಮಯದಲ್ಲಿ ನಿಮಗೆ ಉತ್ತಮವೆಂದು ಹೇಳಾಗುವುದಿಲ್ಲ. ಕುಟುಂಬದಲ್ಲಿ ಯಾವುದೇ ಮಂಗಲಿಕ ಕಾರ್ಯದ ಕಾರಣದಿಂದಾಗಿ ಕುಟುಂಬದ ಸದಸ್ಯರೊಂದಿಗೆ ಪಪ್ರಯಾಣಿಸುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ನೀವು ದೇಶೀಯ ಜೀವನದ ಮೇಲೆ ಸಂಪೂರ್ಣ ಗಮನವನ್ನು ಹೊಂದಿರುತ್ತೀರಿ ಮತ್ತು ನೀವು ಶಕ್ತಿಯಿಂದ ತುಂಬಿರುತ್ತೀರಿ. ಈ ಸಮಯದಲ್ಲಿ ನಿಮ್ಮ ಧ್ವನಿಯನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ ಮತ್ತು ಯಾವುದೇ ಕಠಿಣ ಪದಗಳನ್ನು ಹೇಳಬೇಡಿ, ಏಕೆಂದರೆ ಇದರಿಂದಾಗಿ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಇದು ಹದಗೆಡಿಸಬಹುದು.
ವಿವಾಹಿತ ಜನರು ತಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತವನ್ನು ಕಾಣಬಹುದು. ನಿಮ್ಮ ಸಂಬಂಧದಲ್ಲಿ ನೀವು ಕೆಲವು ಏರಿಳಿತಗಳನ್ನು ಎದುರಿಸಬಹುದು. ಆದರೆ ನಿಮ್ಮ ಉತ್ತಮ ನಡವಳಿಕೆಯಿಂದ ಪರಿಸ್ಥಿತಿಗಳನ್ನು ಸುಧಾರಿಸಲು ನಿಮಗೆ ಸಾಧ್ಯವಾಗುತ್ತದೆ. ಈ ರಾಶಿಚಕ್ರದ ಉದ್ಯೋಗಪರರು ಕೆಲಸದ ಸ್ಥಳದಲ್ಲಿ ಅಭಿವೃದ್ಧಿ ಪಡೆಯುವಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ವಿರೋಧಿಗಳು ನಿಮ್ಮ ಚಿತ್ರವನ್ನು ಹದಗೆಡಿಸಲು ಪ್ರಯತ್ನಿಸಬಹುದು. ತಂಪಾದ ಮನಸ್ಸಿನಿಂದ ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಅರೋಗ್ಯ ಜೀವನದಲ್ಲ್ ಜಾಗರೂಕರಾಗಿರಿ, ವಿಶೇಷವಾಗಿ ನಿಮ್ಮ ಮುಖದ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ಈ ಸಮಯದಲ್ಲಿ ನೀವು ಗಾಯಗೊಳ್ಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ಕೆಲವು ಸ್ಥಳೀಯರು ದೇಹದಲ್ಲಿ ನೋವು, ಆಯಾಸ ಮತ್ತು ನಿದ್ರಾಹೀನತೆಯಂತಹ ಅಮಾಸ್ಯೆಗಳನ್ನು ಎದುರಿಸಬೇಕಾಗಬಹುದು.
ಪರಿಹಾರ - ಮಂಗಳ ಸ್ತೋತ್ರವನ್ನು ಪಠಿಸುವುದು ನಿಮಗೆ ಉತ್ತಮ.
कन्या / ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ದೇವ ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಆತ್ಮ, ವ್ಯಕ್ತಿತ್ವದ ಮೊದಲನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮಲ್ಲಿ ಕೋಪದ ಹೆಚ್ಚಳವಿರಬಹುದು. ಈ ಕಾರಣದಿಂದಾಗಿ ಸ್ನೇಹಿತರು ಮತ್ತು ಆಪ್ತರೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಆಂತರಿಕ ಶಕ್ತಿಯನ್ನು ಸರಿಯಾಗಿ ಬಳಸಲು ನಿಮಗೆ ಸಲಹೆ ನೀಡಲಾಗಿದೆ, ಇದನ್ನು ನಿಷ್ಪ್ರಯೋಜಕ ವಿಷಯಗಳಲ್ಲಿ ಖರ್ಚು ಮಾಡಬೇಡಿ. ಈ ರಾಶಿಚಕ್ರದ ಉದ್ಯೋಗಪರರು ಈ ಸಮಯದಲ್ಲಿ ಅವಸರ ಪಡುವುದನ್ನು ತಪ್ಪಿಸಬೇಕು. ನಿಮ್ಮ ಆಕ್ರಮಣಕಾರಿ ದೃಷ್ಟಿಕೋನದಿಂದಾಗಿ ಯಶಸ್ಸನ್ನು ಸಾಧಿಸುವ ನಿಮ್ಮ ಪ್ರಯತ್ನಗಳಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ಆದ್ದರಿಂದ ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಒಳ್ಳಬೇಡಿ ಮತ್ತು ಈ ಸಂಚಾರದ ಸಮಯದಲ್ಲಿ ಯಾವುದೇ ಹೊಸ ವ್ಯವಹಾರವನ್ನು ಆರಂಭಿಸುವುದನ್ನು ತಪ್ಪಿಸಿ. ನಿಮ್ಮ ಸ್ಪರ್ಧಿಗಳಿಂದ ನೀವು ಜಾಗರೂಕರಾಗಿರಬೇಕು, ಏಕೆಂದರೆ ಅವರು ನಿಮಗೆ ಸಮಸ್ಯೆಗಳನ್ನುಂಟು ಮಾಡಬಹುದು.
ಈ ಸಂಚಾರದ ಉತ್ತಮ ವಿಷಯವೇನೆಂದರೆ, ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮವು ಅದೃಷ್ಟದ ಬೆಂಬಲವನ್ನು ಪಡೆಯುತ್ತದೆ. ಆರ್ಥಿಕವಾಗಿ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಅನಗತ್ಯ ವಸ್ತುಗಳಿಗಾಗಿ ನೀವು ನಿಮ್ಮ ಹಣವನ್ನು ಖರ್ಚು ಮಾಡಬೇಕಾಗಬಹುದು. ಈ ರಾಶಿಚಕ್ರದ ವೈವಾಹಿಕ ಜನರ ಆಕ್ರಮಣಕಾರಿ ನಡವಳಿಕೆಯಿಂದಾಗಿ ವೈವಾಹಿಕ ಜೀವನದಲ್ಲಿ ಕೆಲವು ತಪ್ಪು ಗ್ರಹಿಕೆಗಳು ಉದ್ಭವಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಪ್ರೀತಿಯ ಸಂಬಂಧದಲ್ಲಿರುವ ಜನರ ಜೀವನದಲ್ಲಿ ಸ್ಥಿರತೆ ಉಂಟಾಗುತ್ತದೆ. ಈ ಸಮಯದಲ್ಲಿ ನಡೆಯುವಾಗ ನೀವು ಸ್ವಲ್ಪ ಜಾಗರೂಕರಾಗಿರಬೇಕು ಮತ್ತು ಯಾವುದೇ ಅಪಾಯಕಾರಿ ಉದ್ಯಮಗಳಲ್ಲಿ ತೊಡಗಬೇಡಿ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯ ತುಂಬಾ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಯಾವುದೇ ಅಪಾಯಕಾರಿ ಕೆಲಸ ಮಾಡಬೇಡಿ.
ಪರಿಹಾರ - ಮೂರ ಮುಖಿ ರುದ್ರಾಕ್ಷವನ್ನು ಧರಿಸುವುದು ನಿಮಗೆ ಉತ್ತಮ.
तुला / ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಎರಡನೇ ಮತ್ತು ಮೊದಲನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಆಧ್ಯಾತ್ಮಿಕತೆ, ಆತಿಥ್ಯ ಮತ್ತು ನಷ್ಟದ ಹನ್ನೆರಡನೇ ಮನೆಗೆ ಸಾಗಣಿಸುತ್ತದೆ. ಈ ಸಂಚಾರದ ಸಮಯದಲ್ಲಿ ಅನಗತ್ಯ ವೆಚ್ಚಗಳ ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ವೃತ್ತಿಪರ ಜೀವನದಲ್ಲಿ ಈ ಸಮಯದಲ್ಲಿ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಬೆಂಬಲವನ್ನು ನೀವು ಪಡೆಯಲಾಗುವುದಿಲ್ಲ. ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ ಮತ್ತು ಕೆಲವು ಸ್ಥಳೀಯರು ಅವಮಾನವನ್ನು ಎದುರಿಸಬೇಕಾಗಬಹುದು. ವ್ಯಾಪಾರ ಉದ್ದೇಶದಿಂದ ಮಾಡಿದ ಪ್ರಯಾಣವು ಪ್ರಯೋಜನಕಾರಿ ಎಂದು ಸಾಬೀತಾಗುವುದಿಲ್ಲ.
ಜೀವನ ಸಂಗಾತಿ ಮತ್ತು ಮಕ್ಕಳೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವುದಿಲ್ಲ ಆದ್ದರಿಂದ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ತಪ್ಪಿಸಲು ಈ ಸಮಯದಲ್ಲಿ ಅವರೊಂದಿಗೆ ವಾದಿಸುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ನಿಮ್ಮ ಆಕ್ರಮಣಕಾರಿ ಸ್ವಭಾವವನ್ನು ನಿಯಂತ್ರಿಸಲು ಸಲಹೆ ನೀಡಲಾಗಿದೆ. ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಚಿಂತೆಗೆ ಒಳಗಾಗಬಹುದು ಮತ್ತು ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಪರಿಹಾರ - ಮಂಗಳ ಸ್ತೋತ್ರವನ್ನು ಪಠಿಸುವುದು ನಿಮಗೆ ಉತ್ತಮ.
वृश्चिक / ವೃಶ್ಚಿಕ ರಾಶಿ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಮೊದಲನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಅಮಾಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕವಾಗಿ ಈ ಸಮಯದಲ್ಲಿ ನಿಮ್ಮ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಉತ್ತಮ ಸ್ಥಿತಿಗಾಗಿ ನೀವು ಇನ್ನೂ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಶೇರ್ ಮಾರ್ಕೆಟ್ ನಲ್ಲಿ ಮಾಡಿದ ಹೂಡಿಕೆಯಿಂದ ಈ ರಾಶಿಚಕ್ರದ ಜನರು ಉತ್ತಮ ಲಾಭವನ್ನು ಪಡೆಯಬಹುದು. ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಬಡ್ತಿಗಾಗಿ ಇದು ಉತ್ತಮ ಸಮಯ, ಇದರೊಂದಿಗೆ ಈ ರಾಶಿಚಕ್ರದ ವ್ಯಾಪಾರಿಗಳಿಗೆ ಸಮಯ ಉತ್ತಮವಾಗಿರುತ್ತದೆ, ನಿಮ್ಮ ಗುರಿಗಳನ್ನು ಸಾಧಿಸಲು ಇದು ಅತ್ಯಂತ ಉತ್ತಮ ಸಮಯ.
ಏಕೆಂದರೆ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಈ ಸಮಯದಲ್ಲಿ ದೂರಸ್ಥ ಪ್ರಯಾಣಕ್ಕೆ ಹೋಗಬಹುದು. ಈ ಪ್ರಯಾಣವು ಆಹ್ಲಾದಕರ ಮತ್ತು ಆನಂದದಾಯಕವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ನೀವು ಅವಶ್ಯಕ ಸುಧಾರಣೆಯನ್ನು ಮಾಡಬಹುದು. ಇದರಿಂದಾಗಿ ಭವಿಷ್ಯದಲ್ಲಿ ನೀವು ಸಹಾಯವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ನೀವು ಆರಂಭಿಸಬಹುದು ಮತ್ತು ನಿಮ್ಮ ಸಹೋದರ ನಿಮಗೆ ಸಹಾಯಕರ ಎಂದು ಸಾಬೀತಾಗಬಹುದು. ಪ್ರೇಮಿಗಳಿಗೆ ಈ ಸಮಯ ಅನುಕೂಲಕರವಾಗಿರುವುದಿಲ್ಲ ಮತ್ತು ಪ್ರೇಮಿಯೊಂದಿಗೆ ತಪ್ಪು ಗ್ರಹಿಕೆಗಳನ್ನು ಉದ್ಭವಿಸಬಹುದು. ಸ್ನೇಹ ಮತ್ತು ಕುಟುಂಬ ಜೀವನವು ಆಹ್ಲಾದಕರವಾಗಿರುತ್ತದೆ ಮತ್ತು ಈ ಸಮಯದಲ್ಲಿ ಅವರು ನಿಮ್ಮನ್ನು ಗೌರವಿಸುತ್ತಾರೆ. ವೈವಾಹಿಕ ಜೀವನದ ಸಮಸ್ಯೆಗಳು ಸಹ ಕಡಿಮೆಯಾಗಬಹುದು. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ನಿಯಮಿತವಾಗಿ ಯೋಗ ಮತ್ತು ವ್ಯಾಯಾಮವನ್ನು ಆಶ್ರಯಿಸುವುದು ನಿಮಗೆ ಉತ್ತಮ.
ಪರಿಹಾರ - ಶಿವ ದೇವರನ್ನು ಪೂಜಿಸಿ ಮತ್ತು ಅವರಿಗೆ ಗೋಧಿಯನ್ನು ಅರ್ಪಿಸಿ.
धनु / ಧನು ರಾಶಿ
ಧನು ರಾಶಿಚಕ್ರದ ಸ್ಥಳೀಯರಿಗೆ ಮಂಗಳ ದೇವ ಐದನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿ ಜೀವನ ಮತ್ತು ಖ್ಯಾತಿಯ ಹತ್ತನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ ಮತ್ತು ನಿಮ್ಮ ಕೆಲಸವು ಸಹ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಆದರೆ ಒಳ್ಳೆಯ ಸುದ್ಧಿ ಎಂದರೆ ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಆದಾಗ್ಯೂ ಈ ಸಮಯದಲ್ಲಿ ನಿಮ್ಮ ಸಾಧನೆಗಳಿಂದ ನೀವು ತೃಪ್ತರಾಗುವಿದಿಲ್ಲ. ನಿಮ್ಮ ಕೆಲಸದ ಸ್ಟಳದಲ್ಲಿ ನಿಮ್ಮ ವಿರುದ್ಧವಾಗಿ ಯೋಜನೆಗಳನ್ನು ರಚಿಸುವಂತಹ ನೀವು ಜಾಗರೂಕರಾಗಿರಬೇಕು. ಇದಲ್ಲದೆ ನಿಮ್ಮ ವಿರೋಧಿಗಳನ್ನು ಕಡಿಮೆ ಅಂದಾಜು ಮಾಡಲು ಪ್ರಯತ್ನಿಸಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಸಂಬಂಧಿಕರ ವಿಷಯಗಳಲ್ಲಿ ಈ ಸಮಯ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯಿಂದ ನೀವು ಬೇರೆಯಾಗಬಹುದು ಮತ್ತು ನಿಮ್ಮ ಸಂಗಾತಿ ಮತ್ತು ನಿಮ್ಮ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧದಲ್ಲಿ ಸ್ವಲ್ಪ ಒತ್ತಡ ಉಂಟಾಗಬಹುದು. ಆರ್ಥಿಕವಾಗಿ ನಿಮ್ಮ ಹಣಕಾಸಿನ ವಿಷಯಗಳ ಬಗ್ಗೆ ನೀವು ಚಿಂತೆಗೆ ಒಳಗಾಗಬಹುದು. ಆದರೆ ಆರ್ಥಿಕವಾಗಿ ನೀವು ನಿಮ್ಮನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾಗಬಹುದು. ನಿಮ್ಮ ನಕಾರಾತ್ಮಕ ಆಲೋಚನೆಗಳಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಅದೃಷ್ಟವು ಸಹ ನಿಮ್ಮ ಪರವಾಗಿರುತ್ತದೆ ಆದ್ದರಿಂದ ನೀವು ಈ ಸಮಯದ ಲಾಭವನ್ನು ಪಡೆದುಕೊಳ್ಳಬೇಕು. ಈ ಸಮಯದಲ್ಲಿ ನೀವು ವ್ಯಾಪಾರ ಅಥವಾ ಯಾವುದೇ ಕೆಲಸದಲ್ಲಿ ಹಣಕಾಸಿನ ಹೂಡಿಕೆ ಮಾಡಬಹುದು. ಆರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಹೆಚ್ಚು ಚಿಂತೆಯ ಕಾರಣದಿಂದಾಗಿ ನಿಮ್ಮ ಅರೋಗ್ಯ ಹದಗೆಡಬಹುದು, ದೈಹಿಕ ನೋವು ಮತ್ತು ಆಯಾಸದ ಬಗ್ಗೆ ದೂರು ಇರಬಹುದು ಆದ್ದರಿಂದ ನಿಮ್ಮ ಬಗ್ಗೆ ಕಾಳಜಿ ವಹಿಸಿ.
ಪರಿಹಾರ - ನಿಮ್ಮ ಸಹೋದರರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ ಮತ್ತು ಅವರಿಗೆ ಉಡುಗೊರೆಗಳನ್ನು ನೀಡಿ.
मकर / ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಮಗಳ ಗ್ರಹವು ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಅದೃಷ್ಟ, ಧರ್ಮ, ಉನ್ನತ ಶಿಕ್ಷಣ ಮತ್ತು ತಂದೆಯ ಒಂಬತ್ತನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹರಿಸಲಾಗುತ್ತವೆ, ಆದರೆ ನಿಮ್ಮ ಗಳಿಕೆಗಾಗಿ ನೀವು ಕಠಿಣ ಪರಿಶ್ರಮ ಮಾಡಬೇಕು. ನಿಮ್ಮ ವೆಚ್ಚಗಳು ಹೆಚ್ಚಾಗಬಹುದು, ಅದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಅನಗತ್ಯ ಐಷಾರಾಮಿ ವಿಷಗಳ ಮೇಲೆ ಹಣಕಾಸು ಖರ್ಚು ಮಾಡುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ನಿಮ್ಮ ವಿರೋಧಿ ಮತ್ತು ಸ್ಪರ್ಧಿಗಳು ಸಹ ನಿಮ್ಮ ಚಿಂತೆಗೆ ಕಾರಣವಾಗಬಹದು ಮತ್ತು ಅವರು ನಿಮ್ಮ ಚಿತ್ರವನ್ನು ಹದಗೆಡಿಸಲು ಸಹ ಪ್ರಯತ್ನಿಸಬಹುದು. ಕೆಲವು ಸಹೋದ್ಯೋಗಿಗಳ ತಪ್ಪು ಕೆಲಾದಿಂದಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಜಾಗರೂಕರಾಗಿರಿ ಮತ್ತು ನಿಮ್ಮನ್ನು ತಪ್ಪೆಂದು ಸಾಬೀತುಪಡಿಸಲು ನಿಮ್ಮ ಶತ್ರುಗಳಿಗೆ ಅವಕಾಶ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಬೇಡಿ.
ಸಂಬಂಧಗಳ ಮೇಲೆ ದೃಷ್ಟಿ ನಿಮ್ಮ ಮತ್ತು ನಿಮ್ಮ ಪಾಲುದಾರರ ನಡುವಿನ ಭಿನ್ನಾಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಈ ಸಮಯ ಉತ್ತಮ. ಆದರೆ ಈ ಸಮಯದಲ್ಲಿ ನೀವು ಬಹಳ ಬೇಗನೆ ಕೋಪಗೊಳ್ಳುವ ಸಾಧ್ಯತೆ ಇದೆ ಮತ್ತು ಈ ಕಾರಣದಿಂದಾಗಿ ನೀವು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ಆದ್ದರಿಂದ ನೀವು ಕೋಪಗೊಳ್ಳದೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಮರ್ಥರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ನಿಮ್ಮ ಧ್ವನಿಯನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಸಂಬಂಧಿಕರೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಜ್ವರ ಅಥವಾ ದೇಹದ ನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹತಾಶೆ ಮತ್ತು ಖಿನ್ನತೆಯ ಭಾವನೆಯನ್ನು ತಪ್ಪಿಸಲು ನೀವು ಯೋಗ ಮತ್ತು ಧ್ಯಾನವನ್ನು ಆಶ್ರಯಿಸುವುದು ಉತ್ತಮ.
ಪರಿಹಾರ - ಹನುಮಂತ ದೇವರನ್ನು ಪೂಜಿಸಿ.
कुंभ / ಕುಂಭ ರಾಶಿ
ಕುಂಭ ರಾಶಿಚಕ್ರದ ಜನರಿಗೆ ಮಂಗಳ ದೇವ ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಲಾಭ/ ಹಾನಿ ಮತ್ತು ಸಂಪತ್ತಿನ ನಿಮ್ಮ ಎಂಟನೇ ಮನೆಗೆ ಸಾಗಣಿಸುತ್ತದೆ. ಈ ಸಮಯದಲ್ಲಿ ನಿಮ್ಮಲ್ಲಿ ಕಿರಿಕಿರಿಯನ್ನು ಅನುಭವಿಸಬಹುದು ಮತ್ತು ಸರಿಯಾದ ನಿರ್ಧಾರ ತೆಗದುಕೊಳ್ಳುವಲ್ಲೂ ನೀವು ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಈ ರಾಶಿಚಕ್ರದ ಜನರಿಗೆ ಅರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಈ ಸಮಯದಲ್ಲಿ ರಸ್ತೆ ದಾಟುವಾಗ ಮತ್ತು ವಾಹನವನ್ನು ಚಲಾಯಿಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಆಟಗಾರರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಬೇಕು. ಕೆಲವು ಸ್ಥಳೀಯರು ರಕ್ತಕ್ಕೆ ಸಂಬಂಧಿಸಿದ ಸಮಸೆಗಳನ್ನು ಹೊಂದಿರಬಹುದು. ನೀವು ಮೊದಲಿನಿಂದಲೇ ಇಂತಹ ರೋಗಗಳಿಂದ ಬಳಲುತ್ತಿದ್ದರೆ, ಈ ಸಮಯದಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಸಲಹೆ ನೀಡಲಾಗಿದೆ.
ವಿವಾಹಿತರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಜೀವನ ಸಂಗಾತಿಯಲ್ಲಿ ಅಹಂ ಭಾವನೆಯನ್ನು ಕಾಣಲಾಗುತ್ತದೆ. ಇದು ನಿಮ್ಮ ಸಾಮರಸ್ಯವನ್ನು ಹದಗೆಡಿಸಬಹುದು. ಜೀವನ ಸಂಗಾತಿಗೆ ಕೆಲವು ಸಮಸ್ಯೆಗಳಾಗಬಹುದು. ವೃತ್ತಿ ಜೀವನದಲ್ಲಿ ಗುರಿಗಳನ್ನು ಸಾಧಿಸಲು ಈ ಸಮಯದಲ್ಲಿ ನೀವು ಹೆಚ್ಚು ಪರಿಶ್ರಮ ಮತ್ತು ಪ್ರಯತ್ನಗಳನ್ನು ಮಾಡಬೇಕಾಗಬಹುದು. ನಿಮ್ಮ ನಿರಂತರ ಪ್ರಯತ್ನಗಳ ಹೊರತಾಗಿಯೂ ಅದೃಷ್ಟವು ನಿಮ್ಮನ್ನು ಹೆಚ್ಚು ಬೆಂಬಲಿಸುವುದಿಲ್ಲ. ಆದರೆ ಧೈರ್ಯದಿಂದಿರಿ, ಭವಿಷ್ಯದಲ್ಲಿ ಖಂಡಿತವಾಗಿಯೂ ನಿಮ್ಮ ಪರಿಶ್ರಮದ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನಿಮ್ಮ ಜೀವನದಲ್ಲಿ ಕೆಲವು ಅನಿಶ್ಚಿತತೆಗಳು ಸಂಭವಿಸಬಹುದು, ಆದರೆ ನಿಮ್ಮ ಕೆಲಸದಿಂದ ನೀವು ಹಿಂದೆ ಸರಿಯದಿದ್ದರೆ, ವಿರುದ್ಧ ಪರಿಸ್ಥಿತಿಗಳಿಂದ ನೀವು ಹೊರಬರಬಹುದು. ಈ ಸಮಯದಲ್ಲಿ ನೀವು ಪ್ರಯಾಣಿಸಲು ಯೋಜಿಸುತ್ತಿದ್ದರೆ, ಯಾವುದೇ ಆಕಸ್ಮಿಕ ಸ್ಥಿತಿಗಾಗಿ ನೀವು ಸಿದ್ಧರಾಗಿರಬೇಕು, ಈ ಸಮಯದಲ್ಲಿ ನಿಮ್ಮ ಯೋಜನೆಯಲ್ಲಿ ಹಠಾತ್ ಬದಲಾವಣೆಯಾಗಬಹುದು.
ಪರಿಹಾರ - ಮಂಗಳವಾರ ಉಪವಾಸ ಮಾಡಿ.
मीन / ಮೀನ ರಾಶಿ
ಮೀನ ರಾಶಿಚಕ್ರದ ಜನರಿಗೆ ಮಂಗಳ ಗ್ರಹವು ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಮದುವೆ ಮತ್ತು ಬುದ್ಧಿವಂತಿಕೆಯ ಏಳನೇ ಮನೆಗೆ ಗೋಚರಿಸುತ್ತದೆ. ಸಂಚಾರದ ಈ ಸಮಯದಲ್ಲಿ ನಿಮ್ಮ ಏಳನೇ ಮನೆಯಲ್ಲಿ ಕ್ರೂರ ಗ್ರಹದ ಉಪಸ್ಥಿತಿಯಿಂದಾಗಿ ವೈಯಕ್ತಿಕ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕೋಪವು ಸಹ ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಮಯದಲ್ಲಿ ನೀವು ತೊಂದರೆಗೆ ಸಿಲುಕಬಹುದು. ಈ ಸಂಚಾರವು ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧಕ್ಕೆ ಪರೀಕ್ಷೆಯ ಸಮಯವಾಗಿರುತ್ತದೆ. ಆದ್ದರಿಂದ ನಿಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗೆ ಜಗಳ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಬೇಕು. ಇದಲ್ಲದೆ ವಿವಾದದ ಪರಿಸ್ಥಿತಿಯನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
ವೃತ್ತಿಪರ ಜೀವನದಲ್ಲಿ, ಕೆಲಸದ ಸ್ಥಳದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನೀವು ಧೈರ್ಯದಿಂದಿರುವ ಅಗತ್ಯವಿದೆ. ಈ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಜಗಳವಾಡಬಹುದು. ಅಹಿತಕರ ಪರಿಸ್ಥಿತಿಗಳನ್ನು ತಪ್ಪಿಸಲು ಜನರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಆರ್ಥಿಕವಾಗಿ, ಆದಾಯದ ಹರಿವು ಉತ್ತಮವಾಗಿರುತ್ತದೆ, ಆದರೆ ನಿರೀಕ್ಷಿಸಿದಂತೆ ಇರುವುದಿಲ್ಲ. ಆದ್ದರಿಂದ ಹಣಕಾಸು ಸಂಗ್ರಹಿಸುವಲ್ಲಿ ನಿಮಗೆ ಕೆಲವು ಸಮಸ್ಯೆಗಳಾಗಬಹುದು. ಆರೋಗ್ಯದ ದೃಷ್ಟಿಯಿಂದ ನೀವು ಸ್ವಲ್ಪ ಜಾರಗೂರಕರಾಗಿಬೇಕು. ಏಕೆಂದರೆ ಮೂತ್ರಕೋಶಕ್ಕೆ ಸಂಬಂಧಿಸಿದ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ನೀವು ಬಳಲುತ್ತಬಹುದು.
ಪರಿಹಾರ - ಉತ್ತಮ ಫಲಿತಾಂಶಗಳನ್ನು ಪಡೆಯಲು ಮಂಗಳವಾರ ತಾಮ್ರದ ಪಾತ್ರದ ದಾನ ಮಾಡಿ.
ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು.