• Talk To Astrologers
  • AstroSage Brihat Horoscope
  • Ask A Question
  • Raj Yoga Report
  • Child Report

ಬುಧ ಸಂಚಾರ ವೃಷಭ ರಾಶಿಯಲ್ಲಿ - Mercury Transit in Taurus in Kannada

ಬುಧ ಗ್ರಹವನ್ನು ಸಂವಹನ, ವ್ಯವಸಾಯ, ತಾರ್ಕಿಕ ಸಾಮರ್ಥ್ಯ, ವಿಶ್ಲೇಷಣೆ ಮತ್ತು ವೀಕ್ಷಣೆಯ ಅಂಶವೆಂದು ಪರಿಗಣಿಸಲಾಗಿದೆ. ತನ್ನ ಸ್ನೇಹ ರಾಶಿ ವೃಷಭದಲ್ಲಿ 09 ಮೇ 2020 ರಂದು, 09:47 ಗಂಟಿಗೆ ಸಂಚರಿಸುತ್ತದೆ. ಇಲ್ಲಿಂದ 24 ಮೇ 2020, 23:57 ಗಂಟಿಗೆ ಬುಧ ಗ್ರಹವು ತನ್ನ ಸ್ವರಾಶಿ ಮಿಥುನದಲ್ಲಿ ಹಾದುಹೋಗುತ್ತದೆ. ಆದ್ದರಿಂದ ಬುಧ ಗ್ರಹವು ವೃಷಭ ರಾಶಿಯಲ್ಲಿ 16 ದಿನಗಳ ವರೆಗೆ ಇರುತ್ತದೆ.

ಯಾವುದೇ ಸಮಸ್ಯೆಯಿಂದ ತೊಂದರೆಗೊಂಡಿದ್ದರೆ, ಪರಿಹಾರಕ್ಕಾಗಿ ಜ್ಯೋತಿಷಿಯನ್ನು ಪ್ರಶ್ನೆ ಕೇಳಿ

ನಡೆಯಿರಿ ಈಗ ಬುಧ ಗ್ರಹವು ವೃಷಭ ರಾಶಿಚಕ್ರದಲ್ಲಿ ಸಂಚರಿಸಿದಾಗ ನಿಮ್ಮ ಮೇಲೆ ಏನು ಪರಿಣಾಮ ಬೀರುತ್ತದೆ ಮತ್ತು ಕುಟುಂಬ, ವೃತ್ತಿ, ಅರೋಗ್ಯ, ಪ್ರೀತಿ, ಮದುವೆ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ನೀವು ಏನು ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ತಿಳಿಯೋಣ.

ಈ ರಾಶಿ ಭವಿಷ್ಯ ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಯನ್ನು ತಿಳಿಯಿರಿ.

  1. ಮೇಷ ರಾಶಿಚಕ್ರ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಬುಧನ ಸಾಗಣೆ ಅವರ ಧ್ವನಿ, ಸಂಗ್ರಹಿಸಿದ ಹಣ ಮತ್ತು ಉಳಿತಾಯದ ಎರಡನೇ ಮನೆಯಲ್ಲಿರುತಾದ. ಈ ಸಂಚಾರದ ಸಮಯದಲ್ಲಿ, ಮೇಷ ರಾಶಿಚಕ್ರದ ಸ್ಥಳೀಯರು ಹಣಕಾಸು ಸಂಗ್ರಹಿಸುವುದು ಮತ್ತು ಉಳಿಸುವುದು ಎಲ್ಲದ್ದಕ್ಕಿಂತ ಅವಶ್ಯಕ ಕೆಲಸವಾಗಿದೆ. ಈ ರೀತಿಯ ಹೂಡಿಕೆ ಮಾಡುವುದು ನಿಮಗೆ ಉತ್ತಮವಾಗಿರುತದೆ ಮತ್ತು ಇದರ ಮೂಲಕ ಮುಂಬರುವ ಸಮಯದಲ್ಲಿ ನಿಮಗೆ ಆರ್ಥಿಕ ಲಾಭವಾಗಬಹುದು. ನಿಮ್ಮ ಜೀವನದಲ್ಲಿ ಬರಲಾಗುವ ಏರಿಳಿತ ಮತ್ತು ಅಡಚಣೆಗಳ ಅಂಶದ ಮನೆಯ ಸ್ವಾಮಿ ಬುಧ ಸ್ಥಾನದ ಪರಿಣಾಮವಾಗಿ ನೀವು ಖರ್ಚು ಮಾಡಬಹುದು. ಸಂಭಾಷಣೆಯ ಸಮಯದಲ್ಲಿ ನೀವು ಜಾಗರೂಕರಾಗಿರಬೇಕು ಮತ್ತು ಒಳ್ಳೆಯೆ ಪದಗಳನ್ನು ಬಳಸಬೇಕು, ಇಲ್ಲದಿದ್ದರೆ ನೀವು ಯಾರನ್ನಾದರೂ ನೋಯಿಸಬಹುದು. ಈ ಕಾರಣದಿಂದಾಗಿ ನಿಮ್ಮ ಕುಟುಂಬದ ಪರಿಸರವು ಹದಗೆಡಬಹುದು.

ಈ ರಾಶಿಚಕ್ರದ ವೃತ್ತಿಪರ ಜನರು ಕೆಲಸದ ಸ್ಥಳದಲ್ಲಿ ಲಾಭವನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಮೇಷ ರಾಶಿಚಕ್ರದ ಉದ್ಯಮಿಗಳು ಈ ಸಮಯದಲ್ಲಿ ವ್ಯಾಪಾರದಲ್ಲಿ ಹೊಸ ಯೋಜನೆಗಳ ಅನುಷ್ಠಾನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಾಗಣೆಯ ಸಮಯದಲ್ಲಿ ನೀವು ಯಾವುದೇ ರೀತಿಯ ಲೋನ್ ಅಥವಾ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ನೀವು ನಿಮ್ಮ ಅಕ್ಕ ಪಕ್ಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ಹಲ್ಲು ಅಥವಾ ಮುಖಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಾಗಬಹುದು.

ಪರಿಹಾರ - ಹಣ್ಣುಗಳ ದಾನ ಮಾಡಿದರೆ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

  1. ವೃಷಭ

ಬುಧ ಗ್ರಹದ ಸಂಚಾರವು ವೃಷಭ ರಾಶಿಚಕ್ರದ ಸ್ಥಳೀಯರ ಲಗ್ನದ ಮನೆಯಲ್ಲಿರುತ್ತದೆ. ಇಂತಹ ಪರಿಷ್ಟಿತಿಯಲ್ಲಿ ಬುಧ ಗ್ರಹವು ದಿಗ್ಬಲದ ಸ್ಥಿತಿಯಲ್ಲಿರುತ್ತದೆ.. ಬುಧನ ಈ ಸ್ಥಾನವು ನಿಮ್ಮನ್ನು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವಂತೆ ಮಾಡುತ್ತದೆ. ಇದರೊಂದಿಗೆ ನಿಮ್ಮ ಸಂಭಾಷಣೆಯ ಕೌಶಲ್ಯ ಸಹ ಉತ್ತಮವಾಗಿರುತ್ತದೆ. ನೀವು ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.

ಈ ಸಮಯದಲ್ಲಿ ನಿಮ್ಮ ಸ್ನೇಹಪರ ಮತ್ತು ಸೌಮ್ಯ ವರ್ತನೆ, ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ರಾಶಿಚಕ್ರದ ವಿವಾಹಿತ ಸ್ಥಳೀಯರು, ತಮ್ಮ ಸಂಬಂಧದಲ್ಲಿ ಹೆಚ್ಚು ಸಂತೋಸ್ಜ ಮತ್ತು ಖುಷಿಯನ್ನು ಅನುಭವಿಸುತ್ತಾರೆ. ಪ್ರೀತಿ ಸಂಬಂಧದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ.

ಈ ರಾಶಿಚಕ್ರದ ಉದ್ಯೋಗದಲ್ಲಿರುವವರು ಅಥವಾ ಯಾವುದೇ ವೈಯಕ್ತಿಕ ಕೆಲಸದಲ್ಲಿ ತೊಡಗಿರುವವರು, ಬುಧನ ಈ ಸ್ಥಾನವು ಅವರಲ್ಲಿ ಸಾಕಷ್ಟು ಕುತೂಹಲವನ್ನು ಜಾಗೃತಗೊಳಿಸುತ್ತದೆ. ಈ ಕಾರಣದಿಂದ ನೀವು ಹೊಸ ಅನುಭವಗಳ ಮೂಲಕ ಹಾದುಹೋಗುತ್ತೀರಿ. ಇದರಿಂದ ಭವಿಷ್ಯದಲ್ಲಿ ನಿಮ್ಮ ಕೌಶಲ್ಯದಲ್ಲಿ ಇನ್ನಷ್ಟು ಹೊಳಪು ಬರುತ್ತದೆ. ಈ ಸಂಚಾರದ ಸಮಯದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರ ನಡವಳಿಕೆಯಲ್ಲಿ ಹೊಂದುಕೊಳ್ಳುವಿಕೆಯನ್ನು ಕಾಣಲಾಗುತ್ತದೆ, ಈ ಕಾರಣದಿಂದಾಗಿ ನೀವು ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಬಹಳ ಸುಲಭವಾಗಿ ಪೂರ್ಣಗೊಳಿಸುವಿರಿ. ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ಈ ರಾಶಿಚಕ್ರದ ಆಮದು ರಫ್ತು ವ್ಯವಹಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಲಾಭವನ್ನು ಪಡೆಯಬಹುದು. ಈ ರಾಶಿಚಕ್ರದ ಪೋಷಕರ ಸಂತೋಷದ ಕಾರಣವಾಗುತ್ತಾರೆ. ಈ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳ ಏಕಾಗ್ರತೆ ಅದ್ಭುತವಾಗಿರುತ್ತದೆ. ಇದರಿಂದಾಗಿ ಶಿಕ್ಷಣದ ಕ್ಷೇತ್ರದಲ್ಲಿ ಅವರು ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ.

ಪರಿಹಾರ - ಪ್ರತಿದಿನ ನಿಯಮಿತವಾಗಿ ಸೂರ್ಯೋದಯದ ಸಮಯದಲ್ಲಿ ರಾಮ ರಕ್ಷ ಸ್ತ್ರೋತವನ್ನು ಪಠಿಸಬೇಕು.

  1. ಮಿಥುನ

ಬುಧ ಗ್ರಹವು ಈ ಸಂಚಾರದ ಸಮಯದಲ್ಲಿ ಮಿಥುನ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿರುತ್ತದೆ. ಈ ಮನೆಯನ್ನು ವೆಚ್ಚ, ಅನಿರೀಕ್ಷಿತ ಪರಿಸ್ಥಿತಿಗಳ ಮನೆ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ಬುಧನ ಷ್ಠಾನವು ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಅನುಕೂಲಕರ ಎಂದು ಹೇಳಲಾಗುವುದಿಲ್ಲ. ಈ ಮನೆಯಿಂದ ವಿದೇಶದ ಬಗ್ಗೆಯೂ ಪರಿಗಣಿಸಲಾಗುತ್ತದೆ, ಮಿಥುನ ರಾಶಿಚಕ್ರದ ಕೆಲವು ಸ್ಥಳೀಯರಿಗೆ ವಿದೇಶಿ ಸಂಬಂಧಗಳಿಂದ ಲಾಭವಾಗಬಹುದು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಆಪ್ತರೊಂದಿಗೆ ವೇದೇಶಕ್ಕೆ ಹೋಗಬಹುದು. ಆದಾಗ್ಯೂ ಬುಧ ಸಂಚಾರದ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಇದರಿಂದಾಗಿ ನಿಮಗೆ ಮಾನಸಿಕ ಸಮಸ್ಯೆ ಮತ್ತು ಒತ್ತಡವಾಗುವ ಸಾಧ್ಯತೆ ಇದೆ. ಆದ್ದರಿಂದ ಆರ್ಥಿಕ ಯೋಜನೆ ಮತ್ತು ಸಂಪನ್ಮೂಲಗಳನ್ನು ಸರಿಯಾಗಿ ಬಳಸುವುದು ನಿಮಗೆ ಉತ್ತಮ. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರ ವರ್ಗಾವಣೆ ಸಂಭವಿಸಬಹುದು.

ಈ ರಾಶಿಚಕ್ರದ ವೃತ್ತಿಪರ ಸ್ಥಳೀಯರ ಬಗ್ಗೆ ಮಾತನಾಡಿದರೆ, ಈ ಸಂಚಾರವು ನಿಮ್ಮ ಮನೋಬಲದಲ್ಲಿ ಕುಸಿತವನ್ನು ತರಬಹುದು. ಇದರೊಂದಿಗೆ ನೀವು ಚಿಂತೆ ಮತ್ತು ತೊಂದರೆಕ್ಕೊಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ಹೊಸ ಕೆಲಸ ಮಾಡುವುದನ್ನು ತಪ್ಪಿಸಬೇಕು ಮತ್ತು ನೀವು ಯಾವುದೇ ಕೆಲಸದಲ್ಲಿ ತೊಡಗಿದ್ದರೆ, ಅದನ್ನು ಬಹಳ ಪರಿಶ್ರಮದೊಂದಿಗೆ ಪೂರ್ಣಗೊಳಿಸಬೇಕು. ನಿಮ್ಮ ಕೌಶಲ್ಯವನ್ನು ನಂಬಿ ಮತ್ತು ಅದನ್ನು ಉತ್ತಮಗೊಳಿಸಲು ನಿರಂತರವಾಗಿ ಪ್ರಯತ್ನಿಸಿ, ಇದರಿಂದ ನಿಮ್ಮಲ್ಲಿ ಪೂರ್ಣತೆ ಬರುತ್ತದೆ. ನಿಮ್ಮ ವೃತ್ತಿಪರ ಜೀವನವನ್ನು ಪ್ರಭಾವಿಸುತ್ತಿರುವ ವಿಷಯಗಳು ನಿಮ್ಮ ವೈಯಕ್ತಿಕ ಜೀವನವನದ ಮೇಲೆ ಸಹ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನೀವು ಸಣ್ಣ ಪುಟ್ಟ ವಸ್ತುಗಳ ಬಗ್ಗೆಯೂ ಕೋಪಗೊಳ್ಳಬಹುದು. ಈ ಕಾರಣದಿಂದಾಗಿ ಜೀವನದಲ್ಲಿ ಏರಿಳಿತಗಳು ಬರುತ್ತವೆ ಮತ್ತು ನಿಮ್ಮ ಸಂಬಂಧಗಳು ಸಹ ಹದಗೆಡಬಹುದು. ಈ ಸಂಚಾರದ ಸಮಯದಲ್ಲಿ ನೀವು ತಾಳ್ಮೆಯಿಂದ ಮತ್ತು ಶಾಂತವಾಗಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದರ ಮೂಲಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಸಂಚಾರದ ಉತ್ತಮ ಫಲಿತಾಂಶವನ್ನು ನೀವು ಪಡೆಯಬಹುದು.

ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ಅಜಾಗರೂಕತೆಯನ್ನು ವಹಿಸಬೇಡಿ, ವಿಶೇಷವಾಗಿ ಕಣ್ಣು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ. ಆದ್ದರಿಂದ ಕಣ್ಣು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಶೀಘ್ರದಲ್ಲೇ ವೈದ್ಯರನ್ನು ಸಂಪರ್ಕಿಸಿ.

ಪರಿಹಾರ - ನಿಮ್ಮ ನೇರ ಕೈಯ ಸಣ್ಣ ಬೆರಳಿನಲ್ಲಿ ಪನ್ನ ರತ್ನ ವನ್ನು ಧರಿಸಬೇಕು.

  1. ಕರ್ಕ

ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಅವರ ಯಶಸ್ಸು ಮತ್ತು ಲಾಭದ ಹನ್ನೆರಡನೇ ಮನೆಯಲ್ಲಿರಲಿದೆ. ಕರ್ಕ ರಾಶಿಚಕ್ರದ ಸ್ಥಳೀಯರ ಆಸೆಗಳ ಮೂರನೇ ಮತ್ತು ವಿದೇಶ, ವೆಚ್ಚಗಳ ಹನ್ನೆರಡನೇ ಮನೆಯ ಮೇಲೆ ಬುಧ ಗ್ರಹದ ಅಧಿಪತ್ಯವಿದೆ. ಈ ಕಾರಣದಿಂದ ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಶುಭವೆಂದು ಸಾಬೀತುಪಡಿಸುತ್ತದೆ. ಈ ರಾಶಿಚಕ್ರದ ವಿದೇಶದೊಂದಿಗೆ ವ್ಯಾಪಾರ ನಡೆಸುತ್ತಿರುವ ಉದ್ಯಮಿಗಳು ಅಥವಾ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭ ಸಿಗುವ ಸಂಪೂರ್ಣ ಸಾಧ್ಯತೆ ಇದೆ.

ಮೂರನೇ ಮನೆಯಿಂದ ನಿಮ್ಮ ಅರ್ಹತೆಯ ಬಗ್ಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ನಿಮ್ಮ ಸಾಮರ್ಥ್ಯದ ಮೇಲೂ ನೀವು ಹಣಕಾಸು ಸಂಪಾದಿಸಬಹುದು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ.ಈ ಸಮಯದಲ್ಲಿ ಸಣ್ಣ ಪುಟ್ಟ ಪ್ರವಾಸಗಳ ಮೂಲಕ ಲಾಭ ಪಡೆಯುವ ಸಾಧ್ಯತೆ ಇದೆ. ಈ ರಾಶಿಚಕ್ರದ ವೃತ್ತಿಪರ ಜನರು ತಮ್ಮ ಹಿಂದಿನ ಸಮಯದಲ್ಲಿ ಮಾಡಿದ ಯಾವುದೇ ಕೆಲಸದ ಪ್ರತಿಫಲವನ್ನು ಪಡೆಯಬಹುದು. ಹನ್ನೊಂದನೇ ಮನೆ ನಿಮ್ಮ ಸಾಮಾಜಿಕ ವಲಯದ ಬಗ್ಗೆ ತಿಳಿಸುತ್ತದೆ, ಆದ್ದರಿಂದ ಬುಧ ಗ್ರಹದ ಸಂಚಾರದ ಈ ಸಮಯದಲ್ಲಿ, ಸಾಮಾಜಿಕ ಮಟ್ಟದಲ್ಲಿ ನೀವು ಎಷ್ಟು ಸಕ್ರಿಯರಾಗಿರುತ್ತಿರೋ, ಯಶಸ್ವಿಯಾಗಲು ಅಷ್ಟೇ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತೀರಿ. ಆದಾಗ್ಯೂ, ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸಂಗಾತಿಯಿಂದ ಹೆಚ್ಚು ನಿರೀಕ್ಷೆಗಳನ್ನು ಹೊಂದಿರುತ್ತೀರಿ. ಈ ಕಾರಣದಿಂದ ನಿಮ್ಮ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾಗಬಹುದು. ನಿಮ್ಮ ಸಂಗಾತಿ ಹೇಗಿದ್ದಾರೋ, ಅದೇ ರೀತಿಯಲ್ಲಿ ಅವರನ್ನು ಅರ್ಥಮಾಡಿಕೊಂಡರೆ ಈ ಸಂಚಾರದ ದೃಷ್ಟಿಯಿಂದ ನಿಮಗೆ ಉತ್ತಮವಾಗಿರಬಹುದು.

ಪರಿಹಾರ - ಮನೆಯಲ್ಲಿ ಮನಿ ಪ್ಲಾಂಟ್ ಅಥವಾ ಹಸಿರು ಸಸ್ಯಗಳನ್ನು ನೆಡೆಯಿರಿ.

ಅತ್ಯುತ್ತಮ ವೃತ್ತಿ ಸಮಾಲೋಚನೆಯನ್ನು ಪಡೆಯಿರಿ ವೃತ್ತಿಪರ ಸಮಾಲೋಚನೆ ರಿಪೋರ್ಟ್
  1. ಸಿಂಹ

ಬುಧ ಗ್ರಹವು ಸಿಂಹ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಗೆ ಸಾಗುತ್ತದೆ, ಈ ಮನೆಯ ಮೂಲಕ ನಿಮ್ಮ ವೃತ್ತಿಪರ ಮತ್ತು ಕರ್ಮದ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಗ್ರಹ ನಿಮ್ಮ ಎರಡನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಎರಡನೇ ಮನೆಯ ಮೂಲಕ ಸಂಗ್ರಹಿಸಲಾಗಿರುವ ನಿಮ್ಮ ಹಣಕಾಸು ಮತ್ತು ಹನ್ನೊಂದನೇ ಮನೆಯಿಂದ ಲಾಭ ಮತ್ತು ಯಶಸ್ಸಿನ ಬಗ್ಗೆ ಪರಿಗಣಿಸಲಾಗುತ್ತದೆ. ಬುಧನ ಸ್ಥಾನದಿಂದ ಸಿಂಹ ರಾಶಿಚಕ್ರದ ಸ್ಥಳೀಯರು ಉತ್ತಮ ಲಾಭವನ್ನು ಪಡೆಯಲಿದ್ದಾರೆ.

ವಾಣಿಜ್ಯಿಕವಾಗಿ, ನಿಮ್ಮ ಸೃಜನಶೀಲ ಮತ್ತು ಸಂಸ್ಥೆಯ ಕೌಶಲ್ಯಗಳು ಹೆಚ್ಚಾಗುತ್ತವೆ ಮತ್ತು ಆ ಕೃತಿಗಳನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಇದರ ಪರಿಣಾಮದಿಂದಾಗಿ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳ ನಡುವೆ ನಿಮ್ಮ ಚಿತ್ರವೂ ಸುಧಾರಿಸುತ್ತದೆ. ಚಲನಚಿತ್ರ, ಮನರಂಜನೆ ಮತ್ತು ಇತರ ಸೃಜನಶೀಲ ನಿರ್ವಹಣೆಯಂತಹ ಕೆಲಸಗಳಲ್ಲಿ ತೊಡಗಿರುವ ಸ್ಥಳೀಯರು ಈ ಸಮಯದಲ್ಲಿ ಉತ್ತಮ ಫಲಿತಾಂಶ ಮತ್ತು ಲಾಭ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ರಾಶಿಚಕ್ರದ ಸಾರ್ವಜನಿಕ ವ್ಯವಹಾರಕ್ಕೆ ಸಂಬಂಧಿಸಿದ ಜನರು ಸಹ ಉತ್ತಮ ಲಾಭ ಪಡೆಯಬಹುದು. ಉದ್ಯಮಿಗಳಿಗೆ ಈ ಸಮಯ ಉತ್ತಮವಾಗಿರಲಿದೆ, ವಿಶೇಷವಾಗಿ ಕುಟುಂಬಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರು ವಿಶೇಷ ಲಾಭವನ್ನು ಪಡೆಯಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಪ್ರರಂಪರೆಯನ್ನು ಮುಂದುವರಿಸಲು ಅವಕಾಶ ಸಿಗುತ್ತದೆ.

ನಿಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಕುಟುಂಬದ ಸದಸ್ಯರ ಸಹಕಾರವನ್ನು ನೀವು ಪಡೆಯುತ್ತೀರಿ, ವಿಶೇಷವಾಗಿ ತಂದೆ ಅಥವಾ ತಂದೆಯಂತಹ ಜನರು ನಿಮ್ಮನ್ನು ಬೆಂಬಲಿಸುತ್ತಾರೆ. ಮನೆಯ ಪರಿಸರವು ಸಂತೋಷವಾಗಿರುತ್ತದೆ. ನಿಮ್ಮ ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ. ಬುಧನ ಸ್ಥಾನವು ನಿಮ್ಮ ಸಂಬಂಧಕ್ಕೆ ಸಮತೋಲನವನ್ನು ನೀಡುತ್ತದೆ. ಈ ಸಮಯದಲ್ಲಿ ಪ್ರೀತಿಪಾತ್ರರೊಂದಿಗೆ ನಿಮ್ಮ ನಿಕಟತೆಯನ್ನು ಹೆಚ್ಚಿಸಬಹುದು. ವಿವಾಹಿತ ಜನರ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಉಳಿದಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಯಶಸ್ವಿಯಾಗಲು ಬಯಸುತ್ತಿದ್ದರೆ, ಈ ಸಮಯದಲ್ಲಿ ಅವರು ಇನ್ನು ಸ್ವಲ್ಪ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕು.

ಪರಿಹಾರ - ಬುಧವಾರದಂದು ಧಾರ್ಮಿಕ ಪುಸ್ತಕಗಳ ಅಧ್ಯಯನ ಮಾಡುವುದು ಮತ್ತು ಬುಧ ಬೀಜ ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮವಾಗಿರುತ್ತದೆ.

  1. ಕನ್ಯಾ

ಬುಧ ಗ್ರಹವು ಕನ್ಯಾ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಗೆ ಸಾಗಲಿದೆ. ಈ ಮನೆಯಿಂದ ನಿಮ್ಮ ಅದೃಷ್ಟ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಪರಿಗಣಿಸಲಾಗುತ್ತದೆ. ಇದರೊಂದಿಗೆ ಪ್ರವಾಸ ಮತ್ತು ಧಾರ್ಮಿಕ ಯಾತ್ರೆಗಳ ಬಗ್ಗೆಯೂ ಈ ಮನೆಯಿಂದ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರತಿಯೊಂದು ಕೆಲಸದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಆದಾಗ್ಯೂ ಇದರ ಹೊರೆತಾಗಿಯೂ, ನೀವು ನಿಮ್ಮ ಗುರಿಗಳನ್ನು ಪಡೆಯಲು ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಮಾಡುವ ಅಗತ್ಯವಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಮತ್ತು ಸಾಮಾಜಿಕ ಮಟ್ಟದಲ್ಲಿ ನೀವು ಉತ್ತಮ ಗುರುತು ಪಡೆಯಲು ಸಾಧ್ಯವಾಗುತ್ತದೆ.

ವೃತ್ತಿಪರ ಜನರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಹೊಸ ಉದ್ಯೋಗವನ್ನು ಪಡೆಯಬಹುದು ಮತ್ತು ಆದಾಯದಲ್ಲಿ ಕೂಡ ಹೆಚ್ಚಳವಾಗಬಹುದು. ಈ ಸಂಚಾರದ ಸಮಯದಲ್ಲಿ ಮಾಡಲಾಗುವ ಪ್ರವಾಸಗಳು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸುತ್ತವೆ.

ಸಂಚಾರದ ಈ ಸಮಯದಲ್ಲಿ ಆಧ್ಯಾತ್ಮಿಕತೆಯ ಕಡೆ ನಿಮ್ಮ ಒಲವು ಹೆಚ್ಚಾಗುತ್ತದೆ, ನೀವು ಜನರಿಗೆ ಸಹಾಯ ಮತ್ತು ಸೇವೆ ಮಾಡಬಹುದು. ಸುಧಾರಣೆಯ ಅಗತ್ಯವಿರುವ ಸಮಾಜದ ಪ್ರಮುಖ ಅಂಶಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತೀರಿ.

ನೀವು ವಿವಾಹಿತರಾಗಿದ್ದರೆ, ಅತ್ತೆಮನೆಯ ಜನರೊಂದಿಗೆ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಈ ಕಾರಣದಿಂದ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಒಬ್ಬಂಟಿಯಾಗಿರುವ ಜನರ ಬಗ್ಗೆ ಮಾತನಾಡಿದರೆ, ನೀವು ಯಾರಾನ್ನಾದರು ಪ್ರೀತಿಸುತ್ತಿದ್ದರೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿದ್ದರೆ, ನೀವು ನಿಮ್ಮ ಸ್ನೇಹಿತರ ಸಹಾಯವನ್ನು ಪಡೆಯಬಹುದು. ಸಂಚಾರದ ಸಮಯದಲ್ಲಿ ಪ್ರವಾಸಗಳು ಸಂಭವಿಸಬಹುದು ಆದರೆ ಸ್ವಲ್ಪ ಸಮಯಕ್ಕೆ ಅವುಗಳನ್ನು ತಪ್ಪಿಸುವುದು ಹಿತಕರ.

ಪರಿಹಾರ - ನಿಮ್ಮ ನೇರ ಕೈಯ ಸಣ್ಣ ಬೆರಳಿನಲ್ಲಿ ಪನ್ನ ರತ್ನ ವನ್ನು ಧರಿಸಬೇಕು.

  1. ತುಲಾ

ಬುಧ ಗ್ರಹವು ತುಲಾ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಯಲ್ಲಿ ಸಾಗಲಿದೆ. ಈ ಮನೆಯಿಂದ ಜೀವನದಲ್ಲಿ ಉಂಟಾಗುವ ಬದಲಾವಣೆ ಮತ್ತು ಅನಿರೀಕ್ಷಿತ ಘಟನೆಗಳ ಬಗ್ಗೆ ಪರಿಗಣಿಸಲಾಗುತ್ತದೆ. ಇದರೊಂದಿಗೆ ಇದ್ದಕ್ಕಿದ್ದಂತೆ ಪಡೆಯಲಾಗುವ ಉಡುಗೊರೆ ಮತ್ತು ಆರೋಗ್ಯದ ಬಗ್ಗೆಯೂ ಈ ಮನೆಯಿಂದ ಮಾಹಿತಿ ಪಡೆಯಲಾಗುತ್ತದೆ. ನಿಮ್ಮ ಎಂಟನೇ ಮನೆಯಲ್ಲಿ ಬುಧನ ಸಂಚಾರವು ನೀವು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ ಎಂದು ಸೂಚಿಸುತ್ತಿದೆ. ಈ ಸಮಯದಲ್ಲಿ ಧೂಳು ಮತ್ತು ಮಾಲಿನ್ಯದಿಂದ ನೀವು ದೂರವಿರಬೇಕು, ಇಲ್ಲದಿದ್ದರೆ ಅಲರ್ಜಿ ಅಹವ ಚರ್ಮಕ್ಕೆ ಸಂಬಂಧಿಸಿದ ಯಾವುದೇ ರೋಗವು ನಿಮ್ಮನ್ನು ಕಾಡಬಹುದು. ಈ ಸಮಯದಲ್ಲಿ ಅಪಘಾತ ಸಂಭವಿಸಬಹುದು ಆದ್ದರಿಂದ ವಾಹನ ಚಲಾಯಿಸುವ ಸಮಯದಲ್ಲಿ ಎಚ್ಚರದಿಂದಿರಬೇಕು.

ಬುಧ ಸಂಚಾರದ ಸಮಯದಲ್ಲೂ ತುಲಾ ರಾಶಿಚಕ್ರದ ಜನರು ಅನೇಕ ಪ್ರಸ್ತಾಪಗಳನ್ನು ಪಡೆಯಬಹುದು ಆದರೆ ಯಾವುದೇ ನಿರ್ಧಾರಕ್ಕೆ ತಲುಪುವ ಮೊದಲು ಪ್ರಯೋಜನ ಮತ್ತು ನಷ್ಟದ ಬಗ್ಗೆ ಚೆನ್ನಾಗಿ ಪರಿಗಣಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ಯಾವುದೇ ರೀತಿಯ ಒಪ್ಪಂದದಲ್ಲಿ ನಷ್ಟ ಪಡೆಯಬಹುದು.

ಈ ಸಮಯದಲ್ಲಿ ರಹಸ್ಯ ಮತ್ತು ಗುಪ್ತ ವಿಜ್ಞಾನವನ್ನು ಕಲಿಯುವಲ್ಲಿ ಮತ್ತು ಅರ್ಥಮಾಡಿಕೊಳ್ಳುವಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಇದರೊಂದಿಗೆ ಯಾವುದೇ ರೀತಿಯ ಸಂಶೋಧನೆಯ ಕಾರ್ಯದಲ್ಲಿ ತೊಡಗಿರುವ ಜನರಿಗೆ ಈ ಸಂಚಾರವು ಶುಭವಾಗಿರುತ್ತದೆ. ಈ ಅಮಯದ್ಲಲಿ ನೀವು ಬಯಸಿದ ಯಶಸ್ಸನ್ನು ಪಡೆಯಬಹುದು.

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಜೀವನ ಸಂಗಾತಿಯ ಭಾವನಾತ್ಮಕ ಮತ್ತು ಆರ್ಥಿಕ ಸಹಕಾರವನ್ನು ನೀವು ಪಡೆಯುತ್ತೀರಿ. ಇದರಿಂದ ನೀವು ಕಠಿಣ ಪರಿಸ್ಥಿತಿಗಳನ್ನು ಸಹ ಬಹಳ ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು ಮತ್ತು ನಿಮ್ಮ ಸಾಮರ್ಥ್ಯವನ್ನು ನಂಬಬೇಕು.

ಪರಿಹಾರ - ತಮ್ಮ ಮನೆಯಲ್ಲಿ ಕರ್ಪುರದ ದೀಪವನ್ನು ಬೆಳಗಿಸುವುದರಿಂದ ನೀವು ಬುಧ ಗ್ರಹದ ಶುಭ ಫಲಿತಾಂಶವನ್ನು ಪಡೆಯುತ್ತೀರಿ.

ಶಿಕ್ಷಣ ಮತ್ತು ವೃತ್ತಿಪರ ಕ್ಷೇತ್ರದಲ್ಲಿ ಸಮಸ್ಯೆಗಳು ಬರುತ್ತಿದ್ದರೆ ಕಾಗ್ನಿ ಆಸ್ಟ್ರೋ ರಿಪೋರ್ಟ್ ಅನ್ನು ಬಳಸಿ

  1. ವೃಶ್ಚಿಕ

ಬುಧ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಏಳನೇ ಮನೆಗೆ ಸಾಗುತ್ತದೆ. ಏಳನೇ ಮನೆಯಿಂದ ನಿಮ್ಮ ಜೀವನ ಸಂಗಾತಿ, ಪಾಲುದಾರಿಕೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಗ್ರಹದ ಈ ಸಂಚಾರದಿಂದ ವೃಶ್ಚಿಕ ರಾಶಿಚಕ್ರದ ಸ್ಥಳೀಯರು ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.

ಬುಧ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಯ ಮಾಲೀಕ ಇದರಿಂದ ಜೀವನದಲ್ಲಿ ಬರುವ ಅಡಚಣೆಗಳ ಬಗ್ಗೆ ತಿಳಿಯುತ್ತದೆ, ಇಲ್ಲೇ ಬುಧ ಗ್ರಹವು ಈ ಸಂಚಾರದ ಸಮಯದಲ್ಲಿ ನಿಮ್ಮ ಸಂಬಂಧದ ಏಳನೇ ಮನೆಯಲಿ ಕುಳಿತಿರುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ವಿಷಯಗಳನ್ನು ಹೊರತೆಗೆಯಬಹುದು. ನಿರಂತರವಾಗಿ ನಿಮ್ಮ ನಡವಳಿಕೆಯಲ್ಲಿ ಉಂಟಾಗುವ ಬದಲಾವಣೆಯ ಕಾರಣದಿಂದಾಗಿ ಜೀವನ ಸಂಗಾತಿಯೊಂದಿಗೆ ತಪ್ಪುಗ್ರಹಿಕೆಗಳು ಉದ್ಭವಿಸಬಹದು. ಆದ್ದರಿಂದ ಜೀವನ ಸಂಗಾತಿಯ ಪ್ರತಿಯೊಂದು ವಿಷಯದಲ್ಲಿ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ. ಇದರ ಮೂಲಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಒಬ್ಬಂಟಿಯಾಗಿರುವ ಈ ರಾಶಿಚಕ್ರದ ಸ್ಥಳೀಯರ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ನೀವು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು.

ಬುಧ ಗ್ರಹವು ನಿಮ್ಮ ಯಶಸ್ಸು ಮತ್ತು ಲಾಭದ ಹನ್ನೊಂದನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಏಳನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ನೀವು ಲಾಭವನ್ನು ಪಡೆಯಬಹುದು ವಿಶೇಷವಾಗಿ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಪ್ರಯೋಜನ ಪಡೆಯಬಹುದು. ಈ ಸಮಯದಲ್ಲಿ ನೀವು ಎಷ್ಟು ಸಾಮಾಜಿಕ ಸಂಪರ್ಕವನ್ನು ಹೊಂದಿತ್ತಿರೋ ಅಷ್ಟೇ ಲಾಭ ಪಡೆಯುವ ಸಾಧ್ಯತೆ ಇದೆ.

ನಿಮ್ಮ ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ನಿಮ್ಮ ಶಕ್ತಿಯಲ್ಲಿ ಹಚಲವನ್ನು ಅನುಭವಿಸಬಹುದು. ಈ ಶಕ್ತಿಯನ್ನು ನೀವು ರನ್ನಿಂಗ್, ಜಿಮ್ ಅಥವಾ ಯೋಗದಲ್ಲಿ ಬಳಸಿಕೊಂಡರೆ ನಿಮ್ಮ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸಬಹುದು.

ಪರಿಹಾರ - ತಾಯಿ ಸರಸ್ವತಿಯನ್ನು ಪೂಜಿಸಿದರೆ ನೀವು ಬುಧ ಗ್ರಹದ ಶುಭ ಫಲಿತಾಂಶವನ್ನು ಪಡೆಯಬಹುದು.

  1. ಧನು

ಬುಧ ಗ್ರಹವು ಧನು ರಾಶಿಚಕ್ರದ ಸ್ಥಳೀಯರ ಆರನೇ ಮನೆಯಲ್ಲಿರಲಿದೆ, ವೈದಿಕ ಜ್ಯೋತಿಷ್ಯದಲ್ಲಿ ಈ ಮನೆಯಿಂದ ಸ್ಪರ್ಧೆಗಳು, ಅಡಚಣೆಗಳು, ಶತ್ರು, ರೋಗ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ.ಮ್ ಉದ್ಯೋಗಕ್ಕೆ ಸಂಬಂಧಿಸಿರುವವರು ಅಥವಾ ಯಾವುದೇ ವೃತ್ತಿಪರ ಕೆಲಸದಲ್ಲಿ ತೊಡಗಿರುವ ಜನರಿಗೆ ಬುಧ ಸಂಚಾರವು ಶುಭ ಫಲಿತಾಂಶವನ್ನು ನೀಡಲಿದೆ. ನಿಮ್ಮ ನಿರಂತರ ಪರಿಶ್ರಮ ಮತ್ತು ದೃಢ ನಿರ್ಧಾರದ ಕಾರಣದಿಂದಾಗಿ ನೀವು ಯಶಸ್ವಿಯಾಗುವಿರಿ. ಆದಾಗ್ಯೂ ಈ ಸಮಯದಲ್ಲಿ ನೀವು ನಿಮ್ಮ ಶತ್ರುಗಳಿಂದ ಎಚ್ಚರದಿಂದಿರುವ ಅಗತ್ಯವಿದೆ, ಏಕೆಂದರೆ ನಿಮ್ಮ ವಿರುದ್ಧವಾಗಿ ಅವರ ಮೂಲಕ ಪಿತೂರಿ ಮಾಡಬಹುದು. ನಿಮ್ಮ ಹೆಚ್ಚಿದ ಸ್ಪರ್ಧಾತ್ಮಕ ಸಾಮರ್ಥ್ಯ ಮತ್ತು ಅರ್ಥಗರ್ಭಿತ ಜ್ಞಾನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಈ ರಾಶಿಚಕದ ಸ್ಥಳೀಯರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಯೋಜನೆಯಿದ್ದರೆ, ಅದನ್ನು ಸ್ವಲ್ಪ ಸಮಯದ ವರೆಗೆ ಮುಂದೂಡುವುದು ಉತ್ತಮವಾಗಿರುತದೆ. ನೀವು ಮಾಡುತ್ತಿದ್ದ ಕೆಲಸ ಮೇಲೆ ಗಮನ ಹರಿಸಿದರೆ ಶುಭ ಫಲಿತಾಂಶಗಳನ್ನು ಪಡೆಯಬಹುದು. ಇದರೊಂದಿಗೆ ಈ ಸಮಯದಲ್ಲಿ ಯಾವುದೇ ಲೋನ್ ಅಥವಾ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಇದು ಮಾನಸಿಕ ಆಂತಕಕ್ಕೆ ಕಾರಣವಾಗಬಹುದು.

ನಿಮ್ಮ ವೈಯಕ್ತಿಕ ಸಂಬಂಧಗಳ ಬಗ್ಗೆ ಮಾತನಾಡಿದರೆ ಸಂಚಾರದ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯವು ದುರ್ಬಲವಾಗಿರುತ್ತದೆ. ಇದರೊಂದಿಗೆ ಕೆಲವು ತಪ್ಪುಗ್ರಹಿಕೆಗಳು ಮತ್ತು ಸಂಬಂಧದಲ್ಲಿ ಬದಲಾವಣೆ ನಿಮ್ಮಿಬ್ಬರ ನಡುವಿನ ವಿವಾದಕ್ಕೆ ಕಾರಣವಾಗಬಹುದು ಮತ್ತು ಪರಸ್ಪರರ ಬಗ್ಗೆ ನಿಮ್ಮ ಹಿಡಿತಗಳು ಬದಲಾಗಬಹುದು. ಇದರ ಪರಿಣಾಮದಿಂದಾಗಿ ಪರಸ್ಪರರ ಬಗ್ಗೆ ನಿಮ್ಮಲ್ಲಿ ಅಹಿತಕರ ಭಾವನೆ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವಿಬ್ಬರು ಪರಸ್ಪರರೊಂದಿಗೆ ಮಾತನಾಡಬೇಕು ಮತ್ತು ಒಬ್ಬರಿಗೊಬ್ಬರ ಮೇಲೆ ದೊಷಿಸುವುದಕ್ಕಿಂತ ಈ ವಿಷಯವನ್ನು ನಿವಾರಿಸಲು ಪ್ರಯತ್ನಿಸಬೇಕು. ಈ ರಾಶಿಚಕ್ರದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಪರಿಹಾರ - ಪ್ರತಿದಿನ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ.

ನಿಮ್ಮ ಜಾತಕದಲ್ಲಿ ಯಾವುದೇ ದೋಷವಿದೆಯೇ? ತಿಳಿಯಲು ಈಗಲೇ ಖರೀದಿಸಿ : ಆಸ್ಟ್ರೋಸೇಜ್ ಬೃಹತ್ ಕುಂಡಲಿ
  1. ಮಕರ

ಬುಧ ಗ್ರಹದ ಸಂಚಾರವು ಮಕರ ರಾಶಿಚಕ್ರದ ಸ್ಥಳೀಯರ ಐದನೇ ಮನೆಯಲ್ಲಿರುತ್ತದೆ, ಈ ಮನೆಯಿಂದ ನಿಮ್ಮ ಬುದ್ಧಿ, ಪ್ರೀತಿ, ಪ್ರಣಯ ಮತ್ತು ಮಕ್ಕಳ ಬಗ್ಗೆ ಪರಿಗಣಿಸಲಾಗುತ್ತದೆ. ನಿಮ್ಮ ವೈಯಕ್ತಿಕ ಜೀವನ ಮೇಲೆ ದೃಷ್ಟಿ ಹಾಕಿದರೆ, ಪ್ರೀತಿ ಮತ್ತು ಪ್ರಣಯಕ್ಕೆ ಬುಧದ ಈ ಸಂಚಾರವು ಉತ್ತಮವಾಗಿರುತ್ತದೆ. ಇನ್ನು ಒಬ್ಬಂಟಿಯಾಗಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಒಬ್ಬ ವಿಶೇಷ ವ್ಯಕ್ತಿಯೊಂದಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಪ್ರಸ್ತಾಪದ ಮೇಲೆ ಸಕಾರಾತ್ಮಕ ಉತ್ತರ ಬರಬಹುದು. ಆದ್ದರಿಂದ ನಿಮ್ಮ ಜೀವನದಲ್ಲಿ ಸಂತೋಷ ಬರಬಹುದು. ಮಕರ ರಾಶಿಚಕ್ರದ ವಿವಾಹಿತ ಸ್ಥಳೀಯರಿಗೆ ಬುಧ ಸಂಚಾರವು ಶುಭವೆಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು.

ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಒಂಬತ್ತನೇ ಮನೆಯ ಮಾಲೀಕ ಬುಧ ಗ್ರಹವು ನಿಮ್ಮ ಐದನೇ ಮನೆಯಲ್ಲಿ ಸಂಚರಿಸುತ್ತದೆ. ಆದ್ದರಿಂದ ಬಡ್ತಿ ಬಯಸುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಬಡ್ತಿ ಪಡೆಯಬಹುದು ಮತ್ತು ಇದರೊಂದಿಗೆ ನೀವು ಇಷ್ಟಪಡುವ ಸ್ಥಳಕ್ಕೆ ನಿಮ್ಮ ವರ್ಗಾವಣೆಯಾಗುವ ಸಾಧ್ಯತೆ ಇದೆ. ನಿಮ್ಮ ಆಲೋಚನೆಗಳನ್ನು ಉನ್ನತ ಅಧಿಕಾರಿಗಳ ಮೂಲಕ ಮೆಚ್ಚಲಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ಹಾಡುಗಾರಿಕೆ, ನುಡಿಸುವಿಕೆ, ನೃತ್ಯ ಇತ್ಯಾದಿಗಳಂತಹ ಯಾವುದೇ ರೀತಿಯ ಸೃಜನಶೀಲ ಕಾರ್ಯಗಳಲ್ಲಿ ತೊಡಗಿರುವಂತಹ ಜನರು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಪಡೆಯಬಹುದು. ಈ ರಾಶಿಚಕ್ರದ ಉದ್ಯಮಿಗಳು ಈ ಸಮಯದಲ್ಲಿ ಪ್ರಯೋಜನ ಪಡೆಯಬಹುದು

ಈ ಸಂಚಾರದ ಸಮಯದಲ್ಲಿ ಮಕರ ರಾಶಿಚಕ್ರದ ವಿವಾಹಿತ ಜನರು ತಮ್ಮ ಮಕ್ಕಳ ಬದಿಯಿಂದ ಯಾವುದಾದರು ಒಳ್ಳೆ ಸುದ್ಧಿಯನ್ನು ಪಡೆಯಬಹುದು. ಇದರಿಂದ ಅವರು ಸಂತೋಷಪಡುತ್ತಾರೆ. ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಸಹ ಈ ಸಂಚಾರವು ಲಾಭದಾಯಕವಾಗಿರುತ್ತದೆ, ವಿಶೇಷವಾಗಿ ವಿದೇಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವವರು ಪಡೆಯಲಿದ್ದಾರೆ, ಆರೋಗ್ಯದ ದೃಷ್ಟಿಯಿಂದಲೂ ಈ ಸಂಚಾರವು ಅನುಕೂಲವೆಂದು ಕಂಡುಬರುತ್ತಿದೆ ಮತ್ತು ಯಾವುದೇ ರೀತಿಯ ದೈಹಿಕ ಕಾರ್ಯ ಮಾಡುವುದು ನಿಮಗೆ ಲಾಭದಾಯಕ ಎಂದು ನಿರೀಕ್ಷಿಸಲಾಗಿದೆ.

ಪರಿಹಾರ - ಪ್ರತಿದಿನ ನಿಯಮಿತವಾಗಿ ಭಗವಂತ ಶ್ರೀ ಗಣೇಶನಿಗೆ ದೂರ್ವಾ ಹುಲ್ಲು ಅರ್ಪಿಸಿ.

  1. ಕುಂಭ

ಕುಂಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹದ ಸಂಚಾರವು ನಾಲ್ಕನೇ ಮನೆಯಲ್ಲಿರುತ್ತದೆ. ಈ ಮನೆಯಿಂದ ಸಂತೋಷ - ಸಂಪನ್ಮೂಲಗಳು, ಮನೆ ಮತ್ತು ತಾಯಿಯ ಬಗ್ಗೆ ಪರಿಗಣಿಸಲಾಗುತ್ತದೆ. ಇದು ತಾಯಿಯ ಆರೋಗ್ಯವು ಕುಸಿಯಬಹುದು ಎಂಬುದರ ಬಗ್ಗೆ ಸೂಚಿಸುತ್ತದೆ ಮತ್ತು ಈ ಕಾರಣದಿಂದ ನೀವು ಚಿಂತೆಕ್ಕೊಳಗಾಗಬಹುದು. ಕುಂಭ ರಾಶಿಚಕ್ರದ ಸ್ಥಳೀಯರಿಗೆ ಬುಧವು ಮಕ್ಕಳ ಮನೆ ಅಂದರೆ ಐದನೇ ಮನೆಯ ಮಾಲೀಕ, ಇದು ತನ್ನ ಸ್ವರಾಶಿಯಿಂದ ಹನ್ನೆರಡನೇ ಮನೆಗೆ ಸಾಗಾಣಿಸುತ್ತಿದೆ ಮತ್ತು ಈ ರಾಶಿಚಕ್ರದ ವಿವಾಹಿತ ಜನರು ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು ಎಂಬುದರ ಬಗ್ಗೆ ಇದು ಸೂಚಿಸುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳ ಏಕಾಗ್ರತೆಯ ಮೇಲು ಇದರ ಪರಿಣಾಮ ಬೀರಬಹುದು, ಪರಿಣಾಮವಾಗಿ ಶಿಕ್ಷಣದ ಕ್ಷೇತ್ರದಲ್ಲಿ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು.

ನಿಮ್ಮ ವೃತ್ತಿಪರ ಜೀವನದ ಮೇಲೆ ದೃಷ್ಟಿ ಹಾಕಿದರೆ, ಬುಧ ನಿಮ್ಮ ಎಂಟನೇ ಮನೆಯ ಮಾಲೀಕ, ಇದರ ಮೂಲಕ ಬದಲಾವಣೆ ಮತ್ತು ಇದ್ದಕ್ಕಿದ್ದಂತೆ ಸಂಭವಿಸುವ ಘಟನೆಗಳ ಬಗ್ಗೆ ತಿಳಿಯಲಾಗುತ್ತದೆ. ಇದರ ನೇರವಾದ ದೃಷ್ಟಿ ನಿಮ್ಮ ವೃತ್ತಿ ಜೀವನದ ಹತ್ತನೇ ಮ್ಮನೆಯ ಮೇಲೆ ಬೀಳುತ್ತಿದೆ. ಇದರಿಂದ ನಿಮ್ಮ ಜೀವನದಲ್ಲಿ ಕೆಲವು ಏರಿಳಿತಗಳು ಉಂಟಾಗಬಹುದು ಎಂದು ತಿಳಿಯುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಕೂಡ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಕಷ್ಟು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಇದಲ್ಲದೆ ಉನ್ನತ ಅಧಿಕಾರಿಗಳೊಂದಿಗೆ ಕೆಲವು ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ನೀವು ತೊಂದರೆಕ್ಕೊಳಗಾಗಬಹುದು. ಆದ್ದರಿಂದ ಘರ್ಷಣೆಯ ಪರಿಸ್ಥಿತಿಯನ್ನು ತಪ್ಪಿಸಿ. ಇಲ್ಲದಿದ್ದರೆ ನಿಮ್ಮ ಚಿತ್ರ ಹದಗೆಡಬಹುದು. ಈ ರಾಶಿಚಕ್ರದ ವ್ಯಾಪಾರಿಗಳು ಇದ್ದಕ್ಕಿದ್ದಂತೆ ಲಾಭ ಪಡೆಯಬಹುದು.

ಪ್ರೀತಿ ಮತ್ತು ಪ್ರಣಯಕ್ಕೆ ಬುಧ ಸಂಚಾರವು ಉತ್ತಮವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ನಮ್ಮ ಸಂಗಾತಿಯು ವೃತ್ತಿಪರ ಜೀವನದಲ್ಲಿ ಯಶಸ್ಸು ಮತ್ತು ಸಾಧನೆ ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಸಂಗಾತಿ ಸಂಪೂರ್ಣ ಬೆಂಬಲ ನೀಡುತ್ತಾರೆ.

ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ನೀವು ವಾಹನ ಚಲಾಯಿಸಿದರೆ ಈ ಸಮಯದಲ್ಲಿ ಸ್ವಲ್ಪ ಜಾಗರೂರಾಗಿರಬೇಕು, ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು. ಇದರೊಂದಿಗೆ ಎದೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ, ಶೀತ ಇತ್ಯಾದಿ ಸಮಸ್ಯೆಗಳು ಈ ಸಮಯದಲ್ಲಿ ನಿಮ್ಮನ್ನು ಕಾಡಬಹುದು. ಆದ್ದರಿಂದ ಈ ಸಮಯದಲ್ಲಿ ಅತ್ಯಂತ ತಣ್ಣನೆಯ ಆಹಾರ ಸೇವಿಸುವುದನ್ನು ತಪ್ಪಿಸಬೇಕು.

ಪರಿಹಾರ - ಪ್ರತಿ ಬುಧವಾರದ ದಿನದಂದು ವಿಷ್ಣು ಸಹಸ್ತ್ರನಾಮವನ್ನು ಪಠಿಸಿ.


ಜಾತಕದಲ್ಲಿರುವ ರಾಜ ಯೋಗದ ಎಲ್ಲ ಮಾಹಿತಿಯನ್ನು ಪಡೆಯಿರಿ
  1. ಮೀನಾ

ಮೀನಾ ರಾಶಿಚಕ್ರದ ಶತಾಳೀಯರಿಗೆ ಬುಧ ಸಂಚಾರವು ಅವರ ಮೂರನೇ ಮನೆಯಲ್ಲಿರುತ್ತದೆ. ಈ ಮನೆಯಿಂದ ನಿಮ್ಮ ಆಸೆಗಳು, ಮಹತ್ವಾಕಾಂಕ್ಷೆಗಳು, ಪ್ರಯಾಣಗಳು ಮತ್ತು ಕಿರಿಯ ಸಹೋದರ ಸಹೋದರಿಯರ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಮಹತ್ವಾಕಾಂಕ್ಷೆಗಳು ಮತ್ತು ಗುರಿಯ ಬಗ್ಗೆ ಕೇಂದ್ರೀಕರಿಸುವಿರಿ ಎಂದು ಇದು ಸೂಚಿಸುತ್ತದೆ.

ಈ ಸಂಚಾರದ ಸಮಯದಲ್ಲಿ ನಿಮ್ಮ ಸಂವಹನ ಮತ್ತು ಮಾತನಾಡುವ ಕೌಶಲ್ಯದಲ್ಲಿ ಬೆಳವಣಿಗೆಯಾಗುತ್ತದೆ, ಇದರಿಂದ ನೀವು ಅನೇಕ ಅವಕಾಶಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮದ ಮೂಲಕ ನೀವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಹ ಬಲಪಡಿಸಲು ಸಾಧ್ಯವಾಗುತ್ತದೆ. ಬುಧ ಸಂಚಾರದ ಈ ಸಮಯದಲ್ಲಿ ನಿಮ್ಮ ಸಾಹಸ ಮತ್ತು ಪರಾಕ್ರಮ ಹೆಚ್ಚಾಗುತ್ತದೆ ಈ ಕಾರಣದಿಂದಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಹ ನೀವು ಹಿಂಜರಿಯುವುದಿಲ್ಲ. ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ಮುಂದೆ ನಮ್ಮ ಚಿತ್ರವೂ ಉತ್ತಮಗೊಳ್ಳುತ್ತದೆ.

ಅಂದಹಾಗೆ ಈ ಸಂಚಾರದ ಸಮಯದಲ್ಲಿ ನೀವು ಅನೇಕ ಕೆಲಸಗಳನ್ನು ಒಂದೇ ಸಮಯದಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಬಹುದು, ಇದು ಕೆಲಸದಲ್ಲಿ ಅಸಾಮರಸ್ಯಕ್ಕೆ ಕಾರಣವಾಗಬಹುದು.

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತಾಡಿದರೆ, ಮನೆಯ ವಾತಾವರಣವು ಸೌಹಾರ್ದಯುತವಾಗಿರುತ್ತದೆ. ಈ ಸಮಯದಲ್ಲಿ ಸಹೋದರ ಸಹೋದರಿಯರ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ. ಈ ರಾಶಿಚಕ್ರದ ಸ್ಥಳೀಯರು ಇಂಟರ್ನೆಟ್ ಅಥವಾ ಸಾಮಾಜಿಕ ಮಾಧ್ಯಮಗಳಂತಹ ಸಂವಹನ ವಿಧಾನಗಳ ಮೂಲಕ ಯಾವುದೇ ಸಂತೋಷದ ಸುದ್ಧಿಯನ್ನು ಪಡೆಯಬಹುದು. ದಾಂಪತ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಲಾಭವನ್ನು ಪಡೆಯಬಹುದು. ಅವರು ವೃತ್ತಿ ಜೀವನದಲ್ಲಿ ಮುಂದುವರಿಯುತ್ತಾರೆ. ಬುಧನ ಈ ಸ್ಥಾನದಿಂದ ನಿಮ್ಮ ಸಂಬಂಧದಲ್ಲಿ ಹೊಳಪು ಬರುತ್ತದೆ.

ಪರಿಹಾರ - ಪ್ರತಿಯೊಂದು ಬುಧವಾರದಂದು ವಿಷ್ಣು ಸಹಸ್ತ್ರನಾಮ ಸ್ತ್ರೋತವನ್ನು ಪಠಿಸಿ.


ಯಂತ್ರ, ರತ್ನಕಲ್ಲು ಇತ್ಯಾದಿಗಳಿಗಾಗಿ ಭೇಟಿಸಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 750/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com