ಸೂರ್ಯ ಸಂಚಾರ ಸಿಂಹ ರಾಶಿಯಲ್ಲಿ 16 ಆಗಸ್ಟ್ ರಂದು
ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಆತ್ಮದ ಅಂಶವೆಂದು ಪರಿಗಣಿಸಲಾಗಿದೆ ಮತ್ತು ನವಗ್ರಹಗಳಲ್ಲಿ ಇದನ್ನು ರಾಜನ ಸ್ಥಾನವನ್ನು ನೀಡಲಾಗಿದೆ. ಯಾವುದೇ ಜಾತಕದಲ್ಲಿ ಸೂರ್ಯ ಬಲವಾದ ಸ್ಥಾನದಲ್ಲಿದ್ದರೆ, ಇದು ವ್ಯಕ್ತಿಗೆ ಮುನ್ನಡೆಸುವ ಸಾಮರ್ಥ್ಯವನ್ನು ನೀಡುತ್ತದೆ. ಶಕ್ತಿಯುತನನ್ನಾಗಿಸುತ್ತದೆ ಮತ್ತು ನಿರ್ವಹಣೆ ಸಂಬಂಧಿತ ಕಾರ್ಯಗಳಲ್ಲಿ ದಕ್ಷತೆಯನ್ನು ಒದಗಿಸುತ್ತದೆ. ಈ ಸೂರ್ಯ ಗ್ರಹದ ಸಂಚಾರವು 16 ಆಗಸ್ಟ್ 2020 ರಂದು ತನ್ನದೇ ಸ್ವರಾಶಿಯಲ್ಲಿ ಆಗಲಿದೆ.
ಯಾವುದೇ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ. ನಿವಾರಣೆಗಾಗಿ ಜ್ಯೋತಿಷಿಯೊಂದಿಗೆ ಪ್ರಶ್ನೆ ಕೇಳಿ
ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರದ ದಿನವನ್ನು ಸಿಂಹ ಸಂಕ್ರಾಂತಿ ಎಂದು ಸಹ ಕರೆಯಲಾಗುತ್ತದೆ. ಸೂರ್ಯ ಸಂಕ್ರಾಂತಿಯ ದಿನವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ದಿನದಂದು ಭಕ್ತರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ ಮತ್ತು ದಾನ - ಪುಣ್ಯ ಮಾಡುತ್ತಾರೆ. ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರವು 16 ಆಗಸ್ಟ್ ರಂದು 18:56 ಗಂಟೆಗೆ ಸಂಭವಿಸಲಿದೆ. ಈ ರಾಶಿಯಲ್ಲಿ ಇದು 16 ಸೆಪ್ಟೆಂಬರ್ 2020, 18:52 ನಿಮಿಷದ ವರೆಗೆ ಇರಲಿದೆ. ಸೂರ್ಯನ ಸಂಚಾರದ ಸಮಯದಲ್ಲಿ ಎಲ್ಲಾ ರಾಶಿಚಕ್ರದ ಸ್ಥಳೀಯರು ವಿವಿಧ ಫಲಿತಾಂಶಗಳನ್ನು ಪಡೆಯುತ್ತಾರೆ. ಸಿಂಹ ರಾಶಿಯಲ್ಲಿ ಸೃಯನ ಸಂಚಾರವು ನಿಮಗಾಗಿ ಹೇಗೆ ಫಲಿತಾಂಶಗಳನ್ನು ತರುತ್ತದೆ ಎಂಬುದನ್ನು ತೊಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ತಿಳಿಯಿರಿ ನಿಮ್ಮ ಚಂದ್ರ ರಾಶಿ
Read Here In English: Sun Transit in Leo
- ಮೇಷ ರಾಶಿ
ಗ್ರಹಗಳ ರಾಜ ಸೂರ್ಯನ ಸಂಚಾರವು ಮೇಷ ರಾಶಿಚಕ್ರದ ಐದನೇ ಮನೆಯಲ್ಲಾಗುತ್ತದೆ. ಈ ಮನೆಯನ್ನು ಮಕ್ಕಳು, ಪ್ರೀತಿ, ಶಿಕ್ಷಣ, ಸ್ಥಾನ, ಪ್ರತಿಷ್ಠೆ ಇತ್ಯಾದಿಗಳ ಮನೆಯೆಂದು ಪರಿಗಣಿಸಲಾಗಿದೆ. ಈ ಮನೆಯಲ್ಲಿ ಸೂರ್ಯನ ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ ಜೇವನದಲ್ಲಿ ಕೆಲವು ಬಿಕ್ಕಟ್ಟುಗಳು ಬರಬಹುದು. ನಿಮ್ಮ ಪ್ರೇಮಿ ನಿಮ್ಮಿಂದ ಸಾಕಷ್ಟು ನಿರೀಕ್ಷಿಸುತ್ತಾರೆ ಮತ್ತು ಅವರ ಪ್ರತಿಯೊಂದು ನಿರೀಕ್ಷೆಯನ್ನು ಪೂರೈಸಲು ನಿಮಗೆ ಸಾಧ್ಯವಾಗುವುದಿಲ್ಲ, ಈ ಕಾರಣದಿಂದಾಗಿ ಬಿರುಕು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಸುತ್ತು ಭರವಸೆಗಳನ್ನು ತಪ್ಪಿಸಬೇಕು. ಸಣ್ಣ ಪುಟ್ಟ ವಿಷಯಗಳನ್ನು ನಿರ್ಲಕ್ಷಿಸುವುದು ನಿಮಗೆ ಉತ್ತಮವಾಗಿರುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಸೂರ್ಯನ ಐದನೇ ಮನೆಯಲ್ಲಿನ ಸ್ಥಾನವು ಪ್ರಯೋಜನಕಾರಿಯಾಗುತ್ತದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರೆ, ಅದರಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ದಾಂಪತ್ಯ ಜೀವನವು ಸಾಮಾನ್ಯವಾಗಿರುತ್ತದೆ ಆದರೆ ಮಕ್ಕಳ ಬದಿಯಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು. ಉದ್ಯೋಗದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಕೆಲಸದ ಸ್ಥಳದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು ಪ್ರತಿಯೊಂದು ಕೆಲಸವನ್ನು ಬಹಳ ಎಚ್ಚರದಿಂದ ಮಾಡಬೇಕು ಇಲ್ಲದಿದ್ದರೆ ಪ್ರಶ್ನೆಗಳ ವಲಯದಲ್ಲಿ ಸಿಲುಕಿಕೊಳ್ಳಬಹುದು. ಕಚೇರಿಯಲ್ಲಿ ನಡೆಯುವ ರಾಜಕಾರಣದಿಂದ ನಿಮ್ಮನ್ನು ದೂರವಿಡಿ. ವ್ಯಾಪಾರಸ್ಥರಿಗೆ ಈ ಸಂಚಾರ ಶುಭವಾಗಿರುತ್ತದೆ. ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಚಿಸುತ್ತಿದ್ದರೆ, ಈ ಸಮಯ ಅನುಕೂಲಕರವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಈ ಸಾಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಪರಿಹಾರ - ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ನಿಯಮಿತವಾಗಿ ಸೂರ್ಯ ದೇವರಿಗೆ ನೀರು ಅರ್ಪಿಸಿ.
- ವೃಷಭ ರಾಶಿ
ಸೂರ್ಯನ ಸಂಚಾರವು ವೃಷಭ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯನ್ನು ಸಂತೋಷ, ತಾಯಿ, ವಾಹನ, ಭೂಮಿ, ವಸತಿ ಇತ್ಯಾದಿಗಳ ಮನೆಯೆಂದು ಪರಿಗಣಿಸಲಾಗಿದೆ. ಸೂರ್ಯ ದೇವ ನಿಮ್ಮ ನಾಲ್ಕನೇ ಮನೆಯಲ್ಲಿರುವುದು ನಿಮ್ಮ ತಾಯಿಗೆ ಕಷ್ಟ ನೀಡಬಹುದು. ಈ ಸಮಯದಲ್ಲಿ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ನೀವು ಅತಿಯಾದ ಮಾನಸಿಕ ಪರಿಶ್ರಮವನ್ನು ಮಾಡಿದರೆ, ಸಾಕಷ್ಟು ನಿದ್ರೆ ಪಡೆಯಿರಿ, ಅದು ನಿಮ್ಮ ಅನೇಕ ರೋಗಗಳನ್ನು ಗುಣಪಡಿಸುತ್ತದೆ. ನಿಮ್ಮ ತಾಯಿಯೊಂದಿಗೆ ಸಮಯವನ್ನು ಕಳೆಯಿರಿ ಮತ್ತು ಅವರ ಮನಸ್ಸಿನ ಸಮಸ್ಯೆಗಳನ್ನು ತೆಗೆದುಹಾಕಲು ಪ್ರಯತ್ನಿಸಿ. ಈ ರಾಶಿಚಕ್ರದ ಕೆಲವು ಜನರು ಸೂರ್ಯ ಸಂಚಾರದ ಈ ಸಮಯದಲ್ಲಿ ಸರ್ಕಾರಿ ಮನೆ ಅಥವಾ ವಾಹನವನ್ನು ಪಡೆಯಬಹುದು. ಈ ಸಂಚಾರದ ಅವಧಿಯಲ್ಲಿ ಮನಸ್ಸಿನಲ್ಲಿ ತೃಪ್ತಿಯ ಭಾವನೆ ಇರುತ್ತದೆ ಮತ್ತು ನೀವು ಇಷ್ಟಪಡುವ ಕೆಲಸವನ್ನು ನೀವು ಮಾಡುತ್ತೀರಿ. ನೀವು ಜನರನ್ನು ಸಾಧ್ಯವಾಡಷ್ಟು ಕಡಿಮೆ ಭೇಟಿಯಾಗುತ್ತೀರಿ. ನಿಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯ ನಿಮಗೆ ಉತ್ತಮವಾಗಿರುತ್ತದೆ. ಸೂರ್ಯ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಜೀವನ ಸಂಗಾತಿ ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ, ಅವರು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆಯೂ ಇದೆ. ಇದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಪೂರ್ಣ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಮುಂದುವರಿಯಬೇಕು. ಈ ಸಮಯದಲ್ಲಿ ಸ್ನೇಹಿತರ ಹೆಚ್ಚು ಸಹವಾಸವನ್ನು ತಪ್ಪಿಸಿದರೆ ನಿಮಗೆ ಒಳ್ಳೆಯದು.
ಪರಿಹಾರ - ಸೂರ್ಯ ದೇವರನ್ನು ಮೆಚ್ಚಿಸಲು ತಂದೆ ಅಥವಾ ತಂದೆಯಂತಹ ಜನರ ಆಶೀರ್ವಾದವನ್ನು ಪಡೆಯಿರಿ.
- ಮಿಥುನ ರಾಶಿ
ಬುಧನ ಅಧಿಪತ್ಯದ ಮಿಥುನ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಯಲ್ಲಿ ಸೂರ್ಯನ ಸಂಚಾರವು ಸಂಭವಿಸಲಿದೆ. ಈ ಮನೆಯ ಮೂಲಕ ಕಿರಿಯ ಸಹಿದಾರ ಸಹೋದರಿ, ಸಂಬಂಧಿಕರು, ಲೇಖನ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ರಾಶಿಚಕ್ರ ಸ್ಥಳೀಯರು ಈ ಸಮಯದಲ್ಲಿ ಸರ್ಕಾರದಿಂದ ಲಾಭವನ್ನು ಪಡೆಯುತ್ತಾರೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದರೆ, ಯಶಸ್ವಿಯಾಗುವ ಪ್ರಬಲ ಸಾಧ್ಯತೆ ಇದೆ. ಕುಟುಂಬ ಜೀವನವು ಉತ್ತಮವಾಗಿರುತ್ತದೆ ಆದರೆ ನೀವು ನಿಮ್ಮ ಕೋಪವನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲದಿದ್ದರೆ ಕುಟುಂಬದ ಸದಸ್ಯರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಈ ಸಮಯದಲ್ಲಿ ಸಾಮಾಜಿಕ ಮಟ್ಟದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ ಮತ್ತು ಜನರಿಗೆ ಸಹಾಯ ಮಾಡಲು ಮುಂದೆ ಬರುತ್ತಿರಿ. ನೀವು ರಾಜಕಾರಣದಲ್ಲಿದ್ದರೆ, ನಿಮ್ಮ ಧ್ವನಿಯ ಮೂಲಕ ಜನರ ಮೇಲೆ ಪರಿಣಾಮ ಬೀರುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಸಹೋದರ ಸಹೋದರಿಯರ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ಏಕೆಂದರೆ ಅವರು ರೋಗಕ್ಕೆ ಒಳಗಾಗುವ ಸಾಧ್ಯತೆ ಇದೆ. ಸಾಮಾಜಿಕ ಮಾಧ್ಯಮ ಅಥವಾ ಲೇಖನಕ್ಕೆ ಸಂಬಂಧಿಸಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನೀವು ಚಲನ ಚಿತ್ರದ ಜಗತ್ತಿಗೆ ಸಂಬಂಧಿಸಿದ್ದರೆ ಮತ್ತು ಲೇಖನದ ಕೆಲಸ ಮಾಡುತ್ತಿದ್ದರೆ, ನಿಮ್ಮ ಮೂಲಕ ಬರೆದಿರುವ ಸಂಭಾಷಣೆಯನ್ನು ಈ ಸಮಯದಲ್ಲಿ ಪ್ರಶಂಸಿಸಬಹುದು.
ಪರಿಹಾರ - ಅಗತ್ಯವಿರುವವರಿಗೆ ಅವರ ಅವಶ್ಯಕ ವಸ್ತುಗಳ ದಾನ ಮಾಡಿ.
ಪ್ರತಿದಿನ ನಿಮ್ಮ ನಿಖರವಾದ ರಾಶಿ ಭವಿಷ್ಯವನ್ನು ಪಡೆಯಲು ಈಗಲೇ ಡೌನ್ ಲೋಡ್ ಮಾಡಿ ಅಸ್ಟ್ರಾಸೆಜ್ ಕುಂಡಲಿ ಆಪ್
- ಕರ್ಕ ರಾಶಿ
ಸೂರ್ಯ ಸಂಚಾರವು ಕರ್ಕ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯ ಮೂಲಕ ನಿಮ್ಮ ಧ್ವನಿ, ಸಂಪತ್ತು, ಕುಟುಂಬ, ಆಹಾರ, ಕಲ್ಪನೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಸೂರ್ಯನ ಸಂಚಾರವು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಶುಭ ಫಲಪ್ರದವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಕುಟುಂಬ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಮನೆಯ ಸದಸ್ಯರೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯುವಿರಿ. ಈ ಸಮಯದಲ್ಲಿ ಕುಟುಂಬದ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುವುದು ನಿಮ್ಮ ಆದ್ಯತೆಯಾಗಿರುತ್ತದೆ. ಆರ್ಥಿಕ ಬಾಗದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಉತ್ತಮ ಬದಲಾವಣೆಗಳು ಉಂಟಾಗುತ್ತವೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು ಅಥವಾ ಮನೆಯ ಒಬ್ಬ ಸದಸ್ಯರು ಉದ್ಯೋಗ ಪಡೆಯುವ ಕಾರಣದಿಂದಾಗಿ ನಿಮ್ಮ ಹಣಕಾಸಿನ ಹೊರೆ ಕಡಿಯಾಗಬಹುದು. ಈ ರಾಶಿಚಕ್ರದ ಸ್ಥಳೀಯರು ಹಣಕಾಸಿನ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ನೀವು ಯಾವುದೇ ರೀತಿಯ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಈ ಸಮಯ ಅದಕ್ಕಾಗಿ ಉತ್ತಮವಾಗಿದೆ. ಈ ಅವಧಿಯಲ್ಲಿ ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗಬಹುದು. ಬಹುಶಃ ನಿಮ್ಮ ಮದುವೆಯಾಗಬಹುದು ಅಥವಾ ನಿಮ್ಮ ಮದುವೆಯಾಗಿದ್ದರೆ, ನಿಮ್ಮ ಜೀವನದಲ್ಲಿ ಹೊಸ ಅತಿಥಿ ಬರಬಹುದು. ಈ ಸಂಚಾರದ ಸಮಯದಲ್ಲಿ ಉತ್ತಮ ಆಹಾರವನ್ನು ತಿನ್ನಲು ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಆದಾಗ್ಯೂ ಸೂರ್ಯನನ್ನು ಉರಿಯುತ್ತಿರುವ ಗ್ರಹವೆಂದು ಪರಿಗಣಿಸಲಾಗಿದೆ ಆದ್ದರಿಂದ ನಿಮ್ಮಲ್ಲಿ ಹೆಚ್ಚುವರಿ ಅಹಂಕಾರವನ್ನು ಕಾಣಲಾಗುತ್ತದೆ. ನೀವು ಭೂಮಿಯೊಂದಿಗೆ ಸಂಪರ್ಕವನ್ನು ಹೊಂದಿದ್ದು ಮುಂದುವರಿದರೆ, ಈ ಸಂಚಾರವು ಸಂಪೂರ್ಣ ರೀತಿಯಿಂದ ನಿಮಗೆ ಶುಭವಾಗಿರುತ್ತದೆ.
ಪರಿಹಾರ - ಹಸುವಿಗೆ ಗೋಧಿ ಹಿಟ್ಟಿನ ರೊಟ್ಟಿಯನ್ನು ತಿನ್ನಿಸಿ.
-
ಸಿಂಹ ರಾಶಿ
ಸೂರ್ಯ ದೇವರ ಸಂಚಾರವು ಸಿಂಹ ರಾಶಿಚಕ್ರದ ಸ್ಥಳೀಯರ ಮೊದಲನೇ ಅಂದರೆ ನಿಮ್ಮ ಲಗ್ನದ ಮನೆಯಲ್ಲಿ ಸಂಭವಿಸಲಿದೆ. ಲಗ್ನದ ಮನೆಯ ಮೂಲಕ ನಿಮ್ಮ ವ್ಯಕ್ತಿತ್ವ, ಅರೋಗ್ಯ, ಚಿತ್ರ, ಬುದ್ಧಿ ಮತ್ತು ಅದೃಷ್ಟದ ಬಗ್ಗೆ ಪರಿಗಣಿಸಲಾಗುತ್ತದೆ. ಸೂರ್ಯನ ಸಂಚಾರದ ಪರಿಣಾಮದಿಂದಾಗಿ ಮುನ್ನಡೆಸುವ ನಿಮ್ಮ ಸಾಮರ್ಥ್ಯವು ಹೆಚ್ಚಾಗುತ್ತದೆ. ನೀವು ಉನ್ನತ ಸ್ಥಾನದಲ್ಲಿದ್ದರೆ, ನಿಮ್ಮ ಕೆಲಸ ಮಾಡುವ ರೀತಿಯಿಂದ ನಿಮ್ಮ ಅಧೀನದಲ್ಲಿ ಕೆಲಸ ಮಾಡುವಜನರ ಮೇಲೆ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನಿಮ್ಮ ನಿರ್ವಹಣಾ ಸಾಮರ್ಥ್ಯವು ಸುಧಾರಿಸುತ್ತದೆ. ಈ ರಾಶಿಚಕ್ರದ ಕೆಲವು ಸ್ಥಳೀಯರಿಗೆ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನ ಸಿಗಬಹುದು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮನ್ನು ಶಕ್ತಿಯುತವಾಗಿ ಅನುಭವಿಸುತ್ತೀರಿ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ಹೊಸ ಕೆಲಸವನ್ನು ಕಲಿಯಲು ಪ್ರಯತ್ನಿಸುತ್ತೀರಿ. ನಿಮ್ಮ ಚಟುವಟಿಕೆ ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಸಾಮಾಜಿಕ ಮಟ್ಟದಲ್ಲಿ ಜನರು ನಿಮ್ಮ ನಡವಳಿಕೆಯಿಂದ ಪ್ರಭಾವಿತರಾಗುತ್ತಾರೆ. ಯಾವುದಾದರು ಕೆಲಸ ಸಿಲುಕಿಕೊಂಡಿದ್ದಾರೆ, ಈ ಸಮಯದಲ್ಲಿ ಅದನ್ನು ಸಹ ನೀವು ಪೂರ್ಣಗೊಳಿಸಬಹುದು. ಆದಾಗ್ಯೂ, ಸೂರ್ಯನ ಈ ಸಂಚಾರವು ಈ ರಾಶಿಚಕ್ರದ ಕೆಲವು ಜನರಲ್ಲಿ ಕೋಪವನ್ನು ಸಹ ತುಂಬಬಹುದು. ನೀವು ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ಅತಿಯಾಗಿ ಕೋಪಗೊಳ್ಳಬಹುದು. ನಿಮ್ಮ ಮಾತುಗಳನ್ನು ನಿಮ್ಮ ಕುಟುಂಬದ ಸದಸ್ಯರ ಮೇಲೆ ಒತ್ತಾಯಿಸಲು ಸಹ ನೀವು ಪ್ರಯತ್ನಿಸಬಹುದು, ಹಾಗೆ ಮಾಡುವುದು ಸರಿಯಲ್ಲ. ಇದರಿಂದ ಸಂಬಂಧದಲ್ಲಿ ಒತ್ತಡ ಉಂಟಾಗಬಹುದು. ಆದ್ದರಿಂದ ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಮನಸ್ಸಿನ ಶಾಂತಿಗಾಗಿ ಧ್ಯಾನವನ್ನು ಆಶ್ರಯಿಸುವುದು ಉತ್ತಮವಾಗಿರುತ್ತದೆ.
ಪರಿಹಾರ - ಭಾನುವಾರದಂದು ಸೂರ್ಯ ಬೀಜ ಮಂತ್ರವನ್ನು ಜಪಿಸಿ.
- ಕನ್ಯಾ ರಾಶಿ
ಸೂರ್ಯ ಸಂಚಾರವು ಕನ್ಯಾ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯ ಮೂಲಕ ವಿದೇಶ, ವೆಚ್ಚ, ದಾನ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಾಚಾರವು ನಿಮಗೆ ಕೆಲವು ಸವಾಲುಗಳನ್ನು ತರಬಹುದು. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀವು ಮನೆಯಿಂದ ಹೊರಗೆ ವಾಸಿಸುತ್ತಿದ್ದರೆ, ಹುರಿದ ಆಹಾರಗಳು ಮತ್ತು ಜಂಕ್ ಫುಡ್ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಮ್ಮನ್ನು ಆರೋಗ್ಯಕರವಾಗಿರಿಸಲು ನೀವು ವ್ಯಾಯಾಮ ಮಾಡಬೇಕು ಮತ್ತು ಸಾಧ್ಯವಾಡಷ್ಟು ನೀರು ಕುಡಿಯಬೇಕು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗೆ ನಿಮ್ಮನ್ನು ಕಾಡಬಹುದು, ಧೂಳಿನ ಶಾಲೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ. ನಿಮ್ಮ ಆರ್ಥಿಕ ಭಾಗದ ಬಗ್ಗೆಯೂ ನೀವು ತುಂಬಾ ಎಚ್ಚರದಿಂದಿರಬೇಕು. ಅನಗತ್ಯ ವೆಚ್ಚಗಳು ನಿಮಗೆ ತೊಂದರೆ ಉಂಟುಮಾಡಬಹುದು. ಉತ್ತಮ ಬಜೆಟ್ ಯೋಜನೆಯನ್ನು ತಯಾರಿಸಿ ಮತ್ತು ಸಂಗ್ರಹಿಸಿರುವ ಹಣವನ್ನು ಖರ್ಚು ಮಾಡದಿರಲು ಪ್ರಯತ್ನಿಸಿ. ವಾಹನವನ್ನು ಚಲಾಯಿಸುವ ಸಮಯದಲ್ಲಿ ಸಂಚಾರ ನಿಯಮಗಳನ್ನು ಅನುಸರಿಸಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು.ಈ ಸಮಯದಲ್ಲಿ ಸೋಮಾರಿತನವನ್ನು ತ್ಯಜಿಸಿ ನೀವು ಸಕ್ರಿಯರಾಗಿರುವ ಅಗತ್ಯವಿದೆ. ವಿದೇಶಿ ಕಂಪೆನಿಗಳಲ್ಲಿ ಕೆಲಸದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ಅಥವಾ ವ್ಯಾಪಾರದಲ್ಲಿ ತೊಡಗಿರುವವರಿಗೆ ಈ ಸಂಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ. ವ್ಯಾಪಾರ ಅಥವಾ ಉದ್ಯೋಗದಲ್ಲಿ ನೀವು ಬಡ್ತಿ ಪಡೆಯಬಹುದು. ಉನ್ನತ ಶಿಕ್ಷಣವನ್ನು ಗಳಿಸಲು ವಿದೇಶಕ್ಕೆ ಹೋಗಲು ಬಯಸುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳ ಕನಸು ಸೂರ್ಯ ಸಂಚಾರದ ಈ ಸಮಯದಲ್ಲಿ ಈಡೇರಬಹುದು.
ಪರಿಹಾರ - ಪ್ರತಿದಿನ ಬೆಳಿಗ್ಗೆ ಬರಿಗಣ್ಣಿನಿಂದ ಸೂರ್ಯನನ್ನು ನೋಡಿ.
- ತುಲಾ ರಾಶಿ
ಶುಕ್ರನ ಸ್ವಾಮಿತ್ವದ ತುಲಾ ರಾಶಿಚಕ್ರದ ಸ್ಥಳೀಯರ ಲಾಭದ ಅಂದರೆ ಹನ್ನೊಂದನೇ ಮನೆಯಲ್ಲಿ ಸೂರ್ಯ ಸಂಚಾರವು ಸಂಭವಿಸಲಿದೆ. ಈ ಮನೆಯ ಮೂಲಕ ಬಯಕೆಗಳು, ಹಿರಿಯ ಸಹೋದರ ಸಹೋದರಿ, ಆಸೆಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸ್ನೇಹಿತರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಯಾವುದಾದರು ವಿಷಯದ ಬಗ್ಗೆ ಗೊಂದಲದಲ್ಲಿದ್ದರೆ, ನಿಮ್ಮ ಸ್ನೇಹಿತರಿಂದ ಅಗತ್ಯವಾದ ಸಲಹೆಯನ್ನು ಪಡೆಯಬಹುದು. ಅದೇ ಸಮಯದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಜನರು ಕೂಡ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಹಿರಿಯ ಅಧಿಕಾರಿಗಳ ಮುಂದೆ ನಿಮ್ಮ ಚಿತ್ರವೂ ಉತ್ತಮವಾಗಿದ್ದರೆ, ಈ ಸಮಯದಲ್ಲಿ ಅದರ ಲಾಭವನ್ನು ಸಹ ನೀವು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಉದ್ಯೋಗವನ್ನು ಹುಡುಕುತ್ತಿರುವವರು ಹೊಸ ಉದ್ಯೋಗವನ್ನು ಪಡೆಯಬಹುದು. ಸೂರ್ಯನನ್ನು ತಂದೆಯ ಅಂಶದ ಗ್ರಹವೆಂದು ಸಹ ಪರಿಗಣಿಸಲಾಗಿದೆ ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ತಂದೆಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬ ಮತ್ತು ದಾಂಪತ್ಯ ಜೀವನದ ಬಗ್ಗೆ ಮಾತನಾಡಿದರೆ, ಸಮಯ ಅನುಕೂಲಕರವಾಗಿದೆ. ಆದರೆ ಸ್ವಭಾವತಃ ನೀವು ಹೆಚ್ಚು ಕೋಪವನ್ನು ಹೊಂದಿರಬಹುದು, ಇದು ನಿಮ್ಮ ಸಂಬಂಧವನ್ನು ಹದಗೆಡಿಸುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಸ್ವಭಾವದಲ್ಲಿ ನಮ್ಯತೆಯನ್ನು ತರಬೇಕಾಗುತ್ತದೆ. ಕೋಪವನ್ನು ನಿಯಂತ್ರಿಸಿದರೆ ಈ ಸಂಚಾರವು ನಿಮಗೆ ಅನೇಕ ಶುಭ ಫಲಿತಾಂಶಗಳನ್ನು ನೀಡುತ್ತದೆ.
ಪರಿಹಾರ - ಸೂರ್ಯ ಗ್ರಹವನ್ನು ಬಲಪಡಿಸಲು ಒಂದುಮುಖ ರುದ್ರಾಕ್ಷವನ್ನು ಧರಿಸಿ.
- ವೃಶ್ಚಿಕ ರಾಶಿ ಭವಿಷ್ಯ
ಸೂರ್ಯ ಸಂಚಾರವು ವೃಶ್ಚಿಕ ರಾಶಿಚಕ್ರದ ಹತ್ತನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯ ಮೂಲಕ ವ್ಯಾಪಾರ, ಕೆಲಸದ ಸ್ಥಳ, ರಾಜಕೀಯ, ಗೌರವ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರವು ನಿಮಗೆ ಶುಭವೆಂದು ಸಾಬೀತುಪಡಿಸುತ್ತದೆ. ನಿಮ್ಮ ಕೆಲಸದ ಬಗ್ಗೆ ನೀವು ನಿಷ್ಠರಾಗಿರುತ್ತೀರಿ. ಇದರಿಂದ ನಿಮ್ಮ ಅಧಿಕಾರಿಗಳು ಸಂತೋಷಪಡುತ್ತಾರೆ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ನಿಮಗೆ ನಿಯೋಜಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲವು ಜನರು ಉನ್ನತ ಸ್ಥಾನವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ತಂದೆಯೊಂದಿಗಿನ ನಿಮ್ಮ ಸಂಬಂಧದಲ್ಲಿ ಈ ಸಮಯದಲ್ಲಿ ಹೊಳಪು ಬರುತ್ತದೆ. ನಿಮ್ಮ ತಂದೆಯ ಮೂಲಕ ನೀವು ಯಾವುದೇ ಅಗತ್ಯವಾದ ಸಲಹೆಯನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ಸಂಚಾರದ ಸಮಯದಲ್ಲಿ ವ್ಯಾಪಾರಸ್ಥರು ಸಕ್ರಿಯಯರಾಗಿರುತ್ತಾರೆ ಮತ್ತು ತಮ್ಮ ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆ ಮಾಡುತ್ತಾರೆ. ಹಣದ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ದೀರ್ಘಕಾಲದಿಂದ ತಮ್ಮ ಸ್ವಂತ ವ್ಯಾಪಾರವನ್ನು ಆರಂಭಿಸಲು ಯೋಚಿಸುತ್ತಿರುವವರ ಕನಸು ಈ ಸಮಯದಲ್ಲಿ ಪೂರ್ಣಗೊಳ್ಳಬಹುದು. ಸಾಮಾಜಿಕ ಮಟ್ಟದಲ್ಲೂ ಸಹ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಗೌರವವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳ ಏಕಾಗ್ರತೆ ಬಲಗೊಳ್ಳುತ್ತದೆ. ಇದರಿಂದ ಕಠಿಣ ವಿಷಯಗಳನ್ನು ಸಹ ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ದೂರದೃಷ್ಟಿಯು ಸಹ ಅದ್ಭುತವಾಗಿರುತ್ತದೆ. ಭವಿಷ್ಯದ ಬಗ್ಗೆ ನೀವು ನಿಖರವಾದ ದೃಷ್ಟಿಯನ್ನು ಹೊಂದಿರುತ್ತೀರಿ, ಇದರಿಂದ ನಿಮ್ಮ ಮುಂಬರುವ ಸಮಯದಲ್ಲಿ ಕೂಡ ನೀವು ಸಂತೋಷದ ಸಮಯವನ್ನು ಕಳೆಯಬಹುದು.
ಪರಿಹಾರ - ಸೂರ್ಯ ದೇವರನ್ನು ಮೆಚ್ಚಿಸಲು ಮನೆ ಅಥವಾ ಕಚೇರಿಯಲ್ಲಿ ಸೂರ್ಯ ಯಂತ್ರವನ್ನು ಸ್ಥಾಪಿಸಿ.
- ಧನು ರಾಶಿ
ಧನು ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಸೂರ್ಯ ಸಂಚಾರವು ಸಂಭವಿಸಲಿದೆ. ಈ ಮನೆಯ ಮೂಲಕ ಅದೃಷ್ಟ, ಧರ್ಮ, ದೂರಸ್ಥ ಪ್ರಯಾಣ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಸೂರ್ಯನ ಸಿಂಹ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಈ ಸಮಯದಲ್ಲಿ ನೀವು ಯಾವ ಕೆಲಸವನ್ನು ಆರಂಭಿಸಿದರು ಅದರಲ್ಲಿ ಯಶಸ್ಸು ಪಡೆಯುತ್ತೀರಿ ಎಂದು ಸಂಪೂರ್ಣವಾಗಿ ನಿರೀಕ್ಷಿಸಲಾಗಿದೆ. ಯಾವುದೇ ಸಂಸ್ಥೆಗೆ ಸೇರಿ ತಮ್ಮ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಸಹ ಈ ಸಮಯದಲ್ಲಿ ಯಶಸ್ಸು ಪಡೆಯಬಹುದು. ಜ್ಞಾನವನ್ನು ಸಂಪಾದಿಸುವ ಸ್ವಾಭಾವಿಕ ಗುಣವು ಧನು ರಾಶಿಚಕ್ರದ ಜನರಲ್ಲಿ ಕಂಡುಬರುತ್ತದೆ, ಆದ್ದರಿಂದ ನೀವು ಸೂರ್ಯನ ಈ ಸಾಗಣೆಯ ಸಮಯದಲ್ಲಿ ಆಸಕ್ತಿದಾಯಕ ಪುಸ್ತಕಗಳನ್ನು ಓದಬಹುದು.ಆದಾಗ್ಯೂ ನೀವು ಆಧ್ಯಾತ್ಮಿಕತೆ ಮತ್ತು ಧರ್ಮದಿಂದ ದೂರವಿರಬಹುದು, ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ಜೀವನವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಉತ್ತಮ ಮಾರ್ಗದರ್ಶಕರು ಸಹ ನಿಮ್ಮ ಜೀವನದಲ್ಲಿ ಬರುತ್ತಾರೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಬಗ್ಗೆ ನೀವು ಖಂಡಿತವಾಗಿಯೂ ಚೆನ್ನಾಗಿ ಆಲೋಚಿಸಬೇಕು ಮತ್ತು ಅನುಭವಿ ವಕ್ತಿಗಳ ಸಲಹೆಯನ್ನು ಪಡೆದುಕೊಳ್ಳಬೇಕು. ನೀವು ಯೋಚಿಸದೆ ಯಾವುದೇ ಕೆಲಸವನ್ನು ಮಾಡಿದರೆ ತೊಂದರೆ ಒಳಗಾಗಬಹುದು. ಈ ಸಂಚಾರದ ಸಮಯದಲ್ಲಿ ನೀವು ಮನೆಯ ಹಿರಿಯ ಸದಸ್ಯರ ಸೇವೆ ಮಾಡಬೇಕು ಮತ್ತು ಅವರೊಂದಿಗೆ ಸಮಯವನ್ನು ಕಳೆಯಬೇಕು. ಮನಸ್ಸಿನ ಶಾಂತಿಗಾಗಿ ಯೋಧ ಧ್ಯಾನವನ್ನು ಆಶ್ರಯಿಸುವುದು ನಿಮಗೆ ಶುಭವಾಗಿರುತ್ತದೆ.
ಪರಿಹಾರ - ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುವುದು ನಿಮಗೆ ಶುಭಕರ.
- ಮಕರ ರಾಶಿ
ಸೂರ್ಯ ಸಂಚಾರವು ಮಕರ ರಾಶಿಚಕ್ರದ ಎಂಟನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯ ಮೂಲಕ ನಿಮ್ಮ ಜೀವನದಲ್ಲಿ ಬರಲಾಗುವ ಸಮಸ್ಯೆಗಳು, ಚಿಂತೆ, ಅಡೆತಡೆ, ಶತ್ರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಸೂರ್ಯ ಗ್ರಹದ ಸಂಚಾರವು ನಿಮಗೆ ಬಹಳ ಉತ್ತಮವೆಂದು ಹೇಳಲಾಗುವುದಿಲ್ಲ, ಏಕೆಂದರೆ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಜೇವನದಲ್ಲಿ ಸವಾಲುಗಳು ಉಂಟಾಗಬಹುದು. ನೀವು ಬಯಸದಿದ್ದರು ಸಹ ಕೆಲಸದ ಸ್ಥಳ ಅಥವಾ ನಿವಾಸವನ್ನು ನೀವು ಬದಲಾಯಿಸಬೇಕಾಗಬಹುದು. ಇದು ಜೀವನದಲ್ಲಿ ಕೋಲಾಹಲವನ್ನು ಉಂಟುಮಾಡುತ್ತದೆ. ಬದಲಾವಣೆಯ ಪ್ರಕಾರ ನೀವು ನಿಮ್ಮನ್ನು ಅನುಸರಿಸಿಕೊಂಡರೆ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ ಆದರೆ ನೀವು ಹೊಂದಿಕೊಳ್ಳದಿದ್ದರೆ ನಿಮಗೆ ಬಿಕ್ಕಟ್ಟುಗಳು ಉಂಟಾಗಬಹುದು. ಈ ರಾಶಿಚಕ್ರದ ವಿವಾಹಿತರಿಗೆ ಈ ಸಮಯದಲ್ಲಿ ಅತ್ತೆ ಮನೆಯ ಕಡೆಯಿಂದ ಲಾಭವಾಗಬಹುದು.
ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ಜೇವನ ಸಂಗಾತಿ ಕೂಡ ಅವರ ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯಬಹುದು. ಪ್ರಯಾಣಿಸುವ ಸಮಯದಲ್ಲಿ ನಿಮ್ಮ ವಸ್ತುಗಳ ಬಗ್ಗೆ ಗಮನ ಹರಿಸಿ ಏಕೆಂದರೆ ಕಳ್ಳತನದ ಸಾಧ್ಯತೆ ಇದೆ. ಈ ರಾಶಿಚಕ್ರದ ಸ್ಥಳೀಯರು ಈ ಸಾಚಾರದ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕೂಡ ಜಾಗರೂಕರಾಗಿರಬೇಕು, ಕಣ್ಣು ಮತ್ತು ಹೊಟ್ಟೆಗೆ ಸಮಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು. ವ್ಯಾಯಾಮ ಅಥವಾ ಯೋಗಕ್ಕೆ ನೀವು ನಿಮ್ಮ ಜೀವನದಲ್ಲಿ ಸ್ಥಳವನ್ನು ನೀಡಿದರೆ, ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗಬಹುದು. ಈ ಸಾಚಾರದ ಸಮಯದಲ್ಲಿ ಮಸಾಲೆಯುಕ್ತ ಅಥವಾ ಜುನ್ಥ್ ಫುಡ್ ಸೇವಿಸುವುದನ್ನು ತಪ್ಪಿಸಿ.
ಪರಿಹಾರ - ಸೂರ್ಯ ದೇವರನ್ನು ಮೆಚ್ಚಿಸಲು ಮಾಣಿಕ್ಯ ರತ್ನವನ್ನು ಧರಿಸಿ
- ಕುಂಭ ರಾಶಿ
ಸೂರ್ಯ ಸಂಚಾರವು ಕುಂಭ ರಾಶಿಚಕ್ರದ ಏಳನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯ ಮೂಲಕ ನಿಮ್ಮ ಜೀವನ ಸಂಗಾತಿ ಮತ್ತು ಜೀವನದಲ್ಲಿ ಸಂಭವಿಸಲಾಗುವ ಪಾಲುದಾರಿಕೆಯ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ಕುಟುಂಬದಲ್ಲಿನ ನಿಮ್ಮ ಸ್ಥಾನವು ಹದಗೆಡಬಹುದು. ಇತರರಿಗೆ ನಿರ್ದೇಶಿಸುವ ನಿಮ್ಮ ವರ್ತನೆ ನಿಮ್ಮನ್ನು ಜನರಿಂದ ದೂರವಿರುಸುತ್ತದೆ. ಇದಲ್ಲದೆ ದಾಂಪತ್ಯ ಜೀವನದಲ್ಲಿ ಕೂಡ ಜೀವನ ಸಂಗಾತಿಯೊಂದಿಗೆ ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಒಂದೇ ವಿಷಯದ ಬಗ್ಗೆ ನೀವಿಬ್ಬರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ನಡುವೆ ಜಗಳವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಪ್ರಯಾಣಗಳು ನಿಮಗೆ ತುಂಬಾ ಆಹ್ಲಾದಕರವಾಗಿರುವುದಿಲ್ಲ. ಆದ್ದರಿಂದ ಪ್ರಯಾಣಗಳನ್ನು ತಪ್ಪಿಸಿ ಮತ್ತು ಅಗತ್ಯವಿದ್ದರೆ ಈ ಸಮಯದಲ್ಲಿ ನಿಮ್ಮ ಅರೋಗ್ಯ ಮತ್ತು ವಸ್ತುಗಳನ್ನು ನೋಡಿಕೊಳ್ಳಿ. ಈ ಸಂಚಾರದ ಸಮಯದಲ್ಲಿ ಸಾಮಾಜಿಕ ಮಟ್ಟದಲ್ಲಿ ಕೂಡ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ರಾಜಕೀಯದಲ್ಲಿದ್ದರೆ ಜನರು ನಿಮ್ಮ ಮಾತುಗಳಿಂದ ಪ್ರಭಾವಿತರುಗುತ್ತಾರೆ ಮತ್ತು ನಿಮ್ಮ ಪರವಾಗಿ ಬರುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ರಾಶಿಚಕ್ರದ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವವರು ಅಥವಾ ಹೊಸ ವ್ಯಾಪಾರವನ್ನು ರಂಭಿಸಲು ಪ್ರಯತ್ನಿಸುತ್ತಿರುವವರು ಈ ಸಮಯದಲ್ಲಿ ಯಶಸ್ಸು ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ಈ ಸಂಚಾರವು ಪ್ರತಿಕೂಲವಾಗಿರುತ್ತದೆ ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸರಿಯಾದ ದಿನಚರಿಯನ್ನು ಅನುಸರಿಸಿ ಮತ್ತು ಸಾಕಷ್ಟು ದ್ರವಗಳನ್ನು ಸೇವಿಸಿ ಇದರಿಂದ ಅನೇಕ ರೋಗಗಳನ್ನು ತಪ್ಪಿಸಬಹುದು.
ಪರಿಹಾರ - ಪ್ರತಿದಿನ ಸೂರ್ಯೋದಯದಯಕ್ಕಿಂತ ಮುಂಚೆ ಎದ್ದು ಸೂರ್ಯ ಬೀಜ ಮಂತ್ರವನ್ನು ಜಪಿಸಿ.
ವರ್ಣರಂಜಿತ ಬೃಹತ್ ಕುಂಡಲಿ ನಿಮ್ಮ ಆಹ್ಲಾದಕರ ಜೀವನಕ್ಕೆ ಪ್ರಮುಖವಾಗಿದೆ
- ಮೀನಾ ರಾಶಿ
ಸೂರ್ಯ ಸಂಚಾರವು ಮೀನಾ ರಾಶಿಚಕ್ರದ ಆರನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯ ಮೂಲಕ ನಿಮ್ಮ ಶತ್ರು, ರೋಗ, ತಾಯಿಯ ಕಡೆಯ ಜನರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರವು ಮೀನಾ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಪೋಷಕರ ಗೌರವ ಹೆಚ್ಚಾಗುತ್ತದೆ. ನ್ಯಾಯಾಲಯ ಪ್ರಕರಣದ ಯಾವುದೇ ವಿಷಯದ ಬಗ್ಗೆ ತೊಂದರೆಗೀಡಾಗಿದ್ದರೆ, ಈ ಸಮಯದಲ್ಲಿ ಅದರಲ್ಲಿ ಯಶಸ್ಸು ಪಡೆಯುವ ಕಾರಣದಿಂದಾಗಿ ನಿಮಗೆ ಮಾನಸಿಕ ಶಾಂತಿ ಸಿಗಬಹುದು. ಉದ್ಯೋಗ ವೃತ್ತಿಗೆ ಸಂಬಂಧಿಸಿದ ಈ ರಾಶಿಚಕ್ರದ ಜನರು ಉದ್ಯೋಗವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ, ಈ ಸಮಯದಲ್ಲಿ ಅವರು ಉತ್ತಮ ಕೊಂಪೆನಿಯಿಂದ ಪ್ರಸ್ತಾಪವನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ನಿರುದ್ಯೋಗಿಗಳಿಗೆ ಸಹ ಉದ್ಯೋಗ ಸಿಗುವ ನಿರೀಕ್ಷೆಯಿದೆ. ಆರನೇ ಮನೆಯಲ್ಲಿ ಸೂರ್ಯನ ಸ್ಥಾನವು ಈ ಸಮಯದಲ್ಲಿ ಮೀನಾ ರಾಶಿಚಕ್ರದ ಜನರಲ್ಲಿ ಚೈತನ್ಯವನ್ನು ತುಂಬುತ್ತದೆ ಮತ್ತು ನೀವು ಪ್ರತಿಯೊಂದು ಕೆಲಸವನ್ನು ಪೂರ್ಣ ಉತ್ಸಾಹದಿಂದ ಮಾಡುತ್ತೀರಿ. ಸಮಯದ ಮಹತ್ವವನ್ನು ಅರಿತುಕೊಂಡು ನೀವು ಪ್ರತಿ ಕ್ಷಣವನ್ನು ಬಳಸಲು ಬಯಸುವಿರಿ. ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಇಲ್ಲದಿದ್ದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ದೀರ್ಘಕಾಲ ಕುಳಿತುಕೊಳ್ಳಬೇಕಾಗದಂತಹ ಕೆಲಸವನ್ನು ಮಾಡುತ್ತಿದ್ದರೆ, ಖಂಡಿತವಾಗಿಯೂ ನೀವು ವ್ಯಾಯಾಮ ಮಾಡಬೇಕು. ಇದರಿಂದ ಬೆನ್ನಿಗೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ಉಂಟಾಗುವುದಿಲ್ಲ.
ಪರಿಹಾರ - ಭಾನುವಾರದಂದು ಗೋಧಿಯ ದಾನ ಮಾಡಿ.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Horoscope 2023
- राशिफल 2023
- Calendar 2023
- Holidays 2023
- Chinese Horoscope 2023
- Education Horoscope 2023
- Purnima 2023
- Amavasya 2023
- Shubh Muhurat 2023
- Marriage Muhurat 2023
- Chinese Calendar 2023
- Bank Holidays 2023
- राशि भविष्य 2023 - Rashi Bhavishya 2023 Marathi
- ராசி பலன் 2023 - Rasi Palan 2023 Tamil
- వార్షిక రాశి ఫలాలు 2023 - Rasi Phalalu 2023 Telugu
- રાશિફળ 2023 - Rashifad 2023
- ജാതകം 2023 - Jathakam 2023 Malayalam
- ৰাশিফল 2023 - Rashifal 2023 Assamese
- ରାଶିଫଳ 2023 - Rashiphala 2023 Odia
- রাশিফল 2023 - Rashifol 2023 Bengali
- ವಾರ್ಷಿಕ ರಾಶಿ ಭವಿಷ್ಯ 2023 - Rashi Bhavishya 2023 Kannada