• Talk To Astrologers
  • AstroSage Brihat Horoscope
  • Ask A Question
  • Raj Yoga Report
  • Child Report

ಬುಧ ಸಂಚಾರ ತುಲಾ ರಾಶಿಯಲ್ಲಿ - Retrograde Mercury Transit in Libra in Kannada

ವ್ಯಾಪಾರ, ಬುದ್ಧಿ, ನಮ್ಮ ಧ್ವನಿ ಇತ್ಯಾದಿಗಳ ಅಂಶವಾದ ಬುಧ ದೇವ ತುಲಾ ರಾಶಿಯಲ್ಲಿ ವಕ್ರನಾಗುವುದು, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಬಹಳ ಪ್ರಮುಖವಾದ ಘಟನೆಯಾಗಿ ನೋಡಲಾಗುತ್ತದೆ. ವೈದಿಕ ಶಾಸ್ತ್ರದ ಪ್ರಕಾರ, ಬುಧ ಗ್ರಹವು ಪ್ರಮುಖವಾಗಿ ಬುದ್ಧಿ, ಧ್ವನಿ, ಪ್ರಜ್ಞೆ, ವ್ಯಾಪಾರ, ಅಂಕಿ ಅಂಶಗಳು, ಚರ್ಮ ಇತ್ಯಾದಿಗಳ ಅಂಶವಾಗಿದೆ ಮತ್ತು ಈ ಲಾಭಕಾರಕ ಬುಧ ಗ್ರಹವು ತನ್ನ ವಕ್ರ ಚಲನೆಯಲ್ಲಿ 14 ಅಕ್ಟೋಬರ್ 2020 ರಂದು ತುಲಾ ರಾಶಿಯಲ್ಲಿ ಬೆಳಿಗ್ಗೆ 6.00 ಗಂಟೆಗೆ ಸಾಗುತ್ತದೆ. ಇದರ ನಂತರ ಮಾರ್ಗಿಯಾಗಿ ಮತ್ತೆ 03 ನವೆಂಬರ್ 2020 ರಂದು ರಾತ್ರಿ 10 ಗಂಟೆ , 46 ನಿಮಿಷಕ್ಕೆ ವೃಶ್ಚಿಕ ರಾಶಿಯಲ್ಲಿ ಪ್ರವೇಶಿಸುತ್ತದೆ.

ಜಾತಕದಲ್ಲಿ ದೋಷವಿದೆಯೇ? ತಿಳಿಯಲು ಈಗಲೇ ಖರೀದಿಸಿ ಅಸ್ಟ್ರಾಸೆಜ್ ಬೃಹತ್ ಕುಂಡಲಿ

ವಕ್ರ ಬುಧನ ಈ ಸಂಚಾರದ ಪ್ರಭಾವವು ಅನೇಕ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಬಹಳ ಸಮಸ್ಯೆಗಳನ್ನು ತರಲಿದೆ. ಏಕೆಂದರೆ ಈ ರೀತಿಯ ಬುಧನ ಈ ವಕ್ರ ಸ್ಥಿತಿಯಲ್ಲಿ ಸಂಚಾರದ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಯಾವುದಾದರು ಒಂದು ರೀತಿಯಲ್ಲಿ ಕಂಡುಬರುತ್ತದೆ.

ವಕ್ರನ ಬುಧನ ಪರಿಣಾಮವು ನಿಮ್ಮ ರಾಶಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈಗ ತಿಳಿಯೋಣ.

Click here to read in English…

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

ಮೇಷ ರಾಶಿ

ಬುಧ ದೇವ ಮೇಷ ರಾಶಿಚಕ್ರದ ಮೂರನೇ ಮತ್ತು ಆರನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ವಕ್ರ ಸ್ಥಿತಿಯಲ್ಲಿ ಬುಧವು ನಿಮ್ಮ ಏಳನೇ ಮನೆಗೆ ಸಂಚರಿಸಲಿದೆ. ಜ್ಯೋತಿಷ್ಯ ಜಾತಕದಲ್ಲಿ ಏಳನೇ ಮನೆಯ ಮೂಲಕ ವ್ಯಕ್ತಿಯ ವೈವಾಹಿಕ ಜೀವನ, ಜೀವನ ಸಂಗಾತಿ ಮತ್ತು ಜೀವನದ ಇತರ ಕ್ಷೇತ್ರದಲ್ಲಿ ಉಂಟಾಗುವ ಪಾಲುದಾರರ ಬಗ್ಗೆ ಪರಿಗಣಿಸಲಗುತ್ತದೆ. ಏಳನೇ ಮನೆಯ ನೇರವಾದ ಸಂಬಂಧವು ವೈವಾಹಿಕ ಜೇವನದೊಂದಿಗೆ ಇದೆ, ಖಂಡಿತವಾಗಿ, ಬುಧ ಗ್ರಹದ ಈ ವಕ್ರ ಸಂಚಾರದ ಪರಿಣಾಮವು ನಿಮ್ಮ ವೈವಾಹಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ತರಲಿದೆ.

ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಸಹ ಈ ಸಮಯದಲ್ಲಿ ತಮ್ಮ ಪಾಲುದಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವ ಅಗತ್ಯವಿದೆ. ಇಲ್ಲದಿದ್ದರೆ, ವಿವಾದದ ಸಾಧ್ಯತೆ ಹೆಚ್ಚಾಗಿದೆ. ಪ್ರೇಮಿ ಶತಾಳೀಯರ ಜೀವನದಲ್ಲಿ ಹಳೆಯ ವಿಶೇಷ ಸ್ನೇಹಿತ, ಈ ವಕ್ರ ಸಂಚಾರದ ಸಮಯದಲ್ಲಿ ಮರಳಬಹುದು, ಈ ಕಾರಣದಿಂದ ನಿಮ್ಮ ಸಂಬಂಧದಲ್ಲಿ ದೂರ ಉಂಟಾಗಬಹುದು. ಆದಾಗ್ಯೂ ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗಿನ ವಿವಾದವನ್ನು ಪರಿಹರಿಸಲು ಪ್ರಯತ್ನಿಸಬೇಕು. ಅದನ್ನು ಮಾಡುವುದರಿಂದ ನೀವಿಬ್ಬರು ಇನ್ನಷ್ಟು ಪರಸ್ಪರ ನಿಕಟ ಮತ್ತು ನಿಮ್ಮ ಸಂಬಂಧವನ್ನು ಬಲಪಡಿಸುವಲ್ಲಿ ಯಶಸ್ವಿಯಾಗಬಹುದು.

ನೀವು ಮದುವೆಯಾಗಲು ಬಯಸುತ್ತಿದ್ದರೆ, ಬುಧವು ಮಾರ್ಗಿಯಾಗುವ ವರೆಗೂ ಮದುವೆಯ ದಿನಾಂಕವನ್ನು ಮುಂದೂಡಿಸಿ. ಇಲ್ಲದಿದ್ದರೆ ನೀವು ತೊಂದರೆಕ್ಕೊಳಗಾಗಬಹುದು. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರು ತಮ್ಮ ಪಾಲುದಾರರೊಂದಿಗೆ ಕುಳಿತು ವ್ಯವಹಾರದಲ್ಲಿ ಪರಸ್ಪರರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಅಗತ್ಯವಿದೆ. ಇದರಿಂದ ಇಬ್ಬರೂ ಯಾವುದೇ ಅಡೆತಡೆಯಿಲ್ಲದೆ ತಮ್ಮ ಕೆಲಸವನ್ನು ಪೂರ್ಣಗೊಳಿಸಬಹುದು. ಅದೇ ಸಮಯದಲ್ಲಿನ ಮತ್ತೊಂದೆಡೆ, ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ವಿವಾದ ಅಥವಾ ಜಗಳವನ್ನು ತಪ್ಪಿಸುವುದು ನಿಮಗೆ ಉತ್ತಮ ಆಯ್ಕೆಯಾಗಿದೆ. ಪ್ರಯಾಣಕ್ಕೆ ಹೋಗುವ ಅವಕಾಶವನ್ನು ಪಡೆಯುತ್ತೀರಿ. ಆದರೆ ಈ ಸಮಯಕ್ಕೆ ಪ್ರಯಾಣಗಳನ್ನು ತಪ್ಪಿಸಿ. ಇಲ್ಲದಿದ್ದರೆ ನೀವು ಲಾಭದ ಸ್ಥಳದಲ್ಲಿ ಹಾನಿಯನ್ನು ಹೊಂದಬಹುದು.

ಪರಿಹಾರ - ನಿಯಮಿತವಾಗಿ ವಿಷ್ಣು ಸಹಸ್ತ್ರನಾಮವನ್ನು ಪಠಿಸುವುದು ನಿಮಗೆ ಉತ್ತಮವಾಗಿರುತ್ತದೆ.

ಮೇಷ ರಾಶಿ ವಾರದ ರಾಶಿ ಭವಿಷ್ಯ

ವೃಷಭ ರಾಶಿ

ಬುಧ ದೇವ ವೃಷಭ ರಾಶಿಚಕ್ರದ ಎರಡನೇ ಮತ್ತು ಐದನೇ ಮನೆಯ ಮಾಲೀಕ ಮತ್ತು ತನ್ನ ಸಂಚಾರದ ಈ ಸಮಯದಲ್ಲಿ ವಕ್ರ ಸ್ಥಿತಿಯಲ್ಲಿ ನಿಮ್ಮ ಆರನೇ ಮನೆಗೆ ಪ್ರವೇಶಿಸಲಿದೆ ಆರನೇ ಮನೆಯ ಮೂಲಕ ಜೀವನದಲ್ಲಿನ ಸಂಘರ್ಷದ ಬಗ್ಗೆ ತಿಳಿಯುತ್ತದೆ. ಜ್ಯೂಓತಿಷ್ಯದಲ್ಲಿ ಈ ಮನೆಯನ್ನು ಶತ್ರು ಮನೆಯೆಂದು ಸಹ ಕರೆಯಲಾಗುತ್ತದೆ. ಈ ಮನೆ ಮೂಲಕ ವಿರೋಧಿಗಳು, ರೋಗ, ನೋ ವು, ಉದ್ಯೋಗ, ಸ್ಪರ್ಧೆ, ರೋಗ ಪ್ರತಿರೋಧಕ ಸಾಮರ್ಥ್ಯ, ಮದುವೆಯಲ್ಲಿ ಪ್ರತ್ಯೇಕತೆ, ಕಾನೂನು ವಿವಾದಗಳ ಬಗ್ಗೆ ಪರಿಗಣಿಸಲಾಗುತ್ತದೆ. ಬುಧನ ವಕ್ರ ಸಂಚಾರವು ನಿಮಗೆ ಉತ್ತಮ ಚಿಹ್ನೆಯನ್ನು ನೀಡುತ್ತಿಲ್ಲ.

ಕೆಲಸದ ಸ್ಥಳದಲ್ಲಿ ನಿಮ್ಮ ಮೀಟಿಂಗ್, ಕೆಲಸ, ಯೋಜನೆ ಇತ್ಯಾದಿಗಳನ್ನು ನಿಯಮಿತವಾಗಿ ವ್ಯವಸ್ಥೆ ಮಾಡಬೇಕಾಗಿದೆ, ಆಗ ಮಾತ್ರ ನೀವು ಯಾವುದೇ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಯಾವುದೇ ರೀತಿಯ ವಿವಾದ ನಡೆಯುತ್ತಿದ್ದರೆ, ಈ ಸಮಯದಲ್ಲಿ ಅದನ್ನು ಮುಗಿಸಿ ಸಂಬಂಧವನ್ನು ಬಲಗೊಳಿಸಲು ಇದು ಉತ್ತಮವಾದ ಸಮಯವೆಂದು ಸಾಬೀತುಪಡಿಸುತ್ತದೆ. ಇದಕ್ಕಾಗಿ ನೀವು ಅವರೊಂದಿಗೆ ಮಾತನಾಡಿ, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ.

ಬುಧ ದೇವ ಆಲೋಚನೆಗಳಿಗೆ ಕಾರಣವಾಗಿದ್ದಾರೆ, ಆದ್ದರಿಂದ ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಯಾರೊಂದಿಗಾದರೂ ಹಣಚಿಕೊಳ್ಳುವ ಸಮಯದಲ್ಲಿ ವಿಶೇಷವಾಗಿ ಜಾಗರೂಕರಾಗಿರಿ. ಇಲ್ಲದಿದ್ದರೆ, ನಿಮ್ಮ ಮಾತುಗಳನ್ನು ತಪ್ಪಾಗಿ ತಿಳಿದುಕೊಳ್ಳಬಹುದು. ಇದರಿಂದ ನೀವು ತೊಂದರೆಗೀಡಾಗಬಹುದು. ಅರ್ಥಕವಾಗಿ ಸಮಯ ಸ್ವಲ್ಪಮ ಪ್ರತಿಕೂಲವಾಗಿರಲಿದೆ. ಆದ್ದರಿಂದ ಯಾವುದೇ ರೀತಿಯ ವಹಿವಾಟುಗಳನ್ನು ಈ ಸಮಯದಲ್ಲಿ ತಪ್ಪಿಸಬೇಕು. ಹಣಕಾಸು ಖರ್ಚು ಮಾಡುವ ಸಮಯದಲ್ಲಿ ನೀವು ಎಚ್ಚರದಿಂದಿರಬೇಕು, ಏಕೆಂದರೆ ಕುಟುಂಬದ ಸದಸ್ಯರೊಬ್ಬರ ಆರೋಗ್ಯದ ಬಗ್ಗೆ ಇದ್ದಕ್ಕಿದ್ದಂತೆ ನೀವು ನಿಮ್ಮ ಹಣವನ್ನು ಖರ್ಚು ಮಾಡಬೇಕಾಗಬಹುದು. ಇದರಿಂದಾಗಿ ನೀವು ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ನಿಮ್ಮ ಹಣವನ್ನು ನೀವು ಯಾರಿಗಾದರೂ ಸಾಲವಾಗಿ ನೀಡಿದ್ದರೆ, ಈ ಸಂಚಾರದ ಸಮಯದಲ್ಲಿ ಅದನ್ನು ಮರಳಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಏಕೆಂದರೆ, ಈ ಸಮಯದಲ್ಲಿ ಯಾವುದೇ ಹಳೆಯ ರೋಗವು ನಿಮ್ಮನ್ನು ಕಾಡಬಹುದು. ಆದ್ದರಿಂದ ಆಹಾರ ಪಾನೀಯ ಮತ್ತು ಯೋಗ, ಧ್ಯಾನ ಮತ್ತು ವ್ಯಾಯಾಮವನ್ನು ಆಶ್ರಯಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದರ ಮೂಲಕ ನೀವು ಎಲ್ಲಾ ರೀತಿಯ ಒತ್ತಡಗಳಿಂದ ದೂರವಿರುವಿರಿ.

ಪರಿಹಾರ - ಶುಭ ಫಲಿತಾಂಶಗಳನ್ನು ಪಡೆಯಲು ಪ್ರತಿದಿನ ನಿಯಮಿತವಾಗಿ ತುಳಸಿ ಸಸ್ಯಕ್ಕೆ ನೀರು ಅರ್ಪಿಸಿ.

ವೃಷಭ ರಾಶಿ ವಾರದ ರಾಶಿ ಭವಿಷ್ಯ

ಮಿಥುನ ರಾಶಿ

ಬುಧ ಗ್ರಹವು ನಿಮ್ಮ ರಾಶಿಯ ಮಾಲೀಕನಾಗಿರುವುದರೊಂದಿಗೆ ನಿಮ್ಮ ನಾಲ್ಕನೇ ಮನೆಯ ಮಾಲೀಕ ಕೂಡ ಆಗಿದ್ದರೆ. ಸಂಚಾರದ ಈ ಸಮಯದಲ್ಲಿ ತನ್ನ ವಕ್ರ ಸ್ಥಿತಿಯಲ್ಲಿ ನಿಮ್ಮ ಐದನೇ ಮನೆಗೆ ಪ್ರವೇಶಿಸಲಿದ್ದಾರೆ. ಜಾತಕದಲ್ಲಿ ಐದನೇ ಮನೆಯನ್ನು ಮಕ್ಕಳ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ಪ್ರಣಯ, ಮಕ್ಕಳು, ಸೃಜನಶೀಲತೆ, ಬೌದ್ಧಿಕ ಸಾಮರ್ಥ್ಯ, ಶಿಕ್ಷಣ ಮತ್ತು ಹೊಸ ಅವಕಾಶಗಳ ಬಗ್ಗೆ ಪರಿಗಣಿಸಲಾಗುತ್ತದೆ.

ವಕ್ರ ಬುಧ ಸಂಚಾರದ ಸಮಯದಲ್ಲಿ ನಿಮ್ಮ ಆಲೋಚನೆ ಮತ್ತು ಸಲಹೆಗಳ ಬಗ್ಗೆ ನಿಮ್ಮಲ್ಲಿ ಮನೋಬಲದ ಕೊರತೆಯನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ. ಇದರ ಪರಿಣಾಮವಾಗಿ, ನೀವು ಯಾವುದೇ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ನೀವು ಸಾಮಾನ್ಯಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುವಿರಿ. ಆದ್ದರಿಂದ ನೀವು ಪ್ರತಿ ಸವಾಲಿಗೆ ಮುಂಚಿತವಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ನಿಮ್ಮ ಪ್ರತಿಭೆಯನ್ನು ಸಮಯಕ್ಕೆ ಪರಿಷ್ಕರಿಸಬೇಕು, ಇದರಿಂದ ಮುಂಬರುವ ಸಮಯದಲ್ಲಿ ಯಶಸ್ಸಿಗೆ ಅನುಗುಣವಾಗಿ ಯೋಜನೆಯನ್ನು ರಚಿಸಬಹುದು.

ಕುಟುಂಬ ಜೀವನದಲ್ಲಿ, ನಿಮ್ಮ ತಾಯಿಯ ಮೂಲಕ ನೀವು ಲಾಭವನ್ನು ಪಡೆಯಬಹುದು. ದಾಂಪತ್ಯ ಜೀವನದಲ್ಲಿ ವಕ್ರ ಬುಧನ ಸಂಚಾರದ ಸಮಯದಲ್ಲಿ ನೀವು ನಿಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಲು ಅವಕಾಶವನ್ನು ಪಡೆಯುವಿರಿ. ಈ ಸಮಯದಲ್ಲಿ ನಿಮ್ಮ ಮನೋಬಲ ಮತ್ತು ಸೃಜನಶೀಲತೆ ಸಾಮರ್ಥ್ಯವು ಹೆಚ್ಚಾಗುವುದನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ.

ಜ್ಯೋತಿಷ್ಯದಲ್ಲಿ ಜಾತಕದ ಐದನೇ ಮನೆಯು ಪ್ರಣಯ ಮತ್ತು ಪ್ರೀತಿಯ ಮನೆಯಾಗಿದೆ ಆದ್ದರಿಂದ ವಕ್ರ ಬುಧ ಸಂಚಾರದ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರ ಮುಂದೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ವಿಫಲರಾಗುವಿರಿ. ಇದರಿಂದ ನಿಮ್ಮ ಪ್ರೇಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಇನ್ನು ಒಬ್ಬಂಟಿಯಾಗಿರುವವರು ಈ ಸಮಯದಲ್ಲಿ ಯಾವುದೇ ರೀತಿಯ ಹೊಸ ಸಂಬಂಧವನ್ನು ಹೊಂದುವುದು ಹಾನಿಕಾರವೆಂದು ಸಾಬೀತುಪಡಿಸುತ್ತದೆ. ಆದ್ದರಿಂದ ಸಧ್ಯಕ್ಕೆ ಯಾವುದೇ ಹೊಸ ಸಂಬಂಧವನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ವಿವಾಹಿತರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ, ಅವರ ಜೀವನದಲ್ಲಿ ಹಳೆಯ ಪ್ರೀತಿ ಮರಳಿ ಬರಬಹುದು. ಇದು ಅವರ ಪ್ರಸ್ತುತ ಸಮಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧವನ್ನು ಸುಧಾರಿಸಲು ನೀವು ವೈವಾಹಿಕ ಜೀವನದಲ್ಲಿ ನಿಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಬೇಕಾಗುತ್ತದೆ.

ಪರಿಹಾರ - ಚಿನ್ನದ ಉಂಗುರದಲ್ಲಿ , ನಿಮ್ಮ ಬಲಗೈಯ ಬೆರಳಿನಲ್ಲಿ ಪಚ್ಚೆ ರತ್ನವನ್ನು ಧರಿಸಿ. ಇದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುವಿರಿ.

ಮಿಥುನ ರಾಶಿ ವಾರದ ರಾಶಿ ಭವಿಷ್ಯ

ಜೀವನದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಲು ಪ್ರಶ್ನೆ ಕೇಳಿ

ಕರ್ಕ ರಾಶಿ

ಬುಧ ದೇವ ಕರ್ಕ ರಾಶಿಚಕ್ರದ ಹನ್ನೆರಡನೇ, ಮತ್ತು ಮೂರನೇ ಮನೆಯ ಮಾಲೀಕ. ತನ್ನ ಈ ಸಂಚಾರದ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಸಂಚರಿಸುತ್ತದೆ. ಜಾತಕದಲ್ಲಿ ನಾಲ್ಕನೇ ಮನೆಯನ್ನು ಸಂತೋಷದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ತಾಯಿ, ಜೀವನದಲ್ಲಿ ಎಲ್ಲಾ ಸಂತೋಷ, ಸ್ಥಿರ - ಅಸ್ಥಿರ ಸಂಪತ್ತು, ಜನಪ್ರಿಯತೆ ಮತ್ತು ಭಾವನೆಗಳನ್ನು ಪರಿಗಣಿಸಲಾಗುತ್ತದೆ.

ವಕ್ರ ಬುಧ ಸಂಚಾರದ ಸಮಯದಕ್ಕೂ ನೀವು ನಿಮ್ಮ ಎಲ್ಲಾ ಶಕ್ತಿಯನ್ನು ಮನೆ ದುರಸ್ತಿ ಮತ್ತು ಅಲಂಕಾರದ ಮೇಲೆ ಖರ್ಚು ಮಾಡುವುದನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನೀವು ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಬದಲಾಯಿಸಬಹುದು. ಇದರೊಂದಿಗೆ ಮನೆಯ ಅಲಂಕಾರಕ್ಕಾಗಿ ನೀವು ಮುಕ್ತವಾಗಿ ಖರ್ಚು ಮಾಡುವುದನ್ನು ಕಾಣಬಹುದು. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ, ಇಲ್ಲದಿದ್ದರ ನೀವು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು.

ಜಾತಕದಲ್ಲಿ ನಾಲ್ಕನೇ ಮನೆಯಿಂದ ತಾಯಿಯ ಬಗ್ಗೆ ತಿಳಿಯುತ್ತದೆ. ಆದ್ದರಿಂದ ಈ ಸಮಯದಲ್ಲಿ ಯಾವುದೇ ದೀರ್ಘಕಾಲದ ರೋಗವು ಈ ಸಮಯದಲ್ಲಿ ನಿಮ್ಮ ತಾಯಿಯನ್ನು ಮತ್ತೆ ಕಾಡಬಹುದು. ಆದ್ದರಿಂದ ಕಾಲ ಕಾಲಕ್ಕೆ ಅವರೊಂದಿಗೆ ಮಾತನಾಡಿ ಮತ್ತು ಅವರಿಗೆ ಸಹಾಯ ಮಾಡುತ್ತೀರಿ. ಇದರಿಂದ ನಿಮ್ಮಿಬ್ಬರ ಸಂಬಂಧದಲ್ಲಿ ಹೊಸತನ ಮತ್ತು ಬಲ ಉಂಟಾಗುತ್ತದೆ. ಕೆಲಸದ ಸ್ಥಳದಲ್ಲಿ ನೀವು ಕೆಲವು ಸವಾಲುಗಳನ್ನು ಸಹ ಎದುರಿಸಬೇಕಾಗಬಹುದು.

ಆದಾಗ್ಯೂ ಈ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಅಧೀನ ಕೆಲಸ ಮಾಡುವವರು ನಿಮ್ಮನ್ನು ಬೆಂಬಲಿಸುತ್ತಾರೆ. ಇದರಿಂದಾಗಿ ನೀವು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುವಿರಿ. ಪ್ರಯಾಣಕ್ಕೆ ಹೋಗಲು ಅವಕಾಶಗಳನ್ನು ಪಡೆಯುವಿರಿ, ವಿಶೇಷವಾಗಿ ನೀವು ವಿದೇಶಿ ಪ್ರಯಾಣಗಳ ಮೂಲಕ ಲಾಭವನ್ನುಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಹೊಂದಬಹುದು. ಆದ್ದರಿಂದ ಆರಂಭದಲ್ಲೇ ಜಾಗರೂಕರಾಗಿರಿ ಮತ್ತು ನಿಮ್ಮ ಆಹಾರ ಪಾನೀಯದ ಬಗ್ಗೆ ಗಮನ ಹರಿಸಿ.

ಪರಿಹಾರ - ಅರೋಗ್ಯ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಬೆಳ್ಳಿಯ ಗಿಲಸಿನಲ್ಲಿ ನೀರು ಕುಡಿಯಿರಿ.

ಕರ್ಕ ರಾಶಿ ವಾರದ ರಾಶಿ ಭವಿಷ್ಯ

ಕೋಗ್ನಿ ಆಸ್ಟ್ರೋ ರಿಪೋರ್ಟ್ ಮೂಲಕ ವೃತ್ತಿ ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ.

ಸಿಂಹ ರಾಶಿ

ಬುಧ ಗ್ರಹವು ಸಿಂಹ ರಾಶಿಚಕ್ರದ ಎರಡನೇ ಮತ್ತು ಹನ್ನೊಂದನೇ ಮನೆಯ ಮಾಲೀಕ ಮತ್ತು ತನ್ನ ವಕ್ರ ಸಂಚಾರದ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಪ್ರವೇಶಿಸಲಿದೆ. ಜಾತಕದಲ್ಲಿ ಮೂರನೇ ಮನೆಯನ್ನು ಸಹಜ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ವ್ಯಕ್ತಿಯ ಧೈರ್ಯ, ಕಿರಿಯ ಸಹೋದರ ಸಹೋದರಿಯರು, ಕುತೂಹಲ, ಕಾನೂನು, ಶಕ್ತಿ, ಉತ್ಸಾಹವನ್ನು ಪರಿಗಣಿಸಲಾಗುತ್ತದೆ.

ವಕ್ರ ಬುಧ ಸಂಚಾರವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ನಿಮ್ಮ ಸಹೋದರ ಸಹೋದರಿಯರೊಂದಿಗೆ ಸಮಯವನ್ನು ಕಳೆಯುವಿರಿ. ಇದರಿಂದ ನಿಮ್ಮ ನಡುವಿನ ದೂರವು ಕೊನೆಗೊಳ್ಳುತ್ತದೆ. ನೀವು ಚಿಕ್ಕ ಪ್ರಯಾಣಗಳಿಗೆ ಹೋಗಬೇಕಾಗಬಹುದು. ಈ ಪ್ರಯಾಣಗಳು ನಿಮಗೆ ಪ್ರಯೋಜನಕಾರಿಯಾಗುತ್ತವೆ. ಏಕೆಂದರೆ ಇದರಿಂದ ನೀವು ಸಂತೋಷ ಮತ್ತು ಉತ್ಸಾಹವನ್ನು ಪಡೆಯುವಿರಿ. ಆದಾಗ್ಯೂ, ಯಾವುದೇ ರೀತಿಯ ಪ್ರಯಾಣಕ್ಕೆ ಹೋಗುವ ಮೊದಲು ನಿಮ್ಮ ವಾಹನ, ಪ್ರಯಾಣದ ಸ್ಥಳ, ನಿಮ್ಮ ಎಲ್ಲಾ ದಾಖಲೆಗಳು ಇತ್ಯಾದಿಗಳನ್ನು ಮೊದಲೇ ಪರಿಶೀಲಿಸಿ. ಇಲ್ಲದಿದ್ದರೆ, ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಬುಧನ ಈ ಸ್ಥಾನವು, ಕೆಲಸದ ಸ್ಥಳದಲ್ಲಿ ನೀವು ಹೆಚ್ಚು ಪರಿಶ್ರಮಿಸುವ ಕೆಲಸ ಮಾಡುತ್ತದೆ. ಆಗ ಮಾತ್ರ ನೀವು ನಿಮ್ಮ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಆದ್ದರಿಂದ ಯಾವುದೇ ಸಹೋದ್ಯೋಗಿಯೊಂದಿಗೆ ಅಥವಾ ಮೇಲ್ ಮೂಲಕ ಸಂವಹನ ಮಾಡುವಾಗ ನಿಮ್ಮ ಪದಗಳನ್ನು ಸರಿಯಾಗಿ ಪರಿಶೀಲಿಸಿ, ಇಲ್ಲದಿದ್ದರೆ ನಿಮಗೆ ತೊಂದರೆ ಉಂಟಾಗಬಹುದು. ಇದರೊಂದಿಗೆ ಕೆಲಸದ ಸ್ಥಳದಲ್ಲಿ ಎಲ್ಲರ ಸಲಹೆ ಮತ್ತು ಆಲೋಚನೆಗಳನ್ನು ಗೌರವಿಸುತ್ತ ಅವರಿಗೆ ಆದ್ಯತೆ ನೀಡುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ, ಜನರ ಮಧ್ಯೆ ನಿಮ್ಮ ಚಿತ್ರ ಹದಗೆಡಬಹುದು.

ಬುಧ ಶಕ್ರಿಯ ಅಂಶವಾಗಿದೆ. ಆದ್ದರಿಂದ ಈ ಸಾಗಣೆಯ ಸಮಯದಲ್ಲಿ ನಿಮ್ಮ ಎಲ್ಲಾ ವಿದ್ಯುತ್ ವಸ್ತುಗಳು ಮತ್ತು ಸಲಕರಣೆಗಳ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಇಲ್ಲದಿದ್ದರೆ ಅದರ ಕ್ಷೀಣತೆ ಅಥವಾ ನಷ್ಟದಿಂದಾಗಿ ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು.

ನಿಮ್ಮನ್ನು ಮನರಂಜಿಸಲು ಈ ಸಮಯವು ತುಂಬಾ ಒಳ್ಳೆಯದು. ಆದ್ದರಿಂದ ವಿಭಿನ್ನ ಹವ್ಯಾಸಗಳು ಮತ್ತು ಇತರ ಮನರಂಜನಾ ಚಟುವಟಿಕೆಗಳೊಂದಿಗೆ ಆನಂದಿಸಿ. ಇದನ್ನು ಮಾಡುವುದರಿಂದ ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಒತ್ತಡವನ್ನು ಪರಿಹರಿಸಲು ನಿಮಗೆ ಸಹಾಯ ಮಾಡುತ್ತದೆ. ಇದರಿಂದ ನೀವು ನಿಮ್ಮ ಕೆಲಸಗಳನ್ನು ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಪರಿಹಾರ - ಗಣಪತಿ ದೇವರಿಗೆ ದುರ್ವಾ ಹುಲ್ಲು ಅರ್ಪಿಸುವುದು ನಿಮಗೆ ಶುಭವಾಗಿರುತದೆ.

ಸಿಂಹ ರಾಶಿ ವಾರದ ರಾಶಿ ಭವಿಷ್ಯ

ಕನ್ಯಾ ರಾಶಿ

ಬುಧ ಗ್ರಹವು ಕನ್ಯಾ ರಾಶಿಚಕ್ರದ ಸ್ವತಃ ರಾಶಿ ಮತ್ತು ನಿಮ್ಮ ಹತ್ತನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ಅದು ನಿಮ್ಮ ರಾಶಿಚಕ್ರದ ಎರಡನೇ ಮನೆಗೆ ಪ್ರವೇಶಿಸುತ್ತದೆ. ಜ್ಯೋತಿಷ್ಯದಲ್ಲಿ ಎರಡನೇ ಮನೆಯನ್ನು ವ್ಯಕ್ತಿಯ ಕುಟುಂಬ, ಅವರ ಧ್ವನಿ, ಪ್ರಾರಂಭಿಕ ಶಿಕ್ಷಣ, ಹಣಕಾಸು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ವಕ್ರ ಬುಧ ಸಂಚಾರದ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುವಿರಿ.

ಕನ್ಯಾ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಆರ್ಥಿಕವಾಗಿ ತನ್ನ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ಅವರು ತನ್ನ ಮತ್ತು ತನ್ನ ಕುಟುಂಬದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರು, ಯಾವುದೇ ಹೂಡಿಕೆ ಮಾಡುವುದು ಅಥವಾ ಹೊಸ ವ್ಯಾಪಾರವನ್ನು ಆರಂಭಿಸಲು ಬಯಸುತ್ತಿದ್ದರೆ, ಈ ಸಮಯವೂ ಅವರಿಗೆ ಅತ್ಯಂತ ಉತ್ತಮವಾಗಿರುತ್ತದೆ. ಇದರಿಂದಾಗಿ ನೀವು ಹಣವನ್ನು ಗಳಿಸುವಿರಿ.

ಆದಾಗ್ಯೂ, ಈ ಸಂಚಾರದ ಸಮಯದಲ್ಲಿ ನೀವು ಹೆಚ್ಚುವರಿ ವೆಚ್ಚಗಳನ್ನು ಮಾಡಬೇಕಾಗಬಹುದು. ಆದರೆ ಇದರ ಹೊರೆತಾಗಿಯೂ ಈ ವೆಚ್ಚಗಳು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಈ ಕಾರಣದಿಂದಾಗಿ ನಿಮ್ಮ ಮನೆಯ ವಾತಾವರಣವು ಹದಗೆಡಬಹುದು. ಇದರಿಂದ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ತಾಳ್ಮೆಯಿಂದ ಮಾತನಾಡಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಆರೋಗ್ಯದ ದೃಷ್ಟಿಯಿಂದ ಈ ಸಮಯವೂ ಸ್ವಲ್ಪ ಸಮಸ್ಯೆಯನ್ನು ನೀಡುತ್ತದೆ. ನೀವು ನಿಮ್ಮ ಕೆಟ್ಟ ಆಹಾರ ಪಾನೀಯ ಮತ್ತು ಅನಿಯಮಿತ ಆಹಾರವನ್ನು ಸೇವಿಸುವ ಹವ್ಯಾಸವನ್ನು ಸುಧಾರಿಸಬೇಕು. ಇಲ್ಲದಿದ್ದರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಪರಿಹಾರ - ನಿಯಮಿತವಾಗಿ ಹಸುವಿಗೆ ಹಸಿರು ಮೇವು ತಿನ್ನಿಸಿ.

ಕನ್ಯಾ ರಾಶಿ ವಾರದ ರಾಶಿ ಭವಿಷ್ಯ

ಜಾತಕದಲ್ಲಿರುವ ರಾಜ ಯೋಗದ ಎಲ್ಲಾ ಮಾಹಿತಿಯನ್ನು ಪಡೆಯಿರಿ

ತುಲಾ ರಾಶಿ

ಬುಧ ಗ್ರಹವು ತುಲಾ ರಾಶಿಚಕ್ರದ ಹನ್ನೊಂದನೇ ಮತ್ತು ಒಂಬತ್ತನೇ ಮನೆಯ ಮಾಲೀಕ. ಸಂಚಾರದ ಈ ಸಮಯದಲ್ಲಿ ಅದು ನಿಮ್ಮ ಮೊದಲನೇ ಮನೆಗೆ ಪ್ರವೇಶಿಸಲಿದೆ. ಇದನ್ನು ಲಗ್ನದ ಮನೆಯೆಂದು ಕರೆಯಲಾಗುತ್ತದೆ. ಮೊದಲನೇ ಮನೆಯನ್ನು ನಮ್ಮ ವ್ಯಕ್ತಿತ್ವದ ಕನ್ನಡಿ ಎಂದು ಹೇಳಲಾಗಿದೆ. ಈ ಮನೆಯ ಮೂಲಕ ದೇಹ,ಸಮಾಜದಲ್ಲಿ ನಮ್ಮ ಗುರುತು ಮತ್ತು ರೋಗನಿರೋಧಕ ಸಾಮರ್ಥ್ಯದ ಬಗ್ಗೆ ತಿಳಿಯಬಹುದು. ನಿಮ್ಮ ಲಗ್ನದಲ್ಲಿ ವಕ್ರ ಬುಧ ಸಂಚಾರವು ನಿಮಗೆ ಶುಭವೆಂದು ಸಾಬೀತುಪಡಿಸುತ್ತದೆ.

ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಇದರಿಂದ ಕೆಲಸದ ಸ್ಥಳದಲ್ಲಿ ನೀವು ಸಂಪೂರ್ಣ ಯಶಸ್ಸು ಪಡೆಯುವಿರಿ. ಆದಾಗ್ಯೂ, ಬುಧನ ಸ್ಥಾನವು ನಿಮ್ಮನ್ನು ಪರಿಪೂರ್ಣತಾವಾದಿಯನ್ನಾಗಿ ಮಾಡುತ್ತದೆ, ಇದರಿಂದಾಗಿ ನೀವು ನಿಮ್ಮ ಪ್ರತಿಯೊಂದು ಕಾರ್ಯವನ್ನು ಪದೇ ಪದೇ ಪರಿಶೀಲಿಸುವಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬಹುದು. ಇದರ ಪರಿಣಾಮವಾಗಿ ಕೆಲಸಕ್ಕೆ ಸರಿಯಾಗಿ ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ವಿಫಲರಾಗುತ್ತೀರಿ. ಇದು ನಿಮಗೆ ಅಸ್ವಸ್ಥತೆ ಮತ್ತು ಮಾನಸಿಕ ಒತ್ತಡವನ್ನು ನೀಡುತ್ತದೆ.

ಬುಧ ದೇವ ಈ ಸಮಯದಲ್ಲಿ ನಿಮ್ಮನ್ನು ಹೆಚ್ಚು ಸೂಕ್ಷ್ಮ ಮತ್ತು ಭಾವನಾತ್ಮಕರನ್ನಾಗಿ ಮಾಡುತ್ತದೆ. ಇದರ ನೇರವಾದ ನಕಾರಾತ್ಮಕ ಪರಿಣಾಮವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವಾಂಡ ಮೇಲೆ ಬೀರುತ್ತದೆ. ಆದಾಗ್ಯೂ ಒಂಬತ್ತನೇ ಮನೆಯ ಕಾರಣದಿಂದಾಗಿ ನೀವು ಯಾರಾದರೂ ದೊಡ್ಡವರು, ವಿಶೇಷವಾಗಿ ತಂದೆ ಅಥವಾ ತಂದೆಯಂತಹ ವ್ಯಕ್ತಿಯ ಸಲಹೆಯನ್ನು ಪಡೆಯುತ್ತಿರುವಿರಿ, ಇದು ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಬುಧ ಸಂಚಾರದ ಸಮಯದಲ್ಲಿ ನೀವು ನಿಮ್ಮ ವ್ಯಕ್ತಿತ್ವದ ಬಗ್ಗೆ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನೀವು ಪ್ರಯಾಣಿಸಲು ಅನೇಕ ಅವಕಾಶಗಳನ್ನು ಸಹ ಪಡೆಯುವಿರಿ.

ಪರಿಹಾರ - ಚಿಕ್ಕ ಹುಡುಗಿಯರಿಗೆ ಸಿಹಿಯನ್ನು ಹಂಚಿ ಮತ್ತು ಅವರ ಆಶೀರ್ವಾದವನ್ನು ಪಡೆಯಿರಿ.

ತುಲಾ ರಾಶಿ ವಾರದ ರಾಶಿ ಭವಿಷ್ಯ

ವೃಶ್ಚಿಕ ರಾಶಿ

ಬುಧ ಗ್ರಹದ ಸಂಚಾರವು ವೃಶ್ಚಿಕ ರಾಶಿಚಕ್ರದಿಂದ ಹನ್ನೆರಡನೇ ಮನೆಗೆ ಪ್ರವೇಶಿಸುತ್ತದೆ. ಬುಧ ಗ್ರಹವು ನಿಮ್ಮ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಜ್ಯೋತಿಷ್ಯದಲ್ಲಿ ಹನ್ನೆರಡನೇ ಮನೆಯನ್ನು ವೆಚ್ಚದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ವೆಚ್ಚಗಳು, ಹಾನಿ, ಮೋಕ್ಷ, ವಿದೇಶ ಪ್ರಯಾಣ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ವಕ್ರ ಬುಧವು ನಿಮಗೆ ಪ್ರತಿಕೂಲ ಫಲಿತಾಂಶಗಳನ್ನು ನೀಡುತ್ತದೆ.

ಈ ಸಮಯದಲ್ಲಿ ಕೆಲವು ಅರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನೀವು ಅನೇಕ ಪ್ರಯಾಣಗಳ ಅವಕಾಶವನ್ನು ಪಡೆಯಬಹುದು. ಆದಾಗ್ಯೂ, ಈ ಸಮಯಕ್ಕೆ ಆ ಪ್ರಯಾಣಗಳನ್ನು ತಪ್ಪಿಸುವುದು ನಿಮಗೆ ಉತ್ತಮ. ಇಲ್ಲದಿದ್ದರೆ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ ಮತ್ತು ಇದರಿಂದ ನೀವು ಮಾನಸಿಕ ಒತ್ತಡಕ್ಕೊಳಗಾಗಬಹುದು.

ಈ ಸಮಯದಲ್ಲಿ ನಿಮ್ಮ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರೋಧಿಗಳು ಅಡೆತಡೆಯನ್ನು ಉಂಟುಮಾಡಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಈ ಸಮಯದಲ್ಲಿ ನೀವು ಸಾಧ್ಯವಾದಷ್ಟು ಯಾವುದೇ ರೀತಿಯ ವಿವಾದ ಅಥವಾ ಜಗಳದಿಂದ ದೂರವಿರಿ ಎಂದು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ನಿಮ್ಮ ಚಿತ್ರವೂ ಹದಗೆಡುವ ಸಾಧ್ಯತೆ ಇದೆ. ಇದರೊಂದಿಗೆ ಯಾವುದೇ ರೀತಿಯ ಕಾನೂನು ಬಾಹಿರ ಕೃತಿಗಳನ್ನು ತಪ್ಪಿಸಿ.

ಈ ಸಮಯದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಕಡೆಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ನಿಯಮಿತವಾಗಿ ಯೋಗ ಮತ್ತು ಧ್ಯಾನವನ್ನು ಆಶ್ರಯಿಸಿ, ಇದರ ಮೂಲಕ ನಿಮ್ಮೊಳಗಿನ ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗುವಿರಿ. ಇದರೊಂದಿಗೆ ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆಯನ್ನು ಪಡೆದುಕೊಳ್ಳಿ.

ಪರಿಹಾರ - ಕೃಷ್ಣ ಮತ್ತು ರಾಧಾ ದೇವಿಯನ್ನು ಆರಾಧಿಸಿ.

ವೃಶ್ಚಿಕ ರಾಶಿ ವಾರದ ರಾಶಿ ಭವಿಷ್ಯ

ಧನು ರಾಶಿ

ಬುಧ ದೇವ ಧನು ರಾಶಿಚಕ್ರದ ಏಳನೇ ಮತ್ತು ಹತ್ತನೇ ಮನೆಯ ಮಾಲೀಕ. ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಸಾಗಲಿದೆ. ಜಾತಕದಲ್ಲಿ ಹನ್ನೊಂದನೇ ಮನೆಯನ್ನು ಲಾಭದ ಮನೆಯೆಂದು ಕರೆಯಲಾಗುತದೆ. ಈ ಮನೆಯ ಮೂಲಕ ಆದಾಯ, ಜೀವನದಲ್ಲಿ ಪಡೆಯಲಾಗುವ ಎಲ್ಲಾ ರೀತಿಯ ಸಾಧನೆಗಳು, ಸ್ನೇಹಿತರು, ಹಿರಿಯ ಸಹೋದರ ಸಹೋದರಿಯರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ವಕ್ರ ಬುಧನ ಸಂಚಾರವು ನಿಮಗೆ ವಿಶೇಷ ಲಾಭಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸಲಿದೆ.

ಈ ಸಮಯದಲ್ಲಿ ನೀವು ನಿಮ್ಮ ದೃಬಲಗೊಂಡಿರುವ ಆರ್ಥಿಕ ಪರಿಷ್ಟಿತಿಯನ್ನು ಬಲಪಡಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಇದರಿಂದ ಹಣಕಾಸಿನ ಲಾಭದೊಂದಿಗೆ ಸಾಮಾಜಿಕ ಗೌರವವು ಸಿಗಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪರಿಶ್ರಮದ ಕಾರಣದಿಂದಾಗಿ, ನಿಮ್ಮ ವರಿಷ್ಠ ಅಧಿಕಾರಿಗಳ ಮೂಲಕ ಉನ್ನತ ಸ್ಥಾನವನ್ನು ಪಡೆಯಬಹುದು. ನೀವು ಉದ್ಯೋಗವನ್ನು ಬದಲಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ವರ್ಗಾವಣೆ ಮಾಡಲು ನಿಮಗೆ ಅನೇಕ ಉತ್ತಮ ಅವಕಾಶಗಳು ಸಿಗುತ್ತವೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವ್ಯಾಪಾರಸ್ಥರು ಈ ಸಮಯದಲ್ಲಿ ಪಾಲುದಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ವಕ್ರ ಬುಧವು ತುಲಾ ರಾಶಿಯಲ್ಲಿ ನೆಲೆಗೊಂಡಾಗ, ಪರಿಣಾಮವಾಗಿ ಅದರ ಶುಭ ಪ್ರಭಾವವು ನೀವು ನಿಮ್ಮ ಅಪೇಕ್ಷಿತ ಶುಭ ಫಲಿತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೇಮಿ ಮತ್ತು ಜೀವನ ಸಂಗಾತಿಯೊಂದಿಗೆ ಹೆಜ್ಜೆಗೆ ಹೆಜ್ಜೆಯನ್ನು ಸೇರಿಸಿ ನಡೆಯುವುದನ್ನು ಕಾಣಲಾಗುತ್ತದೆ. ಸಂಗಾತಿಯ ಬೆಂಬಲವು ಎಲ್ಲಾ ಸವಾಲುಗಳನ್ನು ಎದುರಿಸಲು ನಿಮಗೆ ಸಯಹ ಮಾಡುತ್ತದೆ.

ಪರಿಹಾರ - ಉತ್ತಮ ಫಲಿತಾಂಶಗಳನ್ನು ಪಡೆಯಲು ನಪುಂಸಕರಿಗೆ ಭೋಜನವನ್ನು ನೀಡಿ, ಇದರೊಂದಿಗೆ ದಾನ ದಕ್ಷಿಣವನ್ನು ಸಹ ನೀಡಿ.

ಧನು ರಾಶಿ ವಾರದ ರಾಶಿ ಭವಿಷ್ಯ

ಮಕರ ರಾಶಿ

ಬುಧ ಗ್ರಹವು ಮಕರ ರಾಶಿಚಕ್ರದ ಆರನೇ ಮತ್ತು ಒಂಬತ್ತನೇ ಮನೆಯ ಮಾಲೀಕ. ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಹತ್ತನೇ ಮನೆಗೆ ಪ್ರವೇಶಿಸುತ್ತದೆ. ಜ್ಯೋತಿಷ್ಯದಲ್ಲಿ ಹತ್ತನೇ ಮನೆಯ ಮೂಲಕ ವೃತ್ತಿಪರ, ತಂದೆಯ ಸ್ಥಿತಿ, ಪರಿಸ್ಥಿತಿ, ರಾಜಕೀಯ ಮತ್ತು ಜೀವನದ ಗುರಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಇದನ್ನು ಕರ್ಮದ ಮನೆಯೆಂದು ಸಹ ಕರೆಯಲಾಗುತ್ತದೆ. ಬುಧ ಸಂಚಾರವು ಮಕರ ರಾಶಿಚಕ್ರದ ಸ್ಥಳೀಯರಿಗೆ ವಿಶೇಷ ಅದೃಷ್ಟಶಾಲಿಯಾಗಿದೆ.

ನೀವು ನಿಮ್ಮ ಹಿಂದಿನ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶವನ್ನು ಪಡೆಯುವ ಸಮಯ ಇದು. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಹಿಂದಿನ ಅಪೂರ್ಣ ಕಾರ್ಯಗಳನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಈ ಸಮಯದಲ್ಲಿ ನಿಮ್ಮಲ್ಲಿ ಇದ್ದಕ್ಕಿದ್ದಂತೆ ಸ್ಪರ್ಧಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಇದರಿಂದ ನೀವು ನಿಮ್ಮ ಹಾದಿಯಲ್ಲಿರುವ ಪ್ರತಿಯೊಂದು ಅಡೆತಡೆಗಳನ್ನು ನಿವಾರಿಸಲು ಮತ್ತು ಅವುಗಳನ್ನು ಬಹಳ ಸುಲಭವಾಗಿ ಜಯಿಸಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ನೀವು ಪಡೆಯುವಿರಿ.

ವಕ್ರ ಬುಧ ಸಂಚಾರದ ಈ ಸಮಯದಲ್ಲಿ ನೀವು ಹೊಸ ಟೆಕ್ನಾಲಜಿ ಅನ್ನು ನಿಮ್ಮ ಕೆಲಸದ ಸ್ಥಳದಲ್ಲಿ ಬಳಸುವುದನ್ನು ಕಾಣಲಾಗುತ್ತದೆ. ವಿಶೇಷವಾಗಿ ವ್ಯಾಪಾರ ಮಾಡುವ ಜನರು ಈ ಹೊಸ ತಂತ್ರಜ್ಞಾನದ ಮೂಲಕ ಉತ್ತಮ ಪ್ರಯೋಜನ ಮತ್ತು ಆದಾಯದ ಹೊಸ ಅವಕಾಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಅವರ ಸಲಹೆಯ ಕಾರಣದಿಂದಾಗಿ ನೀವು ದೀರ್ಘಕಾಲ ಪ್ರಯೋಜನವನ್ನು ಹೊಂದಬಹುದು.

ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಜೀವನದ ಹೊಸ ಎತ್ತರವನ್ನು ಮುಟ್ಟುವ ಅವಕಾಶಗಳನ್ನು ಪಡೆಯುತ್ತಾರೆ. ಕುಟುಂಬ ಜೀವನದಲ್ಲಿ ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ಇದರಿಂದಾಗಿ ನೀವು ಒತ್ತಡ ಮುಕ್ತರಾಗುವಿರಿ. ಈ ಸಮಯದಲ್ಲಿ ನೀವು ನಿಮ್ಮಲ್ಲಿ ತಾಜಾತನವನ್ನು ಅನುಭವಿಸುವಿರಿ.

ಪರಿಹಾರ - ಬುಧ ದೇವರನ್ನು ಪ್ರಬಲವಾಗಿಸಲು ಪ್ರತಿದಿನ ಮನೆಯಲ್ಲಿ ಕರ್ಪುರವನ್ನು ಬೆಳಗಿಸಿ.

ವರ್ಣರಂಜಿತ ಬೃಹತ್ ಕುಂಡಲಿ ನಿಮ್ಮ ಆಹ್ಲಾದಕರ ಜೀವನಕ್ಕೆ ಪ್ರಮುಖವಾಗಿದೆ

ಮಕರ ರಾಶಿ ವಾರದ ರಾಶಿ ಭವಿಷ್ಯ

ಕುಂಭ ರಾಶಿ

ಬುಧ ಗ್ರಹವು ಕುಂಭ ರಾಶಿಚಕ್ರದ ಐದನೇ ಮತ್ತು ಎಂಟನೇ ಮನೆಯ ಅಧಿಪತಿ. ಬುಧ ಗ್ರಹವು ತನ್ನ ವಕ್ರ ಸ್ಥಿತಿಯಲ್ಲಿ ನಿಮ್ಮ ಒಂಬತ್ತನೇ ಮನೆಗೆ ಸಾಗುತ್ತದೆ. ಜ್ಯೋತಿಷ್ಯದಲ್ಲಿ ಒಂಬತ್ತನೇ ಮನೆಯನ್ನು ಅದೃಷ್ಟದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ವ್ಯಕ್ತಿಯ ಅದೃಷ್ಟ, ಗುರು, ಧರ್ಮ, ಪ್ರಯಾಣ, ತೀರ್ಥ ಸ್ಥಳ, ತತ್ವಗಳ ಬಗ್ಗೆ ಪರಿಗಣಿಸಲಾಗುತ್ತದೆ. ವಕ್ರ ಬುಧನ ಸಂಚಾರದ ಸಮಯದಲ್ಲಿ, ನೀವು ಅದ್ಭುತ ಫಲಿತಾಂಶಗಳನ್ನು ಪಡೆಯುವಿರಿ.

ಕೆಲಸದ ಸ್ಥಳದಲ್ಲಿ, ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಪ್ರಶಂಸಿಸಲಂಗುತ್ತದೆ. ಇದು ನಿಮ್ಮ ಹಿರಿಯ ಅಧಿಕಾರಿಗಳ ಮೂಲಕ ಮಾಡಲಾಗುತದೆ. ಇದು ನಿಮ್ಮ ಪದೋನ್ನತಿ ಮತ್ತು ಬಡ್ತಿಗೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಈ ನೀವು ಆರ್ಥಿಕ ಲಾಭ ಅಥವಾ ಯಾವುದೇ ಉಡುಗೊರೆಯನ್ನು ಪಡೆಯುವ ಸಾಧ್ಯತೆ ಇದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಮನಸ್ಸು ಜ್ಯೋತಿಷ್ಯ ವಿಜ್ಞಾನ, ಗುಪ್ತ ವಿಷಯಗಳು, ಇತ್ಯಾದಿಗಳ ಅತಿಂದ್ರೀಯ ವಿಷಯಗಳ ಅಧ್ಯಯನದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತದೆ.

ಬುಧನ ಈ ಸಂಚಾರವು, ಧಾರ್ಮಿಕ ಸ್ಥಳಗಳು ಮತ್ತು ತೀರ್ಥ ಸ್ಥಳಗಳಿಗೆ ಪ್ರಯಾಣಿಸಲು ನಿಮಗೆ ಅವಕಾಶಗಳನ್ನು ನೀಡುತ್ತದೆ. ಇದರಿಂದ ನೀವು ಆಂತರಿಕ ಶಾಂತಿಯನ್ನು ಅನುಭವಿಸುತ್ತೀರಿ. ಪ್ರೀತಿ ಜೀವಾಂಡ ಬಗ್ಗೆ ಮಾತನಾಡಿದರೆ, ವಕ್ರ ಬುಧನ ಈ ಸ್ಥಾನವು, ನೀವು ನಿಮ್ಮ ಭಾವನೆಗಳು ಮತ್ತು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಶಕ್ತಿಯನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಇದರೊಂದಿಗೆ, ಪ್ರೇಮಿಗೆ ಇಷ್ಟವಾದ ಸ್ಥಳಕ್ಕೂ ಹೋಗಬಹುದು, ಅಲ್ಲಿ ಅವರ ಬಗ್ಗೆ ಕಾಳಜಿ ವಹಿಸಿ ಅವರ ಮನಸ್ಸನ್ನು ಗೆಲ್ಲುವಿರಿ. ಇದರಿಂದ ನಿಮ್ಮಿಬ್ಬರ ಸಂಬಂಧವು ಬಲಗೊಳ್ಳುತ್ತದೆ.

ಪರಿಹಾರ - ಬುಧ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದ ವಸ್ತುಗಳನ್ನು ಉಡುಗೊರೆಯಾಗಿ ನೀಡಿ.

ಕುಂಭ ರಾಶಿ ವಾರದ ರಾಶಿ ಭವಿಷ್ಯ

ಮೀನಾ ರಾಶಿ

ಬುಧ ಗ್ರಹವು ಮೀನಾ ರಾಶಿಚಕ್ರದ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ, ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಎಂಟನೇ ಮನೆಗೆ ಸಾಗಲಿದೆ. ಎಂಟನೇ ಮನೆಯ ಮೂಲಕ ಜೀವನದಲ್ಲಿ ಉಂಟಾಗುವ ಏರಿಳಿತ, ಇದ್ದಕ್ಕಿದ್ದಂತೆ ಸಂಭವಿಸುವ ಘಟನೆಗಳು, ವಯಸ್ಸು, ರಹಸ್ಯ, ಸಂಶೋಧನೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮೀನಾ ರಾಶಿಚಕ್ರದ ಸ್ಥಳೀಯರಿಗೆ, ವಕ್ರನ ಬುಧನ ಸಂಚಾರದ ಸಮಯದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಫಲಿತಾಂಶಗಳು ಸಿಗುತ್ತವೆ.

ವಕ್ರ ಬುಧ ಸಂಚಾರದ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವು ಹದಗೆಡಬಹುದು. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲೂ ಈ ಸಂಚಾರವು ಅನೇಕ ಏರಿಳಿತಗಳನ್ನು ತರುತ್ತದೆ. ಆದಾಗ್ಯೂ ಈ ಏರಿಳಿತಗಳು ಸ್ವಲ್ಪ ಸಮಯದವರೆಗೆ ಇರುತ್ತವೆ ಮತ್ತು ಅದರ ನಂತರ ಪರಿಸ್ಥಿತಿಗಳು ನಿಧಾನವಾಗಿ ಸಾಮಾನ್ಯವಾಗುತ್ತವೆ. ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯವೂ ನಿಮಗೆ ಉತ್ತಮವಾಗಿಲ್ಲ.

ಈ ಸಮಯದಲ್ಲಿ ನಿಮ್ಮ ಸಹೋದ್ಯೋಗಿಯೊಂದಿಗೆ ನಿಮ್ಮ ವಿವಾದವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ಪಾಲುದಾರರನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ ಮತ್ತು ವ್ಯಾಪಾರದಲ್ಲಿ ಯಾವುದೇ ತಪ್ಪು ಅಥವಾ ಹಾನಿಯನ್ನು ಹೊಂದಿದರೆ, ಅದರ ದೋಸಹವನ್ನು ವಾರ ಮೇಲೆ ಹಾಕುವಿರಿ. ಆದಾಗ್ಯೂ ಸಹೋದ್ಯೋಗಿ ಬಗೆಗಿನ ಗಂಭೀರತೆಯು ನಿಮ್ಮನ್ನು ಬಹಳಷ್ಟು ಹಾನಿಯಿಂದ ಉಳಿಸುವ ಕೆಲಸ ಮಾಡುತ್ತದೆ.

ಬುಧ ಸಂಚಾರದ ಸಮಯದಲ್ಲಿ ನಿಯಂಗೆ ಪೂರ್ವಜರ ಆಸ್ತಿಯ ಲಾಭವನ್ನು ಪಡೆಯಬಹುದು. ನೀವು ಯಾವುದೇ ಪ್ರಯಾಣಕ್ಕೆ ಹೋಗಲು ಪ್ರಯತ್ನಿಸಿದರೆ, ಈ ಸಮಯಕ್ಕೆ ಅದನ್ನು ಮುಂದೂಡಿಸಿ. ಇಲ್ಲದಿದ್ದರೆ, ನಿಮಗೆ ಅರೋಗ್ಯ ಸಮಸ್ಯೆ ಮತ್ತು ಆರ್ಥಿಕ ನಷ್ಟವಾಗುವ ಸಧ್ಯತೆ ಇದೆ. ಈ ಸಮಯದಲ್ಲಿ ಯಾವುದೇ ರೀತಿಯ ವಹಿವಾಟುಗಳನ್ನು ತಪ್ಪಿಸುವುದು ನಿಮಗೆ ಉತ್ತಮವಾಗುತ್ತದೆ.

ಈ ಸಮಯದಲ್ಲಿ ಸರ್ಕಾರಿ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ವಾಹನವನ್ನು ಚಲಾಯಿಸುವ ಸ್ಥಳೀಯರು, ವಾಹನವನ್ನು ಚಲಾಯಿಸುವ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ, ಯಾವುದೇ ಅಪಘಾತವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಉತ್ತಮ ಆಹಾರವನ್ನು ಸೇವಿಸಿ, ಯೋಗ, ಧ್ಯಾನ ಮತ್ತು ವ್ಯಾಯಾಮವನ್ನು ಆಶ್ರಯಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಬುಧ ಹೋರಾ ಸಮಯದಲ್ಲಿ, ಬುಧ ದೇವ ಬೀಜ ಮಂತ್ರವನ್ನು ಜಪಿಸುವುದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.

ಮೀನಾ ರಾಶಿ ವಾರದ ರಾಶಿ ಭವಿಷ್ಯ

ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 750/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com