ಕನ್ಯಾ ರಾಶಿಯಲ್ಲಿ ಮಾರ್ಗಿ ಬುಧ (18th October 2021 )
ಸೌರವ್ಯೂಹದಲ್ಲಿ ಬುಧ ಗಹವು ಸೂರ್ಯನಿಗೆ ಅತ್ಯಂತ ಹತ್ತಿರದಲ್ಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವು ಎಲ್ಲಾ ಗ್ರಹಗಳ ನಡೆವೆ ರಾಜಕುಮಾರನ ಸ್ಥಾನಮಾನವನ್ನು ಹೊಂದಿದೆ. ಸಾಮಾನ್ಯವಾಗಿ ಬುಧವು ಶುಭ ಫಲಿತಾಂಶಗಳನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ ಆದರೆ ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ಬುಧವು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಸಹ ಬೀರುತ್ತದೆ. ಉದಾಹರಣೆಗೆ, ಬುಧವು ಒಬ್ಬ ವ್ಯಕ್ತಿಯ ಜಾತಕದ ಆರನೇ, ಎಂಟನೇ ಮಂತ್ತು ಹನ್ನೆರಡನೇ ಮನೆಯಲ್ಲಿದ್ದರೆ, ಇದು ಸ್ಥಳೀಯನಿಗೆ ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಬುಧವನ್ನು ದೇವದೂತ ಎಂದು ಸಹ ಪರಿಗಣಿಸಲಾಗಿದೆ. ಎಲ್ಲಾ ಹನ್ನೆರಡು ರಾಶಿಗಳಲ್ಲಿ ಇದು ಮಿಥುನ ಮತ್ತು ಕನ್ಯಾ ರಾಶಿಯನ್ನು ಆಳುತ್ತದೆ. ಯಾವುದೇ ಸ್ಥಳೀಯನ ಜೀವನದಲ್ಲಿ ಈ ಗ್ರಹವನ್ನು ಬುದ್ಧಿ, ಗಣಿತ, ವಾಣಿಜ್ಯ, ಸಂವಹನ ಇತ್ಯಾದಿಯ ಅಂಶವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಬುಧ ದೇವ ಬಲವಾದ ಸ್ಥಿತಿಯಲ್ಲಿದ್ದರೆ, ಸಾಮಾನ್ಯವಾಗಿ ಸ್ಥಳೀಯರು ತಕ್ಷಣ ಉತ್ತರಗಳನ್ನು ನೀಡುವವರಾಗಿರುತ್ತಾರೆ ಮತ್ತು ಗಣಿತ ಮತ್ತು ವಾಣಿಜ್ಯದ ಅವರ ಹಿಡಿತವು ಸಹ ಸಾಕಷ್ಟು ಉತ್ತಮವಾಗಿರುತ್ತದೆ. ಬುಧ ಗ್ರಹವು ದೇಹದ ವಿವಿಧ ಭಾಗಗಳಾದ ತೋಳುಗಳು, ಕಿವಿ, ಶ್ವಾಸಕೋಶಗಳು, ನರಮಂಡಲ ಮತ್ತು ಚರ್ಮವನ್ನು ಆಳುತ್ತದೆ.
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ವರ್ಷ 2022 ರಲ್ಲಿ ಬುಧ ದೇವ 18 ಅಕ್ಟೋಬರ್ ರಂದು ರಾತ್ರಿ 08 ಗಂಟೆ 46 ನಿಮಿಷಕ್ಕೆ ಕನ್ಯಾ ರಾಶಿಯಲ್ಲಿ ಮಾರ್ಗಿಯಾಗಿ ಪ್ರವೇಶಿಸಲಿದ್ದಾರೆ. ತನ್ನ ಸ್ವರಾಶಿ ಕನ್ಯಾದಲ್ಲಿ 22 ದಿನಗಳ ವರೆಗೆ ಸಾಗಿದ ನಂತರ ಬುಧ ದೇವ 02 ರಂದು ಮಂಗಳವಾರ ಬೆಳಿಗ್ಗೆ 09 ಗಂಟೆ 43 ನಿಮಿಷಕ್ಕೆ ತುಲಾ ರಾಶಿಯಲ್ಲಿ ಪ್ರವೇಶಿಸುತ್ತದೆ. ವಕ್ರೀ ಬುಧದ ಶಕ್ತಿಯಿಂದ ಪ್ರಭಾವಿತರಾಗಿ ತಮ್ಮ ಸ್ವಭಾವದಲ್ಲಿ ಕಿರಿಕಿರಿ ಅಥವಾ ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುವ ಜನರು ನೆಮ್ಮದಿಯ ಉಸಿರು ತೆಗೆದುಕೊಳ್ಳಬಹುದು. ಏಕೆಂದರೆ ಬುಧ ದೇವ ತನ್ನ ಉನ್ನತ ರಾಶಿ ಕನ್ಯಾದಲ್ಲಿ ಮಾರ್ಗಿಯಾಗಲಿದ್ದಾರೆ. ಇದು ಸ್ಥಳೀಯರಿಗೆ ಅನುಕೂಲಕರ ಫಲಿತಾಂಶಗಳನ್ನು ಒದಗಿಸುತ್ತದೆ. ಬುಧ ಗ್ರಹವು ಸಂವಹನ, ಪ್ರಯಾಣ, ಸಹೋದರ-ಸಹೋದರಿ, ನೆರೆಹೊರೆಯವರು, ಸಹೋದ್ಯೋಗಿಗಳು ಮತ್ತು ಅನೇಕ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಯೋಜನೆಗಳು, ಮಾತುಗಳು ಮತ್ತು ದೀರ್ಘಕಾಲದಿಂದ ಅಂಟಿಕೊಂಡಿರುವ ಒಪ್ಪಂದಗಳಿಗೆ ಈ ಸಮಯದಲ್ಲಿ ಗತಿ ನೀಡುವ ಕೆಲಸ ಮಾಡುತ್ತದೆ.
ಬುಧ ದೇವ ಮಾರ್ಗಿಯಾಗುವುದರೊಂದಿಗೆ ಕೆಲಸದ ಸ್ಥಳದಲ್ಲಿರುವ ಎಲ್ಲಾ ಬಂಧಿತ ಶಕ್ತಿಯನ್ನು ಮುಕ್ತಗೊಳಿಸುವ ಮೂಲಕ ಕೆಲಸದ ವ್ಯವಸ್ಥೆಯನ್ನು ಸಕಾರಾತ್ಮಕ ರೀತಿಯಲ್ಲಿ ಸುಧಾರಿಸಲು ಸಹಕಾರವೆಂದು ಸಾಬೀತುಪಡಿಸಬಹುದು. ಇದರ ಪರಿಣಾಮವಾಗಿ ಸ್ಥಳೀಯರು ತಮ್ಮ ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರವನ್ನು ಪಡೆಯುವಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಸೃಜನಶೀಲ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಬಹುದು. ನಡೆಯಿರಿ ಮಾರ್ಗಿ ಬುಧವು 12 ರಾಶಿಗಳ ಜೀವನದಲ್ಲಿ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
Read in English: Mercury Being Direct in Virgo (18th October 2021)
मेष / ಮೇಷ ರಾಶಿ
ಮೇಷ ರಾಶಿಚಕ್ರದ ಜನರಿಗೆ ಬುಧ ಗ್ರಹವು ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ನಿಮ್ಮ ಆರನೇ ಮನೆ ಅಂದರೆ ದೈನಂದಿನ ಆದಾಯ, ಸಾಲ ಮತ್ತು ಶತ್ರುವಿನ ಮನೆಗೆ ಮಾರ್ಗಿಯಾಗಿ ಪ್ರವೇಶಿಸುತ್ತದೆ. ಈ ಸಮಯದಲ್ಲಿ, ಹೊಸದನ್ನು ಆರಂಭಿಸಲು ಮತ್ತು ಹೊಸ ಅನುಭವಗಳನ್ನು ಪಡೆಯಲು ನಿಮ್ಮ ಮನಸ್ಸಿನಲ್ಲಿ ನೀವು ಬಲವಾದ ಬಯಕೆಯನ್ನು ಹೊಂದಿರಬಹುದು. ಬುಧ ದೇವ ಮಾರ್ಗಿಯಾಗುವುದರಿಂದಾಗಿ, ಮೇಷ ರಾಶಿಚಕ್ರದ ಜನರಲ್ಲಿ ಮಹತ್ವಾಕಾಂಕ್ಷೆಯ ಹೆಚ್ಚಳವನ್ನು ಕಾಣಬಹುದು. ನಿಮ್ಮ ಕೌಶಲ್ಯಗಳನ್ನು ವೃದ್ಧಿಕಿಸಿಕೊಳ್ಳಲು, ನಿಮಗಾಗಿ ಸಮಯವನ್ನು ತೆಗೆದುಕೊಳ್ಳಲು ಮತ್ತು ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿರುವ ಎಲ್ಲಾ ದಾಖಲೆಗಳನ್ನು ತೊಡೆದುಹಾಕಲು ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. .ಆರ್ಥಿಕವಾಗಿ ಈ ಸಮಯವು ನಿಮಗೆ ಸರಸರಿಯಾಗಿರಲಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ಸಮಯದಲ್ಲಿ ಕುಟುಂಬ ಜೀವನದಲ್ಲಿ ಉದ್ವಿಗ್ನತೆಯ ವಾತಾವರಣದ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಕೋನದಿಂದ ಈ ಅವಧಿಯು ನಿಮಗೆ ಉತ್ತಮವಾಗಿರಬಹುದು. ಈ ಸಮಯದಲ್ಲಿ ದೈಹಿಕವಾಗಿ ನೀವು ಆರೋಗ್ಯವಾಗಿ ಅನುಭವಿಸಬಹುದು. ಆದಾಗ್ಯೂ, ಅತಿಯಾದ ಕೆಲಸದ ಹೊರೆಯ ಕಾರಣದಿಂದಾಗಿ ಈ ಅವಧಿಯಲ್ಲಿ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಬಹುದು. ಅಂತಹ ಪರಿಸ್ಥಿತಿಯಲ್ಲಿ ಈ ಸಮಯದಲ್ಲಿ ನಿಮ್ಮ ದಿನಚರಿಯಲ್ಲಿ ಯೋಗ ಮತ್ತು ಧ್ಯಾನವನ್ನು ಸೇರಿಸಿ ಮಾನಸಿಕ ಒತ್ತಡವನ್ನು ತೊಡೆದುಹಾಕಬಹುದು ಎಂದು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - ಬುಧವಾರದಂದು ಉಪವಾಸ ಮಾಡಿ.
वृषभ / ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರ ಜಾತಕದಲ್ಲಿ ಬುಧ ಗ್ರಹವು ಅವರ ಎರಡನೇ ಮತ್ತು ಹತ್ತನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಬುಧ ದೇವ ನಿಮ್ಮ ಐದನೇ ಮನೆ ಅಂದರೆ ಮಕ್ಕಳು, ಶಿಕ್ಷಣ ಮತ್ತು ಪ್ರೀತಿಯ ಸಂಬಂಧದ ಮನೆಯಲ್ಲಿ ಮಾರ್ಗಿಯಾಗಲಿದ್ದಾರೆ. ಈ ಅವಧಿಯಲ್ಲಿ ಸ್ಥಳೀಯರಲ್ಲಿ ಸೃಜನಶೀಲ ಕೌಶಲ್ಯದಲ್ಲಿ ಹೆಚ್ಚಳವಾಗಬಹುದು ಮತ್ತು ಈ ಅವಧಿಯು ವೃಷಭ ರಾಶಿಚಕ್ರದ ಸ್ಥಳೀಯರಿಗೆ ವಿಶೇಷವಾಗಿ ನಿಮ್ಮ ವೃತ್ತಿಜೀವನದಲ್ಲಿ ಸೃಜನಶೀಲ ರೀತಿಯಲ್ಲಿ ಕೆಲವು ಹೊಸ ಯೋಜನೆಗಳನ್ನು ಮಾಡಲು ಅಥವಾ ಏನಾದರೂ ಹೊಸದನ್ನು ಮಾಡಲು ಅತ್ಯಂತ ಅನುಕೂಲಕರವೆಂದು ಸಾಬೀತುಪಡಿಸಬಹುದು. ಆರ್ಥಿಕವಾಗಿ ನೋಡಿದರೆ, ವೃಷಭ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನಿಮ್ಮ ಜೀವನ ಶೈಲಿಯನ್ನು ಇನ್ನಷ್ಟು ಉತ್ತಮಗೊಳಿಸಲು ನೀವು ಹೆಚ್ಚುವರಿ ಹಣವನ್ನು ಖರ್ಚು ಮಾಡುವುದನ್ನು ಕಾಣಬಹುದು. ಈ ಕಾರಣದಿಂದಾಗಿ ನಿಮ್ಮ ಮಾಸಿಕ ಬಜೆಟ್ ಹದಗೆಡಬಹುದು.
ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಲು ಮತ್ತು ಕೇವಲ ಅವಶ್ಯಕ ವಸ್ತುಗಳ ಮೇಲೆ ಮಾತ್ರ ಹಣಕಾಸು ಖರ್ಚು ಮಾಡಲು ನಿಮಗೆ ಸಲಹೆ ನೀಡಲಾಗಿದೆ. ಹಣಕಾಸು ಸಂಗ್ರಹಿಸಲು ಪ್ರಯತ್ನಿಸಿ. ವೈಯಕ್ತಿಕ ಜೀವನದಲ್ಲಿ ಈ ಸಮಯದಲ್ಲಿ ನಿಮ್ಮ ಸ್ನೇಹಿತರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯಬಹುದು. ಇದಲ್ಲದೆ ಈ ಅವಧಿಯಲ್ಲಿ ನೀವು ಹೊಸ ಜನರನ್ನು ಭೇಟಿಯಾಗುವಿರಿ ಮತ್ತು ಅವರಲ್ಲಿ ಯಾರೊಂದಿಗಾದರೂ ನಿಮ್ಮ ಪ್ರೀತಿಯ ಜೀವನದಲ್ಲಿ ಹೊಸ ಸಂಬಂಧವನ್ನು ಆರಂಭಿಸುವ ಸಾಧ್ಯತೆ ಇದೆ. ವಿವಾಹಿತರಿಗೆ ಮತ್ತು ಮಕ್ಕಳ ಸಂತೋಷವನ್ನು ಅನುಭವಿಸುತ್ತಿರುವ ವೃಷಭ ರಾಶಿಚಕ್ರದ ಜನರಿಗೂ ಈ ಸಮಯ ಅನುಕೂಲಕರವಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ಶೇರ್ ಮಾರ್ಕೆಟ್ ಇತ್ಯಾದಿಯಿಂದಲೂ ನಿಮಗೆ ಲಾಭವಾಗಬಹುದು. ಆದಾಗ್ಯೂ, ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಅವುಗಳನ್ನು ತೊಳೆದುಕೊಳ್ಳಿ.
मिथुन / ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಅವರ ಲಗ್ನದ ಮನೆ ಮತ್ತು ನಾಲ್ಕನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗಿದೆ ಮತ್ತು ಈ ಅವಧಿಯಲ್ಲಿ ಇದು ನಿಮ್ಮ ನಾಲ್ಕನೇ ಮನೆ ಅಂದರೆ ತಾಯಿ, ಐಷಾರಾಮಿ ಮತ್ತು ಸಂತೋಷದ ಮನೆಯಲ್ಲಿ ಮಾರ್ಗಿಯಾಗುತ್ತದೆ. ಮಿಥುನ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ವೃತ್ತಿಪರ ಜೀವನದಲ್ಲಿನ ಪ್ರತಿಯೊಂದು ವಿಷಯವನ್ನು ಅಥವಾ ಒಪ್ಪಂದವನ್ನು ಪ್ರಾಯೋಗಿಕವಾಗಿ ನಿವಾರಿಸಲು ಒತ್ತು ನೀಡುವುದನ್ನು ಕಾಣಬಹುದು. ಇದರೊಂದಿಗೆ ಈ ಸಮಯದಲ್ಲಿ ನೀವು ಯಾರೊಂದಿಗಾದರೂ ಮಾತನಾಡುವಾಗ ನಿಮ್ಮ ಮಾತುಗಳಲ್ಲಿ ಸ್ಪಷ್ಟತೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಈ ಅವಧಿಯು ಯಾರೊಂದಿಗಾದರೂ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವಲ್ಲಿ ಅತ್ಯಂತ ಅನುಕೂಲಕರವಾಗಿರಬಹುದು, ಏಕೆಂದರೆ ಈ ಸಮಯದಲ್ಲಿ ನೀವು ಹೇಳುವ ಪ್ರತಿಯೊಂದು ವಿಷಯವನ್ನು ಸಾಕಷ್ಟು ಪ್ರಶಂಸಿಸಬಹುದು
ವೈಯಕ್ತಿಕ ಜೀವನದಲ್ಲಿ, ಈ ಸಮಯದಲ್ಲಿ ನಿಮ್ಮ ಸಹೋದರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯಬಹುದು ಮತ್ತು ಈ ಅವಧಿಯಲ್ಲಿ ನಿಮ್ಮ ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಲ್ಲಿ ನೀವು ಯಶಸ್ವಿಯಾಗಬಹುದು, ಮಿಥುನ ರಾಶಿಚಕ್ರದ ಜನರು ಈ ಸಮಯದಲ್ಲಿ ತಮ್ಮ ಕುಟುಂಬದ ಬಗ್ಗೆ ಜಾಗರೂಕರಾಗಿರುವುದನ್ನು ಕಾಣಬಹುದು ಮತ್ತು ನೀವು ಅವರ ಸಂತೋಷ-ಸಂಪನ್ಮೂಲಗಳ ಬಗ್ಗೆ ನೀವು ಸಂಪೂರ್ಣ ಕಾಳಜಿವಹಿಸುವ ಸಾಧ್ಯತೆ ಇದೆ. ಆರ್ಥಿಕವಾಗಿ ನೋಡಿದರೆ, ಈ ಸಮಯದಲ್ಲಿ ಆಸ್ತಿಯ ಮೂಲಕ ನೀವು ಲಾಭವನ್ನು ಗಳಿಸಬಹುದು. ಅರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಈ ಸಮಯದಲ್ಲಿ ನಿಮ್ಮನ್ನು ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ ಮತ್ತು ಸಣ್ಣ ಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ.
ಪರಿಹಾರ - ದೇವಸ್ಥಾನದಲ್ಲಿ ಹಾಲು ಮತ್ತು ಅಕ್ಕಿ ದಾನ ಮಾಡುವುದು ನಿಮಗೆ ಉತ್ತಮ.
कर्क / ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಅವರ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಇದು ನಿಮ್ಮ ಮೂರನೇ ಮನೆ ಅಂದರೆ ಪರಾಕ್ರಮ, ಸಂವಹನ ಮತ್ತು ಸಹೋದರ-ಸಹೋದರಿಯರ ಎರಡನೇ ಮನೆಯಲ್ಲಿ ಮಾರ್ಗಿಯಾಗಿ ಪ್ರವೇಶಿಸುತ್ತದೆ. ಈ ಸಮಯದಲ್ಲಿ ಕರ್ಕ ರಾಶಿಚಕ್ರದ ಸ್ಥಳೀಯರ ಮನಸ್ಸು ಅನಿಶ್ಚಿತತೆಯಿಂದ ತುಂಬಿರಬಹುದು. ಈ ಸಮಯದಲ್ಲಿ ನೀವು ಮನೆಯಲ್ಲಿರಲು, ವಿಶ್ರಾಂತಿ ಪಡೆಯಲು ಮತ್ತು ಪ್ರಪಂಚದಿಂದ ಪ್ರತ್ಯೇಕವಾಗಿರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಕೆಲವೊಮ್ಮೆ ನೀವು ಹೊಸದನ್ನು ಆರಂಭಿಸಬೇಕು ಅಥವಾ ಎಲ್ಲಾದರೂ ಸುತ್ತಾಡಲು ಹೋಗಬೇಕು ಎಂದು ಸಹ ನಿಮಗೆ ಅನಿಸಬಹುದು. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ನೀವು ಹಣ ಮತ್ತು ಪ್ರಗತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಬಹುದು.
ಆರ್ಥಿಕವಾಗಿ, ಬುಧದ ಈ ಸ್ಥಿತಿಯಿಂದಾಗಿ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ ಮತ್ತು ಸ್ವಭಾವತಃ ನೀವು ಸ್ವಲ್ಪ ಹೆಚ್ಚು ವೆಚ್ಚಗಳನ್ನು ಮಾಡುವವರಾಗಬಹುದು. ವೈಯಕ್ತಿಕ ಜೀವನದಲ್ಲಿ ನಿಮ್ಮಲ್ಲಿ ದಯೆಯ ಭಾವನೆ ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುವಲ್ಲಿ ಯಶಸ್ವಿಯಾಗಬಹುದು. ಈ ಸಮಯದಲ್ಲಿ ನಿಮ್ಮ ಸುತ್ತಮುತ್ತಲಿನ ಚಟುವಟಿಕೆಗಳಲ್ಲಿ ನೀವು ಭಾಗವಹಿಸಬಹುದು. ಆರೋಗ್ಯದ ದೃಷ್ಟಿಕೋನದಿಂದ, ಈ ಅವಧಿಯಲ್ಲಿ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬಹುದು. ಒಟ್ಟಾರೆಯಾಗಿ ಈ ಸಮಯ ನಿಮಗೆ ಅನುಕೂಲಕರವಾಗಿರಬಹುದು.
ಪರಿಹಾರ - ಹಸುವಿಗೆ ಮೇವು ತಿನ್ನಿಸಿ.
सिंह / ಸಿಂಹ ರಾಶಿ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಅವರ ಎರಡನೇ ಮನೆ ಮತ್ತು ಹನ್ನೊಂದಷ್ಟೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಇದು ನಿಮ್ಮ ಹಣ, ಸಂವಹನ ಮತ್ತು ಸಂಪತ್ತಿನ ಮನೆಗೆ ಮಾರ್ಗಿಯಾಗಿ ಪ್ರವೇಶಿಸುತ್ತದೆ. ಈ ಅವಧಿಯಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರಲ್ಲಿ ತಮ್ಮ ಆರಾಮದಾಯಕ ಜೀವನವನ್ನು ಬಿಟ್ಟು ತಮ್ಮ ಕನಸುಗಳನ್ನು ಈಡೇರಿಸುವ ಆಸೆ ಪ್ರಬಲವಾಗಬಹುದು. ಆರ್ಥಿಕವಾಗಿ ನೋಡಿದರೆ, ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಯಾವುದೇ ಅನುಭವಿ ವ್ಯಕ್ತಿಯ ಸಮಾಲೋಚನೆಯ ಆಧಾರದ ಮೇಲೆ ಯಾವುದೇ ದೀರ್ಘಕಾಲದ ಹೂಡಿಕೆಯನ್ನು ಮಾಡಲು ಈ ಸಮಯವು ಅತ್ಯಂತ ಅನುಕೂಲಕರ ಎಂದು ಸಾಬೀತುಪಡಿಸಬಹುದು. ಇದಲ್ಲದೆ ಈ ಸಮಯದಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ನೀವು ಪ್ರಯತ್ನಿಸಬಹುದು.
ಇದರ ಹೊರತಾಗಿ, ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಆದಾಯದ ಮೂಲಗಳನ್ನು ವಿಸ್ತರಿಸಲು ಸಹ ಆಲೋಚಿಸಬಹುದು. ಬುಧದ ಮಾರ್ಗಿ ಸ್ಥಿತಿಯ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳತ್ತ ನೀವು ಹೆಚ್ಚು ಒಲವು ಹೊಂದಿರಬಹುದು. ಇದಲ್ಲದೆ ನೀವು ಯಾವುದೇ ದೂರಸ್ಥ ಪ್ರಯಾಣಕ್ಕೆ ಹೋಗಲು ಸಹ ಯೋಜಿಸಬಹುದು. ಇದರಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ವೈಯಕ್ತಿಕ ಜೀವನವು ಈ ಸಮಯದಲ್ಲಿ ಸಂತೋಷವಾಗಿರಬಹುದು. ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಈ ಅವಧಿಯಲ್ಲಿ ನೀವು ನಿಮ್ಮನು ಪೂರ್ಣ ಶಕ್ತಿಯಿಂದ ತುಂಬಿರುವಂತೆ ಅನುಭವಿಸಬಹುದು.
ಪರಿಹಾರ - ಮದ್ಯ ಮತ್ತು ಮಾಂಸದ ಸೇವನೆಯನ್ನು ತಪ್ಪಿಸಿ.
ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮ ಅದೃಷ್ಟ ಯಾವಾಗ ತೆರೆಯುತ್ತದೆ ಮತ್ತು ನಿಮ್ಮ ಜೀವನದಲ್ಲಿ ಯಾವಾಗ ಸಂತೋಷ ಬರುತ್ತದೆ ಎಂಬುದನ್ನು ತಿಳಿಯಿರಿ
कन्या / ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಅವರ ಲಗ್ನದ ಮನೆ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಈ ಅವಧಿಯಲ್ಲಿ ಇದು ಕನ್ಯಾ ರಾಶಿಚಕ್ರದ ಲಗ್ನದ ಮನೆ ಅಂದರೆ ಚಿತ್ರ, ನಡವಳಿಕೆ ಮತ್ತು ವ್ಯಕ್ತಿತ್ವದ ಮನೆಯಲ್ಲಿ ಮಾರ್ಗಿಯಾಗಿ ಪ್ರವೇಶಿಸುತ್ತದೆ. ಬುಧದ ಈ ಸ್ಥಾನದ ಕಾರಣದಿಂದಾಗಿ ಕನ್ಯಾ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತುಂಬಾ ಸ್ನೇಹಪರ ಮತ್ತು ವಾಗ್ಮಿಯಾಗಬಹುದು. ಈ ಅವಧಿಯಲ್ಲಿ ನೀವು ನಿಮ್ಮ ಬಹಳಷ್ಟು ಸಮಯವನ್ನು ಸೋಶಿಯಲ್ ನೆಟ್ವರ್ಕಿಂಗ್ ಸೈಟ್ಸ್ ಮತ್ತು ಲ್ಯಾಪ್ಟಾಪ್, ಮೊಬೈಲ್ ಇತ್ಯಾದಿ ಸಂವಹನ ಸಾಧನಗಳಲ್ಲಿ ಕಳೆಯಬಹುದು. ಇದಲ್ಲದೆ ಈ ಸಮಯದಲ್ಲಿ ನೀವು ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವುದನ್ನು ಕಾಣಬಹುದು ಮತ್ತು ಇದರಲ್ಲಿ ನೀವು ಯಶಸ್ಸು ಪಡೆಯುವ ಪ್ರಬಲ ಸಾಧ್ಯತೆ ಇದೆ. ಆರ್ಥಿಕವಾಗಿ ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ ಎಂದು ಸಾಬೀತುಪಡಿಸಬಹುದು. ಈ ಅವಧಿಯಲ್ಲಿ ನೀವು ಉತ್ತಮ ಮತ್ತು ಪ್ರಯೋಜನಕಾರಿ ಆರ್ಥಿಕ ಹೂಡಿಕೆಗಳನ್ನು ಮಾಡುವಲ್ಲಿ ಯಶಸ್ವಿಯಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ವೈಯಕ್ತಿಕ ಜೀವನದಲ್ಲಿ, ಈ ಸಮಯದಲ್ಲಿ ನೀವು ತುಂಬಾ ಸಾಮಾಜಿಕರಾಗಿರುತ್ತೀರಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಮತ್ತು ಅವರನ್ನು ಭೇಟಿಯಾಗಲು ಸಹ ನೀವು ಯೋಜಿಸಬಹುದು. ಈ ಸಮಯದಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರ ವೈವಾಹಿಕ ಜೀವನವು ಸಹ ಸಂತೋಷವಾಗಿರುತ್ತದೆ. ಆರೋಗ್ಯದ ದೃಷ್ಟಿಕೋನದಿಂದ ಈ ಸಮಯದಲ್ಲಿ ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮ್ಮನ್ನು ಆರೋಗ್ಯವಾಗಿ ಅನುಭವಿಸಬಹುದು.
ಪರಿಹಾರ - ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ನಿಮಗೆ ಉತ್ತಮ.
ಬೃಹತ್ ಕುಂಡಲಿ: ನಿಮ್ಮ ಜೀವನದ ಮೇಲೆ ಗ್ರಹಗಳ ಪರಿಣಾಮ ಮತ್ತು ಪರಿಹಾರವನ್ನು ತಿಳಿಯಿರಿ
तुला / ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಅವರ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ನಿಮ್ಮ ಹನ್ನೆರಡನೇ ಮನೆ ಅಂದರೆ ವೆಚ್ಚ, ಮೋಕ್ಷ ಮತ್ತು ವಿದೇಶದಲ್ಲಿ ನೆಲೆಸುವ ಮನೆಯಲ್ಲಿ ಮಾರ್ಗಿಯಾಗಲಿದೆ. ಈ ಅವಧಿಯಲ್ಲಿ ಏಕಾಂಗಿಯಾಗಿ ಸಮಯವನ್ನು ಕಳೆಯುವಲ್ಲಿ ನೀವು ಹೆಚ್ಚು ಒಲವು ಹೊಂದಿರಬಹುದು ಮತ್ತು ಇದರೊಂದಿಗೆ ಈ ಸಮಯದಲ್ಲಿ ನೀವು ಅಧ್ಯಮಠದತ್ತ ಹೆಚ್ಚು ಒಲವು ಹೊಂದಿರಬಹುದು. ವೃತ್ತಿಪರ ಜೀವನದ ದೃಷ್ಟಿಕೋನದಿಂದ ಈ ಸಮಯ ನಿಮಗೆ ಅನುಕೂಲಕರವಾಗಿರುವ ಸಾಧ್ಯತೆ ಇದೆ, ಆದರೆ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಕೆಲವು ಜವಾಬ್ದಾರಿಗಳನ್ನು ಅಥವಾ ನಿಮಗೆ ವಹಿಸಲಾಗಿರುವ ಕೆಲವು ಕೆಲಸಗಳನ್ನು ನಿಮ್ಮಿಂದ ಹಿಂಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ವಿದೇಶ ಪ್ರಯಾಣಕ್ಕೆ ಹೋಗಲು ಯೋಜಿಸುತ್ತಿರುವ ತುಲಾ ರಾಶಿಚಕ್ರದ ಜನರ ಆಸೆ ಈ ಸಮಯದಲ್ಲಿ ಪೂರ್ಣಗೊಳ್ಳಬಹುದು. ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಕೇವಲ ಅವಶ್ಯಕ ವಸ್ತುಗಳ ಮೇಲೆ ಮಾತ್ರ ಹಣವನ್ನು ಖರ್ಚು ಮಾಡಿ ಎಂದು ನಿಮಗೆ ಸಲಹೆ ನೀಡಲಾಗಿದೆ ಮತ್ತು ಹಣಕಾಸು ಸಂಗ್ರಹಿಸಲು ಸಹ ಪ್ರಯತ್ನಿಸಿ. ವೈಯಕ್ತಿಕ ಜೀವನದ ದೃಷ್ಟಿಕೋನದಿಂದ, ಈ ಅವಧಿಯಲ್ಲಿ ನಿಮ್ಮ ಸ್ನೇಹಿತರಿಂದ ಏನನ್ನೂ ಮುಚಿಡದಂತೆ ಸೂಚಿಸಲಾಗಿದೆ. ಏಕೆಂದರೆ ಅಗತ್ಯವಿರುವಾಗ ನಿಮ್ಮನ್ನು ಬೆಂಬಲಿಸಲು ಅವರು ಹಿಂಜರಿಯುವುದಿಲ್ಲ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ನಿಮ್ಮ ಹಣವನ್ನು ಖರ್ಚು ಮಾಡಬೇಕಾಗಬಹುದು. ಆದರೆ ಈ ಸಮಯದಲ್ಲಿ ನಿಮ್ಮನ್ನು ತೊಂದರೆಗೊಳಿಸುವ ಯಾವುದೇ ದೊಡ್ಡ ಅರೋಗ್ಯ ಸಮಸ್ಯೆಯ ಸಾಧ್ಯತೆ ತುಂಬಾ ಕಡಿಮೆ ಇದೆ.
ಪರಿಹಾರ - ಮನೆಯ ಮಹಿಳೆಯರು ಮತ್ತು ಹುಡುಗಿಯರನ್ನು ಗೌರವಿಸಿ ಮತ್ತು ಚಿಕ್ಕ ಹುಡುಗಿಯರಿಗೆ ಪ್ರೀತಿ ನೀಡಿ ಮತ್ತು ಅವರ ಬಗ್ಗೆ ಕಾಳಜಿ ವಹಿಸಿ.
वृश्चिक / ವೃಶ್ಚಿಕ ರಾಶಿ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಅವರ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಈ ಅವಧಿಯಲ್ಲಿ ಅವರು ನಿಮ್ಮ ಹನ್ನೊಂದನೇ ಮನೆ ಅಂದರೆ ಅಸೆ ಮತ್ತು ಲಾಭದ ಮನೆಗೆ ಮಾರ್ಗಿಯಾಗಿ ಪ್ರವೇಶಿಸುತ್ತಾರೆ. ಈ ಅವಧಿಯಲ್ಲಿ ವೃಶ್ಚಿಕ ರಾಶಿಚಕ್ರದ ಜನರು ಅನೇಕ ಮೂಲಗಳಿಂದ ಆದಾಯವನ್ನು ಗಳಿಸಬಹುದು. ವೃತ್ತಿಪರ ದೃಷ್ಟಿಕೋನದಿಂದ ಈ ಸಮಯ ನಿಮಗೆ ಅಣುಊಲಕರವಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ಕೆಲಸಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. ಆರ್ಥಿಕ ಜೀವನದ ದೃಷ್ಟಿಕೋನದಿಂದ ಈ ಅವಧಿಯಲ್ಲಿನ ನೀವು ಅನೇಕ ಮೂಲಗಳನ್ನು ಮತ್ತು ಹಳೆಯ ಯಾವುದೇ ಹೂಡಿಕೆಯಿಂದ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದ. ಅದೇ ಸಮಯದಲ್ಲಿ ಮತ್ತೊಂದೆಡೆ, ವೈಯಕ್ತಿಕ ಜೀವನವು ಧನಾತ್ಮಕ ಮತ್ತು ಸಂತೋಷವಾಗಿರಬಹುದು. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ವಲಯವನ್ನು ಹೆಚ್ಚಿಸಲು ಪ್ರಯತ್ನಿಸುವುದನ್ನು ಸಹ ಕಾಣಬಹುದು. ಈ ಸಮಯದಲ್ಲಿ ವೃಶ್ಚಿಕ ರಾಶಿಚಕ್ರದ ಜನರು ತಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುವುದನ್ನು ಸಹ ಕಾಣಬಹುದು. ಈ ಸಮಯದಲ್ಲಿ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ವೈವಾಹಿಕ ಜೀವನವು ಸರಾಸರಿ ಆಗಿರುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಕೋನದಿಂದ ಈ ಸಮಯವು ನಿಮಗೆ ಅನುಕೂಲಕರವಾಗಿರಬಹುದು ಮತ್ತು ಈ ಸಮಯದಲ್ಲಿ ನಿಮ್ಮನ್ನು ನೀವು ಆರೋಗ್ಯವಾಗಿ ಅನುಭವಿಸಬಹುದು.
ಪರಿಹಾರ - ನಿಮ್ಮ ತಂಗಿಗೆ ಯಾವುದೇ ಉಡುಗೊರೆಯನ್ನು ನೀಡಿ ಮತ್ತು ವ್ಯವಹಾರದಲ್ಲಿ ಪ್ರಾಮಾಣಿಕರಾಗಿರಿ.
ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್
धनु / ಧನು ರಾಶಿ
ಧನು ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವನ್ನು ಅವರ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಇದು ಧನು ರಾಶಿಚಕ್ರದ ಹತ್ತನೇ ಮನೆ ಅಂದರೆ ಹೆಸರು, ಖ್ಯಾತಿ ಮತ್ತು ವೃತ್ತಿಯ ಮನೆಗೆ ಮಾರ್ಗಿಯಾಗಿ ಪ್ರವೇಶಿಸುತ್ತದೆ. ವೃತ್ತಿಪರ ಜೀವನದ ದೃಷ್ಟಿಕೋನದಿಂದ, ಈ ಸಮಯದಲ್ಲಿ ನಿಮ್ಮ ಕೆಲಸದ ಬಗ್ಗೆ ನಿಮ್ಮ ಉತ್ಸಾಹವು ಉತ್ತುಂಗದಲ್ಲಿರುತ್ತದೆ ಮತ್ತು ನಿಮ್ಮ ಸಂಪೂರ್ಣ ಗಮನವನ್ನು ನಿಮ್ಮ ವೃತ್ತಿ ಜೀವನದ ಮೇಲೆ ಕೇಂದ್ರೀಕರಿಸುತ್ತೀರಿ. ಈ ಅವಧಿಯಲ್ಲಿ ಯಾವುದೇ ಕೆಲಸವನ್ನು ನೀವು ನಿಮ್ಮ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಮಾಡುವುದನ್ನು ಕಾಣಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಕೌಶಲ್ಯ ಮತ್ತು ಕಠಿಣ ಪರಿಶ್ರಮರಿಂದಾಗಿ ಈ ಸಮಯದಲ್ಲಿ ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ನಡುವೆ ನೀವು ವಿಭಿನ್ನ ಗುರುತು ಮಾಡಲು ಸಾಧ್ಯವಾಗುತ್ತದೆ. ಉನ್ನತ ಸ್ಥಾನ ಮತ್ತು ಆರ್ಥಿಕ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ಅದೇ ಸಮಯದಲ್ಲಿ ಮತ್ತೊಂದೆಡೆ, ವೈಯಕ್ತಿಕ ಜೀವನದ ದೃಷ್ಟಿಕೋನದಿಂದ ನೋಡಿದರೆ, ಧನು ರಾಶಿಚಕ್ರದ ವಿವಾಹಿತ ಸ್ಥಳೀಯರಿಗೆ ಈ ಸಮಯವು ಸಂತೋಷವಾಗಿರುವ ಸಾಧ್ಯತೆ ಇದೆ. ಆದರೆ ನಿಮ್ಮ ವೃತ್ತಿಪರ ಜೀವನದಲ್ಲಿ ಹೆಚ್ಚುವರಿ ಕಾರ್ಯನಿರತತೆಯಿಂದಾಗಿ ನಿಮ್ಮಿಬ್ಬರ ನಡುವೆ ಕೆಲವು ತಪ್ಪುಗ್ರಹಿಕೆಗಳು ಸಹ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ವೃತ್ತಿಪರ ಜೀವನದೊಂದಿಗೆ ವೈವಾಹಿಕ ಜೀವನಕ್ಕೂ ಸಮಯವನ್ನು ನೀಡಲು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಧನು ರಾಶಿಚಕ್ರದ ವಿವಾಹಿತ ಜನರ ಜೀವನ ಸಂಗಾತಿಯು ಸಹ ಈ ಸಮಯದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಗಳಿಸಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಅತಿಯಾದ ಕೆಲಸದ ಹೊರೆಯಿಂದಾಗಿ ಮಾನಸಿಕವಾಗಿ ನೀವು ಒತ್ತಡವನ್ನು ಎದುರಿಸಬಹುದು.
ಪರಿಹಾರ - ಹಸಿರು ಹುಲ್ಲು, ಸಂಪೂರ್ಣ ಹೆಸರು ಬೆಲೆ ಮತ್ತು ಪಾಲಕವನ್ನು ದಾನ ಮಾಡಿ.
मकर / ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಅವರ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗಿದೆ ಮತ್ತು ಈ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆ ಅಂದರೆ ಅದೃಷ್ಟ, ಧರ್ಮ ಮತ್ತು ಅಧ್ಯಾತ್ಮದ ಮನೆಯಲ್ಲಿ ಮಾರ್ಗಿಯಾಗಲಿದೆ. ಈ ಸಮಯದಲ್ಲಿ ಮಕರ ರಾಶಿಚಕ್ರದ ಸ್ಥಳೀಯರು ಅದೃಷ್ಟದ ಬೆಂಬಲವನ್ನು ಪಡೆಯಬಹುದು ಮತ್ತು ಅವರ ಸಂವಹನ ಕೌಶಲ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ಸುತ್ತಮುತ್ತಲಿನ ಜನರ ಮೇಲೆ ಪರಿಣಾಮ ಬೀರುವಲ್ಲಿ ನೀವು ಯಶಸ್ವಿಯಾಗಬಹುದು. ಈ ಸಮಯದಲ್ಲಿ ಯಾರೊಂದಿಗೂ ಸಂವಹನ ನಡೆಸುವಾಗ ನೀವು ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಅತಿಯಾದ ಆತ್ಮವಿಶ್ವಾಸದಿಂದಾಗಿ ಸಂವಹನ ಮಾಡುವಾಗ ನೀವು ಕೆಲವು ಕಠಿಣ ಪದಗಳನ್ನು ಸಹ ಬಳಸಬಹುದು. ಇದರಿಂದಾಗಿ ಯಾವುದೇ ತಪ್ಪುಗ್ರಹಿಕೆಗಳು ಅಥವಾ ವಾದ ಉಂಟಾಗಬಹುದು.
ಅಂತಹ ಪರಿಸ್ಥಿತಿಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ದೂರವಿರಿ. ಆರ್ಥಿಕ ದೃಷ್ಟಿಕೋನದಿಂದ ನೋಡಿದರೆ, ನಿಮ್ಮ ಜೀವನದಲ್ಲಿ ಯಾವುದೇ ಸಂಪತ್ತಿಗೆ ಸಂಬಂಧಿಸಿದ ವಿವಾದವು ನಡೆಯುತ್ತಿದ್ದರೆ, ಈ ಅವಧಿಯು ಆ ವಿವಾದ ಅಥವಾ ಸಮಸ್ಯೆಯನ್ನು ತೊಡೆದುಹಾಕಲು ಅನುಕೂಲಕರವೆಂದು ಸಾಬೀತುಪಡಿಸಬಹುದು. ಅದೇ ಮತ್ತೊಂದೆಡೆ, ಈ ಸಮಯದಲ್ಲಿ ಮಕರ ರಾಶಿಚಕ್ರದ ಸ್ಥಳೀಯರು ಧಾರ್ಮಿಕ ಯೋಜನೆಗಳು ಮತ್ತು ಚಟುವಟಿಕೆಗಳಲ್ಲಿ ಹಣಕಾಸು ಖರ್ಚು ಮಾಡುವುದನ್ನು ಕಾಣಬಹುದು. ಆರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯವು ನಿಮಗೆ ಅನುಕೂಲಕರವಾಗಿರುವ ಸಾಧ್ಯತೆ ಇದೆ. ಆದಾಗ್ಯೂ, ಈ ಸಮಯದಲ್ಲಿ ಸಣ್ಣ ಪುಟ್ಟ ಅರೋಗ್ಯ ಸಮಸ್ಯೆಗಳು ನಿಮ್ಮ ತಂದೆಯನ್ನು ತೊಂದರೆಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - “ ಬ್ರಾಮ್ ಬ್ರೀಮ್ ಬ್ರೌಮ್ ಸಃ ಬುಧಯ್ ನಮಃ “ ಮಂತ್ರವನ್ನು ಜಪಿಸಿ.
कुंभ / ಕುಂಭ ರಾಶಿ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಅವರ ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಈ ಸಮಯದಲ್ಲಿ ಇದು ನಿಮ್ಮ ಎಂಟನೇ ಮನೆ ಅಂದರೆ ಅನಿರೀಕ್ಷಿತ, ಲಾಭ/ಹಾನಿ, ಪೂರ್ವಜರ ಆಸ್ತಿ ಮತ್ತು ರಹಸ್ಯದ ಪ್ರವೇಶಿಸಲಿದೆ. ಬುಧದ ಈ ಸ್ಥಾನದ ಸಮಯದಲ್ಲಿ ಕುಂಭ ರಾಶಿಚಕ್ರದ ಸ್ಥಳೀಯರು ಕಠಿಣ ಪರಿಶ್ರಮದ ಹೊರತಾಗಿಯೂ, ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಂಶೋಧನಾ ಕ್ಷೇತ್ರದಲ್ಲಿ ಅಥವಾ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಜನರಿಗೆ ಈ ಸಮಯ ಅನುಕೂಲಕರವಾಗಿರುವ ಸಾಧ್ಯತೆ ಇದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಅಧ್ಯಯನದ ಮೇಲೆ ಉತ್ತಮವಾಗಿ ಕೆಂಡರಿಕರಿಸಲು ನಿಮಗೆ ಸಾಧ್ಯವಾಗುತ್ತದೆ. ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಉತ್ತರಾಧಿಕಾರಿಯಾಗಿ ಅನಿರೀಕ್ಷಿತ ಲಾಭಗಳನ್ನು ಗಳಿಸುವ ಸಾಧ್ಯತೆ ಇದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವೈಯಕ್ತಿಕ ಜೀವನದಲ್ಲಿ ಕುಂಭ ರಾಶಿಚಕ್ರದ ಜನರು ತಮ್ಮ ಸಂಬಂಧಿಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವ ಸಾಧ್ಯತೆ ಇದೆ. ಈ ಸಮಯದಲ್ಲಿ ಸಂತೋಷದ ಜೀವನವನ್ನು ಕಳೆಯುವುದನ್ನು ಸಹ ಕಾಣಬಹುದು.
ಈ ಅವಧಿಯಲ್ಲಿ ಅವರ ಮೂಲಕ ನೀವು ಯಾವುದೇ ಬೆಂಬಲವನ್ನು ಸಹ ಪಡೆಯಬಹುದು. ಕುಂಭ ರಾಶಿಚಕ್ರದ ವಿವಾಹಿತರಿಗೆ ಈ ಸಮಯವು ಮಿಶ್ರವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ಯಾವುದೇ ವಿಷಯದ ಬಗ್ಗೆ ನಿಮ್ಮ ಜೀವನ ಸಂಗಾತಿಯೊಂದಿಗೆ ಸಣ್ಣ ಪುಟ್ಟ ವಿವಾದವಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಇನ್ನೂ ಒಂಟಿಯಾಗಿರುವ ಕುಂಭ ರಾಶಿಚಕ್ರದ ಜನರು ಈ ಸಮಯದಲ್ಲಿ ಯಾವುದೇ ಸಂಬಂಧವನ್ನು ಹೊಂದದಿರಲು ಅಲಹೆ ನಈಡಲಾಗಿದೆ. ಏಕೆಂದರೆ ಈ ಹೊಸ ಸಂಬಂಧದಿಂದ ಅವರು ಪ್ರತಿಕೂಲ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಕುಂಭ ರಾಶಿಚಕ್ರದ ಜನರು ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನಿಮಗೆ ಸಣ್ಣ ಪುಟ್ಟ ಗಾಯವಾಗಬಹುದು. ಅಥವಾ ಕಿವಿ, ಮೂಗು ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಪರಿಹಾರ - “ ಓಂ ಬುಂ ಬುಧಯ್ ನಮಃ “ ಮಂತ್ರವನ್ನು 108 ಬಾರಿ ಜಪಿಸಿ.
मीन / ಮೀನ ರಾಶಿ
ಮೀನ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಅವರ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಇದು ನಿಮ್ಮ ಏಳನೇ ಮನೆ ಅಂದರೆ ಮದುವೆ ಮತ್ತು ಪಾಲುದಾರಿಕೆಯ ಮನೆಯಲ್ಲಿ ಮಾರ್ಗಿಯಾಗಿ ಪ್ರವೇಶಿಸುತ್ತದೆ. ಈ ಅವಧಿಯಲ್ಲಿ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಮೀನ ರಾಶಿಚಕ್ರದ ಸ್ಥಳೀಯರು ಉತ್ತಮ ಪ್ರಯೋಜನವನ್ನು ಪಡೆಯಬಹುದು ಮತ್ತು ಅವರ ಪಾಲುದಾರರೊಂದಿಗಿನ ಅವರ ಸಂಬಂಧವು ಇನ್ನಷ್ಟು ಬಲಗೊಳ್ಳಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಉದ್ಯೋಗದಲ್ಲಿರುವ ಜನರಿಗೆ ಸಹ ಲಾಭವಾಗಬಹುದು. ಈ ಸಮಯದಲ್ಲಿ ನೀವು ಯಾವುದೇ ಹೊಸ ವ್ಯಾಪರವನ್ನು ಆರಂಭಿಸುವ ಪ್ರಬಲ ಸಾಧ್ಯತೆ ಇದೆ ಅಥವಾ ನಿಮ್ಮ ಉತ್ತಮ ಸಂವಹನ ಶೈಲಿಯಿಂದ ಹೊಸ ಮತ್ತು ಲಾಭದಾಯಕ ಒಪ್ಪಂದವನ್ನು ಮಾಡುವಲ್ಲಿ ನೀವು ಯಶಸ್ವಿಯಾಗಬಹುದು.
ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯವು ನಿಮಗೆ ಅನುಕೂಲಕರವಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ / ಪ್ರೇಮಿಯೊಂದಿಗೆ ನೀವು ಎಲ್ಲಾದರೂ ಸುತ್ತಾಡಲು ಹೋಗಬಹುದು. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ವಿವಾದವು ಸಹ ಈ ಸಮಯದಲ್ಲಿ ಪರಿಹರಿಸಬಹುದು ಮತ್ತು ಈ ಸಮಯದಲ್ಲಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರೊಂದಿಗಿನ ಸಂಬಂಧವನ್ನು ಉತ್ತಮಗೊಳಿಸುವತ್ತ ನೀವು ಕೇಂದ್ರೀಕರಿಸುವುದನ್ನು ಕಾಣಲಾಗುತ್ತದೆ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಅರೋಗ್ಯ ಉತ್ತಮವಾಗಿರಬಹುದು, ಆದರೂ ಉತ್ತಮ ಆರೋಗ್ಯಕ್ಕಾಗಿ ನೀವು ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಆಹಾರಕ್ಕೆ ಸಂಬಂಧಿಸಿದ ಡೈಟ್ ಪ್ಲಾನ್ ಮಾಡಲು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - ಹಸುವಿಗೆ ಹಸಿರು ಮೇವು ಅಥವಾ ಹಸಿರು ತರಕಾರಿಗಳನ್ನು ತಿನ್ನಿಸಿ.
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ವಾರ್ತಾದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಧನ್ಯವಾದಗಳು.