ಮೀನಾ ರಾಶಿ ಭವಿಷ್ಯ 2021 - Pisces Horoscope 2021 in Kannada
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷವು ಮೀನಾ ರಾಶಿಚಕ್ರದ ಸ್ಥಳೀಯರಿಗೆ ಹೆಚ್ಚು ಉತ್ತಮವಾಗಿರಲಿದೆ. ಕೆಲಸದ ಸ್ಥಳದಲ್ಲಿ ನೀವು ಬಡ್ತಿ ಪಡೆಯುವಿರಿ ಮತ್ತು ವಿದೇಶದಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ವೃತ್ತಿಪರ ಸ್ಥಳೀಯರಿಗೆ ಆಗಸ್ಟ್ ನಂತರದ ಸಮಯವು ಬಹಳ ಉತ್ತಮವಾಗಿ ಕಂಡುಬರುತ್ತಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವ್ಯಾಪಾರಸ್ಥರು ಡಿಸೆಂಬರ್ ತಿಂಗಳಲ್ಲಿ ಉನ್ನತ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮನ್ನು ಕೇಂದ್ರೀಕರಿಸುತ್ತ, ನಿಮ್ಮ ಪರಿಶ್ರಮವನ್ನು ಮುಂದುವರಿಸಿ. ಆಗ ಮಾತ್ರ ನೀವು ಹೆಚ್ಚು ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ವರ್ಷ 2021 ರಲ್ಲಿ ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಅದಕ್ಕಾಗಿ ಸಮಯವು ಉತ್ತಮವಾಗಿರಲಿದೆ. ಏಕೆಂದರೆ ಈ ವರ್ಷ ನಿಮ್ಮ ಆದಾಯವು ನಿರಂತರವಾಗಿ ಹೆಚ್ಚಾಗಲಿದೆ. ಇದರಿಂದಾಗಿ ನೀವು ಹಣಕಾಸು ಸಂಗ್ರಹಿಸುವಲ್ಲಿ ಕೂಡ ಯಶಸ್ವಿಯಾಗುವಿರಿ. ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನೀವು ಯಾವುದೇ ಹೊಸ ವಾಹನ ಅಥವಾ ಮನೆಯನ್ನು ಖರೀದಿಸಲು ನಿರ್ಧಾರ ತೆಗೆದುಕೊಳ್ಳಬಹುದು. ವ್ಯಾಪಾರವನ್ನು ವಿಸ್ತರಿಸುವಲ್ಲಿ ಸಹ ನಿಮ್ಮ ಹಣವನ್ನು ಖರ್ಚಿಸಬಹುದು. ಆದಾಗ್ಯೂ ಏಪ್ರಿಲ್ ಅಂತ್ಯದಿಂದ ಸೆಪ್ಟೆಂಬರ್ ಸಮಯವೂ ನಿಮಗೆ ಕೆಲವು ಆರ್ಥಿಕ ಬಿಕ್ಕಟ್ಟುಗಳನ್ನು ತರಲಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಮೀನಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಮಯವು ಆರಂಭದಲ್ಲಿ ಕೆಲವು ಒತ್ತಡಗಳನ್ನು ಉಂಟುಮಾಡಬಹುದು. ಆದರೆ ಜನವರಿ ನಂತರ ಪರಿಸ್ಥಿತಿಗಳು ಅನುಕೂಲತೆ ಉಂಟಾಗುವುದರಿಂದಾಗಿ ಖಂಡಿತವಾಗಿಯೂ ಅವರು ಯಶಸ್ಸು ಪಡೆಯುತ್ತಾರೆ. ಈ ವರ್ಷದ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ವಿದ್ಯಾರ್ಥಿಗಳು ಭಾಗಶಃ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ.
ರಾಜ ಯೋಗ ನಿಮ್ಮ ಜಾತಕದಲ್ಲಿದೆಯೇ?
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ಮೀನಾ ರಾಶಿಚಕ್ರದ ಸ್ಥಳೀಯರ ಕುಟುಂಬ ಜೀವನಕ್ಕೆ ಉತ್ತಮವಾಗಿರಲಿದೆ. ನೀವು ನಿಮ್ಮ ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಇದರೊಂದಿಗೆ ಅವರ ಆರೋಗ್ಯವು ಸುಧಾರಿಸುವುದರಿಂದಾಗಿ ನೀವು ಸಂತೋಷಪಡುವುದನ್ನು ಕಾಣಲಾಗುತ್ತದೆ. ಒಟ್ಟಾರೆಯಾಗಿ ಹೇಳಿದರೆ ಏಪ್ರಿಲ್ ಮತ್ತು ಮೇ ತಿಂಗಳನ್ನು ಬಿಟ್ಟು ಈ ಇಡೀ ವರ್ಷ ನಿಮ್ಮ ಕುಟುಂಬ ಜೀವನಕ್ಕೆ ಅತ್ಯಂತ ಉತ್ತಮವಾಗಿ ಕಂಡುಬರುತ್ತಿದೆ. ದಾಂಪತ್ಯ ಜೀವನಕ್ಕೂ ಸಮಯ ಅದೃಷ್ಟಶಾಲಿಯಾಗಿದೆ. ವಿವಾಹಿತ ಜನರ ಜೀವನದಲ್ಲಿ ಯಾವುದೇ ಹೊಸ ಅತಿಥಿಯ ಆಗಮನವಾಗುವುದರಿಂದಾಗಿ ಸಂಬಂಧದಲ್ಲಿ ಪ್ರೀತಿ ಮತ್ತು ಹೊಸತನವು ಬರುತ್ತದೆ. ಮೀನಾ ರಾಶಿಚಕ್ರದ ಸ್ಥಳೀಯರು ಮಕ್ಕಳು ಸಹ ಈ ವರ್ಷ ಪ್ರಗತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ಮೀನಾ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ, ಅದರಲ್ಲಿ ಕೆಲವು ಸಮಸ್ಯೆಗಳು ಏಕೆಂದರೆ ಶನಿ ಮತ್ತು ಗುರು ದೇವರ ದೃಷ್ಟಿಯು ಒಂದೆಡೆ ನಿಮ್ಮ ಪ್ರೀತಿ ಜೀವನದಲ್ಲಿ ಸಂಪೂರ್ಣ ಪ್ರೀತಿಯನ್ನು ನೀಡಿದರೆ, ಮತ್ತೊಂದೆಡೆ ನಿಮಗೆ ಸಮಸ್ಯೆಯನ್ನು ಕೊಟ್ಟು ನಿಮ್ಮ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಪ್ರೀತಿ ಜೀವನಕ್ಕೆ ವರ್ಷದ ಆರಂಭವು ಮತ್ತು ಅಂತ್ಯದ ಭಾಗವು ತುಂಬಾ ಉತ್ತಮವಾಗಿರುತ್ತದೆ. ಆರೋಗ್ಯಕ್ಕೆ ಸಮಯ ಉತ್ತಮವಾಗಿರಲಿದೆ ಆದರೆ ಮೀನಾ ರಾಶಿಚಕ್ರದ ಸ್ಥಳೀಯರು ವಿಶೇಷವಾಗಿ ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳ ಸಮಯದಲ್ಲಿ ಮತ್ತು ನಂತರ ನವೆಂಬರ್ ರಿಂದ ವರ್ಷದ ಅಂತ್ಯದ ವರೆಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ. ಇದಲ್ಲದೆ ನಿಮ್ಮ ಆರೋಗ್ಯವು ಉತ್ತಮವಾಗಿರಲಿದೆ.
ಅತ್ಯುತ್ತಮ ಜ್ಯೋತಿಷಿಗಳೊಂದಿಗೆ ನೇರ ಕರೆಯಲ್ಲಿ ಮಾತನಾಡಲು, ಇಲ್ಲಿ ಕ್ಲಿಕ್ ಮಾಡಿ.
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according to Pisces horoscope 2021
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ವೃತ್ತಿ ಜೀವನದಲ್ಲಿ ಈ ವರ್ಷ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ, ಇದರಿಂದ ಈ ವರ್ಷ ನೀವು ಉತ್ತಮ ಸಮಯವನ್ನು ಕಳೆಯುವಿರಿ. ಆದಾಗ್ಯೂ ನೀವು ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತೀರಿ ಮತ್ತು ಅವರು ತಮ್ಮ ಉನ್ನತ ಸ್ಥಾನದಲ್ಲಿದ್ದು, ನಿಮಗೆ ಬೆಂಬಲಿಸುವುದನ್ನು ಕಾಣಲಾಗುತದೆ. ಈ ಸಮಯದಲ್ಲಿ ನೀವು ನಿಮ್ಮ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಿ ಮುಂದುವರಿಯಬೇಕು. ಆಗ ಮಾತ್ರ ನಿಮ್ಮ ಅಧಿಕಾರಿಗಳು ನಿಮ್ಮ ಪರಿಶ್ರಮವನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ಸರಿಯಾದ ಸಮಯ ಬಂದಾಗ ಅದಕ್ಕೆ ಅನುಗುಣವಾಗಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುತ್ತದೆ. ವರ್ಷದ ಆರಂಭದಲ್ಲಿ ಹತ್ತನೇ ಮನೆಯಲ್ಲಿ ಸೂರ್ಯ ಮತ್ತು ಬುಧ ದೇವರ ಜೋಡಿ ಉತ್ತಮವಾಗಿರುತ್ತದೆ. ಆಗಸ್ಟ್ ರಿಂದ ಸೆಪ್ಟೆಂಬರ್ ಮಧ್ಯೆ ಉದ್ಯೋಗದಲ್ಲಿರುವ ಸ್ಥಳೀಯರು ತಮ್ಮ ಕೆಲಸದ ಸ್ಥಳದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಅವರು ಪ್ರಗತಿ ಮತ್ತು ಬಡ್ತಿ ಪಡೆಯಬಹುದು ಆದ್ದರಿಂದ ನಿಮ್ಮ ಪ್ರಯತ್ನಗಳು ಮತ್ತು ಪರಿಶ್ರಮವನ್ನು ಮುಂದುವರಿಸಿ.
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯದಲ್ಲಿ ಕೆಲಸದ ಕಾರಣದಿಂದಾಗಿ ಯಾವುದೇ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಈ ಪ್ರಯಾಣದ ಮೂಲಕ ನೀವು ಉತ್ತಮ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ವಿದೇಶಕ್ಕೆ ಹೋಗಲು ಬಯಸುತ್ತಿರುವ ಸ್ಥಳೀಯರು ಈ ಸಮಯದಲ್ಲಿ ವಿದೇಶಕ್ಕೆ ಹೋಗಲು ಅವಕಾಶವನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ವರ್ಗಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಡಿಸೆಂಬರ್ ತಿಂಗಳು ಅದಕ್ಕೆ ಅತ್ಯಂತ ಉತ್ತಮವಾಗಿರಲಿದೆ. ವ್ಯಾಪಾರಸ್ಥರಿಗೆ ಈ ವರ್ಷ ಉತ್ತಮವಾಗಿರಲಿದೆ. ಅವರು ವರ್ಷದುದ್ದಕ್ಕೂ ತಮ್ಮ ವ್ಯಾಪಾರದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಅಲ್ಲದೆ ತಮ್ಮ ಕೌಶಲ್ಯಗಳ ಬಲದ ಮೇಲೆ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಆಲೋಚನೆಗಳನ್ನು ಮತ್ತು ಸರಿಯಾದ ತಂತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.
ಆಸ್ಟ್ರೋಸೇಜ್ ದೊಡ್ಡ ಜಾತಕ - 250+ ಪುಟಗಳ ನಿಮ್ಮ ಸ್ವಂತ ವರ್ಣರಂಜಿತ ಜಾತಕವನ್ನು ಪಡೆಯಿರಿ.
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according to Pisces horoscope 2021
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನೀವು ನಿಮ್ಮ ಆರ್ಥಿಕ ಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಏಕೇನರೆ ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಮೊದಲಿನಿಂದಲೇ ಕುಳಿತಿರುವ ಶನಿ ದೇವ ಈ ವರ್ಷ ಕೂಡ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಲಿದ್ದಾರೆ ಮತ್ತು ನಿಮಗಾಗಿ ಅನೇಕ ಶಾಶ್ವತ ಆದಾಯವನ್ನು ಸೃಷ್ಟಿಸುತ್ತಾರೆ. ಇದರಿಂದಾಗಿ ವರ್ಷದ ಆರಂಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಕಷ್ಟು ಮಟ್ಟಿಗೆ ಬಲವಾಗಿ ಕಂಡುಬರುತ್ತದೆ. ಇದರೊಂದಿಗೆ ಮಂಗಳ ಗ್ರಹವು ಸಹ ಈ ವರ್ಷದ ಆರಂಭದಲ್ಲಿ ನಿಮ್ಮ ರಾಶಿಚಕ್ರದಿಂದ ಎರಡನೇ ಮನೆಯಲ್ಲಿ ಕುಳಿತಿರುತ್ತದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಗೆ ಬಲವನ್ನು ನೀಡುತ್ತದೆ. ಈ ಅನುಕೂಲಕರ ಪರಿಸ್ಥಿತಿ ಏಪ್ರಿಲ್ ತಿಂಗಳ ವರೆಗೆ ಇರುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಹಣಕಾಸು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ. ಆದರೆ ನಂತರ ಗ್ರಹಗಳ ಬದಲಾವಣೆಯಿಂದಾಗಿ, ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯದ ವರೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಗಳಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಈ ಸಮಯದಲ್ಲಿ ಗುರು ಗ್ರಹವು ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಇರುವುದರಿಂದಾಗಿ ನೀವು ನಿಮ್ಮ ಬಯಕೆಗಳ ಮೇಲೆ ಖರ್ಚು ಮಾಡುವಿರಿ. ಈ ಸಮಯದಲ್ಲಿ ನೀವು ಬಯಸಿದರು ಸಹ ಹಣಕಾಸು ಸಂಗ್ರಹಿಸುವಲ್ಲಿ ವಿಫಲರಾಗುವಿರಿ. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗಿ ಕಂಡುಬರುತ್ತಿದೆ.
ಇದರೊಂದಿಗೆ ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ನ್ಯಾಯಾಲಯದಲ್ಲಿ ಸಂಪತ್ತು ಅಥವಾ ಹಣಕಾಸಿಗೆ ಸಂಬಂಧಿಸಿದ ಯಾವುದೇ ವಿವಾದ ನಡೆಯುತ್ತಿದ್ದರೆ, ಏಪ್ರಿಲ್ ನಿಂದ ಮೇ ಮಧ್ಯದಲ್ಲಿ ಗ್ರಹಗಳ ಪರಿಣಾಮದಿಂದಾಗಿ ಅದರ ನಿರ್ಧಾರವು ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ಇದರಿಂದ ನಿಮಗೆ ಆರ್ಥಿಕ ಲಾಭವಾಗುತ್ತದೆ ಮತ್ತು ನೀವು ಯಾವುದೇ ಹೊಸ ಅಸ್ತಿ ಅಥವಾ ವಾಹನವನ್ನು ಖಾರೀದಿಸಬಹುದು. ಈ ವರ್ಷ ನೀವು ನಿಮ್ಮ ಜೀವನ ಸಂಗಾತಿಯ ಮೂಲಕ ಕೂಡ ಲಾಭವನ್ನು ಪಡೆಯುತ್ತೀರಿ,
ನಿಮ್ಮ ಅದೃಷ್ಟವನ್ನು ಬೆಳಗಿಸಲು ನೀವು ಬಯಸುತ್ತೀರಾ, ಈಗಲೇ ರಾಜ ಯೋಗ ರಿಪೋರ್ಟ್ ಅನ್ನು ಆದೇಶಿಸಿ.
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ - Education life according to Pisces horoscope 2021
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಶಿಕ್ಷಣದ ಕ್ಷೇತ್ರದಲ್ಲಿ ಈ ವರ್ಷ ನಿಮಗೆ ಉತ್ತಮವಾಗಿರಲಿದೆ. ಶನಿ ದೇವ ಮೊದಲಿನಿಂದಲೇ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ದೃಷ್ಟಿ ಹಾಕುತ್ತಿದ್ದಾರೆ. ಇದು ನಿಮ್ಮ ಅಧ್ಯಯನದಲ್ಲಿ ಅಡಚಣೆಗೆ ಮುಖ್ಯ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮನ್ನು ಕೇಂದ್ರೀಕರಿಸಿ ನಿಮ್ಮ ಪರಿಶ್ರಮವನ್ನು ಮುಂದುವರಿಸಿ. ಆದಾಗ್ಯೂ ಜನವರಿ ಅಂತ್ಯದಿಂದ ಏಪ್ರಿಲ್ ವರೆಗೆ ನಿಮ್ಮ ರಾಶಿಯ ಐದನೇ ಮನೆಯ ಮೇಲೆ ಗುರು ಗ್ರಹದ ದೃಷ್ಟಿಯು ನಿಮ್ಮ ಶಿಕ್ಷಣದ ಕ್ಷೇತ್ರದಲ್ಲಿ ನಿಧಾನವಾಗಿ ಆದರೂ ಕಾಲಕಾಲಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅದು ನಿಮ್ಮನ್ನು ಶಕ್ತಿಯುತವಾಗಿಸುತ್ತದೆ ಮತ್ತು ಈ ಸಮಯದಲ್ಲಿ ನೀವು ನಿಮ್ಮ ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳಲು ನಿಮಗೆ ಹೆಚ್ಚು ತೊಂದರೆ ಇರುವುದಿಲ್ಲ.
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷದ ಅಂತ್ಯದ ಮೊದಲಿನ ಸಮಯದಲ್ಲಿ , ಮುಖ್ಯವಾಗಿ 15 ಸಪ್ಟೆಂಬರ್ ರಿಂದ 20 ನವೆಂಬರ್ ಸಮಯದಲ್ಲಿ ಗುರುವು ಹನ್ನೊಂದನೇ ಮನೆಗೆ ಸಾಗುತ್ತದೆ ಮತ್ತು ಅದರ ದೃಷ್ಟಿ ನಿಮ್ಮ ಐದನೇ ಮನೆಯ ಮೇಲೆ ಬೀಳುವುದರಿಂದಾಗಿ ನೀವು ನಿಮ್ಮ ಕಠಿಣ ಪರಿಶ್ರಮದ ಅತ್ಯುತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ಇದರಿಂದಾಗಿ ನೀವು ಪ್ರತಿಯೊಂದು ವಿಷಯದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯದಿದ್ದರೂ ಸಹ, ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಲ್ಲಿ ಕೊರತೆಯನ್ನು ತರಬಾರದು ಎಂಬುದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ವರ್ಷವೂ ತುಂಬಾ ಉತ್ತಮವಾಗಿರಲಿದೆ. ವಿಶೇಷವಾಗಿ ಏಪ್ರಿಲ್ ರಿಂದ ಮೇ ಮತ್ತು ಆಗಸ್ಟ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವು ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ನೀವು ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಯಶಸ್ವಿಯಾಗುವಿರಿ. ಉನ್ನತ ಶಿಕ್ಷಣ ಮತ್ತು ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುತ್ತಿರುವವರು ಯಾವುದೇ ಶುಭ ಸುದ್ಧಿಯನ್ನು ಪಡೆಯಬಹುದು. ವರ್ಷದ ಆರಂಭದಲ್ಲಿ ಸ್ವಲ್ಪ ವಿಳಂಬವಾಗದಾಹುದು ಆದರೆ ಖಂಡಿತವಾಗಿಯೂ ಯಶಸ್ವಿಯಾಗುವಿರಿ.
ಕಾಗ್ನಿ ಆಸ್ಟ್ರೋ ರಿಪೋರ್ಟ್ ಕಾರ್ಲ್ ಜಂಗ್ ಸಿದ್ಧಾಂತವನ್ನು ಆಧರಿಸಿದೆ, ಇದು ವೃತ್ತಿ ಸಮಾಲೋಚನೆ ಕ್ಷೇತ್ರದ ಅತ್ಯುತ್ತಮ ವರದಿಯಾಗಿದೆ.
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according to Pisces horoscope 2021
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಮೀನಾ ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ಕುಟುಂಬ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಶನಿ ದೇವರ ದೃಷ್ಟಿಯು ಈ ವರ್ಷ ನಿಮ್ಮ ಕುಟುಂಬ ಜೀವನಕ್ಕೆ ಅತ್ಯಂತ ಅನುಕೂಲಕರವಾಗಿರಲಿದೆ. ನಿಮ್ಮ ಪೂರ್ವಜರ ಆಸ್ತಿಯ ಮಾರಾಟದಿಂದ ಈ ವರ್ಷ ನೀವು ಲಾಭವನ್ನು ಗಳಿಸುವಿರಿ. ಇದರೊಂದಿಗೆ ಬಾಡಿಗೆ ಆದಾಯವನ್ನು ಪಡೆಯುವುದರಿಂದ ಸಹ ಕುಟುಂಬ ಸದಸ್ಯರು ಸಂತೋಷವಾಗಿ ಕಾಣುತ್ತಾರೆ. ಸಹೋದರ ಸಹೋದರಿಯರಿಗೆ ಸಮಯ ಉತ್ತಮವಾಗಿ ಕಂಡುಬರುತ್ತಿದೆ. ಅವರು ಪ್ರಗತಿ ಪಡೆಯುತ್ತಾರೆ ಮತ್ತು ಅವರು ಪ್ರವಾಸದ ಅವಕಾಶವನ್ನು ಸಹ ಪಡೆಯುತ್ತಾರೆ.
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ನಕ್ಷತ್ರಗಳ ಚಾಲನೆ ನಿಮ್ಮ ಪರವಾಗಿ ಇರುವುದರಿಂದಾಗಿ ಪೋಷಕರ ಆರೋಗ್ಯವು ಈ ವರ್ಷ ಸುಧಾರಿಸುತ್ತದೆ ಮತ್ತು ಅವರು ತಮ್ಮ ದೀರ್ಘಕಾಲದ ರೋಗದಿಂದಲೂ ಮುಕ್ತರಾಗುವ ಸಾಧ್ಯತೆ ಇದೆ, ಇದರಿಂದಾಗಿ ನೀವು ಹೆಚ್ಚಿನ ಮಟ್ಟಿಗೆ ಒತ್ತಡ ಮುಕ್ತರಾಗಿ ಅನುಭವಿಸುವಿರಿ. ಈ ಇಡೀ ವರ್ಷ ನಿಮ್ಮ ಕುಟುಂಬ ಸಂತೋಷಕ್ಕೆ ಉತ್ತಮವಾಗಿ ಕಾಣುತ್ತಿದೆ ಆದರೆ ಇದರ ಹೊರೆತಾಗಿಯೂ ವರ್ಷದ ಮಧ್ಯದಲ್ಲಿ ಅಂದರೆ ಏಪ್ರಿಲ್ ಮಾತು ಮೇ ತಿಂಗಳಲ್ಲಿ ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ಮನೆಯ ಒಬ್ಬ ಸದಸ್ಯರ ಮೇಲೆ ನಿಮ್ಮ ಹೆಚ್ಚುವರಿ ಹಣಕಾಸು ಖರ್ಚಾಗುತ್ತದೆ, ಇದರಿಂದ ಮನೆಯ ವಾತಾವರಣವು ಹದಗೆಡಬಹುದು.
ಈಗ ಯಾವಾಗ ಬೇಕಾದರೂ ನಮ್ಮ ಪರಿಣಿತ ಜ್ಯೋತಿಷಿಗಳೊಂದಿಗೆ ಪ್ರಶ್ನೆ ಕೇಳಿ!
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Marriage life according to Pisces horoscope 2021
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ದಾಂಪತ್ಯ ಜೀವನದಲ್ಲಿ ಮೀನಾ ರಾಶಿಚಕ್ರದ ಸ್ಥಳೀಯರು ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ನಿಮ್ಮ ವೈವಾಹಿಕ ಜೀವನದಲ್ಲಿ ಜೀವನ ಸಂಗಾತಿ ಮತ್ತು ನಿಮ್ಮ ಸಂಬಂಧದಲ್ಲಿ ಹೊಸತನ ಉಂಟಾಗುತ್ತದೆ. ಇದರೊಂದಿಗೆ ಸಂಬಂಧದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುವುದರಿಂದ ನಿಮ್ಮ ಮಾನಸಿಕ ಓಟದ ಸಹ ದೂರವಾಗುತ್ತದೆ. ಇದು ನಿಮ್ಮ ವೈವಾಹಿಕ ಜೀವನವನ್ನು ಸಿಹಿಗೊಳಿಸುತ್ತದೆ. ವಿಶೇಷವಾಗಿ ಈ ವರ್ಷದ ಆರಂಭದ ಮೂರು ತಿಂಗಳುಗಳು ಅಂದರೆ ಜನವರಿ ರಿಂದ ಮಾರ್ಚ್ ವರೆಗಿನ ಸಮಯ ನಿಮಗೆ ಅದ್ಭುತವಾಗಿರಲಿದೆ. ಇದಲ್ಲದೆ ಅಕ್ಟೋಬರ್ ಅಂತ್ಯದಿಂದ ಸೇಪ್ಗ್ಟೆಂಬೆರ್ ಮಧ್ಯದ ಸಮಯವೂ ಹಿಂದಿನ ಸಮಯಕ್ಕಿಂತ ಹೆಚ್ಚು ಅನುಕೂಲಕರವಾಗಿರಲಿದೆ. ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಈ ವರ್ಷ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಕಾಣುವಿರಿ. ಇದಲ್ಲದೆ 6 ಸೆಪ್ಟೆಂಬರ್ ರಿಂದ 22 ಅಕ್ಟೋಬರ್ ತಿಂಗಳ ಸಮಯವು ಸ್ವಲ್ಪ ಒತ್ತಡದಿಂದ ತುಂಬಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ವಿಶೇಷ ಗಮನ ಹರಿಸಿ ಮುಂದುವರಿಯುವ ಅಗತ್ಯವಿದೆ, ಇಲ್ಲದಿದ್ದರೆ ದಾಂಪತ್ಯ ಜೀವನದಲ್ಲಿ ನೀವು ವಾದ ವಿವಾದದಲ್ಲಿ ಸಿಲುಕಿಕೊಳ್ಳಬಹುದು. ಮಕ್ಕಳಿಲ್ಲದ ಜನರು ಈ ವರ್ಷ ಶುಭ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ.
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಮಕ್ಕಳು ಮತ್ತು ವೈವಾಹಿಕ ದೃಷ್ಟಿಯಿಂದ, ಗ್ರಹಗಳ ಸಂಚಾರವು ನಿಮಗೆ ಅನುಕೂಲಕರವಾಗಿರಲಿವೆ. ಇದರಿಂದಾಗಿ ಮಕ್ಕಳಿಗೆ ಸಮಯ ಉತ್ತಮವಾಗಿರುತ್ತದೆ ಏಕೆಂದರೆ ಈ ವರ್ಷ ನಿಮ್ಮ ರಾಶಿಚಕ್ರದಿಂದ ಮೂರನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯು, ನಿಮ್ಮ ಮಕ್ಕಳಿಗೆ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ನೀಡುವ ಕೆಲಸ ಮಾಡುತ್ತದೆ. ನಿಮ್ಮ ಮಕ್ಕಳು ಉದ್ಯೋಗದಲ್ಲಿದ್ದರೆ, ಅವರ ಪ್ರಗತಿಯಾಗುತ್ತದೆ, ಅದೇ ಸಮಯದಲ್ಲಿ ಮತ್ತೊಂದೆಡೆ, ಅವರು ಶಿಕ್ಷಣ ಪಡೆಯುತ್ತಿದ್ದರೆ, ಶಿಕ್ಷಣದಲ್ಲಿ ಕೂಡ ಅವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆದಾಗ್ಯೂ, ಯಾವುದೇ ಪರಿಸ್ಥಿತಿಯಲ್ಲಿ ಅವರು ಗೊಂದಲಕ್ಕೊಳಗಾಗದಿರುವಂತೆ ನೀವು ಮತ್ತು ನಿಮ್ಮ ಜೀವನ ಸಂಗಾತಿ ಅವರ ಬಗ್ಗೆ ಗಮನ ಹರಿಸುವ ಅಗತ್ಯವಿರುತ್ತದೆ. ಇದಕ್ಕಾಗಿ ಮನೆ ಕುಟುಂಬದ ಎಲ್ಲ ವಿವಾದಗಳಿಂದ ಮಕ್ಕಳನ್ನು ದೂರವಿಡುವುದು ನಿಮಗೆ ಉತ್ತಮ.
ಜ್ಯೋತಿಷ್ಯ ಪರಿಹಾರಗಳಿಗಾಗಿ ಈಗಲೇ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ Love life according to Pisces horoscope 2021
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಪ್ರೀತಿ ಜೀವನವು ಮೀನಾ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ಸ್ವಲ್ಪ ಕಡಿಮೆ ಅನುಕೂಲಕ್ರವಾಗಿರಲಿದೆ. ಏಕೆಂದರೆ ಈ ವರ್ಷದುದ್ದಕ್ಕೂ ಶನಿ ದೇವರ ದೃಷ್ಟಿ ನಿಮ್ಮ ಐದನೇ ಮನೆಯ ಮೇಲೆ ಬೀಳುವುದರಿಂದಾಗಿ ನಿಮ್ಮ ಪ್ರೀತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಲಿವೆ. ವರ್ಷದ ಆರಂಭದಿಂದಲೇ ನೀವು ನಿಮ್ಮ ಪ್ರೀತಿ ಜೀವನದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ ಇದರ ನಂತರ ಜನವರಿ ಅಂತ್ಯದಿಂದ ಏಪ್ರಿಲ್ ವರೆಗಿನ ಸಮಯವು ಪ್ರೀತಿ ಜೀವನಕ್ಕೆ ಸ್ವಲ್ಪ ಉತ್ತಮವಾಗುತ್ತದೆ. ಈ ಸಮಯದಲ್ಲಿ ಗುರುವಿನ ದೃಷ್ಟಿಯು ನಿಮ್ಮ ರಾಶಿಚಕ್ರದ ಮೇಲಿರುವುದರಿಂದಾಗಿ ಪ್ರೇಮಿಗಳ ಪ್ರೀತಿಯ ಮದುವೆಯ ಸಾಧ್ಯತೆ ಉಂಟಾಗುತ್ತದೆ ಮತ್ತು ಅನೇಕ ಜನರು ಪ್ರೀತಿಯ ಮದುವೆಗೆ ತಮ್ಮ ಕುಟುಂಬದ ಬೆಂಬಲವನ್ನು ಸಹ ಪಡೆಯಬಹುದು. ಆದಾಗ್ಯೂ ಅಂತ್ಯದ ಭಾಗದಲ್ಲಿ ವಿಶೇಷವಾಗಿ 15 ಸೆಪ್ಟೆಂಬರ್ ರಿಂದ 20 ನವೆಂಬರ್ ಮಧ್ಯದಲ್ಲಿ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಆದರೆ ಈ ಸಮಯದಲ್ಲಿ ಸಹ ನಾಡು ನಡುವೆ ವಿವಾದಗಳು ಮುಂದುವರಿಯುತ್ತವೆ.
ಈ ವರ್ಷ 2 ಜೂನ್ ರಿಂದ 20 ಜೂಲೈ ಮಧ್ಯದ ಸಮಯದಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ, ನಿಮ್ಮ ಮೊಂಡುತನದ ನಡವಳಿಕೆಯಿಂದಾಗಿ ಪ್ರೀತಿಪಾತ್ರರೊಂದಿಗೆ ಜಗಳ - ವಿವಾದದ ಪರಿಸ್ಥಿತಿ ಉಂಟಾಗಬಹುದು. ವರ್ಷದ ಅಂತ್ಯದ ತಿಂಗಳು ಅಂದರೆ 5 ಡಿಸೆಂಬರ್ ನಂತರದ ಸಮಯವು ನಿಮ್ಮ ಪ್ರೀತಿ ಜೀವನಕ್ಕೆ ಅತ್ಯಂತ ಉತ್ತಮವಾಗಿರಲಿದೆ.
ರಾಜ ಯೋಗ ರಿಪೋರ್ಟ್ ಮೂಲಕ ಜಾತಕದಲ್ಲಿ ಉಂಟಾಗುವ ರಾಜ ಯೋಗದ ಮಾಹಿತಿಯನ್ನು ಪಡೆಯಿರಿ
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ ಜೀವನ - Health life according to Pisces horoscope 2021
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಆರೋಗ್ಯಕ್ಕಿದ ದೃಷ್ಟಿಯಿಂದ ಈ ವರ್ಷ ಸಾಮಾನ್ಯಕ್ಕಿಂತ ಸ್ವಲ್ಪ ಉತ್ತಮವಾಗಿರಲಿದೆ. ಏಕೆಂದರೆ ಈ ವರ್ಷ ಗ್ರಹಗಳ ಸ್ಥಾನವು ಅನುಕೂಲಕರವಾಗಿರುತ್ತವೆ, ಆದರೆ 6 ಏಪ್ರಿಲ್ ನಿಂದ 15 ಸೆಪ್ಟೆಂಬರ್ ಮಧ್ಯೆ ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ. ಈ ಸಮಯದಲ್ಲಿ ನಿಮ್ಮ ರಾಶಿಯ ಅಧಿಪತಿ ಗುರು ಗ್ರಹವು ಹನ್ನೆರಡನೇ ಮನೆಯಲ್ಲಿರುವ ಕಾರಣದಿಂದಾಗಿ ನಿಮ್ಮ ಅರೋಗ್ಯ ನಷ್ಟದ ಸಾಧ್ಯತೆ ಇದೆ. ಇದರ ನಂತರ ಪರಿಸ್ಥಿತಿಗಳು ಸುಧಾರಿಸುತ್ತವೆ ಮತ್ತು ನಂತರ ಮತ್ತೊಂದು ಬಾರಿ 20 ನವೆಂಬರ್ ರಿಂದ ವರ್ಷದ ಅಂತ್ಯದ ವರೆಗೆ ನೀವು ಆರೋಗ್ಯದ ಸಮಸ್ಯೆಯನ್ನು ಹೊಂದಿರುವಿರಿ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಹೊರಗಿನ ಆಹಾರವನ್ನು ತಪ್ಪಿಸಬೇಕು. ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಮಾನಸಿಕ ಮತ್ತು ದೈಹಿಕ ನೋವಿನಿಂದ ನಿಮ್ಮನ್ನು ತಪ್ಪಿಸಲು ನೀವು ಉತ್ತಮ ಮತ್ತು ಆರೋಗ್ಯಕರ ದಿನಚರಿಯನ್ನು ಅನುಸರಿಸಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ ಮತ್ತು ಸಾಧ್ಯವಾದರೆ ಯೋಗ ಧ್ಯಾನವನ್ನು ಆಶ್ರಯಿಸಿ.
ಆರೋಗ್ಯ ರಿಪೋರ್ಟ್ ಮೂಲಕ ನಿಮ್ಮ ಆರೋಗ್ಯ ಸಮಸ್ಯೆಗೆ ಜ್ಯೋತಿಷ್ಯ ಪರಿಹಾರವನ್ನು ಕೇಳಿ.
ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರಗಳು - Astrological remedies according to Pisces horoscope 2021
- ಉತ್ತಮ ಗುಣಮಟ್ಟದ ನೀಲಮಣಿ ರತ್ನವನ್ನು ಚಿನ್ನದಲ್ಲಿ ತಯಾರಿಸಿ ಯಾವುದೇ ಗುರುವಾರದಂದು ನಿಮ್ಮ ತೋರು ಬೆರಳಿನಲ್ಲಿ ಧರಿಸಿ. ಇದರಿಂದ ನಿಮ್ಮ ಅರೋಗ್ಯ ಮತ್ತು ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ
- ಎರಡು ಮುಖ ಮತ್ತು ಮೂರು ಮುಖ ರುದ್ರಾಕ್ಷವನ್ನು ಧರಿಸುವುದು ನಿಮಗೆ ಉತ್ತಮವಾಗಿರುತ್ತದೆ. ಇದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ಇದನ್ನು ಯಾವುದೇ ಸೊ ಅವರ ಅಥವಾ ಮಂಗಳವಾರದಂದು ಧರಿಸಬಹುದು.
- ಶನಿದೇವರ ಸ್ನೇಹಿತ ಹನುಮಂತ ದೇವರನ್ನು ಆರಾಧಿಸುವುದು ಮತ್ತು ಬಜರಂಗ ಬಾಣವನ್ನು ಪಠಿಸುವುದು ನಿಮಗೆ ಅತ್ಯಂತ ಶುಭವಾಗಿರುತ್ತದೆ.
- ಯಾವುದೇ ಶನಿವಾರದಂದು ಮಣ್ಣಿನ ಅಥವಾ ಕಬ್ಬಿಣದ ಬಟ್ಟಲಿನಲ್ಲಿ ಸಾಸವೆ ಎಣ್ಣೆಯನ್ನು ತುಂಬಿಸಿ ಅದರಲ್ಲಿ ನಿಮ್ಮ ಮುಖವನ್ನು ನೋಡಿ ಛಾಯಾ ದಾನವನ್ನು ಮಾಡಿ.
ಗುರು ಯಂತ್ರ ವನ್ನು ಸ್ಥಾಪಿಸುವುದು ನಿಮಗೆ ಶುಭವಾಗಿರಲಿದೆ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025