ಕುಂಭ ರಾಶಿ ಭವಿಷ್ಯ 2021 - Aquarius Horoscope 2021 in Kannada
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷವು ಕುಂಭ ರಾಶಿಚಕ್ರದ ಸ್ಥಳೀಯರಿಗೆ ಪ್ರಮುಖವಾದ ಬದಲಾವಣೆಯನ್ನು ತರಲಿದೆ. ಈ ವರ್ಷದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ನೀವು ಸಂಪೂರ್ಣ ಯಶಸ್ಸು ಪಡೆಯಲಿದ್ದೀರಿ. ವಿಶೇಷವಾಗಿ ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ನಿಮಗೆ ಅನೇಕ ಲಾಭಗಳನ್ನು ತರಲಿವೆ. ವ್ಯಾಪಾರಸ್ಥರು ಸಹ ಈ ವರ್ಷ ಉತ್ತಮ ಲಾಭವನ್ನು ಪಡೆಯುತ್ತಾರೆ. ಆದಾಗ್ಯೂ, ಜೂನ್ ಮತ್ತು ಜೂಲೈ ತಿಂಗಳ ಮದ್ಯದಲ್ಲಿ ನೀವು ಇತರರನ್ನು ನಂಬುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಮುಂದಿನ ಸಮಯದಲ್ಲಿ ನೀವು ತೊಂದರೆಕ್ಕೊಳಗಾಗುವ ಸಾಧ್ಯತೆ ಇದೆ. ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಆರ್ಥಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ನೀವು ಎದುರಿಸಬೇಕಾಗಬಹುದು. ಏಕೆಂದರೆ ಶನಿ ದೇವ ಮತ್ತು ಗುರು ದೇವರ ಜೋಡಿಯು ನಿಮ್ಮ ಅನಗತ್ಯ ವೆಚ್ಚಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತಾರೆ. ಇದರಿಂದಾಗಿ ನೀವು ಬಾಹ್ಯಸಿದಿದ್ದರು ಸಹ ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ವರ್ಷ ವಹಿವಾಟಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು ಇಲ್ಲದಿದ್ದರೆ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ.
250 ಕ್ಕೂ ಹೆಚ್ಚು ಪುಟಗಳ ವರ್ಣರಂಜಿತ ಬೃಹತ್ ಕುಂಡಲಿ ಯನ್ನು ಪಡೆಯಿರಿ
ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಈ ವರ್ಷ ಅವರಿಗೆ ಅತ್ಯಂತ ಅನುಕೂಲಕರವಾಗಿರಲಿದೆ. ಈ ವರ್ಷ ನೀವು ನಿಮ್ಮ ಪರಿಶ್ರಮದ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಶನಿ ದೇವ ಇನ್ನು ಸ್ವಲ್ಪ ಕಾಯಿಸುತ್ತಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಬೆಂಬಲವನ್ನು ಪಡೆಯುತ್ತಾರೆ. ಇದರಿಂದಾಗಿ ಅವರು ಪ್ರತಿ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಮರ್ತ್ಯರಾಗುತ್ತಾರೆ. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಅದರಲ್ಲಿ ಈ ವರ್ಷ ನೀವು ಕಡಿಮೆ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಯಾವುದೇ ಕಾರಣದಿಂದಾಗಿ ಈ ವರ್ಷ ನೀವು ನಿಮ್ಮ ಕುಟುಂಬದಿಂದ ದೂರ ಹೋಗಬೇಕಾಗುತ್ತದೆ. ಅಲ್ಲಿ ನೀವು ಅನಾನುಕೂಲತೆಯನ್ನು ಅನುಭವಿಸುವಿರಿ. ಈ ವರ್ಷ ಯಾವುದೇ ದೀರ್ಘಕಾಲದ ರೋಗವು ನಿಮ್ಮ ತಂದೆಯನ್ನು ತೊಂದರೆಗೊಳಿಸಬಹುದು, ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ.
ವಿವಾಹಿತ ಜನರಿಗೆ ಈ ವರ್ಷ ಉತ್ತಮವಾಗಿರಲಿದೆ. ನೀವು ನಿಮ್ಮ ಜೀವನ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ. ಇದರಿಂದಾಗಿ ನೀವು ಹಣಕಾಸಿನ ಜೊತೆಯಲ್ಲಿ ಗೌರವ ಪಡೆಯುವಲ್ಲಿ ಕೂಡ ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ನಿಮ್ಮಿಬ್ಬರ ನಡುವಿನ ಎಲ್ಲ ರೀತಿಯ ವಿವಾದಗಳು ಕೊನೆಗೊಳ್ಳುತ್ತವೆ. ಮತ್ತೊಂದೆಡೆ ಮಕ್ಕಳು ಅದೃಷ್ಟದ ಬೆಂಬಲವನ್ನು ಹೊಂದುವುದರಿಂದ ಅಧ್ಯಯನದಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡಲು ಸಧ್ಯವಾಗುತ್ತದೆ. ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯವೂ ಅತ್ಯಂತ ಉತ್ತಮವಾಗಿರಲಿದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಿಸುತ್ತೀರಿ. ಇದರಿಂದಾಗಿ ವರ್ಷದ ಮಧ್ಯದ ನಂತರ ನಿಮ್ಮ ಪ್ರೀತಿಯ ಮದುವೆಯ ಸಾಧ್ಯತೆ ಇದೆ. ವರ್ಷದ ಆರಂಭದಲ್ಲಿ ಯಾವುದೇ ಕಾರಣದಿಂದಾಗಿ ನೀವು ನಿಮ್ಮ ಪ್ರೀತಿಪಾತ್ರರಿಂದ ದೂರ ಹೋಗಬೇಕಾಗಬಹುದು. ಅಂತಹ ಪರಿಷ್ಟಿತಿಯಲ್ಲಿ ಕಾಲಕಾಲಕ್ಕೆ ನೀವು ಅವರೊಂದಿಗೆ ಮಾತನಾಡುತ್ತೀರಿ ಮತ್ತು ನಿಮ್ಮ ಹೃದಯದ ವಿಷಯವನ್ನು ಅವರೊಂದಿಗೆ ಹಂಚಿಕೊಳ್ಳಿ.
ಗ್ರಹಗಳ ಸಂಚಾರದಿಂದಾಗಿ ಅರೋಗ್ಯ ದೃಷ್ಟಿಯಿಂದ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷವೂ ಸಾಮಾನ್ಯಕ್ಕಿಂತ ಕಡಿಮೆ ಉತ್ತಮವಾಗಿರಲಿದೆ. ಏಕೆಂದರೆ ಶನಿ ದೇವರ ದ್ರಷ್ಟಿಯು ಕಾಲಕಾಲಕ್ಕೆ ನಿಮಗೆ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀಡುವ ಕೆಲಸ ಮಾಡುತ್ತದೆ. ಅವುಗಳಿಗೆ ಚಿಕಿತ್ಸೆ ನೀಡುವುದು ನಿಮಗೆ ಬಹಳ ಮುಖ್ಯ. ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according to Aquarius horoscope 2021
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ವೃತ್ತಿ ಜೀವನದಲ್ಲಿ ಈ ವರ್ಷ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಇಡೀ ವರ್ಷದಲ್ಲಿ ನೀವು ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ನೀವು ಸಯಮದೊಂದಿಗೆ ಮುಂದುವರಿಯುವುದನ್ನು ಕಲಿಯಬೇಕು. ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ಇದರಿಂದಾಗಿ ಸಮಯ ಇರುವಾಗಲೇ ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವ ಸ್ಥಳೀಯರಿಗೆ ಜನವರಿ, ಏಪ್ರಿಲ್ ಮತ್ತು ಮೇ ತಿಂಗಳುಗಳು ಉತ್ತಮವಾಗಿರಲಿವೆ. ಈ ಸಮಯದಲ್ಲಿ ನೀವು ನಿಮ್ಮ ಅಪೇಕ್ಷಿತ ಉದ್ಯೋಗನ್ನು ಪಡೆಯಲು ಸಾಧ್ಯವಾಗುತ್ತದೆ.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಜೂನ್ ರಿಂದ ಜೂಲೈ ತಿಂಗಳ ಮಧ್ಯೆ ನೀವು ವಿಶೇಷವಾಗಿ ಜಾಗರೂಕರಾಗಿರುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ಮಂಗಳ ದೇವರ ದೃಷ್ಟಿ ನಿಮ್ಮ ಆರನೇ ಮನೆಯ ಮೇಲಿರುತ್ತದೆ. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಿರುವ ಸಾಧ್ಯತೆ ಇದೆ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮನ್ನು ತೊಂದರೆಗೊಳಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಈ ಇಡೀ ಪೂರ್ತಿ ವರ್ಷದ ಜೂಲೈ ಅಂತ್ಯದ ವಾರದಿಂದ ಸೆಪ್ಟೆಂಬರ್ ವರೆಗಿನ ಸಮಯವೂ ನಿಮಗಾಗಿ ತುಂಬಾ ಶುಭವಾಗಿರಲಿದೆ. ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನೀವು ಪ್ರಗತಿಯನ್ನು ಪಡೆಯುತ್ತೀರಿ. ಅಕ್ಟೋಬರ್ ತಿಂಗಳಲ್ಲಿ ನೀವು ವರ್ಗಾವಣೆಯನ್ನು ಪಡೆಯಬಹುದು. ವರ್ಷದ ಅಂತಿಮ ಡಿಸೆಂಬರ್ ತಿಂಗಳಲ್ಲಿ ನೀವು ವಿಶೇಷ ಯಶಸ್ಸು ಪಡೆಯಲಿದ್ದೀರಿ. ವ್ಯಾಪಾರ ವರ್ಗದ ಸ್ಥಳೀಯರು ಕೆಲಸಕ್ಕೆ ಸಂಬಂಧಿಸಿದ ಪ್ರಾಸಗಳ ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ವುಯಾಪರಸ್ಥರಿಗೆ ಜೂಲೈ, ಆಗಸ್ಟ್ ಮತ್ತು ಡಿಸೆಂಬರ್ ತಿಂಗಳುಗಳು ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ಈ ಸಮಯದಲ್ಲಿ ನೀವು ನಿಮ್ಮ ಪ್ರಯತ್ನವನ್ನು ಸಾಧ್ಯವಾದಷ್ಟು ಮುಂದುವರಿಸಿ.
ಆಸ್ಟ್ರೋಸೇಜ್ ವರ್ಷದ ಪತ್ರಿಕೆ - ರಾಜ್ ಯೋಗ, ವಿಶೇಷ ಯೋಗ ಮತ್ತು ಜೀವನದಲ್ಲಿ ಶುಭ ಸಮಯದ ಬಗ್ಗೆ ಮಾಹಿತಿ ಪಡೆಯಿರಿ.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according to Aquarius horoscope 2021
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಕುಂಭ ರಾಶಿಚಕ್ರದ ಸ್ಥಳೀಯರು ತಮ್ಮ ಆರ್ಥಿಕ ಜೀವನದಲ್ಲಿ ಈ ವರ್ಷ ಸ್ವಲ್ಪ ಕಡಿಮೆ ಅನುಕೂಲಕರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಏಕೆಂದರೆ ಈ ವರ್ಷದ ಆರಂಭದಿಂದ ಅಂತ್ಯದ ವರೆಗೆ ಶನಿ ದೇವ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿ ಕುಳಿತಿರುತ್ತಾರೆ. ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ದುರ್ಬಲವಾಗುತ್ತದೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಇದನ್ನು ನೀವು ಬಯಸದಿದ್ದರು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಸಮಯ ಇರುವಾಗಲೇ ನಿಮ್ಮ ವೆಚ್ಚಗಳನ್ನು ನೀವು ನಿಯಂತ್ರಿಸದಿದ್ದರೆ, ಮುಂದಿನ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಸಾಕಷ್ಟು ಮಟ್ಟಿಗೆ ದುರ್ಬಲಗೊಳ್ಳಬಹುದು. ಈ ನೋವಿನ ಪರಿಸ್ಥಿತಿ ಜನವರಿ ರಿಂದ ಏಪ್ರಿಲ್ ವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ ಗುರು ಗ್ರಹವು ಸಹ ಏಪ್ರಿಲ್ ವರೆಗೆ ನಿಮ್ಮ ರಾಶಿಯಿಂದ ಇದೆ ಮನೆಯಲ್ಲಿ ಕುಳಿತಿರುತ್ತದೆ. ಇದರಿಂದಾಗಿ ನೀವು ನಿಮ್ಮನ್ನು ಆರ್ಥಿಕವಾಗಿ ನಿಭಾಯಿಸಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಸೆಪ್ಟೆಂಬರ್ ಮದ್ಯದ ವರೆಗೆ ಗ್ರಹಗಳ ಸ್ಥಾನಗಳು ಬದಲಾಯಿಸುವ ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತದೆ. ಆದರೆ ಹಣವನ್ನು ನೀವು ಸಂಗ್ರಹಿಸುವ ಬಗ್ಗೆ ಯೋಚಿಸುವ ಹೊತ್ತಿಗೆ ನಿಮ್ಮ ವೆಚ್ಚಗಳು ಮತ್ತೆ ಹೆಚ್ಚಾಗುತ್ತವೆ. ವಿಶೇಷವಾಗಿ 15 ಸೆಪ್ಟೆಂಬರ್ ರಿಂದ 15 ನವೆಂಬರ್ ಮಧ್ಯೆ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಮತ್ತು ಲೋಕೋಪಕಾರದ ಕೆಳಗಳಗಳಲ್ಲಿ ಹೆಚ್ಚು ಹಣಕಾಸು ಖರ್ಚಿಸುವುದನ್ನು ಕಾಣಲಾಗುತ್ತದೆ. ಆದ್ದರಿಂದ ಈ ವರ್ಷ, ವರ್ಷದುದ್ದಕ್ಕೂ ನೀವು ನಿಮ್ಮ ಆದಾಯದಲ್ಲಿ ಕೊರತೆಯನ್ನು ಅನುಭವಿಸುವಿರಿ. ಆದರೆ ಆರಂಭದಿಂದಲೇ ನೀವು ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಗಮನ ಹರಿಸಿದರೆ, ಜನವರಿ, ಫೆಬ್ರವರಿ, ಏಪ್ರಿಲ್ ಮೇ ತಿಂಗಳುಗಳ ಆರಂಭ ಮತ್ತು ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನೀವು ನಿಮ್ಮ ಆರ್ಥಿಕ ಜೀವನವನ್ನು ಸ್ವಲ್ಪ ಉತ್ತಮಾಗೊಳಿಸಲು ಸಾಧ್ಯವಾಗುತ್ತದೆ.
ನಿಮ್ಮ ಜಾತಕದಲ್ಲಿ " ರಾಜ ಯೋಗ " ಯಾವಾಗ ಸೃಷ್ಟಿಯಾಗುತ್ತದೆ ಎಂದು ತಿಳಿಯಿರಿ
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ ಜೀವನ - Education life according to Aquarius horoscope 2021
ಕುಂಭ ರಾಶಿ ಭವಿಷ್ಯ 2021 ಪ್ರಕಾರ, ಕುಂಭ ರಾಶಿಚಕ್ರದ ವಿದ್ಯಾರ್ಥಿಗಳು ಈ ವರ್ಷ ಮೊದಲಿಗಿಂತ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಏಪ್ರಿಲ್ ತಿಂಗಳಲ್ಲಿ ಸಂಪೂರ್ಣ ಯಶಸ್ಸು ಸಿಗುತ್ತದೆ. ಇದರಿಂದಾಗಿ ನಿಮ್ಮ ನಂಬಿಕೆ ಮತ್ತು ಪ್ರಕ್ರಮವು ಹೆಚ್ಚಾಗುತ್ತದೆ. ಏಪ್ರಿಲ್ ರಿಂದ ಗುರುವಿನ ದೃಷ್ಟಿಯು ನಿಮ್ಮ ಐದನೇ ಮನೆಯ ಮೇಲಿರುವುದರಿಂದಾಗಿ ಈ ಇಡೀ ವರ್ಷ ವಿದ್ಯಾರ್ಥಿಗಳ ಮನಸ್ಸು ಆಹ್ಲಾದಕರವಾಗಿರುತ್ತದೆ ಮತ್ತು ಅವರು ಪ್ರತಿ ವಿಷಯವನ್ನು ಅರ್ಥಮಾಡಿಕೊಳ್ಳುವಲ್ಲಿ ಸಾಮರ್ತ್ಯರಾಗಿರುತ್ತಾರೆ. ಆದಾಗ್ಯೂ ಸ್ಪರ್ಧಾತ್ಮಕ ಪರೀಕ್ಷೆಯ ತರಾಯರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಇನ್ನು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಅಂತಹ ಪರಿಷ್ಟಿತಿಯಲ್ಲಿ ಸೋಲಬೇಡಿ ಮತ್ತು ನಿರಂತರವಾಗಿ ಪ್ರಯತ್ನಿಸುತ್ತಿರಿ. ಏಕೆಂದರೆ ಶನಿಯ ದೃಷ್ಟಿಯು ಈ ವರ್ಷ ನಿಮ್ಮಿಂದ ಹೆಚ್ಚು ಪರಿಶ್ರಮ ಮಾಡಿಸುತ್ತದೆ.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳು ಈ ವರ್ಷ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಪ್ರಮುಖವಾಗಿ ಜನವರಿ, ಫೆಬ್ರವರಿ, ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳುಗಳು ನಿಮಗೆ ಹೆಚ್ಚು ಅದೃಷ್ಟವಾಗಿರುತ್ತವೆ ಎಂದು ಸಾಬೀತುಪಡಿಸುತ್ತವೆ. ತಾಂತ್ರಿಕ ಅಧ್ಯಯನವನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷವೂ ಸಾಮಾನ್ಯವಾಗಿರುತ್ತದೆ. ಮತ್ತೊಂದೆಡೆ, ಮಾಧ್ಯಮ, ಮಾಹಿತಿ ತಂತ್ರಜ್ಞಾನ, ಮತ್ತು ವಾಸ್ತುಶಿಲ್ಪವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಹಿಂದಿನ ವರ್ಷಗಳಿಗಿಂತ ಈ ವರ್ಷದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
ಕಾಗ್ನಿ ಆಸ್ಟ್ರೋ ರಿಪೋರ್ಟ್ ಉತ್ತಮ ವೃತ್ತಿ ಆಯ್ಕೆಗಳನ್ನು ಆರಿಸಿ ಮತ್ತು ಅಪಾರ ಯಶಸ್ಸನ್ನು ಪಡೆಯಿರಿ.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according to Aquarius horoscope 2021
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ಇಡೀ ವರ್ಷ ನೆರಳಿನ ಗ್ರಹ ರಾಹುವು ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿರುತ್ತಾರೆ. ಪರಿಣಾಮವಾಗಿ ನೀವು ಕೆಲಸದ ಸ್ಥಳದಲ್ಲಿನ ಯಾವುದೇ ಕೆಲಸದಿಂದಾಗಿ ನಿಮ್ಮ ಮನೆಯಿಂದ ದೂರ ಹೋಗಬೇಕಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಿಮ್ಮ ಮತ್ತು ಅವರ ನಡುವೆ ದೂರ ಉಂಟಾಗುವ ಸಾಧ್ಯತೆ ಇದೆ. ಬಾಡಿಗೆ ಮನೆಯಲ್ಲಿರುವ ಸ್ಥಳೀಯರಿಗೆ ಸಮಯ ಸ್ವಲ್ಪ ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ತಮ್ಮ ಸ್ವಂತ ಮನೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಮನೆಯಿಂದ ದೂರ ಪ್ರಯಾಣ ಮಾಡಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬಕ್ಕಾಗಿ ನೀವು ಬಹಿರಂಗವಾಗಿ ನೀವು ಖರ್ಚು ಮಾಡುವಿರಿ ಎಂದು ಗ್ರಹಗಳು ಸೂಚಿಸುತ್ತಿವೆ. ಇದರಿಂದಾಗಿ ನಿಮ್ಮ ಸಾಕಷ್ಟು ಹಣಕಾಸು ಖರ್ಚಾಗುತ್ತದೆ.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಕೆಲವು ಕುಟುಂಬ ಬಾಧ್ಯತೆಗಳಿಂದಾಗಿ ನಿಮ್ಮ ಹಣವನ್ನು ಖರ್ಚು ಮಾಡಲಾಗುತ್ತದೆ ಎಂದು ಸೂಚಿಸಲಾಗುತ್ತಿದೆ. ಇದರಿಂದಾಗಿ ನಿಮ್ಮ ಮೇಲೆ ಹೆಚ್ಚುವರಿ ಆರ್ಥಿಕ ಹಣದ ಹೊರೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕಿರಿಯ ಸಹೋದರರು ಕೆಲವು ಸಮಸ್ಯೆಗಳನ್ನು ಹೊಂದಿರುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಹಿರಿಯ ಸಹೋದರ ಸಹೋದರಿಯರೊಂದಿಗೆ ಯಾವುದೇ ವಿಷಯದ ಬಗ್ಗೆ ವಿವಾದದ ಸಾಧ್ಯತೆ ಇದೆ. ಪೋಷಕರು ಸಹ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ನೀವು ಮಾನಸಿಕ ಒತ್ತಡವನ್ನು ಪಡೆಯುತ್ತೀರಿ. ಅಂತಹ ಸಂದರ್ಭದಲ್ಲಿ ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುವುದು ಮತ್ತು ಅವರೊಂದಿಗೆ ಸ್ಪಷ್ಟವಾಗಿ ಮಾಡನಾಡಲು ಪ್ರಯತ್ನಿಸುವುದು ನಿಮಗೆ ಉತ್ತಮ.
ನಮ್ಮ ಪರಿಣಿತ ಜ್ಯೋತಿಷಿಗಳನ್ನು ಪ್ರಶ್ನೆ ಕೇಳಿ ಮತ್ತು ಪ್ರತಿ ಸಮಸ್ಯೆಗೆ ಪರಿಹಾರಗಳನ್ನು ಪಡೆಯಿರಿ.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Marriage life according to Aquarius horoscope 2021
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನೀವು ನಿಮ್ಮ ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನಿಮ್ಮ ದಾಂಪತ್ಯ ಜೀವನವು ಉತ್ತಮವಾಗಿರುತ್ತದೆ. ಇದರೊಂದಿಗೆ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ನಿಮ್ಮ ಜೀವನ ಸಂಗಾತಿ ಉದ್ಯೋಗದಲ್ಲಿದ್ದರೆ ಅಥವಾ ವ್ಯಾಪಾರದಲ್ಲಿ ತೊಡಗಿದ್ದರೆ, ಅವರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಯಶಸ್ಸು ಪಡೆಯುತ್ತಾರೆ. ಇದರಿಂದಾಗಿ ನೀವಿಬ್ಬರು ಸಂತೋಷವಾಗಿ ಕಾಣುತ್ತೀರಿ. ಈ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಯಾವುದೇ ವಿವಾದ ನಡಿಯುತ್ತಿದ್ದರೆ, ಅದು ಸಹ ಪರಿಹರಿಸಲ್ಪಡುತ್ತದೆ ಮತ್ತು ನೀವಿಬ್ಬರು ಎಲ್ಲಾದರೂ ಸುತ್ತಾಡಲು ಯೋಜಿಸಬಹುದು. ವರ್ಷದ ಆರಂಭದಲ್ಲಿ ಅಂದರೆ ಜನವರಿ ತಿಂಗಳಲ್ಲಿ ನೀವು ನಿಮ್ಮ ಸಂಗಾತಿಯ ಮೂಲಕ ಯಾವುದೇ ಉತ್ತಮ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ಆದಾಗ್ಯೂ , ನೀವು ವಿಶೆಹಸವಾಗಿ ಏಪ್ರಿಲ್ ರಿಂದ ಮೇ ಮಧ್ಯೆ ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ. ಇಲ್ಲದಿದ್ದರೆ, ಯಾವುದೇ ವಿಷಯದ ಬಗ್ಗೆ ನಿಮ್ಮ ಮತ್ತು ಜೀವನ ಸಂಗಾತಿಯ ಮಧ್ಯೆ ಒತ್ತಡದ ಪರಿಸ್ಥಿತಿ ಉಂಟಾಗಬಹುದು. ಇದಲ್ಲದೆ ನಿಮ್ಮ ವೈವಾಹಿಕ ಜೀವನಕ್ಕಾಗಿ ಜೂಲೈ ರಿಂದ ಆಗಸ್ಟ್ ವರೆಗಿನ ಸಮಯವು ಸ್ವಲ್ಪ ಕಡಿಮೆ ಅನುಕೂಲಕರವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಏಳನೇ ಮನೆಯ ಅಧಿಪತಿ ಸೂರ್ಯನ್ ಗ್ರಹವು ಆರನೇ ಮನೆಗೆ ಸಂಚರಿಸುತ್ತದೆ. ಅದರ ಮೇಲೆ ಶನಿಯ ದೃಷ್ಟಿ ಇರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಏನನ್ನೂ ಹೇಳುವ ಮೊದಲು ಸರಿಯಾಗಿ ಯೋಚಿಸುವುದು ಅಗತ್ಯವಾಗಿರುತ್ತದೆ ಇಲ್ಲದಿದ್ದರೆ, ಸಂಗಾತಿಯೊಂದಿಗೆ ಜಗಳದ ಸಾಧ್ಯತೆ ಇದೆ.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಫೆಬ್ರವರಿ ರಿಂದ ಮಾರ್ಚ್ ಮತ್ತು ನಂತರ ಏಪ್ರಿಲ್ ರಿಂದ ಜೂನ್ ತಿಂಗಳುಗಳು ನಿಮ್ಮ ಮಕ್ಕಳಿಗೆ ತುಂಬಾ ಉಟ್ಟಾಮವಾಗಿರಲಿವೆ. ಜೂಲೈ ರಿಂದ ಆಗಸ್ಟ್ ತಿಂಗಳ ಸಮಯದಲ್ಲಿ ಸಹ ನಿಮ್ಮ ಮಕ್ಕಳು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ, ಇಯರಿಂದಾಗಿ ಅವರು ಪ್ರಗತಿ ಪಡೆಯುತ್ತಾರೆ. ಇದರೊಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ಕುಟುಂಬದೊಂದಿಗೆ ಎಲ್ಲಾದರೂ ಸುತ್ತಾಡಲು ಯೋಜಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯಾಯ ಮೂಲಕ ಗೌರವ ಪಡೆಯುವುದನ್ನು ಸಹ ನೀವು ಅನುಭವಿಸುತ್ತೀರಿ. ಆದರೆ ಶನಿ ದೇವರ ದೃಷ್ಟಿಯು ಈ ವರ್ಷದಲ್ಲಿ ಆಗಾಗ ನಿಮ್ಮ ಮಕ್ಕಳಿಗೆ ಅರೋಗ್ಯ ಸಮಸ್ಯೆಯನ್ನು ನೀಡುವ ಕೆಲಸ ಮಾಡುತ್ತದೆ. ಅಂತಹ ಪರಿಷ್ಟಿತಿಯಲ್ಲಿ ನೀವು ಮತ್ತು ನಿಮ್ಮ ಜೀವನ ಸಂಗಾತಿ ಅವರ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ.
ಜ್ಯೋತಿಷ್ಯ ಪರಿಹಾರಗಳಿಗಾಗಿ ಈಗಲೇ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according to Aquarius horoscope 2021
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮ್ಮ ಪ್ರೀತಿ ಜೀವನಕ್ಕೆ ಅನುಕೂಲಕರವಾಗಿರಲಿದೆ. ಏಕೆಂದರೆ ನಿಮ್ಮ ಪ್ರೀತಿಪಾತ್ರರು ತನ್ನ ಸಿಹಿಯಾದ ಮಾತುಗಳಿಂದ ನಿಮ್ಮ ಹೃದಯವನ್ನು ಸಂತೋಷಪಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಸಮಯದಲ್ಲಿ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಇದರಿಂದಾಗಿ ನೀವಿಬ್ಬರು ನಿಮ್ಮ ಸಂಬಂಧವನ್ನು ಮುಂದುವರಿಸುವ ಬಗ್ಗೆ ಯೋಚಿಸಬಹುದು ಮತ್ತು ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಏಪ್ರಿಲ್ ರಿಂದ ಗುರುವಿನ ಸಂಚಾರವು ನಿಮ್ಮ ರಾಶಿಚಕ್ರದಲ್ಲಿ ಸಂಭವಿಸುವುದರಿಂದಾಗಿ ಅದು ಐದನೇ ಮತ್ತು ಏಳನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮದಿಂದಾಗಿ ನೀವು ಪ್ರೀತಿ ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ವರ್ಷ ಉತ್ತರಾರ್ಧದಲ್ಲಿ ನೀವು ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ.
ಈ ವರ್ಷ ನಿಮ್ಮ ಪ್ರೀತಿಗೆ ಉತ್ತಮವಾಗಿರುತ್ತದೆ ಆದರೆ ವರ್ಷದ ಆರಂಭದಲ್ಲಿ ವಿಶೇಷವಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನೀವು ನಿಮ್ಮ ಪ್ರೀತಿಪಾತ್ರರ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಪ್ರಯತ್ನಿಸುವ ಅಗತ್ಯವಿರುತ್ತದೆ. ಏಕೆಂದರೆ ಅವರು ತಮ್ಮ ಕೆಲಸದಿಂದಾಗಿ ನಿಮ್ಮಿಂದ ದೂರ ಹೋಗಬೇಕಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನೀವು ಅವರೊಂದಿಗೆ ಕೋಪಗೊಳ್ಳಬಹುದು.
ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮ ಮಲಗಿರುವ ಅದೃಷ್ಟವನ್ನು ಹೆಚ್ಚಿಸಿ
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ ಜೀವನ - Health life according to Aquarius horoscope 2021
ಕುಂಭ ರಾಶಿ ಭವಿಷ್ಯ 2021 ಪ್ರಕಾರ, ಕುಂಭ ರಾಶಿಚಕ್ರದ ಸ್ಥಳೀಯರು ಈ ವರ್ಷ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ನಿಮ್ಮ ರಾಶಿಚಕ್ರದ ಅಧಿಪತಿ ಶನಿ ದೇವ ಈ ವರ್ಷದುದ್ದಕ್ಕೂ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿ ಕುಳಿತಿರುತ್ತಾರೆ. ಇದರಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮಗೆ ಹೊಟ್ಟೆಯ ನೋವು, ಗ್ಯಾಸ್, ಎಸಿಡಿಟಿ, ಕೀಲುಗಳ ನೋವು, ಅಜೀರ್ಣ, ಶೀತದಂತಹ ಸಮಸ್ಯೆಗಳು ಈ ಇಡೀ ವರ್ಷ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಇದರಿಂದಾಗಿ ನೀವು ಯಾವುದೇ ಕೆಲಸದಲ್ಲಿ ಮನಸ್ಸನ್ನು ಹೊಂದಿ ಮಾಡಲು ಸಾಧ್ಯವಾಗುವುದಿಲ್ಲ.
ಈ ವರ್ಷ ನೀವು ಈ ಸಣ್ಣ ಪುಟ್ಟ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಮತ್ತು ನಿರ್ಕಕ್ಷಿಸದೇ ಸಮಯ ಇರುವಾಗಲೇ ಉತ್ತಮ ವೈದ್ಯರನ್ನು ಸಂಪರ್ಕಿಸಿ. ಇಲ್ಲದಿದ್ದರೆ, ಮುಂದಿನ ಸಮಯದಲ್ಲಿ ಈ ಸಮಸ್ಯೆಗಳು ದೊಡ್ಡ ರೋಗದಲ್ಲಿ ಬದಲಾಗಬಹುದು. ವಿಶೇಷವಾಗಿ ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಇದೀಗ ನಿಮ್ಮ ಆರೋಗ್ಯ ರಿಪೋರ್ಟ್ ಅನ್ನು ಖರೀದಿಸಿ ಮತ್ತು ಯಾವುದೇ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಿ.
ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according to Aquarius horoscope 2021
- ಶುಕ್ರ ಗ್ರಹದ ರತ್ನ ವಜ್ರ ಅಥವಾ ಉತ್ತಮ ಗುಣಮಟ್ಟದ ಓಪಲ್ ರತ್ನವನ್ನು ಯಾವುದೇ ಶುಕ್ರವಾರದಂದು ಧರಿಸಿ. ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ
- ಇದನ್ನು ನೀವು ಬೆಳ್ಳಿಯ ಉಂಗುರದಲ್ಲಿ ತಯಾರಿಸಿ ಅನಾಮಿಕ ಉಂಗುರದಲ್ಲಿ ಧರಿಸಿ.
- ನೀವು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಹೊಂದಿದ್ದರೆ, ಅದಕ್ಕಾಗಿ ನೀವು ಉಮ್ಮತ್ತಿ ಮೂಲ ಅಥವಾ ತುರಿಕೆ ಮೂಲವನ್ನು ಯಾವುದೇ ಶನಿವಾರದಂದು ನಿಮ್ಮ ಬಲಗೈ ಅಥವಾ ಕುತ್ತಿಗೆಗೆ ಧರಿಸಬಹುದು.
- ನಾಲ್ಕು ಮುಖ ಅಥವಾ ಏಳು ಮುಖ ರುದ್ರಾಕ್ಷವನ್ನು ಧರಿಸುವುದು ನಿಮಗೆ ಶುಭವಾಗಿರುತ್ತದೆ.
- ಪ್ರತಿದಿನ ಹಸುವಿಗೆ ರೊಟ್ಟಿಯನ್ನು ತಿನ್ನಿಸಿ ಅಥವಾ ಪ್ರತಿ ಶನಿವಾರದಂದು ಅಶ್ವತ್ಥ ಮರವನ್ನು ಮುಟ್ಟದೆ ನೀರನ್ನು ಅರ್ಪಿಸಿ
- ಶನಿವಾರದಂದು ಇರುವೆಗಳಿಗೆ ಆಹಾರ ನೀಡುವುದು ನಿಮ್ಮ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
- ನಿಮ್ಮ ಯಾವುದೇ ಕಾರ್ಯ ಪೂರ್ಣಗೊಳ್ಳದಿದ್ದರೆ, ಅದ್ಕಕಾಗಿ ಯಾರಾದರೂ ಅಂಗವಿಕಲರಿಗೆ ಹೊಟ್ಟೆ ತುಂಬಾ ಊಟ ಮಾಡಿಸುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
- ಪ್ರತಿ ಶುಕ್ರವಾರದಂದು ತಾಯಿ ಲಕ್ಷ್ಮಿಯನ್ನು ಆರಾಧಿಸಿ ಮತ್ತು ಚಾಲೀಸವನ್ನು ಪಠಿಸಿ
ಈಗ ಆಸ್ಟ್ರೋಸೇಜ್ ವಾರ್ತಾ ಮೂಲಕ ಅತ್ಯುತ್ತಮ ಜ್ಯೋತಿಷಿಗಳೊಂದಿಗೆ ನೇರ ಕರೆಯಲ್ಲಿ ಮಾತನಾಡಿ
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025