ವೃಷಭ ರಾಶಿ ಭವಿಷ್ಯ 2021 - Taurus Horoscope 2021 in Kannada
ವೃಷಭ ರಾಶಿ ಭವಿಷ್ಯ 2021 ರಲ್ಲಿ ಆಸ್ಟ್ರೋಸೇಜ್ ನಿಮಗಾಗಿ ತಂದಿದೆ, ಮುಂಬರುವ ಹೊಸ ವರ್ಷ, ವರ್ಷ 2021 ಕ್ಕೆ ಸಂಬಂಧಿಸಿದ ವೃಷಭ ರಾಶಿಚಕ್ರದ ಸ್ಥಳೀಯರ ಜೀವನದ ಪ್ರತಿಯೊಂದು ಸಣ್ನ- ಪುಟ್ಟ ಮತ್ತು ದೊಡ್ಡ ಭವಿಷ್ಯವಾಣಿ. ಇದರ ಸಹಾಯದಿಂದ ನೀವು ನಿಮ್ಮ ಮುಂಬರುವ ಸಮಯಯನ್ನು ಇನ್ನಷ್ಟು ಉತ್ತಮಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಗ್ರಹ ನಕ್ಷತ್ರಪುಂಜಗಳನ್ನು ನೋಡಿದರೆ, ವೃಷಭ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ಅನೇಕ ಬದಲಾವಣೆಯನ್ನು ತರಲಿದೆ. ಏಕೇದರೆ ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಇಡೀ ವರ್ಷ ಇರಲಾಗುವ ಶನಿ ದೇವರು ನಿಮಗೆ ನಿಮ್ಮ ಪರಿಶ್ರಮದ ಫಲಿತಾಂಶವನ್ನು ನೀಡುತ್ತಾ, ಕೆಲಸದ ಸ್ಥಳದಲ್ಲಿ ನಿಮಗೆ =ಸಂಪೂರ್ಣ ಯಶಸ್ಸು ನೀಡುತ್ತಾರೆ. ಈ ಕಾರಣದಿಂದಾಗಿ ನೀವು ಯಾವಾಗಲು ನಿಮ್ಮ ವೃತ್ತಿ ಜೀವನದಲ್ಲಿ ಮುಂದುವರಿಯುವುದನ್ನು ಕಾಣಬಹುದು. ಈ ವರ್ಷ ನಿಮ್ಮ ಅಪೇಕ್ಷಿತ ವರ್ಗಾವಣೆಯು ಕೆಲಸದ ಒತ್ತಡದಿಂದ ನಿಮ್ಮನ್ನು ಮುಕ್ತಗೊಳಿಸುವ ಕೆಲಸ ಮಾಡುತ್ತದೆ. ಇದರಿಂದ ನೀವು ನಿಮ್ಮ ಹೊಸ ಉದ್ಯೋಗ ಅಥವಾ ಹೊಸ ಸ್ಥಾನದಲ್ಲಿ ಕೆಲಸವನ್ನು ಆನಂದಿಸಲು ಸಧ್ಯವಾಗುತ್ತದೆ. ನೀವು ಇದುವರೆಗೂ ನಿರುದ್ಯೋಗಿಯಾಗಿದ್ದರೆ, ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನೀವು ಶುಭ ಸುದ್ಧಿಯನ್ನು ಪಡೆಯಬಹುದು.
ಆಸ್ಟ್ರೋಸೇಜ್ ವಾರ್ಷಿಕ ಪತ್ರಿಕೆ ಇಂದ ನಿಮ್ಮ ಮುಂಬರುವ 12 ತಿಂಗಳ ಮುನ್ಸೂಚನೆಯನ್ನು ಪಡೆಯಿರಿ
ಆರ್ಥಿಕ ಜೀವನದ ದೃಷ್ಟಿಯಿಂದಲೂ, ಈ ವರ್ಷ ಅನೇಕ ಬದಲಾವಣೆಗಳನ್ನು ತರಲಿದೆ. ಏಕೆಂದರೆ ಒಂದೆಡೆ ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಮನೆ ಅಥವಾ ವಾಹನವನ್ನು ಪಡೆದರೆ, ಅದೇ ಸಮಯದಲ್ಲಿ ಮತ್ತೊಂದೆಡೆ, ಇದ್ದಕ್ಕಿದ್ದಂತೆ ಇತರ ಜನರ ವೆಚ್ಚಗಳು ಹೆಚ್ಚಾಗಬಹುದು. ಮಂಗಳ ಗ್ರಹದ ಕ್ರೂರ ದೃಷ್ಟಿಯಿಂದ ಹಣಕಾಸಿನ ನಷ್ಟವಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಹಣವನ್ನು ಸಂಗ್ರಹಿಸುವ ಕಡೆಗೆ ಹೆಚ್ಚು ಗಮನ ಹರಿಸಿ. ಶನಿ ದೇವರ ಪರಿಣಾಮದಿಂದಾಗಿ ವೃಷಭ ರಾಶಿಚಕ್ರದ ವಿದ್ಯಾರ್ಥಿಗಳು ವರ್ಷ 2021 ರಲ್ಲಿ ಅವರ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶವನ್ನು ಪಡೆಯುತ್ತಾರೆ. ಆದರೆ ಈ ವರ್ಷ ನೀವು ನಿಮ್ಮ ಧ್ಯಾಯಂದ ಮೇಲೆ ಮಾತ್ರ ಗಮನ ಹರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ನೀವು ಯಶಸ್ಸು ಪಡೆಯುತ್ತೀರಿ, ಆದರೆ ನಿಮ್ಮ ಯಶಸ್ಸಿನಿಂದ ನೀವು ಅತೃಪ್ಪ್ತರಾಗಿರುತ್ತೀರಿ. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ವರ್ಷದ ಆರಂಭದಿಂದ ಫೆಬ್ರವರಿ ವರೆಗಿನ ಸಮಯವೂ ಕುಟುಂಬ ಜೀವನದಲ್ಲಿ ಒತ್ತಡವನ್ನು ತರಲಿದೆ. ಇದರ ನಂತರ ಗುರುವಿನ ದೃಷ್ಟಿಯು ನಿಮ್ಮ ಕುಟುಂಬ ಜೀವನದಲ್ಲಿ ಸಮನ್ವಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಈ ವರ್ಷ ತಂದೆ ತಾಯಿಯ ಕಳಪೆ ಆರೋಗ್ಯವು ಸುಧಾರಿಸುತ್ತದೆ.
ವೈವಾಹಿಕ ಜೀವನದ ಬಗ್ಗೆ ಮಾತನಾಡಿದರೆ, ಇಡೀ ವರ್ಷ ಕೇತುವಿನ ಪರಿಣಾಮದಿಂದಾಗಿ ವಿವಾಹಿತ ಜನರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ ಶುಕ್ರ ಮತ್ತು ಮಂಗಳನ ದೃಷ್ಟಿಯು ಜೀವನ ಸಂಗಾತಿಯೊಂದಿಗೆ ವಿವಾದದ ಯೋಗವನ್ನು ರಚಿಸುತ್ತದೆ. ಆದರೆ ಇದರ ಹೊರೆತಾಗಿಯೂ ನಿಮ್ಮ ದಾಂಪತ್ಯ ಜೇವನವು ಉತ್ತಮವಾಗಿರುತ್ತದೆ. ನಿಮ್ಮ ಮಕ್ಕಳು ತಮ್ಮ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಪ್ರೀತಿ ಜೀವನಕ್ಕೆ ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚು ಉತ್ತಮವಾಗಿರಲಿದೆ. ಏಕೆಂದರೆ ಗುರುವಿನ ದೃಷ್ಟಿಯಿ ನಿಮ್ಮ ಪ್ರೀತಿ ಜೀವನದಲ್ಲಿ ಅನುಕೂಲತೆಯನ್ನು ಒದಗಿಸುತ್ತದೆ. ವರ್ಷದ ಆರಂಭದಲ್ಲಿ ನೀವು ಪ್ರೇಮಿಯೊಂದಿಗೆ ಸಮನ್ವಯದ ಕೊರತೆಯನ್ನು ಅನುಭವಿಸಬಹುದು. ಆದರೆ ಕ್ರಮೇಣ ಪರಿಸ್ಥಿತಿಗಳು ತಾವಾಗಿಯೇ ಉತ್ತಮಗೊಳ್ಳುತ್ತವೆ. ಅರೋಗ್ಯ ಜೀವನಕ್ಕೆ ಸಮಯವೂ ಉತ್ತಮವಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಕೆಳಗೆ ನೀಡಲಾಗಿರುವ ಪರಿಹಾರಗಳನ್ನು ಆಶ್ರಯಿಸಿ.
Read in English - Taurus Horoscope 2021
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Tuarus horoscope 2021
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ, ವೃತ್ತಿ ಜೀವನಕ್ಕೆ ಈ ವರ್ಷ ಉತ್ತಮವಾಗಿರಲಿದೆ, ಏಕೆಂದರೆ ನಿಮ್ಮ ಕರ್ಮದ ಅಧಿಪತಿ ಶನಿ, ಈ ಇಡೀ ವರ್ಷ ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಕುಳಿತಿರುತ್ತಾರೆ. ಇದರಿಂದ ನಿಮ್ಮ ಅದೃಷ್ಟ ಉದಯವಾಗುತ್ತದೆ ಮತ್ತು ವೃತ್ತಿ ಜೀವನದ ಕ್ಷೇತ್ರದಲ್ಲಿ ನೀವು ಸಂಪೂರ್ಣ ಯಶಸ್ಸು ಪಡೆಯುತ್ತೀರಿ. ನಿಮ್ಮ ರಾಶಿಚಕ್ರದಲ್ಲಿನ ಶನಿ ದೇವರ ಶುಭ ದೃಷ್ಟಿಯೂ, ನೀವು ಅಪೇಕ್ಷಿಸಿದ ವರ್ಗಾವಣೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದರ ಮೂಲಕ ನೀವು ಉತ್ತಮ ಸ್ಥಾನ ಇದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ನಿಮ್ಮ ಪ್ರಯತ್ನವನ್ನು ವೇಗಗೊಳಿಸಿ. ಆಗ ಮಾತ್ರ ನೀವು ಯಶಸ್ವಿಯಾಗಲು ಸಾಧ್ಯವಾಗುತ್ತದೆ ಮತ್ತು ನೀವು ಯಾವುದೇ ಉತ್ತಮ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು.
ನೀವು ವ್ಯಾಪಾರಸ್ಥರಾಗಿದ್ದರೆ, ಈ ಸಮಯ ನೀವು ಸ್ವಲ್ಪ ಜಾಗರೂಕರಾಗಿರಬೇಕು. ವಿಶೇಷವಾಗಿ ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ಯಾರಾದರೂ ಮಕ್ಕಳಿಲ್ಲದ ಪಾಲುದಾರರೊಂದಿಗೆ ಯಾವುದೇ ರೀತಿಯ ವಹಿವಾಟುಗಳನ್ನು ಮಾಡುವ ಮೊದಲು ಚೆನ್ನಾಗಿ ಯೋಚಿಸಬೇಕು, ಇಲ್ಲದಿದ್ದರೆ ನಿಮಗೆ ನಷ್ಟವಾಗಬಹುದು. ಈ ಸಮಯದಲ್ಲಿ ಪಾಲುದಾರಿಕೆಯಲ್ಲಿ ಮಾಡಲಾಗುವ ಎಲ್ಲಾ ವ್ಯಾಪಾರವು ನಿಮಗೆ ಹಾನಿಯನ್ನು ನೀಡುತ್ತದೆ, ಇದರಿಂದ ನಿಮ್ಮ ಮತ್ತು ಪಾಲುದಾರರ ಸಂಬಂಧವು ಹದಗೆಡಬಹುದು. ಅಂತಹ ಪರಿಸ್ಥಿತಿಯಲ್ಲಿ ಕಠಿಣ ಪರಿಶ್ರಮ ಮಾಡುತ್ತೀರಿ ಮತ್ತು ಯಾವುದೇ ರೀತಿಯ ಕಿರುಹಾದಿಯಲ್ಲಿ ಸಿಲುಕಿಕೊಳ್ಳಬೇಡಿ. ಆದಾಗ್ಯೂ ವೃತ್ತಿ ಜೀವನದ ಕ್ಷೇತ್ರದಲ್ಲಿ ಈ ವರ್ಷದ ಆರಂಭದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ಮ್ ಆದರೆ ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವೂ ವೃತ್ತಿ ಜೀವನದಲ್ಲಿ ಈ ವರ್ಷ ವಿಶೇಷ ಯಶಸ್ಸು ತರಲಿದೆ.
ವೃಷಭ ರಾಶಿ ಭವಿಷ್ಯ 2021 ಪ್ರಕಾರ ಆರ್ಥಿಕ ಜೀವನ - Financial life according Taurus horoscope 2021
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮ್ಮ ಆರ್ಥಿಕ ಜೀವನ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಏಕೆಂದರೆ ವರ್ಷದ ಆರಂಭದಲ್ಲಿ ಮಂಗಳ ದೇವ ನಿಮ್ಮ ರಾಶಿಚಕ್ರದಿಂದ ಹನ್ನೆರಡನೇ ಮನೆಯಲ್ಲಿ ಕುಳಿತಿರುತ್ತಾರೆ. ಇದರಿಂದ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಸಮಯ ಇರುವಾಗಲೇ ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ನಿಮಗೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಇದರೊಂದಿಗೆ ಜನವರಿಯ ಮೊದಲನೇ ವಾರ, ಏಪ್ರಿಲ್ ತಿಂಗಳ ಅಂತ್ಯದ ವಾರ, ಸೆಪ್ಟೆಂಬರ್ ಅಂತ್ಯ ಮತ್ತು ನವೆಂಬರ್ ತಿಂಗಳ ಸಮಯವೂ ಪ್ರತಿಕೂಲವಾಗಿರಲಿವೆ. ಈ ಸಮಯದಲ್ಲಿ ನೀವು ಎಲ್ಲಾ ರೀತಿಯ ವಹಿವಾಟುಗಳನ್ನು ಮಾಡುವ ಸಮಯದಲ್ಲಿ ವಿಶೇಷ ಜಾಗರೂಕತೆಯನ್ನು ಅನುಸರಿಸಬೇಕು. ಇಲ್ಲದಿದ್ದರೆ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ.
ನಿಮ್ಮ ಕೆಲವು ಖರ್ಚುಗಳು ಜೀವನ ಸಂಗಾತಿ ಮತ್ತು ಪ್ರೇಮಿಯ ಮೇಲೂ ಇರಬಹುದು. ಅವರು ನಿಮ್ಮಿಂದ ಏನನ್ನಾದರೂ ಬೇಡಿಕೆಯಿಡುವ ಸಾಧ್ಯತೆ ಇದೆ, ಇದನ್ನು ಪೂರ್ಣಗೊಳಿಸುವಲ್ಲಿ ನೀವು ಆರ್ಥಿಕ ದುರ್ಬಲತೆಯನ್ನು ಅನುಭವಿಸಬಹುದು. ಅಂತಹ ಸಂದರ್ಭದಲ್ಲಿ ಅವರ ಆಸೆಯನ್ನು ಈಡೇರಿಸುವ ಮೊದಲು ನಿಮ್ಮ ಬಗ್ಗೆ ಗಮನ ಹರಿಸಿ. ನಿಮಗೆ 6 ಏಪ್ರಿಲ್ ರಿಂದ 15 ಸೆಪ್ಟೆಂಬರ್ ಸಮಯವೂ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಗುರುವಿನ ಸಂಚಾರವು ನಿಮಗೆ ಶುಭ ಫಲಿತಾಂಶವನ್ನು ತರಲಿದೆ. ಇದರಿಂದ ನಿಮ್ಮ ಅನೇಕ ಮೂಲಗಳಲ್ಲಿ ಹೆಚ್ಚಳವಾಗುತ್ತದೆ ಮತ್ತು ಅದರಿಂದ ನೀವು ಲಾಭ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಶನಿ ದೇವ ಈ ಇಡೀ ವರ್ಷ ನಿಮ್ಮ ಒಂಬತ್ತನೇ ಮನೆಯಲ್ಲಿ ಕುಳಿತಿರುತ್ತಾರೆ. ಇದರಿಂದಾಗಿ ನೀವು ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುವುದಿಲ್ಲ. ವರ್ಷದ ಮಧ್ಯೆ ಇತರ ಗ್ರಹಗಳ ದೃಷ್ಟಿಯು ನಿಮ್ಮ ವೆಚ್ಚಗಳನ್ನು ಹೆಚ್ಚಿಸಬಹುದು.
ನೀವು ಸರ್ಕಾರಿ ಉದ್ಯೋಗದಲ್ಲಿದ್ದರೆ, ಈ ವರ್ಷ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ಸರ್ಕಾರದ ಕಡೆಯಿಂದ ಆಗಸ್ಟ್ ರಿಂದ ಸೆಪ್ಟೆಂಬರ್ ಮಧ್ಯೆ, ನೀವು ಯಾವುದೇ ಮನೆ ಮತ್ತು ವಾಹನವನ್ನು ಪಡೆಯಬಹುದು. ವಿಶೇಷವಾಗಿ ಜನವರಿ ತಿಂಗಳ ಆರಂಭದ 14 ದಿನಗಳು, ಮೇ, ಜೂಲೈ ಮತ್ತು ಸೆಪ್ಟೆಂಬರ್ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿರಲಿವೆ. ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ, ಇದರಿಂದ ನಿಮಗೆ ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ.
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ - Education life according Taurus horoscope 2021
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಶಿಕ್ಷಣದ ಕ್ಷೇತ್ರದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರುಸ್ವಲ್ಪ ಕಡಿಮೆ ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ಏಕೆಂದರೆ ವರ್ಷದ ಆರಂಭದಲ್ಲಿ ನೀವು ಮೊದಲಿಗಿಂತ ಹೆಚ್ಚು ಪರಿಶ್ರಮ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಅಧ್ಯಯನದ ಬಗ್ಗೆ ಹೆಚ್ಚು ಗಮನ ಹರಿಸುವುದು ನಿಮಗೆ ಬಹಳ ಅವಶ್ಯಕವಾಗಿರುತ್ತದೆ. ಆದಾಗ್ಯೂ ಜನವರಿ ತಿಂಗಳ ಮೊದಲನೇ ವಾರದ ನಂತರ ಏಪ್ರಿಲ್ ತಿಂಗಳ ಮೊದಲನೇ ವಾರದ ವರೆಗಿನ ಸಮಯ ನಿಮಗೆ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ವಿದ್ಯಾರ್ಥಿಗಳು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ, ಇದರಿಂದ ಅವರು ಯಶಸ್ವಿಯಾಗುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ ಉನ್ನತ ಶಿಕ್ಷಣದ ತಯಾರಿಯಲ್ಲಿರುವ ವಿದ್ಯಾರ್ಥಿಗಳಿಗೂ ಈ ವರ್ಷ ಉತ್ತಮವಾಗಿರಲಿದೆ. ಆರಂಭದಿಂದ ಏಪ್ರಿಲ್ ಮತ್ತು ನಂತರ ಸೆಪ್ಟೆಂಬರ್ ತಿಂಗಳ ಸಮಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಗಮನ ಗೊಂದಲಕ್ಕೊಳಗಾಗಬಹುದು. ನೀವು ನಿಮ್ಮ ಸ್ನೇಹಿತರ ಕಾರಣದಿಂದಾಗಿ ಅಧ್ಯಯನದಲ್ಲಿ ನೀವು ಅಡೆತಡೆಯನ್ನು ಅನುಭವಿಸುವ ಸಾಧ್ಯತೆ ಇದೆ.
ನೀವು ನಿಮ್ಮ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ, ಮೇ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನೀವು ಹೆಚ್ಚು ಜಾಗರೂಕರಾಗಿರುವ ಅಗತ್ಯವಿರುತ್ತದೆ. ಏಕೆಂದರೆ ಈ ಸಮಯವೂ ನಿಮ್ಮ ವಿರುದ್ಧವಾಗಿರಬಹುದು. ಆದಾಗ್ಯೂ, ಶನಿ ದೇವ ನಿಮಗೆ ನಿಮ್ಮ ಪರಿಶ್ರಮದ ಫಲಿತಾಂಶವನ್ನು ನೀಡುವ ಮೂಲಕ, ಯಶಸ್ಸನ್ನು ಸಾಧಿಸಲು ಕೆಲಸ ಮಾಡುತ್ತದೆ. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು 6 ಸೆಪ್ಟೆಂಬರ್ ರಿಂದ 2 ಅಕ್ಟೋಬರ್ ಮತ್ತು 22 ಅಕ್ಟೋಬರ್ ರಿಂದ 5 ಡಿಸೆಂಬರ್ ತಿಂಗಳ ಸಮಯದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಶಿಕ್ಷಕರ ಸಹಾಯವನ್ನು ಸಹ ಪಡೆಯಬೇಕಾಗುತ್ತದೆ. ವಿದೇಶಕ್ಕೆ ಹೋಗಲು ಬಯಸುತ್ತಿರುವ ವಿದ್ಯಾರ್ಥಿಗಳಿಗೂ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಶುಭ ಸುದ್ಧಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according to Taurus horoscope 2021
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರು ಕುಟುಂಬ ಜೀವನದಲ್ಲಿ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ಏಕೆಂದರೆ ವರ್ಷದ ಆರಂಭದಲ್ಲಿ ನಿಮ್ಮ ಕುಟುಂಬ ಜೀವನದಲ್ಲಿ ನೀವು ಒತ್ತಡವನ್ನು ಅನುಭವಿಸುತ್ತೀರಿ. ಈ ಒತ್ತಡದ ಪರಿಸ್ಥಿತಿ ಫೆಬ್ರವರಿ ವರೆಗೂ ಇರುತ್ತದೆ, ಇದರಿಂದ ನಿಮ್ಮ ಕುಟುಂಬ ಸಂತೋಷದಲ್ಲಿ ಕೂಡ ಕೊರತೆ ಉಂಟಾಗುತ್ತದೆ. ಈ ಸಮಯದಲ್ಲಿ ನಿಮಗೆ ಅಗತ್ಯವಿದ್ದಾಗ, ಕುಟುಂಬದ ಬೆಂಬಲವನ್ನು ಪಡೆಯಲಾಗುವುದಿಲ್ಲ. ಇದರಿಂದ ನಿಮ್ಮ ಮನಸ್ಸು ಅಸಮಾಧಾನಗೊಳ್ಳಬಹುದು. ಆದಾಗ್ಯೂ ಫ್ಯಾಬ್ರವರಿ ನಂತರ ಮಾರ್ಚ್ ತಿಂಗಳಲ್ಲಿ ಪರಿಸ್ಥಿತಿಗಳು ಸುಧಾರಿಸುವುದನ್ನು ಕಾಣಲಾಗುತ್ತದೆ, ಈ ವರ್ಷ ನೀವು ಹೊಸ ಆಸ್ತಿಯನ್ನು ಖರೀದಿಸುವ ಬಗ್ಗೆ ಯೋಚಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಇದರ ಬಗ್ಗೆ ಚರ್ಚಿಸಬಹುದು ಮತ್ತು ಅವರೊಂದಿಗೆ ಸಮಯವನ್ನು ಸಹ ಕಳೆಯಬಹುದು.
ನಂತರ ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯೆ, ನಿಮ್ಮ ಕುಟುಂಬದಲ್ಲಿ ಯಾವುದೇ ಮಂಗಲಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಏಕೆಂದರೆ ಈ ಸಮಯದಲ್ಲಿ ಗುರುವಿನ ದೃಷ್ಟಿ ನಿಮ್ಮ ರಾಶಿಚಕ್ರದಿಂದ ನಾಲ್ಕನೇ ಮನೆಯಲ್ಲಿರುತ್ತದೆ. ಇದರಿಂದ ಮನೆಯಲ್ಲಿ ಪುಟ್ಟ ಅತಿಥಿ ಅಥವಾ ಹೊಸ ಸದಸ್ಯರ ಆಗಮನದ ಸಾಧ್ಯತೆ ಇದೆ. ಈ ಸಮಯದಲ್ಲಿ ಮನೆ ಸದಸ್ಯರಲ್ಲಿ ಸಹೋದರತ್ವ ಮತ್ತು ಪ್ರೀತಿ ಹೆಚ್ಚಾಗುತ್ತದೆ ಮತ್ತು ಪೋಷಕರ ಅರಿಗ್ಯಾವು ಸುಧಾರಿಸುತ್ತದೆ. ವರ್ಷದ ಅಂತ್ಯದಲ್ಲಿ ನೀವು ಮತ್ತೆ ಯಾವುದೇ ಒತ್ತಡಕ್ಕೊಳಗಾಗುತ್ತೀರಿ. ಇದರೊಂದಿಗೆ 2 ಜೂನ್ ರಿಂದ 6 ಸೆಪ್ಟೆಂಬರ್ ವರೆಗೆ ಕೆಂಪು ಗ್ರಹ ಮಂಗಳ ನಿಮ್ಮ ರಾಶಿಚಕ್ರದಿಂದ ನಾಲ್ಕನೇ ಮನೆಗೆ ಹಾದುಹೋಗುತ್ತಾರೆ, ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಕುಟುಂಬದ ಒಬ್ಬ ಸದಸ್ಯನೊಂದಿಗೆ ನಿಮ್ಮ ವಿವಾದವು ಸಂಭವಿಸಬಹುದು. ಈ ಸಮಯದಲ್ಲಿ ನೀವು ಕೆಲವು ಕೆಲಸಗಳಿಗೆ ಸಂಬಂಧಿಸಿದಂತೆ ನಿಮ್ಮ ಕುಟುಂಬ ಸದಸ್ಯರಿಂದ ದೂರ ಹೋಗಬೇಕಾಗಬಹುದು.
ಪೋಷಕರ ಆರೋಗ್ಯದ ಬಗ್ಗೆ ಮಾತನಾಡಿದರೆ ವಿಶೇಷವಾಗಿ ಈ ವರ್ಷದ ಜೂನ್ ಮತ್ತು ಜೂಲೈ ತಿಂಗಳ ಸಮಯವು ಸ್ವಲ್ಪ ಕಡಿಮೆ ಉತ್ತಮವಾಗಿರಲಿದೆ. ಆದರೆ ಇದರ ಹೊರೆತಾಗಿಯೂ ಅವರ ಅರೋಗ್ಯ ಸುಧಾರಿಸುವುದನ್ನು ಕಾಣಲಾಗುತ್ತದೆ.
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Marriage life according Taurus horoscope 2021
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ, ವೃಷಭ ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ವೈವಾಹಿಕ ಜೀವನದಲ್ಲಿ ನೆರಳಿನ ಗ್ರಹ ಕೇತುವಿನ ಕಾರಣದಿಂದಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ನಿಮ್ಮ ರಾಶಿಚಕ್ರದಿಂದ ಏಳನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ನಿಮ್ಮ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳ ಯೋಗವನ್ನು ರಚಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಧ್ವನಿಯನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಈ ಸಮಯದಲ್ಲಿ ನೀವು ನಿಮ್ಮ ಪದಗಳ ಮೂಲಕ ಏನನ್ನಾದರೂ ಹೇಳಬಹುದುಇದರಿಂದ ವಿವಾದವು ಹೆಚ್ಚಾಗುತ್ತದೆ. ಫೆಬ್ರವರಿ ರಿಂದ ಏಪ್ರಿಲ್ ಮಧ್ಯೆ ಕೂಡ ಗುರು ಮತ್ತು ಮಂಗಳನ ದೃಷ್ಟಿ ನಿಮ್ಮ ಜೀವನದಲ್ಲಿ ಒತ್ತಡ ಮತ್ತು ಸಂಬಂಧದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಬುದ್ಧಿವಂತಿಕೆಯಿಂದ ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ. ಇಲ್ಲದಿದ್ದರೆ ನಿಮ್ಮ ಜೀವನ ಸಂಗಾತಿಗೆ ನೋವಾಗಬಹುದು.
ವರ್ಷದ ಮಧ್ಯದಲ್ಲಿ 4 ಮೇ ರಿಂದ 28 ಮೇ ಮಧ್ಯೆ ಶುಕ್ರನ ಸಂಚಾರವು ನಿಮ್ಮದೇ ರಾಶಿಚಕ್ರದಲ್ಲಿರಲಿದೆ. ಆದ್ದರಿಂದ ಶುಕ್ರ ನಿಮ್ಮ ಮೊದಲನೇ ಮನೆಯಲ್ಲಿ ನೆಲೆಗೊಂಡು ನಿಮ್ಮ ರಾಶಿಚಕ್ರದ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ. ಈ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಮಕ್ಕಳಿಗೆ ಲಾಭವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಕ್ಕಳು ಪ್ರಗತಿ ಪಡೆಯುತ್ತಾರೆ, ಇದರೊಂದಿಗೆ ನೀವು ಅವರಿಗೆ ಬೆಂಬಲ ನೀಡುವುದನ್ನು ಕಾಣಲಾಗುತ್ತದೆ. ಆದರೆ ನಿಮ್ಮ ವೈವಾಹಿಕ ಜೀವನದಲ್ಲಿ ಒತ್ತಡವು ಹಾಗೆಯೆ ಉಳಿದಿರುತ್ತದೆ. ಏಕೆಂದರೆ ನೀವು ಮತ್ತು ನಿಮ್ಮ ಜೀವನ ಸಂಗಾತಿ ತಮ್ಮ ಅಹಂಕಾರವನ್ನು ಮುಂದಿಟ್ಟು ತಮ್ಮನ್ನು ತಾನು ಮೊದಲು ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತೀರಿ.
ಆದರೆ ಈ ಸಮಯದಲ್ಲಿ ನೀವು ಇಬ್ಬರೂ ಮಕ್ಕಳ ಬಗ್ಗೆ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಒಟ್ಟಿಗೆ ಸೇರಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇದರ ಉತ್ತಮ ಪರಿಣಾಮವು ನಿಮ್ಮ ಮಕ್ಕಳ ಮೇಲೆ ಬೀರುತ್ತದೆ. ಏಪ್ರಿಲ್, ಆಗಸ್ಟ್, ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳು ಮಕ್ಕಳ ಬದಿಗೆ ಗಮನಾರ್ಹ ಉತ್ತಮವಾಗಿರಲಿವೆ. ಏಕೆಂದರೆ ಗುರುವಿನ ಶುಭ ದೃಷ್ಟಿಯು ನಿಮ್ಮ ಮಕ್ಕಳಿಗೆ ಪ್ರಗತಿ ನೀಡುವ ಕೆಲಸ ಮಾಡುತ್ತದೆ. ಆದಾಗ್ಯೂ ಮಾರ್ಚ್ ರಿಂದ ಏಪ್ರಿಲ್ ತಿಂಗಳ ಮೊದಲನೇ ವಾರದ ಸಮಯವು ನಿಮ್ಮ ಮಕ್ಕಳಿಗೆ ಅನುಕೂಲಕರವಾಗಿರುವುದಿಲ್ಲ. ಈ ಸಮಯದಲ್ಲಿ ಅವರ ಅಧ್ಯಯನದಲ್ಲಿ ಅಡಚಣೆ ಉಂಟಾಗಬಹುದು. ನಿಮ್ಮ ಮಕ್ಕಳು ವಿದೇಶಕ್ಕೆ ಹೋಗಲು ಕನಸು ಕಾಣುತ್ತಿದ್ದರೆ, ಏಪ್ರಿಲ್ ರಿಂದ ಮೇ ವರೆಗಿನ ಸಮಯವೂ ಅವರಿಗೆ ಉತ್ತಮವಾಗಿರುತ್ತದೆ.
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according Taurus horoscope 2021
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ, ವೃಷಭ ರಾಶಿಚಕ್ರದ ಸ್ಥಳೀಯರು ಈ ವರ್ಷ ಪ್ರೀತಿ ಜೇವನದಲ್ಲಿ ಸಾಮಾನ್ಯ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಏಕೆಂದರೆ ವರ್ಷದ ಆರಂಭದಲ್ಲಿ ಗುರುವಿನ ದೃಷ್ಟಿಯು ನಿಮಗೆ ಅನುಕೂಲಕರವಾಗಿರುತ್ತದೆ. ಪರಿಣಾಮವಾಗಿ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಆದಾಗ್ಯೂ ಇದರ ನಂತರ ಸ್ವಲ್ಪ ಒತ್ತಡವನ್ನು ಅನುಭವಿಸುತ್ತೀರಿ ಮತ್ತು ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಮ್ಮ ಸಂಗಾತಿ ನಿಮಗೆ ಸಮಯ ನೀಡಲು ಸಾಧ್ಯವಾಗದಿರಬಹುದು. ಇದರ ಹೊರೆತಾಗಿಯೂ, ನೀವು ಇಬ್ಬರೂ ನಿಮ್ಮ ಎಲ್ಲಾ ವಿವಾದ ಮತ್ತು ಪರಸ್ಪರ ದೂರುಗಳನ್ನು ಸಮಯವಿರುವಾಗಲೇ ಪರಿಹರಿಸಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ. ಸೆಪ್ಟೆಂಬರ್ ಮತ್ತು ಮೇ ತಿಂಗಳು ನಿಮ್ಮ ಪ್ರೀತಿ ಜೇವನಕ್ಕೆ ಅತ್ಯಂತ ಉತ್ತಮ ಸಮಯವನ್ನು ತರಲಿವೆ. ಈ ಸಮಯದಲ್ಲಿ ನೀವಿಬ್ಬರು ಪರಸ್ಪರ ನಿಕಟ ಏರುತ್ತೀರಿ ಮತ್ತು ನೀವು ಯಾವುದಾದರು ಪ್ರಣಯ ಸ್ಥಳಕ್ಕೆ ಹೋಗಲು ಸಹ =ಯೋಜಿಸಬಹುದು. ವರ್ಷದ ಕೆಲವು ಸಮಯದಲ್ಲಿ ನಿಮ್ಮ ಪ್ರೀತಿ ಜೀವನದಲ್ಲಿ ನೀವು ಮಾನಸಿಕ ಓಟದವನ್ನು ಸಹ ಎದುರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿ ನಿಮ್ಮೊಂದಿಗೆ ನಿಂತಿರುತ್ತಾರೆ. ಇದಲ್ಲದೆ ಒಬ್ಬ ಮೂರನೇ ವ್ಯಕ್ತಿಯ ಕಾರಣದಿಂದಲೂ ನಿಮ್ಮ್ಬ್ಬಿರ ನಡುವೆ ವಿವಾದವಾಗುವಂತಹ ಪರಿಸ್ಥಿತಿಯು ಉಧ್ಭವಿಸುವ ಸಾಧ್ಯತೆ ಇದೆ.
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ ಜೀವನ - Health life according Taurus horoscope 2021
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ವೃಷಭ ರಾಶಿಚಕ್ರದ ಸ್ಥಳೀಯರು ಅವರ ಆರೋಗ್ಯದ ಬಗ್ಗೆ ಸಾಮಾನ್ಯಕ್ಕಿತ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ, ಏಕೆಂದರೆ ಈ ವರ್ಷ ನೆರಳಿನ ಗ್ರಹ ರಾಹು -ಮ್ ಕೇತುವು ನಿಮ್ಮ ರಾಶಿಚಕ್ರದ ಕ್ರಮೇಣ ಮೊದಲನೇ ಮತ್ತು ಏಳನೇ ಮನೆಯಲ್ಲಿ ನೆಲೆಗೊಂಡಿರುತ್ತಾರೆ, ಈ ಕಾರಣದಿಂದಾಗಿ ನಿಮ್ಮ ಆರೋಗ್ಯವು ಕ್ಷೀಣಿಸುವುದನ್ನು ಕಾಣಲಾಗುತ್ತದೆ. ಇದರೊಂದಿಗೆ ಮಂಗಳ ಗ್ರಹ ಕೂಡ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಗೆ ಹಾದುಹೋಗುತ್ತದೆ ಮತ್ತು ಈ ಸಮಯದಲ್ಲಿ ಸೂರ್ಯ ಮತ್ತು ಬುಧನ ಸಂಯೋಗವು ಸಹ ನಿಮ್ಮ ಎಂಟನೇ ಮನೆಯಲ್ಲಿರುತ್ತದೆ, ಇದು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಅನೇಕ ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವಿಶೇಷವಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳು ನಿಮಗೆ ಅತ್ಯಂತ ಪ್ರತಿಕೂಲವಾಗಿರುತ್ತವೆ. ಈ ಸಮಯದಲ್ಲಿ ನೀವು ಯಾವುದೇ ದೀರ್ಘಕಾಲದ ರೋಗವು ನಿಮ್ಮನ್ನು ಕಾಡುತ್ತದೆ. ಆದಾಗ್ಯೂ, ಈ ರೋಗದಿಂದ ನೀವು ಸಮಯಕ್ಕೆ ಪರಿಹಾರ ಪಡೆಯುತ್ತೀರಿ. ಈ ವರ್ಷ ನೀವು ಯಾವುದೇ ರೀತಿಯ ಹುರಿತ ಆಹಾರ ಸೇವಿಸುವುದನ್ನು ತಪ್ಪಿಸಿ ಮತ್ತು ಸಾಧ್ಯವಾದಷ್ಟು ಕಣ್ಣು, ಸೊಂಟ ಮತ್ತು ತೊಡೆಯ ಸಮಸ್ಯೆಗಳಿಂದ ನಿಮ್ಮನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಮಹಿಳೆಯರು ಸಹ ತಮ್ಮ ಮಾನಸಿಕ ಒತ್ತಡದ ಕಾರಣದಿಂದಾಗಿ ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ವೃಷಭ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರಗಳು - Astrological remedies according Taurus horoscope 2021
- ಉತ್ತಮ ಗುಣಮಟ್ಟದ ವಜ್ರ ಅಥವಾ ಓಪಲ್ ರತ್ನವನ್ನು ಚಿನ್ನ/ಬೆಳ್ಳಿ ಯಲ್ಲಿ ತಯಾರಿಸಿ ನಿಮ್ಮ ಬಲ ಮಧ್ಯದ ಬೆರಳಿನಲ್ಲಿ ಧರಿಸಿ. ಪರಿಣಾಮವಾಗಿ ನೀವು ನಿಮ್ಮ ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
- 10 ವರ್ಷಕ್ಕಿಂತ ಚಿಕ್ಕ ಹುಡುಗಿಯರಿಗೆ ಆಹಾರವನ್ನು ನೀಡಿ ಮತ್ತು ಪ್ರತಿದಿನ ಅವರ ಕಾಲು ಮುಟ್ಟಿ ಅಶ್ರಿವಾದವನ್ನು ಪಡೆಯಿರಿ.
- ಬಡವರಿಗೆ ಸಕ್ಕರೆ ಕಲ್ಲು ಅತಃವ ಬಿಳಿ ಸಿಹಿ ತಿಂಡಿಯ ದಾನ ಮಾಡಿ.
- ಪ್ರತಿ ಶನಿವಾರದಂದು ಇರುವೆಗಳಿಗೆ ಹಿಟ್ಟು ಹಾಕಿ ಮತ್ತು ಹಸುವಿನ ಸೇವೆ ಮಾಡಿ ಅಥವಾ ಇತರ ಯಾವುದೇ ಬಿಳಿ ತಿಂಡಿಯ ದಾನ ಮಾಡಿ.
- ಮನೆಯ ಮಹಿಳೆಯರನ್ನು ಗೌರವಿಸಿ ಮತ್ತು ಅವರಿಗೆ ಉಡುಗೊರೆ ನೀಡಿ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025