ಕನ್ಯಾ ರಾಶಿ ಭವಿಷ್ಯ 2021 - Virgo Horoscope 2021 in Kannada
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಶನಿ ದೇವ ಕನ್ಯಾ ರಾಶಿಚಕ್ರದ ಸ್ಥಳೀಯರ ಐದನೇ ಮನೆಯಲ್ಲಿ ಕುಳಿತಿದ್ದು, ಕೆಲವೊಮ್ಮೆ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಿದರೆ ಕೆಲವೊಮ್ಮೆ ನೀವು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳಾಗುತ್ತವೆ. ನಿಮ್ಮ ವೃತ್ತಿ ಜೀವನವು ಈ ವರ್ಷ ಏರಿಳಿತಗಳಿಂದ ತುಂಬಿರುತ್ತದೆ. ಏಕೆಂದರೆ ಶನಿಯ ದೃಷ್ಟಿಯಿಂದ ನಿಮ್ಮ ಮನಸ್ಸು ಕೆಲಸದಲ್ಲಿ ಕಡಿಮೆ ಹೊಂದಿರುತ್ತದೆ.
ಈ ಕಾರಣದಿಂದಾಗಿ ನಿಮಗೆ ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಸ್ಥಳಾಂತರದ ಪ್ರಬಲ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ನೀವು ಪ್ರತಿ ಸಣ್ಣ ಅವಕಾಶದ ಲಾಭವನ್ನು ಪಡೆಯುವ ಅಗತ್ಯವಿದೆ. ವ್ಯಾಪಾರಿ ವರ್ಗಕ್ಕೆ ಸಮಯ ಸ್ವಲ್ಪ ಪ್ರತಿಕೂಲವಾಗಿರುತ್ತದೆ. ಆದ್ದರಿಂದ ಯಾವುದೇ ರೀತಿಯ ಹೂಡಿಕೆ ಮಾಡುವ ಸಮಯದಲ್ಲಿ ಜಾಗರೂಕರಾಗಿರಿ. ಇಲ್ಲದಿದ್ದರೆ ನಷ್ಟವಾಗಬಹುದು. ಇದರೊಂದಿಗೆ ಜನವರಿ, ಮೇ, ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳು ನಿಮ್ಮ ಆರ್ಥಿಕ ಜೀವನಕ್ಕೆ ಅತ್ಯಂತ ಅನುಕೂಲಕರವಾಗಿರುತ್ತವೆ. ಏಕೆಂದರೆ ಈ ಸಮಯದಲ್ಲಿ ನೀವು ಹೊಸ ಸಂಪರ್ಕಗಳಿಂದ ಉತ್ತಮ ಹಣಕಾಸು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಈ ಸಮಯದ ಹೊರೆತಾಗಿ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.
ರಾಜ ಯೋಗ ರಿಪೋರ್ಟ್: ನಿಮ್ಮ ಜಾತಕದಲ್ಲಿ ರೂಪುಗೊಳ್ಳುವ ರಾಜ ಯೋಗದ ಮಾಹಿತಿಯನ್ನು ಪಡೆಯಿರಿ
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಕ್ಷೇತ್ರದಲ್ಲಿ ವಿಶೇಷ ಗಮನ ಹರಿಸಬೇಕು, ಏಕೆಂದರೆ ರಾಜಕೀಯ ಅಥವಾ ಸಾಮಾಜಿಕ ಸೇವೆ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳನ್ನು ಬಿಟ್ಟು ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಮಯವು ಉತ್ತಮವಾಗಿರುವುದಿಲ್ಲ. ನೀವು ಮೊದಲಿಗಿಂದ ಹೆಚ್ಚು ಕಠಿಣ ಪರಿಶ್ರಮ ಮಾಡಿದ ನಂತರ ಮಾತ್ರ ಯಶಸ್ಸು ಪಡೆಯುತ್ತೀರಿ. ಆದ್ದರಿಂದ ಯಾವುದೇ ಕಾರಣಕ್ಕೂ ನಿಮ್ಮ ಪರಿಶ್ರಮದಲ್ಲಿ ಕೊರತೆ ಮಾಡಬೇಡಿ. ಇಲ್ಲದಿದ್ದರೆ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಕೂಡ ಶನಿ ದೇವ ನಿಮಗೆ ಕಡಿಮೆ ಅನುಕೂಲತೆಯನ್ನು ಒದಗಿಸುತ್ತಾರೆ. ಈ ಕಾರಣದಿಂದಾಗಿ ವರ್ಷದ ಆರಂಭವು ನಿಮಗೆ ಎಷ್ಟು ಉತ್ತಮವಾಗಿರುತ್ತದೆಯೋ, ವರ್ಷದ ಅಂತ್ಯವು ಅಂತ್ಯವು ನಿಮ್ಮ ಕುಟುಂಬ ಜೇವನಕ್ಕೆ ಅಷ್ಟೇ ಪ್ರತಿಕೂಲವಾಗಿರಲಿದೆ.
ವರ್ಷ 2021 ರಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರು ತಮ್ಮ ವೈವಾಹಿಕ ಜೇವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ನಿಮ್ಮ ಜೀವನ ಸಂಗಾತಿಯ ಕಳಪೆ ಆರೋಗ್ಯವು ನಿಮ್ಮ ಆರ್ಥಿಕ ಜೀವನವನ್ನು ದುರ್ಬಲಗೊಳಿಸುತ್ತದೆ. ಇದರೊಂದಿಗೆ ನಿಮ್ಮಿಬ್ಬರ ನಡುವೆ ಕುಟುಂಬದ ಬಗ್ಗೆ ವಿವಾದಗಳಾಗಬಹುದು. ಆದಾಗ್ಯೂ ಈ ಮಧ್ಯೆ ನೀವು ಜೀವನ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ ಮತ್ತು ಅವರ ಸಹಕಾರದಿಂದ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮತ್ತೊಂದಿದೆ ದಾಂಪತ್ಯ ಜೀವನದಲ್ಲಿಯೂ ನೀವು ಮಕ್ಕಳ ಸಂತೋಷವನ್ನು ಪಡೆಯುತ್ತೀರಿ. ಮಕ್ಕಳು ತಂಮ್ಮ ಕಾರ್ಯ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ, ಅದನ್ನು ನೋಡಿ ನೀವು ಕೂಡ ಸಂತೋಷಪಡುತ್ತೀರಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನಿಮಗೆ ಉತ್ತಮ ಫಲಿತಾಂಶಗಳು ಸಿಗುವ ಸಂಪೂರ್ಣ ಸಾಧ್ಯತೆ ಇದೆ. ಏಕೆಂದರೆ ಶುಕ್ರ ದೇವರ ಸ್ಥಾನವು ನಿಮ್ಮ ರಾಶಿಚಕ್ರದ ಪ್ರೇಮಿಗಳ ಜೀವನದಲ್ಲಿ ಅಪಾರ ವೈಶಸ್ಸು ನೀಡುತ್ತದೆ. ಇದರಿಂದ ನಿಮ್ಮ ಪ್ರೀತಿ ನನಸಾಗುತ್ತದೆ ಮತ್ತು ಪ್ರೀತಿಪಾತ್ರರೊಂದಿಗೆ ಪ್ರೀತಿ ಮದುವೆಯಾಗಲು ನಿರ್ಧಾರವನ್ನು ಸಹ ತೆಗೆದುಕೊಳ್ಳಬಹುದು. ಆರೋಗ್ಯಕ್ಕೆ ಈ ವರ್ಷ ಉತ್ತಮವಾಗಿರುತ್ತದೆ. ನಿಮ್ಮಲ್ಲಿ ನೀವು ಹೊಸ ಶಕ್ತಿಯನ್ನು ಅನುಭವಿಸುವಿರಿ. ಇದು ನಿಮ್ಮ ಕೆಲಸ ಮಾಡುವ ವೇಗವನ್ನು ಹೆಚ್ಚಿಸುತ್ತದೆ. ಆದಾಗ್ಯೂ ಸಣ್ಣ ಪುಟ್ಟ ಸಮಸ್ಯೆಗಳು ಉಳಿದಿರುತ್ತವೆ. ಕಾಲ ಕಾಲಕ್ಕೆ ಚಿಕಿತ್ಸೆ ಪಡೆಯುವುದು ಮಾತ್ರ ನಿಮಗೆ ಉತ್ತಮ ಆಯ್ಕೆಯಾಗಿದೆ ಸಾಬೀತುಪಡಿಸುತ್ತದೆ.
Read in English - Virgo Horoscope 2021
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Virgo yearly horoscope 2021
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಕನ್ಯಾ ರಾಶಿಚಕ್ರದ ಸ್ಥಳೀಯರು ಮಿಶ್ರ ಫಲಿತಾಂಶಗಳನ್ನು ಎದಿರಿಸಬೇಕಾಗುತ್ತದೆ. ಏಕೆಂದರೆ ಶನಿ ದೇವ ಈ ಇಡೀ ವರ್ಷ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಕುಳಿತಿರುತ್ತಾರೆ, ಪರಿಣಾಮವಾಗಿ ಕೆಲಸದ ಸ್ಥಳದಲ್ಲಿ ನೀವು ಮನಸ್ಸು ಹೊಂದಿರುವುದಿಲ್ಲ ಮತ್ತು ಉದ್ಯೋಗವನ್ನು ಬದಲಾಯಿಸುವ ಆಗ್ಗೆ ನೀವು ಯೋಚಿಸಬಹುದು. ವಿಶೇಷವಾಗಿ ನೀವು ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯೆ ನಿಮ್ಮ ಉದ್ಯೋಗದಲ್ಲಿ ಅನೇಕ ಬದಲಾವಣೆ ಮಾಡಬಹದು ಮತ್ತು ಈ ನಿರ್ಧಾರವು ನಿಮ್ಮ ಜೀವನಕ್ಕೆ ಬಹಳ ಮುಖ್ಯವಾಗಲಿದೆ. ಉದ್ಯೋಗದಲ್ಲಿರುವ ಸ್ಟಲೀಯರು, ಸೆಪ್ಟೆಂಬರ್ ರಿಂದ ನವೆಂಬರ್ ನಡುವೆ ತಮ್ಮ ಹಿರಿಯ ಅಧಿಕಾರಿಗಳ ಮೂಲಕ ಗೌರವವನ್ನು ಪಡೆಯುತ್ತಾರೆ. 20 ನವೆಂಬರ್ ನಂತರದಿಂದ ವರ್ಷದ ಅಂತ್ಯದ ವರೆಗೆ ನೀವು ನಿಮ್ಮ ವೃತ್ತಿ ಜೀವನದಲ್ಲಿ ಅನೇಕ ಪ್ರಮುಖ ಅವಕಾಶಗಳನ್ನು ಪಡೆಯುತ್ತೀರಿ. ಈ ವರ್ಷ ಜನವರಿ, ಮಾರ್ಚ್ ಮತ್ತು ಮೇ ತಿಂಗಳು ನಿಮ್ಮ ವೃತ್ತಿ ಜೀವನಕ್ಕೆ ತುಂಬಾ ಉತ್ತಮವಾಗಿರಲಿವೆ. ಈ ಮಧ್ಯೆ ನೀವು ಬಯಸುವ ವರ್ಗಾವಣೆಯನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಏಪ್ರಿಲ್ ತಿಂಗಳಲ್ಲಿ ನೀವು ವಿಶೇಷ ಜಾಗರೂಕರಾಗಿರಬೇಕೆಂದು ನಿಮಗೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಮಹಿಳಾ ಸಹೋದ್ಯೋಗಿಯೊಂದಿಗೆ ವಿವಾದ ಹೊಂದುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಚಿತ್ರವೂ ಹದಗೆಡುವ ಸಾಧ್ಯತೆ ಇದೆ.
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ವ್ಯಾಪಾರಸ್ಥರಿಗೆ ವರ್ಷದ ಆರಂಭದಿಂದ 6 ಏಪ್ರಿಲ್ ವರೆಗಿನ ಸಮಯವೂ ಉತ್ತಮವಾಗಿರುತ್ತದೆ. ಇದರೊಂದಿಗೆ ಇದರ ನಂತರ 15 ಸೆಪ್ಟೆಂಬರ್ ವರೆಗಿನ ಸಮಯವೂ ವ್ಯಾಪಾರದ ದೃಷ್ಟಿಯಿಂದ ಉತ್ತಮವಲ್ಲ ಎಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ನೀವು ಯಾವುದೇ ದೊಡ್ಡ ಹೂಡಿಕೆಯನ್ನು ಮಾಡಬಾರದು, ಇಲ್ಲದಿದ್ದರೆ ನಿಮಗೆ ಹಾನಿಯಾಗಬಹುದು. ತಮ್ಮ ವ್ಯಾಪಾರದಲ್ಲಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯದಲ್ಲಿ ಖಂಡಿತವಾಗಿಯೂ ಸಹೋದ್ಯೋಗಿ ಅಥವಾ ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡೆದುಕೊಳ್ಳಿ. ವ್ಯಾಪಾರದಲ್ಲಿ 15 ಸೆಪ್ಟೆಂಬರ್ ರಿಂದ 30 ನವೆಂಬರ್ ಮಧ್ಯೆ ಯಾವುದೇ ದೊಡ್ಡ ಹೂಡಿಕೆ ಮಾಡಬಹುದು. ಇದರಿಂದ ನಿಮಗೆ ಲಾಭವಾಗುತ್ತದೆ. ನೀವು ಏಕಾಂಗಿಯಾಗಿ ವ್ಯಾಪಾರ ಮಾಡುತ್ತಿದ್ದರೆ 30 ನವೆಂಬರ್ ನಂತರ, ನಿಮಗೆ ಹೆಚ್ಚು ಲಾಭವಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according Virgo yearly horoscope 2021
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಆರ್ಥಿಕ ಜೀವನದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವರ್ಷದ ಆರಂಭವು ದುರ್ಬಲವಾಗಿರುತ್ತದೆ ಆದರೆ ನಿಧಾನವಾಗಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಆರ್ಥಿಕ ಜೀವನವು ಸುಧಾರಿಸುತ್ತದೆ. ವರ್ಷದ ಮಧ್ಯದಲ್ಲಿ ದೇವರ ಸಂಚಾರವು ನಿಮ್ಮ ರಾಶಿಚಕ್ರದ ಎಂಟನೇ ಮನೆಯಲ್ಲಿರುವ ಕಾರಣದಿಂದಾಗಿ, ನಿಮ್ಮ ಆದಾಯವನ್ನು ಹೆಚ್ಚಿಸುವ ಮಾರ್ಗವನ್ನು ಖಚಿತಪಡಿಸಲಾಗುತ್ತದೆ. ಈ ಕಾರಣದಿಂದಾಗಿ ನೀವು ಅನೇಕ ಗುಪ್ತ ರೀತಿಯಲ್ಲಿ ಹಣವನ್ನು ಗಳಿಸುವಿರಿ. ಇದಲ್ಲದೆ ರಾಹು ಗ್ರಹವು ಈ ವರ್ಷ ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಕುಳಿತಿರುತ್ತಾರೆ, ಪರಿಣಾಮವಾಗಿ ನಿಮಗೆ ಇದ್ದಕ್ಕಿದ್ದಂತೆ ಲಾಭವಾಗುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದನ್ನು ಕಾಣಲಾಗುತ್ತದೆ.
ಆದಾಗ್ಯೂ ಏಪ್ರಿಲ್ ರಿಂದ ಸೆಪ್ಟೆಂಬರ್ ಸಮಯದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ, ಆದರೆ ಈ ಸಮಯದಲ್ಲಿ ಹಣಕ್ಕೆ ಸಂಬಂಧಿಸಿದ ಲಾಭಗಳು ಹಾಗೆಯೆ ಇರುವುದರಿಂದಾಗಿ ಈ ಆರ್ಥಿಕ ತೊಂದರೆಯನ್ನು ಅನುಭವಿಸುವುದಿಲ್ಲ. ಇದರ ಹೊರೆತಾಗಿಯೂ ನಿರಂತರವಾಗಿ ನೀವು ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಹೆಚ್ಚು ಗಮನ ಹರಿಸಬೆಕು. ಸೆಪ್ಟೆಂಬರ್ ನಂತರದ ಸಮಯವೂ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಜನವರಿ ಮತ್ತು ಡಿಸೆಂಬರ್ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತವೆ. ಇದಲ್ಲದೆ ಮೇ ತಿಂಗಳಲ್ಲೂ ನೀವು ವಿದೇಶಿ ಮೂಲಗಳಿಂದ ಹಣವನ್ನು ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ.
ಕನ್ಯಾ ರಾಶಿ ಭವಿಷ್ಯ 2021 ಪ್ರಕಾರ ಶಿಕ್ಷಣ ಜೀವನ - Education life according Virgo horoscope 2021
ಕನ್ಯಾ ರಾಶಿ ಭವಿಷ್ಯ 2021 ಪ್ರಕಾರ, ಕನ್ಯಾ ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ಶಿಕ್ಷಣದ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಪರಿಶ್ರಮದ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಏಕೆಂದರೆ ಈ ಇಡೀ ವರ್ಷ ಶನಿ ದೇವ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿರುತ್ತಾರೆ. ಪರಿಣಾಮವಾಗಿ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಕಡಿಮೆ ಫಲಿತಾಂಶಗಳನ್ನು ಪಡೆಯುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ನೀವು ಕಠಿಣ ಪರಿಶ್ರಮ ಮಾಡಿ ಮತ್ತು ಅಗತ್ಯವಿದ್ದಾಗ ನಿಮ್ಮ ಶಿಕ್ಷಕರ ಸಹಾಯವನ್ನು ಪಡೆದುಕೊಳ್ಳಿ. ಈ ವರ್ಷ ಅಧ್ಯಯನದಲ್ಲಿ ನೀವು ಕಡಿಮೆ ಮನಸ್ಸು ಹೊಂದಿರುತ್ತೀರಿ. ಇಂದರಿಂದ ನಿಮ್ಮ ಮನಸ್ಸು ಗೊಂದಲಕ್ಕೊಳಗಾಗುತ್ತದೆ. ಇದರ ಪರಿಣಾಮವಾಗಿ ನೀವು ನಿಮ್ಮ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವಲ್ಲಿ ವಿಫಲರಾಗುತ್ತೀರಿ.
ಕನ್ಯಾ ರಾಶಿ ಭವಿಷ್ಯ 2021 ಪ್ರಕಾರ, ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ವಶ ಯಶಸ್ವಿಯಾಗುತ್ತಾರೆ. ಆದರೆ ಅದಕ್ಕಾಗಿ ಅವರು ಆರಂಭದಿಂದಲೇ ಪರಿಶ್ರಮಿಸುವ ಅಗತ್ಯವಿದೆ. ಆಗ ಮಾತ್ರ ಅವರು ಭಾಗಶಃ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಕನ್ಯಾ ರಾಶಿಚಕ್ರದ ವಿದ್ಯಾರ್ಥಿಗಳು ಈ ವರ್ಷ ಯಶಸ್ಸಿನ ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಪರಿಶ್ರಮದ ನಂತರ ಮಾತ್ರ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ವಿದೇಶಕ್ಕೆ ಹೋಗಿ ಅಧ್ಯಯನ ಮಾಡಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳು ವಿಶೇಷವಾಗಿ ಉತ್ತಮವಾಗಿರುತ್ತದೆ. ಇದಲ್ಲದೆ ಮೇ ತಿಂಗಳು ಕೂಡ ವಿದ್ಯಾರ್ಥಿಗಳಿಗೆ ಸಮಷ್ಟು ಉತ್ತಮವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ಶಿಕ್ಷಣದಲ್ಲಿ ಯಶಸ್ಸಿನ ಅನೇಕ ಅವಕಾಶಗಳು ನಿಮಗೆ ಸಿಗಲಿವೆ. ನೀವು ರಾಜಕೀಯ ಅತಃವ ಸಾಮಾಜಿಕ ಸೇವೆಯ ಅಧ್ಯಯನ ಮಾಡುತ್ತಿದ್ದರೆ, ಈ ವರ್ಷ ನಿಮಗೆ ಉತ್ತಮವಾಗಿರುತ್ತದೆ. ಅದೇ ಸಮಯಲ್ಲಿ ಮತ್ತೊಂದೆಡೆ ಮಾಹಿತಿ ತಂತ್ರಜ್ಞಾನದ ವಿದ್ಯಾರ್ಥಿಗಳು ಸಹ ಯಶಸ್ವಿಯಾಗುವ ಸಂಪೂರ್ಣ ಸಾಧ್ಯತೆ ಇದೆ.
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according virgo horoscope 2021
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಕನ್ಯಾ ರಾಶಿಚಕ್ರದ ಸ್ಥಳೀಯರ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ವರ್ಷ 2021 ಕುಟುಂಬ ಜೀವನಕ್ಕೆ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಉತ್ತಮವಾಗಿರಲಿದೆ. ಏಕೆಂದರೆ ವರ್ಷದ ಆರಂಭದಲ್ಲಿ ನಿಮಗೆ ಕುಟುಂಬದ ಬೆಂಬಲ ಸಿಗುವುದಿಲ್ಲ, ಮತ್ತೊಂದೆಡೆ ವರ್ಷದ ಮಧ್ಯ ಭಾಗದಲ್ಲಿ ಸಹೋದರ ಸಹೋದರಿಯರು ನಿಮ್ಮನ್ನು ಬೆಂಬಲಿಸುವುದನ್ನು ಕಾಣಲಾಗುತ್ತದೆ. ವರ್ಷದ ಅಂತ್ಯವು ಸಹ ನಿಮಗೆ ವಿಶೇಷವಾಗಿ ಉತ್ತಮವಾಗಿರಲಿದೆ. ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳ ಮಧ್ಯೆ ಕುಟುಂಬದ ಒಬ್ಬ ಸದಸ್ಯರೊಂದಿಗೆ ನಿಮ್ಮ ಜಗಳವಾಗುವ ಸಾಧ್ಯತೆ ಇದೆ, ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸುತ್ತ ನಿಮ್ಮ ಚಿತ್ರವನ್ನು ಸುಧಾರಿಸುವ ಆಗ್ಗೆ ಹೆಚ್ಚು ಗಮನ ಹರಿಸಬೇಕು.
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ಸಮಯ ಕುಟುಂಬ ಜೀವನದಲ್ಲಿ ಯಾವುದೇ ಸಂಪತ್ತಿನ ಬಗ್ಗೆ ವಿವಾದವು ಉಂಟಾಗಬಹುದು. ಆದ್ದರಿಂದ ನೀವು ಈ ವಿವಾದದಿಂದ ದೂರವಿರುವುದು ನಿಮಗೆ ಉತ್ತಮ. ಇಲ್ಲದಿದ್ದರೆ ಕಾನೂನು ಪ್ರಕರಣದಲ್ಲಿ ಸಿಲುಕಿಕೊಳ್ಳುವ ಸಂಪೂರ್ಣ ಸಾಧ್ಯತೆ ಇದೆ. ವರ್ಷದ ಆರಂಭದಲ್ಲಿ ಮತ್ತು ವರ್ಷದ ಅಂತ್ಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ವರ್ಷ ಕುಟುಂಬದಲ್ಲಿ ಯಾವುದೇ ಮಂಗಲಿಕ ಕಾರ್ಯಕ್ರಮವನ್ನು ಆಯೋಜಿಸಬಹುದು, ಇದರಿಂದ ಕುಟುಂಬದ ವಾತಾವರಣವು ಉತ್ತಮವಾಗಿರುತ್ತದೆ. ಈ ವರ್ಷ ಜನವರಿ, ಫೆಬ್ರವರಿ, ಮೇ, ಜೂನ್ ಮತ್ತು ಜೂಲೈ ತಿಂಗಳು ವಿಶೇಷವಾಗಿ ಉತ್ತಮವಾಗಿರಲಿವೆ.
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ವೈವಾಹಿಕ ಜೀವನ ಮತ್ತು ಮಕ್ಕಳ ಜೀವನ - Children & marriage life according Virgo yearly horoscope 2021
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮ್ಮ ವೈವಾಹಿಕ ಜೀವನವು ಸಾಮಾನ್ಯವಾಗಿರಲಿದೆ. ಏಕೆಂದರೆ ಈ ವರ್ಷ ನಿಮ್ಮ ಜೀವನ ಸಂಗಾತಿಗೆ ಕೆಲಸದ ಸ್ಥಳದಲ್ಲಿ ವರ್ಷದ ಆರಂಭದ ಮೂರು ತಿಂಗಳಲ್ಲಿ ಮತ್ತು ಸೆಪ್ಟೆಂಬರ್ ರಿಂದ ಡಿಸೆಂಬರ್ ಮಧ್ಯೆ ಯಾವುದೇ ದೊಡ್ಡ ಲಾಭವಾಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಕುಟುಂಬ ಪರಿಸ್ಥಿತಿ ಸುಧಾರಿಸುತ್ತದೆ. ಇದರೊಂದಿಗೆ ಜೀವನ ಸಂಗಾತಿ ಕೂಡ ನಿಮ್ಮ ಸಹಾಯ ಮಾಡುತ್ತಾರೆ ಮತ್ತು ಅವರ ಸಹಾಯದ ಮೂಲಕ ನೀವು ಹಣ ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಈ ಸಮಯದ ಹೊರೆತಾಗಿ ನಿಮ್ಮಿಬ್ಬರ ಮಧ್ಯೆ ಉದ್ವಿಗ್ನತೆ ಉಂಟಾಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಏಕೆಂದರೆ ಅವರ ಆರೋಗ್ಯವು ಹದಗೆಡುವ ಸಾಧ್ಯತೆ ಇದೆ. ಇಲ್ಲದಿದ್ದರೆ ಇದು ನಿಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಕಾರಣದಿಂದಾಗಿ ಅತ್ತೆಮನೆ ಸದಸ್ಯರೊಂದಿಗೆ ಜಗಳವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಜಾಗರೂಕರಾಗಿರಿ, ಇಲ್ಲದಿದ್ದರೆ ನಿಮ್ಮ ದಾಂಪತ್ಯ ಜೀವನವು ಒತ್ತಡಕ್ಕೊಳಗಾಗಬಹುದು.
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ , ನಿಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದರೆ, ಖಂಡಿತವಾಗಿಯೂ ನೀವು ದಾಂಪತ್ಯ ಜೀವನದಲ್ಲಿ ಯಶಸ್ವಿಯಾಗುತ್ತೀರಿ. ಏಕೆಂದರೆ ಮಕ್ಕಳಿಗೆ ನಿಮ್ಮ ಮೂಲಕ ನೀಡಲಾದ ಸಂಸ್ಕಾರದಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಮಕ್ಕಳು ವಿದೇಶಕ್ಕೆ ಹೋಗಲು ಬಯಸುತ್ತಿದ್ದರೆ, ಅವರು ವಿದೇಶಕ್ಕೆ ಹೋಗಲು ಅವಕಾಶವನ್ನು ಪಡೆಯುತ್ತಾರೆ. ನಿಮ್ಮ ಮಕ್ಕಳು ಮೊದಲಿಗಿಂತ ಹೆಚ್ಚು ವಿಧೇಯ ಮತ್ತು ಪರಿಶ್ರಮಿಯಾಗಿ ಕಾಣುತ್ತಾರೆ. ದಾಂಪತ್ಯ ಜೀವನಕ್ಕೆ ಜನವರಿ, ಫೆಬ್ರವರಿ, ಮೇ, ಜೂಲೈ ಮತ್ತು ಆಗಸ್ಟ್ ತಿಂಗಳು ಹೆಚ್ಚು ಉತ್ತಮವಾಗಿರುತ್ತವೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮಕ್ಕಳ ಸಾಹಸ ಮತ್ತು ಧೈರ್ಯವುಬೆಳೆಯುತ್ತದೆ. ಇದರಿಂದ ಅವರು ತಮ್ಮ ಉತ್ತಮ ಪ್ರದರ್ಶನ ತೋರಿಸುವಲ್ಲಿ ಯಶಸ್ವಿಯಾಗುತ್ತಾರೆ. ನಿಮ್ಮ ಮಕ್ಕಳು ಮದುವೆಗೆ ಅರ್ಹರಾಗಿದ್ದರೆ, ಈ ವರ್ಷ ಅವರ ಮದುವೆ ಸಂಭವಿಸಬಹುದು.
ಕನ್ಯಾ ರಾಶಿ ಭವಿಷ್ಯ 2021 ಪ್ರಕಾರ ಪ್ರೀತಿ ಜೀವನ - Love life according Virgo yearly horoscope 2021
ಕನ್ಯಾ ರಾಶಿ ಭವಿಷ್ಯ 2021 ಪ್ರಕಾರ, ಪ್ರೀತಿಯಲ್ಲಿರುವ ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಸಾಮಾನ್ಯಕ್ಕಿಂತ ಉತ್ತಮ ಫಲಿತಾಂಶಗಳು ಸಿಗುತ್ತವೆ. ಆದಾಗ್ಯೂ ವರ್ಷದುದ್ದಕ್ಕೂ ನಿಮ್ಮ ಪ್ರೀತಿ ಜೀವನದಲ್ಲಿ ನೀವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಜೂನ್, ಜೂಲೈ ಮತ್ತು ಡಿಸೆಂಬರ್ ತಿಂಗಳು ವಿಶೇಷವಾಗಿ ನಿಮಗೆ ಪ್ರತಿಕೂಲವಾಗಿರುತ್ತವೆ ಎಂದು ಸಾಬೀತುಪಡಿಸುತ್ತವೆ. ಇದಲ್ಲದೆ ಉಳಿದ ಎಲ್ಲಾ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರೀತಿಯ ಸಾಗರದಲ್ಲಿ ಮಳಿಗಿರುವುದನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ವಿಶೇಷವಾಗಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಯಾವುದೇ ವಿವಾದದಲ್ಲಿ ಬೀಳಬಾರದು, ಇಲ್ಲದಿದ್ದರೆ ಇದು ನಿಮ್ಮ ಪ್ರೀತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಜನವರಿ ಅಂತ್ಯದಿಂದ ಫೆಬ್ರವರಿ ಮತ್ತು ಜೂನ್ ರಿಂದ ಜೂಲೈ ತಿಂಗಳು ನಿಮಗೆ ವಿಶೇಷವಾಗಿ ಅನುಕೂಲಕರವಾಗಿತ್ತವೆ ಎಂದು ಸಾಬೀತುಪಡಿಸುತ್ತವೆ. ಇದರೊಂದಿಗೆ ಅಕ್ಟೋಬರ್ ರಿಂದ ಡಿಸೆಂಬರ್ ತಿಂಗಳಲ್ಲಿ ನೀವು ನಿಮ್ಮ ಸಂಬಂಧದಲ್ಲಿ ಅದ್ಭುತ ಆಕರ್ಷಣವನ್ನು ಅನುಭವಿಸುತ್ತೀರಿ. ಇದರೊಂದಿಗೆ ಜನವರಿ, ಮ ಮತ್ತು ಅಕ್ಟೋಬರ್ ಮಧ್ಯೆ ನಿಮ್ಮಿಬ್ಬರ ನಡುವಿನ ಮಾಧುರ್ಯವನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ, ಇದು ನಿಮ್ಮ ಸಂಬಂಧಕ್ಕೆ ಇನ್ನಷ್ಟು ಬಲವನ್ನು ಒದಗಿಸುತ್ತದೆ. ಒಟ್ಟಾರೆಯಾಗಿ ಹೇಳಿದರೆ, ಈ ವರ್ಷ ನಿಮ್ಮ ಪ್ರೀತಿ ಜೀವನದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಇದರಿಂದ ನೀವು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ.
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ ಜೀವನ - Health life according virgo yearly horoscope 2021
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಈ ವರ್ಷ ಕನ್ಯಾ ರಾಶಿಚಕ್ರದ ಸ್ಥಳೀಯರ ಆರೋಗ್ಯ ಜೀವನವು ಈ ವರ್ಷ ಉತ್ತಮವಾಗಿರುತ್ತದೆ. ನಿಮ್ಮ ಸಾಹಸ ಮತ್ತು ಧೈರ್ಯ ಹೆಚ್ಚಾಗುತ್ತದೆ, ಈ ವರ್ಷದುದ್ದಕ್ಕೂ ಕೇತುವು ನಿಮ್ಮ ರಾಶಿಚಕ್ರದ ಮೂರನೇ ಮನೆಯಲ್ಲಿರುತ್ತಾರೆ ಮತ್ತು ಸಣ್ಣ ಪುಟ್ಟ ರೋಗಗಳಿಂದ ನಿಮ್ಮನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಗುರು ಗ್ರಹವು ವರ್ಷದ ಮಧ್ಯೆ 6 ಏಪ್ರಿಲ್ ರಿಂದ 15 ಸೆಪ್ಟೆಂಬರ್ ವರೆಗೆ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿರುತ್ತಾರೆ. ಆ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ, ಮಧುಮೇಹ, ಮೂತ್ರದ ಕಿರಿಕಿರಿ ಸಂಬಂಧಿತ ರೋಗಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ಗ್ಯಾಸ್ಟ್ರಿಕ್ ನೋವು ಮತ್ತು ಅಜೀರ್ಣ ಮತ್ತು ಆಮ್ಲೀಯತೆಯ ಸಾಧ್ಯತೆಯೂ ವರ್ಷಪೂರ್ತಿ ನಿಮ್ಮನ್ನು ಕಾಡಬಹುದು. ಏಪ್ರಿಲ್, ಆಗಸ್ಟ್ ಮತ್ತು ಸೆಪ್ಟೆಂಬರ್ ಸಮಯವೂ ನಿಮ್ಮ ಆರೋಗ್ಯಕ್ಕೆ ಹೆಚ್ಚು ಅಂತಕಕಾರಿ ವಿಷಯವಾಗಿದೆ. ಈ ಸಮಯದಲ್ಲಿ ಸಾಧ್ಯವಾದಷ್ಟು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರಗಳು - Astrological remedies according Virgo yearly horoscope 2021
- ಯಾವುದೇ ಬುಧವಾರದಂದು, ನಿಮ್ಮ ಕಿರಿಯ ಉಂಗುರದಲ್ಲಿ ಉತ್ತಮ ಗುಣಮಟ್ಟದ ಪನ್ನ ರತ್ನವನ್ನು ಚಿನ್ನದಲ್ಲಿ ಧರಿಸಿ. ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
- ಮಂಗಳ ಮತ್ತು ಬುಧ ಗ್ರಹವನ್ನು ಶಾಂತಗೊಳಿಸಲು ಪ್ರತಿ ಮಂಗಳವಾರದಂದು ಸಂಪೂರ್ಣ ಹೆಸರು ಬೆಳೆಯನ್ನು ನೆನೆಸಿ, ಮರುದಿನ ನಿಮ್ಮ ಕೈಯಿಂದ ಹಸುವಿಗೆ ತಿನ್ನಿಸಿ.
- ಸಾಧ್ಯವಾದರೆ ಪ್ರತಿದಿನ ಅಥವಾ ಪ್ರತಿ ಶುಕ್ರವಾರದಂದು ಶ್ರೀ ದುರ್ಗಾ ಚಾಲೀಸವನ್ನು ಪಠಿಸಿ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ.
- ಶುಕ್ರವಾರದಂದು ಯಾವುದೇ ಅಮ್ಮನ ದೇವಸ್ಥಾನಕ್ಕೆ ಹೋಗಿ ಕೆಂಪು ಹೂವು ಮತ್ತು ಒಂದು ಹಣ್ಣು ತಾಯಿ ದುರ್ಗೆಗೆ ಅರ್ಪಿಸಿ.
- ನಿಮ್ಮ ಪರ್ಸ್ ಅಥವಾ ಪಾಕೆಟ್ ನಲ್ಲಿ ಬೆಳ್ಳಿಯ ಘನ ಮತ್ತು ಚಾದರದ ತುಂಡು ಇರಿಸಿ. ಇದರಿಂದ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯುತ್ತೀರಿ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025