ಧನ ತ್ರಯೋದಶಿ 2021 - Dhana Trayodashi 2021 in Kannada
“ಭಾರತ ಹಬ್ಬಗಳ ನಾಡು”
ಪ್ರತಿ ವರ್ಷ ಚಳಿಗಾಲದಲ್ಲಿ ಈ ಒಂದು ಹೇಳಿಕೆಯು ವಾಸ್ತವದಲ್ಲಿ ಬಲಾಗುತ್ತಿರುವುದನ್ನು ಕಾಣಲಾಗುತ್ತದೆ. ಚಳಿಗಾಲ ಆರಂಭವಾಗುತ್ತಲೇ, ವೈವಿಧ್ಯತೆಯಿಂದ ತುಂಬಿರುವ ನಮ್ಮ ಭಾರತ ದೇಶವು ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗುತ್ತದೆ. ಏಕೆಂದರೆ ಈ ಸೀಸನ್ ನಲ್ಲಿ ಹಬ್ಬಗಳ ದೊಡ್ಡ ಪಟ್ಟಿ ನಮಗಾಗಿ ಕಾಯುತ್ತಿರುತ್ತದೆ. ಮಾರ್ಕೆಟ್ ನಲ್ಲಿ ಸಂತೋಷ, ಮಿನುಗು, ಶಾಪಿಂಗ್, ಸಿಹಿ ತಿಂಡಿಗಳು, ಬಟ್ಟೆಗಳು, ಜಾತ್ರೆಗಳು ಮತ್ತು ಆಚರಣೆಗಳು; ಚಳಿಗಾಲದಲ್ಲಿ ಇಡೀ ಜಗತ್ತಿಗೆ ಭಾರತ ಈ ರೀತಿ ಕಾಣಿಸುತ್ತದೆ ಮತ್ತು ಇವೆಲ್ಲವೂ ಬಹಳ ಪ್ರಮುಖವಾದ ಹಬ್ಬದೊಂದಿಗೆ ಅಂದರೆ ಧನ ತ್ರಯೋದಶಿಯೊಂದಿಗೆ ಆರಂಭವಾಗುತ್ತವೆ.
ಅಂತಹ ಸಂದರ್ಭದಲ್ಲಿ, ಇಂದು ನಾವು ಈ ಲೇಖನದಲ್ಲಿ ಧನ ತಯೋದಶಿಗೆ ಸಂಬಂಧಿಸಿದ ಎಲ್ಲಾ ಪ್ರಮುಖವಾದ ಮಾಹಿತಿಗಳನ್ನು ನಿಮಗೆ ನೀಡಲಿದ್ದೇವೆ. ಈ ಲೇಖನದ ಮೂಲಕ ಧನ ತ್ರಯೋದಶಿಯ ಪ್ರಾಮುಖ್ಯತೆ, ಈ ದಿನದಂದು ರೂಪುಗೊಳ್ಳುವ ವಿಶೇಷ ಯೋಗ, ತಿಥಿ, ಪೂಜಾ ವಿಧಾನ, ಶುಭ ಮುಹೂರ್ತ ಮುಂತದ್ವುಗಳ ಮಾಹಿತಿಯನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ಈ ಲೇಖನದಲ್ಲಿ ಧನ ತ್ರಯೋದಶಿಯ ದಿನದಂದು ನಿಮ್ಮ ರಾಶಿಚಕ್ರದ ಪ್ರಕಾರ ಯಾವ ವಸ್ತುಗಳನ್ನುಖರೀದಿಸುವುದು ನಿಮಗೆ ಮಂಗಳಕರ ಎಂಬುದರ ಬಗ್ಗೆಯೂ ನಿಮಗೆ ತಿಳಿಸಲಾಗಿದೆ. ನಡೆಯಿರಿ ಈ ಸಂಚಿಕೆಯಲ್ಲಿ, ವರ್ಷ 2021 ರಲ್ಲಿ ಧನ ತ್ರಯೋದಶಿ ಯಾವಾಗ ಎಂದು ತಿಳಿಯೋಣ
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ವರ್ಷ 2021 ರಲ್ಲಿ ಧನ ತ್ರಯೋದಶಿ ಯಾವಾಗ?
ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ ತ್ರಯೋದಶಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಅಂದರೆ ವರ್ಷ 2021 ರಲ್ಲಿ ಧನ ತ್ರಯೋದಶಿ ಹಬ್ಬವನ್ನು 02 ನವೆಂಬರ್, ಮಂಗಳವಾರ ಆಚರಿಸಲಾಗುವುದು.
ಧನ ತ್ರಯೋದಶಿ ಮುಹೂರ್ತ : ಸಂಜೆ 06 ಗಂಟೆ 18ನಿಮಿಷದಿಂದ ರಾತ್ರಿ 08 ಗಂಟೆ 11 ನಿಮಿಷದ ವರೆಗೆ
ಅವಧಿ : 01 ಗಂಟೆ 52 ನಿಮಿಷ
ಪ್ರದೋಷ ಕಾಲ : ಸಂಜೆ 05 ಗಂಟೆ 35 ನಿಮಿಷದಿಂದ ರಾತ್ರಿ 08 ಗಂಟೆ 11 ನಿಮಿಷದ ವರೆಗೆ
ವೃಷಭ ಕಾಲ : ಸಂಜೆ 06 ಗಂಟೆ 18 ನಿಮಿಷದಿಂದ ರಾತ್ರಿ 08 ಗಂಟೆ 14 ನಿಮಿಷದ ವರೆಗೆ
ನಡೆಯಿರಿ ಈಗ ಈ ಧನ ತ್ರಯೋದಶಿಯಂದು ಉಂಟಾಗುವ ವಿಶೇಷ ಯೋಗಗಳ ಮಾಹಿತಿಯನ್ನು ತಿಳಿಯೋಣ, ಇದರಲ್ಲಿ ಧನ ತ್ರಯೋದಶಿ ದಿನದಂದು ಖರೀದಿ ನಿಮಗೆ ಲಾಭವನ್ನು ನೀಡುತ್ತದೆ.
ಜ್ಯೋತಿಷ್ಯ ದೃಷ್ಟಿಕೋನದಿಂದಲೂ ಈ ಧನ ತ್ರಯೋದಶಿ ವಿಶೇಸಹವಾಗಿದೆ
ಈ ವರ್ಷ ಅಂದರೆ ವರ್ಷ 2021 ರಲ್ಲಿ ಧನ ತ್ರಯೋದಶಿ ದಿನದ ಎರಡು ವಿಶೇಷ ಯೋಗಗಳು ರೂಪುಗೊಳ್ಳುತ್ತಿವೆ. ಇದು ಈ ಹಬ್ಬದ ಶುಭತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಎರಡು ಯೋಗಗಳೆಂದರೆ ತ್ರಿಪುಷ್ಕರ ಯೋಗ ಮತ್ತು ಲಾಭ ಅಮೃತ ಯೋಗ.
ತ್ರಿಪುಷ್ಕರ ಯೋಗ : ಈ ವಿಶೇಷ ಯೋಗವನ್ನು ತ್ರಿಪುಷ್ಕರ ಯೋಗವೆಂದು ಕರೆಯಲಾಗುತ್ತದೆ. ತೃಪುಷ್ಕರ ಯೋಗವು ಹನ್ನೆರಡನೇ ತಿಥಿ ಮತ್ತು ಮಂಗಳವಾರದ ಸಂಯೋಜನೆಯಿಂದ ರೂಪುಗೊಳ್ಳುತ್ತದೆ. ವರ್ಷ 2021 ರ ಧನ ತ್ರಯೋದಶಿಯು ಮಂಗಳವಾರದಂದು ಬೀಳುತ್ತಿದೆ. ಆದರೆ ಮಂಗಳವಾರ ಹನ್ನೆರಡನೇ ತಿಥಿ 11 ಗಂಟೆ 30 ನಿಮಿಷಕ್ಕೆ ಮುಗಿದುಹೋಗುತ್ತದೆ. ಈ ಕಾರಣದಿಂದಾಗಿ 02 ನವೆಂಬರ್ ರಂದು ಬೆಳಿಗ್ಗೆ ಹನ್ನೊಂದು ವರೆ ವರೆಗೆ ತ್ರಿಪುಷ್ಕರ ಯೋಗವು ರೂಪುಗೊಳ್ಳುತ್ತಿದೆ. ನಂಬಿಕೆಗಳ ಪ್ರಕಾರ, ಈ ಯೋಗದಲ್ಲಿ ಖರೀದಿಸುವುದರಿಂದ ಸಂಪತ್ತು ಮೂರು ಪಟ್ಟು ಹೆಚ್ಚಾಗುತ್ತದೆ, ಇದರೊಂದಿಗೆ ಜನರ ಅದೃಷ್ಟವೂ ಹೆಚ್ಚಾಗುತ್ತದೆ.
ಲಾಭ ಅಮೃತ ಯೋಗ : ಈ ದಿನದಂದು ಲಾಭ ಅಮೃತ ಯೋಗವು ಸಹ ರೂಪುಗೊಳ್ಳುತ್ತಿದೆ, ಇದು ಬೆಳಿಗ್ಗೆ ಹತ್ತುವರೆ ಇಂದ ಮಧ್ಯಾಹ್ನ ಒಂದೂವರೆ ವರೆಗೂ ಇರುತ್ತದೆ. ಲಾಭ ಅಮೃತ ಯೋಗದಲ್ಲಿ ಕೂಡ ಖರೀದಿಸುವುದು ಅತ್ಯಂತ ಶುಭಕಾರವೆಂದು ಪರಿಗಣಿಸಲಾಗಿದೆ.
ಅಂತಹ ಸಂದರ್ಭದಲ್ಲಿ ಧನ ತ್ರಯೋದಶಿ ದಿನಾನಂದು ಈ ಎರಡು ಯೋಗಗಳ ಅವಧಿಯಲ್ಲಿ ಖರೀದಿಸುವ ಮೂಲಕ ನೀವು ಲಾಭವನ್ನು ಪಡೆದುಕೊಳ್ಳಬಹುದು. ನಡೆಯಿರಿ ಈಗ ಧನ ತಯೋದಶಿಯ ಪಮುಖ್ಯತೆಯನ್ನು ತಿಳಿಯೋಣ.
ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್
ಧನ ತ್ರಯೋದಶಿ ಪ್ರಾಮುಖ್ಯತೆ.
ಸನಾತನ ಧರ್ಮದಲ್ಲಿ ಧನ ತ್ರಯೋದಶಿಯನ್ನು ಪ್ರಮುಖವದ ಹಬ್ಬವೆಂದು ಪರಿಗಣಿಸಲಾಗಿದೆ. ಈ ಹಬ್ಬದ ಕೊಂಡಿಯು ಸಮುದ್ರ ಮಂಥನದೊಂದಿಗೆ ಸಂಬಂಧಿಸಿದೆ. ನಂಬಿಕೆಗಳ ಪ್ರಕಾರ, ದೇವತೆಗಳು ಮತ್ತು ಅಸುರರು ಅಮೃತವನ್ನು ಪಡೆಯಲು ಸಮುದ್ರದ ಮಂಥನವನ್ನು ಮಾಡಿದಾಗ, ಈ ಸಮುದ್ರ ಮಂಥನದಿಂದ ಧನ್ವಂತರಿ ದೇವರು ತನ್ನ ಕೈಯಲ್ಲಿ ಅಮೃತ ಕಳಶದೊಂದಿಗೆ ಜನಿಸಿದರು. ಧನ್ವಂತರಿ ದೇವರನ್ನು ದೇವತೆಗಳ ವೈದ್ಯರೆಂದು ಕರೆಯಲಾಗುತ್ತದೆ ಮತ್ತು ಈ ದಿನದಂದು ವಿಶೇಷವಾಗಿ ಧನ್ವಂತರಿ ದೇವರನ್ನು ಸಹ ಪೂಜಿಸಲಾಗಿದೆ. ಅಂತಹ ಸನ್ನಿವೇಶದಲ್ಲಿ ಧನ ತ್ರಯೋದಶಿ ಹಬ್ಬವನ್ನು ಸಂಪೂರ್ಣ ಭಕ್ತಿ ಮತ್ತು ನಿಯಮಿತವಾಗಿ ಆಚರಿಸುವ ಭಕ್ತರಿಗೆ ಧನ್ವಂತರಿ ದೇವರು ಕೇವಲ ಹಣ, ಐಶ್ವರ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಒದಗಿಸುವುದಲ್ಲದೆ ಭಕ್ತರಿಗೆ ಆರೋಗ್ಯದ ವರವನ್ನೂ ನೀಡುತ್ತಾರೆ.
ಈ ದಿನದಂದು ಧನ್ವಂತರಿ ದೇವರು ಅಮೃತ ಕಳಶದೊಂದಿಗೆ ಜನಸಿದರು, ಈ ಕಾರಣದಿಂದಾಗಿ ಈ ದಿನದಂದು ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯವಿದೆ. ನಂಬಿಕೆಗಳ ಪ್ರಕಾರ, ಈ ದಿನದಂದು ಪಾತ್ರೆಗಳನ್ನು ಖರೀದಿಸುವುದರಿಂದಾಗಿ ಹಣಕಾಸು 13 ಪಟ್ಟು ಹೆಚ್ಚಾಗುತ್ತದೆ. ಆದಾಗ್ಯೂ, ಈ ದಿನದಂದು ಚಿನ್ನ, ಬೆಳ್ಳಿ ಮತ್ತು ಇತರ ವಸ್ತುಗಳನ್ನು ಖರೀದಿಸುವ ಸಂಪ್ರದಾಯವಿದೆ. ಧನ್ವಂತರಿ ದೇವರೊದಿಗೆ ಈ ದಿನದಂದು ಕುಬೇರ ಭಗವಂತ, ತಾಯಿ ಲಕ್ಷ್ಮಿ ಮತ್ತು ಗಣೇಶ ದೇವರನ್ನು ಪೂಜಿಸುವ ವಿಧಾನವಿದೆ.
ಇದರ ಹೊರತಾಗಿ ಧನ ತ್ರಯೋದಶಿಯ ದಿನದಂದು ಮೃತ್ಯು ದೇವರಾದ ಯಮನಿಗೆ ದೀಪವನ್ನು ದಾನ ಮಾಡುವ ಸಂಪ್ರದಾಯವೂ ಇದೆ. ನಂಬಿಕೆಗಳ ಪ್ರಕಾರ, ಈ ದಿನದಂದು ಯಮ ದೇವರಿಗೆ ದೀಪದ ದಾನ ಮಾಡುವುದರಿಂದ ಭಕ್ತರು ಅಕಾಲಿಕ ಮರಣಕ್ಕೆ ಕಾರಣವಾಗುವುದಿಲ್ಲ. ಪದ್ಮ ಪುರಾಣದಲ್ಲಿ ಉಲ್ಲೇಖಿಸಲಾದ ಶ್ಲೋಕದ ಪ್ರಕಾರ-
ಕಾರ್ತಿಕಸ್ಯಾಸಿತೇ ಪಕ್ಷೇ ತ್ರಯೋದಶ್ಯಾನ್ ತು ಪಾವಕೇ ।
ಯಮಾದಿಪಂ ಬಹಿರ್ದದ್ಯದ್ಪಾಮೃತ್ಯುರ್ವಿನಶ್ಯತಿ
ಅಂದರೆ :
ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಿಯೋದಶಿ ದನಿನದಂದು ಯಮ ದೇವರಿಗೆ ದೀಪದ ದಾನವನ್ನು ಮಾಡುವುದರಿಂದ ಅಕಾಲಿಕ ಮರಣದ ಭಯ ಕೊನೆಗೊಳ್ಳುತ್ತದೆ.
ಆದಾಗ್ಯೂ, ದೇಶದ ಅನೇಕ ಭಾಗಗಳಲ್ಲಿ ದೀಪ ದಾನವನ್ನು ನರಕ ಚತುರ್ದಶಿಯಂದು ಸಹ ಮಾಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ನೋಡಿದರೆ, ಧನ ತ್ರಯೋದಶಿಯ ಪವಿತ್ರ ಹಬ್ಬವು ಭಕ್ತರಿಗೆ ಕೇವಲ ಹಣದೊಂದಿಗೆ ಆರೋಗ್ಯವನ್ನು ನೀಡುವುದಲ್ಲದೆ ಅಕಾಲಿಕ ಮರಣದ ಭಯದಿಂದಲೂ ಮುಕ್ತಿ ನೀಡುತ್ತದೆ. ಈ ಕಾರಣದಿಂದಾಗಿ ಧನ ತ್ರಯೋದಶಿಗೆ ಸನಾತನ ಧರ್ಮದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ. ನಡೆಯಿರಿ ಈಗ ಧನ ತ್ರಯೋದಶಿ ಪೂಜೆಯ ವಿಧಾನದ ಬಗ್ಗೆ ತಿಳಿಯೋಣ.
ಧನ ತ್ರಯೋದಶಿ ಪೂಜಾ ವಿಧಾನ
ಸರ್ವ ಪ್ರಥಮವಾಗಿ ಧನ ತ್ರಯೋದಶಿ ದಿನದಂದು ಸಾಯಂಕರ ಸ್ನಾನ ಮಾಡಿ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ. ಇದರ ನಂತರ ಶುಭ ಮುಹೂರ್ತದಲ್ಲಿ ಉತ್ತರ ದಿಕ್ಕಿನಲ್ಲಿ ಧನ್ವಂತರಿ ದೇವರು ಮತ್ತು ಕುಬೇರ ದೇವರೊಂದಿಗೆ ತಾಯಿ ಲಕ್ಷ್ಮಿ ಮತ್ತು ಗಣೇಶ ದೇವರ ವಿಗ್ರಹವನ್ನು ಸಹ ಪ್ರತಿಷ್ಠಾಪಿಸಬೇಕು. ಇದರ ನಂತರ ದೇವರ ಮುಂದೆ ದೀಪವನ್ನು ಬೆಳಗಿಸಿ. ಅವರಿಗೆ ತಿಲಕವನ್ನು ಹಚ್ಚಿಸಿ ಹೂವು ಮತ್ತು ಫಲವನ್ನು ಅರ್ಪಿಸಿ. ಈ ದಿನ ನೀವು ಧನ್ವಂತರಿ ದೇವರನ್ನು ಮೆಚ್ಚಿಸಲು ಅವರಿಗೆ ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ಅರ್ಪಿಸಿ. ಅದೇ ಸಮಯದಲ್ಲಿ ಮತ್ತೊಂದೆಡೆ, ಕುಬೇರ ದೇವರಿಗೆ ಹಳದಿ ಬಣ್ಣ ಇಷ್ಟ. ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಹಳದಿ ಬಣ್ಣದ ಸಿಹಿ ತಿಂಡಿಗಳನ್ನು ಅರ್ಪಿಸಿ. ಕುಬೇರ ದೇವರನ್ನು ಮೆಚ್ಚಿಸಲು ಅವರನ್ನು ಧ್ಯಾನಿಸುತ್ತಾ, ‘ಓಂ ಹ್ರೀಂ ಕುಬೇರಾಯ್ ನಮಃ’ ಮಂತ್ರವನ್ನು ಜಪಿಸಿ. ಇದರ ನಂತರ ಧನ್ವಂತರನ್ನು ನೆನಪಿಸಿಕೊಳ್ಳುವ ಮೂಲಕ ಧನ್ವಂತರಿ ಸ್ತೋತ್ರವನ್ನು ಪಠಿಸಿ. ಗಣೇಶ ಮತ್ತು ಲಕ್ಷ್ಮಿಯನ್ನು ಸಹ ವಿಧಾನದೊಂದಿಗೆ ಪೂಜಿಸಿ
ಧನ ತ್ರಯೋದಶಿಯಂದು ದೀಪದಾನ ಮಾಡುವ ಸಂಪ್ರದಾಯವಿದೆ. ನಡೆಯಿರಿ ಈ ಸಂದರ್ಭದಲ್ಲಿ, ದೀಪದಾನದ ವಿಧಾನವನ್ನು ತಿಳಿಯೋಣ
ಶನಿ ರಿಪೋರ್ಟ್ ಮೂಲಕ ಶನಿ ದೇವ ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ
ಈ ವಿಧಾನದಿಂದ ಧನ ತ್ರಯೋದಶಿ ದಿನದಂದು ದೀಪ ದಾನವನ್ನು ಮಾಡಿ.
ಧನ ತ್ರಯೋದಶಿ ದಿನದಂದು ಯಮ ದೇವರಿಗೆ ದೀಪವನ್ನು ದಾನ ಮಾಡುವುದು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ಕೆಲಸವನ್ನು ಯಾವಾಗಲೂ ಪ್ರದೋಷ ಕಾಲದಲ್ಲಿ ಮಾಡಬೇಕು. ಈ ದಿನದಂದು ಪ್ರದೋಷ ಕಾಲದಲ್ಲಿ ಗೋಧಿ ಹಿಟ್ಟಿನಿಂದ ದೊಡ್ಡ ದೀಪವನ್ನು ತಯಾರಿಸಿ. ಇದರ ನಂತರ ದೀಪವು ನಾಲ್ಕು ಮುಖಗಳಾಗಿ ಕಂಡುಬರುವ ರೀತಿಯಲ್ಲಿ ಎರಡು ಹತ್ತಿ ಬತ್ತಿಗಳನ್ನು ತಯಾರಿಸಿ. ಅಂದರೆ ಎರಡು ಹಟ್ಟಿಗಳ ನಾಲ್ಕು ತುದಿಗಳು ಹೊರಮುಖವಾಗಿರಬೇಕು. ನಂತರ ಈ ದೀಪದಲ್ಲಿ ಎಳ್ಳೆಣ್ಣೆಯನ್ನು ತುಂಬಿದ ನಂತರ ಇದರಲ್ಲಿ ಕಪ್ಪು ಎಳ್ಳನ್ನು ಸಹ ಹಾಕಿ. ಕುಂಕುಮ, ಅಕ್ಷತ ಮತ್ತು ಹೂವಿನಿಂದ ದೀಪವನ್ನು ಪೂಜಿಸಿ ಮತ್ತು ಇದನ್ನು ಬೆಳಗಿಸಿ. ಇದರ ನಂತರ ನಿಮ್ಮ ಮನೆಯ ಮುಖ್ಯ ಬಾಗಲಿನ ಹೊರಗೆ ಗೋಧಿ ಅಥವಾ ಕಳ್ಳೇಪುರಿಯ ಸಣ್ಣ ರಾಶಿಯನ್ನು ತಯಾರಿಸಿ. ಇದರ ನಂತರ ದಕ್ಷಿಣ ದಿಕ್ಕಿನ ಕಡೆಗೆ ನೋಡಿ ಆ ರಾಶಿಯ ಮೇಲೆ ಈ ದೀಪವನ್ನು ಸ್ಥಾಪಿಸಿ. ದಕ್ಷಿಣ ದಿಕ್ಕಿನ ಕಡೆಗೆ ತಿರುಗಿ ಮತ್ತು ಯಮ ದೇವರನ್ನು ಧನಿಸುವ ಮೂಲಕ ‘ಓಂ ಯಮದೇವಯ್ ನಮಃ’ ಮಂತ್ರವನ್ನು ಜಪಿಸಿ ಮತ್ತು ಯಮ ದೇವರಿಗೆ ನಮಸ್ಕಾರ ಮಾಡಿ.
ನಡೆಯಿರಿ ಈಗ ನಿಮ್ಮ ರಾಶಿಚಕ್ರದ ಪ್ರಕಾರ ಈ ಧನ ತ್ರಯೋದಶಿ ದಿನದಂದು ನೀವು ಏನನ್ನು ಖರೀದಿಸಬೇಕೆಂದು ತಿಳಿಯೋಣ.
ರಾಶಿಚಕ್ರದ ಪ್ರಕಾರ ಧನ ತ್ರಯೋದಶಿ ದಿನದಂದು ಈ ವಸ್ತುಗಳನ್ನು ಖರೀದಿಸಿ.
ಮೇಷ : ಮೇಷ ರಾಶಿಚಕ್ರದ ಜನರ ಅಧಿಪತಿ ಗ್ರಹ ಮಂಗಳ. ಈ ಧನ ತ್ರಯೋದಶಿ ದಿನ ನೀವು ಹಿತ್ತಾಳೆ ಅಥವಾ ಇದರಿಂದ ತಯಾರಿಸಿರುವ ಯಾವುದೇ ವಸ್ತುವನ್ನು ಖರೀದಿಸಬೇಕು. ಇದರಿಂದಾಗಿ ನೀವು ಯಾವುದೇ ರೀತಿಯ ಹಣಕಾಸಿನ ನಷ್ಟದಿಂದ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ.
ವೃಷಭ : ವೃಷಭ ರಾಶಿಚಕ್ರದ ಸ್ಥಳೀಯರ ಅಧಿಪತಿ ಗ್ರಹ ಶುಕ್ರ. ಈ ಧನ ತ್ರಯೋದಶಿ ದಿನದಂದು ವೃಷಭ ರಾಶಿಚಕ್ರದ ಜನರು ವಿದ್ಯುತ್ ಉಪಕರಣ ಅಥವಾ ವಾಹನವನ್ನು ಖರೀದಿಸುವುದು ಮಂಗಳಕರವೆಂದು ಸಾಬೀತುಪಡಿಸುತ್ತದೆ. ಈ ಪವಿತ್ರ ಹಬ್ಬದಲ್ಲಿ ನೀವು ಬೀರುವನ್ನು ಸಹ ಖರೀದಿಸಬಹುದು. ಇದರಿಂದ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಕೌಟುಂಬಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಕುಟುಂಬದ ಸದಸ್ಯರ ನಡುವೆ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.
ಮಿಥುನ : ಮಿಥುನ ರಾಶಿಚಕ್ರದ ಸ್ಥಳೀಯರ ಅಧಿಪತಿ ಗ್ರಹ ಬುಧ. ಈ ಧನ ತ್ರಯೋದಶಿ ದಿನದಂದು ನೀವು ಯಾವುದೇ ಕಂಚಿನ ಪಾತ್ರೆ ಅಥವಾ ಯಾವುದೇ ವಸ್ತುವನ್ನು ಖರೀದಿಸಬೇಕು. ಇದರಿಂದ ನಿಮ್ಮ ಮಕ್ಕಳ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಅವರು ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತಾರೆ.
ಕರ್ಕಾಟಕ : ಕರ್ಕ ರಾಶಿಚಕ್ರದ ಸ್ಥಳೀಯರ ಅಧಿಪತಿ ಗ್ರಹ ಚಂದ್ರ. ಈ ಧನ ತ್ರಯೋದಶಿ ದಿನ ಕರ್ಕ ರಾಶಿಚಕ್ರದ ಜನರು ಹಿತ್ತಾಳೆ ಅಥವಾ ಚಿನ್ನದಿಂದ ತಯಾರಿಸಿರುವ ವಸ್ತುವನ್ನು ಖರೀದಿಸಬೇಕು. ಇದು ನಿಮ್ಮ ಜೀವನದಲ್ಲಿ ಹಣಕಾಸಿನ ಲಾಭವನ್ನು ನಿರ್ಮಿಸುತ್ತದೆ ಮತ್ತು ಇದರೊಂದಿಗೆ ನಿಮ್ಮ ಸ್ಥಗಿತಗೊಂಡಿರುವ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ.
ಸಿಂಹ : ಸಿಂಹ ರಾಶಿಚಕ್ರದ ಜನರ ಅಧಿಪತಿ ಗ್ರಹ ಸೂರ್ಯ. ಈ ರಾಶಿಚಕ್ರದ ಜನರು ಧನ ತ್ರಯೋದಶಿಯ ಪವಿತ್ರ ಹಬ್ಬದಂದು ತಾಮ್ರದ ಪಾತ್ರವನ್ನು ಖರೀದಿಸಿ ಅದರಲ್ಲಿ ನೀರನ್ನು ತುಂಬಿ ಅದನ್ನು ಮನೆಯೊಳಗೆ ತರಬೇಕು. ಇದರಿಂದ ಸಿಂಹ ರಾಶಿಚಕ್ರದ ಸ್ಥಳೀಯರು ಆರೋಗ್ಯದ ಲಾಭವನ್ನು ಪಡೆಯುವುದಲ್ಲದೆ ಅವರ ಸಂಪತ್ತು ಕೂಡ ಹೆಚ್ಚಾಗುತ್ತದೆ.
ಕನ್ಯಾ : ಕನ್ಯಾ ರಾಶಿಚಕ್ರದ ಅಧಿಪತಿ ಗ್ರಹ ಬುಧ. ಈ ಧನ ತ್ರಯೋದಶಿ ದಿನ ಕನ್ಯಾ ರಾಶಿಚಕ್ರದ ಜನರು ವಿದ್ಯುತ್ ಉಪಕಾರವನ್ನು ಖರೀದಿಸಿ ಮನೆಗೆ ತರಬೇಕು. ಇದರಿಂದ ಅವರ ಜೀವನದಲ್ಲಿ ನಡೆಯುತ್ತಿರುವ ಆರ್ಥಿಕ ಬಿಬಿಕ್ಕಟ್ಟನ್ನು ಪರಿಹರಿಸಲಾಗುತ್ತದೆ.
ತುಲಾ : ತುಲಾ ರಾಶಿಯ ಅಧಿಪತಿ ಗ್ರಹ ಶುಕ್ರ. ಈ ರಾಶಿಚಕ್ರದ ಸ್ಥಳೀಯರು ಈ ವರ್ಷ ಧನ ತ್ರಯೋದಶಿಯ ದಿನದಂದು ಯಾವುದೇ ಕಂಚಿನ ವಸ್ತುವನ್ನು ಖರಿಸಬೇಕು ಎಂದು ಸೂಚಿಸಲಾಗಿದೆ. ಇದರಿಂದಾಗಿ ತುಲಾ ರಾಶಿಚಕ್ರದ ಜನರು ವೃತ್ತಿಪರ ಮತ್ತು ವ್ಯಾಪಾರಿಕ ಜೀವನದಲ್ಲಿ ಬಡ್ತಿ ಪಡೆಯುತ್ತಾರೆ. ಇದರಿಂದಾಗಿ ಆರ್ಥಿಕ ಭಾಗವು ಸಹ ಬಲಗೊಳ್ಳುತ್ತದೆ.
ವೃಶ್ಚಿಕ : ವೃಶಿಕ ರಾಶಿಯ ಅಧಿಪತಿ ಗ್ರಹ ಮಂಗಳ. ವೃಶ್ಚಿಕ ರಾಶಿಚಕ್ರದ ಜನರು ಈ ಧನ ತ್ರಯೋದಶಿ ದಿನದಂದು ಬೆಳ್ಳಿ ಖರೀದಿಸಬೇಕು. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಇದರೊಂದಿಗೆ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ತೊಡೆದುಹಾಕಲು ಸಾಧ್ಯವಾಗುತ್ತದೆ.
ಧನು : ಧನು ರಾಶಿಚಕ್ರದ ಜನರ ಅಧಿಪತಿ ಗ್ರಹ ಗುರು. ಈ ಧನ ತ್ರಯೋದಶಿ ದಿನದಂದು ಧನು ರಾಶಿಚಕ್ರದ ಜನರು ತಾಮ್ರದಿಂದ ತಯಾರಿಸುವ ವಸ್ತುವನ್ನು ಖರೀದಿಸಲು ಸೂಚಿಸಲಾಗಿದೆ. ಇದರಿಂದಾಗಿ ಸಮಾಜದಲ್ಲಿ ಅವರ ಹೆಸರು, ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ.
ಮಕರ : ಮಕರ ರಾಶಿಚಕ್ರದ ಸ್ಥಳೀಯರ ಅಧಿಪತಿ ಗ್ರಹ ಶನಿ. ಮಕರ ರಾಶಿಚಕ್ರದ ದಿನದಂದು ಮಕರ ರಾಶಿಚಕ್ರದ ಜನರು ಯಾವುದೇ ಕಂಚಿನ ವಸ್ತುವನ್ನು ಖರೀದಿಸುವದು ಉತ್ತಮ. ಇದರಿಂದ ಅವರು ಜೀವನದಲ್ಲಿ ನಡೆಯುತ್ತಿರುವ ಕೌಟುಂಬಿಕ ಸಮಸ್ಯೆಗಳನ್ನು ಕೊನೆಗೊಳಿಸಬಹುದು ಮತ್ತು ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸಾಮರಸ್ಯ ಇರುತ್ತದೆ.
ಕುಂಭ : ಕುಂಭ ರಾಶಿಚಕ್ರದ ಸ್ಥಳೀಯರ ಅಧಿಪತಿ ಗ್ರಹ ಶನಿ. ಈ ವರ್ಷ ಧನ ತ್ರಯೋದಶಿ ದಿನದಂದು ಕುಂಭ ರಾಶಿಚಕ್ರದ ಜನರು ಬೆಳ್ಳಿ ಪಾತ್ರವನ್ನು ಖರೀದಿಸಿ ಅದರಲ್ಲಿ ನೀರನ್ನು ತಂಬಿ ಮನೆಗೆ ತರಲು ಸೂಚಿಸಲಾಗಿದೆ. ಇದರಿಂದ ಕೇವಲ ನೀವು ಮಾನಸಿಕ ಶಾಂತಿಯನ್ನು ಪಡೆಯುವುದಲ್ಲದೆ ಹಣಕಾಸಿನ ಲಾಭವನ್ನು ಪಡೆಯಲು ಸಹ ಸಾಧ್ಯವಾಗುತ್ತದೆ.
ಮೀನ : ಮೀನ ರಾಶಿಚಕ್ರದ ಸ್ಥಳೀಯರ ಅಧಿಪತಿ ಗ್ರಹ ಗುರು. ಈ ರಾಶಿಚಕ್ರದ ಜಾಣರು ಈ ಧನ ತ್ರಯೋದಶಿಯ ದಿನದಂದು ತಾಮ್ರದ ವಸ್ತುವನ್ನು ಖರೀದಿಸಲು ಸಲಹೆ ನೀಡಲಾಗಿದೆ. ಇದರಿಂದ ವೃತ್ತಿ ಜೀವನದಲ್ಲಿ ಬಡ್ತಿ ಪಡೆಯುತ್ತೀರಿ. ಇದರೊಂದಿಗೆ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಅಥವಾ ಅಡೆತಡೆಯನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು.