ನರಕ ಚತುರ್ದಶಿ ಮತ್ತು ಕಾರ್ತಿಕ ಅಮಾವಾಸ್ಯೆ - Naraka Chaturdashi and Kartika Amavasya in Kannada
ವರ್ಷ 2021 ತನ್ನ ಅಂತಿಮ ಹಂತದಲ್ಲಿದೆ. ಚಳಿಗಾಲ ಪ್ರಾರಂಭವಾಗಿದೆ ಮತ್ತು ಅದರೊಂದಿಗೆ ದೇಶಾದ್ಯಂತ ಹಬ್ಬಗಳ ಸಂಚಲನವೂ ಆರಂಭವಾಗಿದೆ. ಈ ಈ ಸಂಚಿಕೆಯಲ್ಲಿ ಈ ವರ್ಷ ಅಂದರೆ ವರ್ಷ 2021 ರಲ್ಲಿ ಐದು ದಿನಗಳ ವರೆಗೆ ನಡೆಯುವ ದೀಪ ಮಹೋತ್ಸವದ ಎರಡನೇ ದಿನದಂದು ಕಾರ್ತಿಕ ಅಮಾವಾಸ್ಯ ಮತ್ತು ನರಕ ಚತುರ್ದಶಿಯ ಹಬ್ಬವನ್ನು ಒಂದೇ ದಿನದಂದು ಆಚರಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಂದಿನ ನಮ್ಮ ಈ ಲೇಖನದಲ್ಲಿ ನಾವು ನಿಮಗೆ ನರಕ ಚತುರ್ದಶಿ ಮತ್ತು ಕಾರ್ತಿಕ ಅಮಾವಾಸ್ಯದ ಮಹತ್ವ, ಮುಹೂರ್ತ ಮತ್ತು ಪೂಜೆಯ ವಿಧಾನದೊಂದಿಗೆ ಈ ಲೇಖನದ ಮೂಲಕ ವಿಶೇಷವಾಗಿ ಕಾರ್ತೀಕ ಅಮಾವಾಸ್ಯದ ಗ್ರಹ ದೋಷ ನಿವಾರಣೆಗೆ ಸಂಬಂಧಿಸಿದ ಕೆಲವು ಅವಶ್ಯಕ ಮಾಹಿತಿಗಳನ್ನು ಸಹ ನೀಡಲಿದ್ದೇವೆ.
ನಡೆಯಿರಿ, ಮೊದಲು ನಿಮಗೆ ಕಾರ್ತಿಕ ಅಮಾವಾಸ್ಯೆ ಮತ್ತು ನರಕ ಚತುರ್ದಶಿಯ ತಿಥಿ ಮತ್ತು ಮುಹೂರ್ತದ ಮಾಹಿತಿಯನ್ನು ನೀಡೋಣ
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ನರಕ ಚತುರ್ದಶಿ ಮತ್ತು ಕಾರ್ತಿಕ ಅಮಾವಾಸ್ಯೆ 2021 ತಿಥಿ ಮತ್ತು ಮುಹೂರ್ತ
ವರ್ಷ 2021 ರಲ್ಲಿ ಕಾರ್ತಿಕ ಅಮಾವಾಸ್ಯೆ ಮತ್ತು ನರಕ ಚತುರ್ದಶಿ ಹಬ್ಬವು ಒಂದು ದಿನದಲ್ಲಿದೆ. ಈ ವರ್ಷ ಈ ಎರಡೂ ಹಬ್ಬಗಳನ್ನು 04 ನವೆಂಬರ್ ರಂದು ಆಚರಿಸಲಾಗುತ್ತದೆ.
ನರಕ ಚತುರ್ದಶಿ ಮುಹೂರ್ತ
ಅಭ್ಯಂಗ ಸ್ನಾನ ಸಮಯ : ಬೆಳಿಗ್ಗೆ 06 ಗಂಟೆ 06 ನಿಮಿಷದಿಂದ 06 ಗಂಟೆ 34 ನಿಮಿಷದ ವರೆಗೆ
ಅವಧಿ : 0 ಗಂಟೆ ನಿಮಿಷ
ಕಾರ್ತಿಕ ಅಮಾವಾಸ್ಯ ಮುಹೂರ್ತ
ಅಮಾವಾಸ್ಯ ಆರಂಭ : 04 ನವೆಂಬರ್ , 2021ರಂದು ಬೆಳಿಗ್ಗೆ 06 ಗಂಟೆ 06 ನಿಮಿಷದಿಂದ
ಅಮಾವಾಸ್ಯ ಅಂತ್ಯ : 05 ನವೆಂಬರ್ , 2021 ರಂದು ರಾತ್ರಿ 02 ಗಂಟೆ 47 ನಿಮಿಷಗಳ ವರೆಗೆ
ನಡೆಯಿರಿ ಈಗ ನರಕ ಚತುರ್ದಶಿ ಮತ್ತು ಕಾರ್ತಿಕ ಅಮಾವಾಸ್ಯದ ಪ್ರಾಮುಖ್ಯತೆಯನ್ನು ತಿಲಯೋಣ. ಮೊದಲು ನರಕ ಚತುರ್ದಶಿಯ ಬಗ್ಗೆ ತಿಳಿಯೋಣ
ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್
ನರಕ ಚತುರ್ದಶಿ ಪ್ರಾಮುಖ್ಯತೆ
ನರಕ ಚತುರ್ದಶಿಯನ್ನು ಸನಾತನ ಧರ್ಮದಲ್ಲಿ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿಯನ್ನು ಸನಾತನ ಧರ್ಮದಲ್ಲಿ ನರಕ ಚತುರ್ದಶಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶದ ಕೆಲವು ಪ್ರದೇಶಗಳಲ್ಲಿ ರೂಪ್ ಚೌದಸ್, ನರಕ ಚೌದಸ್ ಮತ್ತು ರೂಪ ಚತುರ್ದಶಿಯಂತಹ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ದೀಪಾವಳಿಗೆ ಮುಂಚೆಯೇ ಇದನ್ನು ಆಚರಿಸುವುದರಿಂದ ಅನೇಕ ಸ್ಥಳಗಳಲ್ಲಿ ಇದನ್ನು ಚಿಕ್ಕ ದೀಪಾವಳಿ ಎಂದು ಸಹ ಕರೆಯಲಾಗುತ್ತದೆ.
ಹಲವು ವಿಧಗಳಲ್ಲಿ ನರಕ ಚತುರ್ದಶಿಯ ಮಹತ್ವವು ವಿಶೇಷವಾಗಿದೆ. ಈ ಹಬ್ಬದಂದು ಮರಣದ ದೇವರು ಯಮನನ್ನು ಪೂಜಿಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ದಿನದಂದು ಸೂರ್ಯೋದಯದ ಮೊದಲು ಎದ್ದು ಸಂಪೂರ್ಣ ದೇಹದ ಮೇಲೆ ಎಳ್ಳೆಣ್ಣೆಯನ್ನು ಹಚ್ಚಿ ಮತ್ತು ಸ್ನಾನದ ನೀರಿನಲ್ಲಿ ಉತ್ತರಾಣೀ ಎಲೆಗಳನ್ನು ಸೇರಿಸಿ ಸ್ನಾನ ಮಾಡುವುದರಿಂದ ನರ್ಕದ ಭಯವನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಇದರೊಂದಿಗೆ ಚರ್ಮದಲ್ಲಿ ಹೊಳಪು ಬರುತ್ತದೆ. ನರಕ ಚತುರ್ದಶಿ ಹಬ್ಬಕ್ಕೆ ಸಂಬಂಧಿಸಿದ ಒಂದು ಕಥೆಯೂ ಇದೆ. ರಾಜ ಬಲಿ ಮತ್ತು ವಿಷ್ಣು ದೇವರ ಹೊರತಾಗಿ ಇದು ಶ್ರೀ ಕೃಷ್ಣ ದೇವರೊಂದಿಗೆ ಸಹ ಸಂಬಂಧಿಸಿದೆ. ನಡೆಯಿರಿ ಈಗ ಆ ಕಥೆಯ ಬಗ್ಗೆ ತಿಳಿಯೋಣ.
ನರಕ ಚತುರ್ದಶಿ ಕಥೆ
ನಾವು ಸಾಮಾನ್ಯವಾಗಿ ನರಕ ಚತುರ್ದಶಿ ಆಚರಣೆಯ ಹಿಂದೆ ಎರಡು ಕಥೆಗಳನ್ನು ಕೇಳುತ್ತೇವೆ. ಇದರಲ್ಲಿ ಒಂದು ಶ್ರೀ ಕೃಷ್ಣ ದೇವರಿಗೆ ಸಂಬಂಧಿಸಿದೆ ಮತ್ತು ಇನ್ನೊಂದು ವಿಷ್ಣು ದೇವರ ವಾಮನ ಅವತಾರಕ್ಕೆ ಸಂಬಂಧಿಸಿದೆ. ನಡೆಯಿರಿ ಈಗ ಈ ಎರಡೂ ಕಥೆಗಳ ಬಗ್ಗೆ ತಿಳಿಯೋಣ.
ಶ್ರೀ ಕೃಷ್ಣ ದೇವರಿಗೆ ಸಂಬಂಧಿಸಿದ ಮೊದಲ ಕಥೆಯ ಪ್ರಕಾರ, ನರಕಾಸುರನೆಂಬ ರಾಕ್ಷಸನು ಕಠಿಣ ತಪಸ್ಸು ಮಾಡಿ ತನ್ನ ಮರಣವನ್ನು ಮಹಿಳೆಯಿಂದ ಮಾತ್ರ ಮಾಡಬಹುದುದೆಂಬ ವರವನ್ನು ಪಡೆದನು. ಈ ವರವನ್ನು ಪಡೆದ ನಂತ್ರ ನರಕಾಸುರನು ಮೂರು ಲೋಕಗಳಲ್ಲಿ ಹಿಂಸಿಸಲು ಆರಂಭಿಸಿದನು. ಇದನ್ನು ನೋಡಿ ಶ್ರೀ ಕೃಷ್ಣ ದೇವರು ತನ್ನ ಹೆಂಡತಿ ಸತ್ಯಭಾಮೆಯೊಂದಿಗೆ ಸೇರಿ ಕಾರ್ತಿಕ ಮಾಸದ ಚತುರ್ದಶಿ ದಿನಾಂಕದಂದು ನರಕಾಸುರನನ್ನ ಕೊಂದರು. ನರಕಾಸುರನ ಮರಣದ ನಂತರ ಜನರು ತಮ್ಮ-ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸಿದರು ಮತ್ತು ಅಂದಿನಿಂದ ನರಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ. ನರಕಾಸುರನ ಸೆರೆಯಿಂದ ಶ್ರೀ ಕೃಷ್ಣ ದೇವರು 16 ಸಾವಿರ ಮಹಿಳೆಯರನ್ನು ಬಿಡುಗಡೆ ಮಾಡಿಸಿದರು ಮತ್ತು ನಂತರ ಈ ಮಹಿಳೆಯರು ಶ್ರೀ ಕೃಷ್ಣ ದೇವರ ಹೆಂಡತಿಯಾದರು ಎಂದು ಸಹ ನಂಬಲಾಗಿದೆ.
ಅದೇ ಸಮಯದಲ್ಲಿ ಮತ್ತೊಂದೆಡೆ ಎರಡನೇ ಕಥೆಯ ಪ್ರಕಾರ, ವಿಷ್ಣು ದೇವರು ವಾಮನ ಅವತಾರವನ್ನು ತೆಗೆದುಕೊಂಡು, ಬಲಿ ರಾಜನ ಸಂಪೂರ್ಣ ಅರಮನೆಯನ್ನು ಒಳಗೊಂಡಂತೆ ಭೂಮಿ ಮತ್ತು ಆಕಾಶವನ್ನು ಸಹ ಎರಡು ಹಂತದಲ್ಲಿ ಅಳೆದನು, ಆಗ ವಾಮನ ದೇವರು ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ರಾಜ ಬಲಿಯನ್ನು ಕೇಳಿದರು. ಈ ಪ್ರಶ್ನೆಗೆ ಉತ್ತರವಾಗಿ ಬಲಿ ರಾಜನು ಮೂರನೇ ಹೆಜ್ಜೆಯನ್ನು ತನ್ನ ತಲೆಯ ಮೇಲೆ ಇಡಲು ವಾಮನ ದೇವರಿಗೆ ಹೇಳಿದನು. ಬಲಿ ರಾಜನ ಈ ಭಕ್ತಿಯನ್ನು ಕಂಡು ವಿಷ್ಣು ದೇವರು ಬಹಳ ಸಂತುಷ್ಟರಾದರು ಮತ್ತು ಆತನಿಗೆ ವರವನ್ನು ಕೇಳುವಂತೆ ಹೇಳಿದರು. ಆಗ ರಾಜ ಬಲಿ ವರವನ್ನು ಕೇಳುವ ಮೂಲಕ, ಪ್ರತಿವರ್ಷ ತ್ರಯೋದಶಿ ತಿಥಿಯಿಂದ ಅಮಾವಾಸ್ಯದ ವರೆಗೆ ಭೂಮಿಯ ಮೇಲೆ ಅವನು (ರಾಜ ಬಲಿ) ಆಳಬೇಕೆಂಬ ವರವನ್ನು ಕೇಳಿದನು ಮತ್ತು ಈ ಸಮಯದಲ್ಲಿ ಬಲಿ ರಾಜನ ರಾಜ್ಯದಲ್ಲಿ ದೀಪಾವಳಿಯನ್ನು ಯಾರು ಆಚರಿಸುತ್ತಾರೋ ಮತ್ತು ಇದರೊಂದಿಗೆ ಚತುರ್ದಶಿಯಂದು ದೀಪಗಳ ದಾನ ಮಾಡುತ್ತಾರೋ, ಅಂತಹ ಎಲ್ಲಾ ಜನರು ಮತ್ತು ಅವರ ಪೂರ್ವಜರು ನರಕಯಾತನೆಯನ್ನು ಎದುರಿಸಬೇಕಾಗಿಲ್ಲ. ವಾಮನ ದೇವರು ಬಲಿ ರಾಜನ ಈ ಮಾತನ್ನು ಒಪ್ಪಿಕೊಂಡರು ಮತ್ತು ಅಂದಿನಿನ ನರಕ ಚತುರ್ದಶಿಯ ಹಬ್ಬವನ್ನು ಎಲ್ಲೆಡೆ ಆಚರಿಸಲು ಆರಂಭಿಸಲಾಯಿತು.
ನಡೆಯಿರಿ ನಾವೀಗ ನರಕ ಚತುರ್ದಶಿಯ ಪೂಜಾ ವಿಧಾನದ ಬಗ್ಗೆ ಮಾಹಿತಿ ನೀಡೋಣ.
ನರಕ ಚತುರ್ದಶಿಯ ಪೂಜಾ ವಿಧಾನ
- ನರಕ ಚತುರ್ದಶಿ ದಿನದಂದು ಸಯೋದಯಕ್ಕೂ ಮುನ್ನ ಎದ್ದೇಳಿ
- ಇದರ ನಂತರ ಎಳ್ಳೆಣ್ಣೆಯನ್ನು ಸಂಪೂರ್ಣ ದೇಹದ ಮೇಲೆ ಹಚ್ಚಿ ಮತ್ತು ಉತ್ತರಾಣೀ ಎಲೆಯನ್ನು ನಿಮ್ಮ ತಲೆಯ ಮೇಲಿನಿಂದ ಮೂರು ಬಾರಿ ಸುತ್ತಿ ಸ್ನಾನ ಮಾಡುವ ನೀರಿನಲ್ಲಿ ಹಾಕಿರಿ.
- ನರಕ ಚತುರ್ದಶಿಗಿಂತ ಮೊದಲು ಅಷ್ಟಮಿ ಅಂದರೆ ಕೃಷ್ಣ ಪಕ್ಷದ ಅಷ್ಟಮಿಯನ್ನು ಅಹೊಯಿ ಅಷ್ಟಮಿಯಾಗಿ ಆಚರಿಸಲಾಗುತ್ತದೆ. ಅಹೊಯಿ ಅಷ್ಟಮಿಯಂದು ಒಂದು ಪಾತ್ರದಲ್ಲಿ ನೀರು ತುಂಬಿಸಿ ಸುರಕ್ಷಿತವಾಗಿಡಲಾಗುತ್ತದೆ. ನರಕ ಚತುರ್ದಶಿಯಂದು ಈ ಪಾತ್ರದ ನೀರನ್ನು ಸಹ ಸ್ನಾನ ಮಾಡುವ ನೀರಿನಲ್ಲಿ ಸೇರಿಸಲಾಗುತ್ತದೆ.
- ಈ ದಿನದಂದು ಸ್ನಾನ ಮಾಡಿದ ನಂತರ ಮರಣದ ದೇವರ ದಿಕ್ಕಿಗೆ ಅಂದರೆ ದಕ್ಷಿಣದ ಕಡೆಗೆ ಕೈ ಮುಗಿದು ಯಮ ದೇವರನ್ನು ಸ್ಮರಿಸುತ್ತಾ ತಿಳಿದೋ ತಿಳಿಯದೋ ನಾವು ಮಾಡಿದ ಪಾಪಗಳಿಗೆ ಕ್ಷಮೆ ಕೇಳಬೇಕು.
- ಇದರ ನಂತರ ಯಮ ದೇವರಿಗೆ ದಕ್ಷಿಣ ದಿಕ್ಕಿನಲ್ಲಿ ಎಣ್ಣೆಯ ದೀಪವನ್ನು ಮನೆಯ ಮುಖ್ಯ ಬಾಗಿಲಿನ ಹೊರಗೆ ಇಡಬೇಕು.
- ಇದರ ನಂತರ ಈ ದಿನದಂದು ಸಾಯಂಕಾಲ ಇತರ ದೇವರುಗಳನ್ನು ಸಹ ವಿಧಾನದಿಂದ ಪೂಜಿಸಬೇಕು ಮತ್ತು ಮನೆ ಕಚೇರಿ, ಅಂಗಡಿ ಇತ್ಯಗಳ ಹೊರಗೆ ದೀಪವನ್ನು ಬೆಳಗಿಸಿ ಇಡಬೇಕು. ಇದರಿಂದಾಗಿ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯುತ್ತೀರಿ.
- ಈ ದಿನದಂದು ಶ್ರೀ ಕೃಷ್ಣ ದೇವರನ್ನು ಸಹ ಪೂಜಿಸಲಾಗುತ್ತದೆ. ಇದರಿಂದ ಭಕ್ತರ ಸೌಂದರ್ಯದ ಆಶೀರ್ವಾದವನ್ನು ಪಡೆಯುತ್ತಾರೆ.
- ಈ ದಿನದಂದು ಅರ್ಧರಾತ್ರಿಯಲ್ಲಿ ಮನೆಯಲ್ಲಿ ಬಿದ್ದಿರುವ ಹಳೆಯ ಅಥವಾ ಹಾಳಾದ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯಲಾಗುತ್ತದೆ. ಇದನ್ನು ದಾರಿದ್ರ್ಯ ನಿಸಾರಂ ಎಂದು ಹೇಳಲಾಗುತ್ತದೆ. ನಂಬಿಕೆಗಳ ಪ್ರಕಾರ, ನರಕ ಚತುರ್ದಶಿಯ ಮರುದಿನ ತಾಯಿ ಲಕ್ಷ್ಮಿ ಎಲ್ಲರ ಮನೆಗೆ ಪ್ರವೇಶಿಸುತ್ತಾರೆ ಮತ್ತು ಅವರು ಹೆಚ್ಚು ಕೊಳಕು ಇರುವ ಮನೆಯಲ್ಲಿ ವಾಸಿಸುವುದಿಲ್ಲ.
ನಡೆಯಿರಿ ಈಗ ಈ ದಿನದ ಕಾರ್ತಿಕ ಅಮಾವಾಸ್ಯೆಯ ಮಹತ್ವ ಮತ್ತು ಅದರ ಪೂಜಾ ವಿಧಾನದ ಬಗ್ಗೆಯೂ ನಿಮಗೆ ಮಾಹಿತಿ ನೀಡೋಣ.
ಶನಿ ರಿಪೋರ್ಟ್ ಮೂಲಕ ಶನಿ ದೇವ ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ
ಕಾರ್ತಿಕ ಅಮಾವಾಸ್ಯ ಮಹತ್ವ
ಸನಾತನ ಧರ್ಮದಲ್ಲಿ ಪ್ರತಿ ಅವಮಾವಾಸ್ಯೆಯನ್ನು ತುಂಬಾ ವಿಶೇಷವೆಂದು ಪರಿಗಣಿಸಲಾಗಿದೆ, ಆದರೆ ಕಾರ್ತಿಕ ಅಮಾವಾಸ್ಯೆಯ ಮಹತ್ವವು ಅನೇಕ ಪಟ್ಟು ಹೆಚ್ಚಾಗಿದೆ. ಏಕೆಂದರೆ ಕಾರ್ತಿಕ ಅಮಾವಾಸ್ಯೆಯ ದಿನದಂದು ಸಂಪೂರ್ಣ ದೇಶದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದ ಮಹತ್ವವು ತುಂಬಾ ಹೆಚ್ಚಾಗಿದೆ ಏಕೆಂದರೆ, ಸ್ವತಃ ಶ್ರೀ ಕೃಷ್ಣನೇ ಈ ದಿನವನ್ನು ತನಗೆ ಅತ್ಯಂತ ಪ್ರಿಯವಾದ ದಿನವೆಂದು ಹೇಳುವ ಮೂಲಕ, ಈ ದಿನದಂದು ಯಾರು ಶ್ರೀ ಕೃಷ್ಣ ದೇವರನ್ನು ಪೂಜಿಸುತ್ತಾರೋ, ಅವರ ಎಲ್ಲಾ ಗ್ರಹ ದೋಷಗಳು ಮತ್ತು ಜೀವನದ ಕಷ್ಟಗಳು ನಾಶವಾಗುತ್ತವೆ ಎಂದು ಹೇಳಿದ್ದಾರೆ. ಈ ದಿನದಂದು ತಾಯಿ ಲಕ್ಷ್ಮಿ ಭೂಮಿಯ ಮೇಲೆ ಬರುತ್ತಾರೆ, ಇದರೊಂದಿಗೆ ಈ ದಿನದಂದು ಗೀತವನ್ನು ಪಠಿಸುವುದರಿಂದ ಮತ್ತು ದಾನ - ಪುಣ್ಯವನ್ನು ಮಾಡುವುದರಿಂದ ವಿಶೇಷ ಫಲಿತಾಂಶಗಳನ್ನು ಪಡೆಯಲಾಗುತ್ತದೆ ಮತ್ತು ದೀಪವನ್ನು ದಾನ ಮಾಡುವುದರಿಂದ ಸಿಗುವ ಫಲಗಳು ಅಕ್ಷಯ. ಇದಲ್ಲದೆ ನಂಬಿಕೆಗಳ ಪ್ರಕಾರ, ಈ ದಿನದಂದು ಪೂರ್ವಜರಿಗೆ ಮಾಡಲಾಗುವ ದಾನ-ಪುಣ್ಯ ಮತ್ತು ಪೂಜೆಯ ಫಲಗಲಿ ಸಹ ಅಕ್ಷಯವೆಂದು ಪರಿಗಣಿಸಲಾಗಿದೆ ಅಂದರೆ ಹಲವು ಜನ್ಮಗಳ ವರೆಗೂ ನೀವು ಅದರ ಫಲವನ್ನು ಪಡೆಯುತ್ತೀರಿ.
ನಡೆಯಿರಿ ಈಗ ನಿಮಗೆ ಕಾರ್ತಿಕ ಅಮಾವಾಸ್ಯೆಯ ಪೂಜಾ ವಿಧಾನದ ಬಗ್ಗೆ ಮಾಹಿತಿ ನೀಡೋಣ.
ಕಾರ್ತಿಕ ಅಮವಾಸ್ಯೆ ಪೂಜಾ ವಿಧಾನ
- ಕಾರ್ತೀಕ ಅಮಾವಾಸ್ಯೆಯ ದಿನದಂದು ಬೆಳಿಗ್ಗೆ ಬೇಗನೆ ಎದ್ದೇಳಿ.
- ಸಮೀಪದಲ್ಲಿರುವ ಯಾವುದೇ ಪವಿತ್ರ ನದಿ ಮತ್ತು ಕೊಳದಲ್ಲಿ ಸ್ನಾನ ಮಾಡಿ. ಕರೋನ ಅವಧಿಯಲ್ಲಿ ಹಾಗೆ ಮಾಡುವುದು ಸಾಧ್ಯವಾಗದಿದ್ದರೆ, ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಿ.
- ಇದರ ನಂತರ ತಾಮ್ರದ ಪಾತ್ರದಲ್ಲಿ ನೀರು ತಿಂಬಿ ಅದರಲ್ಲಿ ಕೆಂಪು ಶ್ರೀಗಂಧ ಮತ್ತು ಕೆಂಪು ಹೂವುಗಳೊಂದಿಗೆ ಅಕ್ಷತವನ್ನು ಸೇರಿಸಿ ಸೂರ್ಯ ದೇವರಿಗೆ ಅರ್ಪಿಸಿ.
- ಇದರ ನಂತರ ಹರಿಯುವ ನೀರಿನಲ್ಲಿ ಎಳ್ಳುನ್ನು ಹಾಕಲಾಗುತ್ತದೆ. ಹಾಗೆ ಮಾಡುವುದು ಈ ಸಮಯದಲ್ಲಿ ನಿಮಗೆ ಸಾಧ್ಯವಾಗದಿದ್ದರೆ, ಆ ಎಳ್ಳನ್ನು ಶುದ್ಧವಾದ ಬಟ್ಟೆಯಲ್ಲಿ ಕಟ್ಟಿ ಸುರಕ್ಷಿತವಾದ ಸ್ಥಳದಲ್ಲಿ ಇರಿಸಿ. ನಂತರ ನಿಮಗೆ ಅವಕಾಶ ಸಿಕ್ಕಾಗ ಆ ಎಳ್ಳನ್ನು ಹರಿಯುವ ನೀರಿನಲ್ಲಿ ಹಾಕಿ.
ಗ್ರಹದೋಷ ನಿವಾರಣೆಗೆ ಕಾರ್ತಿಕ ಅಮಾಸ್ಯೆಯ ದಿನದಂದು ಈ ಕೆಲಸ ಮಾಡಿ.
- ಈ ದಿನದಂದು ಗ್ರಹದೋಷ ನಿವಾರಣೆಗಾಗಿ ನವಗ್ರಹ ಸ್ತ್ರೋತವನ್ನು ಪಠಿಸಿ. ಇದರಿಂದ ನವಗ್ರಹಗಳು ಶಾಂತವಾಗುತ್ತವೆ ಮತ್ತು ನಿಮಗೆ ಶುಭ ಫಲಿತಾಂಶಗಳನ್ನು ಒದಗಿಸುತ್ತವೆ.
- ನಿಮ್ಮ ಜಾತಕದಲ್ಲಿ, ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವಂತಹ ಯಾವುದೇ ರೀತಿಯ ಕೆಟ್ಟ ಯೋಗವು ರೂಪುಗೊಳ್ಳುತ್ತಿದ್ದರೆ, ಈ ದಿನದಂದು ವಿಷ್ಣು ಸಹಸ್ತ್ರನಾಮವನ್ನು ಪಠಿಸಿ. ಈ ಕೆಲಸವು ಆ ಯೋಗದ ಪರಿಣಾಮವನ್ನು ಕಡಿಮೆ ಮಾಡುತ್ತದೆ.
- ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವರನ್ನು ನ್ಯಾಯದ ದೇವರೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಜಾತಕದಲ್ಲಿ ಶನಿ ದೇವ ಕೆಟ್ಟ ಸ್ಥಾನದಲ್ಲಿದ್ದು ನಿಮಗೆ ಕೆಟ್ಟ ಫಲಿತಾಂಶಗಳನ್ನು ನೀಡುತ್ತಿದ್ದರೆ, ಕಾರ್ತಿಕ ಅಮಾವಾಸ್ಯೆಯ ದಿನದಂದು ಯಾವುದೇ ದೇವಸ್ಥಾನ ಅಥವಾ ಬಡ ವ್ಯಕ್ತಿಯ ಮನೆಗೆ ಹೋಗಿ ದೀಪವನ್ನು ಬೆಳಗಿಸಬೇಕು. ಇದರಿಂದ ಶನಿ ದೇವ ಸಂತೋಷಪಡುತ್ತಾರೆ ಮತ್ತು ಅವರ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ.
- ಸಮಾಜದಲ್ಲಿ ನಿರೀಕ್ಷೆಗೆ ತಕ್ಕಂತೆ ನೀವು ಖ್ಯಾತಿಯನ್ನು ಪಡೆಯದಿದ್ದರೆ, ಕಾರ್ತಿಕ ಅಮಾವಾಸ್ಯೆಯ ದಿನದಂದು ಭಗವಂತ ಶಿವನಿಗೆ ಜೇನು ತುಪ್ಪದ ಅಭಿಷೇಕ ಮಾಡಿ. ಇದರಿಂದ ನಿಮ್ಮ ಧ್ವನಿಯಲ್ಲಿ ಸೌಮ್ಯತೆ ಉಂಟಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಪ್ರಗತಿ ಹೆಚ್ಚಾಗುತ್ತದೆ.
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿರಬೇಕು ಎಂದು ನಾವು ಭಾವಿಸುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಲೇಖನವನ್ನು ನಿಮ್ಮ ಇತರ ಹಿತೈಷಿಗಳೊಂದಿಗೆ ಹಂಚಿಕೊಳ್ಳಬೇಕು. ಧನ್ಯವಾದ!