ಮಕರ ರಾಶಿಯಲ್ಲಿ ಮಾರ್ಗಿ ಶನಿ ( 11th October 2021 )

ಖಗೋಳಶಾಸ್ತ್ರದ ಪ್ರಕಾರ, ಸೌರವ್ಯೂಹದಲ್ಲಿ ಶನಿ ಗ್ರಹವು ನಿಧಾನ ಗತಿಯ ಗ್ರಹವಾಗಿದೆ ಮತ್ತು ಇದರ ಹೊರಗಿನ ಭಾಗವು ಸಣ್ಣ ಕಣಗಳಿಂದ ಮಾಡಲ್ಪಟ್ಟಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಒಂಬತ್ತು ಗ್ರಹಗಳಲ್ಲಿ ಇಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಶನಿ ದೇವ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಶನಿ ಸಂಚಾರವು ಎಲ್ಲಾ ಸ್ಥಳೀಯರ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.

ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ

ಶನಿಯನ್ನು ನ್ಯಾಯದ ದೇವರೆಂದು ಕರೆಯಲಾಗುತ್ತದೆ ಅಂದರೆ ಶನಿ ದೇವ ನಿಮ್ಮ ಕರ್ಮಗಳಿಗೆ ತಕ್ಕಂತೆ ನಿಮಗೆ ಫಲವನ್ನು ನೀಡುತ್ತಾರೆ. ಇದು ನಿಮ್ಮ ಕರ್ಮಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ಶನಿ ನಿಮಗೆ ಹೇಗೆ ಫಲಪ್ರದವಾಗುತ್ತಾನೆ ಎಂಬುದನ್ನು ಸಾಬೀತುಪಡಿಸುತ್ತದೆ. ನೀವು ಉತ್ತಮ ಕಾರ್ಯಗಳನ್ನು ಮಾಡಿದರೆ, ಶನಿ ದೇವ ನಿಮಗೆ ಧನಾತ್ಮಕ ಫಲಿತಾಂಶವನ್ನು ನೀಡುತ್ತಾರೆ ಮತ್ತು ನೀವು ಕೆಟ್ಟ ಕೆಲಸಗಳಲ್ಲಿ ತೊಡಗಿದ್ದರೆ, ಖಂಡಿತವಾಗಿಯೂ ನೀವು ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಶನಿ ದೇವ ಒಬ್ಬ ವ್ಯಕ್ತಿಗೆ ನಕಾರಾತ್ಮಕ ಫಲಿತಾಂಶಗಳನ್ನು ನೀಡಿದರೆ, ಆ ವ್ಯಕ್ತಿಯು ನೋವು ಮತ್ತು ಅತೃಪ್ತಿಯನ್ನು ಎದುರಿಸಬೇಕಾಗುತ್ತದೆ, ಆದರೆ ಶನಿ ದೇವ ವ್ಯಕ್ತಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡಿದರೆ, ಆ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾರೆ. ಶನಿ ದೇವ ತನ್ನ ನಿಧಾನ ಗತಿಯಿಂದಾಗಿ ಫಲಿತಾಂಶಗಳನ್ನು ಷ ನಿಧಾನವಾಗಿ ನೀಡುತ್ತಾರೆ, ಇದು ದೀರ್ಘಕಾಲದ ವರೆಗೆ ಪರಿಣಾಮಕಾರಿಯಾಗಿರುತ್ತದೆ.

ಯಾವುದೇ ಸ್ಥಳೀಯರ ಜೀವನದಲ್ಲಿ ಶನಿ ದೇವ ಮಾರ್ಗಿ ಮತ್ತು ವಕ್ರೀ ಸ್ಥಾನವು ಆಳವಾದ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ಆದಾಗ್ಯೂ, ವಕ್ರೀ ಶನಿಯ ಪರಿಣಾಮವು ತುಲನಾತ್ಮಕವಾಗಿ ಹೆಚ್ಚು ಆಳವಾಗಿರುತ್ತದೆ ಮತ್ತು ಸಾಮಾನ್ಯವಾಗಿ ಇದು ಸ್ಥಳೀಯರಿಗೆ ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶನಿ ದೇವ ತನ್ನ ರಾಶಿಯಲ್ಲಿ ಮಾರ್ಗಿಯಾಗುವುದು, ಸ್ಥಳೀಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು. ಶನಿ ದೇವ 11 ಅಕ್ಟೋಬರ್ 2021 ರಂದು ಬೆಳಿಗ್ಗೆ 3 ಗಂಟೆ 44 ನಿಮಿಷಕ್ಕೆ ಮಕರ ರಾಶಿಯಲ್ಲಿ ಮಾರ್ಗಿಯಾಗುತ್ತದೆ ಮತ್ತು 29 ಏಪ್ರಿಲ್ 2022 ರ ವರೆಗೆ ಅಂದರೆ ಕುಂಭ ರಾಶಿಗೆ ಸಾಗುವ ವರೆಗೆ ಇದೇ ರಾಶಿಯಲ್ಲಿ ಇರುತ್ತಾರೆ.

ನಡೆಯಿರಿ, ಎಲ್ಲಾ ರಾಶಿಗಳ ಮೇಲೆ ಮಾರ್ಗಿ ಶನಿಯ ಪರಿಣಾಮವನ್ನು ತಿಳಿಯೋಣ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

Read in English: Saturn Direct in Capricorn (11th October 2021)

मेष राशि/ಮೇಷ ರಾಶಿ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಶನಿ ದೇವ ಅವರ ಹತ್ತನೇ ಮನೆ ಅಂದರೆ ಕರ್ಮದ ಮನೆಯಲ್ಲಿ ಮಾರ್ಗಿಯಾಗುತ್ತಿದ್ದಾರೆ. ಈ ಕಾರಣದಿಂದಾಗಿ ಮೇಷ ರಾಶಿಚಕ್ರದ ಸ್ಥಳೀಯರು ವೃತ್ತಿಪರ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ನೀವು ಸ್ಥಿರತೆ ಮತ್ತು ಬೆಳಗವಣಿಗೆಯನ್ನು ಕಾಣಬಹುದು. ಈ ಅವಧಿಯಲ್ಲಿ ನಿಮ್ಮ ಯೋಗ್ಯತೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಲು ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ಇದರೊಂದಿಗೆ ಕೆಲಸದ ಸ್ಥಳದಲ್ಲಿ ನಿಮ್ಮ ಮೂಲಕ ಮಾಡಲಾದ ಪರಿಶ್ರಮದ ಧನಾತ್ಮಕ ಫಲಿತಾಂಶಗಳನ್ನು ಸಹ ನೀವು ಪಡೆಯಬಹುದು. ಇದಲ್ಲದೆ ನೀವು ಕೆಲವು ವಿದೇಶಿ ಗ್ರಾಹಕರೊಂದಿಗೆ ಕೂಡ ಉತ್ತಮ ಸಂಬಂಧವನ್ನು ಹೊಂದುವಲ್ಲಿ ಯಶಸ್ವಿಯಾಗಬಹುದು. ಆರ್ಥಿಕ ದೃಷ್ಟಿಕೋನದಿಂದ, ಮೇಷ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವು ಸ್ವಲ್ಪ ನಿಧಾನವಾಗಿರಬಹುದು. ಈ ಸಮಯದಲ್ಲಿ ನಿಮ್ಮ ಆದಾಯ ಮತ್ತು ಲಾಭದಲ್ಲಿ ಕೊರತೆ ಉಂಟಾಗಬಹುದು. ಈ ಅವಧಿಯಲ್ಲಿ ನೀವು ನಿರೀಕ್ಷೆಗಿಂತ ಕಡಿಮೆ ಲಾಭವನ್ನು ಪಡೆಯುವ ಸಾಧ್ಯತೆ ಇದೆ.

ಶಿಕ್ಷಣದ ದೃಷ್ಟಿಕೋನದಿಂದ, ಮೇಷ ರಾಶಿಚಕ್ರದ ವಿಧ್ಯಾರ್ಥಿಗಳಿಗೆ ಈ ಸಮಯವು ಸರಾಸರಿ ಫಲಪ್ರದವೆಂದು ಸಬೀತಾಗಬಹುದು. ಈ ಸಮಯದಲ್ಲಿ ನಿಮ್ಮ ಸ್ವಭಾವದಲ್ಲಿ ಆಲಸ್ಯ ಹೆಚ್ಚಾಗಬಹುದು. ಈ ಕಾರಣದಿಂದಾಗಿ ನಿಮ್ಮ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಲ್ಲಿ ನೀವು ವಿಫಲರಾಗಬಹುದು. ಇದು ನಿಮ್ಮ ಗ್ರೇಡ್ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವೇಳಾಪಟ್ಟಿಯನ್ನು ತಯಾರಿಸಲು ಸೂಚಿಸಲಾಗಿದೆ ಮತ್ತು ಅದನ್ನು ಅನುಸರಿಸಿ ಅಧ್ಯಯನದತ್ತ ಗಮನ ಹರಿಸಿ. ಈ ಸಮಯದಲ್ಲಿ ನಿಮಗಾಗಿ ನೀವು ಯಾವುದೇ ಹೊಸ ಆಸ್ತಿಯನ್ನು ಖರೀದಿಸಬಹುದು ಅಥವಾ ಹಳೆಯ ಆಸ್ತಿಯ ದುರಸ್ತಿಗೆ ನೀವು ನಿಮ್ಮ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಯಾವುದೇ ಆಸ್ತಿಯ ಬಗ್ಗೆ ಈಗಾಗಲೇ ನೀವು ವಿವಾದವನ್ನು ಹೊಂದಿದ್ದರೆ, ಈ ಸಮಯದಲ್ಲಿ ಅದನ್ನು ಪರಿಹರಿಸುವ ಪ್ರಬಲ ಸಾಧ್ಯತೆ ಇದೆ. ಶನಿ ದೇವ ಮಾರ್ಗಿಯಾಗುವುದರಿಂದಾಗಿ ನಿಮ್ಮ ಸಂಬಂಧಗಳಲ್ಲಿ ಸ್ಥಿರತೆ ಉಂಟಾಗಬಹುದು.

ಪರಿಹಾರ - ಪ್ರತಿದಿನ ಏಳು ಬಾರಿ ಹನುಮಾನ್ ಚಲೀಸವನ್ನು ಪಠಿಸುವುದು ನಿಮಗೆ ಉತ್ತಮ.

ಮೇಷ ವಾರದ ರಾಶಿ ಭವಿಷ್ಯ

वृषभ राशि/ವೃಷಭ ರಾಶಿ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶನಿ ದೇವ ಒಂಬತ್ತನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಈ ವರ್ಷ ನಿಮ್ಮ ಒಂಬತ್ತನೇ ಮನೆಯಲ್ಲಿ ಮಾರ್ಗಿಯಾಗಲಿದ್ದಾರೆ. ಈ ಸಮಯದಲ್ಲಿ ಉದ್ಯೋಗದಲ್ಲಿ ತೊಡಗಿರುವ ವೃಷಭ ರಾಶಿಚಕ್ರದ ಸ್ಥಳೀಯರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಮತ್ತು ಉತ್ತಮ ಪ್ರದರ್ಶನ ಮಾಡಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗಬಹುದು. ಈ ಸಮಯದಲ್ಲಿ ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಯಾವುದೇ ಕಾರಣದಿಂದಾಗಿ ಅವರೊಂದಿಗೆ ನಿಮ್ಮ ಸಣ್ಣ ಪುಟ್ಟ ಜಗಳ ಅಥವಾ ವಾದ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಮೀಟಿಂಗ್ ಅಥವಾ ಮಾತನಾಡುವಾಗ ನಿಮ್ಮ ಧ್ವನಿ ಮತ್ತು ಕೋಪವನ್ನು ನಿಯಂತ್ರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ನಿಮ್ಮ ಕಠೋರ ಮತ್ತು ಕಹಿ ಪದಗಳು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಆದಾಗ್ಯೂ, ನಿಮ್ಮ ಕಠಿಣ ಪರಿಶ್ರಮ ಮತ್ತು ಆಸಕ್ತಿಯಿಂದ ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ನೀವು ಯಶಸ್ವಿಯಾಗಬಹುದು.

ಆರ್ಥಿಕ ದೃಷ್ಟಿಕೋನದಿಂದ, ವೃಷಭ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವು ಉತ್ತಮವಾಗಿರಬಹುದು. ಈ ಸಮಯದಲ್ಲಿ ನೀವು ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗಬಹುದು. ಯಾವುದೇ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಈ ಸಮಯವು ದೀರ್ಘಾವಧಿಯ ಹೂಡಿಕೆಗೆ ಅನುಕೂಲಕರವಾಗಿರಬಹುದು. ವೈಯಕ್ತಿಕವಾಗಿ ನೀವು ಹೊಸ ವಿಷಯಗಳನ್ನು ಕಲಿಯಲು ಮತ್ತು ಜ್ಞಾನವನ್ನು ಗಳಿಸುವತ್ತ ಹೆಚ್ಚು ಒಲವು ಹೊಂದಿರುವ ಸಾಧ್ಯತೆ ಇದೆ. ಇದಲ್ಲದೆ ನೀವು ನಿಮ್ಮ ಸುತ್ತಮುತ್ತಲಿನ ಯಾವುದೇ ಪರಿಸ್ಥಿತಿಯನ್ನು ಬಲವಾಗಿ ಎದುರಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಕಹಿ ಅಂತ್ತು ಕೆಟ್ಟ ಅನುಭವಗಳಿಂದ ನೀವು ಕಲಿಯುವಿರಿ, ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರ ಹೊರತಾಗಿ, ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ಸಂಬಂಧವು ಸಹ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಯಾವುದೇ ಕೆಲಸದ ಬಗ್ಗೆ ನೀವು ಅವರಿಂದ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು.

ಪರಿಹಾರ - ಶನಿವಾರ ಶನಿ ದೇವರ ಮುಂದೆ ಸಾಸವೆ ಎಣ್ಣೆಯ ದೀಪವನ್ನು ಬೆಳಗಿಸಿ.

ವೃಷಭ ವಾರದ ರಾಶಿ ಭವಿಷ್ಯ

ಜಾತಕದಲ್ಲಿರುವ ರಾಜ ಯೋಗದ ಬಗೆಗಿನ ಎಲ್ಲಾ ಮಾಹಿತಿಯನ್ನು ಪಡೆಯಿರಿ

मिथुन राशि/ಮಿಥುನ ರಾಶಿ

ಮಿಥುನ ರಾಶಿಚಕ್ರದ ಜನರಿಗೆ ಶನಿ ದೇವ ಎಂಟನೇ ಮನೆ ಅಂದರೆ ಅನುವಂಶಿಕತೆ, ರಹಸ್ಯ ಶಿಕ್ಷಣ ಮತ್ತು ರಹಸ್ಯದ ಮನೆಗೆ ಮಾರ್ಗಿಯಾಗಲಿದ್ದಾರೆ. ಸಂಶೋಧನಾ ಕಾರ್ಯಕ್ಕೆ ಸಂಬಂಧಿಸಿದ ವಿಧ್ಯಾರ್ಥಿಗಳು ಈ ಸಮಯದಲ್ಲಿ ತಮ್ಮ ವಿಷಯಗಳನ್ನು ಸರಿಯಾಗಿ ಮತ್ತು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಅವುಗಳ ಬಗ್ಗೆ ಸಂಶೋಧನೆ ಮಾಡಲು ಅವಕಾಶಗಳನ್ನು ಪಡೆಯಬಹುದು. ಇದರೊಂದಿಗೆ, ನಿಮ್ಮ ಸಂಶೋಧನಾ ಕರ್ಯದಲ್ಲಿನ ಅಡೆತಡೆಗಳು ಮತ್ತುಸಮಸ್ಯೆಗಳನ್ನು ನಿವಾರಿಸುವಲ್ಲಿ ನೀವು ಯಶಸ್ವಿಯಾಗಬಹುದು. ಇದಲ್ಲದೆ ನಿಮ್ಮ ಕೆಲಸದತ್ತ ನೀವು ಕೇಂದ್ರೀಕರಿಸುವಿರಿ. ಆರೋಗ್ಯದ ದೃಷ್ಟಿಕೋನದಿಂದ, ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಮಾರ್ಗಿ ಶನಿಯು ಫಲಪ್ರದವೆಂದು ಸಾಬೀತಾಗಬಹುದು. ಈ ಸಮಯದಲ್ಲಿ ಹಲ್ಲುಗಳ ಸಮಸ್ಯೆ, ಕೂದಲು ಉದುರುವುದು ಮತ್ತು ನಿಮ್ಮ ದೇಹದ ಕೆಳಭಾಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಲು ಮುಕ್ತ ವಾತಾವರಣದಲ್ಲಿ ಸುತ್ತಾಡಲು ಮತ್ತು ಆಲಸ್ಯವನ್ನು ತ್ಯಜಿಸಲು ನಿಮಗೆ ಸಲಹೆ ನೀಡಲಾಗಿದೆ. ಆರ್ಥಿಕ ದೃಷ್ಟಿಕೋನದಿಂದಲೂ, ಈ ಸಮಯವು ನಿಮಗೆ ಸರಾಸರಿ ಫಲಪ್ರದವಾಗಬಹುದು. ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ನೀವು ಅನಿಶ್ಚಿತತೆಯನ್ನು ಎದುರಿಸಬಹುದು. ಈ ಸಮಯವು ಯಾವುದೇ ರೀತಿಯ ಹೂಡಿಕೆ ವಿಶೇಷವಾಗಿ, ಶೇರ್ ಮಾರ್ಕೆಟ್, ಸ್ಟಾಕ್ ಮಾರ್ಕೆಟ್ ಗಳಂತಹ ವಿಷಯಗಳಲ್ಲಿ ಹೂಡಿಕೆ ಮಾಡಲು ಅನುಕೂಲಕರವಲ್ಲ. ಅಂತಹ ಪರಿಸ್ಥಿಯಲ್ಲಿ, ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ.

ಪರಿಹಾರ - ಶನಿವಾರದಂದು ಅಗತ್ಯವಿರುವ ಜನರಿಗೆ ಕಂಬಳಿ ದಾನ ಮಾಡಿ.

ಮಿಥುನ ವಾರದ ರಾಶಿ ಭವಿಷ್ಯ

कर्क राशि/ಕರ್ಕ ರಾಶಿ

ಶನಿ ದೇವ ಕರ್ಕ ರಾಶಿಚಕ್ರದ ಜನರ ಏಳನೇ ಮನೆಯಲ್ಲಿ ಮಾರ್ಗಿಯಾಗಲಿದ್ದಾರೆ. ಈ ಸಮಯದಲ್ಲಿ ಶನಿ ದೇವ ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸುತ್ತಲಿನ ಪರಿಸರದ ಬಗ್ಗೆ ನೀವು ಸ್ವಲ್ಪ ಅಹಿತಕರವಾಗಿ ಕಾಣಬಹುದು. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಕಠೋರ ಮತ್ತು ಕಠಿಣವಾಗಿ ವರ್ತಿಸಬಹುದು. ಜೀವನವನ್ನು ಒಂಟಿಯಾಗಿ ನಡೆಸುತ್ತಿರುವ ಕರ್ಕಾಟಕ ರಾಶಿಚಕ್ರದ ಜನರಿಗೆ ಶನಿ ದೇವ ಮಾರ್ಗಿಯಾಗುವುದು ಸಾಕಷ್ಟು ಫಲದಾಯಕ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರ ಸಹಾಯದಿಂದ ನಿಮ್ಮ ಜೀವನ ಸಂಗಾತಿಯನ್ನು ಹುಡುಕಲು ಸಾಧ್ಯವಾಗುತ್ತದೆ ಮತ್ತು ಒಂದು ಸ್ಥಿರ ಸಂಬಂಧವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತೀರಿ. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ಸಮಯದಲ್ಲಿ ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ವೃತ್ತಿಪರವಾಗಿ, ಉದ್ಯೋಗದಲ್ಲಿರುವ ಜನರಿಗೆ ಈ ಸಮಯ ಅನುಕೂಲಕರವಾಗಿರಲಿದೆ. ನಿಮ್ಮ ಸಿಲುಕಿಕೊಂಡಿರುವ ಕೆಲಸಗಳನ್ನು ಪುನಃ ಆರಂಭಿಸುವಲ್ಲಿ ಮತ್ತು ಅವುಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗಬಹುದು. ಈ ಸಮಯದಲ್ಲಿ ಯಾವುದೇ ಕಾರಣದಿಂದಾಗಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ವಾದ ಅಥವಾ ಜಗಳವನ್ನು ಎದುರಿಸಬೇಕಾಗಬಹುದು. ಆದ್ದರಿಂದ ಯಾವುದೇ ಮೀಟಿಂಗ್ ಅಥವಾ ಮಾತನಾಡುವಾಗ, ನಿಮ್ಮ ಧ್ವನಿಯನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ. ಇದಲ್ಲದೆ ಈ ಸಮಯದಲ್ಲಿ ಯೇವುದೆ ಯೋಜನೆಯನ್ನು ಆರಂಭಿಸುವಲ್ಲಿ ನೀವು ಆಲಸ್ಯವನ್ನು ಅನುಭವಿಸಬಹುದು. ಈ ಕಾರಣದಿಂದಾಗಿ ಆ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ನಿಮ್ಮ ಸಹೋದ್ಯೋಗಿಗಳು ಮತ್ತು ನಿರ್ವಹಣೆಯ ಸಹಕಾರ ಬೇಕಾಗಬಹುದು. ಯಾವುದೇ ಕೆಲಸವನ್ನು ನೀವು ಒಮ್ಮೆ ಆರಂಭಿಸಿದ ನಂತರ, ಅದನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗಬಹುದು.

ಪರಿಹಾರ - ಶನಿವಾರ ಉಪವಾಸ ಮಾಡಿ ಮತ್ತು ದಿನಕ್ಕೆ ಒಮ್ಮೆ ಸಾಯಂಕಾಲ ಊಟ ಮಾಡಿ.

ಕರ್ಕ ವಾರದ ರಾಶಿ ಭವಿಷ್ಯ

सिंह राशि/ಸಿಂಹ ರಾಶಿ

ಶನಿ ದೇವ ಸಿಂಹ ರಾಶಿಚಕ್ರದ ಸ್ಥಳೀಯರ ಆರನೇ ಮನೆ ಅಂದರೆ ರೋಗ, ಸ್ಪರ್ಧೆ ಮತ್ತು ಶತ್ರುವಿನ ಮನೆಯಲ್ಲಿ ನೆಲೆಗೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಬಗ್ಗೆ ನೀವು ಹೆಚ್ಚು ಶಕ್ತಿಯುತವಾಗಿ ಕಾಣಿಸಿಕೊಳ್ಳಬಹುದು. ಈ ಅವಧಿಯಲ್ಲಿ ನಿಮ್ಮ ಶತ್ರುಗಳ ಮೇಲೆ ನೀವು ಪ್ರಾಬಲ್ಯ ಸಾಧಿಸಬಹುದು. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ನೀವು ಅನೇಕ ಶುಭ ಅವಕಾಶಗಳನ್ನು ಪಡೆಯಬಹುದು. ಇದರಿಂದಾಗಿ ನಿಮ್ಮ ವೃತ್ತಿ ಜೀವನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿಮಗೆ ಸಾಧ್ಯವಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ನೆಚ್ಚಿನ ಸಂಸ್ಥೆಯಲ್ಲಿ ಕೆಲಸ ಮಾಡಲು ನೀವು ಅವಕಾಶವನ್ನು ಪಡೆಯಬಹುದು ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಮೂಲಕ ಮಾಡಲಾಗಿರುವ ಪರಿಶ್ರಮವನ್ನು ಪ್ರಶಂಸಿಸಿ ಲಾಗುತ್ತದೆ. ನೀವು ಯಾವುದೇ ಕಾನೂನು ಪ್ರಕರಣವನ್ನು ಎದುರಿಸುತ್ತಿದ್ದ ರೆ, ಅದರಲ್ಲೂ ನೀವು ಯಶಸ್ಸು ಪಡೆಯುವ ಸಾಧ್ಯತೆ ಇದೆ. ಏಕೆಂದರೆ ಈ ಸಮಯದಲ್ಲಿ ಅಂತಹ ತೀರ್ಮಾನಗಳು ನಿಮ್ಮ ಪರವಾಗಿ ಬರಬಹುದು. ವಕಾಲತ್ತು ಅಥವಾ ನ್ಯಾಯಾಂಗ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಸಹ ಈ ಸಮಯದಲ್ಲಿ ತಮ್ಮ ಕೌಶಲ್ಯವನ್ನು ಸಾಬೀತುಪಡಿಸಲು ಅನೇಕ ಅವಕಾಶಗಳನ್ನು ಪಡೆಯಬಹುದು.

ಶಿಕ್ಷಣದ ದೃಷ್ಟಿಕೋನದಿಂದ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಸಿಂಹ ರಾಶಿಚಕ್ರದ ಜನರು ಈ ಸಮಯದಲ್ಲಿ ಅನುಕೂಲಕರ ಫ್ಲಿತ್ಮಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದರೊಂದಿಗೆ ಈ ಸಮಯದಲ್ಲಿ ಶಿಕ್ಷಣದ ಕ್ಷೇತ್ರದಲ್ಲಿ ಉಂಟಾಗುವ ಯಾವುದೇ ಸವಾಲನ್ನು ಎದುರಿಸುವಲ್ಲಿ ನೀವು ಯಶಸ್ವಿಯಾಗಬಹುದು. ಸಿಂಹ ರಾಶಿಚಕ್ರದ ಜನರು ತಮ್ಮ ಪರೀಕ್ಷೆಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ವೈಯಕ್ತಿಕವಾಗಿ ಈ ಅವಧಿಯಲ್ಲಿ ಸ್ವಭಾವತಃ ನೀವು ಸ್ವಲ್ಪ ಜಗಳಗಂಟರಾಗಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರು ಮತ್ತು ಅಪರಿಚಿತ ಜನರೊಂದಿಗೆ ನಿಮ್ಮ ಜಗಳವಾಗಬಹುದು ಎಂದು ನಿರೀಕ್ಷಿಸಲಾಗಿದೆ. ನೀವು ವಿವಾಹರಾಗಿದ್ದರೆ, ಈ ಅವಧಿಯಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ವಿಷಯದ ಬಗ್ಗೆ ಜಗಳವಾಗಬಹುದು. ಆದ್ದರಿಂದ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಪರಿಹಾರ - ಶನಿವಾರದಂದು ದೇವಸ್ಥಾನದಲ್ಲಿ ಕಪ್ಪು ಎಳ್ಳನ್ನು ದಾನ ಮಾಡುವುದು ನಿಮಗೆ ಉತ್ತಮವಾಗಿರುತ್ತದೆ. .

ಸಿಂಹ ವಾರದ ರಾಶಿ ಭವಿಷ್ಯ

कन्या राशि/ಕನ್ಯಾ ರಾಶಿ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಶನಿ ದೇವ ಐದನೇ ಅಂದರೆ ಪ್ರೀತಿ, ಶಿಕ್ಷಣ ಮತ್ತು ಮಕಕಾಲ ಮನೆಯಲ್ಲಿ ಮಾರ್ಗಿಯಾಗುತ್ತದೆ. ಕುಟುಂಬ ಯೋಜನೆಗಾಗಿ ಯೊಜುಸುತ್ತಿದ್ದವರು, ಈ ಸಮಯದಲ್ಲಿ ಮಂಗಳಕರ ಸುದ್ದಿಯನ್ನು ಪಡೆಯುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಪ್ರೀತಿಯ ಸಂಬಂಧದಲ್ಲಿರುವ ಜನರಿಗೆ ಈ ಸಮಯವು ಅನುಕೂಲಕರವೆಂದು ಸಾಬೀತಾಗಬಹುದು. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವಲ್ಲಿ ನೀವು ಯಶಸ್ವಿಯಾಗಬಹುದು. ಇದರೊಂದಿಗೆ ಈ ಅವಧಿಯಲ್ಲಿ ಅವರೊಂದಿಗೆ ನೀವು ಉತ್ತಮ ಗುಣಮಟ್ಟದ ಸಮಯವನ್ನು ಕಳೆಯುವುದನ್ನು ಕಾಣಲಾಗುತ್ತದೆ. ನಿಮ್ಮಿಬ್ಬರ ಪರಸ್ಪರ ತಿಳುವಳಿಕೆಯು ಸಹ ಹೆಚ್ಚಾಗುತ್ತದೆ. ವೈಯಕ್ತಿಕವಾಗಿ ಈ ಸಮಯದಲ್ಲಿ, ಮಕ್ಕಳೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ಸ್ವಲ್ಪ ದೂರವನ್ನು ಅನುಭವಿಸಬಹುದು.ಏಕೆಂದರೆ ಈ ಸಮಯದಲ್ಲಿ ಅವರು ಸ್ವಂತ ಜಗತ್ತಿನಲ್ಲಿ ನಿರತರಾಗಿರುವುದನ್ನು ನೀವು ನೋಡಬಹುದು.

ಶಿಕ್ಷಣದ ದೃಷ್ಟಿಕೋನದಿಂದ, ಕನ್ಯಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಅವಧಿಯು ಸರಾಸರಿ ಫಲಪ್ರದ ಎಂದು ಸಾಬೀತಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ ಅಧ್ಯಯನದ ಬಗೆಗಿನ ನಿಮ್ಮ ಆಸಕ್ತಿ ಮತ್ತು ಏಕಾಗ್ರತೆಯಲ್ಲಿ ಕುಸಿತವನ್ನು ಕಾಣಬಹದು, ಇದು ನಿಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ವೃತ್ತಿ ಜೀವನದ ದೃಷ್ಟಿಕೋನದಿಂದ, ಈ ಸಮಯದಲ್ಲಿ ನೀವು ಹೊಸ ಕೆಲಸವನ್ನು ಮಾಡಲು ಮತ್ತು ನಿಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ನಿಮ್ಮ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರಿಸಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ಸು ಪಡೆಯುವ ಸಾಧ್ಯತೆ ಪ್ರಬಲವಾಗಿದೆ.

ಪರಿಹಾರ - ಸಂಜೆಯ ವೇಳೆಯಲ್ಲಿ 108 ಬಾರಿ “ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಾಮಾಗ್ರಜಂ” ಶನಿ ಮಂತ್ರವನ್ನು ಜಪಿಸಿ.

ಕನ್ಯಾ ವಾರದ ರಾಶಿ ಭವಿಷ್ಯ

ಬೃಹತ್ ಕುಂಡಲಿ: ನಿಮ್ಮ ಜೀವನದ ಮೇಲೆ ಗ್ರಹಗಳ ಪರಿಣಾಮ ಮತ್ತು ಪರಿಹಾರವನ್ನು ತಿಳಿಯಿರಿ

तुला राशि/ ತುಲಾ ರಾಶಿ

ತುಲಾ ರಾಶಿಚಕ್ರದ ಸ್ಥಳೀಯರ ಜಾತಕದಲ್ಲಿ ಶನಿ ದೇವರನ್ನು ಎರಡು ಪ್ರಮುಖ ಮನೆಗಳ ಅಂದರೆ ಸಂತೋಷದ ನಾಲ್ಕನೇ ಮನೆ ಮತ್ತು ಮಕ್ಕಳ ಐದನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಶನಿ ದೇವ ತುಲಾ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆ ಅಂದರೆ ತಾಯಿ ಮತ್ತು ಆಸ್ತಿಯ ಮನೆಯಲ್ಲಿ ಮಾರ್ಗಿಯಾಗಲಿದೆ. ಇದು ತುಲಾ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳನ್ನು ತರುತ್ತದೆ. ನೀವು ಯಾವುದೇ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಅಥವಾ ಯಾವುದೇ ಕಾರಣದಿಂದಾಗಿ ಸಂಪತ್ತನ್ನು ಖರೀದಿಸುವಲ್ಲಿ ನೀವು ಅಡೆತಡೆಗಳನ್ನು ಎದುರಿಸುತ್ತಿದ್ದರೆ, ಈ ಸಮಯದಲ್ಲಿ ನೀವು ಆ ಸಮಸ್ಯೆಯನ್ನು ತೊಡೆದುಹಾಕುವಲ್ಲಿ ಯಶಸ್ವಿಯಾಗುತ್ತೀರಿ.

ವೈಯಕ್ತಿಕ ದೃಷ್ಟಿಕೋನದಿಂದ, ಈ ಸಮಯದಲ್ಲಿ ನಿಮ್ಮ ತಾಯಿಯೊಂದಿಗಿನ ನಿಮ್ಮ ಸಂಬಂಧವು ಸ್ವಲ್ಪ ಹದಗೆಡಬಹುದು. ಆದರೆ ನೀವಿಬ್ಬರೂ ಪರಸ್ಪರರ ಬಗ್ಗೆ ಕಾಳಜಿ ವಹಿಸುತ್ತೀರಿ. ಇದರ ಹೊರತಾಗಿ, ಈ ಸಮಯದಲ್ಲಿ ನೀವು ಶಿಸ್ತನ್ನು ಅನುಸರಿಸುತ್ತೀರಿ ಮತ್ತು ನಿಮ್ಮ ಮನೆಯ ವಸ್ತುಗಳನ್ನು ಸಂಘಟಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸ್ವಂತ ವ್ಯಾಪಾರದಲ್ಲಿ ತೊಡಗಿರುವ ತುಲಾ ರಾಶಿಚಕ್ರದ ಜನರು ಈ ಸಮಯದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಮತ್ತು ಅಭಿವೃದ್ಧಿಗಾಗಿ ಕೆಲವು ತಂತ್ರಗಳನ್ನು ರಚಿಸಬಹುದು. ಇದಲ್ಲದೆ ನಿಮ್ಮ ಬ್ರಾಂಡ್ ಅನ್ನು ದೂಡ್ಡದಾಗಿಸಲು, ನೀವು ಮಾರ್ಕೆಟಿಂಗ್ ಗೆ ಹೆಚ್ಚು ಒತ್ತು ನೀಡಬಹುದು. ಈ ಅವಧಿಯಲ್ಲಿ ತುಲಾ ರಾಶಿಚಕ್ರದ ಜನರು ಮಾರ್ಕೆಟ್ ನಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಮತ್ತು ತಮ್ಮ ಸೇವೆಗಳನ್ನು ದೂರದ ವರೆಗೆ ಕೊಂಡೊಯ್ಯಲು ಕಠಿಣ ಪರಿಶ್ರಮ ಮಾಡುತ್ತಾರೆ.

ಪರಿಹಾರ - ಕುತ್ತಿಗೆ ಮತ್ತು ಮಣಿಕಟ್ಟಿನ ಮೇಲೆ ಸ್ಫಟಿಕವನ್ನು ಧರಿಸಿ.

ತುಲಾ ವಾರದ ರಾಶಿ ಭವಿಷ್ಯ

वृश्चिक राशि/ ವೃಶ್ಚಿಕ ರಾಶಿ

ಶನಿ ದೇವ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಮೂರನೇ ಮನೆ ಅಂದರೆ ಶಕ್ತಿ, ಸಹೋದರ-ಸಹೋದರಿ ಮತ್ತು ಪ್ರಯತ್ನದ ಮನೆಗೆ ಮಾರ್ಗಿಯಾಗಿ ಪ್ರವೇಶಿಸಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಉದ್ಯೋಗದಲ್ಲಿರುವ ಜನರಿಗೆ ಇದು ಅನುಕೂಲಕರ ಎಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳು ಮ್ಮತ್ತು ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ನಿಮ್ಮ ಕೆಲಸದತ್ತ ನೀವು ಶ್ರಮಶೀಲ ಮತ್ತು ಶಕ್ತಿಯುತರಾಗಿ ಕಾಣಿಸಬಹುದು. ಇದರಿಂದಾಗಿ ನೀವು ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ ಮತ್ತು ಕೆಳಸದ ಸ್ಥಳದಲ್ಲಿ ನಿಮ್ಮ ವಿಭಿನ್ನ ಚಿತ್ರವನ್ನು ರೂಪಿಸುವಲ್ಲಿ ನೀವು ಯಶಸ್ಸು ಪಡೆಯಬಹುದು. ಸ್ವಂತ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಕಠಿಣ ಪರಿಶ್ರಮ ಮಾಡಬೇಕಾಗಬಹುದು.

ಈ ಸಮಯದಲ್ಲಿ ಕೆಲಸದ ಬಗ್ಗೆ ಗ್ರಾಹಕರೊಂದಿಗೆ ಮಾತನಾಡಲು/ವ್ಯವಹರಿಸಲು ಕೆಲವು ಪ್ರಯಾಣಗಳಿಗೆ ಆಗಾಗ್ಗೆ ಹೋಗಬಹುದು. ವೈಯಕ್ತಿಕವಾಗಿ ವೃಶ್ಚಿಕ ರಾಶಿಚಕ್ರದ ಜನರಿಗೆ ಈ ಅವಧಿಯು, ಸರಾಸರಿ ಫಲಪ್ರದ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಕಿರಿಯ ಸಹೋದರ-ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವುದಿಲ್ಲ. ಹಿಂದಿನ ಕೆಲವು ವಿವಾದಗಳು ಅಥವಾ ಜಗಳಗಳು ನಿಮ್ಮ ಸಂಬಂಧಗಳಲ್ಲಿ ಅಂತರವನ್ನು ತರಬಹುದು. ಅಂತಹ ಸಂದರ್ಭದಲ್ಲಿ ನಿಮಗೆ ಒಳ್ಳೆಯವರು ನಿಮ್ಮೊಂದಿಗೆ ಬಲವಾಗಿ ನಿಂತಿರುವುದನ್ನು ಕಾಣುವ ಸಾಧ್ಯತೆ ಇದೆ ಮತ್ತು ನಿಮ್ಮ ಹಿತೈಷಿಗಳಲ್ಲದವರು ಈ ಸಮಯದಲ್ಲಿ ನಿಮ್ಮಿಂದ ದೂರವಾಗುತ್ತಾರೆ. ಇದರ ಹೊರತಾಗಿ, ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಈ ಸಮಯದಲ್ಲಿ ನಿಮ್ಮನ್ನು ಆರೋಗ್ಯವಾಗಿಡಲು ಒಲವು ಹೊಂದಿರುತ್ತೀರಿ. ಇದಕ್ಕಾಗಿ ನೀವು ವ್ಯಾಯಾಮ ಮತ್ತು ಫಿಟ್ನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನೀವು ಇದರ ಧನಾತ್ಮಕ ಫಲಿತಾಂಶವನ್ನು ಪಡೆಯಬಹುದು.

ಪರಿಹಾರ - ದೇವಸ್ಥಾನಕ್ಕೆ ನಲ್ಲಿ ಅಥವಾ ವಾಟರ್ ಫಿಲ್ಟರ್ ಅನ್ನು ದಾನ ಮಾಡಿ.

ವೃಶ್ಚಿಕ ವಾರದ ರಾಶಿ ಭವಿಷ್ಯ

ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

धनु राशि/ ಧನು ರಾಶಿ

ಈ ಸಮಯದಲ್ಲಿ ಶನಿ ದೇವ ಧನು ರಾಶಿಚಕ್ರದ ಸ್ಥಳೀಯರ ಎರಡನೇ ಮನೆ ಅಂದರೆ ಕುಟುಂಬ, ಹಣಕಾಸು ಮತ್ತು ಧ್ವನಿಯ ಮನೆಯಲ್ಲಿ ಮಾರ್ಗಿಯಾಗಲಿದ್ದಾರೆ. ಶನಿ ದೇವರ ಮಾರ್ಗಿ ಸ್ಥಿತಿಯು ಧನು ರಾಶಿಚಕ್ರದ ಸ್ಥಳೀಯರಿಗೆ ಆರ್ಥಿಕ ದೃಷ್ಟಿಯಿಂದ ಉತ್ತಮವೆಂದು ಸಾಬೀತಾಗಬಹುದು. ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ನೀವು ಅಭಿವೃದ್ಧಿಯನ್ನು ನೋಡಬಹುದು. ಇದರೊಂದಿಗೆ ಈ ಅವಧಿಯಲ್ಲಿ, ಉಳಿತಾಯ ಮಾಡುವಲ್ಲೂ ನೀವು ಯಶಸ್ವಿಯಾಗಬಹುದು. ಇದಲ್ಲದೆ ಆದಾಯದ ಇತರ ಮೂಲಗಳಿಂದಲೂ ನೀವು ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಪೂರ್ವಜರ ಆಸ್ತಿಯಿಂದ ಅಥವಾ ಹಿಂದೆ ಮಾಡಿದ ಕೆಲವು ಕೆಳಸಗಳಿಂದಲೂ ನಿಮಗೆ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದಲ್ಲಿ ಕಠೋರ ಭಾಷೆಯನ್ನು ಬಳಸಬಹುದು. ಈ ಕಾರಣದಿಂದಾಗಿ ನಿಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ನಿಮ್ಮ ಕಹಿ ಪದಗಳು ನಿಮ್ಮ ಕುಟುಂಬದ ಸದಸ್ಯರು ಮತ್ತು ಪ್ರೀತಿಪಾತ್ರರನ್ನು ನೋಯಿಸಬಹುದು. ಇದಲ್ಲದೆ ಕೆಲಸದ ಸ್ಥಳದಲ್ಲೂ ನೀವು ನಿಮ್ಮ ವಾಣಿಯನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ವಿರೋಧಿಸಬಹುದು. ಇದರೊಂದಿಗೆ ಪರಿಸ್ಥಿತಿಗಳನ್ನು ತಪ್ಪಿಸಲು ಪದೇ ಪದೇ ಸುಳ್ಳು ಹೇಳುವುದನ್ನು ನಿಮ್ಮ ಅಭ್ಯಾಸದಲ್ಲಿ ಸೇರಿಸಿಕೊಳ್ಳಬಹುದು. ವೈಯಕ್ತಿಕವಾಗಿ ನೋಡಿದರೆ, ಈ ಸಮಯದಲ್ಲಿ ನಿಮ್ಮ ಮಕ್ಕಳ ಬಗ್ಗೆ ನೀವು ಸೂಕ್ಷ್ಮರಾಗಿರಬಹುದು ಮತ್ತು ಅವರ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲು ಪ್ರಯತ್ನಿಸಬಹುದು. ಈ ಕಾರಣದಿಂದಾಗಿ ನಿಮ್ಮ ಮಕ್ಕಳೊಂದಿಗಿನ ನಿಮ್ಮ ಸಂಬಂಧದಲ್ಲಿ ಕಹಿ ಉಂಟಾಗಬಹುದು.

ಪರಿಹಾರ - ನಿಮ್ಮ ಕೆಲಸದ ಕೈಯಲ್ಲಿ ನೀಲಮಣಿ ಕಂಕಣವನ್ನು ಧರಿಸಿ.

ಧನು ವಾರದ ರಾಶಿ ಭವಿಷ್ಯ

मकर राशि/ಮಕರ ರಾಶಿ

ಮಕರ ರಾಶಿಚಕ್ರದ ಸ್ಥಳೀಯರಿಗೆ ಶನಿ ದೇವ ಅವರ ರಾಶಿ ಅಂದರೆ ಮಕರ ರಾಶಿಚಕ್ರದ ಲಗ್ನದ ಮನೆಯಲ್ಲಿ ಮಾರ್ಗಿಯಾಗಿ ಪ್ರವೇಶಿಸಲಿದ್ದಾರೆ. ಮಕರ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ನಡೆಯುತ್ತಿರುವ ಏಳುವರೆ ಶನಿಯಲ್ಲಿ ಇದು ಸ್ವಲ್ಪ ಪರಿಹಾರ ತರಬಹುದು. ಈ ಅವಧಿಯು ನಿಮ್ಮ ಆರೋಗ್ಯಕ್ಕೆ ಅನುಕೂಲಕರ ಎಂದು ಸಾಬೀತಾಗಬಹುದು. ಮಾನಸಿಕ ಒತ್ತು ಮತ್ತು ಒತ್ತಡ ಕಡಿಮೆ ಇರುವ ಸಾಧ್ಯತೆ ಇದೆ, ಇದು ನಿಮಗೆ ಉತ್ತಮ ಅರೋಗ್ಯ ಮತ್ತು ಶಾಂತ ಮನಸ್ಸನ್ನು ಒದಗಿಸುತ್ತದೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಕುಟುಂಬ ಮತ್ತು ಮನೆಯ ಸದಸ್ಯರ ಬಗ್ಗೆ ನೀವು ಸೂಕ್ಷ್ಮರಾಗಿರುತ್ತೀರಿ. ಈ ಕಾರಣದಿಂದಾಗಿ ಅವರನ್ನು ಸಂತೋಷಪಡಿಸಲು ನೀವು ಎಲ್ಲ ಪ್ರಯತ್ನಗಳನ್ನು ಮಾಡುವುದನ್ನು ಕಾಣಬಹುದು. ಇದರ ಹೊರತಾಗಿ ಈ ಸಮಯದಲ್ಲಿ ನೀವು ತುಂಬಾ ಶಿಸ್ತನ್ನು ಹೊಂದಿರುತ್ತೀರಿ.

ಈ ಅವಧಿಯಲ್ಲಿ ನಿಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದಲ್ಲಿ ನಿಮಗಾಗಿ ಕೆಲವು ಕಠಿಣ ನಿಯಮಗಳನ್ನು ವಿಧಿಸಲು ಸಹ ನೀವು ಪ್ರಯತ್ನಿಸಬಹುದು. ಈ ಸಮಯದಲ್ಲಿ ನಿಮ್ಮ ಜೀವನ ಶೈಲಿ ಮತ್ತು ವರ್ಕ್ ಪ್ರೊಫೈಲ್ ನಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ, ಈ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರು ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಸಹೋದರ-ಸಹೋದರಿಯರು ಅಧಿಕ ಜ್ವರ ಮತ್ತು ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಬಹುದು ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಅವರ ಕಾಲಿನಲ್ಲಿ ಗಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ, ಯಾವುದೇ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಶಕ್ತಿ ಸುಧಾರಿಸಬಹುದು. ಇದರಿಂದಾಗಿ ಜೀವನದ ಧನಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡುವ ಮೂಲಕ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.

ಪರಿಹಾರ - ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಮ್ಮ ಜೀವನದಲ್ಲಿ ಯೋಗ, ವ್ಯಾಯಾಮ ಮತ್ತು ಧ್ಯಾನದಂತಹ ಅಭ್ಯಾಸಗಳನ್ನು ಸೇರಿಸಿ.

ಮಕರ ವಾರದ ರಾಶಿ ಭವಿಷ್ಯ

कुंभ राशि / ಕುಂಭ ರಾಶಿ

ಕುಂಭ ರಾಶಿಚಕ್ರದ ಜನರಿಗೆ, ಶನಿ ದೇವ ಅವರ ಹನ್ನೆರಡನೇ ಮನೆಗೆ ಮಾರ್ಗಿಯಾಗಿ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ವಿದೇಶಕ್ಕೆ ಹೋಗಲು ಯೋಜಿಸುತ್ತಿರುವ ಜನರು ಈ ಕೆಲಸಕ್ಕಾಗಿ ಇನ್ನೂ ಸ್ವಲ್ಪ ಕಾಯಬೇಕಾಗಬಹುದು. ಆರೋಗ್ಯದ ದೃಷ್ಟಿಯಿಂದ ಈ ಅವಧಿಯಲ್ಲಿ ನೀವು ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಕಾಲಿನಲ್ಲಿ ಯಾವುದೇ ರೀತಿಯ ಸೋಂಕು ಉಂಟಾಗಬಹುದು. ಆರ್ಥಿಕ ದೃಷ್ಟಿಕೋನದಿಂದ, ಈ ಸಮಯವು ನಿಮಗೆ ಫಲಪ್ರದವೆಂದು ಸಾಬೀತಾಗಬಹುದು. ಈ ಸಮಯದಲ್ಲಿ ನಿಮ್ಮ ಬಜೆಟ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುತ್ತದೆ ಮತ್ತು ನಿಷ್ಪ್ರಯೋಜಕ ವೆಚ್ಚಗಳನ್ನು ನಿಯಂತ್ರಿಸುವಲ್ಲಿ ನೀವು ಯಶಸ್ಸು ಪಡೆಯಬಹುದು. ನೀವು ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ನೀವು ಸಾಕಷ್ಟು ಲಾಭವನ್ನು ಪಡೆಯುತ್ತೀರಿ.

ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಅನೇಕ ಪ್ರಯತ್ನಗಳ ಹೊರತಾಗಿಯೂ ನಿಮಗೆ ಹಾನಿ ನೀಡುವಲ್ಲಿ ವಿಫಲರಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಕೆಲಸದ ಕಾರಣದಿಂದಾಗಿ ಅವರ ಮೇಲೆ ನೀವು ಪ್ರಾಬಲ್ಯ ಸಾಧಿಸಬಹುದು. ನೀವು ಯಾವುದೇ ಕಾನೂನು ಪ್ರಕರಣವನ್ನು ಎದುರಿಸುತ್ತಿದ್ದರೆ, ಅದರಲ್ಲೂ ನೀವು ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಉದ್ಯೋಗದಲ್ಲಿರುವ ಜನರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಉಂಟಾಗುವ ಎಲ್ಲಾ ಸವಾಲುಗಳು ಮತ್ತು ಅಡೆತಡೆಗಳನ್ನು ಪರಿಹರಿಸಲು ನಿಮಗೆ ಸಾಧ್ಯವಾಗುತ್ತದೆ. ಇದರೊಂದಿಗೆ ಈ ಅವಧಿಯಲ್ಲಿ ನೀವು ಸರಾಗವಾಗಿ ಕೆಲಸ ಮಾಡಬಹುದು, ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಪ್ರದರ್ಶನ ಮಾಡುವಲ್ಲಿ ಯಶಸ್ವಿಯಾಗಬಹುದು. ಸಂಬಂಧಗಳ ದೃಷ್ಟಿಯಿಂದ, ಈ ಸಮಯದಲ್ಲಿ ನಿಮ್ಮ ಸಹೋದರ-ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಈ ಕಾರಣದಿಂದಾಗಿ ನಿಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದಲ್ಲಿ ಅವರಿಂದ ನೀವು ಯಾವುದೇ ರೀತಿಯ ಬೆಂಬಲವನ್ನು ಪಡೆಯುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಪರಿಹಾರ - ಸಾಯಂಕಾಲ ಶನಿ ಚಾಲೀಸವನ್ನು ಪಠಿಸುವುದು ನಿಮಗೆ ಉತ್ತಮವಾಗಿರುತ್ತದೆ.

ಕುಂಭ ವಾರದ ರಾಶಿ ಭವಿಷ್ಯ

मीन राशि/ ಮೀನ ರಾಶಿ

ಮೀನ ರಾಶಿಚಕ್ರದ ಸ್ಥಳೀಯರಿಗೆ ಶನಿ ದೇವ ಅವರ ಹನ್ನೊಂದನೇ ಮನೆಗೆ ಅಂದರೆ ಆದಾಯ ಮತ್ತು ಲಾಭದ ಮನೆಯಲ್ಲಿ ಮಾರ್ಗಿಯಾಗಿ ಪ್ರವೇಶಿಸಲಿದ್ದಾರೆ. ಈ ಸಮಯದಲ್ಲಿ ವ್ಯಾಪಾರಸ್ಥರ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಇದರ ಹೊರತಾಗಿ ಅನೇಕ ಇತರ ಸಂಪನ್ಮೂಲಗಳಿಂದ ಲಾಭವನ್ನು ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು. ಈ ಅವಧಿಯಲ್ಲಿ ನಿಮ್ಮ ಗ್ರಾಹಕರು ತುಂಬಾ ಸಂತೋಷ ಮತ್ತು ತೃಪ್ತರಾಗಿ ಕಂಡುಬರುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಮಾರ್ಕೆಟ್ ನಲ್ಲಿ ನಿಮ್ಮ ಚಿತ್ರ ಉತ್ತಮವಾಗುಬಹುದು. ಈ ಸಮಯದಲ್ಲಿ ಹೆಚ್ಚುವರಿ ಗಳಿಸಲು ನಿಮ್ಮ ಬಯಕೆಯು ಹೆಚ್ಚಾಗಬಹುದು. ಈ ಕಾರಣದಿಂದಾಗಿ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು.

ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಒಬ್ಬಂಟಿಯಾಗಿರುವ ಜನರು ಈ ಸಮಯದಲ್ಲಿ ಯಾವುದೇ ಹೊಸ ಸಂಬಂಧವನ್ನು ಹೊಂದಬಹುದು ಮತ್ತು ಇದರೊಂದಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಭವಿಷ್ಯದ ಬಗ್ಗೆಯೂ ನೀವು ಯೋಜಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಕುಟುಂಬ ಯೋಜನೆ ಬಗ್ಗೆ ಯೋಚಿಸುತ್ತಿರುವ ಮತ್ತು ಅದರಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಈ ಸಮಯದಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ಸಂತೋಷದ ಸುದ್ದಿಯನ್ನು ಪಡೆಯಬಹುದು. ಶಿಕ್ಷಣದ ಬಗ್ಗೆ ಮಾತನಾಡಿದರೆ, ವಿಶೇಷವಾಗಿ ಕಾನೂನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಫಲಪ್ರದವೆಂದು ಸಾಬೀತಾಗಬಹುದು. ಈ ಸಮಯದಲ್ಲಿ, ನಿಮ್ಮ ಅಧ್ಯಯನಕ್ಕಾಗಿ ಮಾಡಿದ ಕಠಿಣ ಪರಿಶ್ರಮದ ಶುಭ ಫಲಿತಾಂಶಗಳನ್ನು ನೀವು ಪಡೆಯಬಹುದು.

ಪರಿಹಾರ - ಶನಿವಾರ ಕೆಲಸಗಾರರಿಗೆ ಆಹಾರವನ್ನು ನೀಡಿ

ಮೀನ ವಾರದ ರಾಶಿ ಭವಿಷ್ಯ

ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ವಾರ್ತಾದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಧನ್ಯವಾದಗಳು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer