ಕನ್ಯಾ ರಾಶಿಯಲ್ಲಿ ಶುಕ್ರ ಸಂಚಾರ ( 11th August, 2021 )
ಜ್ಯೋತಿಷ್ಯದಲ್ಲಿ ಶುಕ್ರ ಗ್ರಹವನ್ನು ಶುಭ ಗ್ರಹವೆಂದು ಪರಿಗಣಿಸಲಾಗಿದೆ. ಇದನ್ನು ವೃಷಭ ಮತ್ತು ತುಲಾ ರಾಶಿಯ ಪಾಧಿಪತಿ ಎಂದು ಹೇಳಲಾಗಿದೆ. ಈ ಸ್ಥಳೀಯರು ಜೀವನದಲ್ಲಿ ಭೌತಿಕ ಸಂತೋಷ, ವೈವಾಹಿಕ ಸಂತೋಷ, ಐಷಾರಾಮಿ, ಖ್ಯಾತಿ, ಕಲೆ, ಪ್ರತಿಭೆ, ಸೌಂದರ್ಯ, ಪ್ರಣಯ, ಕಾಮಪ್ರಚೋದಕತೆ ಇತ್ಯಾದಿಗಳನ್ನು ಸೃಷ್ಟಿಸುತ್ತಾರೆ. ಇದರ ಪರಿಣಾಮದಿಂದಾಗಿ ವ್ಯಕ್ತಿಯು ಭೌತಿಕ, ದೈಹಿಕ ಮತ್ತು ವೈವಾಹಿಕ ಸಂತೋಷಗಳನ್ನು ಪಡೆಯುತ್ತಾನೆ. ಶುಕ್ರನ ಶುಭ ಪರಿಣಾಮದಿಂದಾಗಿ ಸ್ಥಳೀಯರು ಉತ್ತಮ ದಾಂಪತ್ಯ ಜೀವನ, ಪ್ರೀತಿಯ ಸಂಬಂಧ, ಸುಂದರವಾದ ವ್ಯಕ್ತಿತ್ವ, ಅಭಿವೃದ್ಧಿ ಹೊಂದಿತ್ತಿರುವ ಹಣಕಾಸು ಮತ್ತು ಆರಾಮದಾಯಕ ಜೀವನ ಶೈಲಿಯನ್ನು ಪಡೆಯುತ್ತಾನೆ. ಏಕೆಂದ್ರೆ ಶುಕ್ರ ದೇವರನ್ನು ಆಕರ್ಷಣೆ, ಸಮೃದ್ಧಿ ಮತ್ತು ಹಣಕಾಸಿನ ಗ್ರಹವೆಂದು ಪರಿಗಣಿಸಲಾಗಿದೆ.
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ಈಗ ಅದೇ ಶುಕ್ರ ದೇವ ಬುಧನ ಮೂಲಕ ಆಳ್ವಿಕೆಯಲ್ಲಿರುವ ಕನ್ಯಾ ರಾಶಿಯಲ್ಲಿ ತನ್ನ ಸ್ಥಾನವನ್ನು ಬದಲಾಯಿಸಲಿದೆ. ಕನ್ಯಾ ರಾಶಿಯನ್ನು, ಶುಕ್ರನ ದುರುದ್ವೇಷಪೂರಿತ ರಾಶಿಯೆಂದು ಕರೆಯಲಾಗುತ್ತದೆ ಮತ್ತು ಈ ಸಮಯದಲ್ಲಿ ಶುಕ್ರ ತನ್ನ ಉತ್ತಮ ಸ್ಥಿತಿಯಲ್ಲಿ ಇರುವುದಿಲ್ಲ, ಆದ್ದರಿಂದ ಈ ಸಂಚಾರವು ಅನೇಕ ಸ್ಥಳೀಯರಿಗೆ ಸಾಮಾನ್ಯಕ್ಕಿಂತ ಕಡಿಮೆ ಅನುಕೂಲಕರ ಫಲಿತಾಂಶಗಳನ್ನು ತರಲಿದೆ.
ಸಂಚಾರದ ಸಮಯ
ಶುಕ್ರ ಗ್ರಹವು 11 ಆಗಸ್ಟ್ 2021 ರಂದು, ಬುಧವಾರ 11 ಗಂಟೆ 20 ನಿಮಿಷಕ್ಕೆ ಸಿಂಹ ರಾಶಿಯಿಂದ ಬುಧದ ಕನ್ಯಾ ರಾಶಿಯಲ್ಲಿ ಪ್ರವೇಶಿಸುತ್ತದೆ. ಮುಂದಿನ 25 ದಿನಗಳ ವರೆಗೆ ಇದೇ ಸ್ಥಾನದಲ್ಲಿರುತ್ತದೆ. ಮತ್ತೆ ಪುನಃ ಹಾದುಹೋಗುವ ಮೂಲಕ 06 ಸೆಪ್ಟೆಂಬರ್ 2021 ರಂದು, ಸೋಮವಾರ ರಾತ್ರಿ 2 ಗಂಟೆ 39 ನಿಮಿಷಕ್ಕೆ, ಕನ್ಯಾ ರಾಶಿಯಿಂದ ಹೊರಬಂದು ತುಲಾ ರಾಶಿಯಲ್ಲಿ ಕುಳಿತುಕೊಳ್ಳುತ್ತದೆ. ಕನ್ಯಾ ರಾಶಿಯಲ್ಲಿ ಶುಕ್ರನ ಈ ಸಂಚಾರದ ಪರಿಣಾಮವು ಬಹುತೇಕ ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ. ಅಂತಹ ನಡೆಯಿರಿ ಶುಕ್ರ ದೇವರ ಈ ಸಂಚಾರವು ಎಲ್ಲಾ ಹನ್ನೆರಡದು ರಾಶಿಗಳ ಜ್ಯೋತಿಷ್ಯ ಪರಿಣಾಮವನ್ನು ತಿಳಿಯೋಣ:
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.
मेष / ಮೇಷ ರಾಶಿ
ಶುಕ್ರ ದೇವ ಎರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಆರನೇ ಮನೆಗೆ ಗೋಚರಿಸುತ್ತದೆ. ಜ್ಯೋತಿಸ್ಯದಲ್ಲಿ ಇದನ್ನು ಶತ್ರುವಿನ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ವಿರೋಧಿಗಳು, ರೋಗಗಳು, ನೋವು, ಉದ್ಯೋಗ, ಸ್ಪರ್ಧೆ, ರೋಗನಿರೋಧಕ ಸಾಮರ್ಥ್ಯ, ಮದುವೆಯಲ್ಲಿ ಪ್ರತ್ಯೇಕತೆ ಮತ್ತು ಕಾನೂನು ವಿವಾದಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಪೋಷಕರೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿಶೇಷವಾಗಿ ಈ ಸಮಯ ತಾಯಿಯೊಂದಿಗೆ ನಿಮ್ಮ ಪ್ರತ್ಯೇಕತೆಯ ಪರಿಸ್ಥಿತಿಯನ್ನು ಉದ್ಭವಿಸುತ್ತದೆ. ಇದರೊಂದಿಗೆ ನೀವು ಕಾನೂನು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ ವಾಹನವನ್ನು ಚಲಾಯಿಸುವಾಗ ವಿಶೇಷವಾಗಿ ಜಾಗರೂಕರಾಗಿರಿ ಮತ್ತು ಎಲ್ಲಾ ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ನೀವು ವಿವಾಹಿತರಾಗಿದ್ದರೆ ಯಾವುದೇ ಕಾರಣದಿಂದಾಗಿ ಜೀವನ ಸಂಗಾತಿಯೊಂದಿಗೆ ನಿಮ್ಮ ವಿವಾದವಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮಿಬ್ಬರ ಆಲೋಚನೆಗಳು ಪರಸ್ಪರ ಭಿನ್ನವಾಗಿರುತ್ತವೆ. ಇದರಿಂದಾಗಿ ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ಘರ್ಷಣೆಯ ಪರಿಸ್ಥಿತಿ ಇರುತ್ತದೆ. ಇದರೊಂದಿಗೆ ಈ ಸಂಚಾರವು ನಿಮ್ಮ ಜೀವನ ಸಂಗಾತಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀಡಬಹುದು.
ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ಪಾಲುದಾರಿಕೆಯ ವ್ಯಾಪಾರಕ್ಕೆ ಸಂಬಂಧಿಸಿದ ಜನರು ಈ ಸಂಚಾರದ ಸಮಯದಲ್ಲಿ ಆರ್ಥಿಕವಾಗಿ ಜಾಗರೂಕರಾಗಿರಬೇಕು. ಏಕೆಂದರೆ ನಿಮ್ಮ ಪಾಲುದಾರರೊಂದಿಗಿನ ನಿಮ್ಮ ಸಾಮರಸ್ಯವೂ ಹದಗೆಡುತ್ತದೆ, ಇದರಿಂದಾಗಿ ನಿಮ್ಮಿಬ್ಬರ ನಡುವೆ ವಿವಾದದ ಸಾಧ್ಯತೆಯೂ ಇದೆ. ಇದರ ನೇರ ನಕಾರಾತ್ಮಕ ಪರಿಣಾಮವು ನಿಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ.
ಆರ್ಥಿಕ ಜೀವನದಲ್ಲೂ, ಈ ಸಮಯದಲ್ಲಿ ಹಣಕಾಸಿನ ಯಾವುದೇ ಸಾಲವನ್ನು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ, ಅದನ್ನು ಮರುಪಾವತಿಸಲು ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಪ್ರತಿಕೂಲ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ನಿಮ್ಮ ಮೇಲಾಧಿಕಾರಿ ಮಹಿಳೆಯಾಗಿದ್ದರೆ, ಅವರೊಂದಿಗೆ ಕೆಲಸ ಮಾಡುವಾಗ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗಿದೆ. ಪರಿಹಾರ - ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕವನ್ನು ಕುಡಿಯಿರಿ.
वृषभ / ವೃಷಭ ರಾಶಿ
ಶುಕ್ರ ದೇವ ವೃಷಭ ರಾಶಿಚಕ್ರದ ಸ್ಥಳೀಯರ ಮೊದಲನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಐದನೇ ಮನೀಗೆ ಸಾಗುತ್ತಾರೆ. ಜಾತಕದಲ್ಲಿ ಮಕ್ಕಳ ಮೆನೆಯೆಂದು ಸಹ ಪರಿಗಣಿಸಲಾಗಿದೆ. ಈ ಮನೆಯ ಮೂಲಕ ಪ್ರಣಯ, ಮಕ್ಕಳು, ಸೃಜನಶೀಲತೆ, ಬೌದ್ಧಿಕ ಸಾಮರ್ಥ್ಯ, ಶಿಕ್ಷಣ ಮತ್ತು ಅವಕಾಶಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಅವರ ಗಮನವು ಶಿಕ್ಷಣದಿಂದ ಗೊಂದಲಕ್ಕೊಳಗಾಗುವ ಸಾಧ್ಯತೆ ಇದೆ. ಆದಾಗ್ಯೂ ಅವರ ತಮ್ಮ ಸಹವಾಸವನ್ನು ಸುಧಾರಿಸುವ ಮೂಲಕ ಅವರಿಂದ ದೂರವಿರಲು ಸಹ ನಿರ್ಧರಿಸಬಹುದು.
ಅದೇ ಸಮಯದಲ್ಲಿ ಮತ್ತೊಂದೆಡೆ, ನೀವು ಯವರನ್ನಾದರೂ ನಿಜವಾಗಿ ಪ್ರೀತಿಸುತ್ತಿದ್ದರೆ ಈ ಸಮಯದಲ್ಲಿ ಜಾಗರೂಕರಾಗಿರುವ ಅಗತ್ಯವಿದೆ. ಏಕೆಂದರೆ ಪ್ರೇಮಿಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗುವ ನಿರೀಕ್ಷೆಯಿದೆ. ಇದರ ನಕಾರಾತ್ಮಕ ಪರಿಣಾಮವು ನಿಮ್ಮಿಬ್ಬರ ಪ್ರೀತಿಯ ಸಂಬಂಧದ ಮೇಲೆ ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ನೀವು ಸಂಪೂರ್ಣವಾಗಿ ವಿಫಲರಾಗುತ್ತೀರಿ, ಇದರಿಂದಾಗಿ ನಿಮ್ಮಿಬ್ಬರ ನಡುವೆ ತಪ್ಪುಗ್ರಹಿಕೆಗಳು ಹೆಚ್ಚಾಗಬಹುದು. ಯಾವುದೇ ಚಿಕಿತ್ಸೆ ಅಥವಾ ಆರೋಗ್ಯದ ಸೇವೆಗಳಲ್ಲಿ ತೊಡಗಿರುವ ಜನರಿಗೆ ಈ ಸಮಯ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಏಕೆಂದ್ರೆ ಈ ಸಮಯವೂ ನಿಮ್ಮ ಗ್ರಾಹಕರೊಂದಿಗೆ ನೇರವಾಗಿ ಸೇರಲು ನಿಮಗೆ ಅನೇಕ ಅವಕಾಶಗಳನ್ನು ನೀಡಲಿದೆ. ಇದರಿಂದಾಗಿ ನಿಮ್ಮ ಜ್ಞಾನದಲ್ಲಿ ಹೆಚ್ಚಳದೊಂದಿಗೆ ಇದರ ಸಕಾರಾತ್ಮಕ ಪರಿಣಾಮವು ನಿಮ್ಮ ಪ್ರೊಫೈಲ್ ನಲ್ಲಿ ಕಂಡುಬರುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯವು ಸಹ ಹೆಚ್ಚಾಗುತ್ತದೆ.
ಪರಿಹಾರ - ಪ್ರತಿದಿನ “ ಓಂ ಶುಕ್ರಾಯ್ ನಮಃ “ ಮಂತ್ರವನ್ನು 108 ಬಾರಿ ಜಪಿಸುವುದು ನಿಮಗೆ ಉತ್ತಮ.
मिथुन / ಮಿಥುನ ರಾಶಿ
ಶುಕ್ರ ದೇವ ಮಿಥುನ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಗೋಚರಿಸುತ್ತಾರೆ. ಜಾತಕದಲ್ಲಿ ನಾಲ್ಕನೇ ಮನೆಯನ್ನು ಸಂತೋಷದ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಮನೆಯ ಮೂಲಕ ತಾಯಿ, ಜೀವನದಲ್ಲಿ ಪಡೆಯಲಾಗುವ ಎಲ್ಲಾ ರೀಟೈಯ ಸಂತೋಷ, ಸ್ಥಿರ ಅಸ್ಥಿರ ಸಂಪತ್ತು, ಜನಪ್ರಿಯತೆ ಮತ್ತು ಭಾವನೆಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕುಟುಂಬದೊಂದಿಗೆ ಇದ್ದರೂ ನೀವು ಸ್ವಲ್ಪ ಏಕಾಂಗಿತನವನ್ನು ಅನುಭವಿಸಬಹುದು. ಅಲ್ಲದೆ ಕುಟುಂಬದ ಸದಸ್ಯರಲ್ಲಿ ಒಗ್ಗಟ್ಟು ಇರುತ್ತದೆ ಆದರೆ ಅವರು ಯಾವುದೇ ಆಚರಣೆಯನ್ನು ಒಟ್ಟಾಗಿ ಆಚರಿಸುವುದನ್ನು ಮತ್ತು ಅದನ್ನು ಆನಂದಿಸುವುದನ್ನು ಕಾಣಲಾಗುವುದಿಲ್ಲ. ಪ್ರೀತಿಯ ಸಂಬಂಧದಲ್ಲೂ ನಿಮ್ಮ ಪ್ರೀತಿ ಮತ್ತು ಮಾಧುರ್ಯದ ಕೊರತೆಯನ್ನು ಅನುಭವಿಸುವಿರಿ.
ನೀವು ವಾಹನವನ್ನು ಖರೀದಿಸುವ ಬಗ್ಗೆ ಯೋಜಿಸುತ್ತಿದ್ದರೆ, ಇದೀಗ ಈ ರೀತಿಯ ಏನಾದರೂ ಮಾಡುವಾಗ ನೀವು ಜಾಗರೂಕರಾಗಿರಬೇಕು. ಇದಲ್ಲದೆ ಸಂಪತ್ತು ಅಥವಾ ಭೂಮಿಗೆ ಸಂಬಂಧಿಸಿದ್ ಯಾವುದೇ ಹೂಡಿಕೆಯ ಬಗ್ಗೆ ಯೋಚಿಸುತ್ತಿದ್ದರೆ, ಇನ್ನೂ ಸ್ವಲ್ಪ ಸಮಯ ನೀವು ಕಾಯಬೇಕು. ಏಕೆಂದರೆ ಈ ಸಮಯವು ಯಾವುದೇ ಹೂಡಿಕೆಗೆ ಪ್ರತಿಕೂಲವಾಗಿ ಕಂಡುಬರುತ್ತಿದೆ.
ಆದಾಗ್ಯೂ, ಶೇರ್ ಮಾರ್ಕೆಟ್ ಗೆ ಸಂಬಂಧಿಸಿದ ಹೂಡಿಕೆ ಮಾಡುವುದು, e ಸಂಚಾರದ ಸಮಯದಲ್ಲಿ ನಿಮಗೆ ಉತ್ತಮವಾಗಿರುತ್ತದೆ. ಈ ಸಂಚಾರವು ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆಯನ್ನೂ ತರಬಹುದು. ಇದರ ಪರಿಣಾಮವಾಗಿ ನಿಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಲು ನೀವು ಸಿದ್ಧರಾಗಿರುತ್ತೀರಿ. ಸಮಾಜದಲ್ಲೂ ನಿಮ್ಮ ಭಾಗವಹಿಸುವಿಕೆ ಹೆಚ್ಚಾಗುತ್ತದೆ ಮತ್ತು ದಹಿಕವಾಗಿ ಅಂಗವಿಕಲರಾಗಿರುವ ಜನರಿಗೆ ಸಹಾಯ ಮಾಡಲು ಮುಂದುವರಿದು ದನ್ನ ಪುಣ್ಯ ಮಾಡಬಹುದು.
ನೀವು ಹಾಸ್ಪಿಟಾಲಿಟಿ, ಉದ್ಯೋಗ, ನರ್ಸಿಂಗ್ ಅಥವಾ ಆಹಾರ ತಜ್ಞರಾಗಿ ಕೆಲಸ ಮಾಡುತ್ತಿದ್ದರೆ, ಸಮಯ ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಸಮಾಯದಲ್ಲಿ ನಿಮ್ಮ ಎಲ್ಲಾ ಸೇವೆಗಳ ಬಗ್ಗೆ ಗ್ರಾಹಕರಿಗೆ ಭರವಸೆ ನೀಡಲು ನಿಮಗೆ ಸಾಧ್ಯವಾಗುತ್ತದೆ. ಇದರ ಸಕಾರಾತ್ಮಕ ಪರಿಣಾಮವು ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ನೀಡುವ ಕೆಲಸ ಮಾಡುತ್ತದೆ.
ಪರಿಹಾರ - ನಿಮ್ಮ ಕೊನೆಯ ದಕ್ಷಿಣ ದಿಕ್ಕಿನಲ್ಲಿ ಗುಲಾಬಿ ಕ್ವಾರ್ಟ್ಜ್ ಕ್ರಿಸ್ಟಲ್ ಅನ್ನು ಇರಿಸಿ.
कर्क / ಕರ್ಕ ರಾಶಿ
ಶುಕ್ರ ದೇವ ಕರ್ಕ ರಾಶಿಚಕ್ರದ ಸ್ಥಳೀಯರ ಹನ್ನೊಂದನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಮೂರನೇ ಮನೆಗೆ ಸಾಗುತ್ತಾರೆ. ಜಾತಕದಲ್ಲಿ ಮೂರನೇ ಮನೆಯನ್ನು ಸಹಜ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ವ್ಯಕ್ತಿಯ ಧೈರ್ಯ, ಅಸೆ, ಕಿರಿಯ ಸಹೋದರ - ಸಹೋದರಿಯರು, ಕುತೂಹಲ, ಜೋಷ ಮತ್ತು ಉತ್ಸಾಹವನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನೀವು ಒಳಗಳಿಂದ ಶುಷ್ಕತೆಯನ್ನು ಅನುಭವಿಸಬಹುದು. ಇದು ನಿಮ್ಮ ಚೈತನ್ಯವನ್ನು ಕಡಿಮೆ ಮಾಡುತ್ತದೆ.
ಆರ್ಥಿಕ ಜೀವನದಲ್ಲೂ ನೀವು ಹಣಕಾಸಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮಗೆ ಹಣ ಗಳಿಸುವುದು ಮತ್ತು ಅದನ್ನು ಸಂಗ್ರಹಿಸುವುದು, ಎರಡೂ ನಿಮಗೆ ತುಂಬಾ ಕಷ್ಟಕರವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವ ಮೂಲಕ, ಒಂದು ಸರಿಯಾದ ಬಜೆಟ್ ಪ್ರಕಾರ ಮಾತ್ರ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಈ ಸಮಯವು ನಿಮ್ಮನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದಿಂದ ದೂರವಿರುಸುತ್ತದೆ. ಈ ಕಾರಣದಿಂದಾಗಿ ನೀವು ಅವರೊಂದಿಗೆ ಕಳೆದಿರುವ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಿರಿ. ತಾಯಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ. ಇದಲ್ಲದೆ ಈ ನಿಮ್ಮ ಸಹೋದರ ಸಹೋದರಿಯರೊಂದಿಗಿನ ಸಂಬಂಧದಲ್ಲೂ ನೀವು ಕೆಲವು ಸಮಸ್ಯೆಗಳು ಎದುರಿಸಬೇಕಾಗಬಹುದು. ಇದರೊಂದಿಗೆ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಸಹ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು, ಆರಂಭದಿಂದಲೇ ನೀವು ಪ್ರಯತ್ನಿಸಬೇಕು.
ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ತಮ್ಮ ಗ್ರಾಹಕರನ್ನು ಅರ್ಥಮಾಡಿಕೊಳ್ಳಲು ಮತ್ತು ಅವರಿಂದ ಉತ್ತಮ ಒಪ್ಪಂದವನ್ನು ಪಡೆಯಲು ಅವರೊಂದಿಗೆ ಉತ್ತಮವಾಗಿ ಮಾತನಾಡಬೇಕು. ಅದೇ ಸಮಯದಲ್ಲಿ ಮತ್ತೊಂದೆಡೆ ನೀವು ಯಾವುದೇ ಹಾಸ್ಪಿಟಾಲಿಟಿ ಉದ್ಯೋಗಕ್ಕೆ ಸಾಂಬಂಧಿಸಿದ್ದರೆ, ಈ ಸಮಯ ನಿಮಗೆ ಸ್ವಲ್ಪ ಉತ್ತಮವಾಗಿರುತ್ತದೆ. ಆದರೆ ಇದರ ಹೊರತಾಗಿಯೂ, ಈ ಸಮಯದಲ್ಲಿ ನೀವು ಸ್ವಲ್ಪ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ.
ಪರಿಹಾರ - ಪ್ರತಿ ಶುಕ್ರವಾರ, ದೇವಿ ಪಾರ್ವತಿಗೆ ಹಾಲು, ಅಕ್ಕಿ ಮತ್ತು ಸಕ್ಕರೆಯನ್ನು ಅರ್ಪಿಸಿ.
सिंह / ಸಿಂಹ ರಾಶಿ
ಶುಕ್ರ ದೇವ ಸಿಂಹ ರಾಶಿಚಕ್ರದ ಸ್ಥಳೀಯರ ಹತ್ತನೇ ಮತ್ತು ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಎರಡನೇ ಮನೆಗೆ ಸಾಗುತ್ತದೆ. ಜ್ಯೋತಿಷ್ಯದಲ್ಲಿ ಎರಡನೇ ಮನೆಯ ಮೂಲಕ ವ್ಯಕ್ತಿಯ ಕುಟುಂಬ, ಅವರ ಧ್ವನಿ, ಪ್ರಾರಂಭಿಕ ಶಿಕ್ಷಣ ಮತ್ತು ಹಣ ಇತ್ಯಾದಿಯ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ಸಮಯ್ದಲ್ಲಿ ನೀವು ಪ್ರಯತ್ನಗಳಿಗೆ ನೀವು ಅವಶ್ಯಕ ಪ್ರಶಂಸೆ ಮತ್ತು ಪ್ರೋತ್ಸಾಹವನ್ನು ಪಡೆಯಲಾಗುವುದಿಲ್ಲ. ಇದಲ್ಲದೆ ನಿಮ್ಮ ಬಾಸ್ ಮಹಿಳಾ ಅಧಿಕಾರಿಯಾಗಿದ್ದರೆ, ಕೆಲಸದ ಸ್ಥಳದಲ್ಲಿ ನೀವು ಸ್ವಲ್ಪ ಅವಮಾನವನ್ನು ಸಹ ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಆರಂಭದಿಂದಲೇ ಜಾಗರೂಕರಾಗಿರಿ.
ವ್ಯಾಪಾರಸ್ಥರು ಸಹ ಕೆಲಸದ ಸ್ಥಳದಲ್ಲಿ ತಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಾಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಗ್ರಾಹಕರಿಂದ ನೀವು ಅನೇಕ ದೂರುಗಳನ್ನು ಕೇಳಬಹುದು, ಇದು ನಿಮ್ಮ ಮನೋಬಲವನ್ನು ಮುರಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸಲು ನೀವು ಸಾಮಾನ್ಯಕ್ಕಿಂತ ಹೆಚ್ಚು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆರ್ಥಿಕ ಜೀವನದಲ್ಲೂ ಸಾಮಾನ್ಯಕ್ಕಿಂತ ಕಡಿಮೆ ಅನುಕೂಲತೆ ಇರುತ್ತದೆ. ಏಕೆಂದ್ರೆ ವೆಚ್ಚಗಳು ಹೆಚ್ಚಾಗುವುದರಿಂದ ನೀವು ತೊಂದರೆಕ್ಕೊಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ವೈಯಕ್ತಿಕ ಅಥವಾ ವ್ಯವಸ್ಥಿತ ಮಟ್ಟದಲ್ಲಿ ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಹಣಕಾಸಿನ ನಷ್ಟ ಸಾಧ್ಯ.
ಆದಾಗ್ಯೂ, ಸ್ವಭಾವತಃ ಈ ಸಾಗಣೆ ನಿಮ್ಮನ್ನು ವಿನಮ್ರರನ್ನಾಗಿಸುತ್ತದೆ. ಇದರಿಂದಾಗಿ ನಿಮ್ಮ ಸ್ಥಳದೊಂದಿಗೆ ನೀವು ನಿಮ್ಮ ವೈಯಕ್ತಿಕ ಜೀವನದಲ್ಲೂ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಮರ್ಥರಾಗುವಿರಿ. ಕುಟುಂಬ ಜೀವನದಲ್ಲಿ ಕಿರಿಯ ಸಹೋದರ ಸಹಾದ್ರಿಯರೊಂದಿಗೆ ಕೆಲವು ಸಮಸ್ಯೆಗಳಾಗಬಹುದು. ಇದರ ಪರಿಣಾಮವಾಗಿ ಅವರನ್ನು ಮನವೊಲಿಸಲು ಮತ್ತು ಅವರ ಬೆಂಬಲವನ್ನು ಪಡೆಯಲು ನಿಮಗೆ ಕಷ್ಟವಾಗುತ್ತದೆ.
ಒಟ್ಟಾರೆಯಾಗಿ ಹೇಳಿದರೆ, ಶುಕ್ರ ಸಂಚಾರದ ಸಮಯದಲ್ಲಿ ನಿಮ್ಮ ವ್ಯವಹಾರದ ಬಗ್ಗೆ ನೀವು ಜಾಗರೂಕರಾಗಿರಬೇಕು. ವಿಶೇಷವಾಗಿ ನಿಮ್ಮ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳು ಮತ್ತು ನಿಮ್ಮ ವೆಚ್ಚಗಳ ಬಗ್ಗೆ ಆರಂಭದಿಂದಲೇ ಜಾಗರೂಕರಾಗಿರಬೇಕು.
ಪರಿಹಾರ - ಸರಸ್ವತಿ ದೇವಿಯನ್ನು ಸ್ಮರಿಸಿ ಮತ್ತು ವಿಶೇಷವಾಗಿ ಶುಕ್ರವಾರದಂದು ಅವರ ಪೂಜೆ ಮಾಡಿ.
कन्या / ಕನ್ಯಾ ರಾಶಿ
ಶುಕ್ರ ದೇವ ಕನ್ಯಾ ರಾಶಿಚಕ್ರದ ಒಂಬತ್ತನೇ ಮತ್ತು ಎರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮೊದಲನೇ ಮನೆಗೆ ಸಾಗುತ್ತಾರೆ. ಈ ಅವಧಿಯಲ್ಲಿ ನಿಮ್ಮ ಬಗ್ಗೆ ನಿಮ್ಮ ವಿಮರ್ಶಾತ್ಮಕತೆಯ ಹೆಚ್ಚಳವಾಗುತ್ತದೆ. ಈ ಕಾರಣದಿಂದಾಗಿ ನೀವು ಆರಂಭದಿಂದಲೇ ನಿಮ್ಮ ಚಟುವಟಿಕೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿ ಕಂಡುಬರುವಿರಿ. ಇದರ ಪರಿಣಾಮವಾಗಿ ನಿಮ್ಮ ಉಡುಪು ಮತ್ತು ನಿಮ್ಮ ಮೇಲೆ ಹೆಚ್ಚು ಖರ್ಚು ಮಾಡಬಹುದು. ಆದಾಗ್ಯೂ, ಇದರ ಹೊರತಾಗಿಯೂ, ನಿಮ್ಮ ವೇಷಭೂಷಣದಲ್ಲಿ ಇನ್ನೂ ಸಂಪೂರ್ಣ ಯಶಸ್ಸು ಪಡೆಯಲಾಗುವುದಿಲ್ಲ. ಇದರ ನಕಾರಾತ್ಮಕ ಪರಿಣಾಮವು ನಿಮ್ಮ ವ್ಯಕ್ತಿತ್ವದ ಮೇಲೆ ಬೀರುತ್ತದೆ
ಕುಟುಂಬ ಜೀವನದಲ್ಲಿ ಶುಕ್ರ ದೇವ ನಿಮ್ಮ ತಂದೆಯೊಂದಿಗಿನ ಸಂಬಂಧದ ಬಗ್ಗೆಯೂ ನಿಮಗೆ ಸ್ವಲ್ಪ ಒತ್ತಡವನ್ನು ನೀಡಬಹುದು. ಇದರೊಂದಿಗೆ ಈ ಸಮಯವು ನಿಮ್ಮ ಆತ್ಮವಿಶ್ವಾಸ ಮತ್ತು ಧೈರ್ಯದಲ್ಲೂ ಇಳಿಕೆಯನ್ನು ತರುವ ಕೆಲಸ ಮಾಡುತ್ತದೆ. ಹಣಕಾಸಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿದರೆ, ನಿಮ್ಮ ಆದಾಯ ಮತ್ತು ಉಳಿತಾಯದ ಬಗ್ಗೆಯೂ ನೀವು ಅಗತ್ಯಕ್ಕಿಂತ ಹೆಚ್ಚು ಅಸುರಕ್ಷಿತರಾಗಿರುವ ಕಾರಣದಿಂದಾಗಿ ಆದಾಯ ಮತ್ತು ವೆಚ್ಚಗಳ ಲೆಕ್ಕಾಚಾರದಲ್ಲಿ ನಿಮ್ಮ ಹೆಚ್ಚಿನ ಸಮಯವನ್ನು ವ್ಯರ್ಥಮಾಡಬಹುದು.
ವೈವಾಹಿಕ ಜೀವನದಲ್ಲೂ ಶುಕ್ರ ದೇವ ಪ್ರೀತಿ ಮತ್ತು ಬೆಂಬಲದ ಕೊರತೆಯನ್ನು ತರುತ್ತಾರೆ. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ನೀವು ತೃಪ್ತರಾಗಿರುವುದಿಲ್ಲ. ಅದೇ ಸಮಯದಲ್ಲಿ ಮತ್ತೊಂದೆಡೆ, ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಈ ಸಮಯವು ನಿಮ್ಮ ಸಂಬಂಧದಲ್ಲಿ ವ್ಯತ್ಯಾಸದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಈ ಕಾರಣದಿಂದಾಗಿ ನಿಮ್ಮ ಪ್ರೀತಿಪಾತ್ರರರನ್ನು ನೀವು ಅತಿಯಾಗಿ ಟೀಕಿಸುವ ಮೂಲಕ, ನಿಮ್ಮ ಪ್ರೇಮಿಯ ಭಾವನೆಗಳನ್ನು ನೋಯಿಸಬಹುದು. ಆದಾಗ್ಯೂ, ಕೇಟರಿಂಗ್ ವ್ಯವಹಾರಕ್ಕೆ ಸಂಬಂಧಿಸಿದ ಜನರಿಗೆ ಸಮಯ ಸ್ವಲ್ಪ ಉತ್ತಮವಾಗಿರುತ್ತದೆ. ಏಕೆಂದ್ರೆ ಈ ಸಮಯದಲ್ಲಿ ನೀವು ನಿಮ್ಮ ಗ್ರಹಾರಕರ ಉತ್ತಮ ಸೇವೆ ಮತ್ತು ರುಚಿಕರವಾದ ಆಹಾರದೊಂದಿಗೆ ತೃಪ್ತಿಪಡಿಸಲು ಸಾಧ್ಯವಾಗುತ್ತದೆ.
ಪರಿಹಾರ - ಬೆಳ್ಳಿಯ ಉಂಗುರದಲ್ಲಿ ಉತ್ತಮ ಗುಣಮಟ್ಟದ ಬಿಳಿ ನೀಲಮಣಿಯನ್ನು ತಯಾರಿಸಿ, ಅದನ್ನು ಶುಕ್ರವಾರದಂದು ನಿಮ್ಮ ಬಲಗೈಯ ಉಂಗುರದ ಬೆರಳಿನಲ್ಲಿ ಧರಿಸಿ.
तुला / ತುಲಾ ರಾಶಿ
ಶುಕ್ರ ದೇವ ತುಲಾ ರಾಶಿಚಕ್ರದ ಮೊದಲನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾರೆ. ಜ್ಯೋತಿಷ್ಯದಲ್ಲಿ ಇದನ್ನು ವೆಚ್ಚದ ಮನೆಯೆಂದು ಕರೆಯಲಾಗುತ್ತದೆ ಮತ್ತು ಈ ಮನೆಯ ಮೂಲಕ, ವೆಚ್ಚಗಳು, ನಷ್ಟ, ಮೋಕ್ಷ, ವಿದೇಶ ಪ್ರಯಾಣ, ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆಹಾರ ಪದ್ಧತಿಯ ಅಭ್ಯಾಸಗಳು ಮತ್ತು ದಿನಚರಿಯ ಬಗ್ಗೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ಶುಕ್ರನ ಈ ಸಂಚಾರವು ನಿಮಗೆ ಕೆಲವು ಅರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನೀಡುವ ಸಾಧ್ಯತೆ ಇದೆ. ಇದಲ್ಲದೆ ವಾಹನ ಚಾಲನೆ ಮಾಡುವ ಜನರು ಸಹ ವಿಶೇಷ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಅವರು ಯಾವುದೇ ಅಪಘಾತಕ್ಕೆ ಬಲಿಯಾಗಬಹುದು. ಶುಕ್ರ ಸಂಚಾರದ ಸಮಯದಲ್ಲಿ ಮಹಿಳೆಯರಿಗೆ ಮುಟ್ಟಿನ ಅಥವಾ ಹಾರ್ಮೋನುಗಳಿಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಉತ್ತಮ ವೈದ್ಯರನ್ನು ಸಂಪರ್ಕಿಸಲು ನಿಮಗೆ ಸಲಹೆ ನೀಡಲಾಗಿದೆ.
ವಿವಾಹಿತ ಜನರು ಸಂಚಾರದ ಸಮಯದಲ್ಲಿ, ತಮ್ಮ ನಿಕಟ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಖಾತೆ ಅಥವಾ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಸಮಯವು ಸಾಮಾನ್ಯಕ್ಕಿಂತ ಹೆಚ್ಚು ಅನುಕೂಲಕರವಾಗಿರುತ್ತದೆ. ವಿಶೇಷವಾಗಿ ತಿಂಗಳ ಅಂತ್ಯದಲ್ಲಿ ಶುಕ್ರ ಮತ್ತು ಬುಧನ ಸಂಯೋಜನೆಯಾದಾಗ, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಹೆಚ್ಚು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಈ ಸಂಚಾರವು ಅನೇಕ ಜನರಿಗೆ ಪ್ರವಾಸಕ್ಕೆ ಹೋಗುವ ಅವಕಾಶವನ್ನು ನೀಡುತ್ತದೆ. ಇದರಿಂದಾಗಿ ಅವರು ತಮ್ಮ ಕುಟುಂಬದಿಂದ ಮತ್ತು ಆಪ್ತರಿಂದ ಸ್ವಲ್ಪ ಸಮಯದವರೆಗೆ ದೂರ ಹೋಗಬೇಕಾಗಬಹುದು. ನೀವು ಯಾವುದೇ ವಿದೇಶ ಪ್ರಯಾಣಕ್ಕೆ ಹೋಗಲು ಬಯಸುತ್ತಿದ್ದರೆ, ಈ ಸಮಯ ನಿಮಗೆ ಹೆಚ್ಚು ಅನುಕೂಲಕರವಾಗಿರಲಿದೆ. ಏಕೆಂದರೆ ಈ ಸಂಚಾರದ ಸಮಯದಲ್ಲಿ, ನೀವು ಯಾವುದೇ ವಿದೇಶ ಪ್ರಯಾಣಕ್ಕೆ ಹೋಗುವಲ್ಲಿ ಯಶಸ್ವಿಯಾಗುತ್ತೀರಿ. ಶುಕ್ರ ದೇವ ಆಧ್ಯಾತ್ಮಿಕತೆಯತ್ತ ನಿಮ್ಮ ಒಲವನ್ನು ಹೆಚ್ಚಿಸುತ್ತಾರೆ. ಇದರಿಂದಾಗಿ ಕೆಲವು ದಾನ ಪುಣ್ಯದ ಚಟುವಟಿಕೆಗಳಲ್ಲಿ ನೀವು ಮುಂದುವರಿದು ಭಾಗವಹಿಸುವಿರಿ. ಇದರೊಂದಿಗೆ ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಧ್ಯಾನವನ್ನು ನಿಯಮಿತವಾಗಿ ಮಾಡಲು ಸಹ ನೀವು ನಿರ್ಧರಿಸಬಹುದು.
ಪರಿಹಾರ - ನಿಮ್ಮ ಜೀವನ ಸಂಗಾತಿಗೆ ವಿಶೇಷವಾಗಿ ಸುಗಂಧ ದ್ರವ್ಯವನ್ನು ನೀಡಿ.
वृश्चिक / ವೃಶ್ಚಿಕ ರಾಶಿ
ಶುಕ್ರ ದೇವ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸುತ್ತದೆ. ಜಾತಕದಲ್ಲಿ ಹನ್ನೊಂದನೇ ಮನೆಯನ್ನು ಆದಾಯದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯಿಂದ ಆದಾಯ, ಜೀವನದಲ್ಲಿ ಪಡೆಯಲಾಗುವ ಎಲ್ಲಾ ರೀತಿಯ ಸಾಧನೆಗಳು, ಸ್ನೇಹಿತರು, ಹಿರಿಯ ಸಹೋದರ - ಸಹೋದರಿಯರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ವರ್ಷಿಚಿಕ ರಾಶಿಚಕ್ರದ ಸ್ಥಳೀಯರ ವೃತ್ತಿ ಜೀವನಕೆ ಈ ಸಮಯ ಅನುಕೂಲಕರವಾಗಿರುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಅವರು ತಮ್ಮ ಸಹೋದ್ಯೋಗಿಗಳು ವಿಶೇಷವಾಗಿ ಮಹಿಳಾ ಸಹೋದ್ಯೋಗಿಗಳಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾರ್ವಜನಿಕ ಸೇವೆಗಳು ಅಥವಾ ಸಾರ್ವಜನಿಕ ವಲಯಕ್ಕೆ ಸಂಬಂಧಿಸಿರುವ ಜನರಿಗೂ ತಮ್ಮ ಗ್ರಾಹಕರನ್ನು ತೃಪ್ತಿಪಡಿಸುವಲ್ಲಿ ಕಷ್ಟವಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಇತರರೊಂದಿಗೆ ಭಿನ್ನಾಭಿಪ್ರಾಯ ಅಥವಾ ವಿವಾದವಾಗುವ ಸಾಧ್ಯತೆ ಇದೆ.
ಆರ್ಥಿಕ ಜೀವನದಲ್ಲಿ ಕೂಡ ನಿಮ್ಮ ಆದಾಯದಿಂದ ನೀವು ತೃಪ್ತರಾಗಿರುವುದಿಲ್ಲ. ಆದ್ದರಿಂದ ಹೆಚ್ಚು ಹಣಕಾಸು ಗಳಿಸಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ನಿಮ್ಮ ಖರ್ಚುಗಳು ಹೆಚ್ಚಾಗಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಆರಂಭದಿಂದಲೇ ಅವುಗಳನ್ನು ನಿಯಂತ್ರಣದಲ್ಲಿಡಿ. ಕುಟುಂಬ ಜೀವನದಲ್ಲಿ ಹಿರಿಯ ಸಹೋದರ - ಸಹೋದರಿಯರೊಂದಿಗಿನ ನಿಮ್ಮ ಸಂಬಂಧದಲ್ಲಿ ಅಭಿಪ್ರಾಯ ಕಾಣಿಸುತ್ತದೆ, ಏಕೆಂದರೆ ಈ ಸಮಯದಲ್ಲಿ ಅವರೊಂದಿಗಿನ ತಪ್ಪು ಗ್ರಹಿಕೆಗಳಿಂದಾಗಿ ಬೆಂಬಲ ಪಡೆಯುವಲ್ಲಿ ತೊಂದರೆಯಾಗಬಹುದು. ಈ ಸಮಯದಲ್ಲಿ ಅದೃಷ್ಟ ನಿಮ್ಮನ್ನು ಬೆಂಬಲಸುವುದಿಲ್ಲ. ಅದರಿಂದಾಗಿ ಇತರರನ್ನು ನಿಮ್ಮ ಸ್ನೇಹಿತರನ್ನಾಗಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಮಾತನಾಡುವಾಗ ನಿಮ್ಮ ಭೌತಿಕ ಸೌಕರ್ಯಗಳನ್ನು ತೋರಿಸಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಸಂಬಂಧದ ಮೇಲೆ ಬೀರಬಹುದು.
ಶುಕ್ರನ ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ರೀತಿಯ ದೀರ್ಘಕಾಲೀನ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಈಕೇನೇರೇ ನಿಮಗೆ ನಷ್ಟವಾಗುವ ನಿರೀಕ್ಷೆ ಹೆಚ್ಚಾಗಿದೆ. ಈ ಸಮಯದಲ್ಲಿ ನೀವು ಯಾವುದೇ ಪ್ರಯಾಣಕ್ಕೆ ಹೋಗಲು ಯೋಜಿಸುತ್ತಿದ್ದರೆ, ಹಾಗೆ ಮಾಡುವುದನ್ನು ನೀವು ತಡೆಯುವುದು ಉತ್ತಮ.
ಪರಿಹಾರ - ನಿಮ್ಮ ಬೆಡ್ರೂಮ್ ನಲ್ಲಿ ಗುಲಾಬಿ ಕ್ವಾರ್ಟ್ಸ್ ಕ್ರಿಸ್ಟಲ್ ಇರಿಸಿ.
धनु / ಧನು ರಾಶಿ
ಶುಕ್ರ ದೇವ ಧನು ರಾಶಿಚಕ್ರದ ಸ್ಥಳೀಯರ ಹನ್ನೊಂದನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಹತ್ತನೇ ಮನೆಗೆ ಸಾಗುತ್ತಾರೆ. ಜ್ಯೋತಿಷ್ಯದಲ್ಲಿ ಹತ್ತನೇ ಮನೆಯನ್ನು ವೃತ್ತಿ ಜೇವನ, ತಂದೆಯ ಸ್ಥಿತಿ, ಸ್ಥಿತಿ, ರಾಜಕೀಯ ಮತ್ತು ಜೀವನದ ಗುರಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಇದನ್ನು ಕರ್ಮದ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲಸದ ಬಗ್ಗೆ ನೀವು ಸ್ವಲ್ಪ ಅಸಡ್ಡೆ ಹೊಂದಿರಬಹುದು. ಇದರಿಂದಾಗಿ ಕೆಲಸದ ಸ್ಥಳದಲ್ಲಿ ಮಾನಹಾನಿ ಮತ್ತು ಅತೃಪ್ತಿಯನ್ನು ನೀವು ಪಡೆಯಬಹುದು. ನಿಮ್ಮ ಅಧೀನ ಕೆಲಸ ಮಾಡುತ್ತಿರುವ ಜನರು ನಿಮ್ಮ ಕೆಲಸದ ರೀತಿಯಿಂದ ಅತೃಪ್ತರಾಗಬಹುದು. ಈ ಕಾರಣದಿಂದಾಗಿ ಅವರ ಮೂಲಕ ಕೆಟ್ಟ ಪ್ರತಿಕ್ರಿಯೆಯನ್ನು ನೀವು ಪಡೆಯಬಹುದು.
ನೀವು ವ್ಯಾಪಾರದಲ್ಲಿ ತೊಡಗಿದ್ದರೆ, ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿರಾಗಿರುತ್ತಾರೆ, ಅವರ ಮೇಲೆ ವಿಜಯ ಪಡೆಯಲು ನಿಮಗೆ ಸ್ವಲ್ಪ ಕಷ್ಟವಾಗಬಹುದು. ಅದೇ ಸಮಯದಲ್ಲಿ, ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಜನರು, ಕೆಲಸದ ಸ್ಥಳದಲ್ಲಿ ತಮ್ಮ ತಂಡದ ಕೆಲಸವನ್ನು ವಿಭಜಿಸುವಲ್ಲಿ ಕೆಲವು ಸಮಸ್ಯೆಯನ್ನು ಎದುರಿಸಬಹುದು. ಏಕೆಂದರೆ ಈ ಸಮಯದಲ್ಲಿ ಮುನ್ನಡೆಸುವ ನಿಮ್ಮ ಸಾಮರ್ಥ್ಯವು ಹೆಚ್ಚು ಪ್ರಭಾವಿತವಾಗಲಿದೆ.
ಆರ್ಥಿಕ ಜೀವನದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವಲ್ಲಿ ನಿಮಗೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ನಿಮ್ಮ ಅನೇಕ ಯೋಜನೆಗಳು ವಿಫಲವಾಗುವ ಸಾಧ್ಯತೆ ಇದೆ, ಈ ಕಾರಣದಿಂದಾಗಿ ನೀವು ಹಣದ ನಷ್ಟವನ್ನು ಭರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರತಿಯೊಂದು ಕಾರ್ಯದ ನಿಗದಿತ ಸಮಯ ಮಿತಿಯನ್ನು ಮತ್ತು ನಿಮ್ಮ ಯೋಜನೆಯನ್ನು ಗಮನ ಹರಿಸುವ ಮೂಲಕ ನಿಮ್ಮ ಪ್ರಯತ್ನಗಳನ್ನು ಮುಂದುವರಿಸಲು ನಿಮಗೆ ಸಲಹೆ ನೀಡಲಾಗಿದೆ. ಅನೇಕ ಉದ್ಯೋಗಸ್ಥರು ತಮ್ಮ ಬಾಸ್ ನೊಂದಿಗೆ ಭಿನ್ನಾಭಿಪ್ರಾಯದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಆರಂಭದಿಂದಲೇ ನಿಮ್ಮ ಭಾಷೆಯನ್ನು ನಿಯಂತ್ರಿಸುವ ಅಗತ್ಯವಿದೆ.
ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಕೆಲವು ಒತ್ತಡವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ನೀವು ಬಯಸದಿದ್ದರೂ, ಕುಟುಂಬದ ಬಗೆಗಿನ ನಿಮ್ಮ ಜವಾಬ್ದಾರಿಗಳನ್ನು ನೀವು ನಿರ್ಲಕ್ಷಿಸುತ್ತೀರಿ, ಇದರಿಂದಾಗಿ ಕುಟುಂಬದ ಸದಸ್ಯರು ನಿಮ್ಮೊಂದಿಗೆ ಕೋಪಗೊಳ್ಳಬಹದು.
ಪರಿಹಾರ - ಪ್ರತಿದಿನ ನಿಯಮಿತವಾಗಿ ಸರಸ್ವತಿ ವಂದನೆಯನ್ನು ಮಾಡಿ.
मकर / ಮಕರ ರಾಶಿ
ಶುಕ್ರ ದೇವ ನಿಮ್ಮ ರಾಶಿಚಕ್ರದ ಹತ್ತನೇ ಮತ್ತು ಐದನೇ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಸಾಗುತ್ತಾರೆ. ಜ್ಯೋತಿಷ್ಯದಲ್ಲಿ ಒಂಬತ್ತನೇ ಮನೆಯನ್ನು ಅದೃಷ್ಟದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯ ಮೂಲಕ ವ್ಯಕ್ತಿಯ ಅದೃಷ್ಟ, ಗುರು, ಧರ್ಮ,ತೀರ್ಥ ಸ್ಥಳ, ತತ್ವಗಳನ್ನು ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಅಸಮರ್ಪಕ ಸಂಬಂಧಗಳಿಂದಾಗಿ ಶಿಕ್ಷಣದತ್ತ ಕೇಂದ್ರೀಕರಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ನೀವು ಉನ್ನತ ಶಿಕ್ಷಣವನ್ನು ಗಳಿಸುತ್ತಿದ್ದರೆ, ಈ ಸಮಯವು ನಿಮ್ಮ ಆತ್ಮವಿಶ್ವಾಸ ಮತ್ತು ಏಕಾಗ್ರತೆಯಲ್ಲಿ ಕೊರತೆಯನ್ನು ತರುತ್ತದೆ. ಇದರಿಂದಾಗಿ ನಿಮ್ಮ ಉತ್ತಮ ಪ್ರದರ್ಶನ ಮಾಡುವಲ್ಲಿ ನೀವು ವಿಫಲರಾಗುತ್ತೀರಿ. ಈ ರಾಶಿಚಕ್ರದ ಕೆಲವು ಜನರು ತಮ್ಮ ಶಿಕ್ಷಕರ ಮೇಲೆ ಹೃದಯವನ್ನು ಇಟ್ಟುಕೊಳ್ಳುತ್ತಾರೆ, ಆದಾಗ್ಯೂ ಅವರು ಹಾಗೆ ಮಾಡುವುದನ್ನು ತಪ್ಪಿಸಬೇಕು.
ನೀವು ಉದ್ಯೋಗದಲ್ಲಿ ತೊಡಗಿದ್ದರೆ, ನಿಮ್ಮ ಮೇಲಧಿಕಾರಿಗಳು ಅಥವಾ ಬಾಸ್ ನೊಂದಿಗೆ ಯಾವುದೇ ತಪ್ಪುಗ್ರಹಿಕೆಯ ಬಗ್ಗೆ ನಿಮ್ಮ ವಿವಾದದ ಸಾಧ್ಯತೆ ಇದೆ. ಇದರಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಮನಸ್ಸು ಹೊಂದಿರುವುದಿಲ್ಲ. ಕೆಲವು ಸ್ಥಳೀಯರು ಕೆಲಸಕ್ಕೆ ಸಂಬಂಧಿಸಿದ ಪ್ರವಾಸಕ್ಕೆ ಹೋಗಬೇಕಾಗುತ್ತದೆ. ಆದಾಗ್ಯೂ, ಈ ಪ್ರಯಾಣವು ನಿಮಗೆ ಫಲಪ್ರದವೆಂದು ಸಾಬೀತುಪಡಿಸುವುದಿಲ್ಲ ಮತ್ತು ಇದರ ನಕಾರಾತ್ಮಕ ಪರಿಣಾಮವು ನಿಮ್ಮ ವ್ಯವಹಾರದ ಮೇಲೆ ಬೀರುತ್ತದೆ. ಶುಕ್ರ ದೇವರ ಸಂಚಾರದ ಸಮಯದಲ್ಲಿ, ನಿಮ್ಮ ಕುಟುಂಬ ಜೀವನದಲ್ಲೂ, ತಂದೆಯೊಂದಿಗಿನ ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ನೀವು ಮಾತನಾಡುವಾಗ, ನಿಮ್ಮ ಪದಗಳನ್ನು ಚಿಂತನಶೀಲವಾಗಿ ಬಳಸಲು ನಿಮಗೆ ಸಲಹೆ ನೀಡಲಾಗಿದೆ.
ಈ ಸಮಯದಲ್ಲಿ ನಿಮ್ಮನ್ನು ನೀವೇ ವಿರೋಧಾಭಾಸದ ಪರಿಸ್ಥಿತಿಯಲ್ಲಿ ಸಿಲುಕಿಸಿಕೊಳ್ಳುವ ಮೂಲಕ, ನಿಮ್ಮದೇ ಆಲೋಚನೆಗಳಿಂದ ತೃಪ್ತರಾಗುವುದಿಲ್ಲ ಮತ್ತು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಯಾವುದೇ ದೊಡ್ಡ ನಿರ್ಧಾರ ತೆಗೆಯುಕೊಳ್ಳುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ.
ಪರಿಹಾರ - ದೇವಿ ಪಾರ್ವತಿಯನ್ನು ಪೂಜಿಸಿ ಮತ್ತು ಶುಕ್ರವಾರದಂದು ಅವರಿಗೆ ಬಿಳಿ ತಿಂಡಿಯನ್ನು ಅರ್ಪಿಸಿ.
कुंभ / ಕುಂಭ ರಾಶಿ
ಶುಕ್ರ ಗ್ರಹವು ಕುಂಭ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಸಾಗುತ್ತದೆ. ಎಂಟನೇ ಮನೆಯ ಮೂಲಕ ಜೀವನದಲ್ಲಿ ಬರಲಾಗುವ ಏರಿಳಿತಗಳು, ಇದ್ದಕ್ಕಿದ್ದಂತೆ ಸಂಭವಿಸಲಾಗುವ ಘಟನೆಗಳು, ಆಯಸ್ಸು, ರಹಸ್ಯ, ಸಂಶೋಧನೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಕುಂಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ಪ್ರಯೋಜನಕಾರಿ ಗ್ರಹವಾಗಿದೆ ಮತ್ತು ಈ ಸಂಚಾರದ ಪರಿಣಾಮವಾಗಿ ನೀವು ಸಾಮಾನ್ಯಕ್ಕಿಂತ ಕಡಿಮೆ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ದಿನಚರಿಯಿಂದ ನೀವು ತೃಪ್ತರಾಗುವುದಿಲ್ಲ. ಈ ಸಮಯದಲ್ಲಿ ನೀವು ಯಾವುದೇ ಸಂಪತ್ತು ಅಥವಾ ಜಮೀನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದಕ್ಕಾಗಿ ಈ ಸಮಯ ಅಶುಭವಾಗಿರಲಿದೆ.
ಈ ಸಂಚಾರದ ಸಮಯದಲ್ಲಿ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಏಕೆಂದರೆ ಶುಕ್ರ ದೇವ ನಿಮ್ಮಿಂದ ಹೆಚ್ಚು ಕಠಿಣ ಪರಿಶ್ರಮ ಮಾಡಿಸಲಿದ್ದಾರೆ. ನಿಮ್ಮ ಜೀವನದಲ್ಲೂ ಅಪೇಕ್ಷಿತ ಹಣಕಾಸು ಗಳಿಸಲು ಹೆಚ್ಚು ಪರಿಶ್ರಮಿಸಬೇಕಾಗುತ್ತದೆ. ಆಗ ಮಾತ್ರ ನೀವು ಹಣ ಗಳಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಅನೇಕ ಸ್ಥಳೀಯರ ತಾಯಿಗೆ ಅರೋಗ್ಯ ನಷ್ಟ ಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ಆರಂಭದಿಂದಲೇ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ.
ಮನೆ-ಕುಟುಂಬದಲ್ಲಿ ಸ್ವಲ್ಪ ಒತ್ತಡದ ವಾತಾವರಣವನ್ನು ಕಾಣಲಾಗುತ್ತದೆ. ಇದರಿಂದಾಗಿ ಎಲ್ಲಾ ಸದಸ್ಯರಿಗೂ ತೊಂದರೆಯಾಗುತ್ತದೆ. ಅದೇ ಸಮಯದಲ್ಲಿ, ಮದುವೆಯಾಗಲು ಬಯಸುತ್ತಿರುವ ಜನರು ಮುಂಬರುವ ತಿಂಗಳ ವರೆಗೆ ಕಾಯಲು ಸಲಹೆ ನೀಡಲಾಗಿದೆ.
ಪರಿಹಾರ - ಬೆಳ್ಳಿಯ ಉಂಗುರದಲ್ಲಿ ಉತ್ತಮ ಗುಣಮಟ್ಟದ ಓಪಲ್ ರತ್ನವನ್ನು ತಯಾರಿಸಿ ನಿಮ್ಮ ಕೈಯ ಅನಾಮಿಕ ಬೆರಳಿನಲ್ಲಿ ಧರಿಸುವುದರಿಂದ ಶುಕ್ರನ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
मीन / ಮೀನಾ ರಾಶಿ
ಶುಕ್ರ ದೇವ ಮೀನಾ ರಾಶಿಚಕ್ರದ ಎಂಟನೇ ಮತ್ತು ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಪ್ರವೇಶಿಸುತ್ತಾರೆ. ಏಳನೇ ಮನೆಯ ಮೂಲಕ ವ್ಯಕ್ತಿಯ ವೈವಾಹಿಕ ಜೀವನ, ಜೀವನ ಸಂಗಾತಿ ಮತ್ತು ಜೀವನದ ಇತರ ಕ್ಷೇತ್ರಗಳಲ್ಲಿ ಸಂಭವಿಸಲಾಗುವ ಪಾಲುದಾರಿಕೆಯ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ವಿಶೇಷ ಫಲಿತಾಂಶಗಳನ್ನು ಪಡೆಯುವುದಿಲ್ಲ. ವಿಶೇಷವಾಗಿ ಪ್ರೀತಿಯ ಸಂಬಂಧದಲ್ಲಿ ಪ್ರೇಮಿಗಳು ಮತ್ತು ವೈವಾಹಿಕ ಸ್ಥಳೀಯರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ದಿನಚರಿಯು ಸಾಕಷ್ಟು ಮಟ್ಟಿಗೆ ನಿಮ್ಮ ಸಂಗಾತಿಯಿಂದಾಗಿ ಅಡ್ಡಿಯಾಗಬಹುದು. ಇದರಿಂದಾಗಿ ನಿಮ್ಮಿಬ್ಬರ ಸಂಬಂಧದಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗುತ್ತದೆ. ಇದು ನಿಮ್ಮ ಮಾನಸಿಕ ಒತ್ತಡವನ್ನು ಸಹ ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ನಿಮ್ಮನ್ನು ಶಾಂತವಾಗಿರಿಸಿ ಮತ್ತು ಪ್ರತಿ ತಪ್ಪುಗ್ರಹಿಕೆಯ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಸ್ಪಷ್ಟವಾಗಿ ಮಾತನಾಡಿ.
ಈ ಸಂಚಾರವು ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ. ಇದರೊಂದಿಗೆ ಈ ಸಮಯವು ಉದ್ಯೋಗದಲ್ಲಿರುವ ಜನರಿಗೂ ಕಡಿಮೆ ಉತ್ತಮವಾಗಿರುತ್ತದೆ. ಏಕೆಂದರೆ ನಿಮ್ಮ ಕೆಲಸದತ್ತ ಕೇಂದ್ರೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಆದಾಗ್ಯೂ, ಇದರ ಹೊರತಾಗಿಯೂ ನೀವು ಸಂಪೂರ್ಣ ಶಕ್ತಿಯೊಂದಿಗೆ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಲಾಗುತ್ತದೆ.
ನಿಮ್ಮ ಸ್ವಭಾವದಲ್ಲಿ ಬುದ್ಧಿವಂತಿಕೆ ಉಂಟಾಗುತ್ತದೆ ಮತ್ತು ಈ ಕಾರಣದಿಂದಾಗಿ ಜನರು ನಿಮ್ಮ ತಪ್ಪು ಪ್ರಯೋಜನವನ್ನು ಪಡೆಯಲಾಗುವುದಿಲ್ಲ. ವಿಶೇಷವಾಗಿ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರು, ತಮ್ಮ ಪಾಲುದಾರರೊಂದಿಗೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ಅವರ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೊಸ ವ್ಯಾಪಾರ ಅಥವಾ ಹೂಡಿಕೆ ಮಾಡುವಾಗ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ಯಾವುದೇ ವಂಚನೆಗೆ ಬಲಿಯಾಗಬಹುದು.
ಪರಿಹಾರ - ಮನೆಯಲ್ಲಿ ಸಂಜೆಯ ವೇಳೆಯಲ್ಲಿ ವಿಶೇಷವಾಗಿ ಶುಕ್ರವಾರ ಕರ್ಪುರವನ್ನು ಬೆಳಗಿಸಿ.
ನೀವು ಈ ಲೇಖನವನ್ನು ಇಷ್ಟಪಟ್ಟಿದ್ದೀರಿ ಎಂದು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು.