ಕುಂಭ ರಾಶಿಯಲ್ಲಿ ಶುಕ್ರ ಸಂಚಾರ (21st February 2021)
ಐಷಾರಾಮಿ, ಸುಖ, ಸಮೃದ್ಧಿ, ವಾಹನ, ನಟನೆ, ವಿವಿಧ ರೀತಿಯ ಕಲೆಗಳನ್ನು ಒದಗಿಸುವ ಶುಕ್ರ ಗ್ರಹ, ಮತ್ತೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸಿ, 21 ಫೆಬ್ರವರಿ 2021ರಂದು, ಭಾನುವಾರ ಬೆಳಿಗ್ಗೆ 02:12 ಗಂಟೆಗೆ ಮಕರ ರಾಶಿಯಿಂದ ಹೊರಬಂದು ತನ್ನ ಸ್ನೇಹ ಶನಿಯ ಸ್ವಾಮಿತ್ವದ ಕುಂಭ ರಾಶಿಗೆ ಸಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕುಂಭ ರಾಶಿಯಲ್ಲಿ ಸಂಚಾರದ ಈ ಅವಧಿಯಲ್ಲಿ, ಶುಕ್ರನ ರಾಶಿ ಬದಲಾವಣೆಯ ಪರಿಣಾಮವು ಕುಂಭ ರಾಶಿಯನ್ನು ಹೊರತುಪಡಿಸಿ ಇತರ ರಾಶಿಗಳ ಮೇಲೂ ಕಾಣಲಾಗುತ್ತದೆ.
ನಡೆಯಿರಿ, ಕುಂಭ ರಾಶಿಯಲ್ಲಿ ಶುಕ್ರನ ಸಂಚಾರದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮವು ಎಲ್ಲಾ ರಾಶಿಚಕ್ರದ ಸ್ಥಳೀಯರ ಮೇಲೆ ಏನು ಬೀರಲಿದೆ ಎಂದು ತಿಳಿಯೋಣ:
ಯಾವುದೇ ಸಮಸ್ಯೆಯಿಂದ ತೊಂದರೆಗೀಡಾದರು, ಪರಿಹಾರವನ್ನು ಪಡೆಯಲು ಪ್ರಶ್ನೆ ಕೇಳಿ
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
ಮೇಷ ರಾಶಿ
ಶುಕ್ರ ದೇವ ಮೇಷ ರಾಶಿಚಕ್ರದ ಎರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸುತ್ತಾರೆ. ಹನ್ನೊಂದನೇ ಮನೆ ನಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವ ಮನೆ, ಇದನ್ನು ನಮ್ಮ ಲಾಭದ ಸ್ಥಾನವೆಂದು ಪರಿಗಣಿಸಲಾಗಿದೆ. ಆದ್ದರಿಂದ ಶುಕ್ರ ದೇವರ ಈ ಸಂಚಾರದ ಪರಿಣಾಣದಿಂದಾಗಿ ಮೇಷ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಸಮೃದ್ಧಿ ಬರುತ್ತದೆ. ಏಕೆಂದರೆ ಈ ಸಮಯದಲ್ಲಿ ಅನೇಕ ಶುಭ ಅವಕ್ಶಗಳನ್ನು ಪಡೆಯುವ ಸಾಧ್ಯತೆ ಇದೆ.
ಈ ಸಮಯದಲ್ಲಿ ಶುಕ್ರನು ನಿಮ್ಮ ರಾಶಿಯಲ್ಲಿ ಬಲವಾದ “ಧನ ಯೋಗವನ್ನು” ರಚಿಸುತ್ತಾನೆ. ಇದರಿಂದಾಗಿ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರಿಗೆ ಸಂಪೂರ್ಣ ಹಣಕಾಸಿನ ಲಾಭದ ಸಧ್ಯತೆ ಇದೆ. ಯಾವುದೇ ಕಲೆ, ಸೃಜನಶೀಲ, ಫ್ಯಾಷನ್, ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಸಹ ಶುಕ್ರ ಸಂಚಾರದ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.
ಕುಟುಂಬ ವಾತಾವರಣ ಉತ್ತಮವಾಗಿರುತ್ತದೆ ಮತ್ತು ನೀವು ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲ ಮತ್ತು ಪ್ರೀತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವುದನ್ನು ಕಾಣಲಾಗುತ್ತದೆ. ನೀವು ಒಬ್ಬಂಟಿಯಾಗಿದ್ದರೆ, ಇದ್ದಕ್ಕಿದ್ದಂತೆ ವಿಶೇಷ ವ್ಯಕ್ತಿಯನ್ನು ಭೇಟಿಸುವ ಸಾಧ್ಯತೆ ಇದೆ. ಇದರೊಂದಿಗೆ ನೀವು ಹೊಸ ಬಂಧದಲ್ಲಿ ಪ್ರವೇಶಿಸಲು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮತ್ತೊಂದೆಡೆ, ನೀವು ವಿವಾಹಿತರಾಗಿದ್ದರೆ, ನಿಮ್ಮ ದಾಂಪತ್ಯ ಜೀವನದಲ್ಲಿ ಹೊಸ ಶಕ್ತಿಯ ಸಂವಹನ ಇರುತ್ತದೆ. ಇದಲ್ಲದೆ ಕೆಲವು ಸ್ಥಳೀಯರು ಮಕ್ಕಳನ್ನು ಪಡೆಯುವುದರಿಂದ ಅಪಾರ ಸಂತೋಷವನ್ನು ಪಡೆಯುತ್ತಾರೆ.
ಒಟ್ಟಾರೆಯಾಗಿ ಹೇಳಿದರೆ, ಶುಕ್ರನ ಈ ಸಂಚಾರವು ನಿಮ್ಮ ಎಲ್ಲಾ ಆಸೆಗಳನ್ನು ಪೂರ್ಣಗೊಳಿಸಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತದೆ.
ಪರಿಹಾರ - ನೀವು ವಿಶೇಷ ಲಾಭವನ್ನು ಪಡೆಯಲು ಶುಕ್ರವಾರ ಉಪವಾಸ ಮಾಡಬೇಕು.
ವೃಷಭ ರಾಶಿ
ಶುಕ್ರ ದೇವ ವೃಷಭ ರಾಶಿಯ ಅಧಿಪತಿ, ಆದ್ದರಿಂದ ಶುಕ್ರ ದೇವರ ಸಂಚಾರವು ನಿಮಗೆ ಬಹಳ ಮುಖ್ಯವಾಗಿದೆ. ರಾಶಿಚಕ್ರದ ಅಧಿಪತಿಯಲ್ಲದೆ, ಅವರು ನಿಮ್ಮ ಆರನೇ ಮನೆಯ ಅಧಿಪತಿಯೂ ಆಗಿದ್ದಾರೆ ಮತ್ತು ಸಾಂಚಾರದ ಈ ಸಮಯದಲ್ಲಿ ಕುಂಭ ರಾಶಿಯಲ್ಲಿ ಪ್ರವೇಶಿಸುವಾಗ ನಿಮ್ಮ ಹತ್ತನೇ ಮನೆಯನ್ನು ಸಕ್ರಿಯಗೊಳಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಕೆಲಸದ ಬಗ್ಗೆ ವಿಶೇಷ ಗಮನ ಹರಿಸಬೇಕು, ಏಕೆಂದರೆ ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.
ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಪರಿಶ್ರಮ ಮತ್ತು ಪ್ರಯತ್ನಗಳನ್ನು ವೇಗಗೊಳಿಸಬೇಕಾಗುತ್ತದೆ. ಏಕೆಂದರೆ ನಿಮ್ಮ ಕೆಲಸದ ಬಗ್ಗೆ ಎಲ್ಲೋ ಗೊಂದಲವನ್ನು ಅನುಭವಿಸಬಹುದು. ಈ ಕಾರಣದಿಂದಾಗಿ ನಿಮ್ಮ ಸಿದ್ಧಾಂತ ಮತ್ತು ಕೆಲಸ ಸಾಮರ್ಥ್ಯದಲ್ಲಿ ಸೃಜನಶೀಲತೆಯ ಕೊರಯೆಯನ್ನು ಕಾಣಲಾಗುತ್ತದೆ ಮತ್ತು ನಿಮ್ಮ ಕೆಲಸಗಳೊಂದಿಗೆ ನಿಮ್ಮನ್ನು ಸಂಪರ್ಕಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಎಲ್ಲಾ ನಕಾರಾತ್ಮಕತೆಯ ಕಾರಣದಿಂದಾಗಿ ನಿಮ್ಮ ಕೆಲಸದ ಸಾಮರ್ಥ್ಯವು ಎಂದು ನಿರೀಕ್ಷಿಸಲಾಗಿದೆ. ಇದರಿಂದಾಗಿ ನಿಮ್ಮಲ್ಲಿನ ಆಯಾಸ ಮತ್ತು ಅಸ್ಥಿರತೆ ಹೆಚ್ಚಾಗುತ್ತದೆ. ನಿಮ್ಮ ಈ ದುರ್ಬಲತೆಯ ಲಾಭವನ್ನು ಪಡೆದು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ.
ಈ ಸಮಯದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರು ಯಾವುದೇ ರೀತಿಯ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
ಕುಟುಂಬ ಜೀವನವು ತೃಪ್ತಿ, ಸಂತೋಷ ಮತ್ತು ಆನಂದದಿಂದ ತುಂಬಿರಲಿದೆ. ಪ್ರೀತಿಯ ಸಂಬಂಧದಲ್ಲಿ ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಪ್ರಯತ್ನಿಸಿ. ಇದಂರಿಂದಾಗಿ ನಿಮ್ಮ ಸಂಬಂಧವು ಬಲಗೊಳ್ಳಲು ಸಾಧ್ಯವಾಗುತ್ತದೆ.
ಈ ಸಮಯದಲ್ಲಿ ವಿದ್ಯಾರ್ಥಿಗಳು ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಪರೀಕ್ಷೆಯ ಮೊದಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗಬಹುದು. ಏಕೆಂದರೆ ಅವರು ತಮ್ಮ ಏಕಾಗ್ರತೆಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಅರೋಗ್ಯ ಜೀವನದ ಬಗ್ಗೆ ಮಾತಾಡಿದರೆ, ನೀವು ನಿಮ್ಮ ಜೀವನ ಶೈಲಿಯಲ್ಲಿ ಸಕ್ರಿಯತೆ ತರಲು ಪ್ರಯತ್ನಿಸಬೇಕು. ಇದಕ್ಕಾಗಿ ದೈಹಿಕ ವ್ಯಾಯಾಮ, ಯೋಗ ಮತ್ತು ಧ್ಯಾನವನ್ನು ಆಶ್ರಯಿಸುವುದು ನಿಮಗೆ ಉತ್ತಮ ಆಯ್ಕೆಯಾಗಿದೆ. ಇಲ್ಲದಿದ್ದರೆ, ಶುಕ್ರನ ಈ ಸ್ಥಾನವು ನಿಮಗೆ ಬೊಜ್ಜು, ಮಧುಮೇಹ ಇತ್ಯಾದಿಗಳಂತಹ ಗಂಭೀರ ಕಾಯಿಲೆಗಳನ್ನು ನೀಡಬಹುದು.
ಪರಿಹಾರ - ಶುಕ್ರ ದೇವರ ಅನುಕೂಲತೆಯನ್ನು ಪಡೆಯಲು ಪ್ರತಿದಿನ ಬೆಳಿಗ್ಗೆ ಶಿವಲಿಂಗದ ಮೇಲೆ ಗುಲಾಬಿ ನೀರನ್ನು ಸಿಂಪಡಿಸಿ.
ಮಿಥುನ ರಾಶಿ
ಮಿಥುನ ರಾಶಿಚಕ್ರದ ಅಧಿಪತಿ ಬುಧ ಗ್ರಹದ ಅಧಿಪತಿ ಶುಕ್ರನ ಸ್ನೇಹಿತ. ಶುಕ್ರ ದೇವ ನಿಮ್ಮ ರಾಶಿಚಕ್ರದ ಐದನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆಗೆ ಪ್ರವೇಶಿಸುತ್ತಾರೆ. ಒಂಬತ್ತನೇ ಮನೆಯಿಂದ ನಮ್ಮ ದೂರಸ್ಥ ಪ್ರಯಾಣ, ಅದೃಷ್ಟ ಹೊಂದಾಣಿಕೆ, ಧಾರ್ಮಿಕ ಕೆಲಸ ಇತ್ಯಾದಿ ಮತ್ತು ಗೌರವವನ್ನು ಪರಿಗಣಿಸಲಾಗುತ್ತದೆ. ಶುಕ್ರ ಸಂಚಾರದ ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಇದರಿಂದಾಗಿ ನೀವು ನಿಮ್ಮ ಪ್ರಯತ್ನಗಳಿಂದಾಗಿ ಹಿರಿಯ ಅಧಿಕಾರಿಗಳ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತೀರಿ.
ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಯಾವುದೇ ಮಹಿಳಾ ಸಹೋದ್ಯೋಗಿಯ ಬೆಂಬಲವು, ಪ್ರತಿಯೊಂದು ಕೆಲಸದಲ್ಲಿ ನಿಮಗೆ ಯಶಸ್ಸು ನೀಡುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ದೀರ್ಘಕಾಲದಿಂದ ಉನ್ನತ ಸ್ಥಾನ ಅಥವಾ ಯಾವುದೇ ವರ್ಗಾವಣೆಯನ್ನು ಬಸುತ್ತಿದ್ದವರು, ಈ ಸಂಚಾರದ ಸಮಯದಲ್ಲಿ ಶುಭ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ. ಇದರೊಂದಿಗೆ ತಮ್ಮ ಮೊದಲನೇ ಉದ್ಯೋಗವನ್ನು ಹುಡುಕುತ್ತಿದ್ದವರು ಈ ಸಮಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.
ವ್ಯಾಪಾರಸ್ಥರು ವಿಶೇಷವಾಗಿ ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವವರಿಗೆ ಈ ಸಮಯವು ಕೆಲವು ಉತ್ತಮ ಪ್ರಯೋಜನಗಳನ್ನು ತರುತ್ತದೆ. ತಮ್ಮ ವ್ಯಾಪಾರವನ್ನು ಮುಂದುವರಿಸಲು ಮತ್ತು ಅದನ್ನು ವಿಸ್ತರಿಸಲು ಯಾವುದೇ ರೀತಿಯ ಪ್ರವಾಸಕ್ಕೆ ಹೋಗುವುದು ಈ ಸಮಯದಲ್ಲಿ ನಿಮಗೆ ಶುಭತೆಯನ್ನು ತರಲಿದೆ.
ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುತ್ತಿದ್ದ ವಿದ್ಯಾರ್ಥಿಗಳು ಈ ಸಂಚಾರದಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ.
ವಿವಾಹಿತ ಜನರಿಗೆ ಸಮಯ ಉತ್ತಮವಾಗಿರುತ್ತದೆ. ಅವರು ತಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಮತ್ತು ಪ್ರೀತಿಯನ್ನು ಪಡೆಯುತ್ತಾರೆ. ಇದಲ್ಲದೆ ಅವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆದು, ನಿಮ್ಮ ಸಂಬಂಧವು ಇನ್ನಷ್ಟು ಬಲಪಡಿಸಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ.
ನೀವು ಒಬ್ಬಂಟಿಯಾಗಿದ್ದರೆ, ನಿಮ್ಮ ಜೀವನದಲ್ಲಿ ಪ್ರೇಮಿಯ ಉಪಸ್ಥಿತಿಯನ್ನು ನೀವು ನಿರೀಕ್ಷಿಸಬಹುದು. ಈ ವ್ಯಕ್ತಿಯು ನಿಮ್ಮ ಹೆಳೆಯ ಪ್ರೇಮಿಯಾಗಿರಬಹುದು, ಅವರು ಒಮ್ಮೆ ನಿಮ್ಮ ಪ್ರೀತಿಯನ್ನು ನಿರ್ಲಕ್ಷಿಸಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಮತ್ತು ಪ್ರೀತಿಯನ್ನು ನಿಮ್ಮ ಪ್ರೇಮಿಯ ಮುಂದೆ ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗುತ್ತದೆ.
ಪರಿಹಾರ - ಶುಕ್ರ ದೇವರ ಅನುಗ್ರಹವನ್ನು ಪಡೆಯಲು ಪ್ರತಿದಿನ ಕಾತ್ಯಾಯನಿ ದೇವಿಯನ್ನು ಆರಾಧಿಸಿ.
ಕರ್ಕ ರಾಶಿ
ಶುಕ್ರ ದೇವ ಕರ್ಕ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತಾರೆ ಎಂಟನೇ ಮನೆಯ ಮೂಲಕ ಇದ್ದಕ್ಕಿದ್ದಂತೆ ಸಂಭವಿಸುವ ಘಟನೆಗಳು ಮತ್ತು ಜೀವನದ ದೊಡ್ಡ ಬದಲಾವಣೆಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಶುಕ್ರ ದೇವ ನಿಮ್ಮ ಎಂಟನೇ ಮನೆಗೆ ಪ್ರವೇಶಿಸಿ ನಿಮ್ಮ ಎರಡನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ.
ಅಂತಹ ಪರಿಸ್ಥಿತಿಯಲ್ಲಿ ನೀವು ಇದ್ದಕ್ಕಿದ್ದಂತೆ ಹಣಕಾಸಿನ ಲಾಭವನ್ನು ಪಡೆಯುತ್ತೀರಿ, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಆದರೆ ಶುಕ್ರ ನಿಮ್ಮ ನಾಲ್ಕನೇ ಮನೆಯ ಅಧಿಪತಿ. ಆದ್ದರಿಂದ ಈ ಸಮಯದಲ್ಲಿ ನೀವು ಸಂತೋಷ ಸಂಪನ್ಮೂಲಗಳ ಮೇಲೆ ನೀವು ಬಹಳಷ್ಟು ಹಣ ಖರ್ಚು ಮಾಡುವುದನ್ನು ಕಾಣಲಾಗುತ್ತದೆ.
ಆದಾಗ್ಯೂ, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ನೀವು ನಿಮ್ಮನ್ನು ಅನೇಕ ವಿಧಗಳಲ್ಲಿ ಸಂತೋಷವಾಗಿರಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಈ ವರ್ಷ ನಿಮಗೆ ಅತ್ಯಂತ ಮುಖ್ಯವಾಗಲಿದೆ. ಆದ್ದರಿಂದ ನೀವು ಆರಂಭದಿಂದಲೇ ಸರಿಯಾದ ದಿಕ್ಕಿನಲ್ಲಿ ಗಮನ ಹರಿಸಬೇಕಾಗುತ್ತದೆ.
ವಿವಾಹಿತ ಸ್ಥಳೀಯರು ಜೀವನ ಸಂಗಾತಿಯ ಸಹಾಯದಿಂದ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಇದರಿಂದಾಗಿ ನೀವು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಿ, ನಿಮ್ಮ ಪ್ರತಿಯೊಂದು ಕನಸು ನನಸಾಗುವುದನ್ನು ನೋಡಲು ಸಾಧ್ಯವಾಗುತ್ತದೆ.
ಸಂಶೋಧನೆ ಅಥವಾ ಉನ್ನತ ಅಧ್ಯಯನ ವನ್ನು ಬಯಸುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಹೆಚ್ಚು ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.
ಆದಾಗ್ಯೂ, ಅರೋಗ್ಯ ಜೀವನದಲ್ಲಿ ಕಣ್ಣುಗಳು ಅಥವಾ ಹೊಟ್ಟೆಯ ಕೆಳಗಿನ ಭಾಗಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ನಿರ್ಧಿಷ್ಟವಾಗಿ ಹೇಳುವುದಾದರೆ, ಮೂತ್ರದ ಸೋಂಕಿಗೆ ಸಂಬಂಧಿಸಿದ ಅಸ್ವಸ್ಥತೆಯ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸಾಧ್ಯವಾದಷ್ಟು ನೀರು ಕುಡಿಯಿರಿ, ಇದರೊಂದಿಗೆ ಹೆಚ್ಚು ಮಸಾಲೆಯುಕ್ತ ಅಥವಾ ಹುರಿದ ಆಹಾರ ಸೇವಿಸುವುದನ್ನು ತಪ್ಪಿಸಿ. ಕಣ್ಣುಗಳಿಗೆ ಸರಿಯಾದ ನಿದ್ರೆಯನ್ನು ಪಡೆಯಿರಿ ಮತ್ತು ಮೊಬೈಲ್ ಅಥವಾ ಟಿವಿಯಲ್ಲಿ ಹೆಚ್ಚು ಸಮಯ ಕಳೆಯಬೇಡಿ.
ಪರಿಹಾರ - ಶುಕ್ರವಾರ ತಾಯಿ ಲಕ್ಷ್ಮಿಗೆ ಅಲಂಕಾರದ ಪದಾರ್ಥಗಳನ್ನು ಅರ್ಪಿಸುವುದು ಸೂಕ್ತವಾಗಿದೆ.
ಸಿಂಹ ರಾಶಿ
ಶುಕ್ರ ದೇವ ಸಿಂಹ ರಾಶಿಚಕ್ರದ ಸ್ಥಳೀಯರ ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಕುಂಭ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಪ್ರವೇಶಿಸುತ್ತಾರೆ. ಏಳನೇ ಮನೆಯಲ್ಲಿ ಶುಕ್ರ ಸಂಚಾರದ ಪರಿಣಾಮದಿಂದಾಗಿ ಅವಿವಾಹಿತ ಜನರು ಅತ್ಯಂತ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ಈ ಸಮಯದಲ್ಲಿ ಮದುವೆಯಾಗಲು ಅವರಿಗೆ ಅವಕಾಶ ಸಿಗುತ್ತದೆ. ಮತ್ತೊಂದೆಡೆ ವೈವಾಹಿಕ ಪ್ರೀತಿ, ಸಂತೋಷ ಮತ್ತು ಉತ್ಸಾಹವಿರುತ್ತದೆ. ಇದಲ್ಲದೆ ಈ ರಾಶಿಚಕ್ರದ ಪ್ರೇಮಿಗಳು ಸಹ ಶುಕ್ರ ಸಂಚಾರದ ಸಮಯದಲ್ಲಿ ತಮ್ಮ ಸಂಬಂಧವನ್ನು ಮುಂದುವರಿಸುವ ಬಗ್ಗೆ ಪರಿಗಣಿಸಬಹುದು.
ಆದಾಗ್ಯೂ, ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಬಗ್ಗೆ ಅತೃಪ್ತರಾಗಿ ಕಾಣುವಿರಿ. ಪರಿಣಾಮವಾಗಿ ನಿಮ್ಮ ಕಾರ್ಯ ಸಾಮರ್ಥ್ಯದಲ್ಲಿ ಕೊರತೆ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನೀವು ನಿಮ್ಮ ಮೇಲಧಿಕಾರಿಗಳು ಮತ್ತು ನಿಮ್ಮ ಅಧೀನ ಕೆಲಸ ಮಾಡುತ್ತಿರುವ ಸಿಬ್ಬಂದಿಗಳೊಂದಿಗಿನ ತಮ್ಮ ಸಂಬಂಧವನ್ನು ಸುಧಾರಿಸಲು ನಿಮಗೆ ಕಷ್ಟವಾಗುತ್ತದೆ ಮತ್ತು ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಕೆಲಸದ ಸ್ಥಳದ ಮೇಲೆ ಸ್ಪಷ್ಟವಾಗಿ ಕಂಡುಬರುತ್ತದೆ.
ನೀವು ವ್ಯಾಪಾರದಲ್ಲಿ ತೊಡಗಿದ್ದರೆ ಅಥವಾ ತಮ್ಮ ತಂದೆಯೊಂದಿಗೆ ವ್ಯಾಪಾರ ಮಾಡುತ್ತಿದ್ದರೆ, ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಪರಂಪರೆಯನ್ನು ಹೆಚ್ಚಿಸಲು ಅನೇಕ ಶುಭ ಅವಕಾಶಗಳನ್ನು ಪಡೆಯುತ್ತೀರಿ. ಆದರೆ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವವರು ತಮ್ಮ ಪಾಲುದಾರರಿಂದ ಸ್ವಲ್ಪ ಜಾಗರೂಕರಾಗಿರಬೇಕು. ಇದರೊಂದಿಗೆ ಈ ಸಮಯದಲ್ಲಿ ನೀವು ಅನಗತ್ಯ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಲಾಗಿದೆ.
ಸಿಂಹ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರುತ್ತದೆ. ಏಕೆಂದರೆ ಅವರು ತಮ್ಮ ಶಿಕ್ಷಣದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಹಾಯ ಪಡೆಯುತ್ತಾರೆ. ಈ ರಾಶಿಚಕ್ರದ ಸ್ಥಳೀಯರ ಅರೋಗ್ಯ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಹಾರ್ಮೋನ್, ಚರ್ಮ ಅಥವಾ ಬೆನ್ನಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿಮ್ಮನ್ನು ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಪರಿಹಾರ - ನೀವು ಶುಕ್ರ ಹೋರಾ ಸಮಯದಲ್ಲಿ, ಶುಕ್ರ ಮಂತ್ರ “ಓಂ ಶುಂ ಶುಕ್ರಾಯ ನಮಃ" ವನ್ನು ನಿಯಮಿತವಾಗಿ ಪಠಿಸಬೇಕು.
ಕನ್ಯಾ ರಾಶಿ
ಶುಕ್ರ ದೇವ ಕನ್ಯಾ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಕುಂಭ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ನಿಮ್ಮ ಆರನೇ ಮನೆಗೆ ಪ್ರವೇಶಿಸುತ್ತಾರೆ. ಆರನೇ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ ಕನ್ಯಾ ರಾಶಿಚಕ್ರದ ಸ್ಥಳೀಯರು ಆರಂಭದಲ್ಲಿ ಯಾವುದೇ ವಿಷಯದ ಬಗ್ಗೆ ತಮ್ಮ ವಿವಾದ ಅತಃವ ಜಗಳದ ಸಾಧ್ಯತೆ ಇದೆ. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ತಂದೆ ತಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿ ಪಡೆಯಲು ಸಾಧ್ಯವಾಗುತ್ತದೆ, ಇದರಿಂದಾಗಿ ನೀವು ಸಂತೋಷ ಪಡುವಿರಿ. ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಪ್ರೀತಿಯ ಜೀವನಕ್ಕಾಗಿ ಈ ಸಮಯವು ನಿಮ್ಮನ್ನು ಪೂರ್ಣತಾವಾದಿಯನ್ನಾಗಿ ಮಾಡಬಹುದು. ನಿಮ್ಮ ಸಂಗಾತಿಯಿಂದ ನೀವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತೀರಿ. ಪರಿಣಾಮವಾಗಿ ಅದು ನಿಮ್ಮ ಸಂಬಂಧವನ್ನು ಅಡ್ಡಿಪಡಿಸುತ್ತದೆ.
ಕೆಲಸದ ಕ್ಷೇತ್ರದಲ್ಲಿ ವಿಶೇಷವಾಗಿ, ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಈ ಸಮಯದಲ್ಲಿ ಸ್ವಲ್ಪ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳ ಮೇಲೆ ಕೋಪಗೊಳ್ಳುವುದನ್ನು ಕಾಣಲಾಗುತ್ತದೆ. ಆದ್ದರಿಂದ ನಿಮ್ಮ ಶಾಂತವಾಗಿರಿಸಿ, ನಿಮ್ಮ ಕೆಲಸದಲ್ಲಿ ಮಾತ್ರ ಕೇಂದ್ರೀಕರಿಸಿ ಎಂದು ನಿಯಂಗೆ ಸಲಹೆ ನೀಡಲಾಗಿದೆ.
ಆರ್ಥಿಕ ಜೀವನಕ್ಕೆ ಈ ಸಮಯವು ಯಾವುದೇ ರೀತಿಯ ಹೂಡಿಕೆ ಅಥವಾ ಜಮೀನು ಖರೀದಿ ಇತ್ಯಾದಿಗಳಿಗೆ ಉತ್ತಮವಾಗಿ ಕಂಡುಬರುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಖಾರಹು ಮತ್ತು ಆದಾಯದ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ.
ಆರೋಗ್ಯದ ದೃಷ್ಟಿಯಿಂದ, ನಿಮ್ಮ ರೋಗನಿರೋಧಕ ಸಾಮರ್ಥ್ಯವು ಪ್ರಭಾವಿತವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೆಟ್ಟ ಆಹಾರ ಪದ್ಧತಿಯನ್ನು ನಿಯಂತ್ರಿಸುತ್ತಾ, ಸರಿಯಾದ ಆಹಾರವನ್ನು ತೆಗೆದುಕೊಳ್ಳಬೇಕು.
ಪರಿಹಾರ - ವಿಶೇಷ ಲಾಭವನ್ನು ಪಡೆಯಲು ಶುಕ್ರವಾರ ಕುತ್ತಿಗೆಯಲ್ಲಿ ಸ್ಪಟಿಕ ಹಾರವನ್ನು ಧರಿಸಬೇಕು.
ತುಲಾ ರಾಶಿ
ಶುಕ್ರ ದೇವ ತುಲಾ ರಾಶಿಯ ಅಧಿಪತಿ, ಆದ್ದರಿಂದ ಶುಕ್ರ ಸಂಚಾರವು ನಿಮಗೆ ಸಾಕಷ್ಟು ಮುಖ್ಯವಾಗಿರುತ್ತದೆ. ಇದು ನಿಮ್ಮ ಎಂಟನೇ ಮನೆಯ ಅಧಿಪತಿ ಕೂಡ. ಸಂಚಾರದ ಈ ಸಮಯದಲ್ಲಿ ನಿಮ್ಮ ಐದನೇ ಮನೆಗೆ ಪ್ರವೇಶಿಸುತ್ತದೆ. ಶುಕ್ರ ಸಂಚಾರದ ಪರಿಣಾಮವಾಗಿ ದಾಂಪತ್ಯ ಸ್ಥಳೀಯರು ತಮ್ಮ ಸಂಗಾತಿ ಮತ್ತು ಮಕ್ಕಳೊಂದಿಗಿನ ಸಂಬಂಧವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ.
ತುಲಾ ರಾಶಿಚಕ್ರದ ಸ್ಥಳೀಯರು ಕೆಲಸದ ಸ್ಥಳದಲ್ಲಿ ಉತ್ತಮ ಅವಕಾಶಗಳು ಅಥವಾ ಹೊಸ ಜವಾಬ್ದಾರಿಗಳನ್ನು ಪಡೆಯುವ ಸಾಧ್ಯತೆ ಇದೆ. ಇದು ನಿಮ್ಮ ಕಾರ್ಯ ಕೌಶಲ್ಯವನ್ನು ಸುಧಾರಿಸುತ್ತದೆ. ಇದರೊಂದಿಗೆ ಕೆಲಸದ ಸ್ಥಳದಲ್ಲಿ ಅವಶ್ಯಕ ಅನುಭಗಳನ್ನು ಗಳಿಸುವಲ್ಲಿ ಸಹ ನೀವು ಸಾಮರ್ಥ್ಯರಗುವಿರಿ.
ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಹಣಕಾಸು ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಇದರೊಂದಿಗೆ ಕಮಿಷನ್, ಟ್ರೇಡಿಂಗ್ ಮತ್ತು ಶೇರ್ ಮಾರ್ಕೆಟ್ ಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ಸಂಚಾರದ ಈ ಸಮಯದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ಸಮಯವು ಹೊಸ ಸಂಬಂಧವನ್ನು ಹೊಂದಲು ಶುಭವಾಗಿರಲಿದೆ. ಮತ್ತೊಂದಡೆ, ಪ್ರೇಮಿಗಳು ತಮ್ಮ ಪ್ರೀತಿಪಾತ್ರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ಪಡೆಯುತ್ತಾರೆ. ಇದರೊಂದಿಗೆ ತಮ್ಮ ಪ್ರೀತಿಪಾತ್ರರ ಮೂಲಕ ಪ್ರಶಂಸೆ ಮತ್ತು ಸಹಕಾರವನ್ನು ಪಡೆಯುತ್ತೀರಿ, ಇದರಿಂದಾಗಿ ಅವರೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಹೆಚ್ಚು ಬಲಗೊಳ್ಳಲು ಸಾಧ್ಯವಾಗುತ್ತದೆ. ವಿವಾಹಿತರು ಶುಕ್ರ ಸಂಚಾರದ ಸಮಯದಲ್ಲಿ ಮಕ್ಕಳನ್ನು ಪಡೆಯುವ ಸಾಧ್ಯತೆ ಇದೆ.
ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಹೆಚ್ಚು ಕೇಂದ್ರೀಕರಿಸುವುದನ್ನು ಕಾಣಲಾಗುತ್ತದೆ. ಇದರಿಂದಾಗಿ ಅವರು ತಮ್ಮ ಶಿಕ್ಷಣದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಹಾಯ ಸಿಗುತ್ತದೆ. ಇದಲ್ಲದೆ ಪ್ರತಿಕೋದ್ಯಮ, ಕಲೆ, ಮಾಧ್ಯಮ, ಲೇಖನ ಇತ್ಯಾದಿ ಸೃಜನಶೀಲ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಈ ಸಮಯದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ಪಡೆಯುತ್ತಾರೆ.
ಪರಿಹಾರ - ಈ ಸಂಚಾರದ ಸಮಯದಲ್ಲಿ ಶುಕ್ರವಾರ ಬಿಳಿ ಬಟ್ಟೆಗಳನ್ನು ಧರಿಸುವುದು ನಿಮಗೆ ಶುಭವಾಗಿರುತ್ತದೆ.
ವೃಶ್ಚಿಕ ರಾಶಿ
ಶುಕ್ರ ದೇವ ವೃಶ್ಚಿಕ ರಾಶಿಯ ಏಳನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಈ ಸಮಯದಲ್ಲಿ ಕುಟುಂಬದ ಪರಿಸರವು ಆನಂದಮಯ, ಸಾಮರಸ್ಯ, ಸಂತೋಷ ಮತ್ತು ತೃಪ್ತಿಯಾಗಿ ಕಂಡುಬರುತ್ತದೆ. ತಾಯಿಯ ಆರೋಗ್ಯವು ಸುಧಾರಿಸುತ್ತದೆ, ಇದರೊಂದಿಗೆ ಅವರೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಮನೆಯ ಅಲಂಕಾರದಲ್ಲಿ ನೀವು ಹೆಚ್ಚು ಆಸಕ್ತಿ ಹೊಂದುವಿರಿ, ಇದಕ್ಕಾಗಿ ನೀವು ನಿಮ್ಮ ಹಣವನ್ನು ಸಹ ಖರ್ಚು ಮಾಡಬೇಕಾಗುತ್ತದೆ.
ನಿಮ್ಮ ಜೀವನ ಸಂಗಾತಿ ಪ್ರಗತಿ ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಹೊಸ ವಾಹನ, ಯಾವುದೇ ಇತರ ಗ್ಯಾಡ್ಜೆಟ್ ಅಥವಾ ಜಮೀನು ಖರೀದಿಸಲು ಸಹ ನಿಮ್ಮ ಹಣವನ್ನು ಖರ್ಚು ಮಾಡಬಹುದು. ಆದಾಗ್ಯೂ, ಈ ಸಮಯದಲ್ಲಿ ಯಾವುದೇ ರೀತಿಯ ಅನಗತ್ಯ ವೆಚ್ಚಗಳನ್ನು ತಪ್ಪಿಸಲು ಸೂಚಿಸಲಾಗಿದೆ.
ಪ್ರೇಮಿಗಳು ಸಹ ತಮ್ಮ ಸಂಬಂಧದಲ್ಲಿ ಶಕ್ತಿ ಮತ್ತು ನಂಬಿಕೆಯನ್ನು ಅನುಭವಿಸುತ್ತಾರೆ. ಕೆಲಸದ ಸ್ಥಳದಲ್ಲಿ ಅನುಕೂಲತೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ಸಾಮಾಜಿಕ ಚಿತ್ರವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ವ್ಯಾಪಾರಸ್ಥರಿಗೆ ಈ ಸಂಚಾರವು ಪ್ರಯೋಜನಕಾರಿಯಾಗಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ವ್ಯಾಪರದಲ್ಲಿ ವಿಸ್ತರಣೆ ಮತ್ತು ಯಶಸ್ಸು ಪಡೆಯಲು ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ
ಉನ್ನತ ಶಿಕ್ಷಣದ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉತ್ತಮ ಪ್ರದರ್ಶನ ಮಾಡಲು ಸಹಾಯ ಸಿಗುತ್ತದೆ.
ಪರಿಹಾರ - ಶುಕ್ರ ಸಂಚಾರದ ವಿಶೇಷ ಲಾಭವನ್ನು ಪಡೆಯಲು ಭಗವಂತ ಪರಶುರಾಮರ ಅವತಾರದ ಪೌರಾಣಿಕ ಕಥೆಯನ್ನು ಓದಿ ಅಥವಾ ಕೇಳಿ.
ಧನು ರಾಶಿ
ಶುಕ್ರ ದೇವ ಧನು ರಾಶಿಚಕ್ರದ ಸ್ಥಳೀಯರ ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಾಮಯದಲ್ಲಿ ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ಧನು ರಾಶಿಚಕ್ರದ ಸ್ಥಳೀಯರು ಶುಕ್ರ ಸಂಚಾರದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
ಈ ಸಂಚಾರವು ಅಲ್ಪ ದೂರದ ಪ್ರಯಾಣಗಳಿಗೆ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಆರ್ಥಿಕ ಪ್ರಯೋಜನೆ ಮತ್ತು ಸಮೃದ್ಧಿಯನ್ನು ಪಡೆಯುವ ಸಾಧ್ಯತೆ ಇದೆ.ಕುಟುಂಬ ಜೀವನದಲ್ಲಿ ಕಿರಿಯ ಸಹೋದರಿ ಸಹೋದರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕೆಲವು ಸ್ಥಳೀಯರು ಸಾಮಾಜಿಕ ಮಾಧ್ಯಮ, ಇಂಟರ್ನೆಟ್ ಮತ್ತು ನೆಟ್ವರ್ಕಿಂಗ್ ಚಾನೆಲ್ ಗಳ ಮೂಲಕ ಉತ್ತಮ ಅವಕಾಶಗಳನ್ನು ಪಡೆಯಲು ಸಾಮರ್ಥ್ಯರಾಗಿರುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯವನ್ನು ಕಳೆದು ಸಂತೋಷವನ್ನು ಅನುಭವಿಸುತ್ತೀರಿ.
ಕೆಲಸದ ಸ್ಥಳದಲ್ಲೂ ಸಮಯ ಅನುಕೂಲಕರವಾಗಿರುತ್ತದೆ. ವಿಶೇಷವಾಗಿ ವಿದೇಶಿ ಸಂಸ್ಥೆ ಅಥವಾ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರು ತಮ್ಮ ಉದ್ಯೋಗದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಸಹ ಸಾಧ್ಯವಾಗುತ್ತದೆ.
ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ನೀವು ಪ್ರೀತಿ ಮತ್ತು ಪ್ರಣಯವನ್ನು ಅನುಭವಿಸುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಅಥವಾ ಯಾವುದೇ ಇತರ ಬೆಲೆಬಾಳುವ ವಸ್ತುವನ್ನು ಉಡುಗೊರೆಯಾಗಿ ನೀಡಬಹುದು. ಮತ್ತೊಂದೆಡೆ, ವಿವಾಹಿತ ಜನರು ಸಹ ತಮ್ಮ ಸಂಬಂಧದಲ್ಲಿ ಸಂತೋಷವನ್ನು ಅನುಭವಿಸುತ್ತಾರೆ.
ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಶುಕ್ರ ದೇವ ಉತ್ತಮ ಯಶಸ್ಸು ನೀಡಲಿದ್ದಾರೆ.
ಪರಿಹಾರ - ಶುಕ್ರನ ಹಾನಿಕಾರಕ ಪರಿಣಾಮವನ್ನು ತಪ್ಪಿಸಲು ಶುಕ್ರವಾರ ಸಕ್ಕರೆ ದಾನ ಮಾಡಿ.
ಮಕರ ರಾಶಿ
ಶುಕ್ರ ದೇವ ಮಕರ ರಾಶಿಯ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ನಿಮ್ಮ ಆದಾಯವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಉತ್ತಮ ಉದ್ಯೋಗವನ್ನು ಪಡೆಯುವ ಅವಕಾಶವನ್ನು ಪಡೆಯುತ್ತೀರಿ. ಬಡ್ತಿ ಅಥವಾ ಆದಾಯದ ಹೆಚ್ಚಳಕ್ಕಾಗಿ ಕಾಯುತಿದ್ದ ಜನರು ಸಂಚಾರದ ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.
ವ್ಯಾಪಾರಸ್ಥರು ಸಹ ತಮ್ಮ ವ್ಯಾಪಾರದಲ್ಲಿ ವಿಸ್ತರಣೆ ತರಲು ಅವಕಾಶವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಐದನೇ ಮನೆಯ ಅಧಿಪತಿ ತಾನಾಗಿ ತಾನೇ ಹತ್ತನೇ ಮನೆಯಲ್ಲಿ ಕುಳಿತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ ಯೋಜನೆಯ ಪ್ರಕಾರ ಕೆಲಸ ಮಾಡಲು ಸಹಾಯ ಸಿಗುತ್ತದೆ. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಸಹ ನಿಮಗೆ ಸಾಧ್ಯವಾಗುತ್ತದೆ.
ಪ್ರೀತಿಯ ಸಂಬಂಧದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಅವಕಾಶವನ್ನು ಪಡೆಯುತ್ತೀರಿ. ಇದಲ್ಲದೆ ದೀರ್ಘಕಾಲದಿಂದ ತಮ್ಮ ಕುಟುಂಬವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದ್ದವರು ಈ ಸಂಚಾರದ ಸಮಯದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.
ನಿಮ್ಮ ಪ್ರೀತಿಯ ಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ನಿಮ್ಮ ಪ್ರೇಮಿಗಾಗಿ ಯಾವುದೇ ದುಬಾರಿ ವಸ್ತುವನ್ನು ಖರೀದಿಸಬಹುದು. ಆದಾಗ್ಯೂ, ಈ ಸಮಯದಲ್ಲಿ ನೀವು ನಿಮ್ಮ ಐಷಾರಾಮಿ ಮತ್ತು ರುಚಿಕರ ಆಹಾರಕ್ಕಾಗಿ ನಿಮ್ಮ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ಅಂತಹ ಪರಿಸ್ಥಿತಿಯಲ್ಲಿ ನೀವು ಎಚ್ಚರದಿಂದಿರುವ ಅಗತ್ಯವಿದೆ. ಇಲ್ಲದಿದ್ದರೆ ಅನಗತ್ಯ ವೆಚ್ಚಗಳು ಹೆಚ್ಚಾಗುವುದರಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ವಿದ್ಯಾರ್ಥಿಗಳು ತಮ್ಮ ಕುಟುಂಬದ ಸಂಪೂರ್ಣ ಬೆಂಬಲದಿಂದಾಗಿ ತಮ್ಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ.
ಪರಿಹಾರ - ನೀವು ಶುಕ್ರ ದೇವರ ಅನುಕೂಲತೆಯನ್ನು ಪಡೆಯಲು ಉತ್ತಮ ಗುಣಮಟ್ಟದ ಪನ್ನ ರತ್ನವನ್ನು ಬೆಳ್ಳಿ ಉಂಗುರದಲ್ಲಿ ತಯಾರಿಸಿ ಶುಕ್ರವಾರ ಉಂಗುರದ ಬೆರಳಿನಲ್ಲಿ ಧರಿಸಬೇಕು.
ಕುಂಭ ರಾಶಿ
ಶುಕ್ರ ದೇವ ಕುಂಭ ರಾಶಿಯ ನಾಲ್ಕನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಮೊದಲನೇ ಮನೆಗೆ ಪ್ರವೇಶಿಸುತ್ತಾರೆ. ನಿಮ್ಮ ರಾಶಿಯಲ್ಲಿ ಶುಕ್ರ ಸಂಚಾರವು ನಿಮಗೆ ಅನೇಕ ಬಲಾವಣೆಗಳನ್ನು ತರುತ್ತದೆ ಮತ್ತು ಈ ಬದಲಾವಣೆಗಳು ನಿಮಗೆ ಉತ್ತಮವೆಂದು ಸಾಬೀತುಪಡಿಸುತ್ತವೆ.
ಕೆಲಸದ ಸ್ಥಳದಲ್ಲಿ ನಿಮ್ಮ ನಡವಳಿಕೆಯಲ್ಲಿ ಸಹಕಾರದ ಭಾವನೆಯು ಪ್ರಗತಿಯನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ನೀವು ನಿಮ್ಮ ಮೇಲಧಿಕಾರಿಗಳ ಸಂಪೂರ್ಣ ಸಹಕಾರ, ಪ್ರಶಂಸೆ ಮತ್ತು ಬೆಂಬಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಆರ್ಥಿಕ ಜೀವನದಲ್ಲಿ ನಿಮ್ಮ ಆದಾಯ ಮತ್ತು ಹಣದಲ್ಲಿ ಹೆಚ್ಚಳವಾಗುತ್ತದೆ. ಇದರೊಂದಿಗೆ ಕುಂಭ ರಾಶಿಚಕ್ರದ ಸ್ಥಳೀಯರು ತಮ್ಮ ತಾಯಿಯ ಮೂಲಕ ಲಾಭ ಮತ್ತು ಪ್ರಯೋಜನವನ್ನು ಪಡೆಯುವ ಸಾಧ್ಯತೆ ಇದೆ.
ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮೂಲಕ ಮಾಡಲಾಗುವ ಪ್ರತಿಯೊಂದು ಹೂಡಿಕೆಯು, ದೀರ್ಘಕಾಲದ ವರೆಗೆ ನಿಮಗೆ ಉತ್ತಮ ಲಾಭವನ್ನು ಒದಗಿಸುತ್ತದೆ.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈಸಂಚಾರದ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿ ಇನ್ನಷ್ಟು ನಿಕಟ ಬರುವಿರಿ. ಮತ್ತೊಂದೆಡೆ ಇನ್ನು ಒಬ್ಬಂಟಿಯಾಗಿರುವ ಜನರು ವಿರುದ್ಧ ಲಿಂಗದ ಜನರನ್ನು ತಮ್ಮ ಕಡೆಗೆ ಆಕರ್ಷಿಸುವ ಕೆಲಸ ಮಾಡುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಜೀವನದಲ್ಲಿ ನಿಮ್ಮ ಆಸೆಗಳನ್ನು ಈಡೇರಿಸಲು ನಿಮ್ಮನ್ನು ನೀವು ತಡೆಯಲು ನಿಮಗೇ ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಿಮ್ಮ ಐಷಾರಾಮಿ ಮತ್ತು ಸಂತೋಷ ಸಂಪನ್ಮೂಲಗಳು ಹೆಚ್ಚಾಗುತ್ತವೆ.
ಪರಿಹಾರ - ಶುಕ್ರ ದೇವರ ವಿಶೇಷ ಅನುಗ್ರಹವನ್ನು ಪಡೆಯಲು ನೀವು ಹಸುವಿನ ಸೇವೆ ಮಾಡಬೇಕು ಮತ್ತು ಅದಕ್ಕೆ ಮೇವು ತಿನ್ನಿಸಬೇಕು.
ಮೀನಾ ರಾಶಿ
ಶುಕ್ರ ದೇವ ಮೀನಾ ರಾಶಿಯ ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ನೀವು ನಿಮ್ಮ ವಿಶ್ರಾಂತಿ ಮತ್ತು ಸಂತೋಷ ಸಂಪನ್ಮೂಲಗಳನ್ನು ಹೆಚ್ಚಿಸಿ, ಅನಗತ್ಯ ಖರೀದಿಯಲ್ಲಿ ಹೆಚ್ಚು ಖರ್ಚು ಮಾಡುವುದನ್ನು ಕಾಣಲಾಗುತ್ತದೆ.
ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರು ನಿಮ್ಮಿಂದ ಹಣಕಾಸಿನ ನೆರವು ನಿರೀಕ್ಷಿಸುತ್ತಾರೆ, ಪರಿಣಾಮವಾಗಿ ನಿಮ್ಮ ಮೇಲೆ ಆರ್ಥಿಕ ಹೊರೆ ಹೆಚ್ಚಾಗಬಹುದು. ಈ ಸಮಯದಲ್ಲಿ ಸಹೋದರ ಸಹೋದರಿಯರು ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗಲು ಅವಕಾಶವನ್ನು ಪಡೆಯುತ್ತಾರೆ.
ಅರೋಗ್ಯ ಜೀವನಕ್ಕೂ ಈ ಸಮಯವೂ ಸ್ವಲ್ಪ ಪ್ರತಿಕೂಲವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ನಿಮ್ಮ ದಿನಚರಿಯನ್ನು ಸುಧಾರಿಸಬೇಕು.
ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ನಿಮ್ಮ ತಂದೆ ಅಥವಾ ತಂದೆಯಂತಹ ವ್ಯಕ್ತಿಯೊಂದಿಗೆ ಸಮಾಲೋಚಿಸಿ. ಇದಲ್ಲದೆ ಮಹಿಳೆಯರೊಂದಿಗೆ ಉತ್ತಮವಾಗಿ ವರ್ತಿಸಿ ಮತ್ತು ಅವರಿಂದ ನೈತಿಕ ದೂರವನ್ನು ಕಾಪಾಡಿಕೊಳ್ಳಿ. ಸಂಚಾರದ ಸಮಯದಲ್ಲಿ ವಿವಾಹಿತ ಜನರು ಸ್ವಲ್ಪ ಜಾಗರೂಕರಾಗಿರಲು ಸೂಚಿಸಲಾಗಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಇನ್ನೂ ಒಬ್ಬಂಟಿಯಾಗಿರುವವರು ಈ ಸಮಯದಲ್ಲಿ ತಮ್ಮ ಭಾವನೆಗಳನ್ನು ತಮ್ಮ ಪ್ರೇಮಿಯ ಮುಂದೆ ವ್ಯಕ್ತಪಡಿಸುವಲ್ಲಿ ಸ್ವಲ್ಪ ಅಡಚಣೆ ಉಂಟಾಗಬಹುದು. ಇದರ ಪರಿಣಾಮವಾಗಿ ನೀವು ಏಕಾಂಗಿ ಮತ್ತು ನಿರಾಶೆಯನ್ನು ಅನುಭವಿಸುವಿರಿ.
ಪರಿಹಾರ - ಶುಕ್ರ ದೇವರ ವಿಶೇಷ ಲಾಭವನ್ನು ಪಡೆಯಲು ಶುಕ್ರವಾರ ಮತ್ತು ಸೋಮವಾರ ಹಾಲಿನ ದಾನ ಮಾಡಿ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025