ಮಕರ ರಾಶಿಯಲ್ಲಿ ಶುಕ್ರ ಸಂಚಾರ (28th January 2021)
ವೈದಿಕ ಜ್ಯೋತಿಷ್ಯದಲ್ಲಿ ಶುಕ್ರ ಗ್ರಹವನ್ನು ಕಲೆ, ಸಂತೋಷ ಸಂಪನ್ಮೂಲಗಳು, ಸೌಂದರ್ಯ, ಪ್ರಣಯ, ಐಷಾರಾಮಿ, ಇತ್ಯಾದಿಗಳ ಅಂಶವೆಂದು ಪರಿಗಳಿಸಲಾಗಿದೆ. ಈ ಶುಭ ಗ್ರಹವು 28 ಜನವರಿ 2021 ರಂದು, ಗುರುವಾರ ಬೆಳಿಗ್ಗೆ 03 ಗಂಟೆ 18 ನಿಮಿಷಕ್ಕೆ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತದೆ. ಇಲ್ಲಿ ಶುಕ್ರ, ಬುಧ, ಗುರು ಮತ್ತು ಶನಿಯೊಂದಿಗೆ ಸಂಯೋಜಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಕರ ರಾಶಿಯಲ್ಲಿ ಶುಕ್ರನ ಸಂಚಾರದಿಂದಾಗಿ ಎಲ್ಲಾ ರಾಶಿಗಳ ಮೇಲೆ ಏನಾದರು ಒಂದು ಬದಲಾವಣೆಯನ್ನು ಕಾಣಲಾಗುತ್ತದೆ.
ವರ್ಷ 2021 ರ ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ - ವಾರ್ಷಿಕ ರಾಶಿ ಭವಿಷ್ಯ 2021
ನಡೆಯಿರಿ, ಈ ಸಂಚಾರವು ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
ಮೇಷ ರಾಶಿ
ಶುಕ್ರ ಗ್ರಹವು ಮೇಷ ರಾಶಿಚಕ್ರದ ಎರಡನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಹತ್ತನೇ ಮನೆಗೆ ಕುಳಿತುಕೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಈ ಮನೆಯನ್ನು ಕರ್ಮದ ಮನೆಯೆಂದು ಹೇಳಲಾಗುತ್ತದೆ. ಈ ಮನೆಯಲ್ಲಿ ಶುಕ್ರನ ಸ್ಥಾನವು, ಕೆಲಸದ ಸ್ಥಳದಲ್ಲಿ ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.
ಶುಕ್ರ ಗ್ರಹವು ಹತ್ತನೇ ಮನೆಯಲ್ಲಿರುತ್ತದೆ, ಇದನ್ನು ಶನಿಯ ಮನೆಯೆಂದು ಸಹ ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಕೆಲಸಗಳಿಂದ ಸ್ವಲ್ಪ ತೃಪ್ತರಾಗಿರಬಹುದು. ಈ ಸಮಯದಲ್ಲಿ ನೀವು ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ನಿಮಗೆ ಸ್ವಲ್ಪ ಅನಾನುಕೂಲವನ್ನು ಉಂಟುಮಾಡಬಹುದು. ಇದು ನಿಮ್ಮ ಮಾನಸಿಕ ಒತ್ತಡ ಮತ್ತು ಅಸಮಾಧಾನವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ಅಥವಾ ನಿಮ್ಮಅಧೀನ ಕೆಲಸ ಮಾಡುತ್ತಿರುವ ಜನರೊಂದಿಗೆ ವಾದದ ಸಾಧ್ಯತೆ ಇದೆ. ಪರಿಣಾಮವಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ. ಅಂತಹ ಸನ್ನಿವೇಶದಲ್ಲಿ ನೀವು ಶಾಂತಿ ಮತ್ತು ಧೈರ್ಯವನ್ನು ಪರಿಚಯಿಸುತ್ತ, ಪ್ರತಿಕೂಲತೆಯು ಕೊನೆಗೊಳ್ಳುವ ವರೆಗೆ ಕಾಯಬೇಕೆಂದು ಸೂಚಿಸಲಾಗಿದೆ.
ಮೇಷ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಏಳನೇ ಮನೆಯ ಮಾಲೀಕ, ಆದರೆ ಈ ಸಮಯದಲ್ಲಿ ನಿಮ್ಮ ಏಳನೇ ಮನೆ ಮತ್ತು ಶುಕ್ರ ಗ್ರಹ ಎರಡೂ ಶನಿಯಿಂದ ಬಳಲುತ್ತವೆ. ಈ ಕಾರಣದಿಂದಾಗಿ ನಿಮ್ಮಲ್ಲಿ ನಂಬಿಕೆ ಮತ್ತು ಸುರಕ್ಷತೆಯ ಕೊರತೆಯು, ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮ್ಮ ಪ್ರೀತಿಯ ಸಂಬಂಧದಲ್ಲೂ ಪ್ರತ್ಯೇಕತೆಯ ಸಾಧ್ಯತೆ ಇದೆ. ನೀವು ನಿಮ್ಮ ಸಂಗಾತಿಯಿಂದ ನಿರಂತರವಾಗಿ ಹೊಸತನ ಮತ್ತು ವಿಪರೀತ ಆಸೆಗಳನ್ನು ನಿರೀಕ್ಷಿಸುತ್ತೀರಿ. ಈ ಕಾರಣದಿಂದಾಗಿ ನಿಮ್ಮಿಬ್ಬರ ಸಂಬಂಧದಲ್ಲಿ ಕೆಲವು ಭಿನ್ನಾಭಿಪ್ರಾಯಗಳ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಸಂಬಂಧದಲ್ಲಿ ಬರುತ್ತಿರುವ ವಿವಾದವನ್ನು ಪರಿಹರಿಸಲು ಪ್ರಯತ್ನಿಸಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕೆಳೆಯಲು ಪ್ರಯತ್ನಿಸಿ. ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು.
ಪರಿಹಾರ - ಶುಕ್ರ ಹೋರಾ ಸಮಯದಲ್ಲಿ ಶುಕ್ರ ಬೀಜ ಮಂತ್ರವನ್ನು ಜಪಿಸಿ.
ವೃಷಭ ರಾಶಿ
ಶುಕ್ರ ಗ್ರಹವು ತನ್ನದೇ ರಾಶಿ ಅಂದರೆ ವೃಷಭ ರಾಶಿಯ ಲಗ್ನದ ಮನೆಯ ಅಧಿಪತಿಯಾಗಿದ್ದಾರೆ ಮತ್ತು ಸಂಚಾರದ ಈ ಸಮಯದಲ್ಲಿ ಅವರು ನಿಮ್ಮ ಒಂಬತ್ತನೇ ಮನೆಯಲ್ಲಿ ಕುಳಿತಿರುತ್ತಾರೆ. ಒಂಬತ್ತನೇ ಮನೆಯನ್ನು ಧರ್ಮದ ಮನೆಯೆಂದು ಕರೆಯಲಾಗುತ್ತದೆ ಇದರ ಮೂಲಕ ನಿಮ್ಮ ಅದೃಷ್ಟದ ಬಗ್ಗೆಯೂ ಪರಿಗಣಿಸಲಾಗುತ್ತದೆ. ಒಂಬತ್ತನೇ ಮನೆಯಲ್ಲಿ ಶುಕ್ರನ ಸಂಚಾರವು ನಿಮಗೆ ಸಾಮಾನ್ಯಕ್ಕಿಂತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಇದರಿಂದಾಗಿ ನಿಮ್ಮಲ್ಲಿ ಸಕಾರಾತ್ಮಕತೆ ಮತ್ತು ಶಾಂತಿ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಾಮಾಜಿಕ ಮಟ್ಟದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ಈ ಸಮಯದಲ್ಲಿ ನಿಮ್ಮ ಮನಸ್ಸು ಮತ್ತು ಜೀವನವು ಪುನರ್ಯೌವನಗೊಳಿಸುವಿಕೆ ಮತ್ತು ಐಷಾರಾಮಿಗಳಿಂದ ತುಂಬಿರುತ್ತೀರಿ. ಇದು ನಿಮ್ಮ ಅರೋಗ್ಯ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ಯಾವುದೇ ದೀರ್ಘಕಾಲದ ಗಂಭೀರ ರೋಗದಿಂದ ತೊಂದರೆಗೆ ಒಳಗಾಗಿದ್ದರೆ, ಶುಕ್ರ ಸಂಚಾರದ ಸಮಯದಲ್ಲಿಅದರಿಂದ ಮುಕ್ತಿ ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ.
ಈ ಸಮಯದಲ್ಲಿ ನಿಮ್ಮ ವಿರೋಧಿ ಮತ್ತು ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ಜಾಗರೂಕರಾಗಿರಲು ನಿಮಗೆ ಸೂಚಿಸಲಾಗಿದೆ. ಯಾವುದೇ ವಿಷಯವು ನ್ಯಾಯಾಲಯ ಕಚೇರಿಯಲ್ಲಿ ಅಮಾನತುಗೊಳಿಸಿದ್ದರೆ, ಅದರ ತೀರ್ಮಾನವು ನಿಮ್ಮ ಪರವಾಗಿ ಬರುವ ಸಾಧ್ಯತೆ ಹೆಚ್ಚಾಗಿದೆ.
ಸಹೋದರ ಸಹೋದರಿಯರಿಂದ ನೀವು ಸ್ನೇಹ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಅತಿಥಿಗಳ ಆಗಮನವು ಸಂತೋಷವನ್ನು ತರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ನೀವು ಅನೇಕ ಪ್ರಯತ್ನಗಳನ್ನು ಮಾಡುವಿರಿ.
ಯಾವುದೇ ತೀರ್ಥ ಯಾತ್ರೆಗೆ ಹೋಗಲು, ದಾನ-ಪುಣ್ಯ ಅಥವಾ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯೋಜಿಸಬಹುದು. ಕೆಅಲ್ವು ಸ್ಥಳೀಯರು ತಮ್ಮ ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಬಹುದು.
ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ವಿದ್ಯಾರ್ತಿಗಳು ಯಾವುದೇ ವಾದ-ವಿವಾದ, ಸ್ಪರ್ಧೆ ಅಥವಾ ಯಾವುದೇ ಇತರ ಆಟದ ಪ್ರದರ್ಶನದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಪರಿಹಾರ - ಪರಶುರಾಮ ದೇವರು ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದಾರೆ ಎಂದು ಹೇಳಲಾಗಿದೆ, ಆದ್ದರಿಂದ ಪರಶುರಾಮರ ಅವತಾರದ ದಂತಕಥೆಯನ್ನು ಓದಿ ಅಥವಾ ಕೇಳಿ.
ನೀವು ಯಾವುದೇ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಪರಿಹಾರಕ್ಕಾಗಿ ಪ್ರಶ್ನೆ ಕೇಳಿ
ಮಿಥುನ ರಾಶಿ
ಶುಕ್ರ ದೇವ ಮಿಥುನ ರಾಶಿಯಿಂದ ಎಂಟನೇ ಮನೆಗೆ ಸಾಗುತ್ತಾರೆ. ಈ ಮನೆಯ ಮೂಲಕ ಜೀವನದಲ್ಲಿ ಉಂಟಾಗುವ ಏರಿಳಿತಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರದ ಕಾರಣದಿಂದಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ಶುಕ್ರ ಸಂಚಾರದ ಸಮಯದಲ್ಲಿ, ಗುರುವಿನೊಂದಿಗೆ ಸಂಯೋಜಿಸುತ್ತ, ನಿಮ್ಮ ರಾಶಿಯಲ್ಲಿ ಅತ್ಯಂತ ಸುಂದರವಾದ ಕೇಂದ್ರೀಯ ತ್ರಿಕೋನ ರಾಜ ಯೋಗವನ್ನು ನಿರ್ಮಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ನಿವಾರಿಸಲು ಸಹಾಯ ಮಾಡುತ್ತದೆ. ನೀವು ನಿಮ್ಮ ಆರ್ಥಿಕ ಜೀವನದಲ್ಲಿ ಪ್ರಗತಿ ಮತ್ತು ಲಾಭವನ್ನು ಪಡೆಯಲು ಅನೇಕ ಶುಭ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ
ಶುಕ್ರ ದೇವ ನಿಮ್ಮ ರಾಶಿಯ ಮನೆಯ ಅಧಿಪತಿ ಮತ್ತು ಸಾಂಚಾರದ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತಾರೆ. ಇದು ಇದ್ದಕ್ಕಿದ್ದಂತೆ ಪಡೆಯಲಾಗುವ ಲಾಭ ಮತ್ತು ಪ್ರಯೋಜನವನ್ನು ತೋರಿಸುತ್ತದೆ. ಅಂತಹ ಸಂದರ್ಭದಲ್ಲಿ ಲಾಟರಿ ಅಥವಾ ಇನ್ನಿತರ ಮಾರ್ಗಗಳ ಮೂಲಕ ಇದ್ದಕ್ಕಿದ್ದಂತೆ ಹಣವನ್ನು ಪಡೆಯುವ ಸಾಧ್ಯತೆ ಇದೆ. ನೀವು ನಿಮ್ಮ ಪೂರ್ವಜರ ಆಸ್ತಿಯಿಂದ ಉತ್ತಮ ಲಾಭ ಗಳಿಸುವಲ್ಲಿ ಯಶಸ್ಸನ್ನು ಪಡೆಯುತ್ತೀರಿ.
ಕೆಲಸದ ಸ್ಥಳದಲ್ಲಿ ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳಿಗಾಗಿ ಕಾಯುತ್ತಿರುವ ಜನರ ಪ್ರಗತಿ ಮತ್ತು ಬೆಳವಣಿಗೆಯ ಸಂಪೂರ್ಣ ಸಾಧ್ಯತೆ ಇದೆ. ಈ ಸಮಯದಲ್ಲಿ ಪ್ರಯಾಣವು ನಿಮಗೆ ಪ್ರಯೋಜನಕಾರಿಯಾಗುತ್ತವೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಸೃಜನಶೀಲ ಬರವಣಿಗೆ, ಕಥೆ, ದತ್ತಾಂಶ ವಿಶ್ಲೇಷಣೆ ಇತ್ಯಾದಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಸಂಚಾರದ ಸಮಯವೂ ವಿಶೇಷವಾಗಿ ಉತ್ತಮವಾಗಿರಲಿದೆ. ಈ ಸಂಚಾರವು ನಿಮ್ಮ ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಆದಾಯ ಮತ್ತು ಸಮೃದ್ಧಿಯಲ್ಲಿ ಹೆಚ್ಚಳವಾಗುತ್ತದೆ.
ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಗುಪ್ತ, ನಿಗೂಢ ಅಥವಾ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ಹೊಂದಬಹುದು.
ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರುತ್ತದೆ, ಅವರು ತಮ್ಮ ಅಧ್ಯಯನದಲ್ಲಿ ಹೆಚ್ಚು ಗಮನ ಹರಿಸುತ್ತಾರೆ. ವಿಶೇಷವಾಗಿ ಪಿಎಚ್‌ಡಿ ಅಥವಾ ಯಾವುದೇ ಇತರ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸಂಚಾರವು ವಿಶೇಷವಾಗಿರಲಿದೆ. ಅರೋಗ್ಯ ಜೀವನದಲ್ಲೂ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಪರಿಹಾರ - ಹಸುವಿನ ಸೇವೆ ಮಾಡಿ, ಅದರೊಂದಿಗೆ ಸಮಯ ಕಳೆಯಿರಿ ಮತ್ತು ಹಸಿರು ಮೇವು ತಿನ್ನಿಸಿ.
ಕರ್ಕ ರಾಶಿ
ಶುಕ್ರ ಗ್ರಹವು ಕರ್ಕ ರಾಶಿಯ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ. ಇದನ್ನು ಮದುವೆಯ ಮನೆಯೆಂದು ಸಹ ಕರೆಯಲಾಗುತ್ತದೆ ಮತ್ತು ಈ ಮನೆಯ ಮೂಲಕ, ಜೀವನದಲ್ಲಿ ಉಂಟಾಗುವ ಪಾಲುದಾರಿಕೆಯ ಬಗ್ಗೆ ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಶುಕ್ರ ಸಂಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.
ಈ ಸಮಯದಲ್ಲಿ ಶುಕ್ರ ನಿಮ್ಮ ಎಂಟನೇ ಮನೆಯ ಅಧಿಪತಿ ಶನಿ ಮತ್ತು ಆರನೇ ಮನೆಯ ಅಧಿಪತಿ ಗುರುವಿನೊಂದಿಗೆ ಸಂಯೋಜಿಸುತ್ತ, ನಿಮ್ಮ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾರೆ. ಇದಲ್ಲದೆ, ಈ ಸಮಯದಲ್ಲಿ ಜೀವನ ಸಂಗಾತಿಯೊಂದಿಗೆ ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಕಾಣಲಾಗುತ್ತದೆ. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ಲದೆ, ಮನೆಯಲ್ಲಿ ಯಾವುದೇ ದುರಸ್ತಿ ಅಥವಾ ನಿರ್ಮಾಣ ಕಾರ್ಯಗಳು ಹಠಾತ್ತನೆ ಪ್ರಾರಂಭವಾಗುವುದರಿಂದ ಕರ್ಕ ರಾಶಿಚಕ್ರದ ಸ್ಥಳೀಯರು ಅಸಮಾಧಾನವನ್ನು ಅನುಭವಿಸಬಹುದು.
ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಸರ್ಕಾರದಿಂದ ಲಾಭ ಅಥವಾ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಈ ಸಮಯದಲ್ಲಿ ನಿಮ್ಮ ಗುಪ್ತ ಶತ್ರುಗಳ ಬಗ್ಗೆ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಅವರು ಸಕ್ರಿಯರಾಗಿರುತ್ತಾರೆ ಮತ್ತು ನಿರಂತರವಾಗಿ ನಿಮಗೆ ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಈ ಸಮಯದಲ್ಲಿ ಯಾವುದೇ ಪ್ರವಾಸವನ್ನು ತಪ್ಪಿಸುವುದು ನಿಮಗೆ ಉತ್ತಮ.
ಆರ್ಥಿಕ ಜೀವನಕ್ಕೆ ಸಮಯ ಉತ್ತಮವಾಗಿರಲಿದೆ. ಆದಾಗ್ಯೂ, ಈ ಸಮಯದಲ್ಲಿ ನೀವು ಹೆಚ್ಚು ಭಾವನಾತ್ಮಕವಾಗಿ ಕಂಡುಬರುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ನೀವು ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಲು ಪ್ರಯತ್ನಿಸಬೇಕು.
ಈ ಸಂಚಾರವು ಅರೋಗ್ಯ ಜೀವನದಲ್ಲಿ ನಿಮಗೆ ಕೆಲವು ಸಮಸ್ಯೆಗಳನ್ನು ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ಆರೋಗ್ಯವಾಗಿರಿಸಲು ಕಾಲಕಾಲಕ್ಕೆ ನೀರನ್ನು ಕುಡಿಯಿರಿ. ಇಲ್ಲದಿದ್ದರೆ ಹೊಟ್ಟೆ ಅಥವಾ ಮೂತ್ರದ ಸೋಂಕಿಗೆ ಸಂಬಂಧಿಸಿದ ಸೋಂಕಿನ ಅಪಾಯವಿರಬಹುದು.
ಪರಿಹಾರ - ಪ್ರತಿದಿನ ಬೆಳಿಗ್ಗೆ ಮಹಾ ಲಕ್ಷ್ಮಿ ಅಷ್ಟಕಂ ಅನ್ನು ಪಠಿಸುವುದು ನಿಮಗೆ ಉತ್ತಮ.
ಸಿಂಹ ರಾಶಿ
ಶುಕ್ರ ದೇವರ ಸಂಚಾರವು ನಿಮ್ಮ ರ್ಶಿಯಿಂದ ಆರನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯನ್ನು ಶತ್ರುವಿನ ಮನೆಯೆಂದು ಸಹ ಕರೆಯಲಾಗುತ್ತದೆ. ಆರನೇ ಮನೆಯಲ್ಲಿ ಶುಕ್ರನ ಸಂಚಾರವು ನಿಮಗೆ ಜೀವನದಲ್ಲಿ ಕೆಲವು ಸವಾಲುಗಳನ್ನು ತರಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ.
ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ವಿವಾದಗಳಿಂದ ದೂರವಿರುವ ಅಗತ್ಯವಿದೆ. ಇಲ್ಲದಿದ್ದರೆ, ನೀವು ಅನಗತ್ಯ ಜಗಳಗಳಲ್ಲಿ ಸಿಲುಕಿಕೊಂಡು, ನಿಮಗೆ ಹಾನಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೆಲಸಗಳು ಮತ್ತು ಪ್ರಯತ್ನಗಳ ಬಗ್ಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದು, ಇತರರೊಂದಿಗೆ ಸಂವಹನ ಮಾಡುವಾಗ ನಿಮ್ಮ ಭಾಷೆಯಲ್ಲಿ ಮಾಧುರ್ಯವನ್ನು ತರಿ ಎಂದು ಸಲಹೆ ನೀಡಲಾಗಿದೆ. ಆಗ ಮಾತ್ರ ಭವಿಷ್ಯದಲ್ಲಿ ಇದರಿಂದ ನೀವು ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಯಾವುದೇ ರೀತಿಯ ಅನಗತ್ಯ ಪ್ರವಾಸಗಳನ್ನು ತಪ್ಪಿಸಿ. ಇಲ್ಲದಿದ್ದರೆ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು.
ಈ ಸಮಯದಲ್ಲಿ ಶುಕ್ರ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದು ವೆಚ್ಚಗಳ ಮನೆ. ಅಂತಹ ಪರಿಸ್ಥಿತಿಯಲ್ಲಿ ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗುತ್ತವೆ. ಆದ್ದರಿಂದ ನಿಮ್ಮ ಹಣವನ್ನು ಸಾಧ್ಯವಾದಷ್ಟು ಸಂಗ್ರಹಿಸಲು ಸರಿಯಾದ ತಂತ್ರವನ್ನು ಮಾಡಿ. ವ್ಯಾಪಾರಸ್ಥರು ಸಂಚಾರದ ಸಮಯದಲ್ಲಿ ಹಲವಾರು ಯೋಜನೆಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಬಹುದು. ಆದರೆ ಶುಕ್ರವು ಗುರುವಿನೊಂದಿಗೆ ಸಂಯೋಜಿಸುತ್ತಿದ್ದಾರೆ, ಅಂತಹ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಹಿರಿಯ ಸದಸ್ಯರು ಅಥವಾ ಅನುಭವಿಗಳ ಸಲಹೆಯನ್ನು ಪಡೆದುಕೊಳ್ಳಿ.
ಈ ಸಮಯದಲ್ಲಿ ವೈವಾಹಿಕ ಸಂಬಂಧದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಇವುಗಳನ್ನು ನಿವಾರಿಸಲು ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆದು, ಎಲ್ಲಾ ವಾದಗಳನ್ನು ಪರಿಹರಿಸಲು ಪ್ರಯತ್ನಿಸಿ.
ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ರೋಗನಿರೋಧಕ ಸಾಮರ್ಥ್ಯವು ಈ ಸಮಯದಲ್ಲಿ ಸ್ವಲ್ಪ ದುರ್ಬಲವಾಗಿರಬಹುದು. ಅಂತಹ ಸನ್ನಿವೇಶದಲ್ಲಿ ನಿಮ್ಮ ದಿನಚರಿಯಲ್ಲಿ ಯೋಗ, ವ್ಯಾಯಾಮ ಮತ್ತು ಸರಿಯಾದ ಆಹಾರ ಪಾನೀಯವನ್ನು ಸೇರಿಸಿ, ಮಸಾಲೆಯುಕ್ತ ಅತಃವ ಹೊರಗಿನ ಆಹಾರವನ್ನು ತಪ್ಪಿಸಿ. ಆಗ ಮಾತ್ರ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಪರಿಹಾರ - ಪ್ರತಿದಿನ ಬೆಳಿಗ್ಗೆ ದೇವಿ ಮಹಾಲಕ್ಷ್ಮಿಯ ಸ್ತುತಿಯಲ್ಲಿನ ಶ್ರೀ ಸೂಕ್ತವನ್ನು ಪಠಿಸಿ.
ಕನ್ಯಾ ರಾಶಿ
ಶುಕ್ರ ದೇವ ಕನ್ಯಾ ರಾಶಿಯ ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ಅವರು ನಿಮ್ಮ ಐದನೇ ಮನೆಯಲ್ಲಿ ಕುಳಿತಿರುತ್ತಾರೆ. ಇದನ್ನು ಮಕ್ಕಳ ಮನೆಯೆಂದು ಕರೆಯಲಾಗುತ್ತದೆ. ಇದರ ಮೂಲಕ ನಿಮ್ಮ ಬುದ್ಧಿ ಮತ್ತು ಜ್ಞಾನದ ಬಗ್ಗೆ ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಂಚಾರದ ಸಮಯದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.
ಈ ಸಮಯದಲ್ಲಿ ಶುಕ್ರ ನಿಮ್ಮ ಹನ್ನೆರಡನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದು ಪ್ರಯೋಜನ ಮತ್ತು ಲಾಭದ ಮನೆ. ಈ ಸಮಯದಲ್ಲಿ ನೀವು ವಿವಿಧ ಮೂಲಗಳಿಂದ ಹಣಕಾಸಿನ ಲಾಭ ಮತ್ತು ಪ್ರತಿಷ್ಠೆಯಲ್ಲಿ ಹೆಚ್ಚಳವಾಗುವ ಅವಕಾಶವನ್ನು ಪಡೆಯುತ್ತೀರಿ. ಈ ಅಮಾಯದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವುದು ನಿಮ್ಮ ಆರ್ಥಿಕ ಉತ್ತಮವಾಗಿರುತ್ತದೆ.
ವೃತ್ತಿ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ನಿಮ್ಮಆಲೋಚನೆಗಳು ಮತ್ತು ಸಲಹೆಗಳಿಂದಾಗಿ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಗಳಿಸುವುದನ್ನುಕಾಣಲಾಗುತ್ತದೆ.
ವಿವಾಹಿತ ಜನರು ಸಹ ತಮ್ಮ ದಾಂಪತ್ಯ ಜೀವನದಲ್ಲಿ, ಮಕ್ಕಳೊಂದಿಗಿನ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸುತ್ತಾರೆ. ಇದರೊಂದಿಗೆ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸಹ ಬಲಗೊಳ್ಳವು ಸಾಧ್ಯವಾಗುತ್ತದೆ ಮತ್ತು ನೀವು ನಿಮ್ಮ ವೈವಾಹಿಕ ಜೀವನವನ್ನು ಆನಂದಿಸುವಿರಿ.
ಮತ್ತೊಂದೆಡೆ ಪ್ರೇಮಿಗಳು ತಮ್ಮ ಸಂಬಂಧವನ್ನು ಮುಂದುವರಿಸಲು ಇದು ಉತ್ತಮ ಸಮಯ. ನಿಮ್ಮ ವಿನಮ್ರ ಮತ್ತು ಶಾಂತ ಸ್ವಭಾವವು, ನಿಮ್ಮ ಸಂಗಾತಿ ಮತ್ತು ಕುಟುಂಬದ ಇತರ ಸದಸ್ಯರ ನಡುವೆ ನಿಮ್ಮ ಜನಪ್ರಿಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅವರು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸುತ್ತಾರೆ.
ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣವನ್ನು ಗಳಿಸಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಂಚಾರದ ಸಮಯವು ಶುಭವಾಗಿರುತ್ತದೆ. ಏಕೆಂದರೆ ಅವರ ಅಸೆ ಈಡೇರುವ ಸಂಪೂರ್ಣ ಸಾಧ್ಯತೆ ಇದೆ.
ಪರಿಹಾರ - ಈ ಸಂಚಾರದ ಸಮಯದಲ್ಲಿ ಅವಿವಾಹಿತ ಮಹಿಳೆಯರಿಗೆ ಸೌಂದರ್ಯದ ವಸ್ತುಗಳ ಭೇಟಿ ಮಾಡಿ.
ತುಲಾ ರಾಶಿ
ಶುಕ್ರ ದೇವ ನಿಮ್ಮ ರಾಶಿಯ ಮೊದಲನೇ, ಅಂದರೆ ಲಗ್ನದ ಮನೆಯ ಮಾಲೀಕನಾಗಿ, ಸಂಚಾರದ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಸಂಚರಿಸುತ್ತಾರೆ. ಇದನ್ನು ಸಂತೋಷದ ಮನೆಯೆಂದು ಸಹ ಕರೆಯಲಾಗುತ್ತದೆ. ಶುಕ್ರನ ಈ ಸಂಚಾರವು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು. ಇದರಿಂದಾಗಿ ನೀವು ಅಪೇಕ್ಷಿತ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ.
ಈ ಸಮಯದಲ್ಲಿ ಆಪ್ತರೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸುತ್ತೀರಿ. ಕೆಲವು ಸ್ಥಳೀಯರು ಲಾಭ ಮತ್ತು ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ವೈವಾಹಿಕ ಜೀವನದಲ್ಲಿ ಜೀವನ ಸಂಗಾತಿಯ ಆದಾಯವು ಹೆಚ್ಚಾಗುತ್ತದೆ.
ಹೊಸ ಮನೆ ಅಥವಾ ವಾಹನವನ್ನು ಖರೀದಿಸಲು, ಬ್ಯಾಂಕ್ ಮೂಲಕ ಲೋನ್ ತೆಗೆದುಕೊಳ್ಳಲು ಹುಡುಕುತ್ತಿರುವ ಜನರು ಈ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಶುಕ್ರನ ಈ ಸಂಚಾರವು, ನಿಮ್ಮ ವೈಯಕ್ತಿಕ ಜೀವನಕ್ಕೆ ಅತ್ಯಂತ ಉತ್ತಮವಾಗಿರಲಿದೆ.
ಕೆಲಸದ ಸ್ಥಳದಲ್ಲಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಸಂಪೂರ್ಣ ಪ್ರಗತಿಯನ್ನು ಪಡೆಯುತ್ತಾರೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಕೌಶಲ್ಯವನ್ನು ಪ್ರಶಂಸಿಸಲಾಗುತ್ತದೆ. ವ್ಯಾಪಾರಸ್ಥರಿಗೂ ಈ ಸಮಯ ಉತ್ತಮವಾಗಿರುತ್ತದೆ.
ಆದಾಗ್ಯೂ, ಶುಕ್ರನ ಈ ಸ್ಥಾನವು ನಿಮ್ಮನ್ನು ನಿಮ್ಮ ಆರಾಮ ವಲಯಕ್ಕೆ ಸೀಮಿತಗೊಳಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚು ಲಾಭವನ್ನು ಪಡೆಯಲು ನಿಮ್ಮ ನಡವಳಿಕೆಯನ್ನು ಸುಧಾರಿಸಿ ಮತ್ತು ಹೆಚ್ಚು ಪರಿಶ್ರಮಿಸಿ.
ವಿನ್ಯಾಸ, ತಂತ್ರಜ್ಞಾನ ಅಥವಾ ನಿರ್ವಹಣಾ ಕ್ಷೇತ್ರಕ್ಕೆ ಸಂಬಂಧಿಸಿದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ವಿಶೇಷವಾಗಿ ಉತ್ತಮ ಪ್ರದರ್ಶನ ಮಾಡುವಲ್ಲಿ ಯಶಸ್ಸು ಪಡೆಯುತ್ತಾರೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಅರೋಗ್ಯ ಜೀವನವು ಉತ್ತಮವಾಗಿರುತ್ತದೆ..
ಪರಿಹಾರ - ನಿಮ್ಮ ಬಲಗೈಯ ಉಂಗುರುದ ಬೆರಳಿನಲ್ಲಿ ಉತ್ತಮ ಗುಣಮಟ್ಟದ (.0.50 ಸೆಂಟ್ಸ್) ವಜ್ರವನ್ನು ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ ತಯಾರಿಸಿ ಧರಿಸುವುದು ಉತ್ತಮ.
ವೃಶ್ಚಿಕ ರಾಶಿ
ಶುಕ್ರ ದೇವರ ಸಾಗಣೆ ವೃಶ್ಚಿಕ ರಾಶಿಯಿಂದ ಮೂರನೇ ಮನೆಯಲ್ಲಿ ಸಂಭವಿಸಲಿದೆ. ಇದನ್ನು ಧೈರ್ಯದ ಮನೆಯೆಂದು ಕರೆಯಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸಹೋದರ ಸಹೋದರಿಯರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಅವಕಾಶವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಸಾಮಾಜಿಕ ಜೀವನವನ್ನು ಸುಧಾರಿಸುವುದನ್ನು ಸಹ ಕಾಣಲಾಗುತ್ತದೆ.
ಶುಕ್ರ ನಿಮ್ಮ ಏಳನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ. ಇದನ್ನು ಪ್ರಯಾಣ ಮತ್ತು ಸಂತೋಷದ ಮನೆಯೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮನ್ನು ಆನಂದಿಸಲು ಅನೇಕ ಸುಂದರವಾದ ಚಟುವಟಿಕೆಗಳಲ್ಲಿ ಭಾಗವಹಿಸಲು ಅಥವಾ ಪ್ರಯಾಣ ಮಾಡಲು ಯೋಜಿಸಬಹುದು.
ವೈಯಕ್ತಿಕ ಜೀವನದಲ್ಲಿ ನೀವು ನಿಮ್ಮ ಸ್ನೇಹಿತರು ಮತ್ತು ಆಪ್ತರಿಂದ ಲಾಭ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಇದರೊಂದಿಗೆ ಪ್ರೀತಿಯ ಸಂಬಂಧದಲ್ಲಿ ಜೀವನ ಸಂಗಾತಿ ಮತ್ತು ಪ್ರೇಮಿಯೊಂದಿಗಿನ ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ನೀವು ಇನ್ನೂ ಒಬ್ಬಂಟಿಯಾಗಿದ್ದರೆ, ಸಂಬಂಧಿಕರ ಮನೆಯಲ್ಲಿ ಅಥವಾ ಯಾವುದೇ ಸಾಮಾಜಿಕ ಸ್ಥಳದಲ್ಲಿ ನಿರ್ಧಿಷ್ಟ ವ್ಯಕ್ತಿಯನ್ನು ಭೇಟಿ ಮಾಡಲು ನಿಮಗೆ ಅವಕಾಶ ಸಿಗಬಹುದು. ಈ ಸಮಯದಲ್ಲಿ ಸಂಗೀತ, ನೃತ್ಯ, ಕಲೆ ಇತ್ಯಾದಿಯಂತಹ ಸೃಜನಶೀಲ ಚಟುವಟಿಕೆಗಳನ್ನು ನೀವು ಮತ್ತೆ ಆರಂಭಿಸಲು ಯೋಜಿಸಬಹುದು. ದಂಪತಿಗಳು ತಮ್ಮ ಮಕ್ಕಳ ಯಶಸ್ಸು ಮತ್ತು ಪ್ರಗತಿಯಿಂದ ಸಂತೋಷವನ್ನು ಅನುಭವಿಸಬಹುದು.
ಕೆಲಸದ ಸ್ಥಳದಲ್ಲಿ ನಿಮ್ಮ ಸಂವಹನ ಶೈಲಿ ಮತ್ತು ನಿಮ್ಮ ಪ್ರೇರಕ ಶಕ್ತಿಯು, ನಿಮ್ಮ ಸಂಸ್ಥೆ ಅಥವಾ ವ್ಯಾಪಾರದಲ್ಲಿ ಉತ್ತಮವಾಗಿ ಬೆಳೆಯಲು ಸಹಾಯ ಮಾಡುತ್ತದೆ. ನಿಮ್ಮ ಪ್ರಯತ್ನಗಳು ಅದೃಷ್ಟದ ಬೆಂಬಲವನ್ನು ಪಡೆಯುತ್ತವೆ. ಕೆಲವು ಸ್ಥಳೀಯರು ಸರ್ಕಾರದಿಂದ ಉತ್ತಮ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ನೀವು ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುತ್ತೀರಿ.
ಕ್ರೀಡೆ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಥಳೀಯರು ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿ ಉತ್ತಮ ಲಾಭವನ್ನು ಗಳಿಸಬಹುದು.
ಆರೋಗ್ಯದ ಬಗ್ಗೆ ನೀವು ಸ್ವಲ್ಪ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಇದರೊಂದಿಗೆ ನಿಮ್ಮ ಕಾರ್ಯ, ಆಹಾರ, ಮನರಂಜನೆ ಇತ್ಯಾದಿಗಳಿಗೆ ಸಂಬಂಧಿಸಿದ ಕೆಟ್ಟ ಅಭ್ಯಾಸಗಳಲ್ಲಿ ಸಕಾರಾತ್ಮಕ ಸುಧಾರಣೆಯನ್ನು ತರುವುದು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಪರಿಹಾರ - ಪ್ರತಿದಿನ ಬೆಳಿಗ್ಗೆ ಶಿವಲಿಂಗದ ಮೇಲೆ ಗುಲಾಬಿ ನೀರನ್ನು ಅರ್ಪಿಸಿ.
ಧನು ರಾಶಿ
ಶುಕ್ರ ಗ್ರಹದ ಸಂಚಾರದ ಸಮಯದಲ್ಲಿ ನಿಮ ಎರಡನೇ ಮನೆ ಸಕ್ರಿಯವಾಗಿರುತ್ತದೆ. ಈ ಮನೆಯನ್ನು ಹಣಕಾಸಿನ ಮನೆಯೆಂದು ಸಹ ಕರೆಯಲಾಗುತ್ತದೆ ಮತ್ತು ಇದರಿಂದ ನಿಮ್ಮ ಧ್ವನಿಯ ಬಗ್ಗೆ ಕೂಡ ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಶುಕ್ರನ ಸಂಚಾರದ ಸಮಯದಲ್ಲಿ ಧನು ರಾಶಿಚಕ್ರದ ಸ್ಥಳೀಯರು ತಮ್ಮ ಆದಾಯವನ್ನು ಹೆಚ್ಚಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ.
ಶುಕ್ರ ನಿಮ್ಮ ಹನ್ನೊಂದನೇ ಮನೆಯ ಮಾಲೀಕ ಮತ್ತು ಈ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಕುಳಿತಿರುವುದು ನಿಮ್ಮ ತಾಯಿಗೆ ಲಾಭವನ್ನು ನೀಡುತ್ತದೆ. ಮನೆಯ ಪರಿಸರವು ಸಹ ಸಹ ಸಂತೋಷದಿಂದ ತುಂಬಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಮದುವೆಗೆ ಅರ್ಹರಾಗಿರುವ ಸ್ಥಳೀಯರು, ಶುಕ್ರ ಸಂಚಾರದ ಸಮಯದಲ್ಲಿ ಮದುವೆಯ ಉತ್ತಮ ಪ್ರಸ್ತಾಪವನ್ನು ಪಡೆಯುವ ಸಾಧ್ಯತೆ ಇದೆ. ಇದರೊಂದಿಗೆ ನಿಮ್ಮ ಉತ್ಸಾಹ, ಉದಾರತೆ ಮತ್ತು ಆಕರ್ಷಿತ ಧ್ವನಿಯಿಂದ ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುವುದನ್ನು ಕಾಣಲಾಗುತ್ತದೆ. ಈ ಕಾರಣದಿಂದಾಗಿನೀವು ಹೊಸ ಸಂಬಂಧವನ್ನು ಮತ್ತು ಸ್ನೇಹಿತರನ್ನು ಮಾಡುವಲ್ಲಿ ಯಶಸ್ಸು ಪಡೆಯುತ್ತೀರಿ.
ಆದಾಗ್ಯೂ, ಆರೋಗ್ಯದ ದೃಷ್ಟಿಯಿಂದ, ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಲು ಸಲಹೆ ನೀಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ತುಂಬಾ ಸಿಹಿ ತಿನ್ನುವುದನ್ನು ತಪ್ಪಿಸಿ. ಇಲ್ಲದಿದ್ದರೆ ನೀವು ಅರೋಗ್ಯ ನಷ್ಟವನ್ನು ಅನುಭವಿಸಬಹುದು. ಇದರಿಂದಾಗಿ ನೀವು ನಿಮ್ಮ ಜೀವನದಲ್ಲಿ ಅನೇಕ ರೋಗಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ಗಮನ ಹರಿಸುವುದು ನಿಮಗೆ ಉತ್ತಮ.
ಸಂಚಾರದ ಸಮಯದಲ್ಲಿ ನಿಮ್ಮ ವ್ಯವಹಾರದ ಐದನೇ ಮನೆಯಲ್ಲಿ ಶುಕ್ರನ ಉಪಸ್ಥಿತಿಯು, ಆಡಳಿತ ಕೌಶಲ್ಯದ ಜೊತೆಗೆ ನಿಮ್ಮ ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಮರ್ತ್ಯರಾಗುತ್ತೀರಿ.
ಧನು ರಾಶಿಚಕ್ರದ ವಿದ್ಯಾರ್ಥಿಗಳಿಗೂ, ಈ ಸಮಯ ಶುಭವಾಗಿರುತ್ತದೆ. ನಿರ್ಧಿಷ್ಟವಾಗಿ ಹೇಳುವುದಾದರೆ, ನೆನಪಿನಲ್ಲಿಟ್ಟುಕೊಳ್ಳುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳು ಸಹಾಯ ಪಡೆಯುತ್ತಾರೆ.
ಪರಿಹಾರ - ಶುಕ್ರ ದೇವರನ್ನು ಆಗ್ನೇಯ ದಿಕ್ಕಿನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಆಗ್ನೇಯ ದಿಕ್ಕಿಗೆ ನಮಸ್ಕರಿಸಿ.
ಮಕರ ರಾಶಿ
ಶುಕ್ರ ದೇವರ ಸಾಗಣೆ ನಿಮ್ಮ ಮೊದಲನೇ ಮನೆ ಅಂದರೆ ಲಗ್ನದ ಮನೆಯಲ್ಲಿರುತ್ತದೆ. ಈ ಮನೆಯ ಮೂಲಕ ನಿಮ್ಮ ದೇಹ, ಅರೋಗ್ಯ ಮತ್ತು ಜ್ಞಾನೋದಯದ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರವು ನಿಮಗೆ ಉತ್ತಮವಾಗಿರುತ್ತದೆ ಮತ್ತು ಈ ಸಮಯದಲ್ಲಿ ಇದು ನಿಮ್ಮ ಏಳನೇ ಮನೆಯ ಮೇಲೆ ದೃಷ್ಟಿ ಹಾಕುತ್ತದೆ. ಇದು ಪಾಲುದಾರಿಕೆ ಮತ್ತು ಜೀವನ ಸಂಗಾತಿಯ ಮನೆ. ಅಂತಹ ಪರಿಸ್ಥಿತಿಯಲ್ಲಿ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಯಾವುದೇ ಮೆಹಿಳೆಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಇದರಿಂದಾಗಿ ಅವರು ಆರ್ಥಿಕ ಲಾಭ ಮತ್ತು ಪ್ರಯೋಜನವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ.
ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮಗೊಳಿಸುವಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಇದಲ್ಲದೆ ನಿಮ್ಮ ಪ್ರತಿಯೊಂದು ಕೆಲಸದಲ್ಲಿ ಅವರು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ಆದಾಗ್ಯೂ, ಪ್ರೀತಿ ಮತ್ತು ಪ್ರಣಯದ ವಿಷಯದಲ್ಲಿ, ನಿಮ್ಮ ಸಂಗಾತಿಯಿಂದ ನೀವು ನಿಮ್ಮನ್ನು ಉತ್ತಮವೆಂದು ಅನುಭವಿಸಿ, ನಿಮ್ಮ ಸಂಗಾತಿಯಿಂದ ಮೆಚ್ಚುಗೆಯನ್ನು ಪಡೆಯಲು ಬಯಸುವಿರಿ. ಈ ಕಾರಣದಿಂದಾಗಿ ನಿಮ್ಮಿಬ್ಬರ ನಡುವೆ ದೂರವನ್ನು ಉಂಟುಮಾಡುತ್ತದೆ. ಆದ್ದರಿಂದ ಈ ಸಂಚಾರದ ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ನಿಮ್ಮ ಸ್ವಭಾವನ್ನು ಸುಧಾರಿಸಿ.
ದಾಂಪತ್ಯ ಸ್ಥಳೀಯರ ಮಕ್ಕಳು ತಮ್ಮ ಶಿಕ್ಷಣದಲ್ಲಿ ಉತ್ತಮ ಪ್ರದರ್ಶನ ಅಥವಾ ಕೆಲಸದ ಸ್ಥಳದಲ್ಲಿನ ಪ್ರಗತಿಯನ್ನು ಹೊಂದುವುದರಿಂದ ಆನಂದವನ್ನು ಅನುಭವಿಸುತ್ತಾರೆ. ಇದಲ್ಲದೆ ನಿಮ್ಮ ಮಕ್ಕಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುತ್ತಿದ್ದರೆ, ಈ ಸಮಯದಲ್ಲಿ ಸಾಕಷ್ಟು ಮಟ್ಟಿಗೆ ಶುಭ ಸುದ್ಧಿಯನ್ನು ಪಡೆಯಬಹುದು.
ಕೆಲಸದ ಸ್ಥಳದಲ್ಲಿ ಈ ಹಿಂದೆ ಮಾಡಲು ತೊಂದರೆಯಾಗುತ್ತಿದ್ದ, ಎಲ್ಲ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಇದು ನಿಮ್ಮ ನಾಯಕತ್ವ ಮತ್ತುಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ನಿಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ನಿಮ್ಮ ವೃತ್ತಿ ಜೀವನದಲ್ಲಿ ಸಪರಿಪೂರ್ಣ ಸಾಧನೆಗಳನ್ನು ಪಡೆಯುತ್ತೀರಿ.
ಒಟ್ಟಾರೆಯಾಗಿ ಹೇಳಿದರೆ, ಮಕರ ರಾಶಿಚಕ್ರದ ಜನರಿಗೆ ಶುಕ್ರನ ಈ ಸಂಚಾರವು ತುಂಬಾ ಅನುಕೂಲಕರವಾಗಿರಲಿದೆ.
ಪರಿಹಾರ - ನಿಮ್ಮ ಬಲಗೈವ ಉಂಗುರದ ಬೆರಳಿನಲ್ಲಿ ಬೆಳ್ಳಿ ಅಥವಾ ಚಿನ್ನದ ಉಂಗುರುದಲ್ಲಿ ಉತ್ತಮ ಗುಣಮಟ್ಟದ ಬಿಳಿ ಓಪಲ್ ರತ್ನವನ್ನು ಧರಿಸಿ.
ಕುಂಭ ರಾಶಿ
ಶುಕ್ರ ದೇವ ಕುಂಭ ರಾಶಿಯಿಂದ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾರೆ. ಹನ್ನೆರಡನೇ ಮನೆಯ ಮೂಲಕ ನಿಮ್ಮ ಗುಪ್ತ ಚಿತ್ರ ಮತ್ತು ವೆಚ್ಚಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಾಚಾರದ ಸಮಯದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಸಂತೋಷ ಮತ್ತು ಐಷಾರಾಮಿಗಳಿಗಾಗಿ ಮುಕ್ತವಾಗಿ ಖರ್ಚು ಮಾಡುವುದನ್ನು ಕಾಣಲಾಗುತ್ತದೆ. ಇದರೊಂದಿಗೆ ನೀವು ನಿಮ್ಮ ಮತ್ತು ಭೌತಿಕ ಸಂತೋಷಗಳ ನೆರವೇರಿಕೆಯಲ್ಲಿಯೂ ತೊಡಗಿಸಿಕೊಳ್ಳುತ್ತೀರಿ. ಆದಾಗ್ಯೂ, ಈ ಸಮಯಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಇದು ನಿಮ್ಮ ಅರೋಗ್ಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ವಿದೇಶಿ ಸಂಸ್ಥೆ ಅಥವಾ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯರು ಈ ಸಂಚಾರದಿಂದ ವಿಶೇಷವಾಗಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರಸ್ಥರು ಸಹ ಉತ್ತಮ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ವಿಶೇಷವಾಗಿ ಆಮದು - ರಫ್ತಿಗೆ ಸಂಬಂಧಿಸಿದ ವ್ಯಾಪಾರವನ್ನು ಮಾಡುತ್ತಿರುವ ವ್ಯಾಪಾರಿಗಳಿಗೆ ಸಮಯ ಉತ್ತಮವಾಗಿರುತ್ತದೆ. ಆಂತರಿಕ ವಿನ್ಯಾಸ, ಗ್ರಾಫಿಕ್, ಮನರಂಜನೆ ಇತ್ಯಾದಿಗಳಂತಹ ಸೃಜನಶೀಲ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳೀಯರು ಸಹ ಈ ಸಮಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ.
ಪ್ರೀತಿಯ ಸಂಬಂಧಗಳಿಗೆ ಸಮಯ ಅನುಕೂಲಕರವಾಗಿದೆ. ಇನ್ನೂ ಒಬ್ಬಂಟಿಯಾಗಿರುವವರು ತಮ್ಮ ಹೊಸ ಸಂಬಂಧವನ್ನು ಆರಂಭಿಸಲು ಸರಿಯಾದ ಅವಕಾಶದ ಲಾಭವನ್ನು ಪಡೆದುಕೊಂಡು, ತಮ್ಮ ಭಾವನೆಗಳನ್ನು ತಮ್ಮ ಪ್ರೇಮಿಯ ಮುಂದೆ ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದರೊಂದಿಗೆ ವಿವಾಹಿತ ಜನರ ಜೀವನದಲ್ಲೂ ಪ್ರಣಯ ಮತ್ತು ಪ್ರೀತಿ ಹೆಚ್ಚಾಗಬಹುದು.
ಒಟ್ಟಾರೆಯಾಗಿ, ಶುಕ್ರನ ಈ ಸಂಚಾರವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಆದ್ದರಿಂದ ಆರಂಭದಿಂದಲೇ ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ನೀವು ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಇದರೊಂದಿಗೆ ಅರೋಗ್ಯ ಜೀವನದಲ್ಲಿ ನಿಮ್ಮ ಆಹಾರ ಪದ್ಧತಿಯ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿ, ಉತ್ತಮ ದಿನಚರಿಯನ್ನು ಅಳವಡಿಸಿಕೊಳ್ಳಿ. ಇದಕ್ಕಾಗಿ ಯೋಗ, ಧ್ಯಾನ ಮತ್ತು ಕೆಲವು ದೈಹಿಕ ಚಟುವಟಿಕೆಗಳನ್ನು ಆಶ್ರಯಿಸುವುದು ನಿಮಗೆ ಉತ್ತಮ.
ಪರಿಹಾರ - ಸೂರ್ಯೋದಯದ ಸಮಯದಲ್ಲಿ ಲಲಿತ ಸಹಸ್ರನಾಮ ಸ್ತೋತ್ರವನ್ನು ಪಠಿಸಿ.
ಮೀನಾ ರಾಶಿ
ಶುಕ್ರ ಗ್ರಹದ ಸಂಚಾರವು ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿರುತ್ತದೆ. ಹನ್ನೊಂದನೇ ಮನೆಯನ್ನು ಲಾಭದ ಮನೆಯೆಂದು ಕರೆಯಲಾಗುತ್ತದೆ ಮತ್ತು ಇದರ ಮೂಲಕ ಹಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರವು ಮೀನಾ ರಾಶಿಚಕ್ರದ ಸ್ಥಳೀಯರಿಗೆ ಶುಭವಾಗಿರುತ್ತದೆ. ವಿಶೇಷವಾಗಿ ಆರ್ಥಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸ್ಥಳೀಯರು ಈ ಸಮಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.
ಕೆಲಸದ ಸ್ಥಳದಲ್ಲೂ ನೀವು ನಿಮ್ಮ ಕಠಿಣ ಪರಿಶ್ರಮ, ಕೆಲಸದ ಬಗೆಗಿನನಿಮ್ಮ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಇತರರ ಪ್ರಶಂಸೆಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಇದರಿಂದಾಗಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ, ಪರಿಣಾಮವಾಗಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆ ಮತ್ತು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆಯೂ ಇದೆ.
ವ್ಯಾಪಾರಸ್ಥರು ಸಹ ಈ ಸಂಚಾರದ ಸಮಯದಲ್ಲಿ ಹಣಕಾಸು ಮತ್ತು ಪ್ರತಿಷ್ಠೆಯೊಂದಿಗೆ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಹಿಂದಿನ ಅಪೂರ್ಣ ಯೋಜನೆಗಳಿಂದಲೂ ನೀವು ಉತ್ತಮ ಪ್ರಯೋಜನೆಗಳನ್ನು ಪಡೆಯಬಹುದು.
ವೈಯಕ್ತಿಕ ಜೀವನದಲ್ಲಿ ನೀವು ನಿಮ್ಮ ಸಾಮಾಜಿಕ ಚಿತ್ರವನ್ನು ಉತ್ತಮಗೊಳಿಸಲು ಅನೇಕ ಪ್ರಯತ್ನಗಳನ್ನು ಮಾಡುವಿರಿ. ಇದರೊಂದಿಗೆ ನೀವು ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶವನ್ನು ಪಡೆಯುತ್ತೀರಿ.
ವೈವಾಹಿಕ ಸ್ಥಳೀಯರಿಗೂ ಈ ಸಮಯ ಉತ್ತಮವಾಗಿರಲಿದೆ. ನಿಮ್ಮ ಸಹೋದರ ಸಹೋದರಿಯರು ತಮ್ಮ ಕೆಲಸದ ಸ್ಥಳದಲ್ಲಿ ಸಮೃದ್ಧಿ ಮತ್ತು ಯಶಸ್ಸು ಪಡೆಯುವ ಸಾಧ್ಯತೆ ಇದೆ. ಇದಾರಿದ್ನಾಗಿ ನೀವು ಸಂತೋಷ ಮತ್ತು ಉತ್ಸಾಹವನ್ನು ಅನುಭವಿಸುತ್ತೀರಿ. ಒಟ್ಟಾರೆಯಾಗಿ ಹೇಳಿದರೆ, ಕುಟುಂಬ ಜೀವನ ಮತ್ತು ಪ್ರೀತಿಯ ಸಂಬಂಧಕ್ಕೆ ಈ ಸಮಯ ವಿಶೇಷವಾಗಿ ಉತ್ತಮವಾಗಿರಲಿದೆ.
ಈ ಸಮಯದಲ್ಲಿ ಪ್ರಯಾಣ ಮಾಡುವುದು ನಿಮಗೆ ಉತ್ತಮವಾಗಿರುತ್ತದೆ. ಏಕೆಂದರೆ ಇದರಿಂದ ನೀವು ನಿಮ್ಮ ಸಾಮಾಜಿಕ ವಲಯವನ್ನು ಹೆಚ್ಚಿಸಲು ಮತ್ತು ಅದನ್ನು ವಿಸ್ತರಿಸಲು ಸಹಾಯ ಸಿಗುತ್ತದೆ.
ಮೀನಾ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಉತ್ತಮ ಪ್ರದರ್ಶನ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಅರೋಗ್ಯ ಜೀವನದಲ್ಲೂ ಸಕಾರಾತ್ಮಕ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ನೀವು ನಿಮ್ಮ ಅರೋಗ್ಯ ಜೀವನವನ್ನು ಆನಂದಿಸಲು ಸಾಧ್ಯವಾಗುತ್ತದೆ.
ಪರಿಹಾರ - ಉತ್ತಮ ಫಲಿತಾಂಶಗಳನ್ನು ಪಡೆಯಲು ಸ್ಪಟಿಕ ಮಾಲೆಯನ್ನು ಧರಿಸಿ.
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್