ಗ್ರಹಣ 2021: ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ
ಗ್ರಹಣ 2021 (grahana 202 ) ನ ಈ ಪುಟದಲ್ಲಿ, ನಾವು ಆಸ್ಟ್ರೋಸೇಜ್ ಓದುಗಾರರಿಗೆ, ಈ ವರ್ಷ ಸಂಭವಿಸಲಾಗುವ ಎಲ್ಲಾ ಗ್ರಹಣಗಳ ಅವಶ್ಯಕ ಮಾಹಿತಿಯನ್ನು ನೀಡುತ್ತೇವೆ. ಎರಡು ಗ್ರಹಗಳ ನಡುವೆ ಯಾವುದೇ ಇತರ ಗ್ರಹ ಅಥವಾ ದೇಹದ ಆಗಮನದ ನಂತರ ಇದು ಸಂಭವಿಸುತ್ತದೆ. ಈ ಪರಿಸ್ಥಿತಿಯಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣವು ರೂಪುಗೊಳ್ಳುತ್ತದೆ .
ಎಲ್ಲಾ ರೀತಿಯಜ್ಯೋತಿಷ್ಯ ಪರಿಹಾರಗಳನ್ನು ಪಡೆಯಿರಿ: ಪ್ರಶ್ನೆಕೇಳಿ
ಈ ಲೇಖನದಲ್ಲಿ ವರ್ಷ 2021 ರಲ್ಲಿ ಸಂಭವಿಸಲಾಗುವ ಎಲ್ಲಾ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ 2021 ರ ಪಟ್ಟಿಗಳನ್ನು ಹೊರತಾಗಿ, ನಾವು ನಿಮಗೆ ಹಲವಾರು ಇತರ ಪ್ರಮುಖ ಮಾಹಿತಿಗಳನ್ನು ಸಹ ಇಲ್ಲಿ ನೀಡುತ್ತೇವೆ. ಇದರೊಂದಿಗೆ ನಾವು 2021 ರಲ್ಲಿ ಗ್ರಹಣದ ದಿನಾಂಕ, ಸಮಯ, ಅವಧಿ ಮತ್ತು ಗೋಚರತೆಯನ್ನುಚರ್ಚಿಸುವುದಲ್ಲದೆ, ಈ ಖಗೋಳ ಘಟನೆಯ ಜ್ಯೋತಿಷ್ಯ ಮತ್ತು ಧಾರ್ಮಿಕ ಅಂಶಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ಯಾವುದೇ ರೀತಿಯ ಗ್ರಹಣ ದೋಷಗಳಿಂದ, ನಿಮ್ಮೊಂದಿಗೆ ನಿಮ್ಮ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಬಗ್ಗೆಯೂ ಇದರ ಸಹಾಯದಿಂದ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ ಪ್ರತಿ ಗ್ರಹಣದ ಸೂತಕ ಸಮಯದಲ್ಲಿ ನೀವು ಯಾವ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆಯೂ ನಾವು ಗ್ರಹಣ 2021 ರ ಈ ಲೇಖನದಲ್ಲಿ ವಿವರವಾಗಿ ಹೇಳುತ್ತೇವೆ.
Click Here To Read In English: Eclipse 2021
2021 ರಲ್ಲಿ ಸಂಭವಿಸಲಾಗುವ ಎಲ್ಲಾ ಗ್ರಹಣಗಳು
ವರ್ಷ 2021 ರಲ್ಲಿ ಸಂಭವಿಸಲಾಗುವ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣದ ಬಗ್ಗೆ ಮಾತನಾಡಿದರೆ, ಈ ವರ್ಷ 2 ಸೂರ್ಯ ಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು ಸಂಭವಿಸಲಿವೆ. ಆದಾಗ್ಯೂ, ಈ ಎಲ್ಲಾ ಗ್ರಹಣಗಳಲ್ಲಿ ಒಂದೆಡೆ ಕೆಲವು ಗ್ರಹಣಗಳು ಭಾರತದಲ್ಲಿ ಕಾಣಿಸಿದರೆ, ಮತ್ತೊಂದೆಡೆ ಕೆಲವು ಕಾಣಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರ ಗೋಚರತೆ ಕಾಣದಿರುವಂತಹ ಸ್ಥಳಗಳಲ್ಲಿ ಅದರ ಸೂತಕ ಕಾಲವು ಪರಿಣಾಮಕಾರಿಯಾಗುವುದಿಲ್ಲ. ಆದರೆ ಅವು ಕಾಣಿಸುವ ಸ್ಥಳಗಳಲ್ಲಿ ಗ್ರಹಣವು ಪ್ರತಿ ಜೀವಿಗಳ ಮೇಲೆ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ವರ್ಷ 2021 ರಲ್ಲಿ ಸಂಭವಿಸಲಾಗುವ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣದ ಬಗ್ಗೆ ಹೇಳುವ ಮೊದಲು, ಸೂರ್ಯ ಮತ್ತು ಚಂದ್ರ ಗ್ರಹಣ ಎಂದು ಕರೆಯಲ್ಪಡುವ ಘಟನೆ ಯಾವುದು ಮತ್ತು ಅವುಗಳ ಪ್ರಕಾರಗಳು ಯಾವುವು ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ:-
-
ಸೂರ್ಯ ಗ್ರಹಣ 2021 (Surya Grahan 2021)
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದುಹೋದಾಗ, ಸಂಭವಿಸುವ ಘಟನೆಯನ್ನು ಸೂರ್ಯ ಗ್ರಹಣ ಎಂದು ಹೇಳಲಾಗುತ್ತದೆ. ಸೂರ್ಯ ಗ್ರಹಣವನ್ನು ಭೂಮಿಯಿಂದ ನೋಡಿದಾಗ, ಇದು ಅದ್ಭುತ ದೃಶ್ಯವಾಗಿರುತ್ತದೆ. ಅದರಲ್ಲಿ ಸೂರ್ಯ ಗ್ರಹಣವನ್ನು ಅಥವಾ ಭಾಗಶಃ ಆವರಿಸಿರುವಂತೆ ಕಾಣುತ್ತದೆ.
ಯಾವ ರೀತಿ ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆಯೋ, ಅದೇ ರೀತಿ ಚಂದ್ರ ಭೂಮಿಯ ಸುತ್ತ ಸುತ್ತುತ್ತದೆ ಎಂದು ವಿಜ್ಞಾನದಲ್ಲಿ ಈ ಘಟನೆಯ ಬಗ್ಗೆ ವಿವರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಆಗಾಗ್ಗೆ ಪರಿಭ್ರಮಿಸುವ ಚಕ್ರವನ್ನು ಪೂರ್ಣಗೊಳಿಸುವಾಗ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನ ಕಕ್ಷೆಯು ನಿಖರವಾಗಿ ಬಂದಾಗ ಅಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಈ ಸಮಯದಲ್ಲಿ ಚಂದ್ರನು ಸೂರ್ಯನ ಬೆಳಕನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಆವರಿಸುತ್ತದೆ ಮತ್ತು ಅದನ್ನು ಭೂಮಿಗೆ ತಲುಪದಂತೆ ತಡೆಯುತ್ತದೆ. ಆ ಸಮಯದಲ್ಲಿ ಬೆಳಕಿನ ಕೊರತೆಯಿಂದಾಗಿ ಭೂಮಿಯ ಮೇಲೆ ವಿಚಿತ್ರವಾದ ಕತ್ತಲೆ ಇರುತ್ತದೆ. ಈ ವಿದ್ಯಮಾನವನ್ನು ವಿಜ್ಞಾನದ ಭಾಷೆಯಲ್ಲಿ ಸೂರ್ಯ ಗ್ರಹಣ (solar eclipse) ಎಂದು ಕರೆಯಲಾಗುತ್ತದೆ. ಇದು ಅಮಾವಾಸ್ಯದಲ್ಲಿ ಸಂಭವಿಸುತ್ತದೆ, ಏಕೆಂದರೆ ಈ ಸಮಯದಲ್ಲಿ ಭೂಮಿಯಿಂದ ಚಂದ್ರನು ಕಾಣಿಸುವುದಿಲ್ಲ.
ಅರೋಗ್ಯ ಸಮಾಲೋಚನೆಯ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಜ್ಯೋತಿಷ್ಯ ಪರಿಹಾರವನ್ನು ಪಡೆಯಿರಿ.
ಸೂರ್ಯಗ್ರಹಣ ವಿಧಗಳು
ಸಾಮಾನ್ಯವಾಗಿ ಸೂರ್ಯ ಗ್ರಹಣವು ಮೂರು ವಿಧವಾಗಿ ಸಂಭವಿಸುತ್ತದೆ:-
-
ಪೂರ್ಣ ಸೂರ್ಯ ಗ್ರಹಣ: ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದು, ಸೂರ್ಯನ ಬೆಳಕನ್ನು ತನ್ನ ಹಿಂದೆ ಸಂಪೂರ್ಣವಾಗಿ ಆವರಿಸಿದಾಗ ಇದು ಸಂಭವಿಸುತ್ತದೆ. ಈ ಘಟನೆಯನ್ನು ಸಂಪೂರ್ಣ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ.
-
ಆಂಶಿಕ ಸೂರ್ಯ ಗ್ರಹಣ: ಈ ಗ್ರಹಣ ಗೋಚರಿಸಿದಾಗ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು ಸೂರ್ಯನನ್ನು ತನ್ನ ಹಿಂದೆ ಆಂಶಿಕವಾಗಿ ಆವರಿಸುತ್ತದೆ. ಈ ಸಮಯದಲ್ಲಿ ಸೂರ್ಯನ ಪೂರ್ಣ ಬೆಳಕು ಭೂಮಿಯನ್ನು ತಲುಪುವುದಿಲ್ಲ ಮತ್ತು ಈ ಸ್ಥಿತಿಯನ್ನು ಆಂಶಿಕ ಸೂರ್ಯ ಗ್ರಹಣ ಎಂದು ಕರೆಲಾಗುತ್ತದೆ.
-
ಕಂಕಣ ಸೂರ್ಯ ಗ್ರಹಣ: ಸೂರ್ಯ ಗ್ರಹಣದ ಈ ಸ್ಥಿತಿಯಲ್ಲಿ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು ಸೂರ್ಯನನ್ನು ಸಂಪೂರ್ಣವಾಗಿ ಅವರಿಸುವುದಿಲ್ಲ. ಅದರ ಮಧ್ಯ ಭಾಗವನ್ನು ಮಾತ್ರ ಅವರಿಸುತ್ತದೆ. ಈ ಸಮಯದಲ್ಲಿ ಭೂಮಿಯಿಂದ ನೋಡಿದಾಗ, ಸೂರ್ಯನು ಒಂದು ಉಂಗುರದಂತೆ ಕಾಣಿಸಿಕೊಳ್ಳುತ್ತಾನೆ, ಇದನ್ನು ನಾವು ಕಂಕಣ ಸೂರ್ಯ ಗ್ರಹಣ ಎಂದು ಕರೆಯುತ್ತೇವೆ.
ಚಂದ್ರ ಗ್ರಹಣ 2021 (Chandra Grahan 2021)
ಸೂರ್ಯ ಗ್ರಹಣದಂತೆ ಚಂದ್ರ ಗ್ರಹಣವನ್ನು ಸಹ ಖಗೋಳ ಘಟನೆಯೆಂದು ಕರೆಯಲಾಗುತ್ತದೆ. ಭೂಮಿಯು ಸೂರ್ಯನನ್ನು ಪರಿಭ್ರಮಿಸುತ್ತಿರುವಾಗ ಮತ್ತು ಚಂದ್ರನು ಭೂಮಿಯನ್ನು ಸುತ್ತುತ್ತಿರುವ ಸಮಯದಲ್ಲಿ, ಚಂದ್ರನು ಭೂಮಿಯ ಹಿಂದೆ ಅದರ ನೆರಳಿನಲ್ಲಿ ಬರುತ್ತದೆ. ಈ ಸಂದರ್ಭದಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿರುತ್ತವೆ. ಈ ವಿಶಿಷ್ಟ ಘಟನೆಯನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ, ಇದು ಯಾವಾಗಲು ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ.
ಚಂದ್ರ ಗ್ರಹಣ ವಿಧಗಳು
ಸೂರ್ಯ ಗ್ರಹಣದಂತೆ ಚಂದ್ರ ಗ್ರಹಣವು ಸಹ ಮುಖ್ಯವಾಗಿ ಮೂರು ವಿಧವಾಗಿದೆ:-
-
ಪೂರ್ಣ ಚಂದ್ರ ಗ್ರಹಣ: ಭೂಮಿಯು ಸೂರ್ಯನ ಸುತ್ತ ಸುತ್ತಿತ್ತಿರುವಾಗ, ಭೂಮಿಯು ಸೂರ್ಯನ ಮುಂದೆ ಬರುತ್ತಾನೆ ಮತ್ತು ಅದೇ ಸಮಯದಲ್ಲಿ ಭೂಮಿಯ ಮುಂದೆ ಸೂರ್ಯ ಬರುತ್ತಾನೆ. ಈ ಸಂದರ್ಭದಲ್ಲಿ ಭೂಮಿಯು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತದೆ. ಇದರಿಂದಾಗಿ ಸೂರ್ಯನ ಬೆಳಕು ಚಂದ್ರನ ವರೆಗೆ ತಲುಪುವುದಿಲ್ಲ ಮತ್ತು ಈ ಸ್ಥಿತಿಯನ್ನು ಪೂರ್ಣ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.
-
ಆಂಶಿಕ ಚಂದ್ರ ಗ್ರಹಣ: ಈ ಸ್ಥಿತಿಯಲ್ಲಿ, ಭೂಮಿಯು ಭಾಗಶಃ ಚಂದ್ರನನ್ನು ಆವರಿಸುತ್ತದೆ, ಇದನ್ನು ಆಂಶಿಕ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.
-
ನೆರಳು ಚಂದ್ರ ಗ್ರಹಣ: ಚಂದ್ರನು ಭೂಮಿಯನ್ನು ಪರಿಭ್ರಮಿತ್ತಾ ಅದರ ಪೆರುಂಬ್ರಾ ಮೂಲಕ ಹಾದುಹೋಗುತ್ತದೆ, ಇದರಿಂದಾಗಿ ಸೂರ್ಯನ ಬೆಳಕು ಚಂದ್ರನ ಮೇಲೆ ಸ್ವಲ್ಪ ಮಟ್ಟಿಗೆ ತಲುಪುತ್ತದೆ. ಈ ಸ್ಥಿತಿಯಲ್ಲಿ ಚಂದ್ರನ ಮೇಲ್ಮೈ ಸ್ವಲ್ಪ ಮಸುಖವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಇದನ್ನು ನೆರಳು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಇದು ಚಂದ್ರ ಗ್ರಹಣವಲ್ಲ ಏಕೆಂದರೆ ಚಂದ್ರನು ಅದರಲ್ಲಿ ಬೀಳುವುದಿಲ್ಲ. ಈ ಕಾರಣದಿಂದಾಗಿ ಅದರ ಸೂತಕವು ಸಹ ಮಾನ್ಯವಾಗಿಲ್ಲ.
ಸಾಮಾನ್ಯವಾಗಿ ಪ್ರತಿ ಗ್ರಹಣದ ಪ್ರಕಾರ ಮತ್ತು ಆ ಗ್ರಹಣದ ಅವಧಿಯು ಕೆಲವ ಚಂದ್ರನ ಸ್ಥಾನದ ಮೇಲೆ ಮಾತ್ರ ಅವಲಂಬಿಸುತ್ತದೆ. ಆದ್ದರಿಂದ ಈ ವರ್ಷ ಸಂಭವಿಸುವ ಸೂರ್ಯ ಮತ್ತು ಚಂದ್ರ ಗ್ರಹಣಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ:-
-
ಸೂರ್ಯ ಗ್ರಹಣ 2021 (Surya Grahan 2021)
ಗ್ರಹಣ 2021 ರ ಬಗ್ಗೆ ಮಾತನಾಡಿದರೆ, ವರ್ಷ 2021 ರಲ್ಲಿ ಒಟ್ಟು ಎರಡು ಸೂರ್ಯ ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಮೊದಲ ಸೂರ್ಯ ಗ್ರಹಣವು ವರ್ಷದ ಮಧ್ಯದಲ್ಲಿ ಸಂಭವಿಸುತ್ತದೆ ಅಂದರೆ 10 ಜೂನ್ 2021 ರಂದು ಮತ್ತು ಎರಡನೇ ಗ್ರಹಣವು 4 ಡಿಸೆಂಬರ್ 2021 ರಂದು ಸಂಭವಿಸುತ್ತದೆ.
ಮೊದಲ ಸೂರ್ಯ ಗ್ರಹಣ 2021 | ||||
ದಿನಾಂಕ | ಸೂರ್ಯ ಗ್ರಹಣ ಪ್ರಾರಂಭ | ಸೂರ್ಯ ಗ್ರಹಣ ಅಂತ್ಯ | ಕಾಣಿಸಿಕೊಳ್ಳುವ ಕ್ಷೇತ್ರ |
|
10 ಜೂನ್ | 13:42 ಗಂಟೆಯಿಂದ | 18:41 ಗಂಟೆಯ ವರೆಗೆ | ಉತ್ತರ ಅಮೇರಿಕಾದ ಉತ್ತರ ಭಾಗ, ಯೂರೋಪ್ ಮತ್ತು ಏಷ್ಯಾ ದಲ್ಲಿ ಭಾಗಶಃ ಮತ್ತು ಉತ್ತರ ಕೆನಡಾ, ಗ್ರೀನ್ಲ್ಯಾಂಡ್ ಮತ್ತು ಸಂಪೂರ್ಣ ರೂಸ್ |
|
ಸೂಚನೆ: ಮೇಲಿನ ಕೋಷ್ಟಕದಲ್ಲಿ ನೀಡಲಾದ ಸಮಯವು ಭಾರತೀಯ ಸಮಯಕ್ಕೆ ಅನುಗುಣವಾಗಿದೆ. ಈ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಭಾರತದಲ್ಲಿ ಈ ಗ್ರಹಣದ ಧಾರ್ಮಿಕ ಪ್ರಭಾವ ಮತ್ತು ಸೂತಕ ಮಾನ್ಯವಾಗುವುದಿಲ್ಲ.
ಗ್ರಹಣ 2021 ರ ಅಡಿಯಲ್ಲಿ ವರ್ಷದ ಮೊದಲ ಸೂರ್ಯ ಗ್ರಹಣವು ವರ್ಷದ ಮಧ್ಯದಲ್ಲಿ 10 ಜೂನ್ 2021ರಂದು ಸಂಭವಿಸಲಿದೆ, ಇದು ಕಂಕಣ ಸೂರ್ಯ ಗ್ರಹಣವಾಗಿರುತ್ತದೆ. ಚಂದ್ರನು ಭೂಮಿಯನ್ನು ಪರಿಭ್ರಮಿಸುವಾಗ, ಸಾಮಾನ್ಯಕ್ಕಿಂತಲೂ ದೂರವಾಗುತ್ತದೆ, ಇದನ್ನು ಕಂಕಣ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಇರುತ್ತದೆ, ಆದರೆ ಅದರ ಗಾತ್ರವನ್ನು ಭೂಮಿಯಿಂದ ನೋಡಿದಾಗ ಅದು ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅವರಿಸುವಷ್ಟು ಗೋಚರಿಸುವುದಿಲ್ಲ. ಈ ಸಂದರ್ಭದಲ್ಲಿ ಚಂದ್ರನ ಹೊರ ಹಂಚಿನಲ್ಲಿ ಸೂರ್ಯನು ಪ್ರಕಂಶಮಾನವಾಗಿ ರಿಂಗ್ ಅಂದರೆ ಉಂಗುರದಂತೆ ಕಂಡುಬರುತ್ತದೆ. ಈ ಘಟನೆಯನ್ನು ಕಂಕಣ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ, ಈ ಗ್ರಹಣವು ಜೂನ್ 10 ರ ಗುರುವಾರ , ಮಧ್ಯಾಹ್ನ 13:42 ರಿಂದ, 18:41 ರವರೆಗೆ ಇರುತ್ತದೆ.
ವರ್ಷ 2021 ರ ಮೊದಲ ಸೂರ್ಯ ಗ್ರಹಣವು ಭಾರತದಲ್ಲಿ ಕಾಣಿಸುವುದಿಲ್ಲ.
ಭಾರತದಲ್ಲಿ ಈ ಸೂರ್ಯ ಗ್ರಹಣದ ಗೋಚರತೆಯು ಸಂಪೂರ್ಣ ಅಥವಾ ಆಂಶಿಕವಾಗಿ ಕಾಣಿಸುವುದಿಲ್ಲ, ಆದ್ದರಿಂದ ಇದರ ಸೂತಕವು ಭಾರತದಲ್ಲಿ ಪರಿಣಾಮಕಾರಿಯಾಗುವುದಿಲ್ಲ.
ಈಗ ಆಸ್ಟ್ರೋಸೇಜ್ ವಾರ್ತಾ ಮೂಲಕ ಅತ್ಯುತ್ತಮ ಜ್ಯೋತಿಷಿಗಳೊಂದಿಗೆ ನೇರವಾಗಿ ಕರೆಯಲ್ಲಿ ಮಾತನಾಡಿ
ಎರಡನೇ ಸೂರ್ಯ ಗ್ರಹಣ | ||||
ದಿನಾಂಕ | ಸೂರ್ಯ ಗ್ರಹಣದ ಪ್ರಾರಂಭ | ಸೂರ್ಯ ಗ್ರಹಣದ ಅಂತ್ಯ | ಗೋಚರಿಸುವ ಕ್ಷೇತ್ರ |
|
4 ಡಿಸೆಂಬರ್ | 10:59 ರಿಂದ | 15:07 ವರೆಗೆ | ಅಂಟಾರ್ಕ್ಟಿಕಾ, ದಕ್ಷಿಣ ಆಫ್ರಿಕಾ, ಅಂಟ್ಲಾಂಟಿಕದ ದಕ್ಷಿಣ ಭಾಗ, ಆಸ್ಟ್ರೇಲಿಯ, ದಕ್ಷಿಣ ಅಮೇರಿಕ |
|
ಸೂಚನೆ: ಮೇಲಿರುವ ಕೋಷ್ಟಕದಲ್ಲಿ ನೀಡಲಾಗಿರುವ ಸಮಯವು ಭಾರತದ ಸಮಯಕ್ಕೆ ಅನುಗುಣವಾಗಿದೆ. ಈ ಕಾರಣದಿಂದಾಗಿ ಭಾರತದಲ್ಲಿ ಈ ಗ್ರಹಣದ ಧಾರ್ಮಿಕ ಪ್ರಭಾವ ಮತ್ತು ಸೂತಕ ಮಾನ್ಯವಿರುವುದಿಲ್ಲ.
ವರ್ಷ 2021 ರ ಎರಡನೇ ಮತ್ತು ಕೊನೆಯ ಸೂರ್ಯ ಗ್ರಹಣವು 2021 , ಡಿಸೆಂಬರ್ 4, ಶನಿವಾರ ರಂದು ಸಂಭವಿಸುತ್ತದೆ. ಇದು ಸಂಪೂರ್ಣ ಸೂರ್ಯ ಗ್ರಹಣ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು ಸೂರ್ಯನನ್ನು ಆವರಿಸಿದಾಗ, ಸೂರ್ಯನ ಬೆಳಕು ಭೂಮಿಯ ವರೆಗೆ ತಲುಪುವುದಿಲ್ಲ, ಈ ಸನ್ನಿವೇಶವನ್ನು ಪೂರ್ಣ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಈ ಸೂರ್ಯ ಗ್ರಹಣದ ಗೋಚರತೆ ಸಂಪೂರ್ಣವಾಗಿ ಶೂನ್ಯವಾಗಿರುವುದರಿಂದ, ಅದರ ಸೂತಕ ಕಾಲವು ಭಾರತದಲ್ಲಿ ಪರಿಣಾಮಕಾರಿಯಾಗುವುದಿಲ್ಲ. .
ಸೂರ್ಯ ಗ್ರಹಣ 2021 ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ
-
ಚಂದ್ರ ಗ್ರಹಣ 2021
ಗ್ರಹಣ 2021 ರ ಅಡಿಯಲ್ಲಿರುವ ಸೂರ್ಯ ಗ್ರಹಣದಂತೆ ವರ್ಷ 2021 ರಲ್ಲಿ ಎರಡು ಚಂದ್ರ ಗ್ರಹಣಗಳು ಸಂಭವಿಸಲಿವೆ. ಮೊದಲ ಗ್ರಹಣವು ವರ್ಷದ ಮಧ್ಯದಲ್ಲಿ 26 ಮೇ ರಂದು ಸಂಭವಿಸಲಿದೆ, ವರ್ಷದ ಎರಡನೇ ಚಂದ್ರ ಗ್ರಹಣವು 19 ನವೆಂಬರ್, 2021 ರಂದು ಸಂಭವಿಸುತ್ತದೆ.
ಮೊದಲ ಚಂದ್ರ ಗ್ರಹಣ 2021 | ||||
ದಿನಾಂಕ | ಚಂದ್ರ ಗ್ರಹಣದ ಪ್ರಾರಂಭ | ಚಂದ್ರ ಗ್ರಹಣದ ಅಂತ್ಯ | ಗ್ರಹಣದ ವಿಧಾನ | ಗೋಚರತೆಯ ಕ್ಷೇತ್ರ |
26 ಮೇ | 14:17 ರಿಂದ | 19:19 ವರೆಗೆ | ಪೂರ್ಣ ಚಂದ್ರ ಗ್ರಹಣ | ಭಾರತ,ಪೂರ್ವ ಏಷಿಯ, ಆಸ್ಟ್ರೇಲಿಯ, ಪೆಸಿಫಿಕ್ ಸಾಗರ ಮತ್ತು ಅಮೇರಿಕ |
ಸೂಚನೆ: ಮೇಲಿರುವ ಕೋಷ್ಟಕದಲ್ಲಿ ನೀಡಲಾಗಿರುವ ಸಮಯವೂ ಭಾರತದ ಸಮಯಕ್ಕೆ ಅನುಗುಣವಾಗಿದೆ. ಈ ಕಾರಣದಿಂದಾಗಿ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಆದರೆ ಇಲ್ಲಿ ಈ ಚಂದ್ರ ಗ್ರಹಣವು ಉಪ ನೆರಳು ಗ್ರಹಣದಂತೆ ಗೋಚರಿಸುತ್ತದೆ, ಆದ್ದರಿಂದ ಭಾರತದಲ್ಲಿ ಈ ಚಂದ್ರ ಗ್ರಹಣದ ಧಾರ್ಮಿಕ ಪ್ರಭಾವ ಮತ್ತು ಸೂತಕ ಮಾನ್ಯವಾಗಿಲ್ಲ.
ಗ್ರಹಣ 2021 ರ ಮೊದಲ ಚಂದ್ರ ಗ್ರಹಣವು ವರ್ಷದ ಮಧ್ಯದಲ್ಲಿ 26 ಮೇ 2021, ಬುಧವಾರದಂದು ಸಂಭವಿಸಲಿದೆ. ಹಿಂದೂ ಪಂಚಾಂಗದ ಪ್ರಕಾರ, ಈ ಗ್ರಹಣದ ಸಮಯವು ಮಧ್ಯಾಹ್ನ 14:17 ರಿಂದ ರಾತ್ರಿ 19:19 ವರೆಗೆ ಇರುತ್ತದೆ.
ಈ ಗ್ರಹಣವು ಪೂರ್ಣ ಚಂದ್ರ ಗ್ರಹಣ.ಇದು ಭಾರತ,ಪೂರ್ವ ಏಷಿಯ, ಆಸ್ಟ್ರೇಲಿಯ, ಪೆಸಿಫಿಕ್ ಸಾಗರ ಮತ್ತು ಅಮೇರಿಕಾದಲ್ಲಿ ಪೂರ್ಣ ಚಂದ್ರನ ಗ್ರಹಣದಂತೆ ಗೋಚರಿಸುತ್ತದೆ. ಆದರೆ ಭಾರತದಲ್ಲಿ ಇದು ಕೇವಲ ನೆರಳು ಗ್ರಹಣವಾಗಿ ಕಂಡುಬರುತ್ತದೆ. ಈ ಕಾರಣದಿಂದಾಗಿ ಭಾರತದಲ್ಲಿ ಇದರ ಸೂತಕವಿರುವುದಿಲ್ಲ.
ಎರಡನೇ ಚಂದ್ರ ಗ್ರಹಣ 2021 | ||||
ದಿನಾಂಕ | ಚಂದ್ರ ಗ್ರಹಣದ ಪ್ರಾರಂಭ | ಚಂದ್ರ ಗ್ರಹಣದ ಅಂತ್ಯ | ಗ್ರಹಣದ ವಿಧಾನ | ಗೋಚರತೆಯ ಕ್ಷೇತ್ರ |
19 ನವೆಂಬರ್ | 11:32 ರಿಂದ | 17:33 ವರೆಗೆ | ಆಂಶಿಕ | ಭಾರತ, ಅಮೇರಿಕ, ಉತ್ತರಯುರೋಪ್, ಪೂರ್ವಏಷಿಯ, ಆಸ್ಟ್ರೇಲಿಯ ಮತ್ತು ಪೆಸಿಫಿಕ್ ಮಹಾಸಾಗರದ ಕೆಲವು ಪ್ರದೇಶಗಳು |
ಸೂಚನೆ: ಮೇಲಿರುವ ಕೋಷ್ಟಕದಲ್ಲಿ ನೀಡಲಾಗಿರುವ ಸಮಯವೂ ಭಾರತೀಯ ಸಮಯಕ್ಕೆ ಅನುಗುಣವಾಗಿದೆ. ಈ ಕಾರಣದಿಂದಾಗಿ ಚಂದ್ರ ಗ್ರಹಣವು ಭಾರತದಲ್ಲಿ ಕಾಣಿಸುವುದಿಲ್ಲ ಆದರೆ ನೆರಳು ಗ್ರಹಣದ ರೂಪದಲ್ಲಿ ಗೋಚರಿಸುವುದರಿಂದ, ಈ ಚಂದ್ರ ಗ್ರಹಣದ ಧಾರ್ಮಿಕ ಪ್ರಭಾವ ಮತ್ತು ಸೂತಕವು ಇಲ್ಲಿ ಮಾನ್ಯವಾಗುವುದಿಲ್ಲ.
ವರ್ಷ 2021 ರ ಎರಡನೇ ಮತ್ತು ಕೊನೆಯ ಚಂದ್ರ ಗ್ರಹಣವು 19 ನವೆಂಬರ್, 2021 ರಂದು ಸಂಭವಿಸಲಿದೆ. ಶುಕ್ರವಾರ ಮಧ್ಯಾಹ್ನ 11:32 ರಿಂದ ರಾತ್ರಿ 17:33 ರವರೆಗೆ ನಡೆಯುತ್ತದೆ.
ಭಾರತದಲ್ಲಿ ಇದು ನೆರಳು ಚಂದ್ರ ಗ್ರಹಣದಂತೆ ಗೋಚರಿಸುವುದರಿಂದ, ಇಲ್ಲಿ ಇದರ ಸೂತಕ ಪರಿಣಾಮ ಬೀರುವುದಿಲ್ಲ.
ಚಂದ್ರ ಗ್ರಹಣದ 2021 ರ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿಯಿರಿ
ಗ್ರಹಣದ ಸೂತಕ ಸಮಯ ಮತ್ತು ಅದರ ಲೆಕ್ಕಾಚಾರ
ಸೂತಕ ಸಮಯವು ಬಹಳ ಅಶುಭ ಸಮಯ, ಆದ್ದರಿಂದ ಸೂರ್ಯ ಮತ್ತು ಚಂದ್ರ ಗ್ರಹಣ ಸಂಭವಿಸುವ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ರೀತಿಯ ಶುಭ ಅಥವಾ ಮಂಗಲಿಕ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿ ಸೂತಕ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ನಿರ್ವಹಿಸಿದರೆ, ಅವನು ಶುಭ ಫಲಿತಾಂಶಗಳ ಬದಲು ಅತ್ಯಂತ ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತಾನೆ. ಆದಾಗ್ಯೂ, ಧಮ್ರಗ್ರಂಥಗಳಲ್ಲಿಯೇ ಈ ಸೂತಕ ಅವಧಿಯ ದುಷ್ಪರಿಣಾಮಗಳನ್ನು ತಪ್ಪಿಸಲು ಕೆಲವು ಕ್ರಮಗಳಿವೆ, ವ್ಯಕ್ತಿಯು ಅವುಗಳನ್ನು ಗ್ರಹಣದ ಸಮಯದಲ್ಲಿ ಅಳವಡಿಸಿಕೊಂಡರೆ, ಅವನು ತನ್ನನ್ನು ಮತ್ತು ತನ್ನ ಕುಟುಂಬವನ್ನು ಸಹ ಗ್ರಹಣದ ದುಷ್ಪರಿಣಾಮಗಳಿಂದ ರಕ್ಷಿಸಿಕೊಳ್ಳಬಹುದು. ನಡೆಯಿರಿ ಈಗ ಸೂತಕ ಅವಧಿಯನ್ನು ಲೆಕ್ಕಹಾಕುವುದು ಹೇಗೆ ಎಂಬುದನ್ನು ತಿಳಿಯೋಣ, ಇದರಿಂದ ಗ್ರಹಣ 2021 ರ ಸೂತಕ ಸಮಯವನ್ನು ತಿಳಿಯಲು ಸಾಧ್ಯವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಣದ ಸೂತಕ ಸಮಯದಲ್ಲಿ ಪ್ರತಿಯೊಂದು ರೀತಿಯ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ ಎಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಗ್ರಹಣದ ಸೂತಕ ಅವಧಿ ಎಷ್ಟು ಸಮಯ ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಸೂತಕ ಅವಧಿಯ ಲೆಕ್ಕಾಚಾರಕ್ಕಾಗಿ ಸರ್ವ ಪ್ರಥಮವಾಗಿ ಸಂಭವಿಸಲಾಗುವ ಸೂರ್ಯ ಗ್ರಹಣ ಅಥವಾ ಚಂದ್ರ ಗ್ರಹಣದ ಸಮಯವನ್ನು ತಿಳಿದುಕೊಳ್ಳುವುದು ಬಹಳ ಅವಶ್ಯಕ.
ಸೂರ್ಯ ಗ್ರಹಣ ಸಂಭವಿಸುವ 12 ಗಂಟೆಗಳ ಮೊದಲಿನಿಂದಲೇ ಸೂರ್ಯ ಗ್ರಹಣದ ಸೂತಕ ಅವಧಿಯು ಆರಂಭಿಸುತ್ತದೆ ಮತ್ತು ಇದು ಸೂರ್ಯ ಗ್ರಹಣವು ಮುಗಿದ ನಂತರ ಕೊನೆಗೊಳ್ಳುತ್ತದೆ ಎಂದು ಪರಿಗಣಿಸಲಾಗಿದೆ. ಚಂದ್ರ ಗ್ರಹಣದ ಸಮಯದಲ್ಲಿ, ಗ್ರಹಣ ಆರಂಭಿಸುವ 9 ಗಂಟೆಗಳ ಮೊದಲು ಆ ಚಂದ್ರ ಗ್ರಹಣದ ಸೂತಕ ಅವಧಿಯು ಆರಂಭಿಸುತ್ತದೆ ಮತ್ತು ಗ್ರಹಣವು ಮುಗಿದ ನಂತರ ಸೂತಕ ಅವಧಿಯು ಕೊನೆಗೊಳ್ಳುತ್ತದೆ. ನಡೆಯಿರಿ ಈಗ ಸೂತಕ ಅವಧಿಯಲ್ಲಿ ಯಾವ ವಿಶೇಷ ಕಾರ್ಯಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಯೋಣ:-
ಗ್ರಹಣ 2021 ರ ಸೂತಕ ಅವಧಿಯಲ್ಲಿ ಖಂಡಿತವಾಗಿಯೂ ಈ ಕೆಲಸವನ್ನು ಮಾಡಿ
-
ಗ್ರಹಣದ ಸಮಯದಲ್ಲಿ ಕಡಿಮೆ ಮಾತನಾಡಿ ಮತ್ತು ಸಾಧ್ಯವಾದರೆ ಮನಸ್ಸಿನಲ್ಲಿ ದೇವರನ್ನು ಜಪಿಸಿ
-
ಸೂತಕ ಕಾಲದ ಸಮಯದಲ್ಲಿ ಗ್ರಹಣಕ್ಕೆ ಸಂಬಂಧಿಸಿದ ಗ್ರಹಗಳ ಶಾಂತಿಗಾಗಿ ಪೂಜಿಸಿ ಮತ್ತು ಪಠಿಸಿ.
-
ಸೂತಕ ಅವಧಿಯಲ್ಲಿ ಯೋಗ ಮತ್ತು ಧ್ಯಾನವನ್ನು ಮಾಡಿ.ಏಕೆಂದರೆ ಇದನ್ನು ಮಾಡುವುದರಿಂದ ನಿಮ್ಮ ಮಾನಸಿಕ ಶಕ್ತಿಯು ಬೆಳೆಯುತ್ತದೆ, ಇದು ಮಾತ್ರವಲ್ಲದೆ ನೀವು ನಿಮ್ಮ ದೇಹವನ್ನು ಎಲ್ಲಾ ರೀತಿಯ ಅಡ್ಡಪರಿಣಾಮಗಳಿಂದ ರಕ್ಷಿಸುವಲ್ಲಿ ಯಶಸ್ವಿಯಾಗುತ್ತೀರಿ.
-
ಸೂತಕ ಅವಧಿಯಲ್ಲಿ ಅಡಿಗೆ ಮಾಡಬೇಡಿ ಮತ್ತು ಮೊದಲೇ ತಯಾರಿಸಿದ ಆಹಾರಕ್ಕೆ ಕೆಲವು ತುಳಸಿ ಎಲೆಗಳನ್ನು ಸೇರಿಸಿ.
-
ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯ ಮಂತ್ರ ಮತ್ತು ಚಂದ್ರ ಗ್ರಹಣದ ಸಮಯದಲ್ಲಿ ಚಂದ್ರ ಮಂತ್ರವನ್ನು ಜಪಿಸಬೇಕು
-
ಪೂಜೆಯ ಸಮಯದಲ್ಲಿ ಮಣ್ಣಿನ ದೀಪಗಳನ್ನು ಮಾತ್ರ ಬಳಸಿ.
-
ಸೂತಕ ಅವಧಿಯು ಮುಗಿದಾಗ ಸ್ನಾನ ಮಾಡಿ ನಂತರ ಪೂಜೆ ಮಾಡಿ.
-
ಗ್ರಹಣದ ಕೊನೆಯಲ್ಲಿ ಮನೆ ಮತ್ತು ಪೂಜಾ ಸ್ಥಳದಲ್ಲಿ ಗಂಗಾ ನೀರನ್ನು ಸಿಂಪಡಿಸಿ, ಅದನ್ನು ಶುದ್ಧೀಕರಿಸಿ.
ಸೂತಕ ಸಮಯದಲ್ಲಿ ಈ ಕೆಲಸಗಳನ್ನು ತಪ್ಪಾಗಿ ಮಾಡಬೇಡಿ
-
ಸೂತಕ ಕಾಲದಿಂದ ಗ್ರಹಣ ಮುಗಿಯುವವರೆಗೆ ಯಾವುದೇ ರೀತಿಯ ಕೆಲಸ ಮಾಡಬಾರದು.
-
ಈ ಸಮಯದಲ್ಲಿ ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳಿ ಮತ್ತು ಕಾಮದಂತಹ ಅಸ್ವಸ್ಥೆತೆ ಗಳು ಮನಸ್ಸಿನಲ್ಲಿ ಬರಲು ಬಿಡಬೇಡಿ.
-
ಪ್ರಯಾಣಿಸುವುದನ್ನು ತಪ್ಪಿಸಿ ಮತ್ತು ಸಾಧ್ಯವಾದರೆ ಈ ಸಮಯದಲ್ಲಿ ಮನೆಯಿಂದ ಹೊರಹೋಗಬೇಡಿ.
-
ಕತ್ರಿ, ಸೂಜಿ, ಚಾಕು, ಇತ್ಯಾದಿಗಳಂತಹ ಯಾವುದೇ ತೀಕ್ಷ್ಣವಾದ ವಸ್ತುಗಳನ್ನು ಬಳಸಬೇಡಿ.
-
ಆಹಾರ ತಿನ್ನುವುದನ್ನು ಮತ್ತು ಬೇಯಿಸುವುದನ್ನು ತಪ್ಪಿಸಿ.
-
ಪೂಜೆ ಮಾಡುವ ಸಮಯದಲ್ಲಿ ದೇವರ ವಿಗ್ರಹವನ್ನು ಮುಟ್ಟಬೇಡಿ.
-
ಕೂದಲು ಬಾಚಣಿಗೆ, ಹಲ್ಲು ಸ್ವಚ್ಛಗೊಳಿಸುವುದು, ಬಟ್ಟೆ ಒಗೆಯುವುದು.ಇತ್ಯಾದಿಗಳಂತಹ ವೈಯಕ್ತಿಕ ಕೆಲಸಗಳನ್ನು ತಪ್ಪಿಸಿ.
-
ಸೂತಕ ಅವಧಿಯಲ್ಲಿ ನಿದ್ರೆ ಮಾಡುವುದನ್ನು ಸಹ ತಪ್ಪಿಸಬೇಕು.
ಗ್ರಹಣ 2021 ರ ಸೂತಕ ಸಮಯದಲ್ಲಿ ಗರ್ಭಿಣಿಯರು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು
-
ಗರ್ಭಿಣಿಯರು ಗ್ರಹಣ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ತಮ್ಮ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಬೇಕು.
-
ಈ ಸಮಯದಲ್ಲಿ ಗರ್ಭಿಣಿಯರು ಚಾಕು, ಸೂಜಿ ಅಥವಾ ಇತರ ಚೂಪಾದ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಮಗುವಿನ ಅಂಗಗಳನ್ನು ಹಾನಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
-
ಹೊಲಿಗೆ ಅಥವಾ ಕಸೂತಿಯಂತಹ ಕೆಲಸವನ್ನು ಸಹ ತಪ್ಪಾಗಿ ಮಾಡಬಾರದು.
-
ಸೂತಕ ಸಮಯದಲ್ಲಿ ಯಾವುದೇ ರೀತಿಯ ಆಭರಣಗಳನ್ನು ಧರಿಸಬೇಡಿ
-
ಗ್ರಹಣ ಮುಗಿಯುವ ವರೆಗೆ ನಿದ್ರಿಸುವುದು ಮತ್ತು ಮಲಗುವುದನ್ನು ತಪ್ಪಿಸಬೇಕು.
-
ಸಾಧ್ಯವಾದರೆ, ಸೂತಕ ಅವಧಿಯಲ್ಲಿ ದುರ್ವಾಹುಲ್ಲು ತೆಗೆದುಕೊಂಡು ಸಂತಾನ ಗೋಪಾಲ ಮಂತ್ರವನ್ನು ಜಪಿಸಿ.
ಗ್ರಹಣ 2021 ರ ಸೂತಕ ಸಮಯದಲ್ಲಿ ಬಳಸಲಾಗುವ ಮಂತ್ರ
ಶಾಸ್ತ್ರಗಳ ಪ್ರಕಾರ, ಗ್ರಹಣದ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಲು ಒಬ್ಬ ವ್ಯಕ್ತಿಯು, ಆ ಗ್ರಹಣಕ್ಕೆ ಸಂಬಂಧಿಸಿದ ಗ್ರಹಗಳ ಕೆಳಗಿನ ಮಂತ್ರಗಳನ್ನು ಜಪಿಸಬೇಕು:-
ಸೂರ್ಯ ಗ್ರಹಣದಲ್ಲಿ ಈ ಮಂತ್ರವನ್ನು ಜಪಿಸಿ | ಚಂದ್ರ ಗ್ರಹಣದಲ್ಲಿ ಈ ಮಂತ್ರವನ್ನು ಜಪಿಸಿ |
"ಓಂಆದಿತ್ಯಯ್ ವಿದ್ಮಹೇ ದಿವಾಕರಯ್ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್” | “ಓಂ ಕ್ಷೀರಪುತ್ರಾಯ್ ವಿದ್ಮಹೇ ಅಮೃತ ತತ್ವಾಯ್ ಧೀಮಹಿ ತನ್ನೋ ಚಂದ್ರ ಪ್ರಚೋದಯಾತ್” |
ಕಾಗ್ನಿಆಸ್ಟ್ರೋ ವೃತ್ತಿ ಸಮಾಲೋಚನೆ ರಿಪೋರ್ಟ್ ಮೂಲಕ ನಿಮ್ಮ ವೃತ್ತಿಜೀವನದಲ್ಲಿ ಸರಿಯಾದ ಆಯ್ಕೆಯನ್ನು ಆರಿಸಿ!
ಗ್ರಹಣದ ಪೌರಾಣಿಕ ಮಹತ್ವ
ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ಸಂಬಂಧಿಸಿದ ಅನೇಕ ಪೌರಾಣಿಕ ನಂಬಿಕೆಗಳಿವೆ, ಆದರೆ ಅವುಗಳಲ್ಲಿ ರಾಹು-ಕೇತುವಿನ ಕಥೆ ಬಹಳ ಪ್ರಸಿದ್ಧವಾಗಿದೆ. ಅದೇ ಪೌರಾಣಿಕ ಕಥೆಯ ಪ್ರಕಾರ, ಅಮೃತ ಮಂಥನದ ಸಮಯದಲ್ಲಿ ತನ್ನ ಶತ್ರುತತೆಯ ದ್ವೇಷದಿಂದಾಗಿ ಸೂರ್ಯ ಮತ್ತು ಚಂದ್ರನನ್ನು ನೆರಳು ಗ್ರಹ ರಾಹು ಮತ್ತು ಕೇತುವು ಪ್ರತಿ ವರ್ಷ ಗ್ರಹಣ ಮಾಡುತ್ತಾರೆ ಎಂದು ನಂಬಲಾಗಿದೆ.
ಸಮುದ್ರ ಮಂಥನದ ಸಮಯದಲ್ಲಿ ಈ ದ್ವೇಷವು ಹುಟ್ಟಿತು. ಸಮುದ್ರ ಮಂಥನದ ನಂತರ ಸಮುದ್ರದಿಂದ 14 ರತ್ನಗಳು ಹೊರಬಂದವು, ಅವುಗಳಲ್ಲಿ ಒಂದು ಅಮೃತ. ಪ್ರತಿಯೊಬ್ಬ ದೇವರು ಮತ್ತು ಅಸುರರು ಅಮೃತವನ್ನು ಕುಡಿದು ಅಮರರಾಗಲು ಬಯಸಿದ್ದರು. ನಂತರ ಪ್ರಾರಂಭವಾಯಿತು ಅಮೃತ ಪಾನದ ಯುದ್ಧ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ರಾಕ್ಷಸನು ಆ ಅಮೃತವನ್ನು ಸೇವಿಸಿದರೆ, ಅದು ಇಡೀ ಜಗತ್ತಿಗೆ ಮಾರಕವಾಗುತ್ತಿತ್ತು. ಇದನ್ನು ಅರಿತ ಭಗವಂತ ವಿಷ್ಣು ಒಂದು ಯೋಜನೆಯನ್ನು ಮಾಡಿದನು ಮತ್ತು ಅದೇ ಯೋಜನೆಯ ಪ್ರಕಾರ, ಅಸುರರು ಅಮೃತವನ್ನು ಕುಡಿಯುವುದನ್ನು ತಡೆಯಲು ವಿಷ್ಣು ಸ್ವತಃ ಅಪ್ಸರ ಮೋಹಿನಿಯ ರೂಪವನ್ನು ಧರಿಸಿ ಎಲ್ಲಾ ಅಸುರರನ್ನು ವಶಪಡಿಸಿಕೊಂಡರು.
ಈ ಸಮಯದಲ್ಲಿ ಅಮೃತವನ್ನು ಎರಡೂ ಬದಿಗಳಲ್ಲಿ ಸಮಾನವಾಗಿ ವಿಂಗಡಿಸಲಾಯಿತು. ಆಗ ಭಗವಂತ ವಿಷ್ಣು ಮೋಸ ಮಾಡಿ ದೇವರುಗಳಿಗೆ ಅಮೃತ ಮತ್ತು ಅಸುರರಿಗೆ ಸಾಮಾನ್ಯ ನೀರನ್ನು ಕುಡಿಸಲು ಪ್ರಾರಂಭಿಸಿದನು. ಆದರೆ ಎಲ್ಲಾ ಅಸುರರು ವಿಷ್ಣುವಿನ ಹೆಜ್ಜೆಯಲ್ಲಿ ಸಿಲುಕುವ ಮೊದಲು, ಅಲ್ಲಿ ಹಾಜರಿದ್ದ ಸ್ವರಭಾನು ಎಂಬ ರಾಕ್ಷಸನು ವಿಷ್ಣುವಿನ ಯೋಜನೆಯನ್ನು ಅರ್ಥಮಾಡಿಕೊಂಡನು ಮತ್ತು ಅವನು ಅಮೃತವನ್ನು ಪಡೆಯಲು ದೇವರುಗಳ ರೂಪವನ್ನು ಧರಿಸಿ ದೇವರುಗಳ ಸಾಲಿನಲ್ಲಿ ನಿಂದುಕೊಂಡನು.
ಮೋಹಿನಿ ರೂಪದಲ್ಲಿ ಭಗವಂತ ವಿಷ್ಣುವು, ದೇವರ ರೂಪದಲ್ಲಿದ್ದ ಸ್ವರಭಾನು ರಾಕ್ಷಸನಿಗೆ ಅಮೃತವನ್ನು ಕುಡಿಸಲು ಬಂದಾಗ, ಸೂರ್ಯ ಮತ್ತು ಚಂದ್ರ ದೇವರು ಸರ್ವ ಪ್ರಮಥಮವಾಗಿ ರಾಕ್ಷಸನನ್ನು ಗುರುತಿಸಿದರು ಮತ್ತು ಭಗವಂತ ವಿಷ್ಣುವಿಗೆ ಎಚ್ಚರಿಕೆ ನೀಡಿದರು. ಆದರೆ, ಆ ಹೊತ್ತಿಗೆ ಸ್ವರಭಾನು ಕೆಲವು ಹನಿ ಅಮೃತವನ್ನು ಕುಡಿತುಬಿಟ್ಟಿದ್ದನು. ಅಸುರರ ಈ ತಂತ್ರದಿಂದ ಕೋಪಗೊಂಡ ಭಗವಂತ ವಿಷ್ಣು ತನ್ನ ಸುದರ್ಶನ ಚಕ್ರವನ್ನು ಚಲಾಯಿಸಿದರು. ಇದರಿಂದಾಗಿ ಅಸುರ ಸ್ವರಭಾನುವಿನ ತಲೆಯನ್ನು ಅವನ ಮುಂಡದಿಂದ ಕತ್ತರಿಸಲಾಯಿತು. ಆದರೆ ಸ್ವರಭಾನು ಕೆಲವು ಹನಿ ಅಮೃತವನ್ನು ಕುಡಿದಿರುವುದರಿಂದ ಸಾಯಲಿಲ್ಲ ಮತ್ತು ಅವನ ತಲೆಯನ್ನು ರಾಹು ಮತ್ತು ಮುಂಡವನ್ನು ಕೇತು ಎಂದು ಕೆರೆಯಲಾಯಿತು.
ಸೂರ್ಯ ಮತ್ತು ಚಂದ್ರ ದೇವರು ಎಲ್ಲರ ಮುಂದೆ ರಾಹು-ಕೇತು(ಸ್ವರಭಾನು) ಯನ್ನು ಬಹಿರಂಗಪಡಿಸಿದ್ದರು ಆದ್ದರಿಂದ ರಾಹು ಮತ್ತು ಕೇತುವು ತನ್ನ ದ್ವೇಷದ ಕಾರಣದಿಂದಾಗಿ ಪ್ರತಿ ವರ್ಷ ಸೂರ್ಯ ಮತ್ತು ಚಂದ್ರನನ್ನು ಗ್ರಹಣ ಮಾಡುತ್ತಾರೆ ಎಂದು ನಂಬಲಾಗಿದೆ.
ವರ್ಷ 2021 ರ ಗ್ರಹಣಕ್ಕೆ ಸಂಬಂಧಿಸಿದ ಈ ಲೇಖನವು ನಿಮಗೆ ಇಷವಾಗಿದೆ ಎಂದು ನಾವು ಭಾವಿಸುತ್ತೇವೆ. ಈ ಲೇಖನವನ್ನು ಇಷ್ಟಪಟ್ಟ ಮತ್ತು ಓದಿದ್ದಕ್ಕಾಗಿ ಧನ್ಯವಾದಗಳು!