ಕರ್ಕ ರಾಶಿಯಲ್ಲಿ ಸೂರ್ಯ ಸಂಚಾರ (16th July 2021 )
ಸೂರ್ಯನನ್ನು ಆತ್ಮದ ಅಂಶದ ಗ್ರಹವೆಂದು ಪರಿಗಣಿಸಲಾಗಿದೆ. ಅಗ್ನಿಯ ಅಂಶದ ಈ ಗ್ರಹವು ಎಲ್ಲಾ ಗ್ರಹಗಳ ರಾಜ. ಸೂರ್ಯ ಗ್ರಹವು ಮಿಥುನ ರಾಶಿಯಿಂದ ಭಾವನೆಗಳ ಅಂಶವಾದ ಕರ್ಕ ರಾಶಿಯಲ್ಲಿ ಗೋಚರಿಸುತ್ತದೆ. ಇದರರ್ಥ ಬೇಗೆಯ ಶಾಖವು ಸ್ವಲ್ಪ ಸಮಯದ ವರೆಗೆ ಶಾಂತವಾಗುತ್ತದೆ.
ಆಸ್ಟ್ರೋಸೇಜ್ ವಾರ್ತಾ ಮೂಲಕ ವಿಶ್ವದ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ
ಸೂರ್ಯನನ್ನು ಪ್ರಾಬಲ್ಯ, ಸ್ಥಾನ, ಪ್ರತಿಷ್ಠೆ ಮತ್ತು ಶಕ್ತಿಯ ಅಂಶವೆಂದು ಪರಿಗಣಿಸಲಾಗಿದೆ. ಆದರೆ ಕರ್ಕ ರಾಶಿಯನ್ನು ಸ್ತ್ರೀವಾದ, ಪೋಷಣೆ ಮತ್ತು ವೈಯಕ್ತಿಕ ಆರೈಕೆಯ ಮಹತ್ವದ್ದಾಗಿ ಪರಿಗಣಿಸಲಾಗಿದೆ. ಆದ್ದರಿಂದ ಈ ಸಂಚಾರವು ಸೂಕ್ಷ್ಮತೆ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ನೀಡಬಲ್ಲದು. ಅಲ್ಲದೆ, ಇದು ಪ್ರತಿ ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಪಡೆಯಲು ಪ್ರೇರೇಪಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಿಮಗಾಗಿ ಸೀಮಿತರಾಗಿರುತ್ತೀರಿ ಮತ್ತು ನಿಮ್ಮ ವರ್ತನೆ ರಕ್ಷಾತ್ಮಕವಾಗಿರುತ್ತದೆ.
ಸೂರ್ಯ ಸಂಚಾರವು 16 ಜೂಲೈ 2021 ರಂದು ಸಂಜೆ 16:41ಗಂಟೆಗೆ ಸಂಭವಿಸುತ್ತದೆ ಮತ್ತು ಸೂರ್ಯ ಗ್ರಹವು 17 ಆಗಸ್ಟ್ 2021, 1:05 ಗಂಟೆಯವರೆಗೆ ಇದೇ ರಾಶಿಯಲ್ಲಿರುತ್ತದೆ. ಇದರ ನಂತರ ಸೂರ್ಯ ತನ್ನ ಸ್ವರಾಶಿ ಸಿಂಹದಲ್ಲಿ ಪ್ರವೇಶಿಸುತ್ತದೆ.
ನಡೆಯಿರಿ ಸೂರ್ಯ ಸಂಚಾರವು ಎಲ್ಲ ರಾಶಿಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಗೋಚರಿಸುತ್ತಾರೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬ ಜೀವನದ ಮೇಲೆ ಸೂರ್ಯನ ಪರಿಣಾಮ ಬೀರಬಹುದು. ಮನೆ - ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಈ ರಾಶಿಚಕ್ರದ ಸ್ಥಳೀಯರು ಸ್ವಲ್ಪ ಗೊಂದಲಕ್ಕೆ ಒಳಗಾಗಬಹುದು. ಏಕೆಂದರೆ ನಿಮ್ಮ ಮನಸ್ಸು ಮತ್ತು ಬುದ್ಧಿ ಎರಡೂ ವಿಬ್ಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತವೆ. ನಿಮ್ಮ ಕ್ರಿಯಾತ್ಮಕ ಆಲೋಚನೆಗಳು ನಿಮ್ಮ ಭಾವನೆಗಳಿಗೆ ಹೊಂದಿಕೆಯಾಗುವುದಿಲ್ಲ. ಈ ಸಮಯದಲ್ಲಿ ಮನೆಯ ಸದಸ್ಯರೊಂದಿಗೆ ವಿರೋಧಾಭಾಸದ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನೀವು ಏಕಾಂಗಿಯಾಗಿ ಅನುಭವಿಸುವಿರಿ. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಟಲೀಯರು ಪೂರ್ವಜರ ಆಸ್ತಿಯಿಂದ ಲಾಭವನ್ನು ಪಡೆಯಬಹುದು. ಈ ಸಮಯದಲ್ಲಿ ಸಾಮಾಜಿಕ ಜೀವನದಲ್ಲಿ ನೀವು ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಸಮಾಜದ ನಡುವೆ ಆಕರ್ಷಣದ ಕೇಂದ್ರವಾಗುವಿರಿ.
ಈ ಸಮಯದಲ್ಲಿ ನಿಮ್ಮ ತಾಯಿ ಮನೆಯ ಬಾಸ್ ನಾಂತ್ ಕಾಣುತ್ತಾರೆ. ಈ ಕಾರಾದಿಂದಾಗಿ ಮನೆಯ ಕಿರಿಯ ಸದಸ್ಯರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳ ಸ್ವಲ್ಪ ಗೊಂದಲಕ್ಕೆ ಒಳಗಾಗಬಹುದು ಮತ್ತು ಅವರಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ಕಾಣಬಹುದು. ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಅದೇ ಸಮಯದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಲು ಪ್ರಯತ್ನಿಸುತ್ತಿರುವ ಜನರು ಸಹ ಈ ಸಮಯದಲ್ಲಿ ಯಶಸ್ಸು ಪಡೆಯಬಹುದು. ಈ ಸಮಯದಲ್ಲಿ ಮೇಷ ರಾಶಿಚಕ್ರದ ಸ್ಥಳೀಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ನೀವು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಹೊಂದಿರಬಹುದು. ಇದರೊಂದಿಗೆ ನಿಮ್ಮ ತಾಯಿಗೆ ಕೂಡ ಅಧಿಕ ರಕ್ತದೊತ್ತಡದ ಸಮಸ್ಯೆ ಇರಬಹುದು ಆದ್ದರಿಂದ ಅವರ ಆರೋಗ್ಯದ ಬಗ್ಗೆಯೂ ವಿಶೇಷ ಕಲ್ಜಿ ವಹಿಸಿ ಎಂದು ಸೂಚಿಸಲಾಗಿದೆ.
ಪರಿಹಾರ - ಮಂಗಳವಾರ ಉಪವಾಸ ಮಾಡುವುದು ನಿಮಗೆ ಉತ್ತಮ.
ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಅವರ ಮೂರನೇ ಮನೆಗೆ ಗೋಚರಿಸುತ್ತಾರೆ. ಈ ಸಮಯದಲ್ಲಿ ನೀವು ಶಕ್ತಿಯಿಂದ ತುಂಬಿರುತ್ತೀರಿ ಮತ್ತು ಸಮತೋಲನದಲ್ಲಿರುತ್ತೀರಿ. ಈ ಸಮಯದಲ್ಲಿ ಪ್ರತಿಯೊಂದು ಕೆಲಸವನ್ನು ನೀವು ಬಹಳ ಬಲದೊಂದಿಗೆ ಪೂರ್ಣಗೊಳಿಸುವಿರಿ. ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಅಲ್ಪ ದೂರದ ಪ್ರಯಾಣ ಮಾಡಲು ಇದು ಉತ್ತಮ ಸಮಯ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಪ್ರತಿಯೊಂದು ಕೆಲಸವನ್ನು ನೀವು ಸಂಪೂರ್ಣ ಜಾಗರೂಕತೆಯೊಂದಿಗೆ ಮಾಡುವಿರಿ. ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರಿಂದ ಕೆಲಸಕ್ಕೆ ಸಂಬಂಧಿಸಿದ ಬೆಂಬಲವನ್ನು ಪಡೆಯಬಹುದು. ಇದರಿಂದಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕ್ರೀಡೆಯಲ್ಲಿ ಭಾಗವಹಿಸುವ ಈ ರಾಶಿಚಕ್ರದ ಸ್ಥಳೀಯರು ಸಹ ಈ ಸಮಯದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ.
ಶಿಕ್ಷಣಕ್ಕಾಗಿ ತಮ್ಮ ಮನೆಯಿಂದ ದೂರ ಹೋಗಲು ಬಯಸುತ್ತಿರುವ ವಿದ್ಯಾರ್ಥಿಗಳ ಕನಸು ಈ ಸಮಯದಲ್ಲಿ ಈಡೇರಬಹುದು. ಈ ರಾಶಿಚಕ್ರದ ವೃತ್ತಿಪರರು ತಮ್ಮ ಉದ್ಯೋಗದಲ್ಲಿ ಬದಲಾವಣೆಯನ್ನು ಮಾಡಬಹುದು ಮತ್ತು ಈ ಕಾರಣದಿಂದಾಗಿ ಯಾವುದೇ ಇತರ ಸ್ಥಳಕ್ಕೂ ಹೋಗಬೇಕಾಗಬಹುದು ಅದೇ ಸಮಯದಲ್ಲಿ ಮತ್ತೊಂದೆಡೆ, ವರ್ಗಾವಣೆಯನ್ನು ನಿರೀಕ್ಷಿಸುತ್ತಿರುವ ಜನರು ಸಹ ಈ ಸಮಯದಲ್ಲಿ ಯಶಸ್ಸು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಆಧ್ಯಾತ್ಮಿಕ ಪ್ರವೃತ್ತಿಯು ಹೆಚ್ಚಾಗುತ್ತದೆ ಮತ್ತು ನೀವು ದಾನ ಪುಣ್ಯವನ್ನು ಸಹ ಮಾಡಬಹುದು. ನಿಮ್ಮ ತಂದೆಯೊಂದಿಗೆ ಸಮಸ್ಯೆಯಾಗಬಹುದು. ಇದರಿಂದಾಗಿ ನೀವು ಚಿಂತೆಗೆ ಒಳಗಾಗಬಹುದು.
ಪರಿಹಾರ - ಹಸುವಿಗೆ ಬೆಲ್ಲವನ್ನು ತಿನ್ನಿಸಿ.
ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ಕುಟುಂಬ, ಸಂಭಾಷಣೆ ಮತ್ತು ಸಂಗ್ರಹಿಸಲ್ದಾ ಹಣಕಾಸಿನ ನಿಮ್ಮ ಎರಡನೇ ಮನೆಗೆ ಗೋಚರಿಸುತ್ತದೆ. ಹಣಕಾಸಿನ ಲಾಭದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರು ಸಹ ನಿಮ್ಮನ್ನು ಬೆಂಬಲಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ದೈಹಿಕ ಶಕ್ತಿ ಸ್ವಲ್ಪ ಕಡಿಮೆಯಾಗಬಹುದು ಮತ್ತು ಶಕ್ತಿಯ ಕೊರತೆಯಿಂದ ನೀವು ಅಸಮಾಧಾನಗೊಳ್ಳಬಹುದು. ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ ನೀವು ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು. ಮನೆಯಲ್ಲಿ ಜನರೊಂದಿಗೆ ಅಹಂ ಸಂಘರ್ಷದ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು.
ನಿಮ್ಮ ಮಾತುಗಳಲ್ಲಿ ಸ್ಪಷ್ಟವಾಗಿರಲು ನಿಮಗೆ ಸೂಚಿಸಲಾಗಿದೆ. ನಿಮ್ಮ ಅಸಭ್ಯತೆ ಅಥವಾ ತಪ್ಪು ಪದಗಳ ಬಳಕೆಯು ನಿಮ್ಮನ್ನು ಕೆಟ್ಟ ಪರಿಸ್ಥಿತಿಯಲ್ಲಿ ತರಬಹುದು ಮತ್ತು ಈ ಕಾರಣದಿಂದಾಗಿ ಯಾವುದೇ ರೀತಿಯ ದೋಷ ಅಥವಾ ಜಗಳವಾಗಬಹುದು. ಭಾವನತ್ಮಕ ಅಸಮತೋಲನದ ಕಾರಣದಿಂದಾಗಿ ನೀವು ಅನೇಕ ಬಾರಿ ಅಸಮಾಧಾನವನ್ನು ಅನುಭವಿಸಬಹುದು. ಆದಾಗ್ಯೂ ನಿಮ್ಮ ಸಂಗಾತಿ ಅಥವಾ ನೀವು ನಂಬುವ ಜನರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಸರ್ಕಾರಿ ವಲಯದಲ್ಲಿರಿವ ಜನರು ಈ ಸಮಯದಲ್ಲಿ ತಮ್ಮ ಸಂಸ್ಥೆಯಿಂದ ವಿತ್ತೀಯ ಲಾಭವನ್ನು ಪಡೆಯಬಹುದು. ಈ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ತಿಳುವಳಿಕೆ ಮತ್ತು ಏಕಾಗ್ರತೆಯ ಮಟ್ಟದಲ್ಲಿ ಸುಧಾರಣೆಯೊಂದಿಗೆ ತಮ್ಮ ವಿಷಯಗಳಲ್ಲೂ ಹಿಡಿತವನ್ನು ಪಡೆಯಲು ಸಾಧ್ಯವಾಗುತ್ತದೆ.
ಪರಿಹಾರ - ಪ್ರತಿದಿನ ಬೆಳಿಗ್ಗೆ ಸೂರ್ಯ ದೇವರಿಗೆ ನೀರು ಅರ್ಪಿಸುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ಸಂಚಾರವು ಮೊದಲನೇ ಮನೆಯಲ್ಲಿ ಸಂಭವಿಸಲಿದೆ. ಸಂಚಾರದ ಸಮಯದಲ್ಲಿ ಇದು ನಿಮ್ಮ ಮೊದಲನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನೀವು ಒತ್ತಡಕ್ಕೆ ಒಳಗಾಗುತ್ತೀರಿ. ಈ ಸಮಯದಲ್ಲಿ ನಿಮ್ಮ ಮೆದುಳಿನಲ್ಲಿ ಅನೇಕ ರೀತಿಯ ಆಲೋಚನೆಗಳು ಉದ್ಭವಿಸುತ್ತವೆ. ಏಕೆಂದರೆ ನಿಮ್ಮ ಸಂಪನ್ಮೂಲಗಳನ್ನು ವಿಸ್ತರಿಸಲು ಮತ್ತು ಎಲ್ಲಾ ಸಂಭಾವಿತ ಸಾಧನೆಗಳ ಮೂಲಕ ಹೆಚ್ಚು ಹಣಕಾಸು ಗಳಿಸಲು ನಿಮ್ಮ ಮನಸ್ಸಿನಲ್ಲಿ ನಿರಂತರವಾಗಿ ಏನಾದರೂ ನಡೆಯುತ್ತಿರುತ್ತದೆ. ಈ ಸಮಯದಲ್ಲಿ ನೀವು ಅಸಹನೆ ಮತ್ತು ಅಹಂಕಾರಿಯಾಗಬಹುದು. ಸಾಮಾಜಿಕವಾಗಿ ಇದು ನಿಮ್ಮ ತೊಂದರೆಗೆ ಕಾರಣವಾಗಬಹುದು. ಇದಲ್ಲದೆ ನಿಮ್ಮ ಕುಟುಂಬದಿಂದ ಅಪೇಕ್ಷಿತ ಬೆಂಬಲ ಮತ್ತು ಸಹಕಾರ ಪಡೆಯದಿರುವ ಕಾರಣದಿಂದಾಗಿ, ವೈಯಕ್ತಿಕ ವಿಷ್ಯದಲ್ಲಿ ಅಸಮಾಧಾನ ಮತ್ತು ತೊಂದರೆಗೆ ಒಳಗಾಗುತ್ತೀರಿ. ಅಧಿಕಾರ ಮತ್ತು ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಜನರು ಈ ಸಮಯದಲ್ಲಿ ಲಾಭವನ್ನು ಪಡೆಯುತ್ತಾರೆ. ಇದರಿಂದಾಗಿ ಅವರ ಗಳಿಕೆ ಸುಧಾರಿಸುತ್ತದೆ.
ಉದ್ಯೋಗದಲ್ಲಿ ಬಡ್ತಿಯನ್ನು ಬಯಸುತ್ತಿರುವ ಜನರಿಗೆ ಈ ಸಮಯ ಉತ್ತಮವಾಗಿರುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ನೀವು ಕೆಲಸ ಮಾಡಬೇಕು. ವ್ಯಾಪಾರಸ್ಥರ ಬಳಿ ಅನುಕೂಲಕರ ಸಮಯ ಇರುತ್ತದೆ. ಏಕೆಂದರೆ ಅವರು ತಮ್ಮ ಕೆಲಸ ಮತ್ತು ಸಂಬಂಧಿತ ಮಾರ್ಕೆಟ್ ನಲ್ಲಿ ಉತ್ತಮ ಹಿಡಿತವನ್ನು ಹೊಂದಿರುತ್ತಾರೆ. ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸುತ್ತಿದ್ದರೆ, ಈ ಸಮಯ ನಿಮಗೆ ಉತ್ತಮವಾಗಿರಲಿದೆ, ಏಕೆಂದರೆ ನೀವು ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ಣಯಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನ ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸಿ ಮತ್ತು ಯಾವುದೇ ಅನುಭವಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.
ಪರಿಹಾರ - ಶಿವಲಿಂಗದ ಮೇಲೆ ನೀರು ಅರ್ಪಿಸಿ ಮತ್ತು ಓಂ ನಮಃ ಶಿವಾಯ್ ಮಂತ್ರವನ್ನು ಜಪಿಸಿ.
ಸಿಂಹ ರಾಶಿ
ಸೂರ್ಯ ಗ್ರಹವು ಸಿಂಹ ರಾಶಿಚಕ್ರದ ಸ್ಥಳೀಯರ ಖರ್ಚು ಮತ್ತು ನಷ್ಟದ ಹನ್ನೆರಡನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನಿಮ್ಮಲ್ಲಿ ಹೆಚ್ಚುವರಿ ಸಹಾನುಭೂತಿ ಮತ್ತು ಭಾವುಕತೆಯನ್ನು ಕಾಣಲಾಗುತ್ತದೆ. ನೀವು ನಿಮ್ಮ ಸುತ್ತಮುತ್ತಲಿನ ಜನರ ತೊಂದರೆಗಳನ್ನು ಆಲಿಸುತ್ತೀರಿ ಮತ್ತು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಆಧ್ಯಾತ್ಮಿಕ ಒಲವು ಹೆಚ್ಚಾಗುತ್ತದೆ ಮತ್ತು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹಣಕಾಸು ಖರ್ಚು ಮಾಡಬಹುದು. ಈ ಸಮಯದಲ್ಲಿ ದೂರಸ್ಥ ಪ್ರಯಾಣಗಳ ಸಂಪೂರ್ಣ ಸಾಧ್ಯತೆ ಇದೆ. ಕೆಲವು ಸ್ಥಳೀಯರು ಈ ಸಮಯದಲ್ಲಿ ಅನೇಕ ಪ್ರವಾಸಗಳನ್ನು ಮಾಡಬಹುದು. ನೀವು ರಹಸ್ಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಆದ್ದರಿಂದ ಮುಂಬರುವ ಸಮಯದಲ್ಲಿನ ಯಾವುದೇ ಸಮಸ್ಯೆಯನ್ನು ತಪ್ಪಿಸಲು ನಿಮ್ಮ ಎಲ್ಲಾ ಕೆಲಸಗಳು ಮತ್ತು ಸಂಪನ್ಮೂಲಗಳ ಬಗ್ಗೆ ನಿಗಾ ಇಡಲು ನಿಮಗೆ ಸೂಚಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ನಿಮ್ಮನ್ನು ಸಂತೋಷವಾಗಿಡಲು, ನಿಮ್ಮ ಆದಾಯದ ಹೆಚ್ಚಿನ ಭಾಗವನ್ನು ಐಷಾರಾಮಿ ವಸ್ತುಗಳನ್ನು ಖರೀದಿಸಲು ನೀವು ಖರ್ಚು ಮಾಡಬಹುದು.
ವ್ಯಾಪಾರಸ್ಥರು ಜಾಗರೂಕರಾಗಿರಬೇಕು. ಏಕೆಂದರೆ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಆದಾಗ್ಯೂ, ವಿದೇಶ ವ್ಯಾಪಾರಕ್ಕೆ ಸಂಬಂಧಿಸಿದ ಜನರು ಈ ಸಮಯದಲ್ಲಿ ಲಾಭವನ್ನು ಪಡೆಯಬಹುದು. ಇದಲ್ಲದೆ, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ನೀವು ಉತ್ತಮ ಗ್ರಾಹಕರನ್ನು ಪಡೆಯಬಹುದು ಮತ್ತು ಕೆಲವು ಉತ್ತಮ ಒಪ್ಪಂದಗಳನ್ನು ಸಹ ಮಾಡಬಹುದು. ಈ ಸಮಯದಲ್ಲಿ ನಿಮ್ಮ ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು ಮತ್ತು ಅವರು ರಚಿಸಿದ ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ನೀವು ಒತ್ತಡ ಮತ್ತು ಆತಂಕದಿಂದ ಬಳಲುತ್ತಬಹುದು. ನಿಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ಅವರು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಪರಿಹಾರ - ಪ್ರತಿದಿನ ಬೆಳಿಗ್ಗೆ ಗಾಯತ್ರಿ ಮಂತ್ರವನ್ನು 108 ಬಾರಿ ಜಪಿಸುವುದು ನಿಮಗೆ ಉತ್ತಮ.
ಕನ್ಯಾ ರಾಶಿ
ಸೂರ್ಯ ಗ್ರಹವು ಕನ್ಯಾ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನಿಮಗೆ ಹಣಕಾಸಿನ ಕೊರತೆ ಇರುವುದಿಲ್ಲ. ವಿಶೇಷವಾಗಿ ವಿದೇಶ ಸಂಸ್ಥೆ ಆಹ್ವಾ ವಿದೇಶ ಗ್ರಾಹಕರೊಂದಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿದ್ದರೆ ಈ ಸಮಯ ನಿಮಗೆ ಉತ್ತಮ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರ ಮೇಲೆ ಬಹಳಷ್ಟು ಖರ್ಚು ಮಾಡುವಿರಿ ಏಕೆಂದರೆ ನಿಮ್ಮ ವೆಚ್ಚದ ಮನೆಯ ಅಧಿಪತಿ ನಿಮ್ಮ ಲಾಭದ ಮನೆಯಲ್ಲಿರುತ್ತಾರೆ. ನೀವು ಅಧಿಕೃತ ಜನರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುವಿರಿ, ಅದರ ಪರಿಣಾಮವು ನಿಮ್ಮ ಕೆಲಸದೊಂದಿಗೆ ನಿಮ್ಮ ವೈಯಕ್ತಿಕ ವಿಷಯಗಳಲ್ಲೂ ನಿಮಗೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಚಂಚಲರಾಗಿರುತ್ತೀರಿ ಮತ್ತು ನಿರ್ಧಿಷ್ಟ ಪರಿಸ್ಥಿತಿಯಲ್ಲಿ ತೀರ್ಮಾನಗಳಿಗೆ ತಲುಪುವುದು ಮತ್ತು ಯಾವುದೇ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಕಷ್ಟಕರವಾಗಿರುತ್ತದೆ.
ಸರ್ಕಾರಿ ನೌಕರರು, ವಿಶೇಷವಾಗಿ ಸಾರ್ವಜನಿಕ ಸೇವಕರು ಅಥವಾ ರಾಜಕಾರಣಿಗಳಿಗೆ ಅನುಕೂಲಕರ ಸಮಯವಿರುತ್ತದೆ. ಏಕೆಂದರೆ ನೀವು ಉತ್ತಮ ಸಾಮಾಜಿಕ - ರಾಜಕೀಯ ವಾತಾವರಣವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಮಗುವಿನ ಕಳಪೆ ಆರೋಗ್ಯದ ಕಾರಣದಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ, ನೀವು ಜೀರ್ಣಕ್ರಿಯೆ, ಆಮ್ಲೀಯತೆ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ತೊಂದರೆಗೊಳಗಾಗಬಹುದು, ಆದ್ದರಿಂದ ಈ ಸಮಯದಲ್ಲಿ ನಿಮ್ಮ ಆಹಾರ ಪದ್ಧತಿಯತ್ತ ವಿಶೇಷ ಕಾಳಜಿ ವಹಿಸಿ. ಈ ಸಮಯದಲ್ಲಿ ಹೆಚ್ಚು ಹುರಿದ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
ಪರಿಹಾರ - ತುಳಸಿ ಸಸ್ಯವನ್ನು ನೆಟ್ಟು ಅದನ್ನು ಪೋಷಿಸಿ. ಇದಲ್ಲದೆ ಸಂಜೆಯ ವೇಳೆಯಲ್ಲಿ ಈ ಸಸ್ಯದ ಮುಂದೆ ದೀಪವನ್ನು ಬೆಳಗಿಸಿ.
ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಆದಾಯ ಮತ್ತು ಲಾಭದ ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿ ಜೀವನ, ಪ್ರತಿಷ್ಠೆಯ ಹತ್ತನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರವು ನಿಮ್ಮ ವೃತ್ತಿ ಜೀವನದಲ್ಲಿ ಶುಭ ಸಮಯವನ್ನು ತರುತ್ತದೆ. ನೀವು ನಿಮ್ಮ ಯೋಜನೆಗಳು ಮತ್ತು ಕಾರ್ಯಗಳಳ್ಳಿ ತ್ವರಿತ ಮತ್ತು ಸುಲಭ ಯಶಸ್ಸನ್ನು ಪಡೆಯುತ್ತೀರಿ. ಇದಲ್ಲದೆ ಕೆಲಸದ ಸ್ಥಳದಲ್ಲಿ ಹೆಸರು ಮತ್ತು ಖ್ಯಾತಿಯನ್ನು ಪಡೆಯಲು ಅವಕಾಶವನ್ನು ನೀಡುತ್ತದೆ. ವ್ಯಪಾರಕ್ಕೆ ಸಂಬಂಧಿಸಿದ ಜನರಿಗೆ ಸಮಯ ಅನುಕೂಲಕರವಾಗಿರುತ್ತದೆ ಮತ್ತು ಅವರು ತಮ್ಮ ಅಸಾಧಾರಣ ತಂತ್ರಗಳಿಂದ ಆಯಾ ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ. ಸರ್ಕಾರಿ ವಲಯದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಜನರು ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಆಡಳಿತ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅವರ ಉನ್ನತ ನಿರ್ವಹಣೆಯಿಂದ ಬಡ್ತಿ ಮತ್ತು ಪ್ರಶಂಸೆ ದೊರೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ತಂದೆಯ ಬೆಂಬಲವನ್ನು ಸಹ ಪಡೆಯುತ್ತೀರಿ. ನಿಮ್ಮ ತಂದೆ ಕೂಡ ಕೆಲಸ ಮಾಡುತ್ತಿದ್ದರೆ, ಅವರು ತನ್ನ ಪ್ರಯತ್ನದಲ್ಲಿ ಯಶಸ್ಸು ಪಡೆಯುತ್ತಾರೆ. ನೀವು ವಸ್ತು ಸೌಕರ್ಯಗಳಿಂದ ತುಂಬಿರುತ್ತೀರಿ ಆದಾಗ್ಯೂ ಈ ಸಮಯದಲ್ಲಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ದಾನ ಪುಣ್ಯ ಅಥವಾ ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ನೀವು ಸಮಾಜದಲ್ಲಿ ಒಳ್ಳೆಯ ಹೆಸರು ಮತ್ತು ಖ್ಯಾತಿಯನ್ನು ಪಡೆಯುತ್ತೀರಿ.
ಪರಿಹಾರ - ಅಗತ್ಯವಿರುವವರಿಗೆ ಆಹಾರ ಮತ್ತೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದು ಮತ್ತು ಪೂರ್ವಜರನ್ನು ಗೌರವಿಸವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ
ಸೂರ್ಯ ದೇವ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಗೆ ಗೋಚರಿಸುತ್ತದೆ, ಧರ್ಮದ ಒಂಬತ್ತನೇ ಮನೆಯು ಕರ್ಮದ ಹತ್ತನೇ ಮನೆಗೆ ಸಂಬಂಧಿಸದೆ. ಏಕೆಂದರೆ ಸೂರ್ಯ ನಿಮ್ಮ ಕರ್ಮದ ಮನೆಯ ಅಧಿಪತಿ ಮತ್ತು ಇದು ನಿಮ್ಮ ಒಂಬತ್ತನೇ ಮನೆಗೆ ಗೋಚರಿಸಲಿದೆ. ಈ ಸಮಯದಲ್ಲಿ ನೀವು ತುಂಬಾ ಅದೃಷ್ಟಶಾಲಿಯಾಗಿರುತ್ತೀರಿ ಮತ್ತು ಹೆಚ್ಚಿನ ಶ್ರಮವಿಲ್ಲದೆ, ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ಅವರು ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತಾರೆ. ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗೆ ನೀವು ಯಾವುದೇ ಧಾರ್ಮಿಕ ಸ್ಥಾನ ಅಥವಾ ತೀರ್ಥ ಯಾತ್ರೆಗೆ ಹೋಗಬಹುದು. ಧಾರ್ಮಿಕ ಆಚರಣೆಗಳು ಮತ್ತು ಧರ್ಮಗ್ರಂಥಗಳ ಬಗ್ಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಪೂಜೆಗಳನ್ನು ಮಾಡಬಹುದು, ಈ ಸಮಯದಲ್ಲಿ ನೀವು ಪುರಾಣ ಮತ್ತು ಪೌರಾಣಿಕ ಸಂಪ್ರದಾಯಗಳನ್ನು ತಿಳಿಯಲು ಆಸಕ್ತಿ ವಹಿಸುತ್ತೀರಿ. ಶಿಕ್ಷಣ ಉದ್ಯಮ, ಸಲಹಾ ಸೇವೆಗಳಲ್ಲಿ ತೊಡಗಿರುವವರು ಈ ಸಮಯದಲ್ಲಿ ಪ್ರಗತಿ ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮ ಮಾತುಗಳನ್ನು ಕೇಳುತ್ತಾರೆ ಮತ್ತು ವಿಷಯಗಳ ಬಗೆಗಿನ ನಿಮ್ಮ ಸಲಹೆಗಳನ್ನು ಗೌರವಿಸುತ್ತಾರೆ. ನೀವು ಯಾವುದೇ ವಾದದಲ್ಲಿ ಜಯ ಪಡೆಯುತ್ತೀರಿ. ಏಕೆಂದರೆ ನಿಮ್ಮ ಅಸೆ ಬಲವಾಗಿರುತ್ತದೆ. ಈ ಸಮಯದಲ್ಲಿ ಪ್ರತಿಯೊಂದು ಕೆಲಸದತ್ತ ನೀವು ಕೇಂದ್ರೀಕರಿಸುವಿರಿ.
ಪರಿಹಾರ - ಭಾನುವಾರ ದೇವಸ್ಥಾನದಲ್ಲಿ ಹಿಟ್ಟು ಮತ್ತು ಬೆಲ್ಲದ ದಾನ ಮಾಡಿ.
ಧನು ರಾಶಿ
ನಿಮ್ಮ ಒಂಬತ್ತನೇ ಮನೆಯ ಅಧಿಪತಿ ಸೂರ್ಯ ದೇವ ನಿಮ್ಮ ಎಂಟನೇ ಮನೆಗೆ ಗೋಚರಿಸಲಿದ್ದಾರೆ. ಈ ಸಂಚಾರದ ಕಾರಣದಿಂದಾಗಿ ಅದೃಷ್ಟದ ಬೆಂಬಲವನ್ನು ನೀವು ಹೆಚ್ಚು ಪಡೆಯಲಾಗುವುದಿಲ್ಲ. ಯಾವುದೇ ಕಾರ್ಯವನ್ನು ಪೂರ್ಣಗೊಳಿಸಲು ನೀವು ನಿಮ್ಮಲ್ಲಿ ಸಕಾರಾತ್ಮಕತೆಯನ್ನು ತರಬೇಕು ಮತ್ತು ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಬೆಟ್ಟಿಂಗ್ ಅಥವಾ ಈ ರೀತಿಯ ಯಾವುದೇ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಸಮಯ ಪ್ರಯೋಜನಕಾರಿಯಾಗಿದೆ. ಸಂಶೋಧನೆ ಮಾಡುತ್ತಿರುವ ಈ ರಾಶಿಚಕ್ರದ ಜನರಿಗೆ ಈ ಸಮಯ ಉತ್ತಮವಾಗಿದೆ, ನಿಮ್ಮ ಏಕಾಗ್ರತೆ ಸುಧಾರಿಸುತ್ತದೆ ಮತ್ತು ನಿಮ್ಮ ವಿಷಯಗಳತ್ತ ನೀವು ಉತ್ತಮ ಹಿಡಿತವನ್ನು ಹೊಂದಿರುತ್ತೀರಿ. ಈ ಸಮಯದಲ್ಲಿ ನೀವು ಕಣ್ಣುಗಳ ಸಮಸ್ಯೆ, ಶಾಖದ ಹೊಡೆತ ಮತ್ತು ಕೂದಲು ಉದುರುವಿಕೆ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ. ಏಕೆಂದರೆ ಯಾವುದೇ ರೀತಿಯ ನಿರ್ಲಕ್ಷ್ಯದ ಕಾರಣದಿಂದಾಗಿ ನಿಮಗೆ ದೊಡ್ಡ ಸಮಸ್ಯೆಯಾಗಬಹುದು.
ಇದಲ್ಲದೆ ಸಂಬಂಧಗಳ ಬಗ್ಗೆ ಚಿಂತೆಗೊಳಗಾಗಬಹುದು ಮತ್ತು ಅಭದ್ರತೆಯ ಭಾವನೆಯಿಂದ ಬಳಲುತ್ತಬಹುದು. ನಿಮ್ಮ ಸ್ವಭಾವದಲ್ಲಿ ಕೋಪ ಹೆಚ್ಚಾಗಬಹುದು ಮತ್ತು ಇದರೊಂದಿಗೆ ಕೆಲವು ಕಾರ್ಯಗಳ ಬಗ್ಗೆ ನಿಮ್ಮಲ್ಲಿ ಅಸಹನೆ ಕೂಡ ಇರುತ್ತದೆ. ಈ ಸಮಯದಲ್ಲಿ ವೃತ್ತಿಪರ ಜನರಿಗೆ ಬೇರೊಬ್ಬರ ಅಧೀನ ಕೆಲಸ ಮಾಡಲು ತೊಂದರೆಯಾಗುತ್ತದೆ. ತಮ್ಮ ಮನೆಯಿಂದ ದೂರ ಕೆಲಸ ಮಾಡುತ್ತಿರುವವರಿಗೆ ಅಥವಾ ಶಿಕ್ಷಣವನ್ನು ಗಳಿಸುತ್ತಿರುವ ಜನರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ವರ್ಗಾವಣೆ ಬಯಸುತ್ತಿದ್ದ ಸರ್ಕಾರಿ ಸಿಬ್ಬಂದಿಗಳು ಯಾವುದೇ ಉತ್ತಮ ಸುದ್ಧಿಯನ್ನು ಪಡೆಯಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ವರ್ಗಾವಣೆಯ ಸಾಧ್ಯತೆ ಇದೆ.
ಪರಿಹಾರ - ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸಿ.
ಮಕರ ರಾಶಿ
ನಿಮ್ಮ ಎಂಟನೇ ಮನೆಯ ಅಧಿಪತಿ ಸೂರ್ಯ ನಿಮ್ಮ ಏಳನೇ ಮನೆಗೆ ಗೋಚರಿಸಲಿದ್ದಾರೆ. ಈ ಸಂಚಾರವು ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಉದ್ಭವಿಸಬಹುದು. ಜೀವನ ಸಂಗಾತಿಯೊಂದಿಗೆ ಆಗಾಗ್ಗೆ ಜಗಳ ಆಗಬಹುದು ಮತ್ತು ಸಂವಹನದ ಕೊರತೆಯೂ ಉಂಟಿಗಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಪಾಲುದಾರ ನಿಮಗೆ ಮೋಸ ಮಾಡಬಹುದು. ಪೆಟ್ರೋಲಿಯಂ, ಗಣಿಗಾರಿಕೆ ಅಥವಾ ಇನ್ನಾವುದೇ ಇಂಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಸಾಧನೆಗಳನ್ನು ಪಡೆಯುತ್ತಾರೆ. ಅಲ್ಲದೆ, ಒಪ್ಪಂದದ ಆದಾಯ ಅಥವಾ ಸರ್ಕಾರಿ ಟೆಂಡರ್‌ಗಳಿಗಾಗಿ ಕಾಯುತ್ತಿರುವ ಜನರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಮದುವೆಯಾಗಲು ಬಯಸುತ್ತಿರುವ ಒಂಟಿ ಜನರಿಗೆ ಸಮಯ ಉತ್ತಮವಾಗಿಲ್ಲ, ಏಕೆಂದರೆ ಈ ಸಮಯದಲ್ಲಿ ನಿಮಗೆ ಬೇಕಾದ ರೀತಿಯ ಸಂಬಂಧವನ್ನು ನೀವು ಪಡೆಯಲಾಗುವುದಿಲ್ಲ. ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಒಂದು ಸಣ್ಣ ತಪ್ಪು ತಿಳುವಳಿಕೆಯ ಕಾರಣದಿಂದಾಗಿ ಸಂಘರ್ಷವಾಗಬಹುದು ಮತ್ತು ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು ಮತ್ತು ಇದಕ್ಕಾಗಿ ನೀವು ನಿಮ್ಮ ತಂದೆಯನ್ನು ಮಾತ್ರ ದೂಷಿಸುವಿರಿ. ನಿಮ್ಮ ತಂದೆ ತಮ್ಮ ಕೆಲಸದ ಸ್ಥಳದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ವೈಯಕ್ತಿಕ ಜೀವನದಲ್ಲಿ ಈ ಸಮಯದಲ್ಲಿ ನೀವು ಅಸಮಾಧಾನಗೊಳ್ಳಬಹುದು. ಮತ್ತು ಇದರಿಂದಾಗಿ ನಿಮ್ಮಲ್ಲಿ ಕಿರಿಕಿರಿ ಮತ್ತು ಮನಸ್ಥಿತಿಯಲ್ಲಿ ಬದಲಾವಣೆ ಮತ್ತು ಅಹಂಕಾರ ಉದ್ಭವಿಸಬಹುದು.
ಪರಿಹಾರ - ಭಾನುವಾ ದೇವಸ್ಥಾನದಲ್ಲಿ 1.25 ಮೀಟರ್ ಕೆಂಪು ಬಟ್ಟೆಯ ದಾನ ಮಾಡಿ.
ಕುಂಭ ರಾಶಿ
ನಿಮ್ಮ ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಏಳನೇ ಮನೆಯ ಅಧಿಪತಿ ಸೂರ್ಯ ಗ್ರಹವು ನಿಮ್ಮ ಆರನೇ ಮನೆಗೆ ಗೋಚರಿಸುತ್ತಾರೆ. ವೈವಾಹಿಕ ಜೀವನಕ್ಕೆ ಈ ಸಮಯವು ಉತ್ತಮವೆಂದು ಹೇಳಲಾಗುವುದಿಲ್ಲ ಏಕೆಂದರೆ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಹದಗೆಡಬಹುದು. ಇದಲ್ಲದೆ, ನಿಮ್ಮಿಬ್ಬರ ನಡುವೆ ಯಾವುದೇ ರೀತಿಯ ಜಗಳದ ಕಾರಣದಿಂದಾಗಿ ಭಾವನಾತ್ಮಕ ಪ್ರತ್ಯೇಕತೆ ಉದ್ಭವಿಸಬಹುದು. ಯಾವುದೇ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಹೆಚ್ಚುವರಿ ಜಾಗರೂಕರಾಗಿರಲು ಸೂಚಿಸಲಾಗಿದೆ. ಏಕೆಂದರೆ ನಿಮ್ಮ ವ್ಯಾಪಾರದಲ್ಲಿ ನೀವು ಕೆಲವು ಕಾನೂನು ಸಮಸ್ಯೆಗಳನ್ನು ಎದುರಿಸಬಹುದು ಅಥವಾ ನಿಮ್ಮ ಸಹೋದ್ಯೋಗಿಗಳೊಂದಿಗೆ ಘರ್ಷಣೆಯನ್ನು ಹೊಂದಿರಬಹುದು. ನ್ಯಾಯಾಲಯ ಪ್ರಕರಣದಲ್ಲಿ ಯಾವುದೇ ವಿಷಯ ನಡೆಯುತ್ತಿದ್ದರೆ, ಈ ಸಮಯದಲ್ಲಿ ಅದು ನಿಮ್ಮ ಪರವಾಗಿ ಇರಬಹುದು. ಈ ಸಮಯದಲ್ಲಿ ನಿಮ್ಮ ಮನಸಿಥಿತಿ ಬಲವಾಗಿರುತ್ತದೆ ಮತ್ತು ನಿಮ್ಮ ಎಲ್ಲಾ ಶತ್ರುಗಳು ಮತ್ತು ಸ್ಪರ್ಧಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ. ನೀವು ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಈ ಸಮಯದಲ್ಲಿ ನಿಮ್ಮ ರೋಗ ನಿರೋಧಕ ಸಾಮರ್ಥ್ಯ ಉತ್ತಮವಾಗಿರುತ್ತದೆ ಮತ್ತು ನೀವು ತ್ವರಿತವಾಗಿ ಚೇತರಿಸಿಕೊಳ್ಳಬಹುದು. ಉದ್ಯೋಗವನ್ನು ಹುಡುಕುತ್ತಿರುವ ಈ ರಾಶಿಚಕದ ಜನರಿಗೆ ಸಮಯ ಅನುಕೂಲಕರವಾಗಿರುತ್ತದೆ ಏಕೆಂದರೆ ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ಈ ಸಮಯದಲ್ಲಿ ಸಂದರ್ಶನದಲ್ಲಿ ನೀವು ಉತ್ತಮ ಪ್ರದರ್ಶನ ನೀಡಲು ಸಹ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸಿದ ಪ್ರಯಾಣದ ಸಾಧ್ಯತೆಗಳಿವೆ.
ಪರಿಹಾರ - ನಿಮ್ಮ ಮಲಗುವ ಕೊನೆಯ ದಕ್ಷಿಣ ದಿಕ್ಕಿನಲ್ಲಿ ಗುಲಾಬಿ ಕ್ವಾರ್ಟ್ಜ್ ಕ್ರಿಸ್ಟಲ್ ಇರಿಸಿ.
ಮೀನಾ ರಾಶಿ
ನಿಮ್ಮ ಆರನೇ ಮನೆಯ ಅಧಿಪತಿ ಸೂರ್ಯ ಸಂಚಾರವು ನಿಮ್ಮ ಐದನೇ ಮನೆಯಲ್ಲಿ ಸಂಭವಿಸಲಿದೆ. ಈ ಸಮಯವೂ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಜನರಿಗೆ ಅನುಕೂಲಕರವಾಗಿರುತ್ತದೆ. ವಿಷಯಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಮತ್ತು ಅವುಗಳ ಮೇಲೆ ಉತ್ತಮ ಹಿಡಿತವನ್ನು ನೀವು ಹೊಂದಿರುತ್ತೀರಿ, ಇದರೊಂದಿಗೆ ನೀವು ಟೆಸ್ಟ್ ಗಳಲ್ಲೂ ಯಶಸ್ಸು ಪಡೆಯುತ್ತೀರಿ. ವಿದೇಶದಲ್ಲಿ ಅಧ್ಯಯನ ಪಡೆಯಲು ಬಯಸುತ್ತಿರುವ ಜನರು ಈ ಸಮಯದಲ್ಲಿ ತಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕಾಗುತ್ತದೆ ಏಕೆಂದರೆ ಈ ಕ್ಷೇತ್ರದಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಅಲ್ಲದೆ, ಈ ಅವಧಿಯು ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಪ್ರೀತಿಯಲ್ಲಿರುವ ಜನರಿಗೆ ಈ ಸಂಚಾರವು ಪ್ರತಿಕೂಲ ಫಲಿತಾಂಶಗಳನ್ನು ನೀದುರದೆ. ಪ್ರೀತಿಪಾತ್ರರೊಂದಿಗೆ ಜಗಳವಾಗಬಹುದು ಮತ್ತು ಕೆಲವು ಸ್ಥಳೀಯರು ತಮ್ಮ ಸಂಬಂಧವನ್ನು ಮುರಿಯಬಹುದು.
ಆದ್ದರಿಂದ, ಶಾಂತವಾಗಿರಲು ನಿಮಗೆ ಸಲಹೆ ನೀಡಲಾಗಿದೆ ಮತ್ತು ನಿಮ್ಮ ಸಂಗಾತಟಿಯೊಂದಿಗೆ ವಿವಾದವನ್ನು ತಪ್ಪಿಸಬೇಕು, ಇದರಿಂದಾಗಿ ನಿಮ್ಮ ಸಂಬಂಧವನ್ನು ಉಳಿಸಬಹುದು. ವ್ಯಾಪರಸ್ಟರು ಈ ಸಮಯದಲ್ಲಿ ಕೆಲವು ಹಣಕಾಸಿನ ಸಮಸ್ಯೆಗಳನ್ನು ಎದುರಿಯಬೇಕಾಗಬಹುದು. ಆದಾಗ್ಯೂ ಈ ಸಮಯದಲ್ಲಿ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಲು ಸೂಚಿಸಲಾಗಿದೆ. ಸಾಲವನ್ನು ಮರುಪಾವತಿಸುವಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಚಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ನೀವು ಹೊಟ್ಟೆ ಅಥವಾ ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಬಹುದು.
ಪರಿಹಾರ - ಮಂಗಳವಾರ ದೇವಸ್ಥಾನದಲ್ಲಿ ಹಳದಿ ಕಡ್ಲೆ ಬೆಳೆಯನ್ನು ದಾನ ಮಾಡುವುದು ನಿಮಗೆ ಉತ್ತಮ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025