ತುಲಾ ರಾಶಿಯಲ್ಲಿ ಸೂರ್ಯ ಸಂಚಾರ ( 17th October 2021 )
ತುಲಾ ರಾಶಿಯಲ್ಲಿ ಸೂರ್ಯ ಸಂಚಾರ - ಅರ್ಥ ಮತ್ತು ಪ್ರಾಮುಖ್ಯತೆ
ಸೂರ್ಯ ಉಷ್ಣತೆ ಮತ್ತು ಬೆಳಕಿನ ಮೂಲವಾಗಿದೆ. ಇದಿಲ್ಲದೆ ಭೂಮಿಯ ಮೇಲೆ ಜೀವನ ಸಾಧ್ಯವಿಲ್ಲ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ. ಇದು ಪ್ರಬಲ ಗ್ರಹಗಳಲ್ಲಿ ಒಂದಾಗಿದೆ. ಇದು ಶಕ್ತಿ, ಸ್ಥಿತಿ, ಅಧಿಕಾರ ಮತ್ತು ಆಡಳಿತವನ್ನು ಪ್ರತಿನಿಧಿಸುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಬಳವಾಗಿದ್ದರೆ, ವ್ಯಕ್ತಿಯು ಹೆಸರು, ಖ್ಯಾತಿ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾನೆ. ಇದು ಅಧಿಕೃತ ಜನರು, ಶ್ರೀಮಂತರು ಮತ್ತು ಉನ್ನತ ದರ್ಜೆಯ ಅಧಿಕಾರಿಗಳೊಂದಿಗೆ ಸಂಬಂಧವನ್ನು ನಿರ್ಮಿಸುತ್ತದೆ.
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ಖಗೋಳ ಮಂಡಲದ ರಾಜ ಎಂದು ಕರೆಯಲ್ಪಡುವ ಸೂರ್ಯ ದೇವ, ಸರ್ಕಾರಿ ವಲಯದಲ್ಲಿ ಉದ್ಯೋಗವನ್ನು ಪಡೆಯಲು ಮತ್ತು ರಾಜಕೀಯದಲ್ಲಿ ಗೌರಾನ್ವಿತ ಸ್ಥಾನಗಳನ್ನು ಪಡೆಯಲು ಜವಾಬ್ದಾರಿಯುತ ಎಂದು ಪರಿಗಣಿಸಲಾಗಿದೆ. ಮಂಗಳ ರಾಶಿಯಲ್ಲಿ ಈ ಗ್ರಹವನ್ನು ಉನ್ನತ ಎಂದು ಪರಿಗಣಿಸಲಾಗಿದೆ. ಇದು ತುಲಾ ರಾಶಿಯಲ್ಲಿ ತನ್ನ ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಇರುತ್ತದೆ. ಈ ಸಮಯದಲ್ಲಿ ಇದು ಶುಕ್ರನ ತುಲಾ ರಾಶಿಗೆ ಪ್ರವೇಶಿಸಲಿದೆ. ಈ ಸಮಯದಲ್ಲಿ ನೀವು ಅಸಮಾಧಾನವನ್ನು ಅನುಭವಿಸಬಹುದು. ಜನರೊಂದಿಗೆ ಮಾತನಾಡುವಾಗ ನೀವು ಅಸ್ಪಷ್ಟರಾಗಬಹುದು. ಇದರಿಂದಾಗಿ ಜನರು ನಿಮ್ಮ ಮಾತುಗಳನ್ನು ಇಷ್ಟಪಡುವುದಿಲ್ಲ. ಈ ಸಮಯದಲ್ಲಿ ನೀವು ಗೌರವ ಮತ್ತು ಅಧಿಕಾರಕ್ಕಾಗಿ ಚಿಂತೆಗೆ ಒಳಗಾಗಬಹುದು. ಈ ಸಂಚಾರದ ಸಮಯದಲ್ಲಿ ನೀವು ಸ್ವಯಂ ಕೇಂದ್ರೀಕೃತವಾಗಿರುತ್ತೀರಿ. ದೂರಸ್ಥ ಸ್ಥಳಗಳಿಗೆ ಹೋಗಲು ಮತ್ತು ವಿದೇಶ ಸಂಸ್ಕೃತಿಯನ್ನು ತಿಳಿಯಲು ನೀವು ತುಂಬಾ ಒಲವು ಹೊಂದಿರುತ್ತೀರಿ. ಈ ಸಮಯದಲ್ಲಿ ನೀವು ಸಂತೋಷದ ಕೊರತೆಯನ್ನು ಅನುಭವಿಸುವಿರಿ. ನಿಮ್ಮ ಉತ್ತಮ ಕೆಲಸ ಮತ್ತು ಪ್ರಯತ್ನಗಳ ಉತ್ತಮ ಫಲಿತಾಂಶವನ್ನು ನೀವು ಪಡೆಯುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಇದಲ್ಲದೆ ನಿಮ್ಮಲ್ಲಿ ಶಕ್ತಿ ಮತ್ತು ಜೀವನದ ಶಕ್ತಿಯ ಕೊರತೆಯನ್ನು ಸಹ ನೀವು ಅನುಭವಿಸುತ್ತೀರಿ. ಕಾನಾ ರಾಶಿಯಲ್ಲಿ ಸೂರ್ಯ ಸಂಚಾರವು 17 ಅಕ್ಟೋಬರ್ 2021 ರಂದು ಮಧ್ಯಾಹ್ನ 1:00 ಗಂಟೆಗೆ ಸಂಭವಿಸಲಿದೆ. ಈ ರಾಶಿಯಲ್ಲಿ 16 ನವೆಂಬರ್ 2021 ಮಧ್ಯಾಹ್ನ 12.49 ಗಂಟೆಯ ವರೆಗೆ ಇರುತ್ತದೆ ಮತ್ತು ಅದರ ನಂತರ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತದೆ.
ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಈ ಸಂಚಾರವು ಹೇಗಿರುತ್ತದೆ ಎಂದು ತಿಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
Read in English: Sun Transit in Libra (17 October 2021)
मेष / ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರಿಗೆ, ಸೂರ್ಯ ದೇವ ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಮದುವೆ, ಪಾಲುದಾರಿಕೆಯ ಏಳನೇ ಮನೆಗೆ ಗೋಚರಿಸುತ್ತಿದೆ. ಈ ಸಮಯದಲ್ಲಿ ನೀವು ಸ್ವಲ ಅಹಂಕಾರಿಯಾಗುತ್ತೀರಿ ಮತ್ತು ತಮ್ಮ ಸಮುದಾಯ ಅಥವಾ ಸಹೋದ್ಯೋಗಿಗಳಲ್ಲಿ ಗೌರವವನ್ನು ಪಡೆಯಲು ನಿಮ್ಮ ಜ್ಞಾನವನ್ನು ಹೆಹಿಸಲು ಪ್ರಯತ್ನಿಸಬಹುದು. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ನೀವು ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಪಾಲುದಾರ ಅಥವಾ ನಿಮ್ಮ ಅಧೀನ ಕಾರ್ಮಿಕರೊಂದಿಗೆ ಸಂಘರ್ಷವನ್ನು ತರಬಹುದು. ಈ ಸಂಘರ್ಷವು ದೊಡ್ಡ ಜಗಳದಲ್ಲಿ ಬದಲಾಗಬಹುದು. ಇದು ನಿಮ್ಮ ವ್ಯಾಪಾರದ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು. ವಿದೇಶಿ ಗ್ರಾಹಕರೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿರುವ ಜನರು, ತಮ್ಮ ಗ್ರಾಹಕರ ನಡುವೆ ಉತ್ತಮ ಗೌರವವನ್ನು ಪಡೆಯುತ್ತಾರೆ. ಉಯೋಗದಲ್ಲಿರುವ ಜನರು ವಿಶೇಷವಾಗಿ ಸರ್ಕಾರಿ ಕ್ಷೇತ್ರದಲ್ಲಿರುವ ಜನರಿಗೆ ಈ ಸಮಯ ತುಂಬಾ ನುಕೂಲಕರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ.
ನೀವು ಕಚೇರಿ ರಾಜಕೀಯವನ್ನು ಎದುರಿಸಬಹುದು ಮತ್ತು ನಿಮ್ಮನ್ನು ಸಾಬೀತುಪಡಿಸಲು ಮತ್ತು ನಿಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ನಿಮಗೆ ಕಷ್ಟವಾಗುತ್ತದೆ. ನಿಮ್ಮ ಕಚೇರಿಯಲ್ಲಿ ಯಾವುದೇ ರೀತಿಯ ವಿವಾದ ಅಥವಾ ಸಂಘರ್ಷವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ನೀವು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೊಟ್ಟೆ ನೋವೇ ಮತ್ತು ಸಾಮಾನ್ಯ ದೌರ್ಬಲ್ಯವನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಾರೆ. ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರು ಕೆಟ್ಟ ಅಂಕಗಳನ್ನು ಪಡೆಯುವ ಕಾರಣದಿಂದಾಗಿ ಅಭದ್ರತೆಯ ಭಾವನೆಯನ್ನು ಅನುಭವಿಸಬಹುದು. ಪ್ರಣಯ ಸಂಬಂಧದಲ್ಲಿರುವ ಜನರು ಪರಸ್ಪರ ಮೇಲೆ ನಂಬಿಕೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು.
ಪರಿಹಾರ - ದಿನನಿತ್ಯ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.
वृषभ / ವೃಷಭ ರಾಶಿ
ವೃಷಭ ರಾಶಿಚಕ್ರದ ಜನರಿಗೆ ಸೂರ್ಯ ದೇವ ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಸ್ಪರ್ಧೆ, ಶತ್ರು ಮತ್ತು ಸಾಲದ ಆರನೇ ಮನೆಗೆ ಗೋಚರಿಸುತ್ತದೆ. ಹೊಸ ಮನೆಯನ್ನು ಖರೀದಿಸಲು ಯೋಜಿಸುತ್ತಿರುವ ಜನರು ಕಾಯಬೇಕು, ಏಕೆಂದರೆ ಈ ಸಮಯ ಅನುಕೂಲಕರವಾಗಿಲ್ಲ ಮತ್ತು ನೀವು ವಿವಾದಿತ ಆಸ್ತಿಯನ್ನು ಖರೀದಿಸಲು ಸಹ ಸಿದ್ಧರಾಗಬಹುದು. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಆದ್ದರಿಂದ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ನೀವು ಸಂಪತ್ತು ಅಥವಾ ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಕೆಲವು ಕಾನೂನು ಪ್ರಕರಣಗಳನ್ನು ಎದುರಿಸಬೇಕಾಬಹುದು. ಶೈಕ್ಷಣಿಕ ವಿದ್ಯಾರ್ಥಿಗಳು ಏಕಾಗ್ರತೆಯ ಸಮಸ್ಯೆಗಳನ್ನು ಎದುರಿಸುತ್ತಾರೆ, ಇದಲ್ಲದೆ ಅವರು ಒತ್ತಡಕ್ಕೆ ಒಳಗಾಗಬಹುದು, ಇದರಿಂದಾಗಿ ಅಧ್ಯಯನ ಮಾಡಲು ಅವರು ಕಷ್ಟವನ್ನು ಅನುಭವಿಸಬಹುದು. ವರ್ಗಾವಣೆಯನ್ನು ನಿರೀಕ್ಷಿಸುತ್ತಿರುವ ಸರ್ಕಾರಿ ಕಾರ್ಮಿಕರು ಅದೃಷ್ಟವಂತರು.
ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಏಕೆಂದರೆ ಅವರು ಸುಳ್ಳು ಕಟ್ಟುಪಾಡುಗಳಲ್ಲಿ ಸಿಲುಕಿಕೊಳ್ಳಬಹುದು. ಇದಲ್ಲದೆ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ನಿಮ್ಮ ಜಗಳವಾಗಬಹುದು. ಇದು ನಿಮ್ಮ ಗೌರವ ಮತ್ತು ಪ್ರತಿಷ್ಠೆಯನ್ನು ಕಳಂಕಿಸುತ್ತದೆ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ಇಂತಹ ಪರಿಸ್ಥಿತಿಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಿ. ಕೊಲೆಸ್ಟ್ರಾಲ್ ಅಥವಾ ಬಿಪಿ ಸಮಸ್ಯೆಯನ್ನು ಹಿಂದಿರುವ ಜನರು ಈ ಸಮಯದಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ, ಏಕೆಂದರೆ ಈ ಸಮಯ ಕೆಲವು ಹೃದಯದ ಸಮಸ್ಯೆಗಳನ್ನು ತರಬಹುದು. ಈ ಸಮಯದಲ್ಲಿ ನಿಮ್ಮ ಸಾಲಗಳನ್ನು ತೀರಿಸಲು ಅಥವಾ ಸಾಲಗಳನ್ನು ಮರುಪಾವತಿಸಲು ನಿಮಗೆ ಕಷ್ಟವಾಗುತ್ತದೆ.
ಪರಿಹಾರ - ಸೂರ್ಯ ದೇವರಿಗೆ ತಾಮ್ರದ ಪಾತ್ರದಲ್ಲಿ ನೀರು ಅರ್ಪಿಸಿ.
मिथुन / ಮಿಥುನ ರಾಶಿ
ಮಿಥುನ ರಾಶಿಚಕ್ರದ ಜನರಿಗೆ ಸೂರ್ಯ ದೇವ ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಮಕ್ಕಳು, ಸಂಬಂಧಗಳು, ಮನರಂಜನೆಯ ಐದನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ನೀವು ಧೈರ್ಯ ಮತ್ತು ಸ್ಥೈರ್ಯದ ಕೊರತೆಯನ್ನು ಅನುಭವಿಸಬಹುದು. ಪ್ರಣಯದ ಸಂಬಂಧದಲ್ಲಿರುವ ಜನರು ಉತ್ತಮ ಸಮಯವನ್ನು ಹೊಂದಿರುತ್ತಾರೆ, ನಿಮ್ಮ ಪ್ರೇಮಿಯೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಳ್ಳುವಿರಿ ಮತ್ತು ನಿಮ್ಮ ಪ್ರೀತಿಯೋಪಾತ್ರರು ನಿಮ್ಮ ಬಲವಾದ ಭಾವನೆಗಳನ್ನು ಸ್ವೀಕರಿಸುತ್ತಾರೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಅಲ್ಪ ದೂರದ ಪ್ರಯಾಣಕ್ಕೆ ಹೋಗಲು ನೀವು ಯೋಜಿಸಬಹುದು. ವಿದ್ಯಾರ್ಥಿಗಳ ಏಕಾಗ್ರತೆಯಲ್ಲಿ ಸುಧಾರಣೆಯಾಗುತ್ತದೆ, ಉತ್ತಮ ಗ್ರೇಡ್ ಪಡೆಯಲು ಅವರು ಒಲವು ಹೊಂದಿರುತ್ತಾರೆ. ಇದು ಅವರನ್ನು ಹೆಚ್ಚು ಅಧ್ಯಯನ ಮಾಡಲು ಪ್ರೇರೇಪಿಸುತ್ತದೆ.
ಈ ಸಮಯದಲ್ಲಿ ನಿಮ್ಮ ಕಿರಿಯ ಸಹೋದರ-ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವುದಿಲ್ಲ. ನಿಮ್ಮ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ ಮತ್ತು ನೀವು ಅವರಿಂದ ಅಪೇಕ್ಷಿತ ಗೌರವವನ್ನು ಪಡೆಯದಿರಬಹುದು. ಈ ಸಮಯದಲ್ಲಿ ವಿದ್ಯಾರ್ಥಿಗಳು ಗೆಳೆಯರ ಒತ್ತಡವನ್ನು ಎದುರಿಸಬಹುದು. ನಿಮ್ಮನ್ನು ಸಾಬೀತುಪಡಿಸಲು ನೀವು ಕಠಿಣ ಪರಿಶ್ರಮ ಮಾಡಬೇಕು ಎಂದು ನಿಮಗೆ ಅನಿಸುತ್ತದೆ. ಜನರ ಕಮೆಂಟ್ಗಳನ್ನು ಮತ್ತು ನಿರುತ್ಸಾಹಗೊಳಿಸುವ ಹೇಳಿಕೆಗಳನ್ನು ನಿರ್ಲಕ್ಷಿಸಲು ನೀವು ಕಲಿಯಬೇಕು. ಕೆಲಸದ ಸ್ಥಳದಲ್ಲಿ ನೀವು ಜಾಗರೂಕರಾಗಿರಬೇಕು. ನಿಮ್ಮ ಸುತ್ತಮುತ್ತಲಿನ ಜನರ ದೃಷ್ಟಿಕೋನದತ್ತ ಕೇಂದ್ರೀಕರಿಸುವ ಬದಲು ನಿಮ್ಮ ಭಾವನೆಗಳನ್ನು ಹೆಚ್ಚಿಸಲು ಮತ್ತು ನಿಮ್ಮ ಕೆಳಸದತ್ತ ಗಮನ ಹರಿಸುವ ಅಗತ್ಯವಿದೆ.
ಪರಿಹಾರ - ಪ್ರತಿದಿನ ಭಗವಂತ ರಾಮರನ್ನು ಪೂಜಿಸಿ.
कर्क / ಕರ್ಕ ರಾಶಿ
ಕರ್ಕ ರಾಶಿಚಕ್ರದ ಜನರಿಗೆ ಸೂರ್ಯ ದೇವ ಎರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ದೇಶೀಯ ಸಂತೋಷ, ಸಂಪತ್ತು ಮತ್ತು ತಾಯಿಯ ನಾಲ್ಕನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ನಿಮ್ಮ ತಾಯಿಯೊಂದಿಗೆ ನೀವು ಸಂಘರ್ಷವನ್ನು ಎದುರಿಸಬೇಕಾಬಹುದು. ಇದರೊಂದಿಗೆ ನಿಮ್ಮ ತಾಯಿ ಕೆಲವು ಅರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು. ವೃತ್ತಿಪರ ಜನರಿಗೆ ಸಲಹೆ ಮತ್ತು ಮಾರ್ಗದರ್ಶದ ಅಗತ್ಯವಿದೆ, ಈ ಅವಧಿಯಲ್ಲಿ ನಿಮ್ಮ ಧ್ವನಿಯನ್ನು ಉತ್ತಮ ಎಂದು ಹೇಳಲಾಗುವುದಿಲ್ಲ, ನೀವು ಕಠೋರರಾಗಿರುತ್ತಿರಿ ಮತ್ತು ತುಂಬಾ ನೇರವಾಗಿ ಮಾತನಾಡುವುದಿಲ್ಲ. ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಇದು ತುಂಬಾ ಪ್ರಶಂಸನೀಯವಾಗಿರುವುದಿಲ್ಲ. ಇದಕ್ಕಾಗಿ ನೀವು ಟೀಕೆಗಳನ್ನು ಎದುರಿಸಬೇಕಾಗಬಹುದು. ಸರಿಯಾಗಿ ಪರಿಗಣಿಸದ ಯೋಜನೆಗಳು ಮತ್ತು ವ್ಯಾಪಾರಗಳ ಕಡೆಗೆ ನೀವು ಆಕರ್ಷಿತರಾಗುತ್ತೀರಿ.
ನೀವು ಭೌತಿಕ ವಿಷಯಗಳ ಕಡೆಗೆ ಹೆಚ್ಚು ಕೇಂದ್ರೀಕರಿಸಬಹುದು ಮತ್ತು ಅವಶ್ಯಕ ವಿಷಯಗಳತ್ತ ಕಡಿಮೆ ಗಮನ ಹರಿಸುವಿರಿ. ನೀವು ಖರ್ಚು ಸಹ ಮಾಡುವಿರಿ ಮತ್ತು ನಿಮ್ಮ ಸ್ಥಿತಿಯನ್ನು ಉತ್ತಮಗೊಳಿಸಲು ಹೆಚ್ಚು ಹಣಕಾಸು ಖರ್ಚು ಮಾಡುತ್ತೀರಿ. ಸರ್ಕಾರಿ ಉದ್ಯೋಗ ಅಥವಾ ರಾಜಕೀಯದಲ್ಲಿರುವ ಜನರಿಗೆ ತಮ್ಮ ಶಕ್ತಿ ಮತ್ತು ಸ್ಥಾನವನ್ನು ಉಳಿಸಿಕೊಳ್ಳಲು ಕಷ್ಟವಾಗಬಹುದು. ಉದ್ಯೋಗವನ್ನು ಕಳೆದುಕೊಳ್ಳುವ ಅಪಾಯವೂ ಇರಬಹುದು. ಈ ಸಮಯದಲ್ಲಿ ನೀವು ನಿಮ್ಮ ಪದಗಳು ಮತ್ತು ಕಾರ್ಯಗಳನ್ನು ಸಾಬೀತುಪಡಿಸುವಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಆಸ್ತಿ ಅಥವಾ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿರುವ ಜನರಿಗೆ ಸಮಯ ಉತ್ತಮವಾಗಿರುತ್ತದೆ, ಏಕೆಂದರೆ ನಿಮ್ಮ ವ್ಯಾಪಾರದ ಸ್ಥಿರತೆಗೆ ಸಂಬಂಧಿಸಿದ ಅಭದ್ರತೆಯು ಹೆಚ್ಚುವರಿ ಪ್ರಯತ್ನಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಇದು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ.
ಪರಿಹಾರ - ಸೂರ್ಯ ದೇವರನ್ನು ಪೂಜಿಸಿ ಮತ್ತು ಗಾಯತ್ರಿ ಮಂತ್ರವನ್ನು ಪ್ರತಿದಿನ ನಿಯಮಿತವಾಗಿ 108 ಬಾರಿ ಜಪಿಸಿ.
सिंह / ಸಿಂಹ ರಾಶಿ
ಸಿಂಹ ರಾಶಿಚಕ್ರದ ಜನರಿಗೆ ಸೂರ್ಯ ದೇವ ಮೊದಲನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಸಾಗಲಿದೆ. ಈ ಸಮಯ್ದಲ್ಲಿ ನೀವು ಶಕ್ತಿಯ ಕೊರತೆಯನ್ನು ಅನುಭವಿಸುತ್ತೀರಿ. ಯಶಸ್ಸು ಪಡೆಯಲು ಹೆಚ್ಚು ಪರಿಶ್ರಮಿಸುವಿರಿ ಮತ್ತು ಸಂಪೂರ್ಣ ಪ್ರಯತ್ನವನ್ನು ಮಾಡುವಿರಿ. ಆದರೆ ನಿಮ್ಮ ಪ್ರಯತ್ನಗಳ ಉತ್ತಮ ಫಲಿತಾಂಶಗಳನ್ನು ಪಡೆಯುವ ನಿರೀಕ್ಷೆ ಕಡಿಮೆ. ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗಬಹುದು ಮತ್ತು ನಿಮ್ಮ ಪ್ರಯತ್ನಗಳಲ್ಲಿ ಸಾಧನೆಯನ್ನು ಪಡೆಯಲು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಇದು ಸ್ವಲ್ಪ ನಿರಾಶೆ, ಒತ್ತಡ ಮತ್ತು ಚಿಂತೆಯನ್ನು ತರುತ್ತದೆ. ನಿಮ್ಮ ಕಿರಿಯ ಸಹೋದರ-ಸಹೋದರಿಯರು ಮತ್ತು ಆಪ್ತರಿಗೆ ಸಹಾಯ ಮತ್ತು ಬೆಂಬಲ ನೀಡಲು ನೀವು ಪ್ರಯತ್ನಿಸುವಿರಿ, ಆದಾಗ್ಯೂ ನಿಮ್ಮ ನಿಜವಾದ ಚಿಂತೆಗಳಿಗೆ ನೀವು ಯಾವುದೇ ಪ್ರಶಂಸೆಯನ್ನು ಪಡೆಯುವುದಿಲ್ಲ.
ನಿಮ್ಮಲ್ಲಿ ನೀವು ಹೆಚ್ಚು ಅಹಂಕಾರವನ್ನು ಹೊಂದಿರಬಹುದು. ಈ ಕಾರಣದಿಂದಾಗಿ ಸಾಮಾಜಿಕ ಮಟ್ಟದಲ್ಲಿ ಹೆಚ್ಚು ಉತ್ತಮ ಫಲಿತಾಂಶಗಳನ್ನು ಪಡೆಯುವುದಿಲ್ಲ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಒತ್ತಡದಿಂದ ತುಂಬಿರುವ ವಾತಾವಣವನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ನಿಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ನೀವು ಹೋರಾಡಬೇಕು. ನಿಮ್ಮ ಸಂವಹನದಲ್ಲಿ ನೀವು ಮುಕ್ತ ಮತ್ತು ಬಲಶಾಲಿಯಾಗಿರುತ್ತೀರಿ. ಆದಾಗ್ಯೂ, ನಿಮ್ಮ ಅಧೀನ ಅಧಿಕಾರಿಗಳು ನಿಮ್ಮನ್ನು ಹೆಚ್ಚು ಇಷ್ಟಪಡುವುದಿಲ್ಲ ಮತ್ತು ನಿಮ್ಮ ಸ್ಪರ್ಧಿಗಳಿನ ನೀವು ಸವಾಲುಗಳನ್ನು ಪಡೆಯಬಹುದು. ನಿಮ್ಮ ದೇಹದಲ್ಲಿ ನೋವು ಮತ್ತು ಕುತ್ತಿಗೆ ಅಥವಾ ಭುಜದ ಸ್ನಾಯುಗಳಲ್ಲಿ ನೀವು ನೋವು ಹೊಂದಿರಬಹುದು. ಈ ಸಮಯದಲ್ಲಿ ನೀವು ಜೀವನ ಶಕ್ತಿ ಮತ್ತು ಪರಾಕ್ರಮದ ಕೊರತೆಯನ್ನು ಅನುಭವಿಸುತ್ತೀರಿ. ನಿಮ್ಮ ಸ್ಥೈರ್ಯವು ಸಹ ಹದಗೆಡಬಹುದು. ಆದ್ದರಿಂದ ನಿಮ್ಮನ್ನು ಆರೋಗ್ಯವಾಗಿಡಲು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ - ಸೂರ್ಯ ದೇವರ ಶುಭ ಫಲಿತಾಂಶಗಳನ್ನು ಪಡೆಯಲು ನಿಮ್ಮ ಉಂಗುರದ ಬೆರಳಿನಲ್ಲಿ ಚಿನ್ನದ ಉಂಗುರವನ್ನು ಧರಿಸಿ.
कन्या / ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಸಂಗ್ರಹಿಸಿರುವ ಹಣ, ಧ್ವನಿ ಮತ್ತು ಭೌತಿಕ ಆಸ್ತಿಯ ಎರಡನೇ ಮನೆಗೆ ಸಾಗಲಿದ್ದಾರೆ. ಈ ಸಮಯದಲ್ಲಿ ನೀವು ತುಂಬಾ ಖರ್ಚು ಮಾಡುವಿರಿ, ಇದು ನಿಮ್ಮ ಉಳಿತಾಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಬಜೆಟ್ ಅನ್ನು ಯೋಜಿಸಲು ಸಲಹೆ ನೀಡಲಾಗಿದೆ ಮತ್ತು ನಿಮ್ಮ ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಇಲ್ಲದಿದ್ದರೆ, ಈ ಸಮಯದಲ್ಲಿ ನೀವು ಠೇವಣಿ ಅಥವಾ ಸಂಪತ್ತನ್ನು ಮುರಿಯಬೇಕಾಗಬಹುದು. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರು ಅಥವಾ ವಿದೇಶಿ ಗ್ರಾಹಕರೊಂದಿಗೆ ಕೆಲಸ ಮಾಡುತ್ತಿರುವ ಜನರಿಗೆ ಸಮಯ ಉತ್ತಮವಾಗಿರುತ್ತದೆ. ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ನೀವು ಉತ್ತಮವಾಗಿ ಮಾರ್ಕೆಟ್ಟಿಂಗ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಧ್ವನಿಯಿಂದ ನೀವು ಜಾಗರೂಕರಾಗಿರಬೇಕು ಮತ್ತು ಬೆನ್ನ ಹಿಂದೆ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬಾರದು. ಏಕೆಂದರೆ ಇದರಿಂದಾಗಿ ನಿಮ್ಮ ಚಿತ್ರ ಹದಗೆಡುತ್ತದೆ ಮತ್ತು ನಿಮ್ಮ ಅವಮಾನವಾಗಬಹುದು.
ನೀವು ಕೆಲವು ಅರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಜಂಕ್ ಫುಡ್ ನಿಂದ ದೂರವಿರಿ ಮತ್ತು ಕೇವಲ ಸಮತೋಲಿತ ಆಹಾರವನ್ನು ಮಾತ್ರ ಸೇವಿಸಿ. ನೀವು ಅಲ್ಪ ದೂರದ ಪ್ರಯಾಣಗಳನ್ನು ಮಾಡಬೇಕಬೇಕಾಗಬಹುದು, ಅದು ನಿಮಗೆ ಅನುತ್ಪಾದಕವಾಗಿರುತ್ತದೆ. ಪ್ರವಾಸದ ಸಮಯದಲ್ಲಿ ನಿಮ್ಮ ಸಾಮಾನುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಜನರೊಂದಿಗೆ ವಿವಾದವಾಗಬಹುದು. ಆದಾಗ್ಯೂ, ಎಲ್ಲರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ವಿಷಯಗಳು ನಿವಾರಿಸಲಾಗುತ್ತವೆ. ಈ ಸಂಚಾರದ ಸಮಯದಲ್ಲಿ ನಿಮ್ಮ ದೂರದ ಸಂಬಂಧಿಗಳಿಂದ ನೀವು ಲಾಭವನ್ನು ಪಡೆಯುತ್ತೀರಿ.
ಪರಿಹಾರ - ಗಣಪತಿ ದೇವರಿಗೆ ರೊಟ್ಟಿ ಮತ್ತು ಬೆಲ್ಲವನ್ನು ಅರ್ಪಿಸುವುದು ನಿಮಗೆ ಒಳ್ಳೆಯದಾಗುತ್ತದೆ.
तुला / ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯ್ದಲ್ಲಿ ನಿಮ್ಮದೇ ರಾಶಿಗೆ ಗೋಚರಿಸುತ್ತಾರೆ, ಇದು ನಿಮ್ಮ ಸಾಮಾನ್ಯ ವರ್ತನೆ ಮತ್ತು ಆತ್ಮವನ್ನು ಪ್ರತಿನಿಧಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಸೌಂದರ್ಯ ಮತ್ತು ವ್ಯಕ್ತಿತ್ವದ ಬಗ್ಗೆ ಜಾಗೃತರಾಗಿರುತ್ತೀರಿ. ಉತ್ತಮ ದಿನಚರಿಯನ್ನು ಅನುಸರಿಸಲು ನಿಮಗೆ ಸಲಹೆ ನೀಡಲಾಗಿದೆ. ಇದರಿಂದಾಗಿ ನಿಮ್ಮ ದೈಹಿಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದರಿಂದ ನೀವು ಮಾನಸಿಕ ನೆಮ್ಮದಿಯನ್ನು ಸಹ ಪಡೆಯುತ್ತೀರಿ. ಆದರೂ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ ಮತ್ತು ನಿರ್ಧಾಗಳನ್ನು ತೆಗೆದುಕೊಳ್ಳುವಾಗ ಗೊಂದಲಕ್ಕೆ ಒಳಗಾಗುವಿರಿ. ನಿಮ್ಮ ಮೇಲೆ ನಂಬಿಕೆ ಇಡಲು ನಿಮಗೆ ಸೂಚಿಸಲಾಗಿದೆ ಮತ್ತು ನಿಮ್ಮ ಕೆಲಸಗಳನ್ನು ಸಂಪೂರ್ಣ ಒಳವಿನೊಂದಿಗೆ ಮಾಡಿ, ಇದರಿಂದಾಗಿ ನಿಮ್ಮ ಆತ್ಮ ಗೌರವ ಹೆಚ್ಚಾಗುತ್ತದೆ ಮತ್ತು ನೀವು ಪ್ರೋತ್ಸಾಹವನ್ನು ಪಡೆಯುತ್ತೀರಿ.
ಹಣಕಾಸಿನ ವಿಷಯದಲ್ಲಿ ನೀವು ಅಭದ್ರತೆಯನ್ನು ಅನುಭವಿಸುವಿರಿ ಮತ್ತು ಯಾವಾಗಲೂ ನಿಮ್ಮ ಆದಾಯದ ಮೂಲಗಳನ್ನು ಕಳೆದುಕೊಳ್ಳುವ ಭಯವನ್ನು ಅನುಭವಿಸುವಿರಿ. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳನ್ನು ಸಹ ಎದುರಿಸಬಹುದು. ಹೊರಗಿನ ಜನರು ನಿಮ್ಮ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ನೀವು ಹೊಸ ಯೋಜನೆಗಳು ಮತ್ತು ಪ್ರಯತ್ನಗಳಲ್ಲಿ ಉಪಕ್ರಮವನ್ನು ತೆಗೆದುಕೊಳ್ಳಲು ಪ್ರಯತ್ನಿಸುವಿರಿ. ಇದರೊಂದಿಗೆ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಶಕ್ತಿ ಮತ್ತು ಸೃಜನಶೀಲತೆಯನ್ನು ತೋರಿಸುವಿರಿ. ನಿಮ್ಮ ಹಿರಿಯರಿಗೆ ನೀವು ಸಹಾಯ ಮಾಡುವಿರಿ ಮತ್ತು ಕಾಳಜಿ ವಹಿಸುವಿರಿ ಮತ್ತು ಸಂಪೂರ್ಣವಾಗಿ ವಿಶ್ರಾಂತಿ ನೀಡಲು ಪ್ರಯತ್ನಿಸುವಿರಿ. ಅವರಿಂದ ನೀವು ಅದ್ಭುತ ಉಡುಗೊರೆಯನ್ನು ಪಡೆಯಬಹುದು, ಇದು ನಿಮ್ಮನ್ನು ಸಂತೋಷಪಡಿಸುತ್ತದೆ.
ಪರಿಹಾರ - ಬೆಳಿಗ್ಗೆ ಬೇಗನೆ ಎದ್ದು, ಪ್ರತಿದಿನ ನಿಯಮಿತವಾಗಿ ಸೂರ್ಯ ನಮಸ್ಕಾರವನ್ನು ಮಾಡಿ.
वृश्चिक / ವೃಶ್ಚಿಕ ರಾಶಿ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಖಾರ್ಕ್ಯು ಮತ್ತು ವಿದೇಶದ ಹನ್ನೆರಡನೇ ಮನೆಗೆ ಸಂಚರಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ವ್ಯಕ್ತಿತ್ವದೊಂದಿಗೆ ನಿಮ್ಮ ವೃತ್ತಿಪರ ಜೀವನದಲ್ಲೂ ಬೋಲ್ಡ್ ಮತ್ತು ಧೈರ್ಯಶಾಲಿಯಾಗಿರುತ್ತೀರಿ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಉತ್ತಮ ಸಮಯ, ಈ ಸಮಯದಲ್ಲಿ ನೀವು ಆರಾಮದಾಯಕ ಮತ್ತು ಒತ್ತಡ ರಹಿತ ಕೆಲಸವನ್ನು ಹೊಂದಿರುತ್ತೀರಿ. ಸರ್ಕಾರಿ ಉದ್ಯೋಗಿಗಳಿಗೆ ಇದು ಕಷ್ಟದ ಸಮಯ ಮತ್ತು ನಿಮ್ಮ ಮೇಲಧಿಕಾರಿಗಳ ಮೂಲಕ ಅವಮಾನ ಮತ್ತು ನಿರಂತರ ನಿಂದನೆಯನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಉದ್ಯೋಗವನ್ನು ಸಹ ಕಳೆದುಕೊಳ್ಳಬಹುದು.
ಆದ್ದರಿಂದ ನಿಮ್ಮ ವೃತ್ತಿಪರ ಜೀವನದಲ್ಲಿ ಜಾಗರೂಕರಾಗಿರಲು ಮತ್ತು ಯಾವುದೇ ರೀತಿಯ ವಿವಾದ ಅಥವಾ ರಾಜಕೀಯದಲ್ಲಿ ಭಾಗವಹಿಸುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ವ್ಯಾಪಾರದಲ್ಲಿ ತೊಡಗಿರುವ ಜನರು ವ್ಯಾಪಾರದಲ್ಲಿ ಅನುತ್ಪಾದಕ ವೆಚ್ಚಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ನಿಮ್ಮ ವ್ಯಾಪಾರ ವಿದೇಶಕ್ಕೆ ಸಂಬಂಧಿಸಿದ್ದರೆ, ಈ ಸಮಯ ನಿಮಗೆ ಉತ್ತಮವಾಗಿರುತ್ತದೆ. ಕೆಲಸ ನಿಧಾನವಾಗಿರುತ್ತದೆ ಆದರೆ ನಿಮ್ಮ ಗ್ರಾಹಕರಿಂದ ನೀವು ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಕೆಲಸಕ್ಕೆ ಸಂಬಧಿಸಿದ ದೂರಸ್ಥ ಪ್ರಯಾಣಗಳನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ಇದು ಹೆಚ್ಚು ಉಪಯುಕ್ತವಾಗುವುದಿಲ್ಲ. ನೀವು ಯಾವುದೇ ಯೋಜನೆ ಇಲ್ಲದೆ, ಯಾವುದೇ ವ್ಯಾಪಾರದಲ್ಲಿ ಖರ್ಚು ಮಾಡಬಹುದು.
ಪರಿಹಾರ - ಸ್ನಾನ ಮಾಡುವ ನೀರಿನಲ್ಲಿ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಸೇರಿಸಿ.
धनु / ಧನು ರಾಶಿ
ಧನು ರಾಶಿಚಕ್ರದ ಜನರಿಗೆ ಸೂರ್ಯ ದೇವ ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಆದಾಯ ಮತ್ತು ಲಾಭದ ಹನ್ನೆರಡನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ವಿಷಯಗಳಲ್ಲಿ ನೀವು ಕೆಲವು ಅಸ್ಥಿರತೆಯನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ನಿಮ್ಮ ತಂದೆಯೊಂದಿಗೆ ಸಹ ನೀವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕುಟುಂಬದೊಂದಿಗೆ ಹಣಕಾಸು ಅಥವಾ ಸಂಪತ್ತಿಗೆ ಸಂಬಂಧಿಸಿದ ಕೆಲವು ಜಗಳಗಳು ಸಹ ಆಗಬಹುದು. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಮಯ ತುಂಬಾ ಅನುಕೂಲಕರ ಸಮಯವಾಗಿರುವುದಿಲ್ಲ, ಏಕೆಂದರೆ ನೀವು ಏಕಾಗ್ರತೆಯ ಕೊರತೆ ಮತ್ತು ಆತ್ಮವಿಶ್ವಾಸದ ಕೊರತೆಯ ಕಾರಣದಿಂದಾಗಿ ತೊಂದರೆಗೆ ಒಳಗಾಗುತ್ತೀರಿ. ಹಣಕಾಸು ಗಳಿಸುವತ್ತ ನೀವು ಬಲವಾದ ಒಲವು ಹೊಂದಿರುತ್ತೀರಿ. ಇದು ನಿಮ್ಮ ಅಧ್ಯಯನದಲ್ಲಿ ಅಡ್ಡಿಯಾಗುತ್ತದೆ.
ತಮ್ಮ ಹವ್ಯಾಸ ಮತ್ತು ಆಸಕ್ತಿಗಳನ್ನು ತಮ್ಮ ವೃತ್ತಿಯಾಗಿ ಮುಂದುವರಿಸಲು ಬಯಸುತ್ತಿರುವವರು, ಈ ಸಮಯದಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಬೇಕು. ಏಕೆಂದರೆ ಈ ಅವಧಿಯಲ್ಲಿ ನೀವು ಪ್ರಗತಿ ಪಡೆಯುತ್ತೀರಿ. ತಮ್ಮ ಸ್ವಂತ ವ್ಯಾಪಾರದಲ್ಲಿ ತೊಡಗಿರುವ ಜನರು ಆದಾಯದ ಹೊಸ ಮೂಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ನೀವು ಆದಾಯದ ಅನುಪಯುಕ್ತ ವಿಧಾನಗಳಲ್ಲಿ ಬೀಳಬಹುದು. ಈ ವಿಷಯದ ಬಗ್ಗೆ ಜಾಗರೂಕರಾಗಿರಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ಇದರಿಂದಾಗಿ ಭವಿಷ್ಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲಸದಲ್ಲಿ ತೊಡಗಿರುವವರು ಈ ಸಮಯದಲ್ಲಿ ತಮ್ಮ ಆದಾಯದಲ್ಲಿ ಕೆಲವು ನಷ್ಟಗಳನ್ನು ಎದುರಿಸಬಹುದು.
ಪರಿಹಾರ - ಭಾನುವಾರ ದೇವಸ್ಥಾನದಲ್ಲಿ ಕೆಂಪು ಬಟ್ಟೆ ಮತ್ತು ಬಾಳಿಂಬೆಯನ್ನು ದಾನ ಮಾಡುವುದು ನಿಮಗೆ ಅನುಕೂಲಕರವಾಗಿರುತ್ತದೆ.
मकर / ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹತ್ತನೇ ಮನೆಗೆ ಪ್ರವೇಶಿಸಲಿದೆ. ಈ ಮನೆಯ ಮೂಲಕ ವೃತ್ತಿ, ಅಧಿಕಾರ, ಹೆಸರು ಮತ್ತು ಖ್ಯಾತಿಯ ಬಗ್ಗೆ ಪರಿಗಣಿಸಲಾಗುತ್ತದೆ. ಸೂರ್ಯನ ಈ ಸ್ಥಾನವು ನಿಮಗೆ ಮಿಶ್ರ ಫಲಿತಾಂಶಗಳನ್ನು ತರಬಹುದು. ಈ ಸಮಯದಲ್ಲಿ ನೀವು ಸಂಪತ್ತಿನಲ್ಲಿ ಹೂಡಿಕೆ ಮಾಡಬಹುದು. ಈ ಅವಧಿಯಲ್ಲಿ ಪೂರ್ವಜರ ಆಸ್ತಿಯ ಮೂಲಕ ಹಣವನ್ನು ಪಡೆಯಬಹುದು. ಆದಾಗ್ಯೂ, ನೀವು ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ವಿಷಯದಲ್ಲಿ, ಸಾಕಷ್ಟು ಪ್ರಯತ್ನದ ನಂತರ ಮಾತ್ರ ನೀವು ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ನೀವು ಉದ್ಯೋಗದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ಮೇಲಧಿಕಾರಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವುದಿಲ್ಲ. ಆದ್ದರಿಂದ ಅವರ ಟೀಕೆಗಳನ್ನು ತಪ್ಪಿಸಲು ಮತ್ತು ನಿಮ್ಮ ಉದ್ಯೋಗದತ್ತ ಕೇಂದ್ರೀಕರಿಸಲು ನಿಮಗೆ ಸಲಹೆ ನೀಡಲಾಗಿದೆ.
ಈ ಸಮಯದಲ್ಲಿ ನೀವು ಉತ್ತಮ ಹಣವನ್ನು ಗಳಿಸಬಹುದು ಆದರೆ ತಪ್ಪು ಸಹವಾಸದಲ್ಲಿ ತೊಡಗಿ ಹಣವನ್ನು ಹಣವನ್ನು ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ ಹಾಗೆ ಮಾಡುವುದನ್ನು ತಪ್ಪಿಸಿ. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು, ಏಕೆಂದರೆ ಈ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಬಹುದು. ನೀವು ಸರ್ಕಾರಿ ವಲಯಕ್ಕೆ ಸಂಬಂಧಿಸಿದ್ದರೆ, ಈ ಸಮಯದಲ್ಲಿ ನೀವು ನಷ್ಟವನ್ನು ಎದುರಿಸಬಹುದು. ವಿವಾಹಿತ ಜನರ ಬಗ್ಗೆ ಮಾತನಾಡಿದರೆ, ನೀವು ಅಹಂಕಾರಿಯಾಗಬಹುದು. ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನೀವು ಕೆಲವು ಆರ್ಥಿಕ ನಷ್ಟವನ್ನು ಸಹ ಎದುರಿಸಬೇಕಾಗಬಹುದು.
ಪರಿಹಾರ - ಊಟ ಅಥವಾ ತಿಂಡಿಗಳೊಂದಿಗೆ ಯಾವುದೇ ರೂಪದಲ್ಲಿ ಪ್ರತಿದಿನ ಶುಂಠಿಯನ್ನು ಸೇವಿಸಿ.
कुंभ / ಕುಂಭ ರಾಶಿ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಒಂಬತ್ತನೇ ಮನೆಗೆ ಸಾಗುತ್ತಾರೆ. ಇದನ್ನು ಧರ್ಮ, ಕರ್ಮ ಮತ್ತು ತಂದೆಯ ಅಂಶವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ನೀವು ತುಂಬಾ ಬೋಲ್ಡ್ ಆಗಿರುತ್ತೀರಿ, ಆದರೆ ಈ ಸಮಯದಲ್ಲಿ ನೀವು ಅಹಂಕಾರದ ವರ್ತನೆಯನ್ನು ಅಳವಡಿಸಿಕೊಳ್ಳಬಹುದು. ನೀವು ಕಹಿ ಭಾವನೆಗಳನ್ನು ಹೊಂದಿರುತ್ತೀರಿ. ಯಾವುದೇ ನಿರ್ದೇಶನವಿಲ್ಲದೆ ನಿರಾಶೆಗೊಳ್ಳುವಿರಿ. ಈ ಕಾರಣದಿಂದಾಗಿ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ಕಾಣಲಾಗುತ್ತದೆ. ವಿವಾಹಿತ ಜನರಿಗೆ ಈ ಸಮಯ ತುಂಬಾ ಉತ್ತಮವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಜೀವನ ಸಂಗಾತಿಯೊಂದಿಗೆ ಅಂತರವನ್ನು ಹೊಂದಬಹುದು. ನಿಮ್ಮ ಸಂಗಾತಿಯ ಅರೋಗ್ಯ ಹದಗೆಡಬಹುದು ಮತ್ತು ಈ ಸಂಚಾರದ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಬಹುದು. ಅವರ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕು.
ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ಸಂಬಂಧವು ಸಹ ಹದಗೆಡಬಹುದು. ಆದ್ದರಿಂದ ಅವರೊಂದಿಗೆ ವಾದ ಮಾಡುವುದನ್ನು ತಪ್ಪಿಸಿ, ಏಕೆಂದರೆ ನಿಮ್ಮಲ್ಲಿ ಸಾಕಷ್ಟು ಅಹಂಕಾರ ಇರುತ್ತದೆ. ಮಕ್ಕಳ ವಿಷಯದಲ್ಲೂ ಈ ಸಮಯ ಹೆಚ್ಚು ಅನುಕೂಲಕರವಾಗಿರುವುದಿಲ್ಲ ಮತ್ತು ಈ ನಿಟ್ಟಿನಲ್ಲಿ ನೀವು ಹೆಚ್ಚು ಪ್ರಯತ್ನಿಸಬೇಕಾಗುತ್ತದೆ. ನಿಮ್ಮ ಚಿಕ್ಕವರೊಂದಿಗೆ ಮಾತನಾಡಿ ಮತ್ತು ಅವರ ಚಿಂತೆಗಳು ಮತ್ತು ಸಮಸ್ಯೆಗಳ ಬಗ್ಗೆ ಅರ್ಥಮಾಡಿಕೊಂಡು, ಅವರನ್ನು ಸಂಪರ್ಕಿಸಿ. ಅವರು ಯಾವುದೇ ತಪ್ಪು ಸಹವಾಸಕ್ಕೆ ಸೇರದಂತೆ ನೋಡಿಕೊಳ್ಳಿ. ಈ ಸಮಯದಲ್ಲಿ ನೀವು ಸಂಸ್ಕೃತಿ ಮತ್ತು ಆಚರಣೆಗಳಿಂದ ದೂರವಿರಬಹುದು. ಇದು ನಿಮ್ಮ ದಿನಚರಿಯ ಮೇಲೆ ಪರಿಣಾಮ ಬೀರಬಹುದು. ಏಕೆಂದರೆ ನಿಮ್ಮ ನಿಯಮಿತ ಆಧ್ಯಾತ್ಮಿಕ ಕಾರ್ಯಗಳನ್ನು ಮಾಡುವ ಆಸಕ್ತಿಯನ್ನು ನೀವು ಕಳೆದುಕೊಳ್ಳಬಹುದು.
ಪರಿಹಾರ - ಭಾನುವಾರ ದೇವಸ್ಥಾನದಲ್ಲಿ ಗೋಧಿ ಮತ್ತು ಬೆಲ್ಲದ ದಾನ ಮಾಡಿ.
मीन / ಮೀನ ರಾಶಿ
ಮೀನ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ನಿಮ್ಮ ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ರಹಸ್ಯಗಳು ಮತ್ತು ಅನಿಶ್ಚಿತತೆಯ ಎಂಟನೇ ಮನೆಗೆ ಸಾಗುತ್ತದೆ. ಈ ಸಮಯ ನಿಮಗೆ ಅನುಕೂಲಕರವಾಗಿದೆ ಎಂದು ಹೇಳಲಾಗುವುದಿಲ್ಲ. ನಿಮ್ಮ ಕೆಲಸಗಳಲ್ಲಿ ನೀವು ಹಲವು ಅಡೆತಡೆಗಳನ್ನು ಎದುರಿಸುವಿರಿ, ನಿಮ್ಮ ಮಾನಸಿಕ ಒತ್ತಡದಲ್ಲಿ ಸಹ ಅಸಮಧಗೊಳ್ಳುವಿರಿ. ನಿಮ್ಮ ಜೀವನ ಶೈಲಿಯಲ್ಲಿ ಧ್ಯಾನವನ್ನು ಸೇರಿಸುವುದರಿಂದ ನಿಮ್ಮ ಮನಸ್ಸು ಶಾಂತಗೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಿರುತ್ತಾರೆ. ಆದ್ದರಿಂದ ನೀವು ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಅರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಬೇಕು, ಇಲ್ಲದಿದ್ದರೆ ನೀವು ಜೀರ್ಣ ಮತ್ತು ಕರುಳಿನ ಸಮಸ್ಯೆಗಳಿಂದ ಬಳಲಬಹುದು.
ಈ ಸಮಯದಲ್ಲಿ ವಿವಾಹಿತ ಜನರು ತಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸುವಂತಹ ಆಸೆಗಳ ಮೇಲೆ ನೀವು ಹಣವನ್ನು ಖರ್ಚು ಮಾಡಬಹುದು. ಈ ಸಮಯದಲ್ಲಿ ನೀವು ಜೂಜು ಅಥವಾ ಬೆಟ್ಟಿಂಗ್ ಅನ್ನು ತಪ್ಪಿಸಬೇಕು. ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಬೇಜವಾಬ್ದಾರಿಯಾಗಬಹುದು ಮತ್ತು ನಿಮ್ಮ ತಪ್ಪು ಕೆಲಸಗಳಿಗೆ ನೀವು ಇತರರನ್ನು ದೂಷಿಸಬಹುದು.
ಪರಿಹಾರ - ಶುಭ ಫಲಿತಾಂಶಗಳನ್ನು ಪಡೆಯಲು ಭಾನುವಾರ ತಾಮ್ರದ ನಾಣ್ಯಗಳನ್ನು ದಾನ ಮಾಡಿ.
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ವಾರ್ತಾದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಧನ್ಯವಾದಗಳು.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025