ಮಕರ ರಾಶಿಯಲ್ಲಿ ವಕ್ರ ಗುರು ಸಂಚಾರ ( 15th September 2021 )
ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಜ್ಞಾನವುಳ್ಳ ಗ್ರಹವೆಂದು ಪರಿಗಣಿಸಲಾಗಿದೆ. ಇದು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಶುಭ ಗ್ರಹವೆಂದು ಪರಿಗಣಿಸಲಾಗಿದೆ. ಗುರು ಗ್ರಹವನ್ನು ಪೂಜಿಸಲಾಗುತ್ತದೆ ಮತ್ತು ಇದನ್ನು ಸಾಧನೆ ಮತ್ತು ಸ್ಥಿರತೆಯ ಗ್ರಹವೆಂದು ಸಹ ಪರಿಗಣಿಸಲಾಗಿದೆ. ಗುರುವು ಉತ್ತರ-ಪೂರ್ವ ದಿಕ್ಕಿನ ಅಧಿಪತಿ, ಇದನ್ನು ಪುರುಷ ಗ್ರಹವೆಂದು ಪರಿಗಣಿಸಲಾಗಿದೆ. ಇದರ ಅಂಶ ಆಕಾಶ ಮತ್ತು ಇದರ ಶುಭ ಬಣ್ಣ ಹಳದಿ. ಇತರ ಮನೆಗಳಿಗೆ ಹೋಲಿಸಿದರೆ, ಕೇಂದ್ರದಲ್ಲಿ ಗುರುವಿನ ಪ್ರಭಾವ ಹೆಚ್ಚಾಗಿರುತ್ತದೆ.
ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
ಸೂರ್ಯ, ಚಂದ್ರ ಮತ್ತು ಮಂಗಳ ಗ್ರಹವು ಗುರುವಿನ ಸ್ನೇಹಿತ ಗ್ರಹಗಳು ಮತ್ತು ಶನಿಯ ಬಗ್ಗೆ ಇದು ತಟಸ್ಥವಾಗಿದೆ, ಅದೇ ಸಮಯದಲ್ಲಿ ಮತ್ತೊಂದೆಡೆ, ಶುಕ್ರನನ್ನು ಇದರ ಶತ್ರು ಎಂದು ಪರಿಗಣಿಸಲಾಗಿದೆ. ಗುರುವನ್ನು ಕರ್ಕ ರಾಶಿಯಲ್ಲಿ ಉನ್ನತ ಮತ್ತು ಮಕರ ರಾಶಿಯಲ್ಲಿ ದುರುದ್ವೇಷಪೂರಿತ ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಜಗತ್ತಿನಲ್ಲಿ ಗುರುವನ್ನು ಅತ್ಯಂತ ಪ್ರಯೋಜನಕಾರಿ ಗ್ರಹವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಅದೃಷ್ಟ ಮತ್ತು ಗೌರವದ ಪ್ರಮುಖ ಅಂಶವೆಂದು ಸಹ ಪರಿಗಣಿಸಲಾಗಿದೆ. ಗರುವಿನ ಈ ಸಂಚಾರವು ಹೊಸ ಅವಕಾಶಗಳನ್ನು ತರಬಹುದು. ಈ ಸಮಯದಲ್ಲಿ ಜನರ ಉತ್ಸಾಹ ಹೆಚ್ಚಾಗಬಹುದು ಮತ್ತು ಸ್ಥಗಿತಗೊಂಡ ಕೆಲಸಗಳು ಮತ್ತೆ ಪ್ರಾರಂಭಿಸಬಹುದು. ಶಿಕ್ಷಣ, ಪ್ರಯಾಣ, ಪ್ರಕಟಣೆ ಮತ್ತು ವ್ಯಪೇತ ಇತ್ಯಾದಗಳಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಬಹುದು. ಆದಾಗ್ಯೂ, ಈ ಸಂಚಾರವು ಕೆಲವು ಜನರಿಗೆ ಸವಾಲುಗಳಿಂದ ತುಂಬಿರಬಹುದು
ಈ ಸಂಚಾರವು ಕೆಲವು ಜನರಿಗೆ ತುಂಬಾ ಉತ್ತಮ ಮತ್ತು ಕೆಲವರಿಗೆ ಸವಾಲಾಗಿರಬಹದು. ಗುರುವು ಮಾನಸಿಕ ಶಕ್ತಿ, ಉತ್ಸಾಹ, ವೃತ್ತಿಪರ ಕೌಶಲ್ಯ ಮತ್ತು ನಿಮ್ಮ ಪ್ರತಿಭೆಯ ಮೇಲೆ ಪರಿಣಾಮ ಬೀರುತ್ತದೆ. ಇದು ವ್ಯಕ್ತಿಯ ವೃತ್ತಿಪರ ಜೀವನವನ್ನು ಬಲಪಡಿಸುತ್ತದೆ. ಗುರು ಗ್ರಹವು ಸ್ಥಾನದ ಪ್ರಕಾರ ಎಲ್ಲಾ ಹನ್ನೆರಡು ರಾಶಿಗಳ ಜನರಿಗೆ ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ಫಲಿತಾಂಶಗಳನ್ನು ನೀಡುತ್ತದೆ. ಗುರು ಸಂಚಾರವು ಶನಿಯೊಂದಿಗೆ ಸಂಯೋಜಿಸುತ್ತದೆ. ಆದ್ದರಿಂದ ಈ ಸಂಚಾರವನ್ನು ತುಂಬಾ ವಿಶಿಷ್ಟವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಸಾಗಣೆಯ ಪರಿಣಾಮವು ದೀರ್ಘಕಾಲದ ವರೆಗೆ ಇರುತ್ತದೆ. ಗುರುವಿನ ಈ ಸಂಚಾರದ ಸಮಯದಲ್ಲಿ ಕೆಲವು ಪ್ರಮುಖ ಘಟನೆಗಳು ಸಂಭವಿಸಬಹುದು. ವಿಶ್ವದ ಕೆಲವು ಭಾಗಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ.
ಮಕರ ರಾಶಿಯಲ್ಲಿ ಗುರು ಗ್ರಹದ ವಕ್ರ ಸಂಚಾರವು 15 ಸೆಪ್ಟೆಂಬರ್ 2021 ರಂದು ಬೆಳಿಗ್ಗೆ 4:22 ಗಂಟೆಗೆ ಸಂಭವಿಸುತ್ತದೆ, ಈ ಗ್ರಹವು 20 ನವೆಂಬರ್ 2021ರಂದು ಬಿಳಿಗ್ಗೆ 11:23 ಗಂಟೆಯ ವರೆಗೆ ಮಕರ ರಾಶಿಯಲ್ಲಿ ಇರುತ್ತದೆ ಮತ್ತು ಅದರ ನಂತರ ಕುಂಭ ರಾಶಿಗೆ ಗೋಚರಿಸುತ್ತದೆ.
ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಗುರು ವಕ್ರ ಸಂಚಾರದ ಪರಿಣಾಮವನ್ನು ತಿಳಿಯೋಣ :
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
मेष / ಮೇಷ ರಾಶಿ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ವೃತ್ತಿ, ಹೆಸರು ಮತ್ತು ಖ್ಯಾತಿಯ ಹತ್ತನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಜನರು ಸಾಧನೆಯನ್ನು ಪಡೆಯುತ್ತಾರೆ. ಏಕೆಂದರೆ ಗುರುವು ನಿಮ್ಮ ಕರ್ಮದ ಮನೆಯಲ್ಲಿರುತ್ತಾರೆ. ವೃತ್ತಿಪರವಾಗಿ ಈ ಸಂಚಾರದ ಸಮಯದಲ್ಲಿ ನಿಮ್ಮ ಯಾವುದೇ ದೊಡ್ಡ ಕನಸು ನನಸಾಗಬಹುದು ಮತ್ತು ನೀವು ಪ್ರಶಂಸೆಯನ್ನು ಪಡೆಯಬಹುದು. ವ್ಯಾಪಾರ ಸಂಬಂಧಿತ ಪ್ರಯಾಣವನ್ನು ಸಹ ನೀವು ಮಾಡಬಹುದು. ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಈ ಸಂಚಾರದ ಸಮಯದಲ್ಲಿ ಉದ್ಯೋಗದಲ್ಲಿರುವ ಈ ರಾಶಿಚಕ್ರದ ಜನರು ಬಡ್ತಿ ಅಥವಾ ಸಂಬಳದಲ್ಲಿ ಹೆಚ್ಚಳವನ್ನು ಪಡೆಯಬಹುದು.
ಆರ್ಥಿಕವಾಗಿ ನೀವು ಅನುಕೂಲಕರವಾಗಿರುತ್ತೀರಿ. ಏಕೆಂದರೆ ಎರಡನೇ ಮನೆಯ ಮೇಲೆ ಗುರುವಿನ ಸಕಾರಾತ್ಮಕ ದೃಷ್ಟಿ ಇರುತ್ತದೆ, ಈ ಮನೆ ಅರ್ಥ ಮತ್ತು ಕುಟುಂಬದ ಸದಸ್ಯರೊಂದಿಗೆ ಸೇರಿದೆ. ಅವಶ್ಯಕ ಖರ್ಚುಗಳಿಗಾಗಿ ಸಾಕಷ್ಟು ಹಣವನ್ನು ಇಟ್ಟುಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ. ಸಂಬಂಧಗಳ ಬಗ್ಗೆ ಮಾತನಾಡಿದರೆ, ನೀವು ಎಲ್ಲವನ್ನೂ ಬಹಳ ಬುದ್ಧಿವಂತಿಕೆಯೊಂದಿಗೆ ನಿಭಾಯಿಸುತ್ತೀರಿ. ಏಕೆಂದರೆ ನಿಮ್ಮ ವೈಯಕ್ತಿಕ ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತೀರಿ, ಇದರಿಂದ ನೀವು ಇತರ ಪ್ರಮುಖ ವಿಷಯಗಳತ್ತ ಕೇಂದ್ರೀಕರಿಸಲು ಸಾಧ್ಯವಾಗುತ್ತ್ತದೆ. ಈ ಅಮಾಯದಲ್ಲಿ ಮಕ್ಕಳು ಮತ್ತು ಕುಟುಂಬದ ಸದಸ್ಯರ ಬೇಡಿಕೆಗಳು ಹೆಚ್ಚಾಗಬಹುದು ಮತ್ತು ಕುಟುಂಬದಲ್ಲಿ ಯಾವುದೇ ಮಂಗಳಕರ ಕಾರ್ಯವೂ ಸಂಭವಿಸಬಹುದು. ವಿವಾಹಿತ ಜನರು ಅಹ್ಲಾದಕರ ಜೀವನವನ್ನು ಅನುಭವಿಸುತ್ತಾರೆ. ಹಿಂದಿನ ಸಮಯದಲ್ಲಿ ನಿಮ್ಮನ್ನು ಕಾಡುತ್ತಿದ್ದ ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸಬಹುದು. ಆರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯವನ್ನು ನೀವು ಆನಂದಿಸಬಹುದು. ಆದಾಗ್ಯೂ, ಸಣ್ಣ ಪುಟ್ಟ ಅರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ ಮತ್ತು ಸಮಸ್ಯೆಗಳನ್ನು ತಪ್ಪಿಸಲು ಅವಶ್ಯಕ ಪರಿಹಾರಗಳನ್ನು ತೆಗೆದುಕೊಳ್ಳಿ.
ಪರಿಹಾರ - ನಿಮ್ಮ ಹಣೆಯ ಹಳದಿ ಅಥವಾ ಕೇಸರಿ ಶ್ರೀಗಂಧವನ್ನು ಹಚ್ಚಿಸಿ.
वृषभ / ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಈ ಗ್ರಹವು ಧರ್ಮ, ಅಂತರರಾಷ್ಟ್ರೀಯ ಪ್ರಯಾಣಗಳು, ಅದೃಷ್ಟ ಮತ್ತು ತಂದೆಯೊಂದಿಗಿನ ಸಂಬಂಧದ ಒಂಬತ್ತನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ವೃತ್ತಿಪರ ಜೀವನದ ಮೇಲೆ ದೃಷ್ಟಿ ಹಾಕಿದರೆ, ದೀರ್ಘಕಾಲದಿಂದ ನೀವು ಹುಡುಕುತ್ತಿದ್ದ ಉದ್ಯೋಗದ ಅವಕಾಶವನ್ನು ನೀವು ಪಡೆಯಬಹುದು. ವಿದೇಶದಲ್ಲಿ ಉದ್ಯೋಗ ಮಾಡಲು ಬಯಸುತ್ತಿದ್ದವರು ಸಹ ಗುರುವಿನ ಆಶೀರ್ವಾದವನ್ನು ಪಡೆಯುತ್ತಾರೆ. ನಿಮ್ಮ ಪ್ರಾಮಾಣಿಕ ಪ್ರಯತ್ನಗಳಿಂದಾಗಿ ಈ ಸಮಯದಲ್ಲಿ ನೀವು ಬಡ್ತಿ ಮತ್ತು ಗುರುತು ಪಡೆಯಬಹುದು. ನಿಮ್ಮ ವೃತ್ತಿಪರ ಜೀವನವು ಸಂತೋಷವಾಗಿರುತ್ತದೆ ಮತ್ತು ಮೇಲಧಿಕಾರಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಗುರಿಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಅವಧಿಯಲ್ಲಿ ನಿಮ್ಮ ಸ್ನೇಹಿತರ ವಲಯ ಮತ್ತು ಸಂಬಂಧಿಕರ ನಡುವೆ ಹೆಸರು, ಖ್ಯಾತಿ ಮತ್ತು ಗೌರವವನ್ನು ಪಡೆಯುತ್ತೀರಿ. ಆರ್ಥಿಕವಾಗಿ ನಿಮ್ಮ ಆದಾಯದ ಹರಿವು ನಿಮಗೆ ಅನುಕೂಲಕರವಾಗಿರುತ್ತದೆ.
ನೀವು ಆದಾಯದ ಕೆಲವು ಹೊಸ ಮೂಲಗಳನ್ನು ಸಹ ಪಡೆಯಬಹುದು ಮತ್ತು ಈ ಹಂತದ ಸಮಯದಲ್ಲಿ ನೀವು ಯಾವುದೇ ದೊಡ್ಡ ಖರ್ಚುಗಳನ್ನು ಭರಿಸುವುದಿಲ್ಲ. ಮುಂಬರುವ ಸಮಯಕ್ಕಾಗಿ ಉತ್ತಮ ಆರ್ಥಿಕ ಯೋಜನೆಯನ್ನು ತಯಾರಿಸಿ ಮತ್ತು ಹಠಾತ್ ವೆಚ್ಚಗಗಳಿಗಾಗಿ ಹಣದ ನಿರ್ವಹಣೆಯನ್ನು ಕಲಿಯಿರಿ. ವಿವಾಹಿತ ಜನರು ತಮ್ಮ ಜೀವನ ಸಂಗಾತಿಯೊಂದಿಗೆ ಆಹ್ಲಾದಕರ ಮತ್ತು ಸಂತೋಷ ಜೀವನವನ್ನು ಕಳೆಯಬಹುದು. ಪ್ರೀತಿ ಸಂಬಂಧದಲ್ಲಿರುವ ಈ ರಾಶಿಚಕ್ರದ ಜನರು ಉತ್ತಮ ತಿಳುವಳಿಕೆ ಮತ್ತು ಗುರುವಿನ ಪರಿಣಾಮದಿಂದಾಗಿ ತಮ್ಮ ಪ್ರೇಮಿಯೊಂದಿಗಿನ ಸಂಬಂಧವನ್ನು ಸುಧಾರಿಸುತ್ತಾರೆ. ಇನ್ನೂ ಒಬ್ಬಂಟಿಯಾಗಿರುವವರು ಈ ಸಮಯದಲ್ಲಿ ಮದುವೆಯಾಗಬಹುದು. ಏಕೆಂದರೆ ನೀವು ಯಾವುದೇ ಸಮಬಂಧದಲ್ಲಿ ಪ್ರವೇಶಿಸುವ ಸಂಪೂರ್ಣ ಸಾಧ್ಯತೆ ಇದೆ. ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯವೂ ಉತ್ತಮವಾಗಿರುತ್ತದೆ.
ಪರಿಹಾರ - ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಉಂಟಾಗುತ್ತದೆ.
मिथुन / ಮಿಥುನ ರಾಶಿ
ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಅತಿಂದ್ರೀಯ ವಿಜ್ಞಾನ, ಪಿತ್ರಾರ್ಜಿತ ಮತ್ತು ಹಠಾತ್ ಲಾಭ/ನಷ್ಟಗಳ ಎಂಟನೇ ಮನೆಗೆ ಗೋಚರಿಸುತ್ತದೆ. ವೃತ್ತಿಪರವಾಗಿ ಈ ಸಂಚಾರದ ಸಮಯದಲ್ಲಿ ವ್ಯಾಪಾರದಲ್ಲಿ ತೊಡಗಿರುವ ಜನರು ಗ್ರಾಹಕರಿಂದ ಉತ್ತಮ ಡೀಲ್ ಗಳನ್ನು ಪಡೆಯುತ್ತಾರೆ. ಆದಾಗ್ಯೂ, ವ್ಯಾಪಾರಸ್ಥರು ಈ ಸಮಯದಲ್ಲಿ ಸರಕುಗಳನ್ನು ತಲುಪಿಸಲು ಸಮಸ್ಯೆಯನ್ನು ಎದುರಿಸಬಹುದು. ಈ ಸಂಚಾರದ ಸಮಯದಲ್ಲಿ ನೀವು ಅನುಭವಿಸುತ್ತಿರುವ ಕಷ್ಟಕರ ಪರಿಸ್ಥಿತಿಗಳ ಬಗ್ಗೆ ಗ್ರಾಹಕರನ್ನು ಜಾಗೃತಗೊಳಿಸಿ. ಉದ್ಯೋಗದಲ್ಲಿರುವ ಜನರು ಹೆಚ್ಚು ಶ್ರಮಿಸಬೇಕಾಗುತ್ತದೆ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಸ್ಥಿತಿಯನ್ನು ಕಾಪಾಡಿಕೊಳ್ಳಲು ಹೆಚ್ಚು ಔಟ್ಪುಟ್ ನೀಡಲು ಪ್ರಯತ್ನಿಸಬೇಕು. ಆರ್ಥಿಕವಾಗಿ ನೀವು ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಯಾರಿಗಾದರೂ ಸಾಲ ನೀಡುವುದು ಅಥವಾ ಯಾರಿಂದಾದರೂ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ವಿಮೆ, ಪಿಎಫ್, ಲೋನ್ ಗಳಂತಹ ವಿಷಯಗಳಿಗೂ ಈ ಸಂಚಾರವು ಪ್ರಮುಖವಾಗಬಹುದು.
ವಿವಾಹಿತ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಜಾಗರೂಕರಾಗಿರುವ ಅಗತ್ಯವಿದೆ. ಏಕೆಂದರೆ ಇದರಿಂದಾಗಿ ತಪ್ಪುಗ್ರಹಿಕೆಗಳು ಮತ್ತು ಸಂಘರ್ಷದ ಪರಿಸ್ಥಿತಿಗಳು ಉದ್ಭವಿಸಬಹುದು. ಪ್ರೇಮಿಗಳಿಗೆ ಇದು ಉತ್ತಮ ಸಮಯ ಏಕೆಂದರೆ ಈ ಸಂಚಾರದ ಸಮಯದಲ್ಲಿ ನೀವು ಉತ್ತಮ ಸಂಬಂಧವನ್ನು ಆನಂದಿಸುವಿರಿ. ಈ ಸಮಯದಲ್ಲಿ ಮಿಥುನ ರಾಶಿಚಕ್ರದ ಜನರು ತಮ್ಮ ಕುಟುಂಬದೊಂದಿಗೆ ಸೇರುತ್ತಾರೆ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಅರೋಗ್ಯ ಮತ್ತು ನಿಮ್ಮ ಜೀವನ ಸಂಗಾತಿ ಮತ್ತು ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಈ ಸಂಚಾರದ ಸಮಯದಲ್ಲಿ ಅನಗತ್ಯ ಪ್ರಯಾಣಗಳನ್ನು ತಪ್ಪಿಸಬೇಕು. ಆರೋಗ್ಯ ವಿಷಯದ ಬಗ್ಗೆ ಸರಿಯಾಗಿ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ.
ಪರಿಹಾರ - ಗುರುವಾರ ಹಸುವಿಗೆ ಬೆಲ್ಲವನ್ನು ತಿನ್ನಿಸಿ.
कर्क / ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಮದುವೆ ಮತ್ತು ಪಾಲುದಾರಿಕೆಯ ಏಳನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ ಮತ್ತು ನಿಮ್ಮ ಸಂಬಳ ಹೆಚ್ಚಾಗುವ ಸಾಧ್ಯತೆಯೂ ಇದೆ. ಈ ರಾಶಿಚಕ್ರದ ಕೆಲವು ಜನರು ಉದ್ಯೋಗದ ಉತ್ತಮ ಅವಕಾಶಗಳನ್ನು ಪಡೆಯಬಹುದು. ವೃತ್ತಿ ಜೀವನವನ್ನು ಸುಧಾರಿಸಲು ನೀವು ನಿರ್ಧರಿಸುವ ಗುರಿಗಳನ್ನು ನೀವು ಸಾಧಿಸಬಹುದು. ವ್ಯಾಪಾರಸ್ಥರಿಗೆ ಸಂಚಾರವು ಪ್ರಯೋಜನಕಾರಿಯಾಗಿದೆ. ನಿಮ್ಮ ವ್ಯಾಪಾರ ವಿಸ್ತರಣೆಯು ಆಶಾದಾಯಕವಾಗಿ ಉಳಿಯಬಹುದು ಮತ್ತು ವ್ಯಾಪಾರ ಪಾಲುದಾರರೊಂದಿಗೆ ನಡೆಯುತ್ತಿರುವ ವಿವಾದವನ್ನು ನಿವಾರಿಸುವ ಸಾಧ್ಯತೆಯೂ ಇದೆ. ಹೊಸ ವ್ಯಾಪಾರವನ್ನು ಆರಂಭಿಸಲು ಬಯಸುತ್ತಿದ್ದ ಜನರು ಸಹ ಈ ಸಮಯದಲ್ಲಿ ಮುಂದುವರಿಯಬಹುದು.
ವ್ಯಾಪಾರಿಕವಾಗಿ ನೀವು ಉತ್ತಮ ಸ್ಥಿತಿಯಲ್ಲಿರಬಹುದು ಮತ್ತು ಈ ಸಮಯದಲ್ಲಿ ಯಾವುದೇ ದೊಡ್ಡ ಖರ್ಚು ಇರುವುದಿಲ್ಲ. ಅನಿರೀಕ್ಷಿತ ಹಣಕಾಸಿನ ಲಾಭದ ಸಾಧ್ಯತೆಯೂ ಇದೆ. ಈ ರಾಶಿಚಕ್ರದ ಜನರು ಅಪಾಯಕಾರಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಕುಟುಂಬದ ಸದಸ್ಯರೊಂದಿಗಿನ ಸಂಬಂಧವು ಸುಧಾರಿಸುತ್ತದೆ, ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ನಡೆಯುತ್ತಿದ್ದರೆ, ಈ ಸಮಯದಲ್ಲಿ ಅದು ಸಹ ನಿವಾರಿಸಲಾಗುತ್ತದೆ, ಪ್ರೀತಿ ಜೀವನದಲ್ಲೂ ಎಲವೂ ಧನಾತ್ಮಕ ಫಲಿತಾಂಶಗಳನ್ನು ಪಡೆಯುವ ನಿರೀಕ್ಷೆಯಿದೆ. ಆರೋಗ್ಯದ ದೃಷ್ಟಿಕೋನದಿಂದ, ಈ ಸಮಯದಲ್ಲಿ ಸಾಧಾರಣ ನೆಗಡಿ ಮತ್ತು ಕೆಮ್ಮಲಿನ ಸಮಸ್ಯೆ ಉಂಟಾಗಬಹುದು. ಅರೋಗ್ಯ ಸಮಸ್ಯೆಗಳಿದ್ದರೆ, ರಾತ್ರಿಯಲ್ಲಿ ಹೆವಿ ಆಹಾರವನ್ನು ತಪ್ಪಿಸಿ ಮತ್ತು ಬೆಳಿಗ್ಗೆ ವ್ಯಾಯಾಮ ಮಾಡುವುದು ನಿಮಗೆ ಉತ್ತಮ.
ಪರಿಹಾರ - ವಿಷ್ಣು ದೇವರನ್ನು ಪೂಜಿಸಿ ಮತ್ತು ವಿಷ್ಣು ಸಹಸ್ತ್ರನಾಮವನ್ನು ಪಠಿಸಿ.
सिंह / ಸಿಂಹ ರಾಶಿ
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಶತ್ರುವಿನ ಮನೆ ಅಂದರೆ ಆರನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ವೃತ್ತಿಪರರು ಮಿಶ್ರ ಫ್ಲಿಅಂಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಕೆಲಸದ ಹೆಚ್ಚಳವಿರಬಹುದು, ಇದರಿಂದಾಗಿ ನೀವು ಒತ್ತಡಕ್ಕೆ ಒಳಗಾಗಬಹುದು. ಕೆಲಸದ ಸ್ಥಳದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ತೊಡೆದುಹಾಕಲು ನಿಮ್ಮ ಜೀವನದಲ್ಲಿ ಸ್ಥಿರತೆ ತರಲು ಪ್ರಯತ್ನಿಸಿ. ನಿಮ್ಮ ಸಂಬಂಧಗಳ ಬಗ್ಗೆ ಮಾತನಾಡಿದರೆ, ಯಾವುದೇ ಕಾರಣದಿಂದಾಗಿ ನೀವು ಅಸಮಾಧಾನವನ್ನು ಅನುಭವಿಸಬಹುದು. ಆದ್ದರಿಂದ ಯಾವುದೇ ರೀತಿಯ ವಿವಾದದ ಪರಿಸ್ಥಿತಿಯಿಂದ ದೂರವಿರಲು ಸಲಹೆ ನೀಡಲಾಗಿದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕರಾಗಿರಿ ಮತ್ತು ವಿವಾಹಿತ ಜೀವನವನ್ನು ಸುಗಮವಾಗಿ ನಡೆಸಲು ಪ್ರಯತ್ನಿಸಿ.
ನೀವು ಹಾಗೆ ಮಾಡದಿದ್ದರೆ ಜೀವನ ಸಂಗಾತಿಯೊಂದಿಗೆ ನಿಮ್ಮ ಜಗಳವಾಗಬಹುದು. ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಯಾವುದೇ ಹೊಸ ಸಂಬಂಧವನ್ನು ಹೊಂದಬಾರದು ಮತ್ತು ಗ್ರಹ ನಕ್ಷತ್ರಪುಂಜಗಳ ಚಲನೆಯು ಅನುಕೂಲಕರವಾಗುವವರೆಗೆ ನೀವು ಕಾಯಬೇಕು. ಆರ್ಥಿಕವಾಗಿ ಈ ಸಮಯದಲ್ಲಿ ನೀವು ಬಲವನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿಯನ್ನು ಸಮತೋಲಿತ ಮತ್ತು ಬಲವಾಗಿಡಲು, ಈ ಸಮಯದಲ್ಲಿ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹಣಕಾಸಿನ ದಾನ ಮಾಡಬೇಕು. ನಿಮ್ಮ ಆರ್ಥಿಕ ಭಾಗವನ್ನು ದೀರ್ಘಕಾಲದ ವರೆಗೆ ಬಲವಾಗಿಡಲು ಹಣಕಾಸು ಉಳಿಸಲು ಪ್ರಯತ್ನಿಸಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯದತ್ತ ನೀವು ವಿಶೇಷನ್ ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ನಿಮಗೆ ಸಣ್ಣ ಪುಟ್ಟ ಅರೋಗ್ಯ ಸಮಸ್ಯೆಗಳಾಗಬಹುದು.
ಪರಿಹಾರ - ಗುರುವಾರ ಉಪವಾಸ ಮಾಡುವುದು ನಿಮಗೆ ಉತ್ತಮ.
कन्या / ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ, ಪ್ರಣಯ ಮತ್ತು ಮಕ್ಕಳ ನಾಲ್ಕನೇ ಮನೆಗೆ ಗೋಚರಿಸುತ್ತದೆ. ವೃತ್ತಿಪರವಾಗಿ ಈ ಸಮಯದಲ್ಲಿ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವನ್ನು ನೀವು ಸುಧಾರಿಸಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನಗಳಿಗಾಗಿ ನೀವು ಬಹುಮಾನ ಮತ್ತು ಪ್ರಶಂಸೆಯನ್ನು ಪಡೆಯಬಹುದು. ನಿಮ್ಮ ತಂಡವು ಸಹ ನಿಮಗೆ ಸರಿಯಾದ ಗೌರವವನ್ನು ನೀಡುತ್ತದೆ. ಈ ಸಮಯದಲ್ಲಿ ವ್ಯಾಪಾರ ಸಭೆಗಳಿಂದಲೂ ನೀವು ಲಾಭವನ್ನು ಪಡೆಯುತ್ತೀರಿ ಮತ್ತು ವ್ಯಾಪಾರಿಕ ಪ್ರವಾಸದ ಸಾಧ್ಯತೆಯೂ ಇದೆ. ವಿದ್ಯಾರ್ಥಿಗಳಿಗೆ ಈ ಸಮಯ ಪ್ರಯೋಜನಕಾರಿಯಾಗಿರುತ್ತದೆ, ಏಕೆಂದ್ರೆ ಅಪೇಕ್ಷಿತ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಸಾಧ್ಯತೆ ಇದೆ.
ವೃತ್ತಿಪರ ಕೋರ್ಸ್ ಗಳಲ್ಲಿ ಉನ್ನತ ಅಧಯಯನಕ್ಕೆ ಅರ್ಜಿ ಸಲ್ಲಿಸಲು ಇದು ಸರಿಯಾದ ಸಮಯ. ಆರ್ಥಿಕವಾಗಿ ಸಂಪತ್ತು/ ವಾಹನಗಳಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯವಾಗಿರಬಹುದು. ಏಕೆಂದರೆ ನಿಮಗೆ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ. ನಿಮ್ಮ ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುತ್ತಿದ್ದರೆ, ಅದರಲ್ಲೂ ನೀವು ಉತ್ತಮ ಪ್ರಯೋಜನವನ್ನು ಗಳಿಸಬಹುದು. ನಿಮ್ಮ ತಿಳುವಳಿಕೆಯ ವರ್ತನೆಯು ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ಅವರೊಂದಿಗೆ ನೀವು ಆಹ್ಲಾದಕರ ಮತ್ತು ಆನಂದಮಯ ಸಮಯವನ್ನು ಕಳೆಯಬಹುದು. ಆರೋಗ್ಯದ ಜೀವನದ ಮೇಲೆ ದೃಷ್ಟಿ ಹಾಕಿದರೆ, ಕೆಮ್ಮು ಮತ್ತು ಶೀತದಂತಹ ಸಣ್ಣ ಪುಟ್ಟ ರೋಗಗಳಾಗಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ವೈರಲ್ ಸೋಂಕನ್ನು ತಪ್ಪಿಸಲು ನೀವು ಅವಶ್ಯಕ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.
ಪರಿಹಾರ - ಶಿವಲಿಂಗದ ಮೇಲೆ ಬೆಣ್ಣೆ ಲೇಪನವನ್ನು ಹಚ್ಚಿಸಿ.
तुला / ತುಲಾ ರಾಶಿ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವಿಶ್ರಾಂತಿ, ತಾಯಿ, ಸಂಪತ್ತು ಮತ್ತು ಸಂತೋಷದ ನಿಮ್ಮ ನಾಲ್ಕನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ, ತಮ್ಮ ವೃತ್ತ ಜೀವನದ ಬಗ್ಗೆ ಗಂಭೀರರಾಗಿರುವ ಜನರಿಗೆ ಸಮಯ ಉತ್ತಮ ಉತ್ತಮವಾಗಿರುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ. ವ್ಯಾಪಾರದಲ್ಲಿ ಉತ್ತಮ ಕಾರ್ಯ ಮತ್ತು ಪ್ರಯೋಜನಕ್ಕಾಗಿ ಈ ರಾಶಿಚಕ್ರದ ವ್ಯಾಪಾರಸ್ಥರು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಕೆಲವು ವ್ಯಾಪಾರಸ್ಥರು ಉತ್ತಮ ಡೀಲ್ ಪಡೆಯಲು ದೊಡ್ಡ ಅವಕಾಶವನ್ನು ಪಡೆಯಬಹುದು. ಈ ಸಮಯದಲ್ಲಿ ಯಾವುದೇ ಸಂಬಂಧದಲ್ಲಿ ನಿಮ್ಮ ಆಪ್ತರಿಂದ ನೀವು ಬಯಸಿದ ಪ್ರತಿಕ್ರಿಯೆಯನ್ನು ಪಡೆಯುವುದಿಲ್ಲ. ಇದರಿಂದಾಗಿ ವಿವಾದ ಅಥವಾ ಸಂಘರ್ಷವಾಗಬಹದು, ಇದನ್ನು ನೀವು ತಪ್ಪಿಸಬೇಕು. ಆರ್ಥಿಕವಾಗಿ ಬೆಟ್ಟಿಂಗ್ ಮತ್ತು ಸ್ಟಾಕ್ ಮಾರ್ಕೆಟ್ ನಿಮಗೆ ಧನಾತ್ಮಕ ಫಲಿತಾಂಶಗಳನ್ನು ನೀಡಬಹುದು. ಆದಾಗ್ಯೂ ನಿಮ್ಮ ಜಾತಕದಲ್ಲಿ ಶನಿ ಮತ್ತು ಗುರುವಿನ ಸ್ಥಾನದ ಮೇಲೂ ಇದು ಅವಲಂಬಿಸಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಸೋಂಕಿನಿಂದ ನಿಮ್ಮನ್ನು ತಪ್ಪಿಸಲು ಪ್ರಯತ್ನಿಸಿ. ಮಗಳ ಮದುವೆಗೆ ಈ ಸಮಯ ಉತ್ತಮವಾಗಿದೆ. ಗರ್ಭಿಣಿಯರು ಸ್ವಲ್ಪ ಜಾಗರೂಕರಾಗಿರಬೇಕು.
ಪರಿಹಾರ - ವಿಷ್ಣು ದೇವರನ್ನು ಪೂಜಿಸಿ.
वृश्चिक / ವೃಶ್ಚಿಕ
ರಾಶಿ ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಗುರುವು ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಧೈರ್ಯ, ಸಹೋದರ - ಸಹೋದರಿ, ಸಂವಹನ ಮತ್ತು ಅಲ್ಪ ಪ್ರಯಾಣಗಳ ನಿಮ್ಮ ಮೂರನೇ ಮನೆಗೆ ಸಾಗಣಿಸುತ್ತದೆ. ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿವೆ, ಆದ್ದರಿಂದ ಇದಕ್ಕಾಗಿ ಸಿದ್ಧರಾಗಿರಿ. ನಿಮ್ಮ ವೃತ್ತಿ ಜೀವನದಲ್ಲಿ ಬದಲಾವಣೆ ತರಲು ಬಯಸುತ್ತಿದ್ದರೆ ಮತ್ತು ವಿದೇಶಕ್ಕೆ ಹೋಗಲು ಬಯಸುತ್ತಿದ್ದರೆ, ನಿಮ್ಮ ಪ್ರಯತ್ನಗಳನ್ನು ವೇಗಗೊಳಿಸಲು ಇದು ಸರಿಯಾದ ಸಮಯ. ಆದರೆ ಹೊಸ ಸಂಪರ್ಕ ಅಥವಾ ಹೊಸ ಉದ್ಯೋಗವನ್ನು ಪಡೆಯಲು ಪ್ರಮಾಣಕತೆಯೊಂದಿಗೆ ಪ್ರಯತ್ನಿಸಬೇಕು. ತಮ್ಮ ಪ್ರೇಮಿಗೆ ಪ್ರಪೋಸ್ ಮಾಡಲು ಬಯಸುವವರಿಗೆ ಈ ಸಂಚಾರವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತಾಗುತ್ತದೆ. ಜೀವನ ಸಂಗಾತಿಯೊಂದಿಗೆ ಭಾವನಾತ್ಮಕ ಮತ್ತು ದೈಹಿಕ ದೂರದ ಸಾಧ್ಯತೆ ಇದೆ. ಆರ್ಥಿಕ ಭಾಗವನ್ನು ನೋಡಿದರೆ, ಈ ಸಮಯದಲ್ಲಿ ಅನಗತ್ಯ ವೆಚ್ಚಗಳಾಗಬಹುದು. ಆದಾಗ್ಯೂ ಆರ್ಥಿಕ ಭಾಗದಲ್ಲಿ ಸಾಧಾರಣ ಅಭಿವೃದ್ಧಿಯನ್ನು ಕಾಣಬಹುದು. ನೀವು ನಿಯಮಿತ ಮತ್ತು ಹಠಾತ್ ವೆಚ್ಚಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ನೀವು ದೀರ್ಘಾವಧಿಗೆ ಬಜೆಟ್ ಅನ್ನು ಯೋಜಿಸಬೇಕಾಗಿದೆ, ಇದರಿಂದಾಗಿ ಹಣಕಾಸು ಹೆಚ್ಚು ಅಗತ್ಯವಿರುವ ದಿನಗಳಲ್ಲಿ ಇದು ನಿಮ್ಮ ಕೆಲಸಕ್ಕೆ ಬರುತ್ತದೆ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಈ ಸಂಚಾರದ ಸಮಯದಲ್ಲಿ ನೀವು ಸಹ ಸರಿಯಾದ ಆಹಾರ ಮತ್ತು ದಿನಚರಿಯನ್ನು ಅನುಸರಿಸಿ
ಪರಿಹಾರ - ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ನಿರಂತರವಾಗಿ ಎಂಟು ದಿನಗಳ ವರೆಗೆ ದೇವಸ್ಥಾನದಲ್ಲಿ ಅರಿಶಿನವನ್ನು ದಾನ ಮಾಡಿ
धनु / ಧನು
ರಾಶಿ ಧನು ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಮೊದಲನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬ, ಸಂವಹನ ಮತ್ತು ಧ್ವನಿಯ ಎರಡನೇ ಮನೆಗೆ ಸಾಗುತ್ತದೆ. ಈ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಹೂಡಿಕೆಯಿಂದ ನೀವು ಲಾಭವನ್ನು ಗಳಿಸಬಹುದು ಮತ್ತು ಹಣ ಉಳಿಸಲು ಸಹ ಈ ಸಮಯ ಅನುಕೂಲಕರವಾಗಿದೆ, ವಿಶೇಷವಾಗಿ ಕುಟುಂಬಕ್ಕಾಗಿ ಹಣಕಾಸು ಸಂಗ್ರಹಿಸಲು ಇದು ಉತ್ತಮ ಸಮಯ. ಈ ಸಂಚಾರದ ಸಮಯದಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು ಮತ್ತು ಇದರಿಂದಾಗಿ ಧನು ರಾಶಿಚಕ್ರದ ಜನರು ತಮ್ಮ ಮಾನಸಿಕ ಶಾಂತಿಯನ್ನು ಕಳೆದುಕೊಳ್ಳಬಹುದು. ಈ ರಾಶಿಚಕ್ರದ ಜನರು ಪ್ರತಿಯೊಂದು ಪರಿಸ್ಥಿತಿಯಲ್ಲೂ ಶಾಂತವಾಗಿರಬೇಕು, ದಹಿಕವಾಗಿ ಮತ್ತು ಮಾನಸಿಕವಾಗಿ ತಪ್ಪು ದಿಕ್ಕಿನಲ್ಲಿ ಹೋಗುವುದನ್ನು ತಪ್ಪಿಸಬೇಕು ಎಂದು ಖಚಿತಪಡಿಸಿಕೊಳ್ಳಬೇಕು. ಈ ಸಮಯದಲ್ಲಿ ಯೋಗ ಮತ್ತು ಧ್ಯಾನವನ್ನು ಆಶ್ರಯಿಸಲು ನಿಮಗೆ ಸಲಹೆ ನೀಡಲಾಗಿದೆ. ವೃತ್ತಿಪರವಾಗಿ ಈ ಸಂಚಾರವು ಧನು ರಾಶಿಚಕ್ರದ ಶಾಲೀಯರಿಗೆ ಪ್ರಯೋಜನಕಾರಿಯಾಗಬಹುದು. ಅವರ ವ್ಯಾಪಾರ ಮತ್ತು ವೃತ್ತಿಪರ ಜೀವನದಲ್ಲಿ ಅಭಿವೃದ್ಧಿ ಪಡೆಯುವ ಸಾಧ್ಯತೆ ಇದೆ. ನಿಮ್ಮ ಗುರಿಗಳನ್ನು ಸಾಧಿಸಲು ಹೆಚ್ಚು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಅಗತ್ಯವಿದೆ. ತಮ್ಮ ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುತ್ತಿರುವವರು ಅಥವಾ ತಮ್ಮ ವ್ಯಾಪಾರದಲ್ಲಿ ವೈವಿಧ್ಯತೆ ತರಲು ಬಯಸುತ್ತಿರುವವರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ನಿರ್ಧಾರಗಳನ್ನು ಪ್ರಾಮಾಣಿಕತೆಯೊಂದಿಗೆ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ಧನು ರಾಶಿಚಕ್ರದ ಸ್ಥಳೀಯರ ವೈವಾಹಿಕ ಜೀವನವು ಸುಗಮವಾಗಿ ನಡೆಯುತ್ತದೆ. ಮದುವೆಯಾಗಲು ಯೋಜಿಸುತ್ತಿರುವ ಜನರಿಗೂ ಸಮಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಪ್ರೀತಿ ಮದುವೆಯನ್ನು ಸಹ ಯೋಜಿಸಬಹುದು. ಆರೋಗ್ಯದ ದೃಷ್ಟಿಯಿಂದ ಈ ರಾಶಿಚಕ್ರದ ಜನರು ತಮ್ಮ ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಅನುಭವಿಸಬಹುದು. ಆದ್ದರಿಂದ ಈ ಸಮಸ್ಯೆ ದೊಡ್ಡದಾಗದಿರಲು ನೀವು ಶೀಘ್ರದಲ್ಲೇ ನೇತ್ರಶಾಸ್ತ್ರಜ್ಞರ ಸಲಹೆಯನ್ನು ಪಡೆದುಕೊಳ್ಳಬೇಕು. ಯಾವುದೇ ಕಾಯಿಲೆಯಿಂದ ತೊಂದರೆಗೀಡಾಗಿರುವ ಜನರು ಅಥವಾ ಹೆಚ್ಚು ವಯಸ್ಸಾಗಿರುವ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪರಿಹಾರ - ಪ್ರತಿ ಹುಣ್ಣಿಮೆಯ ದಿನ ಉಪವಾಸ ಮಾಡಿ ಮತ್ತು ಸತ್ಯನಾರಾಯಣ ಕಥೆಯನ್ನು ಪಠಿಸಿ.
मकर / ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಆತ್ಮ ಮತ್ತು ವ್ಯಕ್ತಿತ್ವದ ಮೊದಲನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಜನರು ತಮ್ಮ ಪ್ರೀತಿಪಾತ್ರರೊಂದಿಗೆ ಸಂಘರ್ಷಗಳನ್ನು ಹೊಂದಿರಬಹುದು ಮತ್ತು ಈ ಕಾರಣದಿಂದಾಗಿ ನಿಮ್ಮ ಮಾನಸಿಕ ಶಾಂತಿ ಹದಗೆಡಬಹುದು. ಈ ಸಮಯವನ್ನು ನಿಮ್ಮ ಪರೀಕ್ಷೆಯ ಸಮಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಭೌತಿಕ ಸಂತೋಷಗಳು ಕಡಿಮೆಯಾಗಬಹುದು. ಆದ್ದರಿಂದ ಧೈರ್ಯದಿಂದಿರಿ ಮತ್ತು ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಿ ಮತ್ತು ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯವು ಪ್ರೇಮಿಗಳಿಗೆ ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ. ಮದುವೆಯಾಗಲು ಸಿಧಾರಾಗಿರುವ ಜನರ ಜೀವನದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು.
ವೃತ್ತಿಪರ ಜೀವನದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ಕೆಲಸದ ಸ್ಥಳದ ವಾತಾವರಣವು ಉತ್ತಮವಾಗಿರುವುದಿಲ್ಲ ಈ ಸಮಯದಲ್ಲಿ ಮೇಲಧಿಕಾರಿಗಳೊಂದಿಗೆ ಅನಗತ್ಯ ವಿವಾದವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಇದರೊಂದಿಗೆ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಪ್ರಾಮಾಣಿಕತೆಯ ದಾರಿಯನ್ನು ನೀವು ಅಳವಡಿಸಿಕೊಳ್ಳಬೇಕು. ಆರ್ಥಿಕ ಭಾಗದ ಮೇಲೆ ದೃಷ್ಟಿ ಹಾಕಿದರೆ ದೀರ್ಘಕಾಲದ ಪ್ರಯೋಜನೆಗಾಗಿ ಮಾಡಲಾಗುವ ಹೂಡಿಕೆಗೆ ಈ ಸಮಯ ಉತ್ತಮವಾಗಿದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿರುವ ಸಾಂಕ್ರಾಮಿಕವನ್ನು ಗಮನ ಹರಿಸುವ ಮೂಲಕ ಈ ಸಾಗಣೆಯ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಈ ವರ್ಷ ವೈರಲ್ ಸೋಂಕಿನ ಸಾಧ್ಯತೆ ಇದೆ ಆದ್ದರಿಂದ ಅವಶ್ಯಕ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಮತ್ತು ನಿಮ್ಮನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿಸಿ.
ಪರಿಹಾರ - ಗುರುವಾರ ಕಡ್ಲೆ ಬೇಳೆ ಮತ್ತು ಬೆಲ್ಲವನ್ನು ಸೇವಿಸಿ.
कुंभ / ಕುಂಭ ರಾಶಿ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವೆಚ್ಚ, ನಷ್ಟ ಮತ್ತು ಮೋಕ್ಷದ ಹನ್ನೆರಡನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ಆರ್ಥಿಕವಾಗಿ ನಿಮ್ಮ ವೆಹಾಗಳು ಹೆಚ್ಚಾಗಬಹುದು ಮತ್ತು ಅನಗತ್ಯ ವೆಚ್ಚಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಆಸ್ತಿಗೆ ಸಂಬಂಧಿಸಿದ ವಿಷಯಗಳನ್ನು ನಿವಾರಿಸಲು ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಮೋಸ ಹೋಗುವ ಸಾಧ್ಯತೆ ಇದೆ. ನೀವು ರಿಯಲ್ ಎಸ್ಟೇಟ್ ಅನ್ನು ಮಾರಾಟ ಮಾಡುತ್ತಿದ್ದರೆ, ಒಪ್ಪಂದವನ್ನು ಅಂತಿಮಗೊಳಿಸುವಲ್ಲಿ ನೀವು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಕುಟುಂಬದಿಂದ ದೂರವಿರಲು ಪರಿಸ್ಥಿತಿಗಳು ನಿಮ್ಮನ್ನು ಒತ್ತಾಯಿಸಬಹುದು ಮತ್ತು ಕುಟುಂಬದ ಸದಸ್ಯರಿಂದ ನೀವು ದೂರ ಹೋಗಬಹುದು ಅಥವಾ ದೀರ್ಘ ಪ್ರಯಾಣಕ್ಕೆ ಹೋಗಬಹುದು.
ವೃತ್ತಿಪರವಾಗಿ ಈ ಸಂಚಾರವು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುವುದಿಲ್ಲ, ಏಕೆಂದರೆ ಉದ್ಯೋಗವನ್ನು ಬದಲಾಯಿಸಲು ನಿಮ್ಮನ್ನು ಒತ್ತಾಯಿಸಬಹುದು. ಆದ್ದರಿಂದ ನಿಮ್ಮ ವೃತ್ತಿಪರ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೆಲಸ ಮಾಡುವಾಗ ಕಾಳಜಿ ವಹಿಸಿ ಎಂದು ನಿಮಗೆ ಸೂಚಿಸಲಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಒತ್ತಡಕ್ಕೆ ಒಳಗಾಗಬಹುದು. ಕೆಲವು ಚಿಂತೆಗಳು ನಿಮ್ಮನ್ನು ಏಕಾಂಗಿಯಾಗಿಸಬಹುದು, ಈ ಸಮಯದಲ್ಲಿ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ನಿಮಗೆ ಸಲಹೆ ನೀಡಲಾಗಿದೆ. ಇದರಿಂದ ನೀವು ಜೀವನದ ವಾಸ್ತವತೆಯನ್ನು ಎದುರಿಸಲು ಸಾಧ್ಯವಾಗುತ್ತದೆ.
ಪರಿಹಾರ - ಭಗವಂತ ಶಿವನಿಗೆ ರುದ್ರಾಭಿಷೇಕವನ್ನು ಮಾಡಿ.
मीन / ಮೀನ ರಾಶಿ
ಮೀನ ರಾಶಿಚಕ್ರದ ಸ್ಥಳೀಯರಿಗೆ ಗುರು ಗ್ರಹವು ಹತ್ತನೇ ಮತ್ತು ಮೊದಲನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಲಾಭ, ಆದಾಯ ಮತ್ತು ಆಸೆಗಳ ನಿಮ್ಮ ಹನ್ನೊಂದನೇ ಮನೆಗೆ ಸಾಗುತ್ತದೆ. ಈ ಸಂಚಾರದ ಆರಂಭದಲ್ಲಿ ನೀವು ಉತ್ತಮ ಮತ್ತು ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಈ ಹಿಂದೆ ಮಾಡಿದ ನಿಮ್ಮ ಕಠಿಣ ಪರಿಶ್ರಮದ ಲಾಭವನ್ನು ಈ ಸಮಯದಲ್ಲಿ ಪಡೆಯುವ ಸಾಧ್ಯತೆ ಇದೆ. ನೀವು ಪ್ರಾಮಾಣಿಕತೆಯೊಂದಿಗೆ ನಿಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೆ, ಬಹುಮಾನದ ರೂಪದಲ್ಲಿ ನೀವು ಮೆಚ್ಚುಗೆಯನ್ನು ಪಡೆಯುತ್ತೀರಿ. ವೃತ್ತಿಪರವಾಗಿ ಇದು ಅತ್ಯುತ್ತಮ ಸಮಯ. ಏಕೆಂದರೆ ನಿಮ್ಮ ಕೆಲಸದಲ್ಲಿ ನೀವು ಸಂಪೂರ್ಣ ಸಮಾಧಾನವನ್ನು ಅನುಭವಿಸುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ಆದಾಯದ ವಿವಿಧ ಮೂಲಗಳನ್ನು ಸೃಷ್ಟಿಸುವಲ್ಲಿ ಸಹ ಯಶಸ್ವಿಯಾಗುತ್ತೀರಿ. ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಆರ್ಥಿಕವಾಗಿ ಇದು ನಿಮಗೆ ಉತ್ತಮ ಸಮಯ ಮತ್ತು ಈ ಸಮಯದಲ್ಲಿ ನೀವು ಮಾಡುವ ಹೂಡಿಕೆಯು ಭವಿಷ್ಯದಲ್ಲಿ ನಿಮಗೆ ಲಾಭವನ್ನು ನೀಡುತ್ತದೆ.
ಸಂಬಂಧಗಳ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಸಾಮಾಜಿಕ ವಲಯದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ ಮತ್ತು ಅವರು ನಿಮಗೆ ಬೆಂಬಲ ನೀಡಲು ಸಿದ್ಧರಿಗಿರುತ್ತಾರೆ. ಇದಕ್ಕಾಗಿ ಈ ಸಮಯ ನಿಮ್ಮನ್ನು ಆಶಾವಾದಿಯನ್ನಾಗಿಸುತ್ತದೆ. ನಿಮ್ಮ ಸಹೋದರ-ಸಹೋದರಿಯರು ಮತ್ತು ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಸಂಚಾರದ ಸಮಯದಲ್ಲಿ ಮದುವೆಯಂತಹ ಶುಭ ಕಾರ್ಯಗಳು ಸಹ ನಡೆಯಬಹುದು. ಏಕೆಂದರೆ ಪ್ರೇಮಿಯೊಂದಿಗೆ ಮದುವೆಯಾಗಲು ಇದು ಉತ್ತಮ ಸಮಯ. ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ನಿಮಗೆ ಸೂಚಿಸಲಾಗಿದೆ ಏಕೆಂದರೆ ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಆರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಸಾಮಾನ್ಯವಾಗಿ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ. ಆದರೂ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಮಾಡಲು ನಿಮಗೆ ಸಲಹೆ ನೀಡಲಾಗಿದೆ. ಹೊಸ ಅತಿಥಿಗಾಗಿ ಕಾಯುತ್ತಿರುವವರು ಸಹ ಈ ಸಮಯದಲ್ಲಿ ಸಂತೋಷದ ಸುದ್ದಿಯನ್ನು ಪಡೆಯಬಹುದು.
ಪರಿಹಾರ - ನಿಯಮಿತವಾಗಿ ಗುರು ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮ.
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ವಾರ್ತಾದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಧನ್ಯವಾದಗಳು.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025