ಮೀನಾ ರಾಶಿಯಲ್ಲಿ ಬುಧ ಸಂಚಾರ (1st April 2021)

ಒಂಬತ್ತು ಗ್ರಹಗಳಲ್ಲಿ ರಾಜಕುಮಾರ ಗ್ರಹದ ಸ್ಥಾನವನ್ನು ಪಡೆದಿರುವ ಬುಧ ಗ್ರಹವು ಸೌಮ್ಯ ಮತ್ತು ಶುಭ ಗ್ರಹವಾಗಿದೆ. ಇದು ಇತರ ಎಲ್ಲಾ ಗ್ರಹಗಳಿಗಿಂತ ಚಿಕ್ಕದಾಗಿರುವ ಜೊತೆಯಲ್ಲಿ ಸೂರ್ಯನಿಗೆ ತುಂಬಾ ಹತ್ತಿರವಾಗಿದೆ. ಬುಧ ಗ್ರಹವನ್ನು ವ್ಯಕ್ತಿಯ ಬುದ್ಧಿ, ಸಂಬಂಧಗಳಲ್ಲಿ ಸಹೋದರಿ, ದೇಹದ ಚರ್ಮ, ಧ್ವನಿ, ಜನರೊಂದಿಗೆ ಸಂಪರ್ಕಿಸುವ ಸಾಮರ್ಥ್ಯ ಅಂದರೆ ಸಂವಹನ, ತಾರ್ಕಿಕ ಸಾಮರ್ಥ್ಯ, ಪ್ರಯಾಣ, ಲೇಖನ, ಗಣಿತ , ಜ್ಯೋತಿಷ್ಯ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ.

ಯಾವುದೇ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಪರಿಹಾರಕ್ಕಾಗಿ ಪ್ರಶ್ನೆ ಕೇಳಿ

ಸಂಚಾರದ ಸಮಯ

ಈ ಬುಧ ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಿ ಗುರುವಾರ 1 ಏಪ್ರಿಲ್ 2021 ರಂದು ಬೆಳಿಗ್ಗೆ 12 ಗಂಟೆ 52 ನಿಮಿಷಕ್ಕೆ ತನ್ನ ಸ್ನೇಹ ಗ್ರಹ ಶನಿಯ ರಾಶಿಯಾದ ಕುಂಭದಿಂದ ಹೊರಬಂದು ಗುರುವಿನ ಅಧಿಪತ್ಯದ ನೀರಿನ ಅಂಶದ ಮೀನ ರಾಶಿಯಲ್ಲಿ ಪ್ರವೇಶಿಸುತ್ತದೆ. ಈ ರಾಶಿಚಕ್ರವು ಬುಧ ದೇವರ ದುರುದ್ವೇಷಪೂರಿತ ರಾಶಿಚಕ್ರವಾಗಿದೆ ಮತ್ತು ಕಾಲಪುರುಷ ಜಾತಕದಲ್ಲಿ ಮೀನ ರಾಶಿಯನ್ನು ಹನ್ನೆರಡನೇ ಅಂದರೆ ವೆಚ್ಚದ ಮನೆಯೆಂದು ಪರಿಗಣಿಸಲಾಗಿದೆ. ತನ್ನ ಈ ಸಂಚಾರದ ಸಮಯದಲ್ಲಿ ಬುಧ ಗ್ರಹವು ಮುಂದಿನ 15 ದಿನಗಳ ವರೆಗೆ ಇಲ್ಲೀ ಇರುತ್ತದೆ. ಅದರ ನಂತರ ಪುನಃ 16 ಏಪ್ರಿಲ್ 2021 ರಂದು ರಾತ್ರಿ 9 ಗಂಟೆ 05 ನಿಮಿಷಕ್ಕೆ ಮೀನ ರಾಶಿಯಿಂದ ಹೊರಬಂದು ಮೇಷ ರಾಶಿಯಲ್ಲಿ ಪ್ರವೇಶಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬುಧನ ಈ ಸಂಚಾರವು ಅನೇಕ ವಿಧಗಳಲ್ಲಿ ಬಹಳ ಮುಖ್ಯವಾಗಲಿದೆ.

ವೃತ್ತಿ ಜೀವನದ ಸರಿಯಾದ ಆಯ್ಕೆಗಾಗಿ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್

ಮೀನ ರಾಶಿಯಲ್ಲಿ ಬುಧ ಸಂಚಾರದ ರಾಶಿ ಭವಿಷ್ಯ

ಬುಧ ಸಂಚಾರವು ನಿಮ್ಮ ರಾಶಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಮತ್ತು ಈ ಸಂಚಾರದ ಸಮಯದಲ್ಲಿ ನೀವು ಯಾವ ರೀತಿಯ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ತಿಳಿಯಿರಿ:-

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

  1. ಮೇಷ ರಾಶಿ

ಬುಧ ಗ್ರಹವು ಮೇಷ ರಾಶಿಚಕ್ರದ ಸ್ಥಳೀಯರ ಮೂರನೇ ಮತ್ತು ಆರನೇ ಮನೆಯ ಅಧಿಪತಿಯಾಗಿದ್ದಾರೆ, ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಹನ್ನೆರಡನೇ ಪ್ರವೇಶಿಸುತ್ತದೆ.

ಹನ್ನೆರಡನೇ ಮನೆಯಲ್ಲಿ ಬುಧ ಸಂಚಾರದ ಕಾರಣದಿಂದಾಗಿ, ನೀವು ಸ್ವಲ್ಪ ಪ್ರತಿಕೂಲ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಪ್ರಗತಿಯಲ್ಲಿ ಅಡಚಣೆ ಉಂಟಾಗಬಹುದು. ಉದ್ಯೋಗಪರರು ಈ ಸಮಯದಲ್ಲಿ ತಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಅಧೀನ ಕೆಲಸ ಮಾಡುತ್ತಿರುವ ಜನರ ಮೂಲಕ ನೀಡಲಾಗಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ಈ ಸಮಯದಲ್ಲಿ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೆ ಯಾವುದೇ ರೀತಿಯ ನಿಷ್ಪ್ರಯೋಜಕ ಅಥವಾ ವ್ಯರ್ಥವಾದ ಮಾತುಗಳು ಅಥವಾ ಗಾಸಿಪ್ ಗಳಿಂದಲೂ ನಿಮ್ಮನ್ನು ದೂರವಿರಿಸಬೇಕು. ಇಲ್ಲದಿದ್ದರೆ ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಿ ನಿಮ್ಮ ಚಿತ್ರವನ್ನು ಹದಗೆಡಿಸಬಹುದು. ಇದರೊಂದಿಗೆ ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವು ಕೂಡ ನಿಮ್ಮ ಒತ್ತಡ ಮತ್ತು ಆಯಾಸವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರತಿಯೊಂದು ರೀತಿಯ ಪ್ರವಾಸವನ್ನು ಮುಂದೂಡುವುದು ನಿಮಗೆ ಉತ್ತಮ.

ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ನಿದ್ರಾಹೀನತೆ, ಒತ್ತಡ, ಚರ್ಮ ಅಥವಾ ಹಾರ್ಮೋನ್ ಗೆ ಸಂಬಂಧಿಸಿದ ರೋಗಗಳಿಂದ ನೀವು ಬಳಲುತ್ತಬಹುದು ಎಂದು ನಿರೀಕ್ಷಿಸಲಾಗಿದೆ. ವೈಯಕ್ತಿಕ ಜೀವನದಲ್ಲಿ ಜೀವನ ಸಂಗಾತಿಯ ಕಳಪೆ ಆರೋಗ್ಯದ ಕಾರಣದಿಂದಾಗಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಬಹುದು. ಕುಟುಂಬ ಜೀವನಕ್ಕೆ ಈ ಸಮಯ ಉತ್ತಮವಾಗಿರುತ್ತದೆ, ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಹೋದರ-ಸಹೋದರಿಯರು ಲಬಹವನ್ನು ಪಡೆಯುತ್ತಾರೆ.ಇದಲ್ಲದೆ ಅವರು ವಿದೇಶದಿಂದ ಉದ್ಯೋಗ ಅಥವಾ ಲಾಭವನ್ನು ಪಡೆಯುವ ಅನೇಕ ಅವಕಾಶಗಳಿವೆ. ವಿದ್ಯಾರ್ಥಿಗಳಿಗೂ ಸಮಯ ಉತ್ತಮವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.

ಆರ್ಥಿಕ ಜೀವನದಲ್ಲಿ ನಿಮ್ಮ ವೆಚ್ಚಗಳು ಹೆಚ್ಚುಗುವುದರಿಂದಾಗಿ ನಿಮ್ಮ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ವೆಚ್ಚಗಳು ಮತ್ತು ಆದಾಯದ ನಡುವೆ ಸರಿಯಾದ ಸಾಮರಸ್ಯವನ್ನು ಕಾಪಾಡಿಕೊಂಡು, ಉತ್ತಮ ತಂತ್ರದ ಪ್ರಕಾರ ಹಣಕಾಸು ಖರ್ಚು ಮಾಡಿ.

ಪರಿಹಾರ - ಮನೆ ಅಥವಾ ಕಚೇರಿಯಲ್ಲಿ ನಿಯಮಿತವಾಗಿ ಕರ್ಪುರವನ್ನು ಬೆಳಗಿಸುವುದು ನಿಮಗೆ ಉತ್ತಮವಾಗಿರುತ್ತದೆ.

  1. ವೃಷಭ ರಾಶಿ

ಬುಧ ಗ್ರಹವು ವೃಷಭ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಐದನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ಬುಧ ದೇವ ಹನ್ನೊಂದನೇ ಮನೆಗೆ ಗೋಚರಿಸುತ್ತಾರೆ. ಇದನ್ನು ಲಾಭದ ಮನೆಯೆಂದು ಕರೆಯಲಾಗುತ್ತದೆ.ಈ ಮನೆಯ ಮೂಲಕ ಆದಾಯ, ಜೀವನದಲ್ಲಿ ಪಡೆಯಲಾಗುವ ಸಾಧನೆಗಳು, ಹಿರಿಯ ಸಹೋದರ-ಸಹೋದರಿಯರೊಂದಿಗಿನ ಸಂಬಂಧ ಮತ್ತು ಲಾಭದ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಸಂಚಾರವು ನಿಮ್ಮ ಹನ್ನೊಂದನೇ ಮನೆಯಲ್ಲಿ ಸಂಭವಿಸುವ ಕಾರಣದಿಂದಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಕುಟುಂಬ ಜೀವನದಲ್ಲಿ ನೀವು ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಏಕೆಂದರೆ ಈ ಸಮಯದಲ್ಲಿ ಕುಟುಂಬವು ನಿಮ್ಮೊಂದಿಗೆ ಕಂಬದಂತೆ ನಿಂತಿರುವುದನ್ನು ಕಾಣಲಾಗುತ್ತದೆ. ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಬರುತ್ತಿದ್ದ ಎಲ್ಲಾ ಅಡೆತಡೆಗಳನ್ನು ಬಹಳ ಸುಲಭವಾಗಿ ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಯಾವುದೇ ಪಾರ್ಟಿಯನ್ನು ಆಯೋಜಿಸುವ ಮೂಲಕ, ನಿಮ್ಮನ್ನು ಬೆಂಬಲಿಸಿದ ಎಲ್ಲಾ ಜನರನ್ನು ಆಹ್ವಾನಿಸಬಹುದು. ಇದರಿಂದಾಗಿ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಲು ಸಹ ಸಾಧ್ಯವಾಗುತ್ತದೆ.

ಈ ರಾಶಿಚಕ್ರದ ಪ್ರೇಮಿಗಳ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಸಂಬಂಧದಲ್ಲಿನ ಎಲ್ಲಾ ತಪ್ಪುಗ್ರಹಿಕೆಗಳನ್ನು ತೊಡೆದುಹಾಕಲು ನೀವು ಪ್ರಯತ್ನಿಸುತ್ತೀರಿ. ಏಕೆಂದರೆ ಈ ಸಮಯದಲ್ಲಿ ನೀವು ಪರಸ್ಪರ ಸ್ಪಷ್ಟವಾಗಿ ಮಾತನಾಡಲು ಉತ್ತಮ ಅವಕಾಶವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಉದ್ಯೋಗಪರರು ಒಂದು ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡಲು ಅರ್ಹರಾಗುತ್ತಾರೆ. ಇದರಿಂದಾಗಿ ಬುಧದ ಈ ಸಾಗಣೆಯು ನಿಮ್ಮ ಮೇಲಧಿಕಾರಿಗಳ ನಡುವೆ ಜನಪ್ರಿಯತೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ ವಿವಿಧ ಮೂಲಗಳಿಂದಲೂ ನೀವು ಆದಾಯದವನ್ನು ಹೆಚ್ಚಿಸಲು ಅವಕಾಶಗಳನ್ನು ಪಡೆಯುತ್ತೀರಿ.

ವ್ಯಾಪಾರಸ್ಥರಿಗೆ ಈ ಸಮಯ ಉತ್ತಮವಾಗಿರುತ್ತದೆ. ಏಕೆಂದರೆ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅನೇಕ ಶುಭ ಅವಕಾಶಗಳನ್ನು ಪಡೆಯುತ್ತಾರೆ. ಇದಲ್ಲದೆ ನಿಮ್ಮ ಮೂಲಕ ಮಾಡಲಾಗಿರುವ ಯಾವುದೇ ಹೂಡಿಕೆಯಿಂದ ಉತ್ತಮ ಲಾಭ ಮತ್ತು ಹಣಕಾಸು ಗಳಿಸಲು ಸಹ ಈ ಸಮಯವು ಸಹಾಯ ಮಾಡುತ್ತದೆ. ಇದರೊಂದಿಗೆ ನೀವು ಹೊಸ ಪ್ರವೃತ್ತಿಗಳು ಮತ್ತು ಹೊಸ ತಂತ್ರಜ್ಞಾನಗಳೊಂದಿಗೆ ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಇಂಟರ್ನೆಟ್ ಅನ್ನು ಸಹ ಬಳಸಬಹುದು.

ವಿದ್ಯಾರ್ಥಿಗಳಿಗೆ ಸಮಯ ಶುಭವಾಗಿರುತ್ತದೆ, ಏಕೆಂದರೆ ಈ ಸಮಯದಲ್ಲಿ ಅವರು ತಮ್ಮ ಜ್ಞಾನ ಮತ್ತು ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸಿ, ಕೆಲವು ಹೊಸ ವಿಷಯಗಳನ್ನು ಕಲಿಯಲು ಉತ್ಸುಕರಾಗಿರುವುದನ್ನು ಕಾಣಲಾಗುತ್ತದೆ. ಆರೋಗ್ಯ ಜೀವನದಲ್ಲೂ ಈ ಸಂಚಾರದ ಸಮಯದಲ್ಲಿ ಸಕಾರಾತ್ಮಕತೆಯೊಂದಿಗೆ ಸರಿಯಾದ ದಿಕ್ಕಿನಲ್ಲಿ ಮುಂದುವರಿಯುವುದನ್ನು ಕಾಣಲಾಗುತ್ತದೆ. ಒಟ್ಟಾರೆಯಾಗಿ ಹೇಳಿದರೆ ವೃಷಭ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವು ಶುಭತೆಯನ್ನು ತರುತ್ತದೆ.

ಪರಿಹಾರ - ಶುಭ ಫಲಿತಾಂಶಗಳನು ಪಡೆಯಲು ಬುಧವಾರ ಭಗವಂತ ಗಣೇಶ ದೇವರಿಗೆ ಹಸಿರು ದುರ್ವಾವನ್ನು ಅರ್ಪಿಸಿ.


ಆಸ್ಟ್ರೋಸೇಜ್ ವಾರ್ತಾ ಮೂಲಕ ಪ್ರಪಂಚದಾದ್ಯಂತದ ವಿದ್ವಾಂಸ ಜ್ಯೋತಿಷಿಗಳೊಂದಿಗೆ ಉಚಿತವಾಗಿ ಕರೆಯಲ್ಲಿ ಮಾತನಾಡಿ
  1. ಮಿಥುನ ರಾಶಿ

ಬುಧ ಸಂಚಾರದ ಸಮಯದಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಅನೇಕ ಬದಲಾವಣೆಗಳು ಉಂಟಾಗಲಿವೆ. ಈ ಸಂಚಾರವು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಸಂಭವಿಸಲಿದೆ. ಕೆಲಸದ ಸ್ಥಳ, ತಂದೆ ಅಮ್ತ್ತು ಸಮಾಜದಲ್ಲಿನ ನಿಮ್ಮ ಪ್ರತಿಷ್ಠೆಯನ್ನು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹತ್ತನೇ ಮನೆಯಲ್ಲಿ ಬುಧ ಸಂಚಾರದ ಪರಿಣಾಮವಾಗಿ ಜೀವನದಲ್ಲಿ ಅನೇಕ ಮಿಶ್ರ ಫಲಿತಾಂಶಗಳನ್ನು ನೀವು ಪಡೆಯಲಿದ್ದೀರಿ.

ಇದಲ್ಲದೆ ಈ ಸಮಯದಲ್ಲಿ ಬುಧವು ನಿಮ್ಮ ರಾಶಿಯಲ್ಲಿ ದುರ್ಬಲ ಸ್ಥಿತಿಯಲ್ಲಿರುತ್ತದೆ. ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ತಪ್ಪು ಮಾಡಬಹುದೆಂಬ ಭಯದಿಂದ ಆತ್ಮವಿಶ್ವಾಸದ ಕೊರತೆಯಿಂದಾಗಿ ಕಾರ್ಯಗಳನ್ನು ಪೂರ್ಣಗೊಳಿಸಲು ವಿಫಲರಾಗುತ್ತೀರಿ. ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ನೀವು ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ಅವರ ಯಾವುದೇ ದೀರ್ಘಕಾಲದ ರೋಗವು ಸಂಚಾರದ ಈ ಸಮಯದಲ್ಲಿ ಪುನಃ ಅವರನ್ನು ತೊಂದರೆಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮನೆ-ಕುಟುಂಬದಲ್ಲಿ ದುರುಸ್ತಿ ಅಥವಾ ಯಾವುದೇ ಇತರ ನಿರ್ಮಾಣ ಕಾರ್ಯಗಳನ್ನು ತಪ್ಪಿಸಿ, ಇಲ್ಲದಿದ್ದರೆ ನಿಮ್ಮ ಸಮಯ ಮತ್ತು ಹಣಕಾಸು ಎರಡೂ ವ್ಯರ್ಥವಾಗುವುದು ಖಚಿತ.

ಕುಟುಂಬ ಜೀವನದಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಉತ್ತಮವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ಎಲ್ಲಾದರೂ ಹೊರಗೆ ಹೋಗಲು ಸಹ ಯೋಜಿಸಬಹುದು. ಇದರಿಂದಾಗಿ ಅವರೊಂದಿಗಿನ ಎಲ್ಲಾ ವಿವಾದವನ್ನು ನಿವಾರಿಸಿ ನಿಮ್ಮ ಸಂಬಂಧವನ್ನು ಬಲಪಡಿಸಲು ಸಾಧ್ಯವಾಗುತ್ತದೆ.

ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ವಿಷಯವನ್ನು ಅರ್ಥಮಾಡಿಕೊಳ್ಳಲು ಕೆಲವು ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಪ್ರಯತ್ನಗಳನ್ನು ವೇಗಗೊಳಿಸಿ, ಉತ್ತಮ ಫಲಿತಾಂಶಗಳನ್ನು ಪಡೆಯಲು ಆರಂಭದಿಂದಲೇ ನಿಮ್ಮ ಪರಿಶ್ರಮವನ್ನು ಮುಂದುವರಿಸಿ.

ಪರಿಹಾರ - ಬುಧವಾರ ತಾಯಿ ಸರಸ್ವತಿಯನ್ನು ಪೂಜಿಸಿ.

  1. ಕರ್ಕ ರಾಶಿ

ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಸಂವಹನ ಮತ್ತು ಲೇಖನದ ಅಂಶವೆಂದು ಪರಿಗಣಿಸಲಾಗಿದೆ. ಸಂಚಾರದ ಈ ಸಮಯದಲ್ಲಿ ಬುಧ ಗ್ರಹವು ಕರ್ಕ ರಾಶಿಚಕ್ರದ ಒಂಬತ್ತನೇ ಮನೆಗೆ ಸಾಗುತ್ತದೆ. ನಿಮ್ಮ ಮನೆಯಿಂದ ಒಂಬತ್ತನೇ ಮನೆಯಲ್ಲಿ ಬುಧನ ಈ ಉಪಸ್ಥಿತಿಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ.

ಬುಧ ದೇವ ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಉದ್ಭವಿಸಬಹುದು. ಆದ್ದರಿಂದ ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಮೂಲಕ ಅವರ ಪ್ರತಿಯೊಂದು ದೂರು ಕೇಳಿ ಮತ್ತು ಅದನ್ನು ಪರಿಹರಿಸಿ, ನಿಮ್ಮ ಎಲ್ಲಾ ವಿವಾದಗಳನ್ನು ನಿವಾರಿಸಿ . ಇದು ಅವರೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಯಾವುದೇ ಪ್ರವಾಸವನ್ನು ತಪ್ಪಿಸಿ. ವಿಶೇಷವಾಗಿ ಧಾರ್ಮಿಕ ಸ್ಥಳಗಳಿಗೆ ಹೋಗುವುದು ಈ ಸಮಯದಲ್ಲಿ ನಿಮಗೆ ಸೂಕ್ತವಲ್ಲ. ಏಕೆಂದರೆ ಇದರಿಂದಾಗಿ ನೀವು ಶಾಂತಿ ಮತ್ತು ಸಂತೋಷವನ್ನು ಪಡೆಯುವ ಬದಲು ನಿಮ್ಮ ಒತ್ತಡ ಮತ್ತು ಚಿಂತೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಈ ಸಮಯದಲ್ಲಿ ನಿಮ್ಮ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಅಥವಾ ಸಾಧನಗಳ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಅವು ಕೆಟ್ಟುಹೋದರೆ ಅವುಗಳ ಮೇಲೆ ನಿಮ್ಮ ಬಹಳಷ್ಟು ಹಣವನ್ನು ಖರ್ಚುಮಾಡಬೇಕಾಗುತ್ತದೆ.

ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ಕೆಲವು ಉದ್ಯೋಗಗಪರರ ವರ್ಗಾವಣೆಯ ಸಾಧ್ಯತೆಯಿದೆ. ಇದರಿಂದಾಗಿ ಅವರು ಅಸಮಾಧಾನರಾಗುತ್ತಾರೆ. ಸಂಚಾರದ ಈ ಸಮಯದಲ್ಲಿ ನಿಮ್ಮ ಪ್ರಯತ್ನಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುವಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ಈ ಸಮಯದಲ್ಲಿ ಬಾಸ್ ಮತ್ತು ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಅತೃಪ್ತರಾಗಿ ನಿಮ್ಮ ಯಾವುದೇ ಕೆಲಸವನ್ನು ಮತ್ತೊಮ್ಮೆ ಮಾಡಲು ಹೇಳಬಹುದು. ಈ ಕಾರಣದಿಂದಾಗಿ ನಿಮ್ಮ ವಿವಾದದ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ಶಾಂತವಾಗಿರಿಸುವುದು ಉತ್ತಮ. ಇದರೊಂದಿಗೆ ನಿಮ್ಮ ಗುರಿಗಳತ್ತ ಕೇಂದ್ರೀಕರಿಸಬೇಕು.

ಪರಿಹಾರ - ಬುಧವಾರ ಹಸುವಿಗೆ ಹಸಿರು ಮೇವು ತಿನ್ನಿಸಿ.

  1. ಸಿಂಹ ರಾಶಿ

ಸಂಚಾರದ ಸಮಯದಲ್ಲಿ ಬುಧ ದೇವ ಸಿಂಹ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಗೆ ಪ್ರವೇಶಿಸುತ್ತಾರೆ. ಬುಧ ಗ್ರಹವು ಇಲ್ಲಿ ದುರುದ್ವೇಷಪೂರಿತ ರಾಶಿಯಲ್ಲಿರುವುದು ನಿಮಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ, ಆದರೂ ಈ ಸಂಚಾರದ ಪರಿಣಾಮವಾಗಿ ನೀವು ಅನುಕೂಲಕರ ಫಲಿತಾಂಶಗಳನ್ನು ಖಂಡಿತವಾಗಿಯೂ ಪಡೆಯುತ್ತೀರಿ. ಬುಧ ಗ್ರಹವು ನಿಮ್ಮ ರಾಶಿಚಕ್ರದ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ.

ವ್ಯಾಪರಸ್ಥರು ಈ ಸಮಯದಲ್ಲಿ ಯಾವುದೇ ದೊಡ್ಡ ಹೂಡಿಕೆಯನ್ನು ತಪ್ಪಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ ಈ ಬದಲಾವಣೆಯು ನಿಮಗೆ ಭಾರಿ ನಷ್ಟವನ್ನು ನೀಡಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಶೇರ್ ಮಾರ್ಕೆಟ್ ಗೆ ಸಂಬಂಧಿಸಿದ ಸ್ಥಳೀಯರು ಸಹ ಈ ಸಮಯದಲ್ಲಿ ಜಾಗರೂಕರಾಗಿರುವ ಅಗತ್ಯವಿದೆ. ಅಗತ್ಯವಿಲ್ಲದಿದ್ದರೆ, 16 ಏಪ್ರಿಲ್ ವರೆಗೆ ಶೇರ್ ಮಾರ್ಕೆಟ್ ಇಂದ ದೂರವಿರಲು ಸೂಚಿಸಲಾಗಿದೆ.

ವೈಯಕ್ತಿಕ ಜೀವನದಲ್ಲಿ ನೀವು ನಿಮ್ಮ ಧ್ವನಿಯನ್ನು ನಿಯಂತ್ರಣದಲ್ಲಿಟ್ಟು, ಏನನ್ನೂ ಮಾತನಾಡುವ ಮೊದಲು ನಿಮ್ಮ ಪದಗಳನ್ನು ಚಿಂತನಶೀಲವಾಗಿ ಆರಿಸಬೇಕಾಗುತ್ತದೆ. ಏಕೆಂದರೆ ನಿಮ್ಮ ಮೂಲಕ ಮಾಡಲಾಗುವ ಯಾವುದೇ ತಮಾಷೆ ನಿಮ್ಮ ವಿರುದ್ಧವಾಗುವ ಸಾಧ್ಯತೆ ಇದೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಸಂಘದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಇಲ್ಲದಿದ್ದರೆ ನಿಮ್ಮ ಚಿತ್ರ ಹಾನಿಗೊಳಗಾಗಬಹುದು. ಆರ್ಥಿಕ ಜೀವನದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಆದ್ದರಿಂದ ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಸಲಹೆ ನೀಡಲಾಗಿದೆ. ಇದಲ್ಲದೆ ಈ ಸಮಯದಲ್ಲಿ ವಿವಾಹಿತ ಜನರು ತಮ್ಮ ಜೀವನ ಸಂಗಾತಿಯ ಮತ್ತು ಅತ್ತೆಮನೆ ಕಡೆಯಿಂದ ಯಾವುದೇ ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆ ಇದೆ.

ಅರೋಗ್ಯ ಜೀವನದಲ್ಲಿ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಅಸ್ವಸ್ಥತೆ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಅಲರ್ಜಿ ನಿಮ್ಮನ್ನು ತೊಂದರೆಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಧೂಳಿನ ಅಥವಾ ಕುಲಷಿತ ಸ್ಥಳಗಳಿಗೆ ಹೋಗಬೇಡಿ ಎಂದು ಸೂಚಿಸಲಾಗಿದೆ

ಪರಿಹಾರ - ಅಗತ್ಯವಿರುವವರಿಗೆ ಶೈಕ್ಷಣಿಕ ಸಾಮಗ್ರಿಗಳ ಉಡುಗೊರೆ ನೀಡುವುದು ಈ ಸಂಚಾರದ ಸಮಯದಲ್ಲಿ ನಿಮಗೆ ಶುಭವಾಗಿರುತ್ತದೆ.

  1. ಕನ್ಯಾ ರಾಶಿ

ಬುಧ ಗ್ರಹವು ನಿಮ್ಮ ಹತ್ತನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಪ್ರವೇಶಿಸುತ್ತದೆ. ಇದನ್ನು ವೈವಾಹಿಕ ಜೀವನ, ಜೀವನ ಸಂಗಾತಿ ಮತ್ತು ಪಾಲುದಾರಿಕೆಯ ಮನೆಯೆಂದು ಹೇಳಲಾಗುತ್ತದೆ.

ಈ ಸಂಚಾರದ ಪರಿಣಾಮದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಪ್ರತಿಯೊಂದು ಕೆಲಸವನ್ನು ಸಂಘಟಿಸುವ ಮತ್ತು ರಚಿಸುವ ಸಾಮರ್ಥ್ಯವನ್ನು ಸುಧಾರಿಸಿ, ನಿಮ್ಮ ಕೆಲಸದ ಸ್ಥಳದಲ್ಲಿ ಲಾಭ ಮತ್ತು ಪ್ರಗತಿಯನ್ನು ಪಡೆಯುವಲ್ಲಿ ಸಾಮರ್ತ್ಯರಾಗುವಿರಿ. ಈ ಸಮಯದಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮದಿಂದ ಸಂಬಳದ ಹೆಚ್ಚಳ ಮತ್ತು ಬಡ್ತಿ ಪಡೆಯುವ ಸಾಧ್ಯತೆಯೂ ಇದೆ.

ವ್ಯಾಪಾರಸ್ಥರು ಸಂಚಾರದ ಈ ಸಮಯದಲ್ಲಿ ಮುಂದುವರಿದು ಹೆಚ್ಚು ಸಕ್ರಿಯತೆಯೊಂದಿಗೆ ಪ್ರತಿಯೊಂದು ಕೆಲಸದಲ್ಲಿ ಭಾಗವಹಿಸುವುದನ್ನು ಕಾಣಲಾಗುತ್ತದೆ. ಆದಾಗ್ಯೂ, ಈ ಸಂಚಾರವು ಈ ಮಧ್ಯೆ ನಿಮ್ಮ ಮನಸ್ಸಿನಲ್ಲಿ ತಪ್ಪು ಮಾಡುವ ಭಯವನ್ನು ಸಹ ಉಂಟುಮಾಡುತ್ತದೆ, ಇದರಿಂದಾಗಿ ನೀವು ತೊಂದರೆಕ್ಕೊಳಗಾಗಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತೀರಿ.

ಈ ಸಮಯದಲ್ಲಿ ಅರೆಕಾಲಿಕ ವ್ಯಾಪಾರವನ್ನು ಆರಂಭಿಸಲು ಯೋಚಿಸುತ್ತಿರುವ ಜನರಿಗೆ ಪ್ರತಿಕೂಲವಾಗಿರುತ್ತದೆ, ಅವರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಪ್ರೀತಿಯ ಸಂಬಂಧಕ್ಕೆ ಈ ಸಮಯ ಉತ್ತಮವಾಗಿರುತ್ತದೆ, ಏಕೆಂದರೆ ನಿಮ್ಮ ಮತ್ತು ಪ್ರೀತಿಪಾತ್ರರ ಸಂಬಂಧವನ್ನು ಬಲಪಡಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದಲ್ಲದೆ ವಾರ ಸಂಪೂರ್ಣ ಬೆಂಬಲ ಮತ್ತು ಪ್ರೀತಿಯನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ ಮತ್ತೊಂದೆಡೆ, ವೈವಾಹಿಕ ಸ್ಥಳೀಯರಿಗೆ ಈ ಸಮಯವು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ತರುತ್ತದೆ. ಇದಲ್ಲದೆ ಈ ಸಮಯದಲ್ಲಿ ತಂದೆಯೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ಸಹ ಸಾಧ್ಯವಾಗುತ್ತದೆ

ಆರೋಗ್ಯದ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಬಹಳ ಎಚ್ಚರಿಕೆಯಿಂದಿರಬೇಕು. ಏಕೆಂದರೆ ಈ ಸಮಯದಲ್ಲಿ ಹೊಟ್ಟೆ ಅಥವಾ ನರಮಂಡಲಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪರಿಹಾರ - ಬುಧ ದೇವರ ಶುಭ ಫಲಿತಾಂಶಗಳನ್ನು ಪಡೆಯಲು, ಉತ್ತಮ ಗುಣಮಟ್ಟದ ಪಚ್ಚೆ ರತ್ನವನ್ನು ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ ತಯಾರಿಸಿ, ನಿಮ್ಮ ಬಲಗೈಯ ಚಿಕ್ಕ ಬೆರಳಿನಲ್ಲಿ ಬುಧವಾರ ಧರಿಸುವುದು ಉತ್ತಮ.

  1. ತುಲಾ ರಾಶಿ

ಬುಧ ಗ್ರಹವು ನಿಮ್ಮ ಜಾತಕದಲ್ಲಿನ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ತುಲಾ ರಾಶಿಚಕ್ರದ ಆರನೇ ಮನೆಗೆ ಪ್ರವೇಶಿಸುತ್ತದೆ.

ಸಂಚಾರದ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯಲು ನೀವು ಹೆಚ್ಚು ಪ್ರಯತ್ನ ಮತ್ತು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಏಕೆಂದರೆ ಹೆಚ್ಚುವರಿ ಕಠಿಣ ಪರಿಶ್ರಮ ಮತ್ತು ಆಸಕ್ತಿಯ ಹೊರತಾಗಿಯೂ, ಈ ಸಮಯದಲ್ಲಿ ನಿಮ್ಮ ಕೆಲಸಗಳಲ್ಲಿ ನಿಮಗೆ ತೊಂದರೆಯಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಹಲವು ರೀತಿಯ ಅಡಚಣೆಗಳನ್ನು ನೀವು ಎದುರಿಸಬೇಕಾಗುತ್ತದೆ, ಇದು ಮಾನಸಿಕ ಒತ್ತಡ ಮತ್ತು ಚಿಂತೆಗಳನ್ನು ಹೆಚ್ಚಿಸುತ್ತದೆ. ಬುಧ ಸಂಚಾರವು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲೂ ಸ್ವಲ್ಪ ಪ್ರತಿಕೂಲವಾಗಲಿದೆ.

ಅಲ್ಲದೆ, ತುಲಾ ರಾಶಿಚಕ್ರದ ಸ್ಥಳೀಯರು ತಮ್ಮ ಎಲ್ಲ ರಹಸ್ಯ ವಿಷಯಗಳು ಮತ್ತು ನೀತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಲ್ಲಿ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ವಿರೋಧಿಗಳು ನಿಮ್ಮ ಯಾವುದೇ ದುರ್ಬಲತೆಯ ಲಾಭವನ್ನು ಪಡೆದು, ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವ ಸಾಧ್ಯತೆ ಇದೆ.

ಈ ಸಮಯದಲ್ಲಿ ನೀವು ಎಲ್ಲಾ ರೀತಿಯ ವಾದ- ವಿವಾದ ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕು. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ, ಆದ್ದರಿಂದ ನಿಮ್ಮನ್ನು ಶಾಂತವಾಗಿರಿಸಿ ನಿಮ್ಮ ಆದಾಯ ಮತ್ತು ಖರ್ಚುಗಳ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಮಗೆ ಉತ್ತಮ.

ಆದಾಗ್ಯೂ, ಈ ಸಮಯದಲ್ಲಿ ನೀವು ನಿಮ್ಮ ತಂದೆಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇದಲ್ಲದೆ ಈ ಸಮಯದಲ್ಲಿ ಯಾವುದೇ ರೀತಿಯ ಲೋನ್ ಅಥವಾ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ ಎಂದು ಸೂಚಿಸಲಾಗಿದೆ.

ಆರೋಗ್ಯದ ಬಗ್ಗೆ ಮಾತನಾಡಿದರೆ, ನಿಮ್ಮ ಕಳಪೆ ಆಹಾರ ಪದ್ಧತಿಯ ಕೆಟ್ಟ ಅಭ್ಯಾಸಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವಿಶ್ರಾಮ ಪಡೆಯುವುದು ಉತ್ತಮ. ಏಕೆಂದರೆ ನಿಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಕಾರಣದಿಂದಾಗಿ ಯಾವುದೇ ರೀತಿಯ ಸೋಂಕಿನ ಅಪಾಯಕ್ಕೆ ಒಳಗಾಗುತ್ತೀರಿ.

ಪರಿಹಾರ - ಯಾವುದೇ ರೀತಿಯ ಮುಖ್ಯವಾದ ಕೆಲಸಕ್ಕಾಗಿ ಹೊರಡುವ ಮೊದಲು ಏಲಕ್ಕಿ ಬೀಜಗಳನ್ನೂ ಅಗಿಯುವುದು ನಿಮಗೆ ಉತ್ತಮ.


ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ? ತಿಳಿಯಲು ಈಗಲೇ ಖರೀದಿಸಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ
  1. ವೃಶ್ಚಿಕ ರಾಶಿ

ವೃಶ್ಚಿಕ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಯಾವುದೇ ರೀತಿಯ ಬೆಟ್ಟಿಂಗ್ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಬೇಕು. ಏಕೆಂದರೆ ಸಂಚಾರದ ಈ ಸಮಯದಲ್ಲಿ ಬುಧ ದೇವ ನಿಮ್ಮ ಐದನೇ ಮನೆಗೆ ಪ್ರವೇಶಿಸುತ್ತಾರೆ, ಅಲ್ಲಿ ಅವರು ತನ್ನ ದುರುದ್ವೇಷಪೂರಿತ ರಾಶಿಯಲ್ಲಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಶೇರ್ ಮಾರ್ಕೆಟ್, ವ್ಯಾಪಾರ ಇತ್ಯಾದಿಗಳಿಗೆ ಸಂಬಂಧಿಸಿದ ಜನರಿಗೆ ಪ್ರತಿಕೂಲವಾಗಿರುತ್ತದೆ.

ಬುಧ ದೇವ ನಿಮ್ಮ ರಾಶಿಚಕ್ರದ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಆದ್ದರಿಂದ ಈ ಸಂಚಾರದ ಪರಿಣಾಮವಾಗಿ ಉನ್ನತ ಶಿಕ್ಷಣದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ವಿಶೇಷವಾಗಿ ಪಿ ಹೆಚ್ ಡಿ ಅಥವಾ ಯಾವುದೇ ಸಂಶೋಧನೆಯ ಕೆಲಸಕ್ಕೆ ಸಂಬಂಧಿಸಿರುವ ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ಇದಲ್ಲದೆ ತಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವ ಜನರಿಗೆ ಈ ಸಂಚಾರದ ಸಮಯವೂ ತುಂಬಾ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರಿಗೆ ಈ ಸಮಯವು ಲಾಭ ಮತ್ತು ಪ್ರಯೋಜನವನ್ನು ತರುತ್ತದೆ, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ಸಾಧ್ಯತೆ ಇದೆ.

ಪ್ರೀತಿಯ ಸಂಬಂಧಕ್ಕೆ ಈ ಸಮಯ ಸ್ವಲ್ಪ ಪ್ರತಿಕೂಲವಾಗಲಿದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೇಮಿ ಅಥವಾ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಸ್ವಲ್ಪ ಅನಾನುಕೂಲತೆಯನ್ನು ಅನುಭವಿಸಬಹುದು. ಕೆಲವೊಮ್ಮೆ ನಿಮ್ಮ ಸ್ವಭಾವದಲ್ಲಿ ಮಾಧುರ್ಯ, ಉತ್ಸಾಹ ಮತ್ತು ಉದಾರತೆಯನ್ನು ಕಾಣಲಾಗುತ್ತದೆ ಮತ್ತೊಂದೆಡೆ, ಕೆಲವೊಮ್ಮೆ ನೀವು ಅಹಂಕಾರ ಮತ್ತು ಇತರರ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತೀರಿ. ಇದರಿಂದಾಗಿ ನಿಮ್ಮ ಮತ್ತು ಪ್ರೀತಿಪರರ ನಡುವೆ ವಿವಾದದ ಸಾಧ್ಯತೆಯಿದೆ.

ಅಂತಹ ಪರಿಸ್ಥಿತಿಯಲ್ಲಿ, ಸಂಗಾತಿಯ ಬಗೆಗಿನ ನಿಮ್ಮ ಮತ್ತು ದೃಷ್ಟಿಕೋನವನ್ನು ಬದಲಾಯಿಸಿ ನಿಮ್ಮ ಸಂಬಂಧವನ್ನು ಸುಧಾರಿಸಬೇಕು. ಅಲ್ಲದೆ ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಅನೇಕ ಶುಭ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ.

ಪರಿಹಾರ - ತುಳಸಿ ಸಸ್ಯಕ್ಕೆ ನಿಯಮಿತವಾಗಿ ನೀರು ಅರ್ಪಿಸಿ ಪೂಜೆ ಮಾಡುವುದು ನಿಮಗೆ ಉತ್ತಮವಾಗಿರುತ್ತದೆ.

  1. ಧನು ರಾಶಿ

ಬುಧ ದೇವ ಧನು ರಾಶಿಚಕ್ರದ ಸ್ಥಳೀಯರ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರದ ಪರಿಣಾಮವಾಗಿ ನಿಮ್ಮ ಸಂಗಾತಿಯ ಜೀವನದಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ಇದರಿಂದಾಗಿ ನಿಮ್ಮ ಸಂತೋಷ ಸಂಪನ್ಮೂಲಗಳು ಮತ್ತು ಗೌರವ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಸಣ್ಣ ಪುಟ್ಟ ವಿಷಯಗಳ ಬಗ್ಗೆ ವಿವಾದವಾಗುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮಿಬ್ಬರ ನಡುವಿನ ತಪ್ಪು ತಿಳುವಳಿಕೆಗಳನ್ನು ತೊಡೆದುಹಾಕಲು ಪ್ರಯತ್ನಿಸಬೇಕು ಎಂದು ನಿಮಗೆ ಸೂಚಿಸಲಾಗಿದೆ. ಈ ಸಂಚಾರವು ನಿಮ್ಮ ತಾಯಿಗೂ ಉತ್ತಮವಾಗಿರುತ್ತದೆ.

ಕೆಲಸದ ಸ್ಥಳದಲ್ಲಿ ಧನು ರಾಶಿಚಕ್ರದ ಸ್ಥಳೀಯರು ತಮ್ಮ ಕೆಲಸದ ಬಗ್ಗೆ ಪ್ರಶಂಸೆ ಪಡೆಯುತ್ತಾರೆ. ಇದು ನಿಮ್ಮ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಈ ಸಮಯವು ವ್ಯಾಪಾರಸ್ಥರಿಗೂ ಉತ್ತಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ಅವರು ಹೂಡಿಕೆಯ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮಾಡಲಾಗುವ ಹೂಡಿಕೆಯು ದೀರ್ಘಕಾಲದ ವರೆಗೆ ನಿಮಗೆ ಲಾಭವನ್ನು ನೀಡುತ್ತಿರುತ್ತದೆ.

ಸಂಚಾರದ ಈ ಸಮಯದಲ್ಲಿ ಕೆಲವು ಸ್ಥಳೀಯರು ತಮ್ಮ ಹವ್ಯಾಸ ಮತ್ತು ಅಸ್ಕತಿಯತ್ತ ಹೆಚ್ಚು ಗಮನ ಹರಿಸುವುದನ್ನು ಕಾಣಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದಲೂ, ಕೆಲವು ದೈಹಿಕ ಚಟುವಟಿಕೆಗಳು ಮತ್ತು ಯೋಗ ಮಾಡುವುದು ನಿಮಗೆ ಉತ್ತಮ. ಏಕೆಂದರೆ ಈ ಸಮಯದಲ್ಲಿ ತೂಕ ಮತ್ತು ರಕ್ತಸ್ರಾವದ ತೊಂದರೆಗಳು ನಿಮ್ಮನ್ನು ಕಾಡಬಹುದು.

ಪರಿಹಾರ - ಭ್ರಹ್ಮಿ ಗಿಡಮೂಲಿಕೆಯನ್ನು ಔಷಧಿಯಂತೆ ಸೇವಿಸುವುದು ಬುಧದ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತದೆ.

  1. ಮಕರ ರಾಶಿ

ಬುಧ ಗ್ರಹವು ಮಕರ ರಾಶಿಚಕ್ರದ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಧ್ವನಿಯನ್ನು ನಿಯಂತ್ರಿಸಲು ಸೂಚಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಕೆಲಸದ ಸ್ಥಳದಲ್ಲಿ ಏನನ್ನೂ ಮಾತನಾಡುವ ಮೊದಲು, ನಿಮ್ಮ ಪದಗಳನ್ನು ಚಿಂತನಶೀಲವಾಗಿ ಆರಿಸಿ.

ಈ ಸಮಯದಲ್ಲಿ ಅಲ್ಪ ದೂರದ ಪ್ರವಾಸಗಳ ಮೂಲಕ ನಿಮಗೆ ಲಾಭವಾಗಬಹುದು. ಸಹೋದರ-ಸಹೋದರಿಯರತ್ತ ಹೆಚ್ಚು ಕಾಳಜಿ ವಹಿಸಬೇಕು. ಏಕೆಂದರೆ ಅವರು ತಮ್ಮ ಕೆಲಸದ ಸ್ಥಳ, ವೃತ್ತಿ ಜೀವನ ಅಥವಾ ಶಿಕ್ಷಣದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸುವ ಸಾಧ್ಯತೆ ಇದೆ.

ಈ ಸಮಯದಲ್ಲಿ ನಿಮಗೆ ನೀಡಲಾಗುವ ಪ್ರತಿಯೊಂದು ಸಲಹೆಯತ್ತ ಗಮನ ಹರಿಸಿ ಜೀವನದಲ್ಲಿ ಮುಂದುವರಿಯಬೇಕು. ವಿಶೇಷವಾಗಿ ಆ ಸಲಹೆಗಳನ್ನು ನೀವು ನಿಮ್ಮ ಗುರು, ಶಿಕ್ಷಕ ಅಥವಾ ಹಿರಿಯರಿಂದ ಪಡೆದಿದ್ದರೆ ಮಾತ್ರ ಈ ಸಂಚಾರದ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ಇಂಟರ್ನೆಟ್ ನಲ್ಲಿ ಏನನ್ನಾದರೂ ಪೋಸ್ಟ್ ಅಥವಾ ಬರೆಯುವ ಮೊದಲು ಜಾಗರೂಕರಾಗಿರಲು ಸೂಚಿಸಲಾಗಿದೆ. ಇಲ್ಲದಿದ್ದರೆ, ಈ ಕಾರಣದಿಂದಾಗಿ ಅನೇಕ ಗಂಭೀರ ಸಮಸ್ಯೆಗಳನ್ನು ನೀವು ಭರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಅಧೀನ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ವ್ಯಾಪಾರಸ್ಥರು ಈ ಸಮಯದಲ್ಲಿ ಯಾವುದೇ ಹೊಸ ವ್ಯವಹಾರವನ್ನು ಆರಂಭಿಸುವ ಬದಲು ತಮ್ಮ ಪ್ರಸ್ತುತ ವ್ಯಾಪಾರವನ್ನು ಹೆಚ್ಚು ಬಲಪಡಿಸಬೇಕು. ಏಕೆಂದರೆ ಅದಕ್ಕಾಗಿ ಈ ಸಮಯ ಉತ್ತಮವೆಂದು ಕಂಡುಬರುತ್ತಿದೆ. ಇಲ್ಲದಿದ್ದರೆ ಇತರ ವ್ಯಾಪಾರದ ಮೂಲಕ ನೀವು ಕೆಲವು ಅಡತಡೆಗಳನ್ನು ಎದುರಿಸಬೇಕಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ ನೀವು ಯಾವುದೇ ಹೊಸ ಗ್ಯಾಜೆಟ್ ಖರೀದಿಸಲು ಯೋಚಿಸುತ್ತಿದ್ದರೆ, 16 ಏಪ್ರಿಲ್ ವರೆಗೆ ಅದನ್ನು ಮುಂದೂಡುವುದು ಉತ್ತಮ.

ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಗಂಟಲು, ಭುಜ ಮತ್ತು ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಆದ್ದರಿಂದ ಅಗತ್ಯವಿದ್ದಾಗ ಉತ್ತಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.

ಪರಿಹಾರ - ಬುಧ ಹೋರಾ ಸಮಯದಲ್ಲಿ ಪ್ರತಿದಿನ ಬುಧ ದೇವರ ಬೀಜ ಮಂತ್ರವನ್ನು ಜಪಿಸಿ.

  1. ಕುಂಭ ರಾಶಿ

ಬುಧ ದೇವ ಕುಂಭ ರಾಶಿಚಕ್ರದ ಸ್ಥಳೀಯರ ಎಂಟನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಗೋಚರಿಸುತ್ತಾರೆ. ಈ ಸಂಚಾರದ ಪರಿಣಾಮದಿಂದಾಗಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ಈ ಸಮಯದಲ್ಲಿ ಹಣಕಾಸು ಸಂಗ್ರಹಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದಲ್ಲದೆ ನಿಮ್ಮ ಆದಾಯವು ನೀವು ನಿರೀಕ್ಷಿಸುವುದಕ್ಕಿಂತ ಹೆಚ್ಚಾಗುತ್ತದೆ. ನಿಮ್ಮಲ್ಲಿ ಕೆಲವರು ಶೇರ್ ಮಾರ್ಕೆಟ್ ಮೂಲಕ ಲಾಭ ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ಕೆಲವರು ಪೂರ್ವಜರ ಸಂಪತ್ತಿನ ಮೂಲಕ ಪ್ರಯೋಜನವನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ ಬುಧ ಸಂಚಾರವು ನಿಮ್ಮ ಆರ್ಥಿಕ ಜೀವನದಲ್ಲಿ ಇದ್ದಕ್ಕಿದ್ದಂತೆ ಉತ್ತಮ ಬದಲಾವಣೆಯನ್ನು ತರುತ್ತದೆ.

ಕಲೆ, ಗಾಯಕ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದವರು ಈ ಸಮಯದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಏಕೆಂದರೆ ಈ ಸಮಯದಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ನೀಡಿ ತಮ್ಮ ಜೀವನದಲ್ಲಿ ಉತ್ತಮ ಪ್ರಶಂಸೆಯನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ವ್ಯಾಪಾರಸ್ಥರು ಮತ್ತು ಉದ್ಯೋಗಪರರ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ಸಲಹೆಯನ್ನು ನೀಡುವಾಗ ನಿಮ್ಮನ್ನು ನಿಯಂತ್ರಣದಲ್ಲಿಡಿ ಎಂದು ನಿಮಗೆ ಸೂಚಿಸಲಾಗದೆ, ಇಲ್ಲದಿದ್ದರೆ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪ್ರೀತಿಯ ಸಂಬಂಧದಲ್ಲಿ ಕೆಲವು ಸಮಸ್ಯೆಗಳು ಉಂಟಾಗಲಿವೆ. ವಿಶೇಷವಾಗಿ ನಿಮ್ಮ ಪ್ರೀತಿಪಾತ್ರರಿಗೆ ಅರೋಗ್ಯ ನಷ್ಟ ಸಾಧ್ಯ. ಆದಾಗ್ಯೂ, ದಾಂಪತ್ಯ ಸ್ಥಳೀಯರ ಮಕ್ಕಳು ಪ್ರಗತಿ ಪಡೆಯುವುದರಿಂದಾಗಿ ಹೆಮ್ಮೆ ಮತ್ತು ಸಂತೋಷವನ್ನು ಅನುಭವಿಸುತ್ತಾರೆ. ನೀವು ವಿವಾಹಿತರಾಗಿದ್ದರೆ, ಈ ಸಮಯದಲ್ಲಿ ಯಾವುದೇ ಒಳ್ಳೆಯ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ. ಪ್ರೀತಿಯ ಸಂಬಂಧದಲ್ಲಿರುವ ಜನರು ಈ ಸಂಚಾರದಿಂದಾಗಿ ತಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಅನೇಕ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ.

ವಿದ್ಯಾರ್ಥಿಗಳಿಗೆ ಸಮಯ ಶುಭವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಬುದ್ಧಿವಂತಿಕೆ ಮತ್ತು ವಿಷಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯು ಬೆಳೆಯುತ್ತದೆ. ಇದರಿಂದಾಗಿ ಉತ್ತಮ ಪ್ರದರ್ಶನ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ಆರೋಗ್ಯದತ್ತ ಕಾಳಜಿ ವಹಿಸಿ, ನಿಮ್ಮ ಕಳಪೆ ಆಹಾರ ಪದ್ಧತಿಯನ್ನು ಸುಧಾರಿಸಬೇಕು. ಇಲ್ಲದಿದ್ದರೆ ಹಲ್ಲುಗಳು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಇದಲ್ಲದೆ ಟಿವಿ ಮತ್ತು ಮೊಬೈಲ್ ಫೋನ್ ಬಳಸುವ ಜನರು ಸಹ ಸ್ವಲ್ಪ ಜಾಗರೂಕರಾಗಿರಲು ಸೂಚಿಸಲಾಗಿದೆ, ಇಲ್ಲದಿದ್ದರೆ ನಿಮ್ಮ ದೃಷ್ಟಿಯ ಮೇಲೆ ಪರಿಣಾಮ ಬೀರುವುದರಿಂದಾಗಿ ನೀವು ತೊಂದರೆಗೆ ಒಳಗಾಗಬಹುದು.

ಪರಿಹಾರ - ಪ್ರತಿದಿನ ನಿಯಮಿತವಾಗಿ ಬೆಲಗ್ಗೆ “ ಓಂ ನಮೋ ಭಾಗವತೇ ವಾಸುದೇವಯ್ ನಮಃ “ ಮಂತ್ರವನ್ನು ಜಪಿಸಿ.

  1. ಮೀನಾ ರಾಶಿ

ಬುಧ ಗ್ರಹವು ಮೀನ ರಾಶಿಚಕ್ರದ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಮೊದಲನೇ ಮನೆಗೆ ಪ್ರವೇಶಿಸುತ್ತದೆ. ಪರಿಣಾಮವಾಗಿ ಕೆಲಸದ ಸ್ಥಳದಲ್ಲಿ ನೀವು ನಿಮ್ಮನ್ನು ವ್ಯಕ್ತಪಡಿಸಲು ಈ ಸಮಯವು ಶುಭವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸೃಜನಶೀಲ ಆಲೋಚನೆ ಮತ್ತು ಸಲಹೆಗಳು ಹೆಚ್ಚಾಗುತ್ತವೆ. ಇದಲ್ಲದೆ ನಿಮ್ಮ ಜೀವನ ಸಂಗಾತಿ ಕೂಡ ತಮ್ಮ ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ.

ಈ ಸಮಯದಲ್ಲಿ ನಿಮ್ಮ ಅಧೀನ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಆದ್ದರಿಂದ ಅವರೊಂದಿಗೆ ಸಂವಹನ ಮಾಡುವ ಮೊದಲು, ನಿಮ್ಮ ಭಾಷೆ ಮತ್ತು ಧ್ವನಿಯನ್ನು ನಿಯಂತ್ರಿಸಿ. ವ್ಯಾಪಾರಸ್ಥರಿಗೂ ಈ ಸಮಯ ಹೆಚ್ಚು ಶುಭವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಕುಟುಂಬದ ಹಿರಿಯರ ಆರ್ಥಿಕ ಬೆಂಬಲವನ್ನು ಪಡೆಯುತ್ತೀರಿ. ಇದರಿಂದಾಗಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನಿಮಗೆ ಸಾಧ್ಯವಾಗುತ್ತದೆ.

ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಮೀನ ರಾಶಿಚಕ್ರದ ಸ್ಥಳೀಯರ ಮನೆ ಕುಟುಂಬದಲ್ಲಿ ಯಾವುದೇ ಮಂಗಲಿಕ ಅಥವಾ ಶುಭ ಕಾರ್ಯಕ್ರಮವನ್ನು ಆಯೋಜಿಸುವ ಸಾಧ್ಯತೆ ಇದೆ. ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಸಂಬಂಧದಲ್ಲಿ ಕೆಲವು ಸಮಸ್ಯೆಗಳು ಮತ್ತು ತಪ್ಪು ತಿಳುವಳಿಕೆಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ನಿವಾರಿಸಲು ನಿಮಗೆ ತುಂಬಾ ಕಷವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತೀರಿ ಎಂದು ಸೂಚಿಸಲಾಗಿದೆ.

ಈ ಸಮಯದಲ್ಲಿ ಸಂಪತ್ತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಅಮಾನತುಗೊಳಿಸಿದ್ದರೆ, ಈ ಸಮಯದಲ್ಲಿ ಅದರ ತೀರ್ಮಾನವು ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ತಾಯಿಗೂ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ. ಇದರಿಂದಾಗಿ ಅವರ ಮೂಲಕ ನೀವು ಸಹ ಬೆಂಬಲ ಮತ್ತು ವಾತ್ಸಲ್ಯವನ್ನು ಪಡೆಯುತ್ತೀರಿ.

ಪರಿಹಾರ - ಬುಧ ದೇವರ ವಿಶೇಷ ಅನುಗ್ರಹವನ್ನು ಪಡೆಯಲು ಬುಧವಾರ “ವಿಷ್ಣು ಸಹಸ್ತ್ರನಾಮ” ವನ್ನು ಪಠಿಸಬೇಕು.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer