ಮೇಷ ರಾಶಿಯಲ್ಲಿ ಬುಧ ಸಂಚಾರ ( 16th April 2021 )
ಸ್ಥಳೀಯನ ತಾರ್ಕಿಕ ಶಕ್ತಿ, ಸಂವಹನ, ಲೇಖನ, ವ್ಯಾಪಾರ, ವಾಣಿ ಮತ್ತು ಬುದ್ಧಿಯನ್ನು ಪ್ರತಿನಿಧಿಸುವ ಬುಧ ಗ್ರಹವು ಮತ್ತೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತ, ನೀರಿನ ಅಂಶದ ರಾಶಿ ಮೀನಾದಿಂದ ಮೇಷ ರಾಶಿಗೆ ಗೋಚರಿಸುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧವನ್ನು ಇತರ ಗ್ರಹಗಳಿಗೆ ಹೋಲಿಸಿದರೆ, ಬುಧವು ವೇಗವಾಗಿ ಚಲಿಸುವ ಗ್ರಹವಾಗಿದೆ. ಇದರ ಸಾಗಣೆಯ ಅವಧಿ ಇತರ ಗ್ರಹಗಳಿಗಿಂತ ಕಡಿಮೆಯಾಗಿರುತ್ತದೆ. ಈ ಕಾರಣದಿಂದಾಗಿ, ಇದು ಪ್ರತಿ ರಾಶಿಚಕ್ರದಲ್ಲಿ ಸುಮಾರು 14 ದಿನಗಳವರೆಗೆ ಇರುತ್ತದೆ. ಈ ಬುಧ ಗ್ರಹವು 16 ಏಪ್ರಿಲ್ 2021 ರಂದು, ಶುಕ್ರವಾರ 09 ಗಂಟೆ 05 ನಿಮಿಷಕ್ಕೆ ಮೀನಾ ರಾಶಿಯಿಂದ ಮೇಷ ರಾಶಿಯಲ್ಲಿ ಗೋಚರಿಸುತ್ತದೆ ಮತ್ತು ಇಲ್ಲಿ 01 ಮೇ 2021, ಶನಿವಾರ ಬೆಳಿಗ್ಗೆ 05 ಗಂಟೆ 49 ನಿಮಿಷದ ವರೆಗೆ ಈ ರಾಶಿಯಲ್ಲೇ ಉಳಿದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರದದಿಂದಾಗಿ ಪ್ರತಿ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಖಂಡಿತವಾಗಿಯೂ ಯಾವದಾದರೂ ಒಂದು ಬದಲಾವಣೆ ಇರುತ್ತದೆ.
ನಡೆಯಿರಿ ಈಗ ಬುಧ ಸಂಚಾರವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ವಿವರವಾಗಿ ತಿಲಯೋಣ.
ವಿಶ್ವದ ಅತ್ಯುತ್ತಮ ಜ್ಯೋತಿಷಿಗಳೊಂದಿಗೆ ಈಗಲೇ ಸೇರಿ ಆಸ್ಟ್ರೋಸೇಜ್ ವಾರ್ತಾ
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.
ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ? ತಿಳಿಯಲುಈಗಲೇ ಖರೀದಿಸಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ
ಮೇಷ ರಾಶಿ
ನಿಮ್ಮ ಮೂರನೇ ಮತ್ತು ಆರನೇ ಮನೆಯ ಅಧಿಪತಿ ಬುಧವು, ನಿಮ್ಮ ಮೊದಲನೇ ಅಂದರೆ ನಿಮ್ಮದೇ ರಾಶಿಯಲ್ಲಿ ಗೋಚರಿಸುತ್ತದೆ. ಈ ಸಮಯದಲ್ಲಿ ಮೇಷ ರಾಶಿಚಕ್ರದ ಸ್ಥಳೀಯರು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ಬುಧ ದೇವ ಈ ಸಮಯದಲ್ಲಿ ನಿಮ್ಮದೇ ರಾಶಿಯಲ್ಲಿ “ದಿಗ್ಬಲಿ” ಸ್ಥಿತಿಯಲ್ಲಿ ಇರುತ್ತಾರೆ. ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಕೆಲಸದ ಬಗ್ಗೆ ಹೆಚ್ಚು ಸಂಘಟಿತ ಮತ್ತು ರಚನಾತ್ಮಕರಾಗಿರುತ್ತೀರಿ. ಇದರಿಂದಾಗಿ ನಿಮ್ಮ ಕಾರ್ಯ ಸಾಮರ್ಥ್ಯ ಮತ್ತು ಪ್ರದರ್ಶನ ಹೆಚ್ಚಾಗುತ್ತದೆ. ನಿಮ್ಮ ಈ ಪ್ರಯತ್ನಗಳಿಂದಾಗಿ ಮೇಲಧಿಕಾರಿಗಳು ನಿಮ್ಮತ್ತ ಆಕರ್ಷಿತರಾಗುತ್ತಾರೆ. ಇದರಿಂದಾಗಿ ನೀವು ಪ್ರಶಸ್ತಿ ಮತ್ತು ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ಸಂಚಾರದ ಸಮಯದಲ್ಲಿ ನಿಮ್ಮ ಸ್ಪರ್ಧಾತ್ಮಕ ಭಾವನೆಯಲ್ಲಿ ಹೆಚ್ಚಳವನ್ನು ಕಾಣಲಾಗುತ್ತದೆ. ಮೇಷ ರಾಶಿಚಕ್ರದ ವ್ಯಾಪಾರಸ್ಥರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಲಾಭ ಮತ್ತು ನಷ್ಟವನ್ನು ವಿಶ್ಲೇಷಿಸಲು ಸಹಾಯ ಸಿಗುತ್ತದೆ. ಈ ಸಮಯದಲ್ಲಿ ಅವರು ಯಾವುದೇ ದೊಡ್ಡ ಒಪ್ಪಂದದ ಮೂಲಕ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ.
ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ವೈವಾಹಿಕ ಸ್ಥಳೀಯರಿಗೆ ಈ ಸಂಚಾರವು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಂಚಾರದ ಸಮಯದಲ್ಲಿ, ನಿಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದ ವಾತಾವರಣದಿಂದಲೂ ನೀವು ಸಂತೋಷ ಮತ್ತು ತೃಪ್ತರಾಗಿ ಕಾಣುವಿರಿ. ನಿಮ್ಮ ದಾಂಪತ್ಯ ಜೀವನವನ್ನು ಇನ್ನಷ್ಟು ಬಲಪಡಿಸಲು, ನಿಮ್ಮ ಜೀವನ ಸಂಗಾತಿಯೊಂದಿಗೆ ಸ್ಪಷ್ಟವಾಗಿ ಮಾತನಾಡುವ ಮೂಲಕ ನಿಮ್ಮ ಸಂಬಂಧದಲ್ಲಿ ಬರುತ್ತಿರುವ ತಪ್ಪು ತಿಳುವಳಿಕೆಗಳನ್ನು ನಿವಾರಿಸಲು ಸಹ ನೀವು ಪ್ರಯತ್ನಿಸುತ್ತೀರಿ. ಇದಲ್ಲದೆ ನೀವು ನಿಮ್ಮ ಸಹೋದರ-ಸಹೋದರಿಯರು, ಸ್ನೇಹಿತರಿಂದಲೂ ಬೆಂಬಲವನ್ನು ಪಡೆಯುತ್ತೀರಿ.
ಆದಾಗ್ಯೂ, ಆರನೇ ಮನೆಯ ಅಧಿಪತಿ ಬುಧ ಈ ಸಮಯದಲ್ಲಿ ನಿಮ್ಮ ಲಗ್ನದ ಮನೆಯಲ್ಲಿರುವುದು, ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಿಮ್ಮ ಆಹಾರ ಪಾನೀಯವನ್ನು ಸುಧಾರಿಸಬೇಕಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ಯೋಗ ಮತ್ತು ವ್ಯಾಯಾಮದಂತಹ ಚಟುವಟಿಕೆಗಳನ್ನು ಸಹ ಆಶ್ರಯಿಸುವುದು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಪರಿಹಾರ - ಪ್ರತಿ ಬುಧವಾರದಂದು ಉಪವಾಸ ಮಾಡುವುದು ನಿಮಗೆ ಉತ್ತಮ.
ವೃಷಭ ರಾಶಿ
ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುತ್ತಿರುವ ವೃಷಭ ರಾಶಿಚಕ್ರದ ವಿದ್ಯಾರ್ಥಿಗಳು ಬುಧ ಸಂಚಾರದ ಸಮಯದಲ್ಲಿ ಶುಭ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ರಾಶಿಚಕ್ರದ ಎರಡನೇ ಮತ್ತು ಐದನೇ ಮನೆಯ ಅಧಿಪತಿ ಬುಧ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾರೆ. ಈ ಕಾರಣದಿಂದಾಗಿ ವೃತ್ತಿಪರ ಮತ್ತು ವ್ಯಾಪಾರಸ್ಥರು, ವಿದೇಶ ಮೂಲಗಳು ಮತ್ತು ಸಂಪರ್ಕಗಳ ಸಹಾಯದಿಂದ ತಮ್ಮ ಆದಾಯವನ್ನು ಹೆಚ್ಚಿಸಲು ಅನೇಕ ಶುಭ ಅವಕಾಶಗಳನ್ನು ಪಡೆಯುತ್ತಾರೆ.
ಈ ಸಮಯದಲ್ಲಿ ನೀವು ನಿಮ್ಮ ಬುದ್ಧಿವಂತಿಕೆ ಮತ್ತು ಜ್ಞಾನದ ಮೂಲಕ ಗೌರವ, ಪ್ರತಿಷ್ಠೆ ಮತ್ತು ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಆದಾಗ್ಯೂ, ಇದರ ಹೊರತಾಗಿಯೂ, ನೀವು ಪ್ರತಿ ಹೆಜ್ಜೆಯನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸಲು ಪ್ರಯತ್ನಿಸುತ್ತಲೇ ಇರಬೇಕಾಗುತ್ತದೆ. ಏಕೆಂದರೆ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇದರೊಂದಿಗೆ ಹೂಡಿಕೆಗೆ ಸಂಬಂಧಿಸಿದ ಯಾವುದೇ ಅಪಾಯವನ್ನು ತೆಗೆದುಕೊಳ್ಳುವ ಸಮಯದಲ್ಲಿ ಅದನ್ನು ರಹಸ್ಯವಾಗಿಡಲು ವ್ಯಾಪಾರಸ್ಥರಿಗೆ ಸಲಹೆ ನೀಡಲಾಗಿದೆ.
ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಇನ್ನೂ ಒಂಟಿಯಾಗಿರುವವರು ಈ ಸಂಚಾರದ ಸಮಯದಲ್ಲಿ ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ವಿವಾಹಿತ ಜನರು ಕೆಲವು ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಪರಿಣಾಮವಾಗಿ ನಿಮ್ಮ ಮತ್ತು ಜೀವನ ಸಂಗಾತಿಯ ನಡುವಿನ ಅಂತರವು ಹೆಚ್ಚಾಗುತ್ತದೆ. ಇದರ ಹೊರತಾಗಿಯೂ, ನಿಮ್ಮಿಬ್ಬರ ನಡುವೆ ಸರಿಯಾದ ತಿಳುವಳಿಕೆ ಮತ್ತು ಸಾಮರಸ್ಯ ಉಳಿದಿರುತ್ತದೆ.
ಆರ್ಥಿಕ ಜೀವನದಲ್ಲೂ ವೃಷಭ ರಾಶಿಚಕ್ರದ ಸ್ಥಳೀಯರು ತಮ್ಮ ವೆಚ್ಚಗಳನ್ನು ಆರಂಭದಿಂದಲೇ ನಿಯಂತ್ರಣದಲ್ಲಿಡಬೇಕು. ಇದ್ದಕ್ಕಿದ್ದಂತೆ ನಿಮ್ಮ ವೆಚ್ಚಗಳು ಹೆಚ್ಚಾಗುವ ನಿರೀಕ್ಷೆಯಿದೆ. ಆದ್ದರಿಂದ ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸರಿಯಾದ ಸಾಮರಸ್ಯವನ್ನು ಕಾಪಾಡಿಕೊಂಡು ಯಾವುದೇ ಶಾಪಿಂಗ್ ಮಾಡಿ. ಆಗ ಮಾತ್ರ ನೀವು ಎಲ್ಲಾ ರೀತಿಯ ಆರ್ಥಿಕ ಬಿಕ್ಕಟುಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಆರೋಗ್ಯಕ್ಕೆ ಸಂಬಂಧಿಸಿದ ನಷ್ಟ ಮತ್ತು ದುರ್ಬಲತೆಯನ್ನು ಹೊಂದಿರುವ ಸಾಧ್ಯತೆ ಇದೆ. ಇದಲ್ಲದೆ ಅನವಶ್ಯಕ ವಾದಗಳಿಂದ ದೂರವಿರಿ.ಇಲದಿದ್ದರೆ ನೀವು ಅಶಾಂತಿಯನ್ನು ಪಡೆಯುವುದಲ್ಲದೆ ನಿಮ್ಮ ಚಿತ್ರ ಕ್ಕೂ ನಷ್ಟವಾಗುತ್ತದೆ.
ಪರಿಹಾರ - ಬುಧ ಗ್ರಹದ ಅನುಕೂಲತೆಯನ್ನು ಪಡೆಯಲು ನೀವು ಪ್ರತಿದಿನ ಬುಧ ಹೋರಾ ಸಮಯದಲ್ಲಿ, ಬುಧ ಬೀಜ ಮಂತ್ರವನ್ನು ಜಪಿಸಬೇಕು.
ಮಿಥುನ ರಾಶಿ
ಬುಧ ಗ್ರಹ ನಿಮ್ಮ ರಾಶಿಚಕ್ರದ ಅಧಿಪತಿ. ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರದ ಪರಿಣಾಮವಾಗಿ ಲಾಭವನ್ನು ಪಡೆಯುತ್ತೀರಿ. ಆದ್ದರಿಂದ ಈ ಮನೆಯಲ್ಲಿ ಬುಧ ಸಂಚಾರವು ನಿಮ್ಮ ಧೈರ್ಯ ಮತ್ತು ಪರಾಕ್ರಮವನ್ನು ಹೆಚ್ಚಿಸಿ, ನಿಮ್ಮ ಹಿಂದಿನ ಯಾವುದೇ ರೋಗವನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ.
ಕೆಲಸದ ಸ್ಥಳದಲ್ಲೂ ಇದರ ಸಕಾರಾತ್ಮಕ ಪರಿಣಾಮವು ನಿಮ್ಮ ಸಂವಹನ ಮತ್ತು ಸಂಘಟಿತ ಕೌಶಗಳನ್ನು ಹೆಚ್ಚಿಸುತ್ತದೆ. ಈಕಾರಣದಿಂದಾಗಿ ಸಂಬಳದ ಹೆಚ್ಚಳ ಮತ್ತು ಬಡ್ತಿ ಪಡೆಯುವುದರೊಂದಿಗೆ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರು ಈ ಸಮಯದಲ್ಲಿ ತಮ್ಮ ಉತ್ತಮ ಸಂವಹನ ಕೌಶಲ್ಯ ಮತ್ತು ಆಕರ್ಷಿತ ವಾಣಿಯ ಸಾಮರ್ಥ್ಯದಿಂದ ತಮ್ಮ ವ್ಯಾಪಾರಕ್ಕಾಗಿ ಉತ್ತಮ ಒಪ್ಪಂದಗಳು ಮತ್ತು ಹೂಡಿಕೆದಾರರನ್ನು ಗಳಿಸಲು ಸಾಧ್ಯವಾಗುತ್ತದೆ.
ಹೊಸ ವ್ಯಾಪಾರ ಮಾಡಲು ಅಥವಾ ಉದ್ಯೋಗವನ್ನು ಬಿಟ್ಟು ಸ್ವಂತ ವ್ಯಾಪಾರ ಮಾಡಲು ಬಯಸಿದರೆ, ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.ಏಕೆಂದರೆ ಈ ಸಮಯದಲ್ಲಿ ನೀವು ಯಾವುದೇ ಶುಭ ಅವಕಾಶವನ್ನು ಪಡೆಯಬಹುದು.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಮಿಥುನ ರಾಶಿಚಕ್ರದ ಸ್ಥಳೀಯರು ಯಾವುದೇ ರಿಯಲ್ ಎಸ್ಟೇಟ್ ಸಂಪತ್ತಿನ ಮೂಲಕ ಉತ್ತಮ ಲಾಭವನ್ನು ಪಡೆಯುತ್ತಾರೆ. ಇದಲ್ಲದೆ ಪ್ರೀತಿಯ ಸಂಬಂಧದಲ್ಲಿ ತಮ್ಮ ಪ್ರೇಮಿಯ ಮುಂದೆ ತಮ್ಮ ಭಾವನೆಗಳನ್ನು ತೆರೆದಿಡಲು ಸಾಧ್ಯವಾಗುತ್ತದೆ. ನೀವು ವಿವಾಹಿತರಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಸಂಬಂಧದಲ್ಲಿ ಹೊಸತನವನ್ನು ಕಾಣಲಾಗುತ್ತದೆ.
ವಿದ್ಯಾರ್ತಿಗಳಿಗೆ ಶುಭವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಅವರು ಹೊಸ ವಿಷಯಗಳನ್ನು ಕಲಿಯಬೇಕೆಂಬ ಆಸೆಯನ್ನು ಹೊಂದಿರುತ್ತಾರೆ, ಇದರಿಂದ ಅವರು ತಮ್ಮ ಶಿಕ್ಷಣದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ.
ಒಟ್ಟಾರೆಯಾಗಿ ಬುಧ ಸಂಚಾರವು ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಬಹಳ ಅನುಕೂಲಕರವಾಗಿರಲಿದೆ.
ಪರಿಹಾರ - ಈ ಸಂಚಾರದ ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯಲು ಬುಧವಾರ ವಿಷ್ಣು ಸಹಸ್ರನಾಮವನ್ನು ಪಠಿಸಿ.
ಕರ್ಕ ರಾಶಿ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚಾರವು ಅವರ ಕೆಲಸದ ಸ್ಥಳ ಮತ್ತು ವೃತ್ತಿಯಲ್ಲಿ ಅನುಕೂಲತೆಯನ್ನು ತರುತ್ತದೆ. ಏಕೆಂದರೆ ನಿಮ್ಮ ರಾಶಿಚಕ್ರದ ಹನ್ನೆರಡನೇ ಮತ್ತು ಮೂರನೇ ಮನೆಯ ಅಧಿಪತಿ, ನಿಮ್ಮ ಹತ್ತನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಕರ್ಕ ರಾಶಿಚಕ್ರದ ಸ್ಥಳೀಯರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ಮೂಲಕ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಉದ್ಯೋಗಪರರು ತಮ್ಮ ಅಧೀನ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಪಡೆಯುತ್ತಾರೆ. ಇದರಿಂದಾಗಿ ನೀವು ನಿಮ್ಮ ಎಲ್ಲಾ ಗುರಿಗಳನ್ನು ಸಮಯಕ್ಕಿಂತ ಮುಂಚಿತವಾಗಿ ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದರಿಂದಾಗಿ ನೀವು ಸಾಕಷ್ಟು ಮಟ್ಟಿಗೆ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಹಾಯವಾಗುತ್ತದೆ.
ವಿದೇಶಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವವರು ಅಥವಾ ಆಮದು - ರಫ್ತು ಗೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವವರು, ಲಾಭವನ್ನು ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಇದಲ್ಲದೆ ಯಾವುದೇ ಬಹು ರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಜನರ ಕನಸು ಈ ಸಮಯದಲ್ಲಿ ನನಸಾಗುವ ಸಾಧ್ಯತೆ ಇದೆ.
ಆದಾಗ್ಯೂ ಕುಟುಂಬ ಜೀವನದಲ್ಲಿ ಪ್ರತಿಕೂಲ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ಈ ಸಂಚಾರದ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರು ತಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡು ಅವರನ್ನು ಬೆಂಬಲಿಸಿ. ತಂದೆ ತಾಯಿಯೊಂದಿಗೂ ಕೆಲವು ಭಿನ್ನಾಭಿಪ್ರಾಯಗಳ ಪರಿಸ್ಥಿತಿ ಉಧ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ಮಾತನಾಡುವಾಗ ಸಭ್ಯವಾಗಿ ವರ್ತಿಸಿ ಮತ್ತು ಪ್ರತಿಯೊಂದು ವಿವಾದವನ್ನು ನಿವಾರಿಸಲು ಪ್ರಯತ್ನಿಸುವುದು ನಿಮಗೆ ಉತ್ತಮವಾಗಿರುತ್ತದೆ.
ಕರ್ಕ ರಾಶಿಚಕ್ರದ ದಾಂಪತ್ಯ ಸ್ಥಳೀಯರಿಗೆ ಬುಧನ ಈ ಸಂಚಾರವು ಸಂತೋಷವನ್ನು ತರುತ್ತದೆ. ಇದರಿಂದಾಗಿ ಅವರು ಸಂಬಂಧದಲ್ಲಿ ತೃಪ್ತಿ ಮತ್ತು ಆನಂದವನ್ನು ಪಡೆಯುತ್ತಾರೆ. ಆರೋಗ್ಯದ ವಿಷಯದಲ್ಲಿ ನೀವು ಆರಂಭದಿಂದಲೇ ಬಹಳ ಜಾಗರೂಕರಾಗಿರಬೇಕು. ಆದ್ದರಿಂದ ನಿಮ್ಮ ಕಕೆಲಸದ ಹೊರೆ ಮತ್ತು ವಿಶ್ರಾಂತಿಯ ನಡುವೆ ಸರಿಯಾದ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಇಲ್ಲದಿದ್ದರೆ, ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
ಪರಿಹಾರ - ಬುಧವಾರ ಗಣೇಶ ದೇವರನ್ನು ಪೂಜಿಸಿ ಮತ್ತು ಅವರಿಗೆ ದುರ್ವವನ್ನು ಅರ್ಪಿಸಿ.
ಸಿಂಹ ರಾಶಿ
ಬುಧ ಸಂಚಾರವು ನಿಮ್ಮರಾಶಿಯಿಂದ ಒಂಬತ್ತನೇ ಮನೆಯಲ್ಲಿರುತ್ತಾರೆ. ಅಲ್ಲಿ ಅವರು ನಿಮ್ಮ ರಾಶಿಚಕ್ರದ ಅಧಿಪತಿ ಸೂರ್ಯ ಮತ್ತು ನಿಮ್ಮ ಹತ್ತನೇ ಮನೆಯ ಅಧಿಪತಿ ಶುಕ್ರನೊಂದಿಗೆ ಸಂಯೋಜಿಸುತ್ತಾರೆ. ಬುಧದ ಈ ಸ್ಥಾನವು ಬಹಳ ಬಲವಾದ ಸ್ಥಾನವನ್ನು ಸೂಚಿಸುತ್ತಿದೆ. ಇದರಿಂದಾಗಿ ನಿಮ್ಮ ಆದಾಯ, ಹಣ ಮತ್ತು ಸಮೃದ್ಧಿ ಹೆಚ್ಚಾಗುವ ಸಾಧ್ಯತೆ ಇದೆ. ಮೀನಾ ರಾಶಿಯಿಂದ ಹೊರಬಂದು ಮೇಷ ರಾಶಿಯಲ್ಲಿ ಬುಧದ ಈ ಸಂಚಾರವು ನಿಮ್ಮ ಸಂತೋಷ ಸಂಪನ್ಮೂಲಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಕುಟುಂಬ ಜೀವನದಲ್ಲಿ ನಿಮ್ಮ ಹಿರಿಯ ಸಹೋದರ ಸಹೋದರಿಯರು ತಮ್ಮ ಕೆಲಸದ ಸ್ಥಳದಲ್ಲಿ ಬಡ್ತಿ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಇದರಿಂದಾಗಿ ಕುಟುಂಬದಲ್ಲಿ ಸಂತೋಷ ಬರುತ್ತದೆ. ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಈ ಸಕಾರಾತ್ಮಕ ಬದಲಾವಣೆಗಳ ಕಾರಣದಿಂದಾಗಿ, ನೀವು ನಿಮ್ಮ ಕುಟುಂಬದೊಂದಿಗೆ ಎಲ್ಲಾದರೂ ಸುತ್ತಾಡಲು ಅಥವಾ ಯಾವುದೇ ಸುಂದರ ಸ್ಥಾನಕ್ಕೆ ಹೋಗಲು ಯೋಜಿಸಬಹುದು. ಇದು ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕೆಲಸದ ಸ್ಥಳದಲ್ಲಿ ನಿಮ್ಮ ಹಿಂದಿನ ಸಮಯದಲ್ಲಿ ನೀವು ಎದುರಿಸುತ್ತಿದ್ದ ಎಲ್ಲಾ ಸಮಸ್ಯೆಗಳನ್ನು ಈ ಸಮಯದಲ್ಲಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಇದಲ್ಲದೆ ನೀವು ಕಷ್ಟಪಡುತ್ತಿದ್ದ ಕಾರ್ಯಗಳು ಸಹ ಈ ಸಮಯದಲ್ಲಿ ಸುಲಭವಾಗಿ ಪೂರ್ಣಗೊಳ್ಳುತ್ತವೆ. ಒಟ್ಟಾರೆಯಾಗಿ ಈ ಅವಧಿಯು ನಿಮ್ಮನ್ನು ವಿಷಯಶಾಲಿಯನ್ನಾಗಿ ಮಾಡುತ್ತದೆ ಮತ್ತು ಅನೇಕ ಸಾಧನೆಗಳನ್ನು ನೀಡುವ ಕೆಲಸ ಮಾಡುತ್ತದೆ.
ಇದರೊಂದಿಗೆ ಈ ಸಂಚಾರದ ಸಮಯದಲ್ಲಿ ವ್ಯಾಪಾರಸ್ಥರು ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ಕುಟುಂಬ ಅಥವಾ ಪೂರ್ವಜರ ವ್ಯಾಪಾರಕ್ಕೆ ಸಂಬಂಧಿಸಿದವರು, ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅನೇಕ ಉತ್ತಮ ಮತ್ತು ಶುಭ ಅವಕಾಶಗಳನ್ನು ಪಡೆಯುತ್ತಾರೆ. ಅರೋಗ್ಯ ಜೀವನದಲ್ಲಿಯೂ ಬುಧದ ಈ ಶುಭ ಸ್ಥಾನವು ನಿಮ್ಮ ಆರೋಗ್ಯಕ್ಕೆ ಸಕಾರಾತ್ಮಕ ದಿಕ್ಕು ನೀಡುವ ಕೆಲಸ ಮಾಡುತ್ತದೆ.
ಪರಿಹಾರ - ಅತ್ತೆ, ಚಿಕ್ಕಮ್ಮ, ತಾಯಿಯಂತಹ ಮಹಿಳೆಯರಿಗೆ ಉಡುಗೊರೆ ನೀಡಿ. ಇದರಿಂದಾಗಿ ನೀವು ಬುಧ ಗ್ರಹದ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಹಾಯ ಸಿಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯ ಬಹಳ ಸವಾಲುಗಳಿಂದ ತುಂಬಿರುತ್ತದೆ, ಏಕೆಂದರೆ ನಿಮ್ಮ ರಾಶಿಚಕ್ರದ ಅಧಿಪತಿ ಬುಧವು, ಈ ಸಂಚಾರದ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರವು ನಿಮಗೆ ತುಂಬಾ ವಿಶೇಷವಾಗಿರಲಿದೆ.
ಈ ಸಮಯದಲ್ಲಿ ವೃತ್ತಿಪರ ಮತ್ತು ಕೆಲಸದ ಸ್ಥಳದಲ್ಲಿ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವಲ್ಲಿ ಕೆಲವು ಸಮಸ್ಯೆಗಳಾಗಬಹುದು. ಇದರಿಂದಾಗಿ ನಿಮ್ಮ ಚಿಂತೆಯಲ್ಲಿ ಹೆಚ್ಚಳ ಮತ್ತು ಆತ್ಮವಿಶ್ವಾಸದಲ್ಲಿ ಕೊರತೆಯನ್ನು ಕಾಣಲಾಗುತ್ತದೆ.
ಕನ್ಯಾ ರಾಶಿಚಕ್ರದ ಕೆಲವು ಸ್ಥಳೀಯರು ಜೀವನದಲ್ಲಿ ಅನೇಕ ಅಪ್ರಕಟಿತ ಘಟನೆಗಳನ್ನು ಸಹ ಎದುರಿಸಬೇಕಾಗಬಹುದು. ಇದು ನಿಮ್ಮ ಸ್ವಭಾವದಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ. ಇದರಿಂದಾಗಿ ನಿಮ್ಮ ಮನಸ್ಸಿನಲ್ಲಿ ನಿಮ್ಮ ಸಾಮರ್ಥ್ಯದ ಬಗ್ಗೆ ಭಯದ ಸ್ಥಿತಿ ಕೂಡ ಹೊರಹೊಮ್ಮಬಹುದು. ಆದ್ದರಿಂದ ಈ ಸಮಯದಲ್ಲಿ ನಿಮ್ಮನ್ನು ಸಕಾರಾತ್ಮಕವಾಗಿರಿಸಿ, ನಿಮ್ಮ ಕೌಶಲ್ಯ ಮತ್ತು ಅನುಭವಗಳನ್ನು ಸುಧಾರಿಸುವತ್ತ ಪ್ರಯತ್ನಿಸಿ ಎಂದು ಸಲಹೆ ನೀಡಲಾಗಿದೆ. ಆಗ ಮಾತ್ರ 1 ಮೇ ನಂತರ ನೀವು ಶುಭ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಈ ರಾಶಿಚಕ್ರದ ಕೆಲವು ಸ್ಥಳೀಯರು ರಹಸ್ಯ ವಿಧಾನಗಳ ಮೂಲಕ ಅಥವಾ ತಮ್ಮ ಯಾವುದೇ ಪೂರ್ವಜರ ಆಸ್ತಿಯ ಮೂಲಕ ಹಣಕಾಸಿ ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಾರೆ.
ಇದರೊಂದಿಗೆ ನಿಮ್ಮ ಜೀವನ ಸಂಗಾತಿಯ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಇದು ನಿಮಗೆ ಪರಿಹಾರದ ಮೂಲವೆಂದು ಸಾಬೀತುಪಡಿಸುತ್ತದೆ. ಆದಾಗ್ಯೂ ಈ ಸಮಯದಲ್ಲಿ ನೀವು ನಿಮ್ಮ ತಂದೆಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಎಂಟನೇ ಮನೆಯಲ್ಲಿ ಬುಧನ ಉಪಸ್ಥಿತಿಯು, ನಿಮ್ಮ ಅರೋಗ್ಯ ಜೀವನಕ್ಕೆ ಪ್ರತಿಕೂಲವಾಗಿ ಕಂಡುಬರುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಬಗ್ಗೆಯೂ ವಿಶೇಷ ಗಮನ ಹರಿಸಬೇಕು. ಏಕೆಂದರೆ ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಚರ್ಮ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಒಟ್ಟಾರೆಯಾಗಿ ಬುಧ ಸಂಚಾರವು ಯೋಗ, ಧ್ಯಾನ ಮತ್ತು ವಿಶ್ರಾಂತಿಗಾಗಿ ಉತ್ತಮ ಸಮಯವನ್ನು ತರುತ್ತದೆ. ಇದರಿಂದಾಗಿ ನೀವು ನಿಮ್ಮ ಭವಿಷ್ಯವನ್ನು ಸುಧಾರಿಸಿ, ಉತ್ತಮ ಫಲಿತಾಂಶಗಳನ್ನು ಪಡೆಯುವಲ್ಲಿ ಸಮರ್ಥರಾಗುವಿರಿ.
ಪರಿಹಾರ - ಬುಧನ ಶುಭ ಫಲಿತಾಂಶವನ್ನು ಪಡೆಯಲು, ಉತ್ತಮ ಗುಣಮಟ್ಟದ ಪಚ್ಛೆ ರತ್ನವನ್ನು ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ ತಯಾರಿಸಿ ನಿಮ್ಮ ಬಲಗೈಯ ಚಿಕ್ಕ ಬೆರಳಿನಲ್ಲಿ ಧರಿಸಿ.
ತುಲಾ ರಾಶಿ
ಬುಧ ಗ್ರಹವು ನಿಮ್ಮ ರಾಶಿಚಕ್ರದ ಒಂಬತ್ತನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಏಳನೇ ಮನೆಗೆ ಪ್ರವೇಶಿಸುತ್ತದೆ. ಜಾತಕದಲ್ಲಿ ಏಳನೇ ಮನೆ ವೈವಾಹಿಕ ಜೀವನ, ಪಾಲುದಾರಿಕೆ ಮತ್ತು ಜೀವನ ಸಂಗಾತಿಯನ್ನು ತೋರಿಸುತ್ತದೆ.
ಆದ್ದರಿಂದ, ಸ್ವಂತ ವ್ಯಾಪಾರವನ್ನುಆರಂಭಿಸಲು ಬಯಸುತ್ತಿರುವ ಜನರಿಗೆ ಅಥವಾ ತನ್ನ ಆದಾಯದ ನಿಯಮಿತ ಮೂಲಗಳನ್ನು ಹೊರತುಪಡಿಸಿ ಯಾವುದೇ ಇತರ ವ್ಯಾಪಾರದಲ್ಲೂ ತಮ್ಮ ಆದಾಯವನ್ನು ಹೆಚ್ಚಿಸಲು ಬಯಸುತ್ತಿರುವ ಜನರಿಗೆ ಈ ಸಂಚಾರವು ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ಅವರು ಅನೇಕ ಪ್ರಯೋಜನಕಾರಿ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ವಿದೇಶಿ ಸಂಪರ್ಕಗಳು, ಪಾಲುದಾರರು ಅಥವಾ ಹೂಡಿಕೆದಾರರನ್ನು ಹುಡುಕುತ್ತಿರುವ ಜನರು ಸಹ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವೃತ್ತಿಪರ ಸ್ಥಳೀಯರು ತಮ್ಮಾ ಎಲ್ಲಾ ಕ್ಷೇತ್ರಗಳ ಮೂಲಕ ಲಾಭ ಮತ್ತು ಯಶಸ್ಸು ಇಗುತ್ತದೆ.
ಈ ಸಮಯದಲ್ಲಿ, ವ್ಯಾಪಾರದಲ್ಲಿ ವಿಸ್ತರಣೆಗಾಗಿ ಮಾಡಲಾದ ಪ್ರಯಾಣಗಳಿಂದ ಉತ್ತಮ ಲಾಭವನ್ನು ಗಳಿಸಲು ಸಹಾಯ ಸಿಗುತ್ತದೆ.
ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಮದುವೆಗೆ ಅರ್ಹರಾಗಿರುವವರು ಮದುವೆಯ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದರಿಂದಾಗಿ ನೀವು ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಇತರರನ್ನು ಆಕರ್ಷಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಕಾರಣದಿಂದಾಗಿ ಅನೇಕ ಇತರ ಜನರು ಸಲಹೆಯನ್ನು ಪಡೆದುಕೊಳ್ಳಲು ನಿಮ್ಮ ಬಳಿ ಬರುತ್ತಾರೆ.
ವೈವಾಹಿಕ ಜನರು ತಮ್ಮ ಜೀವನ ಸಂಗಾತಿಯನ್ನು ಸಂತೋಷಪಡಿಸಲು ಪ್ರಯತ್ನಿಸುವುದನ್ನು ಸಹ ಕಾಣಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಭಾಗ್ಯ ಮತ್ತು ಅದೃಷ್ಟವು ಸಹ ನಿಮ್ಮ ಸಂಗಾತಿಗೆ ಸಂಬಂಧಿಸಿದೆ ಎಂದು ನೀವು ಅನುಭವಿಸುವಿರಿ. ಆದ್ದರಿಂದ ಅವರನ್ನು ನಿಮ್ಮ ನೆಚ್ಚಿನ ಸ್ಥಳಕ್ಕೆ ಕರೆದೊಯ್ಯಲು ಪ್ರಯತ್ನಿಸಿ. ಇದು ನಿಮ್ಮಿಬ್ಬರ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ.
ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮ್ಮ ಅರೋಗ್ಯ ಜೀವನವನ್ನು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿಸುವತ್ತ ಸೂಚಿಸುತ್ತಿದೆ. ಏಕೆಂದರೆ ಈ ಸಮಯದಲ್ಲಿ ನೀವು ಸಂಪೂರ್ಣ ಉತ್ಸಾಹ ಮತ್ತು ಶಕ್ತಿಯಿಂದ ತುಂಬಿರುತ್ತೀರಿ.
ಪರಿಹಾರ - ಅತ್ತೆ, ಚಿಕ್ಕಮ್ಮ, ಇತ್ಯಾದಿ ತಾಯಿಯಂತಹ ಮಹಿಳೆಯರಿಗೆ ಉಡುಗೊರೆ ಮತ್ತು ಸಿಹಿತಿಂಡಿಗಳನ್ನು ನೀಡುವುದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.
ವೃಶ್ಚಿಕ ರಾಶಿ
ಬುಧ ಗ್ರಹವು ವೃಶ್ಚಿಕ ರಾಶಿಯಿಂದ ಆರನೇ ಮನೆಗೆ ಗೋಚರಿಸುತ್ತದೆ. ಬುಧ ನಿಮ್ಮ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಆದ್ದರಿಂದ ಆರನೇ ಮನೆಯಲ್ಲಿ ಬುಧದ ಈ ಸಾಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ.
ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಿರಬಹುದು. ಏಕೆಂದರೆ ನಿಮ್ಮ ಹಾರ್ಮೋನ್, ಚರ್ಮ ಮತ್ತು ಯಾವುದೇ ರೀತಿಯ ಅಲರ್ಜಿ, ಇತ್ಯಾದಿ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಆದ್ದರಿಂದ ಜಾಗರೂಕರಾಗಿರಿ ಮತ್ತು ನಿಮ್ಮ ಆಹಾರ ಪದ್ದತಿಯನ್ನು ಸುಧಾರಿಸಿ. ಧೂಳು ಮತ್ತು ಮಾಲಿನ್ಯ ಇರುವ ಸ್ಥಳಗಳಿಂದ ನಿಮ್ಮನ್ನು ದೂರವಿಸುವುದು ನಿಮಗೆ ಉತ್ತಮವಾಗಿರುತ್ತದೆ.
ಸಂಚಾರದ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ, ಪ್ರತಿಯೊಂದು ರೀತಿಯ ವಾದ ಮತ್ತು ವಿವಾದದಲ್ಲಿ ನೀವು ಭಾಗಿಯಾಗುವುದನ್ನು ತಡೆಯಬೇಕಾಗುತ್ತದೆ. ಏಕೆಂದರೆ ಈ ಅವಕಾಶಗಳ ಲಾಭವನ್ನು ಪಡೆದುಕೊಡು, ನಿಮ್ಮ ಎದುರಾಳಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುವಲ್ಲಿ ಮತ್ತು ನಿಮ್ಮ ಚಿತ್ರವನ್ನು ಹದಗೆಡಿಸುವಲ್ಲಿ ಯಶಸ್ವಿಯಾಗಬಹುದು. ಆರ್ಥಿಕ ಜೀವನದಲ್ಲೂ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ಸಮಯ ಇರುವಾಗಲೇ ನಿಮ್ಮ ವೆಚ್ಚಗಳನ್ನು ನಿಯಂತ್ರಿಸದಿದ್ದರೆ, ಇದು ನಿಮ್ಮ ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ.
ವ್ಯಾಪಾರದಲ್ಲಿ ವಿಸ್ತರಣೆಗಾಗಿ ಯಾವುದೇ ಸಂಸ್ಥೆ ಅಥವಾ ಬ್ಯಾಂಕ್ ಸಹಾಯದಿಂದ ಲೋನ್ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿರುವ ವ್ಯಾಪಾರಸ್ಥತು ಈ ಸಂಚಾರದ ಸಮಯದಲ್ಲಿ ಯಶಸ್ಸು ಪಡೆಯುತ್ತಾರೆ. ಇದರಿಂದಾಗಿ ಅವರು ತಮ್ಮ ಅಮಾನತುಗೊಳಿಸಿರುವ, ಹಿಂದಿನ ಅನೇಕ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಸಾಲವನ್ನು ಮರುಪಾವತಿಸಲು ಮುಂಚಿತವಾಗಿ ಬಲವಾದ ಯೋಜನೆಯನ್ನು ತಯಾರಿಸಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ, ನಿಮ್ಮ ಸಾಲವನ್ನು ಮರುಪಾವತಿಸಲು ನಿಮಗೆ ಕಷ್ಟಕರವಾಗುತ್ತದೆ.
ಉದ್ಯೋಗದಲ್ಲಿರುವ ಜನರು ತಮ್ಮ ಮೇಲಧಿಕಾರಿಗಳು ಮತ್ತು ಹಿರಿಯರೊಂದಿಗೆ ಬಹಿರಂಗವಾಗಿ ಸಂವಹನ ನಡೆಸಬೇಕಾಗುತ್ತದೆ. ಏಕೆಂದರೆ ಅವರ ಸಲಹೆ ಮತ್ತು ಅನುಭವವು ನಿಮ್ಮ ಜೀವನದಲ್ಲಿ ಯಾವುದೇ ದೊಡ್ಡ ಬದಲಾವಣೆಯನ್ನು ಮಾಡುತ್ತದೆ, ಯಶಸ್ಸಿನ ಹಾದಿಯಲ್ಲಿ ನಡೆಯಲು ನಿಮಗೆ ಸಹಾಯ ಮಾಡುತ್ತದೆ.
ಪರಿಹಾರ - ಬುಧವಾರ ಯಮದೂತ ದೇವರ ಆಶೀರ್ವಾದವನ್ನು ಪಡೆಯಿರಿ.
ಧನು ರಾಶಿ
ಧನು ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಐದನೇ ಮನೆಗೆ ಪ್ರವೇಶಿಸುತ್ತಾರೆ. ಆದ್ದರಿಂದ ಈ ಸಾಚಾರವು ನಿಮಗೆ ಸಾಕಷ್ಟು ಪ್ರಮುಖವಾಗಿರುತ್ತದೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ಅನುಕೂಲಕರ ಬದಲಾವಣೆಗಳು ಉಂಟಾಗುತ್ತವೆ.
ಪ್ರೀತಿಯ ಸಂಬಂಧಕ್ಕೆ ಈ ಸಮಯ ಶುಭವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಹೃದಯದ ವಿಷಯಗಳು ಮತ್ತು ಭಾವನೆಗಳನ್ನು ಪ್ರೇಮಿಯ ಮುಂದೆ ಸ್ಪಷ್ಟವಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದಾಗಿ ನಿಮ್ಮಿಬ್ಬರ ನಡುವಿನ ಸಂಬಂಧವು ಬಲಗೊಳ್ಳುತ್ತದೆ. ಅದೇ ಸಮಯದಲ್ಲಿ ದಾಂಪತ್ಯ ಜನರು ಸಹ ತಮ್ಮ ಮಕ್ಕಳ ಪ್ರಗತಿಯನ್ನು ನೋಡಿ ಸಂತೋಷವನ್ನು ಅನುಭವಿಸುತ್ತಾರೆ. ಈ ಸಂಚಾರವು ವೈವಾಹಿಕ ಸ್ಥಳೀಯರ ಜೀವನ ಸಂಗಾತಿಗೆ ಪ್ರಗತಿ ಮತ್ತು ಅಹುಇವೃದ್ಧಿಯನ್ನು ತರುತ್ತದೆ.
ಈ ಸಂಚಾರದ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಅಡಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಮತ್ತು ಮೇಲಧಿಕಾರಿಗಳ ಗಮನವನ್ನು ಸೆಳೆಯಲು ನಿಮಗೆ ಸಾಧ್ಯವಾಗುತ್ತದೆ.
ವ್ಯಾಪಾರಸ್ಥರಿಗೂ ಈ ಸಮಯವು, ವ್ಯಾಪಾರದಲ್ಲಿ ವಿಸ್ತರಣೆ ಮತ್ತು ಆದಾಯದಲ್ಲಿ ಹೆಚ್ಚಳವನ್ನು ತರುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಆಲೋಚನೆಗಳು ಮತ್ತು ಕಾರ್ಯತಂತ್ರಗಳನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುವ ಮೂಲಕ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ ಮತ್ತೊಂದೆಡೆ, ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವವರು ಸಹ ಲಾಭ ಮತ್ತು ಶುಭ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ವರ್ಗಾವಣೆಯನ್ನುಪಡೆಯಬಹುದು.
ಬುಧ ದೇವ ವಿದ್ಯಾರ್ಥಿಗಳ ಶಕ್ತಿಯನ್ನು ಅಭಿವೃದ್ದಿಪಡಿಸಿ, ಹೊಸ ವಿಷಯಗಳನ್ನು ಕಲಿಯುವ ಅವರ ಉತ್ಸಾಹವನ್ನು ಹೆಚ್ಚಿಸುವ ಕೆಲಸ ಮಾಡುತ್ತಾರೆ. ಪರಿಣಾಮವಾಗಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ಮಾಡಿ, ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಪರಿಹಾರ - ಯಾವುದೇ ಮುಖ್ಯವಾದ ಕೆಲಸಕ್ಕಾಗಿ ಹೊರಡುವ ಮೊದಲು, ಪ್ರತಿದಿನ ನಿಮ್ಮ ಗುರುಗಳು ಅಥವಾ ಹಿರಿಯ ವೃದ್ಧರ ಆಶೀರ್ವಾದವನ್ನು ಪಡೆಯಿರಿ.
ಮಕರ ರಾಶಿ
ಬುಧ ದೇವ ನಿಮ್ಮ ರಾಶಿಚಕ್ರದ ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತಾರೆ. ಸಂಚಾರದ ಪರಿಣಾಮದಿಂದಾಗಿ, ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಲು ಸೂಚಿಸಲಾಗಿದೆ. ಏಕೆಂದರೆ ಬುಧ ದೇವ ಅವರ ಆರೋಗ್ಯದಲ್ಲಿ ಅವನತಿ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ನಿಮ್ಮ ಆರನೇ ಮನೆಯ ಅಧಿಪತಿ ಬುಧ ಈ ಸಮಯದಲ್ಲಿ ನಿಮ್ಮನ್ನು ಯಾವುದೇ ರೀತಿಯ ನ್ಯಾಯಾಲಯ - ಕಚೇರಿ ಅಥವಾ ಕಾನೂನಿಗೆ ಸಂಬಂಧಿಸದ ವಿವಾದದಲ್ಲಿ ಸಿಲುಕಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಬಂಧಿಕರೊಬ್ಬರೊಂದಿಗೆ ಭೂಮಿಗೆ ಸಂಬಂಧಿಸಿದ ವಿವಾದ ಹೊಂದುವ ಸಾಧ್ಯತೆ ಇದೆ. ಇದು ನಿಮ್ಮ ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ.
ಈ ಸಮಯದಲ್ಲಿ ಹಿಂದಿನ ಅನೇಕ ಪರಿಸ್ಥಿತಿಗಳು ನಿಮ್ಮ ಜೀವನದಲ್ಲಿ ಮತ್ತೆ ಬರಬಹುದು. ಇದರಿಂದಾಗಿ ಪೋಷಕರೊಂದಿಗೆ ನೀವು ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಬಹುದು.
ವೈವಾಹಿಕ ಸ್ಥಳೀಯರ ಜೀವನ ಸಂಗಾತಿ ಕೂಡ ತಮ್ಮ ವೃತ್ತಿ ಮತ್ತು ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ. ಇದು ಸಮಾಜದಲ್ಲಿ ಅವರ ಗೌರವವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಿಮ್ಮ ಐಷರಾಮಿ ಮತ್ತು ಸೌಕರ್ಯಗಳು ಹೆಚ್ಚಾಗುವ ಸಾಧ್ಯತೆ ಇದೆ.
ಬುಧ ದೇವ ಮಕರ ರಾಶಿಚಕ್ರದ ಸ್ಥಳೀಯರಿಗೆ ಅವರ ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತಾರೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಪ್ರಯತ್ನಗಳಿಂದ ಪ್ರತಿಯೊಂದು ಕೆಲಸವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ನೀವು ನಿಮ್ಮ ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆಯುತ್ತೀರಿ. ಮತ್ತೊಂದೆಡೆ ವ್ಯಾಪರಸ್ಟರಿಗೂ ಈ ಸಂಚಾರವು ಲಾಭ ಮತ್ತು ಪ್ರಯೋಜನವನ್ನು ಗಳಿಸಲು ಸಹಾಯ ಮಾಡುತ್ತದೆ.
ಆರೋಗ್ಯದ ದೃಷ್ಟಿಕೋನದಿಂದ, ಆರಂಭದಿಂದಲೇ ನೀವು ಜಾಗರೂಕರಾಗಿರಲು ಸೂಚಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ತೂಕ ಹೆಚ್ಚಾಗುವುದು ಅಥವಾ ಶೀತ ಕೆಮ್ಮು ಮತ್ತು ಎದೆಯ ದಟ್ಟಣೆ ಇತ್ಯಾದಿಗೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೀಡಾಗುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಹಸಿರು ಎಳೆಗಳ ತರಕಾರಿಗಳು ಮತ್ತು ಆರೋಗ್ಯಕರ ಆಹಾರವನ್ನು ಸೇರಿಸಿ ನಿಮ್ಮ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಿ.
ಪರಿಹಾರ - ಬುಧ ದೇವರ ವಿಶೇಷ ಅನುಗ್ರಹವನ್ನು ಪಡೆಯಲು ಬುಧವಾರ ಹೆಸರು ಕಾಳಿನ ದಾನ ಮಾಡಿ.
ಕುಂಭ ರಾಶಿ
ಬುಧ ಸಂಚಾರವು ನಿಮ್ಮ ಮೂರನೇ ಮನೆಯಲ್ಲಿ ಸಂಭವಿಸಲಿದೆ. ಈ ಸಮಯದಲ್ಲಿ ಸಂವಹನ ಕೌಶಲ್ಯದಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಇದು ನಿಮ್ಮ ಜಾತಕದ ಐದನೇ ಮತ್ತು ಎಂಟನೇ ಮನೆಯ ಮೂಲಕ ಮೂರನೇ ಮನೆಗೆ ಪ್ರವೇಶಿಸಲಿದೆ. ಆದ್ದರಿಂದ ನಿಮ್ಮ ಸ್ವಭಾವದಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಇದರಿಂದಾಗಿ ನೀವು ನಿಮ್ಮ ತಿಳುವಳಿಕೆ ಮತ್ತು ಯೋಚಿಸುವ ಸಾಮರ್ಥ್ಯದಿಂದ ಪ್ರತಿಯೊಂದು ಸಮಸ್ಯೆಗೆ ಸರಿಯಾದ ಮತ್ತು ಸೃಜನಶೀಲ ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಪರಿಣಾಮವಾಗಿ, ಕೆಲಸದ ಸ್ಥಳದಲ್ಲಿ ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ.
ಮೂರನೇ ಮನೆ ಪ್ರಯತ್ನಗಳ ಮನೆ. ಅಂತಹ ಸಂದರ್ಭದಲ್ಲಿ ನಿಮ್ಮ ನಿರಂತರ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮವು ನಿಮ್ಮ ವೃತ್ತಿ ಜೀವನದಲ್ಲಿ ಸಕಾರಾತ್ಮಕ ದಿಕ್ಕಿನಲ್ಲಿ ನಿಮ್ಮನ್ನು ಕರೆದೊಯ್ಯುತ್ತದೆ. ಕುಂಭ ರಾಶಿಚಕ್ರದ ಸ್ಥಳೀಯರು ಬಹಳ ಕಾಣಿಸುತ್ತಾರೆ. ಸಮಾಜದ ಕೆಲವು ಪ್ರಭಾವಶಾಲಿ ಜನರನ್ನು ಭೇಟಿಸಲು ನಿಮಗೆ ಅವಕಾಶ ಸಿಗುತ್ತದೆ. ದೀರ್ಘಕಾಲದವರೆಗೆ ಇದು ನಿಮಗೆ ಲಾಭವನ್ನು ನೀಡುತ್ತದೆ.
ಆದಾಗ್ಯೂ, ಈ ಸಂಚಾರದ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಿ. ಏಕೆಂದರೆ ಈ ಪ್ರವಾಸವು ನಿಮಗೆ ನಿಷ್ಪ್ರಯೋಜಕ. ಈ ಸಮಯದಲ್ಲಿ ಯಾವುದೇ ಇಲೆಕ್ಟ್ರಾನಿಕ್ ಉಪಕರಣ ಅಥವಾ ಗ್ಯಾಜೆಟ್ ಅನ್ನು ಖರೀದಿಸಲು ಯೋಜಿಸಬಹುದು.
ನಿಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಐದನೇ ಮನೆಯ ಅಧಿಪತಿ ಸ್ವತಃ ನಿಮ್ಮ ಹನ್ನೊಂದನೇ ಮನೆಯಲ್ಲಿದ್ದು, ದಾಂಪತ್ಯ ಸ್ಥಳೀಯರ ಜೀವನದಲ್ಲಿ ಅಪಾರ ಸಂತೋಷವನ್ನು ನೀಡುವ ಕೆಲಸ ಮಾಡುತ್ತಾರೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮಕ್ಕಳು ಯಾವುದೇ ದೊಡ್ಡ ಯಶಸ್ಸು ಪಡೆಯುತ್ತಾರೆ. ಇದರೊಂದಿಗೆ ಅವರು ನಿಮ್ಮ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ.
ಸಹೋದರ ಸಹೋದರಿಯರಿಗೆ ಈ ಸಮಯವು ಕಷ್ಟಕರವಾಗಿರುತ್ತದೆ. ಅದೇ ಸಮಯದಲ್ಲಿ ನೀವು ಯಾರನ್ನಾದರೂ ನಿಜವಾಗಿ ಪ್ರೀತಿಸುತ್ತಿದ್ದರೆ, ನಿಮ್ಮ ಪ್ರೇಮಿಯೊಂದಿಗೆ ಮಾತನಾಡುವಾಗ ಸ್ಪಷ್ಟವಾಗಿರಿ. ಆಗ ಮಾತ್ರ ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ಲಾಭದಾಯಕ ಫಲಿತಾಂಶವನ್ನು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಸಂಬಂಧವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಸಹ ಸಾಧ್ಯವಾಗುತ್ತದೆ.
ಜಾತಕದ ಮೂರನೇ ಮನೆಯು ಹವ್ಯಾಸ ಮತ್ತು ಕಲೆಗೆ ಸಂಬಂಧಿಸಿದೆ, ಆದ್ದರಿಂದ ನಾಟ್ಯ, ಲೇಖನ ಅಥವಾ ಸಂಗೀತದಲ್ಲಿ ನೀವು ನಿಮ್ಮ ಹೆಚ್ಚಿನ ಸಮಯವನ್ನು ಕಳೆಯುವಿರಿ.ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಇದರ ಪರಿಣಾಮದಿಂದಾಗಿ ನೀವು ನಿಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ.
ಪರಿಹಾರ - ಬುಧವಾರ ವಿಷ್ಣುಸಹಸ್ರನಾಮವನ್ನು ಪಠಿಸಿ.
ನಿಮ್ಮ ರೋಗನಿರೋಧಕ ಸಾಮರ್ಥ್ಯವನ್ನು ತಿಳಿಯಿರಿ – ಆರೋಗ್ಯ ಸೂಚ್ಯಂಕ ಕ್ಯಾಲ್ಕುಲೇಟರ್
ಮೀನಾ ರಾಶಿ
ಬುಧ ದೇವ ನಿಮ್ಮ ರಾಶಿಚಕ್ರದ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಸಾಗುತ್ತಾರೆ. ಇದು ಹಣ, ಕುಟುಂಬ, ಧ್ವನಿ ಇತ್ಯಾದಿಗಳನ್ನು ತೋರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರದ ಪರಿಣಾಮದಿಂದಾಗಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.
ಕುಟುಂಬ ಜೀವನದಲ್ಲಿಯೂ ಸಹ, ಮನೆ ಕುಟುಂಬದ ವಾತಾವರಣವು ಶಾಂತ ಮತ್ತು ಸಂತೋಷದಿಂದ ಕಾಣಿಸುತ್ತದೆ. ಇದರೊಂದಿಗೆ ನಿಮ್ಮ ಧ್ವನಿ ಮತ್ತು ನಿಮ್ಮನ್ನು ನಡೆಸುವ ನಿಮ್ಮ ತಂತ್ರವು ಈ ಸಮಯದಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ನಿಮ್ಮ ಮನೆಯ ವಾತಾವರಣದಲ್ಲಿ ಸಾಮರಸ್ಯ ಮತ್ತು ಶಿಸ್ತನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅನೇಕ ಸ್ಥಳೀಯರು ತಮ್ಮ ತಾಯಿಯಿಂದ ಲಾಭ ಮತ್ತು ಪ್ರಯೋಜನವನ್ನು ಮಾಡುತ್ತಾರೆ.
ಬುಧ ನಿಮ್ಮಏಳನೇ ಮನೆಯ ಅಧಿಪತಿ, ಇದು ಜೀವನ ಸಂಗಾತಿ ಮತ್ತು ವೈವಾಹಿಕ ಜೀವನವನ್ನು ತೋರಿಸುತ್ತದೆ. ಈ ಸಮಯದಲ್ಲಿ ಅವರು ಸ್ವತಃ ಎಂಟನೇ ಮನೆಯಲ್ಲಿರುವುದು, ನಿಮ್ಮ ಸಂಗಾತಿಗೆ ಇದ್ದಕ್ಕಿದ್ದಂತೆ ಲಾಭ ಪಡೆಯಲು ಸಹಾಯ ಮಾಡುತ್ತದೆ. ಆದಾಗ್ಯೂ, ಅವರಿಗೆ ಕೆಲವು ಅರೋಗ್ಯ ಸಮಸ್ಯೆಗಳಾಗಬಹುದು. ವಿಶೇಷವಾಗಿ ಹೊಟ್ಟೆ ಮತ್ತು ಚರ್ಮದ ರೋಗವು ಅವರನ್ನು ಕಾಡಬಹುದು. ಈ ಸಮಯದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳಿ.
ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ವಿಷಯಗಳು ಮೊದಲಿಗಿಂತ ಹೆಚ್ಚು ಸ್ಥಿರವಾಗಿರುತ್ತವೆ. ಇದರಿಂದಾಗಿ ನಿಮ್ಮ ಆದಾಯವು ಹೆಚ್ಚಾಗುತ್ತದೆ. ವ್ಯಾಪಾರಸ್ಥರು ತಮ್ಮ ಬುದ್ಧಿವಂತಿಕೆ ಮತ್ತು ಆತ್ಮವಿಶ್ವಾಸದ ಮೂಲಕ ಉತ್ತಮ ಲಾಭವನ್ನು ಗಳಿಸಲು ವ್ಯಾಪಾರವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ.
ಒಟ್ಟಾರೆಯಾಗಿ, ವೃತ್ತಿಪರ ಮತ್ತು ವ್ಯಾಪಾರ ಎರಡಲ್ಲೂ ಮೀನಾ ರಾಶಿಚಕ್ರದ ಸ್ಥಳೀಯರು ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಮನೆಯಲ್ಲಿ ಅಥವಾ ಕಚೇರಿಯಲ್ಲಿ ಯಾವುದೇ ರೀತಿಯ ದುರಸ್ತಿ ಅಥವಾ ನಿರ್ಮಾಣದ ಕೆಲಸವನ್ನು ಮಾಡಲು ಯೋಚಿಸುತ್ತಿದವರಿಗೆ ಈ ಸಮಯ ಉತ್ತಮವಾಗಿರುತ್ತದೆ ಮತ್ತು ಅವರು ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, ಅಸ್ತಿ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಸಿಲುಕಿರುವ ಯಾವುದೇ ಒಪ್ಪಂದವು ಸಹ ಈ ಸಂಚಾರದ ಸಮಯದಲ್ಲಿ ಸುಲಭವಾಗಿ ಪೂರ್ಣಗೊಳ್ಳುತ್ತದೆ.
ಅರೋಗ್ಯ ಜೀವನದ ದೃಷ್ಟಿಕೋನದಿಂದ, ಈ ಸಮಯದಲ್ಲಿ ನೀವು ಹಲ್ಲುಗಳು ಅಥವಾ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬೇಕಾಗಬಹುದು,
ಪರಿಹಾರ - ಭಗವಂತ ವಿಷ್ಣುವಿನ ವಾಮನ ಅವತಾರಕ್ಕೆ ಸಂಬಂಧಿಸಿದ ಕಥೆಗಳನ್ನು ಕೇಳುವುದು ಅಥವಾ ಓದುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುವಿರಿ.